ಚಿತ್ರೀಕರಣದಲ್ಲಿ ಆದ ಕಷ್ಟಗಳನ್ನು ವಿವರಿಸಿದ ನಟ ತಬಲಾ ನಾಣಿ: ವಿಡಿಯೋ – Kannada News | Tabala Nani talks about what problems he faced while shooting Life Today movie

‘ಲೈಫ್ ಟುಡೆ’ (Life Today) ಹೆಸರಿನ ಸಿನಿಮಾ (Cinema) ಬಿಡುಗಡೆಗೆ ರೆಡಿಯಾಗಿದೆ. ಸಿನಿಮಾನಲ್ಲಿ ತಬಲಾ ನಾಣಿ, ನಾಯಕಿಯ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ಸುದ್ದಿಗೋಷ್ಠಿಗೆ ಆಗಮಿಸಿದ್ದ ನಟ ತಬಲಾ ನಾಣಿ ಸಿನಿಮಾನಲ್ಲಿ ತಾವು ಸೇರಿದಂತೆ ಇತರೆ ಕೆಲವು ಕಲಾವಿದರು ಅನುಭವಿಸಿದ ಕಷ್ಟಗಳ ಬಗ್ಗೆ ಮಾತನಾಡಿದರು. ಚಿತ್ರೀಕರಣ ಸೆಟ್​​ನಲ್ಲಿ ತಾವು ವಿಪರೀತ ಜ್ವರದಿಂದ ಬಳಲಿದ್ದು, ಆಹಾರದಲ್ಲಿ ಸಮಸ್ಯೆ ಆಗಿದ್ದು ಇನ್ನೂ ಹಲವು ವಿಷಯಗಳ ಬಗ್ಗೆ ನಟ ತಬಲಾ ನಾಣಿ ಮಾತನಾಡಿದರು. ಈ ಸಿನಿಮಾದಿಂದ ತಾವು ಸಾಕಷ್ಟು ಕಲಿತಿದ್ದಾಗಿಯೂ ಸಹ ಅವರು ಮಾರ್ಮಿಕವಾಗಿ ನುಡಿದರು. ಆದರೆ ‘ಹೆತ್ತವರಿಗೆ ಹೆಗ್ಗಣ ಮುದ್ದು ಎಂಬಂತೆ, ನಾವು ನಟಿಸಿದ ಸಿನಿಮಾ ನಮಗೆ ಚೆನ್ನಾಗಿದೆ’ ಎಂದು ಪರೋಕ್ಷವಾಗಿ ಸಿನಿಮಾ ಚೆನ್ನಾಗಿಲ್ಲವೆಂದೂ ಸಹ ಹೇಳಿದರು. ನಾಣಿ ಅವರು ಹೇಳಿರುವುದೇನು? ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Rice Price Hike: ತುಂಗಭದ್ರಾ ನೀರಿನ ಅಭಾವ, ಬರದ ಪರಿಣಾಮ ಕುಸಿದ ಭತ್ತ ಬೆಳೆ; ಅಕ್ಕಿ ಬೆಲೆ ಭಾರೀ ಏರಿಕೆ – Kannada News | Gangavathi Rice Industry Hit by Drought: Sona Masuri Rice Price Rises Sharply in Just 15 Days in Karnataka

ಅಕ್ಕಿ ಬೆಲೆ ಭಾರೀ ಏರಿಕೆImage Credit source: tv9

ಕೊಪ್ಪಳ, ಜುಲೈ 17: ಭತ್ತದ ನಾಡು ಎಂದೇ ಖ್ಯಾತಿ ಪಡೆದಿರುವ ಕೊಪ್ಪಳ (Koppal) ಜಿಲ್ಲೆಯ ಗಂಗಾವತಿಯಲ್ಲಿ ಅಕ್ಕಿ ಉದ್ಯಮದ ಮೇಲೆ ಬರಗಾಲದ ಬಿಸಿ ತಟ್ಟಿದೆ. ಕಳೆದ ವರ್ಷ ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್‌ ಕೊಚ್ಚಿಹೋದ ಪರಿಣಾಮ, ನೀರಿನ ಅಭಾವದಿಂದ ಭತ್ತದ ಉತ್ಪಾದನೆ ಗಣನೀಯವಾಗಿ ಕುಸಿದಿದೆ. ಇದರ ನೇರ ಪರಿಣಾಮವಾಗಿ ಸೋನಾ ಮಸೂರಿ ಸೇರಿದಂತೆ ಪ್ರಮುಖ ಅಕ್ಕಿ ತಳಿಗಳ ದರ ಕೇವಲ 15 ದಿನಗಳಲ್ಲೇ ಏರಿಕೆಯಾಗಿದೆ. ಕಳೆದ ವರ್ಷ ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್‌ ಹಾನಿಗೊಳಗಾದ ಹಿನ್ನೆಲೆಯಲ್ಲಿ ಗಂಗಾವತಿ ಭಾಗದಲ್ಲಿ ಎರಡನೇ ಬೆಳೆಗೆ ಸಮರ್ಪಕವಾಗಿ ನೀರು ಹರಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಭತ್ತದ ಉತ್ಪಾದನೆ ಕುಂಠಿತಗೊಂಡಿತ್ತು. ಈ ವರ್ಷವೂ ಮುಂಗಾರು ದುರ್ಬಲವಾಗಿದ್ದು, ಜಲಾಶಯದಲ್ಲಿ ಕೇವಲ 25 ಟಿಎಂಸಿ ನೀರು ಸಂಗ್ರಹವಿರುವ ಕಾರಣ ಕಾಲುವೆಗಳಿಗೆ ನೀರು ಹರಿಸುವ ಕುರಿತು ಇನ್ನೂ ತೀರ್ಮಾನವಾಗಿಲ್ಲ. ಹೀಗಾಗಿ ಅನೇಕ ರೈತರು ಭತ್ತ ನಾಟಿಯಿಂದಲೇ ಹಿಂದೆ ಸರಿದಿದ್ದಾರೆ.

ಸೋನಾ ಮಸೂರಿ ಅಕ್ಕಿ ಬೆಲೆ ಈಗೆಷ್ಟಾಯ್ತು?

ಭತ್ತದ ಲಭ್ಯತೆ ಕಡಿಮೆಯಾಗಿರುವುದರಿಂದ ಅಕ್ಕಿ ಮಾರುಕಟ್ಟೆಯಲ್ಲಿ ದರ ಏರಿಕೆಯಾಗಿದೆ. ಕಳೆದ 15 ದಿನಗಳ ಅವಧಿಯಲ್ಲಿ ಹೋಲ್‌ಸೇಲ್ ಮಾರುಕಟ್ಟೆಯಲ್ಲಿ ಸೋನಾ ಮಸೂರಿ ಅಕ್ಕಿಯ ದರ ಪ್ರತಿ ಕ್ವಿಂಟಾಲ್‌ಗೆ ಸುಮಾರು 200 ರೂ.ನಿಂದ 300 ರೂ.ವರೆಗೆ ಹೆಚ್ಚಳವಾಗಿದೆ. ಈ ಹಿಂದೆ 4,800 ರೂ. ಇದ್ದ ದರ ಈಗ 5,000 ರೂ.ನಿಂದ 5,200 ರೂ.ಗೆ ಏರಿಕೆಯಾಗಿದೆ. ಸೋನಾ ಮಸೂರಿಯ ಜೊತೆಗೆ ಆರ್‌ಎನ್‌ಆರ್‌ ತಳಿಯ ಅಕ್ಕಿಯ ದರವೂ ಏರಿಕೆ ಕಂಡಿದೆ.

ಗಂಗಾವತಿಯ ಮಿಲ್​ಗಳಿಗೆ ಬರುತ್ತಿಲ್ಲ ಭತ್ತ

ಭತ್ತದ ಕೊರತೆಯಿಂದ ಗಂಗಾವತಿಯ ಹಲವು ಅಕ್ಕಿ ಮಿಲ್‌ಗಳಿಗೆ ಸಾಕಷ್ಟು ಕಚ್ಚಾ ವಸ್ತು ಸಿಗುತ್ತಿಲ್ಲ. ಪರಿಣಾಮ, ಕೆಲವು ಮಿಲ್‌ಗಳು ನೆರೆಯ ರಾಜ್ಯಗಳಿಂದ ಭತ್ತ ಖರೀದಿಸಿ ಕಾರ್ಯಾಚರಣೆ ಮುಂದುವರಿಸುತ್ತಿವೆ. ಆದರೆ ಇದರಿಂದ ಉತ್ಪಾದನಾ ವೆಚ್ಚವೂ ಹೆಚ್ಚಾಗಿದೆ ಎಂದು ಮಿಲ್‌ ಮಾಲೀಕರು ಹೇಳುತ್ತಿದ್ದಾರೆ.

ಗ್ರಾಹಕರಿಗೂ ಅಕ್ಕಿ ಬೆಲೆ ಏರಿಕೆ ಬರೆ

ಅಕ್ಕಿಯ ಹೋಲ್‌ಸೇಲ್ ದರ ಏರಿಕೆಯ ಪರಿಣಾಮ ಚಿಲ್ಲರೆ ಮಾರುಕಟ್ಟೆಯ ಮೇಲೂ ಬೀಳುತ್ತಿದ್ದು, ಗ್ರಾಹಕರು ಹೆಚ್ಚುವರಿ ಬೆಲೆ ನೀಡಿ ಅಕ್ಕಿ ಖರೀದಿಸುವ ಪರಿಸ್ಥಿತಿ ಎದುರಾಗಿದೆ. ಒಟ್ಟಾರೆಯಾಗಿ, ನೀರಿನ ಅಭಾವ, ಭತ್ತದ ಉತ್ಪಾದನೆ ಕುಸಿತ ಹಾಗೂ ತುಂಗಭದ್ರಾ ಜಲಾಶಯದ ಸಮಸ್ಯೆಗಳ ಸರಪಳಿಯ ಪರಿಣಾಮ ಭತ್ತದ ನಾಡು ಗಂಗಾವತಿಯ ಅಕ್ಕಿ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಇದರ ಹೊರೆ ರೈತರು, ಅಕ್ಕಿ ಮಿಲ್‌ಗಳು ಮತ್ತು ಗ್ರಾಹಕರ ಮೇಲೂ ಬೀಳತೊಡಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:43 pm, Fri, 17 July 26

Source link

ನಮ್ಮ ಮೆಟ್ರೋದಲ್ಲಿ ಹುಚ್ಚಾಟಕ್ಕೆ ಬೀಳಲಿದೆ ಬ್ರೇಕ್: ದಂಡದ ಮೊತ್ತ 25,000 ರೂ.ವರೆಗೆ ಏರಿಕೆ – Kannada News | Bengaluru Metro: New Strict Rules and Higher Fines for Passengers from July 17

ಬೆಂಗಳೂರು, ಜು.17: ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣಿಕರೇ ಎಚ್ಚರ, ಇನ್ಮುಂದೆ ಮೆಟ್ರೋ ನಿಲ್ದಾಣ ಮತ್ತು ರೈಲಿನಲ್ಲಿ ನಿಯಮ ಮೀರಿ ಹುಚ್ಚಾಟ ಆಡಿದರೆ ನಿಮ್ಮ ಜೇಬಿಗೆ ಕತ್ತರಿ ಬೀಳಲಿದೆ. ಮೆಟ್ರೋ ನಿಯಮಗಳನ್ನು ಉಲ್ಲಂಘಿಸುವವರಿಗೆ ಬಿಸಿ ಮುಟ್ಟಿಸಲು ಬಿಎಂಆರ್‌ಸಿಎಲ್ (BMRCL) ದಂಡದ ಪ್ರಮಾಣವನ್ನು ಏರಿಕೆ ಮಾಡಿದೆ. ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ನಮ್ಮ ಮೆಟ್ರೋದಲ್ಲಿ ಜಾರಿಗೆ ತರಲಾಗಿರುವ ಈ ಕಠಿಣ ನಿಯಮಗಳು ಮತ್ತು ಪರಿಷ್ಕೃತ ದಂಡವನ್ನು ವಿಧಿಸಲಾಗಿದೆ.

