Dudhsagar Falls: ಹಾಲಿನ ಕಡಲಿನಂತೆ ಹರಿಯುತ್ತಿದೆ ದೂದ್‌ ಸಾಗರ್​! – Kannada News |  Dudhsagar Falls: A Monsoon Spectacle Amidst Western Ghats Restrictions

ಬೆಳಗಾವಿ, ಜುಲೈ 13: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ, ಕಾರವಾರದ ಜೋಯಿಡಾದಲ್ಲಿ ಹುಟ್ಟುವ ದೂದ್ ಸಾಗರ ಜಲಪಾತವು ಜೀವಕಳೆ ಪಡೆದುಕೊಂಡಿದೆ. ಹಾಲಿನ ನೊರೆಯಂತೆ ಭೋರ್ಗರೆಯುತ್ತಾ ಧುಮ್ಮಿಕ್ಕುವ ಈ ಜಲಪಾತವನ್ನು ನೋಡುವ ದೃಶ್ಯ ಕಣ್ಣಿಗೆ ಹಬ್ಬವಾಗಿದೆ. ಕರ್ನಾಟಕದಲ್ಲಿ ಹುಟ್ಟಿ ಗೋವಾಕ್ಕೆ ಹರಿಯುವ ದೂದ್ ಸಾಗರ, ಮಹದಾಯಿ ನದಿಯನ್ನು ಸೇರುತ್ತದೆ. 1017 ಅಡಿ ಎತ್ತರದಿಂದ ಕಲ್ಲು-ಬಂಡೆಗಳನ್ನು ಕೊರೆದುಕೊಂಡು ರಭಸವಾಗಿ ಹರಿಯುವ ಈ ಜಲಪಾತವು ದೇಶದ ನಾಲ್ಕನೇ ಅತಿದೊಡ್ಡ ಜಲಪಾತವಾಗಿದೆ. ಕಳೆದ ಎರಡು ವರ್ಷಗಳಿಂದ ಪ್ರವಾಸಿಗರಿಗೆ ಇಲ್ಲಿ ಸಂಪೂರ್ಣ ನಿಷೇಧ ಹೇರಲಾಗಿದೆ. ಪ್ರಸ್ತುತ ಮಳೆ ಕಡಿಮೆಯಾಗಿದ್ದರೂ, ದೂದ್ ಸಾಗರದ ರುದ್ರರಮಣೀಯ ದೃಶ್ಯ ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Dam Water Level: ಇನ್ನೂ 100 ಅಡಿ ತಲುಪಿಲ್ಲ ಕೆಆರ್​ಎಸ್, ಕರ್ನಾಟಕದ ಡ್ಯಾಂಗಳ ಇಂದಿನ ನೀರಿನ ಮಟ್ಟದ ವಿವರ – Kannada News | Karnataka Reservoir Water Level on 13 July 2026: KRS Yet to Reach 100 Feet, Hemavathi, Kabini, Almatti Storage Remains Below Last Year

ಬೆಂಗಳೂರು, ಜುಲೈ 13: ಕರ್ನಾಟಕದಲ್ಲಿ ಮುಂಗಾರು ಮಳೆಯ (Monsoon Rain) ಕೊರತೆ ತೀವ್ರ ಆತಂಕಕ್ಕೆ ಕಾರಣವಾಗಿದೆ. ಜುಲೈ ತಿಂಗಳ ಆರಂಭದಲ್ಲಿ ದಕ್ಷಿಣ ಕನ್ನಡ, ಕಾವೇರಿ ಜಲಾನಯನ ಪ್ರದೇಶ ಹಾಗೂ ಬೆಳಗಾವಿ ಕಡೆ ಭಾರಿ ಮಳೆಯಾಗಿ ಜಲಾಶಯಗಳ ಒಳಹರಿವು ತುಸು ಹೆಚ್ಚಾಗಿದ್ದರೂ ಒಟ್ಟು ಲೆಕ್ಕದಲ್ಲಿ ನೀರಿನ ಸಂಗ್ರಹದಲ್ಲಿ ಭಾರಿ ಏರಿಕೆಯಾಗಿಲ್ಲ. ಕಳೆದ ವರ್ಷ ಜೂನ್ ಆರಂಭದಲ್ಲೇ ನೂರು ಅಡಿ ನೀರು ತುಂಬಿದ್ದ ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಕೆಆರ್​ಎಸ್​​ ಜಲಾಶಯದಲ್ಲಿ (KRS Dam) ಈ ವರ್ಷ ಇನ್ನೂ ನೀರಿನ ಮಟ್ಟ 92.15 ಅಡಿಗೆ ತಲುಪಿದೆಯಷ್ಟೆ. ಇದು ರಾಜ್ಯದ ಜನತೆಯನ್ನು ಆತಂಕ್ಕೆ ಈಡುಮಾಡಿದೆ.

ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ

  • ಗರಿಷ್ಠ ಮಟ್ಟ: 124.80 ಅಡಿ
  • ಪ್ರಸ್ತುತ ನೀರಿನ ಮಟ್ಟ : 92.15 ಅಡಿ
  • ಒಳಹರಿವು : 7,515 ಕ್ಯೂಸೆಕ್
  • ಹೊರಹರಿವು: 619 ಕ್ಯೂಸೆಕ್
  • ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ
  • ಇಂದಿನ ಸಂಗ್ರಹ : 17.253 ಟಿಎಂಸಿ
  • 24 ಗಂಟೆಯಲ್ಲಿ 0.588 ಹೆಚ್ಚಳವಾಗಿದೆ.

ಹಾಸನ ಗೊರೂರು ಸಮೀಪದ ಹೇಮಾವತಿ ಜಲಾಶಯ ನೀರಿನ ಮಟ್ಟ

  • ಗರಿಷ್ಠ ಮಟ್ಟ: 2922 ಅಡಿ (37 TMC)
  • ಇಂದಿನ ಪ್ರಮಾಣ: 2903.52(22.048 TMC)
  • ಒಳ ಹರಿವು: 2960 ಕ್ಯೂಸೆಕ್
  • ಹೊರ ಹರಿವು: 300 ಕ್ಯೂಸೆಕ್

ಈ ಜಲಾಶಯದಲ್ಲಿ ಕಳೆದ ವರ್ಷ ಇದೇ ದಿನ 2920.82 ಅಡಿ (35.963.TMC) ನೀರಿತ್ತು. 8780 ಕ್ಯೂಸೆಕ್ ನೀರಿನ ಒಳ ಹರಿವು ಮತ್ತು 5400 ಕ್ಯುಸೆಕ್ ಹೊರ ಹರಿವು ಇತ್ತು.

ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರ ಡ್ಯಾಂ ನೀರಿನ ಮಟ್ಟ

  • ಡ್ಯಾಂ ಗರಿಷ್ಟ ಮಟ್ಟ: 519.60 ಮೀಟರ್
  • ಇಂದಿನ ನೀರಿನ ಮಟ್ಟ: 517.27 ಮೀಟರ್
  • ಒಳ ಹರಿವು: 56,756 ಕ್ಯೂಸೆಕ್
  • ಹೊರ ಹರಿವು: 423 ಕ್ಯೂಸೆಕ್

ಮೈಸೂರು ಕಬಿನಿ ಜಲಾಶಯ ನೀರಿನ ಮಟ್ಟ

  • ಇಂದಿನ ನೀರಿನ ಮಟ್ಟ: 70.06 ಅಡಿ
  • ಕಳೆದ ವರ್ಷ ಇದೇ ದಿನ ಇದ್ದ ನೀರಿನ ಮಟ್ಟ: 81.98 ಅಡಿ
  • 11.71 ಟಿಎಂಸಿ ನೀರು ಸಂಗ್ರಹ
  • ಕಳೆದ ವರ್ಷ ಇದೇ ದಿನ 18.18 ಟಿಎಂಸಿ ಸಂಗ್ರಹ
  • 3,166 ಕ್ಯೂಸೆಕ್ ನೀರು ಒಳಹರಿವು
  • 500 ಕ್ಯೂಸೆಕ್ ನೀರು ಹೊರಹರಿವು

ಇದನ್ನೂ ಓದಿ: ರಾಜ್ಯದಲ್ಲಿ ಭೀಕರ ಬರಗಾಲದ ಛಾಯೆ: ಕೆರೆಗಳು ಬರಡು, ಬೆಳೆ ಒಣಗಿ ಅನ್ನದಾತ ಕಂಗಾಲು!

