ತಾಯಿ, ಅಜ್ಜಿ, ಮಾವನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಮಗ! – Kannada News | Bengaluru: Man unalives 3 of his family members in Kamakshipalya

ಬೆಂಗಳೂರು, ಜುಲೈ 11: ನಗರದ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂವರನ್ನು ಕೊಲೆ ಮಾಡಿ ಆರೋಪಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಕಳೆದ ಐದು ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಪ್ರಶಾಂತ್ ಎಂಬಾತ, ಮೊದಲು ಕೋಣೆಯೊಳಗೆ ತನ್ನ ಮಾವನೊಂದಿಗೆ ಗಲಾಟೆ ನಡೆಸಿ ಆತನನ್ನು ಕೊಲೆ ಮಾಡಿದ್ದಾನೆ. ಶಬ್ದ ಕೇಳಿ ತಾಯಿ ಮತ್ತು ಅಜ್ಜಿ ಬಾಗಿಲು ತೆರೆದಾಗ, ಸಿಕ್ಕಿಬೀಳುವ ಭಯದಿಂದ ಅವರಿಬ್ಬರನ್ನೂ ಬಾಗಿಲಲ್ಲೇ ಕೊಂದಿದ್ದಾನೆ.

ಕೃತ್ಯದ ಬಳಿಕ ಆರೋಪಿ ಪರಾರಿಯಾಗಲು ಯತ್ನಿಸಿದ್ದನ್ನು ಗಮನಿಸಿದ ಅಕ್ಕಪಕ್ಕದ ನಿವಾಸಿಗಳು ತಕ್ಷಣ ಮನೆಯ ಹೊರಗಿನಿಂದ ಡೋರ್ ಲಾಕ್ ಮಾಡಿ, 112 ಸಂಖ್ಯೆಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದರೆ ಸಿಕ್ಕಿಬೀಳುತ್ತೇನೆಂಬ ಭಯದಿಂದ ಪ್ರಶಾಂತ್ ಒಳಗಡೆಯೇ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಪೊಲೀಸರು ಬಂದ ಬಳಿಕವೇ ಇಡೀ ಕೃತ್ಯ ಬೆಳಕಿಗೆ ಬಂದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

40 ವರ್ಷಗಳಲ್ಲಿ ನ್ಯೂಜಿಲೆಂಡ್​ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ನರೆಂದ್ರ ಮೋದಿ! – Kannada News | Narendra Modi First Indian PM To Visit New Zealand In 40 Years

ಬೆಂಗಳೂರು, ಜುಲೈ 11: ಪ್ರಧಾನಿ ನರೇಂದ್ರ ಮೋದಿ ಅವರ ನ್ಯೂಜಿಲೆಂಡ್‌ ಭೇಟಿ ಮಹತ್ವದ್ದಾಗಿದ್ದು, ಈ ಮೂಲಕ ಮೋದಿ 40 ವರ್ಷಗಳ ನಂತರ ನ್ಯೂಜಿಲೆಂಡ್‌ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿಯಾಗಿದ್ದಾರೆ. ಅದ್ಧೂರಿ ಸ್ವಾಗತದ ನಂತರ ಆಕ್ಲೆಂಡ್​ನಲ್ಲಿ ಮಾತನಾಡಿದ ಮೋದಿ, ಭಯೋತ್ಪಾದನೆಯ ವಿರುದ್ಧ ಭುಜಕ್ಕೆ ಭುಜ ಕೊಟ್ಟು ಹೋರಾಡಲು ಕರೆ ನೀಡಿದ್ದಾರೆ. ಈ ನಿಟ್ಟಿನಲ್ಲಿ, ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಜಂಟಿ ಕ್ರಿಯಾ ಸಮಿತಿಯನ್ನು ರಚಿಸಲಾಗಿದೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸಹಕಾರವು ಇಂಡೋ-ಪೆಸಿಫಿಕ್ ವಲಯದಲ್ಲಿ ಶಾಂತಿ, ಸ್ಥಿರತೆ ಮತ್ತು ಭದ್ರತೆಗಾಗಿ ಅತ್ಯಂತ ಮಹತ್ವಪೂರ್ಣವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ವಿಶ್ವಸಂಸ್ಥೆ ಸೇರಿದಂತೆ ಇತರ ಜಾಗತಿಕ ಸಂಸ್ಥೆಗಳಲ್ಲಿ ಸುಧಾರಣೆಗಳು ಅಗತ್ಯವೆಂದು ಮೋದಿ ಒತ್ತಿ ಹೇಳಿದ್ದಾರೆ.

ಮತ್ತಷ್ಟು ವೀಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

PSI Scam: ಅಮಾನತ್ತಾದ ಅಮೃತ್ ಪೌಲ್ ವಿರುದ್ಧ ತನಿಖೆಗೆ ಸಿಎಂ ಡಿಕೆಶಿ ಗ್ರೀನ್ ಸಿಗ್ನಲ್! – Kannada News | Karnataka PSI Scam: Suspended ADGP Amrit Paul Faces Departmental Enquiry After 4 Years

ಬೆಂಗಳೂರು, ಜುಲೈ 11: ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದ್ದ 545 ಪಿಎಸ್ಐ (PSI) ನೇಮಕಾತಿ ಅಕ್ರಮ ಹಗರಣವು ಇದೀಗ ನಾಲ್ಕು ವರ್ಷಗಳ ಬಳಿಕ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಹಗರಣದ ಪ್ರಮುಖ ಆರೋಪಿಯಾಗಿ ಜೈಲು ಸೇರಿ ಪ್ರಸ್ತುತ ಜಾಮೀನಿನ ಮೇಲೆ ಹೊರಗಿರುವ ಸಸ್ಪೆಂಡೆಡ್ ಎಡಿಜಿಪಿ (ADGP) ಅಮೃತ್ ಪೌಲ್ ವಿರುದ್ಧ ಕೊನೆಗೂ ಇಲಾಖಾ ತನಿಖೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಅಧಿಕೃತ ಕ್ರಮ ಕೈಗೊಂಡಿದೆ.

