ಉಮಾಶ್ರೀ ಹೇಳಿದ ಆ ಒಂದು ಮಾತಿಗೆ ಕಣ್ಣೀರು ಹಾಕಿದ್ದ ಎಸ್​. ಜಾನಕಿ – Kannada News | Legendary Singer S Janaki Passes Away: When She Cried After Umashree Called Her Mother

ಖ್ಯಾತ ಗಾಯಕಿ ಎಸ್​. ಜಾನಕಿ ಅವರು ಇಂದು (ಜುಲೈ 11) ರಾತ್ರಿ 7.30ರ ಸುಮಾರಿಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರು ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದರು. ಅವರ ನಿಧನವು ಸಂಗೀತ ಲೋಕಕ್ಕೆ ದೊಡ್ಡ ನಷ್ಟವನ್ನು ತಂದಿದೆ. ಜಾನಕಿ ಅವರು ಆಂಧ್ರದವರು. ಆದರೆ, ಅವರಿಗೆ ಕನ್ನಡದ ಬಗ್ಗೆ ವಿಶೇಷ ಗೌರವ ಇತ್ತು. ಇಲ್ಲಿನ ಜನರು ಕೊಡುತ್ತಿದ್ದ ಪ್ರೀತಿಗೆ ಅವರು ಮನಸೋತಿದ್ದರು. ಅವರು ಈ ಮೊದಲು ಕನ್ನಡದಲ್ಲೇ ಮಾತನಾಡಿ, ಇಲ್ಲಿನ ಜನರು ತೋರಿಸಿದ್ದ ಪ್ರೀತಿಗೆ ಖುಷಿ ಹೊರಹಾಕಿದ್ದರು.

2014ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಕಾರ್ಯಕ್ರಮದಲ್ಲಿ ಜಾನಕಿ ಅವರು ಭಾಗಿ ಆಗಿ, ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ್ದರು. ‘ನಾನು 1957ರಲ್ಲಿ ಚಿತ್ರರಂಗಕ್ಕೆ ಬಂದೆ. ಅಂದಿನಿಂದ ಎಷ್ಟೋ ಹಾಡುಗಳನ್ನು ಹಾಡಿದ್ದೇನೆ. ನಾನು ಹೆಚ್ಚು ಹಾಡನ್ನು ಹಾಡಿದ್ದು ಕನ್ನಡದಲ್ಲಿ. ನಂತರ ಬೇರೆ ಭಾಷೆಗಳಲ್ಲಿ ಹಾಡಿದ್ದೇನೆ. ನಾನು ಅಭಿಮಾನಿಗಳ ಮನಸ್ಸಿನಲ್ಲಿ ತುಂಬಿಕೊಂಡಿದ್ದೇನೆ. ಅವರು ನನಗೆ ಕೊಡೋ ಪ್ರಶಸ್ತಿ ತುಂಬಾ ದೊಡ್ಡದು. ನನಗೂ ಒಂದು ಪ್ರಶಸ್ತಿ ಕೊಟ್ಟರು. ತುಂಬಾ ಖುಷಿ ಆಯಿತು’ ಎಂದಿದ್ದರು ಜಾನಕಿ.

‘ಉಮಾಶ್ರೀ ಅವರು ಕರೆ ಮಾಡಿ ನನಗೆ ಅವಾರ್ಡ್ ಕೊಡೋ ಬಗ್ಗೆ ಹೇಳಿದರು. ಬರಬೇಕು ಎಂದು ಆಹ್ವಾನ ಕೊಟ್ಟರು. ನನಗೆ ಕಮಿಟ್​​ಮೆಂಟ್ ಇದೆ, ಒಂದು ವಾರ ಆದರೂ ಮೊದಲು ಹೇಳಬೇಕಿತ್ತು ಎಂದಿದ್ದೆ. ಬರಲೇಬೇಕು ಎಂದು ಹಠ ಹಿಡಿದರು. ನೀವು ನನ್ನ ತಾಯಿ ಹಾಗೆ ಎಂದರು. ಅಮ್ಮ ಎಂದಾಗ ನನಗೆ ಅಳು ಬಂದುಹೋಯ್ತು. ಎಲ್ಲಾ ಅಭಿಮಾನಿಗಳು ನನ್ನ ಅಮ್ಮ ಎನ್ನುತ್ತಾರೆ. ಅಭಿಮಾನಿಗಳಿಗೋಸ್ಕರ ಪ್ರಶಸ್ತಿ ಸ್ವೀಕರಿಸಿದ್ದಾರೆ’ ಎಂದಿದ್ದರು ಜಾನಕಿ.

ಇದನ್ನೂ ಓದಿ: S Janaki Obituary: ಎಸ್ ಜಾನಕಿ ನಿಧನ: 20 ಭಾಷೆ, 48 ಸಾವಿರ ಹಾಡು, ಗಾಯಕಿ ನಡೆದುಬಂದ ಹಾದಿ

‘ನನಗೆ ಸಾಕಷ್ಟು ಫೋನ್ ಹಾಗೂ ಮೆಸೇಜ್​​ಗಳು ಬಂದಿದ್ದವು. ನೀವು ಪ್ರಶಸ್ತಿ ಸ್ವೀಕರಿಸಬೇಕು ಎಂದಿದ್ದರು. ನಿಮಗೋಸ್ಕರ ಅವಾರ್ಡ್ ಸ್ವೀಕರಿಸಿದ್ದೇನೆ’ ಎಂದು ಅವರು ಕನ್ನಡದಲ್ಲೇ ಮಾತನಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

World Paper Bag Day 2026: ವಿಶ್ವ ಪೇಪರ್‌ ಬ್ಯಾಗ್‌ ದಿನದ ಆಚರಣೆಯ ಇತಿಹಾಸ, ಮಹತ್ವದ ಸಂಪೂರ್ಣ ವಿವರ ಇಲ್ಲಿದೆ – Kannada News | World Paper Bag Day 2026: Purpose of World Paper Bag Day celebration

ವಿಶ್ವ ಪೇಪರ್‌ ಬ್ಯಾಗ್‌ ದಿನImage Credit source: vecteezy

ಪರಿಸರದ ಆರೋಗ್ಯದ ದೃಷ್ಟಿಯಿಂದ ಪ್ಲಾಸ್ಟಿಕ್‌ (Plastic) ಬಳಕೆ ಮಾಡಬೇಡಿ ಎಂದು ಎಷ್ಟೇ ಜಾಗೃತಿ ಕಾರ್ಯಗಳನ್ನು ಮಾಡಿದರೂ ಇಂದಿಗೂ ಪ್ಲಾಸ್ಟಿಕ್‌ ಬಳಕೆ ಕಡಿಮೆಯಾಗಿಲ್ಲ. ಇಂದಿಗೂ ಪ್ಲಾಸ್ಟಿಕ್‌ ಚೀಲಗಳ ಬಳಕೆ ವ್ಯಾಪಕವಾಗಿ ಹೆಚ್ಚಿದೆ. ಇವುಗಳು ಕೊಳೆಯಲು 50 ರಿಂದ 500 ವರ್ಷಗಳು ಬೇಕಾಗಿದ್ದು, ಇದು ಪರಿಸರದ ಮೇಲೆ ಗಂಭೀರ ಅಪಾಯವನ್ನು ಉಂಟು ಮಾಡುವುದು ಮಾತ್ರವಲ್ಲ ನಮ್ಮ ಆರೋಗ್ಯ ಹಾಗೂ ಪ್ರಾಣಿಗಳ ಮೇಲೂ ನಕಾರಾತ್ಮಕ ಪರಿಣಾಮವನ್ನು ಉಂಟುಮಾಡುತ್ತದೆ. ಹಾಗಾಗಿ ಪ್ಲಾಸ್ಟಿಕ್‌ ಬಳಕೆಯನ್ನು ಬಳಕೆಯನ್ನು ಕಡಿಮೆ ಮಾಡಲು ಪ್ಲಾಸ್ಟಿಕ್‌ ಚೀಲಗಳ ಬದಲಿಗೆ ಪೇಪರ್‌ ಚೀಲಗಳನ್ನೇ ಬಳಸಬೇಕು ಎಂದು ಜನರನ್ನು ಪ್ರೇರೇಪಿಸಲು ಪ್ರತಿವರ್ಷ ಜುಲೈ 12 ರಂದು ವಿಶ್ವ ಪೇಪರ್‌ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.

ವಿಶ್ವ ಪೇಪರ್ ಬ್ಯಾಗ್ ದಿನದ ಇತಿಹಾಸವೇನು?

