IND vs ENG: ವೃತ್ತಿಜೀವನದ ಕೊನೆಯ ಇನ್ನಿಂಗ್ಸ್​ನಲ್ಲಿ ಗೋಲ್ಡನ್ ಡಕ್ ಆದ ಟ್ಯಾಮಿ ಬ್ಯೂಮಾಂಟ್ – Kannada News | Women’s Test: India Sets 457 Target as England’s tammy beaumont and Heather Knight Bid Farewell

ಟ್ಯಾಮಿ ಬ್ಯೂಮಾಂಟ್ ಇಂಗ್ಲೆಂಡ್ ಪರ 12 ಟೆಸ್ಟ್, 140 ಏಕದಿನ ಮತ್ತು 109 ಟಿ20ಪಂದ್ಯಗಳನ್ನು ಆಡಿದ್ದರು. ಇದೀಗ ಅವರ ವರ್ಣರಂಜಿತ ವೃತ್ತಿಜೀವನ ಅಂತ್ಯವಾಗಿದೆ. ಬ್ಯೂಮಾಂಟ್ ಜೊತೆಗೆ ಹೀದರ್ ನೈಟ್ ಕೂಡ ಕ್ರಾಂತಿ ಗೌಡ್​ಗೆ ಬಲಿಯಾದರು. ಅವರು ತಮ್ಮ ವೃತ್ತಿಜೀವನದ ಕೊನೆಯ ಇನ್ನಿಂಗ್ಸ್‌ನಲ್ಲಿ ಕೇವಲ 13 ರನ್‌ಗಳಿಸಲಷ್ಟೇ ಶಕ್ತರಾದರು. ಹೀದರ್ ಇಂಗ್ಲೆಂಡ್ ಪರ 160 ಏಕದಿನ ಪಂದ್ಯಗಳು, 15 ಟೆಸ್ಟ್‌ಗಳು ಮತ್ತು 145 ಟಿ20 ಪಂದ್ಯಗಳನ್ನು ಆಡಿದ್ದರು.

Source link

ಎಸ್ ಜಾನಕಿ ಅವರೊಟ್ಟಿಗಿನ ಅನುಬಂಧ ನೆನೆದ ಹಿರಿಯ ನಟ ಶ್ರೀನಾಥ್

ಎಸ್ ಜಾನಕಿ (S Janaki) ಅವರು ಕಾಲವಾಗಿದ್ದಾರೆ. ಅವರ ದೇಹ ಪಂಚಭೂತಗಳಲ್ಲಿ ಲೀನವಾಗಿದೆ. ತಮ್ಮ 70 ವರ್ಷಗಳ ಸುದೀರ್ಘ ವೃತ್ತಿ ಜೀವನದಲ್ಲಿ ಹಲವಾರು ನಟ-ನಟಿಯರಿಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ಕನ್ನಡದಲ್ಲಂತೂ ಹಲವಾರು ಹಾಡುಗಳನ್ನು ಜಾನಕಿ ಅವರು ಹಾಡಿದ್ದಾರೆ. ಹಾಗಾಗಿಯೇ ಕನ್ನಡದ ಚಿತ್ರರಂಗಕ್ಕೆ ಜಾನಕಿ ಅವರು ತುಸು ಹೆಚ್ಚು ಹತ್ತಿರ. ಇಂದು ಜಾನಕಿ ಅವರು ನಿಧನರಾದ ಬಳಿಕ ಹಲವಾರು ಗಣ್ಯರು, ಜಾನಕಿ ಅವರ ಅಂತಿಮ ದರ್ಶನ ಪಡೆದರು. ಈ ವೇಳೆ ನಟ ಶ್ರೀನಾಥ್, ತಮ್ಮ ಹಾಗೂ ಜಾನಕಿ ಅವರ ನಡುವೆ ಅಮ್ಮ-ಮಗನ ರೀತಿಯ ಬಾಂಧವ್ಯ ಇತ್ತೆಂದರು. ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕತಾರ್ ಮಾಜಿ ದೊರೆ ಶೇಖ್ ಹಮದ್ ಬಿನ್ ಖಲೀಫ ಅಲ್ ಥಾನಿ ನಿಧನ; ಗೌರವಾರ್ಥವಾಗಿ ಭಾರತದಿಂದ ಒಂದು ದಿನ ರಾಷ್ಟ್ರೀಯ ಶೋಕಾಚರಣೆ – Kannada News | Former Qatar Emir Sheikh Hamad passes away, India declares 1 day national mourning on July 13th

ಭಾರತದಿಂದ ರಾಷ್ಟ್ರೀಯ ಶೋಕಾಚರಣೆImage Credit source: PTI

ನವದೆಹಲಿ, ಜುಲೈ 12: ಕತಾರ್‌ನ ಮಾಜಿ ದೊರೆ (Emir) ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ (Sheikh Hamad bin Khalifa Al-Thani) ಅವರ ನಿಧನಕ್ಕೆ ಗೌರವಾರ್ಥವಾಗಿ ಭಾರತ ಸರ್ಕಾರವು ದೇಶಾದ್ಯಂತ ಒಂದು ದಿನದ ರಾಷ್ಟ್ರೀಯ ಶೋಕಾಚರಣೆಯನ್ನು (National Mourning) ಘೋಷಿಸಿದೆ. ಕತಾರ್ ದೇಶದ ಆಧುನಿಕ ಶಿಲ್ಪಿ ಎಂದೇ ಹೆಸರಾಗಿದ್ದ ಶೇಖ್ ಹಮದ್ (74 ವರ್ಷ) ಅವರು ಇವತ್ತು ಭಾನುವಾರ ಇಹಲೋಕ ತ್ಯಜಿಸಿದರು. ಅವರ ನಿಧನಕ್ಕೆ ಸಂತಾಪ ಸೂಚಿಸಲು ಭಾರತ ಸರ್ಕಾರವು ಈ ನಿರ್ಧಾರ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಜುಲೈ 13, ಸೋಮವಾರದಂದು ದೇಶದಾದ್ಯಂತ ಅಧಿಕೃತವಾಗಿ ಒಂದು ದಿನದ ರಾಷ್ಟ್ರೀಯ ಶೋಕಾಚರಣೆಯನ್ನು ಆಚರಿಸಲಾಗುತ್ತಿದೆ.

ರಾಷ್ಟ್ರೀಯ ಶೋಕಾಚರಣೆಯ ದಿನದಂದು ದೇಶಾದ್ಯಂತ ನಿಯಮಿತವಾಗಿ ರಾಷ್ಟ್ರಧ್ವಜವನ್ನು ಹಾರಿಸುವ ಎಲ್ಲಾ ಸರ್ಕಾರಿ ಕಟ್ಟಡಗಳು ಹಾಗೂ ವಿದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧಮಟ್ಟದಲ್ಲಿ (Half-mast) ಹಾರಿಸಲಾಗುತ್ತದೆ. ಶೋಕಾಚರಣೆಯ ದಿನದಂದು ಸರ್ಕಾರಿ ಮಟ್ಟದಲ್ಲಿ ಯಾವುದೇ ರೀತಿಯ ಅಧಿಕೃತ ಮನೋರಂಜನಾ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ.

ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ ಯಾರು?

ಇವರು 1995 ರಿಂದ 2013 ರವರೆಗೆ ಕತಾರ್ ದೇಶದ ದೊರೆಯಾಗಿ (Emir) ಆಡಳಿತ ನಡೆಸಿದ್ದರು. ಇವರ ಆಡಳಿತಾವಧಿಯಲ್ಲಿ ಕತಾರ್ ದೇಶವು ಜಾಗತಿಕ ಮಟ್ಟದಲ್ಲಿ ಆರ್ಥಿಕವಾಗಿ ಮತ್ತು ರಾಜತಾಂತ್ರಿಕವಾಗಿ ಭಾರಿ ಬೆಳವಣಿಗೆಯನ್ನು ಕಂಡಿತು. ವಿಶೇಷವಾಗಿ ನೈಸರ್ಗಿಕ ಅನಿಲ (LNG) ಉದ್ಯಮದಲ್ಲಿ ಕತಾರ್ ಜಗತ್ತಿನ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಲು ಇವರ ಕೊಡುಗೆ ಅಪಾರವಾಗಿತ್ತು. 2013 ರಲ್ಲಿ ಇವರು ತಮ್ಮ ಮಗ ಹಾಗೂ ಪ್ರಸ್ತುತ ದೊರೆಯಾಗಿರುವ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರಿಗೆ ಅಧಿಕಾರ ಹಸ್ತಾಂತರಿಸಿದ್ದರು.

ಇದನ್ನೂ ಓದಿ: ನಿನ್ನೆ ಕೆಂಪು ಕೋಟೆ, ಇವತ್ತು ತಾಜ್ ಹೋಟೆಲ್; ಎರಡು ದಿನದಲ್ಲಿ ಎರಡು ಹುಸಿ ಬಾಂಬ್ ಬೆದರಿಕೆ

ಭಾರತ ಮತ್ತು ಕತಾರ್ ಬಾಂಧವ್ಯ

ಭಾರತ ಮತ್ತು ಕತಾರ್ ದೇಶಗಳ ನಡುವೆ ಐತಿಹಾಸಿಕ ಹಾಗೂ ಆಪ್ತ ರಾಜತಾಂತ್ರಿಕ ಬಾಂಧವ್ಯವಿದೆ. ಭಾರತಕ್ಕೆ ಅತಿ ಹೆಚ್ಚು ನೈಸರ್ಗಿಕ ಅನಿಲ ಪೂರೈಸುವ ದೇಶಗಳಲ್ಲಿ ಕತಾರ್ ಪ್ರಮುಖವಾಗಿದೆ. ಅಷ್ಟೇ ಅಲ್ಲದೆ, ಲಕ್ಷಾಂತರ ಭಾರತೀಯರು ಕತಾರ್‌ನಲ್ಲಿ ನೆಲೆಸಿದ್ದು, ಅಲ್ಲಿನ ಆರ್ಥಿಕತೆಗೆ ಕೊಡುಗೆ ನೀಡುತ್ತಿದ್ದಾರೆ. ಈ ದ್ವಿಪಕ್ಷೀಯ ಸ್ನೇಹ ಮತ್ತು ಗೌರವದ ಸಂಕೇತವಾಗಿ ಭಾರತ ಸರ್ಕಾರವು ಈ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬೆಳೆ ಹಾನಿ ಪರಿಹಾರದ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತದೆ ಎಂದ ಸತೀಶ್ ಜಾರಕಿಹೊಳಿ – Kannada News | Government to Decide on Crop Loss Compensation, Says Satish Jarkiholi

ಬೆಳಗಾವಿ, ಜುಲೈ 12: ಮಳೆಯಿಂದಾಗಿ ಬೆಳೆ ಹಾನಿಯಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ, ಪರಿಸ್ಥಿತಿಯನ್ನು ಪರಿಶೀಲಿಸಿದ ಸಚಿವ ಸತೀಶ್ ಜಾರಕಿಹೋಳಿ, ‘ಬೆಳೆ ಹಾನಿಯ ಕುರಿತು ಸಮೀಕ್ಷೆ ನಡೆಸಲಾಗುವುದು. ಮಳೆ ನಿರೀಕ್ಷೆಗಿಂತ ಕಡಿಮೆಯಾಗಿದ್ದರೂ, ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಿದೆ ಹಾಗೂ ಬಹುತೇಕ ಡ್ಯಾಂಗಳು ತುಂಬಿವೆ. ಆದಾಗ್ಯೂ, ಹಲವೆಡೆ ಬೆಳೆಗಳಿಗೆ ಹಾನಿಯಾಗಿದೆ. ಬೆಳೆ ಹಾನಿ ಪರಿಹಾರದ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತದೆ. ಮುಖ್ಯಮಂತ್ರಿಗಳು ಈ ಕುರಿತು ಸಮೀಕ್ಷೆ ನಡೆಸುವಂತೆ ಸೂಚಿಸಿದ್ದು, ಸರ್ಕಾರ ನಿರ್ಧಾರ ಕೈಗೊಳ್ಳಲಿದೆ’ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

IND vs ENG: ಏಕದಿನ ಸರಣಿಯಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯಲಿರುವ ರೋಹಿತ್ – Kannada News | Rohit Sharma’s Record Hunt: India vs England ODI Series 2026, Key Milestones

ಅಫ್ಘಾನಿಸ್ತಾನ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ 79 ರನ್​ಗಳ ಇನ್ನಿಂಗ್ಸ್ ಆಡುವ ಮೂಲಕ ತಮ್ಮ ಫಾರ್ಮ್​ ಕಂಡುಕೊಂಡಿದ್ದರು. ಇದೀಗ ರೋಹಿತ್ ಇಂಗ್ಲೆಂಡ್‌ ವಿರುದ್ಧವೂ ಅದೇ ಫಾರ್ಮ್​ ಮುಂದುವರೆದರೆ, ಹಲವಾರು ದಾಖಲೆಗಳು ಸೃಷ್ಟಿಯಾಗಲಿವೆ. ಅದರಲ್ಲೂ ರೋಹಿತ್ ಶತಕ ಬಾರಿಸಿದರೆ, ಒಟ್ಟಿಗೆ ಮೂರು ದಾಖಲೆಗಳು ಸೃಷ್ಟಿಯಾಗಲಿವೆ (PC-PTI).