ಮೆಟ್ರೋ ರೈಲು ಹಾಗೂ ನಿಲ್ದಾಣಗಳಲ್ಲಿ ಸಾರ್ವಜನಿಕರ ಸುರಕ್ಷತೆ ಕಾಯ್ದುಕೊಳ್ಳಲು ಮತ್ತು ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಈ ಹೊಸ ರೂಲ್ಸ್ ಜಾರಿಗೆ ತರಲಾಗಿದೆ. ಮೆಟ್ರೋ ಸುರಕ್ಷತೆಗೆ ಧಕ್ಕೆ ತರುವಂತಹ ಗಂಭೀರ ತಪ್ಪುಗಳಿಗೆ ಇನ್ಮುಂದೆ ಅತ್ಯಂತ ದುಬಾರಿ ದಂಡ ತೆರಬೇಕಾಗುತ್ತದೆ.

ಮೆಟ್ರೋ ಹಳಿಗಳ ಮೇಲೆ ಅನಧಿಕೃತವಾಗಿ ಓಡಾಡುವುದು ಅಥವಾ ಟ್ರ್ಯಾಕ್ ಮೇಲೆ ಜಿಗಿಯುವುದು ಮಾಡಿದರೆ ಈ ಹಿಂದೆ ಕಡಿಮೆ ಇದ್ದ ದಂಡದ ಮೊತ್ತವನ್ನು ಇನ್ಮುಂದೆ 5,000 ರೂ.ನಿಂದ 25,000 ರೂ.ವರೆಗೆ ಏರಿಕೆ ಮಾಡಲಾಗಿದೆ. ಮೆಟ್ರೋ ಪ್ರಯಾಣದ ಟಿಕೆಟ್ ಅಥವಾ ಪಾಸ್ ಅನ್ನು ಕಾನೂನುಬಾಹಿರವಾಗಿ ದುರ್ಬಳಕೆ ಮಾಡಿಕೊಂಡರೂ ಸಹ ಇದೇ ರೀತಿಯ ದುಬಾರಿ ದಂಡವನ್ನು ಪಾವತಿಸಬೇಕಾಗುತ್ತದೆ. ಮೆಟ್ರೋ ರೈಲು ಹಾಗೂ ನಿಲ್ದಾಣದ ಒಳಗೆ ಅನುಮತಿ ಪಡೆಯದೆ ಯಾವುದೇ ರೀತಿಯ ವ್ಯಾಪಾರ ನಡೆಸಿದರೆ ಇನ್ಮುಂದೆ ನೇರವಾಗಿ 5,000 ರೂ. ದಂಡ ವಿಧಿಸಲಾಗುತ್ತದೆ.

ರೀಲ್ಸ್ ಹುಚ್ಚು, ಲೌಡ್ ಮ್ಯೂಸಿಕ್ ಹಾಗೂ ಗಲಾಟೆಗೆ ಬೀಳಲಿದೆ ದಂಡ:

ರೈಲಿನಲ್ಲಿ ಇನ್ಫ್ಲುಯೆನ್ಸರ್ಸ್ ಮಾಡುವ ರೀಲ್ಸ್ ಹಾವಳಿ ಹಾಗೂ ಪ್ರಯಾಣಿಕರ ನೆಮ್ಮದಿ ಕೆಡಿಸುವ ವರ್ತನೆಗಳಿಗೆ ಕಡಿವಾಣ ಹಾಕಲಾಗುವುದು. ಮೆಟ್ರೋ ರೈಲಿನ ಒಳಗೆ ರೀಲ್ಸ್ ಮಾಡುವುದು, ಆಹಾರ ಸೇವನೆ (ತಿಂಡಿ-ತಿನಿಸು), ನೆಲದ ಮೇಲೆ ಕುಳಿತುಕೊಳ್ಳುವುದು ಹಾಗೂ ಹೆಡ್‌ಫೋನ್ ಬಳಸದೆ ಜೋರಾಗಿ ಮ್ಯೂಸಿಕ್ ಹಾಕಿ ಇತರ ಪ್ರಯಾಣಿಕರಿಗೆ ತೊಂದರೆ ನೀಡಿದರೆ ಈ ಹಿಂದೆ ಕೇವಲ 500 ರೂ. ದಂಡವಿತ್ತು. ಆದರೆ ಇನ್ಮುಂದೆ 2,500 ರೂ.ನಿಂದ ಗರಿಷ್ಠ 10,000 ರೂ.ವರೆಗೆ ದಂಡ ತೆರಬೇಕಾಗುತ್ತದೆ.

ಮೆಟ್ರೋ ನಿಲ್ದಾಣಗಳ ಗೋಡೆಗಳ ಮೇಲೆ ಬರೆಯುವುದು, ಚಿತ್ರ ಬಿಡಿಸುವುದು ಹಾಗೂ ಪೋಸ್ಟರ್ ಅಂಟಿಸಿ ಸೌಂದರ್ಯ ಹಾಳು ಮಾಡಿದ್ರೆ ಈ ಹಿಂದೆ ಇದ್ದ 1,000 ರೂ. ದಂಡವನ್ನು ಈಗ ಬರೋಬ್ಬರಿ 10,000 ರೂ.ಗೆ ಹೆಚ್ಚಿಸಲಾಗಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರ ಸುರಕ್ಷತೆಗೆ ಬಿಎಂಆರ್‌ಸಿಎಲ್ ಮಹತ್ವದ ಹೆಜ್ಜೆ: ಇನ್ನು ಮುಂದೆ 191 ಸ್ಟೇಷನ್‌ಗಳಲ್ಲೂ ಬರಲಿದೆ ‘ಪಿಎಸ್ಡಿ’ ಡೋರ್!

ಮದ್ಯಪಾನ ಹಾಗೂ ಸ್ಫೋಟಕಗಳ ಸಾಗಾಟಕ್ಕೆ ಕಠಿಣ ಶಿಕ್ಷೆ:

ಮದ್ಯಪಾನ ಹಾಗೂ ಅಸಭ್ಯ ವರ್ತನೆ ಸೆಕ್ಷನ್ 59(1) ಪ್ರಕಾರ, ಮೆಟ್ರೋ ನಿಲ್ದಾಣ ಹಾಗೂ ರೈಲಿನಲ್ಲಿ ಮದ್ಯಪಾನ ಮಾಡಿ ಪ್ರಯಾಣ ಮಾಡುವುದು, ಇತರೆ ಪ್ರಯಾಣಿಕರೊಂದಿಗೆ ಜಗಳವಾಡುವುದು ಮತ್ತು ಉಗುಳುವುದು ಮಾಡಿದರೆ ಈ ಹಿಂದೆ ಇದ್ದ 500 ರೂ. ದಂಡವನ್ನು ಈಗ 2,500 ರೂ.ಗೆ ಏರಿಸಲಾಗಿದೆ. ಮೆಟ್ರೋ ರೈಲಿನಲ್ಲಿ ಪಟಾಕಿ, ಸ್ಫೋಟಕ ವಸ್ತುಗಳು ಹಾಗೂ ಅಪಾಯಕಾರಿ ಕೆಮಿಕಲ್‌ಗಳನ್ನು ತಗೆದುಕೊಂಡು ಪ್ರಯಾಣ ಬೆಳೆಸಿದರೆ ವಿಧಿಸುತ್ತಿದ್ದ 500 ರೂ. ದಂಡವನ್ನು ಇನ್ಮುಂದೆ 2,500 ರೂ.ಗೆ ಹೆಚ್ಚಿಸಲಾಗಿದೆ.

ಪ್ರತಿ 3 ವರ್ಷಕ್ಕೆ ದಂಡದ ಮೊತ್ತ 10% ಏರಿಕೆ:

ಬರಿ ದಂಡದ ಮೊತ್ತ ಹೆಚ್ಚಳ ಮಾತ್ರವಲ್ಲದೆ, ಈ ನಿಯಮದಲ್ಲಿ ಮತ್ತೊಂದು ಮಹತ್ವದ ಬದಲಾವಣೆ ಮಾಡಲಾಗಿದೆ. ಹೊಸ ನಿಯಮಾವಳಿಗಳ ಪ್ರಕಾರ ಮೆಟ್ರೋದಲ್ಲಿ ನಿಗದಿಪಡಿಸಲಾದ ಈ ಎಲ್ಲಾ ದಂಡದ ಮೊತ್ತವನ್ನು ಪ್ರತಿ 3 ವರ್ಷಕ್ಕೊಮ್ಮೆ ಶೇಕಡಾ 10 ರಷ್ಟು ಸ್ವಯಂಚಾಲಿತವಾಗಿ ಏರಿಕೆ ಮಾಡಲು ನಿರ್ಧರಿಸಲಾಗಿದೆ.

ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತದ ಷೇರುಬಜಾರು ಕಳೆದ 30 ವರ್ಷದಲ್ಲಿ ಎಷ್ಟು ಬಾರಿ ಬಿದ್ದಿದೆ? ಒಟ್ಟಾರೆ ತಂದಿರುವ ಲಾಭವೆಷ್ಟು? ಇಲ್ಲಿದೆ ಡೀಟೇಲ್ಸ್ – Kannada News | Stock Market of India great for long term investment, details of profit and loss in last 30 years

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ (Stock Market Investment) ಮಾಡಿದರೆ ಸಖತ್ ಲಾಭ ಮಾಡಬಹುದು ಎಂದು ಬಹಳ ಜನರು ಹೇಳುತ್ತಿರುತ್ತಾರೆ. ಹೊಸಬರಾದವರು ಈ ಮಾತುಗಳನ್ನು ನಂಬಿ ಷೇರುಗಳಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಾರೆ. ನೀವು ಹೊಸಬರಾಗಿದ್ದು ಮಾರುಕಟ್ಟೆಯನ್ನು ಗಮನಿಸಿದರೆ ಈ ವರ್ಷದಲ್ಲಿ (2026) ಇದು ನಷ್ಟ ತಂದಿದೆ. ಅಯ್ಯೋ, ಇಲ್ಲಿ ಹಣ ಹಾಕಿ ಕೆಟ್ಟನಲ್ಲ ಎಂದು ಓಡಿ ಹೋದರೆ ಅದು ನೀವು ಮಾಡುವ ತಪ್ಪು. ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವುದು ಒಂದು ದಿನ ಅಥವಾ ಒಂದು ವರ್ಷದ ಆಟವಲ್ಲ, ಅದು ದೀರ್ಘಾವಧಿಯ ಪಯಣ. ಮಾರುಕಟ್ಟೆ ಕುಸಿದಾಗ ಹೊಸ ಹೂಡಿಕೆದಾರರು ಗಾಬರಿಯಾಗುವುದು ಸಹಜ. ಆದರೆ, ಇತಿಹಾಸವನ್ನು ಗಮನಿಸಿದರೆ ಪ್ರತಿ ಬಾರಿ ಮಾರುಕಟ್ಟೆ ಬಿದ್ದಾಗಲೂ, ಅದಕ್ಕಿಂತ ದುಪ್ಪಟ್ಟು ವೇಗದಲ್ಲಿ ಪುಟಿದೆದ್ದಿದೆ ಎಂಬ ಸತ್ಯ ತಿಳಿಯುತ್ತದೆ.

