IND vs ENG: ಭಾರತ- ಇಂಗ್ಲೆಂಡ್‌ ನಡುವೆ ಏಕದಿನ ಸರಣಿ; ಇಲ್ಲಿದೆ ವೇಳಾಪಟ್ಟಿ – Kannada News | India vs England ODI Series: Kohli and Bumrah Return! Full Schedule, Squads and Match Timings

ಪ್ರಸ್ತುತ ಭಾರತ ಹಾಗೂ ಇಂಗ್ಲೆಂಡ್‌ (India vs England) ತಂಡಗಳ ನಡುವೆ ಐದು ಪಂದ್ಯಗಳ ಟಿ20 ಸರಣಿ ನಡೆಯುತ್ತಿದೆ. ಇಂದು ಸರಣಿಯ ಕೊನೆಯ ಪಂದ್ಯ ಸೌತಾಂಪ್ಟನ್‌ನ ರೋಸ್ ಬೌಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಟೀಂ ಇಂಡಿಯಾ ಈಗಾಗಲೇ ಸರಣಿ ಸೋತಿರುವುದರಿಂದ ವೈಟ್ ವಾಶ್​ನಿಂದ ಪಾರಾಗಲು ಈ ಪಂದ್ಯವನ್ನು ಗೆಲ್ಲುವ ಇರಾದೆಯಲ್ಲಿದೆ. ಇತ್ತ ಇಂಗ್ಲೆಂಡ್‌ ತನ್ನ ಅಜೇಯ ಓಟವನ್ನು ಮುಂದುವರೆಸಲು ನೋಡುತ್ತಿದೆ. ಈ ಟಿ20 ಸರಣಿಯ ಬಳಿಕ ಉಭಯ ತಂಡಗಳ ನಡುವೆ ಮೂರು ಪಂದ್ಯಗಳ ಏಕದಿನ ಸರಣಿಯೂ ನಡೆಯಲಿದೆ. ಈ ಸರಣಿಗಾಗಿ ತಂಡಗಳನ್ನು ಪ್ರಕಟಿಸಲಾಗಿದೆ.

ಕೊಹ್ಲಿ, ಬುಮ್ರಾ ವಾಪಸ್ಸಾತಿ

ಏಕದಿನ ಸರಣಿಗಾಗಿ ಟೀಂ ಇಂಡಿಯಾ ಕೂಡ ಇಂಗ್ಲೆಂಡ್‌ ತಲುಪಿದೆ. ತಂಡದ ಇಬ್ಬರು ಮಾಜಿ ನಾಯಕರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕೂಡ ಈ ಏಕದಿನ ಸರಣಿಗೆ ತಯಾರಿ ಶುರು ಮಾಡಿದ್ದಾರೆ. ವಾಸ್ತವವಾಗಿ ಇಂಜುರಿ ಕಾರಣದಿಂದ ವಿರಾಟ್ ಕೊಹ್ಲಿ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯನ್ನು ತಪ್ಪಿಸಿಕೊಂಡಿದ್ದರು. ಆದರೀಗ ಅವರು ಸಂಪೂರ್ಣ ಫಿಟ್ ಆಗಿದ್ದು ಆಂಗ್ಲರ ವಿರುದ್ಧ ಅಬ್ಬರಿಸಲು ಸಜ್ಜಾಗಿದ್ದಾರೆ. ಕೊಹ್ಲಿ ಜೊತೆಗೆ ಬುಮ್ರಾ ಕೂಡ ಬಹಳ ದಿನಗಳ ಬಳಿಕ ಏಕದಿನ ಕ್ರಿಕೆಟ್‌ಗೆ ಮರಳುತ್ತಿದ್ದಾರೆ.

ಏಕದಿನ ಸರಣಿ ವೇಳಾಪಟ್ಟಿ

ಮೊದಲ ಏಕದಿನ ಪಂದ್ಯ: ಜುಲೈ 14, 2026 (ಮಂಗಳವಾರ) ಮಧ್ಯಾಹ್ನ 3:30 ಕ್ಕೆ, ಎಡ್ಜ್‌ಬಾಸ್ಟನ್, ಬರ್ಮಿಂಗ್ಹ್ಯಾಮ್.

ಎರಡನೇ ಏಕದಿನ ಪಂದ್ಯ: ಜುಲೈ 16, 2026 (ಗುರುವಾರ) ಸಂಜೆ 5:30 ಕ್ಕೆ, ಸೋಫಿಯಾ ಗಾರ್ಡನ್ಸ್, ಕಾರ್ಡಿಫ್.

ಮೂರನೇ ಏಕದಿನ ಪಂದ್ಯ: ಜುಲೈ 19, 2026 (ಭಾನುವಾರ) ಮಧ್ಯಾಹ್ನ 3:30 ಕ್ಕೆ, ಲಾರ್ಡ್ಸ್ ಕ್ರಿಕೆಟ್ ಮೈದಾನ, ಲಂಡನ್.

IND vs ENG: ಬರೋಬ್ಬರಿ 3 ವರ್ಷಗಳ ಬಳಿಕ ಏಕದಿನ ಕ್ರಿಕೆಟ್​ಗೆ ಮರಳಿದ ಯಾರ್ಕರ್ ಕಿಂಗ್

ಉಭಯ ತಂಡಗಳು

ಏಕದಿನ ಸರಣಿಗೆ ಟೀಂ ಇಂಡಿಯಾ: ಶುಭ್​ಮನ್ ಗಿಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಗುರ್ನೂರ್ ಬ್ರಾರ್.

ಇಂಗ್ಲೆಂಡ್‌ ತಂಡ: ಹ್ಯಾರಿ ಬ್ರೂಕ್, ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಟಾಮ್ ಬ್ಯಾಂಟನ್, ಜಾಕೋಬ್ ಬೆಥೆಲ್, ಜೋಸ್ ಬಟ್ಲರ್, ಜೇಮ್ಸ್ ಕೋಲ್ಸ್, ಸ್ಯಾಮ್ ಕರನ್, ಲಿಯಾಮ್ ಡಾಸನ್, ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಸಾಕಿಬ್ ಮಹಮೂದ್, ಆದಿಲ್ ರಶೀದ್, ಜೋ ರೂಟ್, ಜೋಶ್ ಟಂಗ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು: ಪ್ರಾಥಮಿಕ ಆರೋಗ್ಯ ಕೇಂದ್ರದ ಗೇಟ್ ಮುರಿದುಬಿದ್ದು ಶನೇಶ್ವರ ದೇವಸ್ಥಾನದ ಅರ್ಚಕನಿಗೆ ಗಂಭೀರ ಗಾಯ – Kannada News | Basavanagudi Accident: Heavy Gate Falls on Priest Madhu, Spinal Injury

ಬೆಂಗಳೂರು, ಜು.11: ಸಿಲಿಕಾನ್ ಸಿಟಿ ಬೆಂಗಳೂರಿನ ಬಸವನಗುಡಿಯಲ್ಲಿ ತೀವ್ರ ಆಘಾತಕಾರಿ ಘಟನೆಯೊಂದು ನಡೆದಿದೆ. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಭಾರಿ ಗಾತ್ರದ ಗೇಟ್‌ನ ಜಾಯಿಂಟ್ ವೆಲ್ಡಿಂಗ್ ಮುರಿದುಬಿದ್ದ ಪರಿಣಾಮ, ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಶನೇಶ್ವರ ದೇವಸ್ಥಾನದ ಅರ್ಚಕರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸವನಗುಡಿಯ ಬೃಂದಾವನ ನಗರದಲ್ಲಿ ಇಂದು (ಜು.11) ಮಧ್ಯಾಹ್ನ ಸುಮಾರು 1:30ರ ವೇಳೆಗೆ ಈ ದುರ್ಘಟನೆ ನಡೆದಿದೆ. ಗಾಯಗೊಂಡ ಅರ್ಚಕರನ್ನು ಮಧು ಎಂದು ಗುರುತಿಸಲಾಗಿದೆ. ಸ್ಥಳೀಯರ ಮಾಹಿತಿಯ ಪ್ರಕಾರ, ಅರ್ಚಕ ಮಧು ಅವರು ಮಧ್ಯಾಹ್ನದ ವೇಳೆ ಬೃಂದಾವನ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ಗೇಟ್ ಪಕ್ಕದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಆರೋಗ್ಯ ಕೇಂದ್ರದ ಬೃಹತ್ ಕಬ್ಬಿಣದ ಗೇಟ್‌ನ ಜಾಯಿಂಟ್ ವೆಲ್ಡಿಂಗ್ ದಿಢೀರನೆ ಕಟ್ ಆಗಿದೆ. ಈ ಭಾರಿ ತೂಕದ ಕಬ್ಬಿಣದ ಗೇಟ್ ನೇರವಾಗಿ ನಡೆದು ಹೋಗುತ್ತಿದ್ದ ಮಧು ಅವರ ಮೇಲೆಯೇ ಮುರಿದುಬಿದ್ದಿದೆ ಗೇಟ್‌ನ ಅಡಿಯಲ್ಲೇ ಕೆಲ ಹೊತ್ತು ಒದ್ದಾಡಿದ್ದಾರೆ. ಗೇಟ್ ಬಿದ್ದ ತಕ್ಷಣ ಜೋರಾದ ಶಬ್ದ ಕೇಳಿ ಧಾವಿಸಿ ಬಂದ ಸ್ಥಳೀಯರು ಭಾರಿ ಗಾತ್ರದ ಕಬ್ಬಿಣದ ಗೇಟನ್ನು ಮೇಲಕ್ಕೆ ಎತ್ತಿದ್ದಾರೆ. ಸ್ಥಳೀಯರು ತಕ್ಷಣವೇ ಗೇಟ್ ತಗೆದು ಮಧು ಅವರನ್ನು ಹೊರಗೆಳೆದಿದ್ದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಭಾರಿ ತೂಕದ ಗೇಟ್ ಬೆನ್ನಿನ ಮೇಲೆ ಬಿದ್ದ ರಭಸಕ್ಕೆ ಮಧು ಅವರ ಬೆನ್ನುಮೂಳೆಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದಿದೆ. ಗಾಯಾಳು ಅರ್ಚಕನನ್ನು ತಕ್ಷಣವೇ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅಲ್ಲಿ ಅವರಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು: ಪ್ರಾಥಮಿಕ ಆರೋಗ್ಯ ಕೇಂದ್ರದ ಗೇಟ್ ಮುರಿದುಬಿದ್ದು ಶನೇಶ್ವರ ದೇವಸ್ಥಾನದ ಅರ್ಚಕನಿಗೆ ಗಂಭೀರ ಗಾಯ – Kannada News | Basavanagudi Accident: Heavy Gate Falls on Priest Madhu, Spinal Injury

