ಬುಲೆಟ್ ರೈಲು ಕಾರಿಡಾರ್ ವೇಗದ ಪ್ರಗತಿ; ಜಪಾನ್​ನಿಂದ ಇ10 ಬರುವಷ್ಟರಲ್ಲೇ ಭಾರತ ನಿರ್ಮಿತ ಟ್ರೈನ್ ಬಳಕೆಗೆ ನಿರ್ಧಾರ – Kannada News | Mumbai Ahmedabad bullet train may start fast, as India and Japan agree to begin with Indian made trainsets

ನವದೆಹಲಿ, ಜುಲೈ 17: ಭಾರತದ ಮೊದಲ ಬುಲೆಟ್ ಟ್ರೈನ್ ಯೋಜನೆಯಾದ ಮುಂಬೈ-ಅಹಮದಾಬಾದ್ ಹೈ-ಸ್ಪೀಡ್ ರೈಲು (MAHSR) ಯೋಜನೆಗೆ ಸಂಬಂಧಿಸಿದಂತೆ ಅತ್ಯಂತ ಮಹತ್ವದ ಜಂಟಿ ನಿರ್ಧಾರವೊಂದನ್ನು ಭಾರತ ಮತ್ತು ಜಪಾನ್ ಸರ್ಕಾರಗಳು ಕೈಗೊಂಡಿವೆ. ಕೇಂದ್ರ ಸರ್ಕಾರದ ಮೂಲಗಳ ಪ್ರಕಾರ, ಜಪಾನ್‌ನೊಂದಿಗಿನ ದ್ವಿಪಕ್ಷೀಯ ಮಾತುಕತೆಗಳು ಅತ್ಯಂತ ಯಶಸ್ವಿಯಾಗಿ ಮುನ್ನಡೆದಿದ್ದು, ದೇಶದ ಮೊದಲ ಬುಲೆಟ್ ರೈಲನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಓಡಿಸಲು ಇತ್ತೀಚಿನ ಸಭೆಯಲ್ಲಿ ಉಭಯ ದೇಶಗಳು ಸಮ್ಮತಿಸಿವೆ.

ಮೊದಲ ಹಂತದ ಕಾರಿಡಾರ್ 2027 ರಲ್ಲೇ ಮುಕ್ತಾಯ

ಮುಂಬೈ-ಅಹಮದಾಬಾದ್ ನಡುವಿನ ಬುಲೆಟ್ ಟ್ರೈನ್ ಯೋಜನೆಯ ಸಿವಿಲ್ ಕಾಮಗಾರಿಗಳು (ಪಿಲ್ಲರ್ ಮತ್ತು ಟ್ರ್ಯಾಕ್ ಅಳವಡಿಕೆ) ಪ್ರಸ್ತುತ ಗುಜರಾತ್ ವಲಯದಲ್ಲಿ ಅತ್ಯಂತ ವೇಗವಾಗಿ ಪ್ರಗತಿ ಸಾಧಿಸುತ್ತಿವೆ. ಯೋಜನೆಯ ಮೊದಲ ಆದ್ಯತೆಯ ವಿಭಾಗವು (First Section) 2027 ರ ವೇಳೆಗೆ ಸಂಚರಿಸಲು ಸಂಪೂರ್ಣ ಸಜ್ಜಾಗಲಿದೆ.

ಇದನ್ನೂ ಓದಿ: ಹೊಸ ಐಆರ್​ಸಿಟಿಸಿ ವೆಬ್​ಸೈಟ್ ಸಿದ್ಧ; ಬೀಟಾ ಆವೃತ್ತಿ ಬಿಡುಗಡೆ; ರೈಲ್ವೆ ಟಿಕೆಟ್ ಬುಕಿಂಗ್ ಇನ್ಮುಂದೆ ಸರಳ

ಜಪಾನ್‌ನ ‘E10 ಸರಣಿ’ ತಂತ್ರಜ್ಞಾನ ತಡವಾಗಲಿದೆ

ಜಪಾನ್ ದೇಶವು ಭಾರತೀಯ ಹವಾಮಾನ ಮತ್ತು ಪರಿಸರಕ್ಕೆ ಹೊಂದುವಂತಹ ಅತ್ಯಾಧುನಿಕ ‘ಇ10 ಸರಣಿ’ (E10 Series) ಬುಲೆಟ್ ರೈಲುಗಳನ್ನು ಭಾರತಕ್ಕೆ ಪೂರೈಸಲು ಒಪ್ಪಿಕೊಂಡಿದೆ. ಆದರೆ, ಈ ಅತ್ಯಾಧುನಿಕ ರೈಲುಗಳು ಪ್ರಸ್ತುತ ಜಪಾನ್‌ನಲ್ಲಿ ಇನ್ನು ಕೂಡ ಸಂಶೋಧನೆ ಮತ್ತು ಅಭಿವೃದ್ಧಿ (Under Development) ಹಂತದಲ್ಲಿದ್ದು, ಅವುಗಳ ವಿತರಣೆಯು 2030 ರ ದಶಕದ ಆರಂಭದಲ್ಲಿ (Early 2030s) ಮಾತ್ರ ಸಾಧ್ಯವಾಗಲಿದೆ.

ಭಾರತೀಯ ಬುಲೆಟ್ ಟ್ರೈನ್‌ಗೆ ಜಂಟಿ ಒಪ್ಪಿಗೆ

ಒಂದೆಡೆ 2027 ರಲ್ಲೇ ಟ್ರ್ಯಾಕ್ ಸಿದ್ಧವಾಗುತ್ತಿದ್ದು, ಮತ್ತೊಂದೆಡೆ ಜಪಾನ್ ರೈಲುಗಳು ಬರಲು 2030 ರವರೆಗೆ ಕಾಯಬೇಕಾದ ಪರಿಸ್ಥಿತಿ ಇತ್ತು. ಆದ್ದರಿಂದ, ಯೋಜನೆಯನ್ನು ವಿಳಂಬ ಮಾಡದೆ ‘ಸಾಧ್ಯವಾದಷ್ಟು ಬೇಗ ಹೈ-ಸ್ಪೀಡ್ ರೈಲು ಸೇವೆ ಆರಂಭಿಸಬೇಕು’ ಎಂಬ ಸಾಮಾನ್ಯ ಗುರಿಯೊಂದಿಗೆ ಉಭಯ ದೇಶಗಳು ಹೊಸ ಹಾದಿ ಕಂಡುಕೊಂಡಿವೆ. 2027 ರಲ್ಲಿ ಕಾರಿಡಾರ್ ಉದ್ಘಾಟನೆಯಾದ ತಕ್ಷಣ, ಆರಂಭಿಕ ಕಾರ್ಯಾಚರಣೆಯನ್ನು ಸ್ವದೇಶಿ ತಂತ್ರಜ್ಞಾನದ ಭಾರತೀಯ ಹೈ-ಸ್ಪೀಡ್ ರೈಲುಗಳ (Indian High-Speed Train) ಮೂಲಕವೇ ಆರಂಭಿಸಲು ಇತ್ತೀಚಿನ ಮಾತುಕತೆಯಲ್ಲಿ ಜಂಟಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಬೆಂಗಳೂರು ಮೂಲದ ಬೆಮೆಲ್ ಸಂಸ್ಥೆ ಈ ಸೆಮಿ ಹೈಸ್ಪೀಡ್ ಟ್ರೈನ್​ಸೆಟ್​ಗಳನ್ನು (ಬಿ28, ಬಿ35) ನಿರ್ಮಿಸುತ್ತಿದೆ. ಇವುಗಳು 250ರಿಂದ 400 ಕಿಮೀವರೆಗಿನ ವೇಗದಲ್ಲಿ ಸಂಚರಿಸಬಲ್ಲುವು. ಜಪಾನ್​ನ ಇ10 ಸರಣಿಯ ರೈಲುಗಳು 400ಕ್ಕೂ ಹೆಚ್ಚು ಕಿಮೀ ವೇಗದಲ್ಲಿ ಓಡಬಲ್ಲುವು ಎಂಬುದು ಪ್ರಯೋಗಗಳಿಂದ ಸಾಬೀತಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಗಂಭೀರ್- ಕೊಹ್ಲಿ ನಡುವೆ ಮುನಿಸು; ಮೌನ ಮುರಿದ ಬ್ಯಾಟಿಂಗ್‌ ಕೋಚ್ – Kannada News | Team India: Virat Kohli, Gautam Gambhir Rift? Batting Coach Denies All Reports

ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ಮತ್ತು ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (Virat Kohli) ನಡುವೆ ಬಿರುಕು ಮೂಡಿದೆ ಎಂಬ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ಇದಕ್ಕೆ ಪೂರಕವಾಗಿ ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಅಭ್ಯಾಸದ ವೇಳೆ ಡಗೌಟ್​ನಲ್ಲಿ ಕುಳಿತಿರುವ ವೇಳೆ ಇವರಿಬ್ಬರ ನಡುವೆ ಯಾವುದೇ ಮಾತುಕತೆ ನಡೆಯುತ್ತಿಲ್ಲ ಎಂದು ವರದಿಯಾಗಿದೆ. ಅಲ್ಲದೆ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯಕ್ಕೂ ಮುಂಚಿನ ಅಭ್ಯಾಸದ ಸಮಯದಲ್ಲಿ ಇವರಿಬ್ಬರು ಪರಸ್ಪರ ಮಾತನಾಡದೇ ಇರುವುದು ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗಿತ್ತು. ಇದನ್ನು ಗಮನಿಸಿದವರು ಇಬ್ಬರು ನಡುವೆ ಏನೂ ಸರಿಯಿಲ್ಲ ಎಂಬ ಅಭಿಪ್ರಾಯಕ್ಕೆ ಬಂದಿದ್ದರು. ಆದರೀಗ ಹರಿದಾಡುತ್ತಿರುವ ವದಂತಿಗಳ ಬಗ್ಗೆ ತಂಡದ ಬ್ಯಾಟಿಂಗ್ ಕೋಚ್ ಸೀತಾಂಶು ಕೊಟಕ್ ಮೌನ ಮುರಿದಿದ್ದಾರೆ.

ವಿರಾಟ್, ಗಂಭೀರ್ ನಡುವೆ ಬಿರುಕು?

ಕಾರ್ಡಿಫ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟೀಂ ಇಂಡಿಯಾದ ಬ್ಯಾಟಿಂಗ್ ಕೋಚ್ ಸೀತಾಂಶು ಕೊಟಕ್ ಈ ವದಂತಿಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದರು. ವಿರಾಟ್ ಕೊಹ್ಲಿ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ನಡುವಿನ ಭಿನ್ನಾಭಿಪ್ರಾಯದ ಬಗ್ಗೆ ಕೇಳಿದಾಗ, ಕೊಟಕ್ ಮುಗುಳ್ನಗುತ್ತಾ, ‘ವಿರಾಟ್ ಮತ್ತು ಗೌತಮ್ ಇಂದು ಕನಿಷ್ಠ 10 ಬಾರಿ ಮಾತನಾಡಿರಬೇಕು. ಪರಸ್ಪರ ಮಾತನಾಡಲು ಅವರಿಗೆ ಯಾವುದೇ ಸೇತುವೆ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಇಂತಹ ಆಧಾರರಹಿತ ವದಂತಿಗಳು ಹೇಗೆ ಹುಟ್ಟಿಕೊಳ್ಳುತ್ತವೆ ಎಂದು ತನಗೆ ಅರ್ಥವಾಗುತ್ತಿಲ್ಲ. ಡ್ರೆಸ್ಸಿಂಗ್ ಕೋಣೆಯಲ್ಲಿನ ವಾತಾವರಣ ಪರಿಪೂರ್ಣವಾಗಿದೆ ಮತ್ತು ಇಬ್ಬರ ನಡುವೆ ಎಲ್ಲವೂ ಸರಿಯಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಹಾಗೆಯೇ ಕಾರ್ಡಿಫ್ ಏಕದಿನ ಪಂದ್ಯದ ಉದಾಹರಣೆಯನ್ನು ಉಲ್ಲೇಖಿಸಿ ಕೋಟಕ್, ವಿರಾಟ್ ಕೊಹ್ಲಿ ಮತ್ತು ಮುಖ್ಯ ಕೋಚ್ ಗಂಭೀರ್ ನಡುವೆ ಉತ್ತಮ ಬಾಂಧವ್ಯವಿದೆ. ಇದಕ್ಕೆ ಉದಾಹರಣೆಯಾಗಿ ವಿರಾಟ್ ಕೊಹ್ಲಿ ಮೈದಾನದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ, ಅವರು ಡ್ರೆಸ್ಸಿಂಗ್ ಕೋಣೆ ಮತ್ತು ಮುಖ್ಯ ಕೋಚ್ ಗಂಭೀರ್‌ಗೆ ಕ್ರೀಸ್‌ನಿಂದಲೇ ಒಂದು ಪ್ರಮುಖ ಸಂದೇಶವನ್ನು ಕಳುಹಿಸಿದರು. ಕಾರ್ಡಿಫ್ ಪಿಚ್ ಸ್ವಲ್ಪ ನಿಧಾನವಾಗಿತ್ತು ಮತ್ತು ಶಾರ್ಟ್-ಪಿಚ್ ಚೆಂಡುಗಳು ಸುಲಭವಾಗಿ ಬ್ಯಾಟ್‌ಗೆ ಬರುತ್ತಿರಲಿಲ್ಲ ಎಂದು ಕೊಹ್ಲಿ ಕ್ರೀಸ್​ನಿಂದಲೇ ನಮಗೆ ಸಂದೇಶ ಕಳುಹಿಸಿದ್ದರು ಎಂದಿದ್ದಾರೆ.

ಸತತ ಸೋಲುಗಳು; ಗಂಭೀರ್, ಅಯ್ಯರ್ ಜೊತೆಗೆ ಬಿಸಿಸಿಐ ಪರಿಶೀಲನಾ ಸಭೆ

2ನೇ ಏಕದಿನ ಪಂದ್ಯದಲ್ಲಿ ಅರ್ಧಶತಕ

ಎರಡೂ ತಂಡಗಳ ನಡುವೆ ನಡೆದ ಸರಣಿಯ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ 4 ವಿಕೆಟ್‌ಗಳಿಂದ ಸೋತಿತು. ಆದಾಗ್ಯೂ, ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಉತ್ತಮ ಇನ್ನಿಂಗ್ಸ್ ಆಡಿದರು. ಅವರು 66 ಎಸೆತಗಳಲ್ಲಿ 8 ಬೌಂಡರಿಗಳನ್ನು ಒಳಗೊಂಡಂತೆ 65 ರನ್ ಗಳಿಸಿದರು. ವಿರಾಟ್ ಕ್ರೀಸ್‌ನಲ್ಲಿರುವವರೆಗೂ, ಟೀಂ ಇಂಡಿಯಾ ದೊಡ್ಡ ಸ್ಕೋರ್‌ನ ಹಾದಿಯಲ್ಲಿತ್ತು. ಆದಾಗ್ಯೂ, ಅವರ ವಿಕೆಟ್ ಪತನದ ಬಳಿಕ ತಂಡದ ಇನ್ನಿಂಗ್ಸ್ ಕುಸಿಯಿತು. ಇದರ ಪರಿಣಾಮವಾಗಿ ಸರಣಿ 1-1 ರಲ್ಲಿ ಸಮಬಲಗೊಂಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Lokayukta Recruitment 2026: ಕರ್ನಾಟಕ ಲೋಕಾಯುಕ್ತ ಇಲಾಖೆಯಲ್ಲಿ ಉದ್ಯೋಗವಕಾಶ; ಪರೀಕ್ಷೆಯಿಲ್ಲದೆ ನೇರ ನೇಮಕಾತಿ, ಪಿಯುಸಿ ಆಗಿದ್ರೆ ಸಾಕು – Kannada News | Karnataka Lokayukta Recruitment 2026: Clerk and Typist Jobs, No Exam! Apply by Aug 17

ಸರ್ಕಾರಿ ಉದ್ಯೋಗದ ಹುಡುಕಾಟದಲ್ಲಿರುವ ಕರ್ನಾಟಕದ ಯುವಕ-ಯುವತಿಯರಿಗೆ ಸುವರ್ಣಾವಕಾಶವೊಂದು ಒದಗಿಬಂದಿದೆ. ಕರ್ನಾಟಕ ಲೋಕಾಯುಕ್ತ ಇಲಾಖೆಯು ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ವಿವಿಧ ಹುದ್ದೆಗಳ ಭರ್ತಿಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಖಾಲಿ ಇರುವ ಕ್ಲರ್ಕ್ (Clerk) ಮತ್ತು ಟೈಪಿಸ್ಟ್ (Typist) ಹುದ್ದೆಗಳನ್ನು ಭರ್ತಿ ಮಾಡಲು ಈ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಆಸಕ್ತರು ತಕ್ಷಣವೇ ಅರ್ಜಿ ಸಲ್ಲಿಸಬಹುದಾಗಿದೆ.

