ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು? – Kannada News | Kj george Clarify about His resignation to Minister Post

ಬೆಂಗಳೂರು, (ಜನವರಿ 29): ಕರ್ನಾಟಕ ಕಾಂಗ್ರೆಸ್ (Karnataka Congress)​ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ವಾ? ಮೊದಲೇ ನಾಯಕತ್ವ ಬದಲಾವಣೆ ವಿಚಾರವಾಗಿ ಎದ್ದಿರುವ ಗೊಂದಲದ ಮಧ್ಯೆ ಸಿಎಂ ಆಪ್ತ ಸಚಿವ ಕೆ.ಜೆ.ಜಾರ್ಜ್ (kj george) ರಾಜೀನಾಮೆ ನೀಡಿದ್ದಾರೆ ಎನ್ನುವ ವಿಚಾರ ಭಾರಿ ಸಂಚಲನ ಮೂಡಿಸಿದೆ. ಹೌದು… ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಡೆದ ಇಂಥಾದ್ದೊಂದು ಅತಿದೊಡ್ಡ ಬೆಳವಣಿಗೆಯನ್ನ ಟಿವಿ9 ಇಂದು ಬ್ರೇಕ್ ಮಾಡಿದೆ. ಈ ವರದಿ ರಾಜ್ಯ ರಾಜಕಾರಣದಲ್ಲಷ್ಟೇ ಅಲ್ಲ ರಾಷ್ಟ್ರದಲ್ಲೂ ದೊಡ್ಡ ಸಂಚಲನ ಎಬ್ಬಿಸಿದೆ. ವಿಧಾನಸಭೆಯಲ್ಲೂ ಟಿವಿ9 ವರದಿ…

Read More

ಆರ್ಥಿಕ ಸಮೀಕ್ಷೆ 2026; ಜಿಡಿಪಿ, ಹಣದುಬ್ಬರ, ಎಫ್​ಡಿಐ, ಇನ್ಷೂರೆನ್ಸ್ ಇತ್ಯಾದಿ ಬಗ್ಗೆ ವರದಿಯಲ್ಲಿ ಹೇಳಿದ್ದಿದು – Kannada News | Economic Survey 2026, key highlights from GDP projection to Infrastructure importance

ಇನ್​ಫ್ರಾಸ್ಟ್ರಕ್ಚರ್ ಅಗತ್ಯ: ಇನ್​ಫ್ರಾಸ್ಟ್ರಕ್ಚರ್ ಎಂದರೆ ರಸ್ತೆ, ರೈಲು ನಿರ್ಮಾಣ ಮಾತ್ರವಾಗೇ ಉಳಿದಿಲ್ಲ. ಡಿಜಿಟಲ್ ಸಿಸ್ಟಂ, ಕ್ಲೀನ್ ಎನರ್ಜಿ, ಜಲ ನಿರ್ವಹಣೆ, ಹೊಸ ತಂತ್ರಜ್ಞಾನಗಳು ಇತ್ಯಾದಿಯೆಲ್ಲವೂ ಇನ್​ಫ್ರಾಸ್ಟ್ರಕ್ಚರ್ ಎನಿಸಿಕೊಳ್ಳುತ್ತವೆ. ಭಾರತದ ಮುಂದಿನ ಬೆಳವಣಿಗೆಗೆ ಪ್ರಮುಖ ಆಧಾರ ಸ್ತಂಭಗಳಲ್ಲಿ ಇನ್​ಫ್​ರಾಸ್ಟ್ರಕ್ಚರ್ ಕೂಡ ಒಂದಾಗಿರುತ್ತದೆ ಎಂಬುದನ್ನು ಆರ್ಥಿಕ ಸಮೀಕ್ಷೆಯಲ್ಲಿ ತಿಳಿಸಲಾಗಿದೆ. Source link

Read More

ಸರ್ಕಾರದಿಂದ ಮಹತ್ವದ ಆದೇಶ: ಕರ್ನಾಟಕ ನೌಕರರು ಈ ಬಟ್ಟೆ ಧರಿಸುವುದು ಕಡ್ಡಾಯ – Kannada News | Khadi clothes is mandatory for Karnataka government employees: Important order from the government

