ಉಡುಪಿ ಶ್ರೀಕೃಷ್ಣದಲ್ಲಿ ಆದಿ ಶಂಕರಾಚಾರ್ಯರ ನಿಂದನೆ ವಿವಾದ: ಕ್ಷಮೆ ಯಾಚಿಸಿದ ಹರಿಕಥೆ ಕಲಾವಿದೆ, ಶಿರೂರು ಮಠದಿಂದಲೂ ಸ್ಪಷ್ಟನೆ – Kannada News | Udupi Sri Krishna Mutt Adi Shankaracharya controversy: Harikatha Artist Apologises, Shirur Mutt Issues Clarification

ಹರಿಕಥೆ ಕಲಾವಿದೆ ಹಾಗೂ ಶಿರೂರು ಮಠದ ಸ್ಪಷ್ಟನೆImage Credit source: tv9

ಉಡುಪಿ, ಜುಲೈ 14: ಉಡುಪಿ  (Udupi) ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಹರಿಕಥೆ ಕಾರ್ಯಕ್ರಮದಲ್ಲಿ ಆದಿ ಶಂಕರಾಚಾರ್ಯರ ಕುರಿತು ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ, ಹರಿಕಥೆ ಕಲಾವಿದೆ ವಿಡಿಯೋ ಸಂದೇಶದ ಮೂಲಕ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಜೊತೆಗೆ, ಈ ವಿಚಾರದಲ್ಲಿ ಉಡುಪಿ ಮಠ ಅಥವಾ ಶಿರೂರು ಮಠಕ್ಕೆ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವಿಡಿಯೋದಲ್ಲಿ ಮಾತನಾಡಿರುವ ಕಲಾವಿದೆ, ‘ಯಾರನ್ನೂ ನಿಂದಿಸುವ ಉದ್ದೇಶ ನಮಗಿರಲಿಲ್ಲ. ಯಾವುದೇ ಮಧ್ವ ಮಠದವರು ಈ ರೀತಿಯ ಹೇಳಿಕೆ ನೀಡುವಂತೆ ನಮಗೆ ಹೇಳಿಕೊಟ್ಟಿಲ್ಲ. ಪುಸ್ತಕವನ್ನು ಉಲ್ಲೇಖಿಸಿ ಓದಿದ್ದೇವೆ. ನಮ್ಮ ಮಾತಿನಿಂದ ಬೇರೆ ಮತದವರಿಗೆ ಅಥವಾ ಮಠದವರಿಗೆ ನೋವಾಗಿದ್ದರೆ ಹೃತ್ಪೂರ್ವಕ ಕ್ಷಮೆ ಕೋರುತ್ತೇವೆ’ ಎಂದು ಹೇಳಿದ್ದಾರೆ.

ಹರಿಕಥೆ ಕಲಾವಿದೆಯ ಕ್ಷಮೆಯಾಚನೆ ವಿಡಿಯೋ

ವಿಷಾದ ವ್ಯಕ್ತಪಡಿಸಿದ ಶಿರೂರು ಮಠ

ಘಟನೆಗೆ ಸಂಬಂಧಿಸಿದಂತೆ ಪರ್ಯಾಯ ಶಿರೂರು ಮಠವೂ ಅಧಿಕೃತ ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದೆ. ಶಿರೂರು ಮಠದ ದಿವಾನರಾದ ಡಾ. ಉದಯಕುಮಾರ ಸರಳತ್ತಾಯ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ, ಮಠದ ಸುಪರ್ದಿಯಲ್ಲಿರುವ ರಾಜಾಂಗಣದಲ್ಲಿ ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗಿತ್ತು ಎಂದು ತಿಳಿಸಿದ್ದಾರೆ. ಅಂಕಿತಾ ನಾಯಕ್ ಹಾಗೂ ಗೌರಿ ಪಾಂಡುರಂಗಿ ಅವರು ಭರತನಾಟ್ಯ ಕಾರ್ಯಕ್ರಮಕ್ಕಾಗಿ ಅನುಮತಿ ಕೋರಿದ್ದು, ಕಾರ್ಯಕ್ರಮದ ಮಧ್ಯೆ ‘ಭಕ್ತ ಪ್ರಹ್ಲಾದ’ ಹರಿಕಥೆ ನಡೆಸಲಾಗಿದೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಯುವತಿಯರಿಂದ ಶ್ರೀ ಆದಿ ಶಂಕರಾಚಾರ್ಯರ ನಿಂದನೆ ಆರೋಪ: ವಿಡಿಯೋ ವೈರಲ್​​

ಆ ಸಂದರ್ಭದಲ್ಲಿ ಶ್ರೀ ಜಗದ್ಗುರು ಶಂಕರಾಚಾರ್ಯರ ಕುರಿತು ಅಕ್ಷೇಪಾರ್ಹ ಹೇಳಿಕೆ ನೀಡಿರುವುದು ಮಠದ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಬ್ಬರಿಗೂ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಸೂಚಿಸಲಾಗಿತ್ತು. ಅದರಂತೆ ಅವರು ಕ್ಷಮೆಯಾಚಿಸಿದ್ದು, ಈ ಅನಪೇಕ್ಷಿತ ಘಟನೆಯ ಬಗ್ಗೆ ಮಠ ವಿಷಾದ ವ್ಯಕ್ತಪಡಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಂಗಳೂರಿನಲ್ಲಿ ಮತ್ತೆ 11 ಅಕ್ರಮ ಬಾಂಗ್ಲಾದೇಶಿ ವಲಸಿಗರ ಬಂಧನ; ಬಂಧಿತರ ಸಂಖ್ಯೆ 17ಕ್ಕೆ ಏರಿಕೆ – Kannada News | 11 More Illegal Bangladeshi Immigrants Detained in Mangaluru During Police Crackdown; Total Reaches 17

11 ಅಕ್ರಮ ಬಾಂಗ್ಲಾದೇಶಿ ವಲಸಿಗರ ಬಂಧನImage Credit source: Mangalore Police

ಮಂಗಳೂರು, ಜುಲೈ 14: ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada)  ಮಂಗಳೂರು (Mangaluru) ನಗರದ ಉರ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ, ಅಕ್ರಮವಾಗಿ ಭಾರತ ಪ್ರವೇಶಿಸಿ ಕೆಲಸ ಮಾಡುತ್ತಿದ್ದ 11 ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ ನಾಲ್ವರು ಅಪ್ರಾಪ್ತರೂ ಸೇರಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾಗ ಅಕ್ರಮ ಬಾಂಗ್ಲಾ ವಲಸಿಗರು ಪತ್ತೆಯಾಗಿದ್ದಾರೆ. ಇದರೊಂದಿಗೆ, ಕಳೆದ ಕೆಲವು ದಿನಗಳಲ್ಲಿ ಮಂಗಳೂರಿನಲ್ಲಿ ಪತ್ತೆಯಾದ ಅಕ್ರಮ ಬಾಂಗ್ಲಾ ವಲಸಿಗರ ಸಂಖ್ಯೆ 17ಕ್ಕೆ ಏರಿಕೆಯಾದಂತಾಗಿದೆ.

ಬಂಧಿತರನ್ನು ಎಂ.ಡಿ. ಕೌಸರ್ ಅಲಿ, ಎಂ.ಡಿ. ನೂರ್ ಅಮೀನ್, ಎಂ.ಡಿ. ನಾಹಿದುಲ್ ಇಸ್ಲಾಂ, ಹುಮಾಯೂನ್ ಕಬೀರ್, ರೊಮ್ಜಾನ್ ಅಲಿ, ಅಬ್ದುಲ್ ರಹಮಾನ್ ರೊಯೆಲ್ ಹಾಗೂ ನೋಯಾನ್ ಎಂದು ಗುರುತಿಸಲಾಗಿದೆ. ಉಳಿದ ನಾಲ್ವರು ಅಪ್ರಾಪ್ತರನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ನಕಲಿ ವಿಳಾಸದಲ್ಲಿ ಬಂದವರು

ಆರೋಪಿಗಳು ಅಕ್ರಮವಾಗಿ ಭಾರತಕ್ಕೆ ನುಸುಳಿ, ಪಶ್ಚಿಮ ಬಂಗಾಳದ ನಕಲಿ ವಿಳಾಸಗಳನ್ನು ಬಳಸಿಕೊಂಡು ಮಂಗಳೂರಿಗೆ ಬಂದು ಕೂಲಿ ಕೆಲಸ ಮಾಡುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಪಶ್ಚಿಮ ಬಂಗಾಳ ಮೂಲದ ಏಜೆಂಟ್ ಒಬ್ಬರ ವಿರುದ್ಧ ಉರ್ವಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಬಂಧಿತರಿಂದ ಬಾಂಗ್ಲಾ ಗುರುತಿನ ಚೀಟಿ ವಶ