ಮತ್ತೊಂದೆಡೆ, ರಾಜ್ಯದಲ್ಲಿ ಮುಂಗಾರು ಮಳೆ ದುರ್ಬಲಗೊಂಡಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ನೀರಿನ ಅಭಾವ ಸೃಷ್ಟಿಯಾಗಿ ತೀವ್ರತರದ ಸಮಸ್ಯೆ ಎದುರಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಿರುಪತಿ ತಿಮ್ಮಪ್ಪನಿಗೆ ಪ್ರತಿದಿನ ಮೊದಲ ಆರತಿ ಬೆಳಗುವ ಹಕ್ಕು ಕರ್ನಾಟಕಕ್ಕೆ ಸಿಕ್ಕಿದ್ದು ಹೇಗೆ? ಇಲ್ಲಿದೆ ರೋಚಕ ಇತಿಹಾಸ! – Kannada News | Why is Tirupati Temple First Aarti Performed on Behalf of Karnataka? Know the History

ಬೆಂಗಳೂರು, ಜುಲೈ 13: ಆಂಧ್ರಪ್ರದೇಶದ ತಿರುಮಲದಲ್ಲಿರುವ ವಿಶ್ವಪ್ರಸಿದ್ಧ ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ಪ್ರತಿದಿನ ಬೆಳಿಗ್ಗೆ ನೆರವೇರಿಸಲಾಗುವ ಅತ್ಯಂತ ಪವಿತ್ರವಾದ ‘ಮೊದಲ ಆರತಿ’ ಸಾಂಪ್ರದಾಯಿಕವಾಗಿ ನಮ್ಮ ಕರ್ನಾಟಕ ರಾಜ್ಯದ ಹೆಸರಿನಲ್ಲೇ ಸಲ್ಲಿಕೆಯಾಗುತ್ತದೆ. ತಿರುಪತಿ ಕ್ಷೇತ್ರಕ್ಕೂ ಕರ್ನಾಟಕಕ್ಕೂ 400 ವರ್ಷಗಳ ಅವಿನಾಭಾವ ಧಾರ್ಮಿಕ ಮತ್ತು ಐತಿಹಾಸಿಕ ನಂಟಿದೆ. ಈ ನಂಟಿನ ಪ್ರತೀಕವಾಗಿ ಸ್ವಾಮಿಯ ಮೊದಲ ಆರತಿ ಕರ್ನಾಟಕದ ಪರವಾಗಿಯೇ ಸಲ್ಲಿಸಲಾಗುತ್ತದೆ.

ಮೈಸೂರು ಮಹಾರಾಜರ ಕೊಡುಗೆ ಮತ್ತು ಐತಿಹಾಸಿಕ ಒಪ್ಪಂದ

ಈ ವಿಶಿಷ್ಟ ಧಾರ್ಮಿಕ ಹಕ್ಕಿನ ಹಿಂದೆ ಮೈಸೂರು ಸಂಸ್ಥಾನದ ಒಡೆಯರ್ ರಾಜವಂಶದ ಭಕ್ತಿ ಮತ್ತು ಅಪೂರ್ವ ಕೊಡುಗೆಯ ಇತಿಹಾಸವಿದೆ. ಮೈಸೂರು ಮಹಾರಾಜರ ಕಾಲದಲ್ಲಿ ತಿರುಮಲ ಶ್ರೀವಾರಿಯ ಗರ್ಭಗುಡಿಯೊಳಗೆ ನಿರಂತರವಾಗಿ ಬೆಳಗುವ ಪವಿತ್ರ ದೀಪಗಳಾದ ಬ್ರಹ್ಮದೀಪ, ಮಹಾರಾಜ ದೀಪ ಹಾಗೂ ಅಖಂಡ ದೀಪಗಳಿಗಾಗಿ ಪ್ರತಿದಿನ 5 ಕೆಜಿ ಪರಿಶುದ್ಧವಾದ ತುಪ್ಪವನ್ನು ಕಾಣಿಕೆಯಾಗಿ ನೀಡುವ ಅದ್ಭುತ ಸಂಪ್ರದಾಯವನ್ನು ಆರಂಭಿಸಲಾಗಿತ್ತು.

ಮೈಸೂರು ಸಂಸ್ಥಾನವು ನೀಡಿದ ಈ ಸುದೀರ್ಘ ಧಾರ್ಮಿಕ ಮತ್ತು ಆರ್ಥಿಕ ಕೊಡುಗೆಗಳ ಗೌರವಾರ್ಥವಾಗಿ, ಪ್ರತಿದಿನ ಬೆಳಿಗ್ಗೆ ಸುಪ್ರಭಾತ ಸೇವೆಯ ನಂತರ ನೆರವೇರುವ ದಿನದ ಮೊದಲ ಕರ್ಪೂರದ ಆರತಿಯನ್ನು ಸಾಂಪ್ರದಾಯಿಕವಾಗಿ ಕರ್ನಾಟಕ ರಾಜ್ಯದ ಹೆಸರಿನಲ್ಲಿ ಸಲ್ಲಿಸುವ ಐತಿಹಾಸಿಕ ಹಕ್ಕನ್ನು ದೇವಸ್ಥಾನದ ಆಡಳಿತ ಮಂಡಳಿ ನೀಡಿದೆ.

ವಿಜಯನಗರ ಸಾಮ್ರಾಜ್ಯ ಮತ್ತು ಪ್ರೋಟೋಕಾಲ್ ಇತಿಹಾಸ

ಮೈಸೂರು ಒಡೆಯರಿಗಿಂತ ಮುಂಚೆ, 14 ರಿಂದ 17 ನೇ ಶತಮಾನದವರೆಗೆ ಆಳಿದ ವಿಜಯನಗರದ ಅರಸರಾದ ಶ್ರೀಕೃಷ್ಣದೇವರಾಯ, ಅಚ್ಯುತರಾಯ ಮುಂತಾದವರು ತಿರುಪತಿ ತಿಮ್ಮಪ್ಪನಿಗೆ ಅಸಂಖ್ಯಾತ ವಜ್ರ ವೈಢೂರ್ಯ ಹಾಗೂ ಬಂಗಾರದ ಕಿರೀಟಗಳನ್ನು ಕಾಣಿಕೆಯಾಗಿ ನೀಡಿದ್ದರು. ವಿಜಯನಗರ ಸಾಮ್ರಾಜ್ಯದ ಪತನದ ನಂತರ ಮೈಸೂರು ಸಂಸ್ಥಾನವು ಈ ಧಾರ್ಮಿಕ ಕೈಂಕರ್ಯಗಳನ್ನು ಮುಂದುವರಿಸಿಕೊಂಡು ಬಂದಿತ್ತು.

ಇದನ್ನೂ ಓದಿ ತಿರುಪತಿ ತಿಮ್ಮಪ್ಪನ ಮೊದಲ ಆರತಿಯಲ್ಲಿ ಇನ್ಮುಂದೆ ಕರ್ನಾಟಕದ ಸಚಿವರು, ಶಾಸಕರಿಗೂ ಅವಕಾಶ: ಸಿಎಂ ಮಹತ್ವದ ಘೋಷಣೆ!

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಭಾಷಾವಾರು ಪ್ರಾಂತ್ಯಗಳು ವಿಂಗಡಣೆಯಾದ ಮೇಲೂ ಈ ಐತಿಹಾಸಿಕ ಹಕ್ಕನ್ನು ಹಾಗೇ ಉಳಿಸಿಕೊಳ್ಳಲಾಯಿತು. ತಿರುಮಲ ಕ್ಷೇತ್ರವು ಆಂಧ್ರಪ್ರದೇಶದ ಭೌಗೋಳಿಕ ವ್ಯಾಪ್ತಿಗೆ ಸೇರಿದರೂ, ಪ್ರತಿದಿನ ಬೆಳಿಗ್ಗೆ ಕರ್ನಾಟಕ ಸರ್ಕಾರದ ವತಿಯಿಂದ ತಿರುಪತಿಯಲ್ಲಿ ನಿಯೋಜನೆಗೊಂಡಿರುವ ವಿಶೇಷ ಅಧಿಕಾರಿಯೊಬ್ಬರು ಅಲ್ಲಿ ಹಾಜರಿದ್ದು ಈ ಪ್ರಸಾದ ಮತ್ತು ಗೌರವವನ್ನು ಸ್ವೀಕರಿಸುತ್ತಾರೆ. ಇದೀಗ ಸಿಎಂ ಡಿ.ಕೆ ಶಿವಕುಮಾರ್ ಆದೇಶದಂತೆ ತಿರುಪತಿ ತಿಮ್ಮಪ್ಪನ ಮೊದಲ ಆರತಿಯಲ್ಲಿ ಕರ್ನಾಟಕದ ಸಚಿವರು, ಶಾಸಕರಿಗೂ ಅವಕಾಶ ನೀಡಲು ಸರ್ಕಾರ ಮುಂದಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಮೈದಿಯಾ ಏರ್​ಪೋರ್ಟ್​ ಮೇಲೆ ಅಮೆರಿಕ ಬಾಂಬ್ ದಾಳಿ – Kannada News | US Iran Conflict Intensifies: America Bombs Omidiya Airport, Iran Retaliates Against US, Israel, and Gulf Nations

ಟೆಹ್ರಾನ್, ಜುಲೈ 13: ಅಮೆರಿಕ ಮತ್ತು ಇರಾನ್ ನಡುವೆ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮಧ್ಯಪ್ರಾಚ್ಯದಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಅಮೆರಿಕವು ಇರಾನ್‌ನ ಮೇಲೆ ಐದನೇ ಸುತ್ತಿನ ದಾಳಿ ನಡೆಸಿದ್ದು, ಇರಾನ್‌ನ ಖುಜಿಸ್ತಾನ್ ಪ್ರಾಂತ್ಯದಲ್ಲಿರುವ ಒಮೈದಿಯಾ ಏರ್‌ಪೋರ್ಟ್ ಮೇಲೆ ಭೀಕರ ಬಾಂಬ್ ದಾಳಿ ನಡೆಸಿದೆ. ಇರಾನ್‌ನಿಂದ ಹಡಗುಗಳ ಮೇಲಿನ ದಾಳಿಯನ್ನು ಖಂಡಿಸಿ ಅಮೆರಿಕ ಈ ಕ್ರಮ ಕೈಗೊಂಡಿದೆ.

ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್ ಕೂಡ ಸುಮ್ಮನಿಲ್ಲ. ಅದು ಅಮೆರಿಕದ ಸೇನಾ ನೆಲೆಗಳು ಮತ್ತು ಇಸ್ರೇಲ್ ಮೇಲೆ ಕ್ಷಿಪಣಿ ಮಳೆ ಸುರಿಸಿದೆ. ಕತಾರ್, ಕುವೈತ್, ಓಮನ್, ಬಹ್ರೇನ್ ಸೇರಿದಂತೆ ಗಲ್ಫ್ ರಾಷ್ಟ್ರಗಳ ಮೇಲೂ ಡ್ರೋನ್ ದಾಳಿ ನಡೆಸಿದೆ. ದುಬೈನ ಪಾಮ್ ಹೋಟೆಲ್‌ನಲ್ಲಿ ಸ್ಫೋಟ ಸಂಭವಿಸಿ, ದಟ್ಟ ಹೊಗೆ ಕಾಣಿಸಿಕೊಂಡಿದ್ದು, ಅಲ್ಲಿಯೂ ದಾಳಿಯ ಆತಂಕವಿದೆ. ಖಮೇನಿ ಅಂತ್ಯಕ್ರಿಯೆ ಬಳಿಕ ಈ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ.

ಅಮೆರಿಕವು ಇರಾನ್‌ನ 140ಕ್ಕೂ ಹೆಚ್ಚು ಸೇನಾ ಮತ್ತು ವಾಣಿಜ್ಯ ಗುರಿಗಳನ್ನು ಧ್ವಂಸಗೊಳಿಸಿರುವುದಾಗಿ ಹೇಳಿಕೊಂಡರೆ, ಇರಾನ್ ತಾನು ಅಮೆರಿಕದ ನೆಲೆಗಳ ಮೇಲೆ ನಡೆಸಿದ ದಾಳಿಗಳ ವೀಡಿಯೊಗಳನ್ನು ಬಿಡುಗಡೆ ಮಾಡಿದೆ. ಈ ಸಂಘರ್ಷದಿಂದ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 70 ಡಾಲರ್‌ಗಳಿಂದ 80 ಡಾಲರ್‌ಗೆ ಏರಿದ್ದು, ವಿಶ್ವ ಆತಂಕದಲ್ಲಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

1.8 ಕೋಟಿ ರೂ. ಬಾಕಿ ಉಳಿಸಿಕೊಂಡ ಆರೋಪ; ನಟ ಆರ್ಯ ವಿರುದ್ಧ ಕೇಸ್ – Kannada News | Actor Arya Faces Fraud Case: Unpaid Film Equipment Rentals, Hyderabad Police Probe

ತಮಿಳು ಚಿತ್ರರಂಗದ ಪ್ರಸಿದ್ಧ ನಟ ಆರ್ಯ ವಿರುದ್ಧ ಹೈದರಾಬಾದ್‌ನಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಶೂಟಿಂಗ್ ಉಪಕರಣಗಳನ್ನು ಬಾಡಿಗೆಗೆ ಪಡೆದು ಹಣ ಪಾವತಿಸದ ಆರೋಪ ಇವರ ಮೇಲಿದೆ. ಹೈದರಾಬಾದ್ ಮೂಲದ ಸಂಸ್ಥೆಯೊಂದಕ್ಕೆ 1.8 ಕೋಟಿ ರೂಪಾಯಿಗೂ ಅಧಿಕ ಬಾಕಿ ಹಣ ನೀಡಬೇಕಾಗಿದೆ. ಈ ಸಂಬಂಧ ಸಂಸ್ಥೆಯು ಪೊಲೀಸರಿಗೆ ದೂರು ನೀಡಿದೆ.

ಭರವಸೆ ನೀಡಿದ್ದ ಆರ್ಯ

‘ತಾಹರ್ ಸಿನಿ ಟೆಕ್ನಿಕ್’ ಸಂಸ್ಥೆಯು ಜುಲೈ 10 ರಂದು ಪೊಲೀಸರಿಗೆ ಈ ದೂರು ನೀಡಿದೆ. ಆರ್ಯ ನಟನೆಯ ‘ಅನಂತನ್ ಕಾಡು’ ಸಿನಿಮಾದ ಶೂಟಿಂಗ್‌ಗಾಗಿ ಉಪಕರಣಗಳನ್ನು ಪಡೆಯಲಾಗಿತ್ತು. ಈ ವೇಳೆ ಚಿತ್ರದ ನಾಯಕ ನಟ ಆರ್ಯ ಪ್ರೊಡಕ್ಷನ್ ಹೌಸ್ ಎಲ್ಲಾ ಹಣವನ್ನು ಚುಕ್ತಾ ಮಾಡುತ್ತದೆ ಎಂದು ಭರವಸೆ ಕೊಟ್ಟಿದ್ದರು.

ಒಪ್ಪಂದ ಮುರಿದ ಚಿತ್ರತಂಡ

ಈ ಭರವಸೆಯ ಮೇರೆಗೆ 2025ರ ಫೆಬ್ರವರಿಯಲ್ಲಿ ಎರಡೂ ಸಂಸ್ಥೆಗಳ ನಡುವೆ ಒಪ್ಪಂದವಾಗಿತ್ತು. ಹೈದರಾಬಾದ್‌ನಿಂದ ಕೇರಳಕ್ಕೆ ಡಿಜಿಟಲ್ ಕ್ಯಾಮೆರಾಗಳು ಮತ್ತು ಲೈಟಿಂಗ್ ಉಪಕರಣಗಳನ್ನು ಸರಬರಾಜು ಮಾಡಲಾಗಿತ್ತು. ಒಟ್ಟು ಒಪ್ಪಂದದ ಮೊತ್ತ 2.12 ಕೋಟಿ ರೂಪಾಯಿ ಆಗಿತ್ತು. ಆದರೆ ಉಪಕರಣಗಳನ್ನು ಬಳಸಿಕೊಂಡ ನಂತರ ಚಿತ್ರತಂಡ ಹಣ ನೀಡದೆ ವಂಚಿಸಿದೆ. 32 ಲಕ್ಷ ರೂಪಾಯಿ ನೀಡಿ ಇನ್ನುಳಿದ 1.8 ಕೋಟಿ ರೂಪಾಯಿಯನ್ನು ಬಾಕಿ ಉಳಿಸಿಕೊಂಡಿದೆ.

ಇದನ್ನೂ ಓದಿ: ಅಪ್ರಾಪ್ತೆ ಜೊತೆ ಕಾರ್ತಿಕ್ ಆರ್ಯನ್ ಡೇಟಿಂಗ್? ಇಬ್ಬರ ಮಧ್ಯೆ 18 ವರ್ಷ ವಯಸ್ಸಿನ ಅಂತರ

ಮ್ಯಾನೇಜರ್‌ಗೆ ಬೆದರಿಕೆ ಹಾಕಿದ ನಟ

ಸಿನಿಮಾ ಬಿಡುಗಡೆಗೆ ಮುನ್ನ ಎಲ್ಲಾ ಬಾಕಿ ಹಣವನ್ನು ತೀರಿಸುವುದಾಗಿ ಚಿತ್ರತಂಡ ಹೇಳಿತ್ತು. ಹಣ ಪಾವತಿಸಿದ ನಂತರವೇ ಸಂಸ್ಥೆಯಿಂದ ‘ನೋ ಡ್ಯೂಸ್ ಸರ್ಟಿಫಿಕೇಟ್’ ಪಡೆಯುವುದಾಗಿ ಒಪ್ಪಿಕೊಂಡಿತ್ತು. ಆದರೆ ಹಲವು ಬಾರಿ ನೆನಪಿಸಿದರೂ ಚಿತ್ರತಂಡ ಹಣ ನೀಡಿಲ್ಲ. ಬಾಕಿ ಹಣ ಕೇಳಲು ಹೋದ ಸಂಸ್ಥೆಯ ಮ್ಯಾನೇಜರ್‌ಗೆ ನಟ ಆರ್ಯ ಮತ್ತು ನಿರ್ಮಾಪಕರು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸೆನ್ಸಾರ್ ಕಟ್ ಇಲ್ಲದೆ ‘ಜನ ನಾಯಗನ್’ ಸಿನಿಮಾ ನೋಡಲು ವಿಜಯ್ ಅಭಿಮಾನಿಗಳಿಗೆ ಸುವರ್ಣಾವಕಾಶ – Kannada News | Thalapathy Vijay Fans Can Watch Jana Nayagan Without CBFC Cuts, Here is How