ಭಾರತದ ಷೇರು ಮಾರುಕಟ್ಟೆ ದೀರ್ಘಾವಧಿಯಲ್ಲಿ ಹೂಡಿಕೆದಾರರಿಗೆ ಬಹಳ ಒಳ್ಳೆಯ ರಿಟರ್ನ್ಸ್ ಕೊಟ್ಟಿರುವುದು ಹೌದು. ಆದರೆ, ಅದರ ಇತಿಹಾಸದಲ್ಲಿ ನಾಲ್ಕು ಬಾರಿ ಮಹಾಕುಸಿತ ಆಗಿರುವುದು ಕೂಡ ಹೌದು. ಹಾಗೆಯೇ, ಕುಸಿತ ಆದಾಗೆಲ್ಲಾ ಪುಟಿದೆದ್ದಿರುವುದೂ ನಿಜವೇ. ಭಾರತದ ಶೇರು ಮಾರುಕಟ್ಟೆಯ ಪ್ರಮುಖ 4 ಕುಸಿತಗಳು ಮತ್ತು ಪುಟಿದೆದ್ದ ಇತಿಹಾಸದ ಮಾಹಿತಿ ಈ ಕೆಳಕಂಡಂತಿದೆ:

1992 ರ ಹರ್ಷದ್ ಮೆಹ್ತಾ ಹಗರಣ

  • ಏನಾಯಿತು?: ಬ್ಯಾಂಕಿಂಗ್ ವ್ಯವಸ್ಥೆಯಲ್ಲಿದ್ದ ಲೋಪದೋಷಗಳನ್ನು ಬಳಸಿಕೊಂಡು ಹರ್ಷದ್ ಮೆಹ್ತಾ ಎಂಬ ಬ್ರೋಕರ್ ಮಾರುಕಟ್ಟೆಯನ್ನು ಕೃತಕವಾಗಿ ಏರಿಸಿದ್ದರು. ಹಗರಣ (Harshad Mehta Scam) ಬಯಲಿಗೆ ಬಂದಾಗ ಮಾರುಕಟ್ಟೆ ತಲ್ಲಣಿಸಿತು.
  • ಕುಸಿತ: ಸೆನ್ಸೆಕ್ಸ್ (Sensex) ಒಂದೇ ದಿನದಲ್ಲಿ ಸುಮಾರು 12.7% ಕುಸಿದರೆ, ನಂತರದ ಕೆಲವು ತಿಂಗಳುಗಳಲ್ಲಿ ಸುಮಾರು 40% ರಿಂದ 50% ರಷ್ಟು ಭಾರಿ ಕುಸಿತ ಕಂಡಿತು.
  • ಚೇತರಿಕೆ: ಹೂಡಿಕೆದಾರರು ಮಾರುಕಟ್ಟೆಯೇ ಮುಳುಗಿಹೋಯಿತು ಅಂದುಕೊಂಡಿದ್ದರು. ಆದರೆ ಕಟ್ಟುನಿಟ್ಟಾದ ನಿಯಮಗಳು ಜಾರಿಗೆ ಬಂದ ನಂತರ, ಕೆಲವೇ ವರ್ಷಗಳಲ್ಲಿ ಮಾರುಕಟ್ಟೆ ಭರ್ಜರಿ ಚೇತರಿಕೆ ಕಂಡು ಹೊಸ ದಾಖಲೆ ಬರೆಯಿತು.

2000 – 2001 ರ ಡಾಟ್-ಕಾಮ್ ಬಬಲ್ ಮತ್ತು ಕೇತನ್ ಪರೇಖ್ ಹಗರಣ

  • ಏನಾಯಿತು?: ಇಂಟರ್ನೆಟ್ ಮತ್ತು ತಂತ್ರಜ್ಞಾನ (IT) ಕಂಪನಿಗಳ ಷೇರುಗಳ ಬೆಲೆ ಯಾವುದೇ ಆಧಾರವಿಲ್ಲದೆ ಗಗನಕ್ಕೇರಿತ್ತು. ಜಾಗತಿಕವಾಗಿ ಈ ಬಬಲ್ (Dot-Com Bubble) ಒಡೆದಾಗ ಮತ್ತು ಭಾರತದಲ್ಲಿ ಕೇತನ್ ಪರೇಖ್ ಹಗರಣ ಬಹಿರಂಗವಾದಾಗ ಮಾರುಕಟ್ಟೆ ತೀವ್ರವಾಗಿ ಕುಸಿಯಿತು.
  • ಕುಸಿತ: ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ತೀವ್ರವಾಗಿ ಕುಸಿದವು. ಮಾಹಿತಿ ತಂತ್ರಜ್ಞಾನ ವಲಯದ ಅನೇಕ ಷೇರುಗಳು ಶೇ. 80 ಕ್ಕಿಂತ ಹೆಚ್ಚು ಮೌಲ್ಯ ಕಳೆದುಕೊಂಡವು.
  • ಚೇತರಿಕೆ: ಈ ಕುಸಿತವು ಮುಗಿಯುತ್ತಿದ್ದಂತೆ ಭಾರತೀಯ ಆರ್ಥಿಕತೆ ಬಲವಾಯಿತು. 2003 ರಿಂದ 2007 ರ ಅವಧಿಯಲ್ಲಿ ಭಾರತೀಯ ಮಾರುಕಟ್ಟೆ ಇತಿಹಾಸದಲ್ಲೇ ಕಾಣದಂತಹ ಬೃಹತ್ ಬುಲ್ ರನ್ (Bull Run) ಕಂಡು ಸೆನ್ಸೆಕ್ಸ್ 20,000 ಅಂಕಗಳನ್ನು ದಾಟಿತು.

2008 ರ ಜಾಗತಿಕ ಆರ್ಥಿಕ ಮಹಾ ಕುಸಿತ

  • ಏನಾಯಿತು?: ಅಮೆರಿಕದ ಬ್ಯಾಂಕಿಂಗ್ ಬಿಕ್ಕಟ್ಟು (ವಿಶೇಷವಾಗಿ ಲೆಮನ್ ಬ್ರದರ್ಸ್ ಪತನ) ಜಗತ್ತಿನಾದ್ಯಂತ ಆರ್ಥಿಕ ಹಿಂಜರಿತವನ್ನು (Global Financial Crisis) ಸೃಷ್ಟಿಸಿತು. ಜಾಗತಿಕ ಹೂಡಿಕೆದಾರರು ಭಾರತದಿಂದ ಹಣವನ್ನು ಹಿಂಪಡೆದರು.
  • ಕುಸಿತ: ಭಾರತೀಯ ಶೇರು ಮಾರುಕಟ್ಟೆ ತನ್ನ ಗರಿಷ್ಠ ಮಟ್ಟದಿಂದ ಸುಮಾರು 60% ರಷ್ಟು ಕುಸಿತ ಕಂಡಿತು. ಅತಿ ಹೆಚ್ಚು ನಷ್ಟ ಉಂಟುಮಾಡಿದ ಭೀಕರ ಕುಸಿತ ಇದಾಗಿತ್ತು.
  • ಚೇತರಿಕೆ: ಈ ಬಿಕ್ಕಟ್ಟು ಮುಗಿಯಲು ಕನಿಷ್ಠ 2-3 ವರ್ಷಗಳು ಬೇಕಾಯಿತು. ಆದರೆ ಶಿಸ್ತುಬದ್ಧವಾಗಿ ಹೂಡಿಕೆ ಮುಂದುವರಿಸಿದವರು 2010 ರ ಹೊತ್ತಿಗೆ ತಮ್ಮ ಹೂಡಿಕೆಯಲ್ಲಿ ಭಾರಿ ಲಾಭವನ್ನು ಕಂಡರು.

2020 ರ ಕೋವಿಡ್-19 ಸಾಂಕ್ರಾಮಿಕ ಕುಸಿತ

  • ಏನಾಯಿತು?: ಕರೋನಾ ವೈರಸ್ ಹರಡುವಿಕೆ ತಡೆಯಲು ದೇಶಾದ್ಯಂತ ಲಾಕ್‌ಡೌನ್ (COVID-19 Pandemic) ಘೋಷಿಸಿದಾಗ ಉದ್ಯಮಗಳು ಸ್ಥಗಿತಗೊಂಡು ಹೂಡಿಕೆದಾರರಲ್ಲಿ ಭೀತಿ ಆವರಿಸಿತು.
  • ಕುಸಿತ: ಕೇವಲ ಒಂದೇ ತಿಂಗಳಲ್ಲಿ (ಫೆಬ್ರವರಿಯಿಂದ ಮಾರ್ಚ್ 2020) ಸೆನ್ಸೆಕ್ಸ್ ಮತ್ತು ನಿಫ್ಟಿ ಸುಮಾರು 38% ರಷ್ಟು ಅತ್ಯಂತ ವೇಗವಾಗಿ ಕುಸಿದವು.
  • ಚೇತರಿಕೆ: ಇದು ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಚೇತರಿಸಿಕೊಂಡ ಕುಸಿತವಾಗಿದೆ. ಕೇವಲ 6 ರಿಂದ 8 ತಿಂಗಳುಗಳಲ್ಲಿ ಮಾರುಕಟ್ಟೆ ಮೊದಲಿನ ಮಟ್ಟಕ್ಕೆ ಮರಳಿದ್ದಲ್ಲದೆ, ನಂತರದ 2 ವರ್ಷಗಳಲ್ಲಿ ಡಬಲ್ ರಿಟರ್ನ್ಸ್ ನೀಡಿತು.

ಇದನ್ನೂ ಓದಿ: ಕಾರ್ಡ್ ಪೇಮೆಂಟ್​ನಲ್ಲಿಯಂತೆ ಕೆಲ ಯುಪಿಐ ಪೇಮೆಂಟ್​ಗೂ ಎಂಡಿಆರ್ ಶುಲ್ಕ; ಸರ್ಕಾರ ಚಿಂತನೆ

ಹೊಸ ಹೂಡಿಕೆದಾರರಿಗೆ ಕಿವಿಮಾತು: ದೀರ್ಘಾವಧಿಯ ಹೂಡಿಕೆ ಏಕೆ ಮುಖ್ಯ?

  • ಕುಸಿತವು ಶೇರುಗಳನ್ನು ಅಗ್ಗದ ಬೆಲೆಗೆ ಖರೀದಿಸಲು ಸಿಗುವ ಅತ್ಯುತ್ತಮ ಅವಕಾಶವೇ ಹೊರತು, ನಷ್ಟ ಅನುಭವಿಸಿ ಹೊರಹೋಗುವ ಸಮಯವಲ್ಲ.
  • ದೀರ್ಘಾವಧಿಯ ನಕ್ಷೆಯನ್ನು ನೋಡಿದರೆ ಸಣ್ಣಪುಟ್ಟ ಏರಿಳಿತಗಳ ನಡುವೆಯೂ ಸೆನ್ಸೆಕ್ಸ್ 100 ಅಂಕಗಳಿಂದ ಇಂದು ಸರಿಸುಮಾರು 80,000 ಅಂಕಗಳ ಗಡಿ ತಲುಪಿದೆ.
  • ಮಾರುಕಟ್ಟೆ ಕುಸಿದಾಗ ಎಸ್‌ಐಪಿ (SIP) ಮೂಲಕ ಹೂಡಿಕೆ ಮಾಡುವುದರಿಂದ ನಿಮಗೆ ಕಡಿಮೆ ಬೆಲೆಯಲ್ಲಿ (Rupee Cost Averaging) ಹೆಚ್ಚಿನ ಮ್ಯೂಚುವಲ್ ಫಂಡ್ ಯೂನಿಟ್‌ಗಳು ಅಥವಾ ಷೇರುಗಳು ಸಿಗುತ್ತವೆ. ಮಾರುಕಟ್ಟೆ ಮತ್ತೆ ಚೇತರಿಸಿಕೊಂಡಾಗ ಇದು ನಿಮ್ಮ ಲಾಭವನ್ನು ದುಪ್ಪಟ್ಟು ಮಾಡುತ್ತದೆ.
  • ಮಾರುಕಟ್ಟೆಯಲ್ಲಿ ತಾತ್ಕಾಲಿಕ ಕುಸಿತ ಕಂಡುಬಂದಾಗ ಹೂಡಿಕೆಯನ್ನು ಹಿಂಪಡೆಯದೆ, ಕನಿಷ್ಠ 5 ರಿಂದ 10 ವರ್ಷಗಳ ಗುರಿ ಇಟ್ಟುಕೊಂಡು ಹೂಡಿಕೆ ಮುಂದುವರಿಸುವುದು ಉತ್ತಮ ನಿರ್ಧಾರ.

ಕಳೆದ 30 ವರ್ಷದಲ್ಲಿ ನಿಫ್ಟಿ ಇಂಡೆಕ್ಸ್ ಹೇಗೆ ರಿಟರ್ನ್ಸ್ ಕಟ್ಟಿದೆ?

