ಚೀನಾ ಔಟ್, ಭಾರತ ಇನ್: ಜಾಗತಿಕ ಮಾರುಕಟ್ಟೆಯಲ್ಲಿ ಜಪಾನ್ ಹೂಡಿಕೆದಾರರ ಭರ್ಜರಿ ದಿಕ್ಕು ಬದಲಾವಣೆ – Kannada News

ನವದೆಹಲಿ, ಜೂನ್ 3: ಜಾಗತಿಕ ಆರ್ಥಿಕ ಮತ್ತು ರಾಜಕೀಯ ರಂಗದಲ್ಲಿ ಅತ್ಯಂತ ಮಹತ್ವದ ಬೆಳವಣಿಗೆಯೊಂದು ಮೌನವಾಗಿ ಆದರೆ ಅತ್ಯಂತ ಶಕ್ತಿಯುತವಾಗಿ ನಡೆಯುತ್ತಿದೆ. ದಶಕಗಳಿಂದ ಚೀನಾವನ್ನು ತಮ್ಮ ಪ್ರಮುಖ ಹೂಡಿಕೆಯ ತಾಣವಾಗಿ ನೆಚ್ಚಿಕೊಂಡಿದ್ದ ಜಪಾನ್‌ನ ದೈತ್ಯ ಹೂಡಿಕೆದಾರರು (Japanese investors) ಮತ್ತು ಬ್ಯಾಂಕುಗಳು, ಈಗ ಚೀನಾದಿಂದ ಮುಖತಿರುಗಿಸಿ ಭಾರತದತ್ತ ಮುಖ ಮಾಡುತ್ತಿದ್ದಾರೆ. ಜಪಾನ್‌ನ ಈ ದಿಕ್ಕು ಬದಲಾವಣೆಯು (Pivot) ಮುಂಬರುವ ದಿನಗಳಲ್ಲಿ ಭಾರತದ ಆರ್ಥಿಕತೆಗೆ ಭಾರಿ ಪ್ರಮಾಣದ ಬಂಡವಾಳವನ್ನು ತಂದುಕೊಡಲಿದೆ ಎಂದು ಜಾಗತಿಕ ಹಣಕಾಸು ತಜ್ಞರು ವಿಶ್ಲೇಷಿಸುತ್ತಿದ್ದಾರೆ.

ದೀರ್ಘಕಾಲದವರೆಗೆ ಚೀನಾದ ಅಭಿವೃದ್ಧಿಯ ಭಾಗವಾಗಿದ್ದ ಜಪಾನ್‌ ಕಂಪನಿಗಳು ಈಗ ಅಲ್ಲಿಂದ ಹೊರಬರಲು ಪ್ರಮುಖ ಕಾರಣಳಿವೆ. ರಾಜಕೀಯ ಮತ್ತು ಭೌಗೋಳಿಕ ಉದ್ವಿಗ್ನತೆ (Geopolitical Tensions), ಚೀನಾದ ಆರ್ಥಿಕ ಮಂದಗತಿ ಮತ್ತು ಕಠಿಣ ನಿಯಮಗಳು ವಿದೇಶೀ ಹೂಡಿಕೆದಾರರಿಗೆ ಇರಿಸುಮುರಿಸು ತಂದಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಅಮೆರಿಕ ಮತ್ತು ಚೀನಾ ನಡುವಿನ ಹೆಚ್ಚುತ್ತಿರುವ ವಾಣಿಜ್ಯ ಸಮರ ಹಾಗೂ ತೈವಾನ್ ವಿಷಯದಲ್ಲಿ ಸೃಷ್ಟಿಯಾಗಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಯು ಜಪಾನ್ ಕಂಪನಿಗಳಿಗೆ ಆತಂಕ ಮೂಡಿಸಿದೆ. ಚೀನಾದ ರಿಯಲ್ ಎಸ್ಟೇಟ್ ವಲಯದ ಕುಸಿತ ಮತ್ತು ಅಲ್ಲಿನ ಆರ್ಥಿಕ ಬೆಳವಣಿಗೆಯ ವೇಗ ತಗ್ಗಿರುವುದು ಹೂಡಿಕೆದಾರರ ವಿಶ್ವಾಸವನ್ನು ಕುಗ್ಗಿಸಿದೆ. ಚೀನಾ ಸರ್ಕಾರವು ಇತ್ತೀಚಿನ ವರ್ಷಗಳಲ್ಲಿ ವಿದೇಶಿ ಕಂಪನಿಗಳ ಮೇಲೆ ಹೇರುತ್ತಿರುವ ಕಟ್ಟುನಿಟ್ಟಿನ ನಿಯಂತ್ರಣಗಳು ಮತ್ತು ನಿಗಾ ವ್ಯವಸ್ಥೆಯು ಜಪಾನ್ ಬ್ಯಾಂಕುಗಳಿಗೆ ಅಲ್ಲಿ ಮುಕ್ತವಾಗಿ ವ್ಯವಹರಿಸಲು ಅಡ್ಡಿಯಾಗಿದೆ.

ಇದನ್ನೂ ಓದಿ: ಭಾರತದ ಸೇವಾ ಕ್ಷೇತ್ರದಲ್ಲಿ ಹೊಸ ಹುರುಪು; ಮೇ ತಿಂಗಳ ಸರ್ವಿಸ್ ಸೆಕ್ಟರ್ ಪಿಎಂಐ 6 ತಿಂಗಳ ಗರಿಷ್ಠ ಮಟ್ಟಕ್ಕೆ

ಭಾರತದ ಕಡೆಗೆ ಜಪಾನಿ ಹೂಡಿಕೆದಾರರು ಆಕರ್ಷಿತರಾಗುತ್ತಿರುವುದೇಕೆ?

ಚೀನಾಕ್ಕೆ ಪರ್ಯಾಯವಾಗಿ ಜಪಾನ್ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತವನ್ನು ಆಯ್ದುಕೊಳ್ಳುತ್ತಿರುವುದರ ಹಿಂದೆಯೂ ಬಲವಾದ ಕಾರಣಗಳಿವೆ. ಭಾರತವು ಪ್ರಸ್ತುತ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ಜಾಗತಿಕ ಮಂದಗತಿಯ ನಡುವೆಯೂ ಭಾರತದ ಜಿಡಿಪಿ (GDP) ಪ್ರಗತಿ ಸ್ಥಿರವಾಗಿದೆ.

ಭಾರತದ ಬೃಹತ್ ಗ್ರಾಹಕ ಮಾರುಕಟ್ಟೆ ಮತ್ತು ದುಡಿಯುವ ವಯಸ್ಸಿನ ಯುವ ಜನಸಂಖ್ಯೆಯು ಜಪಾನ್‌ನ ಉತ್ಪಾದನಾ ಮತ್ತು ಸೇವಾ ವಲಯದ ಕಂಪನಿಗಳಿಗೆ ದೊಡ್ಡ ಅವಕಾಶಗಳನ್ನು ಸೃಷ್ಟಿಸಿದೆ.

ಜಪಾನ್ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ಬಾಂಧವ್ಯವು ಐತಿಹಾಸಿಕವಾಗಿ ಅತ್ಯಂತ ಸುದೃಢವಾಗಿದೆ. ‘ಕ್ವಾಡ್’ (QUAD) ಒಕ್ಕೂಟದ ಮೂಲಕ ಉಭಯ ದೇಶಗಳ ಕಾರ್ಯತಂತ್ರದ ಪಾಲುದಾರಿಕೆ ಇನ್ನಷ್ಟು ಗಟ್ಟಿಯಾಗಿದೆ.

ಭಾರತ ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಯೋಜನೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ನೀಡುತ್ತಿರುವ ಆದ್ಯತೆಯು ಜಪಾನ್ ಹೂಡಿಕೆದಾರರನ್ನು ಸೆಳೆಯುತ್ತಿದೆ.

