Live: ಹಿರಿಯ ಗಾಯಕಿ ಎಸ್​​. ಜಾನಕಿ ಅಂತಿಮ ದರ್ಶನದ ನೇರಪ್ರಸಾರ – Kannada News | Live: Last Rites of Legendary Singer S. Janaki; Thousands Pour in to Pay Final Tribute in Mysuru

ಮೈಸೂರು, ಜುಲೈ 12: ಹಿರಿಯ ಗಾಯಕಿ ಎಸ್​.ಜಾನಕಿ(88) ಅವರ ಅಂತಿಮ ವಿಧಿ ವಿಧಾನಗಳು ಮೈಸೂರಿನಲ್ಲಿಯೇ ಇಂದು ನಡೆಯಲಿದ್ದು, ಮೊಮ್ಮಗಳು ಅಪ್ಸರಾ ಅಂತ್ಯಕ್ರಿಯೆ ನಡೆಸಲಿದ್ದಾರೆ. ಅದಕ್ಕೂ ಮುನ್ನ ಮಹಾರಾಜ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಈಗಾಗಲೇ ನೂರಾರು ಮಂದಿ ಗಣ್ಯರು ಜಾನಕಿ ಅವರಿಗೆ ನಮನ ಸಲ್ಲಿಸಿದ್ದಾರೆ. ಮೈದಾನದಲ್ಲಿ ಸುಮಾರು 800 ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಮೈಸೂರಿನ ಗದ್ದಿಗೆ ರಸ್ತೆಗೆ ಎಸ್​​.ಜಾನಕಿ ಹೆಸರು ಇಡಲು ಶಾಸಕ ಜಿ.ಟಿ.ದೇವೇಗೌಡರಿಗೆ ಜಾನಕಿ ಕೇರ್​​ಟೇಕರ್ ನವೀನ್​ ಮನವಿ ಮಾಡಿದ್ದು, ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರುವೆ ಎಂದು ಜಿಟಿಡಿ ಕೂಡ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹುಟ್ಟುಹಬ್ಬದ ಸಂಭ್ರಮದಲ್ಲೇ ದುರಂತ: ಮಸ್ಸೂರಿ ಹೋಂಸ್ಟೇಯಲ್ಲಿ ಮಹಿಳೆ ನಿಗೂಢ ಸಾವು, ತಿಂಗಳ ಬಳಿಕ ಟೆಕ್ಕಿ ಪತಿ ಅರೆಸ್ಟ್ – Kannada News | Mussoorie Homestay Tragedy: Techie Husband Arrested for Wife’s Mysterious Death on Birthday Trip

ನವದೆಹಲಿ, ಜುಲೈ 12: ಪತಿಯ ಹುಟ್ಟುಹಬ್ಬವನ್ನು ಆಚರಿಸಲು ಮಸ್ಸೂರಿಗೆ ಪ್ರವಾಸ(Tour) ಬಂದಿದ್ದ 27 ವರ್ಷದ ಮಹಿಳೆಯೊಬ್ಬರು ಹೋಂಸ್ಟೇ ಕೋಣೆಯಲ್ಲಿ ಬೆತ್ತಲೆ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದ ಭೀಕರ ಪ್ರಕರಣಕ್ಕೆ ಈಗ ದೊಡ್ಡ ತಿರುವು ಸಿಕ್ಕಿದೆ. ಘಟನೆ ನಡೆದು ಒಂದು ತಿಂಗಳ ನಂತರ, ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಪತಿಯೇ ಈ ಕೊಲೆಯಲ್ಲಿ ಭಾಗಿಯಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ಸಾಬೀತಾಗಿದ್ದು, ಪೊಲೀಸರು ಆತನನ್ನು ದೆಹಲಿಯಲ್ಲಿ ಬಂಧಿಸಿದ್ದಾರೆ.

ಡೆಹ್ರಾಡೂನ್ ಪೊಲೀಸರು ಮಸ್ಸೂರಿ ನ್ಯಾಯಾಲಯದಿಂದ ಜಾಮೀನು ರಹಿತ ವಾರಂಟ್ ಪಡೆದು, ಶನಿವಾರ ಪೂರ್ವ ದೆಹಲಿಯ ಮಧು ವಿಹಾರ್ ಪ್ರದೇಶದಲ್ಲಿ ದಾಳಿ ನಡೆಸಿ ಆರೋಪಿ ಪತಿಯನ್ನು ವಶಕ್ಕೆ ಪಡೆದಿದ್ದಾರೆ. ನ್ಯಾಯಾಲಯ ಆತನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಹುಟ್ಟುಹಬ್ಬದ ಪಾರ್ಟಿ ನಡೆದ ರೂಮಿನಲ್ಲಿ ರಕ್ತದ ಕಲೆಗಳು

ಮೂಲತಃ ಆಂಧ್ರಪ್ರದೇಶದ ವಿಶಾಖಪಟ್ಟಣದವರಾದ ಈ ಜೋಡಿ ನವೆಂಬರ್ 8, 2025 ರಂದು ವಿವಾಹವಾಗಿದ್ದರು. ಈಗ ದೆಹಲಿಯಲ್ಲಿ ವಾಸಿಸುತ್ತಿದ್ದ ಇವರು ಪತಿಯ ಬರ್ತ್‌ಡೇ ಆಚರಿಸಲು ಜೂನ್ ತಿಂಗಳಿನಲ್ಲಿ ಮಸ್ಸೂರಿ-ಧನೋಲ್ಟಿ ರಸ್ತೆಯಲ್ಲಿರುವ ಹೋಂಸ್ಟೇಯೊಂದಕ್ಕೆ ಬಂದಿದ್ದರು.

ಆದರೆ, ಜೂನ್ 15 ರಂದು ಪತ್ನಿ ಪಿ. ರಾಧಾ ಗಾಯತ್ರಿ (27) ಕೋಣೆಯ ನೆಲದ ಮೇಲೆ ಶವವಾಗಿ ಪತ್ತೆಯಾಗಿದ್ದರು. “ನಾವು ಜೂನ್ 15 ರ ಬೆಳಗಿನ ಜಾವ 3.30 ರವರೆಗೆ ಮದ್ಯ ಸೇವಿಸಿ ಮಲಗಿದ್ದೆವು, ಬೆಳಗ್ಗೆ ಎದ್ದು ನೋಡುವಾಗ ಪತ್ನಿ ಮೃತಪಟ್ಟಿದ್ದಳು” ಎಂದು ಪತಿ ಪೊಲೀಸರಿಗೆ ಕಥೆ ಕಟ್ಟಿದ್ದ. ಆದರೆ ಪೊಲೀಸರು ಕೋಣೆಯನ್ನು ಪರಿಶೀಲಿಸಿದಾಗ ಸತ್ಯ ಬೇರೆಯದೇ ಇತ್ತು. ರಾಧಾ ಅವರ ಮೃತದೇಹ ಬಟ್ಟೆಗಳಿಲ್ಲದೆ ನೆಲದ ಮೇಲೆ ಬಿದ್ದಿತ್ತು ಹಾಗೂ ಹಾಸಿಗೆಯ ಬೆಡ್‌ಶೀಟ್ ಮೇಲೆ ರಕ್ತದ ಕಲೆಗಳಿದ್ದವು. ಕೋಣೆಯಲ್ಲಿ ಖಾಲಿ ಮದ್ಯದ ಬಾಟಲಿಗಳು ಚೆಲ್ಲಾಪಿಲ್ಲಿಯಾಗಿದ್ದವು.

ಮತ್ತಷ್ಟು ಓದಿ: ಉದ್ಯಮಿ ಕೇತನ್ ಹತ್ಯೆ : ಸೋನಮ್ ರಘುವಂಶಿಯಿಂದ ‘ಕೊಲೆ ಸ್ಕೆಚ್’ ಕಲಿತಿದ್ದ ಸಿಯಾ ಗೋಯಲ್

ತಂದೆಯ ದೂರಿನ ಬೆನ್ನಲ್ಲೇ ಬಯಲಾದ ರಹಸ್ಯ

ಮಗಳ ಸಾವು ಸಾಮಾನ್ಯ ಸಾವಲ್ಲ, ಇದರ ಹಿಂದೆ ಅಳಿಯನ ಕೈವಾಡವಿದೆ ಎಂದು ಸಂತ್ರಸ್ತೆ ರಾಧಾ ಅವರ ತಂದೆ ಪಿ. ಸುಧಾಕರ್ ಪೊಲೀಸರಿಗೆ ಗಂಭೀರ ದೂರು ನೀಡಿದ್ದರು. ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಮಗಳಿಗೆ ನೀಡಲಾಗುತ್ತಿದ್ದ ಕಿರುಕುಳ ಹಾಗೂ ಘಟನಾ ಸ್ಥಳದಲ್ಲಿದ್ದ ಸಾಕ್ಷ್ಯಗಳು ಪತಿಯ ವಿರುದ್ಧವಾಗಿದ್ದರಿಂದ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದರು.

ಸುದೀರ್ಘ ಒಂದು ತಿಂಗಳ ವೈದ್ಯಕೀಯ ವರದಿ ಹಾಗೂ ಸಾಕ್ಷ್ಯಗಳ ಪರಿಶೀಲನೆಯ ನಂತರ, ಪತಿಯೇ ಈ ಕೊಲೆಯಲ್ಲಿ ನೇರವಾಗಿ ಭಾಗಿಯಾಗಿರುವುದು ಪತ್ತೆಯಾಗಿದೆ. ಮದ್ಯದ ಅಮಲಿನಲ್ಲಿ ಇಬ್ಬರ ನಡುವೆ ಗಲಾಟೆ ನಡೆದು ಈ ಕೊಲೆ ನಡೆದಿದೆಯೇ ಅಥವಾ ಆಡಳಿತಾತ್ಮಕ ಯೋಜಿತ ಕೊಲೆಯೇ ಎಂಬ ಕೋನದಲ್ಲಿ ತನಿಖೆ ಮುಂದುವರೆದಿದೆ.

