ನಮ್ದು ಕೆಟ್ಟ ತಂಡವಲ್ಲ, ಇದು ಬದಲಾವಣೆ ಅಷ್ಟೇ: ಗೌತಮ್ ಗಂಭೀರ್! – Kannada News | Coach Gautam Gambhir defended the rebuilding process

ಟಿ20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದ್ದ ಟೀಮ್ ಇಂಡಿಯಾ, ಇದೀಗ ವಿದೇಶದಲ್ಲಿ ಸತತ ಸೋಲುಗಳ ಸುಳಿಗೆ ಸಿಲುಕಿದೆ. ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗಳಲ್ಲಿ ಅನುಭವಿಸಿದ ಭಾರಿ ಹಿನ್ನಡೆ, ಅದರಲ್ಲೂ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕೇವಲ 76 ರನ್‌ಗಳಿಗೆ ಆಲೌಟ್ ಆಗಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಈ ಚರ್ಚೆಗಳ ನಡುವೆ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್, ನಮ್ದು ಕೆಟ್ಟ ತಂಡವಲ್ಲ, ಇದು ಬದಲಾವಣೆಯ ಪ್ರಕ್ರಿಯೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಈ ಬಗ್ಗೆ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೌತಮ್ ಗಂಭೀರ್, ಅಭಿಮಾನಿಗಳು ಮತ್ತು ವಿಮರ್ಶಕರಲ್ಲಿ ತಾಳ್ಮೆಯಿಂದ ಇರುವಂತೆ ಮನವಿ ಮಾಡಿದ್ದಾರೆ. ವಿಶ್ವಕಪ್ ಗೆದ್ದ ತಂಡದಲ್ಲಿದ್ದ ಜಸ್ಪ್ರಿತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಅವರಂತಹ ಪ್ರಮುಖ ಮ್ಯಾಚ್ ವಿನ್ನರ್‌ಗಳು ಸದ್ಯದ ಆಡುವ ಹನ್ನೊಂದರ ಬಳಗದಲ್ಲಿ ಇಲ್ಲ.

ಭವಿಷ್ಯದ ದೃಷ್ಟಿಯಿಂದ 15 ವರ್ಷದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಮತ್ತು ತಮ್ಮ ಎರಡನೇ ಟಿ20 ಪಂದ್ಯವಾಡುತ್ತಿರುವ ವೇಗಿ ಪ್ರಿನ್ಸ್ ಯಾದವ್ ಅವರಂತಹ ಯುವ ಪ್ರತಿಭೆಗಳಿಗೆ ಅವಕಾಶ ನೀಡಲಾಗುತ್ತಿದೆ.

ತಂಡವು ದೊಡ್ಡ ಸ್ಕೋರ್ ಕಲೆಹಾಕುವ ನಿಟ್ಟಿನಲ್ಲಿ ಭಯವಿಲ್ಲದ, ಹೆಚ್ಚಿನ ರಿಸ್ಕ್ ಒಳಗೊಂಡ ಆಟದ ಶೈಲಿಯನ್ನು ಅಳವಡಿಸಿಕೊಂಡಿದೆ. ಇಂತಹ ಶೈಲಿಯಲ್ಲಿ ಆರಂಭದಲ್ಲಿ ವೈಫಲ್ಯಗಳು ಸಹಜ ಎಂದು ಗೌತಮ್ ಗಂಭೀರ್ ಸ್ಪಷ್ಟಪಡಿಸಿದ್ದಾರೆ.

ಐರ್ಲೆಂಡ್ ಪ್ರವಾಸದಿಂದಲೂ ತಂಡವು ಪಿಚ್ ಪರಿಸ್ಥಿತಿ ಮತ್ತು ಮೈದಾನದ ಆಯಾಮಗಳನ್ನು ಸರಿಯಾಗಿ ಗ್ರಹಿಸುವಲ್ಲಿ ತಪ್ಪು ಮಾಡಿದೆ ಎಂಬುದನ್ನು ಒಪ್ಪಿಕೊಂಡ ಗಂಭೀರ್, ಮುಂಬರುವ ದಿನಗಳಲ್ಲಿ ಇದನ್ನು ಸುಧಾರಿಸುವುದಾಗಿ ಹೇಳಿದ್ದಾರೆ.

ಪರಿವರ್ತನೆಯ ಹಂತ!

ಕೋಚ್ ಗೌತಮ್ ಗಂಭೀರ್ ಅವರು ಟೀಮ್ ಇಂಡಿಯಾದ ಈ ಸೋಲನ್ನು ಪರಿವರ್ತನೆಯ ಹಂತ ಎಂದು ವಿಶ್ಲೇಷಿಸಿದ್ದಾರೆ. ಇದಾಗ್ಯೂ ಭಾರತ ತಂಡದ ಒಳಗೆ ಮತ್ತು ಹೊರಗೆ ಪರಿಸ್ಥಿತಿ ಅಂದುಕೊಂಡಂತೆ ಇಲ್ಲ ಎಂಬುದೇ ಸತ್ಯ.

ಏಕೆಂದರೆ ಕೋಚ್ ಅವರ ಶಾಂತ ಹೇಳಿಕೆಗೆ ವಿರುದ್ಧವಾಗಿ ಪ್ರತಿಕ್ರಿಯಿಸಿರುವ ಟಿ20 ನಾಯಕ ಶ್ರೇಯಸ್ ಅಯ್ಯರ್, ತಂಡದ ಸತತ ಬ್ಯಾಟಿಂಗ್ ಕುಸಿತವನ್ನು “ಅತಿ ಘೋರ ಮತ್ತು ಒಪ್ಪಿಕೊಳ್ಳಲು ಅಸಾಧ್ಯ” ಎಂದು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.

ಈ ವ್ಯತಿರಿಕ್ತ ಹೇಳಿಕೆಗಳು ಕೂಡ ಚರ್ಚೆಗೆ ಕಾರಣವಾಗಿದ್ದು, ಇಲ್ಲಿ ಕೋಚ್ ಹಾಗೂ ನಾಯಕನ ನಡುವೆ ಹೊಂದಾಣಿಕೆ ಇಲ್ಲವಾ ಎಂಬ ಪ್ರಶ್ನೆಯೊಂದನ್ನು ಹುಟ್ಟುಹಾಕಿದೆ.

ಇದನ್ನೂ ಓದಿ: 6,6,6,6,6,6,6,4: ದಾಖಲೆಯ ಹಾಫ್ ಸೆಂಚುರಿ ಸಿಡಿಸಿದ ವೈದ್ಯಕೀಯ ವಿದ್ಯಾರ್ಥಿ!