Source link

‘ಮದರ್ ಪ್ರಾಮಿಸ್’ ಸಿನಿಮಾ ಬಗ್ಗೆ ನೆಗೆಟಿವ್ ಪ್ರಚಾರ, ಡಾಲಿ ಬೇಸರ – Kannada News | Daali Dhananjay upset about negative promotion on Mother Promise movie

ಡಾಲಿ ಧನಂಜಯ್ (Daali Dhananjay) ನಟಿಸಿ, ನಿರ್ಮಾಣವನ್ನೂ ಮಾಡಿರುವ ‘ಮದರ್ ಪ್ರಾಮಿಸ್’ ಸಿನಿಮಾ ಕೆಲವೇ ದಿನಗಳ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಈಗಾಗಲೇ ಸಿನಿಮಾ ನೋಡಿರುವವರು ಇದೊಂದು ಒಳ್ಳೆಯ ಸದಭಿರುಚಿಯ ಹಾಸ್ಯ ಪ್ರಧಾನ ಸಿನಿಮಾ ಎಂದು ಮೆಚ್ಚಿಕೊಳ್ಳುತ್ತಿದ್ದಾರೆ. ಸಿನಿಮಾದ ಶೋಗಳು ಸಹ ಚೆನ್ನಾಗಿ ಹೌಸ್ ಫುಲ್ ಆಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಹ ಸಿನಿಮಾದ ಬಗ್ಗೆ ಧನಾತ್ಮಕ ಅಭಿಪ್ರಾಯಗಳು ಹರಿದಾಡುತ್ತಿವೆ. ಆದರೆ ಇವುಗಳ ಜೊತೆಯಲ್ಲಿ ಕೆಲವರು ಉದ್ದೇಶಪೂರ್ವಕವಾಗಿ ಸಿನಿಮಾದ ಬಗ್ಗೆ ಋಣಾತ್ಮಕ ಅಭಿಪ್ರಾಯ ಬಿತ್ತುವ ಪ್ರಯತ್ನದಲ್ಲಿ ನಿರತರಾಗಿದ್ದು, ಅಂಥಹವರ ಬಗ್ಗೆ ಡಾಲಿ ಧನಂಜಯ್ ಬೇಸರ ಹೊರಹಾಕಿದ್ದಾರೆ.

ಸಿನಿಮಾದ ಪ್ರೀಮಿಯರ್ ಶೋ ನೋಡಿದವರು, ಫಸ್ಟ್ ಡೇ ಫಸ್ಟ್ ಶೋ ನೋಡಿದವರು ಇನ್ನೂ ಕೆಲವರು ಸಿನಿಮಾದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದು, ಅದರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಆದರೆ ಕೆಲವರು ಸಿನಿಮಾದ ಬಗ್ಗೆ ನೆಗೆಟಿವ್ ವಿಮರ್ಶೆಗಳನ್ನು ಸಹ ಹಂಚಿಕೊಂಡಿದ್ದಾರೆ. ಕೆಲವರಂತೂ ಖಾಲಿ ಚಿತ್ರಮಂದಿರದ ವಿಡಿಯೋ ಹಂಚಿಕೊಂಡು, ‘ಸಿನಿಮಾದ ಗತಿ ಇದು’ ಎಂದೆಲ್ಲ ಹೇಳಿದ್ದಾರೆ. ಕೆಲವರು ಬುಕ್​ ಮೈ ಶೋ ಅಪ್ಲಿಕೇಶನ್​​ನಲ್ಲಿ ಉದ್ದೇಶಪೂರ್ವಕವಾಗಿ ಸಿನಿಮಾದ ಬಗ್ಗೆ ನೆಗೆಟಿವ್ ವಿಮರ್ಶೆಗಳನ್ನು ಹಂಚಿಕೊಂಡಿದ್ದು, ಸಿನಿಮಾದ ರೇಟಿಂಗ್ ಬೀಳಿಸುವ ಪ್ರಯತ್ನವನ್ನೂ ಸಹ ಮಾಡಿದ್ದಾರೆ.

ಇದೀಗ ನಟ ಡಾಲಿ ಧನಂಜಯ್, ಅಂಥಹವರ ಬಗ್ಗೆ ಇನ್​​ಸ್ಟಾಗ್ರಾಂ ಪೋಸ್ಟ್ ಹಂಚಿಕೊಂಡಿದ್ದು, ‘ಜನ ಸಿನಿಮಾ ನೋಡುವ ಮುಂಚೆಯೇ ಆ ಸಿನಿಮಾವನ್ನು ಇಲ್ಲದ ಹಾಗೆ ಮಾಡುವುದೇ ಕೆಲವರ ಗುರಿ ಆಗಿದೆ. ನೀವು ರೇಟಿಂಗ್ಸ್ ಬೇಕಾದರೆ ಬದಲಾವಣೆ ಮಾಡಬಹುದು ಆದರೆ ಜನರ ಭಾವನೆಗಳನ್ನು, ಅವರ ಪ್ರೀತಿಯನ್ನು ಬದಲಾಯಿಸಲು ಸಾಧ್ಯವಿಲ್ಲ’ ಎಂದಿದ್ದಾರೆ. ಜೊತೆಗೆ ಸಿನಿಮಾ ನೋಡಿದ ಜನ ವ್ಯಕ್ತಪಡಿಸಿರುವ ಅಭಿಪ್ರಾಯಗಳ ವಿಡಿಯೋ ತುಣುಕುಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಕೊನೆಗೂ ಒಟಿಟಿಗೆ ಬರುತ್ತಿದೆ ದರ್ಶನ್ ಸಿನಿಮಾ ‘ಡೆವಿಲ್’: ಎಲ್ಲಿ? ಯಾವಾಗ?

ಜೊತೆಗೆ ಹಲವರು ತಮ್ಮ ಸಿನಿಮಾದ ಬಗ್ಗೆ ಒಳ್ಳೆಯ ವಿಮರ್ಶೆ ನೀಡಿರುವ ಹಲವಾರು ಟ್ವೀಟ್​​ಗಳನ್ನು ಹಂಚಿಕೊಂಡಿರುವ ಜೊತೆಗೆ ಕೆಲವರು ಏನೆಲ್ಲ ಪ್ರಯತ್ನ ಮಾಡಿದ ಬಳಿಕವೂ ಬುಕ್​​ ಮೈ ಶೋನಲ್ಲಿ ತಮ್ಮ ಸಿನಿಮಾ ಟ್ರೆಂಡಿಂಗ್​ ನಲ್ಲಿರುವುದು ಹಾಗೂ ರೇಟಿಂಗ್ ಸಹ ಉತ್ತಮವಾಗಿಯೇ ಇರುವುದನ್ನು ಸಹ ತೋರಿಸಿದ್ದಾರೆ. ಜೊತೆಗೆ, ‘ಪ್ರತಿಯೊಬ್ಬರಿಗೂ ಅವರದ್ದೇ ಆದ ಅಭಿಪ್ರಾಯ ಇರುತ್ತದೆ. ಮೊದಲು ನೀವು ಸಿನಿಮಾ ನೋಡಿ, ನಿಮ್ಮ ಅಭಿಪ್ರಾಯ ಸ್ವಂತವಾಗಿ ರೂಪಿಸಿಕೊಳ್ಳಿ’ ಎಂದಿದ್ದಾರೆ ಡಾಲಿ.