ಹೋಂಸ್ಟೇಗಳಲ್ಲಿ ಸುರಕ್ಷತೆಯ ಆತಂಕ

ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರು ಹೋಟೆಲ್‌ಗಳಿಗಿಂತ ಹೆಚ್ಚಾಗಿ ಪ್ರಕೃತಿಯ ಮಡಿಲಿನಲ್ಲಿರುವ ಹೋಂಸ್ಟೇಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಅನೇಕ ಹೋಂಸ್ಟೇಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಕೊರತೆ, ಸರಿಯಾದ ರಿಜಿಸ್ಟರ್ ನಿರ್ವಹಣೆ ಇಲ್ಲದಿರುವುದು ಮತ್ತು ಭದ್ರತಾ ಸಿಬ್ಬಂದಿ ಇಲ್ಲದಿರುವುದು ಇಂತಹ ಅಪರಾಧಗಳು ನಡೆದಾಗ ಸಾಕ್ಷ್ಯ ನಾಶಪಡಿಸಲು ಆರೋಪಿಗಳಿಗೆ ಸುಲಭವಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಉತ್ತರಾಖಂಡ ಪ್ರವಾಸೋದ್ಯಮ ಮತ್ತು ಪೊಲೀಸ್ ಇಲಾಖೆಯು ಮಸ್ಸೂರಿ ಹಾಗೂ ನೈನಿತಾಲ್ ಭಾಗದ ಎಲ್ಲಾ ಹೋಂಸ್ಟೇಗಳಲ್ಲಿ ಪ್ರವಾಸಿಗರ ಸುರಕ್ಷತೆ ಹಾಗೂ ಕಡ್ಡಾಯ ಸಿಸಿಟಿವಿ ಅಳವಡಿಕೆಗೆ ನಿಯಮಗಳನ್ನು ಬಿಗಿಗೊಳಿಸಲು ನಿರ್ಧರಿಸಿದೆ. ಸದ್ಯ ದೆಹಲಿ ಟೆಕ್ಕಿಯ ಕರಾಳ ಮುಖವಾಡ ಕಳಚಿದ್ದು, ಹೆಚ್ಚಿನ ಪೊಲೀಸ್ ವಿಚಾರಣೆ ನಡೀತಾ ಇದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ನಾವು ಇನ್ನೂ ಸಹ ತುಂಬಾ ಕಲಿಯಬೇಕಿದೆ: ಶ್ರೇಯಸ್ ಅಯ್ಯರ್ – Kannada News | Shreyas iyer Post match interview after IND vs ENG 5th T20 Match

ಇಂಗ್ಲೆಂಡ್ ವಿರುದ್ಧದ 5ನೇ ಟಿ20 ಪಂದ್ಯದಲ್ಲೂ ಟೀಮ್ ಇಂಡಿಯಾ ಸೋಲನುಭವಿಸಿದೆ. ಸೌತಾಂಪ್ಟನ್​ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ 20 ಓವರ್​ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 257 ರನ್​ಗಳು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 201 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಇಂಗ್ಲೆಂಡ್ 56 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ಈ ಸೋಲಿನ ಬಳಿಕ ಕಾಮೆಂಟೇಟರ್ ಇಯಾನ್ ಮೊರ್ಗನ್ ನಡೆಸಿದ ಸಂದರ್ಶನದಲ್ಲಿ ಶ್ರೇಯಸ್ ಅಯ್ಯರ್ ಅವರು ಪಂದ್ಯದ ಸೋಲು, ಕೈಚೆಲ್ಲಿದ ಕ್ಯಾಚ್‌ಗಳು ಮತ್ತು ಪಿಚ್‌ಗಳಿಗೆ ಹೊಂದಿಕೊಳ್ಳುವಲ್ಲಿನ ವೈಫಲ್ಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಈ ಪ್ರಶ್ನೋತ್ತರಗಳ ಸಂಕ್ಷಿಪ್ತ ವರದಿ ಇಲ್ಲಿದೆ.

ಇಯಾನ್ ಮೊರ್ಗನ್: ಈ ಸರಣಿಯಿಂದ ನೀವು ಮೊದಲು ಏನು ಕಲಿಯುತ್ತೀರಿ?

ಶ್ರೇಯಸ್ ಅಯ್ಯರ್: ಪ್ರಾಮಾಣಿಕವಾಗಿ ಹೇಳುವುದಾದರೆ, ಬಹಳಷ್ಟು ವಿಷಯಗಳನ್ನು ಕಲಿಯಬೇಕಿದೆ. ಮೊದಲನೆಯದಾಗಿ, ಪರಿಸ್ಥಿತಿಗಳು, ಪಿಚ್​​ನ ಅರಿವು, ಆಯಾ ಪಿಚ್​ಗಳಿಗೆ ಹೊಂದಿಕೊಳ್ಳುವಿಕೆ. ನಾವು ಆಡಿದ ಮೈದಾನಗಳ ಪೈಕಿ ಕೊನೆಯ ಪಂದ್ಯ ನಡೆದ ಪಿಚ್ ಅತ್ಯುತ್ತಮವಾಗಿತ್ತು. ವೃತ್ತಿಪರ ಆಟಗಾರರಾಗಿ ನಾವು ಪ್ರತಿ ಪಂದ್ಯದಲ್ಲೂ ಪರಿಸ್ಥಿತಿಗೆ ತಕ್ಕಂತೆ ವೇಗವಾಗಿ ಹೊಂದಿಕೊಳ್ಳುವುದನ್ನು ಕಲಿಯಬೇಕಾಗಿದೆ ಎಂದರು.

ಇಯಾನ್ ಮೊರ್ಗನ್: ಈ ಸೋಲಿನಿಂದ ಹೊರಬರಲು ಮುಖ್ಯವಾದ ಕಲಿಕೆಗಳು ಏನು ಎಂದು ನೀವು ಹೇಳುತ್ತೀರಿ?

ನಾವು ಇಲ್ಲಿ ಉತ್ತಮವಾಗಿ ಏನು ಮಾಡಬಹುದಿತ್ತು ಎಂಬುದನ್ನು ಸಾಧ್ಯವಾದಷ್ಟು ಸಂವಹನ ಮಾಡುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ. ಪಂದ್ಯದ ಸೋಲಿಗೆ ಪ್ರಮುಖ ಕಾರಣಗಳಲ್ಲಿ ಫೀಲ್ಡಿಂಗ್ ಕೂಡ ಒಂದು. ಗೆಲುವಿನಲ್ಲಿ ಫೀಲ್ಡಿಂಗ್ ಪ್ರಮುಖ ಪಾತ್ರ ವಹಿಸುತ್ತದೆ. ನಾವು ಕೆಲವು ಪ್ರಮುಖ ಕ್ಯಾಚ್‌ಗಳನ್ನು ಕೈಚೆಲ್ಲಿದೆವು. ಇದರಿಂದಾಗಿ ಎದುರಾಳಿ ತಂಡ 20 ರಿಂದ 25 ರನ್ ಹೆಚ್ಚು ಗಳಿಸಿತು. ಒಂದು ವೇಳೆ ಆ ತಪ್ಪುಗಳಾಗದಿದ್ದರೆ ನಾವು 220-225 ರನ್‌ಗಳ ಗುರಿಯನ್ನು ಬೆನ್ನಟ್ಟಬಹುದಿತ್ತು.  ಹೀಗಾಗಿ
ನಾವು ಸೋಲಿಂದ ಹೊರಬರಲು ಅಷ್ಟೇನೂ ಕೆಲಸ ಮಾಡಬೇಕಾಗಿಲ್ಲ. ಫೀಲ್ಡಿಂಗ್ ಬಗ್ಗೆ ಹೆಚ್ಚು ಗಮನಹರಿಸಿದರೆ ಸಾಕು ಎಂದು ಅಯ್ಯರ್ ಹೇಳಿದ್ದಾರೆ.

ಇಯಾನ್ ಮೊರ್ಗನ್: ಕೆಲವು ಹಂತಗಳಲ್ಲಿ ಬೌಲಿಂಗ್ ಆಯ್ಕೆ ಇನ್ನೂ ಚೆನ್ನಾಗಿರಬಹುದಿತ್ತು ಎಂದೆನಿಸಿದೆಯಾ?

ಹೌದು, ಖಂಡಿತ. ಬ್ಯಾಟಿಂಗ್‌ಗೆ ಪೂರಕವಾಗಿದ್ದ ಪಿಚ್‌ನಲ್ಲಿ ನಮ್ಮ ಬೌಲರ್‌ಗಳು ವೈವಿಧ್ಯಮಯ ಎಸೆತಗಳ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ವಂಚಿಸಬೇಕಾಗಿತ್ತು. ಆದರೆ ಅಲ್ಲಿ ನಮ್ಮ ಯೋಜನೆಗಳು ಸರಿಯಾಗಿ ಕೆಲಸ ಮಾಡಲಿಲ್ಲ. ಈ ಹಂತದಲ್ಲಿ ನಾವು ಒಂದೆರಡು ಕ್ಯಾಚ್‌ಗಳನ್ನು ಕೈಬಿಟ್ಟೆವು, ಅದು ಬಹುಶಃ ನಮಗೆ ಸ್ವಲ್ಪ ಹಿನ್ನಡೆಯನ್ನುಂಟು ಮಾಡಿತು.

ಇಯಾನ್ ಮೊರ್ಗನ್: ಪವರ್‌ಪ್ಲೇನಲ್ಲಿ ಅತಿಯಾಗಿ ವಿಕೆಟ್‌ಗಳನ್ನು ಕಳೆದುಕೊಂಡಿದ್ದು ನಿಮಗೆ ಭಾರಿ ನಷ್ಟವನ್ನು ಉಂಟುಮಾಡಿತೇ?