ಒಟ್ಟಾರೆಯಾಗಿ, ಗೌತಮ್ ಗಂಭೀರ್ ಅವರ ಈ ‘ಮರು ನಿರ್ಮಾಣ’ ಪ್ರಯೋಗವು ಸದ್ಯಕ್ಕೆ ದೊಡ್ಡ ಟೀಕೆಗಳಿಗೆ ಗುರಿಯಾಗಿದ್ದರೂ, ಭಾರತೀಯ ಕ್ರಿಕೆಟ್‌ನ ಭವಿಷ್ಯದ ದೃಷ್ಟಿಯಿಂದ ಇದು ಮಹತ್ವದ ಹೆಜ್ಜೆಯಾಗಿದೆ. ಯುವ ಆಟಗಾರರ ಸಾಮರ್ಥ್ಯದ ಮೇಲಿಟ್ಟಿರುವ ಈ ಭರವಸೆ ನಿಜವಾಗುತ್ತದೆಯೇ ಅಥವಾ ಬಿಸಿಸಿಐನ ಕಠಿಣ ನಿರ್ಧಾರಗಳಿಗೆ ಹಾದಿ ಮಾಡಿಕೊಡುತ್ತದೆಯೇ ಎಂಬುದನ್ನು ಮುಂಬರುವ ಪಂದ್ಯಗಳೇ ನಿರ್ಧರಿಸಲಿವೆ. ಅಲ್ಲಿಯವರೆಗೆ, ಟೀಮ್ ಇಂಡಿಯಾ ಈ ಕಠಿಣ ಪರಿಸ್ಥಿತಿಯಿಂದ ಹೇಗೆ ಹೊರಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.

Source link

Bathing Before Cooking: ಅಡುಗೆ ಮಾಡುವ ಮುನ್ನ ಸ್ನಾನ ಮಾಡುವುದು ಏಕೆ ಕಡ್ಡಾಯ? ಶಾಸ್ತ್ರಗಳು ಹೇಳುವುದೇನು? – Kannada News | Bathing Before Cooking: Unlocking Health, Purity and Positive Energy

ಅಡುಗೆ ಮಾಡುವ ಮುನ್ನ ಸ್ನಾನ ಮಾಡುವುದು

ಸನಾತನ ಸಂಸ್ಕೃತಿಯಲ್ಲಿ ಆಹಾರವನ್ನು ‘ಅನ್ನಬ್ರಹ್ಮ’ ಎಂದು ಪೂಜಿಸಲಾಗುತ್ತದೆ. “ನಾವು ತಿನ್ನುವ ಆಹಾರವೇ ನಮ್ಮ ಆಲೋಚನೆ ಮತ್ತು ವ್ಯಕ್ತಿತ್ವವನ್ನು ರೂಪಿಸುತ್ತದೆ” ಎಂಬುದು ಹಿರಿಯರ ನಂಬಿಕೆ. ಅದಕ್ಕಾಗಿಯೇ ಶಾಸ್ತ್ರಗಳಲ್ಲಿ ಆಹಾರವನ್ನು ಸಿದ್ಧಪಡಿಸುವಾಗ ಮತ್ತು ಅದನ್ನು ಸೇವಿಸುವಾಗ ಕೆಲವು ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಲಾಗಿದೆ. ಅದರಲ್ಲಿ ಅತ್ಯಂತ ಪ್ರಮುಖವಾದುದು – ಅಡುಗೆ ಮನೆಗೆ ಪ್ರವೇಶಿಸುವ ಮುನ್ನ ಹಾಗೂ ಊಟ ಮಾಡುವ ಮುನ್ನ ಸ್ನಾನ ಮಾಡುವುದು.

ಇಂದಿನ ಧಾವಂತದ ಜೀವನದಲ್ಲಿ ಇದು ಕೇವಲ ಒಂದು ಸಂಪ್ರದಾಯ ಅಥವಾ ಮೂಢನಂಬಿಕೆಯಂತೆ ಕಾಣಿಸಬಹುದು. ಆದರೆ ಇದರ ಹಿಂದೆ ಆಳವಾದ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣಗಳಿವೆ. ಈ ನಿಯಮಗಳನ್ನು ಪಾಲಿಸುವುದರಿಂದ ಆರೋಗ್ಯ ಮತ್ತು ಮನೆಯಲ್ಲಿನ ಧನಾತ್ಮಕ ಶಕ್ತಿ ಹೇಗೆ ಹೆಚ್ಚುತ್ತದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಸಕಾರಾತ್ಮಕ ಶಕ್ತಿಯ ಸಂಚಾರ (Positive Energy):

ಯಾವುದೇ ವ್ಯಕ್ತಿ ಸ್ನಾನ ಮಾಡದೆ ಅಡುಗೆ ಮನೆಗೆ ಪ್ರವೇಶಿಸಿ ಆಹಾರವನ್ನು ಸಿದ್ಧಪಡಿಸಿದರೆ, ಆ ಆಹಾರವನ್ನು ಪವಿತ್ರ ಎಂದು ಪರಿಗಣಿಸಲಾಗುವುದಿಲ್ಲ” ಎನ್ನುತ್ತದೆ ಶಾಸ್ತ್ರ. ಸ್ನಾನ ಮಾಡಿದ ನಂತರ ತಯಾರಿಸುವ ಆಹಾರವು ಧನಾತ್ಮಕ ಶಕ್ತಿಯ ಮೂಲವಾಗುತ್ತದೆ. ಇದು ನಮ್ಮ ದೇಹಕ್ಕೆ ಶಕ್ತಿಯನ್ನು ನೀಡುವುದಲ್ಲದೆ, ಮಾನಸಿಕವಾಗಿಯೂ ನಮ್ಮನ್ನು ಸದೃಢಗೊಳಿಸುತ್ತದೆ.

ಇದನ್ನೂ ಓದಿ: ಶ್ರಾದ್ಧದಲ್ಲಿ ಮೊದಲು ಕಾಗೆಗೆ ಅನ್ನ ಯಾಕೆ ನೀಡುತ್ತಾರೆ? ಇದರ ಹಿಂದಿದೆ ಗರುಡ ಪುರಾಣ ಮತ್ತು ರಾಮಾಯಣದ ಕುತೂಹಲಕಾರಿ ಕಥೆ

ದಾರಿದ್ರ್ಯದ ಆಹ್ವಾನ ಹಾಗೂ ದೇವತೆಗಳ ಅಸಮಾಧಾನ:

ಸ್ನಾನ ಮಾಡದೆ ಅಡುಗೆ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಪ್ರವೇಶಿಸುತ್ತದೆ. ಇದು ಮನೆಯಲ್ಲಿ ದಾರಿದ್ರ್ಯವನ್ನು ತರುತ್ತದೆ ಮತ್ತು ಲಕ್ಷ್ಮಿ ದೇವಿಯ ಕೋಪಕ್ಕೆ ಕಾರಣವಾಗಬಹುದು. ಅಷ್ಟೇ ಅಲ್ಲದೆ, ಅಂತಹ ಅಡುಗೆ ಮನೆಯಲ್ಲಿ ಅನ್ನಪೂರ್ಣೇಶ್ವರಿ ದೇವಿಯು ನೆಲೆಸುವುದಿಲ್ಲ ಎಂಬ ನಂಬಿಕೆಯಿದೆ.

