ಪೆಟ್ರೋಕೆಮಿಕಲ್ ಉದ್ಯಮ ನಿರಾಳ; ಪ್ರಮುಖ ಕಚ್ಛಾವಸ್ತುಗಳ ಆಮದಿಗೆ ಜುಲೈ 15ರವರೆಗೆ ಕಸ್ಟಮ್ಸ್ ಡ್ಯೂಟಿ ವಿನಾಯಿತಿ – Kannada News | Govt continues to give Customs Duty exemption on critical petrochemicals till July 15th
ನವದೆಹಲಿ, ಜೂನ್ 30: ಭಾರತ ಸರ್ಕಾರವು ಪ್ರಮುಖ ಪೆಟ್ರೋಕೆಮಿಕಲ್ ಕಚ್ಚಾ ವಸ್ತುಗಳ (Petrochemicals) ಆಮದಿನ ಮೇಲಿನ ಕಸ್ಟಮ್ಸ್ ಸುಂಕದ (Zero Customs Duty) ವಿನಾಯಿತಿಯನ್ನು ಜುಲೈ 15 ರವರೆಗೆ ವಿಸ್ತರಿಸಿದೆ. ದೇಶೀಯ ಕೈಗಾರಿಕೆಗಳಿಗೆ ಮತ್ತು ಪೆಟ್ರೋಕೆಮಿಕಲ್ ವಲಯಕ್ಕೆ ಬೆಂಬಲ ನೀಡುವ ಉದ್ದೇಶದಿಂದ, ಮತ್ತು ಸರಬರಾಜು ವ್ಯವಸ್ಥೆಯಲ್ಲಿ ಸ್ಥಿರತೆ ತರುವ ಉದ್ದೇಶದಿಂದ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ. ಕೇಂದ್ರ ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುವ ಕಂದಾಯ ಇಲಾಖೆಯು ಈ ಕುರಿತು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದು, ಈ ಹಿಂದೆ ಇದ್ದ…