ಗಹಗಹಿಸಿ ನಕ್ಕು ಎಲ್ಲಾ ವದಂತಿಗಳಿಗೆ ತೆರೆ ಎಳೆದ ಕೊಹ್ಲಿ, ಗಂಭೀರ್

Source link

Video: ಬೀಚ್ ಕಂಡೊಡನೆ ಮೈ ಮರೆತು ಮಕ್ಕಳಂತೆ ಆಟ ಆಡಿದ ಅಜ್ಜಿ, ವೈರಲ್ ಆಯ್ತು ದೃಶ್ಯ – Kannada News | Elderly woman played on the beach like a child.

ಹಿರಿಜೀವಗಳಿಗೆ (grandparents) ಮನೆ ಬಿಟ್ಟರೆ ಪ್ರಪಂಚ ಬೇರೆ ಇಲ್ಲ. ಟ್ರಿಪ್, ಟ್ರಕ್ಕಿಂಗ್, ಸುತ್ತಾಟ ಎಂದು  ಅಜ್ಜ ಅಜ್ಜಿಯಂದಿರು  ಎಂಜಾಯ್ ಮಾಡುವುದೇ ಕಡಿಮೆ. ಆದರೆ ಇಲ್ಲೊಬ್ಬರು ಅಜ್ಜಿ ತನ್ನ ಕುಟುಂಬದೊಂದಿಗೆ ಬೀಚ್ ನೋಡಲು ತೆರಳಿದ್ದು ಅಲ್ಲಿ ಮತ್ತೆ ಮಕ್ಕಳಾಗಿದ್ದಾರೆ. ಬೀಚ್‌ನಲ್ಲಿ ಮತ್ತೆ ಮಗುವಿನಂತೆ ನೀರಿನಲ್ಲಿ ಆಟ ಆಡಿದ್ದಾರೆ. ಈ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ.

ಪಾಯಲ್ (Payal) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ತನ್ನ ಕುಟುಂಬದೊಂದಿಗೆ ಅಜ್ಜಿಯೊಬ್ಬರು ಬೀಚ್ ಗೆ ಬಂದಿದ್ದಾರೆ. ಅಲ್ಲಿ ತನಗೆ ವಯಸ್ಸು ಆಗಿದೆ ಎನ್ನುವುದನ್ನು ಮರೆತು ಮಕ್ಕಳಂತೆ ಆಟ ಆಡಿದ್ದಾರೆ. ಈ ವೃದ್ಧೆಯ ಮೊಗದಲ್ಲಿನ ನಗುವೇ ಎಲ್ಲವನ್ನು ಹೇಳುತ್ತಿದೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಹಾಯಾಗಿ ಮಲಗಿರುವ ಶ್ವಾನಕ್ಕೆ ಬೀಸಣಿಗೆಯಲ್ಲಿ ಗಾಳಿ ಬೀಸುತ್ತಿರುವ ವೃದ್ಧ

ಈ ವಿಡಿಯೋ ಹದಿಮೂರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಾನು ಇವತ್ತು ಅದ್ಭುತ ವಿಡಿಯೋ ನೋಡಿದೆ ಎಂದಿದ್ದಾರೆ. ಮತ್ತೊಬ್ಬರು, ಈ ಅಜ್ಜಿ ಅದೆಷ್ಟೋ ವರ್ಷಗಳ ಬಳಿಕ ಈ ರೀತಿ ಖುಷಿ ಪಟ್ಟಿರಬಹುದು ಎಂದೆನಿಸುತ್ತದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ನನ್ನ ಅಜ್ಜಿ ನೆನಪಾದ್ರು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Night Clothes Washing: ನೀವು ರಾತ್ರಿಯಲ್ಲಿ ಬಟ್ಟೆ ಒಗೆಯುತ್ತೀರಾ?, ಈ ತಪ್ಪು ನಿಮ್ಮನ್ನು ಬಡವರನ್ನಾಗಿ ಮಾಡುತ್ತವೆ! – Kannada News | Night clothes washing vastu tips avoid these mistakes

ವಾಸ್ತು ಶಾಸ್ತ್ರದ (Vastu Shastra) ಪ್ರಕಾರ ಮನೆಯ ಸ್ವಚ್ಛತೆ ಮತ್ತು ದೈನಂದಿನ ಕೆಲಸಗಳನ್ನು ಮಾಡುವ ವಿಧಾನವೂ ಮನೆಯ ಸಕಾರಾತ್ಮಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ. ಅದರಲ್ಲಿ ಬಟ್ಟೆ ಒಗೆಯುವ ವಿಧಾನಕ್ಕೂ ವಿಶೇಷ ಮಹತ್ವವಿದೆ. ವಾಸ್ತು ನಿಯಮಗಳನ್ನು ಪಾಲಿಸದೇ ಬಟ್ಟೆ ತೊಳೆಯುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಬಹುದು ಹಾಗೂ ಆರ್ಥಿಕ ಸಮಸ್ಯೆಗಳು ಎದುರಾಗಬಹುದು ಎಂಬ ನಂಬಿಕೆ ಇದೆ. ಇವು ವೈಜ್ಞಾನಿಕವಾಗಿ ಸಾಬೀತಾಗಿಲ್ಲದಿದ್ದರೂ, ಅನೇಕರು ವಾಸ್ತು ನಂಬಿಕೆಗಳ ಭಾಗವಾಗಿ ಪಾಲಿಸುತ್ತಾರೆ.

ಮೊದಲನೆಯದಾಗಿ, ರಾತ್ರಿ ಸಮಯದಲ್ಲಿ ಬಟ್ಟೆಗಳನ್ನು ತೊಳೆದು ಹೊರಗೆ ಒಣಗಲು ಹಾಕುವುದನ್ನು ತಪ್ಪಿಸುವುದು ಉತ್ತಮ ಎಂದು ವಾಸ್ತು ಹೇಳುತ್ತದೆ. ರಾತ್ರಿ ವೇಳೆ ನಕಾರಾತ್ಮಕ ಶಕ್ತಿಗಳು ಹೆಚ್ಚಿರುತ್ತವೆ ಎಂಬ ನಂಬಿಕೆ ಇರುವುದರಿಂದ, ಬೆಳಗಿನ ವೇಳೆಯಲ್ಲಿ ಬಟ್ಟೆ ಒಗೆಯುವುದು ಮತ್ತು ಬಿಸಿಲಿನಲ್ಲಿ ಒಣಗಿಸುವುದು ಶುಭಕರವೆಂದು ಪರಿಗಣಿಸಲಾಗುತ್ತದೆ.

ಎರಡನೆಯದಾಗಿ, ಬಹಳ ಹೊತ್ತು ಕೊಳಕು ಬಟ್ಟೆಗಳನ್ನು ಒಂದೇ ಜಾಗದಲ್ಲಿ ರಾಶಿಯಾಗಿ ಹಾಕಿಡಬಾರದು. ಇದರಿಂದ ಮನೆಯ ಸ್ವಚ್ಛತೆ ಹಾಳಾಗುವುದಲ್ಲದೆ, ನಕಾರಾತ್ಮಕ ಶಕ್ತಿ ಕೂಡ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಕೊಳಕು ಬಟ್ಟೆಗಳನ್ನು ಸಾಧ್ಯವಾದಷ್ಟು ಬೇಗ ತೊಳೆದು ಸ್ವಚ್ಛವಾಗಿಡುವುದು ಉತ್ತಮ.

ಹಾಗೆಯೆ ವಾಸ್ತುವು ಮನೆಯಲ್ಲಿರುವ ಸಕಾರಾತ್ಮಕ ಕಂಪನಗಳಿಗೆ ನೇರವಾಗಿ ಸಂಬಂಧಿಸಿದೆ. ಸೂರ್ಯಾಸ್ತದ ನಂತರ ಬಟ್ಟೆಗಳನ್ನು ಸ್ವಚ್ಛಗೊಳಿಸುವುದು ಅಥವಾ ಒಗೆಯುವುದರಿಂದ ಮನೆಯಲ್ಲಿನ ಸಕಾರಾತ್ಮಕ ಶಕ್ತಿ ಕಡಿಮೆಯಾಗುತ್ತದೆ, ಇದು ಸಂಪತ್ತಿನ ದೇವತೆ ಲಕ್ಷ್ಮಿಯ ಆಗಮನವನ್ನು ತಡೆಯುತ್ತದೆ ಎಂದು ನಂಬಲಾಗಿದೆ. ಆದ್ದರಿಂದ, ಮುಸ್ಸಂಜೆಯ ನಂತರ ಬಟ್ಟೆಗಳನ್ನು ಒಗೆಯುವುದನ್ನು ಪ್ರಾಚೀನ ಕಾಲದಿಂದಲೂ ನಿಷೇಧಿಸಲಾಗಿದೆ.