ಆದ್ದರಿಂದ ದೇಹದ ಶುದ್ಧೀಕರಣವಾಗಿರಲಿ ಅಥವಾ ಮಾನಸಿಕ ಪವಿತ್ರತೆಯಾಗಿರಲಿ, ಅಡುಗೆ ಮಾಡುವ ಮತ್ತು ಊಟ ಮಾಡುವ ಮುನ್ನ ಸ್ನಾನ ಮಾಡುವುದು ಅತ್ಯಂತ ಮುಖ್ಯವಾದ ನಿಯಮವಾಗಿದೆ. ಈ ನಿಯಮವನ್ನು ಪಾಲಿಸುವುದರಿಂದ ನಾವು ದೈಹಿಕ ಹಾಗೂ ಮಾನಸಿಕ ಆರೋಗ್ಯ ಎರಡನ್ನೂ ವೃದ್ಧಿಸಿಕೊಳ್ಳಬಹುದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬ್ರಿಯಾನ್ ಲಾರಾ ಜೊತೆ ಕಾಣಿಸಿಕೊಂಡ ಯುವತಿ ಯಾರು ಗೊತ್ತಾ?

Source link

ಕೊನೆಗೂ ಒಟಿಟಿಗೆ ಬರುತ್ತಿದೆ ದರ್ಶನ್ ಸಿನಿಮಾ ‘ಡೆವಿಲ್’: ಎಲ್ಲಿ? ಯಾವಾಗ? – Kannada News | Darshan Thoogudeepa starrer Devil movie releasing on OTT soon

ದರ್ಶನ್ (Darshan) ನಟನೆಯ ‘ಡೆವಿಲ್’ ಸಿನಿಮಾ ಹಲವಾರು ಅಡೆ-ತಡೆಗಳನ್ನು ದಾಟಿಕೊಂಡು ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆಯ್ತು. ಸಿನಿಮಾಕ್ಕೆ ನಿರೀಕ್ಷಿತ ಯಶಸ್ಸು ದೊರಕಲಿಲ್ಲ. ಚಿತ್ರಮಂದಿರದ ಬಳಿಕ ಈ ಸಿನಿಮಾ ಒಟಿಟಿಗಳಲ್ಲಿ ಬಿಡುಗಡೆ ಆಗುತ್ತದೆ ಎಂದು ಕೆಲವು ಅಭಿಮಾನಿಗಳು ಕಾದಿದ್ದರು ಆದರೆ ಸಿನಿಮಾದ ಒಟಿಟಿ ಬಿಡುಗಡೆ ತಡವಾಗುತ್ತಲೇ ಬಂತು. ಇದೀಗ ಕೊನೆಗೂ ಸಿನಿಮಾ ಒಟಿಟಿಗೆ ಬರುತ್ತಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಏಳು ತಿಂಗಳ ಬಳಿಕ ಇದೀಗ ಸಿನಿಮಾ ಒಟಿಟಿಗೆ ಬರುತ್ತಿದೆ.

ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಇದೇ ತಿಂಗಳ 17ನೇ ತಾರೀಖಿಗೆ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿದೆ. ಜುಲೈ 17ರಿಂದ ‘ಡೆವಿಲ್’ ಸಿನಿಮಾವನ್ನು ಜೀ5 ಒಟಿಟಿಯಲ್ಲಿ ವೀಕ್ಷಿಸಬಹುದಾಗಿದೆ. ಈ ಸಿನಿಮಾ ಕನ್ನಡದಲ್ಲಿ ಮಾತ್ರವೇ ಲಭ್ಯ ಇರಲಿದೆಯಾ? ಬೇರೆ ಭಾಷೆಗಳಲ್ಲಿಯೂ ಡಬ್ಬಿಂಗ್ ಆಗಲಿದೆಯಾ ಇತ್ಯಾದಿ ಮಾಹಿತಿ ಸದ್ಯಕ್ಕಿಲ್ಲ. ಮೂಲಗಳ ಪ್ರಕಾರ, ಕೇವಲ ಕನ್ನಡ ಭಾಷೆಯಲ್ಲಿ ಮಾತ್ರವೇ ಒಟಿಟಿಯಲ್ಲಿ ಲಭ್ಯವಿರಲಿದೆ ಎನ್ನಲಾಗುತ್ತಿದೆ. ಇನ್ನು ‘ಡೆವಿಲ್’ ಸಿನಿಮಾದ ಸ್ಯಾಟಲೈಟ್ ಹಕ್ಕುಗಳನ್ನು ಸಹ ಜೀ ಸಂಸ್ಥೆಯವರೇ ಖರೀದಿ ಮಾಡಿದ್ದು, ಕೆಲವೇ ದಿನಗಳಲ್ಲಿ ಜೀ ಚಾನೆಲ್​​ನಲ್ಲಿ ವರ್ಲ್ಡ್ ಪ್ರೀಯಮರ್ ಸಹ ಆಗಲಿದೆ.

‘ಡೆವಿಲ್’ ಸಿನಿಮಾದ ಒಟಿಟಿ ರಿಲೀಸ್ ಬಗ್ಗೆ ಜೀ5 ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದೆ. ‘ಡೆವಿಲ್’ ಸಿನಿಮಾದ ವಿಡಿಯೋ ತುಣುಕುಗಳನ್ನು ಹಂಚಿಕೊಂಡಿರುವ ಜೀ5, ‘ಅಧಿಕಾರದ ಆಟದಲ್ಲಿ ಇವನದೇ ರೂಲ್ಸ್. ಸಿಂಹಾಸನ ಒಂದೇ, ಅದರ ಮೇಲೆ ಕೂರೋ ರಾಜನೂ ಒಬ್ಬನೇ… “ದಿ ಡೆವಿಲ್”. ಜುಲೈ 17ರಿಂದ Zee 5 ಕನ್ನಡದಲ್ಲಿ ಸ್ಟ್ರೀಮ್ ಆಗುತ್ತಿದೆ’ ಎಂದು ಬರೆದುಕೊಂಡಿದೆ.

ಇದನ್ನೂ ಓದಿ:‘ದರ್ಶನ್ ಅಭಿಮಾನಿಗಳು ತಪ್ಪು ಮಾಡಲ್ಲ, ಅದು ಕಿಡಿಗೇಡಿಗಳ ಕೆಲಸ’; ಯುವ ರೈತ ಚೇತನ್

‘ಡೆವಿಲ್’ ಸಿನಿಮಾ 2023 ರಲ್ಲಿ ಘೋಷಣೆ ಆಯ್ತು. ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿರುವಾಗಲೇ ನಟ ದರ್ಶನ್, ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದರು. ಆಗ ಸಿನಿಮಾದ ಚಿತ್ರೀಕರಣ ನಿಂತು ಹೋಯ್ತು. ಕೆಲ ತಿಂಗಳುಗಳ ಬಳಿಕ ದರ್ಶನ್, ಜಾಮೀನಿನ ಮೇಲೆ ಬಿಡುಗಡೆ ಆದರು. ಆಗ ‘ಡೆವಿಲ್’ ಸಿನಿಮಾದ ಚಿತ್ರೀಕರಣ ಮುಂದುವರೆಸಿ, ಚಿತ್ರೀಕರಣ ಪೂರ್ತಿ ಮಾಡಿಕೊಟ್ಟರು, ಡಬ್ಬಿಂಗ್ ಸಹ ಮಾಡಿಕೊಟ್ಟರು. ಅದೆಲ್ಲ ಮುಗಿಯುತ್ತಿದ್ದಂತೆ ಸುಪ್ರೀಂಕೋರ್ಟ್, ದರ್ಶನ್ ಅವರ ಜಾಮೀನು ರದ್ದು ಮಾಡಿತು. ದರ್ಶನ್ ಜೈಲಿನಲ್ಲಿರುವಾಗಲೇ ‘ಡೆವಿಲ್’ ಸಿನಿಮಾ ಬಿಡುಗಡೆ ಆಯ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಸದ್ದು ಮಾಡಲಿಲ್ಲ. ಈಗ ಹಲವು ತಿಂಗಳುಗಳ ಬಳಿಕ ಒಟಿಟಿಗೆ ಬಂದಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 1:49 pm, Sat, 11 July 26