ಕಾರ್ಯಾಚರಣೆಯ ವೇಳೆ ಬಂಧಿತರ ಬಳಿಯಿಂದ ಬಾಂಗ್ಲಾದೇಶದ ರಾಷ್ಟ್ರೀಯ ಗುರುತಿನ ಚೀಟಿ (National ID Card), ಜನನ ಪ್ರಮಾಣಪತ್ರ ಹಾಗೂ ಕುಟುಂಬಕ್ಕೆ ಸಂಬಂಧಿಸಿದ ಇತರ ದಾಖಲೆಗಳು ಪತ್ತೆಯಾಗಿವೆ. ಈ ದಾಖಲೆಗಳ ಆಧಾರದ ಮೇಲೆ ಅವರು ಬಾಂಗ್ಲಾದೇಶದ ನಿವಾಸಿಗಳೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಸುರತ್ಕಲ್​ನಲ್ಲಿ 11 ಮಂದಿಯ ಬಂಧಿಸಿದ್ದ ಪೊಲೀಸರು

ಇತ್ತೀಚೆಗೆ ಸುರತ್ಕಲ್‌ನಲ್ಲಿ ನಡೆದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಎಂಟು ಮಂದಿ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದೀಗ ಉರ್ವಾದಲ್ಲಿ 11 ಮಂದಿಯನ್ನು ಬಂಧಿಸಿರುವುದರಿಂದ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಪತ್ತೆಯಾದ ಅಕ್ರಮ ವಲಸಿಗರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಅಕ್ರಮ ವಲಸಿಗರ ಸದ್ದು: ಮಂಗಳೂರಲ್ಲಿ 6 ಮಂದಿ ವಶಕ್ಕೆ; ಮಂಡ್ಯಕ್ಕೂ ಎಂಟ್ರಿ ಕೊಟ್ರಾ ಬಾಂಗ್ಲಾ ಪ್ರಜೆಗಳು?

ಪ್ರಕರಣಕ್ಕೆ ಸಂಬಂಧಿಸಿದ ವರದಿಯನ್ನು ಬೆಂಗಳೂರಿನ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRRO)ಗೆ ಸಲ್ಲಿಸಲಾಗಿದ್ದು, ಮುಂದಿನ ಕಾನೂನು ಪ್ರಕ್ರಿಯೆ ಆರಂಭಿಸಲಾಗಿದೆ. ಅಕ್ರಮ ವಲಸೆ ಜಾಲದಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳ ಬಗ್ಗೆ ಕೂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಸ್ತ್ರಚಿಕಿತ್ಸೆ ಮಾಡದೆ ನಿರ್ಲಕ್ಷ್ಯ, ಮಹಿಳೆ ಸಾವು: ಜಯದೇವ ಹೃದ್ರೋಗ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ – Kannada News | Jayadeva Hospital Negligence Allegation: Family Claims 65 Year Old Woman Died After Delay in Heart Surgery

ಬೆಂಗಳೂರು, ಜುಲೈ 14: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ವಿರುದ್ಧ ವೈದ್ಯಕೀಯ ನಿರ್ಲಕ್ಷ್ಯದ ಗಂಭೀರ ಆರೋಪ ಕೇಳಿಬಂದಿದೆ. 65 ವರ್ಷದ ಮಾಯಮ್ಮ ಎಂಬ ಮಹಿಳೆಗೆ ತುರ್ತು ಹೃದಯ ಶಸ್ತ್ರಚಿಕಿತ್ಸೆ ಅಗತ್ಯವಿದ್ದರೂ, ಸಮಯಕ್ಕೆ ಚಿಕಿತ್ಸೆ ನೀಡದೆ ವಿಳಂಬ ಮಾಡಿದ ಪರಿಣಾಮ ಅವರು ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಕುಟುಂಬಸ್ಥರ ಪ್ರಕಾರ, ಕಳೆದ ಶುಕ್ರವಾರ ಮಾಯಮ್ಮ ಅವರಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೊದಲು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆಯ ಬಳಿಕ ತಕ್ಷಣ ಓಪನ್ ಹಾರ್ಟ್ ಸರ್ಜರಿ ಅಗತ್ಯವಿದೆ ಎಂದು ವೈದ್ಯರು ತಿಳಿಸಿ, ಹೆಚ್ಚಿನ ಚಿಕಿತ್ಸೆಗೆ ಜಯದೇವ ಆಸ್ಪತ್ರೆಗೆ ರವಾನಿಸಿದ್ದರು. ಆದರೆ ಜಯದೇವ ಆಸ್ಪತ್ರೆಗೆ ದಾಖಲಾದ ನಂತರ ಸೋಮವಾರ ರಾತ್ರಿ ತನಕ ಸೂಕ್ತ ಚಿಕಿತ್ಸೆ ನೀಡಲಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಆಸ್ಪತ್ರೆಯಲ್ಲಿನ ಆಪರೇಷನ್ ಯೂನಿಟ್ ಬಳಕೆಯ ವಿಚಾರವಾಗಿ ಇಬ್ಬರು ವೈದ್ಯರ ನಡುವೆ ಉಂಟಾದ ಭಿನ್ನಾಭಿಪ್ರಾಯ ಮತ್ತು ಪೈಪೋಟಿಯ ಕಾರಣ ಶಸ್ತ್ರಚಿಕಿತ್ಸೆ ನಡೆಯಲಿಲ್ಲ ಎಂದು ಮೃತೆಯ ಪುತ್ರ ಹಾಗೂ ಸೊಸೆ ಆರೋಪಿಸಿದ್ದಾರೆ. ಈ ವಿಳಂಬವೇ ಮಾಯಮ್ಮ ಅವರ ಸಾವಿಗೆ ಕಾರಣವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಸೋಮವಾರ ರಾತ್ರಿ ಸುಮಾರು 8 ಗಂಟೆ ವೇಳೆಗೆ ಮಾಯಮ್ಮ ಅವರು ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ. ತಾಯಿಗೆ ಸಮಯಕ್ಕೆ ಸರಿಯಾದ ಚಿಕಿತ್ಸೆ ನೀಡಿದ್ದರೆ ಜೀವ ಉಳಿಯುತ್ತಿತ್ತು ಎಂದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಜಯದೇವ ಆಸ್ಪತ್ರೆ ಆಡಳಿತ ಹಾಗೂ ವೈದ್ಯರ ವಿರುದ್ಧ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಈ ಆರೋಪಗಳಿಗೆ ಸಂಬಂಧಿಸಿದಂತೆ ಜಯದೇವ ಆಸ್ಪತ್ರೆ ಆಡಳಿತ ಅಥವಾ ಸಂಬಂಧಪಟ್ಟ ವೈದ್ಯರಿಂದ ಅಧಿಕೃತ ಪ್ರತಿಕ್ರಿಯೆ ಇನ್ನಷ್ಟೇ ಹೊರಬರಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಸುಪ್ರೀಂ ಕೋರ್ಟ್ ಖಡಕ್ ಸೂಚನೆ; ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ! – Kannada News | Supreme Court Takes Serious Note of Ayodhya Ram Mandir Donation Theft Case, Issues Notices

ಅಯೋಧ್ಯೆ ಶ್ರೀರಾಮ ಮಂದಿರದ ದೇಣಿಗೆ ಹಣ ಕಳ್ಳತನ ಪ್ರಕರಣವು ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಪ್ರಕರಣದ ಸಿಬಿಐ ತನಿಖೆಗೆ ಕೋರಿ ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿದ್ದು, ಕೇಂದ್ರ ಸರ್ಕಾರ, ಉತ್ತರ ಪ್ರದೇಶ ಸರ್ಕಾರ ಹಾಗೂ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ಗೆ ನೋಟಿಸ್ ಜಾರಿ ಮಾಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ತ್ರಿಸದಸ್ಯ ಪೀಠವು, ಅಯೋಧ್ಯೆ ಕಾಣಿಕೆ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಪ್ರಸ್ತುತ ತನಿಖೆ ನಡೆಸುತ್ತಿರುವ ಎಸ್ಐಟಿಗೆ, ಪ್ರಕರಣದ ಪ್ರಗತಿ ವರದಿಯನ್ನು ಒಂದು ವಾರದೊಳಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಅಲ್ಲದೆ, ರಾಮಮಂದಿರ ಟ್ರಸ್ಟ್ ಸದ್ಯಕ್ಕೆ ಯಾವುದೇ ದೊಡ್ಡ ಹಣಕಾಸು ವಹಿವಾಟು ನಡೆಸಬಾರದು ಎಂದು ಖಡಕ್ ಸೂಚನೆ ನೀಡಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಚಂದ್ರದ್ರೋಣ ಪರ್ವತ ಚಾರಣ ದುರಂತದ ಎಫೆಕ್ಟ್: ಇನ್ನೂ ಆರಂಭವಾಗದ ಟ್ರೆಕಿಂಗ್, ಚಾರಣ ಪ್ರಿಯರ ಪರದಾಟ! – Kannada News | Trekking Ban in Karnataka: Bengaluru Trekking Spots Closed Awaiting New SOP Rules