ಬೆಂಗಳೂರು, ಜು.11: ಸಿಲಿಕಾನ್ ಸಿಟಿ ಬೆಂಗಳೂರಿನ ಬಸವನಗುಡಿಯಲ್ಲಿ ತೀವ್ರ ಆಘಾತಕಾರಿ ಘಟನೆಯೊಂದು ನಡೆದಿದೆ. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಭಾರಿ ಗಾತ್ರದ ಗೇಟ್‌ನ ಜಾಯಿಂಟ್ ವೆಲ್ಡಿಂಗ್ ಮುರಿದುಬಿದ್ದ ಪರಿಣಾಮ, ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಶನೇಶ್ವರ ದೇವಸ್ಥಾನದ ಅರ್ಚಕರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸವನಗುಡಿಯ ಬೃಂದಾವನ ನಗರದಲ್ಲಿ ಇಂದು (ಜು.11) ಮಧ್ಯಾಹ್ನ ಸುಮಾರು 1:30ರ ವೇಳೆಗೆ ಈ ದುರ್ಘಟನೆ ನಡೆದಿದೆ. ಗಾಯಗೊಂಡ ಅರ್ಚಕರನ್ನು ಮಧು ಎಂದು ಗುರುತಿಸಲಾಗಿದೆ. ಸ್ಥಳೀಯರ ಮಾಹಿತಿಯ ಪ್ರಕಾರ, ಅರ್ಚಕ ಮಧು ಅವರು ಮಧ್ಯಾಹ್ನದ ವೇಳೆ ಬೃಂದಾವನ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ಗೇಟ್ ಪಕ್ಕದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಆರೋಗ್ಯ ಕೇಂದ್ರದ ಬೃಹತ್ ಕಬ್ಬಿಣದ ಗೇಟ್‌ನ ಜಾಯಿಂಟ್ ವೆಲ್ಡಿಂಗ್ ದಿಢೀರನೆ ಕಟ್ ಆಗಿದೆ. ಈ ಭಾರಿ ತೂಕದ ಕಬ್ಬಿಣದ ಗೇಟ್ ನೇರವಾಗಿ ನಡೆದು ಹೋಗುತ್ತಿದ್ದ ಮಧು ಅವರ ಮೇಲೆಯೇ ಮುರಿದುಬಿದ್ದಿದೆ ಗೇಟ್‌ನ ಅಡಿಯಲ್ಲೇ ಕೆಲ ಹೊತ್ತು ಒದ್ದಾಡಿದ್ದಾರೆ. ಗೇಟ್ ಬಿದ್ದ ತಕ್ಷಣ ಜೋರಾದ ಶಬ್ದ ಕೇಳಿ ಧಾವಿಸಿ ಬಂದ ಸ್ಥಳೀಯರು ಭಾರಿ ಗಾತ್ರದ ಕಬ್ಬಿಣದ ಗೇಟನ್ನು ಮೇಲಕ್ಕೆ ಎತ್ತಿದ್ದಾರೆ. ಸ್ಥಳೀಯರು ತಕ್ಷಣವೇ ಗೇಟ್ ತಗೆದು ಮಧು ಅವರನ್ನು ಹೊರಗೆಳೆದಿದ್ದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಭಾರಿ ತೂಕದ ಗೇಟ್ ಬೆನ್ನಿನ ಮೇಲೆ ಬಿದ್ದ ರಭಸಕ್ಕೆ ಮಧು ಅವರ ಬೆನ್ನುಮೂಳೆಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದಿದೆ. ಗಾಯಾಳು ಅರ್ಚಕನನ್ನು ತಕ್ಷಣವೇ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅಲ್ಲಿ ಅವರಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜುಲೈ 26ಕ್ಕೆ ರಿಲೀಸ್ ಆಗಲ್ಲ ‘ಜನ ನಾಯಗನ್’? ಕುತೂಹಲ ಮೂಡಿಸಿದ ಹೊಸ ಪೋಸ್ಟರ್ – Kannada News | Jana Nayagan Movie Gets A Certificate; Release Date Kept Suspense in New Poster

ಬಹುನಿರೀಕ್ಷಿತ ‘ಜನ ನಾಯಗನ್’ ಚಿತ್ರ (Jana Nayagan) ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ಆದರೆ, ಸಿನಿಮಾ ರಿಲೀಸ್ ವಿಳಂಬ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಈ ಚಿತ್ರದ ದೀರ್ಘಕಾಲದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಸೆನ್ಸಾರ್ ಮಂಡಳಿಯು ಈ ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್ ನೀಡಿದೆ. ಈ ಮೂಲಕ ಚಿತ್ರಮಂದಿರಕ್ಕೆ ಬರಲು ಸಿನಿಮಾ ಸಿದ್ಧವಾಗಿದೆ. ಆದರೆ, ಅಭಿಮಾನಿಗಳಿಗೆ ಬೇಸರವಾಗುವ ಒಂದು ಸುದ್ದಿ ಸಿಕ್ಕಿದೆ. ಮೊದಲು ಈ ಸಿನಿಮಾವನ್ನು ಜುಲೈ 26 ರಂದು ತೆರೆಗೆ ತರಲು ಚಿತ್ರತಂಡ ಯೋಜಿಸಿತ್ತು ಎನ್ನಲಾಗಿತ್ತು. ಆದರೆ, ಈಗ ಬಿಡುಗಡೆಯಾದ ಹೊಸ ಪೋಸ್ಟರ್‌ನಲ್ಲಿ ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಿಸಿಲ್ಲ. ಇದು ಸದ್ಯ ಸಿನಿರಂಗದಲ್ಲಿ ದೊಡ್ಡ ಸಸ್ಪೆನ್ಸ್ ಸೃಷ್ಟಿಸಿದೆ.

ಚಿತ್ರತಂಡದ ಸಂದೇಶ

ದಳಪತಿ ವಿಜಯ್ ಅವರ ಪೋಸ್ಟರ್​ ರಿಲೀಸ್ ಆಗಿದೆ. ಹೊಸ ಪೋಸ್ಟರ್ ಜೊತೆಗೆ ಚಿತ್ರತಂಡವು ಯುವ ಪೀಳಿಗೆಯ ಸ್ಟೈಲ್‌ನಲ್ಲಿ ಒಂದು ವಿಶೇಷ ಸಂದೇಶ ನೀಡಿದೆ. ಚಿತ್ರಮಂದಿರಗಳಲ್ಲಿ ಶೀಘ್ರದಲ್ಲೇ ಭೇಟಿಯಾಗೋಣ ಗೆಳೆಯರೇ ಎಂದು ಬರೆದುಕೊಂಡಿದೆ. ದಿನಾಂಕ ರಿವೀಲ್ ಮಾಡದಿದ್ದರೂ, ಸಿನಿಮಾ ಅತಿ ಶೀಘ್ರದಲ್ಲೇ ಥಿಯೇಟರ್‌ಗೆ ಬರಲಿದೆ ಎಂದು ಚಿತ್ರತಂಡ ಭರವಸೆ ನೀಡಿದೆ. ವಿಜಯ್ ಹಿಂಭಾಗದಲ್ಲಿ A ಎಂದು ಬರೆಯಲಾಗಿದೆ.

‘ಜನ ನಾಯಗನ್’ ಸಿನಿಮಾದ ಸೆನ್ಸಾರ್ ವಿವಾದವೇನು?

ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಅನುಮತಿ ಸಿಗಲು ದೀರ್ಘಕಾಲದ ಹೋರಾಟ ನಡೆಸಬೇಕಾಯಿತು. ಚಿತ್ರದಲ್ಲಿ ಪ್ರಚೋದನಾತ್ಮಕ ಸಂಭಾಷಣೆಗಳಿವೆ ಎಂಬ ಕಾರಣಕ್ಕೆ ಸೆನ್ಸಾರ್ ಮಂಡಳಿಯು ಚಿತ್ರಕ್ಕೆ ಕತ್ತರಿ ಹಾಕಲು ಸೂಚಿಸಿತ್ತು. ಚಿತ್ರದ ಕಥೆಯ ನೈಜತೆಗೆ ಧಕ್ಕೆಯಾಗಬಾರದು ಎಂದು ಚಿತ್ರತಂಡವು ಮಂಡಳಿಯೊಂದಿಗೆ ಸುದೀರ್ಘ ಹೋರಾಟ ನಡೆಸಿತು. ಕೊನೆಗೂ ಚಿತ್ರದ ರಗಡ್ ಕಂಟೆಂಟ್‌ಗೆ ಯಾವುದೇ ದೊಡ್ಡ ಬದಲಾವಣೆ ಮಾಡದೆ, ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್ ನೀಡುವ ಮೂಲಕ ವಿವಾದಕ್ಕೆ ಈಗ ತೆರೆ ಬಿದ್ದಿದೆ.

