ದಿನಸಿ ವಸ್ತುವಿನಂತೆ ಮನೆಬಾಗಿಲಿಗೆ ಬರುತ್ತೆ ಸಣ್ಣ ಎಲ್​ಪಿಜಿ ಸಿಲಿಂಡರ್; ಎಚ್​ಪಿ ನಂತರ ಈಗ ಭಾರತ್ ಗ್ಯಾಸ್​ನಿಂದಲೂ ಸಪ್ಲೈ ಶುರು – Kannada News | BPCL Launches Lite Zip LPG cylinder for faster booking and deliveries

ಮುಂಬೈ, ಜುಲೈ 19: ಸ್ವಿಗ್ಗಿ ಇನ್​ಸ್ಟಾಮಾರ್ಟ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ನಿಗಮ ಸಂಸ್ಥೆ ಸಹಯೋಗದಲ್ಲಿ ಮನೆಬಾಗಿಲಿಗೆ ಕಿರು ಎಲ್​ಪಿಜಿ ಸಿಲಿಂಡರ್ ಒದಗಿಸುವ ಸೇವೆ ಆರಂಭಿಸಿದ ಬೆನ್ನಲ್ಲೇ ಇದೀಗ ಭಾರತ್ ಪೆಟ್ರೋಲಿಯಂ ನಿಗಮ ಸಂಸ್ಥೆಯೂ ರೇಸ್​ಗೆ ಸೇರಿದೆ. ಸರ್ಕಾರಿ ಸ್ವಾಮ್ಯದ ಬಿಪಿಸಿಎಲ್ (BPCL), ಅತ್ಯಾಧುನಿಕ ಹಾಗೂ ಹಗುರವಾದ ಎಲ್‌ಪಿಜಿ ಸಿಲಿಂಡರ್ ಸಿಸ್ಟಂ ಆದ’ಭಾರತ್‌ಗ್ಯಾಸ್ ಲೈಟ್ ಜಿಪ್’ (Bharatgas Lite ZIP) ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಹೊಸ ಸೇವೆಯಡಿ ಗ್ರಾಹಕರು ತಕ್ಷಣವೇ ಹೊಸ ಗ್ಯಾಸ್ ಕನೆಕ್ಷನ್ ಪಡೆಯಬಹುದು ಹಾಗೂ ಅತಿ ವೇಗದ (Express) ಡೆಲಿವರಿ ಸೌಲಭ್ಯವನ್ನು ಹೊಂದಲಿದ್ದಾರೆ.

ಭಾರತ್ ಗ್ಯಾಸ್ ಲೈಟ್ ಝಿಪ್ ಗ್ಯಾಸ್ ಸಿಲಿಂಡರ್ ವಿಶೇಷತೆಗಳು

ಭಾರತ್​ಗ್ಯಾಸ್ ಲೈಟ್ ಝಿಪ್ ಸಾಂಪ್ರದಾಯಿಕ ಕಬ್ಬಿಣದ ಸಿಲಿಂಡರ್‌ಗಳಿಗಿಂತ ಭಿನ್ನವಾಗಿದೆ. ಇವುಗಳು ಹಗುರವಾಗಿದ್ದು, ಸುಲಭವಾಗಿ ಎತ್ತಿಕೊಂಡು ಹೋಗಬಹುದು. ಇದು ತುಕ್ಕು ಹಿಡಿಯದ (Corrosion-free) ಬಾಡಿಯನ್ನು ಹೊಂದಿದೆ.

ಇದನ್ನೂ ಓದಿ: ಬೆಂಗಳೂರಿಗರಿಗೆ ಗುಡ್​​ನ್ಯೂಸ್​​: ಇನ್ಮುಂದೆ ಇನ್‌ಸ್ಟಾಮಾರ್ಟ್‌ನಲ್ಲೂ ಸಿಗುತ್ತೆ LPG ಸಿಲಿಂಡರ್

ಸಿಲಿಂಡರ್‌ನಲ್ಲಿ ಎಷ್ಟು ಗ್ಯಾಸ್ ಬಾಕಿ ಇದೆ ಎಂಬುದನ್ನು ಹೊರಗಿನಿಂದಲೇ ನೋಡಬಹುದಾದ ಇಂಡಿಕೇಟರ್ (Gas-level indicator) ಇಲ್ಲಿದೆ. ಇದು ಆಧುನಿಕ ವಿನ್ಯಾಸ ಹಾಗೂ ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.

ಪ್ರಸ್ತುತ ಈ ಸೇವೆಯನ್ನು ಮುಂಬೈನಲ್ಲಿ ಮೊದಲ ಬಾರಿಗೆ ಲಾಂಚ್ ಮಾಡಲಾಗಿದೆ. ಮುಂಬರುವ ಆಗಸ್ಟ್ 15 ರ ವೇಳೆಗೆ ದೇಶದ 24 ರಾಜ್ಯಗಳ 100 ಕ್ಕೂ ಹೆಚ್ಚು ನಗರಗಳಿಗೆ ಈ ಸೇವೆಯನ್ನು ವಿಸ್ತರಿಸಲು BPCL ಯೋಜಿಸಿದೆ.

ಹೆಚ್​ಪಿಸಿಎಲ್​ನಿಂದ ಮೊದಲ್ಗೊಂಡಿತ್ತು ಈ ಸೇವೆ

ಇತ್ತೀಚೆಗಷ್ಟೇ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಸಂಸ್ಥೆಯು ‘ಸ್ವಿಗ್ಗಿ ಇನ್‌ಸ್ಟಾಮಾರ್ಟ್’ (Swiggy Instamart) ಜೊತೆ ಒಪ್ಪಂದ ಮಾಡಿಕೊಂಡು ಬೆಂಗಳೂರಿನಲ್ಲಿ 10 ಕೆಜಿಯ ಹಗುರವಾದ ‘ಎಚ್‌ಪಿ ನವ್ಯಾ’ (HP Navya) ಸಿಲಿಂಡರ್‌ಗಳ ಆನ್-ಡಿಮ್ಯಾಂಡ್ ಡೆಲಿವರಿ ಆರಂಭಿಸಿತ್ತು. ಇದಕ್ಕೆ ಪೈಪೋಟಿ ನೀಡಲು ಈಗ BPCL ಕೂಡ ತನ್ನ ಪ್ರೀಮಿಯಂ ಹಗುರ ಸಿಲಿಂಡರ್ ಸೇವೆಯನ್ನು ವೇಗವಾಗಿ ವಿಸ್ತರಿಸುತ್ತಿದೆ.

ಇದನ್ನೂ ಓದಿ: ಭಾರತದಲ್ಲಿ ಹಸಿರು ಇಂಧನ ಕ್ರಾಂತಿ; ಆರು ತಿಂಗಳಲ್ಲಿ ದಾಖಲೆಯ ಶೇ.25ರಷ್ಟು ಪ್ರಗತಿ- ಮಾಹಿತಿ ಬಿಚ್ಚಿಟ್ಟ ಸಚಿವ ಪ್ರಲ್ಹಾದ್ ಜೋಶಿ

ಇಂದಿನ ವೇಗದ ಜೀವನಶೈಲಿಗೆ, ಅದರಲ್ಲೂ ವಿಶೇಷವಾಗಿ ಐಟಿ ಉದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ಸಣ್ಣ ಕುಟುಂಬಗಳಿಗೆ ಸೂಕ್ತವಾಗುವಂತೆ ಈ ಸುಲಭ ಹಾಗೂ ಸುರಕ್ಷಿತ ಸಿಲಿಂಡರ್‌ಗಳನ್ನು ತೈಲ ಕಂಪನಿಗಳು ಮಾರುಕಟ್ಟೆಗೆ ತರುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಜಮ್ಮು-ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ, ಭೂಕುಸಿತ; 11 ಜನ ಸಾವು, ಹಲವರು ನಾಪತ್ತೆ – Kannada News | Cloudburst news 11 people dead after flash floods and landslides hit Jammu Kashmir

ಪೂಂಚ್, ಜುಲೈ 19: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir Flood) ಶನಿವಾರ ರಾತ್ರಿಯಿಂದ ಸುರಿಯುತ್ತಿರುವ ಭಾರಿ ಮಳೆ ಇಂದು ಕೂಡ ಮುಂದುವರಿದಿದ್ದು, ಗಡಿ ಜಿಲ್ಲೆಗಳಾದ ಪೂಂಚ್ ಮತ್ತು ರಜೌರಿಯಲ್ಲಿ ಭೀಕರ ಪ್ರವಾಹ ಮತ್ತು ಭೂಕುಸಿತ ಉಂಟಾಗಿದೆ. ಈ ನೈಸರ್ಗಿಕ ವಿಕೋಪಕ್ಕೆ ಒಟ್ಟು 11 ಜನರು ಬಲಿಯಾಗಿದ್ದು, ಹಲವು ಜನರು ನಾಪತ್ತೆಯಾಗಿದ್ದಾರೆ. ಹಲವು ಗ್ರಾಮಗಳು ಸಂಪರ್ಕ ಕಡಿತಗೊಂಡಿದ್ದು, ನಾಪತ್ತೆಯಾದವರ ಹುಡುಕಾಟ ಮತ್ತು ಸಿಲುಕಿರುವ ನಿವಾಸಿಗಳ ರಕ್ಷಣೆಗಾಗಿ ಬೃಹತ್ ಕಾರ್ಯಾಚರಣೆ ಆರಂಭಿಸಲಾಗಿದೆ.

ಧಾರಾಕಾರ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿದ್ದು, ಭೂಕುಸಿತ ಮತ್ತು ಮನೆಗಳು ಕುಸಿದು ಬಿದ್ದಿದೆ. ಪೂಂಚ್‌ನ ಸುರನ್‌ಕೋಟ್ ತಹಸಿಲ್ ಪ್ರದೇಶದಲ್ಲಿ ಅತಿ ಹೆಚ್ಚು ಹಾನಿಯಾಗಿದ್ದು, ಇಲ್ಲಿಯೇ ಅತಿ ಹೆಚ್ಚು ಸಾವುನೋವುಗಳು ಸಂಭವಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಹದಲ್ಲಿ ಮುಳುಗಿದ ರಜೌರಿ:

ರಜೌರಿ ಜಿಲ್ಲೆಯಲ್ಲೂ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಭೀಕರ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರವಾಹದ ನೀರು ವಸತಿ ಪ್ರದೇಶಗಳು ಮತ್ತು ತಗ್ಗು ಪ್ರದೇಶಗಳಿಗೆ ನುಗ್ಗಿದ್ದರಿಂದ ನೂರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಪ್ರವಾಹದ ರಕ್ಷಣಾ ಗೋಡೆಗಳು ಕುಸಿದು ಬಿದ್ದಿದ್ದರಿಂದ ಹಲವು ವಾಹನಗಳು ನೀರಿನಲ್ಲಿ ಕೊಚ್ಚಿಹೋಗಿವೆ. ರಜೌರಿ ಪಟ್ಟಣದ ನದಿಯೊಂದರಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.