ಪವರ್‌ಪ್ಲೇ ಅವಧಿಯಲ್ಲಿ ಸರಣಿಯಾಗಿ ವಿಕೆಟ್ ಕಳೆದುಕೊಂಡಿದ್ದು ತಂಡಕ್ಕೆ ದೊಡ್ಡ ಹೊಡೆತ ನೀಡಿತು. ದೊಡ್ಡ ಮೊತ್ತವನ್ನು ಬೆನ್ನಟ್ಟುವಾಗ ಜವಾಬ್ದಾರಿಯುತ ಜೊತೆಯಾಟಗಳು ಮುಖ್ಯವೇ ಹೊರತು, ಆರಂಭದಿಂದಲೇ ಅತಿಯಾದ ಆಕ್ರಮಣಕಾರಿ ಆಟಕ್ಕೆ ಮುಂದಾಗುವುದು ಸರಿಯಲ್ಲ. ಇದರ ಅರಿವು ಇರಬೇಕಿತ್ತು ನಾನು ಭಾವಿಸುತ್ತೇನೆ ಎಂದು ಅಯ್ಯರ್ ತಿಳಿಸಿದರು.

ಇಯಾನ್ ಮೊರ್ಗನ್: ಅದ್ಭುತ ಜೊತೆಯಾಟಗಳು ಒಬ್ಬ ನಾಯಕನಿಗೆ ಪಂದ್ಯ ನಿಭಾಯಿಸಲು  ತುಂಬಾ ಕಷ್ಟಕರವಾಗಿಸುತ್ತದೆಯೇ?

ಹೌದು, ಜೋಸ್ ಬಟ್ಲರ್ ಹಾಗೂ ಹ್ಯಾರಿ ಬ್ರೂಕ್ ಭರ್ಜರಿಯಾಗಿ ಬ್ಯಾಟಿಂಗ್ ಮಾಡಿದರು. ಅಲ್ಲದೆ ಅತ್ಯುತ್ತಮ ಜೊತೆಯಾಟವನ್ನೂ ಸಹ ಪ್ರದರ್ಶಿಸಿದರು. ಇಂತಹ ಪಾಲುದಾರಿಕೆ ಖಂಡಿತವಾಗಿಯೂ ಪಂದ್ಯದ ಮೇಲಿನ ಹಿಡಿತವನ್ನು ಸ್ಥಿರಗೊಳಿಸುತ್ತದೆ. ಜೊತೆಗೆ ಅವರ ಬೌಲರ್‌ಗಳು ತಾಯ್ನಾಡಿನ ಮೈದಾನದ ಸಂಪೂರ್ಣ ಲಾಭ ಪಡೆದರು.

ಇದನ್ನೂ ಓದಿ: 1,605 ದಿನಗಳ ಬಳಿಕ ಅಗ್ರಸ್ಥಾನ ಕಳೆದುಕೊಂಡ ಭಾರತ!

ಸರಣಿ ಕೈತಪ್ಪಿದರೂ ಇದು ತಂಡದ ಯುವ ಆಟಗಾರರಿಗೆ ದೊಡ್ಡ ಪಾಠವಾಗಿದೆ. ವಿದೇಶಿ ಮೈದಾನಗಳ ಗಾತ್ರ ಮತ್ತು ಆಯಾಮಗಳು ವಿಭಿನ್ನವಾಗಿರುತ್ತವೆ. ಮುಂದಿನ ಬಾರಿ ಇಲ್ಲಿಗೆ ಬರುವಾಗ ತಂಡದ ಆಟಗಾರರು ಈ ಎಲ್ಲಾ ತಪ್ಪುಗಳನ್ನು ತಿದ್ದಿಕೊಂಡು, ಹೆಚ್ಚಿನ ಜಾಗರೂಕತೆಯಿಂದ ಕಣಕ್ಕಿಳಿಯಲಿದ್ದಾರೆ ಎಂದು ಅಯ್ಯರ್ ವಿಶ್ವಾಸ ವ್ಯಕ್ತಪಡಿಸುತ್ತಾ ಮಾತು ಮುಗಿಸಿದರು.

Published On – 8:18 am, Sun, 12 July 26

Source link

ಕೆನಡಾದ ಬೃಹತ್ ಬೀದಿ ಉತ್ಸವದಲ್ಲಿ ರಕ್ತಪಾತ: ಮನಬಂದಂತೆ ಗುಂಡು ಹಾರಿಸಿದ ದುಷ್ಕರ್ಮಿ, ಇಬ್ಬರು ಸಾವು, ಹಲವರಿಗೆ ಗಾಯ – Kannada News | Toronto Festival Shooting: Two Dead at Salsa on St. Clair Event, Gunman at Large

ಟೊರೊಂಟೊ, ಜುಲೈ 12: ಕೆನಡಾದ ಅತ್ಯಂತ ಜನಪ್ರಿಯ ಮತ್ತು ಬೃಹತ್ ಲ್ಯಾಟಿನ್ ಸಂಸ್ಕೃತಿಯ ಬೀದಿ ಉತ್ಸವದಲ್ಲಿ ಭೀಕರ ಸಾಮೂಹಿಕ ಗುಂಡಿನ ದಾಳಿ(Mass Shooting) ನಡೆದಿದೆ. ಟೊರೊಂಟೊ ನಗರದ ಮಿಡ್‌ಟೌನ್‌ನಲ್ಲಿ ನಡೆಯುತ್ತಿದ್ದ ವಾರ್ಷಿಕ ‘ಸಾಲ್ಸಾ ಆನ್ ಸೇಂಟ್ ಕ್ಲೇರ್’ಉತ್ಸವದ ವೇಳೆ ದುಷ್ಕರ್ಮಿಯೊಬ್ಬ ಮನಬಂದಂತೆ ಗುಂಡಿನ ಮಳೆಗರೆದಿದ್ದಾನೆ.  ಇಬ್ಬರು ಸ್ಥಳದಲ್ಲೇ  ಬಲಿಯಾಗಿದ್ದು, ಕನಿಷ್ಠ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಶನಿವಾರ ರಾತ್ರಿ ಸ್ಥಳೀಯ ಸಮಯ ಸುಮಾರು 8.12 ರ ವೇಳೆಗೆ, ಇಡೀ ಉತ್ಸವ ಜನದಟ್ಟಣೆಯಿಂದ  ಕೂಡಿದ್ದಾಗ ಈ ಕ್ರೂರ ಘಟನೆ ನಡೆದಿದೆ.

ಸಡಗರದ ನಡುವೆ ಕೇಳಿಸಿತು ಗುಂಡಿನ ಸದ್ದು

ಕೆನಡಾದಲ್ಲಿ ಲ್ಯಾಟಿನ್ ಅಮೆರಿಕನ್ ಸಂಸ್ಕೃತಿ, ಲೈವ್ ಮ್ಯೂಸಿಕ್, ಜಗಮಗಿಸುವ ನೃತ್ಯ ಪ್ರದರ್ಶನ ಹಾಗೂ ಬಗೆಬಗೆಯ ಆಹಾರ ಮಳಿಗೆಗಳಿಗೆ ಹೆಸರುವಾಸಿಯಾದ ಈ ಸಾಲ್ಸಾ ಉತ್ಸವದ 22 ನೇ ಆವೃತ್ತಿ ಇದಾಗಿತ್ತು. ಬೇಸಿಗೆಯ ಬೆಚ್ಚಗಿನ ಸಂಜೆಯನ್ನು ಆನಂದಿಸಲು ‘ಸೇಂಟ್ ಕ್ಲೇರ್ ಅವೆನ್ಯೂ ವೆಸ್ಟ್’ ರಸ್ತೆಯ ಅಂಗಡಿಗಳು ಮತ್ತು ರೆಸ್ಟೋರೆಂಟ್‌ಗಳ ಮುಂದೆ ಸಾವಿರಾರು ಜನ ಜಮಾಯಿಸಿದ್ದರು.

ಈ ಹರ್ಷೋಲ್ಲಾಸದ ನಡುವೆ ಹಠಾತ್ತಾಗಿ ಬಂದ ಬಂದೂಕುಧಾರಿಯೊಬ್ಬ ಸಾರ್ವಜನಿಕರ ಮೇಲೆ ಸರಣಿ ಗುಂಡಿನ ದಾಳಿ ನಡೆಸಿದ್ದಾನೆ. ಟೊರೊಂಟೊ ಪೊಲೀಸರು ಇದನ್ನು ‘ಸಕ್ರಿಯ ಗುಂಡಿನ ದಾಳಿ’ ಎಂದು ಘೋಷಿಸಿ, ತಕ್ಷಣವೇ ಇಡೀ ಪ್ರದೇಶವನ್ನು ತಮ್ಮ ಸುಪರ್ದಿಗೆ ಪಡೆದುಕೊಂಡರು.

ಮತ್ತಷ್ಟು ಓದಿ: Video: ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು

ಸ್ಥಳದಲ್ಲೇ ಬಿದ್ದವು ಎರಡು ಹೆಣಗಳು

ಪೊಲೀಸ್ ಅಧಿಕಾರಿಗಳು ಮತ್ತು ತುರ್ತು ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿದಾಗ ಒಟ್ಟು ಆರು ಜನರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಅವರಲ್ಲಿ ಇಬ್ಬರು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ದೃಢಪಡಿಸಿದರು. ಉಳಿದ ನಾಲ್ಕು ಮಂದಿ ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಅವರ ಸ್ಥಿತಿಯ ಬಗ್ಗೆ ಪೊಲೀಸರು ಸದ್ಯಕ್ಕೆ ಯಾವುದೇ ಹೆಚ್ಚಿನ ವಿವರಗಳನ್ನು ಬಿಡುಗಡೆ ಮಾಡಿಲ್ಲ.