ಚಾರ್ಜ್ ಶೀಟ್ ಸಲ್ಲಿಕೆಯಾಗಿ 4 ವರ್ಷದ ಬಳಿಕ ತನಿಕೆ

ಹಗರಣ ನಡೆದ ಅವಧಿಯಲ್ಲಿ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದ ಅಮೃತ್ ಪೌಲ್ ವಿರುದ್ಧ 2022 ರಲ್ಲೇ ಸಿಐಡಿ ಎಸ್‌ಐಟಿ ಪೊಲೀಸರು 1,406 ಪುಟಗಳ ದೋಷಾರೋಪ ಪಟ್ಟಿಯನ್ನು (ಚಾರ್ಜ್ ಶೀಟ್) ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಸಲ್ಲಿಸಿದ್ದರು. ಚಾರ್ಜ್ ಶೀಟ್ ಸಲ್ಲಿಕೆಯಾಗಿ 4 ವರ್ಷ ಕಳೆದಿದ್ದರೂ ಇಲಾಖಾ ವಿಚಾರಣೆ ನಡೆದಿರಲಿಲ್ಲ. ಸದ್ಯ ಜುಲೈ 9 ರಂದು ಇಲಾಖಾ ವಿಚಾರಣೆಯ ಚಾರ್ಜ್ ಶೀಟ್ ಜಾರಿಯಾಗುವ ಮೂಲಕ ತನಿಖೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಸಿಎಂ ಡಿ.ಕೆ. ಶಿವಕುಮಾರ್ ಅನುಮೋದನೆ

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸಚಿವರೂ ಆಗಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಇಲಾಖಾ ತನಿಖೆಗೆ ಅಧಿಕೃತ ಅನುಮೋದನೆ ನೀಡಿದ್ದಾರೆ. ಅಖಿಲ ಭಾರತ ಸೇವೆ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳು 1969 ರ ನಿಯಮ 8(4) ರ ಅನ್ವಯ ಈ ಆಂತರಿಕ ತನಿಖೆ ಮುಂದುವರೆಯಲಿದೆ.

ತನಿಖಾ ಸಂಸ್ಥೆ ನೀಡಿದ್ದ ವರದಿ ಹಾಗೂ ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ ತಮ್ಮ ಮೇಲಿನ ಆರೋಪಗಳಿಗೆ ವಿವರಣೆ ನೀಡುವಂತೆ ಡಿಪಿಎಆರ್ ಇಲಾಖೆಯು ಅಮೃತ್ ಪೌಲ್‌ಗೆ ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸುವಂತೆ ಸೂಚಿಸಿದೆ. ಆರಂಭದಲ್ಲಿ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆ ಹಾಗೂ ಉತ್ತರ ಕರ್ನಾಟಕದ ಎರಡು ಠಾಣೆಗಳಲ್ಲಿ ದಾಖಲಾಗಿದ್ದ ಈ ಪ್ರಕರಣ, ನಂತರ ಸಿಐಡಿ ಎಸ್‌ಐಟಿಗೆ ವರ್ಗಾವಣೆಯಾಗಿತ್ತು. ರಾಜ್ಯ ಇತಿಹಾಸದಲ್ಲೇ ಮೊದಲ ಬಾರಿಗೆ ಎಡಿಜಿಪಿ ದರ್ಜೆಯ ಅಧಿಕಾರಿಯೊಬ್ಬರು ಈ ಹಗರಣದಲ್ಲಿ ಜೈಲು ಪಾಲಾಗಿದ್ದು, ಈಗ ಇಲಾಖಾ ವಿಚಾರಣೆ ತೀವ್ರಗೊಂಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Vastu Tips: ಮನೆಯಲ್ಲಿ ಉರ್ಲಿ ಇಟ್ಟರೆ ಏನು ಪ್ರಯೋಜನ? ವಾಸ್ತು ಮತ್ತು ಜ್ಯೋತಿಷ್ಯಶಾಸ್ತ್ರ ಹೇಳುವುದೇನು? – Kannada News | Urli for Home Decor: Vastu Tips to Attract Positive Energy and Prosperity

ಇತ್ತೀಚಿನ ದಿನಗಳಲ್ಲಿ ಮನೆ ಅಲಂಕಾರದಲ್ಲಿ ಉರ್ಲಿ (Urli)ಗೆ ವಿಶೇಷ ಸ್ಥಾನ ದೊರೆತಿದೆ. ಆದರೆ ಇದು ಕೇವಲ ಅಲಂಕಾರಿಕ ವಸ್ತುವಲ್ಲ. ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯದ ಪ್ರಕಾರ, ಉರ್ಲಿಯನ್ನು ಸರಿಯಾದ ಸ್ಥಳದಲ್ಲಿ ಇರಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ, ಮಾನಸಿಕ ನೆಮ್ಮದಿ ದೊರೆಯುತ್ತದೆ ಹಾಗೂ ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆಯಿದೆ. ಹಾಗಾದರೆ ಉರ್ಲಿ ಎಂದರೇನು? ಅದನ್ನು ಹೇಗೆ ಬಳಸಬೇಕು? ಇದರ ಪ್ರಯೋಜನಗಳೇನು? ತಿಳಿದುಕೊಳ್ಳೋಣ.

ಉರ್ಲಿ ಎಂದರೇನು?

ಉರ್ಲಿ ಎಂಬ ಪದವು ಉರುಳಿ ಎಂಬ ಪದದಿಂದ ಬಂದಿದೆ. ಇದರರ್ಥ ಸುತ್ತಿನ ಬಟ್ಟಲು. ಪ್ರಾಚೀನ ಕಾಲದಲ್ಲಿ ದೇವರ ಪೂಜೆಯಲ್ಲಿ ನೀರು ಮತ್ತು ಪರಿಮಳಯುಕ್ತ ಹೂವುಗಳನ್ನು ಇರಿಸಲು ಈ ಪಾತ್ರೆಯನ್ನು ಬಳಸಲಾಗುತ್ತಿತ್ತು. ಇಂದಿಗೂ ಇದು ಮನೆಗಳ ಅಲಂಕಾರದಲ್ಲಿ ಹಾಗೂ ವಾಸ್ತು ನಂಬಿಕೆಗಳ ಭಾಗವಾಗಿ ಜನಪ್ರಿಯವಾಗಿದೆ.

ವಾಸ್ತು ಮತ್ತು ಜ್ಯೋತಿಷ್ಯದಲ್ಲಿ ಉರ್ಲಿಯ ಮಹತ್ವ:

ವಾಸ್ತು ಶಾಸ್ತ್ರದ ಪ್ರಕಾರ, ನೀರು ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುವ ಗುಣವನ್ನು ಹೊಂದಿದೆ ಎಂದು ನಂಬಲಾಗುತ್ತದೆ. ಆದ್ದರಿಂದ ಉರ್ಲಿಯನ್ನು ಸ್ವಚ್ಛ ನೀರಿನಿಂದ ತುಂಬಿಸಿ, ಅದರೊಳಗೆ ತಾಜಾ ಹೂವುಗಳು ಅಥವಾ ತೇಲುವ ದೀಪಗಳನ್ನು ಇಡುವ ಪದ್ಧತಿಯಿದೆ. ಇದರಿಂದ ಮನೆಯ ವಾತಾವರಣದಲ್ಲಿ ಸಕಾರಾತ್ಮಕತೆ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಕೆಲವರು ಉರ್ಲಿಯೊಳಗೆ ಆಮೆಯ ಪ್ರತಿಮೆಯನ್ನು ಸಹ ಇಡುತ್ತಾರೆ. ವಾಸ್ತು ನಂಬಿಕೆಯ ಪ್ರಕಾರ, ಇದು ಸ್ಥಿರತೆ, ದೀರ್ಘಾಯುಷ್ಯ ಮತ್ತು ಭಾವನಾತ್ಮಕ ಸಮತೋಲನವನ್ನು ಸಂಕೇತಿಸುತ್ತದೆ.

