ಕಷ್ಟಕಾಲಕ್ಕೆ ಚಿನ್ನ ಎನ್ನುತ್ತಾರೆ; ಬಿಕ್ಕಟ್ಟಿನಲ್ಲಿ ಬಂಗಾರದ ದರ ಏರುವ ಬದಲು ಇಳಿಯುತ್ತಿರುವುದು ಯಾಕೆ? ಇಲ್ಲಿದೆ ಸಂಭಾವ್ಯ ಕಾರಣಗಳು – Kannada News | Gold Rates rise when chips are down, but why the prices of yellow metal going down during West Asia crisis

ನವದೆಹಲಿ, ಜುಲೈ 19: ಜಾಗತಿಕವಾಗಿ ಏನಾದರೂ ಬಿಕ್ಕಟ್ಟು (Crisis) ಅಥವಾ ಯುದ್ಧದ ಪರಿಸ್ಥಿತಿ ಎದುರಾದರೆ ಹೂಡಿಕೆದಾರರು ಸಾಮಾನ್ಯವಾಗಿ ಸುರಕ್ಷಿತ ಹೂಡಿಕೆಯಾಗಿ ಚಿನ್ನ ಮತ್ತು ಬೆಳ್ಳಿಯ ಕಡೆಗೆ ಮುಖ ಮಾಡುತ್ತಾರೆ. ಇದರಿಂದ ಚಿನ್ನದ ಬೆಲೆ (Gold Price) ಹೆಚ್ಚಾಗುತ್ತದೆ. ಆದರೆ, ಇತ್ತೀಚಿನ ಪಶ್ಚಿಮ ಏಷ್ಯಾ ಸಂಘರ್ಷದ ಅವಧಿಯಲ್ಲಿ ಚಿನ್ನದ ಬೆಲೆ ಸುಮಾರು 27% ರಷ್ಟು ಮತ್ತು ಬೆಳ್ಳಿಯ ಬೆಲೆ ಬರೋಬ್ಬರಿ 52% ರಷ್ಟು ಕುಸಿದಿದೆ. ಇಂತಹ ಬಿಕ್ಕಟ್ಟಿನ ಸಮಯದಲ್ಲೂ ಚಿನ್ನದ ಬೆಲೆ ಕುಸಿಯಲು ಕಾರಣವೇನು?

ಹಣಕಾಸು ತಜ್ಞರ ಪ್ರಕಾರ, ಆರ್ಥಿಕತೆಯಲ್ಲಿ ಎರಡು ರೀತಿಯ ಬಿಕ್ಕಟ್ಟುಗಳು ಇರುತ್ತವೆ, ಹಣಕಾಸು ಮಾರುಕಟ್​ಟೆ ಬಿಕ್ಕಟ್ಟು ಮತ್ತು ಭೌತಿಕ ಕೊರತೆಯ ಬಿಕ್ಕಟ್ಟು. ಇವೆರಡು ಸಂದರ್ಭದಲ್ಲಿ ಚಿನ್ನದ ಬೆಲೆ ಏರುವುದುಂಟು.

ದೇಶಗಳು ಅತಿಯಾದ ಸಾಲ ಮಾಡುವುದರಿಂದ, ಬ್ಯಾಂಕುಗಳ ನಷ್ಟದಿಂದ ಅಥವಾ ತಪ್ಪು ಆರ್ಥಿಕ ನೀತಿಗಳಿಂದಾಗಿ ಹಣದುಬ್ಬರ (Inflation) ಹೆಚ್ಚಾದಾಗ ಹಣಕಾಸು ಮಾರುಕಟ್ಟೆಯ ಬಿಕ್ಕಟ್ಟು (Financial Market Crisis) ಸಂಭವಿಸುತ್ತದೆ. ಇಂತಹ ಸಮಯದಲ್ಲಿ ಕರೆನ್ಸಿಯ (ಹಣದ) ಮೌಲ್ಯ ಕುಸಿಯುತ್ತದೆ. ಆಗ ಹೂಡಿಕೆದಾರರು ಚಿನ್ನವನ್ನು ಖರೀದಿಸುತ್ತಾರೆ ಮತ್ತು ಚಿನ್ನದ ಬೆಲೆ ಭಾರಿ ಏರಿಕೆ ಕಾಣುತ್ತದೆ.

ಇದನ್ನೂ ಓದಿ: ಗ್ರಾಹಕರಿಗೆ DND ಆಯ್ಕೆ ತೋರಿಸಿ, ಬ್ಲಾಕ್ಡ್ ಬ್ಯಾಡ್ಜ್ ಅಲ್ಲ; ಟ್ರೂಕಾಲರ್​ಗೆ ಸರ್ಕಾರ ನಿರ್ದೇಶನ

ಭೌತಿಕ ಕೊರತೆಯ ಪರಿಸ್ಥಿತಿಯು ತೈಲ (Oil), ಗ್ಯಾಸ್ ಅಥವಾ ಇತರ ಅಗತ್ಯ ವಸ್ತುಗಳ ಭೌತಿಕ ಕೊರತೆಯಿಂದ ಉಂಟಾಗುವ ಬಿಕ್ಕಟ್ಟು (Physical Shortage Crisis). ಪ್ರಸ್ತುತ ಜಗತ್ತು ಎದುರಿಸುತ್ತಿರುವುದು ಇದೇ ರೀತಿಯ ಬಿಕ್ಕಟ್ಟನ್ನು. ಇತ್ತೀಚೆಗೆ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ $135 ದಾಟಿದಾಗ ಇಂಧನ ವೆಚ್ಚ ಗಗನಕ್ಕೇರಿತು. ಈ ಬಿಕ್ಕಟ್ಟಿನಲ್ಲಿ ಚಿನ್ನದ ಬೆಲೆ ಕುಸಿಯುತ್ತಿದೆ. ಇದಕ್ಕೆ ಕಾರಣ ಇದೆ.

ಇಂಧನ ಬಿಕ್ಕಟ್ಟಿನಲ್ಲಿ ಚಿನ್ನದ ಬೆಲೆ ಕುಸಿಯುವುದೇಕೆ?

ಪ್ರಸ್ತುತ ಇಂಧನ ಬಿಕ್ಕಟ್ಟಿನಲ್ಲಿ ಚಿನ್ನದ ಬೆಲೆ ಇಳಿಯಲು ಎರಡು ಪ್ರಮುಖ ಸಂಭವನೀಯ ಕಾರಣಗಳಿವೆ:

ಅಗತ್ಯದ ಆದ್ಯತೆ: ಇಂಧನ (ಶಕ್ತಿ/ಎನರ್ಜಿ) ಎಂಬುದು ಪ್ರತಿಯೊಬ್ಬರಿಗೂ ಅತ್ಯಗತ್ಯ ವಸ್ತು, ಆದರೆ ಚಿನ್ನ ಹಾಗಿಲ್ಲ. ಇಂಧನದ ಬೆಲೆ ಹೆಚ್ಚಾದಾಗ ಸರ್ಕಾರಗಳು ಮತ್ತು ಜನರು ತಮ್ಮ ಬಹುಪಾಲು ಹಣವನ್ನು ತೈಲ ಇಂಪೋರ್ಟ್ (ಆಮದು) ಮಾಡಲು ಮತ್ತು ದೈನಂದಿನ ಇಂಧನ ವೆಚ್ಚಗಳಿಗಾಗಿಯೇ ಖರ್ಚು ಮಾಡಬೇಕಾಗುತ್ತದೆ.