ಇದನ್ನೂ ಓದಿ: ಫಾರೆಕ್ಸ್​ನ ಚಿನ್ನ ಮಾರಿರುವ ಸುದ್ದಿ ಸುಳ್ಳು ಎಂದ ಸರ್ಕಾರ; ದೇಶದ ಬಂಗಾರದ ದಾಸ್ತಾನು 880.52 ಟನ್‌ಗಳಷ್ಟು ಸುರಕ್ಷಿತವಂತೆ

ಭಾರತದ ಮೇಲಾಗುವ ಸಕಾರಾತ್ಮಕ ಪರಿಣಾಮಗಳು

ಜಪಾನ್‌ನ ಮುಂಚೂಣಿ ಬ್ಯಾಂಕುಗಳಾದ ಮುಫಾಗ್‌ (MUFG), ಮಿತ್ಸುಯಿ ಸುಮಿತೊಮೊ (SMBC) ಮತ್ತು ಮಿಜುಹೊ (Mizuho) ಈಗಾಗಲೇ ಭಾರತದಲ್ಲಿ ತಮ್ಮ ಶಾಖೆಗಳನ್ನು ವಿಸ್ತರಿಸುತ್ತಿದ್ದು, ಭಾರತೀಯ ಸ್ಟಾರ್ಟ್-ಅಪ್‌ಗಳು ಹಾಗೂ ಕಾರ್ಪೊರೇಟ್ ವಲಯಕ್ಕೆ ದೊಡ್ಡ ಮಟ್ಟದ ಸಾಲ ಮತ್ತು ಬಂಡವಾಳವನ್ನು ಒದಗಿಸುತ್ತಿವೆ.

ಜಪಾನ್‌ನ ಈ ‘ಮೌನ ಕ್ರಾಂತಿ’ಯು ಭಾರತದಲ್ಲಿ ಕೇವಲ ಕೈಗಾರಿಕಾ ರಂಗ ಮಾತ್ರವಲ್ಲದೆ, ಹಸಿರು ಇಂಧನ (Green Energy), ತಂತ್ರಜ್ಞಾನ ಮತ್ತು ಡಿಜಿಟಲ್ ಮೂಲಸೌಕರ್ಯ ವಲಯಗಳಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಮತ್ತು ಭಾರತವನ್ನು ಜಾಗತಿಕ ಉತ್ಪಾದನಾ ಹಬ್ ಆಗಿ ಪರಿವರ್ತಿಸಲು ಪ್ರಮುಖ ಪಾತ್ರ ವಹಿಸಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಅತ್ಯಧಿಕ ವೀಕ್ಷಣೆ ಕಂಡ 7 ಪಂದ್ಯಗಳಲ್ಲಿ ಆರ್​ಸಿಬಿಯದ್ದೇ 6 ಪಂದ್ಯಗಳು ..! – Kannada News

2026ರ ಐಪಿಎಲ್​ಗೆ (IPL 2026) ಅದ್ಧೂರಿ ತೆರೆಬಿದ್ದಿದೆ. ಕಳೆದ ಆವೃತ್ತಿಯಂತೆಯೇ ಈ ಆವೃತ್ತಿಯಲ್ಲೂ ಆರ್​ಸಿಬಿ (RCB) ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರಲ್ಲಿ ಒಂದು ವ್ಯತ್ಯಾಸವೆಂದರೆ ಕಳೆದ ಆವೃತ್ತಿಯಲ್ಲಿ ಪಂಜಾಬ್ ತಂಡ ಆರ್​ಸಿಬಿಗೆ ಎದುರಾಳಿಯಾಗಿದ್ದರೆ, ಈ ಆವೃತ್ತಿಯಲ್ಲಿ ಆರ್​ಸಿಬಿಗೆ ಗುಜರಾತ್ ಎದುರಾಳಿಯಾಗಿತ್ತು. ಎದುರಾಳಿ ಬದಲಾದರೂ ಆರ್​ಸಿಬಿಯ ಪ್ರದರ್ಶನ ಮಾತ್ರ ಒಂದೇ ಆಗಿತ್ತು. ಫೈನಲ್ ಪಂದ್ಯದಲ್ಲಿ ಮಾತ್ರವಲ್ಲದೆ ಇಡೀ ಆವೃತ್ತಿಯಲ್ಲಿ ಆರ್​ಸಿಬಿ ಚಾಂಪಿಯನ್ ತಂಡದಂತೆಯೇ ಪ್ರದರ್ಶನ ನೀಡಿತ್ತು. ಹೀಗಾಗಿ ಆರ್​ಸಿಬಿ ತಂಡದ ಪಂದ್ಯಗಳಿಗೆ ಹೆಚ್ಚಿನ ಮನ್ನಣೆ ಇತ್ತು. ಇದಕ್ಕೆ ಪೂರಕವಾಗಿ ಇದೀಗ ಐಪಿಎಲ್​ನ ಅಧಿಕೃತ ಪ್ರಸಾರಕರಾದ ಜಿಯೋಹಾಟ್‌ಸ್ಟಾರ್‌ ಬಿಡುಗಡೆ ಮಾಡಿರುವ ಅತಿ ಹೆಚ್ಚು ವೀಕ್ಷಣೆ ಪಡೆದ 7 ಪಂದ್ಯಗಳ ಪೈಕಿ 6 ಪಂದ್ಯಗಳು ಆರ್​ಸಿಬಿ ತಂಡದ ಪಂದ್ಯಗಳೇ ಇರುವುದು ಆರ್​ಸಿಬಿ ತಂಡಕ್ಕಿರುವ ಜನಪ್ರಿಯತೆಯನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದೆ.

ಆರ್​ಸಿಬಿಯದ್ದೇ 6 ಪಂದ್ಯಗಳು ..!

ಜಿಯೋಹಾಟ್‌ಸ್ಟಾರ್‌ ಬಿಡುಗಡೆ ಮಾಡಿರುವ ಅತಿ ಹೆಚ್ಚು ವೀಕ್ಷಣೆ ಪಡೆದ 7 ಪಂದ್ಯಗಳಲ್ಲಿ ಆರ್​ಸಿಬಿ ಹಾಗೂ ಗುಜರಾತ್ ನಡುವೆ ನಡೆದ ಫೈನಲ್ ಪಂದ್ಯ ಅಗ್ರಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಆರ್​ಸಿಬಿ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯವಿದ್ದರೆ, ಮೂರನೇ ಸ್ಥಾನದಲ್ಲಿ ಆರ್​ಸಿಬಿ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯವಿದೆ. ನಾಲ್ಕನೇ ಸ್ಥಾನದಲ್ಲಿ ಆರ್​ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯವಿದ್ದರೆ, ಐದನೇ ಸ್ಥಾನದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯವಿದೆ.

ಉಳಿದಂತೆ 6ನೇ ಸ್ಥಾನದಲ್ಲಿ ಆರ್​ಸಿಬಿ ಹಾಗೂ ಸಿಎಸ್​ಕೆ ನಡುವಿನ ಪಂದ್ಯವಿದ್ದರೆ, 7ನೇ ಸ್ಥಾನದಲ್ಲಿ ಆರ್​ಸಿಬಿ ಹಾಗೂ ಗುಜರಾತ್ ನಡುವಿನ ಕ್ವಾಲಿಫೈಯರ್ 1 ಪಂದ್ಯವಿದೆ. ಇದರರ್ಥ ಅತಿ ಹೆಚ್ಚು ವೀಕ್ಷಣೆ ಪಡೆದ ಅಗ್ರ 7 ಪಂದ್ಯಗಳಲ್ಲಿ 5ನೇ ಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಕ್ವಾಲಿಫೈಯರ್ 2 ಪಂದ್ಯವನ್ನು ಹೊರತುಪಡಿಸಿದರೆ, ಉಳಿದ 6 ಪಂದ್ಯಗಳಲ್ಲಿ ಆರ್​ಸಿಬಿ ಆಡಿರುವ ಪಂದ್ಯಗಳೇ ಸೇರಿವೆ. ಇನ್ನು ಯಾವ ಪಂದ್ಯ ಎಷ್ಟು ವೀಕ್ಷಣೆಗಳನ್ನು ಪಡೆದುಕೊಂಡಿದೆ ಎಂಬುದನ್ನು ನೋಡುವುದಾದರೆ..