ಇದನ್ನೂ ಓದಿ: ‘ಜನ ನಾಯಗನ್’ ಸೆನ್ಸಾರ್ ಪ್ರಕ್ರಿಯೆ ಪೂರ್ಣ: ಸಿಎಂ ವಿಜಯ್ ಚಿತ್ರಕ್ಕೆ ‘A’ ಪ್ರಮಾಣಪತ್ರ

ವಿಜಯ್ ಅವರು ರಾಜಕೀಯದಲ್ಲಿ ಬ್ಯುಸಿ ಇದ್ದಾರೆ. ತಮಿಳಗ ವೆಟ್ರಿ ಕಳಗಂ ಪಕ್ಷದ ಮೂಲಕ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ವಿಜಯ್, ಸದ್ಯ ರಾಜ್ಯದ ಆಡಳಿತ ಮತ್ತು ಜನಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಇದು ಅವರ ಕೊನೆಯ ಸಿನಿಮಾ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಆರ್​​ಎಸ್​ಎಸ್​​ನವರು ಯಾವಾಗೆಲ್ಲಾ ಸಭೆ ಸೇರುತ್ತಾರೋ, ಆವಾಗೆಲ್ಲಾ ಗಲಭೆಗಳಾಗಿವೆ: ಪ್ರಿಯಾಂಕ್​ ಖರ್ಗೆ – Kannada News | Riots Have Occurred Whenever RSS Has Held Meetings: Priyank Kharge

ಸಚಿವ ಪ್ರಿಯಾಂಕ್ ಖರ್ಗೆImage Credit source: tv9 kannada

ಬೆಂಗಳೂರು, ಜುಲೈ 11: ಬೆಳಗಾವಿಯಲ್ಲಿ ಆರ್‌ಎಸ್‌ಎಸ್‌ನ (RSS) ಮಹತ್ವದ ಸಭೆ ನಡೆಯುತ್ತಿದ್ದರೆ, ಇತ್ತ ಕಾಂಗ್ರೆಸ್​ ನಾಯಕರು ಸಂಘಪರಿವಾರದ ವಿರುದ್ಧ ಮುಗಿಬಿದ್ದಿದ್ದಾರೆ. ಈ ಹಿಂದೆ ಇವರ ಸಭೆ ಆದಾಗ ಎಂ.ಎಂ.ಕಲ್ಬುರ್ಗಿ, ಗೌರಿ ಲಂಕೇಶ್ ಹತ್ಯೆಯಾಗಿತ್ತು, ಈ ಸಭೆ ಬಳಿಕ ಏನಾಗುತ್ತೆ ಅಂತಾ ನೋಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಸ್ಫೋಟಕ ಹೇಳಿಕೆ ನೀಡಿದ್ದರು. ಇದೀಗ ಅವರ ಹೇಳಿಕೆಗೆ ಗೃಹಸಚಿವ ಪ್ರಿಯಾಂಕ್​ ಖರ್ಗೆ (Priyank Kharge) ಸಮರ್ಥನೆ ನೀಡಿದ್ದು, ‘‘ಇವರು ಈ ರೀತಿ ಸಭೆ ಸೇರುತ್ತಾರೋ ಆವಾಗೆಲ್ಲಾ ಗಲಭೆಗಳಾಗಿವೆ’’ ಎಂದಿದ್ದಾರೆ.

ಇವರು ಈ ರೀತಿ ಸಭೆ ಸೇರಿದಾಗೆಲ್ಲಾ ಗಲಭೆಗಳಾಗಿವೆ: ಪ್ರಿಯಾಂಕ್​ ಖರ್ಗೆ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹಸಚಿವ ಪ್ರಿಯಾಂಕ್​ ಖರ್ಗೆ, ‘‘ಆರ್‌ಎಸ್‌ಎಸ್‌ ಸಮಾವೇಶಗಳಾದ ಮೇಲೆ ಕೊಲೆಗಳಾಗಿರಬಹುದು, ಘಟನೆಗಳಾಗಿರಬಹುದು ಅವೆಲ್ಲಾ ನಡೆದಿರುವುದಕ್ಕೆ ಇತಿಹಾಸ ಇದೆಯಲ್ಲ. ಎಲ್ಲವೂ ಸಾಕ್ಷ್ಯಗಳ ಆಧಾರವೇ ಅಲ್ಲವೇ. ವಾಸ್ತವಾಂಶ ಪರಿಶೀಲಿಸಿದರೆ ಯಾವಾಗ ಇವರು ಈ ರೀತಿ ಸಭೆ ಸೇರುತ್ತಾರೋ ಆವಾಗೆಲ್ಲಾ ಗಲಭೆಗಳಾಗಿವೆ. ಇಂಟೆಲಿಜೆನ್ಸ್ ಕಡೆಯಿಂದ ನಮಗೂ ಕೆಲ ಮಾಹಿತಿ ಬಂದಿದ್ದು, ಸೂಕ್ತ ಸಮಯದಲ್ಲಿ ಹೇಳುತ್ತೇನೆ’’ ಎಂದಿದ್ದಾರೆ.

ಇದನ್ನೂ ಓದಿ: RSS ಸಭೆ ಬಳಿಕ ಏನಾದರೂ ಅನಾಹುತ ಆಗೇ ಆಗಿದೆ: ಈಗೇನಾಗುತ್ತೆ ನೋಡಬೇಕು; ಬಿಕೆ ಹರಿಪ್ರಸಾದ್

‘‘ಇನ್ನು ಯಾರೇ ಆಗಲಿ ರಾಜ್ಯದಲ್ಲಿ ಏನಾದರೂ ಗಲಾಟೆ ಮಾಡುವುದಾಗಲಿ, ಶಾಂತಿ‌ ಕದಡುವುದಾಗಲಿ ಮಾಡಿದರೇ ಗೃಹ ಇಲಾಖೆ ಸುಮ್ಮನೆ ಕೂರಲ್ಲ. ಯಾವುದೇ ಸಮಾಜದ ಸಂಘಟನೆ ಇರಬಹುದು. ಸಮಾಜದಲ್ಲಿ ಶಾಂತಿ ಕದಡಲು ನಾವು ಬಿಡುವುದಿಲ್ಲ. ನಮ್ಮ ಬಳಿ ಕೆಲವು ಮಾಹಿತಿ ಇವೆ, ಇವರೇನಾದರೂ ಬಾಲ‌ ಬಿಚ್ಚಿದರೆ, ಅದು ಯಾವುದೇ ಸಂಘಟನೆ ಇರಬಹುದು ಗೃಹ ಇಲಾಖೆ ಸುಮ್ಮನೆ ಕೂರಲ್ಲ’’ ಎಂದು ಪ್ರಿಯಾಂಕ್​ ಖರ್ಗೆ ಖಡಕ್​ ಎಚ್ಚರಿಕೆ ನೀಡಿದ್ದಾರೆ.

ಬಿಕೆ ಹರಿಪ್ರಸಾದ್​​ ಹೇಳಿದ್ದೇನು?

RSS ಸಭೆ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ನಿನ್ನೆ ಸ್ಫೋಟಕ ಹೇಳಿಕೆ ನೀಡಿದ್ದರು. ‘‘ಹಿಂದೆ ಇವರ ಸಭೆ ಆದಾಗ ಎಂ.ಎಂ.ಕಲ್ಬುರ್ಗಿ, ಗೌರಿ ಲಂಕೇಶ್ ಹತ್ಯೆಯಾಗಿತ್ತು, ಈ ಬೆಳಗಾವಿ ಸಭೆ ಬಳಿಕ ಏನಾಗುತ್ತೆ ಅಂತಾ ನೋಡಬೇಕು’’ ಎಂದು ಹೇಳಿದರು. ಬಿ.ಕೆ. ಹರಿಪ್ರಸಾದ್ ಈ ಹೇಳಿಕೆ ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಬಿಜೆಪಿ ನಾಯಕರು ಕಿಡಿಕಾರುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 4:39 pm, Sat, 11 July 26

Source link

ಒನ್ ನೇಷನ್ ಒನ್ ಎಲೆಕ್ಷನ್‌ನಿಂದ ರಾಜ್ಯಗಳ ಅಧಿಕಾರ ಕಸಿಯಲ್ಲ: ಇಂದಿರಾ ಗಾಂಧಿ ಕಾಲದ ಅಸಹಿಷ್ಣುತೆ ನೆನಪಿಸಿದ ಸಚಿವ ಪ್ರಹ್ಲಾದ್ ಜೋಶಿ – Kannada News | Gadag: Prahlad Joshi Slams Rahul Gandhi on One Nation One Election, Cites Congress History