Life Style: ನಿಮ್ಮ ಚಿನ್ನದ ಆಭರಣಗಳು ಕಪ್ಪಾಗಿವೆಯೇ?, ನಿಮಿಷಗಳಲ್ಲಿ ಹೊಳೆಯುವಂತೆ ಮಾಡಲು ಇಲ್ಲಿದೆ ಟಿಪ್ಸ್

ಮೂರನೆಯದಾಗಿ, ಒದ್ದೆಯಾದ ಬಟ್ಟೆಗಳನ್ನು ಮನೆಯೊಳಗೆ ದೀರ್ಘಕಾಲ ಬಿಟ್ಟುಬಿಡಬಾರದು. ಇದರಿಂದ ತೇವಾಂಶ ಹೆಚ್ಚಾಗಿ ದುರ್ವಾಸನೆ ಮತ್ತು ಬ್ಯಾಕ್ಟೀರಿಯಾ ಬೆಳೆಯುವ ಸಾಧ್ಯತೆಯಿದೆ. ವಾಸ್ತು ಪ್ರಕಾರವೂ ಇದು ಶುಭಕರವಲ್ಲ ಎಂದು ಪರಿಗಣಿಸಲಾಗುತ್ತದೆ. ಬಟ್ಟೆಗಳನ್ನು ಗಾಳಿ ಮತ್ತು ಬೆಳಕು ಚೆನ್ನಾಗಿ ಬೀಳುವ ಸ್ಥಳದಲ್ಲಿ ಒಣಗಿಸುವುದು ಉತ್ತಮ.

ನಾಲ್ಕನೆಯದಾಗಿ, ವಾಷಿಂಗ್ ಮೆಷಿನ್ ಅಥವಾ ಬಟ್ಟೆ ತೊಳೆಯುವ ಸ್ಥಳವನ್ನು ಯಾವಾಗಲೂ ಸ್ವಚ್ಛವಾಗಿಡಬೇಕು. ಕೊಳಕು ನೀರು, ಕಸ ಅಥವಾ ಧೂಳು ತುಂಬಿಕೊಂಡಿದ್ದರೆ ಅದು ಮನೆಯ ಸಕಾರಾತ್ಮಕ ವಾತಾವರಣದ ಮೇಲೆ ಪರಿಣಾಮ ಬೀರುತ್ತದೆ ಎಂದು ವಾಸ್ತು ತಿಳಿಸುತ್ತದೆ. ನಿಯಮಿತವಾಗಿ ಸ್ವಚ್ಛಗೊಳಿಸುವುದರಿಂದ ಮನೆ ಶುಚಿಯಾಗಿರುವುದರ ಜೊತೆಗೆ ಉತ್ತಮ ವಾತಾವರಣವೂ ಉಳಿಯುತ್ತದೆ.

ಸೂಚನೆ: ಮೇಲಿನ ಮಾಹಿತಿ ವಾಸ್ತು ಶಾಸ್ತ್ರದಲ್ಲಿರುವ ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಇದಕ್ಕೆ ವೈಜ್ಞಾನಿಕ ಆಧಾರ ಇರುವುದಿಲ್ಲ. ಇದನ್ನು ಧಾರ್ಮಿಕ ಅಥವಾ ಸಾಂಪ್ರದಾಯಿಕ ನಂಬಿಕೆಯ ದೃಷ್ಟಿಯಿಂದ ಮಾತ್ರ ಪರಿಗಣಿಸಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೊಜ್ತಬಾ ಖಮೇನಿ ಇರಾನ್‌ನಲ್ಲಿಯೇ ಇಲ್ಲವಂತೆ; ಇಸ್ರೇಲ್ ಹೇಳಿದ್ದೇನು? – Kannada News | Mojtaba Khamenei is not in Iran Israeli source claims

ಟೆಹ್ರಾನ್, ಜುಲೈ 19: ಇರಾನ್‌ನ ನೂತನ ಸುಪ್ರೀಂ ನಾಯಕ (Iran Supreme Leader) ಮೊಜ್ತಬಾ ಖಮೇನಿ (Mojtaba Khamenei) ಸದ್ಯಕ್ಕೆ “ಇರಾನ್‌ನಲ್ಲಿ ಇಲ್ಲ” ಎಂದು ಇಸ್ರೇಲ್‌ನ ಭದ್ರತಾ ಮೂಲವೊಂದು ಹೇಳಿದೆ. ಇಸ್ರೇಲ್ ನೀಡಿದ ಮಾಹಿತಿಯನ್ನಿಟ್ಟುಕೊಂಡು ಸೌದಿ ಅರೇಬಿಯಾದ ಪ್ರಮುಖ ಸುದ್ದಿ ಸಂಸ್ಥೆ ‘ಅಲ್-ಹದತ್’ ಇಂದು ಈ ವರದಿಯನ್ನು ಪ್ರಕಟಿಸಿದೆ. ಆದರೆ, ಮೊಜ್ತಬಾ ಖಮೇನಿ ಪ್ರಸ್ತುತ ಎಲ್ಲಿದ್ದಾರೆ ಎಂಬುದರ ಕುರಿತು ಯಾವುದೇ ನಿಖರವಾದ ಪುರಾವೆಗಳನ್ನು ನೀಡಿಲ್ಲ. ಅಮೆರಿಕ ಮತ್ತು ಇಸ್ರೇಲ್​ನ ತೀವ್ರವಾದ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಖಮೇನಿ ಅದಾದ ಬಳಿಕ ಎಲ್ಲೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಭದ್ರತಾ ದೃಷ್ಟಿಯಿಂದ ತಮ್ಮ ತಂದೆ ಅಯತೊಲ್ಲಾ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಕೂಡ ಮೊಜ್ತಬಾ ಖಮೇನಿ ಭಾಗಿಯಾಗಿರಲಿಲ್ಲ. ಇದು ಸಹಜವಾಗಿಯೇ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಫೆಬ್ರವರಿ 28ರಂದು ನಡೆದ ಅಮೆರಿಕ ಮತ್ತು ಇಸ್ರೇಲ್‌ನ ಜಂಟಿ ವೈಮಾನಿಕ ದಾಳಿಯಲ್ಲಿ ತಂದೆ ಅಲಿ ಖಮೇನಿ ಮೃತಪಟ್ಟ ನಂತರ ಮೊಜ್ತಬಾ ಖಮೇನಿ ಇರಾನ್‌ನ ಸುಪ್ರೀಂ ನಾಯಕರಾಗಿ ಅಧಿಕಾರ ವಹಿಸಿಕೊಂಡಿದ್ದರು. ಆದರೆ, ಅಧಿಕಾರಕ್ಕೆ ಬಂದಾಗಿನಿಂದ ಅವರು ಒಮ್ಮೆಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅವರು ಕೇವಲ ಲಿಖಿತ ಹೇಳಿಕೆಗಳ ಮೂಲಕ ಮಾತ್ರ ಸಂವಹನ ನಡೆಸುತ್ತಿದ್ದಾರೆ.

ಸೌದಿಯ ಅಲ್-ಹದತ್ ವರದಿಯ ಪ್ರಕಾರ, ಪ್ರಸ್ತುತ ಮೊಜ್ತಬಾ ಖಮೇನಿ ಹೆಸರಿನಲ್ಲಿ ಹೊರಬರುತ್ತಿರುವ ಅಧಿಕೃತ ಸಂದೇಶಗಳನ್ನು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC)ನ ನೂತನ ಮುಖ್ಯಸ್ಥ ಅಹ್ಮದ್ ವಾಹಿದಿ ಮತ್ತು ಇತರ ಉನ್ನತ ಅಧಿಕಾರಿಗಳು ಸಿದ್ಧಪಡಿಸುತ್ತಿದ್ದಾರೆ.

ಇದನ್ನೂ ಓದಿ: ಜೋರ್ಡಾನ್‌ ವಾಯುನೆಲೆಯಲ್ಲಿ ಇರಾನ್​ನಿಂದ ಅಮೆರಿಕದ ಹಲವು ಯುದ್ಧ ವಿಮಾನಗಳು ಧ್ವಂಸ

“ಇರಾನ್‌ನ ಆಂತರಿಕ ಭಿನ್ನಾಭಿಪ್ರಾಯಗಳು ತೀವ್ರಗೊಂಡಿದ್ದು, ಇದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ ಅಸ್ತಿತ್ವಕ್ಕೆ ಧಕ್ಕೆ ತರುತ್ತಿದೆ” ಎಂದು ಇಸ್ರೇಲಿ ಭದ್ರತಾ ಮೂಲಗಳು ತಿಳಿಸಿವೆ. ಇರಾನ್ ಒಂದು ವೇಳೆ ಇಸ್ರೇಲ್ ಭೂಪ್ರದೇಶದ ಮೇಲೆ ದಾಳಿ ನಡೆಸಿದರೂ ಸಹ, ಅದಕ್ಕೆ ಪ್ರತಿಯಾಗಿ ಇರಾನ್ ವಿರುದ್ಧ ನಡೆಸಲಾಗುವ ಪ್ರತೀಕಾರದ ದಾಳಿಗಳಲ್ಲಿ ಇಸ್ರೇಲ್ ಭಾಗಿಯಾಗುವುದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ಗೆ ಇಷ್ಟವಿಲ್ಲ ಎಂದು ಇಸ್ರೇಲಿ ಮೂಲಗಳು ತಿಳಿಸಿವೆ.