ಇದನ್ನೂ ಓದಿ: ಜಮ್ಮು-ಕಾಶ್ಮೀರವನ್ನು ಪಾಕ್ ಭಾಗವೆಂದು ತೋರಿಸಿದ ಬಾಂಗ್ಲಾ; ಭಾರತೀಯ ರಾಜತಾಂತ್ರಿಕ ಅಧಿಕಾರಿ ಪೂಜಾ ಝಾ ಆಕ್ಷೇಪ

ದೆಹಲಿ ಪ್ರವಾಸ ಮೊಟಕುಗೊಳಿಸಿದ ಸಿಎಂ ಒಮರ್ ಅಬ್ದುಲ್ಲಾ:

ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತಮ್ಮ ದೆಹಲಿ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಜಮ್ಮುವಿಗೆ ಮರಳಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರೂ ಸಹ ರಕ್ಷಣಾ ಕಾರ್ಯಾಚರಣೆಯನ್ನು ಗಮನಿಸುತ್ತಿದ್ದು, ಪರಿಹಾರ ಕಾರ್ಯವನ್ನು ಚುರುಕುಗೊಳಿಸಲು ಆದೇಶಿಸಿದ್ದಾರೆ.

ಕೇಂದ್ರ ಸರ್ಕಾರದಿಂದ ಸಂಪೂರ್ಣ ಬೆಂಬಲದ ಭರವಸೆ:

ಕೇಂದ್ರ ಗೃಹ ಸಚಿವ ಅಮಿತ್ ಶಾ ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಸಿಎಂ ಒಮರ್ ಅಬ್ದುಲ್ಲಾ ಅವರೊಂದಿಗೆ ಫೋನ್​ನಲ್ಲಿ ಮಾತನಾಡಿ, ಪ್ರವಾಹದ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ರಕ್ಷಣೆ, ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳಿಗಾಗಿ ಕೇಂದ್ರ ಸರ್ಕಾರದಿಂದ ಅಗತ್ಯವಿರುವ ಎಲ್ಲಾ ರೀತಿಯ ಸಹಾಯವನ್ನು ಒದಗಿಸುವುದಾಗಿ ಅವರು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ರಾಯಗಢ ಪ್ರವಾಹದಲ್ಲಿ ಕೊಚ್ಚಿಹೋದ 3,000 ಎಲ್‌ಪಿಜಿ ಸಿಲಿಂಡರ್‌ಗಳು; ವಿಡಿಯೋ ವೈರಲ್!

ಜುಲೈ 23ರವರೆಗೆ ಭಾರಿ ಮಳೆಯ ಮುನ್ಸೂಚನೆ:

ಭಾರತೀಯ ಹವಾಮಾನ ಇಲಾಖೆ (IMD) ಜುಲೈ 23ರವರೆಗೆ ಜಮ್ಮು ಮತ್ತು ಕಾಶ್ಮೀರದಾದ್ಯಂತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆಯಾಗುವ ಸಾಧ್ಯತೆ ಇರುವುದರಿಂದ ವಿಪತ್ತು ನಿರ್ವಹಣಾ ಪಡೆಗಳನ್ನು (SDRF, NDRF) ಹೈ ಅಲರ್ಟ್‌ನಲ್ಲಿ ಇರಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಫಿಫಾ ವಿಶ್ವಕಪ್ ಫೈನಲ್​ನ ರೋಚಕ 20 ಸಂಗತಿಗಳು ನಿಮಗೆ ಗೊತ್ತೇ? – Kannada News | Did You Know These Epic 2026 FIFA World Cup Final Facts?

FIFA World Cup 2026: ಇಡೀ ಜಗತ್ತಿನ ಕಣ್ಣು ಈಗ ಅಮೆರಿಕದ ನ್ಯೂಜೆರ್ಸಿಯತ್ತ ನೆಟ್ಟಿದೆ. ಇತಿಹಾಸ ಪ್ರಸಿದ್ಧ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ಇಂದು (ಜುಲೈ 19) ರಾತ್ರಿ ಫಿಫಾ ವಿಶ್ವಕಪ್ 2026ರ ಮಹಾ ಫೈನಲ್ ಜರುಗಲಿದ್ದು, ಈ ಪಂದ್ಯದಲ್ಲಿ ಯುರೋಪಿಯನ್ ಚಾಂಪಿಯನ್ಸ್ ಸ್ಪೇನ್ ಹಾಗೂ ಹಾಲಿ ವಿಶ್ವ ಚಾಂಪಿಯನ್ಸ್ ಅರ್ಜೆಂಟೀನಾ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದ ಕುರಿತಾದ ಕುತೂಹಲಕಾರಿ ವಿಷಯಗಳ ಮಾಹಿತಿ ಇಲ್ಲಿದೆ…