ಪ್ರಹ್ಲಾದ್ ಜೋಶಿ ಮತ್ತು ರಾಹುಲ್​ ಗಾಂಧಿ

ಗದಗ, ಜು.11: ಒನ್ ನೇಷನ್, ಒನ್ ಎಲೆಕ್ಷನ್ (ಒಂದೇ ದೇಶ, ಒಂದೇ ಚುನಾವಣೆ) ಜಾರಿಗೆ ಬಂದರೆ ದೇಶದ ಫೆಡರಲ್ ಅಥವಾ ಒಕ್ಕೂಟ ವ್ಯವಸ್ಥೆ ಹಾಳಾಗುತ್ತದೆ ಎನ್ನುವುದೆಲ್ಲಾ ಸಂಪೂರ್ಣ ಅರ್ಥವಿಲ್ಲದ ಸಂಗತಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಹೇಳಿದ್ದಾರೆ. ಗದಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಯೋಜನೆಯ ಜಾರಿ ಪ್ರಕ್ರಿಯೆ ಹಾಗೂ ಇದರ ವಿರುದ್ಧ ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

‘ಒನ್ ನೇಷನ್, ಒನ್ ಎಲೆಕ್ಷನ್’ ಜಾರಿ ಪ್ರಕ್ರಿಯೆಯ ಕುರಿತು ಮಾಹಿತಿ ನೀಡಿದ ಅವರು, “ಸದ್ಯ ಈ ವಿಷಯಕ್ಕೆ ಸಂಬಂಧಿಸಿದಂತೆ ಜಂಟಿ ಸಂಸದೀಯ ಸಮಿತಿಯ (JPC) ವರದಿಯನ್ನು ಮೊದಲು ಲೋಕಸಭಾ ಸ್ಪೀಕರ್ ಅವರಿಗೆ ಸಲ್ಲಿಕೆ ಮಾಡಬೇಕಾಗುತ್ತದೆ. ಸ್ಪೀಕರ್ ಅವರಿಗೆ ವರದಿ ಸಲ್ಲಿಕೆಯಾದ ಬಳಿಕವಷ್ಟೇ ಅದು ಸರ್ಕಾರದ ಕೈ ಸೇರಲಿದೆ. ತದನಂತರ ಕೇಂದ್ರ ಸರ್ಕಾರವು ಆ ವರದಿಯನ್ನು ಸಮಗ್ರವಾಗಿ ಪರಿಶೀಲನೆ ನಡೆಸಲಿದ್ದು, ಆ ಬಳಿಕವಷ್ಟೇ ಮುಂದಿನ ಅಂತಿಮ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತದೆ,” ಎಂದು ಪ್ರಕ್ರಿಯೆಯನ್ನು ವಿವರಿಸಿದರು.

ಕಾಂಗ್ರೆಸ್ ಮಾಡುತ್ತಿರುವ ಒಕ್ಕೂಟ ವ್ಯವಸ್ಥೆಯ ಧಕ್ಕೆ ಆರೋಪವನ್ನು ತಳ್ಳಿಹಾಕಿದ ಜೋಶಿ, “ಕೇಂದ್ರ ಸರ್ಕಾರವು ರಾಜ್ಯಗಳ ಅಧಿಕಾರವನ್ನು ಕಸಿದುಕೊಂಡರೆ ಮಾತ್ರ ಫೆಡರಲ್ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತದೆ. ಆದರೆ, ಸಂವಿಧಾನದತ್ತವಾಗಿ ರಾಜ್ಯಗಳಿಗೆ ಸಿಕ್ಕಿರುವ ಅಧಿಕಾರಗಳು ಮತ್ತು ಹಕ್ಕುಗಳು ಹಾಗೇ ಇರುತ್ತವೆ. ಹೀಗಿದ್ದೂ ಒಕ್ಕೂಟ ವ್ಯವಸ್ಥೆ ಹಾಳಾಗುತ್ತದೆ ಎಂದು ಕಾಂಗ್ರೆಸ್ ಪಕ್ಷದವರು ಹಾಸ್ಯಾಸ್ಪದ ಹಾಗೂ ಸತ್ಯಕ್ಕೆ ದೂರವಾದ ಮಾತು ಎಂದು ಕಿಡಿಕಾರಿದರು.

ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕೂಡು ಕಿಡಿಕಾರಿದ್ದಾರೆ. ರಾಹುಲ್ ಗಾಂಧಿ ಅವರು ಪಕ್ಷದಲ್ಲಿ ಇರೋದರಿಂದಲೇ ಕಾಂಗ್ರೆಸ್ ಸ್ಥಿತಿ ಇಂದು ಹೀಗಾಗಿದೆ. ಅವರು ಯಾವಾಗಲೂ ಅತ್ಯಂತ ಬಾಲಿಶವಾಗಿ ಮಾತನಾಡುತ್ತಾರೆ. ಕಾಂಗ್ರೆಸ್‌ನಲ್ಲಿ ಯಾರಾದರೂ ಉಳಿದ ನಾಯಕರು ಲಾಜಿಕಲ್ ಆಗಿ ಅಥವಾ ಅರ್ಥಗರ್ಭಿತವಾಗಿ ಮಾತನಾಡಲು ಹೋದರೆ, ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲಾಗುತ್ತದೆ. ರಾಹುಲ್ ಗಾಂಧಿ ಅವರು ಹೇಗೆ ಮಾತನಾಡುತ್ತಾರೋ, ಉಳಿದವರೂ ಸಹ ಅದೇ ರಾಗ ಆಡಬೇಕು ಎನ್ನುವ ಸ್ಥಿತಿ ಅಲ್ಲಿ ನಿರ್ಮಾಣವಾಗಿದೆ ಎಂದು ಟೀಕಿಸಿದರು.

ಇಡೀ ದೇಶದಲ್ಲಿ ಬಿಜೆಪಿಗೆ ನ್ಯಾಷನಲ್ ಪ್ರೆಜೆನ್ಸ್ (ರಾಷ್ಟ್ರೀಯ ಅಸ್ತಿತ್ವ) ಇದೆ, ಇದರಿಂದ ಒನ್ ನೇಷನ್ ಒನ್ ಎಲೆಕ್ಷನ್ ತಂದರೆ ಬಿಜೆಪಿಗೆ ಅನುಕೂಲವಾಗುತ್ತದೆ ಎಂದು ಕಾಂಗ್ರೆಸ್‌ನವರು ಅಳುತ್ತಿದ್ದಾರೆ. ದೇಶದಲ್ಲಿ ನಿಮಗೆ ರಾಷ್ಟ್ರೀಯ ಅಸ್ತಿತ್ವ ಇಲ್ಲದೇ ಹೋದರೆ ಅದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ತಪ್ಪಿತಸ್ಥರೇ? ಅದು ನಿಮ್ಮ ರಾಹುಲ್ ಗಾಂಧಿಯವರ ತಪ್ಪು. ಇಲ್ಲಿರುವ ಕಾಂಗ್ರೆಸ್ ಮಂತ್ರಿಗಳಿಗೆ ಹಾಗೂ ರಾಜ್ಯಾಧ್ಯಕ್ಷರಿಗೆ ತಾವು ಏನು ಮಾತನಾಡುತ್ತಿದ್ದೇವೆ ಎನ್ನುವ ಕನಿಷ್ಠ ಪ್ರಜ್ಞೆಯೂ ಇಲ್ಲ ಎಂದು ಲೇವಡಿ ಮಾಡಿದರು.

ಇದನ್ನೂ ಓದಿ: ಮೈಸೂರು ದಸರಾದಲ್ಲಿ ಕಂಬಳಕ್ಕೆ ಭಾರಿ ವಿರೋಧ: ಯದುವೀರ್ ಆಕ್ಷೇಪ ಬೆನ್ನಲ್ಲೇ ಹೆಚ್‌ಡಿಕೆ ವಾಗ್ದಾಳಿ
ದೇಶದಲ್ಲಿ ಅಸಹಿಷ್ಣುತೆ ಹಾಗೂ ಪ್ರಜಾಪ್ರಭುತ್ವ ವಿರೋಧಿ ನೀತಿಗಳು ಆರಂಭವಾಗಿದ್ದು ಪಂಡಿತ ಜವಾಹರಲಾಲ್ ನೆಹರು ಅವರ ಕಾಲದಲ್ಲೇ. ಅದನ್ನು ಮುಂದುವರಿಸಿದ ಇಂದಿರಾ ಗಾಂಧಿಯವರು ರಾಜ್ಯ ಸರ್ಕಾರಗಳನ್ನು ತಮ್ಮ ಮನಬಂದಂತೆ ವಿಸರ್ಜನೆ ಮಾಡಲು ತೀವ್ರ ಯತ್ನ ನಡೆಸಿದ್ದರು. ಆದರೆ, ಇತಿಹಾಸ ಪ್ರಸಿದ್ಧ ಎಸ್.ಆರ್. ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಒಂಬತ್ತು ಜನ ನ್ಯಾಯಾಧೀಶರ ಪೀಠವು ಐತಿಹಾಸಿಕ ತೀರ್ಪು ನೀಡಿದ ಬಳಿಕವಷ್ಟೇ ಕಾಂಗ್ರೆಸ್‌ನವರು ಹಿಂದೆ ಸರಿದರು. ಇಲ್ಲದಿದ್ದರೆ ತಮ್ಮ ಮನಸ್ಸಿಗೆ ಬಂದಾಗಲೆಲ್ಲಾ ಚುನಾವಣೆ ಮಾಡುತ್ತಿದ್ದರು. ಪಕ್ಷವನ್ನು ಗಟ್ಟಿಯಾಗಿ ಕಟ್ಟುವುದು ಆಯಾ ಪಾರ್ಟಿಯ ಕೆಲಸ. ನೀವು ಬೇಕಿದ್ದರೆ ರಾಹುಲ್ ಗಾಂಧಿ ನೇತೃತ್ವದಲ್ಲೇ ಪಕ್ಷ ಕಟ್ಟಿ ಜನಾಭಿಪ್ರಾಯ ಗಳಿಸಿ, ಅದಕ್ಕೆ ನಮ್ಮದೇನು ಅಭ್ಯಂತರವಿಲ್ಲ ಎಂದು ಸವಾಲು ಹಾಕಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಬಾಕಿ ಸಂಭಾವನೆ ಕೊಟ್ಟಿದ್ದಾರೆ, ಆದರೆ ಪ್ರಚಾರಕ್ಕೆ ಬರಬೇಡಿ ಎಂದಿದ್ದಾರೆ’; ಪ್ರಜ್ವಲ್ ದೇವರಾಜ್ – Kannada News | Prajwal Devaraj Clarifies Karavali Movie Controversy Over Dubbing and Remuneration Issues