ಅಮೆರಿಕಾಗೆ ಇರಾನ್ ಎಚ್ಚರಿಕೆ:

ಇದಕ್ಕೂ ಮುನ್ನ, ಖಮೇನಿ ಹೆಸರಿನಲ್ಲಿ ಇರಾನ್ ಸರ್ಕಾರಿ ದೂರದರ್ಶನದಲ್ಲಿ ಪ್ರಸಾರವಾದ ಸಂದೇಶದಲ್ಲಿ, ಅಮೆರಿಕವು ಇಸ್ಲಾಮಿಕ್ ಗಣರಾಜ್ಯದ ಮೇಲೆ ದಾಳಿಯನ್ನು ಮುಂದುವರಿಸಿದರೆ ಮರೆಯಲಾಗದ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ. ಕದನ ವಿರಾಮಕ್ಕೆ ಸಂಬಂಧಿಸಿದ ಮಧ್ಯಂತರ ಒಪ್ಪಂದದಿಂದ ಇರಾನ್ ಹಿಂದೆ ಸರಿಯುತ್ತಿದೆ ಎಂದು ಇರಾನ್ ಸಂಧಾನಕಾರರು ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ ಈ ಹೇಳಿಕೆ ಹೊರಬಿದ್ದಿದೆ.

ಇದನ್ನೂ ಓದಿ: ‘ಟ್ರಂಪ್‌ನನ್ನು ಕೊಲ್ಲುತ್ತೇವೆ’; ಇರಾನ್‌ನಲ್ಲಿ ಬೃಹತ್ ಬ್ಯಾನರ್!

ಅಮೆರಿಕದ ಮಿಲಿಟರಿ ಕ್ರಮಕ್ಕೆ ಇರಾನ್ ಮತ್ತು ಅದರ ಪ್ರಾದೇಶಿಕ ಮಿತ್ರರಾಷ್ಟ್ರಗಳ ಒಕ್ಕೂಟವಾದ ಆಕ್ಸಿಸ್ ಆಫ್ ರೆಸಿಸ್ಟೆನ್ಸ್ ತಕ್ಕ ಪ್ರತ್ಯುತ್ತರ ನೀಡಲಿದೆ ಎಂದು ಇರಾನ್ ಎಚ್ಚರಿಸಿದೆ. ಇದರ ಬೆನ್ನಲ್ಲೇ, ವಿಶ್ವದ ಒಟ್ಟು ಕಚ್ಚಾ ತೈಲದ ಐದನೇ ಒಂದು ಭಾಗ ರಫ್ತಾಗುವ ಹಾರ್ಮುಜ್ ಜಲಸಂಧಿಯ ನಿಯಂತ್ರಣಕ್ಕಾಗಿ ಎರಡೂ ದೇಶಗಳಿಂದ ಹೋರಾಟ ತೀವ್ರಗೊಂಡಿದೆ. ಇದರಿಂದ ಜಾಗತಿಕ ಇಂಧನ ಪೂರೈಕೆಯ ಮೇಲೆ ಭಾರಿ ಪರಿಣಾಮ ಉಂಟಾಗುವ ಆತಂಕ ಎದುರಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Vastu Tips: ಫ್ರಿಡ್ಜ್ ಮೇಲೆ ಮರೆತೂ ಈ ವಸ್ತು ಇಡಬೇಡಿ; ಆರ್ಥಿಕ ನಷ್ಟ ತರಬಲ್ಲ ಮುನ್ನೆಚ್ಚರಿಕೆಗಳು ಇಲ್ಲಿವೆ! – Kannada News | Fridge Vastu: Boost Prosperity! Place Copper, Bamboo, Turtle – Avoid Keys, Medicines

ಫ್ರಿಡ್ಜ್ ಮೇಲೆ ಮರೆತೂ ಈ ವಸ್ತು ಇಡಬೇಡಿImage Credit source: Getty Images

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಫ್ರಿಡ್ಜ್ ಅತ್ಯಗತ್ಯ ವಸ್ತುವಾಗಿದೆ. ಸಾಮಾನ್ಯವಾಗಿ ಜಾಗದ ಕೊರತೆಯಿಂದಾಗಿ ಅಥವಾ ಸುಲಭವಾಗಿ ಸಿಗಲಿ ಎಂಬ ಕಾರಣಕ್ಕೆ ನಾವೆಲ್ಲರೂ ಫ್ರಿಡ್ಜ್ ಮೇಲ್ಭಾಗವನ್ನು ಕೆಲವು ವಸ್ತುಗಳನ್ನು ಇಡಲು ಬಳಸುತ್ತೇವೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಫ್ರಿಡ್ಜ್ ಮೇಲ್ಭಾಗದಲ್ಲಿ ಕೀಗಳು, ಔಷಧಿಗಳು ಸೇರಿದಂತೆ ಕೆಲವು ವಸ್ತುಗಳನ್ನು ಇಡುವುದು ತೀವ್ರ ಅಶುಭ ಎನ್ನಲಾಗುತ್ತದೆ. ಆದಾಗ್ಯೂ, ವಾಸ್ತು ನಿಯಮಗಳ ಪ್ರಕಾರ ಫ್ರಿಡ್ಜ್ ಮೇಲೆ ಕೆಲವು ನಿರ್ದಿಷ್ಟ ವಸ್ತುಗಳನ್ನು ಇಡುವುದರಿಂದ ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಬಹುದು ಮತ್ತು ಆರ್ಥಿಕ ಪ್ರಗತಿಗೂ ಕಾರಣವಾಗಬಹುದು. ಹಾಗಾದರೆ ಫ್ರಿಡ್ಜ್ ಮೇಲೆ ಯಾವ ವಸ್ತುಗಳನ್ನು ಇಡಬೇಕು? ಯಾವುದನ್ನು ಇಡಬಾರದು? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಫ್ರಿಡ್ಜ್ ಮೇಲೆ ಇವುಗಳನ್ನು ಇಟ್ಟರೆ ಆರ್ಥಿಕ ಪ್ರಗತಿ ಖಂಡಿತ:

ವಾಸ್ತು ಶಾಸ್ತ್ರದ ಪ್ರಕಾರ, ಕೆಳಗಿನ ವಸ್ತುಗಳನ್ನು ರೆಫ್ರಿಜರೇಟರ್ ಮೇಲೆ ಇಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸುತ್ತದೆ:

  • ತಾಮ್ರದ ಪಾತ್ರೆ: ನೀವು ಫ್ರಿಡ್ಜ್ ಮೇಲೆ ಒಂದು ಸಣ್ಣ ತಾಮ್ರದ ಪಾತ್ರೆ ಅಥವಾ ಗಿಂಡಿಯನ್ನು ಇಡಬಹುದು. ಆ ತಾಮ್ರದ ಪಾತ್ರೆಯಲ್ಲಿ ಶುದ್ಧ ನೀರನ್ನು ತುಂಬಿಸಿ ಇಡುವುದು ವಿಶೇಷ. ಹೀಗೆ ಮಾಡುವುದರಿಂದ ಮನೆಗೆ ಸಕಾರಾತ್ಮಕ ಶಕ್ತಿ ಹರಿದುಬರುತ್ತದೆ ಮತ್ತು ಆರ್ಥಿಕ ಲಾಭವೂ ಸಿಗುತ್ತದೆ.
  • ಬಿದಿರಿನ ಗಿಡ (Bamboo Plant): ಫ್ರಿಡ್ಜ್ ಮೇಲೆ ಒಂದು ಸಣ್ಣ ಬಿದಿರಿನ ಗಿಡವನ್ನು ಇಡುವುದು ಅತ್ಯಂತ ಶ್ರೇಷ್ಠ. ಇದು ಜಾತಕದಲ್ಲಿ ರಾಹುವಿಗೆ ಸಂಬಂಧಿಸಿದ ಅಶುಭ ಪರಿಣಾಮಗಳನ್ನು ಮತ್ತು ಮನೆಯ ವಾಸ್ತು ದೋಷಗಳನ್ನು ನಿವಾರಿಸುತ್ತದೆ. ಅಷ್ಟೇ ಅಲ್ಲದೆ ಬುಧ ಗ್ರಹವನ್ನು ಬಲಪಡಿಸಿ ವ್ಯಾಪಾರ-ಬುದ್ಧಿವಂತಿಕೆಯನ್ನು ಹೆಚ್ಚಿಸುತ್ತದೆ.
  • ಹಿತ್ತಾಳೆ ಅಥವಾ ಗಾಜಿನ ಆಮೆ: ಫ್ರಿಡ್ಜ್‌ನ ಮೇಲ್ಭಾಗದಲ್ಲಿ ಹಿತ್ತಾಳೆ ಅಥವಾ ಗಾಜಿನಿಂದ ಮಾಡಿದ ಸಣ್ಣ ಆಮೆಯ ವಿಗ್ರಹವನ್ನು ಇಡಬಹುದು. ಇದರಿಂದ ಭಗವಾನ್ ವಿಷ್ಣು ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ. ಇದು ಮನೆಯ ಆರ್ಥಿಕ ಪ್ರಗತಿಗೆ ಹೊಸ ದಾರಿಗಳನ್ನು ತೆರೆಯುತ್ತದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಮರೆತೂ ಇವುಗಳನ್ನು ಫ್ರಿಡ್ಜ್ ಮೇಲೆ ಇಡಬೇಡಿ ದರಿದ್ರ ಬೆನ್ನತ್ತಬಹುದು:

ವಾಸ್ತು ನಿಯಮಗಳ ಪ್ರಕಾರ, ರೆಫ್ರಿಜರೇಟರ್ ಮೇಲೆ ಕೆಳಗಿನ ವಸ್ತುಗಳನ್ನು ಇಟ್ಟರೆ ನಕರಾತ್ಮಕ ಶಕ್ತಿ ಹೆಚ್ಚಾಗಿ, ಧನಹಾನಿ ಉಂಟಾಗುತ್ತದೆ. ಫ್ರಿಡ್ಜ್ ಮೇಲೆ ಔಷಧಿಗಳನ್ನು ಇಡುವುದರಿಂದ ಮನೆಯಲ್ಲಿ ಅನಾರೋಗ್ಯದ ವಾತಾವರಣ ಮುಂದುವರಿಯುತ್ತದೆ. ಇನ್ನು ಕೀಲಿಗಳ ಗೊಂಚಲುಗಳನ್ನು ಇಡುವುದರಿಂದ ಆರ್ಥಿಕ ಪ್ರಗತಿ ಕುಂಠಿತಗೊಳ್ಳುತ್ತದೆ. ಇದಲ್ಲದೇ ಯಾವುದೇ ಹಾನಿಗೊಳಗಾದ ಅಥವಾ ಮುರಿದ ವಸ್ತುಗಳನ್ನು ಫ್ರಿಡ್ಜ್ ಮೇಲೆ ಇಡಬಾರದು. ಹಾಗೆಯೇ ಖಾಲಿ ಪಾತ್ರೆಗಳನ್ನು ಇಡುವುದರಿಂದ ಮನೆಯಲ್ಲಿ ದಾರಿದ್ರ್ಯ ಆವರಿಸುತ್ತದೆ. ಮನೆಗೆ ಸಂಬಂಧಿಸಿದ ಹಳೆಯ ಬಿಲ್‌ಗಳು, ದಿನಸಿ ಲಿಸ್ಟ್‌ಗಳು ಅಥವಾ ಅನಗತ್ಯ ಕಾಗದದ ದಾಖಲೆಗಳನ್ನು ಫ್ರಿಡ್ಜ್ ಮೇಲೆ ರಾಶಿ ಹಾಕಬೇಡಿ. ಇದು ಮನೆಯಲ್ಲಿ ಸಾಲದ ಬಾಧೆ ಮತ್ತು ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸ್ಕೂಲ್​ನಲ್ಲಿ ಫೇಲ್, ಬ್ಯುಸಿನೆಸ್​ನಲ್ಲಿ ವಿನ್; ದೊಡ್ಡ ಬ್ಯುಸಿನೆಸ್ ಸಾಮ್ರಾಜ್ಯ ಕಟ್ಟಿದ ರೋನಿ ಸ್ಕ್ರೂವಾಲಾ ಅವರ ಯಶೋಗಾಥೆ – Kannada News | College Dropout to successful entrepreneur, inspiring story of Ronnie Screwvala

ರಣವೀರ್, ರಣಬೀರ್ ಜೊತೆ ಇರುವ ರೋನಿ ಸ್ಕ್ರೂವಾಲಾImage Credit source: PTI

ರೋನಿ ಸ್ಕ್ರೂವಾಲಾ (Ronnie Screwvala) ಅವರು ಇಂದು ಭಾರತದ ಅತ್ಯಂತ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರು. ಭಾರತದಲ್ಲಿ ಕೇಬಲ್ ಬ್ಯುಸಿನೆಸ್ ಹುಟ್ಟುಹಾಕಿದವರು. ಕೇಬಲ್, ಮೀಡಿಯಾ, ಸ್ಪೋರ್ಟ್ಸ್ ಎಂಟರ್ಟೈನ್ಮೆಂಟ್​ನ ಬೃಹತ್ ಬ್ಯುಸಿನೆಸ್ ಸಾಮ್ರಾಜ್ಯವನ್ನೇ ನಿರ್ಮಿಸಿದ್ದಾರೆ. ಆದರೆ ಅವರ ಯಶಸ್ಸಿನ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ. ಕಾಲೇಜಿನಿಂದ ಹೊರಬಿದ್ದ ಒಬ್ಬ ಸಾಮಾನ್ಯ ಯುವಕ, ಇಂದು ಕೋಟಿಗಟ್ಟಲೆ ಮೌಲ್ಯದ ಬಿಸಿನೆಸ್ ಸಾಮ್ರಾಜ್ಯವನ್ನು ಹೇಗೆ ಕಟ್ಟಿದರು ಎಂಬುದು ರೋಚಕ ಕಥೆಯಾಗುತ್ತದೆ. ಓದೇ ಎಲ್ಲವೂ ಅಲ್ಲ ಎನ್ನುವುದು ಇವರ ಕಥೆ (Inspiring Story) ತೋರ್ಪಡಿಸುತ್ತದೆ.

ರೋನಿ ಸ್ಕ್ರೂವಾಲಾ ಅವರು ಸೆಪ್ಟೆಂಬರ್ 8, 1956 ರಂದು ಮುಂಬೈನ (ಆಗಿನ ಬಾಂಬೆ) ಗ್ರಾಂಟ್ ರೋಡ್‌ನಲ್ಲಿರುವ ಒಂದು ಮಧ್ಯಮ ವರ್ಗದ ಪಾರ್ಸಿ ಕುಟುಂಬದಲ್ಲಿ ಜನಿಸಿದವರು. ಅವರ ತಂದೆ ಬ್ರಿಟಿಷ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಶಾಲಾ-ಕಾಲೇಜು ದಿನಗಳಲ್ಲಿ ರೋನಿ ಅವರಿಗೆ ನಾಟಕ ರಂಗಭೂಮಿ (Theatre) ಎಂದರೆ ಬಹಳ ಇಷ್ಟ. ಅಲ್ಲಿಯೇ ಅವರಿಗೆ ತಮ್ಮ ಮುಂದಿನ ಜೀವನ ಸಂಗಾತಿ ಮತ್ತು ಬಿಸಿನೆಸ್ ಪಾರ್ಟ್ನರ್ ಆಗಲಿರುವ ಜರೀನಾ ಮೆಹ್ತಾ ಅವರ ಪರಿಚಯವಾಯಿತು. ಓದಿನಲ್ಲಿ ಅಷ್ಟಾಗಿ ಆಸಕ್ತಿ ಇಲ್ಲದ ರೋನಿ, ಕಾಲೇಜಿನ ಎರಡನೇ ವರ್ಷದಲ್ಲೇ ಫೇಲ್ ಆಗಿ ಹೊರಬಿದ್ದರು. ತಂದೆ-ತಾಯಿ ಇವರನ್ನು ಚಾರ್ಟರ್ಡ್ ಅಕೌಂಟೆನ್ಸಿ (CA) ಮಾಡಲು ಒತ್ತಾಯಿಸಿದಾಗ, ರೋನಿ ಅವರು ತಮ್ಮದೇ ಆದ ಹಾದಿಯಲ್ಲಿ ಏನಾದರೂ ಸಾಧಿಸಲು ಪೋಷಕರೊಂದಿಗೆ ಮಾತುಕತೆ ನಡೆಸಿ ಸಮಯ ಕೇಳಿದರು.