IPL 2026 Final: ಈ ಸಲನೂ ಕಪ್ ನಮ್ದು..! ಸತತ 2ನೇ ಬಾರಿಗೆ ಆರ್​ಸಿಬಿ ಮುಡಿಗೇರಿದ ಐಪಿಎಲ್ ಕಿರೀಟ

ಅತಿ ಹೆಚ್ಚು ವೀಕ್ಷಣೆ ಕಂಡ ಟಾಪ್ 7 ಪಂದ್ಯಗಳು

  • 1. ಆರ್‌ಸಿಬಿ vs ಗುಜರಾತ್ (ಫೈನಲ್) – 520 ಮಿಲಿಯನ್
  • 2. ಆರ್‌ಸಿಬಿ vs ಸನ್‌ರೈಸರ್ಸ್ – (ಲೀಗ್ ಪಂದ್ಯ) 426 ಮಿಲಿಯನ್
  • 3. ಆರ್‌ಸಿಬಿ vs ರಾಜಸ್ಥಾನ್ – (ಲೀಗ್ ಪಂದ್ಯ) 410 ಮಿಲಿಯನ್
  • 4. ಆರ್‌ಸಿಬಿ vs ಮುಂಬೈ ಇಂಡಿಯನ್ಸ್ – (ಲೀಗ್ ಪಂದ್ಯ) 406 ಮಿಲಿಯನ್
  • 5. ಗುಜರಾತ್ vs ರಾಜಸ್ಥಾನ್ (ಕ್ವಾಲಿಫೈಯರ್ 2 ಪಂದ್ಯ) – 366 ಮಿಲಿಯನ್
  • 6. ಆರ್‌ಸಿಬಿ vs ಸಿಎಸ್‌ಕೆ – (ಲೀಗ್ ಪಂದ್ಯ) 355 ಮಿಲಿಯನ್
  • 7. ಆರ್‌ಸಿಬಿ vs ಗುಜರಾತ್ (ಕ್ವಾಲಿಫೈಯರ್ 1 ಪಂದ್ಯ) – 355 ಮಿಲಿಯನ್

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ಆಕಾಂಕ್ಷಿಯಾಗಿದ್ದ ಪರಮೇಶ್ವರ್ ಡಿಸಿಎಂ ಆಗಿ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ – Kannada News

ಬೆಂಗಳೂರು, (ಜೂನ್ 03): ಡಿಕೆ ಶಿವಕುಮಾರ್ (DK Shivakumar) ಅವರು ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು ಬಳಿಕ ಸಿದ್ದರಾಮಯ್ಯನವರ ಸಂಪುಟದಲ್ಲಿ ಗೃಹ ಸಚಿವರಾಗಿದ್ದ ಡಾ ಜಿ ಪರಮೇಶ್ವರ್ (Dr G Parameshwar) ಅವರು ಇದೀಗ ಡಿಕೆ ಶಿವಕುಮಾರ್ ಕ್ಯಾಬಿನೆಟ್​​​ನಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಲೋಕಭವನದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಪರಮೇಶ್ವರ್ ಅವರು ಡಾ, ಬಿಆರ್ ಅಂಬೇಡ್ಕರ್ ಅವರ ಹೆಸರಿನಲ್ಲಿ ಪ್ರಮಾಣವನಚ ಸ್ವೀಕರಿಸಿದರು.

ಇನ್ನು ಒಟ್ಟು 5ಬಾರಿ ಶಾಸಕರಾಗಿ ಆಯ್ಕೆ ಆಗಿರುವ ಡಾ.ಜಿ.ಪರಮೇಶ್ವರ್, 1989ರಲ್ಲಿ ಮಧುಗಿರಿಯಿಂದ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸಿದ್ರು. 1993ರಲ್ಲಿ ಮೊಯ್ಲಿ ಸಂಪುಟದಲ್ಲಿ ರೇಷ್ಮೆ ಸಚಿವರಾಗಿ ಸೇವೆ ಸಲ್ಲಿಸಿದ್ರು. 1999 ಮತ್ತು 2004ರಲ್ಲಿ ಮಧುಗಿರಿಯಲ್ಲಿ ಮತ್ತೆ ಗೆಲುವು ಸಾಧಿಸಿದ್ರು. 2008ರಲ್ಲಿ ಕ್ಷೇತ್ರ ಬದಲಾಯಿಸಿ ಕೊರಟಗೆರೆಯಿಂದ ಸ್ಪರ್ಧಿಸಿದ್ದರು. 2010ರಿಂದ 2018ರವರೆಗೂ KPCC ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಪರಮೇಶ್ವರ್, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಡಿಸಿಎಂ ಆಗಿದ್ರು. ಗೃಹ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ವಿಜ್ಞಾನತಂತ್ರಜ್ಞಾನ ಸಚಿವರಾಗಿ, ಬೆಂಗಳೂರು ಅಭಿವೃದ್ಧಿ ಸಚಿವರಾಗಿಯೂ ಪರಮೇಶ್ವರ್‌ ಸೇವೆ ಸಲ್ಲಿಸಿದ್ದಾರೆ.

Source link

ಧುರಂಧರ್ ಸೋತಿದ್ದರೆ ‘ಡಾನ್ 3’ ಸಿನಿಮಾ ಬಿಡುತ್ತಿರಲಿಲ್ಲ: ಕಡೆಗೂ ಒಪ್ಪಿಕೊಂಡ ರಣವೀರ್ ಸಿಂಗ್ – Kannada News

ಬಾಲಿವುಡ್‌ನ ಬಹುನಿರೀಕ್ಷಿತ ‘ಡಾನ್ 3’ (Don 3) ಚಿತ್ರದಿಂದ ನಟ ರಣವೀರ್ ಸಿಂಗ್ ದಿಢೀರ್ ಹೊರಬಂದಿರುವುದು ಮತ್ತು ನಿರ್ಮಾಪಕ ಫರ್ಹಾನ್ ಅಖ್ತರ್ ಅವರೊಂದಿಗಿನ ವಿವಾದ ಸದ್ಯ ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ನಡೆದ ಸರಣಿ ಸಂಧಾನ ಸಭೆಗಳಲ್ಲಿ ರಣವೀರ್ ಸಿಂಗ್ (Ranveer Singh) ಈ ಪ್ರಾಜೆಕ್ಟ್‌ನಿಂದ ಹೊರಬರಲು ತಮಗಿದ್ದ ಅಸಮಾಧಾನಗಳನ್ನು ಬಿಚ್ಚಿಟ್ಟಿದ್ದಾರೆ ಎಂದು ‘ವೆರೈಟಿ’ ವರದಿ ಮಾಡಿದೆ. ಚಿತ್ರರಂಗದ ಹಿರಿಯರ ಸಮ್ಮುಖದಲ್ಲಿ ನಡೆದ ಈ ರಹಸ್ಯ ಸಭೆ ಹಲವು ವಿಷಯಗಳು ಹೊರಬಂದಿವೆ.

‘ಡಾನ್ 3’ ಚಿತ್ರದ ಫೈನಲ್ ಸ್ಕ್ರಿಪ್ಟ್ ತಮಗೆ ಸಂಪೂರ್ಣ ತೃಪ್ತಿ ನೀಡಿರಲಿಲ್ಲ. ಸಿನಿಮಾ ಶೂಟಿಂಗ್‌ಗೆ ಹೋಗುವ ಹಂತಕ್ಕೆ ಸ್ಕ್ರಿಪ್ಟ್ ಸಿದ್ಧವಾಗಿರಲಿಲ್ಲ ಎಂದು ರಣವೀರ್ ಹೇಳಿದ್ದಾರೆ. ಫರ್ಹಾನ್ ಅಖ್ತರ್ ಅವರು ಬೇರೆ ಪ್ರಾಜೆಕ್ಟ್‌ಗಳು ಹಾಗೂ ಮ್ಯೂಸಿಕ್ ಕನ್ಸರ್ಟ್‌ಗಳಲ್ಲಿ ಬ್ಯುಸಿಯಾಗಿದ್ದರಿಂದ ಚಿತ್ರಕ್ಕೆ ಸರಿಯಾಗಿ ಸಮಯ ನೀಡುತ್ತಿರಲಿಲ್ಲ ಎಂದು ರಣವೀರ್ ಆರೋಪಿಸಿದ್ದಾರೆ.

ಆರಂಭದಲ್ಲಿ ಚಿತ್ರಕ್ಕೆ 300ರಿಂದ 350 ಕೋಟಿ ರೂ. ಬಜೆಟ್ ಎಂದು ಚರ್ಚಿಸಲಾಗಿತ್ತು. ಆದರೆ ನಂತರ ಅದನ್ನು ಕೇವಲ 150 ಕೋಟಿ ರೂ.ಗೆ ಇಳಿಸಲಾಯಿತು ಎಂಬುದು ರಣವೀರ್ ವಾದ. ಬಜೆಟ್ ಕಮ್ಮಿ ಮಾಡಿದ ಬೆನ್ನಲ್ಲೇ ತಮ್ಮ ಸಂಭಾವನೆಯನ್ನೂ ಕಡಿತಗೊಳಿಸಲಾಯಿತು ಮತ್ತು ತಮಗೆ ಯಾವುದೇ ಅಡ್ವಾನ್ಸ್ ಅಥವಾ ಸೈನಿಂಗ್ ಅಮೌಂಟ್ ಸಿಕ್ಕಿರಲಿಲ್ಲ ಎಂದು ನಟ ಹೇಳಿಕೊಂಡಿದ್ದಾರೆ.