‘ಕರಾವಳಿ’ ಸಿನಿಮಾದ (Karavali Movie) ಸುತ್ತ ಸಾಕಷ್ಟು ವಿವಾದ ಎದ್ದಿದೆ. ಪ್ರತಿ ಹಂತದಲ್ಲೂ ಪ್ರಜ್ವಲ್ ಅವರದ್ದೇ ತಪ್ಪು ಎಂದು ಆರೋಪಿಸಲಾಗುತ್ತಿದೆ. ಈ ವಿವಾದದ ಕುರಿತು ನಟ ಪ್ರಜ್ವಲ್ ದೇವರಾಜ್ ಅವರು ಅಧಿಕೃತ ಹೇಳಿಕೆಯೊಂದನ್ನು ಬಿಡುಗಡೆ ಮಾಡುವ ಮೂಲಕ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಚಿತ್ರದ ನಿರ್ಮಾಣ ಸಂಸ್ಥೆ ಹಾಗೂ ನಿರ್ದೇಶಕ ಗುರುದತ್ ಗಣಿಗ ಅವರು ಸಾರ್ವಜನಿಕವಾಗಿ ನೀಡುತ್ತಿರುವ ಹೇಳಿಕೆಗಳಿಗೆ ಪ್ರತಿಕ್ರಿಯಿಸಿರುವ ಅವರು, ಅಭಿಮಾನಿಗಳು ಮತ್ತು ಮಾಧ್ಯಮಗಳ ಮುಂದೆ ಕೆಲವು ವಾಸ್ತವಾಂಶಗಳನ್ನು ಹಂಚಿಕೊಂಡಿದ್ದಾರೆ.

ವಿವಾದಕ್ಕೆ ಅಸಲಿ ಕಾರಣವೇನು?

‘ಚಿತ್ರದ ಟ್ರೇಲರ್ ಬಿಡುಗಡೆಯಾದಾಗ, ನನ್ನ ಯಾವುದೇ ಪೂರ್ವ ಮಾಹಿತಿ ಅಥವಾ ಅನುಮತಿಯಿಲ್ಲದೆ ನನ್ನ ಪಾತ್ರಕ್ಕೆ ಮತ್ತೊಬ್ಬರಿಂದ ಡಬ್ಬಿಂಗ್ ಮಾಡಿಸಲಾಗಿತ್ತು. ಅಷ್ಟೇ ಅಲ್ಲದೆ, ನನಗೆ ಒಪ್ಪಿಗೆಯಾಗಿದ್ದ ಸಂಭಾವನೆಯೂ ಸಂಪೂರ್ಣವಾಗಿ ಪಾವತಿಯಾಗಿರಲಿಲ್ಲ. ಇದೇ ಕಾರಣಕ್ಕೆ ನಾನು ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಗೈರಾಗಿದ್ದೆ’ ಎಂದು ಪ್ರಜ್ವಲ್ ಹೇಳಿಕೆಯಲ್ಲಿ ಬರೆದುಕೊಂಡಿದ್ದಾರೆ.

ಹೇಳಿದ್ದನ್ನು ಮಾಡಿರಲಿಲ್ಲ ಎಂಬುದಕ್ಕೆ ಉತ್ತರ

ಪ್ರಜ್ವಲ್ ದೇವರಾಜ್ ಅವರು ಸ್ವಲ್ಪ ತೆಳ್ಳಗಾಗಬೇಕಿತ್ತು, ಆದರೆ ಅವರು ಅದನ್ನು ಮಾಡಿಲ್ಲ ಎಂದು ಚಿತ್ರತಂಡ ಹೇಳಿಕೆ ನೀಡಿತ್ತು. ಆದರೆ ಇದನ್ನು ನಿರಾಕರಿಸಿರುವ ಪ್ರಜ್ವಲ್, ‘ನನ್ನ ಸಿಕ್ಸ್-ಪ್ಯಾಕ್ ಲುಕ್‌ಗೂ ಈ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ. ಅನುಮತಿಯಿಲ್ಲದ ಡಬ್ಬಿಂಗ್ ಮತ್ತು ಬಾಕಿ ಇದ್ದ ಸಂಭಾವನೆಯೇ ಇದಕ್ಕೆ ಮೂಲ ಕಾರಣ. ಬಾಕಿ ಹಣ ಪಾವತಿಸಿದ ತಕ್ಷಣ ಡಬ್ಬಿಂಗ್ ಮಾಡಲು ಮತ್ತು ಪ್ರಚಾರದಲ್ಲಿ ಭಾಗವಹಿಸಲು ನಾನು ಸಿದ್ಧನಿದ್ದೆ’ ಎಂದಿದ್ದಾರೆ.

ಪ್ರಚಾರದಿಂದ ಹೊರಗಿಟ್ಟಿದ್ದು ಚಿತ್ರತಂಡ

ಟ್ರೇಲರ್ ಬಿಡುಗಡೆಯಾದ ಮರುದಿನ ಜಿಎಸ್‌ಟಿ ಹೊರತುಪಡಿಸಿ ಬಾಕಿ ಸಂಭಾವನೆಯನ್ನು ಪಾವತಿಸಲಾಯಿತು ಎಂದು ಪ್ರಜ್ವಲ್ ಹೇಳಿದ್ದಾರೆ. ‘ಹಣ ಸಂದಾಯವಾದ ಬೆನ್ನಲ್ಲೇ, ಚಿತ್ರತಂಡವು ನನ್ನ ಮ್ಯಾನೇಜರ್‌ಗೆ ಕರೆ ಮಾಡಿ ಇನ್ನು ಮುಂದೆ ಡಬ್ಬಿಂಗ್​​ಗೆ ಬರಬೇಡಿ, ಚಿತ್ರದ ಪ್ರಚಾರದಲ್ಲಿ ಭಾಗವಹಿಸೋದು ಬೇಡ ಎಂದಿದ್ದಾರೆ. ಹೀಗಾಗಿ ಚಿತ್ರದಿಂದ ದೂರ ಉಳಿದಿರುವುದು ನನ್ನ ಸ್ವಂತ ನಿರ್ಧಾರವಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಾರ್ವಜನಿಕ ಹೇಳಿಕೆಗೆ ಬೇಸರ

ತಮ್ಮ ಧ್ವನಿ ಈ ಪಾತ್ರಕ್ಕೆ ಸೂಕ್ತವಲ್ಲ ಎಂಬ ಚಿತ್ರತಂಡದ ಸಾರ್ವಜನಿಕ ಹೇಳಿಕೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿರುವ ನಟ, ‘ನನಗೆ ಡಬ್ಬಿಂಗ್ ಮಾಡಲು ಅವಕಾಶವನ್ನೇ ನೀಡದೆ ಈ ರೀತಿ ಹೇಳಿರುವುದು ನೋವುಂಟು ಮಾಡಿದೆ. ಎರಡು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ನಾನು ಗಳಿಸಿರುವ ವೃತ್ತಿಪರ ಗೌರವ ಮತ್ತು ಪ್ರೇಕ್ಷಕರ ಪ್ರೀತಿಗೆ ಧಕ್ಕೆ ತರುವ ಇಂತಹ ಬೆಳವಣಿಗೆಗಳು ಬೇಸರ ತರಿಸಿವೆ’ ಎಂದಿದ್ದಾರೆ.

ವಿವಾದಕ್ಕೆ ಪೂರ್ಣ ವಿರಾಮ

ಈ ವಿಷಯದ ಕುರಿತು ಸಾರ್ವಜನಿಕವಾಗಿ ನಡೆಯುವ ಚರ್ಚೆ ಮತ್ತು ವಾಗ್ವಾದಗಳಿಗೆ ತಾವು ಇಲ್ಲೇ ಪೂರ್ಣ ವಿರಾಮ ಇಡುತ್ತಿರುವುದಾಗಿ ಪ್ರಜ್ವಲ್ ಹೇಳಿದ್ದಾರೆ. ಇನ್ನು ಮುಂದೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ವೈಯಕ್ತಿಕ ಭಿನ್ನಾಭಿಪ್ರಾಯಗಳು ಚಿತ್ರತಂಡದ ಪರಿಶ್ರಮವನ್ನು ಮರೆಮಾಚಬಾರದು ಎಂದು ಆಶಿಸಿದ್ದಾರೆ.