Source link

Kolara Tomato Market: ಟೊಮ್ಯಾಟೋ ಬೆಲೆ ಕುಸಿತ, ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ – Kannada News | Kolar Tomato Farmers Protest Against Price Crash, Demand Support Price

ಕೋಲಾರ, ಜುಲೈ 11: ಜಿಲ್ಲೆಯಲ್ಲಿ ಟೊಮ್ಯಾಟೋ ಬೆಲೆ ತೀವ್ರ ಕುಸಿತ ಕಂಡಿರುವುದು ರೈತ ಸಮುದಾಯದಲ್ಲಿ ಆತಂಕ ಮೂಡಿಸಿದೆ. ಒಡ್ಡಳ್ಳಿ ಮಾರುಕಟ್ಟೆಯಲ್ಲಿ ಟೊಮ್ಯಾಟೋ ಬೆಲೆ ಕುಸಿತದಿಂದಾಗಿ ರೈತರು ಭಾರಿ ನಷ್ಟ ಅನುಭವಿಸಿದ್ದು, ಇದಕ್ಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ. ಅನ್ನದಾತರ ಬಾಯಿಗೆ ಮಣ್ಣು ಹಾಕಲು ಹೊರಟಿರುವ ಸರ್ಕಾರಕ್ಕೆ ಧಿಕ್ಕಾರ ಕೂಗಿದ ರೈತರು, ತಾವು ಬೆಳೆದ ಬೆಳೆಗೆ ನಿಗದಿತ ಬೆಲೆ ಸಿಗದೇ ರಸ್ತೆಗಳಲ್ಲಿ ಟೊಮ್ಯಾಟೋ ಸುರಿಯುವ ಸ್ಥಿತಿ ಬಂದಿರುವುದಾಗಿ ಅಳಲು ತೋಡಿಕೊಂಡರು.

ರೈತರು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ, ಜಮೀನು ಹಾಗೂ ಒಡವೆಗಳನ್ನು ಅಡವಿಟ್ಟು ಟೊಮ್ಯಾಟೋ ಬೆಳೆದಿದ್ದಾರೆ. ಇಂತಹ ಸಂದರ್ಭದಲ್ಲಿ ಕೆ.ಜಿ.ಗೆ 30 ರೂಪಾಯಿ ನಿಗದಿತ ಬೆಂಬಲ ಬೆಲೆ ಘೋಷಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ಮಾರುಕಟ್ಟೆಗೆ ಆವಕವಾಗುವ ಟೊಮ್ಯಾಟೋ ಪ್ರಮಾಣ, ಬಾಕ್ಸ್‌ಗಳ ಬೆಲೆ ಕುರಿತು ಸರ್ಕಾರ ಸಮರ್ಪಕ ಮಾಹಿತಿ ಹೊಂದಿಲ್ಲ ಎಂದು ಆರೋಪಿಸಿದ ರೈತರು, ಕೂಡಲೇ ಮಧ್ಯಪ್ರವೇಶಿಸಿ ಬೆಂಬಲ ಬೆಲೆ ಘೋಷಿಸುವಂತೆ ಒತ್ತಾಯಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Haryana Shootout: ಗುರುಗ್ರಾಮ್​ನಲ್ಲಿ ಉದ್ಯಮಿ ಬಂಗಲೆ ಮೇಲೆ ಗುಂಡಿನ ಸುರಿಮಳೆ! ಪೊಲೀಸರ ಕೌಂಟರ್​ ಅಟ್ಯಾಕ್​ಗೆ ನಾಲ್ವರು ಬಲಿ – Kannada News | Gurgaon Shootout: 4 Gangsters Killed As Posh Society Turns Into Battlefield With 60 Rounds Fired

ಹರಿಯಾಣ, ಜುಲೈ 11: ರಾಜ್ಯದ ಗುರುಗ್ರಾಮ್‌ನ ಅತ್ಯಂತ ಐಷಾರಾಮಿ ವಸತಿ ಪ್ರದೇಶವಾದ ‘ಸುಶಾಂತ್ ಲೋಕ್’ ಕಾಲೋನಿಯು ಗುರುವಾರ ರಾತ್ರಿ ಭೀಕರ ರಣರಂಗವಾಗಿ ಮಾರ್ಪಟ್ಟಿತ್ತು. ವಿದೇಶದಿಂದ ಆಪರೇಟ್ ಮಾಡುತ್ತಿರುವ ಕುಖ್ಯಾತ ಗ್ಯಾಂಗ್‌ಸ್ಟರ್ ದೀಪಕ್ ನಂದಲ್ ಕಳುಹಿಸಿದ್ದ ಐದು ಜನ ಶೂಟರ್‌ಗಳು ಹಾಗೂ ಹರಿಯಾಣ ಕ್ರೈಂ ಬ್ರಾಂಚ್ ಪೊಲೀಸರ ನಡುವೆ ನಡೆದ ಭೀಕರ ಎನ್‌ಕೌಂಟರ್‌ನಲ್ಲಿ ನಾಲ್ವರು ಶೂಟರ್‌ಗಳು ಮೃತಪಟ್ಟಿದ್ದಾರೆ.

ವಿದೇಶದಲ್ಲಿರುವ ದೀಪಕ್ ನಂದಲ್‌ ಕೈವಾಡ

ಗುರುವಾರ ರಾತ್ರಿ ಸುಮಾರು 9.50 ರ ಸುಮಾರಿಗೆ ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಬಂದ ಶೂಟರ್‌ಗಳು, ತಮಗೆ ಹಣ (Extortion) ನೀಡಲು ನಿರಾಕರಿಸಿದ್ದ ಪ್ರಮುಖ ಉದ್ಯಮಿ ವಿಶಾಲ್ ಬೆರಿ ಅವರ ಬಂಗಲೆಯತ್ತ ಮನಸೋಇಚ್ಛೆ ಗುಂಡಿನ ಮಳೆಗರೆದಿದ್ದಾರೆ. ಈ ವೇಳೆ ಶೂಟರ್‌ಗಳ ದಾಳಿಯನ್ನು ರೆಕಾರ್ಡ್ ಮಾಡಿ ವಿದೇಶದಲ್ಲಿರುವ ದೀಪಕ್ ನಂದಲ್‌ಗೆ ಕಳುಹಿಸಲು ಒಬ್ಬಾತ ಮೊಬೈಲ್‌ನಲ್ಲಿ ವಿಡಿಯೋ ಕೂಡ ಮಾಡುತ್ತಿದ್ದ ಎಂಬುದು ತಿಳಿದುಬಂದಿದೆ. ಇಂಟೆಲಿಜೆನ್ಸ್ ಇನ್‌ಪುಟ್ ಆಧಾರದ ಮೇಲೆ ಈಗಾಗಲೇ ಅಲ್ಲಿ ಹೊಂಚು ಹಾಕಿ ಕುಳಿತಿದ್ದ 30 ಕ್ಕೂ ಹೆಚ್ಚು ಪೊಲೀಸರ ತಂಡ ತಕ್ಷಣ ಕಾರ್ಯಪ್ರವೃತ್ತವಾಗಿದೆ.

