ಕರ್ನಾಟಕ ಲೋಕ ಅದಾಲತ್‌ನಲ್ಲಿ ಹೊಸ ದಾಖಲೆ: ಶೇ.50 ಟ್ರಾಫಿಕ್‌ ದಂಡದ ಆಫರ್‌ಗೆ 19 ಲಕ್ಷ ಕೇಸ್ ಕ್ಲೋಸ್; ಸರ್ಕಾರಕ್ಕೆ 55 ಕೋಟಿ ಆದಾಯ – Kannada News | Mega Lok Adalat Success: KSLSA’s 50% Traffic Fine Scheme Boosts Revenue and Clears 78 Lakh Cases

ಬೆಂಗಳೂರು, ಜು.15: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (KSLSA) ವಿಶೇಷ ಪ್ರಯತ್ನದ ಫಲವಾಗಿ, ರಾಜ್ಯ ಸರ್ಕಾರವು ಸಂಚಾರ ನಿಯಮ ಉಲ್ಲಂಘನೆಯ ಬಾಕಿ ದಂಡದ ಪಾವತಿಗೆ ಘೋಷಿಸಿದ್ದ ಶೇಕಡಾ 50 ರಷ್ಟು ರಿಯಾಯಿತಿ ಯೋಜನೆಗೆ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಈ ರಿಯಾಯಿತಿ ಯೋಜನೆಯಡಿ ಒಟ್ಟು 19,13,659 ಸಂಚಾರ ಚಲನ್ ಪ್ರಕರಣಗಳು ಇತ್ಯರ್ಥಗೊಂಡಿದ್ದು, ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 55 ಕೋಟಿ ರೂಪಾಯಿ ದಂಡದ ಆದಾಯ ಹರಿದುಬಂದಿದೆ.

ಜುಲೈ 11 ರಂದು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದ್ದ ಮೆಗಾ ಲೋಕ ಅದಾಲತ್‌ನಲ್ಲಿ ಈ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಈ ಬಾರಿ ನಡೆದ ಲೋಕ ಅದಾಲತ್‌ನಲ್ಲಿ ಒಟ್ಟು 78.79 ಲಕ್ಷ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದ್ದು, ಇದರಲ್ಲಿ 2.54 ಲಕ್ಷ ಬಾಕಿ ಇದ್ದ ಪ್ರಕರಣಗಳು ಹಾಗೂ 76.25 ಲಕ್ಷ ಪೂರ್ವ ವ್ಯಾಜ್ಯ ಪ್ರಕರಣಗಳು ಸೇರಿವೆ.

ಈ ಇಡೀ ಪ್ರಕ್ರಿಯೆಯಲ್ಲಿ ಒಟ್ಟು 3,017 ಕೋಟಿ ರೂಪಾಯಿಗಳಷ್ಟು ಮೊತ್ತದ ವಿವಾದಗಳನ್ನು ಇತ್ಯರ್ಥಪಡಿಸಲಾಗಿದೆ. ಸಂಚಾರ ದಂಡದ ಮೇಲಿನ ಶೇ. 50 ರಷ್ಟು ರಿಯಾಯಿತಿಯನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಲು ಜೂನ್ 21 ರಿಂದ ಜುಲೈ 10 ರವರೆಗೆ ಒಟ್ಟು 20 ದಿನಗಳ ಕಾಲಾವಕಾಶ ನೀಡಲಾಗಿತ್ತು.

ಲೋಕ ಅದಾಲತ್‌ನಲ್ಲಿ ಇತ್ಯರ್ಥಗೊಂಡ ಪ್ರಕರಣಗಳ ವಿವರಗಳನ್ನು ಮಾಧ್ಯಮಗಳಿಗೆ ನೀಡಿದ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿಗಳು ಹಾಗೂ KSLSA ಕಾರ್ಯಕಾರಿ ಅಧ್ಯಕ್ಷರಾದ ನ್ಯಾಯಮೂರ್ತಿ ಅನು ಶಿವರಾಮನ್ ಅವರು ಹಲವು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಾರಿಗೆ ಇಲಾಖೆಗೆ ಸಂಬಂಧಿಸಿದ 1,212 ಪ್ರಕರಣಗಳನ್ನು ಇತ್ಯರ್ಥಪಡಿಸುವ ಮೂಲಕ ಇಲಾಖೆಗೆ 61.99 ಲಕ್ಷ ರೂಪಾಯಿಗಳನ್ನು ಮರುಪಡೆಯಲಾಗಿದೆ.

ಇದನ್ನೂ ಓದಿ: ಆಲೂಗಡ್ಡೆ ಚಿಪ್ಸ್ ಪ್ರಿಯರೇ ಹುಷಾರ್: ಕೊಳೆತ ಆಲೂಗಡ್ಡೆ, ಗಲೀಜು ನೀರಿಂದ ಚಿಪ್ಸ್ ತಯಾರಿ

ರಾಜ್ಯಾದ್ಯಂತ ಹಿರಿಯ ನಾಗರಿಕರಿಗೆ ಸಂಬಂಧಿಸಿದ 1,948 ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಮೂಲಕ ಅವರಿಗೆ ನೆರವಾಗಲಾಗಿದೆ. ಧಾರವಾಡ ಜಿಲ್ಲೆಯಲ್ಲಿ ನಡೆದ ಮೋಟಾರು ವಾಹನ ಅಪಘಾತ ಪ್ರಕರಣವೊಂದರಲ್ಲಿ ಸಂತ್ರಸ್ತರಿಗೆ ಬರೋಬ್ಬರಿ 2.45 ಕೋಟಿ ರೂಪಾಯಿಗಳ ಭಾರಿ ಮೊತ್ತದ ಪರಿಹಾರವನ್ನು ಒಪ್ಪಂದದ ಮೂಲಕ ಕೊಡಿಸಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:35 am, Wed, 15 July 26

Source link

Video: ರೈಲು ಹಳಿ ದಾಟಲು ಕಷ್ಟ ಪಡುತ್ತಿದ್ದ ಮರಿಯಾನೆಗೆ ತಾಯಾನೆ ಸಾಥ್‌, ವೈರಲ್‌ ಆಯ್ತು ದೃಶ್ಯ – Kannada News | Mother elephant prevents baby elephant from falling while crossing railway tracks.

ತಾಯಿಯೇ ಪ್ರೀತಿಯೇ ಹಾಗೆ, ವಿವರಿಸಲು ಪದಗಳೇ ಇಲ್ಲ. ಪ್ರಾಣಿಗಳು ಕೂಡ ತನ್ನ ಕಂದಮ್ಮಗಳ ಮೇಲೆ ಕಾಳಜಿ ವಹಿಸುತ್ತವೆ, ತಪ್ಪು ಮಾಡಿದರೆ ಗದರುತ್ತವೆ. ಇದೀಗ ತಾಯಾನೆ (mother elephant) ತನ್ನ ಮರಿಯನ್ನು ಎಷ್ಟು ಕೇರ್ ಮಾಡುತ್ತದೆ ಎನ್ನುವುದಕ್ಕೆ ಸಾಕ್ಷಿಯೆನ್ನುವಂತಿದೆ ಈ ದೃಶ್ಯ. ಹೌದು, ಮರಿಯಾನೆ ರೈಲು ಹಳಿ ದಾಟಲು ಕಷ್ಟ ಪಡುತ್ತಿದೆ. ಇದೇ ವೇಳೆ ತಾಯಿ ಆನೆ ತನ್ನ ಕಂದಮ್ಮನನ್ನು ರೈಲು ಹಳಿ ದಾಟಿಸಿ ತನ್ನ ಜತೆಗೆ ಕರೆದುಕೊಂಡು ಹೋಗಿರುವ ದೃಶ್ಯವು ನೆಟ್ಟಿಗರ ಗಮನ ಸೆಳೆದಿದೆ.

ಎಲಿಫೆಂಟ್ ಸೆಕ್ಯೂರ್ (elephantssecures) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ಆನೆಗಳ ಗುಂಪಿನಲ್ಲಿದ್ದ ಮರಿಯಾನೆಯೊಂದು ರೈಲು ಹಳಿ ದಾಟಲು ಕಷ್ಟ ಪಡುತ್ತಿರುವುದನ್ನು ಕಾಣಬಹುದು. ಈ ಪುಟಾಣಿ ಆನೆಯ ಹಿಂಭಾಗದಲ್ಲಿದ್ದ ತಾಯಾನೆ ತನ್ನ ಕಂದಮ್ಮ ಬೀಳದಂತೆ ತಡೆದಿದೆ. ರೈಲು ಹಳಿ ದಾಟುವುದು ಹೇಗೆಂದು ಮಾರ್ಗದರ್ಶನ ಮಾಡಿದ್ದು, ತನ್ನ ಸೊಂಡಿಲಿನಿಂದ ಮರಿಯಾನೆಯನ್ನು ಮೆಲ್ಲನೆ ಮುಂದಕ್ಕೆ ದೂಡುತ್ತಾ ಹಳಿ ದಾಟಿಸಿರುವುದನ್ನು ದೃಶ್ಯವನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಎದ್ದು ನಿಂತು ನಡೆಯಲು ಪ್ರಯತ್ನಿಸುತ್ತಿದ್ದ ಕಂದಮ್ಮನನ್ನು ಬೀಳದಂತೆ ತಡೆದ ತಾಯಾನೆ

