IND vs ENG: ಲಾರ್ಡ್ಸ್‌ನಲ್ಲಿ ಟೆಸ್ಟ್ ಅರ್ಧಶತಕ ಬಾರಿಸಿದ ಮೊದಲ ಮಹಿಳಾ ಬ್ಯಾಟರ್ ಸ್ಮೃತಿ ಮಂಧಾನ – Kannada News | Smriti Mandhana Breaks Records at Lord’s: Historic Half Century in India Women’s Test

ಇದು ಸ್ಮೃತಿ ಮಂಧಾನ ಅವರ 9 ನೇ ಟೆಸ್ಟ್ ಪಂದ್ಯ. ಅವರು ಇಲ್ಲಿಯವರೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 4 ಅರ್ಧಶತಕಗಳು ಮತ್ತು 2 ಶತಕಗಳನ್ನು ಸಿಡಿಸಿದ್ದಾರೆ. ಈ ಅರ್ಧಶತಕಗಳಲ್ಲಿ ಮೂರು ಇಂಗ್ಲೆಂಡ್ ವಿರುದ್ಧವೇ ಬಂದಿವೆ. ಆದಾಗ್ಯೂ, ಅವರು ಈ ತಂಡದ ವಿರುದ್ಧ ಇನ್ನೂ ಟೆಸ್ಟ್ ಶತಕ ಗಳಿಸಿಲ್ಲ. ಆದ್ದರಿಂದ, ಸ್ಮೃತಿ ಮಂಧಾನ ಅವರಿಗೆ ಈ ಬಾರಿ ಶತಕ ಬಾರಿಸುವ ದೊಡ್ಡ ಅವಕಾಶವಿದೆ (PC-BCCI Women x).

Source link

RSS ಸಭೆ ಬಳಿಕ ಏನಾದರೂ ಅನಾಹುತ ಆಗೇ ಆಗಿದೆ: ಈಗೇನಾಗುತ್ತೆ ನೋಡಬೇಕು; ಬಿಕೆ ಹರಿಪ್ರಸಾದ್ – Kannada News | Something Disastrous Definitely Happened After the RSS Meeting: BK Hariprasad

ಬೆಂಗಳೂರು, ಜುಲೈ 10: ಬೆಳಗಾವಿಯಲ್ಲಿ ಏಕೆ ಆರ್​ಎಸ್​ಎಸ್ ಸಭೆ ಅಂತಾ ಗೊತ್ತಿಲ್ಲ. RSS ಸಭೆ ಮಾಡಿದ ಬಳಿಕ ಏನಾದರೂ ಅನಾಹುತ ಆಗೇ ಆಗಿದೆ. ಈ ಹಿಂದೆ ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ಅಂತಹವರ ಹತ್ಯೆ ಆಗಿತ್ತು. ಈ ಸಭೆ ಬಳಿಕ ಏನಾಗುತ್ತೆ ಅಂತಾ ನೋಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸ್ಪೋಟಕ​ ಹೇಳಿಕೆ ನೀಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಯೋಧ್ಯೆ ರಾಮಮಂದಿರ ಹುಂಡಿ ಹಣ ಕಳ್ಳತನ ಪ್ರಕರಣದ ಕುರಿತು ಬಿಜೆಪಿ ಮತ್ತು ಆರ್​ಎಸ್​ಎಸ್ ವಿರುದ್ಧ ಹರಿಪ್ರಸಾದ್ ತೀವ್ರ ವಾಗ್ದಾಳಿ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ರಾಜೀನಾಮೆಗೆ ಆಗ್ರಹಿಸಿರುವ ಅವರು, ಟ್ರಸ್ಟ್ ಸ್ಥಾಪನೆ, ಶಿಲಾನ್ಯಾಸ ಮತ್ತು ಪ್ರಾಣ ಪ್ರತಿಷ್ಠಾಪನೆಯ ಜವಾಬ್ದಾರಿಯನ್ನು ಪ್ರಧಾನಿಗಳು ಹೊರಬೇಕು ಎಂದಿದ್ದಾರೆ. 200 ಕೋಟಿ ರೂ ಲೂಟಿ ಮತ್ತು ಅಮೂಲ್ಯ ರಾಮಾಯಣ ಪುಸ್ತಕ ಕಳ್ಳತನವಾಗಿರುವ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

 

Source link

ಬಿಎಸ್ಸೆನ್ನೆಲ್​ನಿಂದ ಸೆಟಿಲೈಟ್ ಫೋನ್; ಬೆಲೆ 1.34 ಲಕ್ಷ ರೂ; ಮಾಸಿಕ ಸಬ್​ಸ್ಕ್ರಿಪ್ಷನ್ ಪ್ಲಾನ್ 3,500 ರೂನಿಂದ ಆರಂಭ – Kannada News | BSNL launches satellite phone with immarsat connectivity, know the price, subscription and other details

ನವದೆಹಲಿ, ಜುಲೈ 10: ಭಾರತದ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆಯಾದ ಬಿಎಸ್‌ಎನ್‌ಎಲ್ (BSNL), ಇತ್ತೀಚೆಗೆ ಭಾರತದಲ್ಲಿ ತನ್ನ ಹೊಸ ಸ್ಯಾಟಲೈಟ್ ಫೋನ್ (ಉಪಗ್ರಹ ಫೋನ್) ಅನ್ನು ಬಿಡುಗಡೆ ಮಾಡಿದೆ. ಮೊಬೈಲ್ ನೆಟ್‌ವರ್ಕ್ ಇಲ್ಲದ ಅತ್ಯಂತ ದುರ್ಗಮ ಪ್ರದೇಶಗಳಲ್ಲೂ ಸಂಪರ್ಕ ಸಾಧಿಸಲು ಇದು ನೆರವಾಗಲಿದೆ. ಸಾಮಾನ್ಯ ಸ್ಮಾರ್ಟ್‌ಫೋನ್‌ಗಳು ಸಿಗ್ನಲ್‌ಗಾಗಿ ಮೊಬೈಲ್ ಟವರ್‌ಗಳನ್ನು ಅವಲಂಬಿಸಿರುತ್ತವೆ. ಆದರೆ ಈ ಸ್ಯಾಟಲೈಟ್ ಫೋನ್ ನೇರವಾಗಿ ಬಾಹ್ಯಾಕಾಶದಲ್ಲಿರುವ ಉಪಗ್ರಹಗಳ (Inmarsat ನೆಟ್‌ವರ್ಕ್) ಮೂಲಕ ಕಾರ್ಯನಿರ್ವಹಿಸುತ್ತದೆ. ಹೀಗಾಗಿ, ಯಾವುದೇ ಮೊಬೈಲ್ ಟವರ್ ಇಲ್ಲದ ದಟ್ಟ ಕಾಡುಗಳು, ಸಮುದ್ರ, ಗಡಿ ಪ್ರದೇಶಗಳು ಅಥವಾ ಹಿಮಾಲಯದಂತಹ ದುರ್ಗಮ ಬೆಟ್ಟಗಳಲ್ಲೂ ಇದರಿಂದ ಸುಲಭವಾಗಿ ವಾಯ್ಸ್ ಕಾಲ್ ಮತ್ತು ಎಸ್‌ಎಮ್‌ಎಸ್ (SMS) ಮಾಡಬಹುದು.

ಬಿಎಸ್ಸೆನ್ನೆಲ್ ಸೆಟಿಲೈಟ್ ಫೋನ್ ಬೆಲೆ ಎಷ್ಟು?

ಈ ಪ್ರೀಮಿಯಂ ಮತ್ತು ವಿಶೇಷ ತಂತ್ರಜ್ಞಾನದ ಸ್ಯಾಟಲೈಟ್ ಫೋನ್‌ನ ಬೆಲೆ ₹1,34,166 (ತೆರಿಗೆಗಳು ಸೇರಿ) ಎಂದು ಬಿಎಸ್‌ಎನ್‌ಎಲ್ ಘೋಷಿಸಿದೆ. ಇದು ಸಾಮಾನ್ಯ ಗ್ರಾಹಕರಿಗಿಂತ ಹೆಚ್ಚಾಗಿ ತುರ್ತು ಸೇವೆಗಳಿಗೆ ಮತ್ತು ಕಠಿಣ ಪರಿಸರದಲ್ಲಿ ಕೆಲಸ ಮಾಡುವವರಿಗಾಗಿ ವಿನ್ಯಾಸಗೊಳಿಸಲಾಗಿದೆ.