ಇದನ್ನೂ ಓದಿ: ಶ್ರಾದ್ಧದಲ್ಲಿ ಮೊದಲು ಕಾಗೆಗೆ ಅನ್ನ ಯಾಕೆ ನೀಡುತ್ತಾರೆ? ಇದರ ಹಿಂದಿದೆ ಗರುಡ ಪುರಾಣ ಮತ್ತು ರಾಮಾಯಣದ ಕುತೂಹಲಕಾರಿ ಕಥೆ

ಮನಸ್ಸಿಗೆ ಶಾಂತಿ ಮತ್ತು ಸಮೃದ್ಧಿ:

ಹಿತ್ತಾಳೆಯಿಂದ ತಯಾರಿಸಲಾದ ಉರ್ಲಿಯನ್ನು ಐಶ್ವರ್ಯ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ವಾಸ್ತು ಪ್ರಕಾರ ಇದನ್ನು ಮನೆಯ ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡುವುದು ಶುಭಕರ ಎಂದು ಹೇಳಲಾಗುತ್ತದೆ. ಉರ್ಲಿಯಲ್ಲಿರುವ ನೀರು ಮತ್ತು ತೇಲುವ ಬಣ್ಣಬಣ್ಣದ ಹೂವುಗಳು ಮನೆಯ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ಮನಸ್ಸಿಗೆ ನೆಮ್ಮದಿ ನೀಡುತ್ತವೆ ಎಂಬ ನಂಬಿಕೆಯಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದ ವಿಳಂಬ ನೀತಿ: ಕೇಂದ್ರದಿಂದ ಬೆಂಗಳೂರಿಗೆ ಸಿಗಲಿದ್ದ 4500 ಇ-ಬಸ್ ಬೇರೆ ರಾಜ್ಯಗಳ ಪಾಲಾಗುವ ಆತಂಕ! – Kannada News | Karnataka Delay May Cost Bengaluru 4500 PM E DRIVE Electric Buses as Other States Seek Reallocation

ಬೆಂಗಳೂರು, ಜುಲೈ 11: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಗೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪಿಎಂ ಇ-ಡ್ರೈವ್ (PM E-DRIVE) ಯೋಜನೆಯಡಿ 4,500 ಎಲೆಕ್ಟ್ರಿಕ್ ಬಸ್‌ಗಳು ಮಂಜೂರಾಗಿ ತಿಂಗಳುಗಳೇ ಕಳೆದಿವೆ. ಇದೀಗ ರಾಜ್ಯ ಸರ್ಕಾರದ ವಿಳಂಬ ನೀತಿಯಿಂದ ಅವುಗಳು ಬೇರೆ ರಾಜ್ಯಗಳ ನಗರಗಳ ಪಾಲಾಗುವ ಆತಂಕ ಎದುರಾಗಿದೆ. ಕರ್ನಾಟಕ ಸಚಿವ ಸಂಪುಟದಿಂದ ಇನ್ನೂ ಅನುಮೋದನೆ ಸಿಗದಿರುವ ಹಿನ್ನೆಲೆಯಲ್ಲಿ ಕಾರ್ಯಾದೇಶ ಹೊರಡಿಸುವ ಪ್ರಕ್ರಿಯೆ ಸ್ಥಗಿತಗೊಂಡಿದೆ. ಈ ಮಧ್ಯೆ, ಬೆಂಗಳೂರಿಗೆ (Bengaluru) ಹಂಚಿಕೆಯಾಗಬೇಕಿದ್ದ ಬಸ್‌ಗಳ ಒಂದು ಭಾಗವನ್ನು ಹಂಚಿಕೆ ಮಾಡುವಂತೆ ಬೇರೆ ರಾಜ್ಯಗಳಿಂದ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಕೆಯಾಗಿದೆ ಎಂದು ವರದಿಯಾಗಿದೆ.

ವಿವಿಧ ರಾಜ್ಯಗಳಿಂದ ಹೆಚ್ಚುವರಿ ಬಸ್​ಗೆ ಬೇಡಿಕೆ

ಸದ್ಯ, ಪಿಎಂ ಇ-ಡ್ರೈವ್ ಯೋಜನೆಯಡಿ ಸೂರತ್ 500, ಹೈದರಾಬಾದ್ 600, ಆಂಧ್ರಪ್ರದೇಶ 2,000, ರಾಜಸ್ಥಾನ 900, ಮೇಘಾಲಯ 20 ಹಾಗೂ ಜಮ್ಮು-ಕಾಶ್ಮೀರ 200 ಎಲೆಕ್ಟ್ರಿಕ್ ಬಸ್‌ಗಳ ಹೆಚ್ಚುವರಿ ಹಂಚಿಕೆಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿವೆ ಎಂದು ‘ಮನಿ ಕಂಟ್ರೋಲ್’ ವರದಿ ಮಾಡಿದೆ. ಒಟ್ಟಾರೆ 4,220 ಹೆಚ್ಚುವರಿ ಬಸ್‌ಗಳಿಗೆ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಕೆಯಾಗಿದೆ.

2025ರಲ್ಲೇ ಟೆಂಡರ್ ಪೂರ್ಣಗೊಳಿಸಿದ್ದ ಕೇಂದ್ರ

ಬೆಂಗಳೂರಿಗೆ ಬಸ್ ನೀಡುವ ಬಗ್ಗೆ ಕೇಂದ್ರ ಸರ್ಕಾರವು 2025ರ ಡಿಸೆಂಬರ್‌ನಲ್ಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿತ್ತು. ಆದರೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಇನ್ನೂ ಕಾರ್ಯಾದೇಶ ಹೊರಡಿಸಿಲ್ಲ. ರಾಜ್ಯ ಸಚಿವ ಸಂಪುಟದ ಅನುಮೋದನೆಗಾಗಿ ಸಂಸ್ಥೆ ಕಾಯುತ್ತಿದೆ. ಇನ್ನೊಂದೆಡೆ ಹೈದರಾಬಾದ್ ಫೆಬ್ರವರಿ 18ರಂದೇ, ಸೂರತ್ ಮಾರ್ಚ್ 9ರಂದು ಹಾಗೂ ಅಹಮದಾಬಾದ್ ಮಾರ್ಚ್ 16ರಂದು ಕಾರ್ಯಾದೇಶ ನೀಡಿವೆ. ದೆಹಲಿಯೂ ಜುಲೈ ಮಧ್ಯಭಾಗದಲ್ಲಿ ಕಾರ್ಯಾದೇಶ ನೀಡುವ ಸಾಧ್ಯತೆಯಿದೆ.