ತಮಿಳುನಾಡು ಮುಖ್ಯಮಂತ್ರಿ ಹಾಗೂ ಸ್ಟಾರ್ ನಟ ವಿಜಯ್ ಅವರ ಕೊನೆಯ ಸಿನಿಮಾ ‘ಜನ ನಾಯಗನ್’ ಬಿಡುಗಡೆಗೆ ಸಜ್ಜಾಗಿದೆ. ಸೆನ್ಸಾರ್ ಮಂಡಳಿ ಈ ಚಿತ್ರಕ್ಕೆ ‘ಎ’ ಪ್ರಮಾಣಪತ್ರ ನೀಡಿದೆ. ಸುಮಾರು 7 ತಿಂಗಳ ವಿಳಂಬದ ನಂತರ ಸಿನಿಮಾ ಥಿಯೇಟರ್‌ಗೆ ಬರುತ್ತಿದೆ. ಭಾರತದಲ್ಲಿ ರಿಲೀಸ್ ಆಗುವ ಸಿನಿಮಾಗೆ ಸೆನ್ಸಾರ್ ಮಂಡಳಿ ಹಲವು ಕಟ್‌ಗಳನ್ನು ಮಾಡಿದೆ. ಆದರೆ ವಿದೇಶಗಳಲ್ಲಿ ಯಾವುದೇ ಕಟ್ ಇಲ್ಲದೆ ಒರಿಜಿನಲ್ ಸಿನಿಮಾ ಬಿಡುಗಡೆಯಾಗುತ್ತಿದೆ. ವಿದೇಶದಲ್ಲಿರುವ ವಿಜಯ್ ಅಭಿಮಾನಿಗಳು ಚಿತ್ರದ ರಾ ಮತ್ತು ಅನ್‌ಕಟ್ ವರ್ಷನ್ ನೋಡಬಹುದು.

ವಿದೇಶಿ ವಿತರಕರಿಂದ ಅಧಿಕೃತ ಪ್ರಕಟಣೆ

ಯುಕೆಯಲ್ಲಿ ಈ ಚಿತ್ರವನ್ನು ‘ಅಹಿಂಸಾ ಎಂಟರ್‌ಟೈನ್‌ಮೆಂಟ್’ ಸಂಸ್ಥೆ ವಿತರಣೆ ಮಾಡುತ್ತಿದೆ. ಜುಲೈ 24 ರಂದು ಯುಕೆಯಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂದು ವಿತರಕರು ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ. ಅಲ್ಲಿ ಈ ಚಿತ್ರಕ್ಕೆ 15+ ರೇಟಿಂಗ್ ಸಿಕ್ಕಿದೆ. ಯಾವುದೇ ಸೀನ್ ಅಥವಾ ಡೈಲಾಗ್‌ಗೆ ಕತ್ತರಿ ಹಾಕಲಾಗಿಲ್ಲ. ವಿಜಯ್ ಅವರ ಮಾಸ್ ಆಕ್ಷನ್ ಇಡೀ ಸಿನಿಮಾವನ್ನು ಒರಿಜಿನಲ್ ಆಗಿಯೇ ನೋಡಬಹುದು ಎಂದು ವಿತರಕರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ‘ಜನ ನಾಯಗನ್’ ಸೆನ್ಸಾರ್ ಪ್ರಕ್ರಿಯೆ ಪೂರ್ಣ: ಸಿಎಂ ವಿಜಯ್ ಚಿತ್ರಕ್ಕೆ ‘A’ ಪ್ರಮಾಣಪತ್ರ

ಭಾರತದ ವರ್ಷನ್‌ನಲ್ಲಿ ಆದ ಪ್ರಮುಖ ಬದಲಾವಣೆಗಳು

ಈ ಸಿನಿಮಾದಲ್ಲಿ ವಿಜಯ್ ಅವರ ಪಾತ್ರದ ಹೆಸರು ‘ದಳಪತಿ ವೆಟ್ರಿ ಕೊಂಡಾನ್’. ಇದರ ಮೊದಲ ಅಕ್ಷರಗಳನ್ನು ಸೇರಿಸಿದರೆ ‘TVK’ ಎಂದಾಗುತ್ತದೆ. ಇದು ವಿಜಯ್ ಅವರ ರಾಜಕೀಯ ಪಕ್ಷದ (ತಮಿಳಗ ವೆಟ್ರಿ ಕಳಗಂ) ಹೆಸರೂ ಹೌದು. ಸಿನಿಮಾದಲ್ಲಿದ್ದ ‘ಅಂಬೇಡ್ಕರ್ ಸಟಮ್… ಟು… TVK ಸಟಮ್’ ಎಂಬ ಡೈಲಾಗ್‌ ಅನ್ನು ಸೆನ್ಸಾರ್ ಮಂಡಳಿ ತೆಗೆದುಹಾಕಿದೆ. ಆಡಿಯೋ ಮತ್ತು ವಿಡಿಯೋ ಎರಡರಲ್ಲೂ ಈ ಬದಲಾವಣೆ ಮಾಡಲಾಗಿದೆ.

ಸೆನ್ಸಾರ್ ಕತ್ತರಿಗೆ ಸಿಲುಕಿದ ಇತರ ದೃಶ್ಯಗಳು

ಸಿನಿಮಾದಲ್ಲಿ ಬರುವ ‘ಓಂ’ ಮತ್ತು ‘ನ್ಯೂ ಇಂಡಿಯಾ’ ಎಂಬ ಪದಗಳನ್ನು ಮ್ಯೂಟ್ ಮಾಡಲಾಗಿದೆ. ಸದ್ದಾಂ ಹುಸೇನ್ ಗಲ್ಲು ಶಿಕ್ಷೆಗೆ ಸಂಬಂಧಿಸಿದ ಡೈಲಾಗ್‌ಗಳನ್ನು ಬದಲಾಯಿಸಲಾಗಿದೆ. ಪೊಲೀಸ್ ಅಧಿಕಾರಿಯ ಬ್ಯಾಡ್ಜ್‌ಗೆ ಗೌರವ ನೀಡದ ದೃಶ್ಯವನ್ನು ತೆಗೆಯಲಾಗಿದೆ. ‘ಭಾಗವತಂ’ ಮತ್ತು ‘ರಂಗನಾಥರ್’ ಎಂಬ ಪದಗಳನ್ನು ಕೂಡ ಸೈಲೆನ್ಸ್ ಮಾಡಲಾಗಿದೆ. ಕೆಲವು ಅಶ್ಲೀಲ ಬೈಗುಳದ ಪದಗಳನ್ನು ಮ್ಯೂಟ್ ಮಾಡಲಾಗಿದೆ. ಮಗುವನ್ನು ಸುಡುವ ದೃಶ್ಯ ಮತ್ತು ಭಾರತದ ರಾಷ್ಟ್ರಧ್ವಜ ನೆಲಕ್ಕೆ ಬೀಳುವ ದೃಶ್ಯಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅರ್ಹತೆ ಪಡೆದರೂ ಏಷ್ಯನ್ ಗೇಮ್ಸ್​ನಿಂದ ಭಾರತ ಫುಟ್‌ಬಾಲ್ ತಂಡ ಹೊರಕ್ಕೆ! – Kannada News | Indian football teams will not play in the Asian Games 2026

ಭಾರತದ ಪುರುಷರ ಮತ್ತು ಮಹಿಳೆಯರ ರಾಷ್ಟ್ರೀಯ ಫುಟ್‌ಬಾಲ್ ತಂಡಗಳು ಮುಂಬರುವ ಏಷ್ಯನ್ ಗೇಮ್ಸ್ 2026 ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿವೆ. ಇದಕ್ಕೆ ಮುಖ್ಯ ಕಾರಣ ಕ್ರೀಡಾ ಸಚಿವಾಲಯದ ಕಠಿಣ ನಿಯಮಾವಳಿಗಳು. ಅಂದರೆ ಭಾರತ ಸರ್ಕಾರದ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಬಹು-ಕ್ರೀಡಾಕೂಟಗಳಿಗೆ ಕಳುಹಿಸುವ ತಂಡಗಳಿಗೆ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೆ ತಂದಿದೆ.

ಏಷ್ಯನ್ ಗೇಮ್ಸ್ ಕೇವಲ ಅನುಭವ ಪಡೆಯುವ ಪ್ರವಾಸವಲ್ಲ. ಅದು ಪದಕ ಗೆಲ್ಲುವ ವೇದಿಕೆ ಎಂದು ಕೇಂದ್ರ ಕೀಡಾ ಸಚಿವಾಲಯ ಸ್ಪಷ್ಟಪಡಿಸಿದೆ. ಅಲ್ಲದೆ ಇದಕ್ಕಾಗಿಯೇ ಸರ್ಕಾರ ಕೆಲ ಮಾನದಂಡಗಳನ್ನು ಪರಿಚಯಿಸಿದೆ.

ಭಾರತ ಸರ್ಕಾರದ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಅಧಿಕೃತ ಪಾಲಿಸಿಯ ಪ್ರಕಾರ, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ನಂತಹ ಪ್ರಮುಖ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಿಗೆ ಕ್ರೀಡಾಪಟುಗಳು ಮತ್ತು ತಂಡಗಳನ್ನು ಆಯ್ಕೆ ಮಾಡಲು ಕಟ್ಟುನಿಟ್ಟಾದ “ಮೆಡಲ್ ಪ್ರೊಫೈಲ್” ಮಾನದಂಡಗಳನ್ನು ನಿಗದಿಪಡಿಸಲಾಗಿದೆ.