ಈ ವಿಡಿಯೋ ಎಂಟು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಮುದ್ದಾಗಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಬುದ್ಧಿವಂತ ಆನೆ ಎಂದಿದ್ದಾರೆ. ಇನ್ನೊಬ್ಬರು, ಆನೆಗೆ ಈ ರೈಲ್ವೆ ಟ್ರ್ಯಾಕ್ ಡೇಂಜರ್ಸ್ ಎಂಬುದು ತಿಳಿದಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಿತಿನ್ ಗಡ್ಕರಿ ಇಮೇಜ್‌ಗೆ ಧಕ್ಕೆ: E20 ಇಂಧನ ನೀತಿ ವಿರುದ್ಧ ಅಪಪ್ರಚಾರ, ಮನೀಶ್ ಕಶ್ಯಪ್ ಸೇರಿ ನಾಲ್ವರ ವಿರುದ್ಧ ಎಫ್​ಐಆರ್ – Kannada News | Nitin Gadkari E20 Fuel FIR: Manish Kashyap and 3 Influencers Booked for Misinformation

ನಾಗ್ಪುರ, ಜುಲೈ 15: ಕೇಂದ್ರ ಸಚಿವ ನಿತಿನ್ ಗಡ್ಕರಿ(Nitin Gadkari) ಅವರ ಹೆಸರನ್ನು ದುರುಪಯೋಗಪಡಿಸಿಕೊಂಡು, ಎಥೆನಾಲ್ ಮಿಶ್ರಿತ ಇಂಧನ(E20 Petrol) ನೀತಿಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ದಾರಿತಪ್ಪಿಸುವ ಮಾಹಿತಿಯನ್ನು ಹರಡಿದ ಆರೋಪದ ಮೇಲೆ ಬಿಹಾರದ ಪ್ರಸಿದ್ಧ ಯೂಟ್ಯೂಬರ್ ಮನೀಷ್ ಕಶ್ಯಪ್ ಸೇರಿ ನಾಲ್ವರು ಇನ್​ಫ್ಲುಯೆನ್ಸರ್​ಗಳ ವಿರುದ್ಧ ನಾಗ್ಪುರ ಸೈಬರ್ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ. ಮನೀಶ್ ಕಶ್ಯಪ್ ಹೊರತುಪಡಿಸಿ, ಎಫ್‌ಐಆರ್‌ನಲ್ಲಿ ಹೆಸರಿಸಲಾದ ಇತರ ಸೋಶಿಯಲ್ ಮೀಡಿಯಾ ಇನ್​ಫ್ಲುಯೆನ್ಸರ್​ಗಳೆಂದರೆ ‘ದೇಸಿ ಬಾಯ್ಸ್ ಎನ್​ಸಿಆರ್’, ಹರ್ಷಿತ್ ರಥಿ ಮತ್ತು ಅಂಕಲೇಶ್ ಇನ್ವಾಟೆ.

ಯೂಟ್ಯೂಬ್, ಇನ್‌ಸ್ಟಾಗ್ರಾಮ್‌ನಲ್ಲಿ ಸುಳ್ಳು ಸಂದರ್ಶನಗಳ ಗಿಮಿಕ್

ಪೊಲೀಸ್ ಮೂಲಗಳ ಪ್ರಕಾರ, ಈ ನಾಲ್ವರು ಇನ್​ಫ್ಲುಯೆನ್ಸರ್​ಗಳು ಕೇವಲ ವ್ಯೂಸ್ ಮತ್ತು ಫಾಲೋವರ್ಸ್‌ಗಳನ್ನು ಗಳಿಸುವ ಏಕೈಕ ಸ್ವಾರ್ಥ ಉದ್ದೇಶದಿಂದ ಯೂಟ್ಯೂಬ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ವಿವಾದಾತ್ಮಕ ವೀಡಿಯೊಗಳನ್ನು ಅಪ್‌ಲೋಡ್ ಮಾಡಿದ್ದರು.

ವಂಚನೆಯ ಆರೋಪ: ಸರ್ಕಾರದ ಎಥೆನಾಲ್ ನೀತಿಯ ನೆಪದಲ್ಲಿ ದೇಶದಲ್ಲಿ ದೊಡ್ಡ ಪ್ರಮಾಣದ ಹಗರಣ ಮತ್ತು ನಕಲಿ ವಹಿವಾಟುಗಳು ನಡೆಯುತ್ತಿವೆ ಎಂದು ಇವರು ವೀಡಿಯೊಗಳಲ್ಲಿ ಪ್ರತಿಪಾದಿಸಿದ್ದರು.

ನಕಲಿ ಸಂದರ್ಶನಗಳು: ತಮ್ಮ ಸುಳ್ಳು ವೀಡಿಯೊಗಳಿಗೆ ಸಾರ್ವಜನಿಕ ನಂಬಿಕೆ ಸಿಗಲಿ ಎಂಬ ಕಾರಣಕ್ಕೆ, ಇವರು ಸಾಮಾನ್ಯ ನಾಗರಿಕರೊಂದಿಗೆ ನಕಲಿ ಹಾಗೂ ದಾರಿತಪ್ಪಿಸುವ ಸಂದರ್ಶನಗಳನ್ನು ಚಿತ್ರೀಕರಿಸಿ ಪ್ರಸಾರ ಮಾಡಿದ್ದರು. ಈ ಮೂಲಕ ನಿತಿನ್ ಗಡ್ಕರಿ ಅವರ ರಾಜಕೀಯ ಮತ್ತು ಸಾಮಾಜಿಕ ಖ್ಯಾತಿಗೆ ಕಳಂಕ ತರಲು ಪ್ರಯತ್ನಿಸಿದ್ದರು.

ಭಾರತೀಯ ಜನತಾ ಪಕ್ಷದ (BJP) ನಾಗ್ಪುರ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥ ಶಿಶಿರ್ ತ್ರಿಪಾಠಿ ಅವರು ನೀಡಿದ ಔಪಚಾರಿಕ ದೂರಿನ ಆಧಾರದ ಮೇಲೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಮತ್ತಷ್ಟು ಓದಿ: ಇ20 ಪೆಟ್ರೋಲ್, ಭಯಪಡುವ ವಿಚಾರವಾ? ಜನರಿಗೆ ಇರುವ ಸಂದೇಹಗಳೇನು? ಸರ್ಕಾರ ಹೇಳುವುದೇನು? ಇಲ್ಲಿದೆ ಡೀಟೇಲ್ಸ್

ತನಿಖೆಯಲ್ಲಿ ಬಯಲಾಯ್ತು ಸತ್ಯ

ದೂರು ದಾಖಲಾದ ತಕ್ಷಣ ನಾಗ್ಪುರ ಸೈಬರ್ ಸೆಲ್ ಅಧಿಕಾರಿಗಳು ಈ ವೀಡಿಯೊಗಳ ಸತ್ಯಾಸತ್ಯತೆಯ ಬಗ್ಗೆ ತೀವ್ರ ತನಿಖೆ ನಡೆಸಿದರು. ತನಿಖೆಯಲ್ಲಿ ಇನ್​ಫ್ಲುಯೆನ್ಸರ್​ಗಳು ಪ್ರಸಾರ ಮಾಡಿದ ಮಾಹಿತಿಯು ಸಂಪೂರ್ಣವಾಗಿ ಆಧಾರರಹಿತ ಮತ್ತು ಕಲ್ಪಿತ ಎಂಬುದು ಸಾಬೀತಾಗಿದೆ. ಈ ವೀಡಿಯೊಗಳು ಕೇವಲ ಸಂವೇದನೆ ಸೃಷ್ಟಿಸಲು ಮಾಡಿದ ಷಡ್ಯಂತ್ರವಾಗಿದ್ದು, ವೀಡಿಯೊದಲ್ಲಿ ತೋರಿಸಲಾದ ಯಾವುದೇ ಘಟನೆಗಳಿಗೂ ಸಚಿವ ನಿತಿನ್ ಗಡ್ಕರಿ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಸೈಬರ್ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಏನಿದು E20 ಇಂಧನ? ಸಚಿವರ ಕನಸಿನ ಯೋಜನೆ ಇದು

ಪರಿಸರ ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ವಿದೇಶಗಳಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ವೆಚ್ಚವನ್ನು ಉಳಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕ್ರಾಂತಿಕಾರಿ ನೀತಿ ಇದು. E20 ಎಂದರೆ ಶೇಕಡಾ 80 ರಷ್ಟು ಪೆಟ್ರೋಲ್ ಮತ್ತು ಶೇಕಡಾ 20 ರಷ್ಟು ಎಥೆನಾಲ್ ಮಿಶ್ರಿತ ಇಂಧನವಾಗಿದೆ. ಈ ಎಥೆನಾಲ್ ಅನ್ನು ಕಬ್ಬು, ಹಾಳಾದ ಧಾನ್ಯಗಳು ಮತ್ತು ಕೃಷಿ ತ್ಯಾಜ್ಯದಿಂದ ಭಾರತದಲ್ಲೇ ಸ್ವದೇಶಿಯಾಗಿ ಉತ್ಪಾದಿಸಲಾಗುತ್ತದೆ.