120 ಸೆಕೆಂಡ್, 60 ಬುಲೆಟ್!

ಪೊಲೀಸರು ಸುತ್ತುವರಿಯುತ್ತಿದ್ದಂತೆ ತಪ್ಪಿಸಿಕೊಳ್ಳಲು ಯತ್ನಿಸಿದ ಗ್ಯಾಂಗ್‌ಸ್ಟರ್‌ಗಳು ಆಟೋಮ್ಯಾಟಿಕ್ ಪಿಸ್ತೂಲ್‌ಗಳಿಂದ ಪೊಲೀಸರ ಮೇಲೆಯೇ ಸತತ 40 ಕ್ಕೂ ಹೆಚ್ಚು ರೌಂಡ್ ಫೈರಿಂಗ್ ನಡೆಸಿದ್ದಾರೆ. ಪ್ರತಿಯಾಗಿ ಪೊಲೀಸರು ಲಾಂಗ್ ರೇಂಜ್ ಗನ್‌ಗಳಿಂದ ಕೌಂಟರ್ ಅಟ್ಯಾಕ್ ಮಾಡಿದ್ದಾರೆ. ಕೇವಲ ಎರಡು ನಿಮಿಷಗಳ ಕಾಲ (120 ಸೆಕೆಂಡ್) ನಡೆದ ಈ ಭೀಕರ ಕಾಳಗದಲ್ಲಿ 60 ಕ್ಕೂ ಹೆಚ್ಚು ಸುತ್ತು ಗುಂಡುಗಳು ಸಿಡಿದ್ದು, ಅಂತಿಮವಾಗಿ ಶೂಟರ್‌ಗಳಾದ ದೀಪಾ (35), ನಿತಿನ್ (22), ಅಂಕಿತ್ (18) ಮತ್ತು 17 ವರ್ಷದ ಅಪ್ರಾಪ್ತ ಶಾಲಾ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಿವಂ ಎಂಬ ಮತ್ತೊಬ್ಬ ಶೂಟರ್ ಗಂಭೀರ ಗಾಯಗೊಂಡಿದ್ದು, ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿದೆ.

ದಾಳಿಯಲ್ಲಿ ಮೂವರು ಪೊಲೀಸ್ ಸಿಬ್ಬಂದಿಯೂ ಗುಂಡೇಟಿನಿಂದ ಗಾಯಗೊಂಡಿದ್ದಾರೆ. ಘಟನಾ ಸ್ಥಳದಿಂದ ಐದು ಅತ್ಯಾಧುನಿಕ ಪಿಸ್ತೂಲ್ ಮತ್ತು ಸ್ಕಾರ್ಪಿಯೋ ಕಾರನ್ನು ವಶಪಡಿಸಿಕೊಳ್ಳಲಾಗಿದ್ದು, ಇಡೀ ಪ್ರದೇಶ ಸದ್ಯ ಪೊಲೀಸ್ ಹತೋಟಿಯಲ್ಲಿದೆ. ಸಿನಿಮೀಯ ಮಾದರಿಯಲ್ಲಿ ನಡೆದ ಈ ಗ್ಯಾಂಗ್ ವಾರ್‌ನಿಂದ ಸ್ಥಳೀಯ ನಿವಾಸಿಗಳು ತೀವ್ರ ಆತಂಕಕ್ಕೊಳಗಾಗಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಕ್ಲೆಂಡ್​ನಲ್ಲಿ ‘ಮೋದಿ ಮೋದಿ’ ಘೋಷಣೆ: ಪ್ರಧಾನಿಯ ಸ್ವಾಗತಕ್ಕೆ ಜನಸಾಗರ

ಮೂರು ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸದ್ಯ ನ್ಯೂಜಿಲೆಂಡ್​ನಲ್ಲಿದ್ದು, ಕೆಲವೇ ಕ್ಷಣಗಳಲ್ಲಿ ಆಕ್ಲೆಂಡ್​​ನಲ್ಲಿ ನಡೆಯಲಿರುವ ಭಾರತೀಯ ಸಮುದಾಯದವರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅವರ ಜತೆ ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್‌ ಲಕ್ಸನ್‌ ಸಹ ಉಪಸ್ಥಿತರಿರಲಿದ್ದಾರೆ. ಸದ್ಯ, ಆಕ್ಲೆಂಡ್​​ನಲ್ಲಿ ಭಾರತೀಯ ಸಮುದಾಯದವರೂ ಸೇರಿದಂತೆ ಪ್ರಧಾನಿ ಮೋದಿ ಸ್ವಾಗತಕ್ಕೆ ಸಾವಿರಾರು ಜನ ಸೇರಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಈ ವಾರ ಒಟಿಟಿಗೆ ಬಂದಿವೆ ಸಖತ್ ಸಿನಿಮಾಗಳು, ಪಟ್ಟಿ ಇಲ್ಲಿದೆ – Kannada News | OTT Release this week, here is the movie’s list

ಕಬಡ್ಡಿ ಆಡುತ್ತಿದ್ದ ಗೆಳೆಯರು ಅಂಡರ್ವಲ್ಡ್ ಸಂಪರ್ಕಕ್ಕೆ ಬಂದು ಬಳಿಕ ಅವರ ಜೀವನದಲ್ಲಿ ಆಗುವ ಬದಲಾವಣೆ, ಬದಲಾಗುವ ಅವರ ಗೆಳೆತನ ಇತ್ಯಾದಿಗಳ ಕತೆಗಳನ್ನು ಹೇಳುತ್ತದೆ ಮಲಯಾಳಂನ ‘ಬಾಲ್ಟಿ’ ಸಿನಿಮಾ. ಈ ಸಿನಿಮಾ ಸೋನಿ ಲಿವ್ ನಲ್ಲಿ ವೀಕ್ಷಿಸಬಹುದು.

ಗೇಮ್ ಆಫ್ ಥ್ರೋನ್ಸ್​​ನ ಪ್ರೀಕ್ವೆಲ್ ಆಗಿರುವ ಹೌಸ್ ಆಫ್ ದಿ ಡ್ರ್ಯಾಗನ್ ಮೂರನೇ ಸೀಸನ್​​ನ ನಾಲ್ಕನೇ ಎಪಿಸೋಡ್ ಇದೇ ಭಾನುವಾರ ಜಿಯೋ ಹಾಟ್​​ಸ್ಟಾರ್​​ನಲ್ಲಿ ಬಿಡುಗಡೆ ಆಗಲಿದೆ. ಎಚ್​​ಬಿಓನಲ್ಲಿಯೂ ವೆಬ್ ಸರಣಿಯನ್ನು ವೀಕ್ಷಿಸಬಹುದಾಗಿದೆ.

