World Population Day 2026: ವಿಶ್ವ ಜನಸಂಖ್ಯಾ ದಿನದ ಆಚರಣೆಯ ಇತಿಹಾಸ, ಮಹತ್ವ ತಿಳಿಯಿರಿ – Kannada News | World Population Day 2026: What are the history and significance of World Population Day

ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ಆರ್ಥಿಕ ಬೆಳವಣಿಗೆ, ದೇಶದ ಪ್ರಗತಿ, ವಸತಿ, ಆರೋಗ್ಯ, ಮೂಲ ಸೌಕರ್ಯ , ಪರಿಸರ, ಅಭಿವೃದ್ಧಿಯ ಮೇಲೆ ಪರಿಣಾಮ ಬೀರುತ್ತದೆ. ಈ ಸವಾಲುಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಜುಲೈ 11 ರಂದು ವಿಶ್ವ ಜನಸಂಖ್ಯಾ ದಿನವನ್ನು (World Population Day) ಆಚರಿಸಲಾಗುತ್ತಿದೆ. ಹಾಗಾದ್ರೆ ಈ ದಿನದ ಆಚರಣೆ ಶುರುವಾದದ್ದು ಯಾವಾಗ? ಇನ್ನಿತರ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ವಿಶ್ವ ಜನಸಂಖ್ಯಾ ದಿನದ ಇತಿಹಾಸವೇನು?

1987 ರ ಜುಲೈ 11 ರಂದು ವಿಶ್ವ ಜನಸಂಖ್ಯೆಯು 500 ಕೋಟಿ ದಾಟಿತ್ತು. ಈ ಹಿನ್ನಲೆಯಲ್ಲಿ ವಿಶ್ವಸಂಸ್ಥೆಯು ತನ್ನ ಅಂಗ ಸಂಸ್ಥೆಯಾದ ವಿಶ್ವಸಂಸ್ಥೆ ಅಭಿವೃದ್ಧಿ ಕಾರ‍್ಯಕ್ರಮ ಮಂಡಳಿಯು ಜನಸಂಖ್ಯೆ ಹೆಚ್ಚಳದಿಂದ ಆಗುವ ತೊಂದರೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸುವ ನಿರ್ಧಾರಕ್ಕೆ ಬಂದಿತು. 1989 ಜುಲೈ 11ರಂದು ಮೊದಲ ಬಾರಿಗೆ ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಿತು. ಅಂದಿನಿಂದ ವಿಶ್ವ ಜನಸಂಖ್ಯಾ ದಿನದ ಆಚರಣೆ ಜಾರಿಗೆ ಬಂದಿತು.

ಇದನ್ನೂ ಓದಿ: ನವೀಕರಿಸಬಹುದಾದ ಇಂಧನಗಳನ್ನು ಹೆಚ್ಚು ಬಳಸುವ ಮೂಲಕ ಪರಿಸರ ಸಂರಕ್ಷಣೆಗೆ ಕೊಡುಗೆ ನೀಡೋಣ

ವಿಶ್ವ ಜನಸಂಖ್ಯಾ ದಿನದ ಮಹತ್ವ ಹಾಗೂ ಆಚರಣೆ ಹೇಗೆ?

ಜನಸಂಖ್ಯೆ ಹೆಚ್ಚಳವು ಮನುಕುಲಕ್ಕೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಇಡೀ ವಿಶ್ವಕ್ಕೆ ಹತ್ತು ಹಲವಾರು ತೊಂದರೆಗಳು ಎದುರಾಗುತ್ತಿದೆ. ಹೀಗಾಗಿ ಜನಸಂಖ್ಯೆಯನ್ನು ನಿಯಂತ್ರಿಸಲು ಕ್ರಮಗಳನ್ನು ಕೈಗೊಳ್ಳುವ ಉದ್ದೇಶದಿಂದ ಈ ದಿನದ ಆಚರಣೆ ಮಹತ್ವದ್ದಾಗಿದೆ. ಈ ವಿಶೇಷ ದಿನದಂದು ಜಾಗೃತಿ ಕಾರ್ಯಕ್ರಮಗಳು, ಕುಟುಂಬ ಯೋಜನೆ, ಲಿಂಗ ಸಮಾನತೆ, ಬಡತನ, ತಾಯಿ ಮಗುವಿನ ಆರೋಗ್ಯ ಮತ್ತು ಗರ್ಭನಿರೋಧಕ ಔಷಧಿಗಳನ್ನು ಬಳಸುವ ಕುರಿತು ಚರ್ಚಾ ಕಾರ್ಯಕ್ರಮ, ವಿಚಾರ ಸಂಕಿರಣ ಹಾಗೂ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಜೀವನ ಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Source link

ಸೆಟ್ಟೇರಿತು ಲೂಸ್ ಮಾದ ಹೊಸ ಸಿನಿಮಾ, ಸಾಥ್ ಕೊಟ್ಟ ಧ್ರುವ ಸರ್ಜಾ – Kannada News | Loose Mada Yogi’s new movie started Dhruva Sarja wished best of luck

ಲೂಸ್ ಮಾದ (Loose Maada), ಕನ್ನಡದ ಜನಪ್ರಿಯ ನಟ. ಇತ್ತೀಚೆಗೆ ಅವರ ನಟನೆಯ ‘ಗ್ರಾಮಾಯಣ’ ಸಿನಿಮಾ ಬಿಡುಗಡೆ ಆಗಿದೆ. ವಿನಯ್ ರಾಜ್​​ಕುಮಾರ್ ಜೊತೆಗೆ ಲೂಸ್ ಮಾದ ಸಹ ಈ ಸಿನಿಮಾನಲ್ಲಿ ನಟಿಸಿದ್ದಾರೆ. ‘ಗ್ರಾಮಾಯಣ’ ಸಿನಿಮಾ ಇನ್ನೂ ಪ್ರದರ್ಶನಗೊಳ್ಳುತ್ತಿರುವಾಗಲೇ ಲೂಸ್ ಮಾದ ನಟನೆಯ ಹೊಸ ಸಿನಿಮಾ ಸೆಟ್ಟೇರಿದೆ. ಲೂಸ್ ಮಾದ ಅವರು ಸೋಲೊ ಹೀರೋ ಆಗಿ ನಟಿಸುತ್ತಿರುವ ಈ ಸಿನಿಮಾದ ಮುಹೂರ್ತಕ್ಕೆ ಧ್ರುವ ಸರ್ಜಾ ಆಗಮಿಸಿ ಗೆಳೆಯನಿಗೆ ಶುಭ ಕೋರಿದ್ದಾರೆ. ಇದು ಲೂಸ್ ಮಾದ ಅವರ 51ನೇ ಸಿನಿಮಾ ಆಗಿರುವುದು ವಿಶೇಷ.

ಲೂಸ್ ಮಾದ ಅವರ ಈ ಸಿನಿಮಾಕ್ಕೆ ‘ಫಾರೆವರ್’ ಎಂದು ಹೆಸರಿಡಲಾಗಿದ್ದು, ಇತ್ತೀಚೆಗೆ ನಡೆದ ಮುಹೂರ್ತದಲ್ಲಿ ನಟ ಧ್ರುವ ಸರ್ಜಾ ಭಾಗಿ ಆಗಿ, ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ವೇಳೆ ಮಾತನಾಡಿದ ಯೋಗಿ, ತಾವು ಹಾಗೂ ಧ್ರುವ ಸರ್ಜಾ ಅವರು ಒಂದೇ ಶಾಲೆಯಲ್ಲಿ ಓದಿದವರು ಮತ್ತು ಉತ್ತಮ ಸ್ನೇಹಿತರು ಎಂದರು. ತಮ್ಮ ನೆಚ್ಚಿನ ಗೆಳೆಯನ 51ನೇ ಚಿತ್ರದ ಆರಂಭಕ್ಕೆ ಧ್ರುವ ಸರ್ಜಾ ಸಾಕ್ಷಿಯಾಗಿದ್ದು ವಿಶೇಷವಾಗಿತ್ತು. ಶಾಸಕ ಕೃಷ್ಣಪ್ಪ ಅವರು ಕ್ಯಾಮೆರಾ ಚಾಲನೆ ಮಾಡಿದರು, ಹಾಗೂ ‘ನಾಗರಹಾವು’ ಚಿತ್ರದ ನಿರ್ಮಾಪಕ ಸಾಜಿದ್ ಖುರೇಶಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದರು.

ಸುಮಾರು ಎರಡು ವರ್ಷಗಳ ನಂತರ ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ಯೋಗಿ, ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುವುದಾಗಿ ಹೇಳಿದರು. ‘ನಾನು ಈ ಚಿತ್ರದಲ್ಲಿ ಈವರೆಗೂ ಮಾಡಿರದ ಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಚಿತ್ರದಲ್ಲಿ ಲವ್, ಸೆಂಟಿಮೆಂಟ್ ಮತ್ತು ಆಕ್ಷನ್ ಜೊತೆಗೆ ಇನ್ನೊಂದು ವಿಶೇಷ ಅಂಶವಿದೆ, ಅದನ್ನು ಸದ್ಯದಲ್ಲೇ ಬಹಿರಂಗಪಡಿಸುತ್ತೇವೆ. ವೈಯಕ್ತಿಕವಾಗಿ ನನಗೆ ಬೈಕ್ ರೈಡಿಂಗ್ ಎಂದರೆ ತುಂಬಾ ಇಷ್ಟ, ಈ ಚಿತ್ರದ ಕಥೆ ಬೈಕ್ ರೈಡಿಂಗ್‌ಗೆ ಹತ್ತಿರವಾಗಿರುವುದು ನನಗೆ ಹೆಚ್ಚು ಖುಷಿ ತಂದಿದೆ’ ಎಂದು ತಮ್ಮ ಉತ್ಸಾಹವನ್ನು ಹಂಚಿಕೊಂಡರು.