    1. ಅತಿ ದೊಡ್ಡ ಟೂರ್ನಿ: ಇದೇ ಮೊದಲ ಬಾರಿಗೆ 48 ತಂಡಗಳು ಭಾಗವಹಿಸಿದ್ದು, ಈ ಫೈನಲ್ ಪಂದ್ಯವು ಇಡೀ ಟೂರ್ನಿಯ 104ನೇ ಪಂದ್ಯವಾಗಿದೆ.
    2. ಹಾಫ್-ಟೈಮ್ ಮ್ಯೂಸಿಕ್ ಶೋ: ಸೂಪರ್ ಬೌಲ್ ಮಾದರಿಯಲ್ಲಿ, ವಿಶ್ವಕಪ್ ಇತಿಹಾಸದಲ್ಲೇ ಮೊದಲ ಬಾರಿಗೆ ಪಂದ್ಯದ ಮಧ್ಯಂತರದಲ್ಲಿ (ಹಾಫ್ ಟೈಮ್​ನಲ್ಲಿ) ವಿಶೇಷ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.
    3. ಆರನೇ ಬದಲಾವಣೆ: ಪಂದ್ಯವು ಹೆಚ್ಚುವರಿ ಸಮಯಕ್ಕೆ ತಲುಪಿದರೆ, ನಿಯಮಗಳ ಪ್ರಕಾರ ಉಭಯ ತಂಡಗಳಿಗೆ 6ನೇ ಆಟಗಾರನನ್ನು ಬದಲಾಯಿಸುವ ವಿಶೇಷ ಅವಕಾಶ ಸಿಗಲಿದೆ. ಸಾಮಾನ್ಯವಾಗಿ 5 ಆಟಗಾರರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.
    4. ಚಾಂಪಿಯನ್‌ಶಿಪ್ ಉಂಗುರಗಳು: ವಿಜೇತ ತಂಡದ ಆಟಗಾರರಿಗೆ ಚಿನ್ನದ ಪದಕಗಳ ಜೊತೆಗೆ, ಅಮೆರಿಕನ್ ಕ್ರೀಡಾ ಸಂಸ್ಕೃತಿಯಂತೆ ವಿಶೇಷ ಚಾಂಪಿಯನ್‌ಶಿಪ್ ಉಂಗುರಗಳನ್ನು ನೀಡಲಾಗುತ್ತದೆ.
    5. 20 ವರ್ಷಗಳ ವಯಸ್ಸಿನ ವ್ಯತ್ಯಾಸ: ಅರ್ಜೆಂಟೀನಾದ 39 ವರ್ಷದ ದಿಗ್ಗಜ ಲಿಯೋನೆಲ್ ಮೆಸ್ಸಿ ಮತ್ತು ಸ್ಪೇನ್‌ನ 19 ವರ್ಷದ ಉದಯೋನ್ಮುಖ ತಾರೆ ಲಾಮಿನ್ ಯಮಾಲ್ ನಡುವಿನ ಪೈಪೋಟಿ ಈ ಫೈನಲ್‌ನ ಪ್ರಮುಖ ಆಕರ್ಷಣೆ.
    6. ಮೆಸ್ಸಿ ಹೊಸ ಇತಿಹಾಸ: ವಿಶ್ವಕಪ್ ಇತಿಹಾಸದಲ್ಲೇ ಮೂರು ಬಾರಿ ಫೈನಲ್ ಪಂದ್ಯವನ್ನು ಆಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಲಿಯೋನೆಲ್ ಮೆಸ್ಸಿ ಪಾತ್ರರಾಗಲಿದ್ದಾರೆ.
    7. ಬ್ಯಾಕ್-ಟು-ಬ್ಯಾಕ್ ಕಪ್: ಅರ್ಜೆಂಟೀನಾ ಈ ಪಂದ್ಯ ಗೆದ್ದರೆ, ಇಟಲಿ (1934, 1938 ) ಮತ್ತು ಬ್ರೆಜಿಲ್ (1958, 1962) ನಂತರ ಸತತ ಎರಡು ಬಾರಿ ವಿಶ್ವಕಪ್ ಗೆದ್ದ ಮೂರನೇ ದೇಶವಾಗಲಿದೆ.
    8. ಸ್ಪೇನ್ ತಂಡದ ಅಜೇಯ ಓಟ: ಸ್ಪೇನ್ ತಂಡವು ಕಳೆದ 37 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಂದನ್ನೂ ಸೋಲದೆ ಅಜೇಯವಾಗಿ ಈ ಫೈನಲ್ ತಲುಪಿದೆ.
    9. ಹಸಿರು ಹುಲ್ಲಿನ ಸವಾಲು: ಮೆಟ್‌ಲೈಫ್ ಸ್ಟೇಡಿಯಂನಲ್ಲಿ ಸಾಮಾನ್ಯವಾಗಿ ಕೃತಕ ಹುಲ್ಲು (Artificial Turf) ಇರುತ್ತದೆ. ಆದರೆ ಫಿಫಾ ನಿಯಮಗಳಿಗಾಗಿ, ಈ ಫೈನಲ್ ಪಂದ್ಯಕ್ಕೆಂದೇ ವಿಶೇಷವಾಗಿ ನೈಸರ್ಗಿಕ ಹಸಿರು ಹುಲ್ಲನ್ನು ಬೆಳೆಸಿ ಸಿದ್ಧಪಡಿಸಲಾಗಿದೆ.
    10. ಸ್ಮಾರ್ಟ್ ಬಾಲ್ ತಂತ್ರಜ್ಞಾನ: ಫೈನಲ್ ಪಂದ್ಯದಲ್ಲಿ ಬಳಸುವ ಫುಟ್‌ಬಾಲ್ ಒಳಗೆ ಹೈ-ಸ್ಪೀಡ್ ಮೋಷನ್ ಸೆನ್ಸಾರ್ ಇರಲಿದ್ದು, ಆಫ್‌ಸೈಡ್ ಮತ್ತು ಗೋಲ್ ನಿರ್ಧಾರಗಳನ್ನು ಸೆಕೆಂಡ್‌ಗಿಂತ ಕಡಿಮೆ ಅವಧಿಯಲ್ಲಿ ನಿಖರವಾಗಿ ತೀರ್ಪುಗಾರರಿಗೆ ತಲುಪಿಸುತ್ತದೆ.
    11. ಮೊದಲ ಮುಖಾಮುಖಿ: ವಿಶ್ವಕಪ್ ಇತಿಹಾಸದಲ್ಲಿ ಸ್ಪೇನ್ ಮತ್ತು ಅರ್ಜೆಂಟೀನಾ ತಂಡಗಳು ಪರಸ್ಪರ ಅತ್ಯಂತ ಬಲಿಷ್ಠವಾಗಿದ್ದರೂ, ಇವೆರಡೂ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿರುವುದು ಇದೇ ಮೊದಲ ಬಾರಿ.
    12. ಖಂಡಗಳ ನಡುವಿನ ಪೈಪೋಟಿ: ಇದು ಕೇವಲ ಎರಡು ದೇಶಗಳ ನಡುವಿನ ಪಂದ್ಯವಲ್ಲ. ಯುರೋಪ್ ಮತ್ತು ಸೌತ್ ಅಮೆರಿಕ ಫುಟ್‌ಬಾಲ್ ಸಾಮ್ರಾಜ್ಯಗಳ ನಡುವಿನ ಪ್ರತಿಷ್ಠೆಯ ಕದನವಾಗಿದೆ.
    13. ಗೋಲ್ಡನ್ ಬೂಟ್ ರೇಸ್: ಈ ಪಂದ್ಯವು ಟೂರ್ನಿಯ ಅತಿ ಹೆಚ್ಚು ಗೋಲ್ ಗಳಿಸಿದ ಆಟಗಾರನಿಗೆ ನೀಡುವ ‘ಗೋಲ್ಡನ್ ಬೂಟ್’ ಪ್ರಶಸ್ತಿಯನ್ನು ಯಾರು ಮುಡಿಗೇರಿಸಿಕೊಳ್ಳಲಿದ್ದಾರೆ ಎಂಬುದನ್ನು ನಿರ್ಧರಿಸಲಿದೆ. ಸದ್ಯ ಈ ಪಟ್ಟಿಯಲ್ಲಿ ಕಿಲಿಯನ್ ಎಂಬಾಪೆ (10) ಅಗ್ರಸ್ಥಾನದಲ್ಲಿದ್ದು, ಮೆಸ್ಸಿ (8) ದ್ವಿತೀಯ ಸ್ಥಾನದಲ್ಲಿದ್ದಾರೆ.
    14. ಬೃಹತ್ ಪ್ರೇಕ್ಷಕರ ಸಾಗರ: ಈ ಫೈನಲ್ ಪಂದ್ಯ ನಡೆಯುತ್ತಿರುವ ನ್ಯೂಯಾರ್ಕ್ ನ್ಯೂಜೆರ್ಸಿ ಸ್ಟೇಡಿಯಂ ಬರೋಬ್ಬರಿ 82,500 ಕ್ಕೂ ಹೆಚ್ಚು ಆಸನ ಸಾಮರ್ಥ್ಯ ಹೊಂದಿದೆ. ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಪ್ರೇಕ್ಷಕರು ವೀಕ್ಷಿಸಿದ ಪಂದ್ಯಗಳಲ್ಲಿ ಇದು ಒಂದಾಗಲಿದೆ.
    15. ರೆಫ್ರಿಗಳಿಗೆ ಕ್ಯಾಮೆರಾ ತಂತ್ರಜ್ಞಾನ: ಫೈನಲ್‌ನಲ್ಲಿ ರೆಫ್ರಿಗಳು ತಮ್ಮ ಜೆರ್ಸಿಯ ಮೇಲೆ ವಿಶೇಷ ‘ರೆಫ್ರಿ-ಕ್ಯಾಮ್’  ಧರಿಸಲಿದ್ದಾರೆ. ಇದರಿಂದಾಗಿ ಮೈದಾನದಲ್ಲಿ ರೆಫ್ರಿ ನೋಡುವ ದೃಶ್ಯಗಳು ಟಿವಿ ವೀಕ್ಷಕರಿಗೂ ಲೈವ್ ಆಗಿ ಕಾಣಿಸಲಿವೆ.
    16. ಲಿಯೋನೆಲ್ ಸ್ಕಲೋನಿ ಸಾಧನೆ: ಅರ್ಜೆಂಟೀನಾದ ತರಬೇತುದಾರ ಲಿಯೋನೆಲ್ ಸ್ಕಲೋನಿ ಅವರು ಈ ಪಂದ್ಯವನ್ನು ಗೆದ್ದರೆ, ಇತಿಹಾಸದಲ್ಲೇ ಸತತ ಎರಡು ವಿಶ್ವಕಪ್‌ಗಳನ್ನು ಗೆದ್ದ ಅತ್ಯಂತ ಕಿರಿಯ ಕೋಚ್ ಎಂಬ ಅಪರೂಪದ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
    17. ಲೂಯಿಸ್ ಡಿ ಲಾ ಫ್ಯುಯೆಂಟೆ ದಾಖಲೆ: ಸ್ಪೇನ್ ತಂಡದ ಕೋಚ್ ಲೂಯಿಸ್ ಅವರು ಜೂನಿಯರ್ ಹಂತದಿಂದಲೇ (U-19, U-21) ಸ್ಪೇನ್ ತಂಡವನ್ನು ಮುನ್ನಡೆಸಿ, ಈಗ ಸೀನಿಯರ್ ತಂಡವನ್ನೂ ವಿಶ್ವಕಪ್ ಫೈನಲ್‌ಗೆ ತಂದ ವಿಶೇಷ ದಾಖಲೆ ಬರೆಯಲಿದ್ದಾರೆ.
    18. ಕೋಟಿ ಕೋಟಿ ಬಹುಮಾನ: ಈ ಪಂದ್ಯದಲ್ಲಿ ಗೆದ್ದು ವಿಶ್ವಕಪ್ ಮುಡಿಗೇರಿಸಿಕೊಳ್ಳುವ ತಂಡಕ್ಕೆ ಬರೋಬ್ಬರಿ 44 ಮಿಲಿಯನ್ ಡಾಲರ್ (ಸುಮಾರು 368 ಕೋಟಿ ರೂಪಾಯಿ) ನಗದು ಬಹುಮಾನ ಸಿಗಲಿದೆ.
    19. ಪರಿಸರ ಸ್ನೇಹಿ ಜೆರ್ಸಿಗಳು: ಸ್ಪೇನ್ ಮತ್ತು ಅರ್ಜೆಂಟೀನಾ ಎರಡೂ ತಂಡಗಳ ಆಟಗಾರರು ಧರಿಸುವ ಜೆರ್ಸಿಗಳನ್ನು ಸಮುದ್ರದ ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆ ಮಾಡಿ ಅತ್ಯಾಧುನಿಕ ತಂತ್ರಜ್ಞಾನದಿಂದ ಸಿದ್ಧಪಡಿಸಲಾಗಿದೆ.
    20. ಟ್ರಿಪಲ್ ಕ್ರೌನ್ ಕನಸು: ಅರ್ಜೆಂಟೀನಾ ಈ ಪಂದ್ಯವನ್ನು ಗೆದ್ದರೆ, ಕೋಪಾ ಅಮೆರಿಕ (2024), ವಿಶ್ವಕಪ್ (2022) ಮತ್ತು ಪ್ರಸಕ್ತ ವಿಶ್ವಕಪ್ (2026) ಮೂರನ್ನೂ ಸತತವಾಗಿ ಗೆದ್ದು ‘ಅಂತರರಾಷ್ಟ್ರೀಯ ಟ್ರಿಪಲ್ ಕ್ರೌನ್’ ಸಾಧಿಸಿದ ವಿಶ್ವದ ಮೊದಲ ತಂಡವಾಗಲಿದೆ.

ಒಟ್ಟಿನಲ್ಲಿ, ಈ ಬಾರಿಯ ಫಿಫಾ ವಿಶ್ವಕಪ್ ಫೈನಲ್ ಕೇವಲ ಒಂದು ಪಂದ್ಯವಲ್ಲ. ಅದು ಕ್ರೀಡಾ ಇತಿಹಾಸದ ಸಾರ್ವಕಾಲಿಕ ಮಹಾಕದನ! ಒಂದೆಡೆ ಅನುಭವಿ ಲಿಯೋನೆಲ್ ಮೆಸ್ಸಿ ಇದ್ದರೆ, ಇನ್ನೊಂದೆಡೆ ಯುವ ಆಟಗಾರ ಲಾಮಿನ್ ಯಮಾಲ್ ಇದ್ದಾರೆ. ಹೀಗಾಗಿ ಅರ್ಜೆಂಟೀನಾ vs ಸ್ಪೇನ್ ನಡುವಣ ಕದನದಲ್ಲಿ ರಣರೋಚಕ ಹೋರಾಟವನ್ನು ನಿರೀಕ್ಷಿಸಬಹುದು.