ವಿಡಿಯೋ

ತಲೆಮರೆಸಿಕೊಂಡ ಶೂಟರ್: ಹೈ ಅಲರ್ಟ್ ಘೋಷಣೆ

ಅತ್ಯಂತ ಆತಂಕಕಾರಿ ವಿಷಯವೆಂದರೆ, ಇಷ್ಟೊಂದು ಜನದಟ್ಟಣೆಯ ನಡುವೆ ಭೀಕರ ಕೃತ್ಯ ಎಸಗಿದ ಹಂತಕ ಅಥವಾ ಹಂತಕರು ಪೊಲೀಸರ ಕಣ್ಣು ತಪ್ಪಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಸದ್ಯ ಇಡೀ ಟೊರೊಂಟೊ ನಗರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ತನಿಖೆ ಮುಂದುವರಿದಿದೆ.

ದಾಳಿ ನಡೆದ ಪ್ರದೇಶದಲ್ಲಿ ಭಾರಿ ಪ್ರಮಾಣದ ಸಶಸ್ತ್ರ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದ್ದು, ಸಾರ್ವಜನಿಕರು ಯಾವುದೇ ಕಾರಣಕ್ಕೂ ಘಟನಾ ಸ್ಥಳದ ಆಸುಪಾಸಿಗೆ ಬರದಂತೆ ಮತ್ತು ಸುರಕ್ಷಿತವಾಗಿ ಮನೆಗಳಲ್ಲೇ ಇರುವಂತೆ ಪೊಲೀಸರು ‘ಎಕ್ಸ್’ ಮೂಲಕ ಕಠಿಣ ಎಚ್ಚರಿಕೆ ನೀಡಿದ್ದಾರೆ. ಈ ದಾಳಿಗೆ ನಿಖರ ಕಾರಣ ಏನೆಂಬುದು ಇನ್ನೂ ಪತ್ತೆಯಾಗಿಲ್ಲ.

ಕೆನಡಾದಲ್ಲಿ ಹೆಚ್ಚುತ್ತಿರುವ ಗನ್ ಕಲ್ಚರ್?

ಬದಲಾಗುತ್ತಿರುವ ಕೆನಡಾ: ಒಂದು ಕಾಲದಲ್ಲಿ ಅತ್ಯಂತ ಸುರಕ್ಷಿತ ಮತ್ತು ಶಾಂತಿಯುತ ದೇಶವೆಂದು ಪರಿಗಣಿಸಲ್ಪಟ್ಟಿದ್ದ ಕೆನಡಾದಲ್ಲಿ, ಇತ್ತೀಚಿನ ವರ್ಷಗಳಲ್ಲಿ ಅಮೆರಿಕದ ಮಾದರಿಯಲ್ಲಿ ಗ್ಯಾಂಗ್ ವಾರ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಾಮೂಹಿಕ ಗುಂಡಿನ ದಾಳಿ ಪ್ರಕರಣಗಳು ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿವೆ.

ಭಾರತೀಯ ಮೂಲದವರಿಗೂ ಆತಂಕ: ಟೊರೊಂಟೊ ನಗರ ಮತ್ತು ಅದರ ಸುತ್ತಮುತ್ತಲಿನ ಮಿಡ್‌ಟೌನ್ ಪ್ರದೇಶಗಳಲ್ಲಿ ಲಕ್ಷಾಂತರ ಭಾರತೀಯ ಮೂಲದ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ನೆಲೆಸಿದ್ದಾರೆ. ಇಂತಹ ಸಾರ್ವಜನಿಕ ಸಾಂಸ್ಕೃತಿಕ ಉತ್ಸವಗಳಲ್ಲಿ ಒಮ್ಮಿಂದೊಮ್ಮೆಲೇ ನಡೆದಿರುವ ಈ ರಕ್ತಪಾತವು ಅಲ್ಲಿನ ಭಾರತೀಯ ಸಮುದಾಯದಲ್ಲೂ ಭಿನ್ನ ಭೀತಿಯನ್ನು ಹುಟ್ಟುಹಾಕಿದೆ. ಬಂದೂಕು ನಿಯಂತ್ರಣ ಕಾನೂನುಗಳನ್ನು ಮತ್ತಷ್ಟು ಬಿಗಿಗೊಳಿಸುವಂತೆ ಅಲ್ಲಿನ ಸ್ಥಳೀಯ ಸರ್ಕಾರಗಳ ಮೇಲೆ ಸಾರ್ವಜನಿಕ ಒತ್ತಡ ಹೆಚ್ಚಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 7:58 am, Sun, 12 July 26

Source link

Bengaluru Air Quality: ರಾಜ್ಯದ ವಾಯು ಮಾಲಿನ್ಯದಲ್ಲಿ ಭಾರಿ ಸುಧಾರಣೆ! ನಿಮ್ಮ ಏರಿಯಾದ ಎಕ್ಯೂಐ ಎಷ್ಟಿದೆ ಗೊತ್ತಾ? – Kannada News | Bengaluru AQI Update Today: Air Quality Remains Moderate and Healthy Across Karnataka

ರಾಜ್ಯದ ವಾಯು ಮಾಲಿನ್ಯದಲ್ಲಿ ಭಾರಿ ಸುಧಾರಣೆ!

ಬೆಂಗಳೂರು, ಜುಲೈ 12: ಇಂದು ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಒಟ್ಟಾರೆಯಾಗಿ ತೃಪ್ತಿದಾಯಕ ಮತ್ತು ಸಾಧಾರಣ ಮಟ್ಟದಲ್ಲಿದೆ. ಮುಂಗಾರು ಮಳೆಯ ಪ್ರಭಾವ ಹಾಗೂ ಗಾಳಿಯ ವೇಗ ಹೆಚ್ಚಿರುವುದರಿಂದ ವಾಯು ಮಾಲಿನ್ಯದ ಪ್ರಮಾಣ ಗಣನೀಯವಾಗಿ ನಿಯಂತ್ರಣದಲ್ಲಿದೆ. ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಇಂದಿನ ನಿಖರವಾದ ವಾಯು ಗುಣಮಟ್ಟದ ವಿವರ ಇಲ್ಲಿದೆ.

ಬೆಂಗಳೂರಿನ ಇಂದಿನ ವಾಯು ಗುಣಮಟ್ಟ

ಬೆಂಗಳೂರಿನಲ್ಲಿ ಇಂದು ವಾಯು ಗುಣಮಟ್ಟ ಸೂಚ್ಯಂಕವು ಕೆಲವೆಡೆ ಸಾಧಾರಣ ಮತ್ತು ಕೆಲವು ಭಾಗಗಳಲ್ಲಿ ಉತ್ತಮ ಮಟ್ಟ ದಾಖಲಿಸಿದೆ. ನಗರದ ಸರಾಸರಿ AQI ಪ್ರಮಾಣ 56 ರಿಂದ 60ರ ಆಸುಪಾಸಿನಲ್ಲಿದೆ. ಪ್ರಮುಖ ಮಾಲಿನ್ಯಕಾರಕಗಳಾದ PM2.5 ಮತ್ತು PM10 ಕಣಗಳ ಮಟ್ಟ ನಿಯಂತ್ರಣದಲ್ಲಿದ್ದು, ಸಾರ್ವಜನಿಕರು ಆತಂಕಪಡುವ ಅವಶ್ಯಕತೆ ಇಲ್ಲ.

ನಗರದ ಪ್ರಮುಖ ವಲಯಗಳ ಇಂದಿನ AQI

  • ಬಿಟಿಎಂ ಲೇಔಟ್ : 59 (ಸಾಧಾರಣ)
  • ಬಸವನಗುಡಿ:56 (ಸಾಧಾರಣ)
  • ಬನಶಂಕರಿ: 58 (ಸಾಧಾರಣ)
  • ಬಾಣಸವಾಡಿ : 52 (ಸಾಧಾರಣ)
  • ಆರ್.ಕೆ. ಸೆರೀನ್ ಕೌಂಟಿ: 44 (ಉತ್ತಮ)

ಒಟ್ಟಾರೆಯಾಗಿ ಬೆಂಗಳೂರಿನ ಹವಾಮಾನವು ಇಂದು 28 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೊಂದಿದ್ದು, ಶುದ್ಧ ಮತ್ತು ತಾಜಾ ಗಾಳಿಯಿಂದ ಕೂಡಿದೆ. ಸೂಕ್ಷ್ಮ ಆರೋಗ್ಯ ಸಮಸ್ಯೆ ಇರುವವರು (ಉದಾಹರಣೆಗೆ ಅಸ್ತಮಾ ರೋಗಿಗಳು) ಮಾತ್ರ ದೀರ್ಘಾವಧಿ ಹೊರಾಂಗಣ ವಾಸ್ತವ್ಯದ ವೇಳೆ ಸ್ವಲ್ಪ ಮುನ್ನೆಚ್ಚರಿಕೆ ವಹಿಸಿದರೆ ಸಾಕು.

ಕರ್ನಾಟಕದ ಇತರೆ ಪ್ರಮುಖ ನಗರಗಳ ಸ್ಥಿತಿಗತಿ

ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಇತರೆ ನಗರಗಳಲ್ಲೂ ಇಂದು ವಾಯು ಮಾಲಿನ್ಯದ ಮಟ್ಟ ನಿಯಂತ್ರಣದಲ್ಲಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನ ಬಹುತೇಕ ನಗರಗಳು ತೃಪ್ತಿದಾಯಕ ಗಾಳಿಯ ಗುಣಮಟ್ಟವನ್ನು ಹೊಂದಿವೆ.