ಮುಂದುವರೆದು, ‘ತುಂಬಾ ಜನಕ್ಕೆ ‘ಮದರ್ ಪ್ರಾಮಿಸ್’ ಸಿನಿಮಾ ಇಷ್ಟ ಆಗುತ್ತಿದೆ. ಕೆಲವರಿಗೆ ಇಷ್ಟ ಆಗದೆ ಕೂಡ ಇರಬಹುದು, ಅದನ್ನ ಹೇಳಿದರೆ ನಾವು ಕ್ರೀಡಾಸ್ಪೂರ್ತಿಯಿಂದ ತೆಗೆದುಕೊಳ್ಳುತ್ತೇವೆ. ವಿಮರ್ಶೆಗಳ ಸಾಮಾನ್ಯ. ಆದರೆ ಉದ್ದೇಶಪೂರ್ವಕವಾಗಿ, ಚೆನ್ನಾಗಿ ಓಡುತ್ತಿರುವ ಸಿನಿಮಾನ ಸಾಯಿಸೋಕೆ, ಒಂದು ದ್ವೇಷಪೂರಿತ ಪ್ರಯತ್ನ ಮಾಡೋದು, ಚಿತ್ರರಂಗಕ್ಕೆ ಒಳ್ಳೆಯದಲ್ಲ. ಇದು ಚೆನ್ನಾಗಿ ಓಡುವ ಎಲ್ಲ ಸಿನಿಮಾಗಳಿಗೂ ಆಗುತ್ತಾ ಇದೆ. ಇದೇ ಕಾರಣಕ್ಕೆ ಎಲ್ಲ ನಿರ್ಮಾಪಕರು ನ್ಯಾಯಾಲಯದಿಂದ ಇಂದ ಆದೇಶ ತಂದು ಬುಕ್​ ಮೈ ಶೋನಲ್ಲಿ ರೇಟಿಂಗ್ಸ್ ಮತ್ತು ಕಮೆಂಟ್ಸ್ ನ ತೆಗೆದು ಹಾಕಿಸುತ್ತಿದ್ದಾರೆ. ಅದರಿಂದ ಪ್ರಾಮಾಣಿಕ ವಿಮರ್ಶೆಗಳಿಗೂ ತಡೆಯೊಡ್ಡಿದಂಗೆ ಆಗತ್ತೆ. ಒಂದು ಆರೋಗ್ಯಕರ ವ್ಯವಸ್ಥೆ ನಿರ್ಮಾಣ ಆಗಬೇಕು. ಈ ಕೆಟ್ಟ ಸಂಸ್ಕೃತಿ ನಿಲ್ಲಬೇಕು’ ಎಂದಿದ್ದಾರೆ ಡಾಲಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ಒತ್ತಡರಹಿತ ಜೀವನಕ್ಕಾಗಿ ಚಾಣಕ್ಯರ ಈ ಸಲಹೆಗಳನ್ನು ಪಾಲಿಸಿ – Kannada News | Chanakya Niti: Follow these tips from Chanakya for a stress free life

ಇಂದಿನ ಈ ವೇಗದ ಜಗತ್ತಿನಲ್ಲಿ ಎಲ್ಲರೂ ಬಯಸೋದು ಒತ್ತಡ ಮುಕ್ತ ಮತ್ತು ಶಾಂತಿ, ಸಂತೋಷದಾಯಕ ಜೀವನ (happy life). ಆದರೆ ಕೆಲಸದ ಒತ್ತಡ, ಒಂದಷ್ಟು ಜವಾಬ್ದಾರಿ ಇವೆಲ್ಲದರ ಕಾರಣದಿಂದ ಒತ್ತಡದ ಜೀವನವನ್ನು ನಡೆಸುತ್ತಿದ್ದಾರೆ. ಈ ಒತ್ತಡದಿಂದಾಗಿ ಅನೇಕರ ಜೀವನದಲ್ಲಿ ಸಂತೋಷವೇ ಇಲ್ಲದಾಗಿದೆ. ಹೀಗಾಗಿ ಜನ ಒತ್ತಡಮುಕ್ತ ಮತ್ತು ಸಂತೋಷದಾಯಕ ಜೀವನ ನಡೆಸಲು ಹಾತೊರೆಯುತ್ತಿದ್ದಾರೆ. ಹೀಗೆ ನಿಮಗೂ ಕೂಡ ಜೀವನದಲ್ಲಿ ಸಂತೋಷ ಬೇಕೆ? ಹಾಗಾದ್ದರೆ ಮಹಾನ್‌ ವಿದ್ವಾಂಸರಾದ ಆಚಾರ್ಯ ಚಾಣಕ್ಯರ ಒತ್ತಡಮುಕ್ತ ಜೀವನಕ್ಕೆ ಸಂಬಂಧಿಸಿದ ಈ ಒಂದಷ್ಟು ಸಲಹೆಗಳನ್ನು ಪಾಲಿಸಿ. ಇದರಿಂದ ಖಂಡಿತವಾಗಿಯೂ ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳಾಗುತ್ತವೆ.

ಒತ್ತಡ ರಹಿತ ಜೀವನಕ್ಕಾಗಿ ಏನು ಮಾಡಬೇಕು?

ಆಗಿಹೋದ ಸಂಗತಿಗಳಿಗೆ ವಿಷಾದಿಸಬೇಡಿ: ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಎಂಬ ಗಾದೆಯಂತೆ, ಆಗಿ ಹೋದ ವಿಷಯಗಳಿಗೆ ವಿಷಾದಿಸುವುದು ಕೂಡ ವ್ಯರ್ಥ. ಈ ರೀತಿ ಭೂತಕಾಲದ ವಿಷಯಗಳ ಬಗ್ಗೆ ಯೋಚಿಸುತ್ತಾ ಕುಳಿತರೆ ಒತ್ತಡ ಹೆಚ್ಚಾಗುತ್ತದೆ. ಹಾಗಾಗಿ ವರ್ತಮಾನದಲ್ಲಿ ಜೀವಿಸುವುದನ್ನು ಅಭ್ಯಾಸ ಮಾಡಿ. ಇದರಿಂದ ಒತ್ತಡವೂ ಇರಲ್ಲ, ಸಂತೋಷವೂ ನೆಲೆಸುತ್ತದೆ.

ದುರಾಸೆಯಿಂದ ದೂರವಿರಿ: ಆಸೆಯೇ ದುಃಖಕ್ಕೆ ಮೂಲ ಎನ್ನುವಂತೆ ದುರಾಸೆಯಿಂದ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಎಲ್ಲವೂ ನನಗೆ ಬೇಕು, ಎಲ್ಲವೂ ನನ್ನದಾಗಬೇಕೆಂಬ ದುರಾಸೆ, ಇರುವುದರಲ್ಲಿ ತೃಪ್ತಿಯನ್ನು ಪಡದೆ ಯಾವಾಗಲೂ ಅತೃಪ್ತಿಯಿಂದ ಇರುವ ಜನರು ಸಂತೋಷವಾಗಿರಲು ಸಾಧ್ಯವಿಲ್ಲ. ಹಾಗಾಗಿ ದುರಾಸೆಯನ್ನು ಬಿಟ್ಟು ಇರುವುದರಲ್ಲಿ ತೃಪ್ತಿಯನ್ನು ಕಾಣಿ, ಇದರಿಂದ ನಿಮ್ಮ ಜೀವನದಲ್ಲಿ ಸಂತೋಷ ನೆಲೆಸುವುದು ಖಂಡಿತ.