ರೈತರಿಗೆ ಆರ್ಥಿಕ ಬಲ: ನಿತಿನ್ ಗಡ್ಕರಿ ಅವರು ಮೊದಲಿನಿಂದಲೂ ಎಥೆನಾಲ್ ಬಳಕೆಯನ್ನು ಪ್ರಬಲವಾಗಿ ಬೆಂಬಲಿಸುತ್ತಾ ಬಂದಿದ್ದಾರೆ. ಇದರಿಂದಾಗಿ ದೇಶದ ಕೋಟ್ಯಂತರ ಕಬ್ಬು ಬೆಳೆಯುವ ರೈತರಿಗೆ ನೇರ ಆರ್ಥಿಕ ಲಾಭ ಸಿಗುತ್ತಿದೆ. ಆದರೆ, ಈ ಇಂಧನ ಬಳಕೆಯಿಂದ ವಾಹನಗಳ ಇಂಜಿನ್ ಹಾಳಾಗುತ್ತದೆ ಎಂಬಂತಹ ಸುಳ್ಳು ವದಂತಿಗಳನ್ನು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹರಡಲಾಗುತ್ತಿತ್ತು. ಸದ್ಯ ಪೊಲೀಸರು ಈ ನಾಲ್ಕು ಇನ್ಫ್ಲುಯೆನ್ಸರ್ಸ್‌ಗಳ ಡಿಜಿಟಲ್ ಖಾತೆಗಳ ತಾಂತ್ರಿಕ ತನಿಖೆ ನಡೆಸುತ್ತಿದ್ದು, ಇದರ ಹಿಂದೆ ಯಾವುದಾದರೂ ರಾಜಕೀಯ ಪಿತೂರಿ ಇದೆಯೇ ಎಂಬ ಕೋನದಲ್ಲೂ ಜಾಲಾಡುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕಾಫಿನಾಡಿನಲ್ಲಿ ಬಯಲಾಯ್ತು ಬೃಹತ್‌ ಬ್ಯಾಂಕ್‌ ಹಗರಣ: ಬಡವರ ಖಾತೆ ಬಳಸಿ ಕ್ರಿಕೆಟ್ ಬೆಟ್ಟಿಂಗ್ ಆ್ಯಪ್‌ ಮೂಲಕ ಕೋಟ್ಯಂತರ ರೂ. ಅಕ್ರಮ ವಹಿವಾಟು! – Kannada News | Chikkamagaluru Cyber Fraud: Mega Bank Scam Unearths Illicit Cricket Betting Transactions via Fake Accounts

ಕಾಫಿನಾಡಿನಲ್ಲಿ ಬಯಲಾಯ್ತು ಬೃಹತ್‌ ಬ್ಯಾಂಕ್‌ ಹಗರಣ

ಚಿಕ್ಕಮಗಳೂರು, ಜುಲೈ 15: ಸಾಲ ಕೊಡಿಸುವ ಆಮಿಷವೊಡ್ಡಿ ಬಡವರು ಮತ್ತು ಕೂಲಿ ಕಾರ್ಮಿಕರ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು, ಕೋಟ್ಯಂತರ ರೂಪಾಯಿ ಅಕ್ರಮ ಹಣ ವರ್ಗಾವಣೆ ಮಾಡಿರುವ ಆಘಾತಕಾರಿ ಹಗರಣ ಚಿಕ್ಕಮಗಳೂರು ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಕಾಫಿನಾಡಿನ ಇತಿಹಾಸದಲ್ಲೇ ಇಂತಹ ಬೃಹತ್ ಸೈಬರ್ ವಂಚನೆ ಪ್ರಕರಣ ಇದೇ ಮೊದಲ ಬಾರಿಗೆ ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.

ಬಡವರ ಆಧಾರ್ ಕಾರ್ಡ್‌ ದುರ್ಬಳಕೆ

ಕಿಡಿಗೇಡಿಗಳು ದಿನಗೂಲಿ ಮಾಡುವ ಸಾಮಾನ್ಯ ಜನರಿಗೆ ಅಲ್ಪಸ್ವಲ್ಪ ಹಣದ ಆಸೆ ತೋರಿಸಿ, ಲೋನ್ ಕೊಡಿಸುವುದಾಗಿ ನಂಬಿಸಿ ಅವರ ಆಧಾರ್ ಮತ್ತು ಪ್ರಮುಖ ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ಸುಮಾರು 5 ರಿಂದ 6 ಪ್ರಮುಖ ಖಾಸಗಿ ಬ್ಯಾಂಕ್‌ಗಳ ಸಿಬ್ಬಂದಿಯ ಸಹಕಾರದೊಂದಿಗೆ 2022-23ರ ಅವಧಿಯಲ್ಲಿ ನೂರಾರು ನಕಲಿ ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಲಾಗಿದೆ. ಈ ಖಾತೆಗಳನ್ನು ಆನ್‌ಲೈನ್ ಕ್ರಿಕೆಟ್ ಬೆಟ್ಟಿಂಗ್ ಆ್ಯಪ್‌ಗಳ ಅಕ್ರಮ ಹಣ ವರ್ಗಾವಣೆಗೆ ಬಳಸಿಕೊಳ್ಳಲಾಗಿದೆ ಎಂಬ ಬಲವಾದ ಅನುಮಾನ ವ್ಯಕ್ತವಾಗಿದೆ. ಕಮಿಷನ್ ಆಸೆಗೆ ಬಿದ್ದ ಕೆಲ ಸ್ಥಳೀಯ ಯುವಕರು ತಲಾ 50ಕ್ಕೂ ಹೆಚ್ಚು ಖಾತೆಗಳನ್ನು ಮಾಡಿಸಿಕೊಟ್ಟಿದ್ದು, ಒಂದೊಂದು ಖಾತೆಯಲ್ಲೂ ಬರೋಬ್ಬರಿ 20 ರಿಂದ 30 ಲಕ್ಷ ರೂಪಾಯಿವರೆಗೆ ಅನುಮಾನಾಸ್ಪದ ವಹಿವಾಟು ನಡೆದಿರುವುದು ಖಾತೆದಾರರನ್ನು ಕಂಗಾಲಾಗಿಸಿದೆ.

ರಾಜಕೀಯ ತಿರುವು ಪಡೆದ ಪ್ರಕರಣ

ಈ ಹಗರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆ ರಾಜಕೀಯ ತಿರುವು ಪಡೆದುಕೊಂಡಿದೆ. ಪೊಲೀಸರ ವಶದಲ್ಲಿರುವ ಆರೋಪಿಗಳು ಈ ಜಾಲದ ಹಿಂದೆ ಶಂಕರಪುರ ವಾರ್ಡ್‌ನ ನಗರಸಭೆ ಜೆಡಿಎಸ್ ಸದಸ್ಯ ಗೋಪಿ ಶಾಮೀಲಾಗಿದ್ದಾರೆ ಎಂದು ಬಾಯ್ಬಿಟ್ಟಿದ್ದಾರೆ. ಗೋಪಿ ಅವರೇ 50ಕ್ಕೂ ಹೆಚ್ಚು ಖಾತೆಗಳನ್ನು ಮಾಡಿಸಿಕೊಟ್ಟಿದ್ದರು ಎಂಬ ಸ್ಫೋಟಕ ಮಾಹಿತಿ ಪೊಲೀಸ್ ಮೂಲಗಳಿಂದ ಲಭ್ಯವಾಗಿದೆ.

ಸಿಬಿಐ, ಇಡಿ ತನಿಖೆಗೆ ಸಿ.ಟಿ.ರವಿ ಆಗ್ರಹ

ಈ ಹಗರಣದ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಎಂಎಲ್ಸಿ ಸಿ.ಟಿ. ರವಿ, ಇದರ ಹಿಂದೆ ಅಂತರರಾಜ್ಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಜಾಲ ಅಡಗಿದೆ. ದುಬೈನಿಂದಲೇ ಈ ಜಾಲವನ್ನು ನಿಯಂತ್ರಿಸಲಾಗುತ್ತಿದೆ. ಆದ್ದರಿಂದ ಪ್ರಕರಣದ ಆಳ-ಅಗಲವನ್ನು ಪರಿಗಣಿಸಿ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ (ED) ಮೂಲಕ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ಒಟ್ಟು ಏಳು ಜನರ ವಿರುದ್ಧ ಈಗಾಗಲೇ ಚಿಕ್ಕಮಗಳೂರಿನ ಸೈಬರ್, ಆರ್ಥಿಕ ಮತ್ತು ನಾರ್ಕೋಟಿಕ್ಸ್ ಅಪರಾಧ (CEN) ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಜಾಲದಲ್ಲಿ ಭಾಗಿಯಾಗಿರುವ ಪ್ರಭಾವಿಗಳು ಹಾಗೂ ಬ್ಯಾಂಕ್ ಸಿಬ್ಬಂದಿಗಳ ಪೂರ್ಣ ಪಾತ್ರದ ಬಗ್ಗೆ ತನಿಖೆ ಮುಂದುವರಿದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಲೂಗಡ್ಡೆ ಚಿಪ್ಸ್ ಪ್ರಿಯರೇ ಹುಷಾರ್: ಕೊಳೆತ ಆಲೂಗಡ್ಡೆ, ಗಲೀಜು ನೀರಿಂದ ಚಿಪ್ಸ್ ತಯಾರಿ – Kannada News | Unsafe Chips Alert! Devanahalli Bakery Sealed for Using Rotten Potatoes & Filthy Water

ದೇವನಹಳ್ಳಿ, ಜು.15: ನೀವು ಬೇಕರಿಗಳಲ್ಲಿ ಬಾಯಿ ಚಪ್ಪರಿಸಿ ತಿನ್ನುವ ಆಲೂಗಡ್ಡೆ ಚಿಪ್ಸ್ ಎಷ್ಟು ಸುರಕ್ಷಿತ ಗೊತ್ತಾ? ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ಒಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ರಸ್ತೆ ಬದಿಯ ಬೇಕರಿಯೊಂದರಲ್ಲಿ ಸಾರ್ವಜನಿಕರ ಕಣ್ಣೆದುರೇ ಕೊಳೆತ ಆಲೂಗಡ್ಡೆ ಹಾಗೂ ಗಲೀಜು ನೀರನ್ನು ಬಳಸಿ ಚಿಪ್ಸ್ ತಯಾರಿಸುತ್ತಿದ್ದ ಕೃತ್ಯ ಬಯಲಾಗಿದ್ದು, ಅಧಿಕಾರಿಗಳು ತಕ್ಷಣವೇ ಬೇಕರಿಯನ್ನು ಸೀಜ್ ಮಾಡಿದ್ದಾರೆ.