ಪೇಪರ್ ಬ್ಯಾಗ್ ದಿನವನ್ನು ಈ ದಿನದಂದು ಆಚರಿಸುವ ನಿಖರವಾದ ಇತಿಹಾಸ ತಿಳಿದಿಲ್ಲ. ಆದರೆ ಈ ದಿನವು ವಿಲಿಯಂ ಗುಡೆಲ್ ರಚಿಸಿದ ಪೇಪರ್ ಬ್ಯಾಗ್ ಯಂತ್ರಕ್ಕೆ ಪೇಟೆಂಟ್ ಸಿಕ್ಕ ದಿನವನ್ನು ನೆನಪಿಸುತ್ತದೆ. ಅವರ ಪೇಪರ್ ಬ್ಯಾಗ್ ತಯಾರಿಸುವ ಯಂತ್ರಕ್ಕೆ 12 ನೇ ಜುಲೈ 1859 ರಂದು ಪೇಟೆಂಟ್ ನೀಡಲಾಯಿತು. ಆದ್ದರಿಂದ ಈ ನೆನಪಿಗಾಗಿ ಮತ್ತು ಪರಿಸರ ಸ್ನೇಹಿಯಾಗಿರುವ ಪೇಪರ್‌ ಬ್ಯಾಗ್‌ಗಳ ಬಳಕೆಯನ್ನು ಉತ್ತೇಜಿಸಲು ಪ್ರತಿವರ್ಷವೂ ಜುಲೈ 12 ರಂದು ವಿಶ್ವ ಪೇಪರ್ ಬ್ಯಾಗ್ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಪೇಪರ್ ಬ್ಯಾಗ್ ದಿನದ ಮಹತ್ವವೇನು?

  • ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ಬಿಟ್ಟು ಪೇಪರ್ ಬ್ಯಾಗ್‌ಗಳನ್ನು ಬಳಸುವಂತೆ ಜನರನ್ನು ಪ್ರೇರೇಪಿಸುವುದು ಈ ದಿನದ ಉದ್ದೇಶವಾಗಿದೆ.
  • ಈ ದಿನ ಪ್ಲಾಸ್ಟಿಕ್ ಚೀಲಗಳ ಬಳಕೆ ಪರಿಸರಕ್ಕೆ ಎಷ್ಟು ಹಾನಿಕಾರಕ ಎಂಬುದರ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
  • ಪ್ಲಾಸ್ಟಿಕ್‌ ಮಾಲಿನ್ಯದಿಂದ ಪರಿಸರವನ್ನು ಸಂರಕ್ಷಿಸುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ.
  • ಪೇಪರ್ ಬ್ಯಾಗ್‌ಗಳನ್ನು ಬಳಸುವುದು ಪರಿಸರಕ್ಕೆ ತುಂಬಾ ಪ್ರಯೋಜನಕಾರಿ, ಅವುಗಳ ಬಳಕೆಯು ಪರಿಸರವನ್ನು ಉಳಿಸುವುದಲ್ಲದೆ, ಪ್ಲಾಸ್ಟಿಕ್ ಬಳಕೆಯಿಂದ ಉಂಟಾಗುವ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ. ಪ್ಲಾಸ್ಟಿಕ್ ಬದಲಿಗೆ ಪೇಪರ್ ಬ್ಯಾಗ್‌ಗಳನ್ನು ಬಳಸುವ ಮೂಲಕ ಮಾಲಿನ್ಯ ಮುಕ್ತ ಪರಿಸರಕ್ಕೆ ನಾವು ಕೊಡುಗೆ ನೀಡಬಹುದು ಎಂಬ ಸಂದೇಶವನ್ನು ನೀಡುವುದು ಪೇಪರ್ ಬ್ಯಾಗ್ ದಿನದ ಉದ್ದೇಶವಾಗಿದೆ.

ಇದನ್ನೂ ಓದಿ: ವಿಶ್ವ ಜನಸಂಖ್ಯಾ ದಿನದ ಆಚರಣೆಯ ಇತಿಹಾಸ, ಮಹತ್ವ ತಿಳಿಯಿರಿ

ಕಾಗದದ ಚೀಲಗಳ ಪ್ರಯೋಜನಗಳೇನು?

  • ಪೇಪರ್ ಬ್ಯಾಗ್‌ಗಳನ್ನು ಬಳಸುವುದರಿಂದ ಹಲವು ಅನುಕೂಲಗಳಿವೆ, ಅವು ಹೆಚ್ಚಾಗಿ ನೈಸರ್ಗಿಕವಾಗಿರುತ್ತವೆ, ಇದು ಪರಿಸರಕ್ಕೆ ಹಾನಿ ಉಂಟು ಮಾಡುವುದಿಲ್ಲ.
  • ಪ್ಲಾಸ್ಟಿಕ್ ಬ್ಯಾಗ್‌ಗಳಿಗೆ ಹೋಲಿಸಿದರೆ, ಪೇಪರ್ ಬ್ಯಾಗ್‌ಗಳನ್ನು ತಯಾರಿಸಲು ಬಳಸುವ ವಸ್ತುಗಳು ಪರಿಸರ ಸ್ನೇಹಿಯಾಗಿರುತ್ತವೆ ಮತ್ತು ಪೇಪರ್ ಬ್ಯಾಗ್‌ಗಳನ್ನು ನವೀಕರಿಸಬಹುದಾದ ಸಂಪನ್ಮೂಲಗಳಿಂದ ತಯಾರಿಸಲಾಗುತ್ತದೆ. ಅಲ್ಲದೆ ಈ ಬ್ಯಾಗ್‌ಗಳು ಬೇಗನೆ ಕೊಳೆತು ಹೋಗುತ್ತದೆ.
  • ಪ್ಲಾಸ್ಟಿಕ್ ಚೀಲಗಳ ತಯಾರಿಕೆಗೆ ಹೋಲಿಸಿದರೆ, ಕಾಗದದ ಚೀಲಗಳನ್ನು ತಯಾರಿಸಲು ಕಡಿಮೆ ಶಕ್ತಿಯ ಬಳಕೆಯಾಗುತ್ತದೆ. ಪ್ಲಾಸ್ಟಿಕ್ ಚೀಲಗಳಂತೆ ಪೇಪರ್ ಬ್ಯಾಗ್‌ಗಳು ಪ್ರಾಣಿಗಳಿಗೆ ಹಾಗೂ ಪರಿಸರಕ್ಕೆ ಹಾನಿಕಾರಕವಲ್ಲ.
  • ಕಾಗದದ ಚೀಲಗಳು ಜೈವಿಕ ವಿಘಟನೀಯ ಮತ್ತು ವಿಷಕಾರಿ ವಸ್ತುಗಳನ್ನು ಬಿಡುಗಡೆ ಮಾಡುವುದಿಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕ್ಯಾಚ್ ಹಿಡಿಯಲ್ಲ, ರನ್ ಹೊಡೆಯಲ್ಲ, ಬೌಲಿಂಗ್ ಬಗ್ಗೆ ಕೇಳಬೇಕಿಲ್ಲ; ಇವರೇನಾ ಟಿ20 ಚಾಂಪಿಯನ್ಸ್..! – Kannada News | Team India T20 Crisis: Analyzing Poor Performance and Series Losses to Ireland and England

ಟೀಂ ಇಂಡಿಯಾ (Team India).. ಕೆಲವೇ ತಿಂಗಳುಗಳ ಹಿಂದೆ ವಿಶ್ವದ ಬಲಿಷ್ಠ ತಂಡಗಳನೆಲ್ಲ ಮಣಿಸಿ ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಎತ್ತಿ ಹಿಡಿದಿತ್ತು. ಆದರೆ ಈ ಕೆಲವೇ ತಿಂಗಳಲ್ಲಿ ತಂಡದ ಪ್ರದರ್ಶನ ಅತ್ಯಂತ ಹೀನಾಯ ಸ್ಥಿತಿಗೆ ತಲುಪಿದೆ. ಒಂದರ್ಥದಲ್ಲಿ ಮೈದಾನದಲ್ಲಿ ಕ್ರಿಕೆಟ್ ಶಿಶುಗಳಂತೆ ವರ್ತಿಸುತ್ತಿರುವ ಟೀಂ ಇಂಡಿಯಾ ಆಟಗಾರರು ಕೋಟ್ಯಾಂತರ ಭಾರತೀಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಐರ್ಲೆಂಡ್ ವಿರುದ್ಧ ಟಿ20 ಸರಣಿ ಸೋತಾಗಲೇ ಎಚ್ಚೆತ್ತುಕ್ಕೊಳ್ಳದ ಟೀಂ ಇಂಡಿಯಾ, ಇದೀಗ ಪ್ರತಿ ಪಂದ್ಯದಲ್ಲೂ ಅದಕ್ಕೆ ಬೆಲೆ ತೆರುತ್ತಿದೆ. ಇಂಗ್ಲೆಂಡ್​ನಲ್ಲಿ ಅಕ್ಷರಶಃ ಪಾತಾಳಕ್ಕೆ ಕುಸಿದಿರುವ ತಂಡದ ಪ್ರದರ್ಶನವನ್ನು ಮೇಲೇತ್ತಲ್ಲು ಪಾವಡವೇ ನಡೆಯಬೇಕಿದೆ.