ಇದನ್ನೂ ಓದಿ: ಶ್ರೀಮಂತಿಕೆ ಗಳಿಸಲು ಚಾಣಕ್ಯರು ಹೇಳಿಕೊಟ್ಟಿರುವ ಸಲಹೆಗಳಿವು

ಸಾಲದಿಂದ ದೂರವಿರಿ: ಸಾಲ ತೆಗೆದುಕೊಳ್ಳುವ ಅಭ್ಯಾಸದಿಂದ ಸಾಧ್ಯವಾದಷ್ಟು ದೂರವಿರಬೇಕು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಸಾಲ ತೆಗೆದುಕೊಳ್ಳುವುದು ಮತ್ತು ಆ ಸಾಲವನ್ನು ಸರಿಯಾದ ಸಮಯಕ್ಕೆ ಪಾವತಿಸದಿರುವುದು ಇಂತಹ ಸಾಲದ ಹೊರೆ ಒತ್ತಡವನ್ನು ಹೆಚ್ಚಿಸುತ್ತದೆ. ಅಲ್ಲದೆ ಸಾಲದಿಂದ ಜೀವನದಲ್ಲಿ ಪ್ರಗತಿಯನ್ನು ಸಾಧಿಸಲು ಸಹ ಸಾಧ್ಯವಿಲ್ಲ. ಆದ್ದರಿಂದ ಒತ್ತಡಮುಕ್ತ ಜೀವನ ನಿಮ್ಮದಾಗಲು ಸಾಲದಿಂದ ದೂರವಿರಿ.

ಕೆಟ್ಟವರ ಸಹವಾಸದಿಂದ ದೂರವಿರಿ: ನಮ್ಮ ಸುತ್ತಮುತ್ತಲಿರುವ ಜನರು ಸಹ ನಮ್ಮ ವ್ಯಕ್ತಿತ್ವ ಮತ್ತು ಮಾನಸಿಕ ಸ್ಥಿತಿಯ ಮೇಲೆ ನೇರ ಪರಿಣಾಮ ಬೀರುತ್ತಾರೆ ಎನ್ನುತ್ತಾರೆ ಆಚಾರ್ಯ ಚಾಣಕ್ಯ. ಕೆಟ್ಟ ಮನಸ್ಥಿತಿಯ ಜನರಿಂದ ದೂರವಿದ್ದು, ಸಕಾರಾತ್ಮಕ ಮನಸ್ಥಿತಿಯ ಜನರೊಂದಿಗಿರಿ. ಇವರ ಸಹವಾಸವು ಜೀವನದಲ್ಲಿ ಸಂತೋಷ ನೆಲೆಸುವಂತೆ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅರೆಸ್ಟ್​​ ಆಗಿದ್ದ ಆರೋಪಿ 6 ಗಂಟೆಯಲ್ಲೇ ಪೊಲೀಸ್​ ಠಾಣೆಯಿಂದ ಎಸ್ಕೇಪ್! ನಿರ್ಲಕ್ಷ್ಯ ಆರೋಪ – Kannada News | Accused Escapes from Police Station Within Six Hours of Arrest

ಪ್ರಾತಿನಿಧಿಕ ಚಿತ್ರImage Credit source: Getty images

ಬೀದರ್, ಜುಲೈ 12: ಅರೆಸ್ಟ್ ಆಗಿ ಕೇವಲ 6 ಗಂಟೆಯಲ್ಲೇ ಪೊಲೀಸ್​ ಠಾಣೆಯಿಂದ ಆರೋಪಿ ಪರಾರಿ (Accused Escape) ಆಗಿರುವಂತಹ ಘಟನೆ ಬೀದರ್ (bidar) ಜಿಲ್ಲೆಯ ಖಟಕಚಿಂಚೊಳಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಕೈಲಾಶ್ ಪರಾರಿ ಆಗಿರುವ ಆರೋಪಿ. ಪೊಲೀಸರ ಈ ನಿರ್ಲಕ್ಷ್ಯ ಹಾಗೂ ವೈಫಲ್ಯದ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ನಡೆದಿದ್ದೇನು?

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಹಾಲಗೊರಟಾ ಗ್ರಾಮದಲ್ಲಿ ಇತ್ತೀಚೆಗೆ ಅನಿತಾ (32) ಎಂಬ ಮಹಿಳೆ ಮನೆಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಕೈಲಾಶ್​​​ ಹತ್ಯೆ ಮಾಡಿದ್ದ. ಈ ಘಟನೆಯ ನಂತರ ಕೈಲಾಶ್ ತಲೆಮರೆಸಿಕೊಂಡಿದ್ದ. ತನಿಖೆ ಕೈಗೆತ್ತಿಕೊಂಡಿದ್ದ ಖಟಕಚಿಂಚೊಳಿ ಠಾಣೆಯ ಪೊಲೀಸರು ಕೊನೆಗೂ ಕಾರ್ಯಾಚರಣೆ ನಡೆಸಿ ಕೈಲಾಶ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ತದನಂತರ ಆತನನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆತರಲಾಗಿತ್ತು.

ಇದನ್ನೂ ಓದಿ: ಅಥಣಿಯಲ್ಲಿ ಭೀಕರ ದುರಂತ: ದುರಸ್ತಿ ವೇಳೆ ಕುಸಿದುಬಿದ್ದ ಮನೆ; ಇಬ್ಬರು ಕಾರ್ಮಿಕರು ಸಾವು

ಆರೋಪಿಯನ್ನು ಠಾಣೆಗೆ ಕರೆತಂದು ಇನ್ನು ಕೇವಲ 6 ಗಂಟೆ ಕಳೆಯುವಷ್ಟರಲ್ಲಿ ಆತ ರಾತ್ರಿ ವೇಳೆ ಪೊಲೀಸರ ಕಣ್ಣು ತಪ್ಪಿಸಿ ಠಾಣೆಯಿಂದ ಪರಾರಿ ಆಗಿದ್ದಾನೆ. ಇಷ್ಟು ಕೊಲೆ ಪ್ರಕರಣದ ಆರೋಪಿ ಪೊಲೀಸ್ ಕಾವಲಿನಲ್ಲಿದ್ದರೂ ಠಾಣೆಯಿಂದಲೇ ಓಡಿಹೋಗಿರುವುದು ಪೊಲೀಸರ ಕರ್ತವ್ಯದ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಮೂಡಿಸಿದೆ.

ಸತ್ಯ ಮುಚ್ಚಿಡಲು ಯತ್ನಿಸಿದ ಪೊಲೀಸರು?

ಇನ್ನು ಆರೋಪಿ ಕೈಲಾಶ್ ಪೊಲೀಸ್ ಠಾಣೆಯಿಂದ ಪರಾರಿಯಾಗಿರುವ ವಿಷಯದ ಬಗ್ಗೆ ಖಟಕಚಿಂಚೊಳಿ ಪೊಲೀಸರು ಯಾರ ಮುಂದೆಯೂ ಬಾಯಿ ಬಿಡದೆ ಸತ್ಯವನ್ನು ಮುಚ್ಚಿಡಲು ಪ್ರಯತ್ನಿಸಿದ್ದಾರೆ. ಆದರೆ, ಈ ವಿಷಯವನ್ನು ತಿಳಿದ ಮೃತ ಅನಿತಾ ಕುಟುಂಬಸ್ಥರು ತಕ್ಷಣವೇ ಮಾಧ್ಯಮಗಳಿಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ.