ಬೆಂಗಳೂರು, ಜನವರಿ 29: ರಾಜ್ಯ ಸರ್ಕಾರಿ ನೌಕರರಿಗೆ (government employees) ಖಾದಿ (Khadi) ಬಟ್ಟೆ ಬಳಕೆ ಕಡ್ಡಾಯಗೊಳಿಸಲಾಗಿದೆ. ಆ ಮೂಲಕ ಸರ್ಕಾರ ವಸ್ತ್ರಸಂಹಿತೆ ಜಾರಿಗೊಳಿಸಲು ಮುಂದಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್​​ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರತಿ ತಿಂಗಳ ಮೊದಲ ಶನಿವಾರ ಖಾದಿ ಬಟ್ಟೆ ಧರಿಸಲು ನಿರ್ಧರಿಸಲಾಗಿದೆ. ಏಪ್ರಿಲ್ 24ರಂದು ಈ ಯೋಜನೆಗೆ ಚಾಲನೆ ದೊರೆಯಲಿದೆ. ಖಾದಿ ಉತ್ಪನ್ನಗಳನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ನಿಗಮ-ಮಂಡಳಿ, ಪ್ರಾಧಿಕಾರ,…

Read More

Personality Test: ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ನಿಗೂಢ ವ್ಯಕ್ತಿತ್ವ, ಗುಣ ಸ್ವಭಾವ ಹೇಗಿರುತ್ತೆ ಗೊತ್ತಾ? – Kannada News | Personality Test: Do you know what the mysterious personality of those born in February?

ಪ್ರತಿಯೊಬ್ಬರ ವ್ಯಕ್ತಿತ್ವವೂ (Personality) ಭಿನ್ನ ವಿಭಿನ್ನವಾಗಿರುತ್ತದೆ. ಕೆಲವರು ತುಂಬಾ ಶಾಂತ ಸ್ವಭಾವದವರಾದರೇ ಇನ್ನೂ ಕೆಲವರು ಸಿಕ್ಕಾಪಟ್ಟೆ ಕೋಪ ಮಾಡಿಕೊಳ್ಳುವವರಾಗಿರುತ್ತಾರೆ. ಅದರಲ್ಲೂ ಮಂಗಳವಾರ ಜನಿಸಿದವರೂ ಸಿಕ್ಕಾಪಟ್ಟೆ ಕೋಪಿಷ್ಟರು ಎನ್ನಲಾಗುತ್ತದೆ. ವ್ಯಕ್ತಿಯ ಈ ಎಲ್ಲಾ ಗುಣಸ್ವಭಾವಗಳನ್ನು ಹುಟ್ಟಿದ ದಿನ, ದಿನಾಂಕ, ಘಳಿಗೆಯ ಆಧಾರದ ಮೇಲೆ  ಜ್ಯೋತಿಷ್ಯಶಾಸ್ತ್ರ, ಸಂಖ್ಯಾಶಾಸ್ತ್ರದ ಮುಖಾಂತರ ತಿಳಿಯಬಹುದಾಗಿದೆ. ಹುಟ್ಟಿದ ದಿನ ಮಾತ್ರವಲ್ಲದೆ ಹುಟ್ಟಿದ ತಿಂಗಳ ಆಧಾರ ಮೇಲೂ ವ್ಯಕ್ತಿಯ ನಿಗೂಢ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಯಬಹುದಂತೆ. ಫೆಬ್ರವರಿ ತಿಂಗಳು ಇನ್ನೇನೂ ಆರಂಭವಾಗುವ ಈ ಹೊತ್ತಿನಲ್ಲಿ ಫೆಬ್ರವರಿ ತಿಂಗಳಿನಲ್ಲಿ…

Read More

ಭೂತ-ಪ್ರೇತಗಳ ‘ರಕ್ಕಸಪುರ’ದಲ್ಲಿ ರಾಜ್ ಬಿ ಶೆಟ್ರು ರಕ್ಷಕನಾ-ರಾಕ್ಷಸನಾ? – Kannada News | Raj B Shetty starrer Rakkasapuradol movie trailer released