ಇದನ್ನೂ ಓದಿ:ಯೋಗಿ 50ನೇ ಸಿನಿಮಾಗೆ ‘ಕಿಂಗ್’ ಟೈಟಲ್; ರಗಡ್ ಅವತಾರದಲ್ಲಿ ಬಂದ ಲೂಸ್ ಮಾದ

ಸಿನಿಮಾವನ್ನು ಸುಪ್ರೀಮ್ ಕ್ರಿಯೇಷನ್ಸ್ ಲಾಂಛನದಲ್ಲಿ ಎಂ ವೆಂಕಟನಾರಾಯಣ್ (ಠಾಗೋರ್ ಕೃಷ್ಣ) ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ‘ಚಂದ್ರಿಕ’ ಸಿನಿಮಾ ನಿರ್ದೇಶಿಸಿದ್ದ ಯೋಗೇಶ್ ಎಂ ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲೇ ಮೊದಲ ಹಂತದ ಚಿತ್ರೀಕರಣ ಕಾರ್ಯ ಭರದಿಂದ ಸಾಗುತ್ತಿದೆ. ಸಿನಿಮಾನಲ್ಲಿ ನಾಯಕಿಯಾಗಿ ಆಕಾಂಕ್ಷಾ ರಾವ್ ಹೇಳಿದ್ದಾರೆ. ತುಳು ಸಿನಿಮಾ ಒಂದರಲ್ಲಿ ನಟಿಸಿರುವ ಆಕಾಂಕ್ಷಾಗೆ ಇದು ಮೊದಲ ಕನ್ನಡ ಸಿನಿಮಾ ಆಗಿದೆ.

ಲೂಸ್ ಮಾದ ಯೋಗಿ ಅವರು ಇತ್ತೀಚೆಗೆ ಸೋಲೊ ನಾಯಕನಾಗಿ ನಟಿಸುವುದು ಕಡಿಮೆ ಆಗಿದೆ. ಸಹ ನಾಯಕನಾಗಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕಳೆದ ವರ್ಷದ ಆರಂಭದಲ್ಲಿ ಬಿಡುಗಡೆ ಆಗಿದ್ದ ‘ಸಿದ್ಲಿಂಗು 2’ ಸಿನಿಮಾನಲ್ಲಿ ಅವರು ಸೋಲೊ ಹೀರೋ ಆಗಿದ್ದರು. ಈಗ ಅವರೇ ಹೇಳಿರುವಂತೆ ಸುಮಾರು ಎರಡು ವರ್ಷಗಳ ಬಳಿಕ ಮತ್ತೆ ಸೋಲೊ ಹೀರೋ ಆಗಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

16 ವರ್ಷಗಳ ಬಳಿಕ ಸೆಮಿಫೈನಲ್​ಗೇರಿದ ಸ್ಪೇನ್..! – Kannada News | Spain storms into world cup semis after 16 years

ಸ್ಪೇನ್ ತಂಡದ ಬರೋಬ್ಬರಿ 16 ವರ್ಷಗಳ ಕಾಯುವಿಕೆ ಅಂತ್ಯವಾಗಿದೆ. ಲಾಸ್ ಏಂಜಲೀಸ್​ನ ಸೋಫಿ ಸ್ಟೇಡಿಯಂನಲ್ಲಿ ನಡೆದ ರೋಚಕ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಬೆಲ್ಜಿಯಂ ತಂಡವನ್ನು 1-2 ಅಂತರದಿಂದ ಸೋಲಿಸಿ ಸ್ಪೇನ್ ಸೆಮಿಫೈನಲ್​ಗೆ ಪ್ರವೇಶಿಸಿದೆ. ಅದು ಸಹ ಹದಿನಾರು ವರ್ಷಗಳ ಬಳಿಕ ಎಂಬುದು ವಿಶೇಷ.

ಅಂದರೆ 2010 ರಲ್ಲಿ ಫಿಫಾ ವಿಶ್ವಕಪ್ ಗೆದ್ದ ಬಳಿಕ ಸ್ಪೇನ್ ತಂಡವು ಒಮ್ಮೆಯೂ ಸೆಮಿಫೈನಲ್​ಗೆ ಪ್ರವೇಶಿಸಿರಲಿಲ್ಲ. ಈ ಬಾರಿ ಯುವ ಆಟಗಾರರೊಂದಿಗೆ ಕಣಕ್ಕಿಳಿದ ಸ್ಪೇನ್ ಇದೀಗ ತನ್ನ ದೀರ್ಘಕಾಲದ ಕಾಯುವಿಕೆಯನ್ನು ಅಂತ್ಯಗೊಳಿಸಿದ್ದಾರೆ.

 ‘ಸೂಪರ್ ಸಬ್’ ಮೆರಿನೊ!

ಈ ಪಂದ್ಯದ ಆರಂಭದಿಂದಲೂ ಚೆಂಡಿನ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದ ಸ್ಪೇನ್ ಪರ 30ನೇ ನಿಮಿಷದಲ್ಲಿ ಫ್ಯಾಬಿಯನ್ ರೂಯಿಜ್ ಮೊದಲ ಆಕರ್ಷಕ ಗೋಲು ಗಳಿಸಿ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು. ಆದರೆ, ಪಂದ್ಯದ 41ನೇ ನಿಮಿಷದಲ್ಲಿ ಬೆಲ್ಜಿಯಂನ ಚಾರ್ಲ್ಸ್ ಡಿ ಕೆಟೆಲೇರೆ ಅದ್ಭುತ ಗೋಲು ಬಾರಿಸಿ ಪಂದ್ಯವನ್ನು 1-1 ರಿಂದ ಸಮಬಲಗೊಳಿಸಿದರು.

1-1 ಅಂತರದಿಂದ ಶುರುವಾದ ದ್ವಿತೀಯಾರ್ಧದಲ್ಲಿ ಉಭಯ ತಂಡಗಳ ನಡುವೆ ತೀವ್ರ ಪೈಪೋಟಿ ನಡೆಯಿತು. ಪಂದ್ಯವು ಹೆಚ್ಚುವರಿ ಸಮಯದ ಕಡೆಗೆ ಸಾಗುತ್ತಿದೆ ಎನ್ನುವಷ್ಟರಲ್ಲಿ, ಪಂದ್ಯದ ಚಿತ್ರಣವೇ ಬದಲಾಯಿತು.

ಬೆಲ್ಜಿಯಂನ ಖ್ಯಾತ ಗೋಲ್‌ಕೀಪರ್ ತಿಬೌಟ್ ಕೌರ್ಟೊಯಿಸ್ ಗಾಯಗೊಂಡು ಹೊರನಡೆದದ್ದು ಆ ತಂಡಕ್ಕೆ ದೊಡ್ಡ ಹಿನ್ನಡೆಯಾಯಿತು. ಇದರ ಲಾಭ ಪಡೆದ ಸ್ಪೇನ್ ತಂಡದ ಕೋಚ್ ಲೂಯಿಸ್ ಡಿ ಲಾ ಫ್ಯುಯೆಂಟೆ, 86ನೇ ನಿಮಿಷದಲ್ಲಿ ಮೈಕೆಲ್ ಮೆರಿನೊ ಅವರನ್ನು ಮೈದಾನಕ್ಕಿಳಿಸಿದರು.

ಮೈದಾನ ಪ್ರವೇಶಿಸಿದ ಕೇವಲ ಎರಡೇ ನಿಮಿಷಗಳಲ್ಲಿ, ಅಂದರೆ 88ನೇ ನಿಮಿಷದಲ್ಲಿ ಮೈಕೆಲ್ ಮೆರಿನೊ ಬೆಲ್ಜಿಯಂನ ಬದಲಿ ಗೋಲ್‌ಕೀಪರ್ ಸೆನ್ನೆ ಲ್ಯಾಮೆನ್ಸ್ ಮಾಡಿದ ತಪ್ಪನ್ನು ಬಳಸಿಕೊಂಡು ನಿರ್ಣಾಯಕ ವಿನ್ನಿಂಗ್ ಗೋಲು ಬಾರಿಸಿ ಸ್ಪೇನ್ ಪಾಳಯದಲ್ಲಿ ವಿಜಯೋತ್ಸವದ ಅಲೆ ಎಬ್ಬಿಸಿದರು.

ಇತಿಹಾಸ ಸೃಷ್ಟಿಸಿದ ಮೆರಿನೊ:

ಮೈಕೆಲ್ ಮೆರಿನೊ ವಿಶ್ವಕಪ್ ನಾಕೌಟ್ ಇತಿಹಾಸದಲ್ಲೇ ಬದಲಿ ಆಟಗಾರನಾಗಿ ಬಂದು ಸತತ ಎರಡು ಪಂದ್ಯಗಳಲ್ಲಿ ವಿನ್ನಿಂಗ್ ಗೋಲು ಬಾರಿಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡರು.

  • ಪೋರ್ಚುಗಲ್ ವಿರುದ್ಧದ ಪಂದ್ಯದಲ್ಲಿ ಕೊನೆಯ ನಿಮಿಷಗಳ ವೇಳೆ ಮೈಕೆಲ್ ಮೆರಿನೊ ಗೋಲು ಬಾರಿಸಿ ಸ್ಪೇನ್ ತಂಡಕ್ಕೆ ಜಯ ತಂದು ಕೊಟ್ಟಿದ್ದರು.
  • ಬೆಲ್ಜಿಯಂ ವಿರುದ್ಧದ ಪಂದ್ಯದಲ್ಲೂ ನಿರ್ಣಾಯಕ ಹಂತದಲ್ಲಿ ಗೋಲು ಬಾರಿಸಿ ಸ್ಪೇನ್ ತಂಡವು ಸೆಮಿಫೈನಲ್​ಗೇರುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಸೆಮಿಫೈನಲ್ ಎದುರಾಳಿ ಯಾರು?