ರಾಜ್ಯದ ಇತರ ನಗರಗಳ ಇಂದಿನ AQI

  • ಬಾಗಲಕೋಟೆ: 45 (ಉತ್ತಮ)
  • ಬೆಳಗಾವಿ ಮತ್ತು ಬಳ್ಳಾರಿ : 55 – 65 (ಸಾಧಾರಣ)
  • ಬೀದರ್ : 67 (ಸಾಧಾರಣ)
  • ಮೈಸೂರು ಮತ್ತು ಮಂಗಳೂರು: 35 – 50 (ಉತ್ತಮ)

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಯು ಮಾಲಿನ್ಯ ಸೂಚ್ಯಂಕವು 100 ಕ್ಕಿಂತ ಕಡಿಮೆ ಇರುವುದರಿಂದ ಇಂದಿನ ಪರಿಸ್ಥಿತಿ ಆರೋಗ್ಯಕ್ಕೆ ಪೂರಕವಾಗಿದೆ. ಮುಂಬರುವ ದಿನಗಳಲ್ಲಿ ಒಣ ಹವೆ ಹೆಚ್ಚಾದಂತೆ ಮಾಲಿನ್ಯದ ಪ್ರಮಾಣದಲ್ಲಿ ಅಲ್ಪ ಏರಿಕೆಯಾಗುವ ಸಾಧ್ಯತೆ ಇರುತ್ತದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಿರಿಯ ಗಾಯಕಿ ಎಸ್​​. ಜಾನಕಿ ನಿಧನ: ಅಜ್ಜಿ ನೆನೆದು ಮೊಮ್ಮಗಳು ಅಪ್ಸರಾ ಭಾವುಕ – Kannada News | S. Janakis Granddaughter Apsara Recalls Legendary Singers Life and Legacy

ಮೈಸೂರು, ಜುಲೈ 12: ಹಿರಿಯ ಗಾಯಕಿ ಎಸ್​.ಜಾನಕಿ(88) ವಿಧಿವಶ ಹಿನ್ನೆಲೆ ಮೈಸೂರಿನಲ್ಲಿ ಅವರ ಮೊಮ್ಮಗಳು ಅಪ್ಸರಾ, ಅಜ್ಜಿಯ ಕುರಿತು ಭಾವುಕವಾಗಿ ಮಾತನಾಡಿದ್ದಾರೆ. ಅನಾರೋಗ್ಯ ಸಮಸ್ಯೆಯಿಂದ ಅಜ್ಜಿ ನಿಧನರಾಗಿದ್ದು, ಘಟನೆ ದುಃಖ ಉಂಟುಮಾಡಿದೆ. ಅವರು ತಮ್ಮ ಗಾಯನದ ಮೂಲಕ ಅಪಾರ ಜನರ ಮನ ಗೆದ್ದಿದ್ದರು. ದಕ್ಷಿಣ ಭಾರತದ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದ ಅವರಿಗೆ ಮೈಸೂರು ಅಂದರೆ ತುಂಬಾ ಇಷ್ಟ, ಅವರು ಇಲ್ಲೇ ಇದ್ದರು. ಕರ್ನಾಟಕದ ಜನತೆ ಅಜ್ಜಿಗೆ ಅಪಾರ ಪ್ರೀತಿ ತೋರಿದ್ದಾರೆ. ಅಜ್ಜಿಗೆ ಸರ್ಕಾರಿ ಗೌರವ ಸಲ್ಲಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದ್ದು, ನಮ್ಮ ಕುಟುಂಬದ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದವರು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಇರಾನ್‌ನಿಂದ ಹಾರ್ಮುಜ್ ಜಲಸಂಧಿ ಬಂದ್, ಹಡಗಿನ ಮೇಲೆ ದಾಳಿ ಬೆನ್ನಲ್ಲೇ ಅಮೆರಿಕದಿಂದ ಭೀಕರ ಪ್ರತೀಕಾರ – Kannada News | Hormuz Strait Crisis: Iran Shuts Waterway, US Retaliates After Ship Attack, Oil Prices Soar

ಟೆಹ್ರಾನ್, ಜುಲೈ 12: ಪಶ್ಚಿಮ ಏಷ್ಯಾ ವಲಯದಲ್ಲಿ ಯುದ್ಧದ ಜ್ವಾಲೆ ಮತ್ತಷ್ಟು ಭುಗಿಲೆದ್ದಿದೆ. ಜಗತ್ತಿನ ಒಟ್ಟು ತೈಲ ಸಾಗಣೆಯ ಪ್ರಮುಖ ನರನಾಡಿಯಂತಿರುವ ‘ಹಾರ್ಮುಜ್ ಜಲಸಂಧಿ'(Hormuz Strait)ಯನ್ನು ಮುಂದಿನ ಸೂಚನೆ ಬರುವವರೆಗೂ ಸಂಪೂರ್ಣವಾಗಿ ಮುಚ್ಚುವುದಾಗಿ ಇರಾನ್ ಅಧಿಕೃತವಾಗಿ ಘೋಷಿಸಿದೆ.

ಇದರ ಬೆನ್ನಲ್ಲೇ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಪಡೆಗಳು ಇದೇ ಜಲಮಾರ್ಗದಲ್ಲಿ ಸಾಗುತ್ತಿದ್ದ ಸೈಪ್ರಸ್ ಧ್ವಜ ಹೊತ್ತ ‘M/V GFS ಗ್ಯಾಲಕ್ಸಿ’ ಎಂಬ ವಾಣಿಜ್ಯ ಕಂಟೇನರ್ ಹಡಗಿನ ಮೇಲೆ ಭೀಕರ ದಾಳಿ ನಡೆಸಿವೆ. ಈ ಉದ್ಧಟತನಕ್ಕೆ ತಕ್ಕ ಪ್ರತ್ಯುತ್ತರ ನೀಡಿರುವ ಅಮೆರಿಕ ಸೇನೆ , ದಕ್ಷಿಣ ಇರಾನ್‌ನ ಪ್ರಮುಖ ಮಿಲಿಟರಿ ನೆಲೆಗಳ ಮೇಲೆ ಮೂರನೇ ಸುತ್ತಿನ ವಾಯುದಾಳಿಗಳನ್ನು ನಡೆಸಿ ಇರಾನ್ ತತ್ತರಿಸುವಂತೆ ಮಾಡಿದೆ.

ಹಡಗಿನ ಮೇಲೆ ದಾಳಿ: ಇಂಜಿನ್ ರೂಮ್ ಧ್ವಂಸ, ಸಿಬ್ಬಂದಿ ನಾಪತ್ತೆ

ಯುಎಸ್ ಸೆಂಟ್ರಲ್ ಕಮಾಂಡ್ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಇರಾನ್ ಪಡೆಗಳು ನಡೆಸಿದ ದಾಳಿಯಿಂದಾಗಿ ಸೈಪ್ರಸ್ ಹಡಗಿನ ಇಂಜಿನ್ ಕೋಣೆಗೆ ಗಂಭೀರ ಹಾನಿಯಾಗಿದ್ದು, ಭಾರಿ ಬೆಂಕಿ ಕಾಣಿಸಿಕೊಂಡಿದೆ.

ಹಡಗಿನಲ್ಲಿದ್ದ ನಾಗರಿಕ ನಾವಿಕರೊಬ್ಬರು ದಾಳಿಯ ನಂತರ ನಾಪತ್ತೆಯಾಗಿದ್ದಾರೆ. ಹಡಗು ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, ಪ್ರಯಾಣ ಮುಂದುವರಿಸಲು ಸಾಧ್ಯವಾಗದೆ ನಡುಗಡಲಿನಲ್ಲಿ ಸಿಲುಕಿದೆ.ವಾಣಿಜ್ಯ ಹಡಗುಗಳ ಸುರಕ್ಷತೆಯನ್ನು ಕಾಪಾಡುವ ಒಪ್ಪಂದಕ್ಕೆ ಬದ್ಧವಾಗಿರಲು ಇರಾನ್‌ಗೆ ಈ ಹಿಂದೆ ಹಲವು ಅವಕಾಶಗಳನ್ನು ನೀಡಲಾಗಿತ್ತು. ಆದರೆ ಇರಾನ್ ಮತ್ತೆ ಮತ್ತೆ ವಿಫಲವಾಗಿದೆ ಎಂದು ಅಮೆರಿಕ ಆಕ್ರೋಶ ವ್ಯಕ್ತಪಡಿಸಿದೆ.

ಅಮೆರಿಕದ ಯುದ್ಧ ಕಾರ್ಯದರ್ಶಿ ಪೀತ್ ಹೆಗ್ಸೆತ್ ಅವರು ‘ಎಕ್ಸ್’ ಪೋಸ್ಟ್‌ನಲ್ಲಿ ನೇರ ಎಚ್ಚರಿಕೆ ನೀಡಿದ್ದು, “ಇರಾನ್ ಅತ್ಯಂತ ಕೆಟ್ಟ ಆಯ್ಕೆಯನ್ನು ಮಾಡಿಕೊಂಡಿದೆ. ಈಗ ಅವರು ಇದಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ,” ಎಂದು ಗುಡುಗಿದ್ದಾರೆ. ಅಧ್ಯಕ್ಷರ ನೇರ ಆದೇಶದ ಮೇರೆಗೆ ಅಮೆರಿಕ ಪಡೆಗಳು ಇರಾನ್‌ನ ದಾಳಿ ನಡೆಸುವ ಸಾಮರ್ಥ್ಯವನ್ನು ಕುಂದಿಸಲು ಸರಣಿ ದಾಳಿಗಳನ್ನು ಮುಂದುವರೆಸಿವೆ.

ಮತ್ತಷ್ಟು ಓದಿ: ಇರಾನ್ ಮೇಲೆ ಅಮೆರಿಕ ಭೀಕರ ವಾಯುದಾಳಿ: ಹಾರ್ಮುಜ್ ಜಲಸಂಧಿಯಲ್ಲಿ 3 ಹಡಗುಗಳ ಮೇಲಿನ ದಾಳಿಗೆ ಪ್ರತೀಕಾರ

ದಕ್ಷಿಣ ಇರಾನ್‌ನಲ್ಲಿ ಸರಣಿ ಸ್ಫೋಟಗಳ ಸದ್ದು

ಇರಾನ್‌ನ ಸ್ಥಳೀಯ ಮಾಧ್ಯಮಗಳ ಪ್ರಕಾರ, ಅಮೆರಿಕದ ಕ್ಷಿಪಣಿ ದಾಳಿಯ ಬೆನ್ನಲ್ಲೇ ದಕ್ಷಿಣ ಇರಾನ್‌ನ ಆಯಕಟ್ಟಿನ ಪ್ರದೇಶಗಳಾದ ಕ್ವೆಶ್ಮ್ ದ್ವೀಪ , ಬಂದರ್ ಅಬ್ಬಾಸ್ ಬಂದರು ನಗರ ಮತ್ತು ಸಿರಿಕ್ ವಲಯದಲ್ಲಿ ಭೀಕರ ಸ್ಫೋಟದ ಸದ್ದುಗಳು ಕೇಳಿಬಂದಿವೆ. ಅಮೆರಿಕವು ಇರಾನ್‌ನ ನೌಕಾಪಡೆ ಹಾಗೂ ಕ್ಷಿಪಣಿ ಉಡಾವಣಾ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಿದೆ ಎನ್ನಲಾಗಿದೆ.