ಮೊದಲ ಬಿಸಿನೆಸ್ ಪ್ರಯತ್ನಗಳು: ಟೂತ್‌ಬ್ರಷ್‌ನಿಂದ ಕೇಬಲ್ ಟಿವಿವರೆಗೆ

  • ಟೂತ್‌ಬ್ರಷ್ ಫ್ಯಾಕ್ಟರಿ (Lazer Brushes): ರೋನಿ ಅವರ ಮೊದಲ ಬಿಸಿನೆಸ್ ಯುಟಿವಿ (UTV) ಆಗಿರಲಿಲ್ಲ. ಲಂಡನ್ ಪ್ರವಾಸದಲ್ಲಿದ್ದಾಗ ಸೆಕೆಂಡ್ ಹ್ಯಾಂಡ್ ಟೂತ್‌ಬ್ರಷ್ ತಯಾರಿಸುವ ಯಂತ್ರಗಳನ್ನು ನೋಡಿ, ಅವುಗಳನ್ನು ಭಾರತಕ್ಕೆ ತಂದು ಬಿಸಿನೆಸ್ ಆರಂಭಿಸಿದರು. ಇದು ನಂತರ ಭಾರತದ ದೊಡ್ಡ ಟೂತ್‌ಬ್ರಷ್ ಉತ್ಪಾದನಾ ಸಂಸ್ಥೆಯಾಗಿ ಬೆಳೆದು, ಕೋಲ್ಗೇಟ್‌ನಂತಹ ದೊಡ್ಡ ಬ್ರ್ಯಾಂಡ್‌ಗಳಿಗೆ ಬ್ರಷ್‌ಗಳನ್ನು ತಯಾರಿಸಿಕೊಟ್ಟಿತು.
  • ಕೇಬಲ್ ಟಿವಿ ಕ್ರಾಂತಿ: 1981 ರಲ್ಲಿ ಭಾರತದಲ್ಲಿ ಕೇವಲ ‘ದೂರದರ್ಶನ’ ಮಾತ್ರ ಇದ್ದ ಕಾಲದಲ್ಲಿ ರೋನಿ ಅವರು ಮುಂಬೈನ ದೊಡ್ಡ ಕಟ್ಟಡಗಳಿಗೆ ಕೇಬಲ್ ವೈರ್ ಕನೆಕ್ಷನ್ ಕೊಟ್ಟು, ತಿಂಗಳಿಗೆ 200 ರೂಪಾಯಿಗೆ ಸಿನಿಮಾ ತೋರಿಸುವ ‘ನೆಟ್‌ವರ್ಕ್’ ಎಂಬ ಬಿಸಿನೆಸ್ ಆರಂಭಿಸಿದರು. ಆರಂಭದಲ್ಲಿ ಇದು ದೊಡ್ಡ ನಷ್ಟ ಅನುಭವಿಸಿತು. ಆದರೆ ಹೋಟೆಲ್‌ಗಳಿಗೆ ಉಚಿತ ಚಾನೆಲ್ ನೀಡಿ ಪ್ರಚಾರ ಗಿಟ್ಟಿಸಿಕೊಂಡು, ಭಾರತದಲ್ಲಿ ಕೇಬಲ್ ಟಿವಿ ಕ್ರಾಂತಿಗೆ ಇವರೇ ನಾಂದಿ ಹಾಡಿದರು.

ಯುಟಿವಿ (UTV) ಸಾಮ್ರಾಜ್ಯ ಮತ್ತು ಡಿಸ್ನಿ ಡೀಲ್

1990 ರಲ್ಲಿ ರೋನಿ, ಜರೀನಾ ಮತ್ತು ಇವರ ಸ್ನೇಹಿತ ದೇವನ್ ಖೋಟೆ ಸೇರಿ UTV Software Communications ಸಂಸ್ಥೆಯನ್ನು ಆರಂಭಿಸಿದರು. ಈ ಸಂಸ್ಥೆ ನಾಲ್ಕು ಬಾರಿ ದಿವಾಳಿಯಾಗುವ (ಬ್ಯಾಂಕ್ರಪ್ಟ್) ಹಂತಕ್ಕೆ ತಲುಪಿತ್ತು. ಆದರೂ ಧೃತಿಗೆಡದ ರೋನಿ, ಬಾಲಿವುಡ್‌ನಲ್ಲಿ ವಿಭಿನ್ನ ಸಿನಿಮಾಗಳನ್ನು ನಿರ್ಮಿಸಲು ಮುಂದಾದರು. ಇವರ ನಿರ್ಮಾಣದ ಸ್ವದೇಸ್ (Swades) ಮತ್ತು ರಂಗ್ ದೆ ಬಸಂತಿ (Rang De Basanti) ಸಿನಿಮಾಗಳು ರಾಷ್ಟ್ರ ಪ್ರಶಸ್ತಿ ಗೆದ್ದವು.

ಇದನ್ನೂ ಓದಿ: ದಿನಸಿ ವಸ್ತುವಿನಂತೆ ಮನೆಬಾಗಿಲಿಗೆ ಬರುತ್ತೆ ಸಣ್ಣ ಎಲ್​ಪಿಜಿ ಸಿಲಿಂಡರ್; ಎಚ್​ಪಿ ನಂತರ ಈಗ ಭಾರತ್ ಗ್ಯಾಸ್​ನಿಂದಲೂ ಸಪ್ಲೈ ಶುರು

2012 ರ ಹೊತ್ತಿಗೆ ಜಾಗತಿಕ ಮನರಂಜನಾ ಸಂಸ್ಥೆಯಾದ ಡಿಸ್ನಿ (Disney) ಯುಟಿವಿ ಸಂಸ್ಥೆಯನ್ನು ಸಂಪೂರ್ಣವಾಗಿ ಖರೀದಿಸಿತು. ರೋನಿ ಅವರು 2014 ರವರೆಗೆ ಅದರ ಎಂಡಿ (MD) ಆಗಿ ಮುಂದುವರಿದು ನಂತರ ಹೊರಬಂದರು.

ಎರಡನೇ ಇನ್ನಿಂಗ್ಸ್: ಆನ್​ಲೈನ್ ಶಿಕ್ಷಣ ಮತ್ತು ಕ್ರೀಡೆ

  • ಅಪ್‌ಗ್ರೇಡ್ (upGrad): 2015 ರಲ್ಲಿ ರೋನಿ ಅವರು ಮಯಾಂಕ್ ಕುಮಾರ್ ಮತ್ತು ಫಾಲ್ಗುನ್ ಕೊಂಪಲ್ಲಿ ಅವರೊಂದಿಗೆ ಸೇರಿ ‘upGrad’ ಎಂಬ ಶಿಕ್ಷಣ ತಂತ್ರಜ್ಞಾನ (EdTech) ಸಂಸ್ಥೆಯನ್ನು ಆರಂಭಿಸಿದರು. ಇತ್ತೀಚಿನ ಆರ್ಥಿಕ ವರ್ಷದಲ್ಲಿ (FY25) ಈ ಸಂಸ್ಥೆಯು ಭಾರಿ ನಷ್ಟದಿಂದ ಚೇತರಿಸಿಕೊಂಡು ಲಾಭದ ಹಾದಿಗೆ (EBITDA positive) ಮರಳಿದೆ ಮತ್ತು 1,900 ಕೋಟಿಗೂ ಅಧಿಕ ಆದಾಯ ಗಳಿಸಿದೆ. ಅಲ್ಲದೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದಲ್ಲೂ ಹೂಡಿಕೆ ಮಾಡುತ್ತಿದೆ.
  • ಕ್ರೀಡೆ (U Sports): ಇವರು ‘ಯು ಸ್ಪೋರ್ಟ್ಸ್’ ಸಂಸ್ಥೆಯ ಮೂಲಕ ಪ್ರೊ ಕಬಡ್ಡಿ ಲೀಗ್‌ನಲ್ಲಿ ‘ಯು ಮುಂಬಾ’ (U Mumba) ತಂಡವನ್ನು ಖರೀದಿಸಿದರು. ಈ ತಂಡ ಮೊದಲ ಸೀಸನ್‌ನಲ್ಲೇ ಚಾಂಪಿಯನ್ ಆಗಿ ಹೊರಹೊಮ್ಮಿತು. ಜೊತೆಗೆ ಫುಟ್‌ಬಾಲ್ ಕ್ರೀಡೆಯನ್ನೂ ಪ್ರೋತ್ಸಾಹಿಸುತ್ತಿದ್ದಾರೆ.
  • ಸಿನಿಮಾ ರಂಗ: 2017 ರಲ್ಲಿ RSVP Movies ಮೂಲಕ ಮತ್ತೆ ಸಿನಿಮಾ ನಿರ್ಮಾಣಕ್ಕೆ ಇಳಿದ ರೋನಿ, ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ (Uri: The Surgical Strike) ಮತ್ತು ಸ್ಯಾಮ್ ಬಹದ್ದೂರ್ (Sam Bahadur) ನಂತಹ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿದರು. ಇವರು ಪ್ರಸಿದ್ಧ ಶೋ ‘ಶಾರ್ಕ್ ಟ್ಯಾಂಕ್ ಇಂಡಿಯಾ’ (Shark Tank India) ಸೀಸನ್ 3 ರಲ್ಲಿ ಹೂಡಿಕೆದಾರರಾಗಿಯೂ ಭಾಗವಹಿಸಿದ್ದರು.