ಆರೋಪಿ ರಕ್ಷಣೆಗೆ ನಿಂತ್ರಾ ಪೊಲೀಸರು?

ಕೈಲಾಶ್​​ ಠಾಣೆಯಿಂದ ಓಡಿಹೋಗಲು ಪೊಲೀಸರ ಬೇಜವಾಬ್ದಾರಿತನವೇ ಕಾರಣ ಎಂದು ಆರೋಪಿಸಿರುವ ಮೃತರ ಕುಟುಂಬಸ್ಥರು, “ಬಂಧನಕ್ಕೊಳಗಾದ ಆರೋಪಿಗೆ ಪೊಲೀಸರೇ ರಕ್ಷಣೆ ನೀಡುತ್ತಿದ್ದಾರಾ?” ಎಂದು ಪ್ರಶ್ನಿಸಿದ್ದಾರೆ.

ಲಾರಿ ಡಿಕ್ಕಿ: ಕಾರಿನಲ್ಲಿ ತೆರಳುತ್ತಿದ್ದ ಜೈಲು ಸಿಬ್ಬಂದಿ ಸಾವು

ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ತೆರಳುತ್ತಿದ್ದ ಜೈಲು ಸಿಬ್ಬಂದಿ ಸಾವನ್ನಪ್ಪಿರುವಂತಹ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾಮದ ಬಳಿ ನಡೆದಿದೆ. ಧಾರವಾಡ ಜೈಲಿನ ವಾರ್ಡರ್ ಸಂಗಪ್ಪ ಮಜ್ಜಗಿ(41) ಮೃತ ವ್ಯಕ್ತಿ.

ಇದನ್ನೂ ಓದಿ: ಬೈಕ್​​ಗೆ ಸಾರಿಗೆ ಬಸ್​​ ಡಿಕ್ಕಿ: ಹುಮನಾಬಾದ್​​ನಲ್ಲಿ ದುರಂತ ಅಂತ್ಯ ಕಂಡ ಮಗ, ಚಿಕ್ಕಮ್ಮ

ಧಾರವಾಡದಿಂದ ಬಾಗಲಕೋಟೆ ಜಿಲ್ಲೆಯ ನೀರಲಗಿ ಗ್ರಾಮಕ್ಕೆ ತೆರಳುತ್ತಿದ್ದರು. ಭೈರನಹಟ್ಟಿ ಬಳಿ ಲಾರಿ, ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿತ್ತು. ಕಾರಿನಲ್ಲಿ ಸಿಲುಕಿ ನಜ್ಜುಗುಜ್ಜಾಗಿ ಸಂಗಪ್ಪ ಮಜ್ಜಗಿ ಮೃತಪಟ್ಟಿದ್ದಾರೆ. ಸದ್ಯ ಹರಸಾಹಸಪಟ್ಟು ಪೊಲೀಸರು ಶವವನ್ನು ಹೊರತೆಗೆದಿದ್ದು, ಗದಗ ಜಿಲ್ಲೆಯ ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಭಾರತ ಟಿ20 ತಂಡ ಮತ್ತೆ ಕಣಕ್ಕಿಳಿಯುವುದು ಯಾವಾಗ? ಎದುರಾಳಿ ಯಾರು? – Kannada News | Team India T20 Comeback: Zimbabwe Series Lineup and Schedule Revealed

ಸತತ 6 ಟಿ20 ಪಂದ್ಯಗಳನ್ನು ಸೋತಿರುವ ಭಾರತ ಟಿ20 ತಂಡದ (Team India) ಆತ್ಮವಿಶ್ವಾಸವೇ ಮಾಯಾವಾಗಿ ಹೋಗಿದೆ. ಮೊದಲಿಗೆ ಐರ್ಲೆಂಡ್ ವಿರುದ್ಧ 2-0 ಅಂತರದಲ್ಲಿ ಟಿ20 ಸರಣಿ ಸೋತಿದ್ದ ಶ್ರೇಯಸ್ ಅಯ್ಯರ್ ( Shreyas Iyer) ಪಡೆ ಅದಾದ ಬಳಿಕ ಇಂಗ್ಲೆಂಡ್‌ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯನ್ನು 4-0 ಅಂತರದಿಂದ ಕಳೆದುಕೊಂಡಿತು. ಒಂದು ಪಂದ್ಯ ಮಳೆಯಿಂದ ರದ್ದಾಯಿತು. ಹೀಗಾಗಿ ಟೀಂ ಇಂಡಿಯಾಕ್ಕೆ ಗೆಲುವೆಂಬುದು ಮರಿಚಿಕೆಯಾಗಿದೆ. ಆದರೆ ಸತತ ಸೋಲುಗಳಿಂದ ಪುಟಿದೇಳುವುದು ಹೇಗೆ ಎಂಬುದನ್ನು ಚೆನ್ನಾಗಿ ಅರಿತಿರುವ ಟೀಂ ಇಂಡಿಯಾ ತನ್ನ ಮುಂದಿನ ಸರಣಿಯಲ್ಲಿ ಖಂಡಿತವಾಗಿಯೂ ತನ್ನ ಗೆಲುವಿನ ಲಯಕ್ಕೆ ಮರಳುವ ವಿಶ್ವಾಸವಿದೆ. ಹಾಗಿದ್ದರೆ, ಭಾರತ ಟಿ20 ತಂಡದ ಮುಂದಿನ ಸರಣಿ ಯಾವಾಗ? ಯಾರ ವಿರುದ್ಧ? ಎಲ್ಲಿ ನಡೆಯಲಿದೆ ಎಂಬುದು ಪ್ರಶ್ನೆ. ಆ ಪ್ರಶ್ನೆಗೆ ಉತ್ತರ ಈ ಕೆಳಗಿನಂತಿದೆ.

ಜಿಂಬಾಬ್ವೆ ಮುಂದಿನ ಎದುರಾಳಿ

ಭಾರತ ತನ್ನ ಮುಂದಿನ ಟಿ20 ಸರಣಿಯನ್ನು ಜಿಂಬಾಬ್ವೆ ವಿರುದ್ಧ ಆಡಲಿದೆ. ಉಭಯ ತಂಡಗಳ ನಡುವೆ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಈ ಸರಣಿಗಾಗಿ ಬಿಸಿಸಿಐ ಕೆಲವು ದಿನಗಳ ಹಿಂದೆ 15 ಸದಸ್ಯರ ಟಿ20 ತಂಡವನ್ನು ಪ್ರಕಟಿಸಿದೆ. ಈ ಸರಣಿಯಲ್ಲೂ ಶ್ರೇಯಸ್ ಅಯ್ಯರ್ ತಂಡವನ್ನು ಮುನ್ನಡೆಸಲಿದ್ದಾರೆ. ಆದರೆ ಈ ಸರಣಿಯಿಂದ ಸಂಜು ಸ್ಯಾಮ್ಸನ್ ಅವರನ್ನು ಕೈಬಿಡಲಾಗಿದೆ. ಹಾಗೆಯೇ ಹರ್ಷಿತ್ ರಾಣಾ ಹಾಗೂ ವರುಣ್ ಚಕ್ರವರ್ತಿ ಗಾಯದಿಂದಾಗಿ ಈ ಪ್ರವಾಸದಿಂದ ಹೊರಗುಳಿದಿದ್ದಾರೆ. ಉಳಿದಂತೆ ತಂಡದಲ್ಲಿ ಹಲವು ಯುವ ಆಟಗಾರರಿಗೆ ಮೊಟ್ಟ ಮೊದಲ ಬಾರಿಗೆ ಭಾರತ ತಂಡದಲ್ಲಿ ಅವಕಾಶ ನೀಡಲಾಗಿದೆ. ಈ ಸರಣಿಯಲ್ಲಿ ವೈಭವ್ ಸೂರ್ಯವಂಶಿ ಆರಂಭಿಕರಾಗಿ ಆಡುವುದು ಖಚಿತವಾಗಿದೆ.