ಬೆಂಗಳೂರು, ಜುಲೈ 14: ಮಡಿಕೇರಿ ಹಾಗೂ ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ನಡೆದ ಚಾರಣ (Trekking) ದುರಂತದ ಬೆನ್ನಲ್ಲೇ ರಾಜ್ಯ ಸರ್ಕಾರ ರಾಜ್ಯದಾದ್ಯಂತ ಟ್ರೆಕಿಂಗ್ ಚಟುವಟಿಕೆಗಳಿಗೆ ತಾತ್ಕಾಲಿಕ ಬ್ರೇಕ್ ಹಾಕಿತ್ತು. ಚಾರಣಿಗರ ಸುರಕ್ಷತೆ ಮತ್ತು ಹಿತದೃಷ್ಟಿಯಿಂದ ಹೊಸ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP) ಜಾರಿಗೆ ತರುವವರೆಗೆ ನಿರ್ಬಂಧ ಹೇರಲಾಗಿತ್ತು. ಆದರೆ, ಇಷ್ಟು ದಿನ ಕಳೆದರೂ ಎಸ್‌ಒಪಿಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸದ ಕಾರಣ ರಾಜ್ಯದ ಹಲವೆಡೆ ಟ್ರೆಕಿಂಗ್ ಇನ್ನೂ ಆರಂಭವಾಗಿಲ್ಲ. ಇದು ಚಾರಣ ಪ್ರಿಯರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ದುರಂತದ ಬೆನ್ನಲ್ಲೇ ಎಚ್ಚೆತ್ತ ಅರಣ್ಯ ಇಲಾಖೆ

ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಗೆ ಪ್ರವಾಸಕ್ಕೆ ತೆರಳಿದ್ದ ಕೇರಳ ಮೂಲದ 15 ವರ್ಷದ ಬಾಲಕಿ ಶ್ರೀನಂದನಾ ಪ್ರಪಾತಕ್ಕೆ ಬಿದ್ದು ದುರ್ಮರಣಕ್ಕೀಡಾಗಿದ್ದರು. ಈ ಘೋರ ದುರಂತದ ಬಳಿಕ ಎಚ್ಚೆತ್ತ ಅರಣ್ಯ ಇಲಾಖೆ, ಚಾರಣಿಗರ ಸುರಕ್ಷತೆಗಾಗಿ ಕಟ್ಟುನಿಟ್ಟಿನ ಹೊಸ ಎಸ್‌ಒಪಿ ಜಾರಿಗೆ ತಂದಿದೆ. ಆದರೆ, ಇದರ ಅನುಷ್ಠಾನ ಪ್ರಕ್ರಿಯೆ ತಡವಾಗುತ್ತಿರುವುದರಿಂದ ಚಂದ್ರದ್ರೋಣ ಪರ್ವತದ ಜೊತೆಗೆ ಬೆಂಗಳೂರಿಗರ ಅಚ್ಚುಮೆಚ್ಚಿನ ತಾಣಗಳಾದ ಚಿಕ್ಕಬಳ್ಳಾಪುರ ಜಿಲ್ಲೆಯ ಸ್ಕಂದಗಿರಿ ಮತ್ತು ಕೈವಾರ ಬೆಟ್ಟಗಳಲ್ಲೂ ಚಾರಣ ಚಟುವಟಿಕೆಗಳು ಇನ್ನೂ ಸ್ಥಗಿತಗೊಂಡಿವೆ.

ಇದನ್ನೂ ಓದಿ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಶ್ರೀನಂದಾ ಮೃತದೇಹ ಚಂದ್ರದ್ರೋಣ ಪರ್ವತದ 2 ಸಾವಿರ ಅಡಿ ಪ್ರಪಾತದಲ್ಲಿ ಪತ್ತೆ

ಹೊಸ ಎಸ್‌ಒಪಿಯ ಕಠಿಣ ನಿಯಮಗಳೇನು?

ಚಿಕ್ಕಬಳ್ಳಾಪುರ ಡಿಎಫ್‌ಒ ಗಿರೀಶ್ ಅವರು ನೀಡಿರುವ ಮಾಹಿತಿ ಪ್ರಕಾರ, ಸ್ಕಂದಗಿರಿ ಮತ್ತು ಕೈವಾರ ಬೆಟ್ಟಗಳಲ್ಲಿ ಪ್ರತಿದಿನ ಸುಮಾರು 150 ಜನರಿಗೆ ಚಾರಣಕ್ಕೆ ಅವಕಾಶವಿತ್ತು. ಆದರೆ ಹೊಸ ನಿಯಮಗಳ ಅನುಷ್ಠಾನವಾಗದ ಕಾರಣ ಈಗ ನಿರ್ಬಂಧ ಮುಂದುವರಿದಿದೆ. ನೂತನ ನಿಯಮಗಳು ಈ ಕೆಳಗಿನಂತಿವೆ:

  • ಪ್ರತಿ 10 ಮಂದಿ ಚಾರಣಿಗರಿಗೆ ಒಬ್ಬ ಗೈಡ್ ಕಡ್ಡಾಯ ಹಾಗೂ ಗೈಡ್ ಬಳಿ ಫಸ್ಟ್ ಎಯ್ಡ್ ಕಿಟ್, ಟಾರ್ಚ್ ಇರಬೇಕು.
  • ಚಾರಣದ ಅವಧಿಯಲ್ಲಿ ಗೈಡ್ ಮತ್ತು ಚಾರಣಿಗರು ಬೇಸ್ ಕ್ಯಾಂಪ್‌ನೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು.
  • ಟ್ರೆಕಿಂಗ್ ಮಾರ್ಗದ ಕೆಎಂಎಲ್ (KML) ಫೈಲ್‌ಗಳನ್ನು ಚಾರಣಿಗರ ಮೊಬೈಲ್‌ನಲ್ಲಿ ಅಪ್‌ಲೋಡ್ ಮಾಡಬೇಕು.
  • ನೆಟ್‌ವರ್ಕ್ ಇಲ್ಲದ ಬ್ಲ್ಯಾಕ್ ಸ್ಪಾಟ್‌ಗಳ ಬಗ್ಗೆ ಮುಂಚಿತವಾಗಿಯೇ ಮಾಹಿತಿ ನೀಡಬೇಕು.
  • 60 ವರ್ಷ ಮೇಲ್ಪಟ್ಟವರಿಗೆ ವೈದ್ಯಕೀಯ ಫಿಟ್ನೆಸ್ ಪ್ರಮಾಣಪತ್ರ ಕಡ್ಡಾಯವಾಗಿದೆ.

ನೂತನ ಎಸ್‌ಒಪಿಯ ಎಲ್ಲಾ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ ಬಳಿಕವೇ ಸ್ಕಂದಗಿರಿ ಮತ್ತು ಕೈವಾರ ಬೆಟ್ಟಗಳು ಸೇರಿದಂತೆ ರಾಜ್ಯದ ಹಲವು ಟ್ರೆಕಿಂಗ್ ಸ್ಪಾಟ್​ಗಳಲ್ಲಿ ಮತ್ತೆ ಟ್ರೆಕಿಂಗ್ ಚಟುವಟಿಕೆ ಆರಂಭವಾಗಲಿದೆ ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ. ಆದರೆ, ವಿಳಂಬ ನೀತಿಯಿಂದ ಬೇಸತ್ತಿರುವ ಚಾರಣ ಪ್ರಿಯರು ಶೀಘ್ರವಾಗಿ ಸಿದ್ಧತೆ ಮುಗಿಸಿ ಚಾರಣಕ್ಕೆ ಮುಕ್ತ ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತದ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ‘ಟಾಕ್ಸಿಕ್’ ಚಿತ್ರಕ್ಕೆ 1ನೇ ಸ್ಥಾನ – Kannada News | Yash starrer Toxic Tops IMDb Most Anticipated Films List, Setting New Records

ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ (Toxic) ಸದ್ಯ ಇಡೀ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವು ಮಾಧ್ಯಮಗಳಲ್ಲಿ ಈ ಚಿತ್ರದ ವಿರುದ್ಧ ಎಷ್ಟೇ ನೆಗೆಟಿವ್ ಸುದ್ದಿಗಳು ಹರಿದಾಡುತ್ತಿದ್ದರೂ, ಯಾವುದೂ ಚಿತ್ರದ ಕ್ರೇಜ್‌ಗೆ ಧಕ್ಕೆ ತರಲು ಸಾಧ್ಯವಾಗಿಲ್ಲ. ಸಿನಿಮಾ ರಿಲೀಸ್ ವಿಳಂಬ ಆದರೂ ಚಿತ್ರದ ಮೇಲಿರುವ ನಿರೀಕ್ಷೆ ಒಂದುಚೂರು ಕಮ್ಮಿ ಆಗಿಲ್ಲ ಎಂಬುದಕ್ಕೆ ಐಎಂಡಿಬಿ ಬಿಡುಗಡೆ ಮಾಡಿರುವ ಹೊಸ ಪಟ್ಟಿಯೇ ಸಾಕ್ಷಿ.