ರಣವೀರ್ ಸಿಂಗ್ ಅವರ ಈ ಆರೋಪಗಳಿಗೆ ನಿರ್ಮಾಪಕರಾದ ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿಧ್ವಾನಿ ತಿರುಗೇಟು ನೀಡಿದ್ದಾರೆ. ರಣವೀರ್ ಸಿಂಗ್ ಈ ಹಿಂದೆ ಸ್ಕ್ರಿಪ್ಟ್ ಕೇಳಿ ಖುಷಿಪಟ್ಟಿದ್ದ ಹಳೆಯ ವಾಟ್ಸಾಪ್ ಚಾಟ್‌ಗಳನ್ನು ಸಭೆಯಲ್ಲಿ ನಿರ್ಮಾಪಕರು ಪ್ರದರ್ಶಿಸಿದ್ದಾರೆ. ಅಷ್ಟೇ ಅಲ್ಲದೆ, ಒಪ್ಪಂದವಾದ ಮೇಲೆ ಸಂಭಾವನೆ ಕಡಿತ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ‘ಡಾನ್ 3’ ವಿವಾದ: ಚಿತ್ರರಂಗದಿಂದ ಬ್ಯಾನ್ ಆದ ಬಳಿಕ ಮೌನ ಮುರಿದ ರಣವೀರ್ ಸಿಂಗ್‌

ಸಭೆಯಲ್ಲಿ ನಿರ್ಮಾಪಕ ರಿತೇಶ್ ಸಿಧ್ವಾನಿ ಅವರು ರಣವೀರ್‌ಗೆ ನೇರ ಪ್ರಶ್ನೆಯೊಂದನ್ನು ಕೇಳಿದ್ದರು. ‘ಒಂದು ವೇಳೆ ನಿಮ್ಮ ‘ಧುರಂಧರ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗದೇ ಇದ್ದಿದ್ದರೆ ನೀವು ‘ಡಾನ್ 3’ ಬಿಟ್ಟು ಹೋಗುತ್ತಿದ್ದಿರಾ?’ ಎಂದು ಕೇಳಿದ್ದಕ್ಕೆ, ರಣವೀರ್ ಸಿಂಗ್ ‘ಇಲ್ಲ, ಆಗ ನಾನು ಸಿನಿಮಾ ಬಿಡುತ್ತಿರಲಿಲ್ಲ’ ಎಂದು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಪ್ರೀ-ಪ್ರೊಡಕ್ಷನ್ ಹಂತದಲ್ಲಿ ತಮಗಾದ ನಷ್ಟಕ್ಕಾಗಿ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯು ರಣವೀರ್ ಸಿಂಗ್ ಅವರಿಂದ 45 ಕೋಟಿ ರೂ. ಪರಿಹಾರ ಕೇಳಿದೆ. ಆದರೆ ರಣವೀರ್ ಸಿಂಗ್ ತಕ್ಷಣವೇ 10 ಕೋಟಿ ರೂ. ನೀಡಿ ಸೆಟಲ್ ಮಾಡಲು ಮುಂದಾಗಿದ್ದಾರೆ. ಜೊತೆಗೆ ಮುಂದಿನ ಸಿನಿಮಾಗಳಿಗೆ ತಮ್ಮ ಸಂಭಾವನೆಯಲ್ಲಿ ಶೇಕಡ 25ರಷ್ಟು ರಿಯಾಯಿತಿ ನೀಡುವುದಾಗಿ ಆಫರ್ ಕೊಟ್ಟಿದ್ದಾರೆ. ಆದರೆ ‘ಇನ್ಮುಂದೆ ನಿಮ್ಮ ಜೊತೆ ಸಿನಿಮಾ ಮಾಡುವ ಯೋಚನೆಯೇ ನಮಗಿಲ್ಲ. ಹಾಗಾಗಿ ನಿಮ್ಮ ಡಿಸ್ಕೌಂಟ್ ನಮಗೆ ಬೇಡ’ ಎಂದು ಫರ್ಹಾನ್ ಅಖ್ತರ್ ಈ ಆಫರ್ ಅನ್ನು ರಿಜೆಕ್ಟ್ ಮಾಡಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆ ಶಿವಕುಮಾರ್!

ಬೆಂಗಳೂರು, ಜೂನ್ 03):  ಡಿ ಕೆ. ಶಿವಕುಮಾರ್ (DK Shivakumar) ಅವರು ಕೈಯಲ್ಲಿ ಸಂವಿಧಾನ ಹಿಡಿದುಕೊಂಡು ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಲೋಕಭವನದಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಡಿಕೆ ಶಿವಕುಮಾರ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಇನ್ನು ಡಿಕೆ ಶಿವಕುಮಾರ್ ಅವರು ವೀರ ಗಂಗಾಧರ ಅಜ್ಜಯ್ಯ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದರು. ವಿಶೇಷ ಅಂದ್ರೆ ಡಿಕೆಶಿ ರೇಷ್ಮೆ ಪಂಚೆ, ಜುಬ್ಬ, ಶಲ್ಯ ಧರಿಸಿ ಸಾಂಪ್ರದಾಯಿಕ ಉಡುಗೆ ತೊಟ್ಟು ಗಮನಸೆಳೆದ ಡಿಕೆಶಿ, ಪ್ರಮಾಣ ವಚನ ಸ್ವೀಕರಿಸುವ ಮೊದಲು ವೇದಿಕೆಯಲ್ಲಿ ದೀರ್ಘದಂಡ ನಾಮಸ್ಕಾರ ಮಾಡಿದರು. ಬಳಿಕ ಬಳಿಕ ವೇದಿಕೆ ಮೇಲೆಯೇ ಇರಿಸಿದ್ದ ಅಜ್ಜಯ್ಯನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಬಳಿಕ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು.

ಇದನ್ನೂ ಓದಿ: CM DK Shivakumar: ಡಿ.ಕೆ. ಶಿವಕುಮಾರ್​ ಎಂಬ ಹೆಸರಿನವನಾದ ನಾನು…, ಕರ್ನಾಟಕದ 25ನೇ ಸಿಎಂ ಆಗಿ ಡಿಕೆಶಿ ಪ್ರಮಾಣವಚನ

Source link

Vastu for Tulsi Plant: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ತುಳಸಿ ಇಡಬೇಡಿ! – Kannada News

ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ತುಳಸಿ ಇಡಬೇಡಿ! Image Credit source: Pinterest

ವಾಸ್ತು ಶಾಸ್ತ್ರದ ಪ್ರಕಾರ, ತುಳಸಿ ಗಿಡವನ್ನು ಇರಿಸಲು ಈಶಾನ್ಯ (North-East) ಅಥವಾ ಪೂರ್ವ (East) ದಿಕ್ಕನ್ನು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಈಶಾನ್ಯವನ್ನು ದೇವ ಮೂಲೆ ಎಂದು ಕರೆಯಲಾಗುವುದರಿಂದ, ಇಲ್ಲಿ ತುಳಸಿ ಇಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ. ಜೊತೆಗೆ, ವೈಜ್ಞಾನಿಕವಾಗಿಯೂ ಈ ದಿಕ್ಕುಗಳಲ್ಲಿ ಸಸ್ಯಕ್ಕೆ ಅಗತ್ಯವಿರುವ ಸಮೃದ್ಧ ಸೂರ್ಯನ ಬೆಳಕು ಸಿಗುವುದರಿಂದ ಗಿಡವು ಆರೋಗ್ಯಕರವಾಗಿ ಬೆಳೆಯುತ್ತದೆ. ಇದು ಕುಟುಂಬಕ್ಕೆ ಆರೋಗ್ಯ ಮತ್ತು ಐಶ್ವರ್ಯವನ್ನು ತರುತ್ತದೆ ಎಂಬ ನಂಬಿಕೆಯಿದೆ.

ದಕ್ಷಿಣ ದಿಕ್ಕಿನಲ್ಲಿ ತುಳಸಿ ಇಟ್ಟರೆ ಏನಾಗುತ್ತದೆ?