ಐರ್ಲೆಂಡ್ ವಿರುದ್ಧದ ಟಿ20 ಸರಣಿ ಸೋಲಿಗೆ ಟೀಂ ಇಂಡಿಯಾದ ಯಾವೆಲ್ಲ ತಪ್ಪುಗಳು ಕಾರಣವಾಗಿದ್ದವೋ ಅದೇ ಕಾರಣಗಳು ಇದೀಗ ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿ ಸೋಲಿಗೆ ಕಾರಣವಾಗಿವೆ. ಐರ್ಲೆಂಡ್ ವಿರುದ್ಧ ಮೊಟ್ಟ ಮೊದಲ ಬಾರಿಗೆ ಪಂದ್ಯವೊಂದನ್ನು ಸೋತಿದ್ದ ಭಾರತ ತಂಡ, ಮೊದಲ ಬಾರಿಗೆ ಟಿ20 ಸರಣಿಯನ್ನು ಕಳೆದುಕೊಂಡತ್ತು. ಅದು 2-0 ಅಂತರದಲ್ಲಿ ಅಂದರೆ ಟೀಂ ಇಂಡಿಯಾ, ಐರ್ಲೆಂಡ್ ವಿರುದ್ಧ ವೈಟ್ ವಾಶ್ ಆಗಿತ್ತು. ಇದು ಭಾರತೀಯ ಅಭಿಮಾನಿಗಳನ್ನು ಆಘಾತಕ್ಕೊಳಪಡಿಸಿತ್ತು. ಇದೀಗ ಇಂಗ್ಲೆಂಡ್‌ ವಿರುದ್ಧ 14 ವರ್ಷಗಳ ನಂತರ ಮೊಟ್ಟ ಮೊದಲ ಬಾರಿಗೆ ಟಿ20 ಸರಣಿ ಸೋತಿದೆ. ಹಾಗಿದ್ದರೆ ಟೀಂ ಇಂಡಿಯಾದ ಈ ಸೋಲುಗಳಿಗೆ ಕಾರಣವೇನು ಎಂಬುದನ್ನು ನೋಡುವುದಾದರೆ..

ಕಳಪೆ ಬ್ಯಾಟಿಂಗ್‌

ಐರ್ಲೆಂಡ್ ಹಾಗೂ ಇಂಗ್ಲೆಂಡ್‌ ವಿರುದ್ಧ ಟೀಂ ಇಂಡಿಯಾದ ಸೋಲಿಗೆ ಪ್ರಮುಖ ಕಾರಣಗಳಲ್ಲಿ ಪ್ರಮುಖವಾದದ್ದು, ತಂಡದ ಕಳಪೆ ಬ್ಯಾಟಿಂಗ್‌. ಈ ಪ್ರವಾಸದಲ್ಲಿ ಅಭಿಷೇಕ್ ಶರ್ಮಾ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಹೊರತುಪಡಿಸಿ ಉಳಿದ ಯಾವ ಆಟಗಾರನಿಂದಲೂ ಒಂದೇ ಒಂದು ಅರ್ಧಶತಕದ ಇನ್ನಿಂಗ್ಸ್ ಮೂಡಿ ಬಂದಿಲ್ಲ. ತಂಡದ ಪರ ಅಭಿಷೇಕ್ ಶರ್ಮಾ ಕೊಂಚ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡಿದ್ದನ್ನು ಬಿಟ್ಟರೆ, ಉಳಿದವರದ್ದು ಅತ್ಯಂತ ಹೀನಾಯ ಪ್ರದರ್ಶನ. ಸಂಜು ಸ್ಯಾಮ್ಸನ್, ವೈಭವ್ ಸೂರ್ಯವಂಶಿ, ಇಶಾನ್ ಕಿಶನ್, ತಿಲಕ್ ವರ್ಮಾ ಶಿವಂ ದುಬೆರಂತಹ ಟಿ20 ಸ್ಪೆಷಲಿಸ್ಟ್​ಗಳೇ ತಂಡದಲ್ಲಿ ತುಂಬಿ ತುಳುಕುತ್ತಿದ್ದರೂ, ಅವರ್ಯಾರಿಗೂ ಇಂಗ್ಲೆಂಡ್‌ ಬೌಲರ್​ಗಳನ್ನು ದಂಡಿಸಲು ಸಾಧ್ಯವಾಗಲಿಲ್ಲ.

ಕಳಪೆ ಬೌಲಿಂಗ್

ಇಂಗ್ಲೆಂಡ್​ಗೆ ಹೋಲಿಸಿದರೆ, ಟೀಂ ಇಂಡಿಯಾದ ಬೌಲಿಂಗ್ ವಿಭಾಗದಲ್ಲಿ ಅನುಭವದ ಕೊರತೆ ಇದೆ ಎಂಬುದನ್ನು ಹೊಸದಾಗಿ ಹೇಳಬೇಕಿಲ್ಲ. ಅರ್ಷದೀಪ್ ಸಿಂಗ್​ರನ್ನು ಹೊರತುಪಡಿಸಿ ಉಳಿದವರಿಗೆ ಇಂಗ್ಲೆಂಡ್‌ ನೆಲದಲ್ಲಿ ಹೆಚ್ಚು ಆಡಿದ ಅನುಭವವಿಲ್ಲ. ಆದರೆ ಇಂಗ್ಲೆಂಡ್​ನಲ್ಲಿ ಆಡಿದ ಅರ್ಷದೀಪ್​ಗೆ ಸಿಂಗ್​ಗೆ ಪರಿಣಾಮ ಬೀರಲು ಸಾಧ್ಯವಾಗಲಿಲ್ಲ. ಇನ್ನ ಉಳಿದವರ ಸ್ಥಿತಿಯನ್ನು ಹೊಸದಾಗಿ ವಿವರಿಸಬೇಕಿಲ್ಲ. ಯಾವೊಬ್ಬ ವೇಗಿಯೂ ಪಿಚ್​ಗೆ ಅನುಗುಣವಾಗಿ ಬೌಲಿಂಗ್ ಮಾಡುವ ಸಾಮಾನ್ಯೂ ಜ್ಞಾನವನ್ನು ತೋರಲಿಲ್ಲ. ವಿಕೆಟ್ ಪಡೆಯುವುದಿರಲಿ, ಯಾರೊಬ್ಬರಿಗೂ ರನ್​ಗಳಿಗೆ ಕಡಿವಾಣ ಹಾಕುವುದಕ್ಕೆ, ಜೊತೆಯಾಟವನ್ನು ಮುರಿಯುವುದಕ್ಕೆ ಸಾಧ್ಯವಾಗಲಿಲ್ಲ. ಇದರ ಲಾಭ ಪಡೆದ ಇಂಗ್ಲೆಂಡ್‌ ಆಟಗಾರರು ಆರಂಭದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡರೂ ಆ ನಂತರ ಉತ್ತಮ ಜೊತೆಯಾಟಗಳನ್ನು ಕಟ್ಟಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಅತ್ಯಂತ ಕಳಪೆ ಫಿಲ್ಡಿಂಗ್

ಟೀಂ ಇಂಡಿಯಾದ ಈ ಹೀನಾಯ ಸೋಲಿಗೆ ತಂಡದ ಕಳಪೆ ಫಿಲ್ಡಿಂಗ್ ಪ್ರಮುಖ ಕಾರಣ ಎಂಬುದರಲ್ಲಿ ಯಾವುದೇ ಸುಳ್ಳಿಲ್ಲ. ಐರ್ಲೆಂಡ್ ಪ್ರವಾಸದಿಂದ ಹಿಡಿದು ಇದೀಗ ಇಂಗ್ಲೆಂಡ್‌ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲೂ ಟೀಂ ಇಂಡಿಯಾ ಫಿಲ್ಡರ್​ಗಳಿಗೆ ಕ್ಯಾಚ್ ಹಿಡಿಯುವುದೆಂದರೆ ಅತ್ಯಂತ ಕಷ್ಟಕರವಾದ ಕೆಲಸವಾಗಿದೆ. ಜಡ ಹಿಡಿದವರಂತೆ ವರ್ತಿಸುತ್ತಿರುವ ಫಿಲ್ಡರ್​ಗಳು ಸೀದಾ ಕೈಗೆ ಬಂದು ಕೂರುತ್ತಿರುವ ಕ್ಯಾಚ್‌ಗಳನ್ನು ಹಿಡಿಯುತ್ತಿಲ್ಲ. ಇನ್ನ ಸ್ವಲ್ಪ ದೂರ ಓಡಿ ಹೋಗಿ ಹಿಡಿಯಬೇಕೆನ್ನುವ ಕ್ಯಾಚ್‌ಗಳನ್ನು ಬಿಟ್ಟೇ ಬಿಡುತ್ತಾರೆ ಎಂಬುದನ್ನು ಅವರು ಕೈಚೆಲ್ಲುವ ಮುನ್ನವೇ ಅಭಿಮಾನಿಗಳು ಊಹಿಸುತ್ತಿದ್ದಾರೆ. ಟೀಂ ಇಂಡಿಯಾ ಇಷ್ಟು ಕಳಪೆಯಾಗಿ ಫಿಲ್ಡಿಂಗ್ ಮಾಡಿದ್ದನ್ನು ಹಿಂದೆಂದೂ ನೋಡಿರಲಿಲ್ಲ.