ಪರೀಕ್ಷೆಯಿಲ್ಲದೆ ನೇರ ನೇಮಕಾತಿ, ಒಟ್ಟು 26 ಹುದ್ದೆಗಳು:

ಈ ನೇಮಕಾತಿಯ ಅತ್ಯಂತ ಪ್ರಮುಖ ವೈಶಿಷ್ಟ್ಯವೆಂದರೆ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಲಿಖಿತ ಪರೀಕ್ಷೆ ಇರುವುದಿಲ್ಲ. ಒಟ್ಟು 26 ಹುದ್ದೆಗಳ ಭರ್ತಿಗಾಗಿ ಈ ನೇಮಕಾತಿ ನಡೆಯುತ್ತಿದ್ದು, ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನದ (Direct Interview) ಮೂಲಕ ಆಯ್ಕೆ ಮಾಡಲಾಗುತ್ತದೆ. ಯಾವುದೇ ಪರೀಕ್ಷೆಯ ಆತಂಕವಿಲ್ಲದೆ ಸರ್ಕಾರಿ ಹುದ್ದೆ ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಇದೊಂದು ಅತ್ಯುತ್ತಮ ಅವಕಾಶವಾಗಿದೆ.

ಆಕರ್ಷಕ ಮಾಸಿಕ ವೇತನ ಶ್ರೇಣಿ:

ಲೋಕಾಯುಕ್ತ ಇಲಾಖೆಯ ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಅತ್ಯುತ್ತಮ ವೇತನವನ್ನು ನಿಗದಿಪಡಿಸಲಾಗಿದೆ. ಹುದ್ದೆಗಳಿಗೆ ನಿಯೋಜನೆಗೊಳ್ಳುವ ಅಭ್ಯರ್ಥಿಗಳಿಗೆ ಮಾಸಿಕವಾಗಿ ಕನಿಷ್ಠ ರೂ. 34,100 ರಿಂದ ಗರಿಷ್ಠ ರೂ. 67,600 ರವರೆಗೆ ಆಕರ್ಷಕ ವೇತನ ಶ್ರೇಣಿ ಸಿಗಲಿದೆ.

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ ದ್ವಿತೀಯ ಪಿಯುಸಿ (2nd PUC) ಅಥವಾ ಅದಕ್ಕೆ ತತ್ಸಮಾನ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು. ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು ಮತ್ತು ಗರಿಷ್ಠ ವಯೋಮಿತಿಯನ್ನು 40 ವರ್ಷಗಳಾಗಿ ನಿಗದಿಪಡಿಸಲಾಗಿದೆ. ಇದರೊಂದಿಗೆ, ಇಲಾಖೆಯ ನಿಯಮಗಳ ಪ್ರಕಾರ ಅರ್ಹ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಕೂಡ ಇರಲಿದೆ.

ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ಉದ್ಯೋಗ 2026: 10ನೇ ತರಗತಿ ಪಾಸಾದವರಿಗೆ ಸರ್ಕಾರಿ ಉದ್ಯೋಗದ ಅವಕಾಶ

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:

ಈ ಹುದ್ದೆಗಳಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಗಸ್ಟ್ 17ರ ಒಳಗಾಗಿ ತಮ್ಮ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಕೊನೆಯ ದಿನಗಳಲ್ಲಿ ವೆಬ್‌ಸೈಟ್ ಸರ್ವರ್ ಬ್ಯುಸಿ ಇರುವ ಸಾಧ್ಯತೆ ಇರುವುದರಿಂದ, ಆಸಕ್ತರು ಕೊನೆಯ ದಿನಾಂಕದವರೆಗೆ ಕಾಯದೆ ಕೂಡಲೇ ಅರ್ಜಿ ಸಲ್ಲಿಸುವುದು ಒಳಿತು.

ಅರ್ಜಿ ಸಲ್ಲಿಸುವುದು ಹೇಗೆ?

ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು, ಅಧಿಕೃತ ಅಧಿಸೂಚನೆಯನ್ನು ವೀಕ್ಷಿಸಲು ಹಾಗೂ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕರ್ನಾಟಕ ಲೋಕಾಯುಕ್ತ ಇಲಾಖೆಯ ಅಧಿಕೃತ ವೆಬ್‌ಸೈಟ್ lokayukta.karnataka.gov.in ಗೆ ಭೇಟಿ ನೀಡಿ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On – 3:17 pm, Fri, 17 July 26

Source link

ಮುಗಿಲು ಮುಟ್ಟಿದ ಲಾವಣ್ಯ ತಾಯಿಯ ಆಕ್ರಂದನ: ನನ್ನ ಮಗಳು ನನಗೆ ಬೇಕು, ಕೊಲೆಗಡುಕನನ್ನು ನನ್ನ ಮುಂದೇ ನಿಲ್ಲಿಸಿ – Kannada News | Accused Chethan kills Lavanya in Bantwal as Brother in Law Listens

ಮಂಗಳೂರು, ಜು.17: ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್‌ನಲ್ಲಿ ನಡೆದ ಯುವತಿ ಲಾವಣ್ಯಳ ಕ್ರೂರ ಹತ್ಯೆ ಇಡೀ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ. ಈ ಅಮಾನವೀಯ ಕೃತ್ಯದಿಂದಾಗಿ ಲಾವಣ್ಯ ಅವರ ಇಡೀ ಕುಟುಂಬ ಇಂದು ತೀವ್ರ ಆಘಾತದಲ್ಲಿದ್ದು, ಸಂತ್ರಸ್ತೆಯ ತಾಯಿಯ ಆಕ್ರಂದನ ನೆರೆದಿದ್ದವರ ಕಣ್ಣುಗಳನ್ನು ಒದ್ದೆಯಾಗಿಸಿದೆ. ಈ ವೇಳೆ ಲಾವಣ್ಯ ಅವರ ತಾಯಿ, ಕೊಲೆಗಡುಕನ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. “ನನ್ನ ಮಗಳು ನನಗೆ ಬೇಕು… ಅವನನ್ನು ನನ್ನೆದುರಿಗೇ ಕರೆದುಕೊಂಡು ಬನ್ನಿ, ನಾನೇ ಅವನನ್ನು ಕೊಲೆ ಮಾಡುತ್ತೇನೆ. ಅವನು ಯಾವುದೇ ಕಾರಣಕ್ಕೂ ಜೀವಂತವಾಗಿ ಉಳಿಯಬಾರದು. ನನ್ನ ಮುಗ್ಧ ಮಗಳು ಆತನಿಗೆ ಅಂತಹದ್ದೇನು ಮಾಡಿದ್ದಳು? ನನ್ನ ಮಗಳಿಗೆ ಇಂತಹ ಕ್ರೂರ ಸ್ಥಿತಿ ತಂದಿಟ್ಟಿದ್ದಾನೆ, ಅವನಿಗೂ ಅದೇ ಸ್ಥಿತಿ ಬರಬೇಕು. ಅದೇ ಪರಿಸ್ಥಿತಿಯಲ್ಲಿ ನಾನು ಆತನನ್ನು ಕಣ್ಣಾರೆ ನೋಡಬೇಕು.” ಎಂದು ತೀವ್ರ ನೋವಿನಿಂದ ಲಾವಣ್ಯ ಅವರ ತಾಯಿ ಹೇಳಿಕೊಂಡಿದ್ದಾರೆ. ಕೇವಲ ಕುಟುಂಬಸ್ಥರು ಮಾತ್ರವಲ್ಲದೆ, ಇಡೀ ರಾಜ್ಯದ ಸಾರ್ವಜನಿಕ ವಲಯದಲ್ಲಿ ಈ ಘಟನೆಯ ವಿರುದ್ಧ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅಮಾಯಕ ಯುವತಿಯನ್ನು ಬಸ್ ನಿಲ್ದಾಣದಂತಹ ಸಾರ್ವಜನಿಕ ಸ್ಥಳದಲ್ಲೇ ಬರ್ಬರವಾಗಿ ಕೊಚ್ಚಿ ಕೊಂದಿರುವುದಕ್ಕೆ ಎಲ್ಲೆಡೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಿಕೆಶಿ ಸಚಿವ ಸಂಪುಟ ವಿಸ್ತರಣೆ: ಶೇ.60ರಷ್ಟು ಹೊಸ ಮುಖಗಳಿಗೆ ಮಣೆಹಾಕಲು ಹೈಕಮಾಂಡ್​​ ನಿರ್ಧಾರ – Kannada News | DK Shivakumar Cabinet Expansion: High Command Likely to Induct 60 Percent New Faces