ಇದನ್ನೂ ಓದಿ: ‘ಕರಾವಳಿ’ ಸಿನಿಮಾ ಹಾಡಿಗೆ ಹಿರಿಯ ಗಾಯಕಿ ಬಿ ಜಯಶ್ರೀ ಧ್ವನಿ

‘ಕರಾವಳಿ’ ಚಿತ್ರದ ತಂಡಕ್ಕೆ ಶುಭ ಹಾರೈಸಿರುವ ಪ್ರಜ್ವಲ್ ದೇವರಾಜ್, ಅಭಿಮಾನಿಗಳು ಮತ್ತು ಸಿನಿಪ್ರೇಕ್ಷಕರು ಚಿತ್ರಮಂದಿರಗಳಿಗೆ ತೆರಳಿ ಸಿನಿಮಾವನ್ನು ವೀಕ್ಷಿಸಿ ಪ್ರೋತ್ಸಾಹಿಸಬೇಕೆಂದು ವಿನಂತಿಸಿದ್ದಾರೆ. ಅಲ್ಲದೆ ಕಷ್ಟದ ಸಮಯದಲ್ಲಿ ತಮಗೆ ಬೆಂಬಲವಾಗಿ ನಿಂತ ಮಾಧ್ಯಮ ಮಿತ್ರರಿಗೆ ಹಾಗೂ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 4:46 pm, Sat, 11 July 26

Source link

Free AI Course: ಲಕ್ಷಾಂತರ ರೂ. ಖರ್ಚು ಮಾಡಿ AI ಕಲಿಯಬೇಕಾಗಿಲ್ಲ; ಭಾರತ ಸರ್ಕಾರದಿಂದಲೇ ಸಿಗಲಿದೆ ಉಚಿತ ತರಬೇತಿ ಮತ್ತು ಪ್ರಮಾಣಪತ್ರ – Kannada News | India Govt’s Free AI Course: Get Certified in 4 Hrs with Youth AI for All

ಇಂದಿನ ಆಧುನಿಕ ಯುಗದಲ್ಲಿ ಕೃತಕ ಬುದ್ಧಿಮತ್ತೆ (Artificial Intelligence – AI) ಎಂಬುದು ಕೇವಲ ತಂತ್ರಜ್ಞಾನವಾಗಿ ಉಳಿದಿಲ್ಲ. ಅದು ನಮ್ಮ ಶಿಕ್ಷಣ, ಉದ್ಯೋಗ ಮತ್ತು ದೈನಂದಿನ ಕೆಲಸ ಕಾರ್ಯಗಳಲ್ಲಿ ಅತ್ಯಗತ್ಯ ಹಾಗೂ ಅವಿಭಾಜ್ಯ ಅಂಗವಾಗುತ್ತಿದೆ. ಭವಿಷ್ಯದಲ್ಲಿ ಉದ್ಯೋಗ ಮಾರುಕಟ್ಟೆಯಲ್ಲಿ ಮುಂದುವರಿಯಲು AI ಜ್ಞಾನ ಇರಲೇಬೇಕು ಎನ್ನುವ ವಾತಾವರಣ ನಿರ್ಮಾಣವಾಗಿದೆ. ಆದರೆ ಇದಕ್ಕಾಗಿ ನೀವು ದುಬಾರಿ ಕೋರ್ಸ್‌ಗಳಿಗೆ ಹಣ ವೆಚ್ಚ ಮಾಡಬೇಕಾಗಿಲ್ಲ! ಜನಸಾಮಾನ್ಯರಿಗೆ AI ಬಗ್ಗೆ ಮೂಲಭೂತ ತಿಳುವಳಿಕೆಯನ್ನು ನೀಡಲು ಭಾರತ ಸರ್ಕಾರವೇ ಒಂದು ಉಚಿತ ಆನ್‌ಲೈನ್ ಕೋರ್ಸ್ ಅನ್ನು ಪ್ರಾರಂಭಿಸಿದೆ.

ಸರ್ಕಾರದ ಉಚಿತ AI ಸಾಕ್ಷರತಾ ಅಭಿಯಾನ: ಏನಿದರ ಉದ್ದೇಶ?

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ತನ್ನ ‘ಇಂಡಿಯಾಎಐ ಮಿಷನ್’ ಅಡಿಯಲ್ಲಿ “ಎಲ್ಲರಿಗೂ ಯುವ AI” (Youth AI for All) ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ದೇಶದ ಮೂಲೆ ಮೂಲೆಯ ನಾಗರಿಕರಿಗೂ ಕೃತಕ ಬುದ್ಧಿಮತ್ತೆಯ ಮೂಲಭೂತ ಜ್ಞಾನವನ್ನು ತಲುಪಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ. ಸುಮಾರು 1 ಕೋಟಿ (10 ಮಿಲಿಯನ್) ನಾಗರಿಕರಿಗೆ ಮೂಲಭೂತ AI ಕೌಶಲ್ಯಗಳನ್ನು ಕಲಿಸುವ ಮೂಲಕ ಭಾರತವನ್ನು ಭವಿಷ್ಯದ ತಂತ್ರಜ್ಞಾನಕ್ಕೆ ಸಿದ್ಧಪಡಿಸಲು ಸರ್ಕಾರ ಮುಂದಾಗಿದೆ. ಈ ಕೋರ್ಸ್ ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿದ್ದು, ಎಲ್ಲರಿಗೂ ಉಚಿತವಾಗಿ ಲಭ್ಯವಿದೆ.

4 ಗಂಟೆಗಳ ಈ ಕೋರ್ಸ್‌ನಲ್ಲಿ ನೀವು ಏನು ಕಲಿಯುತ್ತೀರಿ?

ಇದು ಕೇವಲ 4 ಗಂಟೆಗಳ ಸ್ವಯಂ-ಕಲಿಕೆಯ (Self-paced) ಆನ್‌ಲೈನ್ ಕೋರ್ಸ್ ಆಗಿದ್ದು, ನಿಮ್ಮ ಬಿಡುವಿನ ವೇಳೆಗೆ ತಕ್ಕಂತೆ ನೀವು ಇದನ್ನು ಪೂರ್ಣಗೊಳಿಸಬಹುದು. ಇಡೀ ಕೋರ್ಸ್ ಅನ್ನು ಆರು ಪ್ರಮುಖ ಮಾಡ್ಯೂಲ್‌ಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ AI ಎಂದರೇನು? ಅದು ಹೇಗೆ ಕೆಲಸ ಮಾಡುತ್ತದೆ? ಶಿಕ್ಷಣ ಮತ್ತು ಉದ್ಯೋಗದಲ್ಲಿ ಅದರ ಬಳಕೆಗಳೇನು? ಎಂಬುದನ್ನು ಸರಳವಾಗಿ ಕಲಿಸಲಾಗುತ್ತದೆ. ಇದರೊಂದಿಗೆ AI ಪರಿಕರಗಳನ್ನು ಸುರಕ್ಷಿತವಾಗಿ ಬಳಸುವುದು ಹೇಗೆ, ಭಾರತದಲ್ಲಿ ಇದರ ಉದಾಹರಣೆಗಳು ಮತ್ತು AI ಗೆ ಸಂಬಂಧಿಸಿದ ಭವಿಷ್ಯದ ವೃತ್ತಿ ಅವಕಾಶಗಳ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಗುತ್ತದೆ. ವಿಶೇಷವೆಂದರೆ, ಈ ಕೋರ್ಸ್ ಹಿಂದಿ, ಇಂಗ್ಲಿಷ್ ಸೇರಿದಂತೆ ಭಾರತದ ಬಹು ಭಾಷೆಗಳಲ್ಲಿ ಲಭ್ಯವಿದೆ.

ಯಾರಿಗೆಲ್ಲಾ ಈ ಕೋರ್ಸ್ ಉಪಯುಕ್ತ? ಯಾರಿಗೆ ಅರ್ಜಿ ಸಲ್ಲಿಸಬಹುದು?

ಈ ಕೋರ್ಸ್ ಕಲಿಯಲು ಯಾವುದೇ ನಿರ್ದಿಷ್ಟ ಶೈಕ್ಷಣಿಕ ಅರ್ಹತೆಯ ಮಿತಿ ಇಲ್ಲ. ಶಾಲಾ-ಕಾಲೇಜು ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಉದ್ಯೋಗದಲ್ಲಿರುವ ವೃತ್ತಿಪರರು, ಶಿಕ್ಷಕರು, ಸ್ವಂತ ಉದ್ಯಮ ನಡೆಸುವವರು, ಗೃಹಿಣಿಯರು ಹಾಗೂ ತಂತ್ರಜ್ಞಾನದ ಬಗ್ಗೆ ಕುತೂಹಲ ಹೊಂದಿರುವ ಯಾವುದೇ ಆಸಕ್ತ ನಾಗರಿಕರು ಈ ಕೋರ್ಸ್‌ಗೆ ನೋಂದಾಯಿಸಿಕೊಳ್ಳಬಹುದು. ಗಣಕಯಂತ್ರ ಹಾಗೂ ಇಂಟರ್ನೆಟ್ ಸಂಪರ್ಕವಿರುವ ಯಾರು ಬೇಕಾದರೂ ಮನೆಯಲ್ಲೇ ಕುಳಿತು ಈ ಜ್ಞಾನವನ್ನು ಉಚಿತವಾಗಿ ಪಡೆಯಬಹುದು.