IND vs ENG: ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ; ತಂಡದಲ್ಲಿ 2 ಬದಲಾವಣೆ

ನಾಯಕತ್ವದಲ್ಲಿ ಚುರುಕುತನವಿಲ್ಲ

ಇನ್ನು ಇದೇ ಮೊದಲ ಬಾರಿಗೆ ಭಾರತ ಟಿ20 ತಂಡದ ನಾಯಕತ್ವವನ್ನು ನಿಭಾಯಿಸುತ್ತಿರುವ ಶ್ರೇಯಸ್ ಅಯ್ಯರ್​ಗೆ ಯಾವ ಸಂದರ್ಭದಲ್ಲಿ ಯಾವ ಬೌಲರ್​ನ ಬಳಸಬೇಕು? ಯಾರನ್ನು ಎಲ್ಲಿ ಫಿಲ್ಡಿಂಗ್​ಗೆ ನಿಲ್ಲಿಸಬೇಕು? ಯಾವ ಬ್ಯಾಟ್ಸ್‌ಮನ್​ಗೆ ಯಾವ ರೀತಿಯ ತಂತ್ರವನ್ನು ಹೆಣೆಯಬೇಕು? ಎಂಬುದನ್ನು ನಿರ್ಧರಿಸುವಲ್ಲಿ ಶ್ರೇಯಸ್ ಸಂಪೂರ್ಣವಾಗಿ ವಿಫಲರಾದರು. ತಂಡದಲ್ಲಿ ಇಷ್ಟೆಲ್ಲ ನ್ಯೂನತೆಗಳಿದ್ದರೂ ಆಡಿರುವ 7 ಪಂದ್ಯಗಳಲ್ಲಿ ಆಟಗಾರರಲ್ಲಿ ಒಂದೇ ಒಂದು ಬದಲಾವಣೆಗಳಾಗಿಲ್ಲ. ಯಾರೊಬ್ಬರು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವ ಕೆಲಸಕ್ಕೂ ಕೈಹಾಕಿಲ್ಲ. ಇದರ ಪರಿಣಾಮವಾಗಿ ತಂಡಕ್ಕೆ ಹಿಂದೆಂದೂ ಕಾಣದ ಸೋಲುಗಳು ಎದುರಾಗುತ್ತಿವೆ. ಟೀಂ ಇಂಡಿಯಾ ಆದಷ್ಟು ಬೇಗ ತನ್ನ ತಪ್ಪುಗಳನ್ನು ತಿದ್ದಿಕೊಳ್ಳದಿದ್ದರೆ, ಮುಂದಿನ ಜಿಂಬಾಬ್ವೆ ಸರಣಿಯನ್ನು ಸೋಲುವುದರಲ್ಲಿ ಯಾವುದೇ ಅನುಮಾನವಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಸ್​. ಜಾನಕಿ ನಿಧನ: ಗಾನಕೋಗಿಲೆ ನೆನೆದು ದುಃಖಿತರಾದ ಶಾಸಕ ಜಿ.ಟಿ. ದೇವೇಗೌಡ – Kannada News | Tributes Pour In As Legendary Singer S. Janaki Passes Away; MLA GT Devegowda Remembers Her Legacy

ಮೈಸೂರು, ಜು.11: ಖ್ಯಾತ ಹಿನ್ನೆಲೆ ಗಾಯಕಿ, ಗಾನಕೋಗಿಲೆ ಎಸ್​. ಜಾನಕಿ ಅವರ ನಿಧನಕ್ಕೆ ಶಾಸಕ ಜಿ.ಟಿ. ದೇವೇಗೌಡ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಇಡೀ ರಾಷ್ಟ್ರದಲ್ಲಿ ಜನಪ್ರಿಯತೆ, ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾಗಿದ್ದ ಎಸ್​. ಜಾನಕಿ ಅವರ ಅಗಲಿಕೆ ಕಲಾ ಲೋಕಕ್ಕೆ ತುಂಬಲಾರದ ನಷ್ಟ ಎಂದು ಅವರು ಬಣ್ಣಿಸಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಭಾಷೆಗಳಲ್ಲಿ, 48 ಸಾವಿರಕ್ಕೂ ಅಧಿಕ ಗೀತೆಗಳನ್ನು ಹಾಡಿರುವ ಜಾನಕಿ ಅವರು ನಾಲ್ಕು ರಾಷ್ಟ್ರ ಪ್ರಶಸ್ತಿಗಳು ಸೇರಿದಂತೆ 28-30ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಭಾರತ ದೇಶ ಕಂಡ ಅತ್ಯುನ್ನತ ಹಿನ್ನೆಲೆ ಗಾಯಕಿಯರಲ್ಲಿ ಅವರು ಒಬ್ಬರು. ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರಂತೆ, ಎಸ್​. ಜಾನಕಿ ಅವರನ್ನು ಯಾರೂ ಮರೆಯಲು ಸಾಧ್ಯವಿಲ್ಲ ಎಂದು ದೇವೇಗೌಡರು ಹೇಳಿದರು. ಜಾನಕಿ ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಎಂದು ಪ್ರಾರ್ಥಿಸಿದ ಶಾಸಕರು, ಅವರ ಕುಟುಂಬ ವರ್ಗ, ಚಲನಚಿತ್ರ ಕಲಾವಿದರು ಹಾಗೂ ಅಭಿಮಾನಿಗಳಿಗೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ಕರುಣಿಸಲಿ ಎಂದು ಕೋರಿದರು. ಮೈಸೂರಿನ ಬನ್ನೂರು ರಸ್ತೆಯಲ್ಲಿರುವ ತೋಟದ ಮನೆಯಲ್ಲಿ ಎಸ್​. ಜಾನಕಿ ಅವರನ್ನು ಎರಡು-ಮೂರು ಬಾರಿ ಭೇಟಿಯಾಗಿ ಊಟ-ತಿಂಡಿ ಹಂಚಿಕೊಂಡಿದ್ದನ್ನು ದೇವೇಗೌಡರು ಭಾವುಕರಾಗಿ ಸ್ಮರಿಸಿದರು. ಮೈಸೂರಿನ ಬಗ್ಗೆ ಜಾನಕಿ ಅವರಿಗೆ ಅಪಾರ ಪ್ರೀತಿ ಇತ್ತು ಎಂದು ಅವರು ತಿಳಿಸಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹತ್ಯೆಗೆ ಸೇಡು ತೀರಿಸಿಕೊಳ್ಳುತ್ತೇವೆ; ತಂದೆಯ ಅಂತ್ಯಕ್ರಿಯೆ ಬಳಿಕ ಇರಾನ್ ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಶಪಥ – Kannada News | In first remark since fathers funeral Iran Supreme Leader Mojtaba Khamenei vows inevitable revenge against against US and Israel

ಟೆಹ್ರಾನ್, ಜುಲೈ 11: ಇರಾನ್ ಸುಪ್ರೀಂ ನಾಯಕ ಅಯತೊಲ್ಲಾ ಖಮೇನಿಯವರನ್ನು (Ayatollah Ali Khamenei) ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ದಾಳಿ ನಡೆಸಿ ಹತ್ಯೆ ಮಾಡಿದ್ದವು. ಇದೀಗ ಖಮೇನಿಯವರ ಅಂತ್ಯಕ್ರಿಯೆಗಳು ನೆರವೇರಿದ್ದು, ಭಾರತ ಸೇರಿದಂತೆ ಹಲವು ದೇಶಗಳ ನಾಯಕರು ಇದರಲ್ಲಿ ಭಾಗವಹಿಸಿದ್ದರು. ಭದ್ರತಾ ದೃಷ್ಟಿಯಿಂದ ಅಯತೊಲ್ಲಾ ಅಲಿ ಖಮೇನಿಯವರ ಮಗನಾದ ಈಗಿನ ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಈ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿರಲಿಲ್ಲ. ಇದೀಗ ಮೊದಲ ಪ್ರತಿಕ್ರಿಯೆ ನೀಡಿರುವ ಮೊಜ್ತಬಾ ಖಮೇನಿ ತಮ್ಮ ತಂದೆ ಹಾಗೂ ಇರಾನ್‌ನ ಮಾಜಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಗೆ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

