ಮೇಜರ್ ಸರ್ಜರಿ… ಟೀಮ್ ಇಂಡಿಯಾದಿಂದ ಕೋಚ್​ ಒಬ್ಬರಿಗೆ ಗೇಟ್​ ಪಾಸ್! – Kannada News | Team India is likely to undergo a coaching reset,

ಟೀಮ್ ಇಂಡಿಯಾ ಸತತ ಐದು ಪಂದ್ಯಗಳಲ್ಲಿ ಸೋಲನುಭವಿಸಿದ ಬೆನ್ನಲ್ಲೇ ಭಾರತ ತಂಡದ ಕೋಚಿಂಗ್ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲು ಬಿಸಿಸಿಐ ಮುಂದಾಗಿದೆ. ಈ ಬದಲಾವಣೆಯೊಂದಿಗೆ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಅವರ ಸಪೋರ್ಟ್ ಸ್ಟಾಫ್ ಪೈಕಿ ಕನಿಷ್ಠ ಒಬ್ಬರು ತಂಡದಿಂದ ಹೊರಬೀಳಲಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಎದುರಾದ ಐತಿಹಾಸಿಕ ಸೋಲು ಹಾಗೂ ಇಂಗ್ಲೆಂಡ್ ಪ್ರವಾಸದಲ್ಲಿನ ಕಳಪೆ ಪ್ರದರ್ಶನಗಳ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿದೆ. ಜುಲೈ 19 ರಂದು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಮುಕ್ತಾಯಗೊಂಡ ತಕ್ಷಣವೇ ಬಿಸಿಸಿಐ ಮಹತ್ವದ ಪ್ರದರ್ಶನ ಪರಿಶೀಲನಾ ಸಭೆಯನ್ನು ಹಮ್ಮಿಕೊಂಡಿದೆ. ಈ ಸಭೆಯ ಬಳಿಕ ಕೋಚಿಂಗ್ ಸಿಬ್ಬಂದಿಯನ್ನು ಕೈ ಬಿಡುವ ಬಗ್ಗೆ ಪ್ರಕಟಣೆ ಹೊರಬೀಳುವ ಸಾಧ್ಯತೆ ಹೆಚ್ಚಿದೆ.

ಡ್ರೆಸ್ಸಿಂಗ್ ರೂಮ್​ನಲ್ಲಿ ಭಿನ್ನಾಭಿಪ್ರಾಯ?

ತಂಡದ ಒಳಗೆ ತಾಂತ್ರಿಕ ಮತ್ತು ತಂತ್ರಗಾರಿಕೆಯ ವಿಷಯಗಳಲ್ಲಿ ಕೋಚಿಂಗ್ ಸಿಬ್ಬಂದಿ ನಡುವೆ ಭಿನ್ನಾಭಿಪ್ರಾಯಗಳು ಮೂಡಿವೆ ಎಂದು ವರದಿಗಳು ತಿಳಿಸಿವೆ. ಇದೇ ಕಾರಣದಿಂದಾಗಿ ಕೋಚಿಂಗ್ ಸಿಬ್ಬಂದಿಯನ್ನು ಬದಲಿಸಲು ಬಿಸಿಸಿಐ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.

2024ರಲ್ಲಿ ಗೌತಮ್ ಗಂಭೀರ್ ಜೊತೆಗೆ 2+1 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದ ಸಪೋರ್ಟ್ ಸ್ಟಾಫ್ ಪೈಕಿ ಪ್ರಮುಖ ಕೋಚ್ ಒಬ್ಬರು, ಈಗಾಗಲೇ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಐಪಿಎಲ್ ಫ್ರಾಂಚೈಸಿಯೊಂದರ ಜೊತೆ ಮಾತುಕತೆ ನಡೆಸಿದ್ದು, ಶೀಘ್ರದಲ್ಲೇ ಅವರ ಆ ತಂಡವನ್ನು ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಟೀಮ್ ಇಂಡಿಯಾ ಕೋಚಿಂಗ್ ಸಿಬ್ಬಂದಿಗಳು:

  • ಗೌತಮ್ ಗಂಭೀರ್– ಮುಖ್ಯ ಕೋಚ್
  • ರಿಯಾನ್ ಟೆನ್ ಡೊಶ್ಚಾಟೆ – ಸಹಾಯಕ ಕೋಚ್
  • ಮೋರ್ನೆ ಮೋರ್ಕೆಲ್– ವೇಗದ ಬೌಲಿಂಗ್ ಕೋಚ್
  • ಸಾಯಿರಾಜ್ ಬಹುತುಲೆ– ಸ್ಪಿನ್ ಬೌಲಿಂಗ್ ಕೋಚ್
  • ಸಿತಾಂಶು ಕೋಟಕ್– ಬ್ಯಾಟಿಂಗ್ ಕೋಚ್
  • ಟಿ. ದಿಲೀಪ್– ಫೀಲ್ಡಿಂಗ್ ಕೋಚ್

ಇಂಗ್ಲೆಂಡ್ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ಭಾರತ ತಂಡ 9 ವಿಕೆಟ್‌ಗಳ ಹೀನಾಯ ಸೋಲು ಕಂಡು ಸರಣಿ ಕೈಚೆಲ್ಲಿದ ಬಳಿಕ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ರಿಯಾನ್ ಟೆನ್ ಡೊಶ್ಚಾಟೆ , ಟೀಮ್ ಇಂಡಿಯಾದ ಪ್ರದರ್ಶನದ ವಿಮರ್ಶಿಸಿದ್ದರು.

ಪ್ರಸ್ತುತ ಟಿ20 ವಿಶ್ವಚಾಂಪಿಯನ್ ಆಗಿರುವ ಭಾರತ ತಂಡವು, ವಿದೇಶಿ ಮಣ್ಣಿನಲ್ಲಿ ಅನುಭವಿಸುತ್ತಿರುವ ಸರಣಿ ಸೋಲುಗಳಿಂದಾಗಿ, ಇದೀಗ ವಿದೇಶಿ ಪಿಚ್​ನಲ್ಲಿ ​”ಕಡಿಮೆ ಸಾಧನೆ ಮಾಡುವವರು” ಎಂಬ ಹಣೆಪಟ್ಟಿ ಹೊಂದಿದೆ. ಇದನ್ನು ಮೊದಲು ಕಳಚಬೇಕಾದ ತುರ್ತು ಅಗತ್ಯವಿದೆ ಎಂದು ರಿಯಾನ್ ಟೆನ್ ಡೊಶ್ಚಾಟೆ ಹೇಳಿದ್ದರು.

ಭಾರತದ ಫ್ಲ್ಯಾಟ್ ಪಿಚ್‌ಗಳಲ್ಲಿ ರನ್ ಮಳೆ ಹರಿಸುವ ಬ್ಯಾಟರ್‌ಗಳು, ಐರ್ಲೆಂಡ್ ಮತ್ತು ಇಂಗ್ಲೆಂಡ್‌ನ ಸೀಮ್-ಫ್ರೆಂಡ್ಲಿ  ಮತ್ತು ತೇವಾಂಶಭರಿತ ಪಿಚ್‌ಗಳ ಪರಿಸ್ಥಿತಿಗೆ ಹೊಂದಿಕೊಳ್ಳಲು ಸಂಪೂರ್ಣವಾಗಿ ವಿಫಲರಾಗುತ್ತಿದ್ದಾರೆ ಎಂಬುದನ್ನು ಟೆನ್ ಡೊಶ್ಚಾಟೆ ಒಪ್ಪಿಕೊಂಡಿದ್ದರು.