ಸಾಮಾನ್ಯವಾಗಿ ವಾಸ್ತು ಶಾಸ್ತ್ರದಲ್ಲಿ ದಕ್ಷಿಣ (South) ದಿಕ್ಕಿನಲ್ಲಿ ತುಳಸಿ ಗಿಡವನ್ನು ಇಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ದಿಕ್ಕನ್ನು ಯಮರಾಜನ (ಸಾವಿನ ದೇವತೆ) ಮತ್ತು ಪಿತೃಗಳ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ದಕ್ಷಿಣದಲ್ಲಿ ಪವಿತ್ರವಾದ ತುಳಸಿಯನ್ನು ಇಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಬಹುದು ಮತ್ತು ಆರ್ಥಿಕ ನಷ್ಟ ಎದುರಾಗಬಹುದು ಎಂಬ ನಂಬಿಕೆಯಿದೆ. ಆದಾಗ್ಯೂ, ವಾಸ್ತು ತಜ್ಞರ ಪ್ರಕಾರ ಇದಕ್ಕಾಗಿ ಅತಿಯಾಗಿ ಭಯಪಡುವ ಅಗತ್ಯವಿಲ್ಲ. ಒಂದು ವೇಳೆ ಬೇರೆ ಯಾವುದೇ ದಿಕ್ಕಿನ ಲಭ್ಯತೆ ಇಲ್ಲದಿದ್ದರೆ, ಮನೆಯ ವಿನ್ಯಾಸಕ್ಕೆ ತಕ್ಕಂತೆ ಕೆಲವು ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳಬಹುದು.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ಅಪಾರ್ಟ್‌ಮೆಂಟ್‌ಗಳಲ್ಲಿ ಸ್ಥಳಾವಕಾಶದ ಕೊರತೆ ಇದ್ದರೆ ಏನು ಮಾಡಬೇಕು?

ಇಂದಿನ ಆಧುನಿಕ ಅಪಾರ್ಟ್‌ಮೆಂಟ್ ಮತ್ತು ಫ್ಲಾಟ್‌ಗಳಲ್ಲಿ ವಾಸ್ತು ಪ್ರಕಾರವೇ ದಿಕ್ಕುಗಳನ್ನು ಆಯ್ಕೆ ಮಾಡುವುದು ದೊಡ್ಡ ಸವಾಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ದಿಕ್ಕಿಗಿಂತ ಹೆಚ್ಚಾಗಿ ಗಿಡದ ಆರೋಗ್ಯಕ್ಕೆ ಆದ್ಯತೆ ನೀಡಬೇಕು. ಮನೆಯ ಬಾಲ್ಕನಿ ಅಥವಾ ಕಿಟಕಿಯ ಬಳಿ ಎಲ್ಲಿ ಕನಿಷ್ಠ 4-5 ಗಂಟೆಗಳ ಕಾಲ ಉತ್ತಮ ಸೂರ್ಯನ ಬೆಳಕು ಮತ್ತು ಶುದ್ಧ ಗಾಳಿ ಸಿಗುತ್ತದೆಯೋ ಅಲ್ಲಿ ತುಳಸಿಯನ್ನು ಇಡಬಹುದು. ತುಳಸಿ ಗಿಡದ ಸುತ್ತಮುತ್ತಲಿನ ಜಾಗ ಸದಾ ಸ್ವಚ್ಛವಾಗಿರುವಂತೆ ನೋಡಿಕೊಳ್ಳುವುದು ಅತ್ಯಂತ ಮುಖ್ಯ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಕೆಚಪ್ ಬದಲು ಕೆಪಚ್ ಎಂದು ವಾದಿಸಿದ ಪುಟಾಣಿ, ವೈರಲ್ ಆಯ್ತು ದೃಶ್ಯ

ಮನೆಯಲ್ಲಿ ಪುಟ್ಟ ಮಕ್ಕಳಿದ್ದು (little kids) ಬಿಟ್ಟರೆ ಎಲ್ಲಾ ನೋವುಗಳನ್ನು ಈ ಕಂದಮ್ಮಗಳ ಆಟ ತುಂಟಾಟವನ್ನು ನೋಡಿ ಮರೆಯುತ್ತಾರೆ. ಈ ಪುಟಾಣಿಗಳ ತೊದಲು ನುಡಿಯನ್ನು ಆಲಿಸುವುದು ಇನ್ನು ಚೆನ್ನ. ಹೀಗಾಗಿ ಮಕ್ಕಳ ತೊದಲು ನುಡಿಗಳನ್ನು ಕೇಳಲು ಎಲ್ಲರೂ ಇಷ್ಟ ಪಡ್ತಾರೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಪುಟಾಣಿಯೊಂದು ಕೆಚಪ್ ಎನ್ನುವ ಬದಲು ಕೆಪಚ್ ಎಂದು ಮುದ್ದಾಗಿ ಹೇಳಿದೆ. ಈ ಪುಟಾಣಿ ಕ್ಯೂಟ್ ರಿಯಾಕ್ಷನ್ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.

myrumoments ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಕ್ಲಿಪಿಂಗ್‌ನಲ್ಲಿ ಪುಟಾಣಿಯ ತೊದಲು ನುಡಿಯನ್ನು ನೋಡಬಹುದು. ಈ ವಿಡಿಯೋದಲ್ಲಿ ತಾಯಿಯೂ ಕೈಯಲ್ಲಿ ಕೆಚಪ್ ಪ್ಯಾಕೆಟ್‌ ತೋರಿಸಿ ಇದೇನು ಎಂದು ಕೇಳಿದ್ದಾಳೆ. ಪುಟಾಣಿಯೂ ಕೆಪಚ್ ಎಂದು ಮುದ್ದಾಗಿ ಹೇಳಿರುವುದನ್ನು ನೋಡಬಹುದು. ತಾಯಿ ಪುಟ್ಟ ಕಂದಮ್ಮನ ತಪ್ಪನ್ನು ತಿದ್ದುತ್ತಾ ಕೆಪಚ್ ಅಲ್ಲ, ಕೆಚಪ್ ಎಂದಿದ್ದಾಳೆ. ಆದರೆ ಪುಟ್ಟ ಹುಡುಗಿ ಮತ್ತೆ ಕೆಪಚ್ ಎಂದು ಪುನರ್ವತಿಸಿದೆ. ಮುದ್ದು ಕಂದಮ್ಮನ ಮಾತನ್ನು ಕೇಳಿ ತಾಯಿ ಜೋರಾಗಿ ನಕ್ಕಿರುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ತನ್ನ ಕಾಲನ್ನು ತಾನೇ ಸ್ಪರ್ಶಿಸಿ ನಮಸ್ಕರಿಸಿಕೊಂಡ ಪುಟಾಣಿ

ಈ ವಿಡಿಯೋ ಒಂದು ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಅವಳು ಹೇಳುವುದು ಸರಿಯೇ ಇದೆ. ನಿಮಗೆ ಏನು ಗೊತ್ತಿಲ್ಲ ಎಂದಿದ್ದಾರೆ. ಇನ್ನೊಬ್ಬರು, ಎಷ್ಟು ಮುದ್ದಾಗಿ ಕೆಪಚ್ ಎಂದು ಹೇಳುತ್ತಿದೆ ಎಂದು ಕಾಮೆಂಟ್ ನಲ್ಲಿ ಹೇಳಿದ್ದಾರೆ. ಮತ್ತೊಬ್ಬರು, ನಾನು ಆ ಪುಟಾಣಿ ಹೇಳುವುದನ್ನು ಒಪ್ಪುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಕೌಶಲ್ಯದ ಆಟವಾದರೂ ಬೆಟ್ಟಿಂಗ್ ಇದ್ದರೆ ಸಾಂವಿಧಾನಿಕ ರಕ್ಷಣೆ ಇಲ್ಲ; ಕರ್ನಾಟಕದ ಕಾನೂನು ಎತ್ತಿಹಿಡಿದ ಸುಪ್ರೀಂಕೋರ್ಟ್ – Kannada News

ನವದೆಹಲಿ, ಜೂನ್ 3: ಆನ್‌ಲೈನ್ ಗೇಮಿಂಗ್ ಮತ್ತು ಜೂಜಾಟದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ನಿಂದ ಭಾರಿ ಜಯ ಸಿಕ್ಕಿದೆ. ಹಣ ಅಥವಾ ಪಣವನ್ನು ಒಡ್ಡಿ ಆಡುವ (with stakes) ಆನ್‌ಲೈನ್ ಕೌಶಲ್ಯದ ಆಟಗಳ (Games of Skill) ಮೇಲಿನ ಬೆಟ್ಟಿಂಗ್‌ಗೆ ಯಾವುದೇ ಸಾಂವಿಧಾನಿಕ ರಕ್ಷಣೆ ಇಲ್ಲ ಎಂದು ಸುಪ್ರೀಂ ಕೋರ್ಟ್ (Supreme Court) ಐತಿಹಾಸಿಕ ತೀರ್ಪು ನೀಡಿದೆ. ಇದರೊಂದಿಗೆ, ಆನ್‌ಲೈನ್ ಜೂಜಾಟ ಮತ್ತು ಬೆಟ್ಟಿಂಗ್ ಅನ್ನು ನಿಷೇಧಿಸುವ ಕರ್ನಾಟಕ ಮತ್ತು ತಮಿಳುನಾಡು ರಾಜ್ಯ ಸರ್ಕಾರಗಳ ಕಾನೂನುಗಳ ಸಿಂಧುತ್ವವನ್ನು ದೇಶದ ಅತ್ಯುನ್ನತ ನ್ಯಾಯಾಲಯವು ಎತ್ತಿಹಿಡಿದಿದೆ.