ಚಿನ್ನದ ಆಮದು ಇಳಿಕೆ: ಇಂಧನಕ್ಕಾಗಿ ಹಣ ಹೆಚ್ಚು ಖರ್ಚಾಗುವುದರಿಂದ, ಚಿನ್ನದ ಮೇಲೆ ಹೂಡಿಕೆ ಮಾಡಲು ಜನರ ಬಳಿ ಹಣ ಕಡಿಮೆ ಉಳಿಯುತ್ತದೆ. ಜೊತೆಗೆ, ಸರ್ಕಾರಗಳು ಚಿನ್ನದ ಆಮದನ್ನು ಕಡಿಮೆ ಮಾಡಲು ಅದರ ಮೇಲಿನ ತೆರಿಗೆಯನ್ನು ಹೆಚ್ಚಿಸಿವೆ. ಇದರ ಪರಿಣಾಮವಾಗಿ ಚಿನ್ನದ ಬೇಡಿಕೆ (Demand) ಅರ್ಧಕ್ಕರ್ಧ ಕಡಿಮೆಯಾಗಿ ಬೆಲೆ ಕುಸಿದಿರಬಹುದು.

ಮುಂದಿನ ದಿನಗಳಲ್ಲಿ ಬಂಗಾರದ ದರ ಏರುತ್ತಾ, ಇಳಿಯುತ್ತಾ?

ಚಿನ್ನದ ಮುಂದಿನ ಬೆಲೆ ಏರಿಳಿತಗಳು ಅಮೆರಿಕಾದ ಸೆಂಟ್ರಲ್ ಬ್ಯಾಂಕ್ (US Federal Reserve) ತೆಗೆದುಕೊಳ್ಳುವ ನಿರ್ಧಾರದ ಮೇಲೆ ಅವಲಂಬಿತವಾಗಿವೆ:

  • ಒಂದು ವೇಳೆ ಹಣದುಬ್ಬರ ನಿಯಂತ್ರಿಸಲು ಬ್ಯಾಂಕ್ ಬಡ್ಡಿದರಗಳನ್ನು ಹೆಚ್ಚೇ ಇಟ್ಟರೆ, ಚಿನ್ನದ ಬೆಲೆ ಇನ್ನೂ ಕುಸಿಯಬಹುದು.
  • ಒಂದು ವೇಳೆ ಆರ್ಥಿಕ ಕುಸಿತ ತಡೆಯಲು ಬಡ್ಡಿದರಗಳನ್ನು ಕಡಿಮೆ ಮಾಡಿದರೆ, ಅದು ಮತ್ತೆ ಹಣದುಬ್ಬರಕ್ಕೆ ಕಾರಣವಾಗಿ ಚಿನ್ನದ ಬೆಲೆ ಏರಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ದಿನಸಿ ವಸ್ತುವಿನಂತೆ ಮನೆಬಾಗಿಲಿಗೆ ಬರುತ್ತೆ ಸಣ್ಣ ಎಲ್​ಪಿಜಿ ಸಿಲಿಂಡರ್; ಎಚ್​ಪಿ ನಂತರ ಈಗ ಭಾರತ್ ಗ್ಯಾಸ್​ನಿಂದಲೂ ಸಪ್ಲೈ ಶುರು

ಚಿನ್ನ, ಬೆಳ್ಳಿಯಲ್ಲಿ ಹೂಡಿಕೆ ಮಾಡಬೇಕೆನ್ನುವವರಿಗೆ ಸಲಹೆ

ಕರೆನ್ಸಿ ಅಪಮೌಲ್ಯದ ವಿರುದ್ಧ ಚಿನ್ನ ಮತ್ತು ಬೆಳ್ಳಿ ಸದಾ ರಕ್ಷಣೆ ನೀಡುತ್ತವೆ. ಇಂದಿನ ಅಗತ್ಯ ವಸ್ತುಗಳ ಕೊರತೆಯ ಬಿಕ್ಕಟ್ಟು ನಾಳೆ ಮತ್ತೆ ಸಾಲದ ಬಿಕ್ಕಟ್ಟಾಗಿ ಬದಲಾಗಬಹುದು. ಆದ್ದರಿಂದ ದೀರ್ಘಾವಧಿಯ ದೃಷ್ಟಿಯಿಂದ ಪೋರ್ಟ್‌ಫೋಲಿಯೊದಲ್ಲಿ ಸ್ವಲ್ಪ ಭಾಗವನ್ನು ಚಿನ್ನದಲ್ಲಿ ಹೂಡಿಕೆ ಮಾಡುವುದು ಇನ್ನೂ ಬುದ್ಧಿವಂತಿಕೆಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಾಗಾಲ್ಯಾಂಡ್‌ನಲ್ಲಿ ಭೀಕರ ಭೂಕುಸಿತ; 4 ಜನ ಸಾವು, ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ – Kannada News | 4 Killed In Massive Landslide In Nagaland, More Feared Dead

ಗುವಾಹಟಿ, ಜುಲೈ 19: ನಾಗಾಲ್ಯಾಂಡ್‌ನ ಮೋನ್ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಭೀಕರ ಭೂಕುಸಿತ (Landlside) ಸಂಭವಿಸಿದ್ದು, ಮಕ್ಕಳು ಸೇರಿದಂತೆ 4 ಜನರು ಸಾವನ್ನಪ್ಪಿದ್ದಾರೆ. ಭಾರಿ ಮಳೆಯಿಂದಾಗಿ ಈ ಪ್ರದೇಶದಲ್ಲಿ ದಿಢೀರ್ ಪ್ರವಾಹವೂ ಉಂಟಾಗಿದೆ. ಭೂಕುಸಿತದ ಭೀಕರತೆಗೆ ಹಲವು ಮನೆಗಳು ಕೊಚ್ಚಿಹೋಗಿವೆ. ಮಣ್ಣಿನ ರಾಶಿಯ ಅಡಿಯಲ್ಲಿ ಸಿಲುಕಿಕೊಂಡಿರಬಹುದಾದ ಜನರಿಗಾಗಿ ರಕ್ಷಣಾ ಸಿಬ್ಬಂದಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಭೂಕುಸಿತದ ಬೆನ್ನಲ್ಲೇ ಈ ಪ್ರದೇಶಕ್ಕೆ ಭಾರಿ ಪ್ರಮಾಣದ ನೀರು ನುಗ್ಗುತ್ತಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೀವ್ರ ಅಡ್ಡಿಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಮ್ಮ-ತಂದೆಯ ಬಾಂಧ್ಯವ್ಯವನ್ನ ಬಿಚ್ಚಿಟ್ಟ ಪುತ್ರಿ ಅನುಸೂಯ – Kannada News | Daughter anasuya Talks about Her demise Mother Chennamma

ಬೆಂಗಳೂರು, (ಜುಲೈ 19): ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ (Chennamma Deve Gowda) ಅವರ ಅಂತ್ಯಕ್ರಿಯೆ ನಾಳೆ (ಜುಲೈ 20) ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಗ್ರಾಮದ ಸಮೀಪವಿರುವ ಕ್ಯಾತನಹಳ್ಳಿ ಗ್ರಾಮದ ಜಮೀನಿನಲ್ಲಿ ನಡೆಯಲಿದೆ. ಬೆಂಗಳೂರಿನ ನಿವಾಸದಿಂದ ಚೆನ್ನಮ್ಮರ ಪಾರ್ಥಿವ ಶರೀರವನ್ನು ಕೊಂಡೊಯ್ಯುವ ವೇಳೆ ದೇವೇಗೌಡ್ರು ಬಿಕ್ಕಿ ಬಿಕ್ಕ ಅತ್ತರು. ಇನ್ನು ಪುತ್ರಿ ಅನುಸೂಯ ತಾಯಿ ಚೆನ್ನಮ್ಮ ಬಗ್ಗೆ ಟಿವಿ9ನ ಜೊತೆ ಹಂಚಿಕೊಂಡಿದ್ದು, ಅಮ್ಮ ಮುತ್ತೈದೆ ಸಾವನ್ನ ಬಯಸಿದ್ದರು. ಅದರಂತೆ ಮುತ್ತೈದೆಯಾಗಿ ಪ್ರಾಣ ಬಿಟ್ಟಿದ್ದಾರೆ. ಒಂದು ಕಡೆ ಅವರ ಅಗಲಿಕೆ ನೋವಿದ್ದರೆ ಮತ್ತೊಂದೆಡೆ ಮುತ್ತೈದೆಯಾಗಿ ಸಾವನಪ್ಪಿರೋದು ತೃಪ್ತಿ ಇದೆ. ಅಪ್ಪ ಯಾವಾಗಲೂ ಹೇಳುತ್ತಿದ್ದರು ಮೊದಲು ನೀನು ಹೋಗು ಹಿಂದೆ ನಾನು ಬರುತ್ತೇನೆ ಎಂದು ಅದೇ ರೀತಿ ಮುತ್ತೈದೆಯಾಗಿ ಹೋಗಿದ್ದಾರೆ ಎಂದರು.