ಕರ್ನಾಟಕದ ನಡೆಗೆ ಕೇಂದ್ರ ಅಸಮಾಧಾನ

ಈ ನಡುವೆ ಕೇಂದ್ರದ ಬೃಹತ್ ಕೈಗಾರಿಕಾ ಸಚಿವಾಲಯವೂ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದು, ಬೇಡಿಕೆ ದೃಢೀಕರಣ ಪತ್ರ ಪಡೆದ ನಾಲ್ಕು ವಾರಗಳೊಳಗೆ ಕಾರ್ಯಾದೇಶ ನೀಡಬೇಕಿದ್ದರೂ ಅದು ಇನ್ನೂ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಶೀಘ್ರದಲ್ಲೇ ಒಪ್ಪಂದ ಪ್ರಕ್ರಿಯೆ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಕೇಂದ್ರದ 1,505 ಕೋಟಿ ರೂ. ಸಹಾಯಧನ ಮಂಜೂರು

ಈ ಯೋಜನೆಯಡಿ ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್‌ಗಳಿಗೆ ಗರಿಷ್ಠ 1,505 ಕೋಟಿ ರೂ. ಕೇಂದ್ರ ಸಹಾಯಧನ ಮಂಜೂರಾಗಿದೆ. ಇದರಲ್ಲಿ 3,500 ನಾನ್-ಎಸಿ 12 ಮೀಟರ್ ಬಸ್‌ಗಳು, 300 ಎಸಿ 12 ಮೀಟರ್ ಬಸ್‌ಗಳು, 600 ನಾನ್-ಎಸಿ 9 ಮೀಟರ್ ಬಸ್‌ಗಳು ಹಾಗೂ 100 ಎಸಿ 9 ಮೀಟರ್ ಬಸ್‌ಗಳು ಸೇರಿವೆ.

ಇದನ್ನೂ ಓದಿ: ಕೇಂದ್ರದ 4,500 ಇ-ಬಸ್ ಪಡೆಯಲು ರಾಜ್ಯ ಹಿಂದೇಟು ಹಾಕ್ತಿರೋದೇಕೆ? ಅಸಲಿ ಕಾರಣ ಬಿಚ್ಚಿಟ್ಟ ಸಾರಿಗೆ ಸಚಿವ ಭೈರತಿ ಸುರೇಶ್

ದೇಶಾದ್ಯಂತ ಪಿಎಂ ಇ ಡ್ರೈವ್ ಯೋಜನೆಯಡಿ 14,028 ಎಲೆಕ್ಟ್ರಿಕ್ ಬಸ್‌ಗಳಿಗೆ ಅನುಮೋದನೆ ದೊರೆತಿದ್ದು, ಈಗಾಗಲೇ 13,800 ಬಸ್‌ಗಳ ಖರೀದಿ ಪ್ರಕ್ರಿಯೆ ಪೂರ್ಣಗೊಂಡಿದೆ. ಪುಣೆ 1,000 ಬಸ್‌ಗಳಿಗೆ ಕಾರ್ಯಾದೇಶ ನೀಡಿದ್ದು, ಮುಂಬೈ ಕೂಡ ಇದೇ ತಿಂಗಳ ಅಂತ್ಯದೊಳಗೆ ಪ್ರಕ್ರಿಯೆ ಪೂರ್ಣಗೊಳಿಸುವ ನಿರೀಕ್ಷೆಯಿದೆ. ಕರ್ನಾಟಕ ಸರ್ಕಾರ ಇನ್ನೂ ವಿಳಂಬ ಮಾಡಿದರೆ, ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಬಲ ತುಂಬಬೇಕಿದ್ದ 4,500 ಎಲೆಕ್ಟ್ರಿಕ್ ಬಸ್‌ಗಳ ಯೋಜನೆ ಕೈತಪ್ಪುವ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕ್ವಾಟ್ಲೆ ಕಿಚನ್​​ಗೆ ಬಂದ ‘ಧುರಧಂರ್’ ಹಮ್ಜಾ ಅಲಿ: ವಿಡಿಯೋ – Kannada News | Dhurandhar’s Hamza Ali entered kwatle kitchen season 2

ಧುರಂಧರ್’ (Dhurandhar) ಮತ್ತು ‘ಧುರಂಧರ್ 2’ ಸಿನಿಮಾಗಳು ದೊಡ್ಡ ಹಿಟ್ ಆಗಿದೆ. ನಟ ರಣ್ವೀರ್ ಸಿಂಗ್, ‘ಧುರಂಧರ್’ ಸಿನಿಮಾನಲ್ಲಿ ಹಮ್ಜಾ ಅಲಿ ಪಾತ್ರದಲ್ಲಿ ಸಖತ್ ಆಗಿ ಮಿಂಚಿದ್ದಾರೆ. ಇಂಟರ್ನೆಟ್ ಮೀಮ್​​​ಗಳಲ್ಲಿ, ಜಾಹೀರಾತುಗಳಲ್ಲಿ ಇದೀಗ ಹಮ್ಜಾ ಅಲಿ ಮಿಂಚುತ್ತಿದ್ದಾರೆ. ಇದೀಗ ಕಲರ್ಸ್​​ನ ಕ್ವಾಟ್ಲೆ ಕಿಚನ್​​ಗೆ ‘ಧುರಂಧರ್’ನ ಹಮ್ಜಾ ಅಲಿ ಬಂದಿದ್ದಾರೆ. ಹಾಸ್ಯ ಕಲಾವಿದರೊಬ್ಬರು ಹಮ್ಜಾ ಅಲಿ ವೇಶ ಧರಿಸಿ ‘ಕ್ವಾಟ್ಲೆ ಕಿಚನ್ 2’ಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳಿಗೆ ಸಖತ್ ಕ್ವಾಟ್ಲೆ ಕೊಟ್ಟಿದ್ದಾರೆ. ಸ್ಪರ್ಧಿಗಳು ಸಹ ಹಮ್ಜಾ ಅಲಿಯ ಕಾಲೆಳೆದಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Source link

15 ಕೋಟಿ ಸಂಭಾವನೆ ಪ್ರಕರಣಕ್ಕೆ ಟ್ವಿಸ್ಟ್, ಸತ್ಯ ಮುಚ್ಚಿಟ್ಟರೇ ನಿರ್ದೇಶಕಿ – Kannada News | Twist in Lady Director Sudha Kongara Remuneration Case

ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ನಿರ್ದೇಶಕಿ ಸುಧಾ ಕೊಂಗರ (Sudha Kongara), ದೇಶದ ಯಶಸ್ವಿ ಸಿನಿಮಾ ನಿರ್ದೇಶಕಿಯರಲ್ಲಿ ಒಬ್ಬರು. ‘ಇರುದು ಸುಟ್ರು’, ‘ಸೂರರೈ ಪೊಟ್ರು’ ಅಂಥಹಾ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ಸುಧಾ ಕೊಂಗರ, ಇತ್ತೀಚೆಗಷ್ಟೆ ‘ಪರಾಶಕ್ತಿ’ ಹೆಸರಿನ ಸಿನಿಮಾ ನಿರ್ದೇಶಿಸಿದರು. ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಫ್ಲಾಪ್ ಆಯ್ತು. ಶಿವಕಾರ್ತಿಕೇಯನ್, ಶ್ರೀಲೀಲಾ ನಟಿಸಿದ್ದ ಈ ಸಿನಿಮಾ ನಿರೀಕ್ಷಿತ ಯಶಸ್ಸು ಗಳಿಸಲಿಲ್ಲ. ಜೊತೆಗೆ ಸಾಕಷ್ಟು ಟೀಕೆಗೆ ಸಹ ಸಿನಿಮಾ ಗುರಿಯಾಯ್ತು. ಆದರೆ ಆ ಬಳಿಕ ಸಿನಿಮಾ ನಿರ್ಮಾಪಕರ ವಿರುದ್ಧ ಸಂಭಾವನೆ ಬಾಕಿ ಆರೋಪ ಮಾಡಿ ನಿರ್ದೇಶಕಿ ಸುಧಾ ಕೊಂಗರ ದೂರು ದಾಖಲಿಸಿದ್ದರು. ಆದರೆ ಇದೀಗ ಸುಧಾ ಅವರೇ ಸತ್ಯವನ್ನು ಮುಚ್ಚಿಟ್ಟಿದ್ದಾರೆಂದು ನಿರ್ಮಾಣ ಸಂಸ್ಥೆ ಆರೋಪ ಮಾಡಿದೆ.

ಸುಧಾ ಕೊಂಗರ ಅವರಿಗೆ ‘ಪರಾಶಕ್ತಿ’ ಸಿನಿಮಾ ನಿರ್ದೇಶಿಸಲು ಬರೋಬ್ಬರಿ 15 ಕೋಟಿ ರೂಪಾಯಿ ಸಂಭಾವನೆಯ ಒಪ್ಪಂದ ಆಗಿತ್ತಂತೆ. ಇದಕ್ಕೆ ಜಿಎಸ್​​ಟಿ ಸೇರಿಸಿ ಒಟ್ಟು 17.70 ಕೋಟಿ ರೂಪಾಯಿಗಳನ್ನು ಡಾನ್ ಪಿಕ್ಚರ್ಸ್ ಸಂಭಾವನೆಯಾಗಿ ಕೊಡುವಂತೆ ಒಪ್ಪಂದ ಮಾಡಿಕೊಳ್ಳಲಾಗಿತ್ತಂತೆ. ಆದರೆ ಡಾನ್ ಪಿಕ್ಚರ್ಸ್ ಈ ವರೆಗೆ 9.31 ಕೋಟಿ ರೂಪಾಯಿಗಳನ್ನಷ್ಟೆ ನೀಡಿದ್ದು, ಬಾಕಿ ಇರುವ 8.39 ಕೋಟಿ ರೂಪಾಯಿ ಹಣವನ್ನು ನೀಡಿಲ್ಲ ಎಂದು ಆರೋಪಿಸಿ ಸುಧಾ ಕೊಂಗರ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಡಾನ್ ಪಿಕ್ಚರ್ಸ್​​ನವರು ತಮ್ಮ ಬಾಕಿ ಸಂಭಾವನೆ ನೀಡುವವರೆಗೆ ಅವರ ಮುಂದಿನ ಸಿನಿಮಾ ‘ಇದಯಮ್ ಮುರಳಿ’ ಸಿನಿಮಾ ಬಿಡುಗಡೆಗೆ ಅನುಮತಿ ನೀಡಬಾರದು ಹಾಗೂ ‘ಪರಾಶಕ್ತಿ’ ಸಿನಿಮಾದ ಟಿವಿ ಬಿಡುಗಡೆಗೆ ಅನುಮತಿ ನೀಡಬಾರದು ಎಂದು ಸುಧಾ ಕೊಂಗರ ಆಗ್ರಹಿಸಿದ್ದರು. ಅದರಂತೆ ನ್ಯಾಯಾಲಯವು ಸಿನಿಮಾ ಬಿಡುಗಡೆಗೆ ತಾತ್ಕಾಲಿಕ ತಡೆಯನ್ನು ಸಹ ನೀಡಿದೆ.

ಇದನ್ನೂ ಓದಿ:‘ಪರಾಶಕ್ತಿ’ ತಂಡದವರು ಸಂಭಾವನೆ ನೀಡಿಲ್ಲ; ಕೋರ್ಟ್ ಮೆಟ್ಟಿಲೇರಿದ ನಿರ್ದೇಶಕಿ ಸುಧಾ ಕೊಂಗರ

ಇದೀಗ ಡಾನ್ ಪಿಕ್ಚರ್ಸ್ ನ್ಯಾಯಾಲಯಕ್ಕೆ ನೀಡಿರುವ ಮಾಹಿತಿಯಂತೆ, ಡಾನ್ ಪಿಕ್ಚರ್ಸ್​​ನದ್ದೇ ಅಂಗ ಸಂಸ್ಥೆಯಾಗಿದ್ದ 2ಡಿ ಎಂಟರ್ಟೈನ್​​ಮೆಂಟ್ ಬಳಿ ಕೆಲ ವರ್ಷಗಳ ಹಿಂದೆಯೇ ‘ಪರಾಶಕ್ತಿ’ ಸಿನಿಮಾದ ಚಿತ್ರಕತೆಗಾಗಿ ಸುಧಾ ಕೊಂಗರಾ ಅವರು 4.12 ಕೋಟಿ ರೂಪಾಯಿ ಹಣವನ್ನು ಪಡೆದುಕೊಂಡಿದ್ದರಂತೆ. ಆದರೆ ಸುಧಾ ಅವರು ಆ ವಿಷಯವನ್ನು ಮುಚ್ಚಿಟ್ಟಿದ್ದಾರೆ ಎಂದಿದ್ದಾರೆ. ಅಲ್ಲದೆ, ಅದೇ ಚಿತ್ರಕತೆಯನ್ನು ಮುಂದಿಟ್ಟುಕೊಂಡು ಅಕ್ರಾ ಎಂಟರ್ಟೈನ್​​ಮೆಂಟ್ ಜೊತೆಗೂ ಒಪ್ಪಂದ ಮಾಡಿಕೊಂಡಿದ್ದರು ಎಂದು ಡಾನ್ ಪಿಕ್ಚರ್ಸ್ ಹೇಳಿದೆ.