ವಿಶ್ವಕಪ್ ಜಯಿಸುವ ನೆಚ್ಚಿನ ತಂಡವಾಗಿ ಹೊರಹೊಮ್ಮಿರುವ ಸ್ಪೇನ್, ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಫ್ರಾನ್ಸ್ ತಂಡವನ್ನು ಎದುರಿಸಲಿದೆ. ಫ್ರಾನ್ಸ್ ತಂಡವು ತನ್ನ ಕ್ವಾರ್ಟರ್‌ಫೈನಲ್ ಕದನದಲ್ಲಿ ಮೊರಾಕೊ ತಂಡವನ್ನು ಸೋಲಿಸಿ ಅಂತಿಮ ನಾಲ್ಕರ ಘಟ್ಟ ತಲುಪಿದೆ.

ಇದನ್ನೂ ಓದಿ: ಸೋತರೂ ಇತಿಹಾಸ ನಿರ್ಮಿಸಿ ನಿರ್ಗಮಿಸಿದ ಆರ್ಥರ್ ಫೆರಿ

ಅದರಂತೆ ಜುಲೈ 14 ರಂದು ಟೆಕ್ಸಾಸ್‌ನ ಡಲ್ಲಾಸ್ ಸ್ಟೇಡಿಯಂನಲ್ಲಿ ನಡೆಯಲಿರುವ ಹೈ-ವೋಲ್ಟೇಜ್ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಫ್ರಾನ್ಸ್ ಹಾಗೂ ಸ್ಪೇನ್ ತಂಡಗಳು ಮುಖಾಮುಖಿಯಾಗಲಿದೆ.

Source link

ಲೋಕಾಯುಕ್ತಕ್ಕೆ ಅವಹೇಳನಕಾರಿ ಪತ್ರ: ಬಳ್ಳಾರಿ ವ್ಯಕ್ತಿಗೆ 6 ತಿಂಗಳ ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್! – Kannada News | Karnataka Lokayukta Defamation Case: Ballari Man Sentenced to 6 Months Jail in Bengaluru

ಲೋಕಾಯುಕ್ತ ಸಂಸ್ಥೆಯನ್ನು ನಿಂದಿಸಿದ ಬಳ್ಳಾರಿಯ ಎಸ್‌ಜಿ ಶಂಕರ್‌ಗೆ ಜೈಲು ಶಿಕ್ಷೆ

ಬೆಂಗಳೂರು, ಜುಲೈ 11: ಕರ್ನಾಟಕ ಲೋಕಾಯುಕ್ತ ಮತ್ತು ಉಪಲೋಕಾಯುಕ್ತ ಸಂಸ್ಥೆಯ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿ ನಿಂದಿಸಿದ ಆರೋಪದ ಮೇಲೆ ಬಳ್ಳಾರಿ ನಿವಾಸಿಯೊಬ್ಬರಿಗೆ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯವು 6 ತಿಂಗಳ ಜೈಲು ಶಿಕ್ಷೆ ಮತ್ತು 5,000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ. ಬಳ್ಳಾರಿಯ ಹಾವಿನಾಳ ಬಸಣ್ಣ ಕಾಂಪೌಂಡ್ ನಿವಾಸಿ ಎಸ್‌ಜಿ ಶಂಕರ್ ಶಿಕ್ಷೆಗೊಳಗಾದ ಆರೋಪಿಯಾಗಿದ್ದಾರೆ.

ನಡೆದಿದ್ದೇನು?

ಲೋಕಾಯುಕ್ತ ಪ್ರಕಟಣೆಯ ಪ್ರಕಾರ, ಎಸ್‌ಜಿ ಶಂಕರ್ ಅವರು 2015 ರಲ್ಲಿ ಬಳ್ಳಾರಿಯ ಮುಜರಾಯಿ ಇಲಾಖೆಯ ಜಂಟಿ ಕಮಿಷನರ್ ವಿರುದ್ಧ ಅಧಿಕಾರ ದುರುಪಯೋಗದ ದೂರು ನೀಡಿದ್ದರು. ಜಂಟಿ ಕಮಿಷನರ್ ಅವರು ಬಳ್ಳಾರಿಯ ದೇವಸ್ಥಾನವೊಂದರ ಸಮೀಪದಲ್ಲಿದ್ದ ಅಂಗಡಿಗಳನ್ನು ಕಾನೂನುಬಾಹಿರವಾಗಿ ತೆರವುಗೊಳಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಆದರೆ, ಲೋಕಾಯುಕ್ತ ತನಿಖೆ ಮತ್ತು ಪರಿಶೀಲನೆ ನಡೆಸಿದಾಗ ಜಂಟಿ ಕಮಿಷನರ್ ಅವರು ಸಂಪೂರ್ಣವಾಗಿ ಕಾನೂನುಬದ್ಧವಾಗಿಯೇ ಅಂಗಡಿಗಳನ್ನು ತೆರವುಗೊಳಿಸಿರುವುದು ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಉಪಲೋಕಾಯುಕ್ತರು ಪ್ರಕರಣವನ್ನು ಮುಕ್ತಾಯಗೊಳಿಸಿ ಶಂಕರ್‌ಗೆ ಪತ್ರ ಕಳುಹಿಸಿದ್ದರು.

ನೋಟಿಸ್‌ಗೂ ನಿಂದನೆ

ಇದರಿಂದ ಅಸಮಾಧಾನಗೊಂಡ ಶಂಕರ್, 2022ರಲ್ಲಿ ಉಪಲೋಕಾಯುಕ್ತರಿಗೆ ಮತ್ತು 2023ರಲ್ಲಿ ಲೋಕಾಯುಕ್ತರಿಗೆ ಅತ್ಯಂತ ಅವಹೇಳನಕಾರಿ ಮತ್ತು ನಿಂದನಾತ್ಮಕ ಪದಗಳನ್ನು ಬಳಸಿ ಎರಡು ಪತ್ರಗಳನ್ನು ಬರೆದಿದ್ದರು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಸಂಸ್ಥೆಯು ಕಾನೂನು ಕ್ರಮ ಏಕೆ ಜರುಗಿಸಬಾರದು ಎಂದು ಶಂಕರ್‌ಗೆ ಕಾನೂನು ನೋಟಿಸ್ ಜಾರಿ ಮಾಡಿತ್ತು. ಆದರೆ, ಆರೋಪಿ ಶಂಕರ್ ಆ ನೋಟಿಸ್‌ಗೂ ದರ್ಪದಿಂದ ಮತ್ತೊಂದು ನಿಂದನಾತ್ಮಕ ಪತ್ರ ಬರೆಯುವ ಮೂಲಕ ಉದ್ಧಟತನ ಪ್ರದರ್ಶಿಸಿದ್ದರು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಕಚೇರಿಯಿಂದ ಅವರ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಬೆಂಗಳೂರಿನ ನ್ಯಾಯಾಲಯವು ಆರೋಪಿ ತಪ್ಪಿತಸ್ಥ ಎಂದು ಘೋಷಿಸಿ ಜೈಲು ಶಿಕ್ಷೆ ಪ್ರಕಟಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:16 am, Sat, 11 July 26

Source link

ಬೆಂಗಳೂರು ಗಾಳಿಯ ಗುಣಮಟ್ಟ ಎರಡು ಸಿಗರೇಟ್ ಸೇದಿದಷ್ಟು ಹಾನಿಕಾರಕ! ಕೇಂದ್ರ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ವರದಿ – Kannada News | Bengaluru Air Pollution: CPCB Report Says City Air is Equivalent to Smoking 2 Cigarettes a Week

ಬೆಂಗಳೂರು, ಜುಲೈ 11: ವಿಶ್ವದಲ್ಲೇ ಅತಿಹೆಚ್ಚು ಟ್ರಾಫಿಕ್ ಇರುವ ನಗರಗಳ ಪೈಕಿ ಬೆಂಗಳೂರು (Bengaluru) ಎರಡನೇ ಸ್ಥಾನ ಪಡೆದುಕೊಂಡಿದೆ. ಇದೀಗ ಕೇಂದ್ರ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರಿನ ಹವಾಮಾನದ ಬಗ್ಗೆ ವರದಿ ಬಿಡುಗಡೆ ಮಾಡಿದ್ದು, ಸಿಲಿಕಾನ್ ಸಿಟಿಯ ಹವಾಮಾನ ತೀರಾ ಕಳಪೆಯಾಗಿದೆ. ವಾಯುಮಾಲಿನ್ಯದ ಪರಿಣಾಮ ವಾರಕ್ಕೆ ಎರಡು ಸಿಗರೇಟ್ ಸೇದಿದಷ್ಟು, ತಿಂಗಳಿಗೆ ಸುಮಾರು ಹತ್ತು ಸಿಗರೇಟ್ ಸೇದಿದಷ್ಟು ಎಂದು ಉಲ್ಲೇಖಿಸಿದೆ. ಇತ್ತ ಪ್ರತಿದಿನ ನಗರದಲ್ಲಿ 3 ಸಾವಿರ ಹೊಸ ವಾಹನಗಳು ರೋಡಿಗಿಳಿಯುತ್ತಿವೆ. ಇವುಗಳಲ್ಲಿ 2100 ದ್ವಿಚಕ್ರ ವಾಹನಗಳು, 600 ಕಾರುಗಳು, ಆಟೋ, ಲಾರಿ, ಬಸ್ಸು ಎಲ್ಲಾ ರೀತಿಯ ವಾಹನಗಳು ಸೇರಿವೆ. ಇದರಿಂದ ನಗರದಲ್ಲಿ ವಿಪರೀತ ಟ್ರಾಫಿಕ್ ಸಮಸ್ಯೆ ಮತ್ತು ವಾಯುಮಾಲಿನ್ಯದ ಪ್ರಮಾಣವು ಹೆಚ್ಚಾಗುತಿದೆ.