ಇದನ್ನೂ ಓದಿ: ಲಾರ್ಡ್ಸ್ ಮೈದಾನದಲ್ಲಿ ವಿಶ್ವ ದಾಖಲೆ ಬರೆದ ಸ್ಮೃತಿ ಮಂಧಾನ

ಈ ಹೇಳಿಕೆಗಳು ಟೆನ್ ಡೊಶ್ಚಾಟೆ ಪಾಲಿಗೆ ಮುಳುವಾಗುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. ಹೀಗಾಗಿ ಗೌತಮ್ ಗಂಭೀರ್ ಕೋಚಿಂಗ್ ಬಳಗದಿಂದ ರಿಯಾನ್ ಟೆನ್ ಡೊಶ್ಚಾಟೆ ಹೊರಬಿದ್ದರೂ ಅಚ್ಚರಿಪಡಬೇಕಿಲ್ಲ.

Source link

ಲಾರ್ಡ್ಸ್ ಮೈದಾನದಲ್ಲಿ ವಿಶ್ವ ದಾಖಲೆ ಬರೆದ ಸ್ಮೃತಿ ಮಂಧಾನ – Kannada News | Smriti mandhana Creates new records in women’s international cricket

ಕ್ರಿಕೆಟ್‌ನ ಕಾಶಿ ಎಂದೇ ಕರೆಯಲ್ಪಡುವ ಇಂಗ್ಲೆಂಡ್‌ನ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಕಣಕ್ಕಿಳಿಯುವ ಮೂಲಕ ಭಾರತದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಅದು ಸಹ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 300 ಪಂದ್ಯಗಳನ್ನಾಡುವ ಮೂಲಕ ಎಂಬುದು ವಿಶೇಷ. (PC: Getty Images)

Source link

ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಮೂಲದ ಮಹಿಳೆ, ಪುತ್ರನ ಬಂಧಿಸಿದ ಬಾಗೇಪಲ್ಲಿ ಪೊಲೀಸರು – Kannada News | Pakistan Woman and Son Arrested in Karnataka’s Bagepalli for Allegedly Staying Illegally With Indian Documents

ಬಾಗೇಪಲ್ಲಿ ಪೊಲೀಸ್ ಠಾಣೆImage Credit source: tv9

ಚಿಕ್ಕಬಳ್ಳಾಪುರ, ಜುಲೈ 11: ಚಿಕ್ಕಬಳ್ಳಾಪುರ (Chikkaballapur ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ದಾಸಗಾರೆಪಲ್ಲಿ ಗ್ರಾಮದಲ್ಲಿ ವಾಸಿಸುತ್ತಿದ್ದ ಪಾಕಿಸ್ತಾನ ಮೂಲದ ಫರ್ಹಾನಾಜ್ ಮತ್ತು ಆಕೆಯ ಪುತ್ರ ಮೊಹಮ್ಮದ್ ಫರ್ದೀನ್ ಖಾನ್ ಅನ್ನು ಬಾಗೇಪಲ್ಲಿ ಪೊಲೀಸರು ಬಂಧಿಸಿದ್ದಾರೆ. ವೀಸಾ ಅವಧಿ ಮುಗಿದ ಬಳಿಕವೂ ಭಾರತದಲ್ಲೇ ಅಕ್ರಮವಾಗಿ ನೆಲೆಸಿದ್ದ ಆರೋಪದಡಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಸ್ಥಳೀಯ ನಿವಾಸಿಯ ಮದುವೆಯಾಗಿ ಇಲ್ಲೇ ವಾಸ

ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ದಾಸಗಾರೆಪಲ್ಲಿಯ ನಿವಾಸಿ ಅಯೂಬ್ ಖಾನ್ ಪಾಕಿಸ್ತಾನ ಮೂಲದ ಫರ್ಹಾನಾಜ್ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದು, ಅವರಲ್ಲಿ ಪುತ್ರ ಮೊಹಮ್ಮದ್ ಫರ್ದೀನ್ ಖಾನ್‌ನನ್ನೂ ಪೊಲೀಸರು ಬಂಧಿಸಿದ್ದಾರೆ. ಫರ್ಹಾನಾಜ್ ಹಾಗೂ ಪುತ್ರ ಪಾಕಿಸ್ತಾನದ ಪೌರತ್ವ ಹೊಂದಿದ್ದಾರೆ ಎಂದು ತಿಳಿದುಬಂದಿದೆ.

ಭಾರತೀಯ ಪೌರತ್ವ ಇಲ್ಲದಿದ್ದರೂ ರೇಷನ್ ಕಾರ್ಡ್, ವೋಟರ್ ಐಡಿ!

ಆರೋಪಿಗಳಿಬ್ಬರೂ ಭಾರತೀಯ ಪೌರತ್ವ ಹೊಂದಿರದಿದ್ದರೂ ಅಕ್ರಮವಾಗಿ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಹಾಗೂ ಬ್ಯಾಂಕ್ ಖಾತೆಗಳನ್ನು ಹೊಂದಿರುವ ಆರೋಪವೂ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ದಾಖಲೆಗಳ ಸತ್ಯಾಸತ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಇದನ್ನೂ ಓದಿ: ‘ಅಕ್ರಮ ವಲಸಿಗರಿಗೆ ಮಣೆ, ಭದ್ರತೆಗೆ ಧಕ್ಕೆ’: ಕರ್ನಾಟಕ ಶಾಶ್ವತ ನಿವಾಸಿ ಪ್ರಮಾಣ ಪತ್ರಕ್ಕೆ ತಡೆನೀಡಲು ಅಮಿತ್ ಶಾಗೆ ಶೋಭಾ ಪತ್ರ

ಫರ್ಹಾನಾಜ್ ಅವರ ಪತಿ ಅಯೂಬ್ ಖಾನ್ ಪ್ರಸ್ತುತ ಕತಾರ್‌ನಲ್ಲಿ ಬಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಫರ್ಹಾನಾಜ್ ಮತ್ತು ಇಬ್ಬರು ಮಕ್ಕಳು ದಾಸಗಾರೆಪಲ್ಲಿ ಗ್ರಾಮದಲ್ಲೇ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.

ಆಪರೇಷನ್ ಸಿಂದೂರ್ ನಂತರ ನವೀಕರಣಗೊಳ್ಳದ ವೀಸಾ

ಫರ್ಹಾನಾಜ್ ಮತ್ತು ಮಕ್ಕಳ ವೀಸಾ ಅವಧಿ ಮುಕ್ತಾಯಗೊಂಡಿದ್ದರೂ ಅವರು ಪಾಕಿಸ್ತಾನಕ್ಕೆ ಮರಳಿರಲಿಲ್ಲ. ‘ಆಪರೇಷನ್ ಸಿಂದೂರ್’ ನಂತರ ವೀಸಾ ನವೀಕರಣವೂ ಆಗಿರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಕ್ರಮ ವಲಸಿಗರಾಗಿರುವ ಕುರಿತು ದೂರು ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ತಾಯಿ ಹಾಗೂ ಪುತ್ರನನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:09 am, Sat, 11 July 26

Source link

July Astrology: ಈ 4 ರಾಶಿಯವರಿಗೆ ಹಣದ ವ್ಯವಹಾರದಲ್ಲಿ ಇರಲಿ ಎಚ್ಚರ; ಸಾಲ ಕೊಡುವ ಮೊದಲು ಯೋಚಿಸಿ – Kannada News | July Astrology: 4 Zodiac Signs Must Be Wary of Lending or Borrowing Money