ಭಾರತೀಯ ಷೇರು ಮಾರುಕಟ್ಟೆಯ ಪ್ರಮುಖ ಸೂಚ್ಯಂಕವಾದ ನಿಫ್ಟಿ 50 (Nifty 50) ಕಳೆದ 30 ವರ್ಷಗಳಲ್ಲಿ (1996 ರಿಂದ 2025ರ ವರೆಗೆ) ವಾರ್ಷಿಕವಾಗಿ ನೀಡಿರುವ ರಿಟರ್ನ್ಸ್ (ಆದಾಯ) ವಿವರ ಇಲ್ಲಿದೆ.

  • 1996: -0.8% (ರಾಜಕೀಯ ಅಸ್ಥಿರತೆ ಮತ್ತು ಸಮ್ಮಿಶ್ರ ಸರ್ಕಾರಗಳ ಕಾಲ)
  • 1997: 18.6%
  • 1998: -16.3% (ಭಾರತದ ಪೋಖ್ರಾನ್ ಅಣು ಪರೀಕ್ಷೆ ಮತ್ತು ಜಾಗತಿಕ ನಿರ್ಬಂಧಗಳು)
  • 1999: 67.4%
  • 2000: -14.7% (ಡಾಟ್-ಕಾಮ್ ಬಬಲ್ ಸ್ಪೋಟ)
  • 2001: -16.2% (ಅಮೆರಿಕದ 9/11 ದಾಳಿ ಮತ್ತು ಕೇತನ್ ಪರೇಖ್ ಹಗರಣ)
  • 2002: 3.2% (ಭೀಕರ ಬರಗಾಲದ ವರ್ಷ)
  • 2003: 71.9%
  • 2004: 10.7%
  • 2005: 36.3%
  • 2006: 39.8%
  • 2007: 54.8%
  • 2008: -51.8% (ಜಾಗತಿಕ ಆರ್ಥಿಕ ಮಹಾ ಕುಸಿತ – Lehman Brothers)
  • 2009: 75.8%
  • 2010: 17.9%
  • 2011: -24.6% (ಅತಿಯಾದ ಹಣದುಬ್ಬರ ಮತ್ತು ದೇಶೀಯ ಹಗರಣಗಳ ಆತಂಕ)
  • 2012: 27.7%
  • 2013: 6.8% (ಅಮೆರಿಕದ ಫೆಡರಲ್ ರಿಸರ್ವ್‌ನಿಂದ ಟೇಪರ್ ಟಾಂಟ್ರಮ್ ಭೀತಿ)
  • 2014: 31.4%
  • 2015: -4.1% (ಚೀನಾದ ಆರ್ಥಿಕ ಮಂದಗತಿ ಮತ್ತು ಸರಕುಗಳ ಬೆಲೆ ಕುಸಿತ)
  • 2016: 3.0% (ಜಿಎಸ್‌ಟಿ ವಿಧೇಯಕ ಅನುಮೋದನೆ ಮತ್ತು ನೋಟು ಅಮಾನ್ಯೀಕರಣ)
  • 2017: 28.6%
  • 2018: 3.2% (LTCG ತೆರಿಗೆ ಜಾರಿ ಮತ್ತು ಜಾಗತಿಕ ವಾಣಿಜ್ಯ ಸಮರ)
  • 2019: 12.0%
  • 2020: 14.9%
  • 2021: 24.1%
  • 2022: 4.3% (ರಷ್ಯಾ-ಉಕ್ರೇನ್ ಯುದ್ಧ ಮತ್ತು ಹೆಚ್ಚಿದ ಜಾಗತಿಕ ಹಣದುಬ್ಬರ)
  • 2023: 19.4%
  • 2024: 19.5%
  • 2025: 18.5%

ಇದನ್ನೂ ಓದಿ: 250 ರೂ ಸಣ್ಣ ಎಸ್​ಐಪಿಗಳತ್ತ ಮುಗಿಬಿದ್ದ ಹೊಸ ಹೂಡಿಕೆದಾರರು; ಬಂದಷ್ಟೇ ವೇಗದಲ್ಲಿ ನಿರ್ಗಮನ; ಏನು ಕಾರಣ?

ಈ ಮೇಲಿನ ಪಟ್ಟಿ ಗಮನಿಸಿದರೆ ನಿಫ್ಟಿ ಸೂಚ್ಯಂಕವು ಕಳೆದ 30 ವರ್ಷದಲ್ಲಿ 12 ಬಾರಿ ಶೇ. 10ಕ್ಕಿಂತ ಕಡಿಮೆ ರಿಟರ್ನ್ಸ್ ಕೊಟ್ಟಿದೆ. ಇದರಲ್ಲಿ ಏಳು ಬಾರಿ ನೆಗಟಿವ್ ರಿಟರ್ನ್ಸ್ ಇವೆ. ಆದರೆ, ಇನ್ನುಳಿದ ವರ್ಷಗಳು ಅದ್ಭುತವಾಗಿ ಲಾಭ ತಂದಿವೆ. 1996ರ ಕೊನೆಯಲ್ಲಿ ನಿಫ್ಟಿ 899 ಅಂಕಗಳನ್ನು ಹೊಂದಿತ್ತು. 2025ರ ಕೊನೆಯಲ್ಲಿ ಅದು 26,129 ಅಂಕಗಳನ್ನು ಹೊಂದಿತ್ತು. ಒಟ್ಟಾರೆ ಈ 30 ವರ್ಷದಲ್ಲಿ ಕೆಲ ಕುಸಿತಗಳ ನಡುವೆಯೂ 29 ಪಟ್ಟು ಬೆಳವಣಿಗೆ ಕಂಡಿದೆ. ಅಂದರೆ, ನೀವು ಅಂದು ಒಂದು ಲಕ್ಷ ಹೂಡಿಕೆ ಮಾಡಿದ್ದರೆ ನಿಮ್ಮ ಸಂಪತ್ತು 30 ಲಕ್ಷ ರೂ ಆಗಿರುತ್ತಿತ್ತು. ಇಂಥ ಲಾಭ ಯಾವ ಹೂಡಿಕೆಯಿಂದ ಸಿಗುತ್ತದೆ ಹೇಳಿ? ಮಧ್ಯ ಮಧ್ಯದಲ್ಲಿ ಮಾರುಕಟ್ಟೆ ಬಿದ್ದಾಗ ನೀವು ವಿಚಲಿತಗೊಂಡು ಹೂಡಿಕೆಯಿಂದ ಹಿಂದಕ್ಕೆ ಸರಿದುಬಿಟ್ಟರೆ ಭರ್ಜರಿ ಲಾಭದ ಅವಕಾಶವೇ ಇರುವುದಿಲ್ಲ. ಹೊಸ ಹೂಡಿಕೆದಾರರು ಇದನ್ನು ಗಮನಿಸಲೇಬೇಕು.

ಮುಂದೆಯೂ ಹೀಗೇ ಬೆಳೆಯುತ್ತಾ ಮಾರುಕಟ್ಟೆ?

ಭಾರತ ಉತ್ತಮ ಆರ್ಥಿಕ ತಳಹದಿ ಹೊಂದಿದೆ. ಅದಕ್ಕೆ ಜನಸಂಖ್ಯಾ ಬಲ ಇದೆ. ಅತಿವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಪ್ರಮುಖ ಆರ್ಥಿಕತೆ ಎನಿಸಿದೆ. ಮುಂದಿನ ಎರಡು ಮತ್ತು ಮೂರು ದಶಕಗಳು ಭಾರತದ ಆರ್ಥಿಕತೆ ಅದ್ವಿತೀಯವಾಗಿ ಪ್ರಗತಿ ಕಾಣುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ, ಮಾರುಕಟ್ಟೆಯೂ ಉತ್ತಮವಾಗಿ ಬೆಳೆಯುತ್ತದೆ. ಮುಂದಿನ 20-30 ವರ್ಷಗಳ ಗುರಿಯೊಂದಿಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಜಾಣತನ ಎನಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಜನ್ ನಾಯಗನ್’ ಸಿನಿಮಾ: ಅಂಬೇಡ್ಕರ್ ಕುರಿತ ಸಂಭಾಷಣೆಗೆ ಕತ್ತರಿ ಏಕೆ? – Kannada News | Why Ambedkar related dialogue removed from Jana Nayagan movie

ತಮಿಳುನಾಡು ಸಿಎಂ, ನಟ ವಿಜಯ್ (Thalapathy Vijay) ಅವರ ‘ಜನ್ ನಾಯಕನ್’ ಸಿನಿಮಾ ಕೊನೆಗೂ ಬಿಡುಗಡೆ ಕಾಣುತ್ತಿದೆ. ಜನವರಿ ತಿಂಗಳಲ್ಲಿ ಬಿಡುಗಡೆ ಆಗಬೇಕಿದ್ದ ಈ ಸಿನಿಮಾ ಈಗ ಏಳು ತಿಂಗಳ ಬಳಿಕ ಜುಲೈ 23ರಂದು ತೆರೆಗೆ ಬರುತ್ತಿದೆ. ಸಿನಿಮಾಕ್ಕೆ ಸೆನ್ಸಾರ್ ಮಂಡಳಿಯಿಂದ ಭಾರಿ ಸಮಸ್ಯೆ ಎದುರಾಗಿತ್ತು. ಸೆನ್ಸಾರ್ ಮಂಡಳಿಯು ಸಿನಿಮಾಕ್ಕೆ ಪ್ರಮಾಣ ಪತ್ರ ನೀಡುವುದನ್ನೇ ನಿರಾಕರಿಸಿ, ವಿಶೇಷ ಸಮಿತಿಗೆ ಸಿನಿಮಾವನ್ನು ಕಳಿಸಿತ್ತು. ನ್ಯಾಯಾಲಯದಲ್ಲಿ ಹೋರಾಟಗಳನ್ನು ಮಾಡಿ, ಕೊನೆಗೂ ಇದೀಗ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಆದರೆ ಸಿನಿಮಾದ ಹಲವು ಸಂಭಾಷಣೆ, ದೃಶ್ಯಗಳಿಗೆ ಸಿಬಿಎಫ್​​ಸಿ ಕತ್ತರಿ ಹಾಕಿದೆ. ವಿಶೇಷವಾಗಿ ಅಂಬೆಡ್ಕರ್ ಕುರಿತ ಸಂಭಾಷಣೆಯೊಂದಕ್ಕೂ ಸಹ ಸಿಬಿಎಫ್​​ಸಿ ಕತ್ತರಿ ಹಾಕಿದ್ದು, ಇದಕ್ಕೆ ಕಾರಣವೇನು ಎಂಬುದನ್ನು ಸಿನಿಮಾದ ನಿರ್ಮಾಪಕ ವೆಂಕಟ್ ವಿವರಿಸಿದ್ದಾರೆ.

ಸಂವಿಧಾನ ಫಾಲೋ ಮಾಡದಿದ್ದರೆ ಏನಾಗುತ್ತದೆ ಎಂಬುದನ್ನು ಸಿನಿಮಾನಲ್ಲಿ ಸರಳವಾದ ಭಾಷೆಯಲ್ಲಿ ವಿವರಿಸಲಾಗಿದೆ. ಸಂವಿಧಾನ ಫಾಲೋ ಮಾಡದಿದ್ದರೆ ಏನಾಗುತ್ತದೆ ಎಂಬುದನ್ನು ಮಕ್ಕಳಿಗೆ ವಿವರಿಸುವ ಸಂಭಾಷಣೆ. ಮಕ್ಕಳಿಗೆ ಅರ್ಥವಾಗುವಂತೆ ಸರಳವಾಗಿ ಹೇಳುವ ಸಂಭಾಷಣೆ ಒಂದು ಸೀನ್​​ನಲ್ಲಿ ಇತ್ತು. ‘ಅಂಬೇಡ್ಕರ್ ಸಂವಿಧಾನವನ್ನು ಫಾಲೋ ಮಾಡದಿದ್ದರೆ, ಟಿವಿಕೆ ಸಂವಿಧಾನದ ಮೂಲಕ ಪಾಠ ಕಲಿಸಬೇಕಾಗುತ್ತದೆ’ ಎಂಬ ಸಂಭಾಷಣೆ ಸಿನಿಮಾನಲ್ಲಿತ್ತು’ ಎಂದು ವೆಂಕಟ್ ಹೇಳಿದ್ದಾರೆ. ಆದರೆ ಆ ಸಂಭಾಷಣೆಯನ್ನು ಇದೀಗ ಸಿಬಿಎಫ್​​ಸಿ ಸೂಚನೆ ಮೇರೆಗೆ ತೆಗೆದು ಹಾಕಲಾಗಿದೆಯಂತೆ.

