ಊಟ ಮಾಡಿದ ತಕ್ಷಣ ಈ ತಪ್ಪುಗಳನ್ನು ಮಾಡಬೇಡಿ! ಇದು ಜೀರ್ಣಶಕ್ತಿಯನ್ನು ಹಾಳು ಮಾಡುತ್ತದೆ – Kannada News | Avoid These Bad Habits Right After Eating For Better Digestive Health

ಆರೋಗ್ಯಕರ ಜೀವನಕ್ಕೆ ಊಟದ ನಂತರ ಪಾಲಿಸಬೇಕಾದ ಸರಿಯಾದ ನಿಯಮಗಳುImage Credit source: Getty Images

ಆರೋಗ್ಯಕರ ಜೀವನಶೈಲಿಗೆ ಪೌಷ್ಟಿಕ ಆಹಾರ ಎಷ್ಟು ಮುಖ್ಯವೋ, ಊಟದ ನಂತರ ಪಾಲಿಸುವ ಅಭ್ಯಾಸಗಳೂ ಅಷ್ಟೇ ಮುಖ್ಯ. ಹಲವರು ಊಟ ಮುಗಿದ ತಕ್ಷಣ ಮಲಗುವುದು, ಭಾರೀ ವ್ಯಾಯಾಮ ಮಾಡುವುದು ಅಥವಾ ಹೆಚ್ಚು ನೀರು ಕುಡಿಯುತ್ತಾರೆ. ಆದರೆ ಇಂತಹ ಅಭ್ಯಾಸಗಳು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಸಾಮಾನ್ಯವಾಗಿ ಊಟ ಮಾಡಿದ ನಂತರ ದೇಹವು ಆಹಾರವನ್ನು ಜೀರ್ಣಿಸಿ, ಅದರಲ್ಲಿರುವ ಪೋಷಕಾಂಶಗಳನ್ನು ಹೀರಿಕೊಳ್ಳುವ ಕಾರ್ಯದಲ್ಲಿರುತ್ತದೆ. ಹಾಗಾಗಿ ಕೆಲವು ಅಭ್ಯಾಸಗಳು ಹೊಟ್ಟೆ ಉಬ್ಬರ, ಅಜೀರ್ಣ, ಎದೆಯುರಿ ಮತ್ತು ಆಸಿಡ್ ರಿಫ್ಲಕ್ಸ್‌ನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.

ಊಟದ ನಂತರ ತಪ್ಪಿಸಬೇಕಾದ ಅಭ್ಯಾಸಗಳು

ತಕ್ಷಣ ಭಾರೀ ವ್ಯಾಯಾಮ ಮಾಡಬೇಡಿ: ಊಟದ ಬಳಿಕ ತಕ್ಷಣ ಜಿಮ್‌, ರನ್ನಿಂಗ್ ಅಥವಾ ವ್ಯಾಯಾಮ ಮಾಡಿದರೆ ಹೊಟ್ಟೆನೋವು, ವಾಕರಿಕೆ ಮತ್ತು ಅಜೀರ್ಣ ಉಂಟಾಗಬಹುದು. ಕನಿಷ್ಠ 1.5 ರಿಂದ 2 ಗಂಟೆಗಳ ಬಳಿಕ ಮಾತ್ರ ವ್ಯಾಯಾಮ ಮಾಡುವುದು ಉತ್ತಮ.

ಕೂಡಲೇ ಮಲಗಬೇಡಿ: ರಾತ್ರಿ ಊಟ ಮಾಡಿದ ತಕ್ಷಣ ಮಲಗುವುದರಿಂದ ಆಸಿಡ್ ರಿಫ್ಲಕ್ಸ್‌, ಎದೆಯುರಿ ಹಾಗೂ ಜೀರ್ಣಕ್ರಿಯೆ ನಿಧಾನವಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಊಟದ ನಂತರ 2– 3 ಗಂಟೆಗಳ ಅಂತರವಿಟ್ಟು ಮಲಗುವುದು ಸೂಕ್ತ.

ಅತಿಯಾಗಿ ನೀರು ಕುಡಿಯಬೇಡಿ: ಊಟದ ವೇಳೆ ಅಥವಾ ತಕ್ಷಣವೇ ಹೆಚ್ಚು ನೀರು ಕುಡಿಯುವುದರಿಂದ ಕೆಲವರಿಗೆ ಹೊಟ್ಟೆ ತುಂಬಿದ ಭಾವನೆ, ಉಬ್ಬರ ಅಥವಾ ಅಸ್ವಸ್ಥತೆ ಕಾಣಿಸಬಹುದು. ಅಗತ್ಯವಿದ್ದರೆ ಸ್ವಲ್ಪ ಪ್ರಮಾಣದಲ್ಲಿ ನೀರು ಕುಡಿಯಬಹುದು.

ತಕ್ಷಣ ಧೂಮಪಾನ ಅಥವಾ ಮದ್ಯಪಾನ ಬೇಡ: ಇವು ಜೀರ್ಣಕ್ರಿಯೆಯನ್ನು ಹದಗೆಡಿಸಿ, ಹೊಟ್ಟೆಯ ಒಳಪದರಕ್ಕೆ ಹಾನಿ ಉಂಟುಮಾಡುವ ಅಪಾಯವಿರುತ್ತದೆ.

ಹೆಚ್ಚು ತಿನ್ನುವ ಅಭ್ಯಾಸ ಬೇಡ: ಅತಿಯಾಗಿ ಆಹಾರ ಸೇವಿಸುವುದರಿಂದ ಗ್ಯಾಸ್ಟ್ರಿಕ್‌, ಹೊಟ್ಟೆಭಾರ, ಅಜೀರ್ಣ ಮತ್ತು ತೂಕ ಹೆಚ್ಚಾಗಬಹುದು.

ಇದನ್ನೂ ಓದಿ: ಮಳೆಗಾಲದಲ್ಲಿ ಜೀರ್ಣಕ್ರಿಯೆಗೆ ಸಂಬಂಧಪಟ್ಟ ಸಮಸ್ಯೆ ಕಂಡುಬರುತ್ತಿದ್ದರೆ ಈ ಸಿಂಪಲ್ ಟಿಪ್ಸ್ ನಿಮಗಾಗಿ!

ಊಟವಾದ ನಂತರ ಏನು ಮಾಡಬೇಕು?

  • 10–15 ನಿಮಿಷ ನಿಧಾನವಾಗಿ ವಾಕ್ ಮಾಡಬಹುದು.
  • ಆಹಾರವನ್ನು ಚೆನ್ನಾಗಿ ಜಗಿದು ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಿ.
  • ಊಟದ ಬಳಿಕ ತಕ್ಷಣ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಮುಂದೆ ಗಂಟೆಗಳ ಕಾಲ ಕುಳಿತುಕೊಳ್ಳಬೇಡಿ.
  • ಊಟದ ತಕ್ಷಣ ಹಣ್ಣುಗಳನ್ನು ಸೇವಿಸುವ ಬದಲು 1–2 ಗಂಟೆಗಳ ನಂತರ ಸೇವಿಸುವುದು ಒಳ್ಳೆಯದು.
  • ಜೀರ್ಣಕ್ರಿಯೆ ಸುಧಾರಿಸಲು ಪ್ರತಿದಿನ ಒಂದೇ ಸಮಯಕ್ಕೆ ಊಟ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ.

ಊಟದ ನಂತರ ಆಗಾಗ ಎದೆಯುರಿ, ಗ್ಯಾಸ್ಟ್ರಿಕ್‌, ಹೊಟ್ಟೆ ಉಬ್ಬರ ಅಥವಾ ಅಜೀರ್ಣ ಸಮಸ್ಯೆಗಳು ಕಾಣಿಸಿಕೊಂಡರೆ ಅದನ್ನು ನಿರ್ಲಕ್ಷಿಸಬೇಡಿ. ಇಂತಹ ಲಕ್ಷಣಗಳು ನಿರಂತರವಾಗಿದ್ದರೆ ಗ್ಯಾಸ್ಟ್ರೋಎಂಟರಾಲಜಿಸ್ಟ್ ಅಥವಾ ಅರ್ಹ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆ ಪಡೆಯುವುದು ಉತ್ತಮ. ಆರೋಗ್ಯಕರ ಆಹಾರದ ಜೊತೆಗೆ ಸರಿಯಾದ ಆಹಾರ ಪದ್ಧತಿಯೂ ಉತ್ತಮ ಆರೋಗ್ಯದ ಗುಟ್ಟು ಎಂಬುದನ್ನು ಮರೆಯಬೇಡಿ.