ಇದನ್ನೂ ಓದಿ: ಭಾರತದಲ್ಲಿ ಹಸಿರು ಇಂಧನ ಕ್ರಾಂತಿ; ಆರು ತಿಂಗಳಲ್ಲಿ ದಾಖಲೆಯ ಶೇ.25ರಷ್ಟು ಪ್ರಗತಿ- ಮಾಹಿತಿ ಬಿಚ್ಚಿಟ್ಟ ಸಚಿವ ಪ್ರಲ್ಹಾದ್ ಜೋಶಿ

ಸಮಾಜ ಸೇವೆ ಮತ್ತು ಸಾಧನೆಗಳು

  • ಸ್ವದೇಶ್ ಫೌಂಡೇಶನ್ (Swades Foundation): ಗ್ರಾಮೀಣ ಭಾರತದ ಜನರನ್ನು ಬಡತನದಿಂದ ಮುಕ್ತಗೊಳಿಸಲು ರೋನಿ ಮತ್ತು ಅವರ ಪತ್ನಿ ಜರೀನಾ ಈ ಫೌಂಡೇಶನ್ ನಡೆಸುತ್ತಿದ್ದಾರೆ. ಸದ್ಯ ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಸುಮಾರು 2,000 ಹಳ್ಳಿಗಳ ಲಕ್ಷಾಂತರ ಜನರಿಗೆ ಕುಡಿಯುವ ನೀರು, ಆರೋಗ್ಯ ಮತ್ತು ಉದ್ಯೋಗ ಒದಗಿಸುತ್ತಿದ್ದಾರೆ.
  • ಆಸ್ತಿ ಮತ್ತು ಗೌರವ: ಫೋರ್ಬ್ಸ್ ನಿಯತಕಾಲಿಕೆಯ ಪ್ರಕಾರ ಇವರ ಒಟ್ಟು ಆಸ್ತಿ ಸರಿಸುಮಾರು 1.6 ಬಿಲಿಯನ್ ಡಾಲರ್ (ಸುಮಾರು 15,000 ಕೋಟಿ ರೂಪಾಯಿಗೂ ಅಧಿಕ). ಇವರು ಜಗತ್ತಿನ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಹಾಗೂ ಹಾರ್ವರ್ಡ್ ಬಿಸಿನೆಸ್ ಸ್ಕೂಲ್ ಇವರ ಯಶಸ್ಸಿನ ಕುರಿತು ಕೇಸ್ ಸ್ಟಡಿ ಕೂಡ ಮಾಡಿದೆ.

ರೋನಿ ಸ್ಕ್ರೂವಾಲಾ ಅವರ 50 ವರ್ಷಗಳ ಉದ್ಯಮ ಜೀವನವು ಸೋಲಿಗೆ ಹೆದರದೆ, ಹೊಸ ಹೊಸ ಕ್ಷೇತ್ರಗಳಲ್ಲಿ (ಟೂತ್‌ಬ್ರಷ್, ಕೇಬಲ್ ಟಿವಿ, ಸಿನಿಮಾ, ಎಡ್ಟೆಕ್, ಎಐ) ರಿಸ್ಕ್ ತೆಗೆದುಕೊಂಡು ಹೇಗೆ ಯಶಸ್ಸು ಗಳಿಸಬಹುದು ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ವಾಸ್ತು ಪ್ರಕಾರವೇ ಚೆನ್ನಮ್ಮ ಅಂತ್ಯಕ್ರಿಯೆ: ಬೆಂಗಳೂರಿನಿಂದ ಸ್ಥಳಕ್ಕೆ ಬಂದ ವಾಸ್ತು ತಜ್ಞ ಹೇಳಿದ್ದಿಷ್ಟು – Kannada News | HD devegowda Wife Chennamma funeral In Mavinakere as Vastu, here Is expert exclusive chit chat

ಹಾಸನ, (ಜುಲೈ 19): ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ (Chennamma Deve Gowda) ಅವರ ಅಂತ್ಯಕ್ರಿಯೆ ನಾಳೆ (ಜುಲೈ 20) ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಗ್ರಾಮದ ಸಮೀಪವಿರುವ ಕ್ಯಾತನಹಳ್ಳಿ ಗ್ರಾಮದ ಜಮೀನಿನಲ್ಲಿ ನಡೆಯಲಿದೆ. ಸಕಲ ಸರ್ಕಾರಿ ಗೌರವಗೊಂದಿಗೆ ಅಂತ್ಯಕ್ರಿಯೆ ನಡೆಯಲಿದ್ದು, ಈಗಾಗಲೇ ಹಾಸನ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇನ್ನು ವಾಸ್ತು ಪ್ರಕಾರವೇ ಅಂತ್ಯಕ್ರಿಯೆ ನೆರವೇರಲಿದೆ. ಹೀಗಾಗಿ ದೇವೇಗೌಡ ರ ಕುಟುಂಬ ಸದಸ್ಯರ ಕೋರಿಕೆ ಮೇರೆಗೆ ಬೆಂಗಳೂರಿನ ಖ್ಯಾತ ವಾಸ್ತು ತಜ್ಞ ಹರಿಪ್ರಸಾಧ್ ಅವರು ಹರದನಹಳ್ಳಿಗೆ ಭೇಟಿ ನೀಡಿ ಅಂತ್ಯಕ್ರಿಯೆ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇನ್ನು ಈ ಬಗ್ಗೆ ಟಿವಿ9 ಜೊತೆ ಮಾತನಾಡಿರುವ ಖ್ಯಾತ ವಾಸ್ತು ತಜ್ಞ ಹರಿಪ್ರಸಾದ್, ದೇವೇಗೌಡರ ಕುಟುಂಬ ದೇವರು, ವಾಸ್ತು ಬಿಟ್ಟು ಏನನ್ನೂ ಮಾಡಲ್ಲ. ಇಂತಹ ದೈವ ಭಕ್ತರು ಎಲ್ಲೂ ಸಿಗಲ್ಲ. ಎಲ್ಲಿ ಅಂತಿಮ ಸಂಸ್ಕಾರ ಎಂದು ಸ್ಥಳ ನಿಗದಿ ಆಗಿದೆ. ಆದರೆ ಅಲ್ಲಿ ಯಾವ ಕಡೆ ಮಾಡಬೇಕು ಎಂದು ನೋಡಲು ಬಂದಿದ್ದೇನೆ. ಈ ಮೊದಲೇ ಚರ್ಚೆ ಮಾಡಿದ್ದರು. ಈಗ ಖುದ್ದು ನೋಡಲು ಬಂದಿದ್ದೇನೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Auto Tips: ಕಾರುಗಳಿಗೆ ನಾಲ್ಕೇ ಚಕ್ರಗಳು ಏಕೆ? ಇದರ ಹಿಂದಿನ ವಿಜ್ಞಾನ ತಿಳಿದರೆ ಅಚ್ಚರಿಯಾಗುತ್ತದೆ! – Kannada News | Why cars have four wheels science behind four wheel design

ಕಾರುಗಳ ಸಾಂದರ್ಭಿಕ ಚಿತ್ರImage Credit source: AP

ಇಂದು ಜಗತ್ತಿನಾದ್ಯಂತ ಕೋಟ್ಯಂತರ ಕಾರುಗಳು ರಸ್ತೆಯಲ್ಲಿ ಸಂಚರಿಸುತ್ತಿವೆ. ಸಣ್ಣ ಹ್ಯಾಚ್‌ಬ್ಯಾಕ್‌ನಿಂದ ಹಿಡಿದು ಐಷಾರಾಮಿ ಸೆಡಾನ್‌, ಎಸ್‌ಯುವಿ (SUV) ಮತ್ತು ಸ್ಪೋರ್ಟ್ಸ್ ಕಾರುಗಳವರೆಗೆ ಬಹುತೇಕ ಎಲ್ಲ ವಾಹನಗಳಲ್ಲೂ ನಾಲ್ಕು ಚಕ್ರಗಳನ್ನೇ ನಾವು ಕಾಣುತ್ತೇವೆ. ಆದರೆ ಎಂದಾದರೂ ನಿಮ್ಮ ಮನಸ್ಸಿಗೆ ಒಂದು ಪ್ರಶ್ನೆ ಬಂದಿದೆಯೇ? ಕಾರುಗಳಿಗೆ ನಾಲ್ಕೇ ಚಕ್ರಗಳು ಏಕೆ ಇರುತ್ತವೆ? ಮೂರು, ಐದು ಅಥವಾ ಆರು ಚಕ್ರಗಳ ಕಾರುಗಳನ್ನು ಸಾಮಾನ್ಯವಾಗಿ ಏಕೆ ತಯಾರಿಸುವುದಿಲ್ಲ? ಈ ಪ್ರಶ್ನೆಗೆ ಉತ್ತರ ಕೇವಲ ವಾಹನ ವಿನ್ಯಾಸಕ್ಕೆ ಮಾತ್ರ ಸೀಮಿತವಾಗಿಲ್ಲ. ಇದರ ಹಿಂದೆ ಇತಿಹಾಸ, ವಿಜ್ಞಾನ, ಸುರಕ್ಷತೆ ಮತ್ತು ಎಂಜಿನಿಯರಿಂಗ್‌ನ ಹಲವು ಅಂಶಗಳು ಅಡಗಿವೆ.