“ಇಸ್ರೇಲ್ ಮತ್ತು ಅಮೆರಿಕದ ದಾಳಿಯಿಂದ ಹತ್ಯೆಯಾದ ಎಲ್ಲಾ ಹುತಾತ್ಮರ ರಕ್ತದ ಸೇಡನ್ನು ತೀರಿಸಿಕೊಳ್ಳುವುದಾಗಿ ನಾವು ಶಪಥ ಮಾಡುತ್ತೇವೆ. ಇರಾನ್ ಖಂಡಿತವಾಗಿಯೂ ಈ ಪ್ರತಿಜ್ಞೆಯನ್ನು ಪೂರ್ಣಗೊಳಿಸಲಿದೆ” ಎಂದು ಮೊಜ್ತಬಾ ಖಮೇನಿ ತಮ್ಮ ಸಂದೇಶದಲ್ಲಿ ಬರೆದಿದ್ದಾರೆ. “ನಾವು ಇರಲಿ, ಇಲ್ಲದಿರಲಿ. ಸೇಡು ತೀರಿಸಿಕೊಳ್ಳುವುದು ಖಚಿತ,” ಎಂದು ಅವರು ಟ್ರಂಪ್​ಗೆ ಸವಾಲು ಹಾಕಿದ್ದಾರೆ.

ಇದನ್ನೂ ಓದಿ: ಅಮೆರಿಕದಿಂದ ಇರಾನ್ ಮೇಲೆ ಮತ್ತೆ ಭೀಕರ ದಾಳಿ: ಅಲಿ ಖಮೇನಿ ಅಂತ್ಯಕ್ರಿಯೆಗೂ ಮುನ್ನ ಉದ್ವಿಗ್ನತೆ

ಫೆಬ್ರವರಿ 28ರಂದು ಟೆಹ್ರಾನ್‌ನಲ್ಲಿರುವ ಅಯತೊಲ್ಲಾ ಅಲಿ ಖಮೇನಿ ಅವರ ನಿವಾಸದ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಅವರು ಮೃತಪಟ್ಟಿದ್ದರು. ಅವರ ಜೊತೆ ಅವರ ಮೊಮ್ಮಗು ಸೇರಿದಂತೆ ಇನ್ನೂ ಹಲವು ಕುಟುಂಬಸ್ಥರು ಕೂಡ ಮೃತಪಟ್ಟಿದ್ದರು. ಮೊಜ್ತಬಾ ಖಮೇನಿಗೂ ಗಂಭೀರ ಗಾಯಗಳಾಗಿತ್ತು. ಅವರ ನಿಧನದ ಕೆಲವು ತಿಂಗಳುಗಳ ನಂತರ ಈಗ ನಡೆದ ಅಧಿಕೃತ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಈ ಹೇಳಿಕೆ ಹೊರಬಿದ್ದಿದೆ. ಗುರುವಾರ ತಡರಾತ್ರಿ ಮಶಾದ್‌ನಲ್ಲಿರುವ ಪವಿತ್ರ ಇಮಾಮ್ ರೆಜಾ ಮಸೀದಿಯಲ್ಲಿ ಅಯತೊಲ್ಲಾ ಅಲಿ ಖಮೇನಿ ಅವರ ಪಾರ್ಥಿವ ಶರೀರವನ್ನು ದಫನ ಮಾಡಲಾಯಿತು.

ಇರಾನ್ ತನ್ನನ್ನು ಹತ್ಯೆ ಮಾಡಿದರೆ ಬಾಂಬ್ ದಾಳಿ ನಡೆಸಿ ಎಂದ ಟ್ರಂಪ್:

ಮತ್ತೊಂದೆಡೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇತ್ತೀಚೆಗೆ ತಮ್ಮನ್ನು ಹತ್ಯೆ ಮಾಡಲು ಇರಾನ್ ರೂಪಿಸುತ್ತಿರುವ ಯೋಜನೆಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದಾರೆ. ಖಮೇನಿ ಅವರ ಹೇಳಿಕೆಗೂ ಒಂದು ದಿನ ಮುಂಚಿತವಾಗಿ ‘ನ್ಯೂಯಾರ್ಕ್ ಪೋಸ್ಟ್’ ಜೊತೆ ಮಾತನಾಡಿದ್ದ ಟ್ರಂಪ್, “ನಾನು ಬಹಳ ದಿನಗಳಿಂದ ಇರಾನ್​ನ ಹಿಟ್​ ಲಿಸ್ಟ್​​ನಲ್ಲಿದ್ದೇನೆ. ನನಗೆ ಏನಾದರೂ ಸಂಭವಿಸಿದರೆ, ಇರಾನ್ ಮೇಲೆ ಇದುವರೆಗೆ ಯಾರೂ ನೋಡಿರದ ಮಟ್ಟದಲ್ಲಿ ಬಾಂಬ್ ದಾಳಿ ನಡೆಸುವಂತೆ ನಾನು ಈಗಾಗಲೇ ನನ್ನ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆಗಳನ್ನು ನೀಡಿದ್ದೇನೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಇರಾನ್ ಜೊತೆ ಮಾತುಕತೆಗೆ ಅಮೆರಿಕ ಒಪ್ಪಿಗೆ, ಕದನ ವಿರಾಮ ಅಂತ್ಯ!; ಟ್ರಂಪ್ ಘೋಷಣೆ

ಇರಾನ್-ಅಮೆರಿಕ ಯುದ್ಧದ ಮೊದಲ ದಿನವಾದ ಫೆಬ್ರವರಿಯಲ್ಲಿ ಅಯತೊಲ್ಲಾ ಅಲಿ ಖಮೇನಿ ಹತ್ಯೆಗೀಡಾದರು. ಜುಲೈ 4 ಮತ್ತು ಜುಲೈ 9ರ ನಡುವೆ ಇರಾನ್‌ನಲ್ಲಿ ಅಂತ್ಯಕ್ರಿಯೆಯ ಸೇವೆ ನಡೆಯಿತು. ಜುಲೈ 9ರಂದು ಮಶಾದ್‌ನಲ್ಲಿ ಅವರನ್ನು ಸಮಾಧಿ ಮಾಡಲಾಯಿತು. ಭಾರತ ಮತ್ತು ವಿದೇಶಗಳಿಂದ ಹೆಚ್ಚಿನ ಸಂಖ್ಯೆಯ ಜನರು ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ಈ ಸಮಯದಲ್ಲಿ, ಇರಾನಿನ ಸೇನೆಯು ವಾಯು ಮತ್ತು ಗಡಿ ರಂಗಗಳಲ್ಲಿ ಭದ್ರತೆಯನ್ನು ಬಲಪಡಿಸಿತು. ಗಮನಾರ್ಹ ಸಂಗತಿಯೆಂದರೆ, ಇರಾನ್‌ನಲ್ಲಿ ಯುದ್ಧ ಆರಂಭವಾದಾಗಿನಿಂದ ಮೊಜ್ತಬಾ ಖಮೇನಿ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ತಂದೆಯ ಅಂತ್ಯಕ್ರಿಯೆಯ ಕಾರ್ಯಕ್ರಮದಿಂದಲೂ ಅವರು ತೀವ್ರ ಭದ್ರತಾ ಕಾರಣಗಳಿಗಾಗಿ ಸಂಪೂರ್ಣವಾಗಿ ದೂರ ಉಳಿದಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಎಸ್ ಜಾನಕಿ ನಿಧನ: 20 ಭಾಷೆ, 48 ಸಾವಿರ ಹಾಡು, ಗಾಯಕಿ ನಡೆದುಬಂದ ಹಾದಿ – Kannada News | Singer S Janaki Obituary: 20 Language and 48K Songs The End of an Era

ಭಾರತೀಯ ಚಿತ್ರರಂಗದ ಅದ್ಭುತ ಧ್ವನಿ, ಸಹಸ್ರಾರು ಎವರ್​​ಗ್ರೀನ್ ಗೀತೆಗಳ ಗಾಯಕಿ ಎಸ್. ಜಾನಕಿ ಅವರು ಇಂದು (ಜುಲೈ 11) ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಅವರ ನಿಧನದಿಂದಾಗಿ ಸಂಗೀತ ಲೋಕದ ಸುವರ್ಣ ಯುಗವೊಂದು ಮುಕ್ತಾಯಗೊಂಡಂತಾಗಿದೆ. ಅವರು ನಡೆದುಬಂದ ಹಾದಿ ಬಗ್ಗೆ ಇಲ್ಲಿದೆ ಮಾಹಿತಿ.