Disclaimer: ಇದು ವೈದ್ಯರ ಸಲಹೆಯಾಗಿದೆಯೇ ಹೊರತು ಟಿವಿ9 ಕನ್ನಡ ವಯಕ್ತಿಕ ಆರೋಗ್ಯ ಸಲಹೆಗಳನ್ನು ಕೊಡುವುದಿಲ್ಲ. ಹೆಚ್ಚಿನ ಆರೋಗ್ಯ ಸಲಹೆಗಳಿಗೆ ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೊಪ್ಪಳ: ಬಿಸಿಯೂಟ ತಯಾರಕಾ ಮಹಿಳೆಯರಿಂದ ಪ್ರತಿಭಟನೆ; ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಯತ್ನ – Kannada News | Mid Day Meal Cooks Stage Massive Protest in Koppal, Demand Wage Hike

ಕೊಪ್ಪಳ, ಜುಲೈ 10: ನಗರದಲ್ಲಿ ಸಾವಿರಾರು ಬಿಸಿಯೂಟ ತಯಾರಕಾ ಮಹಿಳೆಯರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಂದು ಬೃಹತ್ ಪ್ರತಿಭಟನೆ ಮಾಡಿದರು. ಸಿಐಟಿಯು ಸಂಘಟನೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ಮಹಿಳೆಯರು ಭಾಗಿಯಾಗಿದ್ದು, ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ವೇತನ ಹೆಚ್ಚಳ ಮಾಡಬೇಕು ಎಂಬುವುದು ಅವರ ಪ್ರಮುಖ ಆಗ್ರಹವಾಗಿದೆ. ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳನ್ನು ತಳ್ಳಿ ಜಿಲ್ಲಾಡಳಿತ ಭವನದ ಆವರಣವನ್ನು ಪ್ರವೇಶಿಸಲು ಯತ್ನಿಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ, ಪೊಲೀಸರು ತಕ್ಷಣವೇ ಮಧ್ಯಪ್ರವೇಶಿಸಿ, ಪ್ರತಿಭಟನೆಯ ಮುಂಚೂಣಿ ನಾಯಕರನ್ನು ವಶಕ್ಕೆ ಪಡೆದರು. ಸರ್ಕಾರವು ತಮ್ಮ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಬಿಹಾರದ ಬಂಕಿಪುರ ಉಪಚುನಾವಣೆ; ಅಭಿಷೇಕ್ ಸಿನ್ಹಾ ಬದಲು ಬಿಜೆಪಿಯಿಂದ ನೀರಜ್ ಕುಮಾರ್ ಸಿನ್ಹಾ ಕಣಕ್ಕೆ – Kannada News | BJP fields Neeraj Kumar Sinha as its candidate for the Bankipur Assembly bypoll

ನವದೆಹಲಿ, ಜುಲೈ 10: ಬಿಹಾರದ (Bihar) ಬಂಕಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿದ್ದ ಅಭಿಷೇಕ್ ಸಿನ್ಹಾ ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿದ ಕಾರಣದಿಂದಾಗಿ ಅವರ ಸ್ಥಾನಕ್ಕೆ ಇಂದು ಬಿಜೆಪಿ ನೀರಜ್ ಕುಮಾರ್ ಸಿನ್ಹಾ ಅವರನ್ನು ತನ್ನ ಹೊಸ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಜುಲೈ 30ರಂದು ಪಾಟ್ನಾದ ಈ ಹೈ-ಪ್ರೊಫೈಲ್ ಕ್ಷೇತ್ರದಲ್ಲಿ ಮತದಾನ ನಡೆಯಲಿದ್ದು, ಬಿಜೆಪಿ, ಜನ್ ಸುರಾಜ್ ಪಾರ್ಟಿ ಮತ್ತು ರಾಷ್ಟ್ರೀಯ ಜನತಾ ದಳ (RJD) ನಡುವೆ ತ್ರಿಕೋನ ಸ್ಪರ್ಧೆ ಉಂಟಾಗಲಿದೆ.

“ಕೌಟುಂಬಿಕ ಕಾರಣಗಳಿಂದಾಗಿ, ನಾನು ವಿಧಾನಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಪಕ್ಷದ ಕಾರ್ಯಕರ್ತನಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತೇನೆ” ಎಂದು ಅಭಿಷೇಕ್ ಸಿನ್ಹಾ ANI ಜೊತೆ ಮಾತನಾಡುತ್ತಾ ಹೇಳಿದ್ದರು.

ಇದನ್ನೂ ಓದಿ: ಎಸ್ಐಆರ್ ಪ್ರಕ್ರಿಯೆಯಲ್ಲಿ ಅಕ್ರಮ: ಮುಖ್ಯ ಚುನಾವಣಾ ಅಧಿಕಾರಿಗೆ ಬಿಜೆಪಿ, ಜೆಡಿಎಸ್ ದೂರು

ಬಿಹಾರದ ಬಂಕಿಪುರ ವಿಧಾನಸಭಾ ಉಪಚುನಾವಣೆಯು ಜುಲೈ 30ರಂದು ನಡೆಯಲಿದ್ದು, ಆಗಸ್ಟ್ 3ರಂದು ಮತ ಎಣಿಕೆ ನಡೆಯಲಿದೆ. ಬಿಜೆಪಿ ನಾಯಕ ನಿತಿನ್ ನವೀನ್ ಅವರು ರಾಜ್ಯಸಭೆಗೆ ಆಯ್ಕೆಯಾದ ನಂತರ ಈ ಕ್ಷೇತ್ರ ತೆರವಾಗಿದ್ದರಿಂದ ಉಪಚುನಾವಣೆ ಅನಿವಾರ್ಯವಾಗಿತ್ತು. ಈ ಕ್ಷೇತ್ರವು ಈಗ ಬಿಜೆಪಿ, ಜನ್ ಸುರಾಜ್ ಪಾರ್ಟಿ (JSP) ಮತ್ತು ರಾಷ್ಟ್ರೀಯ ಜನತಾ ದಳದ ನಡುವಿನ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಿದೆ.

ಈ ಚುನಾವಣೆಯಲ್ಲಿ ಜನ್ ಸುರಾಜ್ ಪಾರ್ಟಿಯ ಸಂಸ್ಥಾಪಕ ಹಾಗೂ ಮಾಜಿ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಸ್ವತಃ ಕಣಕ್ಕಿಳಿದಿದ್ದರೆ, ರಾಷ್ಟ್ರೀಯ ಜನತಾ ದಳವು (ಆರ್‌ಜೆಡಿ) ರೇಖಾ ಗುಪ್ತಾ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿದೆ.

ಇದನ್ನೂ ಓದಿ: ಟಿಎಂಸಿ ಪಕ್ಷ ತೊರೆದಿದ್ದ ಮೂವರು ಮಾಜಿ ಸಂಸದರು ಬಿಜೆಪಿಗೆ ಸೇರ್ಪಡೆ

ಮಧ್ಯ ಪಾಟ್ನಾದ ಪ್ರಮುಖ ನಗರ ಪ್ರದೇಶವಾಗಿರುವ ಬಂಕಿಪುರವು ಸುಮಾರು 4 ಲಕ್ಷ ಮತದಾರರನ್ನು ಹೊಂದಿದೆ. ಇಲ್ಲಿ ಕಾಯಸ್ಥ ಮತ್ತು ವೈಶ್ಯ ಸಮುದಾಯಗಳ ಪ್ರಭಾವ ಹೆಚ್ಚಿರುವುದರಿಂದ ರಾಜಕೀಯವಾಗಿ ಇದು ಅತ್ಯಂತ ಮಹತ್ವದ ಕ್ಷೇತ್ರವಾಗಿದೆ. ಬಿಜೆಪಿ ಮತ್ತು ಜನ್ ಸುರಾಜ್ ಪಾರ್ಟಿಗಳು ಇಲ್ಲಿ ಭರ್ಜರಿ ಪ್ರಚಾರವನ್ನು ಕೈಗೊಂಡಿದೆ.

ಯಾರು ಈ ನೀರಜ್ ಕುಮಾರ್ ಸಿನ್ಹಾ?:

32 ವರ್ಷದ ನೀರಜ್ ಕುಮಾರ್ ಸಿನ್ಹಾ ಅವರು ಬಿಜೆಪಿಯ ಯುವ ಮುಖವಾಗಿದ್ದರೂ, ಹಲವು ವರ್ಷಗಳಿಂದ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದಾರೆ. ತಳಮಟ್ಟದಿಂದ ಸಂಘಟನಾತ್ಮಕವಾಗಿ ಕೆಲಸ ಮಾಡಿ ಪಕ್ಷದ ಶ್ರೇಣಿಯಲ್ಲಿ ಬೆಳೆದಿದ್ದಾರೆ. ತಮ್ಮ ರಾಜಕೀಯ ಜೀವನದಲ್ಲಿ ಸಿನ್ಹಾ ಅವರು ಬೂತ್ ಅಧ್ಯಕ್ಷ, ಮಂಡಲ ಪ್ರಧಾನ ಕಾರ್ಯದರ್ಶಿ ಮತ್ತು ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ನೀರಜ್ ಸಿನ್ಹಾ ಅವರ ಕುಟುಂಬವು ಜನಸಂಘದ ಕಾಲದಿಂದಲೂ ಬಿಜೆಪಿಯೊಂದಿಗೆ ಸುದೀರ್ಘ ನಂಟು ಹೊಂದಿದೆ. ಇವರ ಚಿಕ್ಕಪ್ಪ ನರೇಂದ್ರ ಭಾರತಿ ಜನಸಂಘದ ಸಕ್ರಿಯ ಕಾರ್ಯಕರ್ತರಾಗಿದ್ದರು. 1984ರಲ್ಲಿ ಮರಣ ಹೊಂದುವವರೆಗೂ ಅವರು ಬಿಜೆಪಿಯಲ್ಲಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಸರಾ ಆಚರಣೆಗೆ ಸಿದ್ಧತೆ ಆರಂಭಿಸಿದ ಸರ್ಕಾರ: ವಿಜೃಂಭಣೆಯಿಂದ ಆಚರಣೆ ಎಂದ ಸಿಎಂ ಡಿಕೆ ಶಿವಕುಮಾರ್​ – Kannada News | Mysuru Dasara 2026: Government Begins Mysuru Dasara Preparations; CM DK Shivakumar Says Festival Will Be Celebrated on a Grand Scale

ಬೆಂಗಳೂರು, ಜುಲೈ 10: ‘‘ಮೈಸೂರು ದಸರಾ (Mysuru Dasara) ನಮ್ಮ ರಾಜ್ಯದ ಹೆಮ್ಮೆ. ಈ ವರ್ಷ ರಾಜ್ಯದಲ್ಲಿ ಬರಗಾಲದ ಛಾಯೆ ಕಾಣಿಸುತ್ತಿದ್ದರು ಸಹ, ಆ ನೆಪದಲ್ಲಿ ಆಚರಣೆ ನಿಲ್ಲಿಸೋಕೆ ಆಗುವುದಿಲ್ಲ. ದುಂದು ವೆಚ್ಚವಿಲ್ಲದೆ, ಸಾಂಸ್ಕೃತಿಕ ವೈಭವವನ್ನು ನೆನಪಿಸುವ ರೀತಿಯಲ್ಲಿ ಈ ಬಾರಿಯ ದಸರಾವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು” ಎಂದು ಸಿಎಂ ಡಿ.ಕೆ. ಶಿವಕುಮಾರ್ (DK Shivakumar)​ ಹೇಳಿದ್ದಾರೆ.