ಬೆಂಗಳೂರಿನಲ್ಲಿ 3 ವರ್ಷದಲ್ಲಿ ನೋಂದಣಿಯಾದ ವಾಹನಗಳ ವಿವರ

2023-24

  • ನೋಂದಣಿಯಾದ ಹೊಸ ಕಾರುಗಳ ಸಂಖ್ಯೆ – 1,59,150
  • ದ್ವಿಚಕ್ರ ವಾಹನಗಳ ಸಂಖ್ಯೆ – 4,77,361
  • ಎಲ್ಲಾ ಮಾದರಿಯ ಒಟ್ಟು ರಿಜಿಸ್ಟ್ರೇಷನ್ ಆದ ವಾಹನಗಳ ಸಂಖ್ಯೆ – 7,25,597 ಲಕ್ಷ.

2024-25

  • ನೋಂದಣಿಯಾದ ಹೊಸ ಕಾರುಗಳ ಸಂಖ್ಯೆ – 1,45,322
  • ದ್ವಿಚಕ್ರಗಳ ಸಂಖ್ಯೆ – 4,73,994
  • ಎಲ್ಲಾ ಮಾದರಿಯ ಒಟ್ಟು ರಿಜಿಸ್ಟ್ರೇಷನ್ ಆದ ವಾಹನಗಳ ಸಂಖ್ಯೆ – 7,22,873

2025-26

  • ನೋಂದಣಿಯಾದ ಹೊಸ ಕಾರುಗಳ ಸಂಖ್ಯೆ 1,55,345
  • ದ್ವಿಚಕ್ರ ವಾಹನಗಳ ಸಂಖ್ಯೆ – 5,25,335
  • ಎಲ್ಲಾ ಮಾದರಿಯ ಒಟ್ಟು ರಿಜಿಸ್ಟ್ರೇಷನ್ ಆದ ವಾಹನಗಳ ಸಂಖ್ಯೆ – 7,87,671

ಬೆಂಗಳೂರಿನಲ್ಲಿ ವಾನಹ ನೋಂದಣಿ: 2025-26ರವರೆಗಿನ ಅಂಕಿಅಂಶ

  • ಬೆಂಗಳೂರಿನಲ್ಲಿರುವ ಒಟ್ಟು ಕಾರುಗಳ ಸಂಖ್ಯೆ: 24,79,695
  • ಬೆಂಗಳೂರಿನಲ್ಲಿರುವ ಒಟ್ಟು ದ್ವಿಚಕ್ರ ವಾಹನಗಳ ಸಂಖ್ಯೆ: 86,04,109
  • ಬೆಂಗಳೂರಿನಲ್ಲಿರುವ ಒಟ್ಟು ವಾಹನಗಳ ಸಂಖ್ಯೆ: 1,25,94,899

ದೆಹಲಿಯ ಸ್ಥಿತಿ ಇನ್ನಷ್ಟು ಭೀಕರ

ಕೇಂದ್ರ ವಾಯುಮಾಲಿನ್ಯ ನಿಯಂತ್ರಣ ಮಂಡಳಿಯು ದೆಹಲಿ ಹವಾಮಾನದ ಬಗ್ಗೆಯೂ ವರದಿ ನೀಡಿದ್ದು, ದೆಹಲಿಯ ವಾಯು ಗುಣಮಟ್ಟವು ದಿನಕ್ಕೆ ಎರಡು ಸಿಗರೇಟ್ ಸೇದಿದಷ್ಟು ಹಾನಿಕಾರಕ ಎಂದು ಉಲ್ಲೇಖಿಸಿದೆ. ಪ್ರತಿದಿನ ರಾಜಧಾನಿಯಲ್ಲಿ 500 ರಿಂದ 600 ಹೊಸ ಕಾರುಗಳು ರಿಜಿಸ್ಟ್ರೇಷನ್ ಆಗುತ್ತಿದ್ದು, ಇದರಿಂದ ಮೂರು ವರ್ಷದಲ್ಲಿ ರಾಜಧಾನಿಯಲ್ಲಿ ಸುಮಾರು 30 ಲಕ್ಷ ಕಾರುಗಳ ಸಂಖ್ಯೆ ದಾಟಲಿದೆ ಎಂದಿದೆ.

ಇತ್ತ ಕರ್ನಾಟಕದಲ್ಲಿ ಒಟ್ಟು 3.50 ಕೋಟಿ ವಾಹನಗಳಿವೆ, ಈ ಪೈಕಿ ಬೆಂಗಳೂರಿನಲ್ಲಿಯೇ ಬರೋಬ್ಬರಿ 1 ಕೋಟಿ 25 ಲಕ್ಷವಾಹನಗಳಿದ್ದು, ನೆರೆಯ ರಾಜ್ಯ, ಅಕ್ಕಪಕ್ಕದ ರಾಜ್ಯದ ವಾಹನಗಳು‌ ಸೇರಿಸಿದರೆ 1.55 ಕೋಟಿ ವಾಹನ ಬೆಂಗಳೂರಿನಲ್ಲಿ ಪ್ರತಿದಿನ ಸಂಚಾರ ಮಾಡುತ್ತಿವೆ. 50ಸಾವಿರ ವಾಹನಗಳು ಓಡಾಡುವ ಸಾಮರ್ಥ್ಯದ ರಸ್ತೆಯಲ್ಲಿ ಒಂದುವರೆ ಕೋಟಿ ವಾಹನಗಳು ಸಂಚಾರ ಮಾಡುತ್ತಿವೆ. ಇದರಲ್ಲಿ 1.9 ಕೋಟಿ ಬರೋಬ್ಬರಿ ಖಾಸಗಿ ವಾಹನಗಳು. 13.25 ಲಕ್ಷ ವಾಹನಗಳು ವಾಣಿಜ್ಯ ವಾಹನಗಳು. ಕಳೆದ ಮೂರು ವರ್ಷದಲ್ಲಿ ಬೆಂಗಳೂರಲ್ಲಿ 4,58,817 ಹೊಸ ಕಾರು ರಿಜಿಸ್ಟ್ರೇಷನ್ ಆಗಿದೆ.

ಇದನ್ನೂ ಓದಿ: ಬೆಂಗಳೂರು, ಮಂಗಳೂರು ಸೇರಿ ರಾಜ್ಯದ ಪ್ರಮುಖ ನಗರಗಳ ಇಂದಿನ ವಾಯು ಗುಣಮಟ್ಟ ಉತ್ತಮ

ಒಟ್ಟಿನಲ್ಲಿ, ಅಭಿವೃದ್ಧಿಯ ಹೆಸರಿನಲ್ಲಿ ನಗರದಲ್ಲಿದ್ದ ಲಕ್ಷಾಂತರ ಮರಗಳನ್ನು ಈಗಾಗಲೇ ಕಡಿಯಲಾಗಿದೆ. ಇತ್ತ ಪ್ರತಿದಿನ ಸಾವಿರಾರು ಹೊಸ ವಾಹನಗಳು ರಸ್ತೆಗಿಳಿಯುತ್ತಿದ್ದು, ಇದರಿಂದ ವಾಯುಮಾಲಿನ್ಯದ ಪ್ರಮಾಣವು ಮತ್ತಷ್ಟು ಹೆಚ್ಚಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:10 am, Sat, 11 July 26

Source link

ಸೋತರೂ ಇತಿಹಾಸ ನಿರ್ಮಿಸಿ ನಿರ್ಗಮಿಸಿದ ಆರ್ಥರ್ ಫೆರಿ – Kannada News | Arthur Fery Creates History Despite Wimbledon Semifinal Defeat

ವಿಶ್ವದ ಪ್ರತಿಷ್ಠಿತ ಟೆನಿಸ್ ಟೂರ್ನಿ ವಿಂಬಲ್ಡನ್ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈ ಮುಕ್ತಾಯಕ್ಕೂ ಮುನ್ನವೇ 23 ವರ್ಷದ ಯುವ ಆಟಗಾರ ಆರ್ಥರ್ ಫೆರಿ ಹೊಸ ಇತಿಹಾಸ ನಿರ್ಮಿಸಿ ನಿರ್ಗಮಿಸಿದ್ದಾರೆ. ಲಂಡನ್​ನ ಸೆಂಟರ್ ಕೋರ್ಟ್ ಮೈದಾನದಲ್ಲಿ ನಡೆದ ಪುರುಷರ ಸಿಂಗಲ್ಸ್ ಸೆಮಿಫೈನಲ್ಸ್ ಬ್ರಿಟನ್‌ನ ಆರ್ಥರ್ ಫೆರಿ ಹಾಗೂ ವಿಶ್ವದ ನಂ. 2 ಆಟಗಾರ ಜರ್ಮನಿಯ ಅಲೆಕ್ಸಾಂಡರ್ ಝ್ವೆರೆಫ್ ಮುಖಾಮುಖಿಯಾಗಿದ್ದರು. ಈ ಪಂದ್ಯದಲ್ಲಿ ಆರ್ಥರ್  7-6, 6-2, 6-4 ರ ನೇರ ಸೆಟ್‌ಗಳ ಅಂತರದಿಂದ ಸೋಲೊಪ್ಪಿಕೊಂಡರು.