ವಿಜಯಪುರ ಪಟ್ಟಣದ ‘ಶ್ರೀಸಾಯಿರಾಮ್ ಹಾಟ್ ಚಿಪ್ಸ್’ ಬೇಕರಿಯಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ನಿವಾಸಿಯಾದ ವೆಂಕಟೇಶ್ ಎಂಬ ವ್ಯಕ್ತಿ ತಮ್ಮ ಮಕ್ಕಳಿಗೆ ಇಷ್ಟ ಎಂದು ಈ ಬೇಕರಿಯಲ್ಲಿ ಆಲೂಗಡ್ಡೆ ಚಿಪ್ಸ್ ಖರೀದಿಸಿದ್ದರು. ಆದರೆ, ರಾತ್ರಿ ಈ ಚಿಪ್ಸ್ ತಿಂದಿದ್ದ ಮನೆಯ ಮಕ್ಕಳಿಗೆ ಬೆಳಗಾಗುವಷ್ಟರಲ್ಲಿ ತೀವ್ರವಾದ ಕೆಮ್ಮು ಕಾಣಿಸಿಕೊಂಡಿದೆ.

ಮಕ್ಕಳಿಗೆ ದಿಢೀರನೆ ಕೆಮ್ಮು ಬರಲು ಕಾರಣವೇನು ಎಂದು ವೆಂಕಟೇಶ್ ಅವರು ಚಿಪ್ಸ್ ಅನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಅದರಲ್ಲಿ ಕಪ್ಪು ಚುಕ್ಕೆಗಳು ಇರುವುದು ಪತ್ತೆಯಾಗಿದೆ. ಇದರಿಂದ ಅನುಮಾನಗೊಂಡು ಬೇಕರಿಗೆ ಬಂದು ಪರಿಶೀಲಿಸಿದಾಗ ಚಿಪ್ಸ್ ತಯಾರಿಯ ಅಸಲಿ ಕರಾಳ ಮುಖ ಕಣ್ಣಿಗೆ ಬಿದ್ದಿದೆ.

ಇದನ್ನೂ ಓದಿ: ಜಿಬಿಎ ಸ್ಟಿಕ್ಕರ್ ಭೀತಿಗೆ ಗಲ್ಲಿ ಸೇರಿದ ಕಾರುಗಳು: ಕುಮಾರಸ್ವಾಮಿ ಲೇಔಟ್‌ನಲ್ಲಿ ಅಕ್ರಮ ಪಾರ್ಕಿಂಗ್ ಹಾವಳಿ

ಗಲೀಜು ನೀರಿನಲ್ಲಿ ತಯಾರಿ; ಅಧಿಕಾರಿಗಳಿಂದ ಬೇಕರಿ ಸೀಜ್:

ಬೇಕರಿಯ ಒಳಗಡೆ ಅತ್ಯಂತ ಅಸಹ್ಯಕರ ವಾತಾವರಣದಲ್ಲಿ, ಕೊಳೆತು ನಾರುತ್ತಿದ್ದ ಆಲೂಗಡ್ಡೆ ಹಾಗೂ ಗಲೀಜು ನೀರನ್ನು ಬಳಸಿಕೊಂಡು ಚಿಪ್ಸ್ ತಯಾರಿಸುತ್ತಿರುವುದು ಕಂಡುಬಂದಿದೆ. ಇದನ್ನು ನೋಡಿ ತೀವ್ರ ಆಕ್ರೋಶಗೊಂಡ ಸಾರ್ವಜನಿಕರು ತಕ್ಷಣವೇ ಚಿಪ್ಸ್ ಅಂಗಡಿಯ ಮಾಲೀಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದ ಬೇಕರಿ ವಿರುದ್ಧ ಸ್ಥಳೀಯರು ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಸಾರ್ವಜನಿಕರ ಸಮ್ಮುಖದಲ್ಲೇ ಕೊಳೆತ ಆಲೂಗಡ್ಡೆಯಿಂದ ತಯಾರಾಗಿದ್ದ ಚಿಪ್ಸ್‌ನ ಸ್ಯಾಂಪಲ್‌ಗಳನ್ನು ಹೆಚ್ಚಿನ ತಪಾಸಣೆಗಾಗಿ ಲ್ಯಾಬ್‌ಗೆ ರವಾನಿಸಿದ್ದಾರೆ. ಜೊತೆಗೆ, ಅಂಗಡಿಯ ಮಾಲೀಕನಿಗೆ ಕಟ್ಟುನಿಟ್ಟಿನ ನೋಟಿಸ್ ಜಾರಿ ಮಾಡಿ, ಬೇಕರಿಯನ್ನು ಸಂಪೂರ್ಣವಾಗಿ ಸೀಜ್ ಮಾಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜಿಬಿಎ ಸ್ಟಿಕ್ಕರ್ ಭೀತಿಗೆ ಗಲ್ಲಿ ಸೇರಿದ ಕಾರುಗಳು: ಕುಮಾರಸ್ವಾಮಿ ಲೇಔಟ್‌ನಲ್ಲಿ ಅಕ್ರಮ ಪಾರ್ಕಿಂಗ್ ಹಾವಳಿ – Kannada News | Residential Parking Crisis: Bangalore GBA Drive Pushes Abandoned Vehicles to Lanes

ಬೆಂಗಳೂರು, ಜು.15: ಸಿಲಿಕಾನ್ ಸಿಟಿಯಲ್ಲಿ ಅನಾಥ ವಾಹನಗಳು ಹಾಗೂ ದೀರ್ಘಕಾಲದಿಂದ ರಸ್ತೆ ಬದಿಯಲ್ಲಿ ನಿಲ್ಲಿಸಿರುವ ವಾಹನಗಳ ವಿರುದ್ಧ ಜಿಬಿಎ ಸಮರ ಸಾರಿದೆ. ಪ್ರಮುಖ ರಸ್ತೆಗಳಲ್ಲಿ ಇಂತಹ ವಾಹನಗಳಿಗೆ ಸ್ಟಿಕ್ಕರ್ ಅಂಟಿಸಿ, ಟೋಯಿಂಗ್ ಮಾಡುವ ಮೂಲಕ ತೆರವು ಕಾರ್ಯಾಚರಣೆಯ ಕಠಿಣ ಎಚ್ಚರಿಕೆ ನೀಡುತ್ತಿದೆ. ಆದರೆ, ಜಿಬಿಎ ಕೈಗೊಂಡಿರುವ ಈ ಕ್ರಮದ ಬೆನ್ನಲ್ಲೇ ನಗರದಲ್ಲಿ ಹೊಸದೊಂದು ತಲೆನೋವು ಶುರುವಾಗಿದೆ. ಮುಖ್ಯ ರಸ್ತೆಗಳಲ್ಲಿ ಜಿಬಿಎ ಕಣ್ಣು ತಪ್ಪಿಸಲು ವಾಹನ ಮಾಲೀಕರು ಈಗ ವಸತಿ ಪ್ರದೇಶಗಳ ಗಲ್ಲಿ-ಗಲ್ಲಿಗಳನ್ನೇ ತಮ್ಮ ಹೊಸ ಪಾರ್ಕಿಂಗ್ ತಾಣಗಳನ್ನಾಗಿ ಮಾಡಿಕೊಳ್ಳುತ್ತಿದ್ದಾರೆ.

ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಮೊದಲ ಹಂತದಲ್ಲಿರುವ ಲವಕುಶ ಪಾರ್ಕ್ ಪಕ್ಕದ ರಸ್ತೆ ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಇಲ್ಲಿನ ರಸ್ತೆಯ ಎರಡೂ ಬದಿಗಳಲ್ಲೂ ಸಾಲು ಸಾಲು ಕಾರುಗಳು ನಿಂತಿದ್ದು, ಇಡೀ ರಸ್ತೆಯೇ ಪಾರ್ಕಿಂಗ್ ಲಾಟ್‌ನಂತೆ ಮಾರ್ಪಟ್ಟಿದೆ. ಆಶ್ಚರ್ಯದ ಸಂಗತಿ ಎಂದರೆ, ಈ ವಾಹನಗಳಲ್ಲಿ ಬಹುತೇಕವು ಸ್ಥಳೀಯ ನಿವಾಸಿಗಳದ್ದಲ್ಲ, ಬೇರೆ ಪ್ರದೇಶದ ವಾಹನ ಮಾಲೀಕರು ಜಿಬಿಎಗೆ ಹೆದರಿ ತಮ್ಮ ಕಾರುಗಳನ್ನು ಇಲ್ಲಿ ದಿನಗಟ್ಟಲೆ, ವಾರಗಟ್ಟಲೆ ನಿಲ್ಲಿಸಿ ಹೋಗುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಗಲ್ಲಿಗಳ ರಸ್ತೆಯಲ್ಲಿ ಅನಿಯಂತ್ರಿತವಾಗಿ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಸಾರ್ವಜನಿಕರಿಗೆ ಓಡಾಡುವುದೇ ಕಷ್ಟಕರವಾಗಿದೆ. ಕಿರಿದಾದ ಗಲ್ಲಿಗಳಲ್ಲಿ ಎರಡು ವಾಹನಗಳು ಎದುರು ಬಂದರೆ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುತ್ತಿದೆ. ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್ ಹಾಗೂ ಅಗ್ನಿಶಾಮಕ ವಾಹನಗಳು ಕೂಡ ಸಾಗಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ರಸ್ತೆ ಸ್ವಚ್ಛಗೊಳಿಸಲು ಬರುವ ಜಿಬಿಎ ಸಿಬ್ಬಂದಿಗೂ ಈ ಸಾಲು ಸಾಲು ವಾಹನಗಳ ಕಾರಣದಿಂದ ಸ್ವಚ್ಛತಾ ಕಾರ್ಯ ನಡೆಸಲು ಸಾಧ್ಯವಾಗುತ್ತಿಲ್ಲ. ವಾಹನಗಳ ಕೆಳಗೆ ಹಾಗೂ ಮಧ್ಯೆ ಕಸದ ರಾಶಿ ಬೀಳುತ್ತಿದ್ದು, ಇಡೀ ಪ್ರದೇಶ ದುರ್ವಾಸನೆಯಿಂದ ನರಳುತ್ತಿದೆ. ಈ ಅಕ್ರಮ ಪಾರ್ಕಿಂಗ್ ಸಮಸ್ಯೆ ಕೇವಲ ಸಂಚಾರ ಮತ್ತು ಸ್ವಚ್ಛತೆಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಸ್ಥಳೀಯರ ಭದ್ರತೆಗೂ ಕಂಟಕ ತಂದಿದೆ. ರಾತ್ರಿ ವೇಳೆ ಕತ್ತಲಾಗುತ್ತಿದ್ದಂತೆ ಕೆಲವರು ಈ ವಾಹನಗಳ ಮರೆಯಲ್ಲಿ ನಿಂತು ಮದ್ಯಪಾನ ಮಾಡುತ್ತಿದ್ದು, ಖಾಲಿ ಬಾಟಲಿಗಳನ್ನು ಅಲ್ಲಿಯೇ ಬಿಸಾಡಿ ಹೋಗುತ್ತಿದ್ದಾರೆ. ಇದರಿಂದಾಗಿ ಮಹಿಳೆಯರು ಹಾಗೂ ಮಕ್ಕಳು ರಾತ್ರಿ ವೇಳೆ ಈ ರಸ್ತೆಗಳಲ್ಲಿ ಓಡಾಡಲು ಭಯಪಡುವಂತಾಗಿದೆ.

ಇದನ್ನೂ ಓದಿ: ಫುಟ್​ಪಾತ್ ಒತ್ತುವರಿ, ಅನಾಥ ವಾಹನಗಳ ತೆರವು ಬೆನ್ನಲ್ಲೇ ಮತ್ತೊಂದು ಅಭಿಯಾನಕ್ಕೆ ಬೆಂಗಳೂರು ಸಿದ್ಧ! ಆಗಸ್ಟ್​ 1ರಿಂದ ಕ್ಲೀನಿಂಗ್

ಈ ಗಂಭೀರ ಸಮಸ್ಯೆಯ ಕುರಿತು ಸ್ಥಳೀಯ ನಿವಾಸಿಗಳು ಹಲವು ಬಾರಿ ಜಿಬಿಎ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎನ್ನುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮುಖ್ಯ ರಸ್ತೆಗಳಲ್ಲಿ ಮಾತ್ರ ಕಾರ್ಯಾಚರಣೆ ನಡೆಸಿದರೆ ಸಾಲದು, ವಸತಿ ಪ್ರದೇಶಗಳ ಗಲ್ಲಿಗಳಲ್ಲಿ ಶಾಶ್ವತವಾಗಿ ನಿಲ್ಲಿಸಿರುವ ಇಂತಹ ವಾಹನಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳು ಕಡಕ್ಕಾಗಿ ಒತ್ತಾಯಿಸಿದ್ದಾರೆ. ಮುಖ್ಯ ರಸ್ತೆಯಿಂದ ಗಲ್ಲಿಗೆ ಶಿಫ್ಟ್ ಆದ ಈ ಹೊಸ ಪಾರ್ಕಿಂಗ್ ಟ್ರೆಂಡ್‌ಗೆ ಜಿಬಿಎ ಬ್ರೇಕ್ ಹಾಕುತ್ತಾ? ಅಥವಾ ಲೇಔಟ್‌ಗಳು ಹೀಗೆಯೇ ಅಕ್ರಮ ಪಾರ್ಕಿಂಗ್ ಅಡ್ಡೆಗಳಾಗಿ ಉಳಿಯುತ್ತವಾ? ಎಂಬುದನ್ನು ಅಧಿಕಾರಿಗಳೇ ಉತ್ತರಿಸಬೇಕಿದೆ.

ವರದಿ: ನಟರಾಜ್ ಬೆಂಗಳೂರು

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

12 ವರ್ಷಗಳ ಅಜೇಯ ನಾಗಾಲೋಟಕ್ಕೆ ಟೀಮ್ ಇಂಡಿಯಾ ಬ್ರೇಕ್! – Kannada News | India Shatters England’s 12 Year Edgbaston Streak

ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಮ್ಯಾಚ್​ನಲ್ಲೇ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಬರ್ಮಿಂಗ್​ಹ್ಯಾಮ್​ನ ಎಡ್ಜ್​ಬಾಸ್ಟನ್ ಸ್ಡೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 258 ರನ್ ಕಲೆಹಾಕಿತು. ಈ ಗುರಿಯನ್ನು ಟೀಮ್ ಇಂಡಿಯಾ 45.2 ಓವರ್​ಗಳಲ್ಲಿ ಚೇಸ್ ಮಾಡಿ 6 ವಿಕೆಟ್​ಗಳ ಗೆಲುವು ದಾಖಲಿಸಿದೆ.

  • ಇಂಗ್ಲೆಂಡ್: 258/10 (47.5 ಓವರ್‌ಗಳು) – ಜೋ ರೂಟ್ 76*, ಲಿಯಾಮ್ ಡಾಸನ್ 68; ಅಕ್ಷರ್ ಪಟೇಲ್ 4/62.
  •  ಭಾರತ: 262/4 (45.2 ಓವರ್‌ಗಳು) – ಶುಬ್ಮನ್ ಗಿಲ್ 80, ಅಕ್ಷರ್ ಪಟೇಲ್ 57*, ವಾಷಿಂಗ್ಟನ್ ಸುಂದರ್ 52*.

ಅಜೇಯ ನಾಗಾಲೋಟಕ್ಕೆ ಬ್ರೇಕ್!

ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಇಂಗ್ಲೆಂಡ್ ತಂಡ ಕೊನೆಯ ಬಾರಿಗೆ ಏಕದಿನ ಪಂದ್ಯದಲ್ಲಿ ಸೋತಿದ್ದು 2014 ರ ಸೆಪ್ಟೆಂಬರ್ 2 ರಂದು. ಅಂದು ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ ತಂಡವೇ ಇಂಗ್ಲೆಂಡ್ ತಂಡವನ್ನು ಮಣಿಸಿತ್ತು. ಆ ಬಳಿಕ ಕಳೆದ 12 ವರ್ಷಗಳಲ್ಲಿ ಇಲ್ಲಿ ನಡೆದ ಸತತ 7 ಏಕದಿನ ಪಂದ್ಯಗಳಲ್ಲಿ ಇಂಗ್ಲೆಂಡ್ ಸೋಲಿಲ್ಲದ ಸರದಾರರಾಗಿ ಮುಂದುವರೆದಿದ್ದರು.

ಆದರೆ, ಇಂಗ್ಲೆಂಡ್‌ನ ಈ ಸುದೀರ್ಘ ವಿಜಯಯಾತ್ರೆಗೆ ಮತ್ತೆ ಬ್ರೇಕ್ ಹಾಕಲು ಮತ್ತೆ ಟೀಮ್ ಇಂಡಿಯಾವೇ ಬರಬೇಕಾಯಿತು. ಎಡ್ಜ್​ಬಾಸ್ಟನ್​ನಲ್ಲಿ ಇಂಗ್ಲೆಂಡ್ ತಂಡಕ್ಕೆ ಸೋಲುಣಿಸುವ ಮೂಲಕ ಭಾರತ ಆಂಗ್ಲರ 12 ವರ್ಷಗಳ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದೆ.

ಸತತ 6ನೇ ಗೆಲುವು:

ಈ ಐತಿಹಾಸಿಕ ಜಯದೊಂದಿಗೆ ಇಂಗ್ಲೆಂಡ್ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಭಾರತ ತಂಡವು ಸತತ 6ನೇ ಗೆಲುವು ದಾಖಲಿಸಿದಂತಾಗಿದೆ.