ನಾಡಹಬ್ಬ ಆಚರಣೆಯಲ್ಲಿ ಯಾವುದೇ ರಾಜಕಾರಣ ಮಾಡುವುದಿಲ್ಲ: ಡಿಕೆ ಶಿವಕುಮಾರ್​

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿಂದು ʻನಾಡಹಬ್ಬ ದಸರಾ – 2026ʼ ಆಚರಿಸುವ ಸಂಬಂಧ ಉನ್ನತ ಮಟ್ಟದ ಪೂರ್ವಭಾವಿ ಸಭೆ ನಡೆಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘‘ನಾಡಹಬ್ಬ ದಸರಾ ಆಚರಣೆಗೆ ಸರ್ಕಾರ ಸಿದ್ಧತೆ ಆರಂಭಿಸಿದೆ. ಬಹುತೇಕ ಶಾಸಕರು, ಮಂತ್ರಿಗಳು ಪಕ್ಷಾತೀತವಾಗಿ ಸಭೆಯಲ್ಲಿ ಭಾಗವಹಿಸಿದ್ದರು. ಮೈಸೂರು ದಸರಾ ರಾಜ್ಯದ ಹೆಮ್ಮೆ. ಪ್ರತಿವರ್ಷ ನಾಡಹಬ್ಬ ದಸರಾ ಉತ್ಸವದ ವ್ಯಾಪ್ತಿ ಬದಲಾಗುತ್ತಿದೆ. ಅಂತಾರಾಷ್ಟ್ರೀಯ ಖ್ಯಾತಿಯ ಕಾರ್ಯಕ್ರಮ ಮುಂದುವರಿಸಬೇಕು. ನಾಡಹಬ್ಬ ಆಚರಣೆಯ ವಿಚಾರದಲ್ಲಿ ಸರ್ಕಾರ ಯಾವುದೇ ರಾಜಕಾರಣ ಮಾಡುವುದಿಲ್ಲ. ಎಲ್ಲರನ್ನೂ ಒಳಗೊಂಡು ಒಟ್ಟಾಗಿ ಹಬ್ಬ ಆಚರಿಸಲಾಗುವುದು’’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮೈಸೂರು ದಸರಾ ಮಹೋತ್ಸವಕ್ಕೆ ಮುಹೂರ್ತ ನಿಗದಿ: ಅ 11ಕ್ಕೆ ಉದ್ಘಾಟನೆ, 21ಕ್ಕೆ ಜಂಬೂಸವಾರಿ

‘‘ಆಗಸ್ಟ್​ 26ರ ಬೆಳಗ್ಗೆ 10 ಗಂಟೆಗೆ ದಸರಾ ಗಜಪಡೆ ಪೂಜೆ ನಡೆಯಲಿದೆ. ಅಕ್ಟೋಬರ್‌ 21ರಂದು ಜಂಬೂಸವಾರಿ ನಡೆಯಲಿದೆ. ಆದಷ್ಟು ಬೇಗ ಕಾರ್ಯಕಾರಿ ಸಮಿತಿ ರಚನೆ ಮಾಡಲಿದ್ದೇವೆ. ಯಾರು ಉದ್ಘಾಟಿಸಬೇಕು ಅನ್ನೋದು ಸಿಎಂ ನಿರ್ಧಾರಕ್ಕೆ ಬಿಟ್ಟಿದ್ದಾರೆ. ಇನ್ನು ಏರ್​ಶೋ ಆಯೋಜಿಸಲು ಪ್ರಸ್ತಾಪ ಬಂದಿದೆ’’ ಎಂದು ತಿಳಿಸಿದರು.

ದಸರಾ ಪಾಸ್​ಗಳ ಬಗ್ಗೆಯೂ ಚರ್ಚೆ

‘‘ಸಿದ್ದರಾಮಯ್ಯನವರು ಬಹಳ ಚೆನ್ನಾಗಿ ದಸರಾ ಆಚರಿಸಿದ್ದರು. ವಿಜೃಂಭಣೆಯಿಂದ ನಾಡಹಬ್ಬ ದಸರಾ ಆಚರಣೆ ಮಾಡುತ್ತೇವೆ. ವಿಜೃಂಭಣೆ ಎಂದರೆ ಬರೀ ಹಣ ಖರ್ಚು ಮಾಡುವುದಲ್ಲ. ಸಾಂಸ್ಕೃತಿಕ ವೈಭವವನ್ನು ನೆನಪಿಸುವ ರೀತಿ ಮಾಡುತ್ತೇವೆ. ಸಭೆಯಲ್ಲಿ ದಸರಾ ಪಾಸ್​ಗಳ ಬಗ್ಗೆಯೂ ಚರ್ಚೆ ಆಗಿದೆ. ಕೆಲವು ಶಾಸಕರು ಸಲಹೆ ಕೊಟ್ಟಿದ್ದಾರೆ. ಇನ್ನು ಹೊರಗಡೆಯಿಂದ ಬರುವವರನ್ನು ಗೌರವದಿಂದ ನಡೆಸಿಕೊಳ್ಳಬೇಕು’’ ಎಂದು ಹೇಳಿದರು.

ಉತ್ಸವದ ಯಶಸ್ಸನ್ನೇ ಮುಖ್ಯ ಗುರಿಯಾಗಿರಬೇಕು ಎಂದ ಸಿಎಂ

‘‘ಶಕ್ತಿ ಯೋಜನೆ ಜಾರಿ ಬಳಿಕ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದ್ದು,ಈ ಹಿನ್ನೆಲೆಯಲ್ಲಿ ಅಗತ್ಯ ಮೂಲಸೌಕರ್ಯ ಮತ್ತು ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು. ರಾಷ್ಟ್ರಮಟ್ಟದ ಖ್ಯಾತಿಯ ಗಾಯಕರು, ಸಂಗೀತಗಾರರು ಹಾಗೂ ಕಲಾವಿದರನ್ನು ಆಹ್ವಾನಿಸಿ ಜನರಿಗೆ ಗುಣಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲಾಗಿದ್ದು, ಈ ಪರಂಪರೆಯನ್ನು ಮುಂದುವರಿಸಬೇಕು. ದಸರಾ ಆಯೋಜನಾ ಸಮಿತಿಗಳು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಉತ್ಸವದ ಯಶಸ್ಸನ್ನೇ ಮುಖ್ಯ ಗುರಿಯನ್ನಾಗಿ ಮಾಡಿಕೊಂಡು ಕೆಲಸ ಮಾಡಬೇಕು. ದಸರಾ ಕುರಿತು ಟೀಕೆ-ವಿಮರ್ಶೆಗಳು ಸಹಜ. ಅವುಗಳಿಗೆ ಅತಿಯಾದ ಮಹತ್ವ ನೀಡದೆ, ಜನರ ನಿರೀಕ್ಷೆಗೆ ತಕ್ಕಂತೆ ಅತ್ಯುತ್ತಮ ಉತ್ಸವ ಆಯೋಜಿಸುವುದರತ್ತ ಸಂಪೂರ್ಣ ಗಮನಹರಿಸುವಂತೆ ಸೂಚಿಸಲಾಗಿದೆ ಎಂದು ಸಿಎಂ ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 7:26 pm, Fri, 10 July 26

Source link

ಭರ್ಜರಿ ಕಮ್‌ಬ್ಯಾಕ್ ಮಾಡಿದ ನಭಾ ನಟೇಶ್ : ‘ನಾಗಬಂಧಂ’ ಬಳಿಕ ಸಜ್ಜಾಗುತ್ತಿದೆ ‘ಸ್ವಯಂಭು’ – Kannada News | Nabha Natesh Comeback Nagabandham Success Swayambhu Movie Nikhil Siddharth

ಕನ್ನಡತಿ ನಭಾ ನಟೇಶ್ (Nabha Natesh) ಅವರಿಗೆ ಪರಭಾಷೆಯಲ್ಲಿ ಬಹಳ ಬೇಡಿಕೆ ಇದೆ. ಸದ್ಯ ಟಾಲಿವುಡ್ ಮತ್ತು ಬಾಲಿವುಡ್ ಅಂಗಳದಲ್ಲಿ ಅವರು ಸಖತ್ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ತೆರೆಕಂಡ ಅವರ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ನಾಗಬಂಧಂ’ (Nagabandham) ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಚಿತ್ರಮಂದಿರಗಳಲ್ಲಿ ಈ ಸಿನಿಮಾ ಧೂಳೆಬ್ಬಿಸುತ್ತಿದ್ದು, ನಭಾ ನಟೇಶ್ ಅವರ ಅಭಿನಯ ಮತ್ತು ನೃತ್ಯಕ್ಕೆ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಹಾಗೂ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.

ಮೇಲ್ನೋಟಕ್ಕೆ ಇದೊಂದು ಸಂಪೂರ್ಣ ಆಧ್ಯಾತ್ಮಿಕ ಹಿನ್ನೆಲೆಯ ಸಿನಿಮಾ ಎಂದು ಅನಿಸಿದರೂ, ಕಮರ್ಷಿಯಲ್ ಪ್ರೇಕ್ಷಕರಿಗೆ ಬೇಕಾದ ಎಲ್ಲಾ ಮನರಂಜನಾತ್ಮಕ ಅಂಶಗಳೂ ಈ ಚಿತ್ರದಲ್ಲಿವೆ. ಕಾರಣಾಂತರಗಳಿಂದ ನಭಾ ನಟೇಶ್ ಅವರು ಕೆಲವು ವರ್ಷಗಳ ಕಾಲ ನಟನೆಯಿಂದ ದೂರ ಉಳಿದುಕೊಂಡಿದ್ದರು. ಈಗ ಅವರು ಮತ್ತೆ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ.