ಸುಪ್ರೀಂ ಕೋರ್ಟ್ ತೀರ್ಪಿನ ಪ್ರಮುಖ ಅಂಶಗಳು

ಹೈಕೋರ್ಟ್‌ಗಳ ಈ ಹಿಂದಿನ ಆದೇಶಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಮಹತ್ವದ ತೀರ್ಪನ್ನು ಪ್ರಕಟಿಸಿದೆ:

  • ಟ್ರೇಡ್ ರೈಟ್ಸ್ ಅನ್ವಯಿಸುವುದಿಲ್ಲ: ಸಂವಿಧಾನದ ವಿಧಿ 19(1)(g) ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ತನಗಿಷ್ಟ ಬಂದ ವ್ಯಾಪಾರ ಅಥವಾ ವೃತ್ತಿ ಮಾಡುವ ಸ್ವಾತಂತ್ರ್ಯವಿದೆ. ಆದರೆ, ಹಣವನ್ನು ಪಣಕ್ಕಿಟ್ಟು ಆಡುವ ಜೂಜಾಟ ಅಥವಾ ಬೆಟ್ಟಿಂಗ್ ಪ್ರಕ್ರಿಯೆಯು ಈ ‘ಮೂಲಭೂತ ವ್ಯಾಪಾರದ ಹಕ್ಕಿನ’ ಅಡಿಯಲ್ಲಿ ಬರುವುದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
  • ಕೌಶಲ್ಯದ ಆಟಗಳಿಗೂ ನಿಯಮ ಅನ್ವಯ: ಆಟವು ಕೌಶಲ್ಯ ಆಧಾರಿತವಾಗಿದ್ದರೂ (ಉದಾಹರಣೆಗೆ ರಮ್ಮಿ, ಪೋಕರ್ ಅಥವಾ ಫ್ಯಾಂಟಸಿ ಗೇಮ್ಸ್), ಅದರಲ್ಲಿ ಹಣವನ್ನು ಪಣಕ್ಕಿಟ್ಟು ಬಾಜಿ ಕಟ್ಟಿದಾಗ ಅದು ಜೂಜಿನ ಸ್ವರೂಪ ಪಡೆದುಕೊಳ್ಳುತ್ತದೆ. ಅಂತಹ ವ್ಯವಹಾರಗಳಿಗೆ ಕಾನೂನಿನ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.
  • ರಾಜ್ಯ ಸರ್ಕಾರಗಳಿಗೆ ಸಂಪೂರ್ಣ ಅಧಿಕಾರ: ಸಾರ್ವಜನಿಕ ಸುವ್ಯವಸ್ಥೆ, ಯುವಜನರ ಹಿತರಕ್ಷಣೆ ಮತ್ತು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಆನ್‌ಲೈನ್ ಬೆಟ್ಟಿಂಗ್ ಆಟಗಳನ್ನು ನಿಷೇಧಿಸುವ ಅಥವಾ ನಿಯಂತ್ರಿಸುವ ಸಂಪೂರ್ಣ ಕಾನೂನು ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಭಾರತದ ಸೇವಾ ಕ್ಷೇತ್ರದಲ್ಲಿ ಹೊಸ ಹುರುಪು; ಮೇ ತಿಂಗಳ ಸರ್ವಿಸ್ ಸೆಕ್ಟರ್ ಪಿಎಂಐ 6 ತಿಂಗಳ ಗರಿಷ್ಠ ಮಟ್ಟಕ್ಕೆ

ಏನಿದು ‘ಗೇಮ್ ಆಫ್ ಸ್ಕಿಲ್’ (Game of Skill)?

ಯಾವ ಆಟಗಳಲ್ಲಿ ಗೆಲುವು ಅಥವಾ ಸೋಲು ಕೇವಲ ಅದೃಷ್ಟದ ಮೇಲೆ ನಿರ್ಧಾರವಾಗದೆ, ಆಟಗಾರನ ವೈಯಕ್ತಿಕ ಸಾಮರ್ಥ್ಯದ ಮೇಲೆ ನಿರ್ಧಾರವಾಗುತ್ತದೆಯೋ ಅದನ್ನು ‘ಗೇಮ್ ಆಫ್ ಸ್ಕಿಲ್’ (ಕೌಶಲ್ಯದ ಆಟ) ಎನ್ನಲಾಗುತ್ತದೆ.

ಇದರಲ್ಲಿ ಆಟಗಾರನ ಬೌದ್ಧಿಕ ಶಕ್ತಿ, ತರಬೇತಿ, ಅನುಭವ, ಆಟದ ತಂತ್ರ, ಗಮನ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಅತ್ಯಂತ ಮುಖ್ಯವಾಗಿರುತ್ತದೆ. ಉದಾಹರಣೆಗೆ, ರಮ್ಮಿ, ಪೋಕರ್, ಚೆಸ್ ಅಥವಾ ಕೆಲವು ಮಾದರಿಯ ಫ್ಯಾಂಟಸಿ ಸ್ಪೋರ್ಟ್ಸ್ ಆಟಗಳು.

ಲಾಟರಿ ಅಥವಾ ಕಾಯಿನ್ ಟಾಸ್‌ನಂತಹ ಆಟಗಳು ಕೇವಲ ಅದೃಷ್ಟವನ್ನು ನಂಬಿರುತ್ತವೆ (Game of Chance). ಆದರೆ ಕೌಶಲ್ಯದ ಆಟಗಳಲ್ಲಿ ಅದೃಷ್ಟಕ್ಕಿಂತ ಆಟಗಾರನ ಬುದ್ಧಿವಂತಿಕೆಗೆ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ.

ಕರ್ನಾಟಕ ಈ ಕಾನೂನನ್ನು ಪಾಸ್ ಮಾಡಿದ್ದು ಯಾವಾಗ?

ಆನ್‌ಲೈನ್ ಜೂಜಾಟದ ದಾಸರಾಗಿ ರಾಜ್ಯದ ಯುವ ಪೀಳಿಗೆ ಹಾದಿ ತಪ್ಪುತ್ತಿರುವುದನ್ನು ಮನಗಂಡಿದ್ದ ಕರ್ನಾಟಕ ಸರ್ಕಾರ, 2021ರ ಸೆಪ್ಟೆಂಬರ್ ತಿಂಗಳಲ್ಲಿ ವಿಧಾನಮಂಡಲದಲ್ಲಿ ‘ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯ್ದೆ, 2021’ ಅನ್ನು ಅಂಗೀಕರಿಸಿತ್ತು.

ಈ ಕಾನೂನಿನ ಪ್ರಕಾರ, ಕರ್ನಾಟಕದಲ್ಲಿ ಹಣ ಅಥವಾ ಯಾವುದೇ ಮೌಲ್ಯಯುತ ವಸ್ತುವನ್ನು ಪಣಕ್ಕಿಟ್ಟು ಆಡುವ ಎಲ್ಲಾ ರೀತಿಯ ಆನ್‌ಲೈನ್ ಗೇಮ್‌ಗಳು, ಜೂಜಾಟಗಳು ಮತ್ತು ಬೆಟ್ಟಿಂಗ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ತಪ್ಪು ಮಾಡಿದವರಿಗೆ ದಂಡ ಮತ್ತು ಜೈಲು ಶಿಕ್ಷೆಯ ಪ್ರಾವಿಧಾನವನ್ನೂ ಮಾಡಲಾಗಿತ್ತು.