ಗುಂಟೂರಿನಿಂದ ಚೆನ್ನೈವರೆಗೆ: ಬಾಲ್ಯ ಮತ್ತು ಸಂಗೀತ ಪಯಣ

ಜಾನಕಿ ಅವರು 1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಪಲ್ಲಪಟ್ಲ ಗ್ರಾಮದಲ್ಲಿ ಜನಿಸಿದ್ದರು. ಬಾಲ್ಯದಿಂದಲೇ ಸಂಗೀತದ ಕಡೆಗೆ ಅಪಾರ ಆಕರ್ಷಣೆ ಹೊಂದಿದ್ದ ಇವರು, ಶಾಸ್ತ್ರೀಯ ಸಂಗೀತಗಾರರಾದ ಪೈಡಿಸ್ವಾಮಿ ಅವರಿಂದ ಸಂಗೀತದ ಆರಂಭಿಕ ಪಾಠಗಳನ್ನು ಕಲಿತರು. ಸಂಗೀತ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಬೇಕೆಂಬ ಕನಸಿನೊಂದಿಗೆ ಜಾನಕಿ ಅವರು ತಮ್ಮ 20ನೇ ವಯಸ್ಸಿನಲ್ಲೇ ಅಂದಿನ ಮದ್ರಾಸ್ (ಈಗಿನ ಚೆನ್ನೈ) ನಗರಕ್ಕೆ ಹೆಜ್ಜೆ ಇಟ್ಟರು. ಅಲ್ಲಿಂದ ಆರಂಭವಾದ ಅವರ ಗಾಯನ ಪಯಣ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ದಾಖಲೆ ಬರೆಯಿತು.

ಇದನ್ನೂ ಓದಿ:  ಹಾಡು ನಿಲ್ಲಿಸಿದ ‘ಗಾನಕೋಗಿಲೆ’; ಖ್ಯಾತ ಗಾಯಕಿ ಎಸ್. ಜಾನಕಿ ನಿಧನ

20ಕ್ಕೂ ಹೆಚ್ಚು ಭಾಷೆಗಳು, 48 ಸಾವಿರ ಗೀತೆಗಳು

ಎಸ್. ಜಾನಕಿ ಅವರ ಕಂಠಸಿರಿಗೆ ಯಾವುದೇ ಭಾಷೆಯ ಗಡಿ ಇರಲಿಲ್ಲ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಸಂಸ್ಕೃತ, ಒಡಿಶಾ, ತುಳು, ಉರ್ದು, ಪಂಜಾಬಿ, ಬಂಗಾಳಿ ಹಾಗೂ ಕೊಂಕಣಿ ಸೇರಿದಂತೆ 20ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ ಅವರು ಹಾಡಿದ್ದಾರೆ. ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಬರೋಬ್ಬರಿ 48 ಸಾವಿರಕ್ಕೂ ಹೆಚ್ಚು ಗೀತೆಗಳಿಗೆ ಧ್ವನಿಯಾಗುವ ಮೂಲಕ ಇಡೀ ದೇಶದ ಮನೆಮನ ಗೆದ್ದಿದ್ದರು. ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ ಅವರ ಸ್ಪಷ್ಟ ಉಚ್ಚಾರಣೆ ಮತ್ತು ಧ್ವನಿ ಬದಲಾವಣೆಯ ಚಾತುರ್ಯ ಕನ್ನಡಿಗರು ಅವರನ್ನು ತಮ್ಮದೇ ರಾಜ್ಯದ ಗಾಯಕಿ ಎನ್ನುವಂತೆ ಅಪ್ಪಿಕೊಳ್ಳುವಂತೆ ಮಾಡಿತ್ತು.

ಪ್ರಶಸ್ತಿ ಪುರಸ್ಕಾರಗಳ ಮಹಾಪೂರ:

  1. ಎಸ್. ಜಾನಕಿ ಅವರ ಅಪ್ರತಿಮ ಸಾಧನೆಗೆ ಸಾಲು ಸಾಲು ಗೌರವಗಳು ಹುಡುಕಿಕೊಂಡು ಬಂದಿದ್ದವು:
  2. ರಾಷ್ಟ್ರೀಯ ಪ್ರಶಸ್ತಿಗಳು: ಗಾಯನಕ್ಕಾಗಿ 4 ಬಾರಿ ಅತ್ಯುನ್ನತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದರು.
  3. ರಾಜ್ಯ ಪ್ರಶಸ್ತಿಗಳು: ದೇಶದ ವಿವಿಧ ರಾಜ್ಯ ಸರ್ಕಾರಗಳಿಂದ ಬರೋಬ್ಬರಿ 33 ಚಲನಚಿತ್ರ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.
  4. ಪದ್ಮಭೂಷಣ: 2013ರಲ್ಲಿ ಅವರಿಗೆ ದೇಶದ ಪ್ರತಿಷ್ಠಿತ ‘ಪದ್ಮಭೂಷಣ’ ಪ್ರಶಸ್ತಿ ಒಲಿದುಬಂದಿತ್ತು.
  5. ರಾಜ್ಯದ ಗೌರವ: ಕರ್ನಾಟಕ ಸರ್ಕಾರದಿಂದ ಗೌರವಾನ್ವಿತ ‘ರಾಜ್ಯೋತ್ಸವ ಪ್ರಶಸ್ತಿ’ ಹಾಗೂ ತಮಿಳುನಾಡು ಸರ್ಕಾರದಿಂದ ‘ಕಲೈಮಾಮಣಿ ಪ್ರಶಸ್ತಿ’ ಮುಡಿಗೇರಿಸಿಕೊಂಡಿದ್ದರು.
  6. ಗೌರವ ಡಾಕ್ಟರೇಟ್: ಮೈಸೂರು ವಿಶ್ವವಿದ್ಯಾಲಯವು ಅವರ ಸಂಗೀತ ಸೇವೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ಪದವಿ ನೀಡಿ ಪುರಸ್ಕರಿಸಿತ್ತು.
  7. ತಮ್ಮ ಮಧುರ ಧ್ವನಿಯ ಮೂಲಕ ಭಾರತೀಯರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಜಾನಕಿ ಅಮ್ಮ ಇನ್ನು ನೆನಪು ಮಾತ್ರ. ಅವರ ಸಾವು ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ ತಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನ್ಯೂಜಿಲೆಂಡ್ ಪ್ರವಾಸ ಮುಗಿಸಿ ಭಾರತಕ್ಕೆ ಮರಳಿದ ಪ್ರಧಾನಿ ಮೋದಿ – Kannada News | PM Narendra Modi leaves for India after concluding visit to New Zealand

ನವದೆಹಲಿ, ಜುಲೈ 11: ಪ್ರಧಾನಮಂತ್ರಿ ನರೇಂದ್ರ ಮೋದಿ (PM Modi in New Zealand) ಅವರು ತಮ್ಮ 2 ದಿನಗಳ ನ್ಯೂಜಿಲೆಂಡ್ ಪ್ರವಾಸವನ್ನು ಮುಗಿಸಿ ಇಂದು ಭಾರತಕ್ಕೆ ಮರಳಿದ್ದಾರೆ. 40 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ನ್ಯೂಜಿಲೆಂಡ್​ಗೆ ಭೇಟಿ ನೀಡಿದ್ದರಿಂದು ಇದು ಬಹಳ ಐತಿಹಾಸಿಕ ಮಹತ್ವ ಪಡೆಯಿತು. ಇದಕ್ಕೂ ಮೊದಲು ಪ್ರಧಾನಿ ಮೋದಿ ಇಂಡೋನೇಷ್ಯಾ ಮತ್ತು ಆಸ್ಟ್ರೇಲಿಯಾ ದೇಶಗಳಿಗೂ ಭೇಟಿ ನೀಡಿದ್ದರು. ಮೂರನೇ ದೇಶವಾಗಿ ನ್ಯೂಜಿಲೆಂಡ್​ಗೆ ಭೇಟಿ ನೀಡಿದ್ದ ಅವರು ಇದೀಗ ದೆಹಲಿಗೆ ಮರಳಿದ್ದಾರೆ. ಇಂದು ಸಂಜೆ ವಿಮಾನ ನಿಲ್ದಾಣದಲ್ಲಿ ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಅವರು ಖುದ್ದಾಗಿ ಬಂದು ಪ್ರಧಾನಿ ಮೋದಿಯವರನ್ನು ಆತ್ಮೀಯವಾಗಿ ಬೀಳ್ಕೊಟ್ಟರು.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs ENG: 170 ರನ್​ಗಳಿಗೆ ಇಂಗ್ಲೆಂಡ್‌ ಆಲೌಟ್; ಭಾರತಕ್ಕೆ 115 ರನ್​ಗಳ ಮುನ್ನಡೆ – Kannada News | India Women Dominate Lord’s Test: Kranti Gowda’s Fifer Secures 115 Run Lead vs ENG