ಬಣ್ಣದ ಲೋಕಕ್ಕೆ ಕಮ್‌ಬ್ಯಾಕ್ ಮಾಡಿದ ನಭಾ:

ನಭಾ ನಟೇಶ್ ಅವರಿಗೆ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿತ್ತು. ಈ ದುರ್ಘಟನೆಯಲ್ಲಿ ಅವರ ಎಡ ಭುಜದ ಮೂಳೆ ಮುರಿದು ಗಂಭೀರವಾದ ಪೆಟ್ಟಾಗಿತ್ತು. ಇದಕ್ಕಾಗಿ ಅವರು ಪದೇ ಪದೇ ಸರಣಿ ಶಸ್ತ್ರಚಿಕಿತ್ಸೆಗಳಿಗೂ ಒಳಗಾಗಬೇಕಾಯಿತು. ಗಾಯದ ತೀವ್ರತೆಯಿಂದಾಗಿ ಸುದೀರ್ಘ ಕಾಲ ಚೇತರಿಸಿಕೊಳ್ಳುತ್ತಿದ್ದ ಅವರು, ಅನಿವಾರ್ಯವಾಗಿ ಚಿತ್ರರಂಗದಿಂದ ಒಂದಷ್ಟು ಕಾಲ ಸಂಪೂರ್ಣ ದೂರ ಉಳಿದಿದ್ದರು. ಇದೀಗ ಎಲ್ಲ ನೋವುಗಳನ್ನು ಮೆಟ್ಟಿ ನಿಂತು ‘ನಾಗಬಂಧಂ’ ಮೂಲಕ ಭರ್ಜರಿ ಸಕ್ಸಸ್‌ ಜೊತೆಗೆ ಕಮ್‌ಬ್ಯಾಕ್ ಮಾಡಿದ್ದಾರೆ.

‘ಸ್ವಯಂಭು’ ಸಿನಿಮಾದಲ್ಲಿ ರಾಣಿ ಗೆಟಪ್:

‘ಕಾರ್ತಿಕೇಯ’, ‘ಕಾರ್ತಿಕೇಯ 2’ ಹಾಗೂ ‘ಸ್ಪೈ’ ರೀತಿಯ ಹಿಟ್ ಚಿತ್ರಗಳ ಮೂಲಕ ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟ ನಿಖಿಲ್ ಸಿದ್ಧಾರ್ಥ್ ಅಭಿನಯದ ಮುಂದಿನ ಸಿನಿಮಾ ‘ಸ್ವಯಂಭು’ ಮೇಲೆ ಈಗಾಗಲೇ ಭಾರಿ ನಿರೀಕ್ಷೆಗಳಿವೆ. ಈ ಪಿರಿಯಾಡಿಕಲ್ ಹೈ-ಬಜೆಟ್ ಸಿನಿಮಾದಲ್ಲಿ ನಭಾ ನಟೇಶ್ ಸುಂದರವಲ್ಲಿ ಎಂಬ ವಿಶೇಷವಾದ ಪಾತ್ರವನ್ನು ಮಾಡಿದ್ದಾರೆ.

ಇದನ್ನೂ ಓದಿ: ನನ್ನ ದೇಹದಲ್ಲಿ ಸ್ಟೀಲ್ ರಾಡ್, ಹಲವು ಸ್ಕ್ರೂಗಳಿವೆ; ನಭಾ ನಟೇಶ್ ಬೇಸರ

ಘಟಾನುಘಟಿ ತಂತ್ರಜ್ಞರ ಜೊತೆ ಕೆಲಸ:

ಈ ಚಿತ್ರಕ್ಕೆ ಭರತ್ ಕೃಷ್ಣಮಾಚಾರಿ ನಿರ್ದೇಶನ ಮಾಡುತ್ತಿದ್ದು, ಸ್ಯಾಂಡಲ್‌ವುಡ್‌ನ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಸಂಗೀತ ಸಂಯೋಜಿಸುತ್ತಿದ್ದಾರೆ. ‘ಬಾಹುಬಲಿ’, ‘ಆರ್​ಆರ್​ಆರ್​’ ಖ್ಯಾತಿಯ ಸೆಂತಿಲ್ ಅವರ ಛಾಯಾಗ್ರಹಣ ಈ ಸಿನಿಮಾಗಿದೆ. ಈಗಾಗಲೇ ಶೂಟಿಂಗ್ ಬಹುತೇಕ ಮುಗಿದಿದ್ದು, ತೆರೆಗೆ ಬರಲು ಸಜ್ಜಾಗುತ್ತಿದೆ. ಸಣ್ಣ ಗ್ಯಾಪ್‌ನ ನಂತರ ತೆಲುಗು ಚಿತ್ರರಂಗದಲ್ಲಿ ಮತ್ತೆ ನಭಾ ನಟೇಶ್ ಆ್ಯಕ್ಟೀವ್ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಉಡುಪಿಯ ಬೈಂದೂರಿನಲ್ಲಿ ಸುಂಟರಗಾಳಿಗೆ 150 ಅಡಿಕೆ ಮರಗಳು ಧರಾಶಾಹಿ – Kannada News | Udupi Faces Rain Havoc: Whirlwind Topples 150 Areca Nut Trees in Byndoor Taluk

ಉಡುಪಿ, ಜುಲೈ 10: ಕಳೆದ ಒಂದು ವಾರದಿಂದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆ ಮತ್ತು ಗಾಳಿಯಿಂದಾಗಿ ವ್ಯಾಪಕ ಅನಾಹುತ ಸಂಭವಿಸಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ಬೀಸಿದ ಸುಂಟರಗಾಳಿಗೆ 150ಕ್ಕೂ ಹೆಚ್ಚು ಅಡಿಕೆ ಮರಗಳು ನೆಲಸಮಗೊಂಡಿವೆ. ಬೈಂದೂರು ತಾಲೂಕಿನ ಎಡಮಳ್ಳಿ ಮಕ್ಕಿನ ಮನೆ, ಹಕ್ಕಲುಮನೆ ಮತ್ತು ಮಕ್ಕಿಮನೆ ಪ್ರದೇಶಗಳಲ್ಲಿ ಈ ಅವಾಂತರ ಸಂಭವಿಸಿದೆ. ಬೆಳಿಗ್ಗೆ ಬಂದ ಸುಂಟರಗಾಳಿಯು 15 ರಿಂದ 20 ವರ್ಷದ ಫಲಕೊಡುವ ಅಡಿಕೆ ಮರಗಳನ್ನು ಬೇರುಸಮೇತ ಕಿತ್ತುಹಾಕಿದೆ. ಮರಗಳು ಮುರಿದು ಚಲ್ಲಾಪೆಲ್ಲೆಯಾಗಿ ಬಿದ್ದಿದ್ದು, ರೈತರಿಗೆ ಅಪಾರ ನಷ್ಟ ಉಂಟಾಗಿದೆ. ಅಡಿಕೆ ಬೆಳೆಗಾರರು ತಮ್ಮ ಜೀವನಾಧಾರವನ್ನೇ ಕಳೆದುಕೊಂಡಿದ್ದು, ಒಂದು ಮರ ಬೆಳೆಯಲು ಸುಮಾರು ಐದರಿಂದ ಹತ್ತು ವರ್ಷ ಬೇಕು ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಗಾಳಿಯ ರಭಸಕ್ಕೆ ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬ್ರಹ್ಮಪುತ್ರಾ ನದಿಗೆ ಚೀನಾ ಅಡ್ಡಗಾಲು; ಅಣೆಕಟ್ಟೆ ಜಾಗವೇ ಬಹಳ ಡೇಂಜರ್- ಸ್ವತಃ ಚೀನೀ ವಿಜ್ಞಾನಿಗಳಿಂದಲೇ ವರದಿ – Kannada News | China’s 147 Billion USD Brahmaputra river Mega Dam Under Scanner Over Active Fault Line Warning

ಟಿಬೆಟ್​ನಲ್ಲಿ ಹರಿಯುವ ಯಾರ್ಲುಂಗ್ ಟ್ಸಾಂಗ್​ಪೋ (ಬ್ರಹ್ಮಪುತ್ರ) ನದಿImage Credit source: He Huawen/VCG via Getty Images

ಬೀಜಿಂಗ್, ಜುಲೈ 10: ಟಿಬೆಟ್​ನಲ್ಲಿ ಬ್ರಹ್ಮಪುತ್ರಾ ನದಿಗೆ (Brahmaputra River) ತಡೆಯಾಗಿ ಚೀನಾ ನಿರ್ಮಿಸುತ್ತಿರುವ ಬೃಹತ್ ಅಣೆಕಟ್ಟು ಯೋಜನೆಗೆ ಅಲ್ಲಿನ ವಿಜ್ಞಾನಿಗಳೇ ಆತಂಕ ವ್ಯಕ್ತಪಡಿಸಿದ್ದಾರೆ. ಬಹಳ ದೋಷಪೂರಿತ ಜಾಗ ಅದು ಎಂದು ಅಲ್ಲಿಯ ಸರ್ಕಾರಿ ಬೆಂಬಲಿತ ವಿಜ್ಞಾನಿಗಳ ತಂಡ ಎಚ್ಚರಿಸಿದೆ. ವಿಶ್ವದ ಅತಿದೊಡ್ಡ ಹೈಡ್ರೋ ಪವರ್ ಪ್ರಾಜೆಕ್ಟ್​ಗಾಗಿ ಮಾಡಲಾಗುತ್ತಿರುವ ಈ ಯೋಜನೆ ಬಗ್ಗೆ ಭಾರತ ವ್ಯಕ್ತಪಡಿಸುತ್ತಾ ಬಂದಿರುವ ಆತಂಕಕ್ಕೆ ಹೊಸ ಧ್ವನಿ ಸಿಕ್ಕಂತಾಗಿದೆ.