ಕ್ರೀಡಾ ಸಚಿವಾಲಯದ ಪ್ರಮುಖ ನಿಯಮಗಳು ಇಲ್ಲಿವೆ:

ಫುಟ್‌ಬಾಲ್, ಹಾಕಿ, ಕ್ರಿಕೆಟ್, ಬ್ಯಾಸ್ಕೆಟ್‌ಬಾಲ್‌ನಂತಹ ತಂಡಗಳು ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆಯಬೇಕಾದರೆ ಈ ಕೆಳಗಿನ ಮಾನದಂಡವನ್ನು ತಲುಪಿರಬೇಕು.

  • ಏಷ್ಯನ್ ಕ್ರೀಡಾ ಒಕ್ಕೂಟಗಳ ಅಧಿಕೃತ ಶ್ರೇಯಾಂಕದ ಪ್ರಕಾರ ಆ ತಂಡ ಏಷ್ಯಾದಲ್ಲಿ ಮೊದಲ 8 ಸ್ಥಾನಗಳ ಒಳಗೆ ಇರಬೇಕು.
  • ಕಳೆದ ಒಂದು ವರ್ಷದಲ್ಲಿ ತಂಡದ ಪ್ರದರ್ಶನವು ಪದಕ ಗೆಲ್ಲುವ ಮಟ್ಟದಲ್ಲಿರಬೇಕು.

ಈ ಎರಡು ನಿಯಮಗಳ ಕಾರಣವೇ ಇದೀಗ ಭಾರತ ಫುಟ್‌ಬಾಲ್ ತಂಡ ಏಷ್ಯನ್ ಗೇಮ್ಸ್ 2026 ರಿಂದ ಹೊರಗುಳಿಯಬೇಕಾಗಿ ಬಂದಿದೆ.

  • ಟಾಪ್-8 ನಿಯಮದ ಅಡ್ಡಿ: ಕ್ರೀಡಾ ಸಚಿವಾಲಯದ ನಿಯಮದ ಪ್ರಕಾರ, ಯಾವುದೇ ತಂಡವು ಏಷ್ಯನ್ ಗೇಮ್ಸ್‌ಗೆ ಹೋಗಬೇಕಾದರೆ ಅದು ಏಷ್ಯಾದಲ್ಲಿ ಮೊದಲ 8 ಶ್ರೇಯಾಂಕಗಳ ಒಳಗೆ ಇರಬೇಕು.
  • ಕಡಿಮೆ ಶ್ರೇಯಾಂಕ: ಭಾರತ ಪುರುಷರ ಫುಟ್‌ಬಾಲ್ ತಂಡವು ಸದ್ಯ ಏಷ್ಯಾದಲ್ಲಿ 26ನೇ ಸ್ಥಾನದಲ್ಲಿದೆ ಮತ್ತು ಮಹಿಳಾ ತಂಡವು 13ನೇ ಸ್ಥಾನದಲ್ಲಿದೆ. ಎರಡೂ ತಂಡಗಳು ಸರ್ಕಾರದ ‘ಟಾಪ್-8’ ಮಾನದಂಡವನ್ನು ತಲುಪಲು ವಿಫಲವಾಗಿವೆ.

ವಿಶೇಷ ವಿನಾಯಿತಿ ನಿರಾಕರಣೆ:

ಕಳೆದ ಬಾರಿ (2023ರ ಏಷ್ಯನ್ ಗೇಮ್ಸ್‌ನಲ್ಲಿ) ಸರ್ಕಾರವು ಕೊನೆಯ ಕ್ಷಣದಲ್ಲಿ ನಿಯಮ ಸಡಿಲಿಸಿ ಫುಟ್‌ಬಾಲ್ ತಂಡಕ್ಕೆ ಅನುಮತಿ ನೀಡಿತ್ತು. ಆದರೆ ಈ ಬಾರಿ ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (AIFF) ಮಾಡಿದ ವಿಶೇಷ ಮನವಿಯನ್ನು ಕ್ರೀಡಾ ಸಚಿವಾಲಯ ತಿರಸ್ಕರಿಸಿದೆ.

ಅರ್ಹತೆ ಪಡೆದು ಹೊರಬಿದ್ದ ಭಾರತ:

ಪುರುಷರ ತಂಡ: ಪುರುಷರ ವಿಭಾಗದಲ್ಲಿ, 2026ರ AFC U-23 ಏಷ್ಯನ್ ಕಪ್ ಟೂರ್ನಿಗೆ ಅರ್ಹತೆ ಪಡೆದ ಅಗ್ರ 16 ತಂಡಗಳ ಪೈಕಿ 15 ತಂಡಗಳಿಗೆ ಏಷ್ಯನ್ ಗೇಮ್ಸ್‌ನಲ್ಲಿ ಆಡುವ ಅವಕಾಶ ನೀಡಲಾಗಿತ್ತು (ಆಸ್ಟ್ರೇಲಿಯಾವನ್ನು ಹೊರತುಪಡಿಸಿ). ಭಾರತ ತಂಡವು ಈ ಕಠಿಣ ಅರ್ಹತಾ ಸುತ್ತಿನ ಮಾನದಂಡಗಳನ್ನು ಯಶಸ್ವಿಯಾಗಿ ಪೂರೈಸಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತ್ತು.

ಮಹಿಳಾ ತಂಡ: ಮಹಿಳಾ ವಿಭಾಗದಲ್ಲಿ, ಪ್ರಮುಖ ಕಾಂಟಿನೆಂಟಲ್ ಟೂರ್ನಿಯಾದ 2026ರ AFC ಮಹಿಳಾ ಏಷ್ಯನ್ ಕಪ್ ಒಟ್ಟು 12 ತಂಡಗಳ ಟೂರ್ನಿಯಾಗಿದೆ. ಈ ಪ್ರತಿಷ್ಠಿತ ಟೂರ್ನಿಗೆ ಅಧಿಕೃತವಾಗಿ ಅರ್ಹತೆ ಗಿಟ್ಟಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಭಾರತ ಮಹಿಳಾ ತಂಡಕ್ಕೂ ಏಷ್ಯನ್ ಗೇಮ್ಸ್‌ನಲ್ಲಿ ಅವಕಾಶ ಲಭಿಸಿತ್ತು.

ಹೀಗೆ ಏಷ್ಯನ್ ಕ್ರೀಡಾ ಸಂಸ್ಥೆಗಳು ನಿಗದಿಪಡಿಸಿದ್ದ ಕ್ರೀಡಾ ನಿಯಮಾವಳಿಗಳ ಅಡಿಯಲ್ಲಿ ಭಾರತದ ಎರಡೂ ತಂಡಗಳು ನ್ಯಾಯಯುತವಾಗಿಯೇ ಟೂರ್ನಿಗೆ ಆಯ್ಕೆಯಾಗಿದ್ದವು. ಇದಾಗ್ಯೂ ಭಾರತ ಸರ್ಕಾರದ ಕ್ರೀಡಾ ಸಚಿವಾಲಯದ ಆಂತರಿಕ ಶ್ರೇಯಾಂಕದ ನಿಯಮಗಳ ಕಾರಣದಿಂದಾಗಿ ಇದೀಗ ಭಾರತ ಏಷ್ಯನ್ ಗೇಮ್ಸ್ ಫುಟ್​ಬಾಲ್ ಟೂರ್ನಿಯಿಂದ ಹೊರಗುಳಿಯಬೇಕಾಗಿ ಬಂದಿದೆ.

ಇದನ್ನೂ ಓದಿ: ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ರಾಹುಲ್ ದ್ರಾವಿಡ್ ಹೊಸ ಕೋಚ್? 

ಖುಲಾಯಿಸಿದ ಅದೃಷ್ಟ:

ಭಾರತ ಪುರುಷರ ತಂಡವು ಏಷ್ಯನ್ ಗೇಮ್ಸ್​ನಿಂದ ಹೊರಗುಳಿಯುತ್ತಿರುವ ಪರಿಣಾಮ ಫಿಲಿಪೈನ್ಸ್ ದೇಶಕ್ಕೆ ಅವಕಾಶ ಸಿಕ್ಕಿದೆ. ಇನ್ನು ಮಹಿಳಾ ಫುಟ್‌ಬಾಲ್ ವಿಭಾಗದಲ್ಲಿ ಭಾರತ, ಇರಾನ್ ಹಾಗೂ ಆಸ್ಟ್ರೇಲಿಯಾ ಹೊರಗುಳಿದಿದ್ದು, ಈ ತಂಡಗಳ ಬದಲಿಗೆ ಹಾಂಗ್ ಕಾಂಗ್, ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ ತಂಡಗಳನ್ನು ಅಂತಿಮ ಪಟ್ಟಿಗೆ ಸೇರಿಸಿಕೊಳ್ಳಲಾಗಿದೆ.

Published On – 11:00 am, Mon, 13 July 26

Source link

Video: ಅಗಲಿದ ಪತ್ನಿಯ ಫೋಟೋ ಆಟೋದಲ್ಲಿಟ್ಟು ದಿನನಿತ್ಯ ಪೂಜಿಸುವ ಬೆಂಗಳೂರಿನ ಆಟೋ ಚಾಲಕ – Kannada News | Bengaluru auto driver worships a photo of his late wife kept in his auto.