ಬೆಂಗಳೂರು, ಜುಲೈ 17: ಕರ್ನಾಟಕ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹೈಕಮಾಂಡ್ ಮಹತ್ವದ ನಿರ್ಧಾರ ಕೈಗೊಂಡಿದೆ. ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸುಮಾರು ಶೇ.60ರಷ್ಟು ಹೊಸ ಮುಖಗಳಿಗೆ ಅವಕಾಶ ನೀಡಲುಚಿಂತನೆ ನಡೆಸಿದೆ. ಯುವ ಮತ್ತು ಕ್ರಿಯಾಶೀಲ ತಂಡವನ್ನು ರೂಪಿಸುವ ಉದ್ದೇಶವನ್ನು ವರಿಷ್ಠರು ಹೊಂದಿದ್ದಾರೆ ಎನ್ನಲಾಗಿದೆ. ಸಂಪುಟದಲ್ಲಿ ಸ್ಥಾನ ಪಡೆಯುವವರ ಆಯ್ಕೆಗೆ ಹಲವು ಮಾನದಂಡಗಳನ್ನು ಅನುಸರಿಸಲು ನಿರ್ಧರಿಸಲಾಗಿದೆ. ಜಾತಿ, ಸಮಾಜದ ಸ್ಥಿತಿಗತಿಗಳು, ಅಭ್ಯರ್ಥಿಗಳ ಹಿನ್ನೆಲೆ, ಶಿಕ್ಷಣ ಮತ್ತು ಅನುಭವ ಇವುಗಳಲ್ಲಿ ಸೇರಿವೆ. ಹೊಸಬರಿಗೆ ಅವಕಾಶ ನೀಡುವುದರಿಂದ ಪಕ್ಷಕ್ಕೆ ಹೊಸ ನಾಯಕತ್ವ ಸಿಗುತ್ತದೆ ಮತ್ತು ಅವರು ಪಕ್ಷದ ಆಸ್ತಿಯಾಗುತ್ತಾರೆ ಎಂಬ ಅಭಿಪ್ರಾಯ ವರಿಷ್ಠರಿಂದ ವ್ಯಕ್ತವಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹೊಸ ಚಾಲನಾ ಪರವಾನಗಿ ಮಾಡಿಸಬೇಕಾ? ಈ ರಾಜ್ಯದಲ್ಲಿ ಆಗಸ್ಟ್ 1ರಿಂದ ಹೊಸ ನಿಯಮ ಜಾರಿ – Kannada News | Driving Licence New Rules What changes will happen from August 1 in this State

ಮುಂಬೈ, ಜುಲೈ 17: ಮಹಾರಾಷ್ಟ್ರದ ಚಾಲನಾ ಪರವಾನಗಿ ನಿಯಮಗಳು ಆಗಸ್ಟ್ 1ರಿಂದ ಬದಲಾಗಲಿವೆ. ಇನ್ಮುಂದೆ ನಿವಾಸ ಪ್ರಮಾಣಪತ್ರವಿಲ್ಲದೆ ಚಾಲನಾ ಪರವಾನಗಿಯನ್ನು (Driving Licence) ನೀಡಲಾಗುವುದಿಲ್ಲ. ಮುಂದಿನ ತಿಂಗಳಿನಿಂದ ಚಾಲನಾ ಪರವಾನಗಿಗಳಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ ಈ ಪ್ರಮುಖ ಬದಲಾವಣೆಯನ್ನು ಮಾಡಲಿದೆ. ನೀವು ಮಹಾರಾಷ್ಟ್ರದಲ್ಲಿ ವಾಸಿಸುತ್ತಿದ್ದರೆ ಮತ್ತು ಡ್ರೈವಿಂಗ್ ಲೈಸೆನ್ಸ್ ಪಡೆಯುವ ಬಗ್ಗೆ ಯೋಚಿಸುತ್ತಿದ್ದರೆ ಈ ಹೊಸ ನಿಯಮಗಳನ್ನು ತಿಳಿದುಕೊಳ್ಳುವುದು ಉತ್ತಮ. ಮಹಾರಾಷ್ಟ್ರದಲ್ಲಿ ಚಾಲನಾ ಪರವಾನಗಿ ಪಡೆಯಲು ನಿವಾಸ ಪ್ರಮಾಣಪತ್ರವನ್ನು ಒದಗಿಸುವುದು ಕಡ್ಡಾಯವಾಗಿರುತ್ತದೆ.

ಈ ಪ್ರಸ್ತಾವನೆಗೆ ಅಂತಿಮ ಅನುಮೋದನೆ ದೊರೆತರೆ ಈ ಹೊಸ ನಿಯಮವು ಆಗಸ್ಟ್ 1ರಿಂದ ರಾಜ್ಯಾದ್ಯಂತ ಜಾರಿಗೆ ಬರಲಿದೆ. ಈ ಕ್ರಮವು ಸಂಪೂರ್ಣ ಪರವಾನಗಿ ನೀಡುವ ಪ್ರಕ್ರಿಯೆಯನ್ನು ಹೆಚ್ಚು ಸುರಕ್ಷಿತ ಮತ್ತು ವ್ಯವಸ್ಥಿತಗೊಳಿಸುತ್ತದೆ ಎಂದು ಸರ್ಕಾರ ಹೇಳಿದೆ. ಅಂದಹಾಗೆ, ಮಹಾರಾಷ್ಟ್ರ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಇತ್ತೀಚೆಗೆ ವಿಧಾನಸಭೆಯಲ್ಲಿ ಈ ಹೊಸ ನಿಯಮವನ್ನು ಪ್ರಸ್ತಾಪಿಸಿದ್ದರು. ರಾಜ್ಯ ಮಟ್ಟದಲ್ಲಿ ಪರವಾನಗಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪಾರದರ್ಶಕ ಮತ್ತು ಪರಿಣಾಮಕಾರಿಯಾಗಿಸಲು ಈ ಹೊಸ ನೀತಿಯನ್ನು ರೂಪಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಹೊಸ ನಿಯಮದ ಕರಡನ್ನು ಅಂತಿಮ ಅನುಮೋದನೆಗಾಗಿ ಕಾನೂನು ಮತ್ತು ನ್ಯಾಯ ಇಲಾಖೆಗೆ ಕಳುಹಿಸಲಾಗಿದೆ. ಇದಕ್ಕೆ ಹಸಿರು ನಿಶಾನೆ ಸಿಕ್ಕ ತಕ್ಷಣ, ಅದನ್ನು ತಕ್ಷಣವೇ ಜಾರಿಗೆ ತರಲಾಗುವುದು.