ಟಿಬೆಟ್​ನಲ್ಲಿ ಬ್ರಹ್ಮಪುತ್ರಾ ನದಿಗೆ ಯಾರ್ಲುಂಗ್ ಟ್ಸಾಂಗ್​ಪೋ (Yarlung Tsangpo) ಎಂದು ಕರೆಯಲಾಗುತ್ತದೆ. ಟಿಬೆಟ್​ನಲ್ಲಿ ಹುಟ್ಟುವ ಈ ನದಿ ಭಾರತದ ಅರುಣಾಚಲಪ್ರದೇಶದ ಮೂಲಕ ಹಾದು ಹೋಗುತ್ತದೆ. ಈ ಗಡಿಭಾಗದಲ್ಲಿ ಚೀನಾ ಭಾರೀ ವೆಚ್ಚದಲ್ಲಿ ಅಣೆಕಟ್ಟು ನಿರ್ಮಿಸುತ್ತಿದೆ. ಈ ಸ್ಥಳವು ಸಕ್ರಿಯ ಭೂಕುಸಿತದ ಮತ್ತು ಭೂಕಂಪದ ದೋಷರೇಖೆಯಲ್ಲಿ (Active Fault Line) ಇದೆ ಎಂದು ಚೀನೀ ಭೂ ವಿಜ್ಞಾನಿಗಳು ವರದಿ ಮಾಡಿದ್ದಾರೆ.

ಸುಮಾರು 147 ರಿಂದ 167 ಬಿಲಿಯನ್ ಡಾಲರ್ (ಸುಮಾರು 15 ಲಕ್ಷ ಕೋಟಿ ರೂ) ವೆಚ್ಚದ ಈ ಬೃಹತ್ ಅಣೆಕಟ್ಟು ಯೋಜನೆಯ ಸುರಕ್ಷತೆಯ ಬಗ್ಗೆ ಸ್ವತಃ ಚೀನಾದ ಸಂಶೋಧಕರೇ ವರದಿ ಬಿಡುಗಡೆ ಮಾಡಿರುವುದು ಈಗ ಜಾಗತಿಕವಾಗಿ ಭಾರಿ ಚರ್ಚೆಗೆ ಕಾರಣವಾಗಿದೆ.

ಚೀನೀ ವಿಜ್ಞಾನಿಗಳ ವರದಿಯಲ್ಲೇನಿದೆ?

ಚೀನಾ ಜಿಯೋಲಾಜಿಕಲ್ ಸರ್ವೇ ಮೇಲ್ವಿಚಾರಣೆಯಲ್ಲಿ ನಡೆದ ಸಂಶೋಧನೆಯು ‘ಸೆಡಿಮೆಂಟರಿ ಜಿಯೋಲಜಿ ಅಂಡ್ ಟೆಥಿಯನ್ ಜಿಯೋಲಜಿ’ ಎಂಬ ಜರ್ನಲ್‌ನಲ್ಲಿ ಪ್ರಕಟವಾಗಿದೆ.

  • ಪೈಜೆನ್ ದೋಷರೇಖೆ (Paizhen Fault): ಅಣೆಕಟ್ಟಿನ ಜಲಾನಯನ ಪ್ರದೇಶದ ಅಡಿಯಲ್ಲೇ ಈ ಅಪಾಯಕಾರಿ ದೋಷರೇಖೆ ಹಾದುಹೋಗುತ್ತದೆ. ಇದು ಹಿಮಯುಗದ ಕಾಲದಿಂದಲೂ ಅತ್ಯಂತ ಸಕ್ರಿಯವಾಗಿದೆ.
  • ದುರ್ಬಲ ಮಣ್ಣು ಮತ್ತು ಬಂಡೆಗಳು: ಈ ಪ್ರದೇಶದಲ್ಲಿ ನಿರಂತರ ಟೆಕ್ಟಾನಿಕ್ ಚಟುವಟಿಕೆಗಳು ನಡೆಯುತ್ತಿರುವುದರಿಂದ ಸುತ್ತಮುತ್ತಲಿನ ಬಂಡೆಗಳು ಬಿರುಕು ಬಿಟ್ಟಿವೆ ಮತ್ತು ಮಣ್ಣಿನ ಹಿಡಿತ ತೀರಾ ಸಡಿಲವಾಗಿದೆ.
  • ಭೂಕಂಪ ಮತ್ತು ಭೂಕುಸಿತದ ಭೀತಿ: ಅಣೆಕಟ್ಟಿನಲ್ಲಿ ದೀರ್ಘಕಾಲದವರೆಗೆ ನೀರು ಸಂಗ್ರಹವಾದಾಗ ಉಂಟಾಗುವ ಒತ್ತಡ ಮತ್ತು ದೋಷರೇಖೆಯ ಚಲನೆಯಿಂದಾಗಿ, ಜಲಾನಯನ ಪ್ರದೇಶದ ಎರಡೂ ಬದಿಗಳಲ್ಲಿ ಭೀಕರ ಭೂಕುಸಿತಗಳು ಉಂಟಾಗಬಹುದು. ಅಲ್ಲದೆ, 2017 ರಲ್ಲಿ ಇದೇ ಪ್ರದೇಶದಲ್ಲಿ 6.9 ತೀವ್ರತೆಯ ಭೂಕಂಪ ಸಂಭವಿಸಿದ್ದನ್ನು ವಿಜ್ಞಾನಿಗಳು ನೆನಪಿಸಿದ್ದಾರೆ.

ಇದನ್ನೂ ಓದಿ: ಇಬ್ಬರು ಚೀನೀ ಹಳ್ಳಿಗರ ಯಶೋಗಾಥೆ; ಹಣತೆ ದೀಪದಲ್ಲಿ ಓದಿ ಜಗತ್ತಿಗೆ ಇವಿ ಕ್ರಾಂತಿ ಸೃಷ್ಟಿಸಿದವ ಒಬ್ಬ

ಈ ದೋಷರೇಖೆಯು ಅಣೆಕಟ್ಟು ಮಾತ್ರವಲ್ಲದೆ ಅದರ ಸುತ್ತಮುತ್ತ ನಿರ್ಮಿಸಲಾಗುತ್ತಿರುವ ಸುರಂಗಗಳು, ರಸ್ತೆಗಳು ಮತ್ತು ಸೇತುವೆಗಳ ಸ್ಥಿರತೆಗೆ ದೊಡ್ಡ ಸವಾಲಾಗಿದೆ ಎಂದು ವಿಜ್ಞಾನಿಗಳು ಇಂಜಿನಿಯರ್‌ಗಳಿಗೆ ಎಚ್ಚರಿಕೆ ನೀಡಿದ್ದಾರೆ. ಆದರೆ, ಡ್ಯಾಮ್ ಕಟ್ಟದಿರಿ ಎಂದು ಈ ವರದಿಯಲ್ಲಿ ಸಲಹೆ ನೀಡಲಾಗಿಲ್ಲ. ಆದರೆ, ಎದುರಾಗುವ ಸವಾಲುಗಳನ್ನು ಎತ್ತಿ ತೋರಿಸಲಾಗಿದ್ದು, ಯೋಜನೆಯ ಪ್ರತೀ ಹಂತದಲ್ಲೂ ಮುನ್ನೆಚ್ಚರಿಕೆ ಕೈಗೊಳ್ಳುವ ಅಗತ್ಯ ಇರುವುದನ್ನು ವಿವರಿಸಲಾಗಿದೆ.

ಭಾರತ ಮತ್ತು ಬಾಂಗ್ಲಾದೇಶಕ್ಕೆ ಯಾಕೆ ಆತಂಕ?

ಈ ಅಣೆಕಟ್ಟನ್ನು ಚೀನಾ ದೇಶವು ಭಾರತದ ಅರುಣಾಚಲ ಪ್ರದೇಶದ ಗಡಿಗೆ ತೀರಾ ಹತ್ತಿರದಲ್ಲಿರುವ ‘ಗ್ರೇಟ್ ಬೆಂಡ್’ (ನದಿಯು ತೀವ್ರ ತಿರುವು ಪಡೆಯುವ ಜಾಗ) ಬಳಿ ನಿರ್ಮಿಸುತ್ತಿದೆ. ಇಲ್ಲಿಂದಲೇ ಈ ನದಿಯು ಭಾರತಕ್ಕೆ ‘ಸಿಯಾಂಗ್’ ಆಗಿ ಪ್ರವೇಶಿಸಿ, ನಂತರ ಅಸ್ಸಾಂನಲ್ಲಿ ‘ಬ್ರಹ್ಮಪುತ್ರಾ’ ಆಗಿ ಹರಿಯುತ್ತದೆ. ಬಾಂಗ್ಲಾದೇಶದಲ್ಲಿ ಇದಕ್ಕೆ ಬೇರೊಂದು ಹೆಸರಿದೆ.

ಕೃತಕ ಪ್ರವಾಹದ ಭೀತಿ: ಭೂಕಂಪ ಅಥವಾ ಭೂಕುಸಿತದ ಕಾರಣದಿಂದ ಈ ದೈತ್ಯ ಅಣೆಕಟ್ಟಿಗೆ ಏನಾದರೂ ಹಾನಿಯಾದರೆ ಅಥವಾ ಚೀನಾ ಏಕಾಏಕಿ ನೀರು ಬಿಟ್ಟರೆ, ಭಾರತದ ಈಶಾನ್ಯ ರಾಜ್ಯಗಳು (ಅರುಣಾಚಲ ಪ್ರದೇಶ, ಅಸ್ಸಾಂ) ಮತ್ತು ಬಾಂಗ್ಲಾದೇಶದಲ್ಲಿ ಜಲಪ್ರಳಯವೇ ಸಂಭವಿಸಬಹುದು.