ಬೆಂಗಳೂರು, ಜುಲೈ 13: ಪ್ರೀತಿಯೇ ಹಾಗೆ, ಸುಂದರವಾದ ಭಾವನೆ. ಒಬ್ಬೊಬ್ಬರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿ ವಿಭಿನ್ನವಾಗಿರುತ್ತದೆ. ಕೆಲವರು ತಮ್ಮ ಸಂಗಾತಿಗೆ ಕಾರು, ಒಡವೆ ಹೀಗೆ ದುಬಾರಿ ಬೆಲೆಯ ಗಿಫ್ಟ್ ಗಳನ್ನು ಕೊಡುತ್ತಾರೆ. ಆದರೆ ಬೆಂಗಳೂರಿನ (Bengaluru) ಆಟೋಚಾಲಕನು ಅಗಲಿದ ಮಡದಿಯನ್ನು ಮನಸ್ಸಿನಲ್ಲಿಟ್ಟು ಆರಾಧಿಸುತ್ತಿದ್ದೇನೆ. ಮಡದಿಯ ಫೋಟೋವನ್ನು ತನ್ನ ಆಟೋದಲ್ಲಿಟ್ಟು ಪೂಜಿಸುತ್ತಿದ್ದಾನೆ. ಈ ಹೃದಯಸ್ಪರ್ಶಿ ಕ್ಷಣದ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ.

ಆಶೀಶ್ (asishmatthew) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಆಟೋ ಚಾಲಕನೊಬ್ಬ ತನ್ನ ಆಟೋದಲ್ಲಿ ಅಗಲಿದ ಮಡದಿ ಫೋಟೋ ಇಟ್ಟುಕೊಂಡಿದ್ದು, ಹೂವು ಇಟ್ಟು ದಿನ ನಿತ್ಯ  ಪೂಜೆ ಮಾಡುತ್ತಿರುವುದನ್ನು ಕಾಣಬಹುದು. ಆಶಿಶ್ ಬೆಂಗಳೂರಿನ ಈ  ಆಟೋಚಾಲಕನನ್ನು ಮಾತನಾಡಿಸಿದ್ದಾನೆ. ಇದೇ ವೇಳೆ ಆಟೋ ಚಾಲಕ ನನ್ನ ಮಡದಿ, ನಮ್ಮನ್ನೆಲ್ಲಾ ಅಗಲಿ 8 ವರ್ಷ ಆಯ್ತು. ನನಗೆ ಮಗ, ಸೊಸೆ ಆರು ಜನ ಮೊಮ್ಮಕ್ಕಳು ಹಾಗೂ ನನ್ನ ಜತೆಗೆ ದೊಡ್ಡ ಕುಟುಂಬವೇ ಇದೆ. ಆದರೆ ನನ್ನ ಹೆಂಡ್ತಿನಾ ಮರೆಯೋಕೆ ಆಗಲ್ಲ ಎಂದಿದ್ದಾನೆ.

ನನ್ನ ಮಗ ಮನೆಯಲ್ಲಿರು, ಕೆಲಸ ಮಾಡ್ಬೇಡ ಎಂದು ಹೇಳ್ತಾನೆ. ಆದರೆ ಮನೆಯಲ್ಲಿದ್ರೆ ನಂಗೆ ಟೆನ್ಶನ್ ಜಾಸ್ತಿ ಆಗ್ತದೆ. ಹೊರಗಡೆ ಬಂದ್ರೆ ಹೊಸ ಜನರ ಜತೆಗೆ ಮಾತಾಡ್ತಾ ಇದ್ರೆ ಮೈಂಡ್ ಫ್ರೀ ಆಗುತ್ತೆ ಎಂದು ಹೇಳಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ‘ಬೆಂಗಳೂರು ಭಾರತದ ಯುರೋಪ್ ಇದ್ದಂತೆ! ಸಿಲಿಕಾನ್ ಸಿಟಿಗೆ ಫಿದಾ ಆದ ಯುವತಿಯ ವಿಡಿಯೋ ವೈರಲ್

ಈ ವಿಡಿಯೋ 2.7 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಖುಷಿನೂ ಆಯ್ತು, ಬೇಜಾರ್ ಕೂಡ ಆಯ್ತು ಎಂದಿದ್ದಾರೆ. ಇನ್ನೊಬ್ಬರು, ಪರಿಶುದ್ಧ ಪ್ರೀತಿ ಎಷ್ಟು ಚಂದ ಎಂದು ಹೇಳಿದ್ದಾರೆ. ಮತ್ತೊಬ್ಬರು, ಸಾವು ಅವಳನ್ನು ಅವನಿಂದ ದೂರ ಮಾಡಿರಬಹುದು.. ಆದರೆ ಪ್ರೀತಿ ಮಾತ್ರ ಸದಾ ಜೀವಂತ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:00 am, Mon, 13 July 26

Source link

ರಾಮ ಮಂದಿರದ ಕಾಣಿಕೆಗೆ ‘AI’ ಕಾವಲು: ಪ್ರತಿ ರೂಪಾಯಿಯನ್ನೂ ಟ್ರ್ಯಾಕ್ ಮಾಡಲು ಎಸ್‌ಐಟಿ ಮಾಸ್ಟರ್ ಪ್ಲ್ಯಾನ್ – Kannada News | Ram Mandir AI Security: SIT Recommends Advanced Surveillance to Prevent Donation Theft

ಅಯೋಧ್ಯೆ, ಜುಲೈ 13: ಕೇವಲ 40 ದಿನಗಳಲ್ಲಿ 70 ಬಾರಿ ದೇಣಿಗೆ ಹಣವನ್ನು ಲೂಟಿ ಮಾಡಿದ ರಾಮ ಮಂದಿರ(Ram Mandir)ದ ಸಿಬ್ಬಂದಿ ಕೃತ್ಯದಿಂದ ಎಚ್ಚೆತ್ತಿರುವ ವಿಶೇಷ ತನಿಖಾ ತಂಡ, ಭವಿಷ್ಯದಲ್ಲಿ ಇಂತಹ ಕಳ್ಳತನಗಳಿಗೆ ಸಂಪೂರ್ಣ ಬ್ರೇಕ್ ಹಾಕಲು ಜಗತ್ತಿನ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ (AI) ಆಧಾರಿತ ಕಣ್ಗಾವಲು ವ್ಯವಸ್ಥೆಯನ್ನು ತರಲು ಶಿಫಾರಸು ಮಾಡಿದೆ. ಜುಲೈ 15 ರೊಳಗೆ ಉತ್ತರ ಪ್ರದೇಶ ಸರ್ಕಾರಕ್ಕೆ ಸಲ್ಲಿಕೆಯಾಗಲಿರುವ ಎಸ್‌ಐಟಿಯ ಅಂತಿಮ ವರದಿಯಲ್ಲಿ ಈ ಮಹತ್ವದ ತಂತ್ರಜ್ಞಾನದ ಅಳವಡಿಕೆಗೆ ಪ್ರಮುಖ ಆದ್ಯತೆ ನೀಡಲಾಗಿದೆ.

ಏನಿದು ‘ಎಐ’ ಆಧಾರಿತ ಕಾವಲು ತಂತ್ರಜ್ಞಾನ?

ಪ್ರಸ್ತುತ ಇರುವ ಸಾಧಾರಣ ಸಿಸಿಟಿವಿಗಳು ಕೇವಲ ದೃಶ್ಯಗಳನ್ನು ರೆಕಾರ್ಡ್ ಮಾಡುತ್ತವೆ. ಆದರೆ ಪ್ರಸ್ತಾವಿತ ಎಐ ಕಣ್ಗಾವಲು ವ್ಯವಸ್ಥೆಯು ಅತ್ಯಂತ ಹೈಟೆಕ್ ಆಗಿರಲಿದೆ.
ಅನುಮಾನಾಸ್ಪದ ಚಲನವಲನ ಪತ್ತೆ: ದೇಣಿಗೆ ಹಣ ಎಣಿಸುವಾಗ ನೌಕರರು ಕೈಗಳನ್ನು ಬಟ್ಟೆಯೊಳಗೆ ಹಾಕಿಕೊಳ್ಳುವುದು, ನೋಟುಗಳನ್ನು ಅಸಹಜವಾಗಿ ಮಡಿಚುವುದು ಅಥವಾ ಕ್ಯಾಮೆರಾದ ಕಣ್ಣು ತಪ್ಪಿಸಲು ಯತ್ನಿಸಿದರೆ ಈ ಎಐ ಸಾಫ್ಟ್‌ವೇರ್ ತಕ್ಷಣವೇ ‘ರೆಡ್ ಅಲರ್ಟ್’ ಸಂದೇಶವನ್ನು ಭದ್ರತಾ ಕೊಠಡಿಗೆ ರವಾನಿಸುತ್ತದೆ.

ನಗದು ಸ್ಕ್ಯಾನಿಂಗ್: ಕೌಂಟರ್‌ಗೆ ಬರುವ ಪ್ರತಿ ನೋಟು ಹಾಗೂ ಬೆಲೆಬಾಳುವ ಆಭರಣಗಳ ಡಿಜಿಟಲ್ ಟ್ರ್ಯಾಕಿಂಗ್ ಈ ತಂತ್ರಜ್ಞಾನದ ಮೂಲಕ ಸಾಧ್ಯವಾಗಲಿದ್ದು, ಎಣಿಕೆ ಪ್ರಕ್ರಿಯೆಯಲ್ಲಿ ಶೇ.100 ಪಾರದರ್ಶಕತೆ ಬರಲಿದೆ.