ಟಿ20 ಸರಣಿಗೆ ಭಾರತ ತಂಡ

  • ನಾಯಕ: ಶ್ರೇಯಸ್ ಅಯ್ಯರ್
  • ಉಪನಾಯಕ: ತಿಲಕ್ ವರ್ಮ
  • ವಿಕೆಟ್‌ಕೀಪರ್‌ಗಳು: ಇಶಾನ್ ಕಿಶನ್, ಪ್ರಭಾಸಿಮ್ರಾನ್ ಸಿಂಗ್
  • ಬ್ಯಾಟರ್ಸ್: ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಸೂರ್ಯಾಂಶ್ ಶೆಡ್ಗೆ, ರಿಂಕು ಸಿಂಗ್
  • ಆಲ್‌ರೌಂಡರ್‌ಗಳು: ಶಿವಂ ದುಬೆ, ಹರ್ಷ್ ದುಬೆ, ಪ್ರಿನ್ಸ್ ಯಾದವ್
  • ಬೌಲರ್‌ಗಳು: ರವಿ ಬಿಷ್ಣೋಯಿ, ಯಶ್ ಠಾಕೂರ್, ಅಶೋಕ್ ಶರ್ಮಾ, ಮಯಾಂಕ್ ಯಾದವ್, ಪ್ರಿನ್ಸ್ ಯಾದವ್.

ಕ್ಯಾಚ್ ಹಿಡಿಯಲ್ಲ, ರನ್ ಹೊಡೆಯಲ್ಲ, ಬೌಲಿಂಗ್ ಬಗ್ಗೆ ಕೇಳಬೇಕಿಲ್ಲ; ಇವರೇನಾ ಟಿ20 ಚಾಂಪಿಯನ್ಸ್..!

ಟಿ20 ಸರಣಿ ವೇಳಾಪಟ್ಟಿ

  • ಮೊದಲನೇ ಟಿ20 ಪಂದ್ಯ: ಗುರುವಾರ, ಜುಲೈ 23, 2026
  • ಎರಡನೇ ಟಿ20 ಪಂದ್ಯ: ಶನಿವಾರ, ಜುಲೈ 25, 2026
  • ಮೂರನೇ ಟಿ20 ಪಂದ್ಯ: ಭಾನುವಾರ, ಜುಲೈ 26, 2026

* ಈ ಮೂರು ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 4:30 ಕ್ಕೆ ಆರಂಭವಾಗಲಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಲ್ಟಿ ಅಸೆಟ್ ಫಂಡ್​ಗಳಿಗೆ ಹೂಡಿಕೆ ಒಳಹರಿವು ಶೇ. 22 ಹೆಚ್ಚಳ; ಏನಿದು ಈ ರೀತಿಯ ಫಂಡ್? – Kannada News | Multi Asset Funds get 22pc increase in investment flow in June, know what are these funds

ಮ್ಯೂಚುವಲ್ ಫಂಡ್Image Credit source: jayk7/Moment/Getty Images

ನವದೆಹಲಿ, ಜುಲೈ 12: ಷೇರು ಮಾರುಕಟ್ಟೆಯಲ್ಲಿನ ತೀವ್ರ ಏರಿಳಿತಗಳ (Volatility) ನಡುವೆ, ಹೂಡಿಕೆದಾರರು ಸುರಕ್ಷಿತ ಮತ್ತು ವೈವಿಧ್ಯಮಯ ಹೂಡಿಕೆಗೆ ಒಲವು ತೋರುತ್ತಿರುವುದು ಹೆಚ್ಚಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಮಲ್ಟಿ-ಅಸೆಟ್ ಅಲೋಕೇಷನ್ ಫಂಡ್‌ಗಳಿಗೆ (Multi-Asset Allocation Funds) ಬರುವ ಹೂಡಿಕೆಯು ತಿಂಗಳಿನಿಂದ ತಿಂಗಳಿಗೆ (MoM) ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಭಾರತೀಯ ಮ್ಯೂಚುವಲ್ ಫಂಡ್ ಸಂಘಟನೆಯ (AMFI) ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಜೂನ್ ತಿಂಗಳಿನಲ್ಲಿ ಮಲ್ಟಿ-ಅಸೆಟ್ ಅಲೋಕೇಷನ್ ಫಂಡ್‌ಗಳಿಗೆ ₹4,810.76 ಕೋಟಿ ಹೂಡಿಕೆ ಹರಿದುಬಂದಿದೆ. ಇದು ಮೇ ತಿಂಗಳ ಹೂಡಿಕೆಗೆ (₹3,928.51 ಕೋಟಿ) ಹೋಲಿಸಿದರೆ 22.46% ರಷ್ಟು ಜಂಪ್ ಆಗಿದೆ. ಹೈಬ್ರಿಡ್ ಮ್ಯೂಚುವಲ್ ಫಂಡ್ ವಿಭಾಗದಲ್ಲಿ ಅತಿ ಹೆಚ್ಚು ಹೂಡಿಕೆ ಆಕರ್ಷಿಸಿದ ಫಂಡ್‌ಗಳಲ್ಲಿ ಇದು ಪ್ರಮುಖವಾಗಿದೆ.

ಮಲ್ಟಿ ಅಸೆಟ್ ಫಂಡ್​ಗಳಲ್ಲಿ ಹೂಡಿಕೆ ಹೆಚ್ಚಲು ಕಾರಣವೇನು?