ಇದನ್ನೂ ಓದಿ: ಫಾರೆಕ್ಸ್​ನ ಚಿನ್ನ ಮಾರಿರುವ ಸುದ್ದಿ ಸುಳ್ಳು ಎಂದ ಸರ್ಕಾರ; ದೇಶದ ಬಂಗಾರದ ದಾಸ್ತಾನು 880.52 ಟನ್‌ಗಳಷ್ಟು ಸುರಕ್ಷಿತವಂತೆ

ಹೈಕೋರ್ಟ್ ನೀಡಿದ್ದ ಆಘಾತ: ಆದರೆ, ಈ ಕಾನೂನನ್ನು ಪ್ರಶ್ನಿಸಿ ‘ಆನ್‌ಲೈನ್ ಗೇಮಿಂಗ್ ಫೆಡರೇಶನ್’ ಮತ್ತು ವಿವಿಧ ಗೇಮಿಂಗ್ ಕಂಪನಿಗಳು ಕೋರ್ಟ್ ಮೆಟ್ಟಿಲೇರಿದ್ದವು. ಅರ್ಜಿ ವಿಚಾರಣೆ ನಡೆಸಿದ್ದ ಧಾರವಾಡ ಮತ್ತು ಬೆಂಗಳೂರು ಪೀಠಗಳನ್ನೊಳಗೊಂಡ ಕರ್ನಾಟಕ ಹೈಕೋರ್ಟ್, 2022ರ ಫೆಬ್ರವರಿಯಲ್ಲಿ ಸರ್ಕಾರದ ಈ ತಿದ್ದುಪಡಿ ಕಾಯ್ದೆಯ ಪ್ರಮುಖ ನಿಯಮಗಳನ್ನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು. “ಕೌಶಲ್ಯದ ಆಟಗಳನ್ನು ಜೂಜಿನ ವ್ಯಾಪ್ತಿಗೆ ತಂದು ಸಂಪೂರ್ಣ ನಿಷೇಧಿಸುವುದು ಸಂವಿಧಾನ ಬಾಹಿರ” ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.

ಈಗ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಬದಿಗೆ ಸರಿಸಿ, ರಾಜ್ಯಗಳ ಕಟ್ಟುನಿಟ್ಟಿನ ನಿಷೇಧದ ಕಾನೂನುಗಳನ್ನು ಎತ್ತಿಹಿಡಿದಿರುವುದರಿಂದ ಆನ್‌ಲೈನ್ ಗೇಮಿಂಗ್ ಕಂಪನಿಗಳಿಗೆ ಭಾರಿ ಆಘಾತ ಎದುರಾಗಿದೆ.

ಸಮಾಜದ ಮೇಲಾಗುವ ಪರಿಣಾಮಗಳೇನು?

ಇತ್ತೀಚಿನ ವರ್ಷಗಳಲ್ಲಿ ಆನ್‌ಲೈನ್ ಗೇಮಿಂಗ್ ಆ್ಯಪ್‌ಗಳಲ್ಲಿ ಹಣ ಕಳೆದುಕೊಂಡು ಯುವಕರು ಮತ್ತು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ದೇಶಾದ್ಯಂತ ತೀವ್ರವಾಗಿ ಹೆಚ್ಚಾಗಿದ್ದವು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಈ ತೀರ್ಪು ಅತ್ಯಂತ ಮಹತ್ವದ್ದಾಗಿದೆ. ಇದು ರಾಜ್ಯ ಸರ್ಕಾರಗಳಿಗೆ ತಮ್ಮ ರಾಜ್ಯದ ಗಡಿಯೊಳಗೆ ಸಾರ್ವಜನಿಕ ಹಿತದೃಷ್ಟಿಯಿಂದ ಇಂತಹ ಆ್ಯಪ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಮತ್ತು ಯುವ ಪೀಳಿಗೆಯನ್ನು ಆನ್‌ಲೈನ್ ಜೂಜಿನ ದಾಸರಾಗದಂತೆ ತಡೆಯಲು ಕಾನೂನಾತ್ಮಕವಾಗಿ ದೊಡ್ಡ ಶಕ್ತಿಯನ್ನು ನೀಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಭಾರತ-ಬಾಂಗ್ಲಾ ಗಡಿ ಬೇಲಿ ನಿರ್ಮಾಣಕ್ಕೆ ಪಶ್ಚಿಮ ಬಂಗಾಳದಿಂದ ಬಿಎಸ್‌ಎಫ್‌ಗೆ 31 ಎಕರೆ ಹಸ್ತಾಂತರ – Kannada News

ಕೊಲ್ಕತ್ತಾ, ಜೂನ್ 3: ಭಾರತ ಮತ್ತು ಬಾಂಗ್ಲಾದೇಶದ ಗಡಿಯಲ್ಲಿ (Bangladesh Border) ಅಕ್ರಮ ನುಸುಳುವಿಕೆ ಮತ್ತು ಕಳ್ಳಸಾಗಣೆಗೆ ಶಾಶ್ವತವಾಗಿ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಹಾಗೂ ಪಶ್ಚಿಮ ಬಂಗಾಳ ಸರ್ಕಾರಗಳು ಮಹತ್ವದ ಹೆಜ್ಜೆ ಇಟ್ಟಿವೆ. ಗಡಿ ಭಾಗದಲ್ಲಿ ಬಾಕಿ ಉಳಿದಿರುವ ಬೇಲಿ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲು ಪಶ್ಚಿಮ ಬಂಗಾಳ ಸರ್ಕಾರವು ಬರೋಬ್ಬರಿ 31 ಎಕರೆ ಭೂಮಿಯನ್ನು ಗಡಿ ಭದ್ರತಾ ಪಡೆಗೆ (BSF) ಹಸ್ತಾಂತರಿಸಿದೆ.

ದಾಖಲೆಗಳಿಲ್ಲದ ಬಾಂಗ್ಲಾದೇಶಿ ವಲಸಿಗರ ವಿರುದ್ಧ ದೇಶಾದ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುತ್ತಿರುವ ಬೆನ್ನಲ್ಲೇ ಅಂತಾರಾಷ್ಟ್ರೀಯ ಗಡಿಯನ್ನು ಮತ್ತಷ್ಟು ಭದ್ರಪಡಿಸಲು ಈ ಭೂಮಿಯನ್ನು ನೀಡಲಾಗಿದೆ.

ಇದನ್ನೂ ಓದಿ: ಅಹಮದಾಬಾದ್‌ನಲ್ಲಿ ಅಕ್ರಮವಾಗಿ ನೆಲೆಸಿದ್ದ 166 ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧನ

ಅಂತಾರಾಷ್ಟ್ರೀಯ ಗಡಿಯಲ್ಲಿ ಕಾವಲು ಬಲಪಡಿಸುವ ಮತ್ತು ನುಸುಳುವಿಕೆಯನ್ನು ಸಂಪೂರ್ಣವಾಗಿ ತಡೆಯುವ ಉದ್ದೇಶದಿಂದ, ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಮತ್ತು ನದಿಯಾ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ 31 ಎಕರೆ ಭೂಮಿಯನ್ನು ಗಡಿ ಬೇಲಿ ಯೋಜನೆಗಾಗಿ ಬಿಎಸ್‌ಎಫ್‌ಗೆ ಅಧಿಕೃತವಾಗಿ ಹಸ್ತಾಂತರಿಸಲಾಗಿದೆ. ಭೂಸ್ವಾಧೀನ ಪ್ರಕ್ರಿಯೆಯಲ್ಲಿದ್ದ ದೀರ್ಘಕಾಲದ ಗೊಂದಲಗಳನ್ನು ಬಗೆಹರಿಸಿ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಭಾರತ ಮತ್ತು ಬಾಂಗ್ಲಾದೇಶದ ನಡುವೆ ಪಶ್ಚಿಮ ಬಂಗಾಳವು ಅತಿ ಉದ್ದದ ಗಡಿಯನ್ನು ಹಂಚಿಕೊಂಡಿದೆ. ಆದರೆ, ಕೆಲವು ಕಡೆಗಳಲ್ಲಿ ಭೂಮಿ ಲಭ್ಯವಿಲ್ಲದ ಕಾರಣ ಗಡಿ ಬೇಲಿ ನಿರ್ಮಾಣ ಕಾರ್ಯ ಅಪೂರ್ಣವಾಗಿ ಉಳಿದಿತ್ತು. ಬೇಲಿ ಇಲ್ಲದ ಮುಕ್ತ ಗಡಿ ಪ್ರದೇಶಗಳನ್ನು ಬಳಸಿಕೊಂಡು ಬಾಂಗ್ಲಾದೇಶದ ಪ್ರಜೆಗಳು ಅಕ್ರಮವಾಗಿ ಭಾರತದೊಳಗೆ ನುಸುಳುತ್ತಿದ್ದರು. ಅಲ್ಲದೆ ಜಾನುವಾರು ಮತ್ತು ಮಾದಕ ದ್ರವ್ಯಗಳ ಕಳ್ಳಸಾಗಣೆ ದೊಡ್ಡ ಸವಾಲಾಗಿತ್ತು. ಈಗ ಬೇಲಿ ನಿರ್ಮಾಣದಿಂದ ಇದಕ್ಕೆ ಮುಕ್ತಿ ಸಿಗಲಿದೆ.