ಕಾರುಗಳ ಇತಿಹಾಸವನ್ನು ಗಮನಿಸಿದರೆ, ಮೊದಲ ವಾಹನಗಳು ಕುದುರೆಬಂಡಿಗಳ ಮಾದರಿಯಲ್ಲಿಯೇ ರೂಪುಗೊಂಡಿದ್ದವು. ಶತಮಾನಗಳ ಕಾಲ ಜನರು ಸರಕು ಮತ್ತು ಪ್ರಯಾಣಕ್ಕಾಗಿ ಬಳಸುತ್ತಿದ್ದ ರಥಗಳು ಹಾಗೂ ಬಂಡಿಗಳು ಸಾಮಾನ್ಯವಾಗಿ ನಾಲ್ಕು ಚಕ್ರಗಳನ್ನು ಹೊಂದಿದ್ದವು. ಈ ವಿನ್ಯಾಸವು ತೂಕವನ್ನು ಸಮತೋಲನವಾಗಿ ಹೊರುವುದಲ್ಲದೆ ಪ್ರಯಾಣವನ್ನು ಹೆಚ್ಚು ಸುರಕ್ಷಿತವಾಗಿಯೂ ಮಾಡುತ್ತಿತ್ತು. ನಂತರ 19ನೇ ಶತಮಾನದಲ್ಲಿ ಆಧುನಿಕ ಕಾರುಗಳ ಅಭಿವೃದ್ಧಿ ಆರಂಭವಾದಾಗ, ಇಂಜಿನಿಯರ್‌ಗಳು ಈಗಾಗಲೇ ಯಶಸ್ವಿಯಾಗಿದ್ದ ಈ ನಾಲ್ಕು ಚಕ್ರಗಳ ವಿನ್ಯಾಸವನ್ನೇ ಮುಂದುವರಿಸಿಕೊಂಡರು.

ವೈಜ್ಞಾನಿಕ ದೃಷ್ಟಿಯಿಂದ ನೋಡಿದರೆ, ನಾಲ್ಕು ಚಕ್ರಗಳು ವಾಹನಕ್ಕೆ ಅತ್ಯುತ್ತಮ ಸ್ಥಿರತೆಯನ್ನು ಒದಗಿಸುತ್ತವೆ. ಒಂದು ವಾಹನದ ತೂಕವನ್ನು ನಾಲ್ಕು ಮೂಲೆಗಳಲ್ಲಿ ಸಮಾನವಾಗಿ ಹಂಚಿದಾಗ ಅದು ರಸ್ತೆಯ ಮೇಲೆ ಉತ್ತಮ ಹಿಡಿತವನ್ನು ಪಡೆಯುತ್ತದೆ. ಕಾರು ವೇಗವಾಗಿ ಚಲಿಸುವಾಗ ಅಥವಾ ತಿರುವುಗಳನ್ನು ತೆಗೆದುಕೊಳ್ಳುವಾಗ ಸಮತೋಲನ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ನಾಲ್ಕು ಚಕ್ರಗಳ ವ್ಯವಸ್ಥೆಯಲ್ಲಿ ವಾಹನದ ಗುರುತ್ವಾಕರ್ಷಣ ಕೇಂದ್ರವು ಸಮರ್ಪಕವಾಗಿ ನಿಯಂತ್ರಿತವಾಗಿರುವುದರಿಂದ ಉರುಳುವ ಅಪಾಯ ಕಡಿಮೆಯಾಗುತ್ತದೆ.

Auto Tips: ಕಾರ್ ಸನ್‌ಶೇಡ್ ನಿಜವಾಗಿಯೂ ಕೆಲಸ ಮಾಡುತ್ತದೆಯೇ?

ಮೂರು ಚಕ್ರಗಳ ವಾಹನಗಳು ಸಹ ಜಗತ್ತಿನಲ್ಲಿ ಇವೆ. ಭಾರತದ ಆಟೋ ರಿಕ್ಷಾಗಳು ಇದಕ್ಕೆ ಉತ್ತಮ ಉದಾಹರಣೆ. ಆದರೆ ಮೂರು ಚಕ್ರಗಳ ವಾಹನಗಳಲ್ಲಿ ಸ್ಥಿರತೆ ನಾಲ್ಕು ಚಕ್ರಗಳ ವಾಹನಗಳಷ್ಟಿರುವುದಿಲ್ಲ. ವಿಶೇಷವಾಗಿ ಹೆಚ್ಚಿನ ವೇಗದಲ್ಲಿ ಅಥವಾ ತೀಕ್ಷ್ಣ ತಿರುವುಗಳಲ್ಲಿ ಸಂಚರಿಸುವಾಗ ಸಮತೋಲನ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಇದೇ ಕಾರಣದಿಂದ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಕಾರು ತಯಾರಕರು ನಾಲ್ಕು ಚಕ್ರಗಳ ವಿನ್ಯಾಸವನ್ನೇ ಆಯ್ಕೆ ಮಾಡುತ್ತಾರೆ.

ಇನ್ನು ಕೆಲವರಿಗೆ ಐದು ಚಕ್ರಗಳ ಕಾರುಗಳ ಕಲ್ಪನೆ ಬರಬಹುದು. ವಾಸ್ತವವಾಗಿ ಐದನೇ ಚಕ್ರವನ್ನು ಸೇರಿಸುವುದರಿಂದ ಹೆಚ್ಚಿನ ಪ್ರಯೋಜನ ಸಿಗುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ಹೆಚ್ಚುವರಿ ಚಕ್ರ ಅಳವಡಿಸಿದರೆ ವಾಹನದ ತೂಕ ಹೆಚ್ಚಾಗುತ್ತದೆ. ಜೊತೆಗೆ ಸಸ್ಪೆನ್ಷನ್, ಬ್ರೇಕಿಂಗ್ ಮತ್ತು ಸ್ಟೀರಿಂಗ್ ವ್ಯವಸ್ಥೆಗಳು ಇನ್ನಷ್ಟು ಸಂಕೀರ್ಣವಾಗುತ್ತವೆ. ನಿರ್ವಹಣಾ ವೆಚ್ಚವೂ ಹೆಚ್ಚಾಗುತ್ತದೆ. ಆದರೆ ಇದರಿಂದ ದೊರೆಯುವ ಲಾಭ ಅಷ್ಟಾಗಿ ಇರುವುದಿಲ್ಲ. ಹೀಗಾಗಿ ನಾಲ್ಕು ಚಕ್ರಗಳ ವಿನ್ಯಾಸವೇ ಅತ್ಯಂತ ಸಮರ್ಥ ಮತ್ತು ಆರ್ಥಿಕ ಪರಿಹಾರವಾಗಿದೆ.

ನಾಲ್ಕು ಚಕ್ರಗಳ ಮತ್ತೊಂದು ಪ್ರಮುಖ ಲಾಭವೆಂದರೆ ಉತ್ತಮ ಚಾಲನಾ ನಿಯಂತ್ರಣ. ಕಾರಿನ ಮುಂಭಾಗದ ಎರಡು ಚಕ್ರಗಳು ದಿಕ್ಕು ಬದಲಿಸುವ ಕೆಲಸ ಮಾಡುತ್ತವೆ. ಹಿಂಭಾಗದ ಚಕ್ರಗಳು ವಾಹನದ ತೂಕವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತವೆ. ಈ ವ್ಯವಸ್ಥೆಯಿಂದ ಚಾಲಕನಿಗೆ ವಾಹನದ ಮೇಲೆ ಹೆಚ್ಚಿನ ನಿಯಂತ್ರಣ ಸಿಗುತ್ತದೆ. ಮಳೆ, ಮಣ್ಣು ಅಥವಾ ಅಸಮ ರಸ್ತೆಗಳಲ್ಲಿಯೂ ಕಾರು ಹೆಚ್ಚು ಸುರಕ್ಷಿತವಾಗಿ ಚಲಿಸುತ್ತದೆ.

ಆದರೆ ಎಲ್ಲ ವಾಹನಗಳೂ ನಾಲ್ಕು ಚಕ್ರಗಳಾಗಿರಬೇಕೆಂದಿಲ್ಲ. ಭಾರೀ ಸರಕು ಸಾಗಣೆ ಟ್ರಕ್‌ಗಳು, ಸೇನಾ ವಾಹನಗಳು ಮತ್ತು ಗಣಿಗಾರಿಕಾ ಕ್ಷೇತ್ರದಲ್ಲಿ ಬಳಸುವ ದೊಡ್ಡ ವಾಹನಗಳು ಆರು, ಎಂಟು ಅಥವಾ ಇನ್ನೂ ಹೆಚ್ಚು ಚಕ್ರಗಳನ್ನು ಹೊಂದಿರುತ್ತವೆ. ಇದಕ್ಕೆ ಕಾರಣ ಅವು ಹೆಚ್ಚಿನ ತೂಕವನ್ನು ಹೊರುವ ಅಗತ್ಯ. ಹೆಚ್ಚುವರಿ ಚಕ್ರಗಳು ವಾಹನದ ತೂಕವನ್ನು ಸಮಾನವಾಗಿ ಹಂಚಿ ರಸ್ತೆಯ ಮೇಲೆ ಉತ್ತಮ ಹಿಡಿತ ಒದಗಿಸುತ್ತವೆ. ಆದರೆ ಸಾಮಾನ್ಯ ಪ್ರಯಾಣಿಕ ಕಾರುಗಳಿಗೆ ನಾಲ್ಕು ಚಕ್ರಗಳೇ ಸಾಕಷ್ಟು ಎಂದು ಪರಿಗಣಿಸಲಾಗುತ್ತದೆ.