ಭಾರತದ ಅತ್ಯಂತ ನಿರೀಕ್ಷಿತ ಹೊಸ ಚಿತ್ರಗಳ ರಿಯಲ್-ಟೈಮ್ ಜನಪ್ರಿಯತೆಯ ಪಟ್ಟಿಯಲ್ಲಿ ‘ಟಾಕ್ಸಿಕ್’ ಮೊದಲ ಸ್ಥಾನವನ್ನು ಅಲಂಕರಿಸಿದೆ. ಭಾರತದ ಬೇರೆ ಯಾವ ದೊಡ್ಡ ಸಿನಿಮಾಗೂ ಇದರ ಹತ್ತಿರ ಸುಳಿಯಲು ಸಾಧ್ಯವಾಗಿಲ್ಲ ಎಂಬುದು ಚಿತ್ರದ ಹೆಚ್ಚುಗಾರಿಕೆ. ಇದು ಯಶ್ ಕ್ರೇಜ್​​ಗೆ ಹಿಡಿದ ಕೈಗನ್ನಡಿಯಾಗಿದೆ.

ಬಹುನಿರೀಕ್ಷಿತ ಸಿನಿಮಾ ಪಟ್ಟಿಯಲ್ಲಿ ‘ಟಾಕ್ಸಿಕ್’ ಸಿನಿಮಾ ಶೇಕಡಾ 47 ರಷ್ಟು ವೋಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿರುವ ತಮಿಳು ನಟ ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ಕೇವಲ ಶೇಕಡಾ 12.7 ರಷ್ಟು ವೋಟ್‌ಗಳನ್ನು ಪಡೆದುಕೊಂಡಿದೆ. ಇದನ್ನು ಗಮನಿಸಿದರೆ ಯಶ್ ಅವರ ಸಿನಿಮಾದ ಮೇಲಿರುವ ಕ್ರೇಜ್ ಭಾರತೀಯ ಚಿತ್ರರಂಗದಲ್ಲಿ ಎಷ್ಟು ಅಗಾಧವಾಗಿದೆ ಎಂಬುದು ಸ್ಪಷ್ಟವಾಗುತ್ತದೆ.

ಮತ್ತೊಂದೆಡೆ ಬಹುನಿರೀಕ್ಷಿತ ಸೀಕ್ವೆಲ್ ಚಿತ್ರಗಳಾದ ‘ಆವಾರಾಪನ್ 2’ ಶೇಕಡಾ 9.4 ಹಾಗೂ ‘ಇಂದ್ರಜಾಲ್’ ಶೇಕಡಾ 9.1 ರಷ್ಟು ವೋಟ್‌ಗಳೊಂದಿಗೆ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ. ಲೋಕೇಶ್ ಕನಕರಾಜ್ ನಟನೆಯ ‘ಡಿಸಿ’ ಸಿನಿಮಾ ಶೇಕಡಾ 7.4 ರಷ್ಟು ಪಡೆದಿದ್ದರೆ, ಶ್ರದ್ಧಾ ಕಪೂರ್ ನಟನೆಯ ‘ಈಥಾ’, ಸೂರ್ಯ ಅಭಿನಯದ ‘ವಿಶ್ವನಾಥ್ ಅಂಡ್ ಸನ್ಸ್’ ಹಾಗೂ ಸೂಪರ್ ಹಿಟ್ ವೆಬ್ ಸರಣಿಯ ‘ಮಿರ್ಜಾಪುರ್: ದಿ ಮೂವಿ’ ಕೂಡ ತಲಾ ಮೂರು ಶೇಕಡಾಗಿಂತಲೂ ಕಡಿಮೆ ಕ್ರೇಜ್‌ನೊಂದಿಗೆ ಈ ಪಟ್ಟಿಯಲ್ಲಿ ಕೊನೆಯ ಸಾಲಿನಲ್ಲಿವೆ.

ಇದನ್ನೂ ಓದಿ: ‘ಟಾಕ್ಸಿಕ್’ ಚಿತ್ರಕ್ಕಾಗಿ ಕಿಯಾರಾ ಅಡ್ವಾಣಿಗೆ ಬಂಪರ್ ಸಂಭಾವನೆ; 15 ಕೋಟಿ ರೂಪಾಯಿ ಪಡೆದ ನಟಿ

ಚಿತ್ರದ ರಿಲೀಸ್ ಸಂದರ್ಭದಲ್ಲಿ ‘ಟಾಕ್ಸಿಕ್’ ಇಷ್ಟೊಂದು ದೊಡ್ಡ ಮಟ್ಟದ ಸದ್ದು ಮಾಡುತ್ತಿರುವುದು ಯಶ್ ಅವರ ಜಾಗತಿಕ ಮಾರುಕಟ್ಟೆಯ ತಾಕತ್ತನ್ನು ತೋರಿಸುತ್ತದೆ. ವಿರೋಧಿಗಳು ಹಬ್ಬಿಸುತ್ತಿರುವ ಯಾವುದೇ ನೆಗೆಟಿವ್ ಕಮೆಂಟ್‌ಗಳು ಅಥವಾ ಸುಳ್ಳು ಸುದ್ದಿಗಳು ಚಿತ್ರದ ಪ್ರಚಾರಕ್ಕೆ ಯಾವುದೇ ಪ್ರಭಾವ ಬೀರುತ್ತಿಲ್ಲ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಆ್ಯಕ್ಷನ್ ಎಂಟರ್‌ಟೈನರ್ ಚಿತ್ರದ ಮೂಲಕ ರಾಕಿ ಭಾಯ್ ಭಾರತೀಯ ಸಿನಿಮಾ ಮಾರುಕಟ್ಟೆಯಲ್ಲಿ ಮತ್ತೊಂದು ಬಿರುಗಾಳಿ ಎಬ್ಬಿಸಲು ಸಂಪೂರ್ಣವಾಗಿ ಸಜ್ಜಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಾವು ಹೆದರಲ್ಲ… ಕೊಹ್ಲಿ, ರೋಹಿತ್​​ಗೆ ಡಕೆಟ್ ಸವಾಲು! – Kannada News | IND vs ENG: Ben Duckett issues bold warning to Virat Kohli, Rohit Sharma

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಇದ್ದರೇನಂತೆ, ನಾವು ಯಾರಿಗೂ ಹೆದರುವುದಿಲ್ಲ… ಹೀಗಂದಿರುವುದು ಮತ್ಯಾರೂ ಅಲ್ಲ, ಇಂಗ್ಲೆಂಡ್ ತಂಡದ ಆರಂಭಿಕ ದಾಂಡಿಗ ಬೆನ್ ಡಕೆಟ್. ಭಾರತ ಮತ್ತು ಇಂಗ್ಲೆಂಡ್ ನಡುವಣ ಏಕದಿನ ಸರಣಿ ಆರಂಭಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಕೆಟ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಜಸ್​ಪ್ರೀತ್ ಬುಮ್ರಾ ಅವರಂತಹ ದಿಗ್ಗಜ ಆಟಗಾರರು ಭಾರತ ತಂಡಕ್ಕೆ ಮರಳಿರುವುದು ದೊಡ್ಡ ಸವಾಲೇ ಸರಿ. ಆದರೆ ಇದಕ್ಕೆ ಹೆದರಿ ಇಂಗ್ಲೆಂಡ್ ತನ್ನ ಆಕ್ರಮಣಕಾರಿ ಶೈಲಿಯನ್ನು ಬದಲಾಯಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದೀಗ  ಬೆನ್ ಡಕೆಟ್ ನೀಡಿರುವ “ನಾವು ಯಾರಿಗೂ ಹೆದರುವುದಿಲ್ಲ” ಎಂಬ ಹೇಳಿಕೆ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಡಕೆಟ್ ಇಂತಹದೊಂದು ಹೇಳಿಕೆ ನೀಡಲು ಕಾರಣಗಳೇನು? ಇದರ ಹಿಂದಿರುವ ಆಟದ ತಂತ್ರ ಮತ್ತು ಮಾನಸಿಕ ಅಂಶಗಳ ಸಂಪೂರ್ಣ ವಿಶ್ಲೇಷಣೆ ಇಲ್ಲಿದೆ.