ರಾಜ್ ಬಿ ಶೆಟ್ಟಿ (Raj B Shetty) ಪ್ರಸ್ತುತ ಕನ್ನಡ ಚಿತ್ರರಂಗದ ಬಲು ವರ್ಸಟೈಲ್ ನಟ, ಭಿನ್ನ ಭಿನ್ನ ರೀತಿಯ ಪಾತ್ರಗಳಲ್ಲಿ ನಟಿಸುತ್ತಾ ಸಾಗುತ್ತಿದ್ದಾರೆ. ಹೀರೋ, ಕಮಿಡಿಕ್ ಹಿರೋ, ವಿಲನ್, ಸಾಮಾನ್ಯ ವ್ಯಕ್ತಿ, ಅಂಗವಿಕಲ ಹೀಗೆ ನಾನಾ ರೀತಿಯ ಪಾತ್ರಗಳಲ್ಲಿ ರಾಜ್ ಬಿ ಶೆಟ್ಟಿ ನಟಿಸುತ್ತಿದ್ದಾರೆ. ಇದೀಗ ಶೆಟ್ಟರು ಮತ್ತೊಂದು ಭಿನ್ನ ರೀತಿಯ ಪಾತ್ರದಲ್ಲಿ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ‘ರಕ್ಕಸಪುರದೊಳ್’ ಹೆಸರಿನ ಮಾಸ್ ಥ್ರಿಲ್ಲರ್ ಸಿನಿಮಾನಲ್ಲಿ ನಾಯಕನಾಗಿ ರಾಜ್ ಬಿ ಶೆಟ್ಟಿ ನಟಿಸಿದ್ದು, ಸಿನಿಮಾದ ಟ್ರೈಲರ್ ಇಂದು…

Read More

ಲಕ್ಕುಂಡಿಯಲ್ಲಿ 3 ತಲೆಯ ನಾಗರಕಲ್ಲು ಪ್ರಾಚ್ಯಾವಶೇಷ ಪತ್ತೆ,ಮತ್ತೆ ಘಟ ಸರ್ಪದ ಆತಂಕ – Kannada News | Gold treasure: One More Serpent Seal Stone Discovered during Excavation In Lakkundi

ಗದಗ, (ಜನವರಿ 29): ಐತಿಹಾಸಿಕ ಲಕ್ಕುಂಡಿಯಲ್ಲಿ (Lakkundi) ಉತ್ಖನನ ಮುಂದುವರೆದಿದ್ದು, ದಿನಕ್ಕೆ ಒಂದಲ್ಲ ಒಂದು ಪ್ರಾಚೀನ ಕಾಲದ ಹಳೇ ವಸ್ತುಗಳು ಪತ್ತೆಯಾಗುತ್ತಲೇ ಇವೆ. ಅಪರೂಪದ ಕಲಾಕೃತಿಗಳು, ಪುಟ್ಟ ಶಿವಲಿಂಗ ಹಾಗೂ ನಾಗಮಣಿಯೊಂದಿಗೆ ಕೆತ್ತಿದ ನಾಗರ ಹಾವಿನ ಹೆಡೆಯ ಶಿಲಾಕೃತಿ ಪತ್ತೆಯಾಗಿದ್ದವು. ಇದೀಗ ಇಂದು (ಜನವರಿ 29) ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ 12ನೇ ದಿನ ಉತ್ಖನನ ಕಾರ್ಯದಲ್ಲಿ ಮತ್ತೊಂದು ‌ ಮೂರು ಹೆಡೆಯ ಘಟ ಸರ್ಪ ಶಿಲೆ ಪತ್ತೆಯಾಗಿದ್ದು, ತೀವ್ರ ಕುತೂಹಲ ಕೆರಳಿಸಿದೆ. ಹೀಗೆ ಮೇಲಿಮದ…