ಇದನ್ನೂ ಓದಿ: ಕರ್ನಾಟಕ ಅರಣ್ಯ ಇಲಾಖೆಯಲ್ಲಿ 750 ಅರಣ್ಯ ವೀಕ್ಷಕ ಹುದ್ದೆಗಳಿಗೆ ನೇಮಕಾತಿ; 10th ಪಾಸಾಗಿದ್ರೆ ಸಾಕು!

ಸರ್ಕಾರದ ಅಧಿಕೃತ ಪ್ರಮಾಣಪತ್ರ (Certificate) ಪಡೆಯುವುದು ಹೇಗೆ?

ಕೋರ್ಸ್‌ನ ಎಲ್ಲಾ ಆರು ಮಾಡ್ಯೂಲ್‌ಗಳನ್ನು ಯಶಸ್ವಿಯಾಗಿ ಮುಗಿಸಿ, ಕೊನೆಯಲ್ಲಿ ನೀಡಲಾಗುವ ಮೌಲ್ಯಮಾಪನಗಳಲ್ಲಿ (Assessments) ಉತ್ತೀರ್ಣರಾದ ನಂತರ ಭಾರತ ಸರ್ಕಾರದಿಂದ ಅಧಿಕೃತ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಆಸಕ್ತರು ಸರ್ಕಾರದ ಅಧಿಕೃತ ಪೋರ್ಟಲ್‌ಗಳಾದ ಫ್ಯೂಚರ್‌ಸ್ಕಿಲ್ಸ್ ಪ್ರೈಮ್ (FutureSkills Prime) ಅಥವಾ ಮೈ ಭಾರತ್ (MY Bharat) ಪೋರ್ಟಲ್‌ಗಳಿಗೆ ಭೇಟಿ ನೀಡಿ ಉಚಿತವಾಗಿ ಖಾತೆಯನ್ನು ರಚಿಸಿಕೊಂಡು ನೋಂದಾಯಿಸಿಕೊಳ್ಳಬಹುದು. ಕೋರ್ಸ್ ಮುಗಿದ ತಕ್ಷಣವೇ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಪ್ರಮಾಣಪತ್ರವು ನಿಮ್ಮ ರೆಸ್ಯೂಮ್‌ (Resume) ಮತ್ತು ವೃತ್ತಿಪರ ಪ್ರೊಫೈಲ್‌ಗಳ ಮೌಲ್ಯವನ್ನು ಹೆಚ್ಚಿಸಲು ಬಹಳ ಸಹಕಾರಿಯಾಗಲಿದೆ.

ತಂತ್ರಜ್ಞಾನದ ಜಗತ್ತಿನಲ್ಲಿ ಹೊಸ ಬದಲಾವಣೆಗಳಿಗೆ ಹೊಂದಿಕೊಳ್ಳುವುದು ಅನಿವಾರ್ಯ. ಭಾರತ ಸರ್ಕಾರದ ಈ ಉಚಿತ ಡಿಜಿಟಲ್ ಸಾಕ್ಷರತಾ ಅಭಿಯಾನದ ಸದುಪಯೋಗ ಪಡೆದುಕೊಂಡು, ನೀವೂ ಸಹ AI ಯುಗಕ್ಕೆ ಹೆಜ್ಜೆ ಇಡಿ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

ವಿಯೆಟ್ನಾಂನ ದ್ವೀಪದ ಬಳಿ 32 ಭಾರತೀಯ ಪ್ರವಾಸಿಗರಿದ್ದ ಬೋಟ್ ಮುಳುಗಡೆ – Kannada News | Speedboat Carrying 32 Indian Tourists Capsizes Near Vietnam’s Phu Quoc Island

ಹನೋಯಿ, ಜುಲೈ 11: ವಿಯೆಟ್ನಾಂನ ಫೂ ಕ್ವೋಕ್ (Phu Quoc) ದ್ವೀಪದ ಬಳಿ ಇರುವ ಹಾನ್ ಮೇ ರುತ್ ನ್ಗೋಯ್ ಎಂಬಲ್ಲಿ ಇಂದು 32 ಭಾರತೀಯ ಪ್ರವಾಸಿಗರಿದ್ದ ಸ್ಪೀಡ್‌ಬೋಟ್ ಪಲ್ಟಿಯಾಗಿ ಮುಳುಗಡೆಯಾಗಿದೆ. ಈ ಘಟನೆ ನಡೆದ ತಕ್ಷಣವೇ ಸ್ಥಳೀಯ ಅಧಿಕಾರಿಗಳು ಭಾರಿ ಪ್ರಮಾಣದ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ವಿಯೆಟ್ನಾಂನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಈ ಕುರಿತು ಮೈಕ್ರೋ-ಬ್ಲಾಗ್ಲಿಂಗ್ ತಾಣ ‘ಎಕ್ಸ್’ (X)ನಲ್ಲಿ ಪೋಸ್ಟ್ ಮಾಡಿರುವ ಭಾರತೀಯ ರಾಯಭಾರ ಕಚೇರಿ ಈ ಘಟನೆಯ ನಿಖರವಾದ ವಿವರಗಳನ್ನು ಕಲೆಹಾಕಲಾಗುತ್ತಿದೆ ಎಂದು ಹೇಳಿದೆ. ಅಲ್ಲದೆ ತಕ್ಷಣದ ನೆರವಿಗಾಗಿ ನಿಯಂತ್ರಣ ಕೊಠಡಿಯನ್ನು (Control Room) ಸ್ಥಾಪಿಸಲಾಗಿದ್ದು, +84 91 308 9165 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದೆ.

ಈ ದುರಂತದಿಂದ ತೊಂದರೆಗೊಳಗಾದ ಕುಟುಂಬಗಳಿಗೆ ಮಾಹಿತಿ ಮತ್ತು ಸಹಾಯವನ್ನು ಒದಗಿಸಲು, ಹೋ ಚಿ ಮಿನ್ ಸಿಟಿಯಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಕಚೇರಿಯಲ್ಲಿ ನಿಯಂತ್ರಣ ಕೊಠಡಿಯನ್ನು ಆರಂಭಿಸಲಾಗಿದೆ. ಸಾರ್ವಜನಿಕರು ಈ +84 36 281 7930, +84 91 552 37 14 ಮತ್ತು +84 33 452 0414 ಸಂಖ್ಯೆಗಳನ್ನು ಸಂಪರ್ಕಿಸಬಹುದು. ಯಾವುದೇ ರೀತಿಯ ಸಹಾಯ ಮತ್ತು ಪ್ರಶ್ನೆಗಳಿಗೆ ನಾವು ಸದಾ ಸಿದ್ಧರಾಗಿದ್ದೇವೆ ಎಂದು ರಾಯಭಾರ ಕಚೇರಿ ತಿಳಿಸಿದೆ.

ಇದನ್ನೂ ಓದಿ: 40 ವರ್ಷದ ಬಳಿಕ ನ್ಯೂಜಿಲೆಂಡ್‌ಗೆ ಭಾರತದ ಪ್ರಧಾನಿ ಭೇಟಿ; ವಿಮಾನ ನಿಲ್ದಾಣದಲ್ಲೇ ಮೋದಿಯನ್ನು ಸ್ವಾಗತಿಸಿದ ನ್ಯೂಜಿಲೆಂಡ್ ಪಿಎಂ

15 ಪ್ರವಾಸಿಗರು ಸಾವನ್ನಪ್ಪಿರುವ ಶಂಕೆ:

ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಈ ಬೋಟ್‌ನಲ್ಲಿ ನಾಲ್ವರು ಸಿಬ್ಬಂದಿ ಸೇರಿದಂತೆ ಸುಮಾರು 32 ಭಾರತೀಯ ಪ್ರವಾಸಿಗರು ಪ್ರಯಾಣಿಸುತ್ತಿದ್ದರು. ‘ವಿಎನ್‌ಎಕ್ಸ್‌ಪ್ರೆಸ್ ಇಂಟರ್​ ನ್ಯಾಷನಲ್’ (VnExpress International) ವರದಿಯ ಪ್ರಕಾರ, ಈ ಅಪಘಾತದಲ್ಲಿ 15 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೂ, ವಿಯೆಟ್ನಾಂ ಸರ್ಕಾರಿ ಅಧಿಕಾರಿಗಳಿಂದ ಈವರೆಗೆ ಯಾವುದೇ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ. ಸ್ಥಳೀಯರು ಮತ್ತು ಅಧಿಕಾರಿಗಳು ಪ್ರವಾಸಿಗರನ್ನು ರಕ್ಷಿಸಿ ವೈದ್ಯಕೀಯ ನೆರವು ನೀಡುತ್ತಿರುವ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ವಿಯೆಟ್ನಾಂ ಅಧಿಕಾರಿಗಳು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದು, ಶೋಧ ಕಾರ್ಯ ತೀವ್ರಗೊಂಡಿದೆ. ಇದೇ ವೇಳೆ, ಭಾರತೀಯ ರಾಯಭಾರ ಕಚೇರಿಯ ಎರಡು ವಿಶೇಷ ತಂಡಗಳನ್ನು ಘಟನಾ ಸ್ಥಳಕ್ಕೆ ರವಾನಿಸಲಾಗಿದೆ. ಒಂದು ತಂಡವು ಇಂದು ಸಂಜೆಯೊಳಗೆ ಸ್ಥಳಕ್ಕೆ ತಲುಪಲಿದ್ದು, ಎರಡನೇ ತಂಡವು ತಡರಾತ್ರಿ ವೇಳೆಗೆ ತಲುಪುವ ನಿರೀಕ್ಷೆಯಿದೆ.