ಬಿಎಸ್ಸೆನ್ನೆಲ್ ಸೆಟಿಲೈಟ್ ಫೋನ್​ನ ಪ್ರಮುಖ ಫೀಚರ್​ಗಳು

  • ಉಪಗ್ರಹ ಸಂಪರ್ಕ: ಮೊಬೈಲ್ ಸಿಗ್ನಲ್ ಇಲ್ಲದ ಜಾಗದಲ್ಲೂ ಕರೆ ಮಾಡುವ ಸೌಲಭ್ಯ.
  • ದೀರ್ಘಾವಧಿ ಬ್ಯಾಟರಿ: ಚಾರ್ಜಿಂಗ್ ವ್ಯವಸ್ಥೆ ಇಲ್ಲದ ಕಡೆ ದಿನಗಟ್ಟಲೆ ಬಳಸಲು ಸೂಕ್ತವಾದ ಬ್ಯಾಟರಿ ಬ್ಯಾಕಪ್.
  • SOS ಎಮರ್ಜೆನ್ಸಿ ಸಪೋರ್ಟ್: ಪ್ರಕೃತಿ ವಿಕೋಪ ಅಥವಾ ತುರ್ತು ಸಂದರ್ಭದಲ್ಲಿ ತಕ್ಷಣವೇ ಸಹಾಯ ಕೋರಲು ‘SOS’ ಬಟನ್ ನೀಡಲಾಗಿದೆ.
  • ರಗಡ್ ಡಿಸೈನ್ : ಧೂಳು, ನೀರು ಮತ್ತು ಬಿದ್ದರೂ ಹಾನಿಯಾಗದಂತೆ ಕಠಿಣ ಪರಿಸರಕ್ಕೆ ತಕ್ಕಂತೆ (Rugged Build) ಇದನ್ನು ತಯಾರಿಸಲಾಗಿದೆ.

ಇದನ್ನೂ ಓದಿ: ಇಬ್ಬರು ಚೀನೀ ಹಳ್ಳಿಗರ ಯಶೋಗಾಥೆ; ಹಣತೆ ದೀಪದಲ್ಲಿ ಓದಿ ಜಗತ್ತಿಗೆ ಇವಿ ಕ್ರಾಂತಿ ಸೃಷ್ಟಿಸಿದವ ಒಬ್ಬ

ಸೆಟಿಲೈಟ್ ಫೋನ್ ಎಲ್ಲರ ಬಳಕೆಗೆ ಅಲ್ಲ

ಭಾರತದಲ್ಲಿ ಸ್ಯಾಟಲೈಟ್ ಫೋನ್‌ಗಳ ಬಳಕೆಗೆ ಕಟ್ಟುನಿಟ್ಟಾದ ನಿಯಮಗಳಿವೆ. ಸಾಮಾನ್ಯ ನಾಗರಿಕರು ಇದನ್ನು ನೇರವಾಗಿ ಅಂಗಡಿಯಿಂದ ಖರೀದಿಸಲು ಸಾಧ್ಯವಿಲ್ಲ. ಇದನ್ನು ಖರೀದಿಸಲು ಮತ್ತು ಬಳಸಲು ಕೇಂದ್ರ ದೂರಸಂಪರ್ಕ ಇಲಾಖೆಯಿಂದ (DoT) ಕಡ್ಡಾಯವಾಗಿ ಅನುಮತಿ ಪಡೆಯಬೇಕಾಗುತ್ತದೆ. ಮುಖ್ಯವಾಗಿ ಈ ಕೆಳಗಿನ ಕ್ಷೇತ್ರಗಳಿಗಾಗಿ ಬಿಎಸ್‌ಎನ್‌ಎಲ್ ಇದನ್ನು ಪರಿಚಯಿಸಿದೆ:

  • ರಕ್ಷಣಾ ಪಡೆಗಳು (Defence Personnel)
  • ವಿಪತ್ತು ನಿರ್ವಹಣಾ ತಂಡಗಳು (Disaster Response Teams)
  • ಗಣಿಗಾರಿಕೆ ಮತ್ತು ಹಡಗು ಉದ್ಯಮ (Mining & Maritime)
  • ದುರ್ಗಮ ಪ್ರದೇಶಗಳ ಪ್ರವಾಸ ಕೈಗೊಳ್ಳುವ ಸಾಹಸಿಗರು ಮತ್ತು ಯಾತ್ರಾರ್ಥಿಗಳು.

ಸೆಟಿಲೈಟ್ ಫೋನ್​ನ ಕಾಲ್ ದರಗಳು ಮತ್ತು ಪ್ಲಾನ್‌ಗಳು

ಬಿಎಸ್‌ಎನ್‌ಎಲ್ ಇದಕ್ಕೆ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಪ್ಲಾನ್‌ಗಳನ್ನು ನೀಡಿದೆ. ಸರ್ಕಾರಿ ಸಂಸ್ಥೆಗಳಿಗೆ ತಿಂಗಳಿಗೆ ₹3,500 ದಿಂದ ಆರಂಭವಾಗಲಿದ್ದು, ವಾಣಿಜ್ಯ (Commercial) ಬಳಕೆಗೆ ತಿಂಗಳಿಗೆ ₹5,835 ರ ಪ್ಲಾನ್‌ಗಳಿವೆ. ಉಚಿತ ನಿಮಿಷಗಳು ಮುಗಿದ ನಂತರ ಸರ್ಕಾರಿ ಗ್ರಾಹಕರಿಗೆ ಪ್ರತಿ ನಿಮಿಷಕ್ಕೆ ₹18 ಮತ್ತು ವಾಣಿಜ್ಯ ಗ್ರಾಹಕರಿಗೆ ಪ್ರತಿ ನಿಮಿಷಕ್ಕೆ ₹25 ಕರೆ ದರ ಇರಲಿದೆ.

ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು ಹತ್ತಿರದ ಬಿಎಸ್‌ಎನ್‌ಎಲ್ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.

ಇದನ್ನೂ ಓದಿ: ಇ20 ಪೆಟ್ರೋಲ್, ಭಯಪಡುವ ವಿಚಾರವಾ? ಜನರಿಗೆ ಇರುವ ಸಂದೇಹಗಳೇನು? ಸರ್ಕಾರ ಹೇಳುವುದೇನು? ಇಲ್ಲಿದೆ ಡೀಟೇಲ್ಸ್

ಸೆಟಿಲೈಟ್ ಫೋನ್, ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು (FAQs)

ಪ್ರಶ್ನೆ: ಬಿಎಸ್ಸೆನ್ನೆಲ್ ಯಾವ ಹೊಸ ಉತ್ಪನ್ನ ಬಿಡುಗಡೆ ಮಾಡಿದೆ?

ಉತ್ತರ: ಸರ್ಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್ ಸೆಟಿಲೈಟ್ ಫೋನ್ ಅನ್ನು ಬಿಡುಗಡೆ ಮಾಡಿದೆ. ಇದು ಸೆಟಿಲೈಟ್ ಮೂಲಕ ಕನೆಕ್ಟಿವಿಟಿ ನೀಡುತ್ತದೆ.

ಪ್ರಶ್ನೆ: ಬಿಎಸ್ಸೆನ್ನೆಲ್ ಸೆಟಿಲೈಟ್ ಫೋನ್ ಬೆಲೆ ಎಷ್ಟು?

ಉತ್ತರ: ಬಿಎಸ್ಸೆನ್ನೆಲ್ ಸೆಟಿಲೈಟ್ ಫೋನ್ ಬೆಲೆ 1,34,166 ರೂ ಇದೆ. ಇದರ ಮಾಸಿಕ ಪ್ಲಾನ್ ಸರ್ಕಾರಿ ಸಂಸ್ಥೆಗಳಿಗೆ 3,500 ರೂ, ಕಮರ್ಷಿಯಲ್​ಗೆ 5,835 ರೂ ಇದೆ.

ಪ್ರಶ್ನೆ: ಸೆಟಿಲೈಟ್ ಫೋನ್ ವಿಶೇಷತೆ ಏನು?

ಉತ್ತರ: ಇದು ಮೊಬೈಲ್ ಕನೆಕ್ಟಿವಿಟಿಗೆ ಉಪಗ್ರಹ ಬಳಸುತ್ತದೆ. ಮೊಬೈಲ್ ಟವರ್ ಇಲ್ಲದಿದ್ದರೂ ಸಂವಹನ ಸಾಧ್ಯ. ಅರಣ್ಯ, ಗುಡ್ಡಗಾಡು ಇತ್ಯಾದಿ ದುರ್ಗಮ ಜಾಗದಲ್ಲಿ ಇದನ್ನು ಬಳಸಬಹುದು.