ಇದನ್ನೂ ಓದಿ: Driving Licence: ಸುಲಭವಾಗಿ ಆನ್‌ಲೈನ್‌ನಲ್ಲಿ ಡ್ರೈವಿಂಗ್ ಲೈಸೆನ್ಸ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

ಹೊಸ ನಿಯಮಗಳಲ್ಲಿ ಆಗಲಿರುವ ಬದಲಾವಣೆಗಳೇನು?:

ರಾಜ್ಯ ಸಾರಿಗೆ ಇಲಾಖೆಯು ಹೊಸ ಡ್ರೈವಿಂಗ್ ಲೈಸೆನ್ಸ್‌ಗೆ ಅರ್ಜಿ ಸಲ್ಲಿಸುವವರಿಂದ ಮಹಾರಾಷ್ಟ್ರದ ಮೂಲ ನಿವಾಸ ಪ್ರಮಾಣ ಪತ್ರವನ್ನು ಕೇಳಲು ಯೋಜಿಸುತ್ತಿದೆ. ಇದು ಜಾರಿಗೆ ಬಂದರೆ, ಹೊಸ ಚಾಲನಾ ಪರವಾನಗಿಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಪ್ರಮಾಣ ಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಬಹುದು. ಆದರೆ, ಈ ನಿಯಮಕ್ಕೆ ಸಂಬಂಧಿಸಿದಂತೆ ಇನ್ನು ಅಂತಿಮ ಅಧಿಕೃತ ಅಧಿಸೂಚನೆಯನ್ನು ಹೊರಡಿಸಲಾಗಿಲ್ಲ ಮತ್ತು ಅಧಿಕೃತ ಘೋಷಣೆಯ ನಂತರವಷ್ಟೇ ಇದು ಜಾರಿಗೆ ಬರಲಿದೆ. ಈ ನಿಯಮಗಳು ಮಹಾರಾಷ್ಟ್ರಕ್ಕೆ ಮಾತ್ರ ಅನ್ವಯವಾಗಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

IND vs ENG: ರೋಹಿತ್ ಶರ್ಮಾ ಬದಲಿಗೆ ಏಕದಿನ ತಂಡದಲ್ಲಿ ಯಾರಿಗೆ ಸಿಗಲಿದೆ ಅವಕಾಶ? – Kannada News | Rohit Sharma’s ODI Exit? yashasvi jaiswal Set to Replace Him for 2027 World Cup Preparations

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯೊಂದಿಗೆ ಟೀಂ ಇಂಡಿಯಾದ 2027ರ ಏಕದಿನ ವಿಶ್ವಕಪ್ (2027 World Cup) ತಯಾರಿಯೂ ಶುರುವಾಗಿದೆ. ಈ ಪ್ರವಾಸಕ್ಕೆ ಬಿಸಿಸಿಐ (BCCI) ಯಾವ ತಂಡವನ್ನು ಪ್ರಕಟಿಸಿತ್ತೋ ಭಾಗಶಃ ಆ ತಂಡವೇ 2027 ರ ಏಕದಿನ ವಿಶ್ವಕಪ್​ನಲ್ಲಿ ಕಾಣಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಇಂಗ್ಲೆಂಡ್‌ ಸರಣಿಯ ನಡುವೆ ಸ್ಫೋಟಕ ಮಾಹಿತಿಯೊಂದು ಟೀಂ ಇಂಡಿಯಾ ಪಾಳಯದಿಂದ ಹೊರಬಿದ್ದಿದೆ. ತಂಡದ ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ಏಕದಿನ ಕ್ರಿಕೆಟ್​ಗೂ ವಿದಾಯ ಹೇಳುತ್ತಿದ್ದು, ಲಾರ್ಡ್ಸ್‌ನಲ್ಲಿ ನಡೆಯಲಿರುವ ಕೊನೆಯ ಏಕದಿನ ಪಂದ್ಯ ರೋಹಿತ್ ವೃತ್ತಿ ಬದುಕಿನ ಕೊನೆಯ ಅಂತರರಾಷ್ಟ್ರೀಯ ಪಂದ್ಯವಾಗಲಿದೆ ಎಂದು ವರದಿಯಾಗಿದೆ. ವರದಿಯಂತೆ ರೋಹಿತ್ ನಿವೃತ್ತಿ ಘೋಷಿಸಿದರೆ ಏಕದಿನ ತಂಡದಲ್ಲಿ ಅವರ ಸ್ಥಾನವನ್ನು ತುಂಬುವವರು ಯಾರು ಎಂಬ ಪ್ರಶ್ನೆ ಮೂಡಿದೆ.

ವರದಿಗಳ ಪ್ರಕಾರ, ಬಿಸಿಸಿಐನ ಹಿರಿಯ ಆಯ್ಕೆ ಸಮಿತಿಯು ರೋಹಿತ್ ಶರ್ಮಾ ಅವರನ್ನು ಏಕದಿನ ತಂಡದಿಂದ ತೆಗೆದುಹಾಕಲು ನಿರ್ಧರಿಸಿದೆ. ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಯ ನಂತರ ಅವರನ್ನು ತಂಡದಿಂದ ಕೈಬಿಟ್ಟು ಬೇರೆಯವರಿಗೆ ಅವಕಾಶ ನೀಡಲು ಆಯ್ಕೆ ಮಂಡಳಿ ತೀರ್ಮಾನಿಸಿದೆ. ಅಲ್ಲದೆ ಈ ನಿರ್ಧಾರದ ಬಗ್ಗೆ ರೋಹಿತ್‌ಗೆ ಈಗಾಗಲೇ ತಿಳಿಸಲಾಗಿದ್ದು, ಭವಿಷ್ಯದ ಸಿದ್ಧತೆಗಳಿಗಾಗಿ ಅವರ ಬದಲಿಗಾಗಿ ಸಂಪೂರ್ಣ ಯೋಜನೆಯನ್ನು ಅಂತಿಮಗೊಳಿಸಲಾಗಿದೆ ಎಂದು ವರದಿಯಾಗಿದೆ.

ರೋಹಿತ್ ಸ್ಥಾನವನ್ನು ತುಂಬುವವರು ಯಾರು?

ಮಾಧ್ಯಮ ವರದಿಗಳ ಪ್ರಕಾರ, ಆಯ್ಕೆದಾರರು ರೋಹಿತ್ ಶರ್ಮಾ ಬದಲಿಗೆ 24 ವರ್ಷದ ಯಶಸ್ವಿ ಜೈಸ್ವಾಲ್ ಅವರನ್ನು ಪರಿಗಣಿಸಲು ನಿರ್ಧರಿಸಿದ್ದಾರೆ. 2027 ರ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಆಯ್ಕೆ ಸಮಿತಿಯು ಜೈಸ್ವಾಲ್ ಅವರನ್ನು ಈಗ ಆರಂಭಿಕ ಆಟಗಾರನನ್ನಾಗಿ ಆಡಿಸಲು ಬಯಸಿದೆ. ಆದ್ದರಿಂದ, ಇಂಗ್ಲೆಂಡ್ ಸರಣಿ ಮುಗಿದ ತಕ್ಷಣ ಯಶಸ್ವಿ ಜೈಸ್ವಾಲ್ ಅವರಿಗೆ ಏಕದಿನ ತಂಡದಲ್ಲಿ ನಿಯಮಿತ ಅವಕಾಶಗಳನ್ನು ನೀಡಲಾಗುವುದು, ಇದರಿಂದ ಅವರು ಮುಂಬರುವ ಏಕದಿನ ವಿಶ್ವಕಪ್​ಗೆ ಸಿದ್ಧರಾಗಬಹುದು.