ಸುಧಾ ಕೊಂಗರ ನಿರ್ದೇಶಿಸಿದ್ದ ‘ಪರಾಶಕ್ತಿ’ ಸಿನಿಮಾ ತಮಿಳರು ಹಿಂದಿ ಹೇರಿಕೆ ವಿರುದ್ಧ ಮಾಡಿದ ಹೋರಾಟದ ಕತೆಯನ್ನು ಒಳಗೊಂಡಿದೆ. ಸಿನಿಮಾನಲ್ಲಿ ಶಿವಕಾರ್ತಿಕೇಯನ್ ನಾಯಕ, ಶ್ರೀಲೀಲಾ ನಾಯಕಿ. ಸಿನಿಮಾನಲ್ಲಿ ವಿಲನ್ ಆಗಿ ರವಿ ಮೋಹನ್ ನಟಿಸಿದ್ದರು. ಆದರೆ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ನಿರೀಕ್ಷಿತ ಯಶಸ್ಸು ಗಳಿಸಲಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅರ್ಜೆಂಟೀನಾ ಎಫ್​ಎ ವಿರುದ್ಧ ಗುಪ್ತಚರ ಸಂಸ್ಥೆಯಿಂದ ತನಿಖೆ! – Kannada News | FBI investigates Argentina Football Association’s financial operations

ಅರ್ಜೆಂಟೀನಾ ಫುಟ್‌ಬಾಲ್ ಅಸೋಸಿಯೇಷನ್ (AFA) ಈಗ ಅಮೆರಿಕಾದ ಗುಪ್ತಚರ ಸಂಸ್ಥೆಯಾದ ಎಫ್‌ಬಿಐ (FBI) ಮತ್ತು ಅಲ್ಲಿನ ನ್ಯಾಯಾಂಗ ಇಲಾಖೆಯ ತನಿಖೆಯ ಸುಳಿಯಲ್ಲಿದೆ. ಕೋಟ್ಯಂತರ ಡಾಲರ್ ಹಣದ ಅಕ್ರಮ ವರ್ಗಾವಣೆ ಮತ್ತು ವಂಚನೆಯ ಆರೋಪದ ಹಿನ್ನೆಲೆಯಲ್ಲಿ ಈ ತನಿಖೆ ನಡೆಯುತ್ತಿದೆ. ಈ ಹಗರಣದ ಪ್ರಮುಖ ವಿವರಗಳು ಈ ಕೆಳಗಿನಂತಿದೆ…

ಅಕ್ರಮ ಹಣ ವರ್ಗಾವಣೆ:

ಅರ್ಜೆಂಟೀನಾ ಫುಟ್‌ಬಾಲ್ ಅಸೋಸಿಯೇಷನ್‌ನ ಜಾಗತಿಕ ಪ್ರಾಯೋಜಕತ್ವ ಮತ್ತು ಪ್ರಸಾರ ಹಕ್ಕುಗಳ ಹಣವನ್ನು ಅಮೆರಿಕಾದ ಫ್ಲೋರಿಡಾದಲ್ಲಿರುವ TourProdEnter LLC ಎಂಬ ಕಂಪನಿಯ ಮೂಲಕ ವರ್ಗಾಯಿಸಲಾಗಿದೆ. ಈ ಮೂಲಕ 260 ಮಿಲಿಯನ್ ಡಾಲರ್ ವ್ಯವಹಾರ ನಡೆಸಿದೆ ಎಂದು ತಿಳಿದು ಬಂದಿದೆ.

ಈ ಒಟ್ಟು ಮೊತ್ತದಲ್ಲಿ ಸುಮಾರು 57 ಮಿಲಿಯನ್ ಡಾಲರ್ ಹಣವನ್ನು ಯಾವುದೇ ಸ್ಪಷ್ಟ ಆರ್ಥಿಕ ಅಥವಾ ಕಾರ್ಯಾಚರಣೆಯ ಕಾರಣವಿಲ್ಲದೆ ವಿವಿಧ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ಎಫ್‌ಬಿಐ ಸಂಶಯ ವ್ಯಕ್ತಪಡಿಸಿದೆ.

ನಕಲಿ ಕಂಪನಿಗಳು:

ತನಿಖೆಯ ಪ್ರಾಥಮಿಕ ವರದಿಗಳ ಪ್ರಕಾರ, ವರ್ಗಾವಣೆಯಾದ ಕೋಟ್ಯಂತರ ರೂಪಾಯಿ ಹಣವು ಅರ್ಜೆಂಟೀನಾದಲ್ಲಿ ಸರ್ಕಾರದ ಸಾಮಾಜಿಕ ಕಲ್ಯಾಣ ಯೋಜನೆಗಳ ಮೇಲೆ ಅವಲಂಬಿತವಾಗಿರುವ ಅತ್ಯಂತ ಬಡ ಜನರ ಹೆಸರಿನಲ್ಲಿರುವ ನಕಲಿ ಕಂಪನಿಗಳ ಖಾತೆಗಳಿಗೆ ತಲುಪಿದೆ. ಇದು ಕಪ್ಪು ಹಣವನ್ನು ಬಿಳಿ ಮಾಡುವ ತಂತ್ರ ಎಂದು ಶಂಕಿಸಲಾಗಿದೆ.

ತನಿಖಾ ಸಂಸ್ಥೆಗಳು ಪತ್ತೆಹಚ್ಚಿರುವ ಪ್ರಕಾರ, ಈ ಅಕ್ರಮ ಹಣದ ಚಾನೆಲ್‌ಗಳಿಂದ ಸುಮಾರು 16.5 ಮಿಲಿಯನ್ ಡಾಲರ್ ಹಣವನ್ನು ನೇರವಾಗಿ ಐಷಾರಾಮಿ ವಸ್ತುಗಳ ಖರೀದಿಗೆ ಬಳಸಲಾಗಿದೆ.

ಅಷ್ಟೇ ಅಲ್ಲದೆ, ಫುಟ್‌ಬಾಲ್ ಸಂಸ್ಥೆಯ ಉನ್ನತ ಅಧಿಕಾರಿಯೊಬ್ಬರ “ಆಧ್ಯಾತ್ಮಿಕ ಗುರು” ಕುಟುಂಬಕ್ಕೆ ನಿಯಮ ಬಾಹಿರವಾಗಿ ಸುಮಾರು 3,40,000 ಡಾಲರ್ ಹಣವನ್ನು ನೀಡಲಾಗಿದೆ.

ರಾಜಕೀಯ ಒತ್ತಡ?

ಅರ್ಜೆಂಟೀನಾದ ಫುಟ್‌ಬಾಲ್ ಅಸೋಸಿಯೇಷನ್ ಅಧ್ಯಕ್ಷರಾದ ಕ್ಲಾಡಿಯೊ “ಚಿಕಿ” ಟಾಪಿಯಾ ಈಗಾಗಲೇ ಅರ್ಜೆಂಟೀನಾ ಸರ್ಕಾರ ಮತ್ತು ಅಧ್ಯಕ್ಷ ಜೇವಿಯರ್ ಮೈಲಿ ಅವರೊಂದಿಗೆ ರಾಜಕೀಯ ಸಂಘರ್ಷ ಎದುರಿಸುತ್ತಿದ್ದಾರೆ. ಇದರ ನಡುವೆಯೇ ಎಫ್‌ಬಿಐ ತನಿಖೆ ಆರಂಭವಾಗಿರುವುದು ಟಾಪಿಯಾ ಅವರಿಗೆ ದೊಡ್ಡ ಹಿನ್ನಡೆಯಾಗಿದೆ.