ನೀರಿನ ಭದ್ರತೆಗೆ ಧಕ್ಕೆ: ಒಣ ಹವೆ ಇರುವಾಗ ಚೀನಾ ನೀರನ್ನು ಹಿಡಿದಿಟ್ಟುಕೊಂಡರೆ, ಭಾರತದ ನದಿಗಳು ಒಣಗಿ ಕೋಟ್ಯಂತರ ಜನರ ಜೀವನ ಮತ್ತು ಕೃಷಿ ನಾಶವಾಗಬಹುದು ಎನ್ನುವ ಆತಂಕ ಇದೆ. ಆದರೆ, ಭಾರತದಲ್ಲಿ ಹರಿಯುವ ಬ್ರಹ್ಮಪುತ್ರಾ ನದಿಗೆ ಚೀನಾದ ಕೊಡುಗೆ ಶೇ. 30ರಷ್ಟಿರಬಹುದು ಎನ್ನಲಾಗಿದೆ. ಇನ್ನುಳಿದ ನೀರು ಭಾರತೀಯ ಪ್ರದೇಶಗಳಲ್ಲಿರುವ ಉಪನದಿಗಳಿಂದ ಬರುತ್ತಿದೆ.

ಇದನ್ನೂ ಓದಿ: ಬಿಎಸ್ಸೆನ್ನೆಲ್​ನಿಂದ ಸೆಟಿಲೈಟ್ ಫೋನ್; ಬೆಲೆ 1.34 ಲಕ್ಷ ರೂ; ಮಾಸಿಕ ಸಬ್​ಸ್ಕ್ರಿಪ್ಷನ್ ಪ್ಲಾನ್ 3,500 ರೂನಿಂದ ಆರಂಭ

ಜಗತ್ತಿನ ಅತಿ ದೊಡ್ಡ ಅಣೆಕಟ್ಟು ಕಟ್ಟುವ ಹುಮ್ಮಸ್ಸು ಚೀನಾದ್ದು

ಚೀನಾ ಕಳೆದ ವರ್ಷವಷ್ಟೇ ಇದರ ಕಾಮಗಾರಿಯನ್ನು ಆರಂಭಿಸಿದ್ದು, 2030 ರ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಿದೆ. ಇದು ಚೀನಾದ ಪ್ರಸಿದ್ಧ ‘ತ್ರೀ ಗೋರ್ಜಸ್ ಡ್ಯಾಮ್’ಗಿಂತ ಮೂರು ಪಟ್ಟು ಹೆಚ್ಚು ಅಂದರೆ ವಾರ್ಷಿಕ ಸುಮಾರು 60 ಗಿಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಇದು ವಿಶ್ವದಲ್ಲೇ ಅತಿದೊಡ್ಡ ಅಣೆಕಟ್ಟು ಹಾಗೂ ಜಲವಿದ್ಯುತ್ ಯೋಜನೆ ಎನಿಸಲಿದೆ.

ಆದರೆ, ಈಗ ಪ್ರಕೃತಿಯ ನಿಯಮಗಳನ್ನೇ ಮೀರಿ ಭೂಕಂಪ ಪೀಡಿತ ಹಿಮಾಲಯದ ಸೂಕ್ಷ್ಮ ವಲಯದಲ್ಲಿ ಇಂತಹ ದೈತ್ಯ ಸಾಹಸಕ್ಕೆ ಕೈಹಾಕಿರುವುದು ಇಡೀ ದಕ್ಷಿಣ ಏಷ್ಯಾದ ಪರಿಸರ ಮತ್ತು ಜನರ ಸುರಕ್ಷತೆಯನ್ನು ಅಪಾಯಕ್ಕೆ ದೂಡಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 7:12 pm, Fri, 10 July 26

Source link

ಗೌತಮ್ ಗಂಭೀರ್ ತರಬೇತಿಯಲ್ಲಿ 43 ಬೇಡದ ದಾಖಲೆಗಳನ್ನು ನಿರ್ಮಿಸಿದ ಟೀಂ ಇಂಡಿಯಾ – Kannada News | Gautam Gambhir’s Coaching: Team India’s Triumphs and 43 Unwanted Records Set

ಗೌತಮ್ ಗಂಭೀರ್ (Gautam Gambhir) ಮುಖ್ಯ ಕೋಚ್ ಆದ ನಂತರ, ಟೀಂ ಇಂಡಿಯಾ (Team India) ಏಷ್ಯಾಕಪ್, ಚಾಂಪಿಯನ್ಸ್ ಟ್ರೋಫಿ ಮತ್ತು ಟಿ20 ವಿಶ್ವಕಪ್ ಅನ್ನು ಗೆದ್ದಿತು. ಆದಾಗ್ಯೂ, ಅವರ ಅವಧಿಯಲ್ಲಿ, ಟೀಂ ಇಂಡಿಯಾ ಕೆಲವು ಆನಗತ್ಯ ದಾಖಲೆಗಳನ್ನು ನಿರ್ಮಿಸಿದೆ. ಗಂಭೀರ್ ಕೋಚ್ ಆದ ಬಳಿಕ ಟೀಂ ಇಂಡಿಯಾ ಹಲವು ಬೇಡದ ಮೊದಲುಗಳಿಗೆ ಸಾಕ್ಷಿಯಾಗಿದೆ. ಇದಕ್ಕೆ ತಾಜಾ ಉದಾಹರಣೆ ಐರ್ಲೆಂಡ್‌ನಲ್ಲಿ ಟಿ20 ಸರಣಿ ಸೋಲು ಮತ್ತು 14 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಂಗ್ಲೆಂಡ್‌ ವಿರುದ್ಧ ಟಿ20 ಸರಣಿ ಸೋಲು. ಇವೆರಡರ ಜೊತೆಗೆ ಟೀಂ ಇಂಡಿಯಾ, ಗೌತಮ್ ಗಂಭೀರ್ ತರಬೇತಿಯಲ್ಲಿ ಬರೋಬ್ಬರಿ 43 ಅನಗತ್ಯ ದಾಖಲೆಗಳನ್ನು ನಿರ್ಮಿಸಿದೆ. ಅವುಗಳ ವಿವರ ಇಲ್ಲಿದೆ.