ಸನ್ನಿ ಡಿಯೋಲ್ ಮತ್ತು ಅಕ್ಷಯ್ ಖನ್ನಾ ನಟನೆಯ ‘ಇಕ್ಕ’ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ಭಿನ್ನ ರೀತಿಯ ಥ್ರಿಲ್ಲರ್ ಕತೆಯನ್ನು ಈ ಸಿನಿಮಾ ಒಳಗೊಂಡಿದ್ದು, ಸಿನಿಮಾವನ್ನು ನೆಟ್​​ಫ್ಲಿಕ್ಸ್​​ನಲ್ಲಿ ವೀಕ್ಷಿಸಬಹುದಾಗಿದೆ.

ಹಿರಿಯ ನಟರಾದ ಜಯರಾಂ, ಊರ್ವಶಿ ಜೊತೆಗೆ ಇನ್ನೂ ಕೆಲವು ಯುವ ನಟ-ನಟಿಯರು ನಟಿಸಿರುವ ಹಾಸ್ಯ ಪ್ರಧಾನ ಥ್ರಿಲ್ಲರ್ ಸಿನಿಮಾ ‘ಪರಿಮಳ ಆಂಡ್ ಕೋ’ ಈ ವಾರ ಒಟಿಟಿಗೆ ಬಂದಿದೆ. ಸಿನಿಮಾವನ್ನು ಜೀ5ನಲ್ಲಿ ವೀಕ್ಷಿಸಬಹುದಾಗಿದೆ.

‘ಪತಿ ಪತ್ನಿ ಔರ್ ವೋ’ ಸರಣಿ ದಶಕಗಳಿಂದಲೂ ಹಿಂದಿ ಚಿತ್ರರಂಗದಲ್ಲಿ ಮುಂದುವರೆದುಕೊಂಡು ಬರುತ್ತಲೇ ಇದೆ. ಇದೀಗ ಆಯುಷ್ಮಾನ್ ಖುರಾನಾ, ಸಾರಾ ಅಲಿ ಖಾನ್, ರಕುಲ್ ಪ್ರೀತ್ ಸಿಂಗ್, ವಾಮಿಕಾ ಚಬ್ಬಿ ಅವರುಗಳು ನಟನೆಯ ಈ ಹಾಸ್ಯ ಪ್ರಧಾನ ಸಿನಿಮಾ ನೆಟ್​​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಿದೆ.

ಈ ವಾರ ರಾಮ್ ಚರಣ್, ಜಾನ್ಹವಿ ಕಪೂರ್ ಮತ್ತು ಶಿವರಾಜ್ ಕುಮಾರ್ ನಟನೆಯ ‘ಪೆದ್ದಿ’ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ಈ ಸೂಪರ್ ಹಿಟ್ ಸಿನಿಮಾವನ್ನು ನೆಟ್​​ಫ್ಲಿಕ್ಸ್​​ನಲ್ಲಿ ವೀಕ್ಷಿಸಬಹುದಾಗಿದೆ. ಚಿತ್ರಮಂದಿರದಲ್ಲಿ ಬಿಡುಗಡೆ ಆದಾಗ ವಿವಾದಕ್ಕೆ ಕಾರಣವಾಗಿದ್ದ ಸೀನ್​​​ಗಳನ್ನು ಒಟಿಟಿಯಲ್ಲಿ ತೆಗೆದು ಹಾಕಲಾಗಿದೆ.

ಭಾರತ ಚಿತ್ರರಂಗದ ಲಿಜೆಂಡರಿ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ತಮ್ಮ 93ನೇ ವಯಸ್ಸಿನಲ್ಲಿ ನಿರ್ದೇಶನ ಮಾಡಿರುವ ‘ಸಿಂಗ ಗೀತಂ’ ಸಿನಿಮಾ ಇತ್ತೀಚೆಗಷ್ಟೆ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿತ್ತು. ಸಿನಿಮಾಕ್ಕೆ ಸಾಧಾರಣ ಪ್ರತಿಕ್ರಿಯೆ ಸಹ ವ್ಯಕ್ತವಾಗಿತ್ತು. ಇದೀಗ ಈ ಸಿನಿಮಾ ಒಟಿಟಿಗೆ ಬಂದಿದೆ. ನೆಟ್​​ಫ್ಲಿಕ್ಸ್​​ನಲ್ಲಿ ಸಿನಿಮಾ ಅನ್ನು ನೋಡಬಹುದಾಗಿದೆ.

Published On – 12:56 pm, Sat, 11 July 26

Source link

6,6,6,6,6,6,6,4: ದಾಖಲೆಯ ಹಾಫ್ ಸೆಂಚುರಿ ಸಿಡಿಸಿದ ವೈದ್ಯಕೀಯ ವಿದ್ಯಾರ್ಥಿ! – Kannada News | Kamran Dhariwal Mashes Fastest half century in Vitality T20 Blast

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ವೈಟಾಲಿಟಿ ಟಿ20 ಬ್ಲಾಸ್ಟ್ ಕ್ರಿಕೆಟ್ ಟೂರ್ನಿಯಲ್ಲಿ ಭರ್ಜರಿ ದಾಖಲೆಯೊಂದು ನಿರ್ಮಾಣವಾಗಿದೆ. ಈ ದಾಖಲೆ ನಿರ್ಮಿಸಿರುವುದು ವೈದ್ಯಕೀಯ ವಿದ್ಯಾರ್ಥಿ ಕಮ್ ಕ್ರಿಕೆಟರ್ ಕಮ್ರಾನ್ ಧಾರಿವಾಲ್. ಈ ಟೂರ್ನಿಯ 99ನೇ ಪಂದ್ಯದಲ್ಲಿ ವುಸ್ಟರ್‌ಶೈರ್ ಮತ್ತು ಗ್ಲಾಸ್ಟರ್‌ಶೈರ್ ತಂಡಗಳು ಮುಖಾಮುಖಿಯಾಗಿತ್ತು.

ಈ ಮ್ಯಾಚ್​ನಲ್ಲಿ ಟಾಸ್ ಗೆದ್ದ ವುಸ್ಟರ್‌ಶೈರ್ ತಂಡದ ನಾಯಕ ಆ್ಯಡಂ ಹೋಸ್ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ವುಸ್ಟರ್‌ಶೈರ್ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 181 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಗ್ಲಾಸ್ಟರ್‌ಶೈರ್ ತಂಡವು ನಿರೀಕ್ಷಿತ ಆರಂಭ  ಪಡೆದಿರಲಿಲ್ಲ. ಕೇವಲ 73 ರನ್​ಗಳಿಸುವಷ್ಟರಲ್ಲಿ ಅಗ್ರ ಕ್ರಮಾಂಕದ ನಾಲ್ವರು ಬ್ಯಾಟರ್​ಗಳ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಈ ಹಂತದಲ್ಲಿ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕಮ್ರಾನ್ ಧಾರಿವಾಲ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ಎಸೆತದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ಕಮ್ರಾನ್ ವುಸ್ಟರ್‌ಶೈರ್ ಬೌಲರ್​ಗಳ ಬೆಂಡೆತ್ತಿದರು.