  • 1ನೇ ಗೆಲುವು (ಜುಲೈ 12, 2022 – ಓವಲ್): ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತಕ್ಕೆ 10 ವಿಕೆಟ್‌ಗಳ ಭರ್ಜರಿ ಜಯ.
  • 2ನೇ ಗೆಲುವು (ಜುಲೈ 17, 2022 – ಮ್ಯಾಂಚೆಸ್ಟರ್): ರಿಷಭ್ ಪಂತ್ ಶತಕದ ನೆರವಿನಿಂದ ಭಾರತಕ್ಕೆ 5 ವಿಕೆಟ್‌ಗಳ ಜಯ.
  • 3ನೇ ಗೆಲುವು (ಅಕ್ಟೋಬರ್ 29, 2023 – ಲಕ್ನೋ): ಏಕದಿನ ವಿಶ್ವಕಪ್ ಪಂದ್ಯದಲ್ಲಿ ಭಾರತಕ್ಕೆ 100 ರನ್‌ಗಳ ಬೃಹತ್ ಜಯ.
  • 4ನೇ ಗೆಲುವು (ಫೆಬ್ರವರಿ 2025 – ಇಂದೋರ್): ಚಾಂಪಿಯನ್ಸ್ ಟ್ರೋಫಿ ಸಿದ್ಧತಾ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಜಯ.
  • 5ನೇ ಗೆಲುವು (ಮಾರ್ಚ್ 2, 2025 – ರಾವಲ್ಪಿಂಡಿ): ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಗ್ರೂಪ್ ಹಂತದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಗೆಲುವು.
  • 6ನೇ ಗೆಲುವು (ಜುಲೈ 14, 2026 – ಎಡ್ಜ್‌ಬಾಸ್ಟನ್): ಪ್ರಸ್ತುತ ಸರಣಿಯ ಮೊದಲ ಪಂದ್ಯದಲ್ಲಿ ಶುಭ್​ಮನ್  ಗಿಲ್ ನಾಯಕತ್ವದಲ್ಲಿ ಭಾರತ ತಂಡ 6 ವಿಕೆಟ್‌ಗಳ ಐತಿಹಾಸಿಕ ಜಯ ಸಾಧಿಸಿದೆ.

ಭಾರತ ಪ್ಲೇಯಿಂಗ್ 11: ಶುಭ್​ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಜಸ್​ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್.

ಇದನ್ನೂ ಓದಿ: ಸಚಿನ್ ದಾಖಲೆ ಧೂಳೀಪಟ: ಕಿಂಗ್ ಕೊಹ್ಲಿ ಹೆಸರಿಗೆ ವಿಶ್ವ ದಾಖಲೆ

ಇಂಗ್ಲೆಂಡ್‌ ಪ್ಲೇಯಿಂಗ್ 11: ಜೇಕಬ್ ಬೆಥೆಲ್, ಬೆನ್ ಡಕೆಟ್, ಜೋ ರೂಟ್, ಹ್ಯಾರಿ ಬ್ರೂಕ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಸ್ಯಾಮ್ ಕರನ್, ವಿಲ್ ಜ್ಯಾಕ್ಸ್, ಜೋಫ್ರಾ ಆರ್ಚರ್, ಲಿಯಾಮ್ ಡಾಸನ್, ಜೋಶ್ ಟಂಗ್, ಆದಿಲ್ ರಶೀದ್.

Source link

ಸಿಸಿಬಿ ಪೊಲೀಸರ ಸೋಗಿನಲ್ಲಿ ಜಿಮ್ ಟ್ರೈನರ್ ಅಪಹರಣ: 5 ಲಕ್ಷಕ್ಕೆ ಬೇಡಿಕೆ, ರೌಡಿಶೀಟರ್ ಸೇರಿ ಐವರ ಬಂಧನ – Kannada News | Fake CCB Police Kidnap Gym Trainer in Bengaluru, Demand Rs 5 Lakh; Rowdy Sheeter Among Five Arrested

ರೌಡಿಶೀಟರ್ ಸೇರಿ ಐವರ ಬಂಧನImage Credit source: tv9

ಬೆಂಗಳೂರು, ಜುಲೈ 15: ಬೆಂಗಳೂರು (Bengaluru) ನಗರದಲ್ಲಿ ಸಿಸಿಬಿ ಪೊಲೀಸರ (CCB Police) ಸೋಗಿನಲ್ಲಿ ಜಿಮ್ ಟ್ರೈನರ್‌ನನ್ನು ಅಪಹರಿಸಿ ಹಣ ವಸೂಲಿ ಮಾಡಲು ಯತ್ನಿಸಿದ್ದ ಗ್ಯಾಂಗ್‌ವೊಂದನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ರೌಡಿಶೀಟರ್ ತ್ರಿವೇಣ್ ಕುಮಾರ್ ಅಲಿಯಾಸ್ ತಿರುಮಲ ಸೇರಿದಂತೆ ಐವರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಜಿಮ್ ಟ್ರೈನರ್ ಮಿಥುಲ್ ಆಟೋದಲ್ಲಿ ತೆರಳುತ್ತಿದ್ದ ವೇಳೆ, ‘ನಾವು ಸಿಸಿಬಿ ಪೊಲೀಸರು’ ಎಂದು ಪರಿಚಯಿಸಿಕೊಂಡ ಆರೋಪಿಗಳು ಅವರನ್ನು ಬಲವಂತವಾಗಿ ಕಾರಿಗೆ ಎಳೆದುಕೊಂಡು ಹೋಗಿದ್ದರು. ಬಳಿಕ, ‘500 ಕೆಜಿ ಗಾಂಜಾ ತರಿಸಿದ್ದೀಯಾ’ ಎಂದು ಬೆದರಿಸಿ, ಅವರ ಮೊಬೈಲ್ ಹಾಗೂ ಬ್ಯಾಗ್ ಕಸಿದುಕೊಂಡಿದ್ದರು.

ಪೊಲೀಸ್ ಠಾಣೆಯೊಳಕ್ಕೇ ಹೋಗಿ ಬಂದಿದ್ದ ಆರೋಪಿಗಳು!

ಇದಾದ ಬಳಿಕ, ಎಲ್‌ಎಸ್‌ಡಿ ಸ್ಟ್ರಿಪ್ಸ್ ಇಟ್ಟು ಫೋಟೋ ತೆಗೆದು, ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ನಾಟಕೀಯವಾಗಿ ಜೆ.ಪಿ.ನಗರ ಪೊಲೀಸ್ ಠಾಣೆ ಬಳಿ ಕಾರು ನಿಲ್ಲಿಸಿ, ಇಬ್ಬರು ಆರೋಪಿಗಳು ಠಾಣೆಯೊಳಗೆ ಹೋಗಿ ಬಂದು, ‘ಸಾಹೇಬರು ಬ್ಯುಸಿಯಾಗಿದ್ದಾರೆ’ ಎಂದು ಹೇಳುವ ಮೂಲಕ ತಮ್ಮನ್ನು ನಿಜವಾದ ಪೊಲೀಸ್ ಅಧಿಕಾರಿಗಳೆಂದು ನಂಬಿಸುವ ಪ್ರಯತ್ನ ಮಾಡಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.

ಸಂತ್ರಸ್ತನನ್ನು 4 ಗಂಟೆ ಕಾರಿನಲ್ಲಿ ಬೆಂಗಳೂರಿನ ವಿವಿಧೆಡೆ ಸುತ್ತಾಡಿಸಿದ್ದ ಆರೋಪಿಗಳು

ಆರೋಪಿಗಳು ಸುಮಾರು ನಾಲ್ಕು ಗಂಟೆಗಳ ಕಾಲ ಮಿಥುಲ್ ಅವರನ್ನು ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಕಾರಿನಲ್ಲಿ ಸುತ್ತಾಡಿಸಿ, 5 ಲಕ್ಷ ರೂಪಾಯಿ ನೀಡದಿದ್ದರೆ ಡ್ರಗ್ಸ್ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಈ ಸಂಬಂಧ ಜೂನ್ 22ರಂದು ಶಂಕರಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಸಿಸಿಬಿಗೆ ವರ್ಗಾಯಿಸಲಾಗಿತ್ತು. ಸಿಸಿಟಿವಿ ದೃಶ್ಯಾವಳಿ ಹಾಗೂ ತಾಂತ್ರಿಕ ಸಾಕ್ಷ್ಯಗಳ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಪ್ರಕರಣ: ಐಪಿಎಸ್ ಅಧಿಕಾರಿ ಬಿ. ದಯಾನಂದ ವಿರುದ್ಧದ ಇಲಾಖಾ ತನಿಖೆ ಕೈಬಿಟ್ಟ ಸರ್ಕಾರ

ಬಂಧಿತರನ್ನು ರೌಡಿಶೀಟರ್ ತ್ರಿವೇಣ್ ಕುಮಾರ್ ಅಲಿಯಾಸ್ ತಿರುಮಲ, ರಂಜಿತ್ ರಾವ್, ನಮಿತ್, ಪ್ರೇಮ್ ಸಾಯಿ ಹಾಗೂ ಶಾಂತಕುಮಾರ್ ಎಂದು ಗುರುತಿಸಲಾಗಿದೆ. ಇವರ ವಿರುದ್ಧ ಈ ಹಿಂದೆಯೂ ಕೊಲೆ, ಕೊಲೆಯತ್ನ, ದರೋಡೆ ಸೇರಿದಂತೆ ಹಲವು ಗಂಭೀರ ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡೇಟಿಂಗ್ ಆ್ಯಪ್ ಬಿಡಿ, ಸೂಪರ್ ಮಾರ್ಕೆಟ್‌ಗೆ ಹೋಗಿ, ಪಿಂಕ್ ಬಾಸ್ಕೆಟ್ ಹಿಡಿದರೆ ಸಾಕು ಸಿಗಲಿದ್ದಾರೆ ಲೈಫ್ ಪಾರ್ಟ್ನರ್ – Kannada News | Finland’s Pink Basket Dating: Find Love in Supermarkets, Ditch Apps