ಇರಾನ್‌ನ ಕಠಿಣ ನಿಲುವು ಮತ್ತು ಎಚ್ಚರಿಕೆ

ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಅಮೆರಿಕ ತನ್ನ ಮಿಲಿಟರಿ ಹಸ್ತಕ್ಷೇಪ ಮತ್ತು ಪ್ರಭಾವವನ್ನು ಸಂಪೂರ್ಣವಾಗಿ ಕೊನೆಗೊಳಿಸುವವರೆಗೂ ಹಾರ್ಮುಜ್ ಜಲಸಂಧಿಯ ಮೂಲಕ ಯಾವುದೇ ಹಡಗುಗಳ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಇರಾನ್‌ನ ಐಆರ್‌ಜಿಸಿ ಸ್ಪಷ್ಟಪಡಿಸಿದೆ.

‘‘ಒಂದೊಮ್ಮೆ ಅಮೆರಿಕ ಅಥವಾ ಇಸ್ರೇಲ್ ಈ ಪರಿಸ್ಥಿತಿಯನ್ನು ಬಳಸಿ ನಮ್ಮ ಮೇಲೆ ಮತ್ತಷ್ಟು ದಾಳಿಗೆ ಮುಂದಾದರೆ, ಈ ವಲಯದಲ್ಲಿರುವ ಅಮೆರಿಕದ ಇತರ ಮಿಲಿಟರಿ ನೆಲೆಗಳನ್ನೂ ನಾವು ಧ್ವಂಸಗೊಳಿಸುತ್ತೇವೆ. ಹಾಗೆಯೇ ಇರಾನ್ ವಿರುದ್ಧದ ದಾಳಿಗೆ ತನ್ನ ಮಣ್ಣನ್ನು ಬಳಸಲು ಅವಕಾಶ ನೀಡುವ ನೆರೆಹೊರೆಯ ದೇಶಗಳೂ ಇದರ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ,” ಎಂದು ಇರಾನ್ ನೆರೆರಾಷ್ಟ್ರಗಳಿಗೂ ಪರೋಕ್ಷ ಎಚ್ಚರಿಕೆ ನೀಡಿದೆ.

ಜಗತ್ತಿನ ಮೇಲಾಗುವ ಪರಿಣಾಮವೇನು?

ಜಾಗತಿಕ ತೈಲ ಬಿಕ್ಕಟ್ಟು: ಹಾರ್ಮುಜ್ ಜಲಸಂಧಿಯು ಜಗತ್ತಿನ ಅತ್ಯಂತ ಪ್ರಮುಖ ಜಲಮಾರ್ಗವಾಗಿದೆ. ವಿಶ್ವದ ಒಟ್ಟು ಪೆಟ್ರೋಲಿಯಂ ಬಳಕೆಯ ಸುಮಾರು ಶೇ.20 ಕ್ಕೂ ಹೆಚ್ಚು ಕಚ್ಚಾ ತೈಲ ಇದೇ ಕಿರಿದಾದ ಜಲಸಂಧಿಯ ಮೂಲಕ ಹಾದುಹೋಗುತ್ತದೆ. ಸೌದಿ ಅರೇಬಿಯಾ, ಇರಾಕ್, ಯುಎಇ, ಕುವೈತ್ ಮತ್ತು ಕತಾರ್ ದೇಶಗಳ ತೈಲ ರಫ್ತು ಸಂಪೂರ್ಣವಾಗಿ ಇದರ ಮೇಲೆಯೇ ಅವಲಂಬಿತವಾಗಿದೆ. ಇದು ದೀರ್ಘಕಾಲ ಬಂದ್ ಆದರೆ ಜಾಗತಿಕವಾಗಿ ಪೆಟ್ರೋಲ್, ಡೀಸೆಲ್ ಬೆಲೆಗಳು ಗಗನಕ್ಕೇರಲಿವೆ.

ಭಾರತದ ಮೇಲಾಗುವ ಪ್ರಭಾವ: ಭಾರತವು ತನ್ನ ಕಚ್ಚಾ ತೈಲದ ಬಹುದೊಡ್ಡ ಪಾಲನ್ನು ಮಧ್ಯಪ್ರಾಚ್ಯ ದೇಶಗಳಿಂದಲೇ ಆಮದು ಮಾಡಿಕೊಳ್ಳುತ್ತದೆ. ಹಾರ್ಮುಜ್ ಜಲಸಂಧಿ ಮುಚ್ಚಲ್ಪಟ್ಟಿರುವುದರಿಂದ ಭಾರತಕ್ಕೆ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಭೀತಿ ಇದ್ದು, ದೇಶೀಯ ಮಾರುಕಟ್ಟೆಯ ಮೇಲೂ ಇದು ಆರ್ಥಿಕ ಒತ್ತಡ ಉಂಟುಮಾಡಬಹುದು.

ಸಮುದ್ರ ಮಾರ್ಗದ ಸುರಕ್ಷತೆ: ವಾಣಿಜ್ಯ ಹಡಗುಗಳ ಮೇಲಿನ ಸರಣಿ ದಾಳಿಗಳು ಜಾಗತಿಕ ಸರಕು ಸಾಗಣೆ ವೆಚ್ಚ ಹಾಗೂ ಇನ್ಶೂರೆನ್ಸ್ ದರವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಿದ್ದು, ಇಡೀ ವಿಶ್ವದ ಆರ್ಥಿಕತೆಯ ಮೇಲೆ ಮಂದಗತಿಯ ಪ್ರಭಾವ ಬೀರಲಿದೆ. ಉಭಯ ದೇಶಗಳ ನಡುವಿನ ಈ ಸಂಘರ್ಷ ಸದ್ಯಕ್ಕೆ ಜಾಗತಿಕ ಯುದ್ಧದ ಭೀತಿಯನ್ನು ಹುಟ್ಟುಹಾಕಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 7:32 am, Sun, 12 July 26

Source link

ಅಪರಾಧ ತನಿಖಾ ವ್ಯವಸ್ಥೆಗೂ ಆಧುನಿಕತೆಯ ಟಚ್​​: 32 ಮೊಬೈಲ್ ಫೊರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿಗಳಿಗೆ ಚಾಲನೆ – Kannada News | Tech Boost for Crime Ops: 32 Advanced Mobile Forensic Labs Flagged Off in Karnataka

32 ಮೊಬೈಲ್ ಫೊರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿಗಳಿಗೆ ಚಾಲನೆImage Credit source: DK Shivakumar X Account

ಬೆಂಗಳೂರು, ಜುಲೈ 12: ಕರ್ನಾಟಕದ ಅಪರಾಧ ತನಿಖಾ ವ್ಯವಸ್ಥೆಯನ್ನು ಆಧುನೀಕರಿಸುವ ಮಹತ್ವದ ಹೆಜ್ಜೆಯಾಗಿ 32 ಅತ್ಯಾಧುನಿಕ ಮೊಬೈಲ್ ಫೊರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿಗಳಿಗೆ ಚಾಲನೆ ನೀಡಲಾಗಿದೆ. ವಿಧಾನಸೌಧದ ಮೆಟ್ಟಿಲುಗಳ ಬಳಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶನಿವಾರ ಇವುಗಳಿಗೆ ಹಸಿರು ನಿಶಾನೆ ತೋರಿದ್ದು, ಈ ಮೊಬೈಲ್ ಫೊರೆನ್ಸಿಕ್ ಲ್ಯಾಬ್‌ಗಳು ಚಲಿಸುವ ಮಿನಿ ಪ್ರಯೋಗಾಲಯಗಳಾಗಿವೆ. ಅಪರಾಧ ಸ್ಥಳಕ್ಕೆ ಸೀನ್ ಆಫ್ ಕ್ರೈಂ ಅಧಿಕಾರಿಗಳು (SOCO) ತ್ವರಿತವಾಗಿ ತಲುಪಿ ಸ್ಥಳದಲ್ಲೇ ಸಾಕ್ಷ್ಯಗಳನ್ನು ಸಂರಕ್ಷಿಸಿ ಪ್ರಾಥಮಿಕ ವೈಜ್ಞಾನಿಕ ಪರೀಕ್ಷೆ ನಡೆಸಲು ನೆರವಾಗಲಿವೆ. ಇದರಿಂದ ಸಾಕ್ಷ್ಯಗಳ ನಾಶದ ಸಾಧ್ಯತೆ ಕಡಿಮೆಯಾಗಲಿದೆ.