ಇಂಗ್ಲೆಂಡ್ ತಂಡದ ‘ಫಿಯರ್‌ಲೆಸ್’ ಕ್ರಿಕೆಟ್:

ಬೆನ್ ಡಕೆಟ್ ಈ ರೀತಿ ಹೇಳಲು ಪ್ರಮುಖ ಕಾರಣ ಇಂಗ್ಲೆಂಡ್ ಕಳೆದ ಕೆಲವು ವರ್ಷಗಳಿಂದ ಅಳವಡಿಸಿಕೊಂಡಿರುವ ಆಟದ ಶೈಲಿ. ಟೆಸ್ಟ್‌ನಲ್ಲಿ ‘ಬಾಝ್​ ಬಾಲ್’ ಆಗಿರಲಿ ಅಥವಾ ಸೀಮಿತ ಓವರ್‌ಗಳ ಕ್ರಿಕೆಟ್ ಆಗಿರಲಿ, ಎದುರಾಳಿ ಯಾರೇ ಇದ್ದರೂ ತಮ್ಮದೇ ಆದ ಆಕ್ರಮಣಕಾರಿ ಶೈಲಿಯಲ್ಲಿ ಆಡುವುದು ಇಂಗ್ಲೆಂಡ್‌ನ ಮೈಂಡ್‌ಸೆಟ್.

“ನಾವು ಎದುರಾಳಿ ಯಾರು ಎಂದು ನೋಡಿ ನಮ್ಮ ಗೇಮ್ ಪ್ಲಾನ್ ಬದಲಾಯಿಸುವುದಿಲ್ಲ, ಬದಲಾಗಿ ನಮ್ಮ ಆಟವನ್ನು ಅವರಗಿಂತ ಉತ್ತಮವಾಗಿ ಆಡಲು ಪ್ರಯತ್ನಿಸುತ್ತೇವೆ” ಎಂದು ಡಕೆಟ್ ಸ್ಪಷ್ಟಪಡಿಸಿದ್ದಾರೆ. ಇದೇ ಕಾರಣಕ್ಕಾಗಿ ಅವರು ವಿರಾಟ್-ರೋಹಿತ್ ಹೆಸರಿಗೆ ಹೆದರಿ ರಕ್ಷಣಾತ್ಮಕ ಆಟಕ್ಕೆ ಶರಣಾಗಲು ಸಿದ್ಧರಿಲ್ಲ ಎಂದು ತಿಳಿಸಿದ್ದಾರೆ.

 ಕ್ಲೀನ್‌ಸ್ವೀಪ್ ತಂದಿರುವ ಆತ್ಮವಿಶ್ವಾಸ:

ಏಕದಿನ ಸರಣಿಗೂ ಮುನ್ನ ನಡೆದ 5 ಪಂದ್ಯಗಳ ಟಿ20 ಸರಣಿಯಲ್ಲಿ ಹ್ಯಾರಿ ಬ್ರೂಕ್ ನೇತೃತ್ವದ ಇಂಗ್ಲೆಂಡ್ ತಂಡ ಭಾರತವನ್ನು 4-0 ಅಂತರದಿಂದ ಸಂಪೂರ್ಣವಾಗಿ ಧೂಳೀಪಟ ಮಾಡಿದೆ. ಈ ಭರ್ಜರಿ ಜಯ ಆತಿಥೇಯ ಇಂಗ್ಲೆಂಡ್ ತಂಡದ ಆತ್ಮವಿಶ್ವಾಸವನ್ನು ಮುಗಿಲೆತ್ತರಕ್ಕೆ ಕೊಂಡೊಯ್ದಿದೆ. ಯುವ ಭಾರತೀಯ ಪಡೆಯನ್ನು ಸುಲಭವಾಗಿ ಮಣಿಸಿರುವುದರಿಂದ, ಅದೇ ಲಯವನ್ನು ಏಕದಿನ ಮಾದರಿಯಲ್ಲೂ ಮುಂದುವರಿಸಬಹುದು ಎಂಬ ಬಲವಾದ ನಂಬಿಕೆ ಇಂಗ್ಲೆಂಡ್ ಆಟಗಾರರಲ್ಲಿದೆ.

ಶಾರ್ಟ್-ಬಾಲ್ ತಂತ್ರದ ಅಸ್ತ್ರ:

ಟಿ20 ಸರಣಿಯಲ್ಲಿ ಇಂಗ್ಲೆಂಡ್ ಬೌಲರ್‌ಗಳು ಭಾರತದ ಯುವ ಬ್ಯಾಟರ್‌ಗಳ ವಿರುದ್ಧ ಸತತವಾಗಿ ಬೌನ್ಸರ್ ಹಾಗೂ ಶಾರ್ಟ್-ಪಿಚ್ ಎಸೆತಗಳನ್ನು ಬಳಸಿ ಯಶಸ್ಸು ಕಂಡಿದ್ದರು. ಇದೀಗ ಹಿರಿಯ ಆಟಗಾರರಾದ ರೋಹಿತ್ ಮತ್ತು ವಿರಾಟ್ ಬಂದರೂ ಸಹ ಇಂಗ್ಲೆಂಡ್ ತನ್ನ ಈ ತಂತ್ರವನ್ನು ಕೈಬಿಡುವುದಿಲ್ಲ ಎಂದು ಡಕೆಟ್ ಸುಳಿವು ನೀಡಿದ್ದಾರೆ.

“ನಾವು ಅವರನ್ನೂ ಶಾರ್ಟ್ ಬಾಲ್ ಮೂಲಕ ಪರೀಕ್ಷಿಸುತ್ತೇವೆ. ಒಂದು ವೇಳೆ ಅವರು ಅದನ್ನು ಚೆನ್ನಾಗಿ ಆಡಿದರೆ ನಮ್ಮ ತಂತ್ರ ಬದಲಾಯಿಸುತ್ತೇವೆ, ಇಲ್ಲದಿದ್ದರೆ ಬೌನ್ಸರ್ ಅಸ್ತ್ರ ಮುಂದುವರಿಯಲಿದೆ” ಎಂದು ಟೀಮ್ ಇಂಡಿಯಾ ದಿಗ್ಗಜರಿಗೆ ಡಕೆಟ್ ಸವಾಲು ಹಾಕಿದ್ದಾರೆ.

ದಿಗ್ಗಜರ ದೀರ್ಘ ಬ್ರೇಕ್:

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇತ್ತೀಚಿನ ಟಿ20 ಸರಣಿಯಲ್ಲಿ ಆಡಿರಲಿಲ್ಲ. ಅಲ್ಲದೆ ಅವರು ಇತರ ಸ್ವರೂಪಗಳಿಂದ ನಿವೃತ್ತಿ ಪಡೆದಿರುವುದರಿಂದ ನೇರವಾಗಿ ಏಕದಿನ ಕ್ರಿಕೆಟ್‌ಗೆ ಮರಳುತ್ತಿದ್ದಾರೆ. ಇಷ್ಟು ದೊಡ್ಡ ವಿರಾಮದ ನಂತರ ಮೈದಾನಕ್ಕೆ ಇಳಿಯುವಾಗ ಆಟಗಾರರು ಆರಂಭದಲ್ಲಿ ಲಯ ಕಂಡುಕೊಳ್ಳಲು ಕಷ್ಟಪಡುತ್ತಾರೆ. ಇಂಗ್ಲೆಂಡ್ ತಂಡ ಇದನ್ನೇ ಬಂಡವಾಳ ಮಾಡಿಕೊಳ್ಳಲು ಆಲೋಚಿಸುತ್ತಿದೆ. ಭಾರತದ ಹಿರಿಯ ಆಟಗಾರರು ಮೈದಾನದಲ್ಲಿ ಸೆಟ್ ಆಗುವ ಮುನ್ನವೇ ಅವರ ಮೇಲೆ ಒತ್ತಡ ಹೇರುವುದು ಇಂಗ್ಲೆಂಡ್‌ನ ಪ್ಲಾನ್ ಆಗಿದೆ.

ಬಲಿಷ್ಠ ಆಂಗ್ಲರ ಪಡೆ:

ಇಂಗ್ಲೆಂಡ್ ತಂಡದಲ್ಲಿ ಹ್ಯಾರಿ ಬ್ರೂಕ್, ಬೆನ್ ಡಕೆಟ್, ಜೋ ರೂಟ್ ಮತ್ತು ಜೋಸ್ ಬಟ್ಲರ್ ಅವರಂತಹ ಅನುಭವಿ ಹಾಗೂ ಯುವ ಆಟಗಾರರ ಅತ್ಯುತ್ತಮ ಮಿಶ್ರಣವಿದೆ. ಜೋ ರೂಟ್ ಅವರ ಪುನರಾಗಮನ ತಂಡದ ಬ್ಯಾಟಿಂಗ್‌ ಬಲವನ್ನು ಹೆಚ್ಚಿಸಿದೆ. ಇನ್ನು ತಮ್ಮದೇ ನೆಲದಲ್ಲಿ ಆಡುತ್ತಿರುವುದರಿಂದ ಪಿಚ್ ಮತ್ತು ಹವಾಮಾನದ ಸಂಪೂರ್ಣ ಲಾಭ ಇಂಗ್ಲೆಂಡ್‌ಗೆ ಸಿಗಲಿದೆ. ಇದರ ಜೊತೆಗೆ ಟಿ20 ಸರಣಿಯಲ್ಲಿ ಇಂಗ್ಲೆಂಡ್ ಪರ ಯುವ ಆಟಗಾರರು ಕೂಡ ಮಿಂಚಿದ್ದಾರೆ. ಇದೇ ಆತ್ಮ ವಿಶ್ವಾಸದಲ್ಲಿ ಏಕದಿನ ಸರಣಿಯಲ್ಲೂ ಕಣಕ್ಕಿಳಿಯಲಿದ್ದಾರೆ.