ಪ್ರತಿ ವಿಚಾರದಲ್ಲೂ ಮಕ್ಕಳಿಗೆ ಅಮ್ಮ ಸಪೋರ್ಟ್ ಮಾಡಿದ್ದಾರೆ. ಅಪ ರಾಜಕೀಯವಾಗಿ ಹೊರಗಡೆ ಇದ್ದಾಗ 70 ಪರ್ಸೆಂಟ್ ಅಮ್ಮನೇ ನಮ್ಮನ್ನ ಬೆಳೆಸಿ ನೋಡಿದ್ದಾರೆ . ಸುದೀರ್ಘ 72 ವರ್ಷಗಳ ಕಾಲ ಅಪ್ಪ ಅಮ್ಮ ಜೀವನ ನಡೆಸಿದ್ದಾರೆ ಒಂದು ದಿನವೂ ಜಗಳ ಆಡಿಲ್ಲ ಎಂದು ತಾಯಿ ಚೆನ್ನಮ್ಮನ ಬಗ್ಗೆ ಎಳೆ ಎಳೆಯಾಗಿ ಬಿಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs ENG: ಲಾರ್ಡ್ಸ್‌ನಲ್ಲಿ ಆಂಗ್ಲರ ಆರ್ಭಟ; 36 ವರ್ಷಗಳ ದಾಖಲೆ ಉಡೀಸ್

ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡುತ್ತಿರುವ ಆತಿಥೇಯ ಇಂಗ್ಲೆಂಡ್​ಗೆ ಭರ್ಜರಿ ಆರಂಭ ಸಿಕ್ಕಿದೆ. ಆರಂಭಿಕರಾದ ಜಾಕೋಬ್ ಬೆಥೆಲ್ ಹಾಗೂ ಬೆನ್ ಡಕೆಟ್ ಈಗಾಗಲೇ ಅರ್ಧಶತಕ ಬಾರಿಸಿದ್ದು ಶತಕದ ಸನಿಹದಲ್ಲಿದ್ದಾರೆ. ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಭಾರತದ ಅನಾನುಭವಿ ಬೌಲಿಂಗ್ ವಿಭಾಗವನ್ನು ಸರಿಯಾಗಿ ದಂಡಿಸುತ್ತಿರುವ ಇಂಗ್ಲೆಂಡ್‌ನ ಆರಂಭಿಕರು ಮೈದಾನದಾದ್ಯಂತ ರನ್‌ಗಳ ಮಳೆ ಸುರಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಇಂಗ್ಲೆಂಡ್‌ ತಂಡ 30 ಓವರ್​ಗಳ ಅಂತ್ಯಕ್ಕೆ ಯಾವುದೇ ವಿಕೆಟ್ ಕಳೆದುಕೊಳ್ಳದೆ 192 ರನ್​ಗಳ ಜೊತೆಯಾಟವನ್ನಾಡಿದೆ.

Source link

Parliament Monsoon Session 2026: ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ ಆರಂಭ; ಎನ್​ಡಿಎ ಮುಂದಿದೆ ಹಲವು ಸವಾಲು – Kannada News | Parliament Monsoon Session 2026 to Be Held from July 20 to August 13

ನವದೆಹಲಿ, ಜುಲೈ 19: ಸಂಸತ್ತಿನ ಮುಂಗಾರು ಅಧಿವೇಶನವು (Monsoon Session 2026) ಜುಲೈ 20ರಿಂದ ಅಧಿಕೃತವಾಗಿ ಪ್ರಾರಂಭವಾಗಲಿದ್ದು, ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಭಾರಿ ಸಂಘರ್ಷಕ್ಕೆ ವೇದಿಕೆ ಸಿದ್ಧವಾಗಿದೆ. ಕೇಂದ್ರ ಸರ್ಕಾರವು ಹಲವು ಪ್ರಮುಖ ಮಸೂದೆಗಳನ್ನು ಅಂಗೀಕರಿಸಲು ಸಜ್ಜಾಗಿದ್ದರೆ, ಇತ್ತ ವಿರೋಧ ಪಕ್ಷಗಳು ವಿವಿಧ ರಾಜಕೀಯ ಮತ್ತು ಆಡಳಿತಾತ್ಮಕ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಿದ್ಧತೆ ನಡೆಸಿವೆ. ಈ ಬಾರಿಯ ಮುಂಗಾರು ಅಧಿವೇಶನವು ಪೇಪರ್ ಲೀಕ್, ಭ್ರಷ್ಟಾಚಾರದ ಆರೋಪಗಳು ಮತ್ತು ಪಕ್ಷಾಂತರದ ವಿವಾದಗಳ ಹಿನ್ನೆಲೆಯಲ್ಲಿ ತೀವ್ರ ವಾಕ್ಸಮರಕ್ಕೆ ಸಾಕ್ಷಿಯಾಗುವ ಎಲ್ಲಾ ಮುನ್ಸೂಚನೆಗಳು ಸಿಕ್ಕಿವೆ.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಅಧಿವೇಶನವನ್ನು ಶಾಂತಿಯುತವಾಗಿ ನಡೆಸಲು ಎಲ್ಲಾ ರಾಜಕೀಯ ಪಕ್ಷಗಳ ಸಹಕಾರ ಕೋರಿದ್ದಾರೆ. “ಸಂಸತ್ತು ಎಲ್ಲರಿಗೂ ಸೇರಿದ್ದಾಗಿದೆ. ಆಡಳಿತ ಮತ್ತು ವಿರೋಧ ಪಕ್ಷಗಳು ಒಟ್ಟಾಗಿ ಕೆಲಸ ಮಾಡಬೇಕಿದೆ. ನಾವು ವಿರೋಧ ಪಕ್ಷಗಳ ಧ್ವನಿಯನ್ನು ಕೇಳಲು ಸಿದ್ಧರಿದ್ದೇವೆ, ಅದೇ ರೀತಿ ಅವರು ನಮ್ಮ ಮಾತನ್ನು ಕೇಳುತ್ತಾರೆ ಎಂಬ ಭರವಸೆ ಇದೆ. ಸಂಸತ್ತು ಎಷ್ಟು ಚೆನ್ನಾಗಿ ನಡೆಯುತ್ತದೆಯೋ ದೇಶಕ್ಕೆ ಅಷ್ಟೇ ಒಳ್ಳೆಯದು” ಎಂದು ಕಿರಣ್ ರಿಜಿಜು ಹೇಳಿದ್ದಾರೆ.