Source link

ಐಸಿಯುನಲ್ಲಿ ಚೆನ್ನಮ್ಮರ ಕೊನೆಕ್ಷಣಗಳು ಹೇಗಿತ್ತು? ಪುತ್ರಿ ಅನುಸೂಯ ಭಾವುಕ ಮಾತು – Kannada News | Deve Gowda’s Daughter Anusuya Shares Emotional Memories of Chennamma’s Final Moments in the ICU

ಬೆಂಗಳೂರು, ಜುಲೈ 19: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮನವರ ಅಂತಿಮ ದರ್ಶನಕ್ಕೆ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಅವರ ಪುತ್ರಿ ಅನುಸೂಯಾ ಅವರು ತಮ್ಮ ತಾಯಿಯ ಅಂತಿಮ ಕ್ಷಣಗಳನ್ನು ಭಾವುಕವಾಗಿ ಹಂಚಿಕೊಂಡಿದ್ದಾರೆ. ನಮ್ಮ ತಾಯಿ ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಅವರ ಶಕ್ತಿ ನಮ್ಮೆಲ್ಲರಲ್ಲೂ ಜೀವಂತವಾಗಿದೆ. ಯಾವುದೇ ಹೆಣ್ಣುಮಗಳು ಮುತ್ತೈದೆಯಾಗಿ ಸಾಯಬೇಕು ಎಂದು ಬಯಸುತ್ತಾರೆ. ನನ್ನ ತಾಯಿಗೆ ಆ ಭಾಗ್ಯ ಸಿಕ್ಕಿದೆ. ನಮ್ಮ ತಂದೆಯವರು ಬೆಳಗ್ಗೆ ಶಿವನಿಗೆ ರುದ್ರಾಭಿಷೇಕ ಮಾಡಿದ ತೀರ್ಥ, ಗಂಧ ಮತ್ತು ದೇವರ ಮಲ್ಲಿಗೆ ಹೂವನ್ನು ಕೈಯಾರೆ ತಾಯಿಗೆ ನೀಡಿದ್ದಾರೆ. ಅದೇ ಕ್ಷಣ ಅವರ ಜೀವ ಹೋಗಿದೆ. ಇಂತಹ ಸಾವು ಯಾರಿಗೂ ಸಿಗುವುದಿಲ್ಲ ಎಂದು ಹೇಳುತ್ತಲೇ ಅವರು ಕಣ್ಣೀರಾಗಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಲೆಕ್ಕಾಚಾರ ಉಲ್ಟಾ ಪಲ್ಟಾ… ಫೈನಲ್​ನಲ್ಲಿ ಮೆಸ್ಸಿ 2 ಗೋಲು ಬಾರಿಸಲೇಬೇಕು! – Kannada News | FIFA World Cup 2026 Final: Lionel Messi Needs Two Goals

2026ರ ಫಿಫಾ ವಿಶ್ವಕಪ್‌ನ ಫೈನಲ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಒಂದು ಕಡೆ ಸತತ ಎರಡನೇ ಬಾರಿಗೆ ವಿಶ್ವಕಪ್ ಮುಕುಟ ಧರಿಸಲು ಸಜ್ಜಾಗಿರುವ ಚಾಂಪಿಯನ್ ಅರ್ಜೆಂಟೀನಾ ಇದ್ದರೆ, ಮತ್ತೊಂದು ಕಡೆ ಟೂರ್ನಿಯುದ್ದಕ್ಕೂ ಬಲಿಷ್ಠ ಡಿಫೆನ್ಸ್ ಪ್ರದರ್ಶಿಸಿರುವ ಸ್ಪೇನ್ ಪಡೆ ಸಜ್ಜಾಗಿ ನಿಂತಿದೆ. ಈ ಇಬ್ಬರು ಬಲಿಷ್ಠರ ಮುಖಾಮುಖಿಯಲ್ಲಿ, ಇಡೀ ಜಗತ್ತಿನ ಕಣ್ಣುಗಳು ನೆಟ್ಟಿರುವುದು 39 ವರ್ಷದ ಲಿಯೋನೆಲ್ ಮೆಸ್ಸಿ ಮೇಲೆ!

ಹೌದು, ಫೈನಲ್ ಪಂದ್ಯವು ಲಿಯೋನೆಲ್ ಮೆಸ್ಸಿ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಪಂದ್ಯದಲ್ಲಿ 2 ಗೋಲು ಬಾರಿಸಿದರೆ ಮಾತ್ರ ಮೆಸ್ಸಿ ಒಂದು ವಿಶ್ವ ದಾಖಲೆಯೊಂದಿಗೆ ಎರಡು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಳ್ಳಬಹುದು.

ಏಕೆಂದರೆ ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದ್ದ ಲಿಯೋನೆಲ್ ಮೆಸ್ಸಿ ಅವರನ್ನು ಕಳೆದ ಪಂದ್ಯದಲ್ಲಿ ಫ್ರಾನ್ಸ್​ನ ಕಿಲಿಯನ್ ಎಂಬಾಪೆ ಹಿಂದಿಕ್ಕಿದ್ದಾರೆ. ಅದು ಕೂಡ ವಿಶ್ವ ದಾಖಲೆ ನಿರ್ಮಿಸುವ ಮೂಲಕ.

  • ಇಂಗ್ಲೆಂಡ್ ವಿರುದ್ಧದಲ್ಲಿ ಎಂಬಾಪೆ 2 ಗೋಲು ದಾಖಲಿಸಿ ಮಿಂಚಿದ್ದರು.
  • ಈ ಎರಡು ಗೋಲುಗಳೊಂದಿಗೆ ಈ ಬಾರಿ ವಿಶ್ವಕಪ್​ನಲ್ಲಿ ಅತ್ಯಧಿಕ ಗೋಲು ದಾಖಲಿಸಿದ ಆಟಗಾರರಲ್ಲಿ ಪಟ್ಟಿ ಎಂಬಾಪೆ ಅಗ್ರಸ್ಥಾನಕ್ಕೇರಿದ್ದಾರೆ.
  • ಈ ಪಟ್ಟಿಯಲ್ಲಿ ಎಂಬಾಪೆ 10 ಗೋಲುಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಮೆಸ್ಸಿ 8 ಗೋಲುಗಳೊಂದಿಗೆ ದ್ಚಿತೀಯ ಸ್ಥಾನದಲ್ಲಿದ್ದಾರೆ.

ಹಾಗೆಯೇ ಈ ಎರಡು ಗೋಲುಗಳೊಂದಿಗೆ ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಅತ್ಯಧಿಕ ಗೋಲು ದಾಖಲಿಸಿದ ಆಟಗಾರರ ಪಟ್ಟಿಯಲ್ಲೂ ಕಿಲಿಯನ್ ಎಂಬಾಪೆ ಅಗ್ರಸ್ಥಾನಕ್ಕೇರಿದ್ದಾರೆ.

  • ಎಂಬಾಪೆ ಒಟ್ಟು 22 ಗೋಲುಗಳನ್ನು ಬಾರಿಸುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
  • ಮೆಸ್ಸಿ 21 ಗೋಲುಗಳೊಂದಿಗೆ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ.

ಅಂದರೆ ಕಿಲಿಯನ್ ಎಂಬಾಪೆ ಕೊನೆಯ ಮ್ಯಾಚ್​ನಲ್ಲಿ ಬಾರಿಸಿದ 2 ಗೋಲುಗಳಿಂದಾಗಿ ಲಿಯೋನೆಲ್ ಮೆಸ್ಸಿ ಅವರ ಗೋಲ್ಡನ್ ಬೂಟ್, ಗೋಲ್ಡನ್ ಬಾಲ್ ಲೆಕ್ಕಾಚಾರಗಳು ಉಲ್ಟಾ ಪಲ್ಟಾ ಆಗಿದೆ.

ಮೆಸ್ಸಿಗೆ 2 ಗೋಲುಗಳ ಅನಿವಾರ್ಯತೆ ಏಕೆ?

ಸ್ಪೇನ್ ವಿರುದ್ಧದ ಫೈನಲ್‌ನಲ್ಲಿ ಲಿಯೋನೆಲ್ ಮೆಸ್ಸಿ ಕೇವಲ ಮೈದಾನಕ್ಕಿಳಿಯುತ್ತಿಲ್ಲ, ಬದಲಿಗೆ ಸಾರ್ವಕಾಲಿಕ ಶ್ರೇಷ್ಠತೆಯ ಮುದ್ರೆ ಒತ್ತಲು ಸಜ್ಜಾಗಿದ್ದಾರೆ. ಅವರು ಕನಿಷ್ಠ 2 ಗೋಲುಗಳನ್ನು ಗಳಿಸಲೇಬೇಕಾದ ಲೆಕ್ಕಾಚಾರ ಇಲ್ಲಿದೆ.

  • ಗೋಲ್ಡನ್ ಬೂಟ್: ಫಿಫಾ ವಿಶ್ವಕಪ್​ 2026ರ ಗೋಲ್ಡನ್ ಬೂಟ್ ಪ್ರಶಸ್ತಿ ಪಟ್ಟಿಯಲ್ಲಿ ಕಿಲಿಯನ್ ಎಂಬಾಪೆ ಅಗ್ರಸ್ಥಾನದಲ್ಲಿದ್ದಾರೆ. ಒಟ್ಟು 10 ಗೋಲು ದಾಖಲಿಸಿರುವ ಎಂಬಾಪೆಯನ್ನು ಹಿಂದಿಕ್ಕಿ ಗೋಲ್ಡನ್ ಬೂಟ್ ಪ್ರಶಸ್ತಿ ಪಡೆಯಲು ಲಿಯೋನೆಲ್ ಮೆಸ್ಸಿ (8) ಫೈನಲ್ ಮ್ಯಾಚ್​ನಲ್ಲಿ 2 ಗೋಲು ದಾಖಲಿಸಲೇಬೇಕು.
  • ವಿಶ್ವ ದಾಖಲೆ: ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ದಾಖಲೆ ಸದ್ಯ ಕಿಲಿಯನ್ ಎಂಬಾಪೆ (22 ಗೋಲು) ಹೆಸರಲ್ಲಿದೆ. ಸದ್ಯ 21 ಗೋಲುಗಳನ್ನು ಹೊಂದಿರುವ ಮೆಸ್ಸಿ, ಫೈನಲ್​ನಲ್ಲಿ 2 ಗೋಲು ಬಾರಿಸಿದರೆ ಫಿಫಾ ವಿಶ್ವಕಪ್​ನಲ್ಲಿ ಅತ್ಯಧಿಕ ಗೋಲು ಬಾರಿಸಿದ ಆಟಗಾರ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ.
  • ಗೋಲ್ಡನ್ ಬಾಲ್: ಈ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಮೆಸ್ಸಿ ಈಗಾಗಲೇ ಟೂರ್ನಿಯ ಅತ್ಯುತ್ತಮ ಆಟಗಾರನಿಗೆ ನೀಡುವ ‘ಗೋಲ್ಡನ್ ಬಾಲ್’ ಪ್ರಶಸ್ತಿ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಈ ಪ್ರಶಸ್ತಿಯನ್ನು ಖಚಿತಪಡಿಸಿಕೊಳ್ಳಲ;ಉ ಫೈನಲ್​ ಮ್ಯಾಚ್​ನಲ್ಲಿ 2 ಗೋಲು ದಾಖಲಿಸಿದರೆ ಸಾಕು.

ಇದನ್ನೂ ಓದಿ: ಫೈನಲ್ ಪಂದ್ಯಕ್ಕೂ ಮುನ್ನ ಯಮಾಲ್ ವಿಚಿತ್ರ ‘ಶಪಥ’

ಈ ಮೂರು ಕಾರಣಗಳಿಂದಾಗಿ ಲಿಯೋನೆಲ್ ಮೆಸ್ಸಿ ಫೈನಲ್ ಮ್ಯಾಚ್​ನಲ್ಲಿ 2 ಗೋಲು ದಾಖಲಿಸಲೇಬೇಕು. ಹೀಗಾಗಿ, ಇಂದಿನ ಮಹಾ ಫೈನಲ್ ಕೇವಲ ಅರ್ಜೆಂಟೀನಾ ಮತ್ತು ಸ್ಪೇನ್ ನಡುವಿನ ಕಿರೀಟದ ಹೋರಾಟವಲ್ಲ. ಇದು ಮೆಸ್ಸಿ ಪಾಲಿಗೆ ಸಾರ್ವಕಾಲಿಕ ಶ್ರೇಷ್ಠತೆಯ ಸಿಂಹಾಸನವನ್ನು ಮರಳಿ ಪಡೆಯುವ ಅಂತಿಮ ಯುದ್ಧ.