Read More

ಜಗ್ಗೇಶ್ ಕಾರು ಚಾಲಕ ಪದ್ಮನಾಭ ನಿಧನ; ಕಂಬನಿ ಮಿಡಿದ ನಟ – Kannada News | Actor Jaggesh car driver Padmanabha dies due to Cardiac Arrest

ಎರಡೂವರೆ ದಶಕಗಳಿಗೂ ಹೆಚ್ಚು ಕಾಲ ನಟ ಜಗ್ಗೇಶ್ ಅವರ ಕಾರು ಚಾಲಕನಾಗಿ (Jaggesh Car Driver) ಕೆಲಸ ಮಾಡಿದ್ದ ಪದ್ಮನಾಭ ಅವರು ನಿಧನರಾಗಿದ್ದಾರೆ. ಈ ವಿಷಯವನ್ನು ಜಗ್ಗೇಶ್ ಅವರು ಸೋಶಿಯಲ್ ಮೀಡಿಯಾ ಮೂಲಕ ಖಚಿತಪಡಿಸಿದ್ದಾರೆ. ಪದ್ಮನಾಭ ಅವರಿಗೆ 54 ವರ್ಷ ವಯಸ್ಸಾಗಿತ್ತು. ಹೃದಯ ಸ್ತಂಭನದಿಂದ (Cardiac Arrest) ಅವರು ಕೊನೆಯುಸಿರು ಎಳೆದಿದ್ದಾರೆ ಎಂಬುದು ತಿಳಿದು ಬಂದಿದೆ. ಮೃತರ ಆತ್ಮಕ್ಕೆ ಜಗ್ಗೇಶ್ ಅವರು ಶಾಂತಿ ಕೋರಿದ್ದಾರೆ. ಪದ್ಮನಾಭ ಅವರ ಅಂತ್ಯಕ್ರಿಯೆಯಲ್ಲಿ ಜಗ್ಗೇಶ್ (Jaggesh) ಭಾಗಿ ಆಗಿದ್ದಾರೆ. ಫೋಟೋಗಳನ್ನು ಸೋಶಿಯಲ್…

Read More

ಜಿದ್ದಿಗೆ ಬಿದ್ದ ಸಿದ್ದರಾಮಯ್ಯ-ಡಿಕೆಶಿ: ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಚುನಾವಣೆ ಮುಂದೂಡಿಕೆ – Kannada News | Apex bank chairman election postponed For Siddaramaiah And Dk Shivakumar Cold War

ತುಮಕೂರು, (ಜನವರಿ 29): ರಾಜ್ಯ ರಾಜಕಾರಣದ ಕೇಂದ್ರಬಿಂದುವಾಗಿರುವ ಸಹಕಾರ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ಚುನಾವಣೆ (Apex bank chairman election) ಈಗ ಸಿದ್ದರಾಮಯ್ಯ (Siddaramaiah) ಮತ್ತು ಡಿ.ಕೆ. ಶಿವಕುಮಾರ್ಗೆ ಪ್ರತಿಷ್ಠೆಯಾಗಿದೆ. ಸಿದ್ದರಾಮಯ್ಯ ಬಣದಿಂದ ಕೆ.ಎನ್. ರಾಜಣ್ಣ ಮತ್ತೊಮ್ಮೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಬೇಕೆಂದು ಪಟ್ಟು ಹಿಡಿದಿದ್ದಾರೆ. ಇನ್ನೊಂದೆಡೆ ಡಿಕೆ ಶಿವಕುಮಾರ್ ಬಣದ ನಾಯಕರು ತಾವು ಆಗುತ್ತೇವೆಂದು ಹಠಕ್ಕೆ ಬಿದ್ದಿದ್ದಾರೆ. ಹೀಗಾಗಿ ಸಿಎಂ ಡಿಸಿಎಂ ಬಣ ರಾಜಕೀಯ ತೀವ್ರ ಸ್ವರೂಪ ಪಡೆದುಕೊಂಡಿದ್ದರಿಂದ ಇಂದು (ಜನವರಿ 29) ನಡೆಯಬೇಕಿದ್ದ ಅಪೆಕ್ಸ್…