ಐತಿಹಾಸಿಕ ಲಾರ್ಡ್ಸ್‌ ಮೈದಾನದಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ವನಿತಾ ತಂಡಗಳ ನಡುವೆ ಮೊಟ್ಟ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್​ನಲ್ಲಿ 285 ರನ್ ಕಲೆಹಾಕಿತು. ಆ ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಆತಿಥೇಯ ಇಂಗ್ಲೆಂಡ್‌ ತಂಡ ಪಂದ್ಯದ ಎರಡನೇ ದಿನದ ಎರಡನೇ ಸೆಷನ್​ನಲ್ಲಿಯೇ ತನ್ನೇಲ್ಲ ವಿಕೆಟ್ ಕಳೆದುಕೊಂಡು 170 ರನ್ ಕಲೆಹಾಕಿತು. ಈ ಮೂಲಕ ಭಾರತ ಮೊದಲ ಇನ್ನಿಂಗ್ಸ್​ನಲ್ಲಿ 115 ರನ್​ಗಳ ಮುನ್ನಡೆ ಪಡೆದುಕೊಂಡಿದೆ. ಇಂಗ್ಲೆಂಡ್‌ ಪರ ಆಮಿ ಜೋನ್ಸ್ 52 ರನ್​ಗಳ ಇನ್ನಿಂಗ್ಸ್ ಆಡಿದರೆ, ನ್ಯಾಟ್ ಸಿವರ್-ಬ್ರಂಟ್ 44 ರನ್​ಗಳ ಕಾಣಿಕೆ ನೀಡಿದರು. ಇತ್ತ ಟೀಂ ಇಂಡಿಯಾ ಪರ ಬೌಲಿಂಗ್​ನಲ್ಲಿ ಮಿಂಚಿದ ಕ್ರಾಂತಿ ಗೌಡ್ 5 ವಿಕೆಟ್​ಗಳ ಗೊಂಚಲು ಪಡೆದರು.

Source link

S Janaki Death: ಹಾಡು ನಿಲ್ಲಿಸಿದ ‘ಗಾನಕೋಗಿಲೆ’; ಖ್ಯಾತ ಗಾಯಕಿ ಎಸ್. ಜಾನಕಿ ನಿಧನ – Kannada News | S Janaki Passes Away At 88 In Mysore Due To Age Related Illness

ಹಿರಿಯ ಗಾಯಕಿ ಎಸ್. ಜಾನಕಿ ಅವರು ಇಂದು (ಜುಲೈ 11) ನಿಧನ ಹೊಂದಿದ್ದಾರೆ. ಜಾನಕಿ ಅವರಿಗೆ 88 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. 20ಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಅವರು ಹಾಡಿದ್ದರು. ಅವರ ಸಾವು ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಸಾವಿಗೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.

ಈ ವರ್ಷ ಜನವರಿಯಲ್ಲಿ ಜಾನಕಿ ಅವರ ಪುತ್ರ ಮುರಳಿ ಕೃಷ್ಣ ನಿಧನ ಹೊಂದಿದ್ದರು. ಆ ಬಳಿಕ ಪುತ್ರ ಶೋಕ ಅತಿಯಾಗಿ ಕಾಡಿತ್ತು. ಇದರಿಂದ ಅವರ ಆರೋಗ್ಯ ಹದಗೆಟ್ಟಿತ್ತು. ಈಗ ಚಿಕಿತ್ಸೆ ಫಲಕಾರಿಯಾಗದೆ ಅವರು ಮೈಸೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ.

ಜಾನಕಿ ಅವರು ಮೂಲತಃ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯವರು. ಅವರು ತೆಲುಗಿನವರು ಹೆಚ್ಚು ಪ್ರಸಿದ್ಧಿ ಪಡೆದು ಕನ್ನಡಿಗರ ಮನೆಮನಗಳಿಗೆ ಹತ್ತಿರವಾದದ್ದು ಕನ್ನಡ ಹಾಡುಗಳ ಮೂಲಕ. ಕನ್ನಡ ಭಾಷೆಯನ್ನು ಅತ್ಯಂತ ಸ್ಪಷ್ಟವಾಗಿ ಉಚ್ಚರಿಸುತ್ತಾ, ಇಲ್ಲಿನದ್ದೇ ಧ್ವನಿ ಎನ್ನುವಂತೆ ಅವರು ಸಾವಿರಾರು ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಜಾನಕಿ ಅಮ್ಮನ ಸಾಧನೆ:

70-80ರ ದಶಕದಲ್ಲಿ ಜಾನಕಿ ಅವರು ಸಾಕಷ್ಟು ಹಾಡುಗಳನ್ನು ಹಾಡಿದರು. ಅವರಷ್ಟು ಜನಪ್ರಿಯತೆ ಪಡೆದ ಮತ್ತೊಬ್ಬರು ಕನ್ನಡದಲ್ಲಿ ಇರಲಿಲ್ಲ. ವರನಟ ಡಾ. ರಾಜ್‌ಕುಮಾರ್ ಹಾಗೂ ಎಸ್. ಜಾನಕಿ ಅವರ ಕಾಂಬಿನೇಷನ್ ಕನ್ನಡ ಚಿತ್ರರಂಗದ ಗೋಲ್ಡನ್ ಎರಾ. ‘ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ’ ಮುಂತಾದ ನೂರಾರು ಸದಾಹಸಿರು ಯುಗಳ ಗೀತೆಗಳನ್ನು ಇವರು ನೀಡಿದ್ದಾರೆ.

ಎಸ್‌ಪಿಬಿ-ಜಾನಕಿ ಮ್ಯಾಜಿಕ್: ಗಾನಗಂಧರ್ವ ಎಸ್‌ಪಿ ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಧ್ವನಿಯಲ್ಲಿ ಮೂಡಿಬಂದ ರೋಮ್ಯಾಂಟಿಕ್ ಹಾಡುಗಳು ಇಂದಿಗೂ ಯುವಕರ ನೆಚ್ಚಿನ ಹಾಡುಗಳಾಗಿವೆ.

ಗಾನಕೋಗಿಲೆ ಎಸ್. ಜಾನಕಿ ಅವರಿಗೆ ಇರುವ ಅತಿ ದೊಡ್ಡ ವಿಶೇಷ ಶಕ್ತಿಯೆಂದರೆ ಅದು ಧ್ವನಿ ಬದಲಾವಣೆ . ಸಣ್ಣ ಮಗುವಿನ ಧ್ವನಿಯಿಂದ ಹಿಡಿದು ಪ್ರೌಢ ಮಹಿಳೆಯ ಧ್ವನಿಯವರೆಗೆ, ಕೇವಲ ಗಾಯನದ ಮೂಲಕವೇ ನಟನೆಯ ಭಾವನೆಗಳನ್ನು ತರುತ್ತಿದ್ದ ಅದ್ಭುತ ಗಾಯಕಿ ಇವರು. ಕನ್ನಡ ಚಿತ್ರರಂಗದಲ್ಲಿ ಅವರು ಹಾಡಿದ ಸದಾಹಸಿರು ಗೀತೆಗಳಿಗೆ ಕರ್ನಾಟಕ ಸರ್ಕಾರವು ಹಲವು ಬಾರಿ ‘ಅತ್ಯುತ್ತಮ ಹಿನ್ನೆಲೆ ಗಾಯಕಿ’ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ. ಇಷ್ಟೇ ಅಲ್ಲದೆ, ಎಸ್​. ಜಾನಕಿ ಅವರಿಗೆ 4 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, 33 ವಿವಿಧ ರಾಜ್ಯ ಚಲನಚಿತ್ರ ಪ್ರಶಸ್ತಿ, ಗೌರವ ಡಾಕ್ಟರೇಟ್, ತಮಿಳುನಾಡು ರಾಜ್ಯ ಸರ್ಕಾರದಿಂದ ಕಲೈಮಾಮಣಿ ಪ್ರಶಸ್ತಿ,  ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಹಾಗೂ 2013ರಲ್ಲಿ ಪದ್ಮಭೂಷಣ ಪ್ರಶಸ್ತಿ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:21 pm, Sat, 11 July 26

Source link

ಈ ಹಣ್ಣುಗಳ ನಿಯಮಿತ ಸೇವನೆಯಿಂದ ತ್ವಚೆಯ ಹೊಳಪನ್ನು ಹೆಚ್ಚಿಸಬಹುದು – Kannada News | Consuming these fruits can increase skin glow