ಅದರಂತೆ, ಫೈನಲ್‌ ಪಂದ್ಯದಲ್ಲಿ 2 ಗೋಲು ಬಾರಿಸಿ ಲಿಯೋನೆಲ್ ಮೆಸ್ಸಿ ಗೋಲ್ಡನ್ ಬೂಟ್, ಗೋಲ್ಡನ್ ಬಾಲ್ ಮತ್ತು ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರಾ ಕಾದು ನೋಡಬೇಕಿದೆ.

Source link

‘ದಿ ಇಂಡಿಯಾ ಸ್ಟೋರಿ’ ಸಿನಿಮಾ ಟ್ರೇಲರ್ ಬಿಡುಗಡೆ: ಕೀಟನಾಶಕ ಕೃಷಿ ದಂಧೆಯ ವಿರುದ್ಧ ಸಮರ – Kannada News | Kajal Aggarwal Shreyas Talpade starrer The India Story Slow Poison in Progress Trailer Out Film relase on 24 July

ಬಹುಭಾಷಾ ನಟಿ ಕಾಜಲ್ ಅಗರ್ವಾಲ್ (Kajal Aggarwal) ಮತ್ತು ಶ್ರೇಯಸ್ ತಲ್ಪಾಡೆ (Shreyas Talpade) ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ಸಾಮಾಜಿಕ ಕಳಕಳಿಯ ಚಿತ್ರ ‘ದಿ ಇಂಡಿಯಾ ಸ್ಟೋರಿ: ಸ್ಲೋ ಪಾಯ್ಸನ್ ಇನ್ ಪ್ರೋಗ್ರೆಸ್’ (The India Story: Slow Poison in Progress) ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಕೃಷಿಯಲ್ಲಿ ಮಿತಿಮೀರಿ ಬಳಸಲಾಗುವ ರಾಸಾಯನಿಕ ಕೀಟನಾಶಕಗಳು ಮತ್ತು ಅವು ಸಮಾಜದ ಮೇಲೆ ಬೀರುತ್ತಿರುವ ಭೀಕರ ಪರಿಣಾಮಗಳ ಸುತ್ತ ಈ ಚಿತ್ರದ ಕಥಾಹಂದರ ಮೂಡಿಬಂದಿದೆ.

ಈಗ ಬಿಡುಗಡೆಯಾಗಿರುವ ಟ್ರೇಲರ್ ಅತ್ಯಂತ ಪ್ರಭಾವಶಾಲಿಯಾಗಿದ್ದು, ಭಾವನಾತ್ಮಕ ಸನ್ನಿವೇಶಗಳಿಂದ ಕೂಡಿದೆ. ಕೀಟನಾಶಕ ಮುಕ್ತ ಕೃಷಿಗಾಗಿ ಸಾಮಾನ್ಯ ಮನುಷ್ಯನೊಬ್ಬ ನಡೆಸುವ ಹೋರಾಟ, ಕಾರ್ಪೊರೇಟ್ ದಂಧೆ ಮತ್ತು ಇದರ ಬಗ್ಗೆ ನ್ಯಾಯಾಲಯದಲ್ಲಿ ನಡೆಯುವ ವಾದ-ಪ್ರತಿವಾದಗಳು ಪ್ರೇಕ್ಷಕರಲ್ಲಿ ಜಾಗೃತಿ ಮೂಡಿಸುವಂತಿದೆ. ದೇಶದ ಕೋಟ್ಯಂತರ ಜನರ ಆರೋಗ್ಯದ ಮೇಲೆ ಆಟವಾಡುತ್ತಿರುವ ಈ ಗಂಭೀರ ಸಮಸ್ಯೆಯನ್ನು ಚಿತ್ರದಲ್ಲಿ ಅತ್ಯಂತ ಧೈರ್ಯವಾಗಿ ಬಿಂಬಿಸಲಾಗಿದೆ.

ಪ್ರತಿ ಮನೆಯ ಕಥೆ ಇದು: ನಿರ್ದೇಶಕ ಚೇತನ್ ಡಿ.ಕೆ

ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಚೇತನ್ ಡಿ.ಕೆ, ‘ದಿ ಇಂಡಿಯಾ ಸ್ಟೋರಿ ಕೇವಲ ಒಂದು ಸಿನಿಮಾವಲ್ಲ, ಇದು ಸಮಾಜದಲ್ಲಿ ನಾವೆಲ್ಲರೂ ಚರ್ಚಿಸಬೇಕಾದ ಗಂಭೀರ ವಿಷಯ. ಇಂದು ಕೀಟನಾಶಕಗಳು ಪ್ರತಿಯೊಂದು ಮನೆಯ ಮೇಲೂ ಸದ್ದಿಲ್ಲದೆ ಪರಿಣಾಮ ಬೀರುತ್ತಿವೆ. ಸತ್ಯ, ಧೈರ್ಯ ಮತ್ತು ಸ್ಥಿತಿಸ್ಥಾಪಕತ್ವದ ಈ ಹೋರಾಟವನ್ನು ಟ್ರೇಲರ್‌ನಲ್ಲಿ ತೋರಿಸಿದ್ದೇವೆ. ನಮ್ಮ ಸುತ್ತಲಿನ ನೈಜ ಪರಿಸ್ಥಿತಿಯನ್ನು ಪ್ರಶ್ನಿಸಲು ಮತ್ತು ಅರ್ಥಮಾಡಿಕೊಳ್ಳಲು ಈ ಸಿನಿಮಾ ಪ್ರೇಕ್ಷಕರಿಗೆ ಪ್ರೇರಣೆ ನೀಡುತ್ತದೆ ಎಂದು ಭಾವಿಸುತ್ತೇನೆ’ ಎಂದಿದ್ದಾರೆ.

ಕಾಜಲ್ ಅಗರ್ವಾಲ್ ಪಾಲಿಗೆ ಸ್ಪೆಷಲ್ ಪ್ರಾಜೆಕ್ಟ್:

ಚಿತ್ರದ ಅನುಭವ ಹಂಚಿಕೊಂಡ ನಟಿ ಕಾಜಲ್ ಅಗರ್ವಾಲ್, ‘ಈ ಪ್ರಾಜೆಕ್ಟ್‌ನಲ್ಲಿ ಭಾಗವಹಿಸಿದ್ದು ನನಗೆ ಅತ್ಯಂತ ಅರ್ಥಪೂರ್ಣ ಅನುಭವ ನೀಡಿದೆ. ಹತ್ತಾರು ಸವಾಲುಗಳು ಎದುರಾದರೂ ಸತ್ಯದ ಪರವಾಗಿ ನಿಲ್ಲುವ ಧೀಮಂತ ಪಾತ್ರ ನನ್ನದಾಗಿದೆ. ಆ ಅದಮ್ಯ ಚೇತನವೇ ಈ ಸಿನಿಮಾವನ್ನು ವಿಶೇಷವಾಗಿಸಿದೆ. ಪ್ರೇಕ್ಷಕರಿಗೆ ಟ್ರೇಲರ್ ಇಷ್ಟವಾಗಲಿದ್ದು, ಸಿನಿಮಾವನ್ನು ದೊಡ್ಡ ಪರದೆಯ ಮೇಲೆ ನೋಡಲು ಅವರು ಕಾಯಲಿದ್ದಾರೆ ಎಂಬ ನಂಬಿಕೆಯಿದೆ’ ಎಂದು ಆಶಿಸಿದ್ದಾರೆ.

ಇದನ್ನೂ ಓದಿ: ಆಹಾರ ಕಲಬೆರಕೆ ಕುರಿತ ‘ದಿ ಇಂಡಿಯಾ ಸ್ಟೋರಿ’ ಸಿನಿಮಾಗೆ ಲೀಗಲ್ ನೋಟಿಸ್; ಕಾರಣ ಏನು?

ಸಾಮಾನ್ಯ ಮನುಷ್ಯನ ಅಸಾಮಾನ್ಯ ಹೋರಾಟ:

ನಟ ಶ್ರೇಯಸ್ ತಲ್ಪಾಡೆ ಮಾತನಾಡಿ, ‘ಒಬ್ಬ ಸಾಮಾನ್ಯ ಮನುಷ್ಯ ತನ್ನ ಮುಂದಿರುವ ಅಸಾಮಾನ್ಯ ಸವಾಲಿನ ವಿರುದ್ಧ ಭರವಸೆ ಮತ್ತು ದೃಢಸಂಕಲ್ಪದಿಂದ ಹೇಗೆ ಹೋರಾಡುತ್ತಾನೆ ಎಂಬುದೇ ಸಿನಿಮಾದ ಜೀವಾಳ. ಚಿತ್ರದ ಅಸಲಿ ಭಾವನೆಯನ್ನು ಈ ಟ್ರೇಲರ್ ಹಿಡಿದಿಟ್ಟಿದೆ. ಪ್ರತಿಯೊಬ್ಬ ಪ್ರೇಕ್ಷಕನೂ ಚಿತ್ರದ ಸಂದೇಶಕ್ಕೆ ಕನೆಕ್ಟ್ ಆಗಲಿದ್ದು, ಜುಲೈ 24ರಂದು ಚಿತ್ರಮಂದಿರಗಳಲ್ಲಿ ಈ ಅದ್ಭುತ ಅನುಭವವನ್ನು ಪಡೆಯಲು ನಾನು ಉತ್ಸುಕನಾಗಿದ್ದೇನೆ’ ಎಂದು ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

RBI Recruitment 2026: ಆರ್‌ಬಿಐನಲ್ಲಿ ಉದ್ಯೋಗ ಪಡೆಯಲು ಸುವರ್ಣವಕಾಶ; ಗಂಟೆಗೆ 1,000 ರೂ. ಸಂಭಾವನೆ! – Kannada News | Rbi recruitment 2026 bank medical consultant jobs in kanpur for doctors

ಭಾರತೀಯ ರಿಸರ್ವ್ ಬ್ಯಾಂಕ್ (RBI) ನಲ್ಲಿ ಉದ್ಯೋಗ ಹುಡುಕುತ್ತಿರುವ ವೈದ್ಯಕೀಯ ವೃತ್ತಿಪರರಿಗೆ ಒಂದು ಸುವರ್ಣ ಅವಕಾಶ ಇಲ್ಲಿದೆ. ಕಾನ್ಪುರದಲ್ಲಿರುವ ಆರ್‌ಬಿಐ ಶಾಖೆಯಲ್ಲಿ ಖಾಲಿ ಇರುವ ಬ್ಯಾಂಕ್ ವೈದ್ಯಕೀಯ ಸಲಹೆಗಾರ (Bank Medical Consultant – BMC) ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಆರ್‌ಬಿಐ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿಯು ಸಂಪೂರ್ಣವಾಗಿ ಒಪ್ಪಂದದ (Contract) ಆಧಾರದ ಮೇಲೆ ನಡೆಯಲಿದ್ದು, ಗಂಟೆಯ ಲೆಕ್ಕದಲ್ಲಿ ಆಕರ್ಷಕ ಸಂಭಾವನೆ ನೀಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಆಫ್‌ಲೈನ್ (ಅಂಚೆ) ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.