ಈ ಸೋಲಿನ ಬಳಿಕ ಮೈದಾನದಿಂದ ಹೊರನಡೆಯುವಾಗ ಇಡೀ ಕ್ರೀಡಾಂಗಣ ಎದ್ದು ನಿಂತು ಚಪ್ಪಾಳೆ ತಟ್ಟುತ್ತಿತ್ತು. ಏಕೆಂದರೆ, ಅವರು ಕೇವಲ ಒಂದು ಸೋಲಾಗಿರಲಿಲ್ಲ. ಬದಲಾಗಿ ಇತಿಹಾಸ ನಿರ್ಮಿಸಿ ಹೊರ ನಡೆದ ಯುವ ಆಟಗಾರನ ಸಾಧನೆಯ ಹೆಜ್ಜೆಯಾಗಿತ್ತು.

ಹೌದು,  ವೈಲ್ಡ್‌ಕಾರ್ಡ್ ಮೂಲಕ ಟೂರ್ನಿಗೆ ಪ್ರವೇಶ ಪಡೆದಿದ್ದ ಆರ್ಥರ್ ಫೆರಿ, ಇಡೀ ಟೆನಿಸ್ ಲೋಕವೇ ಬೆರಗಾಗುವಂತಹ ಐತಿಹಾಸಿಕ ದಾಖಲೆಗಳನ್ನು ಬರೆದು ನಿರ್ಗಮಿಸಿದ್ದಾರೆ.

ಜಾಗತಿಕ ದಾಖಲೆ ಸರಿಗಟ್ಟಿದ ಫೆರಿ:

ವಿಂಬಲ್ಡನ್‌ನ ದೀರ್ಘ ಇತಿಹಾಸದಲ್ಲಿ ವೈಲ್ಡ್‌ಕಾರ್ಡ್ ಆಟಗಾರನಾಗಿ ಪುರುಷರ ಸಿಂಗಲ್ಸ್‌ನಲ್ಲಿ ಸೆಮಿಫೈನಲ್ ತಲುಪಿದ ಜಗತ್ತಿನ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಆರ್ಥರ್ ಫೆರಿ ಪಾತ್ರರಾಗಿದ್ದಾರೆ. ಈ ಮುನ್ನ 25 ವರ್ಷಗಳ ಹಿಂದೆ, ಅಂದರೆ 2001ರಲ್ಲಿ ಗೋರಾನ್ ಇವಾನಿಸೆವಿಕ್ ಈ ಅಪರೂಪದ ಸಾಧನೆ ಮಾಡಿದ್ದರು.

ಆರ್ಥರ್ ಫೆರಿ ಐತಿಹಾಸಿಕ ಸಾಧನೆ:

  • ಬ್ರಿಟನ್‌ನ ಮೊದಲ ಆಟಗಾರ: ಓಪನ್ ಎರಾ (1968) ಇತಿಹಾಸದಲ್ಲೇ ಗ್ರ್ಯಾಂಡ್ ಸ್ಲಾಮ್‌ನ ಕ್ವಾರ್ಟರ್‌ಫೈನಲ್ ಹಾಗೂ ಸೆಮಿಫೈನಲ್ ತಲುಪಿದ ಮೊದಲ ಬ್ರಿಟಿಷ್ ವೈಲ್ಡ್‌ಕಾರ್ಡ್ ಆಟಗಾರ ಎಂಬ ದಾಖಲೆ ಆರ್ಥರ್ ಫೆರಿ ಪಾಲಾಗಿದೆ.
  • ಶ್ರೇಯಾಂಕದಲ್ಲೂ ಜಿಗಿತ: ವಿಂಬಲ್ಡನ್ ಟೂರ್ನಿ ಆರಂಭವಾಗುವ ಮುನ್ನ ವಿಶ್ವ ರ್ಯಾಂಕಿಂಗ್‌ನಲ್ಲಿ 114ನೇ ಸ್ಥಾನದಲ್ಲಿದ್ದ ಫೆರಿ, ಈಗ ನೇರವಾಗಿ 36ನೇ ಸ್ಥಾನಕ್ಕೆ ಜಿಗಿದು ಹೊಸ ಇತಿಹಾಸ ನಿರ್ಮಿಸಿದ್ದಾರೆ.
  • ಬ್ರಿಟಿಷ್ ನಂಬರ್ 1: ಈ ಅದ್ಭುತ ಪ್ರದರ್ಶನದ ಮೂಲಕ ಆರ್ಥರ್ ಫೆರಿ ಮೊದಲ ಬಾರಿಗೆ ಬ್ರಿಟನ್‌ನ ನಂಬರ್ 1 ಸಿಂಗಲ್ಸ್ ಟೆನಿಸ್ ಆಟಗಾರ ಎಂಬ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಬಲಿಷ್ಠರನ್ನೇ ಸದೆಬಡಿದ ಫೆರಿ:

ವಿಂಬಲ್ಡನ್ ಮೈದಾನದಿಂದ ಅರ್ಧ ಕಿಲೋ ಮೀಟರ್​ ದೂರದದಲ್ಲೇ ನೆಲೆಸಿರುವ ಆರ್ಥರ್ ಫೆರಿ ಅವರಿಗೆ ಸ್ಥಳೀಯ ಅಭಿಮಾನಿಗಳ ಬೆಂಬಲವೇ ದೊಡ್ಡ ಶಕ್ತಿಯಾಗಿತ್ತು. ಕ್ವಾರ್ಟರ್‌ಫೈನಲ್‌ನಲ್ಲಿ ವಿಶ್ವದ 9ನೇ ಶ್ರೇಯಾಂಕದ ಫ್ಲಾವಿಯೊ ಕೊಬೊಲ್ಲಿ ಅವರನ್ನು ಸೀದಾ ಸೆಟ್‌ಗಳಲ್ಲಿ ಧೂಳೀಪಟ ಮಾಡಿದ್ದ ಫೆರಿ, ಅದಕ್ಕೂ ಮುನ್ನ ಜಿಜೌ ಬರ್ಗ್ಸ್ ಮತ್ತು ಮಾಜಿ ವಿಶ್ವ ನಂ. 3 ಆಟಗಾರ ಗ್ರಿಗರ್ ಡಿಮಿಟ್ರೋವ್ ವಿರುದ್ಧ 5 ಸೆಟ್‌ಗಳ ಭೀಕರ ಹೋರಾಟ ನಡೆಸಿ ಜಯಭೇರಿ ಬಾರಿಸಿದ್ದರು.

ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ IPL ಪಂದ್ಯ!

ಸೆಮಿಫೈನಲ್‌ನಲ್ಲಿ ಝ್ವೆರೆಫ್ ಅವರ ಅನುಭವದ ಆಟದ ಮುಂದೆ ಫೆರಿ ಅವರ ಹೋರಾಟ ಅಂತ್ಯಗೊಂಡಿರಬಹುದು. ಆದರೆ ವೈಲ್ಡ್‌ಕಾರ್ಡ್ ಆಟಗಾರನೊಬ್ಬ ಸೆಮಿಫೈನಲ್‌ವರೆಗೆ ಬಂದು ಜಗತ್ತಿನ ದಿಗ್ಗಜರಿಗೆ ನಡುಕ ಹುಟ್ಟಿಸಿದ್ದು ಸುಲಭದ ಮಾತಲ್ಲ. ಹೀಗಾಗಿಯೇ ಸೋತರೂ ಆರ್ಥರ್ ಕೋಟ್ಯಂತರ ಟೆನಿಸ್ ಪ್ರೇಮಿಗಳ ಹೃದಯ ಗೆದ್ದಿದ್ದಾರೆ. ಈ ಮೂಲಕ ಮುಂಬರುವ ಯುಎಸ್ ಓಪನ್  ಟೂರ್ನಿಗೆ ಜಾಗತಿಕ ಟೆನಿಸ್‌ನ ಹೊಸ ಭರವಸೆಯಾಗಿ ಹೊರಹೊಮ್ಮಿದ್ದಾರೆ.

Published On – 8:00 am, Sat, 11 July 26

Source link

ವಿಜಯಪುರ: ನೊಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಬರೆದ 10 ತಿಂಗಳ ಪುಟ್ಟ ಪೋರ! – Kannada News | Vijayapura Boy World Record: 10 Month Old Baby Riyansh Pattanashetti Enters Noble Book of World Records

ರಿಯಾನ್ಸ್ ಪಟ್ಟಣಶೆಟ್ಟಿImage Credit source: tv9

ವಿಜಯಪುರ, ಜುಲೈ 11: ಸಾಧನೆ ಮಾಡಲು ವಯಸ್ಸಿನ ಹಂಗಿಲ್ಲ ಎಂಬುದನ್ನು ಜಗತ್ತಿನಾದ್ಯಂತ ಹಲವರು ಸಾಬೀತುಪಡಿಸಿದ್ದಾರೆ. ಇದೀಗ ಅದೇ ಸಾಲಿಗೆ ವಿಜಯಪುರ (Vijayapura) ಜಿಲ್ಲೆಯ ಪುಟ್ಟ ಬಾಲಕನೊಬ್ಬ ಸೇರಿದ್ದು, ವಯಸ್ಸಿಗೂ ಮೀರಿದ ಅಸಾಧಾರಣ ಸಾಧನೆ ಮಾಡಿದ್ದಾನೆ. ವಿಜಯಪುರ ನಗರದ ನಿವಾಸಿಗಳಾದ ಸಚಿನ್ ಪಟ್ಟಣಶೆಟ್ಟಿ ಹಾಗೂ ಸಿಂಚನಾ ದಂಪತಿಯ ಪುತ್ರ, ಕೇವಲ 10 ತಿಂಗಳ ಮಗು ರಿಯಾನ್ಸ್ ಪಟ್ಟಣಶೆಟ್ಟಿ ಅಂಬೆಗಾಲಿಡುವ ಪ್ರಾಯದಲ್ಲೇ ‘ನೊಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ (Noble Book of World Records)’ ಗೌರವಕ್ಕೆ ಪಾತ್ರನಾಗಿದ್ದಾನೆ.