13 ಎಸೆತಗಳಲ್ಲಿ ಹಾಫ್ ಸೆಂಚುರಿ:

ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಕಮ್ರಾನ್ ಧಾರಿವಾಲ್ ತಾನೆದುರಿಸಿದ ಮೊದಲ 13 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್ ಹಾಗೂ 1 ಫೋರ್ ಬಾರಿಸಿದರು. ಈ ಮೂಲಕ ಕೇವಲ 13 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ವೈಟಾಲಿಟಿ ಟಿ20 ಬ್ಲಾಸ್ಟ್ ಕ್ರಿಕೆಟ್ ಟೂರ್ನಿಯಲ್ಲಿ ಅತೀ ವೇಗದ ಹಾಫ್ ಸೆಂಚುರಿ ಸಿಡಿಸಿದ ದಾಖಲೆ ನಿರ್ಮಿಸಿದರು.

ಅಷ್ಟೇ ಅಲ್ಲದೆ ಈ ಪಂದ್ಯದಲ್ಲಿ  ಕೇವಲ 22 ಎಸೆತಗಳನ್ನು ಎದುರಿಸಿದ ಕಮ್ರಾನ್ 8 ಭರ್ಜರಿ ಸಿಕ್ಸರ್ ಹಾಗೂ 4 ಫೋರ್​ಗಳೊಂದಿಗೆ  70 ರನ್ ಚಚ್ಚಿದರು. ಈ ಬಿರುಸಿನ ಬ್ಯಾಟಿಂಗ್ ಪರಿಣಾಮ ಗ್ಲಾಸ್ಟರ್‌ಶೈರ್ ತಂಡವು 19 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 182 ರನ್ ಬಾರಿಸಿ 2 ವಿಕೆಟ್​ಗಳ ಜಯ ಸಾಧಿಸಿತು.

ವೈದ್ಯಕೀಯ ವಿದ್ಯಾರ್ಥಿ!

21 ವರ್ಷದ ಕಮ್ರಾನ್ ಧಾರಿವಾಲ್ ಅವರ ಈ ಸಾಧನೆ ಮತ್ತಷ್ಟು ವಿಶೇಷವಾಗಲು ಕಾರಣ ಅವರ ಹಿನ್ನೆಲೆ. ಅವರು ಕೇವಲ ಕ್ರಿಕೆಟರ್ ಮಾತ್ರವಲ್ಲ, ಪ್ರಸ್ತುತ ವೈದ್ಯಕೀಯ ವಿದ್ಯಾರ್ಥಿ ಕೂಡ ಆಗಿದ್ದಾರೆ. ಓದಿನ ಜೊತೆಗೆ ಕ್ರಿಕೆಟ್‌ನಲ್ಲೂ ಇಂತಹ ಅದ್ಭುತ ದಾಖಲೆ ಬರೆದಿರುವುದು ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.

ಯೂನಿವರ್ಸಿಟಿ ಆಫ್ ಬ್ರಿಸ್ಟಲ್‌ನ ವಿದ್ಯಾರ್ಥಿಯಾಗಿರುವ ಕಮ್ರಾನ್ ಧಾರಿವಾಲ್ ಮೂಲತಃ ಭಾರತೀಯ. ಅಂದರೆ ಧಾರಿವಾಲ್ ಅವರ  ಭಾರತೀಯ ಮೂಲದ ಬ್ರಿಟಿಷ್ ಪ್ರಜೆಯಾಗಿದ್ದಾರೆ.

ಕಮ್ರಾನ್ ಅವರ ಪೋಷಕರು ಅಥವಾ ಪೂರ್ವಜರು ಭಾರತದಿಂದ ಬಂದು ಇಂಗ್ಲೆಂಡ್‌ನಲ್ಲಿ ನೆಲೆಸಿದವರಾಗಿದ್ದಾರೆ. ಇಂಗ್ಲೆಂಡ್‌ನಲ್ಲಿ ಇಂತಹ ಹಿನ್ನೆಲೆಯುಳ್ಳವರನ್ನು ‘ಬ್ರಿಟಿಷ್ ಏಷ್ಯನ್’ ಅಥವಾ ‘ಭಾರತೀಯ ಮೂಲದ ಬ್ರಿಟಿಷರು’ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: ಅರ್ಜೆಂಟೀನಾ ಎಫ್​ಎ ವಿರುದ್ಧ ಗುಪ್ತಚರ ಸಂಸ್ಥೆಯಿಂದ ತನಿಖೆ!

ಇದೀಗ ವಿಸ್ಫೋಟಕ ಹಾಫ್ ಸೆಂಚುರಿ ಸಿಡಿಸುವ ಮೂಲಕ ಕಮ್ರಾನ್ ಧಾರಿವಾಲ್ ಇಂಗ್ಲೆಂಡ್​ನಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಅದು ಕೂಡ 21ನೇ ವಯಸ್ಸಿನಲ್ಲಿ ಎಂಬುದು ವಿಶೇಷ.

Source link

ಬಡ ರೋಗಿಗಳಿಗೆ ಕೇಂದ್ರದಿಂದ ಸಿಹಿ ಸುದ್ದಿ: ಬಿಪಿ, ಮಧುಮೇಹ ಸೇರಿ 39 ಅಗತ್ಯ ಔಷಧಿಗಳ ಬೆಲೆ ಇಳಿಕೆ – Kannada News | NPPA Caps Prices of 39 Essential Medicines: Diabetes, BP and Heart Disease Drugs to Become More Affordable

ನವದೆಹಲಿ, ಜುಲೈ 11: ಪ್ರತಿ ತಿಂಗಳು ಔಷಧಿಗಳಿಗೆ ಸಾವಿರಾರು ರೂಪಾಯಿ ವೆಚ್ಚ ಮಾಡುತ್ತಿರುವ ಲಕ್ಷಾಂತರ ಬಡ, ಮಧ್ಯಮ ವರ್ಗದ ಕುಟುಂಬಗಳಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ ವಿವಿಧ ದೀರ್ಘಕಾಲೀನ ಕಾಯಿಲೆಗಳ ಚಿಕಿತ್ಸೆಗೆ ಬಳಸುವ 39 ಅಗತ್ಯ ಔಷಧಿಗಳ ಚಿಲ್ಲರೆ ಬೆಲೆಗೆ (Retail Price) ಗರಿಷ್ಠ ಮಿತಿಯನ್ನು ನಿಗದಿಪಡಿಸಿ ರಾಷ್ಟ್ರೀಯ ಔಷಧ ದರ ನಿಯಂತ್ರಣ ಪ್ರಾಧಿಕಾರ (NPPA) ಆದೇಶ ಹೊರಡಿಸಿದೆ. ಇದರಿಂದ ಅಗತ್ಯ ಔಷಧಿಗಳ ಬೆಲೆ ತುಸು ಕಡಿಮೆಯಾಗುತ್ತದೆ.