ಉದ್ಯೋಗದ ಪ್ರಮುಖ ವಿವರಗಳು:

  • ಹುದ್ದೆಯ ಹೆಸರು: ಬ್ಯಾಂಕ್ ವೈದ್ಯಕೀಯ ಸಲಹೆಗಾರ (BMC)
  • ಒಟ್ಟು ಹುದ್ದೆಗಳು: 02
  • ಉದ್ಯೋಗದ ಸ್ಥಳ: ಕಾನ್ಪುರ ಶಾಖೆ, ಉತ್ತರ ಪ್ರದೇಶ
  • ನೇಮಕಾತಿ ವಿಧಾನ: ಒಪ್ಪಂದದ ಆಧಾರ (Contract Basis)
  • ವೇತನ/ಸಂಭಾವನೆ: ಗಂಟೆಗೆ 1,000 ರೂ.
  • ಆಯ್ಕೆ ಪ್ರಕ್ರಿಯೆ: ಯಾವುದೇ ಲಿಖಿತ ಪರೀಕ್ಷೆ ಇಲ್ಲ, ಕೇವಲ ಸಂದರ್ಶನದ ಮೂಲಕ ನೇಮಕಾತಿ
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 31, 2026

ಶೈಕ್ಷಣಿಕ ಅರ್ಹತೆ ಮತ್ತು ಅನುಭವ:

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ ಎಂಬಿಬಿಎಸ್ (MBBS) ಪದವಿ ಪೂರ್ಣಗೊಳಿಸಿರಬೇಕು. ಜನರಲ್ ಮೆಡಿಸಿನ್‌ನಲ್ಲಿ ಎಂಎಸ್ (MS) ಅಥವಾ ಎಂಡಿ (MD) ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಇದರೊಂದಿಗೆ ಸಂಬಂಧಿತ ವೈದ್ಯಕೀಯ ಸೇವೆಗಳಲ್ಲಿ ಸೂಕ್ತ ಅನುಭವ ಹೊಂದಿರುವುದು ಅತ್ಯಗತ್ಯ.

ಇದನ್ನೂ ಓದಿ: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಉದ್ಯೋಗವಕಾಶ; 253 ಪಿಎಸ್‌ಐ ಹುದ್ದೆಗೆ ನೇರ ನೇಮಕಾತಿ!

ಅರ್ಜಿ ಸಲ್ಲಿಸುವ ವಿಧಾನ:

ಈ ಹುದ್ದೆಗಳಿಗೆ ಆಫ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಅಭ್ಯರ್ಥಿಗಳು ಮೊದಲು ಆರ್‌ಬಿಐನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಧಿಕೃತ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಅಧಿಸೂಚನೆಯೊಂದಿಗೆ ನೀಡಿರುವ ನಿಗದಿತ ಅರ್ಜಿ ನಮೂನೆಯನ್ನು ಪ್ರಿಂಟ್ ತೆಗೆದುಕೊಂಡು, ನಿಖರವಾಗಿ ಭರ್ತಿ ಮಾಡಬೇಕು. ಭರ್ತಿ ಮಾಡಿದ ಅರ್ಜಿಯೊಂದಿಗೆ ನಿಮ್ಮ ವಿದ್ಯಾರ್ಹತೆ, ಅನುಭವ ಹಾಗೂ ಇತರ ಅಗತ್ಯ ದಾಖಲೆಗಳ ನಕಲು ಪ್ರತಿಯನ್ನು ಲಗತ್ತಿಸಬೇಕು. ಸಿದ್ಧಪಡಿಸಿದ ಅರ್ಜಿ ಲಕೋಟೆಯನ್ನು ಜುಲೈ 31 ರೊಳಗೆ ತಲುಪುವಂತೆ ಕೆಳಗಿನ ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಅಥವಾ ನೋಂದಾಯಿತ ಅಂಚೆ ಮೂಲಕ ಕಳುಹಿಸಬೇಕು.

ಅರ್ಜಿ ಕಳುಹಿಸಬೇಕಾದ ವಿಳಾಸ:

ಪ್ರಾದೇಶಿಕ ನಿರ್ದೇಶಕರು,ಭಾರತೀಯ ರಿಸರ್ವ್ ಬ್ಯಾಂಕ್, ಮಾನವ ಸಂಪನ್ಮೂಲ ನಿರ್ವಹಣಾ ಇಲಾಖೆ (ನೇಮಕಾತಿ ವಿಭಾಗ), ಮಹಾತ್ಮ ಗಾಂಧಿ ಮಾರ್ಗ, ಕಾನ್ಪುರ.

ಅಭ್ಯರ್ಥಿಗಳು ಕರ್ತವ್ಯಗಳ ಸ್ವರೂಪ, ಆಯ್ಕೆ ಪ್ರಕ್ರಿಯೆಯ ನಿಯಮಗಳು ಮತ್ತು ಹೆಚ್ಚಿನ ಮಾಹಿತಿಗಾಗಿ ಅರ್ಜಿ ಸಲ್ಲಿಸುವ ಮುನ್ನ ಆರ್‌ಬಿಐ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯನ್ನು ಕೂಲಂಕಷವಾಗಿ ಪರಿಶೀಲಿಸಲು ಸೂಚಿಸಲಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

‘ರಾಮಮಂದಿರ ದೇಣಿಗೆ ಹಗರಣದಲ್ಲಿ ಮೌನವೇಕೆ?’; ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ, ಖರ್ಗೆ ಪತ್ರ – Kannada News | ‘Your silence is not acceptable’; Rahul Gandhi and Mallikarjun Kharge write to PM Modi over Ram Temple donations theft Case

ನವದೆಹಲಿ, ಜುಲೈ 19: ಅಯೋಧ್ಯೆಯ ರಾಮಮಂದಿರದ ದೇಣಿಗೆಯಲ್ಲಿ (Ram Mandir Donation Theft) ಭಾರಿ ಪ್ರಮಾಣದ ಕಳ್ಳತನ ನಡೆದಿದೆ ಎಂಬ ಆರೋಪದ ಬೆನ್ನಲ್ಲೇ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ‘ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್’ನ ಹಣಕಾಸು ವ್ಯವಹಾರಗಳ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿರುವ ಅವರು, ತಮ್ಮ ಕಷ್ಟದ ಗಳಿಕೆಯನ್ನು ಭಕ್ತಿಯಿಂದ ದಾನ ಮಾಡಿದ ಲಕ್ಷಾಂತರ ಭಕ್ತರಿಗೆ ಈ ಕಳ್ಳತನದಿಂದ ವಂಚನೆಯಾಗಿದೆ. ಈ ಹಗರಣದಲ್ಲಿ ನೀವು ಮೌನ ವಹಿಸಿರುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ.

ತಾವು ಬರೆದ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿರುವ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ, “ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಲ್ಲಿ ಸಾವಿರಾರು ಕೋಟಿ ರೂ.ಗಳ ಕಳ್ಳತನ ನಡೆದಿರುವುದು ನಿಮ್ಮ ಗಮನಕ್ಕೆ ಬಂದಿದೆ. ಅಪಾರ ನಂಬಿಕೆ, ಭಕ್ತಿ ಮತ್ತು ವಿಶ್ವಾಸದಿಂದ ತಮ್ಮ ಕಷ್ಟದ ಹಣವನ್ನು ದೇಣಿಗೆಯಾಗಿ ನೀಡಿದ ಲಕ್ಷಾಂತರ ಭಕ್ತರಿಗೆ ಈ ಕಳ್ಳತನದಿಂದಾಗಿ ದ್ರೋಹ ಬಗೆದಂತಾಗಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ದೇಣಿಗೆ ಕಳ್ಳತನಕ್ಕೆ ಪ್ರಾಯಶ್ಚಿತ್ತ; ರಾಮ ಮಂದಿರದಲ್ಲಿ 10 ದಿನದ ಶುದ್ಧೀಕರಣ ಆರಂಭ

ಸರ್ಕಾರದಿಂದಲೇ ಸದಸ್ಯರ ನೇಮಕ:

ಹಾಗೇ, ರಾಮ ಮಂದಿರ ಟ್ರಸ್ಟ್‌ನ ರಚನೆಯ ಕುರಿತು ಪ್ರಶ್ನಿಸಿರುವ ಕಾಂಗ್ರೆಸ್ ನಾಯಕರು, ಪ್ರಧಾನಿಯವರ ಮೌನವನ್ನು ತೀವ್ರವಾಗಿ ಟೀಕಿಸಿದ್ದಾರೆ. “ಸುಪ್ರೀಂ ಕೋರ್ಟ್‌ನ ನಿರ್ದೇಶನದ ಮೇರೆಗೆ ನೀವು ಸಂಸತ್ತಿನಲ್ಲಿ ಈ ಟ್ರಸ್ಟ್ ರಚನೆಯನ್ನು ಘೋಷಿಸಿದ್ದೀರಿ. ಇದರ ಸದಸ್ಯರನ್ನು ಸಂಪೂರ್ಣವಾಗಿ ನಿಮ್ಮ ಸರ್ಕಾರವೇ ನೇಮಿಸಿದೆ. ಈ ಟ್ರಸ್ಟ್‌ನ ಸದಸ್ಯರು ಆರ್‌ಎಸ್‌ಎಸ್, ವಿಎಚ್‌ಪಿ ಮತ್ತು ಅದರ ಅಂಗಸಂಸ್ಥೆಗಳಿಗೆ ಸೇರಿದವರಾಗಿದ್ದಾರೆ ಎಂಬುದು ಸಾರ್ವಜನಿಕವಾಗಿ ತಿಳಿದಿರುವ ವಿಚಾರ. ಇದರ ಅಪಕೀರ್ತಿಗೆ ಒಳಗಾಗಿರುವ ಮಾಜಿ ಪ್ರಧಾನ ಕಾರ್ಯದರ್ಶಿ ಕೂಡ ನಿಮ್ಮ ಆಪ್ತರಾಗಿದ್ದರು. ಹೀಗಿರುವಾಗ ಈ ದೇಣಿಗೆ ವಂಚನೆಯಲ್ಲಿ ನೀವು ಯಾವುದೇ ಪ್ರತಿಕ್ರಿಯೆ ನೀಡದಿರುವುದು ಬೇರೆ ರೀತಿಯ ಸಂದೇಶ ರವಾನಿಸುವ ಸಾಧ್ಯತೆಯಿದೆ” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ತನಿಖೆಗೆ ಕಾಂಗ್ರೆಸ್ ಆಗ್ರಹ:

“ಇಂತಹ ದೊಡ್ಡ ಅಪರಾಧದ ಸಂದರ್ಭದಲ್ಲೂ ನಿಮ್ಮ ಮೌನವನ್ನು ಒಪ್ಪಲು ಸಾಧ್ಯವಿಲ್ಲ. ಇದಕ್ಕೆ ಹೊಣೆಗಾರರಾದವರಿಗೆ ಶಿಕ್ಷೆಯಾಗಬೇಕು. ನಗದು, ಚಿನ್ನ, ಬೆಳ್ಳಿ ಸೇರಿದಂತೆ ಎಲ್ಲಾ ಕಾಣಿಕೆಗಳ ನಿರ್ವಹಣೆಯನ್ನು ಒಳಗೊಂಡಂತೆ ಟ್ರಸ್ಟ್‌ನ ಹಣಕಾಸು ವ್ಯವಹಾರಗಳ ಬಗ್ಗೆ ತಕ್ಷಣವೇ ಸ್ವತಂತ್ರ ಮತ್ತು ಸಮಗ್ರ ತನಿಖೆಗೆ ಆದೇಶಿಸಬೇಕು” ಎಂದು ರಾಹುಲ್ ಗಾಂಧಿ ಮತ್ತು ಖರ್ಗೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣ; ನಿಷ್ಪಕ್ಷಪಾತ ತನಿಖೆಗೆ ಆರ್​ಎಸ್​ಎಸ್​ ಕರೆ

ಟ್ರಸ್ಟ್‌ನ ಲೆಕ್ಕಪತ್ರಗಳನ್ನು ಸಾರ್ವಜನಿಕಗೊಳಿಸಿ:

ಭಕ್ತರ ಕಾಣಿಕೆಗಳು ಹೇಗೆ ಬಳಕೆಯಾಗಿವೆ ಎಂಬುದನ್ನು ಪ್ರತಿಯೊಬ್ಬ ಭಕ್ತನೂ ತಿಳಿದುಕೊಳ್ಳುವಂತಾಗಲು ತನಿಖೆಯ ವರದಿ ಮತ್ತು ಟ್ರಸ್ಟ್‌ನ ಲೆಕ್ಕಪತ್ರಗಳನ್ನು ತಕ್ಷಣವೇ ಸಾರ್ವಜನಿಕಗೊಳಿಸಬೇಕು ಎಂದು ರಾಹುಲ್ ಗಾಂಧಿ ಮತ್ತು ಖರ್ಗೆ ಆಗ್ರಹಿಸಿದ್ದಾರೆ. “ಯಾರೇ ತಪ್ಪಿತಸ್ಥರಾಗಿದ್ದರೂ, ಅವರ ಹುದ್ದೆ ಅಥವಾ ಪ್ರಭಾವವನ್ನು ಲೆಕ್ಕಿಸದೆ ಕಠಿಣ ಕ್ರಮ ಕೈಗೊಳ್ಳಬೇಕು. ನಿಮ್ಮ ಸರ್ಕಾರದ ಮತ್ತು ಟ್ರಸ್ಟ್‌ನ ವಿಶ್ವಾಸಾರ್ಹತೆಯು ನೀವು ಎಷ್ಟು ಪಾರದರ್ಶಕವಾಗಿ ಮತ್ತು ವೇಗವಾಗಿ ಕ್ರಮ ಕೈಗೊಳ್ಳುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿದೆ. ಭಾರತದ ಜನರು ಇದನ್ನು ಗಮನಿಸುತ್ತಿದ್ದಾರೆ. ಜೈ ಹಿಂದ್!” ಎಂದು ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.

ರಾಮಮಂದಿರ ದೇಣಿಗೆ ಹಗರಣ:

ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣ ಮತ್ತು ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ‘ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್’ ಸ್ವೀಕರಿಸಿದ ದೇಣಿಗೆಯಲ್ಲಿ ಆರ್ಥಿಕ ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಕೇಳಿಬಂದಿದೆ. ವಿಶೇಷ ತನಿಖಾ ತಂಡ (SIT) ಈ ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿದ್ದು, ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ತನ್ನ ವರದಿಯನ್ನು ನ್ಯಾಯಾಲಯದ ಮುಂದೆ ಮಂಡಿಸುವ ನಿರೀಕ್ಷೆಯಿದೆ. ಸದ್ಯಕ್ಕೆ ತನಿಖೆ ಪ್ರಗತಿಯಲ್ಲಿದ್ದು, ಯಾವುದೇ ಅಂತಿಮ ತೀರ್ಮಾನಕ್ಕೆ ಬರಲಾಗಿಲ್ಲ. ಈಗಾಗಲೇ ಟ್ರಸ್ಟ್​ನ ಪ್ರಧಾನ ಕಾರ್ಯದರ್ಶಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರ ಜಾಗಕ್ಕೆ ಬೇರೆಯವರನ್ನು ನೇಮಿಸಲಾಗಿದೆ.

ರಾಮಮಂದಿರದ ಕಾಣಿಕೆ ಹಣದ ಕಳ್ಳತನಕ್ಕೆ ಸಂಬಂಧಿಸಿದಂತೆ ತನಿಖೆಯು ತೀವ್ರಗೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಂಟು ಜನರನ್ನು ಬಂಧಿಸಲಾಗಿದೆ. ಕಾಣಿಕೆ ಹಣವನ್ನು ಎಣಿಸುವ ಕಾರ್ಯದಲ್ಲಿ ತೊಡಗಿದ್ದ ಸುಮಾರು 30ಕ್ಕೂ ಹೆಚ್ಚು ಸಿಬ್ಬಂದಿಗಳ ಮೇಲೆ ತನಿಖಾ ಸಂಸ್ಥೆಗಳು ತೀವ್ರ ನಿಗಾ ಇಟ್ಟಿವೆ. ವಿಚಾರಣೆಗೆ ಒಳಗಾಗಿರುವ ಹಲವು ಸಿಬ್ಬಂದಿಗಳನ್ನು ‘ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್’ನ ಪದಾಧಿಕಾರಿಗಳು ಅಥವಾ ಅವರ ಆಪ್ತರ ಶಿಫಾರಸಿನ ಮೇರೆಗೆ ಕೆಲಸಕ್ಕೆ ಸೇರಿಸಿಕೊಳ್ಳಲಾಗಿತ್ತು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದ್ದು, ತನಿಖೆಯ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:57 pm, Sun, 19 July 26

Source link

ರಸ್ತೆ, ಫುಟ್‌ಪಾತ್‌ಗಳ ಮೇಲೆ ಜಪ್ತಿ ವಾಹನಗಳ ರಾಶಿ: ಕೋಟ್ಯಂತರ ರೂ. ಮೌಲ್ಯದ ಸಾವಿರಾರು ವಾಹನಗಳು ಇಲ್ಲಿ ತುಕ್ಕು ಹಿಡಿಯುತ್ತಿರುವುದೇಕೆ? – Kannada News | Bengaluru Police Yards: Thousands of Seized Vehicles Rusting due to Auction Delay

ಬೆಂಗಳೂರು, ಜುಲೈ 19: ನಗರದ ವಿವಿಧ ಪೊಲೀಸ್ ಠಾಣೆಗಳ ಆವರಣಗಳು ಮತ್ತು ನಿಗದಿತ ಪೊಲೀಸ್ ಯಾರ್ಡ್‌ಗಳು (Police Yards) ಈಗ ಭಾರಿ ಪ್ರಮಾಣದ ಜಪ್ತಿ ಮಾಡಿದ ವಾಹನಗಳಿಂದ ತುಂಬಿ ತುಳುಕುತ್ತಿವೆ. ವಿವಿಧ ಅಪರಾಧ ಪ್ರಕರಣಗಳು, ಅಪಘಾತಗಳು ಹಾಗೂ ಕಾನೂನು ಉಲ್ಲಂಘನೆಗಳ ಹಿನ್ನೆಲೆಯಲ್ಲಿ ಪೊಲೀಸರು ವಶಪಡಿಸಿಕೊಂಡ ಸಾವಿರಾರು ಕಾರುಗಳು, ಬೈಕ್‌ಗಳು ಮತ್ತು ಆಟೋಗಳು ವರ್ಷಗಟ್ಟಲೆಯಿಂದ ಧೂಳು ತಿನ್ನುತ್ತಾ, ತುಕ್ಕು ಹಿಡಿಯುತ್ತಾ ನಿಂತಲ್ಲೇ ಹಾಳಾಗುತ್ತಿವೆ. ಡೆಕ್ಕನ್ ಹೆರಾಲ್ಡ್  ವರದಿಯು ಈ ಕಹಿ ಸತ್ಯವನ್ನು ಬಿಚ್ಚಿಟ್ಟಿದ್ದು, ನಗರದಲ್ಲಿ ಇದು ದೊಡ್ಡ ಸುರಕ್ಷತಾ ಹಾಗೂ ಪರಿಸರ ಸಮಸ್ಯೆಯಾಗಿ ಮಾರ್ಪಟ್ಟಿದೆ.