ಇದನ್ನೂ ಓದಿ: Parliament Monsoon Session: ಜುಲೈ 20ರಿಂದ ಸಂಸತ್ತಿನ ಮುಂಗಾರು ಅಧಿವೇಶನ, ತೆರಿಗೆ, ಉದ್ಯಮ ಸುಧಾರಣೆ ಸೇರಿ 5 ಹೊಸ ಮಸೂದೆ ಮಂಡನೆಗೆ ಸಜ್ಜು

ಅಧಿವೇಶನದಲ್ಲಿ ಕೇಂದ್ರ ಸರ್ಕಾರವನ್ನು ಕಟ್ಟಿಹಾಕಲು ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಬೃಹತ್ ಕಾರ್ಯತಂತ್ರ ರೂಪಿಸಿದ್ದು, ಮುಖ್ಯವಾಗಿ ಈ ಕೆಳಗಿನ ವಿಷಯಗಳನ್ನು ಪ್ರಸ್ತಾಪಿಸಲಿವೆ.

ಅಯೋಧ್ಯೆ ರಾಮಮಂದಿರ ದೇಣಿಗೆ ಅಕ್ರಮ:

ರಾಮಮಂದಿರದ ಕಾಣಿಕೆ ಹಣ ಕಳ್ಳತನದ ಆರೋಪದ ಮೇಲೆ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿಗೆ ಜಂಟಿ ಪತ್ರ ಬರೆದಿದ್ದು, ಅಧಿವೇಶನದಲ್ಲಿ ಈ ಕುರಿತು ಪ್ರಧಾನಿ ಮೌನ ಮುರಿಯಬೇಕೆಂದು ಒತ್ತಾಯಿಸಿದ್ದಾರೆ. ರಾಮ ಮಂದಿರದ ದೇಣಿಗೆ ಹಗರಣವನ್ನು ಮುಂದಿಟ್ಟುಕೊಂಡು ಈ ಬಾರಿಯ ಮುಂಗಾರು ಅಧಿವೇಶನದಲ್ಲಿ ವಿಪಕ್ಷಗಳು ಎನ್​ಡಿಎ ಸರ್ಕಾರದ ವಿರುದ್ಧ ದಾಳಿ ನಡೆಸಲು ಸಿದ್ಧತೆ ನಡೆಸಿವೆ.

ಇದನ್ನೂ ಓದಿ: Parliament Monsoon Session: ಜುಲೈ 20ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭ

ನೀಟ್ (NEET) ಪೇಪರ್ ಲೀಕ್ ಹಗರಣ:

ದೇಶಾದ್ಯಂತ ಸೃಷ್ಟಿಯಾಗಿರುವ ನೀಟ್ ಪರೀಕ್ಷೆ ಅಕ್ರಮದ ಕುರಿತು ಜಂಟಿ ತನಿಖೆಗೆ ಒತ್ತಾಯವೂ ಕೇಳಿಬಂದಿದೆ. ಈ ಕುರಿತು ಕೂಡ ಸದನದಲ್ಲಿ ಪ್ರಸ್ತಾಪವಾಗುವ ಸಾಧ್ಯತೆಯಿದೆ.

ಎಥನಾಲ್ ವಿವಾದ:

ಪೆಟ್ರೋಲ್‌ನಲ್ಲಿ ಎಥನಾಲ್ ಮಿಶ್ರಣದ (E20) ಗೊಂದಲ ಹಾಗೂ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಪ್ರಕ್ರಿಯೆಗೆ ತೀವ್ರ ವಿರೋಧ ವ್ಯಕ್ತಪಡಿಸಲು ವಿಪಕ್ಷಗಳು ತೀರ್ಮಾನಿಸಿವೆ ಎನ್ನಲಾಗಿದೆ. ಇದಿಷ್ಟೂ ಅಲ್ಲದೆ ಇನ್ನೂ ಹಲವು ವಿಷಯಗಳು ಎನ್​ಡಿಎ ವಿರುದ್ಧ ವಿಪಕ್ಷಗಳಿರುವ ಅಸ್ತ್ರಗಳಾಗಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಜನ ನಾಯಗನ್’ ಬಿಡುಗಡೆ ಮುಂಚೆ ತಮಿಳುನಾಡು ಚಿತ್ರಮಂದಿರಗಳಿಗೆ ಎಚ್ಚರಿಕೆ – Kannada News | Jana Nayagan movie release, producer gave warnings to theater owners

ದಳಪತಿ ವಿಜಯ್ (Thalapathy Vijay) ನಟನೆಯ ‘ಜನ ನಾಯಗನ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಈ ವರ್ಷದ ಮೊದಲ ತಿಂಗಳಲ್ಲೇ ಬಿಡುಗಡೆ ಆಗಬೇಕಿದ್ದ ಈ ಸಿನಿಮಾ ಹಲವಾರು ಅಡೆ-ತಡೆಗಳ ಬಳಿಕ ಕೊನೆಗೂ ಜುಲೈ 23 ರಂದು ರಿಲೀಸ್ ಆಗುತ್ತಿದೆ. ಸಿಎಂ ವಿಜಯ್ ಅವರ ಕೊನೆಯ ಸಿನಿಮಾ ಇದೆಂದು ಪ್ರಚಾರ ಮಾಡಲಾಗಿದ್ದ ಕಾರಣ, ಭಾರಿ ಸಂಖ್ಯೆಯ ಅಭಿಮಾನಿಗಳು ಸಿನಿಮಾ ನೋಡಲು ಮುಗಿಬೀಳುವ ಸಾಧ್ಯತೆ ಇದೆ. ಹೀಗಾಗಿ ಸಿನಿಮಾ ಬಿಡುಗಡೆಗೆ ಮುಂಚೆ ತಮಿಳುನಾಡಿನ ಚಿತ್ರಮಂದಿರಗಳಿಗೆ ಕೆಲವು ಶಿಸ್ತಿನ ಎಚ್ಚರಿಕೆಗಳನ್ನು ನೀಡಲಾಗಿದೆ.

ವಿಶ್ವದಾದ್ಯಂತ ಸುಮಾರು 3000 ಸ್ಕ್ರೀನ್​​ಗಳಲ್ಲಿ ‘ಜನ ನಾಯಗನ್’ ಸಿನಿಮಾವನ್ನು ಕೆವಿಎನ್ ನಿರ್ಮಾಣ ಸಂಸ್ಥೆಯು ಬಿಡುಗಡೆ ಮಾಡಲು ಮುಂದಾಗಿದೆ. ತಮಿಳುನಾಡು ಒಂದರಲ್ಲೇ 950 ಸ್ಕ್ರೀನ್​​ಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಸಿನಿಮಾದ ಅಡ್ವಾನ್ಸ್ ಬುಕಿಂಗ್ ಸಹ ಈಗಾಗಲೇ ಆರಂಭ ಆಗಿದೆ. ಈ ನಡುವೆ ‘ಜನ ನಾಯಗನ್’ ಬಿಡುಗಡೆ ಮಾಡುತ್ತಿರುವ ತಮಿಳುನಾಡಿನ ಚಿತ್ರಮಂದಿರಗಳಿಗೆ ಎಚ್ಚರಿಕೆ ನೀಡಲಾಗಿದೆ.