Source link

ಮಳೆಗಾಲದಲ್ಲಿ ಔಷಧಿಗಳಷ್ಟೇ ಅಲ್ಲ, ಆರೋಗ್ಯ ಕಾಪಾಡಿಕೊಳ್ಳಲು ಈ ಹಣ್ಣುಗಳು ಕೂಡ ಸಹಾಯ ಮಾಡುತ್ತದೆ! – Kannada News | Top 5 Fruits To Strengthen Immunity During The Rainy Season

ರೋಗನಿರೋಧಕ ಶಕ್ತಿ ಹೆಚ್ಚಿಸುವ ಹಣ್ಣುಗಳುImage Credit source: Getty Images

ಮಳೆಗಾಲ (Rainy Season) ಆರಂಭವಾಗುತ್ತಿದ್ದಂತೆ ಜ್ವರ, ಶೀತ, ಗಂಟಲು ನೋವು, ವೈರಲ್ ಸೋಂಕು, ಹೊಟ್ಟೆ ಸಂಬಂಧಿತ ತೊಂದರೆಗಳು ಹೆಚ್ಚಾಗುವುದು ಸಾಮಾನ್ಯ. ಈ ಸಮಯದಲ್ಲಿ ಔಷಧಿಗಳಷ್ಟೇ ಅಲ್ಲ, ಪೌಷ್ಟಿಕ ಆಹಾರ ಮತ್ತು ಋತುಮಾನಕ್ಕೆ ತಕ್ಕ ಹಣ್ಣು, ತರಕಾರಿಗಳ ಸೇವನೆ ಕೂಡ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲಿಯೂ ವಿಟಮಿನ್ ಸಿ, ಆ್ಯಂಟಿಆಕ್ಸಿಡೆಂಟ್‌, ಫೈಬರ್ ಹಾಗೂ ಖನಿಜಾಂಶಗಳಿಂದ ಸಮೃದ್ಧವಾಗಿರುವ ಕೆಲವು ಹಣ್ಣುಗಳು ದೇಹವನ್ನು ಸೋಂಕುಗಳಿಂದ ರಕ್ಷಿಸಲು ನೆರವಾಗುತ್ತವೆ ಎಂದು ಪೌಷ್ಟಿಕ ತಜ್ಞರು ಹೇಳುತ್ತಾರೆ.

ನೇರಳೆ ಹಣ್ಣು (Jamun)

ನೇರಳೆ ಹಣ್ಣಿನಲ್ಲಿ ವಿಟಮಿನ್ ಸಿ, ಕಬ್ಬಿಣ, ಫೋಲೇಟ್ ಹಾಗೂ ಆ್ಯಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಇದು ರೋಗನಿರೋಧಕ ಶಕ್ತಿ ಹೆಚ್ಚಿಸುವುದರ ಜೊತೆಗೆ ಜೀರ್ಣಕ್ರಿಯೆಗೆ ಸಹಕಾರಿ. ಮಧುಮೇಹ ಇರುವವರು ಈ ಹಣ್ಣನ್ನು ವೈದ್ಯರ ಸಲಹೆ ಪಡೆದು ಮಿತ ಪ್ರಮಾಣದಲ್ಲಿ ಸೇವಿಸಬಹುದು.

ದಾಳಿಂಬೆ

ಸಾಮಾನ್ಯವಾಗಿ ದಾಳಿಂಬೆ ಪಾಲಿಫಿನಾಲ್ ಹಾಗೂ ವಿಟಮಿನ್ ಸಿಯ ಉತ್ತಮ ಮೂಲವಾಗಿದೆ. ಇದು ದೇಹದಲ್ಲಿನ ಉರಿಯೂತ ಕಡಿಮೆ ಮಾಡಲು, ರಕ್ತಸಂಚಾರ ಸುಧಾರಿಸಲು ಮತ್ತು ವೈರಲ್ ಸೋಂಕಿನ ವಿರುದ್ಧ ದೇಹದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಸೇಬು

ಪ್ರತಿದಿನ ಒಂದು ಸೇಬು ಸೇವಿಸುವುದರಿಂದ ಫೈಬರ್, ವಿಟಮಿನ್ ಹಾಗೂ ಆ್ಯಂಟಿಆಕ್ಸಿಡೆಂಟ್‌ಗಳು ದೊರೆಯುತ್ತವೆ. ಮಳೆಗಾಲದಲ್ಲಿ ನಿಧಾನವಾಗುವ ಜೀರ್ಣಕ್ರಿಯೆಯನ್ನು ಸುಧಾರಿಸಲು ಹಾಗೂ ಹೊಟ್ಟೆಯ ಆರೋಗ್ಯ ಕಾಪಾಡಲು ಇದು ನೆರವಾಗಬಹುದು.

ಇದನ್ನೂ ಓದಿ: ಬಿಂಬಳಕಾಯಿಯನ್ನು ಅಡುಗೆಯಲ್ಲಿ ಮಾತ್ರವಲ್ಲ, ಜೀರ್ಣಕ್ರಿಯೆಯನ್ನು ಸುಧಾರಿಸಲು ಕೂಡ ಬಳಸಬಹುದು!

ಪೇರಳೆ (Guava)

ವಿಟಮಿನ್ ಸಿ ಅತಿ ಹೆಚ್ಚು ಇರುವ ಹಣ್ಣುಗಳಲ್ಲಿ ಪೇರಳೆ ಪ್ರಮುಖ. ಕಿತ್ತಳೆಗಿಂತಲೂ ಹೆಚ್ಚಿನ ವಿಟಮಿನ್ ಸಿ ಹೊಂದಿರುವ ಈ ಹಣ್ಣು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಗಂಟಲಿಗೆ ಸಂಬಂಧಪಟ್ಟ ಸೋಂಕು ಮತ್ತು ಸಾಮಾನ್ಯ ಶೀತದ ಅಪಾಯವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

ಪೀಚ್ ಮತ್ತು ಪ್ಲಮ್

ಈ ಹಣ್ಣುಗಳಲ್ಲಿ ವಿಟಮಿನ್ ಎ, ವಿಟಮಿನ್ ಸಿ ಮತ್ತು ಪೊಟ್ಯಾಶಿಯಂ ಸಮೃದ್ಧವಾಗಿದೆ. ಚರ್ಮದ ಆರೋಗ್ಯ ಕಾಪಾಡುವುದರ ಜೊತೆಗೆ ದೇಹದ ರೋಗನಿರೋಧಕ ಪ್ರತಿಕ್ರಿಯೆಯನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ.

ಇನ್ನೂ ಯಾವ ಹಣ್ಣುಗಳನ್ನು ಸೇವಿಸಬಹುದು?

ಪಪ್ಪಾಯಿ, ಕಿವಿ, ಕಿತ್ತಳೆ ಹಾಗೂ ಸೀಬೆಹಣ್ಣುಗಳಂತಹ ಋತುಮಾನಕ್ಕೆ ತಕ್ಕ ಹಣ್ಣುಗಳನ್ನು ಮಿತ ಪ್ರಮಾಣದಲ್ಲಿ ಸೇವಿಸಬಹುದು. ಇವುಗಳಲ್ಲಿ ಇರುವ ಫೈಬರ್ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ಕರುಳಿನ ಆರೋಗ್ಯವನ್ನು ಸುಧಾರಿಸಿ, ದೇಹದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ನೆರವಾಗುತ್ತವೆ.

ಮಳೆಗಾಲದಲ್ಲಿ ಹಣ್ಣು ತಿನ್ನುವಾಗ ಈ ಮುನ್ನೆಚ್ಚರಿಕೆ ಅಗತ್ಯ

  • ಹಣ್ಣುಗಳನ್ನು ಉಪ್ಪು ನೀರು ಅಥವಾ ಹರಿಯುವ ನೀರಿನಲ್ಲಿ ಚೆನ್ನಾಗಿ ತೊಳೆದು ಸೇವಿಸಿ.
  • ರಸ್ತೆ ಬದಿಯಲ್ಲಿ ಕತ್ತರಿಸಿ ಇಟ್ಟಿರುವ ಹಣ್ಣುಗಳನ್ನು ಸೇವಿಸಬೇಡಿ.
  • ಕತ್ತರಿಸಿದ ಹಣ್ಣುಗಳನ್ನು ಹೆಚ್ಚು ಸಮಯ ಹೊರಗೆ ಇಡಬೇಡಿ.
  • ಮಕ್ಕಳಿಗೆ ಹಾಗೂ ವೃದ್ಧರಿಗೆ ಯಾವಾಗಲೂ ತಾಜಾ ಹಣ್ಣುಗಳನ್ನೇ ನೀಡಿ.
  • ಜ್ವರ, ಮಧುಮೇಹ ಅಥವಾ ಅಲರ್ಜಿ ಇರುವವರು ವೈದ್ಯರ ಸಲಹೆಯಂತೆ ಆಹಾರ ಆಯ್ಕೆ ಮಾಡಿಕೊಳ್ಳುವುದು ಉತ್ತಮ.