ಕಸದ ರಾಶಿಯಂತಾದ ಪೊಲೀಸ್ ಯಾರ್ಡ್‌ಗಳು

ನಗರದ ಪ್ರಮುಖ ಪೊಲೀಸ್ ಸ್ಟೇಷನ್‌ಗಳ ಮುಂಭಾಗ ಹಾಗೂ ನಗರದ ಹೊರವಲಯದ ಪೊಲೀಸ್ ಡಂಪಿಂಗ್ ಯಾರ್ಡ್‌ಗಳನ್ನು ನೋಡಿದರೆ ಇವು ವಾಹನ ನಿಲ್ದಾಣಗಳೋ ಅಥವಾ ಗುಜರಿ ಅಂಗಡಿಗಳೋ ಎಂಬ ಅನುಮಾನ ಬರುತ್ತದೆ. ಠಾಣೆಗಳ ಒಳಗೆ ಜಾಗವಿಲ್ಲದೆ ಪೊಲೀಸರು ಜಪ್ತಿ ಮಾಡಿದ ವಾಹನಗಳನ್ನು ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳ ಮೇಲೆ ಸಾಲಾಗಿ ನಿಲ್ಲಿಸುತ್ತಿದ್ದಾರೆ. ಇದರಿಂದ ಪಾದಚಾರಿಗಳು ರಸ್ತೆಯಲ್ಲೇ ನಡೆಯುವಂತಾಗಿದ್ದು, ಸಂಚಾರ ದಟ್ಟಣೆಗೂ ಕಾರಣವಾಗುತ್ತಿದೆ.
ವರ್ಷಗಟ್ಟಲೆಯಿಂದ ಒಂದೇ ಕಡೆ ಬಿದ್ದಿರುವ ಈ ವಾಹನಗಳ ಸುತ್ತ ಗಿಡಗಂಟಿಗಳು ಬೆಳೆದುಕೊಂಡಿದ್ದು, ವಿಷಜಂತುಗಳ ತಾಣವಾಗಿ ಮಾರ್ಪಟ್ಟಿದೆ. ಇದರಿಂದ ಸುತ್ತಮುತ್ತಲಿನ ನಿವಾಸಿಗಳು ಭಯದಲ್ಲೇ ಬದುಕುವಂತಾಗಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಈ ವಾಹನಗಳು ಮಳೆ, ಬಿಸಿಲಿಗೆ ಸಿಲುಕಿ ಕೇವಲ ಕಬ್ಬಿಣದ ಚೂರುಗಳಾಗಿ ಮಾರ್ಪಡುತ್ತಿವೆ.

ಹರಾಜು ಪ್ರಕ್ರಿಯೆಯ ವಿಳಂಬ

ಅಪಘಾತ ಅಥವಾ ಕಳ್ಳತನದ ಪ್ರಕರಣಗಳಲ್ಲಿ ಸಿಲುಕಿದ ವಾಹನಗಳು ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗುವವರೆಗೂ ಬಿಡುಗಡೆಯಾಗುವುದಿಲ್ಲ. ಕೆಲವು ಪ್ರಕರಣಗಳು ಇತ್ಯರ್ಥವಾಗಲು 5 ರಿಂದ 10 ವರ್ಷಗಳು ಬೇಕಾಗುತ್ತವೆ. ದಂಡದ ಮೊತ್ತವು ವಾಹನ ಪ್ರಸ್ತುತ ಮೌಲ್ಯಕ್ಕಿಂತ ಹೆಚ್ಚಾಗಿದ್ದಾಗ ಅಥವಾ ವಾಹನದ ದಾಖಲೆಗಳು ಸರಿಯಾಗಿ ಇಲ್ಲದಿದ್ದಾಗ ಮಾಲೀಕರು ವಾಹನಗಳನ್ನು ಕೊಂಡೊಯ್ಯಲು ಆಸಕ್ತಿ ತೋರಿಸುವುದಿಲ್ಲ. ನಿಯಮಾವಳಿಗಳ ಪ್ರಕಾರ ಹಕ್ಕು ಹೂಡದ (Unclaimed) ವಾಹನಗಳನ್ನು ನಿಗದಿತ ಅವಧಿಯೊಳಗೆ ಹರಾಜು ಹಾಕಬೇಕು. ಆದರೆ ಅಧಿಕಾರಿಗಳು ಹರಾಜು ಪ್ರಕ್ರಿಯೆಯನ್ನು ಸಕಾಲದಲ್ಲಿ ನಡೆಸದ ಕಾರಣ ಸಮಸ್ಯೆ ಜಟಿಲಗೊಂಡಿದೆ.

ಅಗ್ನಿ ಅವಘಡದ ಭೀತಿ: ಹೆಚ್ಚಿದ ಆತಂಕ

ಇತ್ತೀಚೆಗೆ ಬೆಂಗಳೂರಿನ ಕೆಲವು ಪೊಲೀಸ್ ಠಾಣೆಗಳ ಆವರಣದಲ್ಲಿ ಜಪ್ತಿ ಮಾಡಲಾಗಿದ್ದ ವಾಹನಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ನೂರಾರು ವಾಹನಗಳು ಸುಟ್ಟು ಭಸ್ಮವಾಗಿದ್ದವು. ಈ ವಾಹನಗಳಲ್ಲಿ ಇಂಧನ (ಪೆಟ್ರೋಲ್/ಡೀಸೆಲ್) ಹಾಗೇ ಉಳಿದಿರುವುದರಿಂದ ಸಣ್ಣ ಕಿಡಿ ಬಿದ್ದರೂ ಇಡೀ ಠಾಣೆಯೇ ಸುಟ್ಟುಹೋಗುವ ಭೀತಿ ಎದುರಾಗಿದೆ.

ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಸಹ ಈ ಹಿಂದೆ ಕಠಿಣ ಎಚ್ಚರಿಕೆ ನೀಡಿದ್ದು, ಫುಟ್‌ಪಾತ್‌ಗಳ ಮೇಲಿನ ವಾಹನಗಳನ್ನು ತೆರವುಗೊಳಿಸುವಂತೆ ಸೂಚಿಸಿತ್ತು. ಸದ್ಯ ಸರ್ಕಾರವು ನಗರದ ಹೊರವಲಯದಲ್ಲಿ ಬದಲಿ ಜಾಗಗಳನ್ನು ಗುರುತಿಸಲು ಮುಂದಾಗಿದ್ದರೂ, ಹರಾಜು ಪ್ರಕ್ರಿಯೆಯನ್ನು ವೇಗಗೊಳಿಸದ ಹೊರತು ಈ ಸಮಸ್ಯೆಗೆ ಶಾಶ್ವತ ಮುಕ್ತಿ ಸಿಗುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೈಬರ್​​ ವಂಚಕರ ಮಾತು ನಂಬಿ 22 ಲಕ್ಷ ರೂಪಾಯಿ ಕಳೆದುಕೊಂಡ ನಿವೃತ್ತ ಬ್ಯಾಂಕ್ ನೌಕರ – Kannada News | Udupi: Retired Bank Employee Cheated of ₹22 Lakh in Digital Arrest Scam by Imposters Posing as ED and CBI Officers

ಉಡುಪಿ, ಜುಲೈ, 19: ಡಿಜಿಟಲ್​​ ವಂಚನೆಗಳ ಬಗ್ಗೆ ಪೊಲೀಸರಿಂದ ಸಾಕಷ್ಟು ಜಾಗೃತಿ ಬಳಿಕವೂ, ದುರ್ದೈವವೆಂಬಂತೆ ವಂಚನೆ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಈ ನಡುವೆ ಸೈಬರ್ ಕ್ರೈಂ, ಜಾರಿ ನಿರ್ದೇಶನಾಲಯ (ED) ಹಾಗೂ ಸಿಬಿಐ ಅಧಿಕಾರಿಗಳೆಂದು ನಂಬಿಸಿ ಕರೆ ಮಾಡಿದ್ದ ಸೈಬರ್​​ ವಂಚಕರು 76 ವರ್ಷದ ನಿವೃತ್ತ ಬ್ಯಾಂಕ್ ನೌಕರನಿಂದ ಬರೋಬ್ಬರಿ 22 ಲಕ್ಷ ರೂಪಾಯಿ ಲಪಟಾಯಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ವಂಚನೆ ನಡೆದಿದ್ದು ಹೇಗೆ?

ದೂರಿನಲ್ಲಿ ತಿಳಿಸಿರುವಂತೆ, ಜುಲೈ 10ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಅಪರಿಚಿತ ಸಂಖ್ಯೆಯಿಂದ ವಾಟ್ಸಾಪ್ ವಿಡಿಯೋ ಕರೆ ಬಂದಿದೆ. ಕರೆ ಸ್ವೀಕರಿಸಿದಾಗ ಪೊಲೀಸ್ ಸಮವಸ್ತ್ರ ಧರಿಸಿದ್ದ ವ್ಯಕ್ತಿಯೊಬ್ಬ ತಾನು ಮುಂಬೈನ ಕೊಲಾಬಾ ಸೈಬರ್ ಕ್ರೈಂ ಘಟಕದ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ ಎನ್ನಲಾಗಿದೆ. ಬಳಿಕ, ದೂರುದಾರರ ಹೆಸರಿನಲ್ಲಿ ಮುಂಬೈನಲ್ಲಿ ಬ್ಯಾಂಕ್ ಖಾತೆಯಿದ್ದು, ಆ ಖಾತೆ ಮೂಲಕ ನೂರಾರು ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ (ಮನಿ ಲಾಂಡರಿಂಗ್) ನಡೆದಿದೆ ಎಂದು ಆರೋಪಿಸಿ ಆತಂಕ ಸೃಷ್ಟಿಸಿದ್ದಾನೆ.

ಇದನ್ನೂ ಓದಿ: ಕರಾವಳಿ ಕಂಬಳ ಆಯೋಜಕರಿಗೆ ಸರ್ಕಾರ ಗುಡ್​ನ್ಯೂಸ್​​! 1.15 ಕೋಟಿ ರೂ ಅನುದಾನ ಘೋಷಣೆ

ಇದಾದ ನಂತರ ಜುಲೈ 11ರಿಂದ 16ರವರೆಗೆ, ಎಡಿಜಿಪಿ ವಿಶ್ವಾಸ್ , ಇಡಿ ಅಧಿಕಾರಿ ಅನಿಲ್ ಕುಮಾರ್ ಹಾಗೂ ಸೈಬರ್ ಅಧಿಕಾರಿಗಳೆಂದು ಹೇಳಿಕೊಂಡು ಹಲವು ಬಾರಿ ವಾಟ್ಸಾಪ್ ಕರೆ ಮಾಡಿ, ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಪರಿಶೀಲನೆಗಾಗಿ ಆರ್‌ಟಿಜಿಎಸ್ ಮೂಲಕ ವರ್ಗಾಯಿಸಬೇಕೆಂದು ನಂಬಿಸಿದ್ದಾರೆ. ಅವರ ಮಾತನ್ನು ನಂಬಿದ ನಿವೃತ್ತ ಬ್ಯಾಂಕ್ ನೌಕರ, ಆರೋಪಿಗಳು ಸೂಚಿಸಿದ ಬ್ಯಾಂಕ್ ಖಾತೆಗೆ ಒಟ್ಟು 22 ಲಕ್ಷ ರೂಪಾಯಿ ವರ್ಗಾವಣೆ ಮಾಡಿದ್ದಾರೆ.

ವಂಚನೆ ನಡೆದಿರುವುದು ಗೊತ್ತಾದ ಬಳಿಕ ಅವರು ಸಿಇಎನ್ (CEN) ಅಪರಾಧ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66(D) ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್‌ಗಳು 114(4), 319(2), 308(2) ಮತ್ತು 318(4) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ ಎಂದು ದಿ ಟೈಮ್ಸ್​​ ಆಫ್​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 12:46 pm, Sun, 19 July 26

Source link

Exit mobile version