‘ಜನ ನಾಯಗನ್’ ಸಿನಿಮಾ ಬಿಡುಗಡೆ ಮಾಡುವ ತಮಿಳುನಾಡಿನ ಯಾವುದೇ ಚಿತ್ರಮಂದಿರಗಳು ಹೆಚ್ಚುವರಿ ಟಿಕೆಟ್ ದರವನ್ನು ಪ್ರೇಕ್ಷಕರಿಂದ ಪಡೆಯುವಂತಿಲ್ಲ ಎಂದು ನಿರ್ಮಾಪಕರು ಎಚ್ಚರಿಸಿದ್ದಾರೆ. ಸರ್ಕಾರ ಯಾವ ಟಿಕೆಟ್ ದರವನ್ನು ನಿಗದಿ ಮಾಡಿದೆಯೋ ಅದೇ ದರವನ್ನು ಚಿತ್ರಮಂದಿರದವರು ಪಡೆಯಬೇಕಿದೆ. ಅಲ್ಲದೆ, ಟಿಕೆಟ್ ದರ ಹೆಚ್ಚಳಕ್ಕೆ ನಿರ್ಮಾಪಕರು ಸಹ ಅರ್ಜಿ ಹಾಕಿಲ್ಲ, ಆಂಧ್ರ ಮತ್ತು ತೆಲಂಗಾಣಗಳಲ್ಲಿ ಟಿಕೆಟ್ ದರ ಹೆಚ್ಚಳಕ್ಕೆ ಅರ್ಜಿ ಹಾಕಿ ಅನುಮತಿ ಪಡೆಯಲಾಗುತ್ತದೆ. ಆದರೆ ವಿಜಯ್ ಮನವಿಯ ಮೇರೆಗೆ ಅಲ್ಲಿಯೂ ಸಹ ದರ ಹೆಚ್ಚಳಕ್ಕೆ ಅನುಮತಿ ಪಡೆದಿಲ್ಲವಂತೆ.

ಇದನ್ನೂ ಓದಿ:ಜುಲೈ 23ಕ್ಕೆ ಬಿಡುಗಡೆ ಆಗಲಿದೆ ದಳಪತಿ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’

ಸಿನಿಮಾದ ಬಿಡುಗಡೆ ಬಗ್ಗೆ ವಿಪಕ್ಷಗಳು ಹದ್ದಿನ ಕಣ್ಣೀಟ್ಟಿದ್ದು, ಅವರ ಟೀಕೆಗೆ ಆಹಾರ ಆಗುವ ಯಾವುದೇ ಅಹಿತಕರ ನಡೆಯದಂತೆ ಮುನ್ನೆಚ್ಚರಿಕೆಯನ್ನು ವಿಜಯ್ ಪರವಾಗಿ ಕೆವಿಎನ್ ನಿರ್ಮಾಣ ಸಂಸ್ಥೆಯು ಜವಾಬ್ದಾರಿ ಹೊತ್ತುಕೊಂಡಿದೆ. ಯಾವುದೇ ಕಾರಣಕ್ಕೆ ಅಹಿತಕರ ಘಟನೆಗಳು ನಡೆಯದಂತೆ, ಹೆಚ್ಚು ಟಿಕೆಟ್ ದರ ವಸೂಲಿ ಆಗದಂತೆ, ಹಾಗೂ ‘ಎ’ ಸರ್ಟಿಫಿಕೇಟ್ ಸಿಕ್ಕಿರುವ ಕಾರಣ ಯಾವುದೇ ಕಾರಣಕ್ಕೂ 18 ವರ್ಷದೊಳಗಿನವರಿಗೆ ಟಿಕೆಟ್ ಮಾರಾಟ ಮಾಡದಂತೆ ನೋಡಿಕೊಳ್ಳಬೇಕು ಎಂದು ನಿರ್ಮಾಪಕರು ಮತ್ತು ಅವರ ತಂಡ ವಿತರಕರಿಗೆ ಮತ್ತು ಚಿತ್ರಮಂದಿರ ಮಾಲೀಕರಿಗೆ ಮೌಖಿಕ ಎಚ್ಚರಿಕೆಗಳನ್ನು ನೀಡಿದ್ದಾರೆ.

‘ಜನ ನಾಯಗನ್’ ಸಿನಿಮಾ, ವಿಜಯ್ ಅವರ ಕೊನೆಯ ಸಿನಿಮಾ ಎನ್ನಲಾಗಿತ್ತು. ಈ ಸಿನಿಮಾ ಜನವರಿ 12 ರಂದೇ ಬಿಡುಗಡೆ ಆಗಬೇಕಿತ್ತು. ಆದರೆ ಸಿಬಿಎಫ್​​ಸಿ, ಪ್ರಮಾಣ ಪತ್ರ ನೀಡಲು ನಿರಾಕರಿಸಿದ ಕಾರಣ ಸಿನಿಮಾ ಬಿಡುಗಡೆ ತಡವಾಯ್ತು. ಇದೀಗ ಕಾನೂನು ಹೋರಾಟ, ಇನ್ನಿತರೆಗಳ ಬಳಿಕ ಜುಲೈ 23ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ. ಸಿನಿಮಾವನ್ನು ಎಚ್ ವಿನೋದ್ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಪೂಜಾ ಹೆಗ್ಡೆ ಮತ್ತು ಮಮಿತಾ ಬಿಜು ನಾಯಕಿ. ಅನಿರುದ್ಧ್ ರವಿಚಂದ್ರನ್ ಸಂಗೀತ ಸಿನಿಮಾಕ್ಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs ENG: ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದ ಭಾರತ- ಇಂಗ್ಲೆಂಡ್‌ ಆಟಗಾರರು – Kannada News | IND vs ENG Lord’s: Black Armbands for Sir Garfield Sobers, Live Match Updates

ಭಾರತ ಮತ್ತು ಇಂಗ್ಲೆಂಡ್ (IND vs ENG) ನಡುವಿನ ಸರಣಿ ನಿರ್ಧಾರಕ ಪಂದ್ಯ ಲಾರ್ಡ್ಸ್‌ನಲ್ಲಿ (Lord’s) ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್‌ ನಾಯಕ ಹ್ಯಾರಿ ಬ್ರೂಕ್ ಮೊದಲು ಬ್ಯಾಟಿಂಗ್‌ ಮಾಡಲು ನಿರ್ಧರಿಸಿದರು. ಇನ್ನು ಈ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಮೂರು ಬದಲಾವಣೆಗಳನ್ನು ಮಾಡಲಾಗಿದೆ. ಗಾಯದ ಸಮಸ್ಯೆಯಿಂದಾಗಿ ಈ ಪಂದ್ಯದಲ್ಲಿ ಬುಮ್ರಾ ಹಾಗೂ ಸುಂದರ್ ಆಡುತ್ತಿಲ್ಲ. ಹಾಗೆಯೇ ದುಬೆಯನ್ನು ತಂಡದಿಂದ ಕೈಬಿಡಲಾಗಿದೆ. ಅವರ ಜಾಗದಲ್ಲಿ ರಾಹುಲ್, ಅರ್ಷದೀಪ್ ಹಾಗೂ ಪ್ರಿನ್ಸ್ ಯಾದವ್ ಆಡುತ್ತಿದ್ದಾರೆ. ಪಂದ್ಯ ಆರಂಭಕ್ಕೂ ಮುನ್ನ ಉಭಯ ತಂಡಗಳ ಆಟಗಾರರು ಕೈಗೆ ಕಪ್ಪು ಪಟ್ಟಿ ಧರಿಸಿ ಮೈದಾನದಲ್ಲಿ ಮೌನಾಚರಣೆ ನಡೆಸಿದರು.

ಕಪ್ಪು ಬ್ಯಾಂಡ್ ಧರಿಸಿದ ಆಟಗಾರರು

ವೆಸ್ಟ್ ಇಂಡೀಸ್‌ನ ಮಾಜಿ ನಾಯಕ ಸರ್ ಗಾರ್ಫೀಲ್ಡ್ ಸೋಬರ್ಸ್ ಶುಕ್ರವಾರ ನಿಧನರಾದರು. ಅವರಿಗೆ ಗೌರವ ಸಲ್ಲಿಸಲು ಭಾರತ ಮತ್ತು ಇಂಗ್ಲೆಂಡ್ ಆಟಗಾರರು ಕಪ್ಪು ಬ್ಯಾಂಡ್ ಧರಿಸಿ ಕಣಕ್ಕಿಳಿದಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿಸಿಸಿಐ, ‘ಸರ್ ಗಾರ್ಫೀಲ್ಡ್ ಸೋಬರ್ಸ್ ಅವರಿಗೆ ಗೌರವ ಸಲ್ಲಿಸಲು ಟೀಂ ಇಂಡಿಯಾ ಕಪ್ಪು ಬ್ಯಾಂಡ್ ಧರಿಸಿದೆ. ಹಾಗೆಯೇ ಕ್ರಿಕೆಟ್‌ನ ಮೆಕ್ಕಾ ಲಾರ್ಡ್ಸ್‌ನಲ್ಲಿ ಪಂದ್ಯ ಪ್ರಾರಂಭವಾಗುವ ಮೊದಲು ಒಂದು ನಿಮಿಷ ಮೌನ ಆಚರಿಸಲಾಯಿತು. ಲೆಜೆಂಡರಿ ಕ್ರಿಕೆಟಿಗನಿಗೆ ಗೌರವ ಸಲ್ಲಿಸಲು ಎರಡೂ ತಂಡಗಳ ಆಟಗಾರರು ಮತ್ತು ಪ್ರೇಕ್ಷಕರು ಎದ್ದು ನಿಂತು ಮೌನಾಚರಣೆಯಲ್ಲಿ ಭಾಗಿಯಾದರು. ಇದಕ್ಕೂ ಮೊದಲು, ಭಾರತದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಸಾಂಪ್ರದಾಯಿಕವಾಗಿ ಗಂಟೆ ಬಾರಿಸುವ ಮೂಲಕ ಆಟಕ್ಕೆ ಚಾಲನೆ ನೀಡಿದರು.

ಸೋಬರ್ಸ್ ಅವರ ವೃತ್ತಿಜೀವನ

ಸರ್ ಸೋಬರ್ಸ್ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ವೆಸ್ಟ್ ಇಂಡೀಸ್ ಪರ 93 ಟೆಸ್ಟ್ ಪಂದ್ಯಗಳನ್ನಾಡಿರುವ ಸೋಬರ್ಸ್ 57.78 ರ ಸರಾಸರಿಯಲ್ಲಿ 8032 ರನ್ ಗಳಿಸಿದ್ದಾರೆ. ಇದರಲ್ಲಿ 26 ಶತಕಗಳು ಮತ್ತು 30 ಅರ್ಧಶತಕಗಳು ಸೇರಿವೆ. ಹಾಗೆಯೇ 109 ಕ್ಯಾಚ್‌ಗಳನ್ನು ಸಹ ಹಿಡಿದಿದ್ದಾರೆ. ಬೌಲಿಂಗ್‌ನಲ್ಲೂ ಮಿಂಚಿರುವ ಅವರು 93 ಟೆಸ್ಟ್‌ಗಳಲ್ಲಿ 34 ಸರಾಸರಿಯಲ್ಲಿ 235 ವಿಕೆಟ್‌ಗಳನ್ನು ಪಡೆದಿದ್ದಾರೆ, ಇದರಲ್ಲಿ ಆರು ಬಾರಿ ಐದು ವಿಕೆಟ್‌ಗಳ ಸಾಧನೆಯೂ ಸೇರಿದೆ. ಒಟ್ಟಾರೆಯಾಗಿ, ಅವರ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ, ಸೋಬರ್ಸ್ 383 ಪಂದ್ಯಗಳನ್ನು ಆಡಿದ್ದು, 86 ಶತಕಗಳು ಸೇರಿದಂತೆ 54.87 ಸರಾಸರಿಯಲ್ಲಿ 28314 ರನ್‌ಗಳನ್ನು ಗಳಿಸಿದ್ದಾರೆ. ಹಾಗೆಯೇ 36 ಬಾರಿ ಐದು ವಿಕೆಟ್‌ಗಳು ಸೇರಿದಂತೆ 1043 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:34 pm, Sun, 19 July 26

Source link

ಗ್ರಾಹಕರಿಗೆ DND ಆಯ್ಕೆ ತೋರಿಸಿ, ಬ್ಲಾಕ್ಡ್ ಬ್ಯಾಡ್ಜ್ ಅಲ್ಲ; ಟ್ರೂಕಾಲರ್​ಗೆ ಸರ್ಕಾರ ನಿರ್ದೇಶನ – Kannada News | Trai directs Truecaller to Show DND Do Not Disturb choice, but not Frequently Blocked tag

ನವದೆಹಲಿ, ಜುಲೈ 19: ಟ್ರೂಕಾಲರ್ ಆಪ್‌ನಲ್ಲಿ ಇನ್‌ಕಮಿಂಗ್ ಕರೆಗಳಿಗೆ ತೋರಿಸುವ “Frequently Blocked” (ಅತಿಯಾಗಿ ಬ್ಲಾಕ್ ಮಾಡಲಾದ ನಂಬರ್) ಎಂಬ ಲೇಬಲ್ ಅಥವಾ ಟ್ಯಾಗ್‌ ಅನ್ನು ತೋರಿಸುವುದನ್ನು ನಿಲ್ಲಿಸುವಂತೆ ಟ್ರಾಯ್ (Trai) ಸೂಚಿಸಿದೆ. ಇಂತಹ ಟ್ಯಾಗ್‌ಗಳು ಬಳಕೆದಾರರಿಗೆ ಗೊಂದಲವನ್ನು ಉಂಟುಮಾಡಬಹುದು ಮತ್ತು ಕೆಲವು ಸಂದರ್ಭಗಳಲ್ಲಿ ನಿಜವಾದ (Genuine) ಕರೆಗಳನ್ನು ಸಹ ಬಳಕೆದಾರರು ಬ್ಲಾಕ್ ಮಾಡಲು ಕಾರಣವಾಗಬಹುದು ಎಂಬುದು ಟ್ರಾಯ್‌ನ ಆತಂಕ.

ಈ ಟ್ಯಾಗ್‌ಗಳ ಬದಲಿಗೆ, ಬಳಕೆದಾರರಿಗೆ ಆ ಕರೆ ಅಥವಾ ನಂಬರ್ ಬಗ್ಗೆ ‘ಡೂ ನಾಟ್ ಡಿಸ್ಟರ್ಬ್’ (DND) ಆಯ್ಕೆಯನ್ನು ಅಥವಾ ಸೂಕ್ತವಾದ ಆಯ್ಕೆಗಳನ್ನು ನೀಡುವಂತೆ ಟ್ರಾಯ್ ತಿಳಿಸಿದೆ. ಈ ಕ್ರಮದ ಉದ್ದೇಶವು ಸ್ಪ್ಯಾಮ್ ಕರೆಗಳನ್ನು ತಡೆಯುವ ಜೊತೆಗೆ, ಕರೆ ಮಾಡುವವರ ಮಾಹಿತಿ ಪಾರದರ್ಶಕವಾಗಿರಲಿ ಮತ್ತು ಬಳಕೆದಾರರಿಗೆ ತಮ್ಮ ಕರೆಗಳ ಮೇಲೆ ಹೆಚ್ಚಿನ ನಿಯಂತ್ರಣ (Control) ಸಿಗಲಿ ಎಂಬುದಾಗಿದೆ. ಟ್ರೂಕಾಲರ್ ಇನ್ನು ಮುಂದೆ ಇಂತಹ ಟ್ಯಾಗ್‌ಗಳ ಬದಲು ನಿಯಮಬದ್ಧವಾದ ಸ್ಪ್ಯಾಮ್ ನಿಯಂತ್ರಣ ಆಯ್ಕೆಗಳನ್ನು ಅಳವಡಿಸಬೇಕಾಗುತ್ತದೆ.

ಇದನ್ನೂ ಓದಿ: ಸ್ಕೂಲ್​ನಲ್ಲಿ ಫೇಲ್, ಬ್ಯುಸಿನೆಸ್​ನಲ್ಲಿ ವಿನ್; ದೊಡ್ಡ ಬ್ಯುಸಿನೆಸ್ ಸಾಮ್ರಾಜ್ಯ ಕಟ್ಟಿದ ರೋನಿ ಸ್ಕ್ರೂವಾಲಾ ಅವರ ಯಶೋಗಾಥೆ

ಸರಳವಾಗಿ ಹೇಳುವುದಾದರೆ, “ಈ ನಂಬರ್ ತುಂಬಾ ಜನ ಬ್ಲಾಕ್ ಮಾಡಿದ್ದಾರೆ” ಎಂದು ಹೇಳುವ ಬದಲು, ಬಳಕೆದಾರರಿಗೆ ತಮಗೆ ಬೇಕಾದಂತೆ ಕರೆಗಳನ್ನು ನಿರ್ವಹಿಸಲು ಅಗತ್ಯವಿರುವ ಆಯ್ಕೆಗಳನ್ನು (Preferences) ನೀಡುವಂತೆ ಟ್ರಾಯ್ ಟ್ರೂಕಾಲರ್‌ಗೆ ನಿರ್ದೇಶನ ನೀಡಿದೆ.

ದೂರವಾಣಿ ನಿಯಂತ್ರಣ ಪ್ರಾಧಿಕಾರ ಸಂಸ್ಥೆಯಾದ ಟ್ರಾಯ್, 1,600 ಮತ್ತು 140 ನಿಂದ ಆರಂಭವಾಗುವ ನಂಬರ್​ಗಳ ನ್ನು ರೆಗ್ಯುಲೇಟೆಡ್ ಫ್ರೇಮ್​ವರ್ಕ್​ನ ಅಡಿಯಲ್ಲಿ ಇಟ್ಟಿದೆ. ಆರ್​ಬಿಐ ನಿಯಂತ್ರಿತವಾಗಿರುವ ಬ್ಯಾಂಕಿಂಗ್, ಹಣಕಾಸು ಸಂಸ್ಥೆಗಳು ಮತ್ತಿತರೆ ಸಂಸ್ಥೆಗಳು ಸಾರ್ವಜನಿಕರನ್ನು ಸಂಪರ್ಕಿಸಲು ಬಳಸುವ ದೂರವಾಣಿ ಸಂಖ್ಯೆ 1,600 ಸರಣಿಯಿಂದ ಆರಂಭವಾಗುತ್ತದೆ. ಇನ್ನು, 140 ಸೀರೀಸ್​ನ ನಂಬರ್​ಗಳು ಪ್ರಚಾರಕ್ಕಾಗಿ ಬಳಸಲಾಗುತ್ತದೆ. ಅದೂ ಮಾನ್ಯ ಸಂಸ್ಥೆಗಳಿಗೆ ಮಾತ್ರ ಈ ಅಧಿಕಾರ ಇರುತ್ತದೆ.

ಇದನ್ನೂ ಓದಿ: ದಿನಸಿ ವಸ್ತುವಿನಂತೆ ಮನೆಬಾಗಿಲಿಗೆ ಬರುತ್ತೆ ಸಣ್ಣ ಎಲ್​ಪಿಜಿ ಸಿಲಿಂಡರ್; ಎಚ್​ಪಿ ನಂತರ ಈಗ ಭಾರತ್ ಗ್ಯಾಸ್​ನಿಂದಲೂ ಸಪ್ಲೈ ಶುರು

ಇಲ್ಲಿ ಟ್ರೂಕಾಲರ್ ಸಂಸ್ಥೆಯು 1,600 ಮತ್ತು 140 ಸರಣಿಯ ನಂಬರ್​ಗಳನ್ನು ಬಹುತೇಕ ಫ್ರೀಕ್ವೆಂಟ್ಲಿ ಬ್ಲಾಕ್ಡ್ ಪಟ್ಟಿಗೆ ಸೇರಿಸುತ್ತದೆ. ಈ ಸರಣಿಯಿಂದ ಕರೆ ಬಂದರೆ ಗ್ರಾಹಕರ ಮೊಬೈಲ್​ನಲ್ಲಿ ಸ್ಪ್ಯಾಮ್ ಎಂದು ಕಾಣಿಸಬಹುದು. ಕರೆಗಳು ಬ್ಲಾಕ್ ಆಗಬಹುದು. ಗ್ರಾಹಕರಿಗೆ ಮುಖ್ಯವಾಗಿರುವ ಕರೆಗಳೂ ಕೂಡ ಬ್ಲಾಕ್ ಆಗುವ ಭೀತಿ ಇದೆ. ಹೀಗಾಗಿ, ಟ್ರಾಯ್ ಈ ನಿರ್ದೇಶನ ನೀಡಿದೆ.

ಟ್ರಾಯ್ ಹೇಳುವುದೇನೆಂದರೆ, ಕರೆಗಳನ್ನು ಬ್ಲಾಕ್ ಮಾಡುವುದರ ಬದಲು ಗ್ರಾಹಕರಿಗೆ ಅದರ ಆಯ್ಕೆಯನ್ನು ಬಿಟ್​ಟುಬಿಡಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: ಬರಗಾಲ ಪರಿಸ್ಥಿತಿ ಮಧ್ಯೆ ಸಿಹಿ ಸುದ್ದಿ ನೀಡಿದ ಹವಾಮಾನ ಇಲಾಖೆ – Kannada News | IMD 5 Day Karnataka Weather Forecast: Heavy Rain Likely Till July 23; Coastal Area on High Alert

ಬೆಂಗಳೂರು, (ಜುಲೈ 19): ಕಳೆದ ಕೆಲ ದಿನಗಳಿಂದ ಕರ್ನಾಟಕದಲ್ಲಿ ಕೈಕೊಟ್ಟಿದ್ದ ವರುಣ ಶನಿವಾರ ಹಲವೆಡೆ ತಂಪೆರೆದಿದೆ. ಹೌದು.. ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣನ ಸಿಂಚನವಾಗಿದ್ದು, ಮುಂದಿನ ಐದು ದಿನಗಳ (ಜುಲೈ 19ದಿಂದ ಜು.23) ಕಾಲ ರಾಜ್ಯಾದ್ಯಂತ ಅಲ್ಲಲ್ಲಿ ಜೋರಾದ ಗಾಳಿ, ಗುಡುಗು, ಸಿಡಿಲು ಸಹಿತ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ. ಕರಾವಳಿ ಜಿಲ್ಲೆಗಳು ಹಾಗೂ ಮಲೆನಾಡಿನ ಹಲವು ಕಡೆಗಳಲ್ಲಿ ಮುಂದಿನ ಎರಡು ದಿನಗಳು ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಕರಾವಳಿ ಮತ್ತು ಮಲೆನಾಡು ಭಾಗಕ್ಕೆ ಆರೆಂಜ್ ಅಲರ್ಟ್

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ಇದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಅಲ್ಲದೇ ಕರಾವಳಿ ತೀರದಲ್ಲಿ ಬಿರುಗಾಳಿಯ ವೇಗ ಹೆಚ್ಚಾಗಿರುವುದರಿಂದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಇನ್ನು ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಉತ್ತರ ಮತ್ತು ದಕ್ಷಿಣ ಒಳನಾಡು

ಉತ್ತರ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಾದ ಬೆಳಗಾವಿ, ಬಾಗಲಕೋಟೆ, ಬೀದರ್, ಕಲಬುರಗಿ, ಕೊಪ್ಪಳ, ಮತ್ತು ರಾಯಚೂರು ಜಿಲ್ಲೆಗಳಲ್ಲಿ ಗಂಟೆಗೆ 30 ರಿಂದ 40 ಕಿಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ. ಜೊತೆಗೆ ಒಳನಾಡಿನ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಉಳಿದೆಡೆ ಸಾಮಾನ್ಯ ತಾಪಮಾನ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮಾಹಿತಿ ನೀಡಿದೆ.

ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣ ಇರಲಿದ್ದು, ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಮುಸ್ಸಂಜೆ ಅಥವಾ ರಾತ್ರಿಯ ವೇಳೆ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿಗೆ ಬಿಗ್ ರಿಲೀಫ್; ಆಫೀಸ್ ಧ್ವಂಸ ಕ್ರಮಕ್ಕೆ ಕೊಲ್ಕತ್ತಾ ಹೈಕೋರ್ಟ್ ತಡೆ – Kannada News | Big Relief for Abhishek Banerjee as High Court halts demolition of his office in Amtala

ಕೊಲ್ಕತ್ತಾ, ಜುಲೈ 19: ತೃಣಮೂಲ ಕಾಂಗ್ರೆಸ್ (TMC) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ (Abhishek Banerjee) ಅವರಿಗೆ ಕೊಲ್ಕತ್ತಾ ಹೈಕೋರ್ಟ್ ಇಂದು ದೊಡ್ಡ ರಿಲೀಫ್ ನೀಡಿದೆ. ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಅಮ್ತಾಲಾದಲ್ಲಿರುವ ಅಭಿಷೇಕ್ ಬ್ಯಾನರ್ಜಿ ಅವರ ಕಚೇರಿ ಕಟ್ಟಡದ ಧ್ವಂಸ ಕಾರ್ಯಕ್ಕೆ ನ್ಯಾಯಾಲಯ ತಡೆ ನೀಡಿದೆ. ಮುಂದಿನ ವಿಚಾರಣೆಯವರೆಗೆ ಅಥವಾ ಜುಲೈ ಅಂತ್ಯದವರೆಗೆ ಪ್ರಸ್ತುತ ಸ್ಥಿತಿಯನ್ನೇ ಕಾಯ್ದುಕೊಳ್ಳುವಂತೆ ನಿರ್ದೇಶಿಸಿದೆ. ಇದರಿಂದಾಗಿ ಅಭಿಷೇಕ್ ಬ್ಯಾನರ್ಜಿ ನಿಟ್ಟುಸಿರು ಬಿಡುವಂತಾಗಿದೆ.

ಕೊಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ರಾಜಾ ಬಸು ಚೌಧರಿ ಅವರ ಪೀಠವು ಈ ಆದೇಶವನ್ನು ಹೊರಡಿಸಿದ್ದು, ಲೀಪ್ಸ್ ಆ್ಯಂಡ್ ಬೌಂಡ್ಸ್ ಕಂಪನಿಗೆ ಸೇರಿದ್ದ ಈ ಕಚೇರಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಲ್ಲಿಸುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸೂಚಿಸಿದೆ.

ಇದನ್ನೂ ಓದಿ: ಬಂಗಾಳದಲ್ಲಿ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಕಚೇರಿ ನೆಲಸಮ

ಹೈಕೋರ್ಟ್ ಆದೇಶವೇನು?:

ಕೊಲ್ಕತ್ತಾ ಹೈಕೋರ್ಟ್ ತನ್ನ ಆದೇಶದಲ್ಲಿ “ಮುಂದಿನ ವಿಚಾರಣೆಯ ತನಕ ಅಥವಾ ಜುಲೈ ಅಂತ್ಯದವರೆಗೆ, ಯಾವುದು ಮೊದಲೋ ಅಲ್ಲಿಯವರೆಗೆ ಈ ಆಸ್ತಿಯ ಸ್ವರೂಪ ಮತ್ತು ಸ್ವಾಧೀನಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಬೇಕು. ಜುಲೈ 15ರಂದು ಜಿಲ್ಲಾಧಿಕಾರಿ ಅಥವಾ ಕಾರ್ಯನಿರ್ವಾಹಕ ಅಧಿಕಾರಿ ಹೊರಡಿಸಿದ ಆದೇಶದ ಅನ್ವಯ ನಡೆಸಲಾಗುತ್ತಿರುವ ಮುಂದಿನ ಎಲ್ಲಾ ಧ್ವಂಸ ಕಾರ್ಯಗಳನ್ನು ಪ್ರತಿವಾದಿಗಳು ತಕ್ಷಣವೇ ನಿಲ್ಲಿಸಬೇಕು” ಎಂದು ತಿಳಿಸಿದೆ.

ತಮ್ಮ ಬಳಿ ಜಾಗಕ್ಕೆ ಸಂಬಂಧಿಸಿದಂತೆ ಎಲ್ಲಾ ಕಾನೂನುಬದ್ಧ ಹಾಗೂ ಸಿಂಧುತ್ವ ಹೊಂದಿರುವ ದಾಖಲೆಗಳಿದ್ದರೂ ಸಹ ಆಡಳಿತ ಮಂಡಳಿಯು ಕಚೇರಿಯನ್ನು ಧ್ವಂಸಗೊಳಿಸುತ್ತಿದೆ ಎಂದು ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು ಸದ್ಯಕ್ಕೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದೆ.

ಇದನ್ನೂ ಓದಿ: ಬಂಗಾಳದ ರಥಯಾತ್ರೆಯಲ್ಲಿ ದುರಂತ: ವಿದ್ಯುತ್ ತಂತಿಗೆ ತಗುಲಿದ ರಥ, 15 ಭಕ್ತರಿಗೆ ವಿದ್ಯುತ್ ಆಘಾತ, ಹಲವರ ಸ್ಥಿತಿ ಗಂಭೀರ

ಆಡಳಿತ ಮಂಡಳಿಯ ಬುಲ್ಡೋಜರ್ ಕಾರ್ಯಾಚರಣೆ:

ಶನಿವಾರ ಸ್ಥಳೀಯ ಆಡಳಿತವು ಅಮ್ತಾಲಾದಲ್ಲಿರುವ ಅಭಿಷೇಕ್ ಬ್ಯಾನರ್ಜಿ ಅವರ 5 ಅಂತಸ್ತಿನ ಮುಚ್ಚಿದ ಕಚೇರಿ ಕಟ್ಟಡದ ವಿರುದ್ಧ ಅತಿಕ್ರಮಣ ವಿರೋಧಿ ಕಾರ್ಯಾಚರಣೆ ನಡೆಸಿತ್ತು. ಅನಧಿಕೃತ ಕಟ್ಟಡ ನಿರ್ಮಾಣದ ಕುರಿತು ಸಂಬಂಧಪಟ್ಟವರಿಗೆ ನೋಟಿಸ್ ನೀಡಲಾಗಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ ಎಂದು ಆಡಳಿತ ಮಂಡಳಿ ಹೇಳಿದೆ.

ಈ ಕಟ್ಟಡವನ್ನು ‘ಲೀಪ್ಸ್ ಆ್ಯಂಡ್ ಬೌಂಡ್ಸ್’ ಕಂಪನಿಯಿಂದ ಖರೀದಿಸಿದ ಜಾಗದಲ್ಲಿ ನಿಯಮಗಳನ್ನು ಉಲ್ಲಂಘಿಸಿ, ಯಾವುದೇ ಅಧಿಕೃತ ಬಿಲ್ಡಿಂಗ್ ಪ್ಲಾನ್ ಇಲ್ಲದೆ ನಿರ್ಮಿಸಲಾಗಿದೆ. ಹೀಗಾಗಿಯೇ ತೆರವು ಕಾರ್ಯಾಚರಣೆ ಆರಂಭಿಸಿದ್ದೇವೆ ಎಂದು ಅಧಿಕಾರಿಗಳು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದರು. ಶನಿವಾರದ ಕಾರ್ಯಾಚರಣೆಯ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF) ಮತ್ತು ಬಂಗಾಳ ಪೊಲೀಸರನ್ನು ಭಾರಿ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version