ಸೂಚನೆ: ಹಣ್ಣುಗಳು ಆರೋಗ್ಯಕರ ಆಹಾರದ ಭಾಗವಾಗಿದ್ದರೂ, ಯಾವುದೇ ಹಣ್ಣು ವೈರಲ್ ಸೋಂಕನ್ನು ಸಂಪೂರ್ಣವಾಗಿ ತಡೆಯುತ್ತದೆ ಎಂಬುದಕ್ಕೆ ವೈಜ್ಞಾನಿಕ ಸಾಕ್ಷ್ಯಗಳಿಲ್ಲ. ಆದರೆ ಸಮತೋಲನ ಆಹಾರ, ಸಾಕಷ್ಟು ನಿದ್ರೆ, ಶುದ್ಧ ನೀರು ಮತ್ತು ವೈಯಕ್ತಿಕ ಸ್ವಚ್ಛತೆಯೊಂದಿಗೆ ಹಣ್ಣುಗಳನ್ನು ಸೇವಿಸುವುದರಿಂದ ದೇಹದ ರೋಗನಿರೋಧಕ ಶಕ್ತಿಯನ್ನು ಚೆನ್ನಾಗಿ ಕಾಪಾಡಿಕೊಳ್ಳಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಕರಾವಳಿ’ ಸಿನಿಮಾ ವಿವಾದ: ನಟ ಪ್ರಜ್ವಲ್ ದೇವರಾಜ್ ಪರ ನಿಂತ ರಕ್ಷಿತಾ ಪ್ರೇಮ್ – Kannada News | Karavali movie controversy Rakshitha Prem supports Prajwal Devaraj

ತನ್ನ ಪೋಸ್ಟರ್, ಟೀಸರ್​​ಗಳಿಂದ ನಿರೀಕ್ಷೆ ಮೂಡಿಸಿದ್ದ ‘ಕರಾವಳಿ’ (Karavali) ಸಿನಿಮಾ ಇದೀಗ ಬಿಡುಗಡೆ ಹಂತಕ್ಕೆ ಬಂದು ನಿಂತಿದೆ. ಆದರೆ ಸಿನಿಮಾ ತಂಡದಲ್ಲಿ ಬಿರುಕು ಮೂಡಿದ್ದು, ಆ ಬಿರುಕು ಜಗಜ್ಜಾಹೀರಾಗಿದೆ. ಪ್ರಜ್ವಲ್ ದೇವರಾಜ್ ಹಾಗೂ ಸಿನಿಮಾದ ನಿರ್ದೇಶಕ ಗುರುದತ್ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಪ್ರಜ್ವಲ್ ದೇವರಾಜ್ ಬದಲಿಗೆ ಬೇರೊಬ್ಬರಿಂದ ಸಿನಿಮಾಕ್ಕೆ ಡಬ್ಬಿಂಗ್ ಮಾಡಿಸಲಾಗಿದ್ದು, ಇದು ಪ್ರಜ್ವಲ್ ಅಭಿಮಾನಿಗಳನ್ನು, ಖುದ್ದು ಪ್ರಜ್ವಲ್ ಅವರನ್ನೂ ಸಹ ಕೆರಳಿಸಿದೆ. ಈ ವಿವಾದ ಕುರಿತಂತೆ ನಿನ್ನೆ ನಿರ್ದೇಶಕ ಪನ್ನಗಾಭರಣ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು, ಇಂದು ನಟಿ ಮೇಘನಾ ರಾಜ್ ಸಹ ವಿವಾದದ ಬಗ್ಗೆ ಮಾತನಾಡಿದ್ದಾರೆ. ಇದೀಗ ನಟಿ, ನಿರ್ಮಾಪಕಿ ರಕ್ಷಿತಾ ಪ್ರೇಮ್ ಸಹ ವಿವಾದದ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು, ಪ್ರಜ್ವಲ್ ದೇವರಾಜ್ ಪರ ನಿಂತಿದ್ದಾರೆ.

ಇನ್​​ಸ್ಟಾಗ್ರಾಂ ಸ್ಟೋರಿ ಹಂಚಿಕೊಂಡಿರುವ ನಟಿ ರಕ್ಷಿತಾ, ‘ಸಂಭಾವನೆ ಕಾರಣಕ್ಕೆ ನಾಯಕಿಯರ, ಪೋಷಕ ನಟರುಗಳಿಂದ ಡಬ್ಬಿಂಗ್ ಮಾಡಿಸದೆ ಬೇರೊಬ್ಬರಿಂದ ಡಬ್ಬಿಂಗ್ ಮಾಡಿಸುವುದನ್ನು ವರ್ಷಗಳಿಂದಲೂ ನೋಡುತ್ತಾ ಬರುತ್ತಿದ್ದೇವೆ. ಆದರೆ ಅದ್ಯಾವುದೂ ಸಹ ಇಷ್ಟು ದೊಡ್ಡ ಸುದ್ದಿ ಆಗುತ್ತಿರಲಿಲ್ಲ. ಆದರೆ ಈ ಬಾರಿ ನಾಯಕ ನಟನ ಧ್ವನಿಯನ್ನೇ ಕೈ ಬಿಡಲಾಗಿದೆ. ಹಾಗಾಗಿ ದೊಡ್ಡ ಸುದ್ದಿ ಆಗಿದೆ. ನಟ-ನಟಿ ಯಾರೇ ಇರಲಿ, ಅವರ ಲುಕ್, ನಟನೆಯ ಜೊತೆಗೆ ಅವರ ಧ್ವನಿಯಿಂದಲೂ ಅವರು ತಮ್ಮನ್ನು ಗುರುತಿಸಿಕೊಂಡಿರುತ್ತಾರೆ’ ಎಂದು ರಕ್ಷಿತಾ ಹೇಳಿದ್ದಾರೆ.

ಮುಂದುವರೆದು, ‘ಕೇವಲ ಸಂಭಾವನೆ ಅಥವಾ ಪಾವತಿಯ ಕಾರಣ ನೀಡಿ ನಟ-ನಟಿಯರ ಧ್ವನಿಯನ್ನು ಬದಲಾಯಿಸುವುದು ಸರಿಯಲ್ಲ. ಒಬ್ಬ ನಟ ತನ್ನ ಪಾತ್ರಕ್ಕೆ ಹಾಕುವ ಶ್ರಮ, ಸಮಯ ಮತ್ತು ಪ್ರತಿಭೆಯನ್ನು ಗೌರವಿಸಬೇಕು. ಪಾತ್ರದ ಸಂಪೂರ್ಣತೆಗೆ ಧ್ವನಿ ಅತ್ಯಗತ್ಯ, ಅದನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ, ಇದು ಎಲ್ಲ ನಟ-ನಟಿಯರಿಗೂ ಅನ್ವಯ ಆಗಬೇಕು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:‘ಕರಾವಳಿ’ ಕಿರಿಕ್: ಪ್ರಜ್ವಲ್​ಗೆ ಸಂಭಾವನೆ ಬಾಕಿ ಉಳಿಸಿಕೊಂಡಿದ್ದೇಕೆ? ವಿವರಿಸಿದ ಚಿತ್ರತಂಡ

‘ಕರಾವಳಿ’ ಚಿತ್ರದ ಟ್ರೇಲರ್ ಬಿಡುಗಡೆಯ ಸಮಯದಲ್ಲಿ ನಾಯಕ ನಟ ಪ್ರಜ್ವಲ್ ದೇವರಾಜ್ ಗೈರುಹಾಜರಾಗಿದ್ದರು ಮತ್ತು ಟ್ರೇಲರ್‌ನಲ್ಲಿ ಅವರ ಧ್ವನಿಯೂ ಇರಲಿಲ್ಲ. ಇದರಿಂದ ಸಿಟ್ಟಾಗಿದ್ದ ಪ್ರಜ್ವಲ್ ಅಭಿಮಾನಿಗಳು ಕಾರ್ಯಕ್ರಮಕ್ಕೆ ಬಂದು ಗಲಾಟೆ ಮಾಡಿದ್ದರು. ಇಂದು ಚಿತ್ರತಂಡವು ಪ್ರಕಟಣೆಯೊಂದನ್ನು ಹೊರಡಿಸಿದ್ದು, ‘ನಾವು ಪ್ರಜ್ವಲ್ ಅವರಿಗೆ ಬಾಕಿ ಹಣ ನೀಡಿದ್ದೇವೆ, ಅವರು ಸಿನಿಮಾಕ್ಕೆ ಸಿಕ್ಸ್ ಪ್ಯಾಕ್ ಮಾಡುತ್ತೇನೆ ಎಂದಿದ್ದರು, ಅದಕ್ಕಾಗಿ ಹೆಚ್ಚಿನ ಸಂಭಾವನೆ ನೀಡಲು ಒಪ್ಪಿಕೊಂಡಿದ್ದೆವು ಆದರೆ ಅವರು ಸಿಕ್ಸ್ ಪ್ಯಾಕ್ ಮಾಡಿಕೊಳ್ಳಲಿಲ್ಲ, ಅದಕ್ಕಾಗಿ ನಾವು ಅವರ ಸಂಭಾವನೆ ತಡೆದಿದ್ದೆವು’ ಎಂದಿದ್ದಾರೆ.