ಹೆಲ್ಸಿಂಕಿ, ಜುಲೈ 15: ಇಂದಿನ ರೀಲ್ಸ್ ಜಗತ್ತಿನಲ್ಲಿ ಬೇರೆ ಜೋಡಿಗಳನ್ನು ನೋಡಿ “ಇನ್ನೂ ನಮಗ್ಯಾರು ಸಂಗಾತಿ ಸಿಕ್ಕಿಲ್ವಲ್ಲಾ” ಎಂದು ಕೊರಗುವ ಸಿಂಗಲ್ಸ್‌ಗೆ ಫಿನ್‌ಲ್ಯಾಂಡ್ ದೇಶದ ದಿನಸಿ ಅಂಗಡಿಗಳು ಭರ್ಜರಿ ಆಫರ್ ನೀಡಿವೆ. ನೀವು ಪ್ರೀತಿ(Love)ಯನ್ನು ಹುಡುಕಲು ಯಾವುದೇ ಪಬ್, ಕ್ಲಬ್‌ಗಳಿಗೆ ಹೋಗಬೇಕಾಗಿಲ್ಲ ಅಥವಾ ಡೇಟಿಂಗ್ ಆ್ಯಪ್‌ಗಳಿಗೆ ಹಣ ಸುರಿಯಬೇಕಾಗಿಲ್ಲ, ಬದಲಿಗೆ ಹತ್ತಿರದ ಸೂಪರ್ ಮಾರ್ಕೆಟ್‌ಗೆ ಹೋಗಿ ಒಂದು ‘ಗುಲಾಬಿ ಬಣ್ಣದ ಬಾಸ್ಕೆಟ್’ ಹಿಡಿದು ಶಾಪಿಂಗ್ ಮಾಡಿದರೆ ಸಾಕು, ನಿಮ್ಮ ಒಂಟಿತನಕ್ಕೆ ಬ್ರೇಕ್ ಬೀಳುವುದು ಪಕ್ಕಾ. ಫಿನ್‌ಲ್ಯಾಂಡ್‌ನ ಅತಿ ದೊಡ್ಡ ಸೂಪರ್ ಮಾರ್ಕೆಟ್ ‘ಕೆ. ಸೂಪರ್ ಮಾರ್ಕೆಟ್’ ಮತ್ತು ‘ಎಸ್ ಸೂಪರ್ ಮಾರ್ಕೆಟ್’ ತಮ್ಮ ಮಳಿಗೆಗಳಲ್ಲಿ ಈ ವಿಶಿಷ್ಟ ಸೌಲಭ್ಯವನ್ನು ಪರಿಚಯಿಸಿವೆ.

ಏನಿದು ‘ಪಿಂಕ್ ಬಾಸ್ಕೆಟ್’ ರಹಸ್ಯ?
ಸಾಮಾನ್ಯವಾಗಿ ಸೂಪರ್ ಮಾರ್ಕೆಟ್‌ಗಳಲ್ಲಿ ಕಪ್ಪು, ನೀಲಿ ಅಥವಾ ಬೂದು ಬಣ್ಣದ ಶಾಪಿಂಗ್ ಬುಟ್ಟಿಗಳಿರುತ್ತವೆ. ಆದರೆ ಅವುಗಳ ಪಕ್ಕದಲ್ಲೇ ಈಗ ಪ್ರಕಾಶಮಾನವಾದ ‘ಗುಲಾಬಿ ಬಣ್ಣದ ಬುಟ್ಟಿಗಳನ್ನು’ ಇಡಲಾಗಿದೆ.

ಮಿಂಗಲ್ ಆಗಲು ಗ್ರೀನ್ ಸಿಗ್ನಲ್: ಯಾರೆಲ್ಲಾ ಸದ್ಯ ಸಿಂಗಲ್ ಆಗಿದ್ದು, ಹೊಸ ಸಂಗಾತಿಯನ್ನು ಭೇಟಿಯಾಗಲು ಮುಕ್ತವಾಗಿದ್ದಾರೋ ಅವರು ಮಾತ್ರ ಅಂಗಡಿಯೊಳಗಿರುವ ಈ ಪಿಂಕ್ ಬಾಸ್ಕೆಟ್ ಅನ್ನು ಆಯ್ದುಕೊಳ್ಳುತ್ತಾರೆ.

ಸೈಲೆಂಟ್ ಇಂಡಿಕೇಟರ್: ಈ ಗುಲಾಬಿ ಬಣ್ಣವು ಕಿರಾಣಿ ಅಂಗಡಿಯ ಕಾರಿಡಾರ್‌ಗಳಲ್ಲಿ ಚಲಿಸುವ ಇತರ ಸಿಂಗಲ್ಸ್‌ಗೆ “ನಾನು ನಿಮ್ಮೊಂದಿಗೆ ಮಾತನಾಡಲು ಸಿದ್ಧನಿದ್ದೇನೆ” ಎಂದು ನೀಡುವ ಸೂಕ್ಷ್ಮ ಸಂಕೇತವಾಗಿದೆ.

ಅಂಗಡಿಯಲ್ಲಿ ತರಕಾರಿ ಅಥವಾ ದಿನಸಿ ಖರೀದಿಸುತ್ತಾ ಇಬ್ಬರು ಪಿಂಕ್ ಬಾಸ್ಕೆಟ್ ಹೊಂದಿರುವವರು ಎದುರಾದಾಗ, ಯಾವುದೇ ಮುಜುಗರವಿಲ್ಲದೆ ಮಾತುಕತೆ ಆರಂಭಿಸಬಹುದು. ಪರಸ್ಪರ ಇಷ್ಟವಾದರೆ ಫೋನ್ ನಂಬರ್ ವಿನಿಮಯ ಮಾಡಿಕೊಂಡು ಪ್ರೇಮಕಥೆ ಮುಂದುವರಿಸಬಹುದು. ಈಗಾಗಲೇ ಹತ್ತಾರು ಜನ ಈ ಮೂಲಕ ತಮ್ಮ ‘ಸೋಲ್ ಮೇಟ್’ ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ.

ಮತ್ತಷ್ಟು ಓದಿ: Video: ಇದೇ ನೋಡಿ ತಾಯಿ ಪ್ರೀತಿ; ತನ್ನ ಕರುವನ್ನು ತೋರಿಸಲು ಮಾಲೀಕನನ್ನು ಕರೆದೊಯ್ದ ಹಸು

ಸೋಶಿಯಲ್ ಮೀಡಿಯಾದಲ್ಲಿ 1.5 ಕೋಟಿಗೂ ಹೆಚ್ಚು ವ್ಯೂಸ್
ರೋಯಾ ಫಾಕ್ಸ್ ಎಂಬ ಸೋಷಿಯಲ್ ಮೀಡಿಯಾ ಬಳಕೆದಾರರು ಫಿನ್‌ಲ್ಯಾಂಡ್‌ನ ದಿನಸಿ ಅಂಗಡಿಯೊಂದರಲ್ಲಿ ಪಿಂಕ್ ಬಾಸ್ಕೆಟ್ ಹಿಡಿದು ಮಾಡಿರುವ ವಿಡಿಯೋ ಇಂಟರ್ನೆಟ್‌ನಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ಕ್ಲಿಪ್ ಬರೋಬ್ಬರಿ 15.5 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಹಾಗೂ 7 ಲಕ್ಷಕ್ಕೂ ಅಧಿಕ ಲೈಕ್‌ಗಳನ್ನು ಬಾಚಿಕೊಂಡಿದೆ.

ಇದನ್ನು ನೋಡಿದ ನೆಟ್ಟಿಗರು ಸಖತ್ ಮಜಾವಾಗಿ ಕಾಮೆಂಟ್ ಮಾಡುತ್ತಿದ್ದಾರೆ. “ನನ್ನ ನೆಚ್ಚಿನ ಬಣ್ಣ ಗುಲಾಬಿ, ಈ ನಿಯಮ ತಿಳಿಯದೆ ನಾನು ಈ ಬುಟ್ಟಿ ಹಿಡಿದಿದ್ದರೆ ಕಥೆ ಮುಗಿಯುತ್ತಿತ್ತು” ಎಂದು ಒಬ್ಬರು ಬರೆದರೆ, ಮತ್ತೊಬ್ಬ ಯುವತಿ ನಾನು ಅಮೆರಿಕದ ಹೂಸ್ಟನ್‌ನಲ್ಲೇ ನನ್ನ ಬುಟ್ಟಿಗೆ ಪಿಂಕ್ ಪೇಂಟ್ ಮಾಡಿಕೊಂಡು ತಿರುಗಾಡುತ್ತೇನೆ, ನನ್ನ ಭಾವಿ ಪತಿ ಫಿನ್‌ಲ್ಯಾಂಡ್‌ನಿಂದಲಾದರೂ ಬಂದು ಹಾಯ್ ಅನ್ನಲಿ ಎಂದು ತಮಾಷೆ ಮಾಡಿದ್ದಾರೆ.