ಇದನ್ನೂ ಓದಿ: ಇರಾನ್ ಜೊತೆ ಮಾತುಕತೆಗೆ ಅಮೆರಿಕ ಒಪ್ಪಿಗೆ, ಕದನ ವಿರಾಮ ಅಂತ್ಯ!; ಟ್ರಂಪ್ ಘೋಷಣೆ

ಈ ಘಟನೆ ನಡೆದಿದ್ದು ಹೇಗೆ?:

ಇಂದು ಮಧ್ಯಾಹ್ನ ಸುಮಾರು 1 ಗಂಟೆಗೆ ಈ ದುರಂತ ಸಂಭವಿಸಿದೆ. ಪ್ರವಾಸಿಗರನ್ನು ಹಾನ್ ಮೇ ರುತ್‌ನಿಂದ ಅನ್ ಥೋಯ್ ಬಂದರಿಗೆ ಕರೆದೊಯ್ಯುತ್ತಿದ್ದಾಗ ಹಾನ್ ಮೇ ರುತ್ ನ್ಗೋಯ್‌ನಿಂದ ಸುಮಾರು 400 ಮೀಟರ್ ದೂರದಲ್ಲಿ ಬೋಟ್ ಪಲ್ಟಿಯಾಗಿದೆ. ಹತ್ತಿರದಲ್ಲೇ ಇದ್ದ ಇತರ ಪ್ರವಾಸಿಗರು ತಕ್ಷಣವೇ ರಕ್ಷಣೆಗೆ ಧಾವಿಸಿದ್ದಾರೆ. ಈ ಬೋಟ್ ಅನ್ನು ‘ಓಷಿಯನ್ ಪರ್ಲ್ ಐಲ್ಯಾಂಡ್ ಕಂಪನಿ’ ನಿರ್ವಹಿಸುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೋಟ್ ತಲೆಕೆಳಗಾಗಿ ಮುಳುಗಿದ ಕಾರಣದಿಂದಾಗಿ ಬಹುತೇಕ ಪ್ರವಾಸಿಗರು ಅದರ ಒಳಗಡೆಯೇ ಸಿಲುಕಿಕೊಂಡಿದ್ದರು.

“ಭಾರೀ ಗಾಳಿಯಿಂದ ದೊಡ್ಡ ಅಲೆಗಳು ಏಳುತ್ತಿದ್ದುದರಿಂದಾಗಿ ಬೋಟ್​​ನ ಒಳಗಿನಿಂದ ಕೇವಲ ಕೆಲವೇ ಜನರನ್ನು ಮಾತ್ರ ಪ್ರಜ್ಞಾವಸ್ಥೆಯಲ್ಲಿದ್ದಾಗ ಹೊರಗೆ ಕರೆತರಲು ಸಾಧ್ಯವಾಯಿತು” ಎಂದು ಸ್ಥಳೀಯ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 4:44 pm, Sat, 11 July 26

Source link

ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ವೆಸ್ಟ್​ ಇಂಡೀಸ್ ಸ್ಟಾರ್ ಆಲ್‌ರೌಂಡರ್ – Kannada News | Jason Holder Retires from ODIs: West Indies Coach Sammy Confirms All Rounder’s Exit

2026 ರ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ಪರ ಅದ್ಭುತ ಪ್ರದರ್ಶನ ನೀಡಿದ್ದ ವೆಸ್ಟ್ ಇಂಡೀಸ್​ನ ಸ್ಟಾರ್ ಆಲ್‌ರೌಂಡರ್ ಜೇಸನ್ ಹೋಲ್ಡರ್ ಏಕದಿನ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಹೋಲ್ಡರ್ ಅವರ ಈ ನಿರ್ಧಾರವನ್ನು ವೆಸ್ಟ್ ಇಂಡೀಸ್ ತಂಡದ ಮುಖ್ಯ ಕೋಚ್ ಡ್ಯಾರೆನ್ ಸ್ಯಾಮಿ ದೃಢಪಡಿಸಿದ್ದಾರೆ. ಹೋಲ್ಡರ್ ಏಕದಿನ ಕ್ರಿಕೆಟ್​ನಿಂದ ನಿವೃತ್ತರಾಗಿದ್ದಾರೆ, ಆದರೆ ಟೆಸ್ಟ್ ಕ್ರಿಕೆಟ್‌ ಆಡುವುದನ್ನು ಮುಂದುವರೆಸುತ್ತಾರೆ ಎಂದು ಸ್ಯಾಮಿ ವಿಸ್ಡನ್ ಕ್ರಿಕೆಟ್ ಪಾಡ್‌ಕ್ಯಾಸ್ಟ್‌ನಲ್ಲಿ ಹೇಳಿದ್ದಾರೆ. ಆದಾಗ್ಯೂ ಜೇಸನ್ ಹೋಲ್ಡರ್ ಅವರ ಈ ನಿವೃತ್ತಿ ವಿಚಾರವನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯಾಗಲಿ ಅಥವಾ ಹೋಲ್ಡರ್ ಆಗಲಿ ಇದುವರೆಗೂ ಖಚಿತಪಡಿಸಿಲ್ಲ.

ಏಕದಿನಕ್ಕೆ ಹೋಲ್ಡರ್ ನಿವೃತ್ತಿ

2027 ರ ಏಕದಿನ ವಿಶ್ವಕಪ್​ಗೆ ವೆಸ್ಟ್ ಇಂಡೀಸ್‌ ತಂಡದ ಯೋಜನೆಗಳಲ್ಲಿ ಹೋಲ್ಡರ್ ಅವರ ಪಾತ್ರ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಡ್ಯಾರೆನ್ ಸ್ಯಾಮಿ, ‘ಜೇಸನ್ ಹೋಲ್ಡರ್ ಏಕದಿನ ಕ್ರಿಕೆಟ್​ನಿಂದ ನಿವೃತ್ತರಾಗಿದ್ದಾರೆ. ಆದರೆ ಅವರು ಟೆಸ್ಟ್ ತಂಡದ ಭಾಗವಾಗಿರಲಿದ್ದಾರೆ. ಅವರಿಗೆ ಟೆಸ್ಟ್ ಆಡಲು ಆಸಕ್ತಿಯೂ ಇದೆ. ಇದರ ಜೊತೆಗೆ ಹೋಲ್ಡರ್ ಫ್ರಾಂಚೈಸ್ ಕ್ರಿಕೆಟ್ ಆಡುವುದನ್ನು ಮುಂದುವರೆಸಲಿದ್ದಾರೆ. ಆದ್ದರಿಂದ ಏಕದಿನ ತಂಡಕ್ಕೆ ಅವರ ಲಭ್ಯತೆ ದೊಡ್ಡ ಪ್ರಶ್ನೆಯಾಗಿದೆ’ ಎಂದು ಸ್ಯಾಮಿ ಹೇಳಿದ್ದಾರೆ.

ಜೇಸನ್ ಹೋಲ್ಡರ್ ಏಕದಿನ ವೃತ್ತಿಜೀವನ

ಜೇಸನ್ ಹೋಲ್ಡರ್ 2013 ರಿಂದ 2023 ರವರೆಗಿನ ತಮ್ಮ 10 ವರ್ಷಗಳ ವೃತ್ತಿಜೀವನದಲ್ಲಿ ಒಟ್ಟು 138 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ, ಅವರು 24.85 ರ ಸರಾಸರಿಯಲ್ಲಿ 2237 ರನ್ ಗಳಿಸಿದ್ದಾರೆ. ಇದರಲ್ಲಿ ಅವರ ಅತ್ಯಧಿಕ ಸ್ಕೋರ್ 99 ಆಗಿದೆ. ಕೆಳ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿರುವ ಹೋಲ್ಡರ್, ತಮ್ಮ ಏಕದಿನ ವೃತ್ತಿಜೀವನದಲ್ಲಿ ಒಮ್ಮೆಯೂ ಶತಕದ ಗಡಿ ದಾಟಲು ಸಾಧ್ಯವಾಗಿಲ್ಲ. ಆದರೆ ಅವರು 11 ಅರ್ಧಶತಕಗಳನ್ನು ಸಿಡಿಸಿದ್ದಾರೆ.

86 ಪಂದ್ಯಗಳಲ್ಲಿ ನಾಯಕ

ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಹೋಲ್ಡರ್ ತಮ್ಮ ಏಕದಿನ ವೃತ್ತಿಜೀವನದಲ್ಲಿ 36.96 ಸರಾಸರಿಯಲ್ಲಿ 159 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಅವಧಿಯಲ್ಲಿ ಅವರು ಎರಡು ಬಾರಿ ಐದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆಲ್‌ರೌಂಡರ್ ಆಗಿರುವುದರ ಜೊತೆಗೆ, ಹೋಲ್ಡರ್ ಒಬ್ಬ ಅತ್ಯುತ್ತಮ ಫೀಲ್ಡರ್ ಕೂಡ ಆಗಿದ್ದರು, ತಮ್ಮ ಏಕದಿನ ವೃತ್ತಿಜೀವನದಲ್ಲಿ 65 ಕ್ಯಾಚ್‌ಗಳನ್ನು ಪಡೆದಿದ್ದಾರೆ. ಜೇಸನ್ ಹೋಲ್ಡರ್ ತಮ್ಮ ಏಕದಿನ ವೃತ್ತಿಜೀವನದಲ್ಲಿ 86 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version