ಗುರುದತ್ ಗಾಣಿಗಾ ನಿರ್ದೇಶಿಸಿರುವ ‘ಕರಾವಳಿ’ ಸಿನಿಮಾನಲ್ಲಿ ಪ್ರಜ್ವಲ್ ದೇವರಾಜ್ ಜೊತೆಗೆ ರಾಜ್ ಬಿ ಶೆಟ್ಟಿ, ಮಿತ್ರಾ, ರಮೇಶ್ ಇಂದಿರಾ ಇನ್ನೂ ಕೆಲ ಪ್ರತಿಭಾವಂತ ನಟರು ನಟಿಸಿದ್ದಾರೆ. ನಾಯಕಿಯರಾಗಿ ಸಂಪದ ಮತ್ತು ಸುಷ್ಮಿತಾ ಭಟ್ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

265 ಕಿ.ಮೀ ದೂರ, 14.10 ಗಂಟೆ: ಬೆಂಗಳೂರಿನಿಂದ ಸೈಕಲ್​​ನಲ್ಲೇ ತಿರುಪತಿ ತಲುಪಿದ ಶಾಸಕ ಸುರೇಶ್​​ ಕುಮಾರ್​​ ಮತ್ತು ತಂಡ – Kannada News | Rajajinagar MLA S Suresh Kumar Cycles 265 KM from Bengaluru to Tirupati in 14 Hours

ಬೆಂಗಳೂರು, ಜುಲೈ 10: ರಾಜಾಜಿನಗರ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ಬೆಂಗಳೂರಿನಿಂದ ತಿರುಪತಿಗೆ ಸೈಕಲ್​ನಲ್ಲಿ ಪ್ರವಾಸ ಕೈಗೊಂಡಿದ್ದಾರೆ. ನಿನ್ನೆ ಬೆಳಗಿನಜಾವ 4.30ಕ್ಕೆ ಬಸವೇಶ್ವರನಗರದಿಂದ ಸೈಕ್ಲಿಂಗ್ ಆರಂಭ ಮಾಡಿದ್ದು, ಇಂದು ಮಧ್ಯಾಹ್ನ 2 ಗಂಟೆಗೆ ತಿರುಪತಿ ತಲುಪಿದ್ದಾರೆ. 10 ಜನರ ತಂಡದ ಜೊತೆ ಸುರೇಶ್ ಕುಮಾರ್ ಸೈಕಲ್​ನಲ್ಲಿ ತೆರಳಿದ್ದು, ಈ ಟೀಂ ಸತತ 3ನೇ ಬಾರಿಗೆ ತಿರುಪತಿಗೆ ಸೈಕ್ಲಿಂಗ್ ಮಾಡಿದೆ. ಬಸವೇಶ್ವರದಿಂದ ರಾಜಾಜಿನಗರ ಒಂದನೇ ಬ್ಲಾಕ್, ಯಶವಂತಪುರ, ಬಿ ಇ ಎಲ್ ವೃತ್ತ, ಅವಲಳ್ಳಿ ಅರಣ್ಯ ಪ್ರದೇಶ, ರಾಜಾನುಕುಂಟೆ, ನಾಡಪ್ರಭು ಕೆಂಪೇಗೌಡ ವಿಮಾನ ನಿಲ್ದಾಣ, ದೇವನಹಳ್ಳಿ, ವಿಜಯಪುರ, ಕೈವಾರ, ಮದನಪಲ್ಲಿ, ಪೀಲೇರು ಮಾರ್ಗವಾಗಿ ಸಾಗಿ ತಿರುಪತಿ ತಲುಪಿದ್ದು, ನಿನ್ನೆ ರಾತ್ರಿ ಮದನಪಲ್ಲಿಯಲ್ಲಿ ವಾಸ್ತವ್ಯ ಹೂಡಿದ್ದೆವು. ಒಟ್ಟು 265 km ದೂರವನ್ನು 14.10 ಸೈಕ್ಲಿಂಗ್ ಗಂಟೆ ಸಮಯದಲ್ಲಿ ಪೂರೈಸಿರೋದಾಗಿ ಶಾಸಕರು ಮಾಹಿತಿ ಹಂಚಿಕೊಂಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾದ ವಿಶೇಷತೆಗಳೇನು? – Kannada News | Hemanth Rao talks about his upcoming movie 666 Operaiton dream theater movie

ಶಿವರಾಜ್ ಕುಮಾರ್ (Shiva Rajkumar), ಡಾಲಿ ಧನಂಜಯ್ (Daali Dhananjay) ನಟಿಸುತ್ತಿರುವ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸದ್ಯದ ಕನ್ನಡದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದೆನಿಸಿಕೊಂಡಿದೆ. ಹೇಮಂತ್ ರಾವ್ ಅವರು ‘ಸಪ್ತ ಸಾಗರದಾಚೆ ಎಲ್ಲೊ’ ಅಂಥಹಾ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ ಬಳಿಕ ‘666 ಆಪರೇಷನ್ ಡ್ರೀಮ್ ಥಿಯೇಟರ್’ ನಿರೀಕ್ಷೆ ಹೆಚ್ಚಾಗಿದೆ. ಸಿನಿಮಾದ ಟೀಸರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಟೀಸರ್ ನೋಡಿದವರಿಗೆ ಸಿನಿಮಾದ ಬಗ್ಗೆ ಕುತೂಹಲದ ಜೊತೆಗೆ ಕೆಲವು ಗೊಂದಲಗಳು ಸಹ ಹುಟ್ಟಿಕೊಂಡಿವೆ. ಇದೀಗ ಹೇಮಂತ್ ರಾವ್ ಅವರು ಸಿನಿಮಾದ ಬಗ್ಗೆ ಮಾತನಾಡಿದ್ದು, ಕೆಲ ಸುಳಿವುಗಳನ್ನು ನೀಡಿದ್ದಾರೆ.

ಸಂದರ್ಶನದಲ್ಲಿ ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾತನಾಡಿರುವ ಹೇಮಂತ್ ರಾವ್, ತಾವು ನಿರ್ದೇಶಿಸಿದ್ದ ಮೊಟ್ಟ ಮೊದಲ ಕಿರುಚಿತ್ರದಲ್ಲಿ ಬರುವ ಸಣ್ಣ ಸನ್ನಿವೇಶವನ್ನು ಆಧರಿಸಿ ತಾವು ಈ ಕತೆಯನ್ನು ಬರೆದಿರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ, ಈ ಸಿನಿಮಾ ಯಾವುದೇ ಸಿನಿಮಾ ಒಳಗಿನ ಸಿನಿಮಾ ಅಲ್ಲ ಅಥವಾ ಕನಸಿನ ಬಗೆಗೆ ಇರುವ ಸಿನಿಮಾ ಸಹ ಅಲ್ಲ ಎಂದಿದ್ದಾರೆ. ಆ ಮೂಲಕ ಇನ್ನಷ್ಟು ಕುತೂಹವನ್ನು ಸಿನಿಮಾದ ಬಗ್ಗೆ ಮೂಡಿಸಿದ್ದಾರೆ.

ಟೀಸರ್ ನೋಡಿದವರು, ಇದು ಸಿನಿಮಾದ ಒಳಗೆ ನಡೆಯುವ ಸಿನಿಮಾದ ಕತೆ ಇರಬಹುದು ಎಂದು ಕೆಲವರು ಊಹಿಸಿದ್ದರೆ, ಇನ್ನು ಕೆಲವರು ಇದು ಕನಸಿಗೆ ಸಂಬಂಧಿಸಿದ ಸಿನಿಮಾ ಎಂದಿದ್ದರು. ಆದರೆ ಈ ಎರಡೂ ವಾದಗಳನ್ನು ನಿರ್ದೇಶಕ ಹೇಮಂತ್ ರಾವ್ ಅಲ್ಲಗಳೆದಿದ್ದು, ಇದು ಹಲವು ವಿಷಯಗಳನ್ನು ಒಳಗೊಂಡ ಸಿನಿಮಾ ಆಗಿರಲಿದೆ’ ಎಂದಿದ್ದಾರೆ.