ಟೀಮ್ ಇಂಡಿಯಾಗೆ ‘ಅಗ್ನಿಪರೀಕ್ಷೆ’

ಬೆನ್ ಡಕೆಟ್ ಅವರ ಹೇಳಿಕೆಯನ್ನು ಕೇವಲ “ಅಹಂಕಾರ” ಎಂದು ತಳ್ಳಿಹಾಕುವಂತಿಲ್ಲ. ಏಕೆಂದರೆ ಇಂಗ್ಲೆಂಡ್ ಪ್ರಸ್ತುತ ಅತ್ಯಂತ ಬಲಿಷ್ಠ ಫಾರ್ಮ್‌ನಲ್ಲಿದೆ. ಆದರೆ, ಭಾರತ ತಂಡಕ್ಕೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಜಸ್​ಪ್ರೀತ್ ಬುಮ್ರಾ ಅವರ ಮರಳುವಿಕೆ ಆನೆ ಬಲ ನೀಡಿದೆ. ಗೌತಮ್ ಗಂಭೀರ್ ಅವರ ಕೋಚಿಂಗ್ ಅಡಿಯಲ್ಲಿ, ಟಿ20 ಸರಣಿಯ ಹೀನಾಯ ಸೋಲಿಗೆ ಸೇಡು ತೀರಿಸಿಕೊಳ್ಳಲು ಮತ್ತು 2027ರ ವಿಶ್ವಕಪ್‌ಗೆ ಬಲಿಷ್ಠ ಅಡಿಪಾಯ ಹಾಕಲು ಭಾರತಕ್ಕೆ ಇದೊಂದು ಸೂಕ್ತ ವೇದಿಕೆಯಾಗಿದೆ.

ಇದನ್ನೂ ಓದಿ: ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಬೇಕು: 40 ಓವರ್​ಗೆ ಗಿಲ್ ವಿರೋಧ!

ಒಟ್ಟಾರೆಯಾಗಿ ಹೇಳುವುದಾದರೆ, ಇಂಗ್ಲೆಂಡ್‌ನ ‘ಭಯವಿಲ್ಲದ ಆಟ’ ಮತ್ತು ಭಾರತದ ‘ಅನುಭವಿಗಳ ಜಾಣ್ಮೆ’ಯ ನಡುವಿನ ಈ ಕದನವು ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ನೀಡಲಿರುವುದಂತೂ ಖಚಿತ.

Source link

ದಿಗ್ಗಜರ ಪುನರ್ಮಿಲನ: ಇದುವೇ ಟೀಮ್ ಇಂಡಿಯಾದ ನೈಜ ಬಲ – Kannada News | Jasprit Bumrah return to ODI cricket after 968 days

ಬರೋಬ್ಬರಿ 968 ದಿನಗಳ ಬಳಿಕ ಮೂವರು ದಿಗ್ಗಜರ ಪುನರ್ಮಿಲನ. ಅಚ್ಚರಿ ಎನಿಸಿದರೂ ಇದುವೇ ಸತ್ಯ. ಏಕದಿನ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಜಸ್​ಪ್ರೀತ್ ಬುಮ್ರಾ ಜೊತೆಯಾಗಿ ಕಣಕ್ಕಿಳಿದು ಬರೋಬ್ಬರಿ 968 ದಿನಗಳು ಕಳೆದಿವೆ. ಅಂದರೆ ಈ ಮೂವರು ಮೂರು ವರ್ಷಗಳ ಹಿಂದೆ ಜೊತೆಯಾಗಿ ಏಕದಿನ ಪಂದ್ಯವಾಡಿದ್ದರು. ಇದಾದ ಬಳಿಕ ಬುಮ್ರಾ ಭಾರತದ ಪರ ಒಂದೇ ಒಂದು ಏಕದಿನ ಪಂದ್ಯವಾಡಿಲ್ಲ.

ಕೊನೆಯ ಬಾರಿ ಮೂವರು ಕಣಕ್ಕಿಳಿದದ್ದು ಯಾವಾಗ?

ನವೆಂಬರ್ 19, 2023 ರಂದು ಅಹಮದಾಬಾದ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಫೈನಲ್‌ನಲ್ಲಿ ಜಸ್​ಪ್ರೀತ್ ಬುಮ್ರಾ, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕೊನೆಯ ಬಾರಿ ಜೊತೆಯಾಗಿ ಏಕದಿನ ಪಂದ್ಯವಾಡಿದ್ದರು.

ಆ ನಂತರ ಕಾರ್ಯಭಾರ ನಿರ್ವಹಣೆಯ ಕಾರಣ ಜಸ್​ಪ್ರೀತ್ ಬುಮ್ರಾಗೆ ಸತತ ವಿಶ್ರಾಂತಿ ನೀಡಲಾಗಿತ್ತು. ಇದರ ನಡುವೆ ಟೀಮ್ ಇಂಡಿಯಾ ಒಟ್ಟು 26 ಏಕದಿನ ಪಂದ್ಯಗಳನ್ನು ಆಡಿದೆ.

ಆದರೆ, ಟೆಸ್ಟ್ ಕ್ರಿಕೆಟ್ ಮತ್ತು ಟಿ20 ವಿಶ್ವಕಪ್‌ಗಳಿಗೆ ಬುಮ್ರಾ ಅವರ ಫಿಟ್‌ನೆಸ್ ಕಾಯ್ದುಕೊಳ್ಳಲು ಬಿಸಿಸಿಐ ಅವರಿಗೆ ದ್ವಿಪಕ್ಷೀಯ ಏಕದಿನ ಸರಣಿಗಳಿಂದ ವಿಶ್ರಾಂತಿ ನೀಡಿತ್ತು. ಹೀಗಾಗಿ 2023ರ ಏಕದಿನ ವಿಶ್ವಕಪ್​ ಬಳಿಕ ಮೂವರು ದಿಗ್ಗಜರು ಜೊತೆಯಾಗಿ ಕಣಕ್ಕಿಳಿದಿರಲಿಲ್ಲ.

ಬುಮ್ರಾ ಕಂಬ್ಯಾಕ್:

2027 ರ ಐಸಿಸಿ ಏಕದಿನ ವಿಶ್ವಕಪ್‌ಗೆ ಬಲಿಷ್ಠ ತಂಡವನ್ನು ಸಿದ್ಧಪಡಿಸುವ ಯೋಜನೆಯ ಭಾಗವಾಗಿ ಜಸ್​ಪ್ರೀತ್ ಬುಮ್ರಾ ಅವರನ್ನು ಈಗ ಮತ್ತೆ ಏಕದಿನ ತಂಡಕ್ಕೆ ಕರೆತರಲಾಗಿದೆ.

ಈ ಪಂದ್ಯವು ಬುಮ್ರಾ ಅವರಿಗೆ ಮಾತ್ರವಲ್ಲದೆ ಇಡೀ ಭಾರತೀಯ ಕ್ರಿಕೆಟ್‌ಗೆ ವಿಶೇಷವಾಗಿದೆ. 2023 ರ ವಿಶ್ವಕಪ್ ಫೈನಲ್ ಬಳಿಕ ಇದೇ ಮೊದಲ ಬಾರಿಗೆ ಭಾರತದ ಮೂವರು ಆಧಾರಸ್ತಂಭಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್​ಪ್ರೀತ್ ಬುಮ್ರಾ ಒಟ್ಟಿಗೆ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದಾರೆ.

ಮುಂಬರುವ ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್​ ದೃಷ್ಟಿಯಿಂದ ಬುಮ್ರಾ  ಅವರ ಈ ಮರಳುವಿಕೆ ಭಾರತ ತಂಡದ ಬೌಲಿಂಗ್ ವಿಭಾಗಕ್ಕೆ ಆನೆ ಬಲ ತಂದಿದೆ. ಅದರಲ್ಲೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಸೋತು ಸುಣ್ಣವಾಗಿರುವ ಟೀಮ್ ಇಂಡಿಯಾ ಇದೀಗ ಮೂವರು ದಿಗ್ಗಜರ ಪುನರ್ಮಿಲನದೊಂದಿಗೆ ಗೆಲುವಿನ ಲಯಕ್ಕೆ ಮರಳುವುದನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

ಭಾರತ ಏಕದಿನ ತಂಡ: ಶುಭ್​ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್, ಅರ್ಷದೀಪ್ ಸಿಂಗ್, ಗುರ್ನೂರ್ ಬ್ರಾರ್, ಶಿವಂ ದುಬೆ.

