ಶಿವಣ್ಣ ನಟಿಸಬೇಕಿದ್ದ ‘ಭೈರವನ ಕೊನೆ ಪಾಠ’ ನಿಂತು ಹೋಗಿದ್ದೇಕೆ? ಕಾರಣ ಕೊಟ್ಟ ನಿರ್ದೇಶಕ – Kannada News | Hemanth Rao talks about his movie Bhairavana Kone Paatha

ಹೇಮಂತ್ ರಾವ್ (Hemanth Rao), ‘ಸಪ್ತ ಸಾಗರದಾಚೆ ಎಲ್ಲೊ’ ಸೈಡ್ ಎ ಮತ್ತು ಬಿಗಳ ಮೂಲಕ ದೇಶದ ಸಿನಿಮಾ ಪ್ರೇಮಿಗಳ ಗಮನ ಸೆಳೆದಿದ್ದಾರೆ. ಬೇರೆ ಬೇರೆ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ, ನಟರುಗಳು ಸಹ ಹೇಮಂತ್ ರಾವ್ ಅವರ ಪ್ರತಿಭೆಯನ್ನು ಕೊಂಡಾಡಿದ್ದಾರೆ. ಇದೀಗ ಹೇಮಂತ್ ರಾವ್ ಅವರು ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಆದರೆ ‘ಸಪ್ತ ಸಾಗರದಾಚೆ ಎಲ್ಲೊ’ ಸೈಡ್ ಬಿ ಸಿನಿಮಾ ಬಿಡುಗಡೆ ಆದ ಬಳಿಕ ಹೇಮಂತ್ ರಾವ್ ಅವರು ಶಿವರಾಜ್ ಕುಮಾರ್ ಜೊತೆಗೆ ‘ಭೈರವನ ಕೊನೆ ಪಾಠ’ ಸಿನಿಮಾ ಘೋಷಿಸಿದ್ದರು. ಸಿನಿಮಾದ ಪೋಸ್ಟರ್ ಸಹ ಬಿಡುಗಡೆ ಆಗಿತ್ತು. ಆದರೆ ಆ ಸಿನಿಮಾ ಅಚಾನಕ್ಕಾಗಿ ನಿಂತು ಹೋಯ್ತು. ಅದಕ್ಕೆ ಕಾರಣವನ್ನು ಖುದ್ದು ಹೇಮಂತ್ ರಾವ್ ನೀಡಿದ್ದಾರೆ.

ತೆಲುಗಿನ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಹೇಮಂತ್ ರಾವ್, ‘ಭೈರವನ ಕೊನೆ ಪಾಠ’ ಸಿನಿಮಾ 12ನೇ ಶತಮಾನದಲ್ಲಿ ನಡೆಯುವ ಕತೆಯನ್ನು ಒಳಗೊಂಡಿದೆ. ಅದು ಒಂದು ರೀತಿ ಶೇಕ್ಸ್ಪಿಯರ್ ಮಾದರಿಯ ಕತೆಯುಳ್ಳ ಸಿನಿಮಾ. ಆಗಿನ ಕಾಲದ ಅಂದ-ಚಂದವನ್ನಲ್ಲದೆ, ಆಗ ನಿಜವಾಗಿಯೂ ಮನುಷ್ಯರು ಎದುರಿಸುತ್ತಿದ್ದ ಸಮಸ್ಯೆಗಳು, ಜೀವನದ ಕಷ್ಟಗಳ ಕುರಿತಾದ ಕತೆಯನ್ನು ಆ ಸಿನಿಮಾ ಒಳಗೊಂಡಿದೆ. ಸಿನಿಮಾವು 12ನೇ ಶತಮಾನದ ಜನ ನೀವನದ ಮೇಲೆ ಬೆಳಕು ಚೆಲ್ಲುವ ಸಿನಿಮಾ ಆಗಿತ್ತು ಎಂದು ಹೇಮಂತ್ ರಾವ್ ಹೇಳಿದ್ದಾರೆ.