ಈ ಕೊರಿಯನ್ನರು ಮತ್ತು ಸೆಲೆಬ್ರಿಟಿಗಳ ತ್ವಚೆ ಸಖತ್ ಗ್ಲೋವಿಂಗ್‌ (glowing skin) ಆಗಿ ಇರುತ್ತದೆ. ಇಂತಹ ಹೊಳೆಯುವ ತ್ವಚೆಯನ್ನು ಪಡೆಯಬೇಕು ಎಂಬುದು ಪ್ರತಿ ಹೆಂಗಳೆಯರ ಕನಸಾಗಿದೆ. ಇದಕ್ಕಾಗಿ ದುಬಾರಿ ಸ್ಕಿನ್‌ಕೇರ್‌, ಸೌಂದರ್ಯ ವರ್ಧಕಗಳ ಮೊರೆ ಹೋಗ್ತಾರೆ. ಈ ರೀತಿ ದುಡ್ಡು ವೇಸ್ಟ್‌ ಮಾಡುವ ಬದಲು ಅದೇ ದುಡ್ಡಿನಿಂದ ಈ ಕಿತ್ತಳೆ, ದಾಳಿಂಬೆಯಂತಹ ಈ ಕೆಲವೊಂದಿಷ್ಟು ಹಣ್ಣುಗಳನ್ನು ಖರೀದಿಸಿ ತಿನ್ನಿ. ಸರಿಯಾದ ಆರೋಗ್ಯಕರ ಆಹಾರದ ಜೊತೆಗೆ ಇಂತಹ ಕೆಲವು ಹಣ್ಣುಗಳನ್ನು ಸೇವಿಸುವುದರಿಂದ ತ್ವಚೆಗೆ ಒಳಗಿನಿಂದ ಪೋಷಣೆ ದೊರೆಯುತ್ತದೆ. ಇದರಿಂದ ತ್ವಚೆಯು ಕೂಡಾ ಫಳಫಳನೇ ಹೊಳೆಯುತ್ತದೆ. ಹಾಗಿದ್ದರೆ ಗ್ಲೋವಿಂಗ್‌ ಸ್ಕಿನ್‌ ಪಡೆಯಲು ಯಾವೆಲ್ಲಾ ಹಣ್ಣುಗಳನ್ನು ಅಗತ್ಯವಾಗಿ ಸೇವಿಸಲೇಬೇಕು ಎಂಬುದನ್ನು ನೋಡೋಣ ಬನ್ನಿ.

ತ್ವಚೆಯ ಹೊಳಪನ್ನು ಹೆಚ್ಚಿಸಲು ಸಹಕಾರಿ ಈ ಹಣ್ಣುಗಳು:

ಕಿತ್ತಳೆ: ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಇದು ಚರ್ಮದ ಆರೋಗ್ಯಕ್ಕೆ ಅತ್ಯಗತ್ಯ. ಇದು ಕಾಲಜನ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಚರ್ಮವನ್ನು ಯೌವ್ವನದಿಂದ ಕಾಣುವಂತೆ ಮಾಡುತ್ತದೆ. ಕಿತ್ತಳೆಯಲ್ಲಿರುವ ಉತ್ಕರ್ಷಣ ನಿರೋಧಕಗಳು ಚರ್ಮವನ್ನು ಸಾಕಷ್ಟು ಹಾನಿಯಿಂದ ರಕ್ಷಿಸುತ್ತದೆ ಮತ್ತು ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ನಿತ್ಯ ಕಿತ್ತಳೆ ಹಣ್ಣುಗಳನ್ನು ತಿನ್ನಿ.

ಪಪ್ಪಾಯಿ: ಪಪ್ಪಾಯಿಯಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಇದು ತ್ವಚೆಯಲ್ಲಿ ಅಂಟಿರುವ ಸತ್ತ ಚರ್ಮವನ್ನು ತೆಗೆದು ಹಾಕುತ್ತದೆ. ಚರ್ಮದ ಮೇಲಿನ ಕಲೆಗಳನ್ನು ಕಡಿಮೆ ಮಾಡಿ ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ. ಹಾಗಾಗಿ ಪಪ್ಪಾಯಿ ಹಣ್ಣು ಸಿಕ್ರೆ ತಪ್ಪದೇ ತಿನ್ನಿ.

ಬೆರ್ರಿ ಹಣ್ಣು: ಗಾತ್ರದಲ್ಲಿ ತುಂಬಾನೇ ಸಣ್ಣದಾಗಿರುವ ಈ ಹಣ್ಣು ವಯಸ್ಸಾಗುವಿಕೆ ವಿರೋಧಿ ಗುಣಗಳನ್ನು ಹೊಂದಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕಗಳು ಇದ್ದು, ಇದು ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡುತ್ತದೆ ಮತ್ತು ಚರ್ಮವನ್ನು ಅಕಾಲಿಕ ವಯಸ್ಸಾಗುವಿಕೆಯಿಂದ ರಕ್ಷಿಸುತ್ತದೆ. ಬೆರಿಹಣ್ಣುಗಳನ್ನು ತಿನ್ನುವುದರಿಂದ ನಿಮ್ಮ ಚರ್ಮವು ದೀರ್ಘಕಾಲದವರೆಗೆ ಯೌವನಯುತವಾಗಿ ಮತ್ತು ಕಾಂತಿಯುತವಾಗಿ ಇರುತ್ತದೆ.

ಕಲ್ಲಂಗಡಿ: ಬೇಸಿಗೆಯಲ್ಲಿ ಹೇರಳವಾಗಿ ಲಭ್ಯವಿರುವ ಕಲ್ಲಂಗಡಿ ಹಣ್ಣು ಕೂಡ ತ್ವಚೆಯ ಕಾಂತಿಯನ್ನು ಹೆಚ್ಚಿಸಲು ತುಂಬಾನೇ ಸಹಕಾರಿ.  ಇದರಲ್ಲಿರುವ ನೀರಿನಾಂಶವು  ಚರ್ಮವನ್ನು ತೇವವಾಗಿ ಮತ್ತು ಒಳಗಿನಿಂದ ಮೃದುವಾಗಿರಿಸುತ್ತದೆ. ಚರ್ಮದ ಶುಷ್ಕತೆಯನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಮಗುವಿನಂತೆ ಆರಾಮವಾಗಿ ನಿದ್ರಿಸಲು ರಾತ್ರಿ ಸಮಯದಲ್ಲಿ ಅಭ್ಯಾಸಗಳನ್ನು ಪಾಲಿಸಿ

ದಾಳಿಂಬೆ : ದಾಳಿಂಬೆಯಲ್ಲಿ ಉತ್ಕರ್ಷಣ ನಿರೋಧಕಗಳು, ವಿಟಮಿನ್ ಕೆ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಇದನ್ನು ಪ್ರತಿದಿನ ತಿನ್ನುವುದರಿಂದ ರಕ್ತ ಶುದ್ಧವಾಗುತ್ತದೆ, ಚರ್ಮಕ್ಕೆ ನೈಸರ್ಗಿಕ ಹೊಳಪು ಸಿಗುತ್ತದೆ. ಅಲ್ಲದೆ ಇದು ಇದು ಸತ್ತ ಚರ್ಮದ ಕೋಶಗಳನ್ನು ಸರಿಪಡಿಸುತ್ತದೆ.

ಸೇಬು: ಸೇಬು ಹಣ್ಣು ವಿವಿಧ ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿವೆ. ಇದು ಚರ್ಮದ ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಮತ್ತು ಸುಕ್ಕುಗಳನ್ನು ತೆಗೆದು ಹಾಕಿ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡಲು ಸಹಾಯ ಮಾಡುತ್ತದೆ.

ಕೆಂಪು ದ್ರಾಕ್ಷಿಗಳು:  ಕೆಂಪು ದ್ರಾಕ್ಷಿಯ ಸಿಪ್ಪೆಯಲ್ಲಿ ರೆಸ್ವೆರಾಟ್ರೊಲ್ ಎಂಬ ಸಂಯುಕ್ತವಿದ್ದು, ಇದು ಚರ್ಮದ ಕೋಶಗಳಿಗೆ ಹಾನಿ ಮಾಡುವ ಸ್ವತಂತ್ರ ರಾಡಿಕಲ್‌ಗಳ ರಚನೆಯನ್ನು ತಡೆಯುತ್ತದೆ. ಇದಲ್ಲದೆ ದ್ರಾಕ್ಷಿಯಲ್ಲಿರುವ ವಿಟಮಿನ್ ಇ ಮತ್ತು ಸಿ ಮುಖವನ್ನು ತೇವಗೊಳಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version