ರೋಹಿತ್ ಕೊನೆಯ ಏಕದಿನ ಪಂದ್ಯ

2025 ರ ಚಾಂಪಿಯನ್ಸ್ ಟ್ರೋಫಿಯ ನಂತರ ರೋಹಿತ್ ಅವರನ್ನು ಏಕದಿನ ನಾಯಕತ್ವದಿಂದ ತೆಗೆದುಹಾಕಲಾಯಿತು ಎಂಬುದು ಗಮನಿಸಬೇಕಾದ ಸಂಗತಿ, ಇದು ಎಲ್ಲರನ್ನೂ ಅಚ್ಚರಿಗೊಳಿಸಿತು. ಅಂದಿನಿಂದ, 2027 ರ ವಿಶ್ವಕಪ್​ವರೆಗೆ ರೋಹಿತ್ ತಂಡದಲ್ಲಿ ಉಳಿಯುವುದು ಅನುಮಾನ ಎನ್ನಲಾಗುತ್ತಿತ್ತು. ಅದರಂತೆ ಲಾರ್ಡ್ಸ್‌ನಲ್ಲಿ ನಡೆಯುವ ಮೂರನೇ ಏಕದಿನ ಪಂದ್ಯ ರೋಹಿತ್ ಶರ್ಮಾ ಅವರ ಕೊನೆಯ ಏಕದಿನ ಪಂದ್ಯವಾಗುವ ಸಾಧ್ಯತೆಗಳಿವೆ. ಆದಾಗ್ಯೂ ಈ ಬಗ್ಗೆ ಬಿಸಿಸಿಐ ಆಗಲಿ ಅಥವಾ ರೋಹಿತ್ ಆಗಲಿ ಏನನ್ನು ಖಚಿತವಾಗಿ ಹೇಳಿಲ್ಲ. ಹೀಗಾಗಿ ಲಾರ್ಡ್ಸ್‌ನಲ್ಲಿ ನಡೆಯಲಿರುವ ಕೊನೆಯ ಏಕದಿನ ಪಂದ್ಯದ ಬಳಿಕ ಪರಿಸ್ಥಿತಿ ಸ್ಪಷ್ಟವಾಗಲಿದೆ.

ಏಕದಿನದಲ್ಲಿ ಜೈಸ್ವಾಲ್ ಪ್ರದರ್ಶನ ಹೇಗಿದೆ?

ಇನ್ನು ಏಕದಿನದಲ್ಲಿ ರೋಹಿತ್ ಶರ್ಮಾ ಅವರ ಸ್ಥಾನವನ್ನು ತುಂಬಲಿರುವ ಯಶಸ್ವಿ ಜೈಸ್ವಾಲ್ ಅವರ ಏಕದಿನ ಪ್ರದರ್ಶನದ ಬಗ್ಗೆ ಹೇಳುವುದಾದರೆ.. ಯಶಸ್ವಿ ಜೈಸ್ವಾಲ್ 2025 ರಲ್ಲಿ ಇದೇ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಏಕದಿನ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದರು. ಇದುವರೆಗೆ ಭಾರತ ಪರ ಒಟ್ಟು ಆರು ಏಕದಿನ ಪಂದ್ಯಗಳನ್ನು ಆಡಿರುವ ಜೈಸ್ವಾಲ್, 71.25 ರ ಸರಾಸರಿಯಲ್ಲಿ 285 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕಗಳು ಸೇರಿವೆ.

ಒಡಿಐನಿಂದಲೂ ರೋಹಿತ್​​ ಶರ್ಮಾ ನಿವೃತ್ತಿ? ಜುಲೈ 19ರಂದು ಲಾರ್ಡ್ಸ್‌ನಲ್ಲಿ ಹಿಟ್​​ಮ್ಯಾನ್​​ ಕೊನೆಯ ಪಂದ್ಯ?

ಮುಂದಿನ ವಿಶ್ವಕಪ್‌ಗೂ ಮುನ್ನ ಭಾರತ ತಂಡ ಸುಮಾರು 20 ಏಕದಿನ ಪಂದ್ಯಗಳನ್ನು ಆಡಬೇಕಾಗಿದೆ ಎಂಬುದು ಗಮನಿಸಬೇಕಾದ ಸಂಗತಿ. ಈ ಎಲ್ಲಾ ಪಂದ್ಯಗಳಲ್ಲಿ ಯಶಸ್ವಿ ಜೈಸ್ವಾಲ್ ಅವರನ್ನು ಆರಂಭಿಕ ಆಟಗಾರನಾಗಿ ಪ್ರಯತ್ನಿಸಲಾಗುತ್ತದೆ. ಭಾರತದ ಮುಂದಿನ ಏಕದಿನ ಸರಣಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿದ್ದು, ಈ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್ ರೋಹಿತ್ ಶರ್ಮಾ ಅವರನ್ನು ಬದಲಾಯಿಸಬಹುದು. ಇದರ ನಂತರ, ಭಾರತ ತಂಡ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಶ್ರೀಲಂಕಾ ಮತ್ತು ಜಿಂಬಾಬ್ವೆ ವಿರುದ್ಧ ಏಕದಿನ ಸರಣಿಗಳನ್ನು ತವರಿನಲ್ಲಿ ಆಡಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:01 pm, Fri, 17 July 26

Source link

Video: ಹೆರಿಗೆ ನೋವಿನಲ್ಲಿದ್ದ ಹೆಂಡ್ತಿ ಮೊಗದಲ್ಲಿ ನಗು ತರಿಸಲು ಡ್ಯಾನ್ಸ್ ಮಾಡಿದ ಗಂಡ – Kannada News | A husband who stood by his wife during labour pain and brought a smile to her face.

ಹೆರಿಗೆ (childbirth) ಅನ್ನೋದು ಹೆಣ್ಣಿಗೆ ಪುನರ್ಜನ್ಮವಿದ್ದಂತೆ. ಈ ಕ್ಷಣದಲ್ಲಿ ಪತಿಯು ತನ್ನ ಜತೆಗೆ ಇರಬೇಕು ಎಂದು ಬಯಸುವುದು ಸಹಜ. ಇಲ್ಲೊಬ್ಬ ವ್ಯಕ್ತಿ ತನ್ನ ಕರ್ತವ್ಯವನ್ನು ಚಾಚು ತಪ್ಪದೆ ಮಾಡಿದ್ದಾನೆ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ. ಆಸ್ಪತ್ರೆಯಲ್ಲಿ ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಪತ್ನಿಯ ಮೊಗದಲ್ಲಿ ನಗು ತರಿಸಲು ಡ್ಯಾನ್ಸ್ ಮಾಡಿದ್ದಾನೆ. ಪತಿಯ ಡ್ಯಾನ್ಸ್ ನೋಡಿ ಆಕೆ ಮನಸ್ಸು ತುಂಬಿ ನಕ್ಕಿದ್ದಾಳೆ. ಈ ವಿಡಿಯೋ ಸದ್ಯ ನೆಟ್ಟಿಗರ ಗಮನ ಸೆಳೆದಿದೆ.

ದೀಪಿಕಾ ವಿಎಸ್‌ ರಾವ್‌ (Deepika vsrao) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಮಡದಿ ಆಸ್ಪತ್ರೆಯಲ್ಲಿ ಹೆರಿಗೆ ನೋವಿನಿಂದ ಒದ್ದಾಡುತ್ತಿರುವುದನ್ನು ಕಾಣಬಹುದು. ಪತ್ನಿ ಜತೆಗೆ ಇದ್ದ ಪತಿ ಡ್ಯಾನ್ಸ್ ಮಾಡಿ ಆಕೆಯ ನೋವನ್ನು ಮರೆಸಲು ಪ್ರಯತ್ನಿಸಿದ್ದಾನೆ. ತನ್ನ ಗಂಡನ ಡ್ಯಾನ್ಸ್ ನೋಡಿ ನಕ್ಕಿದ್ದು, ತನ್ನ ಎರಡು ಕೈ ಮೇಲೆತ್ತಿ ಪತಿಯ ಜತೆಗೆ ಕುಳಿತಲ್ಲಿಂದಲೇ ಡ್ಯಾನ್ಸ್ ಮಾಡಿದ್ದಾಳೆ.

ವೈರಲ್‌ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಪ್ಲೀಸ್ ನನ್ನ ಬಿಟ್ಟು ಹೋಗ್ಬೇಡ; ಪ್ರೇಯಸಿಯ ಕಾಲಿಗೆ ಬಿದ್ದು ಅಂಗಲಾಚಿ ಬೇಡಿಕೊಂಡ ಯುವಕ

ಈ ವಿಡಿಯೋ 23 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಿಮ್ಮ ಗಂಡನ ಬಗ್ಗೆ ಹೆಮ್ಮೆ ಅನಿಸುತ್ತಿದೆ. ನಿಮ್ಮ ಪ್ರೀತಿ ಹೀಗೆ ಇರಲಿ ಎಂದಿದ್ದಾರೆ. ಇನ್ನೊಬ್ಬರು, ಪ್ರೀತಿಯ ವ್ಯಾಖ್ಯಾನ ಇದು ಎಂದು ಹೇಳಿದ್ದಾರೆ. ಮತ್ತೊಬ್ಬರು, ಸಹೋದರಿ ನೀವು ನಿಜಕ್ಕೂ ಅದೃಷ್ಟವಂತಳು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಿಸಿಆರ್‌ಇ ಘಟಕದ ಪೊಲೀಸ್​ ಸಿಬ್ಬಂದಿಗೆ ಗುಡ್​ನ್ಯೂಸ್​​: ವಾರದಲ್ಲಿ ಒಂದು ದಿನ ಕಡ್ಡಾಯ ರಜೆ – Kannada News | Good News for DCRE Police Personnel: Mandatory Weekly Day Off Announced

ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯImage Credit source: google

ಬೆಂಗಳೂರು, ಜುಲೈ 17: ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (DCRE) ಘಟಕದ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಕಾನ್ಸ್‌ಟೇಬಲ್ ಹಾಗೂ ಹೆಡ್ ಕಾನ್ಸ್‌ಟೇಬಲ್ ಹುದ್ದೆಯ ಸಿಬ್ಬಂದಿಗೆ ವಾರದಲ್ಲಿ ಒಂದು ದಿನ ಕಡ್ಡಾಯ ರಜೆ (holiday) ನೀಡಿ ಮಹತ್ವದ ಆದೇಶ ಹೊರಡಿಸಲಾಗಿದೆ. ಆ ಮೂಲಕ ಪೊಲೀಸ್ ಕಾನ್ಸ್‌ಟೇಬಲ್​​ ಹಾಗೂ ಹೆಡ್ ಕಾನ್ಸ್‌ಟೇಬಲ್​​ಗಳಿಗೆ ಗುಡ್​ನ್ಯೂಸ್​​ ನೀಡಲಾಗಿದೆ.

ಆದೇಶದಲ್ಲಿ ಏನಿದೆ?

2021 ಆಗಸ್ಟ್​​​ 03ರಂದು ಪೊಲೀಸ್ ಪ್ರಧಾನ ಕಚೇರಿಯ ಸುತ್ತೋಲೆ ಸಂಖ್ಯೆ ಆರ್‌ಎಲ್‌ಎನ್-1/14/2021 ಅನ್ನು ಉಲ್ಲೇಖಿಸಿ ಈ ನಿರ್ದೇಶನವನ್ನು ನೀಡಲಾಗಿದ್ದು, ಡಿಸಿಆರ್‌ಇ ಕಂಟ್ರೋಲ್ ರೂಮ್‌ನಿಂದ ಅಧಿಕೃತ ಸಂದೇಶ ರವಾನಿಸಲಾಗಿದೆ. ಈ ಆದೇಶದ ಅನ್ವಯ, ಪಾಳಿ (ಶಿಫ್ಟ್) ಆಧಾರದ ಮೇಲೆ ಪ್ರತಿಯೊಬ್ಬ ಸಿಬ್ಬಂದಿಗೂ ವಾರದಲ್ಲಿ ಒಂದು ದಿನ ಕಡ್ಡಾಯವಾಗಿ ರಜೆ ನೀಡಬೇಕೆಂದು ಸ್ಪಷ್ಟವಾಗಿ ಸೂಚಿಸಲಾಗಿದೆ.

ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಸಹಕಾರಿ

ಇಲಾಖೆಯ ಈ ಮಹತ್ವದ ನಿರ್ಧಾರದಿಂದಾಗಿ ನಿರಂತರ ಕರ್ತವ್ಯ ನಿರ್ವಹಣೆಯಿಂದ ಒತ್ತಡಕ್ಕೆ ಒಳಗಾಗುತ್ತಿದ್ದ ಸಿಬ್ಬಂದಿಗೆ ವಾರಕ್ಕೊಮ್ಮೆ ವಿಶ್ರಾಂತಿ ದೊರೆಯಲಿದ್ದು, ಇದು ಅವರ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಅತ್ಯಂತ ಸಹಕಾರಿಯಾಗಲಿದೆ.

ಇದನ್ನೂ ಓದಿ: ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ, ಒಟ್ಟು 90ಕ್ಕೂ ಹೆಚ್ಚು ಅಧಿಕಾರಿಗಳ ವರ್ಗಾವಣೆ

ಇನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್ ಮಹಾನಿರ್ದೇಶಕ ಉಮೇಶ್ ಕುಮಾರ್ ಅವರು ಜುಲೈ 16ರಂದು ಈ ಮಹತ್ವದ ಆದೇಶಕ್ಕೆ ಸಹಿ ಹಾಕಿದ್ದಾರೆ. ತದನಂತರ, ಈ ಆದೇಶದ ಪ್ರತಿಗಳನ್ನು ಡಿಸಿಆರ್‌ಇ ವಲಯದ ಎಲ್ಲಾ ಪೊಲೀಸ್ ಅಧೀಕ್ಷಕರಿಗೆ, ಆಡಳಿತಾಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಇತರ ಅಧಿಕಾರಿಗಳಿಗೆ ರವಾನಿಸಲಾಗಿದೆ.

ರಸ್ತೆಯಲ್ಲಿ ಸಿಕ್ಕ ಮಾಂಗಲ್ಯ ಸರ ವಾಪಸ್​ ನೀಡಿ ಪ್ರಾಮಾಣಿಕತೆ ಮೆರೆದ ವ್ಯಕ್ತಿ; ಪೊಲೀಸರಿಂದ ಮೆಚ್ಚುಗೆ 

ರಸ್ತೆಯಲ್ಲಿ ಸಿಕ್ಕ ಮಾಂಗಲ್ಯ ಸರವನ್ನು ವಾರಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ವ್ಯಕ್ತಿಗೆ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ತಾಲೂಕಿನ ದೊಡ್ಡ ಅಯ್ಯೂರು ಸರಳ ಎಂಬುವರು ಕೋಲಾರ ನಗರದ ಟೇಕಲ್ ರಸ್ತೆಯಲ್ಲಿ ಹಣ್ಣು ಖರೀದಿಸುವ ವೇಳೆ ಮಾಂಗಲ್ಯ ಸರವನ್ನು ಕಳೆದುಕೊಂಡಿದ್ದರು. ದಾರಿಯಲ್ಲಿ ಬಿದಿದ್ದ ಮಾಂಗಲ್ಯ ಸರವನ್ನು ಮುನಿಯಪ್ಪ ಅವರು ಕೋಲಾರ ನಗರಠಾಣೆಗೆ ತಂದು ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಝಗಮಗಿಸಲಿದೆ ವೀಕೆಂಡ್! ಭಾನುವಾರ ಮುಂಜಾನೆ 5 ರ ವರೆಗೂ ಪಬ್, ಬಾರ್, ರೆಸ್ಟೋರೆಂಟ್ ಓಪನ್ ಸಾಧ್ಯತೆ

ಈ ಬಗ್ಗೆ ಪೊಲೀಸ್ ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೋ ನೋಡಿದ ಸರಳ ದಂಪತಿ ಪೊಲೀಸ್ ಠಾಣೆಗೆ ಆಗಮಿಸಿ ಮಾಂಗಲ್ಯ ಸರವನ್ನು ಪೊಲೀಸರ ಸಮ್ಮುಖದಲ್ಲಿ ಪಡೆದಿದ್ದಾರೆ. ಇನ್ನು ದಾರಿಯಲ್ಲಿ ಸಿಕ್ಕಿದ್ದ ಮಾಂಗಲ್ಯ ಸರವನ್ನು ಮುನಿಯಪ್ಪ ಪ್ರಾಮಾಣಿಕತೆಯಿಂದ ತಂದು ಪೊಲೀಸರಿಗೆ ನೀಡಿದ ಹಿನ್ನಲೆಯಲ್ಲಿ ಕೋಲಾರ ನಗರ ಠಾಣೆ ಸಿಪಿಐ ಲೊಕೇಶ್ ಅವರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ರಾಮ ಮಂದಿರ ದೇಣಿಗೆ ಹಗರಣ: ಜುಲೈ 20 ರಂದು ಸುಪ್ರೀಂಗೆ ಮಧ್ಯಂತರ ವರದಿ ಸಿಲ್ಲಿಸಲಿದೆ ಎಸ್​ಐಟಿ – Kannada News | Ayodhya Ram Mandir Fraud: SIT to Submit Interim Report to Supreme Court on July 20

ಅಯೋಧ್ಯೆ, ಜುಲೈ 17: ಅಯೋಧ್ಯೆಯ ರಾಮ ಮಂದಿರ(Ram Mandir)ದ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಬಂದಿರುವ ದೇಣಿಗೆಯಲ್ಲಿ ನಡೆದಿದೆ ಎನ್ನಲಾದ ಆರ್ಥಿಕ ಅಕ್ರಮಗಳ ತನಿಖೆ ಈಗ ಅಂತಿಮ ಹಂತ ತಲುಪಿದೆ. ಈ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು ಜುಲೈ 20ರಂದು ಸುಪ್ರೀಂ ಕೋರ್ಟ್‌ಗೆ ತನ್ನ ಮೊದಲ ಮಧ್ಯಂತರ ವರದಿಯನ್ನು ಸಲ್ಲಿಸಲಿದೆ ಎಂದು ಮೂಲಗಳು ತಿಳಿಸಿವೆ. ನ್ಯಾಯಾಲಯದ ಆದೇಶದಂತೆ ಎಸ್‌ಐಟಿ ತನ್ನ ಶೋಧನೆಗಳನ್ನು ನೇರವಾಗಿ ಸುಪ್ರೀಂ ಕೋರ್ಟ್‌ಗೆ ಒಪ್ಪಿಸಲಿದ್ದು, ಈ ವರದಿಯ ಆಧಾರದ ಮೇಲೆ ರಾಮ ಮಂದಿರದ ಆಡಳಿತ ಮತ್ತು ದೇಣಿಗೆ ಎಣಿಕೆ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆಗಳಾಗುವ ಸಾಧ್ಯತೆ ಇದೆ.

ಅಂತಿಮ ವರದಿಗಾಗಿ ಹೆಚ್ಚಿನ ಸಮಯ ಕೋರಿದ ಎಸ್‌ಐಟಿ
ರಾಮ ಮಂದಿರ ಟ್ರಸ್ಟ್‌ನ ಮನವಿಯ ಮೇರೆಗೆ ಜೂನ್ 13 ರಂದು ಉತ್ತರ ಪ್ರದೇಶ ಸರ್ಕಾರವು ಈ ಮೂವರು ಸದಸ್ಯರ ವಿಶೇಷ ತನಿಖಾ ತಂಡವನ್ನು (SIT) ರಚಿಸಿತ್ತು.  ಆರಂಭದಲ್ಲಿ ತನಿಖೆಗೆ ಕೇವಲ 15 ದಿನಗಳ ಕಾಲಾವಕಾಶ ನೀಡಲಾಗಿತ್ತಾದರೂ, ತನಿಖೆಯ ವ್ಯಾಪ್ತಿ ದೊಡ್ಡದಾಗಿದ್ದರಿಂದ ಜುಲೈ 1 ರಂದು ಅವಧಿಯನ್ನು ಮತ್ತೆ 15 ದಿನ ವಿಸ್ತರಿಸಲಾಗಿತ್ತು.

ಪ್ರಕರಣದ ಆಳವಾದ ಆರ್ಥಿಕ ವಹಿವಾಟುಗಳನ್ನು ಸಂಪೂರ್ಣವಾಗಿ ಪರಿಶೀಲಿಸಬೇಕಾಗಿರುವುದರಿಂದ, ಅಂತಿಮ ವರದಿ ಸಿದ್ಧಪಡಿಸಲು ತನಗೆ ಇನ್ನಷ್ಟು ಹೆಚ್ಚಿನ ಸಮಯ ನೀಡಬೇಕೆಂದು ಎಸ್‌ಐಟಿ ಈಗ ಉತ್ತರ ಪ್ರದೇಶ ಸರ್ಕಾರಕ್ಕೆ ಮನವಿ ಮಾಡಿದೆ. ಜುಲೈ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಟ್ರಸ್ಟ್‌ನ ಪ್ರಮುಖ ಸಭೆ ನಡೆಯಲಿದ್ದು, ಅಲ್ಲಿ ಈ ತನಿಖೆಯ ಬೆಳವಣಿಗೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಲಿದೆ.

ರಾಮ ಮಂದಿರದ ಹಣದಲ್ಲಿ ವಂಚನೆ ಮಾಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಉತ್ತರ ಪ್ರದೇಶ ಸರ್ಕಾರ ಭರವಸೆ ನೀಡಿದೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ಯದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, “ನಾವೆಲ್ಲರೂ ಎಸ್‌ಐಟಿ ವರದಿಗಾಗಿ ಕಾಯುತ್ತಿದ್ದೇವೆ. ದೇಶದ ಜನತೆ ತಾಳ್ಮೆಯಿಂದಿರಲಿ, ರಾಮನ ಹಣವನ್ನು ಲೂಟಿ ಮಾಡಿದ ಯಾರನ್ನೂ ಸರ್ಕಾರ ಬಿಡುವುದಿಲ್ಲ. ಈ ಪವಿತ್ರ ಕಾರ್ಯದಲ್ಲಿ ತಪ್ಪು ಮಾಡಿದವರೆಲ್ಲರೂ ಭಗವಾನ್ ಹನುಮಂತನ ಗದೆಯ ಏಟನ್ನು ಎದುರಿಸಬೇಕಾಗುತ್ತದೆ” ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಟ್ರಸ್ಟ್‌ನ ಹಿರಿಯ ಅಧಿಕಾರಿಗಳು ಕೂಡ ಸದ್ಯಕ್ಕೆ ವರದಿಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.

ಮತ್ತಷ್ಟು ಓದಿ:ರಾಮ ಮಂದಿರ ಹಗರಣ: ಸಂತೋಷ್ ದುಬೆ ವಿಚಾರಣೆ, ಮಹತ್ವದ ಸಾಕ್ಷಿ ಸಲ್ಲಿಕೆಗೆ ಇಂದೇ ಗಡುವು

ಏನಿದು ರಾಮ ಮಂದಿರ ದೇಣಿಗೆ ಪ್ರಕರಣ?
ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ಕೋಟ್ಯಂತರ ಭಕ್ತರು ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ನಗದು, ಆನ್‌ಲೈನ್ ಹಾಗೂ ಚೆಕ್‌ಗಳ ಮೂಲಕ ಭಾರಿ ಪ್ರಮಾಣದ ದೇಣಿಗೆ ನೀಡಿದ್ದಾರೆ. ಆದರೆ, ಈ ದೇಣಿಗೆ ಸಂಗ್ರಹ, ಬ್ಯಾಂಕ್ ಖಾತೆಗಳ ನಿರ್ವಹಣೆ ಮತ್ತು ನಗದು ಎಣಿಕೆ ಪ್ರಕ್ರಿಯೆಯಲ್ಲಿ ದೊಡ್ಡ ಮಟ್ಟದ ಆರ್ಥಿಕ ಅಕ್ರಮಗಳು ನಡೆದಿವೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಸದ್ಯಕ್ಕೆ ತನಿಖೆ ಮುಂದುವರೆದಿದ್ದು, ಇಡೀ ದೇಶದ ಕಣ್ಣು ಜುಲೈ 20 ರಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಲಿರುವ ಎಸ್‌ಐಟಿ ವರದಿಯ ಮೇಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version