ಈ ಕ್ರಮವನ್ನು ಡ್ರಗ್ಸ್ (ಪ್ರೈಸ್ ಕಂಟ್ರೋಲ್) ಆದೇಶ–2013 (DPCO, 2013) ಅಡಿಯಲ್ಲಿ ಜಾರಿಗೆ ತರಲಾಗಿದೆ. ಔಷಧ ಕಂಪನಿಗಳು ಇನ್ನು ಮುಂದೆ ಎನ್‌ಪಿಪಿಎ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿನ ಬೆಲೆಗೆ ಈ ಔಷಧಿಗಳನ್ನು ಮಾರಾಟ ಮಾಡುವಂತಿಲ್ಲ. ಜೊತೆಗೆ ಹೊಸ ಬೆಲೆಗಳನ್ನು ಔಷಧಿಗಳ ಪ್ಯಾಕ್‌ಗಳ ಗರಿಷ್ಠ ಚಿಲ್ಲರೆ ಬೆಲೆ (MRP)ಯಲ್ಲಿ ಕೂಡಲೇ ಪರಿಷ್ಕರಿಸುವಂತೆ ಸೂಚಿಸಲಾಗಿದೆ.

ಔಷಧಿಗೆ ಗರಿಷ್ಠ ದರ ಮಿತಿ: ಯಾರಿಗೆ ಹೆಚ್ಚು ಪ್ರಯೋಜನ?

ಮಧುಮೇಹ, ಬಿಪಿ ಹಾಗೂ ಹೃದಯ ಸಂಬಂಧಿ ಕಾಯಿಲೆ ಇರುವವರು ಸಾಮಾನ್ಯವಾಗಿ ವರ್ಷಗಳ ಕಾಲ ಅಥವಾ ಜೀವಮಾನವಿಡೀ ಔಷಧಿಗಳನ್ನು ಸೇವಿಸಬೇಕಾಗುತ್ತದೆ. ಸದ್ಯ ಗರಿಷ್ಠ ದರ ಮಿತಿ ನಿಗದಿಪಡಿಸಿರುವುದರಿಂದ ಔಷಧಿಗಳ ದರ ತುಸು ಪ್ರಮಾಣದಲ್ಲಿ ಇಳಿಕೆಯಾಗಲಿದೆ. ಇದರಿಂದ ತಿಂಗಳ ಹಾಗೂ ವಾರ್ಷಿಕ ವೆಚ್ಚದ ಲೆಕ್ಕದಲ್ಲಿ ಬಡ ಕುಟುಂಬಗಳಿಗೆ ಗಮನಾರ್ಹ ಉಳಿತಾಯವಾಗಲಿದೆ. ವಿಶೇಷವಾಗಿ ನಿವೃತ್ತರು, ಹಿರಿಯ ನಾಗರಿಕರು ಹಾಗೂ ಒಂದಕ್ಕಿಂತ ಹೆಚ್ಚು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಈ ನಿರ್ಧಾರ ನೆರವಾಗಲಿದೆ.

ಕ್ಯಾಲ್ಸಿಯಂ, ವಿಟಮಿನ್-D3 ಮಾತ್ರೆಗಳಿಗೂ ದರ ನಿಗದಿ

ಮಧುಮೇಹ ಹಾಗೂ ಬಿಪಿ ಔಷಧಿಗಳ ಜೊತೆಗೆ ಕ್ಯಾಲ್ಸಿಯಂ ಮತ್ತು ವಿಟಮಿನ್-D3 ಮಾತ್ರೆಗಳ ಚಿಲ್ಲರೆ ದರವನ್ನು ಪ್ರತಿ ಮಾತ್ರೆಗೆ 8.93 (ಜಿಎಸ್‌ಟಿ ಸೇರಿ) ರೂ. ಎಂದು ಎನ್‌ಪಿಪಿಎ ನಿಗದಿಪಡಿಸಿದೆ. ಈ ಮಾತ್ರೆಗಳನ್ನು ಸಾಮಾನ್ಯವಾಗಿ ಹಿರಿಯ ನಾಗರಿಕರು, ಋತುಬಂಧದ ನಂತರದ ಮಹಿಳೆಯರು ಹಾಗೂ ಮೂಳೆ ದುರ್ಬಲತೆ ಇರುವವರಿಗೆ ವೈದ್ಯರು ಶಿಫಾರಸು ಮಾಡುತ್ತಾರೆ.

ರೇಬೀಸ್ ಚಿಕಿತ್ಸೆಯ ಔಷಧಿಗೂ ಪರಿಷ್ಕೃತ ದರ

ನಾಯಿ ಅಥವಾ ರೇಬೀಸ್ ಶಂಕಿತ ಪ್ರಾಣಿಗಳ ಕಡಿತದ ಬಳಿಕ ತುರ್ತು ಚಿಕಿತ್ಸೆಯಲ್ಲಿ ಬಳಸುವ ಆ್ಯಂಟಿ-ರೇಬೀಸ್ ಇಮ್ಯುನೊಗ್ಲೋಬುಲಿನ್ ಇಂಜೆಕ್ಷನ್‌ನ ಚಿಲ್ಲರೆ ದರವನ್ನು 119.48 ರೂ.ಗೆ ಪರಿಷ್ಕರಿಸಲಾಗಿದೆ. ಈ ಔಷಧಿ ರೇಬೀಸ್ ಲಸಿಕೆಯೊಂದಿಗೆ ನೀಡಲಾಗುತ್ತಿದ್ದು, ಸೋಂಕಿನ ವಿರುದ್ಧ ತಕ್ಷಣದ ರಕ್ಷಣೆಯನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಎಲ್ಲಾ ಔಷಧಿಗಳ ದರ ಇಳಿಕೆಯಾಗಲ್ಲ!

ಎನ್‌ಪಿಪಿಎ ನಿಗದಿಪಡಿಸಿರುವ ದರವು ಅಧಿಸೂಚನೆಯಲ್ಲಿ ಉಲ್ಲೇಖಿಸಿರುವ ನಿರ್ದಿಷ್ಟ ಔಷಧಿಗಳ ಸಂಯೋಜನೆ (Formulation) ಮತ್ತು ಪ್ರಮಾಣಕ್ಕೆ ಮಾತ್ರ ಅನ್ವಯಿಸುತ್ತದೆ. ಆದ್ದರಿಂದ ಎಲ್ಲಾ ಮಧುಮೇಹ ಅಥವಾ ಬಿಪಿ ಔಷಧಿಗಳ ಬೆಲೆ ಒಂದೇ ರೀತಿಯಲ್ಲಿ ಇಳಿಕೆಯಾಗುವುದಿಲ್ಲ. ವೈದ್ಯರು ಸೂಚಿಸಿರುವ ಔಷಧಿ ಈ ಪಟ್ಟಿಯಲ್ಲಿದ್ದರೆ ಮಾತ್ರ ಅದರ ಲಾಭ ಗ್ರಾಹಕರಿಗೆ ದೊರೆಯಲಿದೆ.

ರಾಷ್ಟ್ರದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version