ಆಧುನಿಕ ಆಟೋಮೊಬೈಲ್ ಉದ್ಯಮದಲ್ಲಿ ಸಾವಿರಾರು ಪರೀಕ್ಷೆಗಳು ಮತ್ತು ಸಂಶೋಧನೆಗಳ ಬಳಿಕ ನಾಲ್ಕು ಚಕ್ರಗಳ ವಿನ್ಯಾಸವೇ ಅತ್ಯುತ್ತಮ ಆಯ್ಕೆಯಾಗಿದೆ ಎಂಬುದು ಸಾಬೀತಾಗಿದೆ. ಇದು ಸುರಕ್ಷತೆ, ಸ್ಥಿರತೆ, ಕಡಿಮೆ ವೆಚ್ಚ, ಸುಲಭ ನಿರ್ವಹಣೆ ಮತ್ತು ಉತ್ತಮ ಕಾರ್ಯಕ್ಷಮತೆಯ ಸಮತೋಲನವನ್ನು ಒದಗಿಸುತ್ತದೆ. ಅದಕ್ಕಾಗಿಯೇ ದಶಕಗಳ ಕಾಲ ತಂತ್ರಜ್ಞಾನ ಬದಲಾಗಿದ್ದರೂ ಕಾರುಗಳ ಮೂಲ ವಿನ್ಯಾಸದಲ್ಲಿ ನಾಲ್ಕು ಚಕ್ರಗಳ ಸ್ಥಾನ ಮಾತ್ರ ಅಚಲವಾಗಿದೆ.

ಹೀಗಾಗಿ ಮುಂದಿನ ಬಾರಿ ನೀವು ರಸ್ತೆಯಲ್ಲಿ ಕಾರನ್ನು ನೋಡಿದಾಗ, ಅದರ ನಾಲ್ಕು ಚಕ್ರಗಳ ಹಿಂದೆ ಕೇವಲ ಒಂದು ವಿನ್ಯಾಸವಲ್ಲ, ಹಲವು ವರ್ಷಗಳ ಇತಿಹಾಸ, ವಿಜ್ಞಾನ ಮತ್ತು ಎಂಜಿನಿಯರಿಂಗ್ ಜ್ಞಾನ ಅಡಗಿದೆ ಎಂಬುದನ್ನು ನೆನಪಿಸಿಕೊಳ್ಳಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Video: ಮನೆಯಲ್ಲೇ ರಕ್ತ ಪರೀಕ್ಷೆ ಮಾಡುವ ಸೇವೆ ಕಂಡು ಅಚ್ಚರಿ ವ್ಯಕ್ತಪಡಿಸಿದ ವಿದೇಶಿ ಮಹಿಳೆ – Kannada News | American woman praises India’s healthcare system

ಮುಂಬೈ, ಜುಲೈ 19: ವಿದೇಶಿಗರು (foreigner) ಭಾರತಕ್ಕೆ ಭೇಟಿ ನೀಡಿ ಇಲ್ಲಿನ ಪ್ರತಿಯೊಂದು ಕ್ಷಣವನ್ನು ಖುಷಿಯಿಂದ ಕಳೆಯುತ್ತಾರೆ. ಭಾರತದ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವುದು, ವಿವಿಧ ರುಚಿಕರ ಖಾದ್ಯಗಳನ್ನು ಸವಿಯುವುದನ್ನು ನೀವು ನೋಡಿರುತ್ತೀರಿ. ಆದರೆ ಭಾರತೀಯರಿಗೆ ಸಾಮಾನ್ಯ ಎನಿಸುವ ಮನೆ ಬಾಗಿಲಿನ ರಕ್ತ ಪರೀಕ್ಷೆ ಸೇವೆಗೆ ವಿದೇಶಿ ಮಹಿಳೆ ಫುಲ್ ಫಿದಾ ಆಗಿದ್ದಾರೆ. ಮುಂಬೈನಲ್ಲಿ ನೆಲೆಸಿರುವ ಅಮೆರಿಕನ್ ಮಹಿಳೆ ಮನೆಯಿಂದಲೇ ರಕ್ತ ಪರೀಕ್ಷೆ ಮಾಡಿಸಿಕೊಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಲಿಜ್ ಅಂಡ್ ಶಿವ್ (Liz and shiv) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಭಾರತೀಯ ಮನೆ ಬಾಗಿಲಿನ ರಕ್ತ ಪರೀಕ್ಷೆ ಸೇವೆಯನ್ನು ಶ್ಲಾಘಿಸಿದ್ದಾರೆ. ಈ ವಿದೇಶಿ ಮಹಿಳೆ ಮನೆ ಬಾಗಿಲಿಗೆ ಬಂದು ರಕ್ತ ಮಾಡುವ ಈ ಸೇವೆಗೆ ಹೆಚ್ಚುವರಿ ಹಣ ಪಾವತಿಸಿಲ್ಲ ಎಂದಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಈ ಕ್ಲಿಪಿಂಗ್‌ನಲ್ಲಿ ತನ್ನ ಅನುಭವ ಬಿಚ್ಚಿಟ್ಟ ಲಿಜ್ ಭಾರತದಲ್ಲಿ ಈ ರೀತಿ ಸೇವೆಯಿದೆ ಎಂದು ನಿಜಕ್ಕೂ ನಂಬಲಾಗದು. ನಾನು ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕಾಗಿತ್ತು. ಆಸ್ಪತ್ರೆಯಿಂದ ಸಿಬ್ಬಂದಿಯೊಬ್ಬರು ರಕ್ತದ ಮಾದರಿಯನ್ನು ಸಂಗ್ರಹಿಸಲು ನಾನಿರುವ ಅಪಾರ್ಟ್‌ಮೆಂಟ್‌ಗೆ ಬಂದರು. ಮನೆಗೆ ಬಂದು ರಕ್ತ ಪರೀಕ್ಷೆ ಮಾಡಿಸಿದ್ದಕ್ಕೆ ಶುಲ್ಕವನ್ನು ಆಸ್ಪತ್ರೆ ಸಿಬ್ಬಂದಿ ಪಡೆದಿಲ್ಲ. ಆಸ್ಪತ್ರೆಗೆ ಹೋಗಿ ಟೆಸ್ಟ್ ಮಾಡಿಸಿದರೆ ಖರ್ಚು ಆಗುವಷ್ಟೇ ಈ ಸೇವೆಗೆ ಆಗಿದೆ ಎಂದು ಹೇಳಿದ್ದಾರೆ.

ನಾನು ಈ ರೀತಿ ಸೇವೆ ಭಾರತದಲ್ಲಿ ಮಾತ್ರ ನೋಡಿದ್ದೇನೆ, ಬೇರೆಲ್ಲಿಯೂ ಇಂತಹ ಸೌಲಭ್ಯವಿಲ್ಲ. ಆಸ್ಪತ್ರೆಗೆ ಹೋಗಿ ಅಪಾಯಿಂಟ್‌ಮೆಂಟ್‌ ತೆಗೆದುಕೊಂಡು ಕಾಯುವುದಕ್ಕಿಂತ ಕ್ಷಣಾರ್ಧದಲ್ಲಿ ರಕ್ತ ಪರೀಕ್ಷೆ ಮಾಡಲಾಗುತ್ತದೆ. ಮನೆಯಲ್ಲಿ ಕುಳಿತುಕೊಂಡೆ ರಕ್ತ ಪರೀಕ್ಷೆ ಆಯ್ತು ಎಂದು ಹೇಳಿರುವುದನ್ನು ನೀವು ನೋಡಬಹುದು.

ಇದನ್ನೂ ಓದಿ: ವಿದೇಶಿ ಮಹಿಳೆಗೆ ಕಿವಿಯೋಲೆಯನ್ನು ಉಡುಗೊರೆಯಾಗಿ ನೀಡಿದ ಭಾರತೀಯ ಬೀದಿ ಬದಿ ವ್ಯಾಪಾರಿ

ಈ ವಿಡಿಯೋ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಇದೇನು ವಿಶೇಷವಲ್ಲ, ಭಾರತದಲ್ಲಿ ಕಾಮನ್ ಎಂದಿದ್ದಾರೆ. ಮತ್ತೊಬ್ಬರು, ವಿದೇಶಿಗರಿಗೆ ಇದು ನಿಜಕ್ಕೂ ಅಚ್ಚರಿಯಾಗುತ್ತದೆ. ಭಾರತೀಯರಿಗೆ ಹೊಸದೇನು ಅನಿಸಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು, ಭಾರತದಲ್ಲಿ ಧನಾತ್ಮಕ ಅಂಶ ಗುರುತಿಸಿದ್ದಕ್ಕೆ ಧನ್ಯವಾದಗಳು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version