ಜಾಗತಿಕ ರಾಜಕೀಯ ಉದ್ವಿಗ್ನತೆ (Geopolitical Tensions), ವಿದೇಶಿ ಬಂಡವಾಳದ ಹೊರಹರಿವು, ಹಣದುಬ್ಬರದ ಆತಂಕಗಳು ಮತ್ತು ಬಡ್ಡಿದರ ಹೆಚ್ಚಳದ ಭೀತಿಯಿಂದಾಗಿ ಇತ್ತೀಚೆಗೆ ಷೇರು ಮಾರುಕಟ್ಟೆಯಲ್ಲಿ ಭಾರಿ ಏರಿಳಿತಗಳು ಕಂಡುಬರುತ್ತಿವೆ. ಇಂತಹ ಸಮಯದಲ್ಲಿ ಒಂದೇ ವಲಯದಲ್ಲಿ ಹೂಡಿಕೆ ಮಾಡುವ ಬದಲು, ಅಪಾಯವನ್ನು ಕಡಿಮೆ ಮಾಡಲು ಹೂಡಿಕೆದಾರರು ವಿಸ್ತೃತ ಹೂಡಿಕೆ ತಂತ್ರವನ್ನು (Diversified Investment Strategy) ಇಷ್ಟಪಡುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ರೈಲ್ವೆ ಟಿಕೆಟ್ ನಿಯಮಗಳ ಪರಿಷ್ಕರಣೆ; ಟಿಕೆಟ್​ನ ವಾಟ್ಸಾಪ್ ಸ್ಕ್ರೀನ್​ಶಾಟ್, ಫೋಟೋ, ಪಿಡಿಎಫ್ ಕಾಪಿಗಳು ಮಾನ್ಯವಾ?

ಮಲ್ಟಿ-ಅಸೆಟ್ ಅಲೋಕೇಷನ್ ಫಂಡ್ ಎಂದರೇನು?

ಭಾರತೀಯ ಷೇರು ಮಾರುಕಟ್ಟೆ ನಿಯಂತ್ರಣ ಮಂಡಳಿ (SEBI) ನಿಯಮಗಳ ಪ್ರಕಾರ, ಈ ಫಂಡ್‌ಗಳು ಕನಿಷ್ಠ ಮೂರು ವಿಭಿನ್ನ ಅಸೆಟ್ ಕ್ಲಾಸ್‌ಗಳಲ್ಲಿ (ಹೂಡಿಕೆ ವಿಭಾಗಗಳು) ಹೂಡಿಕೆ ಮಾಡಬೇಕು:

  • ಷೇರುಗಳು (Equities): ಕನಿಷ್ಠ 10%
  • ಸಾಲಪತ್ರಗಳು (Fixed Income/Debt): ಕನಿಷ್ಠ 10%
  • ಚಿನ್ನ/ಬೆಳ್ಳಿ (Commodities): ಕನಿಷ್ಠ 10%

ಷೇರು ಮಾರುಕಟ್ಟೆ ಕುಸಿದಾಗ ಚಿನ್ನ ಅಥವಾ ಡೆಟ್ ಫಂಡ್ಸ್ ಸ್ಥಿರತೆಯನ್ನು ನೀಡುತ್ತವೆ, ಇದರಿಂದಾಗಿ ಹೂಡಿಕೆದಾರರ ಒಟ್ಟಾರೆ ನಷ್ಟದ ಅಪಾಯ ಕಡಿಮೆಯಾಗುತ್ತದೆ. ಬಿಕ್ಕಟ್ಟಿನ ಸಂದರ್ಭಗಳಲ್ಲಿ ಹೂಡಿಕೆದಾರರ ಹಣವನ್ನು ಸುರಕ್ಷಿತವಾಗಿರಿಸುವುದಷ್ಟೇ ಅಲ್ಲ, ಉತ್ತಮ ಲಾಭವನ್ನೂ ಇವು ತರುತ್ತವೆ.

ಪ್ರಮುಖ ಮಲ್ಟಿ ಅಸೆಟ್ ಫಂಡ್‌ಗಳ ಸಾಧನೆ

ಮಾರುಕಟ್ಟೆಯ ಏರಿಳಿತದ ನಡುವೆಯೂ ಈ ವಿಭಾಗದ ಪ್ರಮುಖ ಫಂಡ್‌ಗಳು ಉತ್ತಮ ಆದಾಯ ನೀಡಿವೆ. ಕಳೆದ ಮೂರು ವರ್ಷಗಳಲ್ಲಿ ಇಂಥ ಯಾವ ಫಂಡ್​ಗಳು ಅತ್ಯುತ್ತಮ ಆದಾಯ ತಂದಿವೆ ಎಂಬುದರ ವಿವರ ಇಲ್ಲಿದೆ:

  • ನಿಪ್ಪಾನ್ ಇಂಡಿಯಾ ಮಲ್ಟಿ ಅಸೆಟ್ ಅಲೋಕೇಷನ್ ಫಂಡ್: ಸುಮಾರು 20% ಆದಾಯ ನೀಡಿದೆ.
  • SBI ಮತ್ತು ಆದಿತ್ಯ ಬಿರ್ಲಾ ಸನ್ ಲೈಫ್ ಮಲ್ಟಿ ಅಸೆಟ್ ಫಂಡ್‌ಗಳು: ಸುಮಾರು 17% ವಾರ್ಷಿಕ ಆದಾಯ ನೀಡಿವೆ.
  • ಮೋತಿಲಾಲ್ ಓಸ್ವಾಲ್ ಮಲ್ಟಿ ಅಸೆಟ್ ಫಂಡ್: ಸುಮಾರು 14% ವಾರ್ಷಿಕ ಆದಾಯ ತಂದುಕೊಟ್ಟಿದೆ.

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಹೊಂದಿರುವವರು ದಿಢೀರ್ ಮೃತಪಟ್ಟರೆ ಬಿಲ್ ಕಟ್ಟೋರು ಯಾರು? ಕುಟುಂಬದವರ ಜವಾಬ್ದಾರಿಯೇ?

ಮಲ್ಟಿ ಅಸೆಟ್ ಫಂಡ್ಸ್​ನಿಂದ ತೆರಿಗೆಯ ಲಾಭ

ತಜ್ಞರ ಪ್ರಕಾರ, ಈ ಫಂಡ್‌ಗಳ ಮತ್ತೊಂದು ದೊಡ್ಡ ಆಕರ್ಷಣೆ ಎಂದರೆ ತೆರಿಗೆ ವಿನಾಯಿತಿ (Tax Benefit). ಯಾವ ಮಲ್ಟಿ-ಅಸೆಟ್ ಫಂಡ್‌ಗಳು ಷೇರು ಮಾರುಕಟ್ಟೆಯಲ್ಲಿ (Equity) ಕನಿಷ್ಠ 65% ಹೂಡಿಕೆ ಮಾಡಿರುತ್ತವೆಯೋ, ಅವುಗಳನ್ನು ತೆರಿಗೆ ಲೆಕ್ಕಾಚಾರಕ್ಕಾಗಿ ಇಕ್ವಿಟಿ ಫಂಡ್‌ಗಳೆಂದೇ ಪರಿಗಣಿಸಲಾಗುತ್ತದೆ. ಇದರಿಂದಾಗಿ ಹೂಡಿಕೆದಾರರಿಗೆ ₹1.25 ಲಕ್ಷದವರೆಗಿನ ದೀರ್ಘಾವಧಿ ಬಂಡವಾಳ ಲಾಭಕ್ಕೆ (LTCG) ಯಾವುದೇ ತೆರಿಗೆ ಇರುವುದಿಲ್ಲ ಮತ್ತು ಅದಕ್ಕಿಂತ ಹೆಚ್ಚಿನ ಲಾಭಕ್ಕೆ ಕೇವಲ 12.5% ತೆರಿಗೆ ಅನ್ವಯವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version