ಫೀಚರಿಸ್ಟಿಕ್ ಮಾಹಿತಿ: ಕಮರ್ಷಿಯಲ್ ಗೆಲುವಿನ ಜೊತೆಗೆ ಹೊಸ ಟ್ರೆಂಡ್
ಈ ‘ಪಿಂಕ್ ಬಾಸ್ಕೆಟ್’ ಪರಿಕಲ್ಪನೆಯು ಕೇವಲ ಒಂಟಿ ಹೃದಯಗಳನ್ನು ಒಟ್ಟುಗೂಡಿಸುತ್ತಿಲ್ಲ, ಬದಲಾಗಿ ಸೂಪರ್ ಮಾರ್ಕೆಟ್‌ಗಳ ಪಾಲಿಗೆ ಬಿಜಿನೆಸ್ ಬೂಸ್ಟರ್ ಆಗಿ ಬದಲಾಗಿದೆ.

ವ್ಯಾಪಾರದಲ್ಲಿ ಭಾರಿ ವೃದ್ಧಿ: ತಮಗೆ ಇಷ್ಟವಾದ ಸಂಗಾತಿಯನ್ನು ನೋಡಲು ಅಥವಾ ಯಾರಾದರೂ ಬಂದು ಮಾತನಾಡಿಸಲಿ ಎಂಬ ಆಸೆಯಿಂದ ಯುವಕ-ಯುವತಿಯರು ಹೆಚ್ಚಿನ ಸಮಯ ಅಂಗಡಿಯಲ್ಲೇ ಕಳೆಯುತ್ತಿದ್ದಾರೆ. ಈ ನೆಪದಲ್ಲಿ ಸೂಪರ್ ಮಾರ್ಕೆಟ್‌ಗಳ ದಿನನಿತ್ಯದ ವ್ಯಾಪಾರ ದುಪ್ಪಟ್ಟಾಗಿದೆ.

ಯುರೋಪ್‌ನಾದ್ಯಂತ ಹೊಸ ಕ್ರೇಜ್: ಕೇವಲ ಫಿನ್‌ಲ್ಯಾಂಡ್ ಮಾತ್ರವಲ್ಲದೆ, ಜರ್ಮನಿ, ಸ್ಪೇನ್ ಮತ್ತು ನೆದರ್ಲ್ಯಾಂಡ್ಸ್‌ನಂತಹ ಹಲವು ಯುರೋಪಿಯನ್ ದೇಶಗಳ ದಿನಸಿ ಅಂಗಡಿಗಳೂ ಈಗ ಅನಿರೀಕ್ಷಿತ ಡೇಟಿಂಗ್ ತಾಣಗಳಾಗಿ ಮಾರ್ಪಡುತ್ತಿವೆ. ಕೃತಕವಾದ ಆನ್‌ಲೈನ್ ಜಗತ್ತನ್ನು ಬಿಟ್ಟು, ನೈಜ ಜಗತ್ತಿನಲ್ಲಿ ಮುಖಾಮುಖಿ ಭೇಟಿಯಾಗಲು ಬಯಸುವ ಇಂದಿನ ತಲೆಮಾರಿಗೆ ಈ ಸೂಪರ್ ಮಾರ್ಕೆಟ್ ಡೇಟಿಂಗ್ ಅತ್ಯಂತ ಸುರಕ್ಷಿತವಾಗಿ ಕಾಣಿಸುತ್ತಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ರಾಜಕುಮಾರ್ ನನ್ನ ವಸ್ತು, ನನ್ನವರಾಗೇ ಉಳಿದರು’; ಅಣ್ಣಾವ್ರ ಬಗ್ಗೆ ಪಾರ್ವತಮ್ಮ ಆಡಿದ್ದ ಮಾತಿದು – Kannada News | Rajkumar is my treasure, no one can take him away: Parvathamma Rajkumar emotional throwback video wins hearts

ಕನ್ನಡ ಚಿತ್ರರಂಗದ ಧ್ರುವತಾರೆ ಡಾ. ರಾಜ್‌ಕುಮಾರ್ ಮತ್ತು ಅವರ ಧರ್ಮಪತ್ನಿ ಪಾರ್ವತಮ್ಮ ರಾಜ್‌ಕುಮಾರ್ ಅವರ ದಾಂಪತ್ಯ ಇಡೀ ಚಿತ್ರರಂಗಕ್ಕೇ ಒಂದು ಮಾದರಿ. ಅಣ್ಣಾವ್ರ ಪ್ರತಿಯೊಂದು ಯಶಸ್ಸಿನ ಹಿಂದೆಯೂ ಪಾರ್ವತಮ್ಮ ಅವರ ಬೆಂಬಲ ಮತ್ತು ಅಪ್ರತಿಮ ಶ್ರಮವಿತ್ತು. ಚಿತ್ರ ನಿರ್ಮಾಣದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಲೇ ರಾಜ್ ಕುಟುಂಬವನ್ನು ಮುನ್ನಡೆಸಿದ್ದ ಪಾರ್ವತಮ್ಮ ಅವರು, ತಮ್ಮ ಪತಿಯ ಬಗ್ಗೆ ಆಡಿದ್ದ ಅಪರೂಪದ ಹಾಗೂ ಭಾವುಕ ಮಾತುಗಳ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ.

53 ವರ್ಷಗಳ ಅಪರೂಪದ ದಾಂಪತ್ಯ ಬದುಕು

ಆ ಸಂದರ್ಶನದಲ್ಲಿ ಪಾರ್ವತಮ್ಮ ಅವರು ಅಣ್ಣಾವ್ರೊಂದಿಗಿನ ತಮ್ಮ ಸುದೀರ್ಘ ಬಾಂಧವ್ಯವನ್ನು ನೆನಪಿಸಿಕೊಂಡು ಅತ್ಯಂತ ಭಾವುಕರಾಗಿ ಮಾತನಾಡಿದ್ದರು. ‘ನಾನು ಮದುವೆಯಾಗಿ ಬಂದ ದಿನದಿಂದ ಹಿಡಿದು ಅವರು ಸಾಯುವವರೆಗೂ ಅವರ ನಡವಳಿಕೆಯಲ್ಲಿ ನಾನು ಯಾವುದೇ ರೀತಿಯ ಬದಲಾವಣೆಯನ್ನು ಕಾಣಲಿಲ್ಲ. ನನ್ನ ಮೇಲೆ ಅವರಿಗೆ ಅಪಾರವಾದ ಪ್ರೀತಿ ಇತ್ತು. ಹಾಗೆಯೇ ನನಗೂ ಅವರ ಮೇಲೆ ಅಷ್ಟೇ ಅಗಾಧವಾದ ಪ್ರೇಮವಿತ್ತು. ಅದೇ ನಂಬಿಕೆಯಲ್ಲಿ ನಾನು 53 ವರ್ಷಗಳ ಕಾಲ ಅವರ ಜೊತೆ ಹಾಗೇ ಬದುಕಿಬಿಟ್ಟೆ’ ಎಂದು ದಾಂಪತ್ಯದ ಸುಂದರ ದಿನಗಳನ್ನು ನೆನದಿದ್ದಾರೆ.

‘ಅವರನ್ನು ಯಾರೂ ಕಿತ್ಕೊಳ್ಳೋಕೆ ಆಗಲ್ಲ’

ಮಾತು ಮುಂದುವರಿಸಿದ ಪಾರ್ವತಮ್ಮ ಅವರು, ಅಣ್ಣಾವ್ರು ತಮಗೆ ಎಷ್ಟು ಮುಖ್ಯ ಎಂಬುದನ್ನು ಮಾರ್ಮಿಕವಾಗಿ ವಿವರಿಸಿದ್ದಾರೆ. ‘ರಾಜಕುಮಾರ್ ನನ್ನ ವಸ್ತು. ಅದನ್ನು ನನ್ನಿಂದ ಯಾರೂ ಕಿತ್ತುಕೊಳ್ಳಲು ಆಗಲ್ಲ. ನನ್ನದು ಕೊನೆವರೆಗೂ ನನ್ನದಾಗಿಯೇ ಉಳಿದುಕೊಂಡಿತ್ತು’ ಎಂದು ಅತ್ಯಂತ ಹೆಮ್ಮೆಯಿಂದ ನುಡಿದಿದ್ದಾರೆ.

ಇದನ್ನೂ ಓದಿ: ರಾಜ್​​ಕುಮಾರ್ ಹಾಗೂ ಪಾರ್ವತಮ್ಮಗೆ ಇಷ್ಟ ಆಗಿತ್ತು ಆ ಒಂದು ಸಿನಿಮಾ

ಈ ಅಪರೂಪದ ವಿಡಿಯೋ ಅಣ್ಣಾವ್ರ ಅಭಿಮಾನಿಗಳ ಕಣ್ಣಾಲಿಗಳನ್ನು ತುಂಬಿ ಬರುವಂತೆ ಮಾಡಿದ್ದು, ಆದರ್ಶ ದಂಪತಿಗಳಿಗೆ ಇವರಿಗಿಂತ ದೊಡ್ಡ ಉದಾಹರಣೆ ಸಿಗಲು ಸಾಧ್ಯವಿಲ್ಲ ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 10:45 am, Wed, 15 July 26

Source link

Exit mobile version