ಸೃಜನಶೀಲ ಸ್ವಾತಂತ್ರ್ಯ ಮತ್ತು ಕಠಿಣ ಸೆನ್ಸಾರ್ ನಿಯಮಗಳ ನಡುವಿನ ಸಮತೋಲನವನ್ನು ಕಾಪಾಡುವುದು ಕಷ್ಟ ಎಂದಿರುವ ನಿರ್ಮಾಪಕ ವೆಂಕಟ್, ‘ಸಿನಿಮಾದಲ್ಲಿನ ಕೆಲವು ರಾಜಕೀಯ ವಿಷಯಗಳ ಉಲ್ಲೇಖ ಮತ್ತು ವ್ಯಕ್ತಿಗಳ ಹೆಸರನ್ನು ಬಳಸುವಾಗ ತುಂಬಾ ಜಾಗರೂಕರಾಗಿರಬೇಕು. ಪ್ರೇಕ್ಷಕರ ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಸಿಬಿಎಫ್​​ಸಿ ಯಾವ ಯಾವ ಕಟ್​​ಗೆ ಸೂಚಿಸಿತ್ತೊ ಅದೆಲ್ಲವನ್ನೂ ನಾವು ಪಾಲಿಸಿದ್ದೇವೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:ಬಹಿರಂಗವಾಗಿ ವಿಜಯ್, ತ್ರಿಷಾ ಬಗ್ಗೆ ಹಾಸ್ಯ ಮಾಡಿದ ಮಲಯಾಳಂ ನಟ; ವಿಡಿಯೋ ವೈರಲ್

‘ಆದರೆ ಈ ಬದಲಾವಣೆಗ ಸಿಳಿಂದ ಸಿನಿಮಾದ ಮೂಲ ಕಥೆಗೆ ಯಾವುದೇ ಧಕ್ಕೆ ಆಗುವುದಿಲ್ಲ ಎಂದು ಚಿತ್ರತಂಡ ಹೇಳಿದ್ದು, ವಿಜಯ್ ಅವರ ಈ ಚಿತ್ರವು ರಾಜಕೀಯ ಹಿನ್ನೆಲೆಯನ್ನು ಹೊಂದಿದ್ದು, ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಜುಲೈ 23 ರಂದು ಈ ಚಿತ್ರವು ತೆರೆಕಾಣಲಿದ್ದು, ಅಂದು ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ. ಆದರೆ ಸಿಬಿಎಫ್​​ಸಿಯು ಸಮಾಜದ ಬಗ್ಗೆ ಕಾಳಜಿಯಿಂದ ಕಟ್ಟಲಾಗಿರುವ ದೃಶ್ಯ, ಸಂಭಾಷಣೆಗಳಿಗೆ ಕತ್ತರಿ ಹಾಕಿದೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಜನ ನಾಯಗನ್’ ಸಿನಿಮಾ ಜುಲೈ 23ಕ್ಕೆ ಬಿಡುಗಡೆ ಆಗಲಿದ್ದು, ಸಿನಿಮಾ ಅನ್ನು ಎಚ್ ವಿನೋದ್ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಪೂಜಾ ಹೆಗ್ಡೆ ನಾಯಕಿ. ವಿಜಯ್ ಪಾತ್ರದ ಸಾಕು ಪುತ್ರಿಯಾಗಿ ಮಲಯಾಳಂ ನಟಿ ಮಮಿತಾ ಬೈಜು ನಟಿಸಿದ್ದಾರೆ. ಸಿನಿಮಾಕ್ಕೆ ಅನಿರುದ್ಧ್ ರವಿಚಂದ್ರನ್ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸದ್ಯಕ್ಕಿಲ್ಲ ಜಿಬಿಎ ಚುನಾವಣೆ: ಡಿಸೆಂಬರ್ 31ರ ಡೆಡ್​ಲೈನ್ ನಿಗದಿಪಡಿಸಿದ ಸುಪ್ರೀಂ ಕೋರ್ಟ್ – Kannada News | Supreme Court Defers GBA Bengaluru Municipal Corporation Elections to December 2026 Over Karnataka SIR Exercise

ನವದೆಹಲಿ, ಜುಲೈ 18: ಗ್ರೇಟರ್ ಬೆಂಗಳೂರು ಅಥಾರಿಟಿ (GBA) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆಯನ್ನು ಡಿಸೆಂಬರ್‌ 31ರ ಒಳಗೆ ನಡೆಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ. ಕರ್ನಾಟಕದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ನವೆಂಬರ್ ವೇಳೆಗೆ ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ, ಚುನಾವಣೆ ನಡೆಸಲು ಡಿಸೆಂಬರ್ 31ರ ಡೆಡ್​ಲೈನ್ ನಿಗದಿಪಡಿಸಲಾಗಿದೆ. ಎಸ್​ಐಆರ್ ಹಿನ್ನೆಲೆ ಚುನಾವಣೆ ಮುಂದೂಡಲು ಅವಕಾಶ ನೀಡಬೇಕೆಂಬ ಸರ್ಕಾರದ ಮನವಿಯ ಅರ್ಜಿ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ನೇತೃತ್ವದ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. SIR ಪ್ರಕ್ರಿಯೆ ನಡೆಯುತ್ತಿರುವ ಕಾರಣ ಆಗಸ್ಟ್ 31ರೊಳಗೆ ಚುನಾವಣೆ ನಡೆಸುವುದು ಸಾಧ್ಯವಾಗುವುದಿಲ್ಲ ಎಂದು ಸರ್ಕಾರ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು.

ಸರ್ಕಾರದ ಮನವಿಯನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, ಡಿಸೆಂಬರ್ 31ರ ಒಳಗೆ ಚುನಾವಣೆ ನಡೆಸಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸ್ಪಷ್ಟ ಸೂಚನೆ ನೀಡಿದೆ. ಜೊತೆಗೆ, ಡಿಸೆಂಬರ್‌ನಲ್ಲಿ ಮತ್ತೊಂದು ಕಾರಣ ನೀಡಿ ಚುನಾವಣೆ ಮುಂದೂಡುವಂತೆ ಮನವಿ ಮಾಡಬಾರದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ವಿಚಾರಣೆ ವೇಳೆ ಸರ್ಕಾರದ ಪರ ಹಾಜರಾಗಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, ಮುಂದೆ ಮತ್ತೊಮ್ಮೆ ಮುಂದೂಡಿಕೆಗೆ ಮನವಿ ಮಾಡುವ ಪರಿಸ್ಥಿತಿ ಬಂದರೆ ಸರ್ಕಾರದ ಪರ ತಾವು ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ನ್ಯಾಯಾಲಯಕ್ಕೆ ಮುಂದೆ ತಿಳಿಸಿದ್ದಾರೆ. ಈ ಮೊದಲು ಸುಪ್ರೀಂ ಕೋರ್ಟ್ ಆಗಸ್ಟ್ 31ರೊಳಗೆ ಚುನಾವಣೆ ನಡೆಸುವಂತೆ ಗಡುವು ನೀಡಿತ್ತು. ಆದರೆ, ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಇದೀಗ ಆ ಗಡುವನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅರೆಬರೆ ಬಟ್ಟೆ ತೊಟ್ಟು, ಮನೆಗಳಿಗೆ ನುಗ್ಗಿ, ಜನರನ್ನು ಕಚ್ಚಿ ವಾರಾಣಸಿಯಲ್ಲಿ ವಿದೇಶಿ ಪ್ರಜೆಯ ಹೈಡ್ರಾಮಾ – Kannada News | Varanasi: Semi Clothed Foreigner Bites Residents, Suspected Drug Influence Rampag

ವಾರಾಣಸಿ, ಜುಲೈ 17: ಉತ್ತರ ಪ್ರದೇಶದ ವಾರಾಣಸಿ(Varanasi)ಯಲ್ಲಿ ವಿದೇಶ ಪ್ರಜೆಯ ದಾಂಧಲೆ ಹೆಚ್ಚಾಗಿತ್ತು. ಅರೆಬರೆ ಬಟ್ಟೆ ತೊಟ್ಟಿದ್ದ ಆತ, ಸುಮಾರು ಮನೆಗಳಿಗೆ ನುಗ್ಗಿ, ಜನರ ಜತೆ ಜಗಳವಾಡಿದ್ದಲ್ಲದೆ ಅವರನ್ನು ಕಚ್ಚಿರುವ ಕುರಿತು ದೂರುಗಳು ಕೇಳಿಬಂದಿದೆ. ವೈರಲ್ ಆದ ವಿಡಿಯೋದಲ್ಲಿ ಹುಚ್ಚನಂತೆ ಜನರ ಮುಂದೆ ನಿಂತು ಬಾಯಿಗೆ ಬಂದಂತೆ ಮಾತನಾಡುವುದನ್ನು ಕಾಣಬಹುದು.

ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ‘ಸಪ್ತಸಾಗರ ಔಷಧ ಮಾರುಕಟ್ಟೆ’ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮನೆಗಳಿಗೆ ನುಗ್ಗಿ ವಸ್ತುಗಳನ್ನು ಧ್ವಂಸಗೊಳಿಸಿದ ವಿದೇಶಿಗ, ಸ್ಥಳೀಯ ನಿವಾಸಿಯೊಬ್ಬರ ಕೈಯನ್ನು ಕಚ್ಚಿ ಗಾಯಗೊಳಿಸಿದ್ದಾನೆ. ಆತ ಮಾದಕವಸ್ತು ಪ್ರಭಾವದಲ್ಲಿ ಈ ರೀತಿ ಮಾಡಿರಬಹುದು ಎಂದು ಹೇಳಲಾಗಿದೆ.

ಕಿರಿದಾದ ಗಲ್ಲಿಗಳಲ್ಲಿ ಜನರ ಬೆನ್ನಟ್ಟಿದ ವಿದೇಶಿ ಪ್ರಜೆ
ಸ್ಥಳೀಯರ ಪ್ರಕಾರ, ಈ ವಿದೇಶಿ ಪ್ರಜೆ ಮೊದಲು ರಸ್ತೆಯಲ್ಲಿ ವಿಚಿತ್ರವಾಗಿ ಓಡಾಡಿದ್ದಾನೆ. ನಂತರ ವಸತಿ ಕಟ್ಟಡವೊಂದರ ಮೇಲಿನ ಮಹಡಿಗೆ ನುಗ್ಗಿ ಅಲ್ಲಿನ ವಸ್ತುಗಳನ್ನು ಮನಬಂದಂತೆ ಹೊರಗೆ ಎಸೆಯಲು ಆರಂಭಿಸಿದ್ದಾನೆ. ಸ್ಥಳೀಯರು ಆತನನ್ನು ಶಾಂತಗೊಳಿಸಲು ಪ್ರಯತ್ನಿಸಿದಾಗ, ಆತ ಮತ್ತಷ್ಟು ಆಕ್ರೋಶಗೊಂಡು ಜನರ ಮೇಲೆ ದಾಳಿ ಮಾಡಿದ್ದಾನೆ. ಈ ಗದ್ದಲದ ನಡುವೆ ಆತ ನಿವಾಸಿಯೊಬ್ಬರ ಕೈಗೆ ಬಲವಾಗಿ ಕಚ್ಚಿದ್ದಾನೆ ಹಾಗೂ ಕಿರಿದಾದ ಹಾದಿಗಳಲ್ಲಿ ಸಾರ್ವಜನಿಕರನ್ನು ಬೆನ್ನಟ್ಟಿ ಭೀತಿ ಹುಟ್ಟಿಸಿದ್ದಾನೆ.