ಇದನ್ನೂ ಓದಿ:‘ಕರಾವಳಿ’ ಸಿನಿಮಾ ವಿವಾದ: ಪ್ರಜ್ವಲ್ ದೇವರಾಜ್ ಪರ ನಿಂತ ಮೇಘನಾ ರಾಜ್

ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಇನ್ನು ಕೇವಲ 20 ದಿನಗಳ ಚಿತ್ರೀಕರಣವಷ್ಟೆ ಬಾಕಿ ಉಳಿದಿದೆ ಎಂದಿರುವ ಹೇಮಂತ್, ಇದು 70-80ರ ದಶಕದಲ್ಲಿ ನಡೆಯುವ ಕತೆಯಾದ್ದರಿಂದ ಆಗಿನ ಕಾಲದ ಫೀಲ್ ಕೊಡಲು ಭಿನ್ನ-ಭಿನ್ನ ರೀತಿಯ ಅಪರೂಪದ ಲೆನ್ಸ್​​ಗಳನ್ನು ಬಳಸಿ ಶೂಟಿಂಗ್ ಮಾಡಿದ್ದೇವೆ. ಒಂದಂತೂ ಬಹಳ ಹಳೆಯ ಕಾಲದ ಲೆನ್ಸ್ ಅನ್ನು ಬಳಸಿದ್ದೇವೆ’ ಎಂದಿದ್ದಾರೆ. ಜೊತೆಗೆ ಈ ಸಿನಿಮಾದ ಶೂಟಿಂಗ್​​ಗಾಗಿ ಸುಮಾರು 25 ಭಿನ್ನ-ಭಿನ್ನ ರೀತಿಯ ಸೆಟ್​​ಗಳನ್ನು ಸಹ ಅವರು ಹಾಕಿದ್ದರಂತೆ.

ಸಿನಿಮಾನಲ್ಲಿ ಫನ್ ಇದೆ, ಥ್ರಿಲ್ಲರ್ ಇದೆ, ಎಮೋಷನ್ಸ್ ಇವೆ, ಜೊತೆಗೆ ಆಕ್ಷನ್, ಡ್ಯಾನ್ಸ್ ಸಹ ಇದೆ ಎಂದಿರುವ ಹೇಮಂತ್ ರಾವ್, ತಾವು ವಿಶೇಷವಾಗಿ ಈ ಸಿನಿಮಾದ ಆಕ್ಷನ್ ಬಗ್ಗೆ ಹೆಚ್ಚು ಜಾಗೃತೆ ವಹಿಸಿ ಶೂಟ್ ಮಾಡಿರುವುದಾಗಿ ಹೇಳಿದ್ದಾರೆ ಅಲ್ಲದೆ, ಸಿನಿಮಾಕ್ಕಾಗಿ ಒಂದು ಡ್ಯಾನ್ಸ್ ಹಾಡನ್ನು ಸಹ ಶೂಟ್ ಮಾಡಿದ್ದು ಅದರ ಅನುಭವವೂ ಅದ್ಭುತವಾಗಿತ್ತು. ಆ ಹಾಡು ಸಹ ಬಲು ಚೆನ್ನಾಗಿ ಮೂಡಿ ಬಂದಿದೆ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಕರಾವಳಿ’ ಸಿನಿಮಾ ವಿವಾದ: ಪ್ರಜ್ವಲ್ ದೇವರಾಜ್ ಪರ ನಿಂತ ಮೇಘನಾ ರಾಜ್ – Kannada News | Karavali Kannada Movie Controversy Meghana Raj Sarja supports Prajwal Devaraj

ಗುರುದತ್ ಗಾಣಿಗ ಅವರು ನಿರ್ದೇಶನ ಮಾಡಿರುವ ‘ಕರಾವಳಿ’ ಸಿನಿಮಾ (Karavali Movie) ಬಿಡುಗಡೆ ಸಮಯದಲ್ಲಿ ವಿವಾದ ಆಗಿದೆ. ಈ ಚಿತ್ರದ ನಟ ಪ್ರಜ್ವಲ್ ದೇವರಾಜ್ (Prajwal Devaraj) ಅವರು ಸಂಭಾವನೆ ಕಿರಿಕ್ ಕಾರಣದಿಂದ ಡಬ್ಬಿಂಗ್ ಮಾಡಿಲ್ಲ ಎಂದು ಚಿತ್ರತಂಡ ಆರೋಪಿಸಿದೆ. ಪ್ರಜ್ವಲ್ ಅವರ ಅಭಿಮಾನಿಗಳು ಟ್ರೇಲರ್ ಬಿಡುಗಡೆ ವೇಳೆ ಗಲಾಟೆ ಮಾಡಿದ್ದರಿಂದ ವಿವಾದ ಶುರುವಾಯಿತು. ನಿರ್ದೇಶಕ ಗುರುದತ್ ಮತ್ತು ನಟ ಪ್ರಜ್ವಲ್ ಅವರು ಪರಸ್ಪರ ಆರೋಪ, ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದಾರೆ. ಈ ವಿಚಾರದಲ್ಲಿ ಪ್ರಜ್ವಲ್ ಅವರ ಸ್ನೇಹಿತೆ, ನಟಿ ಮೇಘನಾ ರಾಜ್ (Meghana Raj Sarja) ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ಪ್ರಜ್ವಲ್ ಅನಗತ್ಯ ಕಿರಿಕ್ ಮಾಡಲ್ಲ’

ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಿರುವ ನಟಿ ಮೇಘನಾ ರಾಜ್ ಅವರು ಪ್ರಜ್ವಲ್ ದೇವರಾಜ್ ಬಗ್ಗೆ ಮಾತನಾಡಿದ್ದಾರೆ. ‘ಪ್ರಜ್ವಲ್ ದೇವರಾಜ್ ನನ್ನ ಬಾಲ್ಯದ ಗೆಳೆಯ. ಪ್ರಜ್ವಲ್​ನ ನಾನು ಈಗ ನೋಡಿರುವುದಲ್ಲ. ನಾನು 4-5 ವರ್ಷದವಳಾಗಿದ್ದಾಗಿನಿಂದಲೇ ನೋಡಿದ್ದೇನೆ. ಅಂದಿನಿಂದ ಇಂದಿನ ತನಕ ಅವರಲ್ಲಿ ನಾನು ನೋಡಿದ ಒಂದು ವಿಷಯ ಏನೆಂದರೆ, ಅವರು ಸಭ್ಯವಾದ ವ್ಯಕ್ತಿ. ಯಾವುದೇ ವಿವಾದಕ್ಕೆ ಅವರು ತಲೆ ಹಾಕಿಲ್ಲ. ಅನಗತ್ಯವಾದ ಯಾವುದೇ ಕಿರಿಕ್ ಮಾಡಿಲ್ಲ. ಪ್ರತಿ ಬಾರಿ ಯಾರಿಗಾದರೂ ಅವರಿಂದ ಸಹಾಯ ಆಗಬೇಕಿದ್ದರೆ ಅವರು ಮುಂದೆ ಬರುತ್ತಾರೆ’ ಎಂದಿದ್ದಾರೆ ಮೇಘನಾ.

‘ಅಂಥ ಮಾತು ಕೇಳಿದ್ರೆ ಬೇಜಾರಾಗುತ್ತೆ’

‘ಅಂತಹ ವ್ಯಕ್ತಿ ಒಂದು ಚಿತ್ರದಲ್ಲಿ ನಟಿಸುವಾಗ ಯಾವ ರೀತಿ ಬದ್ಧತೆ ತೋರಿಸಬಹುದು ಎಂಬುದು ನಿಮಗೇ ಗೊತ್ತಾಗುತ್ತದೆ. ನನಗೆ ಪ್ರಜ್ವಲ್ ಅವರು ವೈಯಕ್ತಿಕವಾಗಿ ಮಾತ್ರವಲ್ಲ, ವೃತ್ತಿಪರವಾಗಿ ಕೂಡ ಗೊತ್ತು. ಅವರ ಜೊತೆ ನಾನು ಎರಡು ಸಿನಿಮಾ ಮಾಡಿದ್ದೇನೆ. ಆ ಎರಡು ಸಿನಿಮಾದಲ್ಲೂ ನಾನು ಅವರ ಬದ್ಧತೆ, ಶಿಸ್ತು ನೋಡಿದ್ದೇನೆ. ಪ್ರತಿ ಬಾರಿ ಅವರು ನನ್ನ ಬಳಿ ತಮ್ಮ ಸಿನಿಮಾ ಜರ್ನಿ ಬಗ್ಗೆ ಮಾತನಾಡಬೇಕಾದರೆ ಪ್ರೀತಿಯಿಂದ, ಪ್ರೊಫೆಷನಲ್ ಆಗಿ ಮಾತನಾಡಿದ್ದಾರೆ. ಅವರು ಫಿಲ್ಮಿ ಫ್ಯಾಮಿಲಿಯಿಂದ ಬಂದವರು. ಸಿನಿಮಾರಂಗದ ಎಲ್ಲ ಕಷ್ಟಗಳನ್ನು ಅವರು ಬಹಳ ಹತ್ತಿರದಿಂದ ನೋಡಿದ್ದಾರೆ. ಅವರು ಕೂಡ ಒಬ್ಬ ನಿರ್ಮಾಪಕರು. ಅಂತಹ ವ್ಯಕ್ತಿ ಬಗ್ಗೆ ಕೆಲವು ಮಾತುಗಳು ಕೇಳ್ಪಟ್ಟಾಗ ಬಹಳ ಬೇಜಾರು ಆಗುತ್ತದೆ’ ಎಂದು ಮೇಘನಾ ರಾಜ್ ಹೇಳಿದ್ದಾರೆ.