ಮತ್ತಷ್ಟು ಒದಿ: ರಾಮ ಮಂದಿರ ದೇಣಿಗೆ ಹಗರಣ:ಬೆಳಗ್ಗೆ ಫೋನ್ ಕಾಲ್, ಮಧ್ಯಾಹ್ನ ಕೋಟಿ ಕಳ್ಳತನ, ಏನೇನೆಲ್ಲಾ ನಡೀತು?

ಬ್ಯಾಂಕ್ ಬದಲಾವಣೆಗೆ ಟ್ರಸ್ಟ್ ಮುಂದು, ಎಸ್‌ಬಿಐ ವಿರುದ್ಧ ಚಂಪತ್ ರೈ ಆಕ್ರೋಶ

ಪ್ರಸ್ತುತ ರಾಮ ಮಂದಿರದ ಎಲ್ಲಾ ಕಾಣಿಕೆ ಹಣವನ್ನು ಅಯೋಧ್ಯೆಯ ನಯಾ ಘಾಟ್‌ನಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಟಿಯಾ (SBI) ಶಾಖೆಯಲ್ಲಿ ಜಮಾ ಮಾಡಲಾಗುತ್ತಿತ್ತು. ಆದರೆ, ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರು ಎಸ್‌ಬಿಐ ಬ್ಯಾಂಕ್ ಅಧಿಕಾರಿಗಳ ನಿರ್ಲಕ್ಷ್ಯವೇ ಈ ಕಳ್ಳತನಕ್ಕೆ ಕಾರಣ ಎಂದು ಎಸ್‌ಐಟಿ ಮುಂದೆ ಗಂಭೀರ ಆರೋಪ ಮಾಡಿದ್ದಾರೆ.

ಹಣ ಎಣಿಸುವ ಸಿಬ್ಬಂದಿಗಳಿಗೆ ಜೇಬಿಲ್ಲದ ಸಮವಸ್ತ್ರ ನೀಡುವುದು ಹಾಗೂ ಕಡ್ಡಾಯ ದೈಹಿಕ ತಪಾಸಣೆಯಂತಹ ಕನಿಷ್ಠ ಸುರಕ್ಷತಾ ನಿಯಮಗಳನ್ನು ಜಾರಿಗೆ ತರಲು ಎಸ್‌ಬಿಐ ವಿಫಲವಾಗಿದೆ ಎಂದು ಅವರು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ರಸ್ಟ್ ಖಜಾಂಚಿ ಗೋವಿಂದ್ ದೇವ್ ಗಿರಿ ಅವರು ಖಾಸಗಿ ವಲಯದ ಪ್ರಮುಖ ಬ್ಯಾಂಕುಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಇನ್ಮುಂದೆ ಕಾಣಿಕೆ ಹಣವನ್ನು ಬೇರೆ ಬ್ಯಾಂಕ್‌ಗೆ ವರ್ಗಾಯಿಸಲು ಅಥವಾ ಹಲವು ಬ್ಯಾಂಕುಗಳಲ್ಲಿ ಹಂಚಿಕೆ ಮಾಡಲು ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದ್ದಾರೆ.

ಆರೋಪಿಗಳ ಇಡೀ ಆಸ್ತಿ ಜಪ್ತಿಗೆ ಮುಹೂರ್ತ

ಈ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಂದಿರದ ನೌಕರರು ಸೇರಿದಂತೆ 8 ಜನರನ್ನು ಬಂಧಿಸಲಾಗಿದೆ. ಅವರಿಂದ ಸುಮಾರು 80 ಲಕ್ಷ ರೂ. ನಗದು ಮತ್ತು ಭಾರಿ ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಳ್ಳತನದ ವ್ಯಾಪ್ತಿ ದೊಡ್ಡದಿರುವುದರಿಂದ, ಆರೋಪಿಗಳು ಕದ್ದ ಹಣದಿಂದ ಅಯೋಧ್ಯೆಯ ಹೊರಗೆ ಅಥವಾ ತಮ್ಮ ಸಂಬಂಧಿಕರ ಹೆಸರಿನಲ್ಲಿ ಬೇರೆಲ್ಲೂ ಆಸ್ತಿ ಖರೀದಿಸಿದ್ದಾರೆಯೇ ಎಂದು ಪತ್ತೆಹಚ್ಚಲು ಆದಾಯ ತೆರಿಗೆ ಇಲಾಖೆ , ಬ್ಯಾಂಕುಗಳು ಮತ್ತು ಸಬ್-ರೆಜಿಸ್ಟ್ರಾರ್ ಕಚೇರಿಗಳಿಂದ ಚರ-ಸ್ಥಿರ ಆಸ್ತಿಗಳ ಸಂಪೂರ್ಣ ವಿವರವನ್ನು ಎಸ್‌ಐಟಿ ಪಡೆದುಕೊಂಡಿದೆ. ತಪ್ಪಿತಸ್ಥರ ಇಡೀ ಆಸ್ತಿಯನ್ನು ಜಪ್ತಿ ಮಾಡಲು ಸರ್ಕಾರ ಸಜ್ಜಾಗಿದೆ.

ಜೈಲಿನಲ್ಲಿರುವ ಇಬ್ಬರು ಪ್ರಮುಖ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ 7 ದಿನಗಳ ಪೊಲೀಸ್ ಕಸ್ಟಡಿಗೆ ಕೋರಲಾಗಿದ್ದು, ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯವು ಜುಲೈ 14 ರಂದು ಇದರ ತೀರ್ಪು ನೀಡಲಿದೆ.

ವಿಐಪಿ ಪಾಸ್ ದಂಧೆಗೂ ಬಿತ್ತು ಬೀಗ

ಮಂದಿರದ ದೇಣಿಗೆ ಕಳ್ಳತನದ ತನಿಖೆ ನಡೆಯುತ್ತಿರುವ ಬೆನ್ನಲ್ಲೇ, ಟ್ರಸ್ಟ್‌ನ ಒಳಗಿದ್ದ ಮತ್ತೊಂದು ದೊಡ್ಡ ದಂಧೆಯನ್ನು ಮುಚ್ಚಿಹಾಕಲಾಗಿದೆ.

ಐಡಿ ಕಾರ್ಡ್‌ಗಳ ರದ್ದು: ಮಂದಿರದ ಮಾಜಿ ಪದಾಧಿಕಾರಿಗಳಾದ ಚಂಪತ್ ರಾಯ್, ಗೋಪಾಲ್ ರಾವ್ ಮತ್ತು ಅನಿಲ್ ಮಿಶ್ರಾ ಅವರ ಹೆಸರಿನಲ್ಲಿದ್ದ ಹಳೆಯ ಗುರುತಿನ ಚೀಟಿಗಳನ್ನು ಟ್ರಸ್ಟ್ ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಿದೆ.

ನಕಲಿ ಪಾಸ್‌ಗಳಿಗೆ ಬ್ರೇಕ್: ಈ ಹಿಂದೆ ಇವರ ರುಜುವಾತುಗಳನ್ನು ಬಳಸಿ ವಿಐಪಿ ಪ್ರವೇಶಕ್ಕಾಗಿ ಅಕ್ರಮವಾಗಿ ಇಶ್ಯೂ ಮಾಡಲಾಗುತ್ತಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಿಐಪಿ ಪಾಸ್‌ಗಳು ಇಂದಿನಿಂದ ಸಂಪೂರ್ಣ ಅಮಾನ್ಯವಾಗಿವೆ. ಮಂದಿರದ ಆಡಳಿತವನ್ನು ಸಂಪೂರ್ಣವಾಗಿ ಕಾರ್ಪೊರೇಟ್ ಮಾದರಿಯಲ್ಲಿ ಹೈಟೆಕ್ ಮಾಡಲು ಟ್ರಸ್ಟ್ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ತಿರುಪತಿ ತಿಮ್ಮಪ್ಪನ ಮೊದಲ ಆರತಿಯಲ್ಲಿ ಇನ್ಮುಂದೆ ಕರ್ನಾಟಕದ ಸಚಿವರು, ಶಾಸಕರಿಗೂ ಅವಕಾಶ: ಸಿಎಂ ಮಹತ್ವದ ಘೋಷಣೆ! – Kannada News | Tirupati Temple VIP Darshan: Karnataka CM DK Shivakumar Announces First Aarti Access for Ministers and MLAs

ಬೆಂಗಳೂರು, ಜುಲೈ 13: ಆಂಧ್ರಪ್ರದೇಶದ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರ ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರತಿದಿನ ನೆರವೇರಿಸಲಾಗುವ ಮೊದಲ ಆರತಿಯಲ್ಲಿ (First Aarti) ಇನ್ನು ಮುಂದೆ ಕರ್ನಾಟಕದ ಸಚಿವರು, ಶಾಸಕರು, ನ್ಯಾಯಾಧೀಶರು ಹಾಗೂ ಹಿರಿಯ ಅಧಿಕಾರಿಗಳು ಸೇರಿದಂತೆ ಗಣ್ಯ ವ್ಯಕ್ತಿಗಳಿಗೆ ಭಾಗವಹಿಸಲು ಶಿಷ್ಟಾಚಾರದ (Protocol) ಅನ್ವಯ ಮುಕ್ತ ಅವಕಾಶ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಕಟಿಸಿದ್ದಾರೆ.