ಎಲ್ಲ ರೀತಿಯ ಪ್ರಕರಣ ನಿರ್ವಹಿಸುವ ಸಾಮರ್ಥ್ಯ

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಈ ವಾಹನಗಳು ಸಾಮಾನ್ಯ ಅಪರಾಧಗಳಿಂದ ಹಿಡಿದು ಸಂಕೀರ್ಣ ಸೈಬರ್ ಅಪರಾಧಗಳ ತನಿಖೆಯವರೆಗೆ ವಿವಿಧ ರೀತಿಯ ಪ್ರಕರಣಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿವೆ. ತ್ವರಿತ ಪತ್ತೆ ಮತ್ತು ವಿಶ್ಲೇಷಣೆಗಾಗಿ ವಿಶೇಷ ಪರೀಕ್ಷಾ ಕಿಟ್‌ಗಳನ್ನು ಒಳಗೊಂಡಿವೆ. ಅಲ್ಲದೆ, ಈ ವಾಹನಗಳಲ್ಲಿ ವಿದ್ಯುತ್ ಪೂರೈಕೆಗೆ ಜನರೇಟರ್, ಜೈವಿಕ ಮಾದರಿಗಳನ್ನು ಸುರಕ್ಷಿತವಾಗಿ ಸಂರಕ್ಷಿಸಲು ರೆಫ್ರಿಜರೇಟರ್ ಹಾಗೂ ಅಪರಾಧ ಸ್ಥಳವನ್ನು ಸುರಕ್ಷಿತವಾಗಿ ಸುತ್ತುವರಿಸಲು ಅಗತ್ಯವಾದ ಎಲ್ಲಾ ಉಪಕರಣಗಳನ್ನು ಅಳವಡಿಸಲಾಗಿದೆ.

ಇದನ್ನೂ ಓದಿ: ಪಾಳು ಬೀಳುತ್ತಿದೆ 13 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಅಂಡರ್​​ ಗ್ರೌಂಡ್​​ ಮಾರುಕಟ್ಟೆ; ನೀರಲ್ಲಿ ಹೋಮವಾಯ್ತಾ ಸಾರ್ವಜನಿಕರ ತೆರಿಗೆ ಹಣ?

ರಾಜ್ಯದ ವಿವಿಧೆಡೆ ಮೊಬೈಲ್ ಲ್ಯಾಬ್‌ ನಿಯೋಜನೆ

ರಾಜ್ಯದ ವಿವಿಧ ಜಿಲ್ಲೆಗಳ ಪೊಲೀಸ್ ಘಟಕಗಳಿಗೆ ಈ 32 ಮೊಬೈಲ್ ಲ್ಯಾಬ್‌ಗಳನ್ನು ನಿಯೋಜಿಸಲಾಗುತ್ತಿದ್ದು, ಇದರಿಂದ ಫೊರೆನ್ಸಿಕ್ ಪ್ರಕರಣಗಳ ಬಾಕಿ ಪ್ರಮಾಣವನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ. ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿಗಳನ್ನು (SOCO) ಈ ಮೊಬೈಲ್ ಲ್ಯಾಬ್‌ಗಳೊಂದಿಗೆ ಸಂಯೋಜಿಸುವುದರಿಂದ ಸಾಕ್ಷ್ಯಗಳ ದಾಖಲಾತಿ, ಸುರಕ್ಷಿತ ನಿರ್ವಹಣೆ ಹಾಗೂ ಸಂರಕ್ಷಣೆಯಲ್ಲಿ ಗುಣಮಟ್ಟ ಹೆಚ್ಚಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ ಹಾಗೂ ಕಲಬುರಗಿಯ ಪ್ರಾದೇಶಿಕ ಫೊರೆನ್ಸಿಕ್ ವಿಜ್ಞಾನ ಪ್ರಯೋಗಾಲಯಗಳಲ್ಲಿ ಮಾನವ ಸಂಪನ್ಮೂಲ ಹಾಗೂ ಅತ್ಯಾಧುನಿಕ ಉಪಕರಣಗಳ ಮೂಲಕ ಸಾಮರ್ಥ್ಯ ವೃದ್ಧಿ ಮಾಡಲಾಗುತ್ತಿದೆ ಎಂದೂ ಇದೇ ವೇಳೆ ತಿಳಿಸಿದ್ದಾರೆ ಎಂದು ಡೆಕ್ಕನ್​​ ಹೆರಾಲ್ಡ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಎಸ್. ಜಾನಕಿ ನಿಧನ: ಶಿವಣ್ಣ, ಜಗ್ಗೇಶ್, ತ್ರಿಶಾ ಸೇರಿ ಹಲವು ಸೆಲೆಬ್ರಿಟಿಗಳ ಸಂತಾಪ – Kannada News | Singer S Janaki Passes Away Sandalwood Celebrities Shivrajkumar Jaggesh Trisha mourn

ಭಾರತೀಯ ಚಿತ್ರರಂಗದ ಲೆಜೆಂಡರಿ ಗಾಯಕಿ ಎಸ್. ಜಾನಕಿ (S Janaki) ಅವರು ನಿಧನರಾಗಿರುವುದು ಅಭಿಮಾನಿಗಳಿಗೆ ತೀವ್ರ ನೋವುಂಟು ಮಾಡಿದೆ. ಅನೇಕ ಸೆಲೆಬ್ರಿಟಿಗಳು ಜಾನಕಿ ಅವರ ನಿಧನಕ್ಕೆ ಕಂಬನಿ ಮಿಡಿಯುತ್ತಿದ್ದಾರೆ. ಅವರ ಜೊತೆಗಿನ ಒಡನಾಟವನ್ನು ಸ್ಮರಿಸಿಕೊಳ್ಳಲಾಗುತ್ತಿದೆ. ನಟ ಶಿವರಾಜ್​ಕುಮಾರ್ (Shivrajkumar) ಕೂಡ ಸಂತಾಪ ಸೂಚಿಸಿದ್ದಾರೆ. ಅದೇ ರೀತಿ ಜಗ್ಗೇಶ್, ವಿನೋದ್ ರಾಜ್, ತ್ರಿಶಾ ಕೃಷ್ಣನ್, ಸುಮಲತಾ ಅಂಬರೀಷ್ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.

ಎಸ್. ಜಾನಕಿ ಅಗಲಿಕೆಗೆ ಶಿವರಾಜ್​ಕುಮಾರ್ ಸಂತಾಪ:

‘ಜಾನಕಮ್ಮ ಅವರ ನಿಧನದ ವಿಚಾರ ತಿಳಿದು ದುಃಖ ಆಗಿದೆ. ಅಪ್ಪಾಜಿ ಜೊತೆಯಲ್ಲೂ ಸಾಕಷ್ಟು ಹಾಡುಗಳನ್ನು ಹಾಡಿದ್ದರು. ಜಾನಕಿ ಅಮ್ಮನವರಿಗೆ ನಮ್ಮನ್ನು ಕಂಡರೆ ತುಂಬಾ ಪ್ರೀತಿ. ಗಾಯಕಿ ಆಗಿ ಭಾರತೀಯ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ. ಜಾನಕಮ್ಮನವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ. ಅಭಿಮಾನಿಗಳು, ಕುಟುಂಬದವರಿಗೆ ದುಃಖ ಸಹಿಸುವ ಶಕ್ತಿಯನ್ನು ದೇವರು ನೀಡಲಿ’ ಎಂದು ಜಾನಕಿ ನಿಧನಕ್ಕೆ ಶಿವರಾಜ್​ಕುಮಾರ್ ಸಂತಾಪ ಸೂಚಿಸಿದ್ದಾರೆ.

ಭಾವುಕರಾಗಿ ಶ್ರದ್ಧಾಂಜಲಿ ಸಲ್ಲಿಸಿದ ಜಗ್ಗೇಶ್:

ನಟ ಜಗ್ಗೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದಾರೆ. ‘ಯಾಕೋ ಬೆಳಿಗ್ಗೆಯಿಂದ ಈ ಹಾಡು (ದೇವರ ಆಟ ಬಲ್ಲವರಾರು..) ಬಹಳ ಕಾಡಿತು. ಇಂದು ಬೆಳಿಗ್ಗೆಯಿಂದ ಈ ತಾಯಿ ಹಾಡು ಕೇಳುತ್ತಿರುವೆ. ಕೇಳುವುದನ್ನು ಮನಸ್ಸು ನಿಲ್ಲಿಸುತ್ತಿಲ್ಲ. ಅಬ್ಬಾ ಎಂಥ ಸಿರಿಕಂಠ. ಇಂದು ಅವರು ನಮ್ಮನ್ನು ಅಗಲಿದ್ದಾರೆ. ಹೋಗಿ ಬನ್ನಿ ಸುಮಧುರ ಕಲಾಕಂಠವೆ’ ಎಂದು ಅವರು ಜಗ್ಗೇಶ್ ಬರೆದುಕೊಂಡಿದ್ದಾರೆ.

ಜಾನಕಿ ನಿಧನಕ್ಕೆ ತ್ರಿಶಾ ಕೃಷ್ಣನ್ ಕಂಬನಿ:

ಖ್ಯಾತ ನಟಿ ತ್ರಿಶಾ ಕೃಷ್ಣನ್ ಅವರು ಜಾನಕಿ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ‘ನನ್ನ ಅತ್ಯಂತ ವಿಶೇಷವಾದ ಚಿತ್ರವೊಂದರಲ್ಲಿ ನಿಮ್ಮ ಹೆಸರಿನ ಪಾತ್ರವನ್ನು ಮಾಡಿದ್ದು ನನ್ನ ಜೀವನದ ಅತ್ಯಂತ ದೊಡ್ಡ ಗೌರವಗಳಲ್ಲಿ ಒಂದಾಗಿ ಎಂದೆಂದಿಗೂ ಉಳಿಯುತ್ತದೆ. ನಿಮ್ಮಿಂದ ಪ್ರೀತಿ ಪಡೆದಿರುವುದು ನಾನು ಜೀವನದಲ್ಲಿ ಎಂದೆಂದಿಗೂ ಸಂಭ್ರಮಿಸುವ ಸಂಗತಿಯಾಗಿದೆ. ನಿಮ್ಮ ಅಪ್ಪುಗೆಗೆ, ನಿಮ್ಮ ದಯೆಗೆ, ನಿಮ್ಮ ನಗುವಿಗೆ ಧನ್ಯವಾದಗಳು. ಕಲಾವಿದರು ಯಾವಾಗಲೂ ಅತ್ಯಂತ ವಿನಮ್ರವಾಗಿರಬೇಕು ಎಂಬುದನ್ನು ನೆನಪಿಸಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಧ್ವನಿ ಎಂದೆಂದಿಗೂ ಜೀವಂತವಾಗಿರುತ್ತದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಅಮ್ಮ. ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ’ ಎಂದು ಪೋಸ್ಟ್ ಮಾಡಿದ್ದಾರೆ.