‘ಯಾವುದೇ ಕಪ್ಪು ಚುಕ್ಕಿ ಇಲ್ಲ’

‘ಪ್ರಜ್ವಲ್​ನ ಕೆಲವರು ಈಗ ನೋಡಿರಬಹುದು. ಆದರೆ ವೈಯಕ್ತಿಕವಾಗಿ ಬಹಳಷ್ಟು ವರ್ಷಗಳಿಂದ ನಾವು ನೋಡುತ್ತಾ ಬಂದಿದ್ದೇವೆ. ಇಷ್ಟು ವರ್ಷ ಅವರ ಬಗ್ಗೆ ಇಲ್ಲದೇ ಇರುವ ಕಪ್ಪು ಚುಕ್ಕೆ ಈಗ ಯಾಕೆ ಬರಬೇಕು? ಈ ಪ್ರಶ್ನೆ ನಮಗೆಲ್ಲರಿಗೂ ಕಾಡುತ್ತದೆ. ಅವರ ಸ್ನೇಹಿತೆಯಾಗಿ ನಾನು ನಿಮ್ಮೆಲ್ಲರಲ್ಲಿ ಕೇಳಿಕೊಳ್ಳುವುದು ಇಷ್ಟೇ. ಪ್ರಜ್ವಲ್ ಬಗ್ಗೆ ಯಾರೂ ನಿಮಗೆ ಹೇಳಬೇಕಾದ ಅವಶ್ಯಕತೆ ಇಲ್ಲ. ಅವರ ಸಿನಿಜರ್ನಿಯನ್ನು ನೀವೆಲ್ಲರೂ ನೋಡಿದ್ದೀರಿ. ಎಷ್ಟೋ ಅಭಿಮಾನಿಗಳು ಖುದ್ದಾಗಿ ಭೇಟಿ ಮಾಡಿ ಅವರ ವ್ಯಕ್ತಿತ್ವದ ಬಗ್ಗೆ ತಿಳಿದುಕೊಂಡಿದ್ದೀರಿ. ಯಾರು ಏನೇ ಹೇಳಿದರೂ ಅವರಲ್ಲಿ ನೀವು ನಂಬಿಕೆ ಇಡಬೇಕು ಅಂತ ನಾನು ಕೇಳಿಕೊಳ್ಳುತ್ತೇನೆ’ ಎಂದಿದ್ದಾರೆ ಮೇಘನಾ.

ಇದನ್ನೂ ಓದಿ: ಪ್ರಜ್ವಲ್ ದೇವರಾಜ್ ವಾಯ್ಸ್ ಇಲ್ಲದೇ ಬಿಡುಗಡೆ ಆದ ‘ಕರಾವಳಿ’ ಟ್ರೇಲರ್ ಹೇಗಿದೆ ನೋಡಿ..

‘ನನಗೆ ಕರಾವಳಿ ಸಿನಿಮಾ ಬಗ್ಗೆ ಹೆಮ್ಮೆ ಇದೆ. ಈ ಸಿನಿಮಾದ ಕಥೆ ಕೇಳಲು ನೀವೂ ಬನ್ನಿ ಅಂತ ನನ್ನನ್ನು ಮತ್ತು ಪನ್ನಗಾಭರಣ ಅವರನ್ನು ಪ್ರಜ್ವಲ್ ಕರೆದಿದ್ದರು. ಆದರೆ ಬೇರೆ ಕೆಲಸ ಇದ್ದ ಕಾರಣ ನಮಗೆ ಹೋಗಲು ಆಗಿರಲಿಲ್ಲ. ಅವರು ಈ ಕಥೆ ಕೇಳಿದ ತಕ್ಷಣ ಎಗ್ಸೈಟೆಡ್ ಆಗಿದ್ದರು. ತಮ್ಮ ವೃತ್ತಿಜೀವನಕ್ಕೆ ಇದು ಬಹಳ ಮುಖ್ಯವಾದ ಪಾತ್ರ ಅಂತ ಅವರು ಹೇಳಿದ್ದರು. ಅಂದು ಅವರು ಈ ಸಿನಿಮಾ ಬಗ್ಗೆ ಎಷ್ಟು ಅಭಿಮಾನ ಇಟ್ಟುಕೊಂಡಿದ್ದರೋ ಇಂದು ಕೂಡ ಅಷ್ಟೇ ಅಭಿಮಾನ ಹೊಂದಿದ್ದಾರೆ. ಇಂದಿಗೂ ಅವರು ಈ ಚಿತ್ರಕ್ಕೆ ಬೆಂಬಲ ನೀಡುತ್ತಾರೆ. ಇದು ಪ್ರಜ್ವಲ್ ದೇವರಾಜ್ ಅವರ ಸಿನಿಮಾ. ಅವರ ಬಗ್ಗೆ ಯಾರು ಏನೇ ಅಂದರೂ ಕನ್ನಡ ಕಲಾಭಿಮಾನಿಗಳು ಅವರಿಗೆ ಬೆಂಬಲ ನೀಡುತ್ತಾ ಬಂದಿದ್ದೀರಿ. ಅದೇ ಬೆಂಬಲ ಮುಂದುವರಿಯಲಿ’ ಎಂದು ಮೇಘನಾ ರಾಜ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bank of India Recruitment: ಬ್ಯಾಂಕ್ ಆಫ್ ಇಂಡಿಯಾದಲ್ಲಿ ಭರ್ಜರಿ ಉದ್ಯೋಗವಕಾಶ; 779 ಕ್ರೆಡಿಟ್ ಆಫೀಸರ್ ಹುದ್ದೆಗೆ ನೇಮಕಾತಿ! – Kannada News | Bank of India Recruitment 2026: 779 Credit Officer Posts Announced

ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗವಕಾಶImage Credit source: Getty Images

ಬ್ಯಾಂಕ್ ಆಫ್ ಇಂಡಿಯಾ (BOI) 2026ನೇ ಸಾಲಿಗೆ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ದೇಶದ ಪ್ರಮುಖ ಬ್ಯಾಂಕಿಂಗ್ ಸಂಸ್ಥೆಗಳಲ್ಲಿ ಒಂದಾದ ಬ್ಯಾಂಕ್ ಆಫ್ ಇಂಡಿಯಾ, ಒಟ್ಟು 779 ಕ್ರೆಡಿಟ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಬ್ಯಾಂಕಿಂಗ್ ವಲಯದಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ.

ಶೈಕ್ಷಣಿಕ ವಿದ್ಯಾರ್ಹತೆ:

ಕ್ರೆಡಿಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪದವಿ (Degree), ಸ್ನಾತಕೋತ್ತರ ಪದವಿ (Post-graduate Degree) ಅಥವಾ CA (ಚಾರ್ಟರ್ಡ್ ಅಕೌಂಟೆಂಟ್) / CFA (ಚಾರ್ಟರ್ಡ್ ಫೈನಾನ್ಷಿಯಲ್ ಅನಲಿಸ್ಟ್) ವಿದ್ಯಾರ್ಹತೆಯನ್ನು ಹೊಂದಿರಬೇಕು. ಇಲಾಖೆಯ ನಿಯಮಗಳ ಪ್ರಕಾರ ನಿರ್ದಿಷ್ಟ ವಿಷಯಗಳಲ್ಲಿನ ಪದವಿಗಳಿಗೆ ಆದ್ಯತೆ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಸೂಚಿಸಲಾಗಿದೆ.

ವಯೋಮಿತಿ:

ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 18 ವರ್ಷಗಳು ಮತ್ತು ಗರಿಷ್ಠ ವಯಸ್ಸು 40 ವರ್ಷಗಳು. ಆದಾಗ್ಯೂ, ಬ್ಯಾಂಕ್ ಆಫ್ ಇಂಡಿಯಾ ನಿಯಮಗಳ ಪ್ರಕಾರ, ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಇತರೆ ಹಿಂದುಳಿದ ವರ್ಗಗಳು (OBC), ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ನಿಖರವಾದ ವಯೋಮಿತಿ ಸಡಿಲಿಕೆ ವಿವರಗಳಿಗಾಗಿ ಅಧಿಸೂಚನೆಯನ್ನು ನೋಡುವುದು ಅತ್ಯಗತ್ಯ.