ವಿಷಯ ತಿಳಿದು ಕೊತ್ವಾಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ಆತನಿಗೆ ಕೆಳಗಿಳಿಯುವಂತೆ ಮನವೊಲಿಸಲು ಯತ್ನಿಸಿದಾಗ, ಆತ ಪೊಲೀಸರ ಮೇಲೆಯೇ ತಿರುಗಿಬಿದ್ದು ‘ಹಿಂತಿರುಗಿ ಹೋಗಿ’ ಎಂದು ಜೋರಾಗಿ ಕಿರುಚಾಡಿದ್ದಾನೆ. ಕೊನೆಗೆ ಸ್ಥಳೀಯರು ಮತ್ತು ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಆತನನ್ನು ಹಿಡಿದು ವಶಕ್ಕೆ ಪಡೆದಿದ್ದಾರೆ.

ವಿಡಿಯೋ

ಬಂಧನದ ನಂತರ ಪೊಲೀಸರು ಆತನನ್ನು ವೈದ್ಯಕೀಯ ಪರೀಕ್ಷೆಗಾಗಿ ಕಬೀರ್‌ಚೌರಾ ವಿಭಾಗೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಕೊತ್ವಾಲಿ ಇನ್ಸ್‌ಪೆಕ್ಟರ್ ದಯಾಶಂಕರ್, ವಿದೇಶಿ ಪ್ರಜೆಯನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಆತನ ಈ ಆಕ್ರಮಣಕಾರಿ ನಡವಳಿಕೆಗೆ ಮಾನಸಿಕ ಆರೋಗ್ಯದ ಸಮಸ್ಯೆಯೇ ಕಾರಣ ಅಥವಾ ಆತ ಅತಿಯಾಗಿ ಮಾದಕ ವಸ್ತು ಸೇವಿಸಿದ್ದಾನೆಯೇ ಎಂಬ ಬಗ್ಗೆ ವೈದ್ಯಕೀಯ ವರದಿ ಬಂದ ನಂತರ ಸತ್ಯ ತಿಳಿಯಲಿದೆ ಎಂದಿದ್ದಾರೆ.

ಪ್ರಸ್ತುತ ಪೊಲೀಸರು ಆ ವ್ಯಕ್ತಿಯ ಗುರುತು, ಆತ ಯಾವ ದೇಶದವನು ಮತ್ತು ವಾರಾಣಸಿಗೆ ಬಂದ ಉದ್ದೇಶವೇನು ಎಂಬುದನ್ನು ಪತ್ತೆಹಚ್ಚಲು ತನಿಖೆ ನಡೆಸುತ್ತಿದ್ದು, ವರದಿ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Parliament Monsoon Session: ಜುಲೈ 20ರಿಂದ ಸಂಸತ್ತಿನ ಮುಂಗಾರು ಅಧಿವೇಶನ, ತೆರಿಗೆ, ಉದ್ಯಮ ಸುಧಾರಣೆ ಸೇರಿ 5 ಹೊಸ ಮಸೂದೆ ಮಂಡನೆಗೆ ಸಜ್ಜು – Kannada News | Parliament Monsoon Session: 5 New Bills on Tax, MSME, NEET Battle Begins July 20

ನವದೆಹಲಿ, ಜುಲೈ 17: ದೇಶದ ರಾಜಕೀಯ ವಲಯದಲ್ಲಿ ಈಗ  ಮುಂಗಾರು ಅಧಿವೇಶನದ ಕಾವು ಜೋರಾಗಿದೆ. ಸಂಸತ್ತಿನ ಮುಂಗಾರು ಅಧಿವೇಶನ(Parliament Monsoon Session)ವು ಜುಲೈ 20 ರಿಂದ ಆರಂಭವಾಗಲಿದ್ದು, ಆಡಳಿತಾರೂಢ ಎನ್‌ಡಿಎ ಮತ್ತು ವಿರೋಧ ಪಕ್ಷಗಳ ಒಕ್ಕೂಟದ ನಡುವೆ ಭೀಕರ ರಾಜಕೀಯ ಸಮರಕ್ಕೆ ವೇದಿಕೆ ಸಿದ್ಧವಾಗಿದೆ. ಒಂದು ಕಡೆ ನಿರುದ್ಯೋಗ, ಬೆಲೆ ಏರಿಕೆ ಮತ್ತು ನೀಟ್ ಪರೀಕ್ಷೆ ಅಕ್ರಮಗಳ ಮೂಲಕ ಸರ್ಕಾರಕ್ಕೆ ಮುತ್ತಿಗೆ ಹಾಕಲು ವಿರೋಧ ಪಕ್ಷಗಳು ತಂತ್ರ ರೂಪಿಸುತ್ತಿದ್ದರೆ, ಮತ್ತೊಂದೆಡೆ ಪ್ರಮುಖ ಕಾಯ್ದೆಗಳನ್ನು ಅಂಗೀಕರಿಸಿಕೊಳ್ಳಲು ಕೇಂದ್ರ ಸರ್ಕಾರ ಸಜ್ಜಾಗಿದೆ.

ಲೋಕಸಭೆಯಲ್ಲಿ ಮಂಡನೆಯಾಗಲಿರುವ 5 ಹೊಸ ಮಸೂದೆಗಳು

ಈ ಬಾರಿಯ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ದೇಶದ ಆರ್ಥಿಕತೆ ಮತ್ತು ಆಡಳಿತಕ್ಕೆ ಸಂಬಂಧಿಸಿದಂತೆ ಐದು ಅತ್ಯಂತ ಪ್ರಮುಖ ಹೊಸ ಮಸೂದೆಗಳನ್ನು ಮಂಡಿಸಲು ತೀರ್ಮಾನಿಸಿದೆ.

  • ಆದಾಯ ತೆರಿಗೆ (ತಿದ್ದುಪಡಿ) ಮಸೂದೆ, 2026: ತೆರಿಗೆ ವ್ಯವಸ್ಥೆಯಲ್ಲಿನ ಹೊಸ ಬದಲಾವಣೆಗಳಿಗೆ ಸಂಬಂಧಿಸಿದ್ದಾಗಿದೆ.
  • ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿ (ತಿದ್ದುಪಡಿ) ಮಸೂದೆ, 2026: ಎಂಎಸ್ಎಂಇ (MSME) ವಲಯಕ್ಕೆ ಬೂಸ್ಟ್ ನೀಡುವ ಕಾಯ್ದೆ.
  • ಸುಪ್ರೀಂ ಕೋರ್ಟ್ (ನ್ಯಾಯಾಧೀಶರ ಸಂಖ್ಯೆ) ತಿದ್ದುಪಡಿ ಮಸೂದೆ, 2026
  • ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಮಸೂದೆ, 2026.
  • ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆಗಟ್ಟುವಿಕೆ (ತಿದ್ದುಪಡಿ) ಮಸೂದೆ, 2026.

ಇವುಗಳ ಜೊತೆಗೆ ಈ ಹಿಂದೆ ಮಂಡನೆಯಾಗಿ ಬಾಕಿ ಉಳಿದಿರುವ ‘ವಿದೇಶಿ ಕೊಡುಗೆ ನಿಯಂತ್ರಣ ತಿದ್ದುಪಡಿ ಮಸೂದೆ’ ಹಾಗೂ ‘ವಿಕ್ಷಿತ್ ಭಾರತ್ ಶಿಕ್ಷಾ ಅಧಿಷ್ಠಾನ ಮಸೂದೆ’ಗಳನ್ನು ಕೂಡ ಸರ್ಕಾರ ಈ ಅಧಿವೇಶನದಲ್ಲೇ ಇತ್ಯರ್ಥ ಪಡಿಸಿಕೊಳ್ಳುವ ಸಾಧ್ಯತೆ ಇದೆ.

ಸಾರ್ವಜನಿಕ ಕಾಳಜಿಯ ವಿಷಯಗಳ ಮೇಲೆ ವಿರೋಧ ಪಕ್ಷಗಳ ಕಣ್ಣು

ರಾಜಕೀಯ ನಾಯಕರ ಈ ಜಟಾಪಟಿಯ ನಡುವೆ ಸಾರ್ವಜನಿಕರ ದೈನಂದಿನ ಬದುಕಿಗೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳು ಸಂಸತ್ತಿನಲ್ಲಿ ಚರ್ಚೆಗೆ ಬರಲಿವೆ. ದೇಶದ ಜನಸಾಮಾನ್ಯರನ್ನು ಕಾಡುತ್ತಿರುವ ಹಣದುಬ್ಬರ , ಯುವಕರನ್ನು ಕಂಗಾಲು ಮಾಡಿರುವ ನಿರುದ್ಯೋಗ ಸಮಸ್ಯೆ ಮತ್ತು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ಇಟ್ಟಿರುವ ನೀಟ್ ಪೇಪರ್ ಸೋರಿಕೆ ಹಗರಣಗಳ ಕುರಿತು ಸಂಸತ್ತಿನ ಒಳಗೂ ಮತ್ತು ಹೊರಗೂ ಬೃಹತ್ ಪ್ರತಿಭಟನೆಗಳನ್ನು ನಡೆಸಲು ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಸಿದ್ಧತೆ ನಡೆಸಿವೆ. ಜುಲೈ 19 ರಂದು ಎಲ್ಲಾ ವಿರೋಧ ಪಕ್ಷಗಳ ಜಂಟಿ ಮಹಾಸಭೆ ನಡೆಯಲಿದ್ದು, ಅಲ್ಲಿ ಅಂತಿಮ ತಂತ್ರಗಾರಿಕೆ ರೂಪಿಸಲಾಗುವುದು.

ಮತ್ತಷ್ಟು ಓದಿ: Parliament Monsoon Session: ಜುಲೈ 20ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭ

‘ಒಂದು ರಾಷ್ಟ್ರ ಒಂದು ಚುನಾವಣೆ’ ಮತ್ತು ಕ್ಷೇತ್ರ ಪುನರ್ವಿಂಗಡಣೆ ಭೀತಿ

ಈ ಬಾರಿಯ ಅಧಿವೇಶನದಲ್ಲಿ ದೇಶದ ಭವಿಷ್ಯದ ರಾಜಕೀಯ ದಿಕ್ಸೂಚಿಯನ್ನು ಬದಲಿಸಬಲ್ಲ ಎರಡು ಪ್ರಮುಖ ವಿಷಯಗಳ ಕುರಿತು ಭಾರಿ ಚರ್ಚೆಗಳು ನಡೆಯುತ್ತಿವೆ:

ಹೆಚ್ಚಿದ ಆತಂಕ: ಸರ್ಕಾರದ ಅಧಿಕೃತ ಶಾಸಕಾಂಗ ಪಟ್ಟಿಯಲ್ಲಿ ಕ್ಷೇತ್ರ ಪುನರ್ವಿಂಗಡಣೆ ಅಥವಾ ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆಗಳು ಸದ್ಯಕ್ಕಿಲ್ಲ. ಆದರೆ, ಕೇಂದ್ರ ಸರ್ಕಾರವು ಈ ಅಧಿವೇಶನದಲ್ಲಿ ಇದ್ದಕ್ಕಿದ್ದಂತೆ ಇವುಗಳನ್ನು ಮಂಡಿಸಲು ಒಳಗೊಳಗೆ ವೇಗವಾಗಿ ಚಲಿಸುತ್ತಿದೆ ಎಂದು ವಿರೋಧ ಪಕ್ಷಗಳು ಬಲವಾಗಿ ನಂಬಿವೆ.

ಕಾಂಗ್ರೆಸ್ ಪ್ರತಿರೋಧ: ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯನ್ನು ಸಂಸತ್ತಿನ ಮುಂದೆ ತಂದರೆ ಅದನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಮತ್ತು ಸಂಸತ್ತಿನ ಒಳಗೆ ತೀವ್ರವಾಗಿ ವಿರೋಧಿಸುವುದಾಗಿ ಕಾಂಗ್ರೆಸ್ ಈಗಾಗಲೇ ಕಟ್ಟುನಿಟ್ಟಾದ ಎಚ್ಚರಿಕೆ ನೀಡಿದೆ.