Read More

Silver Price: 4 ಲಕ್ಷ ರೂಪಾಯಿ ತಲುಪಿದ 1 ಕೆಜಿ ಬೆಳ್ಳಿ ಬೆಲೆ! ಈಗ ಹೂಡಿಕೆ ಮಾಡಿದ್ರೆ ಹೇಗೆ? ಇಲ್ಲಿದೆ ತಜ್ಞರು ಕೊಟ್ಟ ಸಲಹೆ – Kannada News | Silver Price Hits Record Rs 4 Lakh Per KG: Is it the Right Time to Invest? Silver Investment Tips and Expert Analysis

ಪ್ರತಿ ಕೆಜಿ ಬೆಳ್ಳಿ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 4 ಲಕ್ಷ ರೂಪಾಯಿ ಗಡಿ ದಾಟಿದೆ. ಕೇವಲ ಎಂಟು ತಿಂಗಳ ಹಿಂದೆ (ಮೇ ಅಂತ್ಯದಲ್ಲಿ) ಪ್ರತಿ ಕೆಜಿಗೆ 1 ಲಕ್ಷ ರೂಪಾಯಿ ಇದ್ದ ಬೆಲೆ, ಈಗ ಸುಮಾರು 3 ಲಕ್ಷ ರೂಪಾಯಿಯಷ್ಟು ಏರಿಕೆಯಾಗಿದೆ. ವಿಶ್ವದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಯುದ್ಧಗಳು, ಅಮೆರಿಕ-ಚೀನಾ ಸುಂಕ ಸಮರ ಮತ್ತು ಗ್ರೀನ್‌ಲ್ಯಾಂಡ್ ವಿವಾದದಿಂದಾಗಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ ಚಿನ್ನ ಮತ್ತು ಬೆಳ್ಳಿಯನ್ನು ಆಯ್ದುಕೊಳ್ಳುತ್ತಿದ್ದಾರೆ. ಆಧುನಿಕ ತಂತ್ರಜ್ಞಾನದಲ್ಲಿ ಬೆಳ್ಳಿ ಅನಿವಾರ್ಯವಾಗಿದೆ. ವಿಶೇಷವಾಗಿ ಸೋಲಾರ್…

Read More

ಸುಳ್ವಾಡಿ ವಿಷ ಪ್ರಸಾದ ಕೇಸ್​ನ ಎ1 ಆರೋಪಿಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ನಿರ್ಬಂಧ – Kannada News | Chamarajanagar: Sulvadi poison prasad case; A1 accused banned from Male Mahadeshwar hill

ಚಾಮರಾಜನಗರ, ಜನವರಿ 29: 2018ರಲ್ಲಿ ನಡೆದಿದ್ದ ಸುಳ್ವಾಡಿ ವಿಷ ಪ್ರಸಾದ ದುರಂತ ಪ್ರಕರಣದ (sulvadi Poison Case) ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿಗೆ (immadi mahadevaswamy) ಮಲೆ ಮಹದೇಶ್ವರ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಿ ಹನೂರು ತಹಶೀಲ್ದಾರ್​ ಚೈತ್ರಾ ಗುರುವಾರ ಆದೇಶ ಹೊರಡಿಸಿದ್ದಾರೆ. ಆರೋಪಿ ವಿರುದ್ಧ ಪ್ರತಿಭಟನೆ ಸಾಧ್ಯತೆ ಹಿನ್ನೆಲೆ ಪ್ರವೇಶ ನಿರ್ಬಂಧಿಸಲಾಗಿದ್ದು, ಸದ್ಯ ಪೊಲೀಸರು ಇಮ್ಮಡಿ ಮಹದೇವಸ್ವಾಮಿಯನ್ನ ಬೆಂಗಳೂರಿಗೆ ವಾಪಸ್​ ಕಳಿಸಿದ್ದಾರೆ. ಘಟನೆ ಹಿನ್ನೆಲೆ  ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಕಿಚ್ಚಗುತ್ತಿ ಮಾರಮ್ಮ ದೇವಾಲಯದ…

Read More