ರಿಯಾನ್ಸ್ ಸಾಧನೆ ಏನು?

ಬಾಲಕ ರಿಯಾನ್ಸ್ ಕೇವಲ 10 ತಿಂಗಳ ವಯಸ್ಸಿದ್ದಾಗ ಬರೋಬ್ಬರಿ 21 ಮೆಟ್ಟಿಲುಗಳನ್ನು ಕೇವಲ 36 ಸೆಕೆಂಡುಗಳಲ್ಲಿ ಸರಾಗವಾಗಿ ಹತ್ತುವ ಮೂಲಕ ದಾಖಲೆ ಬರೆದಿದ್ದಾನೆ. ಇಷ್ಟು ಸಣ್ಣ ಪ್ರಾಯದಲ್ಲಿ ಮಗುವೊಂದು ಇಷ್ಟು ವೇಗವಾಗಿ ಮೆಟ್ಟಿಲು ಹತ್ತಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ಮಗುವಿನ ಸಾಮರ್ಥ್ಯ ಗುರುತಿಸಿದ ಪೋಷಕರು

ಬಾಲಕ ರಿಯಾನ್ಸ್ ಆರಂಭದಲ್ಲಿ ಮನೆಯೊಳಗಿನ ಮೆಟ್ಟಿಲುಗಳನ್ನು ಅತ್ಯಂತ ವೇಗವಾಗಿ ಹತ್ತಿ ಇಳಿಯುತ್ತಿದ್ದ. ಮಗನ ಈ ವಿಶಿಷ್ಟ ಚಟುವಟಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದ ತಾಯಿ ಸಿಂಚನಾ, ಆತನಿಗೆ ಒಂದು ಅಡಿ ಎತ್ತರದ ಮೆಟ್ಟಿಲುಗಳನ್ನು ಹತ್ತುವುದಕ್ಕೆ ಪ್ರೇರೇಪಿಸಿದರು. ತಾಯಿಯ ಪ್ರೋತ್ಸಾಹದೊಂದಿಗೆ ರಿಯಾನ್ಸ್ ಒಂದು ಅಡಿ ಎತ್ತರದ ಮೆಟ್ಟಿಲುಗಳನ್ನು ಕೂಡ ಯಾವುದೇ ಅಡೆತಡೆಯಿಲ್ಲದೆ ಸುಲಭವಾಗಿ ಹತ್ತಿ ತೋರಿಸಿದ. ಮಗನ ಈ ವಿಶಿಷ್ಟ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸಬೇಕೆಂದು ನಿರ್ಧರಿಸಿದ ಪೋಷಕರು, ರಿಯಾನ್ಸ್ ಮೆಟ್ಟಿಲು ಹತ್ತುವ ದೃಶ್ಯಗಳನ್ನು ವಿಡಿಯೋ ರೆಕಾರ್ಡ್ ಮಾಡಿ, ಅಗತ್ಯ ದಾಖಲೆಗಳೊಂದಿಗೆ ‘ನೊಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ಸಂಸ್ಥೆಯ ಅಧಿಕಾರಿಗಳಿಗೆ ಕಳುಹಿಸಿಕೊಟ್ಟಿದ್ದರು. ಎಲ್ಲಾ ದಾಖಲೆ ಹಾಗೂ ವಿಡಿಯೋಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಅಧಿಕಾರಿಗಳು ಬಾಲಕನ ಸಾಧನೆಯನ್ನು ಜಾಗತಿಕ ದಾಖಲೆಯಾಗಿ ಮಾನ್ಯ ಮಾಡಿ ಅಧಿಕೃತ ಪ್ರಮಾಣಪತ್ರ ನೀಡಿದ್ದಾರೆ.

ರಿಯಾನ್ಸ್ ಪೋಷಕರು ಹೇಳುವುದೇನು ನೋಡಿ?


ರಿಯಾನ್ಸ್​ನ ಈ ಅಪರೂಪದ ಸಾಧನೆ ಇಡೀ ಪಟ್ಟಣಶೆಟ್ಟಿ ಕುಟುಂಬದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ. ‘ನಮ್ಮ ಮಗು ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಂತಹ ದೊಡ್ಡ ಸಾಧನೆ ಮಾಡುತ್ತಾನೆ ಎಂದು ನಾವು ಅಂದುಕೊಂಡಿರಲಿಲ್ಲ. ಮನೆಯಲ್ಲಿ ನಾವು ಮೆಟ್ಟಿಲು ಹತ್ತುವಾಗ ಆತ ಮುಂಚೂಣಿಯಲ್ಲಿ ಓಡುತ್ತಿದ್ದ. ಇದನ್ನು ನೋಡಿದ ನೆರೆಹೊರೆಯವರು ಮಗುವಿನ ವೇಗವನ್ನು ಕಂಡು ಮೆಚ್ಚಿಕೊಳ್ಳುತ್ತಿದ್ದರು. ಇದೀಗ ನಮ್ಮ ಮಗನ ಸಾಧನೆಯನ್ನು ಗುರುತಿಸಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಹ ಅಭಿನಂದಿಸಿರುವುದು ನಮ್ಮ ಸಂತಸವನ್ನು ಇಮ್ಮಡಿಗೊಳಿಸಿದೆ’ ಎಂದು ಪೋಷಕರಾದ ಸಚಿನ್ ಮತ್ತು ಸಿಂಚನಾ ಹರ್ಷ ಹಂಚಿಕೊಂಡಿದ್ದಾರೆ.

‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬ ಗಾದೆ ಮಾತಿಗೆ ಅನ್ವರ್ಥವಾಗಿರುವ ಪುಟ್ಟ ಪೋರ ರಿಯಾನ್ಸ್ ಭವಿಷ್ಯದಲ್ಲಿ ಇನ್ನೂ ಮಿಗಿಲಾದ ಸಾಧನೆಗಳನ್ನು ಮಾಡಲಿ ಎಂದು ವಿಜಯಪುರದ ಜನತೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಹಾರೈಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:34 am, Sat, 11 July 26

Source link

Gemstone Astrology: ಮುತ್ತು ಧರಿಸುವ ಮುನ್ನ ಈ ವಿಷ್ಯ ತಿಳಿದಿರಲಿ; ಈ 4 ರಾಶಿಗಳಿಗೆ ಅದೃಷ್ಟ, 5 ರಾಶಿಗೆ ಸಂಕಷ್ಟ! – Kannada News | Pearl Gemstone Astrology: Benefits, Who Should Wear and Caution for Zodiac Signs

ಮುತ್ತು ಧರಿಸುವ ಮುನ್ನ ಈ ವಿಷ್ಯ ತಿಳಿದಿರಲಿImage Credit source: Getty Images

ಪ್ರಾಚೀನ ಕಾಲದಿಂದಲೂ ರತ್ನಗಳನ್ನು ಧರಿಸುವ ಸಂಪ್ರದಾಯ ನಡೆದು ಬಂದಿದೆ. ಹಿಂದೆ ರಾಜರು ಮತ್ತು ರಾಜಮನೆತನದವರು ವಿವಿಧ ಅಮೂಲ್ಯ ರತ್ನಗಳನ್ನು ಧರಿಸುತ್ತಿದ್ದರು. ಇಂದಿಗೂ ಅನೇಕರು ರತ್ನಗಳನ್ನು ಧರಿಸುತ್ತಾರೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ರತ್ನ ಧರಿಸುವುದು ಕೇವಲ ಅಲಂಕಾರಕ್ಕಾಗಿ ಅಲ್ಲ, ಗ್ರಹಗಳ ಶುಭ-ಅಶುಭ ಪರಿಣಾಮಗಳನ್ನು ಸಮತೋಲನಗೊಳಿಸುವ ಪರಿಹಾರವಾಗಿಯೂ ಪರಿಗಣಿಸಲಾಗುತ್ತದೆ. ಆದ್ದರಿಂದ ಯಾವುದೇ ರತ್ನವನ್ನು ಧರಿಸುವ ಮೊದಲು ಅನುಭವಿ ಜ್ಯೋತಿಷಿಗಳ ಸಲಹೆ ಪಡೆಯುವುದು ಅತ್ಯಂತ ಮುಖ್ಯ.

ಮುತ್ತು ಯಾವ ಗ್ರಹವನ್ನು ಪ್ರತಿನಿಧಿಸುತ್ತದೆ?

ಜ್ಯೋತಿಷ್ಯದಲ್ಲಿ ಮುತ್ತು (Pearl) ಚಂದ್ರನ ರತ್ನವೆಂದು ಪರಿಗಣಿಸಲಾಗಿದೆ. ಚಂದ್ರನು ಮನಸ್ಸು, ಭಾವನೆಗಳು, ಮಾನಸಿಕ ಶಾಂತಿ ಮತ್ತು ಆತ್ಮವಿಶ್ವಾಸವನ್ನು ಪ್ರತಿನಿಧಿಸುತ್ತಾನೆ. ಜಾತಕದಲ್ಲಿ ಚಂದ್ರನು ದುರ್ಬಲವಾಗಿದ್ದರೆ ಅಥವಾ ಮಾನಸಿಕ ಅಶಾಂತಿ, ಭಾವನಾತ್ಮಕ ಏರಿಳಿತಗಳು ಹೆಚ್ಚಿದ್ದರೆ, ಮುತ್ತು ಧರಿಸಲು ಜ್ಯೋತಿಷಿಗಳು ಸಲಹೆ ನೀಡುತ್ತಾರೆ. ಇದರಿಂದ ಮನಸ್ಸಿಗೆ ನೆಮ್ಮದಿ, ಭಾವನಾತ್ಮಕ ಸಮತೋಲನ ಹಾಗೂ ಸಕಾರಾತ್ಮಕ ಚಿಂತನೆ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ.