  • ಬ್ರಿಸ್ಟಲ್‌ನಲ್ಲಿ ಭಾರತ ಮೊದಲ ಬಾರಿಗೆ ಅಂತರರಾಷ್ಟ್ರೀಯ ಪಂದ್ಯವನ್ನು ಸೋತಿತು.
  • ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಮೊದಲ ಏಕದಿನ ಸರಣಿಯನ್ನು ಸೋತಿತು.
  • ಇಂದೋರ್‌ನಲ್ಲಿ ಟೀಂ ಇಂಡಿಯಾ ಮೊದಲ ಬಾರಿಗೆ ಏಕದಿನ ಪಂದ್ಯವನ್ನು ಸೋತಿತು.
  • ಭಾರತ ತಂಡವು ಮೊದಲ ಬಾರಿಗೆ ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಸೋತಿತು.
  • ಭಾರತ ತಂಡವು ಐರ್ಲೆಂಡ್ ವಿರುದ್ಧ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯವನ್ನು ಸೋತಿತು.
  • ಸತತ ಎರಡು ಕ್ಯಾಲೆಂಡರ್ ವರ್ಷಗಳಲ್ಲಿ ಮೊದಲ ಬಾರಿಗೆ, ಭಾರತವು ತವರಿನಲ್ಲಿ ಆಡಿದ ಟೆಸ್ಟ್ ಸರಣಿಯಲ್ಲಿ ವೈಟ್‌ವಾಶ್‌ಗೆ ಒಳಗಾಯಿತು.
  • ದಕ್ಷಿಣ ಆಫ್ರಿಕಾ ತಂಡ ಭಾರತದ ವಿರುದ್ಧ ಮೊದಲ ಬಾರಿಗೆ 300 ಕ್ಕೂ ಹೆಚ್ಚು ರನ್‌ಗಳ ಗುರಿಯನ್ನು ಬೆನ್ನಟ್ಟಿತು.
  • ಭಾರತ ತಂಡವು ತವರಿನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 200 ರನ್‌ಗಳಿಗಿಂತ ಕಡಿಮೆ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದದ್ದು ಇದೇ ಮೊದಲು.
  • ಭಾರತ ತಂಡವು ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಮೊದಲ ಬಾರಿಗೆ ವೈಟ್‌ವಾಶ್ ಅನುಭವಿಸಿತು.
  • ಭಾರತ ತಂಡವು ಮೊದಲ ಬಾರಿಗೆ ತವರಿನಲ್ಲಿ ಐವತ್ತು ರನ್‌ಗಳಿಗಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಆಯಿತು.
  • ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಮೊದಲ ಬಾರಿಗೆ ತವರಿನಲ್ಲಿ ಟೆಸ್ಟ್ ಸರಣಿಯನ್ನು ಸೋತಿತು.
  • ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಮೊದಲ ಬಾರಿಗೆ 30 ವಿಕೆಟ್‌ಗಳನ್ನು ಕಳೆದುಕೊಂಡಿತು.
  • ಭಾರತ ತಂಡವು ಮೊದಲ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ತಲುಪಲು ವಿಫಲವಾಯಿತು.
  • ಐದು ಶತಕಗಳನ್ನು ಗಳಿಸಿದರೂ ತಂಡವೊಂದು ಟೆಸ್ಟ್ ಪಂದ್ಯವನ್ನು ಸೋತಿದ್ದು ಇದೇ ಮೊದಲು (ಲೀಡ್ಸ್ ಟೆಸ್ಟ್).
  • ಭಾರತ ತಂಡವು ಮೊದಲ ಬಾರಿಗೆ ಟಿ20 ಪಂದ್ಯವೊಂದರಲ್ಲಿ 125 ರನ್‌ಗಳಿಂದ ಸೋಲನುಭವಿಸಿತು.
  • 27 ವರ್ಷಗಳ ನಂತರ ಶ್ರೀಲಂಕಾ ವಿರುದ್ಧ ಭಾರತ ಏಕದಿನ ಸರಣಿ ಸೋತಿತು.
  • 45 ವರ್ಷಗಳ ನಂತರ ಭಾರತ ಒಂದೇ ಒಂದು ಏಕದಿನ ಪಂದ್ಯವನ್ನು ಗೆಲ್ಲಲು ವಿಫಲವಾಯಿತು.
  • 36 ವರ್ಷಗಳ ನಂತರ ಭಾರತವು ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಟೆಸ್ಟ್ ಪಂದ್ಯವನ್ನು ಸೋತಿದೆ.
  • ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 19 ವರ್ಷಗಳ ನಂತರ ಭಾರತ ಟೆಸ್ಟ್ ಪಂದ್ಯವನ್ನು ಸೋತಿದೆ.
  • 12 ವರ್ಷಗಳ ನಂತರ ಭಾರತ ತವರಿನಲ್ಲಿ ಟೆಸ್ಟ್ ಸರಣಿ ಸೋತಿದೆ.
  • 12 ವರ್ಷಗಳ ನಂತರ ಭಾರತವು ತವರಿನಲ್ಲಿ ಸತತ ಎರಡು ಟೆಸ್ಟ್ ಪಂದ್ಯಗಳಲ್ಲಿ ಸೋತಿದೆ.
  • 12 ವರ್ಷಗಳ ನಂತರ ವಾಂಖೆಡೆಯಲ್ಲಿ ಭಾರತ ಟೆಸ್ಟ್ ಪಂದ್ಯವನ್ನು ಸೋತಿದೆ.
  • 47 ವರ್ಷಗಳ ನಂತರ ಭಾರತ ತವರಿನಲ್ಲಿ ಸತತ ಮೂರು ಟೆಸ್ಟ್ ಪಂದ್ಯಗಳನ್ನು ಸೋತಿದೆ.
  • 13 ವರ್ಷಗಳ ನಂತರ ಮೆಲ್ಬೋರ್ನ್‌ನಲ್ಲಿ ಭಾರತ ಟೆಸ್ಟ್ ಪಂದ್ಯವನ್ನು ಸೋತಿದೆ.
  • 10 ವರ್ಷಗಳ ನಂತರ ಭಾರತ ಸತತ ಎರಡು ಟೆಸ್ಟ್ ಸರಣಿ ಸೋತಿದೆ.
  • 10 ವರ್ಷಗಳ ನಂತರ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಭಾರತ ಕಳೆದುಕೊಂಡಿದೆ.
  • 12 ವರ್ಷಗಳ ನಂತರ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಸೋತಿದೆ.
  • 92 ವರ್ಷಗಳಲ್ಲಿ ಭಾರತ 350 ಕ್ಕಿಂತ ಹೆಚ್ಚಿನ ಗುರಿಯನ್ನು ರಕ್ಷಿಸಿಕೊಳ್ಳಲು ವಿಫಲವಾದದ್ದು ಇದು ಎರಡನೇ ಬಾರಿ.
  • ಭಾರತ 200 ರನ್‌ಗಳಿಗಿಂತ ಕಡಿಮೆ ಗುರಿಯನ್ನು ಬೆನ್ನಟ್ಟಲು ಎರಡನೇ ಬಾರಿಗೆ ಸಾಧ್ಯವಾಗಲಿಲ್ಲ.
  • 11 ವರ್ಷಗಳ ನಂತರ ಭಾರತ 600 ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟಿತು.
  • 17 ವರ್ಷಗಳ ನಂತರ ಅಡಿಲೇಡ್‌ನಲ್ಲಿ ಭಾರತಕ್ಕೆ ಏಕದಿನ ಸೋಲು.
  • 15 ವರ್ಷಗಳ ನಂತರ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಟೆಸ್ಟ್ ಸೋಲು ಕಂಡಿದೆ.
  • ಎಂಟು ವರ್ಷಗಳ ನಂತರ ಈಡನ್ ಗಾರ್ಡನ್ಸ್‌ನಲ್ಲಿ ಭಾರತ ಅಂತಾರಾಷ್ಟ್ರೀಯ ಪಂದ್ಯವನ್ನು ಸೋತಿತು.
  • ತವರಿನಲ್ಲಿ 124 ರನ್‌ಗಳ ಗುರಿಯನ್ನು ತಲುಪಲು ಟೀಮ್ ಇಂಡಿಯಾಕ್ಕೆ ಸಾಧ್ಯವಾಗಲಿಲ್ಲ.
  • 25 ವರ್ಷಗಳ ನಂತರ ಭಾರತಕ್ಕೆ ದಕ್ಷಿಣ ಆಫ್ರಿಕಾ ವಿರುದ್ಧ ತವರು ನೆಲದಲ್ಲಿ ಟೆಸ್ಟ್ ಸರಣಿ ಸೋಲು.
  • ಭಾರತವು ರನ್‌ಗಳ ವಿಚಾರದಲ್ಲಿ ಅತಿ ದೊಡ್ಡ (408 ರನ್‌) ಟೆಸ್ಟ್ ಸೋಲನ್ನು ಅನುಭವಿಸಿತು,
  • ಭಾರತ ಟೆಸ್ಟ್‌ನಲ್ಲಿ 549 ರನ್‌ಗಳ ಅತಿ ದೊಡ್ಡ ಗುರಿಯನ್ನು ನೀಡಿತು.
  • 30 ವರ್ಷಗಳ ನಂತರ, ಯಾವುದೇ ಭಾರತೀಯ ಬ್ಯಾಟ್ಸ್‌ಮನ್ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಶತಕ ಸಿಡಿಸಲಿಲ್ಲ.
  • ಭಾರತದ ವಿರುದ್ಧ 359 ರನ್‌ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ.
  • ಭಾರತದ ವಿರುದ್ಧ ನ್ಯೂಜಿಲೆಂಡ್ 285 ರನ್‌ಗಳ ಗರಿಷ್ಠ ಗುರಿಯನ್ನು ಬೆನ್ನಟ್ಟಿತು.
  • ಭಾರತವು ತನ್ನ ಎರಡನೇ ಕನಿಷ್ಠ ಟಿ20 ಸ್ಕೋರ್ ಅನ್ನು ದಾಖಲಿಸಿತು: ಇಂಗ್ಲೆಂಡ್ ವಿರುದ್ಧ 76 ರನ್.
  • 14 ವರ್ಷಗಳ ನಂತರ ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಸೋತ ಭಾರತ.
  • 7 ವರ್ಷಗಳ ನಂತರ ಭಾರತ ಸತತ ಎರಡು ಟಿ20 ಸರಣಿ ಸೋತಿದೆ.

Source link

Karnataka Weather Forecast: ಕರಾವಳಿಯಲ್ಲಿ ನಾಳೆಯೂ ವರ್ಷಧಾರೆ; ಹಲವೆಡೆ ಗಾಳಿ ಅಬ್ಬರದ ಎಚ್ಚರಿಕೆ – Kannada News | Karnataka Weather Update: Widespread Rain to Continue in Coastal Regions

ಬೆಂಗಳೂರು, ಜುಲೈ 10: ರಾಜ್ಯದ ಹಲವು ಭಾಗಗಳಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಗಂಟೆಗೆ 30–40 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದ್ದು, ಕರಾವಳಿ ಕರ್ನಾಟಕದಲ್ಲಿ ವ್ಯಾಪಕ ವರ್ಷಧಾರೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜುಲೈ 12ರಿಂದ ರಾಜ್ಯದಲ್ಲಿ ವರುಣಾರ್ಭಟ ಮತ್ತಷ್ಟು ತಗ್ಗಲಿದ್ದು, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕೆಲವೆಡೆ ನಾಳೆ ಸಾಧಾರಣ ಮಳೆಯಾಗಲಿದೆ ಎಂದು ತಿಳಿಸಿದೆ.

ಜುಲೈ 11ರಂದು ಎಲ್ಲೆಲ್ಲಿ ಮಳೆ?

ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳ ಒಂದು ಅಥವಾ ಎರಡು ಪ್ರದೇಶಗಳಲ್ಲಿ ಸಾಧಾರಣದಿಂದ ಮಧ್ಯಮ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿಯೂ ಸಾಧಾರಣದಿಂದ ಮಳೆಯಾಗಬಹುದು ಎಂದು ಎಚ್ಚರಿಸಿದೆ. ಬಾಗಲಕೋಟೆ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಭಾರಿ ವೇಗದಲ್ಲಿ ನಿರಂತರ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಮಳೆ ವಿಚಾರವಾಗಿ ಪ್ರಧಾನಿ ಮೋದಿ ಎಚ್ಚರಿಕೆ ಗಂಟೆ ಕೊಟ್ಟಿದ್ದಾರೆ; ಸಿಎಂ ಡಿಕೆ ಶಿವಕುಮಾರ್

ಕಳಸದ ತೋಟದೂರಿನಲ್ಲಿ ದಾಖಲೆಯ ಮಳೆ

ಚಿಕ್ಕಮಗಳೂರಿನ ಕಳಸದ ತೋಟದೂರಿನಲ್ಲಿ ನಿನ್ನೆ ರಾಜ್ಯದಲ್ಲಿಯೇ ಅತ್ಯಧಿಕ 82 ಮಿ.ಮೀ. ಮಳೆಯಾಗಿದೆ. ಉಳಿದಂತೆ ದಕ್ಷಿಣ ಕನ್ನಡದ ಪುತ್ತೂರಿನ ನೆಲ್ಯಾಡಿಯಲ್ಲಿ 75.5 ಮಿ.ಮೀ, ಹಾಸನದ ಸಕಲೆಶಪುರದ ಹೊಗದಹಳ್ಳದಲ್ಲಿ 71.5 ಮಿ.ಮೀ, ಕೊಡಗಿನ ವಿರಾಜಪೇಟೆಯ ಬಿರುನಾನಿಯಲ್ಲಿ 71 ಮಿ.ಮೀ, ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ 50 ಮಿ.ಮೀ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ನಗರಬಸ್ತಿಕೇರಿಯಲ್ಲಿ 43 ಮಿ.ಮೀ, ಉಡುಪಿಯ ಕುಂದಾಪುರದ ಹೊಸಂಗಡಿಯಲ್ಲಿ 38 ಮಿ.ಮೀ, ಬೆಂಗಳೂರು ಗ್ರಾಮಾಂತರದ ದೇವನಳ್ಳಿಯ ಕೋರಮಂಗಲದಲ್ಲಿ 36 ಮಿ.ಮೀ ಮಳೆಯಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸುಪ್ರೀಂ ಕೋರ್ಟ್‌ನಲ್ಲಿ ಹೈಡ್ರಾಮಾ; ನ್ಯಾಯಮೂರ್ತಿಗಳನ್ನು ನಿಂದಿಸಿ, ಪೇಪರ್ ಎಸೆದ ಅರ್ಜಿದಾರ – Kannada News | Judicial Servant I Order You Petitioner Abuses Supreme Court Justice Throws Papers

ನವದೆಹಲಿ, ಜುಲೈ 10: ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಇಂದು ಅತ್ಯಂತ ಆಘಾತಕಾರಿಯಾದ ಹೈಡ್ರಾಮಾ ನಡೆದಿದೆ. ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರರೊಬ್ಬರು ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ತನ್ನ ಕೈಯಲ್ಲಿದ್ದ ಕಾಗದಗಳನ್ನು ನ್ಯಾಯಪೀಠದತ್ತ ಗಾಳಿಯಲ್ಲಿ ತೂರಿದ್ದಾರೆ. ಇದರಿಂದ ಕೋರ್ಟ್​​ನಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ ಆತನನ್ನು ಕೋರ್ಟ್ ಹಾಲ್‌ನಿಂದ ಹೊರಗೆ ಕರೆದುಕೊಂಡು ಹೋಗಿದ್ದಾರೆ.

ನ್ಯಾಯಮೂರ್ತಿಗಳಾದ ಕೆ.ವಿ. ವಿಶ್ವನಾಥನ್ ಮತ್ತು ಅಲೋಕ್ ಅರಾಧೆ ಅವರಿದ್ದ ಪೀಠದ ಮುಂದೆ ಈ ಘಟನೆ ನಡೆದಿದೆ. ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಅರ್ಜಿದಾರ ಅತ್ಯಂತ ಆಕ್ರಮಣಕಾರಿ ಧಾಟಿಯಲ್ಲಿ ಮಾತನಾಡಲು ಶುರುಮಾಡಿದಾಗ ಕೋರ್ಟ್ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಈ ವೇಳೆ ನ್ಯಾಯಾಧೀಶರನ್ನು ಉದ್ದೇಶಿಸಿ ಮಾತನಾಡಿದ ಅರ್ಜಿದಾರ, “ಹಲೋ ಜುಡಿಷಿಯಲ್ ಸರ್ವೆಂಟ್ (ನ್ಯಾಯಾಂಗ ಸೇವಕನೇ)… ಲಕ್ನೋದ ಎಸಿಪಿ ವಿರುದ್ಧ ಎಫ್‌ಐಆರ್ ದಾಖಲಿಸಲು ನಾನು ನಿಮಗೆ ಆದೇಶಿಸುತ್ತೇನೆ” ಎಂದು ಹೇಳಿದರು.

ಇದನ್ನೂ ಓದಿ: ಕೋರ್ಟ್ ರಾಜಕೀಯ ವೇದಿಕೆಯಲ್ಲ; ಕರೂರ್ ಕಾಲ್ತುಳಿತ ಪ್ರಕರಣದಲ್ಲಿ ಡಿಎಂಕೆ ಅರ್ಜಿ ಸ್ವೀಕರಿಸಲು ಸುಪ್ರೀಂ ಕೋರ್ಟ್ ನಕಾರ

ಇದರಿಂದ ಆಶ್ಚರ್ಯಚಕಿತರಾದ ನ್ಯಾಯಮೂರ್ತಿ ವಿಶ್ವನಾಥನ್ , “ನೀವು ನನಗೆ ಆರ್ಡರ್ ಮಾಡುತ್ತಿದ್ದೀರಾ? ನೀವು ನ್ಯಾಯಾಲಯಕ್ಕೆ ಆದೇಶ ನೀಡುತ್ತಿದ್ದೀರಾ?” ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅರ್ಜಿದಾರ, “ನನ್ನ ಕಡೆಯಿಂದ ಇಷ್ಟೇ ಹೇಳುವುದು. ಎಲ್ಲವೂ ದಾಖಲೆಯಲ್ಲಿದೆ” ಎಂದರು. ಇಷ್ಟಕ್ಕೇ ಸುಮ್ಮನಾಗದ ಆತ ಇದ್ದಕ್ಕಿದ್ದಂತೆ ತನ್ನ ಕೈಯಲ್ಲಿದ್ದ ಪ್ರಕರಣದ ಎಲ್ಲಾ ಕಾಗದ ಪತ್ರಗಳನ್ನು ನ್ಯಾಯಪೀಠದತ್ತ ಗಾಳಿಯಲ್ಲಿ ತೂರಿದರು.

‘ಲೈವ್ ಲಾ’ ವರದಿಯ ಪ್ರಕಾರ, ಆತ ಭಾರತದ ಮುಖ್ಯ ವಿರುದ್ಧವೂ ಅತ್ಯಂತ ಅವಾಚ್ಯ ಶಬ್ದಗಳನ್ನು ಬಳಸಿ ಕಿರುಚಾಡಿದ್ದಾರೆ. ಘಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಕೋರ್ಟ್ ಹಾಲ್‌ನಲ್ಲಿದ್ದ ಭದ್ರತಾ ಸಿಬ್ಬಂದಿ ತಕ್ಷಣ ಮಧ್ಯಪ್ರವೇಶಿಸಿ ಆ ಅರ್ಜಿದಾರನನ್ನು ಹಿಡಿದು ಕೋರ್ಟ್‌ನಿಂದ ಹೊರಹಾಕಿದರು. ಈ ಇಡೀ ಘಟನೆಯ ವೇಳೆ ಇಬ್ಬರೂ ನ್ಯಾಯಾಧೀಶರು ಅತ್ಯಂತ ತಾಳ್ಮೆಯಿಂದ ವರ್ತಿಸಿದರು. ಯಾವುದೇ ತೀಕ್ಷ್ಣ ಪ್ರತಿಕ್ರಿಯೆ ನೀಡದೆ ಶಾಂತಚಿತ್ತರಾಗಿದ್ದರು. ಅಲ್ಲದೆ, ಆತನ ವಿರುದ್ಧ ತಕ್ಷಣಕ್ಕೆ ಯಾವುದೇ ಕಠಿಣ ಕಾನೂನು ಕ್ರಮ ಕೈಗೊಳ್ಳಲಿಲ್ಲ.

ಇದನ್ನೂ ಓದಿ: ಮದ್ರಾಸ್ ಹೈಕೋರ್ಟ್​​ನ ಗೋಹತ್ಯೆ ನಿಷೇಧ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ತಮಿಳುನಾಡು ಸರ್ಕಾರ 

ಏನಿದು ಪ್ರಕರಣ?:

ಲಕ್ನೋದ ವಿಶೇಷ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ (ಕಸ್ಟಮ್ಸ್) ನೀಡಿದ್ದ ತೀರ್ಪಿನ ವಿರುದ್ಧ ಪ್ರಬಲ್ ಪ್ರತಾಪ್ ಅಲಹಾಬಾದ್ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಮ್ಯಾಜಿಸ್ಟ್ರೇಟ್ ಎಫ್‌ಐಆರ್ ದಾಖಲಿಸಲು ಆದೇಶಿಸುವ ಬದಲಿಗೆ, ಆತನ ಅರ್ಜಿಯನ್ನು ಖಾಸಗಿ ದೂರು ಎಂದು ಪರಿಗಣಿಸಲು ಸೂಚಿಸಿದ್ದರು. ಇದನ್ನು ಹೈಕೋರ್ಟ್ ಎತ್ತಿಹಿಡಿದಿತ್ತಲ್ಲದೆ, ಅರ್ಜಿದಾರನಿಗೆ ಸೂಕ್ತ ವೇದಿಕೆಯನ್ನು ಸಂಪರ್ಕಿಸಲು ಸ್ವಾತಂತ್ರ್ಯ ನೀಡಿ ಅರ್ಜಿಯನ್ನು ವಜಾಗೊಳಿಸಿತ್ತು. ಇದೀಗ ಸುಪ್ರೀಂ ಕೋರ್ಟ್ ಕೂಡ ಹೈಕೋರ್ಟ್ ಆದೇಶ ಸರಿಯಾಗಿದೆ ಎಂದು ಆತನ ಅರ್ಜಿಯನ್ನು ಸಂಪೂರ್ಣವಾಗಿ ವಜಾಗೊಳಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version