ಇದಕ್ಕೆ ಪೂರಕವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್   ತುರ್ತು ಸಭೆ ಕರೆದಿದ್ದು, ಮುಂಗಾರು ಅಧಿವೇಶನವನ್ನು ಗದ್ದಲವಿಲ್ಲದೆ ನಡೆಸಲು ಬೇಕಾದ ಆಡಳಿತ ಪಕ್ಷದ ಕಾರ್ಯತಂತ್ರಗಳ ಕುರಿತು ಚರ್ಚಿಸಿದ್ದಾರೆ. ಒಟ್ಟಾರೆಯಾಗಿ, ಈ ಮಳೆಗಾಲದ ಅಧಿವೇಶನವು ತೀವ್ರ ವಾಗ್ವಾದ ಹಾಗೂ ರಾಜಕೀಯ ರಣರಂಗಕ್ಕೆ ಸಾಕ್ಷಿಯಾಗುವುದಂತೂ ಗ್ಯಾರಂಟಿ.

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಸಂಸತ್ತಿನ ಮಳೆಗಾಲದ ಅಧಿವೇಶನವು ಯಾವಾಗ ಆರಂಭವಾಗಲಿದೆ ? ಮತ್ತು ಈ ಬಾರಿ ವಿರೋಧ ಪಕ್ಷಗಳು ಸರ್ಕಾರವನ್ನು ಯಾವ ವಿಷಯಗಳ ಮೇಲೆ ಮುತ್ತಿಗೆ ಹಾಕಲು ಸಿದ್ಧತೆ ನಡೆಸಿವೆ?

ಉತ್ತರ: ಸಂಸತ್ತಿನ ಮಳೆಗಾಲದ ಅಧಿವೇಶನವು ಜುಲೈ 20 ರಿಂದ ಆರಂಭವಾಗಲಿದೆ. ದೇಶದ ಜನಸಾಮಾನ್ಯರನ್ನು ಕಾಡುತ್ತಿರುವ ಹಣದುಬ್ಬರ, ಯುವಕರನ್ನು ಕಂಗಾಲು ಮಾಡಿರುವ ನಿರುದ್ಯೋಗ ಸಮಸ್ಯೆ ಮತ್ತು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ಇಟ್ಟಿರುವ ‘ನೀಟ್’ ಪರೀಕ್ಷೆ ಪೇಪರ್ ಸೋರಿಕೆ ಹಗರಣಗಳ ಕುರಿತು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷಗಳು ಸಿದ್ಧತೆ ನಡೆಸಿವೆ.

ಪ್ರಶ್ನೆ : ಈ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಮಂಡಿಸಲು ಉದ್ದೇಶಿಸಿರುವ 5 ಹೊಸ ಮಸೂದೆಗಳು ಯಾವುವು?

ಉತ್ತರ: ಕೇಂದ್ರ ಸರ್ಕಾರವು ಮಂಡಿಸಲು ಸಜ್ಜಾಗಿರುವ 5 ಹೊಸ ಮಸೂದೆಗಳು:

ಆದಾಯ ತೆರಿಗೆ (ತಿದ್ದುಪಡಿ) ಮಸೂದೆ, 2026

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿ (ತಿದ್ದುಪಡಿ) ಮಸೂದೆ, 2026

ಸುಪ್ರೀಂ ಕೋರ್ಟ್ (ನ್ಯಾಯಾಧೀಶರ ಸಂಖ್ಯೆ) ತಿದ್ದುಪಡಿ ಮಸೂದೆ, 2026

ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಮಸೂದೆ, 2026

ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆಗಟ್ಟುವಿಕೆ (ತಿದ್ದುಪಡಿ) ಮಸೂದೆ, 2026

ಪ್ರಶ್ನೆ : ಸರ್ಕಾರದ ಅಧಿಕೃತ ಪಟ್ಟಿಯಲ್ಲಿ ಇಲ್ಲದಿದ್ದರೂ, ವಿರೋಧ ಪಕ್ಷಗಳಲ್ಲಿ ಭೀತಿ ಮತ್ತು ಚರ್ಚೆ ಹುಟ್ಟುಹಾಕಿರುವ ಎರಡು ಪ್ರಮುಖ ವಿಷಯಗಳು ಯಾವುವು?

ಉತ್ತರ: ‘ಒಂದು ರಾಷ್ಟ್ರ ಒಂದು ಚುನಾವಣೆ’ ಮತ್ತು ‘ಕ್ಷೇತ್ರ ಪುನರ್ವಿಂಗಡಣೆ’ಪ್ರಕ್ರಿಯೆಗಳು ಸರ್ಕಾರದ ಅಧಿಕೃತ ಶಾಸಕಾಂಗ ಪಟ್ಟಿಯಲ್ಲಿ ಸದ್ಯಕ್ಕಿಲ್ಲದಿದ್ದರೂ ವಿರೋಧ ಪಕ್ಷಗಳಲ್ಲಿ ತೀವ್ರ ಆತಂಕ ಮೂಡಿಸಿವೆ. ಕೇಂದ್ರ ಸರ್ಕಾರವು ಇದ್ದಕ್ಕಿದ್ದಂತೆ ಇವುಗಳನ್ನು ಅಧಿವೇಶನದಲ್ಲಿ ಮಂಡಿಸಬಹುದು ಎಂದು ವಿರೋಧ ಪಕ್ಷಗಳು ನಂಬಿವೆ.

ಪ್ರಶ್ನೆ : ಕ್ಷೇತ್ರ ಪುನರ್ವಿಂಗಡಣೆ ಮಸೂದೆಯ ಕುರಿತು ಕಾಂಗ್ರೆಸ್ ಪಕ್ಷದ ನಿಲುವು ಏನು ಮತ್ತು ಅಧಿವೇಶನದ ಸುಗಮ ನಿರ್ವಹಣೆಗೆ ಸರ್ಕಾರ ಕೈಗೊಂಡ ಕ್ರಮವೇನು?

ಉತ್ತರ: ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯನ್ನು ಸಂಸತ್ತಿನ ಮುಂದೆ ತಂದರೆ ಅದನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಮತ್ತು ಸಂಸತ್ತಿನ ಒಳಗೆ ತೀವ್ರವಾಗಿ ಪ್ರತಿಭಟಿಸುವುದಾಗಿ ಕಾಂಗ್ರೆಸ್ ಈಗಾಗಲೇ ಕಟ್ಟುನಿಟ್ಟಾದ ಎಚ್ಚರಿಕೆ ನೀಡಿದೆ. ಇನ್ನೊಂದೆಡೆ, ಮುಂಗಾರು ಅಧಿವೇಶನವನ್ನು ಗದ್ದಲವಿಲ್ಲದೆ ನಡೆಸಲು ಬೇಕಾದ ಆಡಳಿತ ಪಕ್ಷದ ಕಾರ್ಯತಂತ್ರಗಳ ಕುರಿತು ಚರ್ಚಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತುರ್ತು ಸಭೆ ನಡೆಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 12:34 pm, Fri, 17 July 26

Source link

ದರ್ಶನ್ ಸಲ್ಲಿಸಿದ್ದ ಅರ್ಜಿ ವಜಾ, ಇಂದೇ ಬಿಡುಗಡೆ ಆಗಲಿದೆ ‘ಬಾಸ್’ ಸಿನಿಮಾ – Kannada News | High Court Clears Legal Hurdles, Darshan’s Plea Dismissed BOSS Kannada Film releasing

ಕನ್ನಡದ ‘ಬಾಸ್’ (Boss) ಸಿನಿಮಾ ಬಿಡುಗಡೆ ತಡೆ ಕೋರಿ ನಟ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಆ ಮೂಲಕ ಸಿನಿಮಾದ ಬಿಡುಗಡೆ ಇದ್ದ ಅಡೆ-ತಡೆಗಳು ನಿವಾರಣೆ ಆದಂತಾಗಿದ್ದು, ಇಂದೇ (ಜುಲೈ 17) ಸಿನಿಮಾ ಅನ್ನು ರಾಜ್ಯದಾದ್ಯಂತ ಬಿಡುಗಡೆ ಮಾಡುತ್ತಿದೆ ಚಿತ್ರತಂಡ. ಈ ಕುರಿತು ತುರ್ತು ಪತ್ರಿಕಾ ಹೇಳಿಕೆ ಹೊರಡಿಸಿ ಚಿತ್ರತಂಡ ಪ್ರಕಟಣೆ ಮಾಡಿದೆ. ಸುಮಾರು ಒಂದೂವರೆ ತಿಂಗಳಿನಿಂದಲೂ ಸಿನಿಮಾ ಬಿಡುಗಡೆಗೆ ಸಂಬಂಧಿಸಿದಂತೆ ನಡೆದಿದ್ದ ಹೊರಾಟದಲ್ಲಿ ಕೊನೆಗೆ ಚಿತ್ರತಂಡಕ್ಕೆ ಗೆಲುವಾಗಿದೆ.

‘ಬಾಸ್’ ಸಿನಿಮಾದ ನಾಯಕ ನಟ ಹಾಗೂ ನಿರ್ಮಾಪಕರಾದ ತನುಷ್ ಶಿವಣ್ಣ ಮತ್ತು ನಿರ್ದೇಶಕರಾದ ಲವಾ ವಿ ಸಂತೋಷ ಹರ್ಷ ವ್ಯಕ್ತಪಡಿಸಿದ್ದು, ನಮ್ಮ ಸಿನಿಮಾ ಇಂದೇ (ಜುಲೈ 17) ಬಿಡುಗಡೆ ಆಗಲಿದೆ. ಇಂದು ಸಂಜೆಯಿಂದಲೇ ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಮಾಡಲಾಗುವುದು ಎಂದಿದ್ದಾರೆ. ನಿರ್ಮಾಪಕ ತನುಷ್ ಶಿವಣ್ಣ ಮಾತನಾಡಿ, “ನಮ್ಮ ಚಿತ್ರದ ಮೇಲೆ ನಂಬಿಕೆ ಇಟ್ಟು ಬೆಂಬಲಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು. ನ್ಯಾಯದ ಗೆಲುವಿನೊಂದಿಗೆ ‘ಬಾಸ್’ ಇಂದು ಪ್ರೇಕ್ಷಕರ ಮುಂದೆ ಬರುತ್ತಿದೆ. ಪ್ರೇಕ್ಷಕರು ಚಿತ್ರವನ್ನು ಪ್ರೀತಿಯಿಂದ ಸ್ವೀಕರಿಸುತ್ತಾರೆ ಎಂಬ ವಿಶ್ವಾಸವಿದೆ,” ಎಂದಿದ್ದಾರೆ.

‘ಬಾಸ್’ ಸಿನಿಮಾ, ನಟ ದರ್ಶನ್ ಮತ್ತು ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಕುರಿತಾದ ಕತೆ ಹೊಂದಿದೆ ಹಾಗಾಗಿ ಸಿನಿಮಾದ ಬಿಡುಗಡೆಗೆ ತಡೆ ನೀಡಬೇಕು ಎಂದು ನಟ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಚಿತ್ರತಂಡವು ಇದನ್ನು ತಳ್ಳಿ ಹಾಕಿದ್ದು, ‘ಬಾಸ್’ ಸಿನಿಮಾ ದರ್ಶನ್ ಹಾಗೂ ಅವರ ಜೀವನ ಕುರಿತಾದ ಸಿನಿಮಾ ಅಲ್ಲ. ಇದೊಂದು ಕಾಲ್ಪನಿಕ ಕತೆ ಎಂದೇ ವಾದಿಸುತ್ತಾ ಬಂದಿತ್ತು. ನ್ಯಾಯಾಲಯದಲ್ಲಿಯೂ ಸಹ ಚಿತ್ರತಂಡ ಇದೇ ವಾದವನ್ನು ಮಾಡಿತು. ಕೊನೆಗೂ ಈಗ ‘ಬಾಸ್’ ಸಿನಿಮಾಕ್ಕೆ ಜಯವಾಗಿದೆ.