ಬೆಂಗಳೂರಿನ ಬನಶಂಕರಿಯಲ್ಲಿ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಈ ಕುರಿತು ರಾಜ್ಯ ಸರ್ಕಾರದಿಂದ ಶೀಘ್ರದಲ್ಲೇ ಅಧಿಕೃತ ಪ್ರೋಟೋಕಾಲ್ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ.

ಇದುವರೆಗೆ ಕೇವಲ ಮುಖ್ಯಮಂತ್ರಿಗಳಿಗಷ್ಟೇ ಇತ್ತು ಅವಕಾಶ!

ತಿರುಪತಿ ತಿರುಮಲ ದೇವಸ್ಥಾನದಲ್ಲಿ ಪ್ರತಿದಿನ ಬೆಳಿಗ್ಗೆ ಕರ್ನಾಟಕದ ಪರವಾಗಿ ಮೊದಲ ಆರತಿಯನ್ನು ಸಲ್ಲಿಸಲಾಗುತ್ತದೆ. ಈ ಸಂಪ್ರದಾಯಕ್ಕೆ 400 ವರ್ಷಗಳ ಇತಿಹಾಸವಿದೆ. ಹಂಪಿಯ ವಿಜಯನಗರ ಸಾಮ್ರಾಜ್ಯದ ಅರಸರು ಹಾಗೂ ಅವರ ನಂತರ ಮೈಸೂರಿನ ಒಡೆಯರ್ ರಾಜವಂಶದವರು (ವಿಶೇಷವಾಗಿ ಒಂದನೇ ರಾಜ ಒಡೆಯರ್) ತಿರುಪತಿ ವೆಂಕಟೇಶ್ವರ ಸ್ವಾಮಿಗೆ ಅಪಾರ ಪ್ರಮಾಣದ ಚಿನ್ನಾಭರಣ, ಭೂಮಿ ಹಾಗೂ ನಿತ್ಯ ಪೂಜಾ ಕೈಂಕರ್ಯಗಳಿಗೆ ಬೇಕಾದ ಸಾಮಗ್ರಿಗಳನ್ನು ದಾನವಾಗಿ ನೀಡುತ್ತಿದ್ದರು. ಮೈಸೂರು ಸಂಸ್ಥಾನವು ದೇವಸ್ಥಾನದ ದೈನಂದಿನ ಪೂಜಾ ವೆಚ್ಚಗಳನ್ನು ಭರಿಸುತ್ತಿದ್ದರಿಂದ ಮತ್ತು ಸಾಮಗ್ರಿಗಳನ್ನು ಪೂರೈಸುತ್ತಿದ್ದರಿಂದ, ಪ್ರತಿದಿನ ಬೆಳಿಗ್ಗೆ ದೇವರಿಗೆ ಬೆಳಗುವ ಪ್ರಥಮ ಆರತಿಯನ್ನು ಸ್ವೀಕರಿಸುವ ಗೌರವ ಮತ್ತು ಹಕ್ಕು ಮೈಸೂರು ರಾಜರಿಗೆ ಲಭಿಸಿತು.

ಸ್ವಾತಂತ್ರ್ಯಾನಂತರ ಈ ರಾಜಪ್ರಭುತ್ವದ ಹಕ್ಕನ್ನು ಕರ್ನಾಟಕ ಸರ್ಕಾರವು ಕಾನೂನುಬದ್ಧವಾಗಿ ಮುಂದುವರಿಸಿಕೊಂಡು ಬಂದಿದೆ. ಶಿಷ್ಟಾಚಾರದ ಪ್ರಕಾರ ಪ್ರತಿ ಮುಂಜಾನೆ ಗರ್ಭಗುಡಿಯ ಮುಂಭಾಗದಲ್ಲಿ (ಕುಲಶೇಖರ ಪಡಿ) ನಿಂತು ಇಡೀ ಕರ್ನಾಟಕದ ಪರವಾಗಿ ಈ ಮೊದಲ ಆರತಿಯನ್ನು ಹಾಗೂ ದೇವರ ಪ್ರಸಾದವನ್ನು ಕರ್ನಾಟಕದ ಮುಖ್ಯಮಂತ್ರಿಗಳು ಸ್ವೀಕರಿಸಬೇಕು. ಇಲ್ಲಿಯವರೆಗೆ ಅವರ ಅನುಪಸ್ಥಿತಿಯಲ್ಲಿ ರಾಜ್ಯ ಸರ್ಕಾರದ ವತಿಯಿಂದ ನೇಮಕಗೊಂಡ ವಿಶೇಷ ಅಧಿಕಾರಿಯೊಬ್ಬರು ಸ್ವೀಕರಿಸುತ್ತಿದ್ದರು.

ನನ್ನ ಅಧಿಕಾರಾವಧಿಯ ಅತಿ ದೊಡ್ಡ ಘೋಷಣೆ ಇದು ಎಂದ ಸಿಎಂ

ಇನ್ನು ಮುಂದೆ ಕರ್ನಾಟಕ ಸರ್ಕಾರವನ್ನು ಪ್ರತಿನಿಧಿಸಿ ತಿರುಮಲಕ್ಕೆ ಭೇಟಿ ನೀಡುವ ಸಚಿವರು, ಶಾಸಕರು, ಸಂಸದರು, ನ್ಯಾಯಾಧೀಶರು ಹಾಗೂ ಹಿರಿಯ ಐಎಎಸ್-ಐಪಿಎಸ್ ಅಧಿಕಾರಿಗಳಿಗೂ ಈ ಪವಿತ್ರ ಆರತಿ ವೀಕ್ಷಿಸುವ ಮತ್ತು ದೇವರ ದರ್ಶನ ಪಡೆಯುವ ಸೌಲಭ್ಯ ಸಿಗುವಂತೆ ಆದೇಶ ಹೊರಡಿಸಲು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಡಿ.ಕೆ ಶಿವಕುಮಾರ್, ನಮ್ಮ ರಾಜ್ಯದ ಅನೇಕ ಜನಪ್ರತಿನಿಧಿಗಳು ಮತ್ತು ಶಾಸಕರು ತಿರುಪತಿಗೆ ಹೋದಾಗ ಸೂಕ್ತ ದರ್ಶನ ಸಿಗದೆ ಬರಿಗೈಲಿ ವಾಪಸ್ ಬಂದ ಉದಾಹರಣೆಗಳಿವೆ. ಇನ್ಮುಂದೆ ಕರ್ನಾಟಕದ ಪರವಾಗಿ ಸೇವೆ ಸಲ್ಲಿಸುವ ಎಲ್ಲ ಗಣ್ಯರಿಗೂ ತಿಮ್ಮಪ್ಪನ ಎದುರು ನಿಂತು ಪ್ರಾರ್ಥಿಸುವ ಈ ಪರಮ ಸೌಭಾಗ್ಯ ಸಿಗಲಿದೆ. ಇದು ನನ್ನ ಮುಖ್ಯಮಂತ್ರಿ ಅಧಿಕಾರಾವಧಿಯ ಅತ್ಯಂತ ಪ್ರಮುಖ ಮತ್ತು ಮಹತ್ವದ ಘೋಷಣೆಯಾಗಿದೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ.

ಇದನ್ನೂ ಓದಿ ಪತ್ನಿ ಸಮೇತ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಇದೇ ವೇಳೆ ತಮ್ಮ ವೈಯಕ್ತಿಕ ಭಾವನೆ ಹಂಚಿಕೊಂಡ ಸಿಎಂ, ತಿರುಪತಿ ವೆಂಕಟೇಶ್ವರ ಸ್ವಾಮಿ ತಮ್ಮ ಮನೆದೇವರಾಗಿದ್ದರೂ, ಜೈಲಿನಿಂದ ಬಿಡುಗಡೆಯಾದ ನಂತರ ಇತ್ತೀಚಿನವರೆಗೂ ತಮಗೆ ತಿರುಮಲಕ್ಕೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಇತ್ತೀಚಿನ ಭೇಟಿಯ ಸಂದರ್ಭದಲ್ಲಿ ಈ ಮಹತ್ವದ ಆಲೋಚನೆ ಬಂತು ಎಂದು ನೆನಪಿಸಿಕೊಂಡರು. ಅಲ್ಲದೆ, ಹಿಂದೆ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ತಿರುಪತಿಯಲ್ಲಿ ಕರ್ನಾಟಕ ಟ್ರಸ್ಟ್ ರಚಿಸಿ ನನಗೆ ಅದರ ಜವಾಬ್ದಾರಿ ನೀಡಿದ್ದರು. ಆಗ ಈ ಜವಾಬ್ದಾರಿ ಹೊರುವುದರ ಒಳಗೆ ನಮ್ಮ ಆಡಳಿತಾವಧಿ ಮುಗಿದಿತ್ತು. ಈಗ ಸಮಯ ಕೂಡಿಬಂದಿದೆ ಎಂದು ಸಿಎಂ ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:28 am, Mon, 13 July 26

Source link

Exit mobile version