Published On – 7:37 am, Tue, 14 July 26

Source link

ಟೀಮ್ ಇಂಡಿಯಾ ವಿರುದ್ಧ ‘ಬೆಥೆಲ್’ ಪ್ರಯೋಗ! – Kannada News | IND vs ENG: Jacob Bethell will open with Ben Duckett

ಟೀಮ್ ಇಂಡಿಯಾ ವಿರುದ್ಧದ ಟಿ20 ಸರಣಿಯಲ್ಲಿ 4-0 ಅಂತರದ ಭರ್ಜರಿ ಜಯ ಸಾಧಿಸಿ ಆತ್ಮವಿಶ್ವಾಸದಲ್ಲಿರುವ ಇಂಗ್ಲೆಂಡ್ ತಂಡ, ಇದೀಗ ಏಕದಿನ ಸಮರಕ್ಕೆ ಸಜ್ಜಾಗಿದೆ. ಬರ್ಮಿಂಗ್​ಹ್ಯಾಮ್​ನ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಇಂದಿನಿಂದ (ಜುಲೈ 14) ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗುತ್ತಿದ್ದು, ಈ ಪಂದ್ಯಕ್ಕಾಗಿ ಆತಿಥೇಯ ಇಂಗ್ಲೆಂಡ್ ತನ್ನ ಪ್ಲೇಯಿಂಗ್ ಇಲೆವೆನ್​ ಪ್ರಕಟಿಸಿದೆ.

ಈ ಪ್ಲೇಯಿಂಗ್ ಇಲೆವೆನ್​ನಲ್ಲಿ ಆರಂಭಿಕರಾಗಿ ಕಾಣಿಸಿಕೊಂಡಿರುವುದು ಯುವ ದಾಂಡಿಗ ಜೇಕಬ್ ಬೆಥೆಲ್ ಹಾಗೂ ಬೆನ್ ಡಕೆಟ್. ಅಂದರೆ ಟೀಮ್ ಇಂಡಿಯಾ ವಿರುದ್ಧದ ಪಂದ್ಯದ ಮೂಲಕ ಇಂಗ್ಲೆಂಡ್ ಅಚ್ಚರಿಯ ಪ್ರಯೋಗವೊಂದಕ್ಕೆ ಕೈಹಾಕಿದೆ.

ಜೇಕಬ್ ಬೆಥೆಲ್ ಆರಂಭಿಕ!

ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದ 22 ವರ್ಷದ ಎಡಗೈ ಆಟಗಾರ ಜೇಕಬ್ ಬೆಥೆಲ್ ಇದೀಗ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಇಂಗ್ಲೆಂಡ್ ಪರ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಅನುಭವಿ ಆಟಗಾರ ಬೆನ್ ಡಕೆಟ್ ಅವರೊಂದಿಗೆ ಅವರು ಓಪನರ್ ಆಗಿ ಕಣಕ್ಕಿಳಿಯಲಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಡಕೆಟ್ ಅವರೊಂದಿಗೆ ಇನಿಂಗ್ಸ್ ಆರಂಭಿಸುತ್ತಿರುವ 5ನೇ ಓಪನರ್ ಬೆಥೆಲ್ ಆಗಿದ್ದಾರೆ. ಟಾಪ್ ಆರ್ಡರ್‌ನಲ್ಲಿ ಬ್ಯಾಟ್ ಬೀಸುವುದು ಬೆಥೆಲ್ ಅವರ ವೈಯಕ್ತಿಕ ಆಯ್ಕೆಯೂ ಆಗಿರುವುದರಿಂದ ಈ ಹೊಸ ಜವಾಬ್ದಾರಿಯನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬ ಕುತೂಹಲ ಮೂಡಿಸಿದೆ.

ಇದಕ್ಕೂ ಮುನ್ನ ಇಂಗ್ಲೆಂಡ್ ತಂಡವು ಫಿಲ್ ಸಾಲ್ಟ್, ಜೇಮಿ ಸ್ಮಿತ್ ಮತ್ತು ವಿಲ್ ಜಾಕ್ಸ್ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಿ ಹಲವು ಪ್ರಯೋಗಗಳನ್ನು ನಡೆಸಿತ್ತು. ಆದರೆ, ಈ ಮೂವರಿಂದಲೂ ನಿರೀಕ್ಷಿತ ಮಟ್ಟದ ಸ್ಥಿರ ಪ್ರದರ್ಶನ ಮೂಡಿಬಂದಿರಲಿಲ್ಲ.

ಹೀಗಾಗಿ, ತಂಡಕ್ಕೆ ಬಲಿಷ್ಠ ಆರಂಭ ಒದಗಿಸುವ ನಿಟ್ಟಿನಲ್ಲಿ ಇಂಗ್ಲೆಂಡ್ ಮ್ಯಾನೇಜ್‌ಮೆಂಟ್ ಇದೀಗ ಯುವ ಆಟಗಾರ ಜೇಕಬ್ ಬೆಥೆಲ್ ಅವರಿಗೆ ಓಪನಿಂಗ್ ಜವಾಬ್ದಾರಿಯನ್ನು ವಹಿಸಿದೆ. ಈ ಮೂಲಕ ಇಂಗ್ಲೆಂಡ್ ತನ್ನ ಬ್ಯಾಟಿಂಗ್ ಕ್ರಮಾಂಕದಲ್ಲಿ ಹೊಸದೊಂದು ರಣತಂತ್ರಕ್ಕೆ ಕೈಹಾಕಿದೆ.

ರೂಟ್ ಕಂಬ್ಯಾಕ್: ಜೋಸ್ ಬಟ್ಲರ್‌ ‘ದ್ವಿಶತಕ’

ಸುಮಾರು ಆರು ತಿಂಗಳ ಸುದೀರ್ಘ ಬಿಡುವಿನ ಬಳಿಕ ಅನುಭವಿ ಬ್ಯಾಟರ್ ಜೋ ರೂಟ್ ಇಂಗ್ಲೆಂಡ್ ಏಕದಿನ ತಂಡಕ್ಕೆ ಮರಳಿದ್ದಾರೆ.

ಇನ್ನು ಸ್ಟಾರ್ ವಿಕೆಟ್‌ಕೀಪರ್-ಬ್ಯಾಟರ್ ಜೋಸ್ ಬಟ್ಲರ್ ಪಾಲಿಗೆ ಇದು ಅತ್ಯಂತ ವಿಶೇಷ ಪಂದ್ಯವಾಗಿದ್ದು, ಅವರು ಇಂಗ್ಲೆಂಡ್ ಪರ ತಮ್ಮ 200ನೇ ಏಕದಿನ ಪಂದ್ಯವನ್ನು ಆಡುತ್ತಿದ್ದಾರೆ.

ಇಂಗ್ಲೆಂಡ್ ಪ್ಲೇಯಿಂಗ್ 11: ಜೇಕಬ್ ಬೆಥೆಲ್, ಬೆನ್ ಡಕೆಟ್, ಜೋ ರೂಟ್, ಹ್ಯಾರಿ ಬ್ರೂಕ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಸ್ಯಾಮ್ ಕರನ್, ವಿಲ್ ಜ್ಯಾಕ್ಸ್, ಜೋಫ್ರಾ ಆರ್ಚರ್, ಲಿಯಾಮ್ ಡಾಸನ್, ಜೋಶ್ ಟಂಗ್, ಆದಿಲ್ ರಶೀದ್.

ಬಲಿಷ್ಠ ಭಾರತ ತಂಡದ ಸವಾಲು!

ಟಿ20 ಸರಣಿಯಲ್ಲಿ ಹೀನಾಯ ಸೋಲು ಕಂಡಿದ್ದ ಭಾರತ ತಂಡಕ್ಕೆ ಇದೀಗ ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್​ಪ್ರೀತ್ ಬುಮ್ರಾ ಅವರ ಸೇರ್ಪಡೆಯಿಂದ ದೊಡ್ಡ ಬಲ ಬಂದಿದೆ.

ಇದನ್ನೂ ಓದಿ: ದಿಗ್ಗಜರ ಪುನರ್ಮಿಲನ: ಇದುವೇ ಟೀಮ್ ಇಂಡಿಯಾದ ನೈಜ ಬಲ

ಶುಭ್‌ಮನ್ ಗಿಲ್ ನಾಯಕತ್ವದ ಟೀಮ್ ಇಂಡಿಯಾ, ಏಕದಿನ ಮಾದರಿಯಲ್ಲಿ ಸದ್ಯ ವಿಶ್ವದ ನಂ.1 ಶ್ರೇಯಾಂಕ ಹೊಂದಿದ್ದು, ಇಂಗ್ಲೆಂಡ್ ವಿರುದ್ಧ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.