ವೇತನ ಶ್ರೇಣಿ:

ಆಯ್ಕೆಯಾದ ಕ್ರೆಡಿಟ್ ಆಫೀಸರ್ ಹುದ್ದೆಯ ಅಭ್ಯರ್ಥಿಗಳಿಗೆ ಅತ್ಯುತ್ತಮ ವೇತನ ಪ್ಯಾಕೇಜ್ ಲಭ್ಯವಿರುತ್ತದೆ. ಮಾಸಿಕ ವೇತನವು 64,820 ರಿಂದ 1,20,940 ರೂ. ರಷ್ಟಿರುತ್ತದೆ. ಈ ವೇತನ ಶ್ರೇಣಿಯು ಮೂಲ ವೇತನ, ಭತ್ಯೆಗಳು ಮತ್ತು ಇತರೆ ಸೌಲಭ್ಯಗಳನ್ನು ಒಳಗೊಂಡಿರುತ್ತದೆ, ಇದು ಬ್ಯಾಂಕಿಂಗ್ ವಲಯದಲ್ಲಿ ಉತ್ತಮ ಜೀವನಶೈಲಿಯನ್ನು ಒದಗಿಸುತ್ತದೆ.

ಆಯ್ಕೆ ಪ್ರಕ್ರಿಯೆ:

ಕ್ರೆಡಿಟ್ ಆಫೀಸರ್ ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆಯು ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲಿಗೆ, ಆನ್‌ಲೈನ್ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅಂತಿಮ ಆಯ್ಕೆ ಪಟ್ಟಿ ಸಿದ್ಧಪಡಿಸಲಾಗುತ್ತದೆ.

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 30-06-2026.
  • ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 20-07-2026.

ಅರ್ಜಿ ಸಲ್ಲಿಸುವ ವಿಧಾನ:

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮೊದಲು, ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಎಲ್ಲಾ ಸೂಚನೆಗಳನ್ನು ಪಾಲಿಸಬೇಕು. ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು, ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸುವುದು ಅವಶ್ಯಕ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

IND vs ENG: 14 ವರ್ಷಗಳ ನಂತರ ಭಾರತದ ವಿರುದ್ಧ ಟಿ20 ಸರಣಿ ಗೆದ್ದ ಇಂಗ್ಲೆಂಡ್‌ – Kannada News | India’s T20 Shocker: England Series Loss Ends 14 Year Run, Iyer’s Captaincy Under Fire

ಐರ್ಲೆಂಡ್ ಹಾಗೂ ಇಂಗ್ಲೆಂಡ್‌ ಪ್ರವಾಸದಲ್ಲಿ ಟೀಂ ಇಂಡಿಯಾ (Team India ) ಈ ರೀತಿಯ ಪ್ರದರ್ಶನ ನೀಡುತ್ತದೆ ಎಂದು ಯಾರೂ ಕೂಡ ಊಹಿಸಿರಲಿಲ್ಲ. ಹಾಲಿ ಟಿ20 ಚಾಂಪಿಯನ್ ಎನಿಸಿಕೊಂಡಿರುವ ಭಾರತ ತಂಡದಲ್ಲಿ ಟಿ20 ಸ್ಪೆಷಲಿಸ್ಟ್​​ಗಳೇ ತುಂಬಿ ತುಳುಕುತ್ತಿದ್ದಾರೆ. ಹೀಗಾಗಿ ಐರ್ಲೆಂಡ್ ತಂಡವನ್ನು ಟೀಂ ಇಂಡಿಯಾ ಸುಲಭವಾಗಿ ಮಣಿಸುತ್ತದೆ ಮತ್ತು ಇಂಗ್ಲೆಂಡ್‌ ವಿರುದ್ಧವೂ ತನ್ನ ಅಜೇಯ ಓಟವನ್ನು ಮುಂದುವರೆಸುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಈ ಎರಡು ಸರಣಿಗಳಲ್ಲಿ ಟೀಂ ಇಂಡಿಯಾದ ಬಂಡವಾಳ ಬಟಾಬಯಲಾಗಿದೆ. ಐಪಿಎಲ್​ನಲ್ಲಿ ಮಿಂಚಿದವರಿಗೆ ವಿದೇಶಿ ನೆಲದಲ್ಲಿ ತೀವ್ರ ಮುಖಭಂಗವಾಗಿದೆ. ಇದರ ಪರಿಣಾಮವಾಗಿ ಟೀಂ ಇಂಡಿಯಾ ಕೂಡ ಬರೋಬ್ಬರಿ 14 ವರ್ಷಗಳ ನಂತರ ಇಂಗ್ಲೆಂಡ್‌ ವಿರುದ್ಧ ಟಿ20 ಸರಣಿ ಸೋತ ಬೇಡದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದೆ.

14 ವರ್ಷಗಳ ಅಜೇಯ ಓಟಕ್ಕೆ ಬ್ರೇಕ್

ವಾಸ್ತವವಾಗಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯಗಳ ಟಿ20 ಸರಣಿ 2012 ರ ಡಿಸೆಂಬರ್​ನಿಂದ ಪ್ರಾರಂಭವಾಯಿತು. ಉಭಯ ತಂಡಗಳ ನಡುವೆ ನಡೆದ ಮೊದಲ ಸರಣಿಯು 1-1 ರ ಡ್ರಾದಲ್ಲಿ ಕೊನೆಗೊಂಡಿತ್ತು. ಅದರ ನಂತರ, ಎರಡೂ ತಂಡಗಳ ನಡುವೆ ನಡೆದ ಪ್ರತಿಯೊಂದು ಟಿ20 ಸರಣಿಯನ್ನು ಭಾರತ ಗೆದ್ದುಕೊಂಡಿದೆ. 2012 ಮತ್ತು 2026 ರ ನಡುವೆ, ಎರಡೂ ದೇಶಗಳ ನಡುವೆ ಒಟ್ಟು ಆರು ಟಿ20 ಸರಣಿಗಳು ನಡೆದಿವೆ. ಇದರಲ್ಲಿ ಟೀಂ ಇಂಡಿಯಾ ಐದು ಸರಣಿಗಳನ್ನು ಗೆದ್ದುಕೊಂಡರೆ, ಒಂದು ಸರಣಿ ಡ್ರಾದಲ್ಲಿ ಕೊನೆಗೊಂಡಿತ್ತು.

ಆದರೆ ಎರಡೂ ತಂಡಗಳ ನಡುವೆ ನಡೆದ ಏಳನೇ ಟಿ20 ಸರಣಿಯಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾವನ್ನು ಹೀನಾಯವಾಗಿ ಸೋಲಿಸಿರುವ ಇಂಗ್ಲೆಂಡ್‌ ತಂಡ 3-0 ಅಂತರದಿಂದ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಈ ಮೂಲಕ ಟೀಂ ಇಂಡಿಯಾದ ಕಳೆದ 14 ವರ್ಷಗಳ ಅಜೇಯ ಓಟಕ್ಕೆ ತೆರೆ ಬಿದ್ದಿದೆ.

IND vs ENG: ‘ನಾನು ಸಂತೋಷವಾಗಿದ್ದೇನೆ’; ಹೀನಾಯ ಸೋಲಿನ ನಂತರ ಶ್ರೇಯಸ್ ಹೇಳಿದ್ದಿದು

ಅಯ್ಯರ್ ನಾಯಕತ್ವದಲ್ಲಿ ಗೆಲುವು ಮರಿಚಿಕೆ

ಶ್ರೇಯಸ್ ಅಯ್ಯರ್ ಭಾರತ ಟಿ20 ತಂಡದ ನಾಯಕನಾಗಿ ಅಧಿಕಾರವಹಿಸಿಕೊಂಡ ಬಳಿಕ ತಂಡ ಗೆಲುವಿಗಾಗಿ ಹಾತೋರೆಯುವಂತ್ತಾಗಿದೆ. ಇದುವರೆಗೆ ಅಯ್ಯರ್ ನಾಯಕತ್ವದಲ್ಲಿ 6 ಪಂದ್ಯಗಳನ್ನಾಡಿದ್ದು, ಆಡಿರುವ 5 ಪಂದ್ಯಗಳಲ್ಲೂ ಭಾರತ ಸೋತಿದೆ. ಉಳಿದಂತೆ ಒಂದು ಪಂದ್ಯ ಮಳೆಯಿಂದ ರದ್ದಾಗಿದೆ. ಇಂಗ್ಲೆಂಡ್‌ ವಿರುದ್ಧದ ಸೋಲನ್ನು ಅರಗಿಸಿಕೊಳ್ಳಬಹುದಾದರೂ, ಐರ್ಲೆಂಡ್ ವಿರುದ್ಧದ ವೈಟ್ ವಾಶ್ ಮುಖಭಂಗವನ್ನು ಭಾರತೀಯರಿಗೆ ಮರೆಯಲಾಗುತ್ತಿಲ್ಲ. ಪ್ರಸ್ತುತ ಸತತ ಸೋಲುಗಳಿಂದ ಕಂಗೆಟ್ಟಿರುವ ಭಾರತ ಟಿ20 ತಂಡ ಮುಂದಿನ ಜಿಂಬಾಬ್ವೆ ಪ್ರವಾಸದಲ್ಲಿ ಯಾವ ರೀತಿಯ ಪ್ರದರ್ಶನ ನೀಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version