‘ಸಿನಿಮಾದ ಪ್ರೀ ಪ್ರೊಡಕ್ಷನ್ ಎಲ್ಲ ಮುಗಿದು, ನಾವು ಚಿತ್ರೀಕರಣ ಪ್ರಾರಂಭಿಸುವ ಹಂತದಲ್ಲಿದ್ದೆವು. ಸಿನಿಮಾದ ಫೋಟೊಶೂಟ್, ರಿಹರ್ಸಲ್ ಎಲ್ಲವೂ ಮುಗಿದಿತ್ತು. ಆಗ ನಮಗೆ ಶಿವಣ್ಣನ ಆರೋಗ್ಯ ಸ್ಥಿತಿಯ ಬಗ್ಗೆ ಗೊತ್ತಾಯ್ತು. ಅವರು ಕ್ಯಾನ್ಸರ್ ಜೊತೆ ಹೋರಾಡುತ್ತಿದ್ದರು. ನಾನು ಶಿವಣ್ಣನ ಬಹಳ ಪ್ರೀತಿಸುತ್ತೆನೆ, ಗೌರವಿಸುತ್ತೇನೆ. ಹಾಗಾಗಿ ಇಂಥಹಾ ಸಮಯದಲ್ಲಿ ಇಂಥಹಾ ಕಷ್ಟದ ಸಿನಿಮಾ ಅನ್ನು ಅವರಿಂದ ಮಾಡಿಸುವುದು ಬೇಡ ಎನಿಸಿ, ನಾನೇ ಹಿಂದೆ ಸರಿದೆ’ ಎಂದಿದ್ದಾರೆ ಹೇಮಂತ್ ರಾವ್.

ಇದನ್ನೂ ಓದಿ:ಅಪ್ಪುಗೆ ‘ಸಿಐಡಿ 999’ ಕತೆ ಹೇಳಿದ್ದ ನಿರ್ದೇಶಕ ಹೇಮಂತ್ ರಾವ್

‘ಭೈರವನ ಕೊನೆ ಪಾಠ’ ಸಿನಿಮಾಕ್ಕೆ ಸಾಕಷ್ಟು ದೈಹಿಕ ಶ್ರಮ ಹಾಕಬೇಕಿತ್ತು, ಸಾಕಷ್ಟು ಹೊರಾಂಗಣ ಚಿತ್ರೀಕರಣ, ಆಕ್ಷನ್ ದೃಶ್ಯಗಳು, ಕುದುರೆ ಸವಾರಿ ಇನ್ನೂ ಏನೇನೋ ಇತ್ತು. ಅನಾರೋಗ್ಯದಿಂದ ಬಳಲಿದ್ದ ಶಿವಣ್ಣನ ಕೈಯಲ್ಲಿ ಅದನ್ನೆಲ್ಲ ಮಾಡಿಸಲು ನನ್ನ ಮನಸ್ಸು ಒಪ್ಪಲಿಲ್ಲ. ಶಿವಣ್ಣನನ್ನು ನೋವಿನಲ್ಲಿ ನೋಡುವುದು ನನಗೆ ಆಗುತ್ತಿರಲಿಲ್ಲ. ಹಾಗಾಗಿ ಆ ಸಿನಿಮಾದಿಂದ ಹಿಂದೆ ಸರಿದೆ. ಆದರೆ ಶಿವಣ್ಣನೊಟ್ಟಿಗೆ ಸಿನಿಮಾ ಮಾಡಲೇ ಬೇಕು ಎಂಬುದು ನನ್ನ ಆಸೆಯಾಗಿತ್ತು. ಹಾಗಾಗಿ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾದ ಕತೆ ಬರೆದೆ, ಈಗ ಚಿತ್ರೀಕರಣ ಮಾಡುತ್ತಿದ್ದೇವೆ’ ಎಂದಿದ್ದಾರೆ ಹೇಮಂತ್.

ಅಂದಹಾಗೆ ‘ಭೈರವನ ಕೊನೆ ಪಾಠ’ ಸಿನಿಮಾದ ಕತೆ ಶಿವಣ್ಣನಿಗೂ ಬಹಳ ಇಷ್ಟವಾಗಿದೆಯಂತೆ. ನಾವು ಖಂಡಿತ ಆ ಸಿನಿಮಾ ಮಾಡಲೇ ಬೇಕು ಎಂದು ಶಿವಣ್ಣ ಸಹ ಹೇಳಿದ್ದಾರಂತೆ. ಈಗ ಈ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಖಂಡಿತ ಆ ಸಿನಿಮಾವನ್ನು ಸಹ ನಿರ್ದೇಶಿಸುತ್ತೀನಿ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವಿಶ್ವದ ಹಲವು ದೇಶಗಳಿಗಿಂತ ಭಾರತದಲ್ಲಿ ಪೆಟ್ರೋಲ್ ಅಗ್ಗ; ಇದು ಹೇಗೆ ಸಾಧ್ಯವಾಯಿತು? ಸಚಿವ ಹರ್ದೀಪ್ ಸಿಂಗ್ ಪುರಿ ಬಿಚ್ಚಿಟ್ಟ ಸತ್ಯ – Kannada News | Indian among countries with lowest petrol prices, minister Puri explains reasons for it