Source link

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಬೇಕು: 40 ಓವರ್​ಗೆ ಗಿಲ್ ವಿರೋಧ! – Kannada News | IND vs ENG: Shubman Gill press conference Highlights

ಭಾರತ ಮತ್ತು ಇಂಗ್ಲೆಂಡ್ ನಡುವಣ ಏಕದಿನ ಸರಣಿಯು ಇಂದಿನಿಂದ (ಜು.14) ಶುರುವಾಗಲಿದೆ. ಬರ್ಮಿಂಗ್​ಹ್ಯಾಮ್​ನಲ್ಲಿ ನಡೆಯಲಿರುವ ಈ ಸರಣಿಯ ಆರಂಭಕ್ಕೂ ಮುನ್ನ, ಭಾರತ ತಂಡದ ನಾಯಕ ಶುಭ್​ಮನ್ ಗಿಲ್ ಭವಿಷ್ಯದ ಬ್ಲೂಪ್ರಿಂಟ್ ಅನ್ನು ಬಹಿರಂಗಪಡಿಸಿದ್ದಾರೆ. ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ನಿವೃತ್ತಿಯ ಕುರಿತಾದ ಊಹಾಪೋಹಗಳಿಗೆ ತೆರೆ ಎಳೆದಿರುವ ಅವರು, ಈ ಇಬ್ಬರೂ ದಿಗ್ಗಜರು 2027ರ ಐಸಿಸಿ ಏಕದಿನ ವಿಶ್ವಕಪ್‌ಗೆ ಭಾರತದ ಪ್ರಮುಖ ಯೋಜನೆಗಳ ಭಾಗವಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ವಿರಾಟ್ ಕೊಹ್ಲಿ ಜೊತೆಗಿನ ಚರ್ಚೆ!

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶುಭ್​ಮನ್ ಗಿಲ್, “ಕಳೆದ ಎರಡು ದಿನಗಳ ಹಿಂದೆಯಷ್ಟೇ ನಾನು ವಿರಾಟ್ ಭಾಯ್ ಜೊತೆ 2027ರ ಏಕದಿನ ವಿಶ್ವಕಪ್ ಯೋಜನೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದೇನೆ. ಸೌತ್ ಆಫ್ರಿಕಾದ ಪರಿಸ್ಥಿತಿಗೆ ತಕ್ಕಂತೆ ನಮ್ಮ ತಂಡದ ಸಂಯೋಜನೆ ಹೇಗಿರಬೇಕು, ಸದ್ಯ ತಂಡದಲ್ಲಿ ಇಲ್ಲದಿದ್ದರೂ ಭವಿಷ್ಯದಲ್ಲಿ ನಮಗೆ ನೆರವಾಗಬಲ್ಲ ಯುವ ಬೌಲರ್‌ಗಳು, ಆಲ್‌ರೌಂಡರ್‌ಗಳು ಮತ್ತು ಸ್ಪಿನ್ನರ್‌ಗಳು ಯಾರು ಎಂಬುದರ ಬಗ್ಗೆ ನಾವು ಮಾತನಾಡಿದ್ದೇವೆ” ಎಂದಿದ್ದಾರೆ.

ಹಿರಿಯ ಆಟಗಾರರೇ ತಂಡದ ಶಕ್ತಿ:

ರೋಹಿತ್ ಮತ್ತು ವಿರಾಟ್ ಅವರ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಗಿಲ್, “ವಿರಾಟ್ ಭಾಯ್ ಮತ್ತು ರೋಹಿತ್ ಭಾಯ್ ಕಳೆದ ಒಂದು ದಶಕದಿಂದ ಭಾರತೀಯ ಬ್ಯಾಟಿಂಗ್ ವಿಭಾಗದ ಬೆನ್ನೆಲುಬಾಗಿದ್ದಾರೆ. ಅವರು ಇಂದಿಗೂ ನಮ್ಮ ತಂಡದ ಅತ್ಯಂತ ಪ್ರಮುಖ ಭಾಗ. ವಿಭಿನ್ನ ಪರಿಸ್ಥಿತಿಗಳಲ್ಲಿ ಅವರು ದೇಶಕ್ಕಾಗಿ ಮ್ಯಾಚ್ ಗೆಲ್ಲಿಸಿಕೊಟ್ಟಿದ್ದಾರೆ. ಅವರಲ್ಲಿರುವ ಅಪಾರ ಅನುಭವ ಮತ್ತು ಕೌಶಲ್ಯ ತಂಡದ ಯುವ ಆಟಗಾರರಿಗೆ ದೊಡ್ಡ ಮಾರ್ಗದರ್ಶನ” ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ.

40 ಓವರ್‌ಗಳ ಏಕದಿನ ಪ್ರಸ್ತಾಪಕ್ಕೆ ಗಿಲ್ ವಿರೋಧ:

ಇತ್ತೀಚೆಗೆ ಐಸಿಸಿ ವಾರ್ಷಿಕ ಸಭೆಯಲ್ಲಿ ಏಕದಿನ ಕ್ರಿಕೆಟ್ ಅನ್ನು 40 ಓವರ್‌ಗಳಿಗೆ ಕಡಿತಗೊಳಿಸುವ ಬಗ್ಗೆ ಚರ್ಚೆಗಳು ನಡೆದಿರುವ ಕುರಿತು ಕೇಳಲಾದ ಪ್ರಶ್ನೆಗೆ ಶುಭ್​ಮನ್ ಗಿಲ್ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದರು. “ಏಕದಿನ ಕ್ರಿಕೆಟ್ ಅನ್ನು 40 ಓವರ್‌ಗಳಿಗೆ ಇಳಿಸುವುದು ಸರಿಯಲ್ಲ ಎಂದು ನನಗೆ ಅನ್ನಿಸುತ್ತದೆ. ಅದರ ಬದಲಿಗೆ, ಈ ಮಾದರಿಯಲ್ಲಿ ಮತ್ತೆ ಆಸಕ್ತಿ ಮೂಡಿಸಲು ಮೂರು ಅಥವಾ ನಾಲ್ಕು ದೇಶಗಳು ಭಾಗವಹಿಸುವ ‘ಟ್ರೈ-ಸೀರೀಸ್’ ಅಥವಾ ‘ಕ್ವಾಡ್ರಾಂಗ್ಯುಲರ್ ಸೀರೀಸ್’ಗಳನ್ನು ಹೆಚ್ಚಾಗಿ ಆಯೋಜಿಸಬೇಕು” ಎಂದು ಕ್ರಿಕೆಟ್ ಮಂಡಳಿಗಳಿಗೆ ಸಲಹೆ ನೀಡಿದ್ದಾರೆ.

ಟಿ20 ಸೋಲಿನ ಪ್ರಭಾವ ಏಕದಿನ ಸರಣಿಯ ಮೇಲಿಲ್ಲ!

ಇತ್ತೀಚೆಗೆ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗಳಲ್ಲಿ ಭಾರತ ಅನುಭವಿಸಿದ ಸೋಲಿನ ಬಗ್ಗೆ ಮಾತನಾಡಿದ ಗಿಲ್, “ಟಿ20 ಮತ್ತು ಏಕದಿನ ಎರಡೂ ಸಂಪೂರ್ಣ ವಿಭಿನ್ನ ಮಾದರಿಗಳು. ಟಿ20 ಸರಣಿಯ ಫಲಿತಾಂಶಗಳು ನಮ್ಮ ಏಕದಿನ ತಂಡದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಜಸ್​ಪ್ರೀತ್ ಬುಮ್ರಾ ಅವರ ಪುನರಾಗಮನವು ನಮ್ಮ ಬೌಲಿಂಗ್ ವಿಭಾಗವನ್ನು ಮತ್ತಷ್ಟು ಬಲಪಡಿಸಿದೆ. ನಾವು ಸಕಾರಾತ್ಮಕ ಮನೋಭಾವದೊಂದಿಗೆ ಹೊಸ ಸರಣಿಯನ್ನು ಆರಂಭಿಸಲಿದ್ದೇವೆ” ಎಂದು ಟೀಮ್ ಇಂಡಿಯಾ ನಾಯಕ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಟೀಮ್ ಇಂಡಿಯಾ ವಿರುದ್ಧ ‘ಬೆಥೆಲ್’ ಪ್ರಯೋಗ!

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯವು ಇಂದು (ಜುಲೈ 14, ಮಂಗಳವಾರ) ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿದ್ದು, ಶುಭ್​ಮನ್ ಗಿಲ್ ನೇತೃತ್ವದ ಅನುಭವಿ ಪಡೆ ಭರ್ಜರಿ ಪ್ರದರ್ಶನ ನೀಡುವ ಮೂಲಕ ಮೊದಲ ಮ್ಯಾಚ್​ನಲ್ಲೇ ಮೇಲುಗೈ ಸಾಧಿಸುವ ವಿಶ್ವಾಸದಲ್ಲಿದೆ.

Source link

Exit mobile version