‘ಸಂಗೀತ ಲೋಕದ ಧ್ರುವತಾರೆ, ಪದ್ಮಭೂಷಣ್ ಎಸ್. ಜಾನಕಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ನಿಮ್ಮ ಮಧುರ ಕಂಠ ಮತ್ತು ಅಮರ ಗೀತೆಗಳು ತಲೆಮಾರುಗಳ ಹೃದಯಗಳನ್ನು ಸದಾ ಸ್ಪರ್ಶಿಸುತ್ತಲೇ ಇರುತ್ತವೆ. ನಿಮ್ಮ ಅಗಲಿಕೆ ಸಂಗೀತ ಕ್ಷೇತ್ರಕ್ಕೆ ಎಂದಿಗೂ ತುಂಬಲಾರದ ನಷ್ಟ. ಆದರೆ ನಿಮ್ಮ ಸ್ವರ ಮತ್ತು ನಿಮ್ಮ ಹಾಡುಗಳು ನಮ್ಮ ನೆನಪುಗಳಲ್ಲಿ ಚಿರಕಾಲ ಜೀವಂತವಾಗಿರುತ್ತವೆ. ಓಂ ಶಾಂತಿ’ ಎಂದು ಸುಮಲತಾ ಅಂಬರೀಷ್ ಅವರು ಸೋಶಿಯಲ್ ಮೀಡಿಯಾ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಇದನ್ನೂ ಓದಿ: ಎಸ್ ಜಾನಕಿ ನಿಧನ: 20 ಭಾಷೆ, 48 ಸಾವಿರ ಹಾಡು, ಗಾಯಕಿ ನಡೆದುಬಂದ ಹಾದಿ

ನಟ ವಿನೋದ್ ರಾಜ್ ಮಾತನಾಡಿ, ‘ಜಾನಕಿ ಅವರಂತಹ ಗಾಯಕಿ ಮತ್ತೆ ಹುಟ್ಟಲ್ಲ. ಉತ್ತುಂಗದ ಸ್ಥಾನದಲ್ಲಿ ಇದ್ದಾಗಲೂ ಕೂಡ ಅವರು ವಿನಮ್ರವಾಗಿ ಇರುತ್ತಿದ್ದರು. ಇಂದಿನ ತನಕ ಅವರು ಶ್ರೇಷ್ಠ ಗಾಯಕಿಯಾಗಿ ಉಳಿದುಕೊಂಡರು. ಒಳ್ಳೆಯ ವ್ಯಕ್ತಿತ್ವ ಅವರದ್ದು. ನಮ್ಮ ತಾಯಿಯನ್ನು ಕಂಡರೆ ಅವರಿಗೆ ತುಂಬಾ ಇಷ್ಟ. ಕಷ್ಟ ಸುಖ ಹಂಚಿಕೊಳ್ಳುತ್ತಿದ್ದರು. ಇಂದು ಅವರು ಇಲ್ಲ ಎಂಬುದು ನನಗೆ ತುಂಬಾ ನೋವು ಕೊಡುತ್ತದೆ’ ಎಂದು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

1,605 ದಿನಗಳ ಬಳಿಕ ಅಗ್ರಸ್ಥಾನ ಕಳೆದುಕೊಂಡ ಭಾರತ! – Kannada News | India Lose Number 1 Spot In ICC T20I Rankings

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ  ಸುದೀರ್ಘ ಕಾಲ ಅಧಿಪತ್ಯ ಸ್ಥಾಪಿಸಿದ್ದ ಟೀಮ್ ಇಂಡಿಯಾ ಕೊನೆಗೂ ತನ್ನ ಅಗ್ರಸ್ಥಾನವನ್ನು ಕಳೆದುಕೊಂಡಿದೆ. ಅದು ಸಹ ಬರೋಬ್ಬರಿ 1,605 ದಿನಗಳ ಬಳಿಕ. ಅಂದರೆ ಭಾರತ ತಂಡವು ಫೆಬ್ರವರಿ 2022 ರಲ್ಲಿ ಟಿ20 ತಂಡಗಳ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತ್ತು. ಇದಾದ ಬಳಿಕ ಟೀಮ್ ಇಂಡಿಯಾ 4 ವರ್ಷಗಳ ಕಾಲ ಅಗ್ರಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

2 ವಿಶ್ವಕಪ್‌ಗಳ ಸುವರ್ಣ ಯುಗ!

ಈ 1,605 ದಿನಗಳ ಅವಧಿಯಲ್ಲಿ ಭಾರತ ತಂಡ ಟಿ20 ಕ್ರಿಕೆಟ್‌ನಲ್ಲಿ ಅಪ್ರತಿಮ ಯಶಸ್ಸು ಕಂಡಿತ್ತು. ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಸಾರಥ್ಯದಲ್ಲಿ ಭಾರತ ತಂಡ 2024 ಮತ್ತು 2026 ರ ಬ್ಯಾಕ್-ಟು-ಬ್ಯಾಕ್ ಟಿ20 ವಿಶ್ವಕಪ್ ಟ್ರೋಫಿಗಳನ್ನು ಮುಡಿಗೇರಿಸಿಕೊಂಡಿತ್ತು.

ಆದರೆ ನಾಯತಕ್ವ ಬದಲಾವಣೆಯೊಂದಿಗೆ ಟೀಮ್ ಇಂಡಿಯಾದ ಮಹಾ ಕುಸಿತ ಶುರುವಾಗಿದೆ. ಅಂದರೆ ಟಿ20 ವಿಶ್ವಕಪ್ 2026 ರಲ್ಲಿ ಭಾರತ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಿದ್ದರು. ಇದೀಗ ಅವರ ಬದಲಿಗೆ ನಾಯಕನಾಗಿ ಶ್ರೇಯಸ್ ಅಯ್ಯರ್ ಕಾಣಿಸಿಕೊಳ್ಳುತ್ತಿದ್ದಾರೆ.

ಬ್ಯಾಕ್ ಟು ಬ್ಯಾಕ್ ಸೋಲು:

ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಹೊಸ ಯುಗ ಆರಂಭಿಸಿರುವ ಟೀಮ್ ಇಂಡಿಯಾ ಈವರೆಗೆ ಒಂದೇ ಒಂದು ಪಂದ್ಯ ಗೆದ್ದಿಲ್ಲ ಎಂಬುದೇ ಸತ್ಯ. ಅಂದರೆ ಆಡಿರುವ 7 ಪಂದ್ಯಗಳಲ್ಲಿ ಒಂದು ಮ್ಯಾಚ್ ಮಳೆಯಿಂದ ರದ್ದಾದರೆ, ಇನ್ನುಳಿದ 6 ಪಂದ್ಯಗಳಲ್ಲಿ ಸೋಲನುಭವಿಸಿದೆ.

  • ಐರ್ಲೆಂಡ್ ವಿರುದ್ಧ ಆಘಾತ: ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ 0-2 ಅಂತರದಿಂದ ಕ್ಲೀನ್ ಸ್ವೀಪ್ ಮುಖಭಂಗ ಅನುಭವಿಸಿತು.
  • ಇಂಗ್ಲೆಂಡ್ ವಿರುದ್ಧ ವೈಟ್‌ವಾಶ್: ಹ್ಯಾರಿ ಬ್ರೂಕ್ ನೇತೃತ್ವದ ಬಲಿಷ್ಠ ಇಂಗ್ಲೆಂಡ್ ವಿರುದ್ಧ ಭಾರತ 0-4 ಅಂತರದಿಂದ ಸರಣಿ ಸೋತಿತು.

ಅದರಲ್ಲೂ ಟೀಮ್ ಇಂಡಿಯಾ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡವು 56 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತವನ್ನು ಹಿಂದಿಕ್ಕಿ ಇಂಗ್ಲೆಂಡ್ ಅಧಿಕೃತವಾಗಿ ನಂ.1 ಪಟ್ಟಕ್ಕೇರಿತು.

ಪ್ರಸ್ತುತ ಐಸಿಸಿ ಟಿ20 ತಂಡಗಳ ಶ್ರೇಯಾಂಕ ಪಟ್ಟಿ:

ಸದ್ಯ ಇಂಗ್ಲೆಂಡ್ ವಿರುದ್ಧ ಸೋತಿರುವ ಟೀಮ್ ಇಂಡಿಯಾ ಮುಂದಿನ ಸರಣಿ ಮೂಲಕ ಮತ್ತೆ ಅಗ್ರಸ್ಥಾನಕ್ಕೇರಬಹುದು. ಏಕೆಂದರೆ ಇಂಗ್ಲೆಂಡ್ ಮತ್ತು ಭಾರತ ತಂಡಗಳ ನಡುವಿನ ರೇಟಿಂಗ್ ಅಂತರವು ಕೇವಲ 1 ಪಾಯಿಂಟ್ ಮಾತ್ರ ಇದೆ. ಐಸಿಸಿ ಶ್ರೇಯಾಂಕ ವ್ಯವಸ್ಥೆಯು ಅತ್ಯಂತ ಕ್ರಿಯಾತ್ಮಕವಾಗಿದ್ದು, ಪ್ರತಿ ಪಂದ್ಯದ ಗೆಲುವು-ಸೋಲಿನ ನಂತರವೂ ಶ್ರೇಯಾಂಕ ಕೂಡ ಬದಲಾಗುತ್ತದೆ. ಹೀಗಾಗಿ ಝಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿದರೆ ಮತ್ತೆ ಅಗ್ರಸ್ಥಾನಕ್ಕೇರಬಹುದು.

Source link

Exit mobile version