ಈ ರಾಶಿಯವರಿಗೆ ಮುತ್ತು ಧರಿಸುವುದು ಶುಭ:

ಜ್ಯೋತಿಷ್ಯದ ಪ್ರಕಾರ ಮೇಷ, ಕರ್ಕಾಟಕ, ವೃಶ್ಚಿಕ ಮತ್ತು ಮೀನ ರಾಶಿಯವರಿಗೆ ಮುತ್ತು ಧರಿಸುವುದು ಸಾಮಾನ್ಯವಾಗಿ ಶುಭಕರವೆಂದು ಹೇಳಲಾಗುತ್ತದೆ. ಈ ರಾಶಿಯವರು ಮುತ್ತು ಧರಿಸಿದರೆ ಮಾನಸಿಕ ಸ್ಥಿರತೆ, ಆತ್ಮವಿಶ್ವಾಸ ಹಾಗೂ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರಬಹುದು ಎನ್ನಲಾಗಿದೆ. ಇನ್ನು ಸಿಂಹ, ತುಲಾ ಮತ್ತು ಧನು ರಾಶಿಯವರು ಕೆಲವು ವಿಶೇಷ ಸಂದರ್ಭಗಳಲ್ಲಿ ಮಾತ್ರ ಮುತ್ತು ಧರಿಸಬಹುದು. ಆದರೆ ಅದಕ್ಕೂ ಮೊದಲು ತಮ್ಮ ಜಾತಕವನ್ನು ಜ್ಯೋತಿಷಿಗಳಿಂದ ಪರಿಶೀಲಿಸಿಕೊಳ್ಳುವುದು ಸೂಕ್ತ.

ಇದನ್ನೂ ಓದಿ: ಶ್ರಾದ್ಧದಲ್ಲಿ ಮೊದಲು ಕಾಗೆಗೆ ಅನ್ನ ಯಾಕೆ ನೀಡುತ್ತಾರೆ? ಇದರ ಹಿಂದಿದೆ ಗರುಡ ಪುರಾಣ ಮತ್ತು ರಾಮಾಯಣದ ಕುತೂಹಲಕಾರಿ ಕಥೆ

ಈ 5 ರಾಶಿಯವರು ಮುತ್ತು ಧರಿಸುವ ಮುನ್ನ ಎಚ್ಚರ:

ವೃಷಭ, ಮಿಥುನ, ಕನ್ಯಾ, ಮಕರ ಮತ್ತು ಕುಂಭ ರಾಶಿಯವರು ಜ್ಯೋತಿಷಿಗಳ ಸಲಹೆ ಇಲ್ಲದೆ ಮುತ್ತು ಧರಿಸಬಾರದು ಎಂದು ಹೇಳಲಾಗುತ್ತದೆ. ಇವರ ಜಾತಕದಲ್ಲಿ ಶುಕ್ರ, ಬುಧ ಅಥವಾ ಶನಿ ಗ್ರಹಗಳ ಪ್ರಭಾವ ಹೆಚ್ಚಿದ್ದರೆ ಮುತ್ತು ಧರಿಸುವುದರಿಂದ ಪ್ರತಿಕೂಲ ಪರಿಣಾಮಗಳು ಉಂಟಾಗುವ ಸಾಧ್ಯತೆ ಇದೆ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ.

ಜಾತಕ ಪರಿಶೀಲನೆ ಏಕೆ ಮುಖ್ಯ?

ಪ್ರತಿಯೊಬ್ಬರ ಜಾತಕದಲ್ಲಿರುವ ಗ್ರಹಗಳ ಸ್ಥಾನ, ಯೋಗಗಳು ಹಾಗೂ ದಶಾ-ಭುಕ್ತಿಗಳು ವಿಭಿನ್ನವಾಗಿರುತ್ತವೆ. ಆದ್ದರಿಂದ ಒಂದೇ ರತ್ನ ಎಲ್ಲರಿಗೂ ಒಂದೇ ರೀತಿಯ ಫಲ ನೀಡುವುದಿಲ್ಲ. ಜ್ಯೋತಿಷಿಗಳು ಜಾತಕವನ್ನು ಸಂಪೂರ್ಣವಾಗಿ ಪರಿಶೀಲಿಸಿದ ಬಳಿಕವೇ ರತ್ನ ಧರಿಸಲು ಶಿಫಾರಸು ಮಾಡುತ್ತಾರೆ. ಸರಿಯಾದ ರತ್ನವನ್ನು ಸರಿಯಾದ ವಿಧಾನದಲ್ಲಿ ಧರಿಸಿದಾಗ ಮಾತ್ರ ಅದರ ಸಂಪೂರ್ಣ ಪ್ರಯೋಜನ ದೊರೆಯುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜೀ ಕನ್ನಡದಲ್ಲಿ ‘ಜೋಡಿ ನಂ. 1’ ರಿಯಾಲಿಟಿ ಶೋ ಗ್ರ್ಯಾಂಡ್ ಫಿನಾಲೆ: ಜುಲೈ 11, 12ರಂದು ಪ್ರಸಾರ – Kannada News | Jodi No. 1 Grand Finale on Zee Kannada: Airing on July 11 and 12 at 9 PM

ಜೀ ಕನ್ನಡದಲ್ಲಿ ‘ಜೋಡಿ ನಂ. 1’ ರಿಯಾಲಿಟಿ ಶೋ ಗ್ರ್ಯಾಂಡ್ ಫಿನಾಲೆ: ಜುಲೈ 11, 12ರಂದು ಪ್ರಸಾರ
ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ‘ಜೋಡಿ ನಂ. 1’ ಅಂತಿಮ ಘಟ್ಟಕ್ಕೆ ತಲುಪಿದೆ. ಕಳೆದ 14 ವಾರಗಳಿಂದ (105 ದಿನಗಳು) ವಿನೂತನ ಟಾಸ್ಕ್‌ಗಳು ಮತ್ತು ಕೌಟುಂಬಿಕ ಹಿನ್ನೆಲೆಯೊಂದಿಗೆ ವೀಕ್ಷಕರನ್ನು ರಂಜಿಸಿದ್ದ ಈ ಕಾರ್ಯಕ್ರಮ, ಇದೀಗ ಗ್ರ್ಯಾಂಡ್ ಫಿನಾಲೆಗೆ ಸಜ್ಜಾಗಿದೆ. ಇಂದು (ಜುಲೈ 11) ಮತ್ತು ನಾಳೆ (ಜುಲೈ 12) ರಾತ್ರಿ 9 ಗಂಟೆಗೆ ಈ ಶೋನ ಮಹಾ ಸಂಚಿಕೆ ಪ್ರಸಾರವಾಗಲಿದೆ.

ಅಂತಿಮ ಸುತ್ತಿನಲ್ಲಿರುವ 10 ಸೆಲೆಬ್ರಿಟಿ ಜೋಡಿಗಳು

ವಿವಿಧ ವಯೋಮಾನದ ಹಾಗೂ ದಾಂಪತ್ಯ ಜೀವನದ ಬೇರೆ ಬೇರೆ ಹಂತಗಳಲ್ಲಿರುವ (3 ತಿಂಗಳಿನಿಂದ ಹಿಡಿದು 30 ವರ್ಷಗಳ ದಾಂಪತ್ಯದವರೆಗೆ) ಒಟ್ಟು 10 ಸೆಲೆಬ್ರಿಟಿ ಜೋಡಿಗಳು ಚಾಂಪಿಯನ್ ಪಟ್ಟಕ್ಕಾಗಿ ಅಂತಿಮ ಸುತ್ತಿನಲ್ಲಿ ಪೈಪೋಟಿ ನಡೆಸಲಿವೆ

ಅಭಿಲಾಷ್ ಮತ್ತು ಅಪೂರ್ವ, ಕೋಟೆ ಪ್ರಭಾಕರ್ ಮತ್ತು ಮಾಲತಿ, ಗೀತಾ ಭಾರತಿ ಭಟ್ ಮತ್ತು ರಾಜಾರಾಮ್ ಭಟ್, ರಜಿನಿ ಮತ್ತು ಅರುಣ್, ರುದ್ರ ಮಾಸ್ಟರ್ ಮತ್ತು ನಿರೀಕ್ಷಾ, ಮಿಮಿಕ್ರಿ ಗೋಪಿ ಮತ್ತು ಉಷಾರಾಣಿ, ಧನರಾಜ್ ಮತ್ತು ಪ್ರಜ್ಞಾ, ಜಗಪ್ಪ ಮತ್ತು ಸುಶ್ಮಿತಾ, ಬಾಳು ಬೆಳಗುಂದಿ ಮತ್ತು ಮಾಲಾಶ್ರೀ, ನಯನ ಮತ್ತು ಸುಹಾಸ್ ಪೈಕಿ ಯಾರಿಗೆ ಗೆಲುವು ಸಿಗುತ್ತದೆ ಎನ್ನುವ ಕುತೂಹಲ ಮೂಡಿದೆ.