ಇದನ್ನೂ ಓದಿ: ಭಾರತ-ನೇಪಾಳ ಗಡಿ ವಿಷಯದಲ್ಲಿ ಮೂರನೇ ದೇಶದ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ; ಭಾರತದ ಖಡಕ್ ಸಂದೇಶ

ಸಾಮಾನ್ಯವಾಗಿ ಗಡಿ ವಿಚಾರಗಳಲ್ಲಿ ಕೇಂದ್ರ ಸರ್ಕಾರ ಮತ್ತು ಪಶ್ಚಿಮ ಬಂಗಾಳ ಸರ್ಕಾರದ ನಡುವೆ ಭಿನ್ನಾಭಿಪ್ರಾಯಗಳು ಕೇಳಿಬರುತ್ತಿದ್ದವು. ಆದರೆ, ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಸುವೇಂದು ಅಧಿಕಾರಿ ನೇತೃತ್ವದ ಸರ್ಕಾರವು ಈ ಬಾರಿ ಬಿಎಸ್‌ಎಫ್‌ಗೆ ಭೂಮಿ ನೀಡಲು ಸಮ್ಮತಿಸಿದೆ. ಈ ಭೂಮಿ ಕೈಸೇರುತ್ತಿದ್ದಂತೆ ಬಿಎಸ್‌ಎಫ್ ಮತ್ತು ಕೇಂದ್ರ ಲೋಕೋಪಯೋಗಿ ಇಲಾಖೆಯು ಬೇಲಿ ನಿರ್ಮಾಣ ಕಾರ್ಯವನ್ನು ಆರಂಭಿಸಲಿವೆ. ಆಧುನಿಕ ತಂತ್ರಜ್ಞಾನದ ಫ್ಲಡ್‌ಲೈಟ್‌ಗಳು ಮತ್ತು ಕಣ್ಗಾವಲು ಕ್ಯಾಮೆರಾಗಳನ್ನು ಈ ಗಡಿ ಭಾಗದಲ್ಲಿ ಅಳವಡಿಸಲಾಗುವುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಹಳೇ ಕಾಲದ ‘ಬಾಯ್ಲರ್ ಚಹಾ’ ಕುಡಿಯಬೇಕೇ?: ಹಾಗಾದ್ರೆ ವಸಂತನಗರದ ಈ ಸ್ಪಾಟ್‌ಗೆ ಒಮ್ಮೆ ವಿಸಿಟ್ ಕೊಡಿ! – Kannada News

ಬೆಂಗಳೂರು, ಜೂ.3: ಆಧುನಿಕ ಕೆಫೆಗಳು ಮತ್ತು ಕೃತಕ ಟೀ ಮೇಕರ್‌ಗಳ ಹಾವಳಿಯ ನಡುವೆ, ಬೆಂಗಳೂರಿನಲ್ಲಿ ಸಾಂಪ್ರದಾಯಿಕ ಟೀ ಬಾಯ್ಲರ್‌ನಲ್ಲಿ (Traditional Tea Boiler) ಹದವಾಗಿ ಕುದಿಸಿದ ಚಹಾದ ಅಪ್ಪಟ ರುಚಿಯನ್ನು ಹುಡುಕುವುದು ಈಗ ನಿಜಕ್ಕೂ ಅಪರೂಪದ ಸಂಗತಿಯಾಗಿದೆ. ಆದರೆ, ಹಳೇ ಕಾಲದ ಆ ಅದ್ಭುತ ರುಚಿ ಮತ್ತು ಫೀಲ್ ಅನ್ನು ಇಂದಿಗೂ ಯಥಾವತ್ತಾಗಿ ಉಳಿಸಿಕೊಂಡು ಬಂದಿದೆ ಬೆಂಗಳೂರಿನ ವಸಂತನಗರದಲ್ಲಿರುವ ಪ್ರಸಿದ್ಧ ‘ಮುರುಗನ್ ಟೀ ಸ್ಟಾಲ್’.

ಚಹಾ ಪ್ರಿಯರ ಪ್ರಕಾರ, ನಾರ್ಮಲ್ ಪಾತ್ರೆಯಲ್ಲಿ ಮಾಡುವ ಚಹಾಕ್ಕಿಂತಲೂ, ತಾಮ್ರ ಅಥವಾ ಹಿತ್ತಾಳೆಯ ಸಾಂಪ್ರದಾಯಿಕ ದೊಡ್ಡ ಬಾಯ್ಲರ್‌ಗಳಲ್ಲಿ ನಿರಂತರವಾಗಿ ಕುದಿಯುವ ನೀರಿನಲ್ಲಿ ತಯಾರಾಗುವ ಚಹಾದ ರುಚಿಯೇ ಬೇರೆ. ವಸಂತನಗರದ ಈ ಸಣ್ಣ ಟೀ ಅಂಗಡಿಯಲ್ಲಿ ಇಂದಿಗೂ ಅದೇ ಸಾಂಪ್ರದಾಯಿಕ ಶೈಲಿಯನ್ನು ಬಳಸಲಾಗುತ್ತಿದ್ದು, ಇಲ್ಲಿನ ಒಂದು ಬಿಸಿ ಬಿಸಿ ಕಪ್ ಚಹಾ ಕುಡಿಯಲು ನಗರದ ಮೂಲೆ ಮೂಲೆಗಳಿಂದ ಜನ ಆಗಮಿಸುತ್ತಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ದೇಶದ ಮೊದಲ ‘ಡಬಲ್ ಡೆಕ್ಕರ್’ ಸಾರಿಗೆ: ಒಂದೇ ಮಾರ್ಗದಲ್ಲಿ ಮೆಟ್ರೋ ಮತ್ತು ಸಬರ್ಬನ್ ರೈಲು; 169 ಕೋಟಿ ರೂ. ಉಳಿತಾಯ!

ಇಲ್ಲಿದೆ ನೋಡಿ ಪೋಸ್ಟ್​​;

ಇಂದು ರಾಜಧಾನಿಯ ಹೃದಯಭಾಗವಾದ ‘ವಿಧಾನ ಸೌಧ’ದ ಸುತ್ತಮುತ್ತಲಿನ ಅದ್ಭುತ ವಾತಾವರಣ, ಹಸಿರು ಮತ್ತು ಸಾಂಸ್ಕೃತಿಕ ವೈಬ್ಸ್ ಅನ್ನು ಆನಂದಿಸಲು ಹೊರಡುವ ಪ್ರವಾಸಿಗರಿಗೆ ಹಾಗೂ ಸಾರ್ವಜನಿಕರಿಗೆ ಈ ಮುರುಗನ್ ಸ್ಟಾಲ್‌ನ ಬಿಸಿ ಚಹಾ ಒಂದು ಪರ್ಫೆಕ್ಟ್ ಎನರ್ಜಿ ಬೂಸ್ಟರ್ ಆಗಿದೆ. ಕಾವೇರಿ ಕಾಂಪ್ಲೆಕ್ಸ್ ಅಥವಾ ವಸಂತನಗರದ ಕಡೆಯಿಂದ ಬರುವವರು ಇಲ್ಲಿ ಒಂದು ಕಪ್ ಬಾಯ್ಲರ್ ಟೀ ಸವಿದು, ನಂತರ ಅಲ್ಲಿಂದಲೇ ಹತ್ತಿರವಿರುವ ವಿಧಾನ ಸೌಧದ ಸೌಂದರ್ಯವನ್ನು ಕಣ್ಣುಂಬಿಕೊಳ್ಳಲು ಸಾಗುವುದು ಚಹಾ ಪ್ರಿಯರ ಇಂದಿನ ನೆಚ್ಚಿನ ದಿನಚರಿಯಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version