ಇದನ್ನೂ ಓದಿ:‘ದರ್ಶನ್ ಅಭಿಮಾನಿಗಳು ತಪ್ಪು ಮಾಡಲ್ಲ, ಅದು ಕಿಡಿಗೇಡಿಗಳ ಕೆಲಸ’; ಯುವ ರೈತ ಚೇತನ್

ಕೆಲ ತಿಂಗಳ ಹಿಂದೆ ‘ಬಾಸ್’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿತ್ತು. ಟ್ರೈಲರ್ ನೋಡಿದ ಪ್ರತಿಯೊಬ್ಬರು ಇದು ರೇಣುಕಾ ಸ್ವಾಮಿ ಕೊಲೆ ಪ್ರಕರಣ ಆಧರಿಸಿದ ಸಿನಿಮಾ ಎಂದಿದ್ದರು. ಟ್ರೈಲರ್​​ನಲ್ಲಿ, ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಹೋಲಿಕೆ ಆಗುವ ಸಾಕಷ್ಟು ಅಂಶಗಳು ಇದ್ದವು. ಸ್ಟಾರ್ ನಟ, ಆತನ ಪತ್ನಿ, ಅಕ್ರಮ ಸಂಬಂಧ, ಕೊಲೆ, ಮೋರಿ, ಗಾಡಿಗಳ ಶೆಡ್ಡು, ಲಾರಿಯ ಮುಂದೆ ನಿಂತು ಬೇಡಿಕೊಳ್ಳುವ ವ್ಯಕ್ತಿ, ಆತನ ಕೊಲೆ, ಕೊಲೆ ಮುಚ್ಚಿಡಲು ಹಣ ಕೊಟ್ಟು ಖರೀದಸಲಾಗುವ ಯುವಕರು, ಖಡಕ್ ಪೊಲೀಸ್ ಅಧಿಕಾರಿ ಎಲ್ಲವೂ ಇದ್ದವು. ಇದೇ ಕಾರಣಕ್ಕೆ ದರ್ಶನ್ ಮತ್ತು ಅವರ ಪತ್ನಿ ಸಿನಿಮಾದ ವಿರುದ್ಧ ಅರ್ಜಿ ಸಲ್ಲಿಸಿದ್ದರು. ಆದರೆ ಕೊನೆಗೆ ಚಿತ್ರತಂಡಕ್ಕೆ ಜಯ ದೊರೆತಿದ್ದು, ಸಿನಿಮಾ ಬಿಡುಗಡೆಗೆ ನ್ಯಾಯಾಲಯವು ಅಸ್ತು ಎಂದಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 1:07 pm, Fri, 17 July 26

Source link

Laxmi Puja on Friday: ಶುಕ್ರವಾರ ಈ ಒಂದು ಕೆಲಸ ಮಾಡಿ; ನಿಮ್ಮ ಮನೆಗೆ ಹುಡುಕಿಕೊಂಡು ಬರುತ್ತೆ ಅದೃಷ್ಟ! – Kannada News | Friday Lakshmi Wealth Remedy: Boost Prosperity with Ghee and Jaggery for Cow

ಹಿಂದೂ ಧರ್ಮ ಮತ್ತು ಸಂಪ್ರದಾಯದಲ್ಲಿ, ಶುಕ್ರವಾರವನ್ನು ಲಕ್ಷ್ಮಿ ದೇವಿಗೆ ಅತ್ಯಂತ ಶುಭ ಮತ್ತು ಪ್ರಿಯವಾದ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಮಾಡುವ ಪೂಜೆಗಳು ಮತ್ತು ಪರಿಹಾರಗಳು ಆರ್ಥಿಕ ಅಭಿವೃದ್ಧಿ ಹಾಗೂ ಸಂಪತ್ತಿನ ಬೆಳವಣಿಗೆಗೆ ನೇರವಾಗಿ ಕೊಡುಗೆ ನೀಡುತ್ತವೆ ಎಂಬ ಬಲವಾದ ನಂಬಿಕೆಯಿದೆ. ಶುಕ್ರವಾರದಂದು ದೇವರ ಕೋಣೆಯನ್ನು ಸ್ವಚ್ಛಗೊಳಿಸುವುದು, ಮನೆಯನ್ನು ಶುದ್ಧೀಕರಿಸುವುದು ಮತ್ತು ವಿಶೇಷ ಪೂಜೆಗಳನ್ನು ಮಾಡುವುದು ಎಷ್ಟು ಮುಖ್ಯವೋ, ಅದರೊಂದಿಗೆ ಜ್ಯೋತಿಷಿಗಳು ಸೂಚಿಸುವ ಈ ಒಂದು ಪುಟ್ಟ ಪರಿಹಾರವೂ ಅಷ್ಟೇ ಅದ್ಭುತ ಫಲಿತಾಂಶ ನೀಡುತ್ತದೆ ಎಂದು ನಂಬಲಾಗಿದೆ.

ಪ್ರಸಿದ್ಧ ಜ್ಯೋತಿಷಿ ಸೀತಾ ಶರ್ಮಾ ಅವರ ಅಮೂಲ್ಯ ಸಲಹೆ:

ಪ್ರಸಿದ್ಧ ಜ್ಯೋತಿಷಿ ಸೀತಾ ಶರ್ಮಾ ಅವರ ಪ್ರಕಾರ, ಶುಕ್ರವಾರದಂದು ಅತ್ಯಂತ ಸುಲಭವಾದ ಆದರೆ ಅಷ್ಟೇ ಶಕ್ತಿಯುತವಾದ ಪರಿಹಾರವೊಂದಿದೆ. ಸ್ವಲ್ಪ ಶುದ್ಧ ಹಸುವಿನ ತುಪ್ಪವನ್ನು ತೆಗೆದುಕೊಂಡು, ಅದರಲ್ಲಿ ಒಂದು ಸಣ್ಣ ಬೆಲ್ಲದ ತುಂಡನ್ನು ಅದ್ದಿ ಹಸುವಿಗೆ ತಿನ್ನಿಸಬೇಕು. ಇದನ್ನು ಮಾಡುವುದರಿಂದ ಅತ್ಯುತ್ತಮ ಫಲಿತಾಂಶಗಳು ನಿಮ್ಮದಾಗುತ್ತವೆ ಎಂದು ಅವರು ವಿವರಿಸಿದ್ದಾರೆ. ಈ ಪರಿಹಾರದಲ್ಲಿ ಬಳಸುವ ಮೂರು ಅಂಶಗಳಿಗೂ ವಿಶೇಷ ದೈವಿಕ ಹಿನ್ನೆಲೆಯಿದೆ.

ತುಪ್ಪ, ಬೆಲ್ಲ ಮತ್ತು ಗೋಮಾತೆಯ ದೈವಿಕ ಸಂಯೋಜನೆ:

ಜ್ಯೋತಿಷ್ಯ ಶಾಸ್ತ್ರದಲ್ಲಿ ತುಪ್ಪವನ್ನು ಶುದ್ಧತೆ ಮತ್ತು ದೈವಿಕತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇನ್ನು ಬೆಲ್ಲವು ಜೀವನದಲ್ಲಿ ಮಾಧುರ್ಯ ಮತ್ತು ಸಂಪತ್ತಿನ ಸಂಕೇತವಾಗಿದೆ. ಹಿಂದೂ ಸಂಸ್ಕೃತಿಯಲ್ಲಿ ಹಸುವನ್ನು ಮುಕ್ಕೋಟಿ ದೇವತೆಗಳ ವಾಸಸ್ಥಾನ ಹಾಗೂ ತಾಯಿ (ಗೋಮಾತೆ) ಎಂದು ಪೂಜಿಸಲಾಗುತ್ತದೆ. ಆದ್ದರಿಂದ, ಈ ಮೂರು ಪವಿತ್ರ ಅಂಶಗಳ ಸಂಯೋಜನೆಯು ಅತ್ಯಂತ ಶುಭ ಫಲಿತಾಂಶಗಳನ್ನು ನೀಡುತ್ತದೆ ಮತ್ತು ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ: ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಹಳದಿ ಮತ್ತು ಕೆಂಪು ಬಣ್ಣದ ಉಡುಪುಗಳನ್ನೇ ಆಯ್ಕೆ ಮಾಡುವುದೇಕೆ ಗೊತ್ತಾ? ಇಲ್ಲಿದೆ ಆಧ್ಯಾತ್ಮಿಕ ಮಹತ್ವ!

ಪರಿಹಾರವನ್ನು ಮಾಡುವ ಸರಿಯಾದ ಪದ್ಧತಿ ಹೀಗಿದೆ:

ಈ ಪರಿಹಾರಕ್ಕೆ ಯಾವುದೇ ದೊಡ್ಡ ಸಿದ್ಧತೆ ಅಥವಾ ಖರ್ಚಿನ ಅಗತ್ಯವಿಲ್ಲ. ಒಂದು ಸಣ್ಣ ಪಾತ್ರೆಯಲ್ಲಿ ಸ್ವಲ್ಪ ಶುದ್ಧ ತುಪ್ಪವನ್ನು ತೆಗೆದುಕೊಳ್ಳಿ. ಅದರಲ್ಲಿ ಒಂದು ಸಣ್ಣ ತುಂಡು ಬೆಲ್ಲವನ್ನು ಚೆನ್ನಾಗಿ ಅದ್ದಿ (ನೆನೆಸಿ). ನಂತರ, ಈ ಬೆಲ್ಲವನ್ನು ಹಸುವಿನ ಬಳಿಗೆ ತೆಗೆದುಕೊಂಡು ಹೋಗಿ, ನಿಮ್ಮ ಕೈಗಳಿಂದ ಪ್ರೀತಿಯಿಂದ ಅದಕ್ಕೆ ತಿನ್ನಿಸಿ. ಆದರೆ ಹಸುವಿಗೆ ಬೆಲ್ಲವನ್ನು ನೀಡುವಾಗ ಹೆಚ್ಚಿನ ಪ್ರಮಾಣದಲ್ಲಿ ನೀಡಬಾರದು, ಸಣ್ಣ ತುಂಡನ್ನು ಮಾತ್ರ ನೀಡಬೇಕು. ಹೆಚ್ಚು ಬೆಲ್ಲ ನೀಡುವುದರಿಂದ ಹಸುವಿನ ಆರೋಗ್ಯಕ್ಕೆ ಹಾನಿಯಾಗಬಹುದು ಅಥವಾ ವಾಕರಿಕೆ ಉಂಟಾಗಬಹುದು ಎಂದು ಜ್ಯೋತಿಷಿಗಳು ಎಚ್ಚರಿಸಿದ್ದಾರೆ.

ಆರ್ಥಿಕ ಬಲ ಮತ್ತು ಸಂಪತ್ತಿನ ವೃದ್ಧಿ:

ಈ ಸರಳ ಆಚರಣೆಯನ್ನು ನಿಯಮಿತವಾಗಿ ಮಾಡುವುದರಿಂದ ನಿಮ್ಮ ಜೀವನದಲ್ಲಿ ಅದ್ಭುತ ಬದಲಾವಣೆಗಳನ್ನು ಕಾಣಬಹುದು. ಈ ಆಚರಣೆಯು ನಿಮ್ಮ ಮನೆಯಲ್ಲಿ ಕಾಡುತ್ತಿರುವ ಆರ್ಥಿಕ ಸಮಸ್ಯೆಗಳನ್ನು ದೂರ ಮಾಡಿ, ಆರ್ಥಿಕ ಬಲವನ್ನು ತರುತ್ತದೆ ಮತ್ತು ಸಂಪತ್ತನ್ನು ವೃದ್ಧಿಸುತ್ತದೆ. ಹಣದ ಹರಿವು ಹೆಚ್ಚಾಗುವುದರಿಂದ ವ್ಯಾಪಾರ ಮತ್ತು ಉದ್ಯೋಗದಲ್ಲಿ ಲಾಭ ಕಂಡುಬರುತ್ತದೆ. ಆರ್ಥಿಕ ಸಂಕಷ್ಟಗಳಿಂದ ಸಂಪೂರ್ಣವಾಗಿ ಮುಕ್ತಿ ಸಿಗುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಹಣಕಾಸಿನ ಚಿಂತೆಗಳು ದೂರವಾದಾಗ ಕುಟುಂಬದಲ್ಲಿ ಶಾಂತಿಯುತ ಮತ್ತು ಸಂತೋಷದ ವಾತಾವರಣ ನೆಲೆಸುತ್ತದೆ. ಇದು ಇಡೀ ಕುಟುಂಬದ ನೆಮ್ಮದಿಗೆ ಕಾರಣವಾಗುತ್ತದೆ ಎಂದು ಅವರು ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version