ತೀರ್ಪುಗಾರರು ಮತ್ತು ನಿರೂಪಕರು

ತೀರ್ಪುಗಾರರ ಬಳಗ: ಚಿತ್ರರಂಗದ ಪ್ರಮುಖರಾದ ಮಾಳವಿಕ ಅವಿನಾಶ್, ಲವ್ಲಿ ಸ್ಟಾರ್ ಪ್ರೇಮ್, ರಾಜೇಶ್ ನಟರಂಗ ಮತ್ತು ಛಾಯಾಸಿಂಗ್ ಅವರು ಕಾರ್ಯಕ್ರಮದ ಜಡ್ಜ್ ಆಗಿ ಜವಾಬ್ದಾರಿ ನಿಭಾಯಿಸಿದ್ದಾರೆ. ಇಡೀ ಸೀಸನ್‌ನಾದ್ಯಂತ ಕುರಿ ಪ್ರತಾಪ್ ಮತ್ತು ಶ್ವೇತಾ ಚೆಂಗಪ್ಪ ಅವರು ನಿರೂಪಕರಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ.

Published On – 7:45 am, Sat, 11 July 26

Source link

ಆಸ್ಟ್ರೇಲಿಯಾದಲ್ಲಿ IPL ಪಂದ್ಯ! – Kannada News | IPL in Australia, BBL in India: A Historic Cricket Swap

ಭಾರತ ಮತ್ತು ಆಸ್ಟ್ರೇಲಿಯಾ ದೇಶಗಳ ಕ್ರೀಡಾ ಇತಿಹಾಸದಲ್ಲಿ ಅತ್ಯಂತ ಮಹತ್ವದ ಹಾಗೂ ರೋಮಾಂಚನಕಾರಿ ಜಂಟಿ ಒಪ್ಪಂದವೊಂದು ಪ್ರಕಟವಾಗಿದೆ. ಆಸ್ಟ್ರೇಲಿಯಾದ ಅತ್ಯಂತ ಯಶಸ್ವಿ ಟಿ20 ಟೂರ್ನಿಯಾದ ‘ಬಿಗ್ ಬ್ಯಾಷ್ ಲೀಗ್’ (BBL) ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತದ ಮಣ್ಣಿನಲ್ಲಿ ಪಂದ್ಯವಾಡಲು ಸಜ್ಜಾಗಿದೆ. ಇದಕ್ಕೆ ಪ್ರತಿಯಾಗಿ ಭಾರತದ ಪ್ರತಿಷ್ಠಿತ ಟೂರ್ನಿ ‘ಇಂಡಿಯನ್ ಪ್ರೀಮಿಯರ್ ಲೀಗ್‘ (IPL) ಪಂದ್ಯಗಳನ್ನು ಆಸ್ಟ್ರೇಲಿಯಾದಲ್ಲಿ ಆಯೋಜಿಸಲು ಅಲ್ಲಿನ ಕ್ರಿಕೆಟ್ ಮಂಡಳಿ ಮುಕ್ತ ಆಹ್ವಾನ ನೀಡಿದೆ ಎಂದು ಆಸ್ಟ್ರೇಲಿಯಾದ ಖ್ಯಾತ ಪತ್ರಿಕೆ ದಿ ಏಜ್ ವರದಿ ಮಾಡಿದೆ.

ಚೆನ್ನೈನಲ್ಲಿ ಬಿಬಿಎಲ್!

ಮೆಲ್ಬೋರ್ನ್ ಕ್ರಿಕೆಟ್ ಮಂಡಳಿಯಲ್ಲಿ (MCG) ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಈ ಐತಿಹಾಸಿಕ ಒಪ್ಪಂದವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಈ ಒಪ್ಪಂದದ ಪ್ರಕಾರ, ಬಿಗ್ ಬ್ಯಾಷ್ ಲೀಗ್​ನ ಉದ್ಘಾಟನಾ ಪಂದ್ಯ ಭಾರತದಲ್ಲಿ ನಡೆಯುವುದು ಖಚಿತವಾಗಿದೆ.

  • ಬಿಬಿಎಲ್‌ನ ಬಲಿಷ್ಠ ತಂಡಗಳಾದ ಮೆಲ್ಬೋರ್ನ್ ರೆನೆಗೇಡ್ಸ್ ಮತ್ತು ಪರ್ತ್ ಸ್ಕಾರ್ಚರ್ಸ್ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
  • ಡಿಸೆಂಬರ್ 12, 2026 ರಂದು ಭಾರತೀಯ ಕಾಲಮಾನ ಮಧ್ಯಾಹ್ನ 2:40ಕ್ಕೆ ಭಾರತದಲ್ಲಿ ಬಿಗ್ ಬ್ಯಾಷ್​ ಲೀಗ್​ನ ಉದ್ಘಾಟನಾ ಪಂದ್ಯ ನಡೆಯಲಿದೆ.
  •  ಚೆನ್ನೈ ಸೂಪರ್ ಕಿಂಗ್ಸ್ ತಂಡದ ತವರಾದ ಎಂ.ಎ. ಚಿದಂಬರಂ (ಚೆಪಾಕ್) ಸ್ಟೇಡಿಯಂ ಬಿಗ್ ಬ್ಯಾಷ್ ಲೀಗ್​ನ ಉದ್ಘಾಟನಾ ಪಂದ್ಯಕ್ಕೆ ಆತಿಥ್ಯವಹಿಸಲಿದೆ.
  • ವಿದೇಶಿ ಫ್ರಾಂಚೈಸಿ ಕ್ರಿಕೆಟ್ ಲೀಗ್‌ನ ಅಧಿಕೃತ ಪಂದ್ಯವೊಂದು ಭಾರತದಲ್ಲಿ ಆಯೋಜನೆಗೊಳ್ಳುತ್ತಿರುವುದು ಇದೇ ಮೊಟ್ಟಮೊದಲ ಬಾರಿ ಎಂಬುದು ವಿಶೇಷ.

ಕ್ರಿಕೆಟ್ ಆಸ್ಟ್ರೇಲಿಯಾ ಈ ಪಂದ್ಯವನ್ನು ಕೇವಲ ಒಂದು ಪ್ರದರ್ಶನ ಪಂದ್ಯವನ್ನಾಗಿ ಪರಿಗಣಿಸುತ್ತಿಲ್ಲ. ಬದಲಾಗಿ ಭಾರತದ ಭಾರಿ ದೊಡ್ಡ ಕ್ರಿಕೆಟ್ ಮಾರುಕಟ್ಟೆಯನ್ನು ತಲುಪಲು ಇದನ್ನು ವಾರ್ಷಿಕ ಸರಣಿಯನ್ನಾಗಿ ಮಾಡಲು ಚಿಂತನೆ ನಡೆಸಿದೆ. ಈ ಮೂಲಕ ಉಭಯ ದೇಶಗಳ ನಡುವಿನ ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಸಂಬಂಧಗಳನ್ನು ವೃದ್ಧಿಸುವ “G’day Namaste” ಉತ್ಸವದ ಭಾಗವಾಗಿ ಈ ಪಂದ್ಯವನ್ನು ವಿನ್ಯಾಸಗೊಳಿಸಲು ನಿರ್ಧರಿಸಿದೆ.

ಆಸ್ಟ್ರೇಲಿಯಾದಲ್ಲಿ ಐಪಿಎಲ್​!

ಬಿಬಿಎಲ್ ಪಂದ್ಯವನ್ನು ಭಾರತದಲ್ಲಿ ನಡೆಸುತ್ತಿರುವ ಹಿನ್ನಲೆ,  ಕ್ರಿಕೆಟ್ ಆಸ್ಟ್ರೇಲಿಯಾ ಸಂಸ್ಥೆಯು “ಭಾರತದ ಐಪಿಎಲ್ ಪಂದ್ಯವೊಂದನ್ನು ನಮ್ಮ ದೇಶದಲ್ಲಿ ನಡೆಸಿ” ಎಂದು ಬಿಸಿಸಿಐ  ಮುಂದೆ ಮುಕ್ತ ಪ್ರಸ್ತಾಪ ಇಟ್ಟಿದೆ. ಮೂಲಗಳ ಪ್ರಕಾರ, ಆಸ್ಟ್ರೇಲಿಯಾದ ಪ್ರಸಿದ್ಧ ಅಡಿಲೇಡ್ ಓವಲ್ ಮೈದಾನದಲ್ಲಿ ಐಪಿಎಲ್ ಪಂದ್ಯ ನಡೆಸಲು ಮಾತುಕತೆಗಳು ನಡೆಯುತ್ತಿವೆ.

ಇದನ್ನೂ ಓದಿ: ಅರ್ಜೆಂಟೀನಾ ಪರ ‘ಆಡುತ್ತಿರುವ’ ರೆಫರಿ… ಗಂಭೀರ ಆರೋಪ!

ಆದರೆ, ಬಿಸಿಸಿಐ ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಗ್ರೀನ್ ಸಿಗ್ನಲ್ ನೀಡಿಲ್ಲ. ಇದಾಗ್ಯೂ ಆಸ್ಟ್ರೇಲಿಯನ್ ಪ್ರತಿಕೆಗಳು ಮುಂಬರುವ ದಿನಗಳಲ್ಲಿ ಇಂಡಿಯನ್​ ಪ್ರೀಮಿಯರ್ ಲೀಗ್​ನ ಪಂದ್ಯವೊಂದು ಕಾಂಗರೂನಾಡಿನಲ್ಲಿ ನಡೆಯಲಿದೆ ಎಂದು ವರದಿ ಮಾಡಿದೆ. ಹೀಗಾಗಿ ಐಪಿಎಲ್​ ಸೀಸನ್​-20ರ ಪಂದ್ಯವೊಂದು ಆಸ್ಟ್ರೇಲಿಯಾದಲ್ಲಿ, ಅದರಲ್ಲೂ ಅಡಿಲೇಡ್​ನಲ್ಲಿ ನಡೆದರೂ ಅಚ್ಚರಿಪಡಬೇಕಿಲ್ಲ.

Source link

Exit mobile version