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜುಲೈ ತಿಂಗಳಲ್ಲಿ ಕೆಲವು ರಾಶಿಯವರು ಹಣಕಾಸಿನ ವ್ಯವಹಾರಗಳಲ್ಲಿ ಹೆಚ್ಚು ಜಾಗರೂಕರಾಗಿರಬೇಕೆಂದು ಸೂಚಿಸಲಾಗಿದೆ. ವಿಶೇಷವಾಗಿ ಸಾಲ ನೀಡುವುದು ಅಥವಾ ಸಾಲ ಪಡೆಯುವ ವಿಷಯದಲ್ಲಿ ಆತುರದ ನಿರ್ಧಾರಗಳು ಆರ್ಥಿಕ ನಷ್ಟ ಹಾಗೂ ಸಂಬಂಧಗಳಲ್ಲಿ ಬಿರುಕು ಮೂಡಿಸಬಹುದು. ಹಾಗಾದರೆ ಯಾವ ನಾಲ್ಕು ರಾಶಿಯವರು ಈ ಅವಧಿಯಲ್ಲಿ ಹೆಚ್ಚು ಎಚ್ಚರಿಕೆ ವಹಿಸಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಮೇಷ ರಾಶಿ:

ಮೇಷ ರಾಶಿಯವರು ಸಾಮಾನ್ಯವಾಗಿ ಎಲ್ಲರೊಂದಿಗೆ ಹೊಂದಿಕೊಂಡು ಹೋಗುವ ಸ್ವಭಾವದವರಾಗಿರುತ್ತಾರೆ. ಆದರೆ ಈ ಅವಧಿಯಲ್ಲಿ ಹಣದ ವ್ಯವಹಾರಗಳಲ್ಲಿ ಹೆಚ್ಚು ಜಾಗರೂಕರಾಗಿರುವುದು ಉತ್ತಮ. ಯಾರಿಗಾದರೂ ಸಾಲ ನೀಡುವ ಮೊದಲು ಸೂಕ್ಷ್ಮವಾಗಿ ಯೋಚಿಸಿ. ನೀಡಿದ ಹಣ ಸಮಯಕ್ಕೆ ಮರಳದಿರುವ ಸಾಧ್ಯತೆ ಇದ್ದು, ಇದರಿಂದ ಮಾನಸಿಕ ಒತ್ತಡ ಮತ್ತು ಸಂಬಂಧಗಳಲ್ಲಿ ಸಮಸ್ಯೆಗಳು ಎದುರಾಗಬಹುದು.

ಕನ್ಯಾ ರಾಶಿ:

ಕನ್ಯಾ ರಾಶಿಯವರ ಆರ್ಥಿಕ ಸ್ಥಿತಿ ಉತ್ತಮವಾಗಿದ್ದರೂ, ಇತರರಿಗೆ ಹಣ ಸಾಲವಾಗಿ ನೀಡುವಾಗ ಎಚ್ಚರಿಕೆ ಅಗತ್ಯ. ವಿಶೇಷವಾಗಿ ಆಪ್ತರು ಅಥವಾ ಸ್ನೇಹಿತರಿಗೆ ಹಣ ನೀಡುವ ಮೊದಲು ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಿ. ಇಲ್ಲದಿದ್ದರೆ ಹಣದ ವಿಚಾರವೇ ಸಂಬಂಧಗಳಲ್ಲಿ ಭಿನ್ನಾಭಿಪ್ರಾಯಕ್ಕೆ ಕಾರಣವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಜುಲೈ 2026 ಮಾಸ ಭವಿಷ್ಯ: ಈ ರಾಶಿಯ ಜನರಿಗೆ ಪರಿವರ್ತನಾ ಯೋಗ; ಜುಲೈ ತಿಂಗಳಲ್ಲಿ ಶುಭವೋ ಶುಭ

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿಯವರಿಗೆ ಹಳೆಯ ಬಾಕಿ ಹಣ ಅಥವಾ ಸಾಲ ವಾಪಸ್ ಸಿಗುವ ಸಾಧ್ಯತೆ ಇದೆ. ಆದರೆ ಆ ಹಣವನ್ನು ಮತ್ತೆ ಯೋಚಿಸದೆ ಮತ್ತೊಬ್ಬರಿಗೆ ಸಾಲವಾಗಿ ನೀಡುವುದು ಸೂಕ್ತವಲ್ಲ. ಹಣಕಾಸಿನ ನಿರ್ಧಾರಗಳಲ್ಲಿ ಆತುರ ತೋರದೆ, ವಿವೇಕದಿಂದ ಮುಂದುವರಿದರೆ ಉತ್ತಮ ಫಲಿತಾಂಶ ದೊರೆಯಲಿದೆ.

ತುಲಾ ರಾಶಿ:

ತುಲಾ ರಾಶಿಯವರು ಜುಲೈ ತಿಂಗಳಲ್ಲಿ ಹಣದ ವ್ಯವಹಾರಗಳಲ್ಲಿ ಹೆಚ್ಚು ಎಚ್ಚರಿಕೆಯಿಂದಿರಬೇಕು. ಯಾರಿಗಾದರೂ ಸಾಲ ನೀಡುವುದು ಅಥವಾ ಅನಗತ್ಯವಾಗಿ ಸಾಲ ಪಡೆಯುವುದು ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು. ಯಾವುದೇ ಹಣಕಾಸಿನ ನಿರ್ಧಾರ ತೆಗೆದುಕೊಳ್ಳುವ ಮೊದಲು ಎಲ್ಲಾ ಅಂಶಗಳನ್ನು ಎರಡು ಬಾರಿ ಪರಿಶೀಲಿಸುವುದು ಒಳಿತು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಿತ್ರರಂಗಕ್ಕೆ ಕಾಲಿಟ್ಟ ಲಂಕೇಶ್ ಮೊಮ್ಮಗಳು ಇಶಾ ಲಂಕೇಶ್ – Kannada News | Kavitha Lankesh’s daughter Esha Lankesh debuting to Kannada cinema

ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿ ದೊಡ್ಡ ಹೆಸರಾಗಿರುವ ಪಿ ಲಂಕೇಶ್ (P Lankesh) ಅವರು ಚಿತ್ರರಂಗದಲ್ಲಿಯೂ ಕೃಷಿ ಮಾಡಿದ್ದರು. ಕೆಲವು ಸಿನಿಮಾಗಳನ್ನು ನಿರ್ದೇಶಿಸಿ, ನಟನೆ ಸಹ ಮಾಡಿದ್ದರು ಲಂಕೇಶ್. ಇದೀಗ ಅವರ ಮೂರನೇ ತಲೆಮಾರು ಅಂದರೆ ಮೊಮ್ಮಕ್ಕಳು ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಲಂಕೇಶ್ ಅವರ ಪುತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಮಗ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇದೀಗ ಲಂಕೇಶ್ ಅವರ ಮೊಮ್ಮಗಳು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.

ನಿರ್ದೇಶಕಿ ಕವಿತಾ ಲಂಕೇಶ್ ಅವರ ಪುತ್ರಿ ಇಶಾ ಲಂಕೇಶ್ ಇದೀಗ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಇಶಾ ಲಂಕೇಶ್ ಅವರು ನಟನಾ ತರಬೇತಿಗಳನ್ನು ಸಹ ಪಡೆದಿದ್ದಾರಂತೆ. ಇದೀಗ ಹೊಸ ಕನ್ನಡ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ. ಅವರ ಮೊದಲ ಸಿನಿಮಾವನ್ನು ಖ್ಯಾತ ಕತೆಗಾರ, ನಿರ್ದೇಶಕ ಪ್ರೀತಂ ಗುಬ್ಬಿ ನಿರ್ದೇಶನ ಮಾಡಲಿದ್ದಾರೆ.

ಸಿನಿಮಾಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿರುವುದಾಗಿ ಹೇಳಿರುವ ಇಶಾ ಲಂಕೇಶ್, ತಮಗೆ ನಟಿ ಆಗಬೇಕೆಂಬ ಕನಸು ತಮ್ಮ ತಾಯಿಯಿಂದಲೇ ಬಂತು ಎಂದಿದ್ದಾರೆ. ತಾಯಿ ಕವಿತಾ ಲಂಕೇಶ್ ನಿರ್ದೇಶನ ಮಾಡುತ್ತಿದ್ದ ಸಿನಿಮಾಗಳ ಸೆಟ್​​ಗಳಲ್ಲಿ ಓಡಾಡಿ, ಅಲ್ಲಿನ ವಾತಾವರಣ ನೋಡಿ ತಮಗೆ ನಟಿಯಾಗಬೇಕು ಎಂಬ ಆಸೆ ಮೂಡಿತು ಎಂದಿದ್ದಾರೆ. ದೆಹಲಿಯ ಅಶೋಕ ಯೂನಿವರ್ಸಿಟಿಯಲ್ಲಿ ಇಂಗ್ಲೀಷ್ ಲಿಟ್ರೇಚರ್ ಮತ್ತು ಫರ್ಫಾರ್ಮೆನ್ಸ್ ಕಲಿತಿರುವ ಇಶಾ, ಅಲ್ಲಿಯೇ ರಂಗಭೂಮಿಯಲ್ಲೂ ತೊಡಗಿದ್ದರಂತೆ.

ಇದನ್ನೂ ಓದಿ:ಸೆಟ್ಟೇರಿತು ಲೂಸ್ ಮಾದ ಹೊಸ ಸಿನಿಮಾ, ಸಾಥ್ ಕೊಟ್ಟ ಧ್ರುವ ಸರ್ಜಾ

ಬಳಿಕ ಬ್ರಿಟನ್​​ನಲ್ಲಿ ನಟನೆಗೆ ಸಂಬಂಧಿಸಿದ ಕೋರ್ಸ್ ಒಂದನ್ನು ಸಹ ಮುಗಿಸಿ ಬಂದಿದ್ದಾರೆ. ಇಲ್ಲಿ, ಪ್ರಕಾಶ್ ರೈ ಅವರ ನಿರ್ದಿಗಂತ ರಂಗಭೂಮಿ ಥಿಯೇಟರ್​​ನಲ್ಲಿ ಕೋರ್ಸ್​​ ಮಾಡಿದ್ದು, ನಾಟಕಗಳಲ್ಲಿ ನಟಿಸಿದ್ದಾರೆ. ಕೆಲವು ಜಾಹೀರಾತುಗಳಿಗೆ, ಸಿನಿಮಾಗಳಿಗೆ ಸಹ ಇಲ್ಲಿ ಆಡಿಷನ್ ನೀಡಿದ್ದರಂತೆ. ಕೊನೆಗೆ ಪ್ರೀತಂ ಗುಬ್ಬಿ ಅವರು ಆಸಕ್ತಿವಹಿಸಿ, ಕತೆಯೊಂದನ್ನು ಹೇಳಿದ್ದು, ಇದೀಗ ಸಿನಿಮಾ ಅನ್ನು ಇಶಾ ಒಪ್ಪಿಕೊಂಡಿದ್ದಾರೆ. ಇದು ಅಡ್ವೇಂಚರಸ್ ಪ್ರೇಮಕತೆ ಎಂದು ಇಶಾ ತಮ್ಮ ಮೊದಲ ಸಿನಿಮಾವನ್ನು ಬಣ್ಣಿಸಿದ್ದಾರೆ.

ಲಂಕೇಶ್ ಅವರು ‘ಪಲ್ಲವಿ’, ‘ಖಂಡವಿದೆಕೊ, ಮಾಂಸವಿದೆಕೊ’, ‘ಎಲ್ಲಿಂದಲೋ ಬಂದವರು’ ಸಿನಿಮಾಗಳನ್ನು ನಿರ್ದೇಶಿಸಿದ್ದರು. ‘ಸಂಸ್ಕಾರ’ ಸಿನಿಮಾನಲ್ಲಿ ನಟನೆಯನ್ನೂ ಮಾಡಿದ್ದರು. ಬಳಿಕ ಅವರ ಪುತ್ರ ಇಂದ್ರಜಿತ್ ಲಂಕೇಶ್, ‘ಮೊನಾಲಿಸಾ’, ‘ತುಂಟಾಟ’, ‘ಐಶ್ವರ್ಯಾ’, ‘ಹುಡುಗ ಹುಡುಗಿ’, ‘ಲಂಕೇಶ್ ಪತ್ರಿಕೆ’ ಇನ್ನೂ ಕೆಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇಂದ್ರಜಿತ್ ಅವರ ಪುತ್ರ ಸಮರ್ಜಿತ್ ಅವರು ಇತ್ತೀಚೆಗಷ್ಟೆ ‘ಗೌರಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.

ಇನ್ನು ಲಂಕೇಶ್ ಅವರ ಪುತ್ರಿ ಕವಿತಾ ಲಂಕೇಶ್, ‘ದೇವಿರಿ’, ‘ಅವ್ವ’ ಸೇರಿದಂತೆ ಇನ್ನೂ ಕೆಲ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇದೀಗ ಕವಿತಾ ಅವರ ಪುತ್ರಿ ಇಶಾ, ನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ಅವರ ಮೊದಲ ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ, ಸಿನಿಮಾದ ಇತರೆ ಪಾತ್ರವರ್ಗವನ್ನು ಶೀಘ್ರವೇ ಘೋಷಿಸಲಾಗುತ್ತದೆಯಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 9:38 am, Sat, 11 July 26

Source link

ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ನಿರ್ದೇಶಕ ಸಳಿಯನ್ ನಿಧನ – Kannada News | National award winning director R Chezhiyan passed away

ತಮಿಳು ಚಿತ್ರರಂಗದ (Tamil) ಪ್ರತಿಭಾವಂತ ಸಿನಿಮಾಟೊಗ್ರಾಫರ್ ಮತ್ತು ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ನಿರ್ದೇಶಕ ಸಳಿಯನ್ ನಿಧನ ಹೊಂದಿದ್ದಾರೆ. ಅವರಿಗೆ 57 ವರ್ಷ ವಯಸ್ಸಾಗಿತ್ತು. ಸಳಿಯನ್ ಅವರು ಕಳೆದ ಕೆಲ ವರ್ಷಗಳಿಂದ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ನಿನ್ನೆ (ಜುಲೈ 10) ರಾತ್ರಿ ಸಳಿಯನ್ ಅವರು ಕೊನೆ ಉಸಿರೆಳೆದಿದ್ದಾರೆ. ತಮಿಳು ಚಿತ್ರರಂಗದ ಹಲವು ಗಣ್ಯರು ಸಳಿಯನ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದು, ಇಂದು (ಜುಲೈ 11) ಬೆಳಿಗಿನಿಂದ ಹಲವು ಗಣ್ಯರು ಸಳಿಯನ್ ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಸಳಿಯನ್ ಅವರು 2007 ರಿಂದ ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ತಮನ್ನಾ ಭಾಟಿಯಾ ನಟಿಸಿದ್ದ ಭಿನ್ನ ಕತಾವಸ್ತು ಒಳಗೊಂಡಿದ್ದ ‘ಕಲ್ಲೂರಿ’ ಸಿನಿಮಾದ ಮೂಲಕ ಅವರು ಸಿನಿಮಾಟೊಗ್ರಾಫರ್ ಆಗಿ ಚಿತ್ರರಂಗಕ್ಕೆ ಕಾಲಿಟ್ಟರು. ಆ ಬಳಿಕ ಹಲವಾರು ಭಿನ್ನ ರೀತಿಯ ಸಿನಿಮಾಗಳಿಗೆ ಅವರು ಕ್ಯಾಮೆರಾ ಹಿಂದೆ ಕೆಲಸ ಮಾಡಿದ್ದಾರೆ. ಹಲವು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದ ‘ಪರದೇಸಿ’, ‘ತರೈ ತಪ್ಪಾಟಿ’, ‘ಜೋಕರ್’, ‘ಸವಾರಿ’ ಇನ್ನೂ ಹಲವಾರು ಸಿನಿಮಾಗಳಿಗೆ ಅವರು ಸಿನಿಮಾಟೊಗ್ರಾಫರ್ ಆಗಿ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ:ಸೆಟ್ಟೇರಿತು ಲೂಸ್ ಮಾದ ಹೊಸ ಸಿನಿಮಾ, ಸಾಥ್ ಕೊಟ್ಟ ಧ್ರುವ ಸರ್ಜಾ

ಭಿನ್ನ ಕತಾವಸ್ತುವುಳ್ಳ, ಭಿನ್ನ ರೀತಿಯ ನಿರೂಪಣೆಯುಳ್ಳ ಸಿನಿಮಾಗಳಿಗೆ ಮಾತ್ರವೆ ಸಳಿಯನ್ ಸಿನಿಮಾಟೊಗ್ರಫಿ ಮಾಡುತ್ತಿದ್ದಿದ್ದು ವಿಶೇಷ. ಸಿನಿಮಾಟೊಗ್ರಾಫರ್ ಮಾತ್ರವಲ್ಲದೆ ಸಿನಿಮಾ ನಿರ್ದೇಶನವನ್ನೂ ಸಹ ಸಳಿಯನ್ ಮಾಡಿದ್ದಾರೆ. 2019 ರಲ್ಲಿ ಬಿಡುಗಡೆ ಆದ ‘ಟು ಲೆಟ್’ ಸಿನಿಮಾ ಅನ್ನು ಸಳಿಯನ್ ನಿರ್ದೇಶಿಸಿದ್ದರು. ಆ ಸಿನಿಮಾ ರಾಷ್ಟ್ರಪ್ರಶಸ್ತಿಯನ್ನು ಸಹ ಪಡೆಯಿತು. ಚೆನ್ನೈನಲ್ಲಿ ಬಾಡಿಗೆ ಮನೆ ಹುಡುಕುವ ಕುಟುಂಬವೊಂದರ ಕತೆ ಅದಾಗಿತ್ತು.

ಇದೀಗ ಸಳಿಯನ್ ನಿಧನಕ್ಕೆ ತಮಿಳು ಚಿತ್ರರಂಗದ ಹಲವು ಗಣ್ಯರು, ಸಿನಿಮಾ ನಿರ್ದೇಶಕರುಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ನಿರ್ದೇಶಕ ಬಾಲ, ಮಿಸ್ಕಿನ್, ‘ನಾಡೋಡಿಗಳ್’ ಸಸಿಕುಮಾರ್, ಸಿಮನ್ ಸೇರಿದಂತೆ ಹಲವು ಗಣ್ಯರು ಬೆಳಿಗ್ಗೆಯೇ ಸಳಿಯನ್ ನಿವಾಸಕ್ಕೆ ತೆರಳಿ ಅಂತಿಮ ದರ್ಶನ ಪಡೆದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಕೇರಳ ಸಿಎಂ ಸತೀಶನ್ ಭೇಟಿ – Kannada News | Kerala CM VD Satheesan Visits Kollur Mookambika Temple in Udupi Under Z Plus Security

ಉಡುಪಿ, ಜುಲೈ 11: ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಕೇರಳ ಸಿಎಂ ವಿಡಿ ಸತೀಶನ್ ಶನಿವಾರ ಬೆಳಗ್ಗೆ ಭೇಟಿ ನೀಡಿ ಮೂಕಾಂಬಿಕೆಯ ದರ್ಶನ ಪಡೆದರು. ಝಡ್ ಪ್ಲಸ್ ಭದ್ರತೆಯಲ್ಲಿ ದೇವಸ್ಥಾನಕ್ಕೆ ಬಂದಿದ್ದ ಕೇರಳ ಸಿಎಂಗೆ ದೇವಾಲಯದ ಆಡಳಿತ ಮಂಡಳಿ ವತಿಯಿಂದ ಗೌರವ ಸಲ್ಲಿಸಲಾಯಿತು. ವಿಶೇಷ ಪೂಜೆ ಸಲ್ಲಿಸಿದ ಸತೀಶನ್ ಬಳಿಕ ಮಂಗಳೂರು ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಇತ್ತೀಚೆಗೆಷ್ಟೇ ತಮಿಳುನಾಡು ನೂತನ ಸಿಎಂ ಜೋಸೆಫ್ ವಿಜಯ್ ಸಹ ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಭೇಟಿ ನೀಡಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದೆಹಲಿ ಜೈಲಿನಲ್ಲಿ ಅಮೆರಿಕನ್ ಸ್ಟೈಲ್ ಡಯಟ್ ಕೇಳಿ ಕೋರ್ಟ್ ಮೆಟ್ಟಿಲೇರಿದ ವಿದೇಶಿ ಕೈದಿ! – Kannada News | American Jail Inmate Seeks ‘US Style Diet’ in Indian Prison; Faces Weight Loss and Health Risks

ನವದೆಹಲಿ, ಜುಲೈ 11: ಭಾರತದ ಜೈಲಿನಲ್ಲಿ ನೀಡಲಾಗುವ ಮಸಾಲೆಯುಕ್ತ, ಎಣ್ಣೆ ಮತ್ತು ಕರಿದ ಪದಾರ್ಥಗಳ ಆಹಾರವನ್ನು ತಿನ್ನಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿ, ತನಗೆ “ಅಮೆರಿಕನ್ ಶೈಲಿಯ ಆಹಾರ” ನೀಡಬೇಕು ಹಾಗೂ ಸ್ವತಃ ಅಡುಗೆ ಮಾಡಿಕೊಳ್ಳಲು ಅನುಮತಿ ನೀಡಬೇಕೆಂದು ಕೋರಿ ಅಮೆರಿಕದ ಪ್ರಜೆಯೊಬ್ಬರು ದೆಹಲಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.  ಮ್ಯಾಥ್ಯೂ ಆರನ್ ವ್ಯಾನ್‌ಡೈಕ್ ಎಂಬ ಹೆಸರಿನ ಈ ಕೈದಿ, ಜೈಲಿನ ಆಹಾರ ಪದ್ಧತಿಗೆ ಹೊಂದಿಕೊಳ್ಳಲಾಗದೆ ಮೇ 6 ರಿಂದ ಉಪವಾಸ ಮಾಡುತ್ತಿದ್ದಾರೆ ಎಂದು ಅವರ ವಕೀಲರು ತಿಳಿಸಿದ್ದಾರೆ. ಎನ್‌ಐಎ (NIA) ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಪ್ರಶಾಂತ್ ಶರ್ಮಾ ಅವರು ಈ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ಜೈಲು ಅಧೀಕ್ಷಕರಿಗೆ ಒಂದು ವಾರದ ಕಾಲಾವಕಾಶ ನೀಡಿದ್ದು, ಜುಲೈ 21 ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಿದ್ದಾರೆ.

ಸೋಯಾ ಹಾಲಿನಲ್ಲೇ 50 ದಿನ ಕಳೆದ ಕೈದಿ!

ಆರೋಪಿಯ ಪರ ವಕೀಲರಾದ ರೋಹಿತ್ ಗೌರ್ ಮತ್ತು ರೋಹಿತ್ ದಂಡ್ರಿಯಾಲ್ ಅವರು ಮಾನವೀಯತೆಯ ಆಧಾರದ ಮೇಲೆ ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ಕಳೆದ 50 ದಿನಗಳಿಂದ ಮ್ಯಾಥ್ಯೂ ಕೇವಲ ಸೋಯಾ ಹಾಲಿನಂತಹ ದ್ರವ ಆಹಾರವನ್ನು ಸೇವಿಸಿ ಬದುಕುತ್ತಿದ್ದು, ಪರಿಣಾಮವಾಗಿ ಸುಮಾರು 14 ಕೆಜಿ ತೂಕ ಕಳೆದುಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಜೈಲಿನಲ್ಲಿ ಇಂಡಕ್ಷನ್ ಕುಕ್ಕರ್ ಮತ್ತು ಕೆಲವು ಮೂಲಭೂತ ಪಾತ್ರೆಗಳನ್ನು ಬಳಸಿ ತಾನೇ ಅಡುಗೆ ಮಾಡಿಕೊಳ್ಳಲು ಹಾಗೂ ಬೇಳೆಕಾಳುಗಳು, ಚಿಕನ್, ರೆಡ್ ಮೀಟ್, ಪಾಸ್ತಾ, ಆಲಿವ್ ಆಯಿಲ್ ಮತ್ತು ಬಾಟಲಿ ನೀರನ್ನು ಇಟ್ಟುಕೊಳ್ಳಲು ಅನುಮತಿ ಕೋರಿದ್ದಾರೆ. ಈ ಎಲ್ಲಾ ಆಹಾರದ ವೆಚ್ಚವನ್ನು ಅವರ ಕುಟುಂಬವೇ ಭರಿಸಲು ಸಿದ್ಧವಿದೆ ಎಂದು ವಕೀಲರು ತಿಳಿಸಿದ್ದಾರೆ.

ಪೌಷ್ಟಿಕಾಂಶದ ಕೊರತೆಯಿಂದಾಗಿ ಮ್ಯಾಥ್ಯೂ ಅವರ ದೃಷ್ಟಿ ದೋಷ ಕೂಡ ಉಲ್ಬಣಗೊಂಡಿದ್ದು, ಜುಲೈ 3 ರಂದು ಕೋರ್ಟ್‌ಗೆ ಹಾಜರಾದಾಗ ಅವರು ಸರಿಯಾಗಿ ನಿಲ್ಲಲು ಸಾಧ್ಯವಾಗದಷ್ಟು ಅಶಕ್ತರಾಗಿದ್ದ ಎನ್ನಲಾಗಿದೆ. ಆಹಾರದ ಜೊತೆಗೆ ಸೊಳ್ಳೆ ಪರದೆ ಮತ್ತು ಲಿಕ್ವಿಡ್ ರಿಪೆಲೆಂಟ್ ಒದಗಿಸುವಂತೆಯೂ ಅವರು ಕೋರಿದ್ದಾರೆ.

ಯಾರೂ ಈ ಮ್ಯಾಥ್ಯೂ?

ಮ್ಯಾನ್ಮಾರ್ ಗಡಿಯ ಮೂಲಕ ಮಿಜೋರಾಂ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಆರೋಪದ ಮೇಲೆ ಮಾರ್ಚ್ 13 ರಂದು ಎನ್‌ಐಎ ಅಧಿಕಾರಿಗಳು ಮ್ಯಾಥ್ಯೂ ಮತ್ತು ಆರು ಉಕ್ರೇನ್ ಪ್ರಜೆಗಳನ್ನು ಬಂಧಿಸಿದ್ದರು. ಭಾರತ ಮತ್ತು ಮ್ಯಾನ್ಮಾರ್‌ನ ಉಗ್ರಗಾಮಿ ಗುಂಪುಗಳಿಗೆ ತರಬೇತಿ ನೀಡುವುದು ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಸುವ ಗಡಿಯಾಚೆಗಿನ ಭಯೋತ್ಪಾದನಾ ಪಿತೂರಿಯ ಭಾಗವಾಗಿ ಈ ತಂಡ ಕಾರ್ಯನಿರ್ವಹಿಸುತ್ತಿತ್ತು ಎಂದು ಎನ್‌ಐಎ ಗಂಭೀರ ಆರೋಪ ಹೊರಿಸಿದೆ.

ರಾಷ್ಟ್ರದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Jupiter Saturn Retrograde: ಜುಲೈನಲ್ಲಿ ಶನಿ-ಗುರುವಿನ ವಕ್ರ ಸಂಚಾರ; ಈ 4 ರಾಶಿಗಳಿಗೆ ಆದಾಯ ದ್ವಿಗುಣವಾಗುವ ಸಾಧ್ಯತೆ! – Kannada News | July Astrology: 4 Zodiac Signs to Prosper from Guru Shani Retrograde!

ಜುಲೈ ತಿಂಗಳಲ್ಲಿ ಗುರು ಮತ್ತು ಶನಿ ಗ್ರಹಗಳು ವಕ್ರಗತಿಯಲ್ಲಿ ಸಂಚರಿಸುತ್ತಿರುವುದು ಜ್ಯೋತಿಷ್ಯದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ. ಈ ಗ್ರಹಗಳ ಸಂಚಾರದ ಪರಿಣಾಮವಾಗಿ ಕೆಲವು ರಾಶಿಯವರಿಗೆ ವಿಶೇಷ ಶುಭಯೋಗಗಳು ರೂಪುಗೊಳ್ಳಲಿದ್ದು, ಆರ್ಥಿಕ ಪ್ರಗತಿ, ಉದ್ಯೋಗದಲ್ಲಿ ಯಶಸ್ಸು ಹಾಗೂ ಕುಟುಂಬದಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಾಗಾದರೆ, ಈ ಅವಧಿಯಲ್ಲಿ ಹೆಚ್ಚು ಶುಭಫಲ ಪಡೆಯುವ ಆ ನಾಲ್ಕು ರಾಶಿಗಳು ಯಾವುವು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಸಿಂಹ ರಾಶಿ:

ಸಿಂಹ ರಾಶಿಯವರಿಗೆ ಜುಲೈ ತಿಂಗಳು ಅತ್ಯಂತ ಶುಭಕರವಾಗಿರಲಿದೆ. ಆದಾಯದಲ್ಲಿ ಗಮನಾರ್ಹ ಏರಿಕೆ ಕಂಡುಬರಬಹುದು. ಪೂರ್ವಜರ ಆಸ್ತಿ ಅಥವಾ ಕುಟುಂಬದ ಮೂಲಕ ಆರ್ಥಿಕ ಲಾಭ ಸಿಗುವ ಸಾಧ್ಯತೆಯಿದೆ. ಉದ್ಯೋಗ ಮತ್ತು ವೈಯಕ್ತಿಕ ಜೀವನದಲ್ಲಿ ಯಶಸ್ಸು ದೊರೆಯಲಿದ್ದು, ಮನೆಯಲ್ಲಿ ಸಂತೋಷದ ವಾತಾವರಣ ನೆಲೆಸಲಿದೆ.

ವೃಷಭ ರಾಶಿ:

ವೃಷಭ ರಾಶಿಯವರಿಗೆ ಈ ಅವಧಿಯಲ್ಲಿ ಉತ್ತಮ ಫಲಿತಾಂಶಗಳು ದೊರೆಯಲಿವೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಕಂಡುಬರಬಹುದು. ಆರ್ಥಿಕ ಪರಿಸ್ಥಿತಿ ಬಲವಾಗಲಿದ್ದು, ಅನಿರೀಕ್ಷಿತ ಹಣಕಾಸಿನ ಲಾಭವೂ ಸಿಗುವ ಸಾಧ್ಯತೆ ಇದೆ. ಹೊಸ ಅವಕಾಶಗಳು ನಿಮ್ಮ ಪರವಾಗಿರಬಹುದು.

ಕನ್ಯಾ ರಾಶಿ:

ಕನ್ಯಾ ರಾಶಿಯವರಿಗೆ ಶನಿ ಮತ್ತು ಗುರುವಿನ ವಕ್ರ ಸಂಚಾರದಿಂದ ವಿಶೇಷ ಅನುಕೂಲಗಳು ದೊರೆಯಬಹುದು. ಉದ್ಯೋಗ, ವ್ಯವಹಾರ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆ ಕಂಡುಬರಬಹುದು. ಆದಾಯದಲ್ಲಿ ಹೆಚ್ಚಳವಾಗುವ ಜೊತೆಗೆ ಕುಟುಂಬದಲ್ಲಿ ಸಂತೋಷ ಮತ್ತು ನೆಮ್ಮದಿ ಹೆಚ್ಚಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಜುಲೈ 2026 ಮಾಸ ಭವಿಷ್ಯ: ಈ ರಾಶಿಯ ಜನರಿಗೆ ಪರಿವರ್ತನಾ ಯೋಗ; ಜುಲೈ ತಿಂಗಳಲ್ಲಿ ಶುಭವೋ ಶುಭ

ಕುಂಭ ರಾಶಿ:

ಕುಂಭ ರಾಶಿಯವರಿಗೆ ಜುಲೈ ತಿಂಗಳು ಲಾಭದಾಯಕವಾಗಿರಲಿದೆ. ಆದಾಯ ಹೆಚ್ಚಾಗುವ ಜೊತೆಗೆ, ಹಲವು ಮೂಲಗಳಿಂದ ಹಣ ಹರಿದುಬರುವ ಸಾಧ್ಯತೆಯಿದೆ. ಪೂರ್ವಜರ ಆಸ್ತಿ ಸಂಬಂಧಿತ ವಿಚಾರಗಳು ಅನುಕೂಲಕರವಾಗಿ ಬಗೆಹರಿಯಬಹುದು. ದೀರ್ಘಕಾಲದ ಸಮಸ್ಯೆಗಳು ನಿವಾರಣೆಯಾಗುವ ಸಾಧ್ಯತೆಯೂ ಇದೆ.

ಗಮನಿಸಿ: ಮೇಲಿನ ಮಾಹಿತಿಯು ಜ್ಯೋತಿಷ್ಯ ನಂಬಿಕೆಗಳು ಮತ್ತು ಸಂಪ್ರದಾಯಿಕ ವ್ಯಾಖ್ಯಾನಗಳನ್ನು ಆಧರಿಸಿದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರ ಜ್ಯೋತಿಷ್ಯ ತಜ್ಞರನ್ನು ಸಂಪರ್ಕಿಸಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜೊಕೊವಿಚ್​ಗೆ ಸೋಲು: ವಿಶ್ವ ದಾಖಲೆಯ ಗ್ರಾಂಡ್ ಸ್ಲಾಮ್ ಕನಸು ಭಗ್ನ! – Kannada News | Novak Djokovic’s 25th Slam Dream On Hold

ಟೆನಿಸ್ ಇತಿಹಾಸದ ಸರ್ವಶ್ರೇಷ್ಠ ಆಟಗಾರ ನೊವಾಕ್ ಜೊಕೊವಿಚ್ ಅವರ ಐತಿಹಾಸಿಕ 25ನೇ ಗ್ರಾಂಡ್ ಸ್ಲಾಮ್ ಪ್ರಶಸ್ತಿಯ ಕನಸು ಮುಂದುವರೆದಿದೆ. ಅದು ಸಹ ವಿಂಬಲ್ಡನ್​ ಟೂರ್ನಿಯಲ್ಲಿ ಸೆಮಿಫೈನಲ್​ನಲ್ಲಿ ಸೋಲುವ ಮೂಲಕ. ಅಂದರೆ ಈ ಬಾರಿ ಸೆಮಿಫೈನಲ್​ಗೇರಿದ್ದ ಜೊಕೊವಿಚ್ 25ನೇ ಗ್ರಾಂಡ್ ಸ್ಲಾಮ್ ಗೆದ್ದು ಹೊಸ ಇತಿಹಾಸ ನಿರ್ಮಿಸಲಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ನಿರ್ಣಾಯಕ ಪಂದ್ಯದಲ್ಲಿ ಇಟಲಿಯ ಯಾನಿಕ್ ಸಿನ್ನರ್, ಜೊಕೊವಿಚ್​ಗೆ ಸೋಲುಣಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಲಂಡನ್​ನ ಸೆಂಟ್ರಲ್ ಕೋರ್ಟ್​ನಲ್ಲಿ ನಡೆದ ಈ ಪಂದ್ಯದಲ್ಲಿ ನೊವಾಕ್ ಜೊಕೊವಿಚ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ ಎಂಬುದೇ ಸತ್ಯ. ಕ್ವಾರ್ಟರ್‌ಫೈನಲ್‌ನಲ್ಲಿ ಫೆಲಿಕ್ಸ್ ಔಗರ್-ಅಲಿಯಾಸಿಮೆ ವಿರುದ್ಧ ಬರೋಬ್ಬರಿ 5 ಗಂಟೆಗಳ ಕಾಲ ಸುದೀರ್ಘ ಹೋರಾಟ ನಡೆಸಿದ್ದ 39 ವರ್ಷದ ಜೊಕೊವಿಚ್ ದಣಿದಂತೆ ಕಂಡು ಬಂದಿದ್ದರು.

ಇದರ ಪೂರ್ಣ ಲಾಭ ಪಡೆದ ಯುವ ತಾರೆ ಯಾನಿಕ್ ಸಿನ್ನರ್, ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದರು. ಸಿನ್ನರ್ ಅವರ ಅದ್ಭುತ ಸರ್ವ್ ಹಾಗೂ ಮಿಂಚಿನ ವೇಗದ ಬೇಸ್‌ಲೈನ್ ಶಾಟ್‌ಗಳಿಗೆ ಉತ್ತರ ನೀಡಲು ಜೊಕೊವಿಚ್ ವಿಫಲರಾದರು. ಅಂತಿಮವಾಗಿ ಸಿನ್ನರ್ 6-4, 6-4, 6-4 ರ ನೇರ ಸೆಟ್‌ಗಳಿಂದ ಜೊಕೊವಿಚ್‌ ಅವರನ್ನು ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟರು.

ಕಾಯುವಿಕೆ ಮುಂದುವರಿಕೆ:

2023ರ ಯುಎಸ್ ಓಪನ್ ಗೆದ್ದು 24 ಗ್ರಾಂಡ್ ಸ್ಲಾಮ್‌ಗಳೊಂದಿಗೆ ಮಾರ್ಗರೆಟ್ ಕೋರ್ಟ್ ಅವರ ಸಾರ್ವಕಾಲಿಕ ದಾಖಲೆಯನ್ನು ಸರಿಗಟ್ಟಿದ್ದ ಜೊಕೊವಿಚ್, ಕಳೆದ ಮೂರು ವರ್ಷಗಳಿಂದ 25ನೇ ಪ್ರಶಸ್ತಿಗಾಗಿ ಹೋರಾಡುತ್ತಲೇ ಇದ್ದಾರೆ.

2026ರ ಸಾಲಿನಲ್ಲಿ ಇದು ಅವರ ಎರಡನೇ ಪ್ರಮುಖ ಪ್ರಯತ್ನವಾಗಿತ್ತು. ಇದಕ್ಕೂ ಮುನ್ನ ನಡೆದ ಆಸ್ಟ್ರೇಲಿಯನ್ ಓಪನ್ 2026 ರಲ್ಲಿ ಟೆನಿಸ್ ಇತಿಹಾಸದಲ್ಲೇ ತಮ್ಮ 400ನೇ ಗ್ರಾಂಡ್ ಸ್ಲಾಮ್ ಪಂದ್ಯದ ಗೆಲುವಿನ ಐತಿಹಾಸಿಕ ಮೈಲಿಗಲ್ಲು ತಲುಪಿದ್ದ ಜೊಕೊವಿಚ್, ಫೈನಲ್‌ನಲ್ಲಿ ಕಾರ್ಲೋಸ್ ಅಲ್ಕರಾಝ್ ವಿರುದ್ಧ ಸೋತು ರನ್ನರ್-ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದ್ದರು. ಈಗ ವಿಂಬಲ್ಡನ್‌ನಲ್ಲೂ ನಿರಾಸೆ ಅನುಭವಿಸಿದ್ದಾರೆ.

25ನೇ ಗ್ರಾಂಡ್ ಸ್ಲಾಮ್ ಪ್ರಶಸ್ತಿ ಯಾಕೆ?

ನೊವಾಕ್ ಜೊಕೊವಿಚ್ ಅವರು 25ನೇ ಗ್ರಾಂಡ್ ಸ್ಲಾಮ್ ಪ್ರಶಸ್ತಿ ಗೆಲ್ಲಲು ಹೋರಾಡುತ್ತಿರುವುದಕ್ಕೆ ಮುಖ್ಯ ಕಾರಣ, ಟೆನಿಸ್ ಇತಿಹಾಸದಲ್ಲೇ ಸಾರ್ವಕಾಲಿಕ ಅತಿ ಹೆಚ್ಚು ಗ್ರಾಂಡ್ ಸ್ಲಾಮ್ ಗೆದ್ದ ಏಕೈಕ ಆಟಗಾರ ಎಂಬ ಐತಿಹಾಸಿಕ ದಾಖಲೆಯನ್ನು ಬರೆಯಲು.

  • ಮಾರ್ಗರೆಟ್ ಕೋರ್ಟ್ ದಾಖಲೆ:  ಟೆನಿಸ್ ಇತಿಹಾಸದಲ್ಲೇ ಅತಿ ಹೆಚ್ಚು ಗ್ರಾಂಡ್ ಸ್ಲಾಮ್ ಗೆದ್ದ ದಾಖಲೆ ಆಸ್ಟ್ರೇಲಿಯಾದ ಮಾಜಿ ಮಹಿಳಾ ಆಟಗಾರ್ತಿ ಮಾರ್ಗರೆಟ್ ಕೋರ್ಟ್ (24 ಪ್ರಶಸ್ತಿ) ಹೆಸರಿನಲ್ಲಿದೆ.
  •  ನೊವಾಕ್ ಜೊಕೊವಿಚ್ ದಾಖಲೆ: 2023 ರಲ್ಲಿ 24ನೇ ಗ್ರಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದು ಜೊಕೊವಿಚ್, ಮಾರ್ಗರೆಟ್ ಕೋರ್ಟ್ ಹೆಸರಿನಲ್ಲಿರುವ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದರು.

ಒಂದು ವೇಳೆ ನೊವಾಕ್ ಜೊಕೊವಿಚ್ ಇನ್ನೊಂದು ಗ್ರಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದರೆ ಟೆನಿಸ್ ಇತಿಹಾಸದಲ್ಲೇ 25 ಗ್ರಾಂಡ್ ಸ್ಲಾಮ್ ಪ್ರಶಸ್ತಿ ಪಡೆದ ವಿಶ್ವದ ಏಕೈಕ ಟೆನಿಸ್ ಪ್ಲೇಯರ್ ಎನಿಸಿಕೊಳ್ಳಲಿದ್ದಾರೆ.

“25ನೇ ಗ್ರಾಂಡ್ ಸ್ಲಾಮ್ ಚರ್ಚೆಯಿಂದ ಸಾಕಾಗಿದೆ”

ವಿಂಬಲ್ಡನ್ ಸೆಮಿಫೈನಲ್ ಸೋಲಿನ ಬಳಿಕ ಮಾತನಾಡಿದ ಜೊಕೊವಿಚ್, ಮಾಧ್ಯಮಗಳು ಮತ್ತು ಅಭಿಮಾನಿಗಳಲ್ಲಿ ನಿರಂತರವಾಗಿ ನಡೆಯುತ್ತಿರುವ 25ನೇ ಗ್ರಾಂಡ್ ಸ್ಲಾಮ್ ದಾಖಲೆಯ ಚರ್ಚೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನನಗೆ ಈ 25ನೇ ಗ್ರಾಂಡ್ ಸ್ಲಾಮ್ ಮಾತಿನಿಂದ ಸಾಕಾಗಿದೆ. ಇದು ನನ್ನ ವೃತ್ತಿಜೀವನದ ಅಂತಿಮ ಗುರಿಯಲ್ಲ. ಒಂದು ವೇಳೆ ನಾನು ಈ ಪ್ರಶಸ್ತಿಯನ್ನು ಎಂದಿಗೂ ಗೆಲ್ಲದಿದ್ದರೆ ಏನಂತೆ? ನಾನು ಈಗಾಗಲೇ ಸಾಧಿಸಿರುವ ದಾಖಲೆಗಳ ಬಗ್ಗೆ ನನಗೆ ಹೆಮ್ಮೆಯಿದೆ. ನಾನೀಗ ಯಾವುದೇ ಒತ್ತಡದಿಂದ ಟೆನಿಸ್ ಆಡುತ್ತಿಲ್ಲ. ನನ್ನಲ್ಲಿ ಇನ್ನೂ ಆಡುವ ಸಾಮರ್ಥ್ಯವಿದೆ ಮತ್ತು ನಾನು ಈ ಆಟವನ್ನು ಪ್ರೀತಿಸುತ್ತೇನೆ, ಅದಕ್ಕಾಗಿಯೇ ಅಂಗಳಕ್ಕೆ ಇಳಿಯುತ್ತಿದ್ದೇನೆ” ಎಂದು ಜೊಕೊವಿಚ್ ಹೇಳಿದ್ದಾರೆ

ಹೋರಾಟ ಮುಗಿದಿಲ್ಲ!

ವಿಂಬಲ್ಡನ್‌ನಿಂದ ಹೊರಬಿದ್ದರೂ ನೊವಾಕ್ ಜೊಕೊವಿಚ್ ಟೆನಿಸ್‌ಗೆ ವಿದಾಯ ಹೇಳುವ ಯಾವುದೇ ಮುನ್ಸೂಚನೆ ನೀಡಿಲ್ಲ. ಕನಿಷ್ಠ ಇನ್ನೊಂದು ಬಾರಿಯಾದರೂ ವಿಂಬಲ್ಡನ್ ಅಂಗಳಕ್ಕೆ ಮರಳುವ ಇಚ್ಛೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಟೆನಿಸ್ ಲೋಕದ ಈ ದೈತ್ಯನ ಮುಂದಿನ ಗುರಿ ಈಗ ವರ್ಷದ ಕೊನೆಯ ಗ್ರಾಂಡ್ ಸ್ಲಾಮ್ ಟೂರ್ನಿಯಾದ ಯುಎಸ್ ಓಪನ್ ಆಗಿದೆ.

ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ IPL ಪಂದ್ಯ!

ನ್ಯೂಯಾರ್ಕ್‌ನ ಹಾರ್ಡ್ ಕೋರ್ಟ್ ಅಂಗಳದಲ್ಲಿ ನೊವಾಕ್ ಜೊಕೊವಿಚ್ ಮತ್ತೊಮ್ಮೆ ತನ್ನ 25ನೇ ಗ್ರಾಂಡ್ ಸ್ಲಾಮ್ ಇತಿಹಾಸ ನಿರ್ಮಿಸಲು ಸಂಪೂರ್ಣ ಸಜ್ಜಾಗಲಿದ್ದಾರೆ.

Source link

Exit mobile version