ನವದೆಹಲಿ, ಜುಲೈ 10: ವಿಶ್ವದ ಪ್ರಮುಖ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಣನೀಯವಾಗಿ ನಿಯಂತ್ರಣದಲ್ಲಿವೆ ಹಾಗೂ ಅಗ್ಗವಾಗಿವೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. ಜಾಗತಿಕ ಇಂಧನ ಬಿಕ್ಕಟ್ಟಿನ ನಡುವೆಯೂ ಭಾರತವು ತನ್ನ ಗ್ರಾಹಕರಿಗೆ ಹೊರೆಯಾಗದಂತೆ ಇಂಧನ ದರಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ ಎಂದು ಅವರು ವಿವರಿಸಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆಗಳು ತೀವ್ರವಾಗಿ ಏರಿಳಿತ ಕಾಣುತ್ತಿದ್ದರೂ, ಭಾರತದಲ್ಲಿ ಇಂಧನ ಲಭ್ಯತೆ ಮತ್ತು ಕೈಗೆಟುಕುವ ದರವನ್ನು ಕಾಯ್ದುಕೊಳ್ಳಲು ಸರ್ಕಾರ ಕೈಗೊಂಡ ಪ್ರಮುಖ ಕ್ರಮಗಳು ಮತ್ತು ದೇಶದ ಭವಿಷ್ಯದ ಇಂಧನ ತಂತ್ರಗಾರಿಕೆಯನ್ನು ಸಚಿವರು ಹಂಚಿಕೊಂಡಿದ್ದಾರೆ.

ಭಾರತದಲ್ಲಿ ಇಂಧನ ದರ ನಿಯಂತ್ರಣದಲ್ಲಿರಲು ಕಾರಣಗಳೇನು?

ಹರ್ದೀಪ್ ಸಿಂಗ್ ಪುರಿ ವಿವರಿಸಿದಂತೆ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದರೂ ಭಾರತದಲ್ಲಿ ದರಗಳು ಸ್ಥಿರವಾಗಿರಲು ಪ್ರಮುಖ ಕಾರಣಗಳು ಈ ಕೆಳಕಂಡಂತಿವೆ:

  • ಅಬಕಾರಿ ಸುಂಕ ಕಡಿತ: ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು (Excise Duty) ಎರಡು ಬಾರಿ ಕಡಿತಗೊಳಿಸುವ ಮೂಲಕ ಸಾರ್ವಜನಿಕರಿಗೆ ನೇರ ಪರಿಹಾರ ನೀಡಿದೆ.
  • ಹಲವು ರಾಜ್ಯಗಳಲ್ಲಿ ವ್ಯಾಟ್ ಕಡಿತ: ಕೇಂದ್ರದ ಕರೆಯನ್ನು ಮನ್ನಿಸಿ ಹಲವಾರು ಬಿಜೆಪಿ ಆಡಳಿತವಿರುವ ರಾಜ್ಯಗಳು ಇಂಧನಗಳ ಮೇಲಿನ ವ್ಯಾಟ್ (VAT – ಮೌಲ್ಯವರ್ಧಿತ ತೆರಿಗೆ) ಅನ್ನು ಕಡಿತಗೊಳಿಸಿವೆ. ಇದು ಗ್ರಾಹಕರಿಗೆ ಮತ್ತಷ್ಟು ನೆರವಾಯಿತು ಎನ್ನುತ್ತಾರೆ ಸಚಿವರು.
  • ತೈಲ ಕಂಪನಿಗಳ ಸಹಕಾರ: ಜಾಗತಿಕವಾಗಿ ಬೆಲೆಗಳು ಹೆಚ್ಚಿದ್ದಾಗಲೂ ದೇಶದ ಸಾರ್ವಜನಿಕ ವಲಯದ ತೈಲ ಮಾರ್ಕೆಟಿಂಗ್ ಕಂಪನಿಗಳು (OMCs) ದೇಶೀಯವಾಗಿ ಬೆಲೆಗಳನ್ನು ತೀವ್ರವಾಗಿ ಹೆಚ್ಚಿಸದೆ ಗ್ರಾಹಕರನ್ನು ರಕ್ಷಿಸಿದವು ಎಂದು ಸಚಿವ ಪುರಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಅಮೆರಿಕದ ಸೆಂಟ್ರಲ್ ಬ್ಯಾಂಕ್​ನಲ್ಲಿ ಸುಧಾರಣೆ ತರಲು ಹೊರಟವರಲ್ಲಿ ರಾಜ್ ಚೆಟ್ಟಿ, ರಘುರಾಮ್ ರಾಜನ್, ಆಶಾ ