ಗಹಗಹಿಸಿ ನಕ್ಕು ಎಲ್ಲಾ ವದಂತಿಗಳಿಗೆ ತೆರೆ ಎಳೆದ ಕೊಹ್ಲಿ, ಗಂಭೀರ್
ಭಾರತ ಏಕದಿನ ತಂಡದಲ್ಲಿ ಏನೂ ಸರಿ ಇಲ್ಲ ಎಂಬ ಗಾಳಿ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ಅದರಲ್ಲೂ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿ ನಡುವೆ ಬಿರುಕು ಮೂಡಿದೆ ಎಂಬ ವದಂತಿ ಹಬ್ಬಿತ್ತು. ಹಾಗೆಯೇ ರೋಹಿತ್ ಶರ್ಮಾರನ್ನು ಏಕದಿನ ತಂಡದಿಂದ ಕೈಬಿಡಲು ಗಂಭೀರ್ ಮಸಲತ್ತು ಮಾಡಿದ್ದಾರೆ ಎಂತಲೂ ಹೇಳಲಾಗುತ್ತಿತ್ತು(PC-PTI). ತಂಡದ ಅಭ್ಯಾಸದ ವೇಳೆ ಕೊಹ್ಲಿ ಹಾಗೂ ಗಂಭೀರ್ ನಡುವೆ ಯಾವುದೇ ಮಾತುಕತೆ ನಡೆಯುತ್ತಿಲ್ಲ ಎಂದು ವರದಿಯಾಗಿತ್ತು. ಅಲ್ಲದೆ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಮೊದಲ ಏಕದಿನ…