ಅರ್ಜೆಂಟೀನಾದಲ್ಲೂ ಈ ಸಂಸ್ಥೆಯ ಪ್ರಾಯೋಜಕತ್ವ ಹೊಂದಿರುವ ಹಣಕಾಸು ಸಂಸ್ಥೆಗಳ ಮೇಲೆ ದೇಶೀಯ ತೆರಿಗೆ ವಂಚನೆ ಪ್ರಕರಣದ ಅಡಿಯಲ್ಲಿ ದಾಳಿಗಳು ನಡೆದಿವೆ.

ಪ್ರಸ್ತುತ ಎಫ್‌ಬಿಐ ಪ್ರಕರಣದ ಪ್ರಾಥಮಿಕ ತನಿಖೆ ನಡೆಸುತ್ತಿದ್ದು, ಪ್ರಮುಖ ಕ್ರೀಡಾ ಉದ್ಯಮಿಗಳ ವಿಚಾರಣೆ ನಡೆಸುತ್ತಿದೆ. ಆದರೆ ಇದುವರೆಗೆ ಫುಟ್‌ಬಾಲ್ ಸಂಸ್ಥೆಯ ಮೇಲಾಗಲಿ ಅಥವಾ ಅದರ ಅಧಿಕಾರಿಗಳ ಮೇಲಾಗಲಿ ಯಾವುದೇ ಅಧಿಕೃತ ಕ್ರಿಮಿನಲ್ ಮೊಕದ್ದಮೆ ದಾಖಲಾಗಿಲ್ಲ.

ವಿಶ್ವಕಪ್ ಪಂದ್ಯಗಳಿಗೆ ಯಾವುದೇ ಅಡ್ಡಿಯಿಲ್ಲ!

ಪ್ರಸ್ತುತ ಅರ್ಜೆಂಟೀನಾ ತಂಡವು 2026ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಆಡುತ್ತಿದ್ದು, ಕ್ವಾರ್ಟರ್ ಫೈನಲ್ ತಲುಪಿದೆ. ಈ ಎಫ್‌ಬಿಐ ತನಿಖೆಯಿಂದ ತಂಡವು ಟೂರ್ನಿಯಿಂದ ಹೊರಬೀಳುವ ಅಥವಾ ಆಟಗಾರರ ಮೇಲೆ ಕ್ರಮ ಜರುಗಿಸುವ ಯಾವುದೇ ಸಾಧ್ಯತೆಗಳಿಲ್ಲ.

ಇದನ್ನೂ ಓದಿ: ಮೇಜರ್ ಸರ್ಜರಿ… ಟೀಮ್ ಇಂಡಿಯಾದಿಂದ ಕೋಚ್​ ಒಬ್ಬರಿಗೆ ಗೇಟ್​ ಪಾಸ್!

ತನಿಖೆಯು ಕೇವಲ ಅರ್ಜೆಂಟೀನಾ ಫುಟ್‌ಬಾಲ್ ಅಸೋಸಿಯೇಷನ್‌ನ (AFA) ಉನ್ನತ ಅಧಿಕಾರಿಗಳು ಮತ್ತು ಹಣಕಾಸು ವ್ಯವಹಾರ ನಡೆಸುವ ಕಂಪನಿಗಳ ನಡುವಿನ ಭ್ರಷ್ಟಾಚಾರಕ್ಕೆ ಸೀಮಿತವಾಗಿದೆ. ಹೀಗಾಗಿ ಈ ತನಿಖೆಯು ಅರ್ಜೆಂಟೀನಾ ತಂಡದ ಮೇಲಾಗಲಿ ಅಥವಾ ವಿಶ್ವಕಪ್​ ಪಂದ್ಯಗಳಿಗೆಯಾಗಲಿ ಯಾವುದೇ ಪರಿಣಾಮ ಬೀರುವುದಿಲ್ಲ.

Source link

ಕೆಪಿಎಸ್​ಸಿ ಚೀಫ್ ಶಿವಶಂಕರಪ್ಪ ಪುತ್ರಿ ವಿರುದ್ಧ FIR ದಾಖಲು! – Kannada News | KPSC Chief’s Daughter Booked Over ‘False Income Certificate’

ಬೆಂಗಳೂರು, ಜುಲೈ 11: ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಅವರ ಪುತ್ರಿ ಸುಮಾ ಎಸ್ ಸಹುಕಾರ್ ವಿರುದ್ಧ ಬೆಂಗಳೂರಿನ ವಿಧಾನಸೌಧ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವಾಗ ನಕಲಿ ಆದಾಯ ಮತ್ತು ಜಾತಿ ಪ್ರಮಾಣಪತ್ರಗಳನ್ನು ಸಲ್ಲಿಸಿರುವ ಆರೋಪದ ಮೇಲೆ ಈ ಪ್ರಕರಣ ದಾಖಲಾಗಿದೆ. ಅಭ್ಯರ್ಥಿಗಳ ದಾಖಲೆ ಪರಿಶೀಲನೆ ವೇಳೆ ಸುಮಾ ಸಲ್ಲಿಸಿದ್ದ ದಾಖಲೆಗಳಲ್ಲಿನ ವಂಚನೆ ಬಯಲಾಗಿದೆ.

ಸುಮಾ ಅವರು ತಮ್ಮ ಕುಟುಂಬದ ವಾರ್ಷಿಕ ಆದಾಯವನ್ನು 40,000 ರೂಪಾಯಿ ಎಂದು ನಮೂದಿಸಿದ್ದಾರೆ. ಆದರೆ, ಅವರ ತಂದೆ ಶಿವಶಂಕರಪ್ಪ ಅವರ ಮಾಸಿಕ ವೇತನವೇ 2,25,000 ರೂಪಾಯಿ ಆಗಿದ್ದು, ಇದು ವಾರ್ಷಿಕ 40,000 ರೂಪಾಯಿ ಆದಾಯಕ್ಕಿಂತ ಗಣನೀಯವಾಗಿ ಹೆಚ್ಚಾಗಿದೆ. ಸುಳ್ಳು ದಾಖಲೆಗಳನ್ನು ನೀಡಿ ಮೀಸಲಾತಿ ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Narendra Modi: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಐತಿಹಾಸಿಕ ಒಪ್ಪಂದ: 2030ರ ವೇಳೆಗೆ 5,000 ಕೋಟಿ ರೂಪಾಯಿ ದ್ವಿಪಕ್ಷೀಯ ವಹಿವಾಟಿಗೆ ಮುನ್ನುಡಿ! – Kannada News | India, New Zealand Elevate Ties to Strategic Partnership; Target Rs 35,000 Crore Trade by 2030

