World Population Day 2026: ವಿಶ್ವ ಜನಸಂಖ್ಯಾ ದಿನದ ಆಚರಣೆಯ ಇತಿಹಾಸ, ಮಹತ್ವ ತಿಳಿಯಿರಿ – Kannada News | World Population Day 2026: What are the history and significance of World Population Day

ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ಆರ್ಥಿಕ ಬೆಳವಣಿಗೆ, ದೇಶದ ಪ್ರಗತಿ, ವಸತಿ, ಆರೋಗ್ಯ, ಮೂಲ ಸೌಕರ್ಯ , ಪರಿಸರ, ಅಭಿವೃದ್ಧಿಯ ಮೇಲೆ ಪರಿಣಾಮ ಬೀರುತ್ತದೆ. ಈ ಸವಾಲುಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಜುಲೈ 11 ರಂದು ವಿಶ್ವ ಜನಸಂಖ್ಯಾ ದಿನವನ್ನು (World Population Day) ಆಚರಿಸಲಾಗುತ್ತಿದೆ. ಹಾಗಾದ್ರೆ ಈ ದಿನದ ಆಚರಣೆ ಶುರುವಾದದ್ದು ಯಾವಾಗ? ಇನ್ನಿತರ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ವಿಶ್ವ ಜನಸಂಖ್ಯಾ ದಿನದ ಇತಿಹಾಸವೇನು?

1987 ರ ಜುಲೈ 11 ರಂದು ವಿಶ್ವ ಜನಸಂಖ್ಯೆಯು 500 ಕೋಟಿ ದಾಟಿತ್ತು. ಈ ಹಿನ್ನಲೆಯಲ್ಲಿ ವಿಶ್ವಸಂಸ್ಥೆಯು ತನ್ನ ಅಂಗ ಸಂಸ್ಥೆಯಾದ ವಿಶ್ವಸಂಸ್ಥೆ ಅಭಿವೃದ್ಧಿ ಕಾರ‍್ಯಕ್ರಮ ಮಂಡಳಿಯು ಜನಸಂಖ್ಯೆ ಹೆಚ್ಚಳದಿಂದ ಆಗುವ ತೊಂದರೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸುವ ನಿರ್ಧಾರಕ್ಕೆ ಬಂದಿತು. 1989 ಜುಲೈ 11ರಂದು ಮೊದಲ ಬಾರಿಗೆ ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಿತು. ಅಂದಿನಿಂದ ವಿಶ್ವ ಜನಸಂಖ್ಯಾ ದಿನದ ಆಚರಣೆ ಜಾರಿಗೆ ಬಂದಿತು.

ಇದನ್ನೂ ಓದಿ: ನವೀಕರಿಸಬಹುದಾದ ಇಂಧನಗಳನ್ನು ಹೆಚ್ಚು ಬಳಸುವ ಮೂಲಕ ಪರಿಸರ ಸಂರಕ್ಷಣೆಗೆ ಕೊಡುಗೆ ನೀಡೋಣ

ವಿಶ್ವ ಜನಸಂಖ್ಯಾ ದಿನದ ಮಹತ್ವ ಹಾಗೂ ಆಚರಣೆ ಹೇಗೆ?

ಜನಸಂಖ್ಯೆ ಹೆಚ್ಚಳವು ಮನುಕುಲಕ್ಕೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಇಡೀ ವಿಶ್ವಕ್ಕೆ ಹತ್ತು ಹಲವಾರು ತೊಂದರೆಗಳು ಎದುರಾಗುತ್ತಿದೆ. ಹೀಗಾಗಿ ಜನಸಂಖ್ಯೆಯನ್ನು ನಿಯಂತ್ರಿಸಲು ಕ್ರಮಗಳನ್ನು ಕೈಗೊಳ್ಳುವ ಉದ್ದೇಶದಿಂದ ಈ ದಿನದ ಆಚರಣೆ ಮಹತ್ವದ್ದಾಗಿದೆ. ಈ ವಿಶೇಷ ದಿನದಂದು ಜಾಗೃತಿ ಕಾರ್ಯಕ್ರಮಗಳು, ಕುಟುಂಬ ಯೋಜನೆ, ಲಿಂಗ ಸಮಾನತೆ, ಬಡತನ, ತಾಯಿ ಮಗುವಿನ ಆರೋಗ್ಯ ಮತ್ತು ಗರ್ಭನಿರೋಧಕ ಔಷಧಿಗಳನ್ನು ಬಳಸುವ ಕುರಿತು ಚರ್ಚಾ ಕಾರ್ಯಕ್ರಮ, ವಿಚಾರ ಸಂಕಿರಣ ಹಾಗೂ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಜೀವನ ಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Source link

Leave a Reply

Your email address will not be published. Required fields are marked *