ಪ್ರಧಾನಿ ಮೋದಿ ಮತ್ತು ಕ್ರಿಸ್ಟೋಫರ್ ಲಕ್ಸನ್Image Credit source: The Hindu

ನ್ಯೂಜಿಲೆಂಡ್, ಜುಲೈ 11: ಭಾರತ ಮತ್ತು ನ್ಯೂಜಿಲೆಂಡ್ ದೇಶಗಳು ಶನಿವಾರ ತಮ್ಮ ದ್ವಿಪಕ್ಷೀಯ ಬಾಂಧವ್ಯವನ್ನು ‘ಕಾರ್ಯತಂತ್ರದ ಪಾಲುದಾರಿಕೆ’ (Strategic Partnership) ಮಟ್ಟಕ್ಕೆ ಕೊಂಡೊಯ್ದಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಅವರ ನಡುವೆ ನಡೆದ ಸುದೀರ್ಘ ಉನ್ನತ ಮಟ್ಟದ ಮಾತುಕತೆಯ ನಂತರ, ಮುಂದಿನ ಐದು ವರ್ಷಗಳಲ್ಲಿ ಅಂದರೆ 2030 ರ ವೇಳೆಗೆ ಉಭಯ ದೇಶಗಳ ನಡುವಿನ ವಾರ್ಷಿಕ ಸರಕು ಮತ್ತು ಸೇವಾ ವ್ಯಾಪಾರವನ್ನು ಬರೋಬ್ಬರಿ 35,000 ಕೋಟಿ ರೂಪಾಯಿಗಳಿಗೆ (7 ಬಿಲಿಯನ್ ನ್ಯೂಜಿಲೆಂಡ್ ಡಾಲರ್) ದ್ವಿಗುಣಗೊಳಿಸುವ ಐತಿಹಾಸಿಕ ಗುರಿಯನ್ನು ನಿಗದಿಪಡಿಸಲಾಗಿದೆ.

ಪ್ರಧಾನಿ ಮೋದಿಯವರ ಮೂರು ರಾಷ್ಟ್ರಗಳ ಪ್ರವಾಸದ ಅಂತಿಮ ಹಂತವಾಗಿ ಆಕ್ಲೆಂಡ್‌ಗೆ ಭೇಟಿ ನೀಡಿದ್ದು, ಚೀನಾದ ಪ್ರಭಾವ ಹೆಚ್ಚುತ್ತಿರುವ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸಹಕಾರವನ್ನು ವಿಸ್ತರಿಸುವತ್ತ ಈ ಭೇಟಿ ಪ್ರಮುಖ ಗಮನ ಹರಿಸಿದೆ. ಇತ್ತೀಚೆಗೆ ಸಹಿ ಮಾಡಲಾದ ಮುಕ್ತ ವ್ಯಾಪಾರ ಒಪ್ಪಂದದ (FTA) ಯಶಸ್ವಿ ಅನುಷ್ಠಾನದ ಬಗ್ಗೆಯೂ ಇಬ್ಬರೂ ನಾಯಕರು ಚರ್ಚಿಸಿದ್ದಾರೆ.

18 ಪ್ರಮುಖ ನಿರ್ಧಾರಗಳು, 10 ಒಪ್ಪಂದಗಳು

ಈ ಐತಿಹಾಸಿಕ ಸಭೆಯಲ್ಲಿ ಉಭಯ ದೇಶಗಳ ನಡುವೆ 10 ಮಹತ್ವದ ಒಪ್ಪಂದಗಳು ಸೇರಿದಂತೆ ಒಟ್ಟು 18 ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಲಾಗಿದೆ. ಇಂಡೋ-ಪೆಸಿಫಿಕ್ ಸಾಮರಸ್ಯ, ನೌಕಾಪಡೆ ಮತ್ತು ನ್ಯೂಜಿಲೆಂಡ್ ರಕ್ಷಣಾ ಪಡೆಗಳ ನಡುವೆ ಪರಸ್ಪರ ಲಾಜಿಸ್ಟಿಕ್ಸ್ ಬೆಂಬಲ ಒಪ್ಪಂದಗಳು ಇದರಲ್ಲಿ ಸೇರಿವೆ. ನಾವು ಪ್ರತಿಯೊಂದು ವಲಯದಲ್ಲೂ ಸ್ಪಷ್ಟ ಗುರಿ ಮತ್ತು ಫಲಿತಾಂಶಗಳೊಂದಿಗೆ ಮುನ್ನಡೆಯಲಿದ್ದೇವೆ ಎಂದು ಪ್ರಧಾನಿ ಮೋದಿ ಮಾತುಕತೆಯ ನಂತರ ತಿಳಿಸಿದ್ದಾರೆ.

ಜಾಗತಿಕ ವಿಷಯಗಳ ಕುರಿತು ಚರ್ಚೆ

ಉಭಯ ನಾಯಕರು ಪಶ್ಚಿಮ ಏಷ್ಯಾ (ಮಧ್ಯಪ್ರಾಚ್ಯ) ಸಂಘರ್ಷದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಸ್ಟ್ರೈಟ್ ಆಫ್ ಹಾರ್ಮುಜ್ ಮೂಲಕ ಜಾಗತಿಕ ವಾಣಿಜ್ಯದ ಮುಕ್ತ ಸಂಚಾರಕ್ಕೆ ಯಾವುದೇ ಅಡ್ಡಿ ಇರಬಾರದು ಎಂದು ಒತ್ತಿ ಹೇಳಿದರು. ಇನ್ನು ಉಕ್ರೇನ್ ಯುದ್ಧ ಮತ್ತು ಭಯೋತ್ಪಾದನೆಯ ವಿರುದ್ಧ ಜೀರೋ-ಟಾಲರೆನ್ಸ್ (ಶೂನ್ಯ ಸಹಿಷ್ಣುತೆ) ಧೋರಣೆಯನ್ನು ಇಬ್ಬರೂ ನಾಯಕರು ಪುನರುಚ್ಚರಿಸಿದರು. ಕಳೆದ ವರ್ಷ ಪಹಲ್ಗಾಮ್ ಮತ್ತು ಕೆಂಪುಕೋಟೆಯ ಬಳಿ ನಡೆದ ಭಯೋತ್ಪಾದಕ ದಾಳಿಯನ್ನು ಉಭಯ ನಾಯಕರು ತೀವ್ರವಾಗಿ ಖಂಡಿಸಿದರು. ಜೊತೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವಿಸ್ತರಣೆ ಮತ್ತು ಸುಧಾರಣೆಗೆ ಭಾರತದ ಬೇಡಿಕೆಯನ್ನು ನ್ಯೂಜಿಲೆಂಡ್ ಬೆಂಬಲಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version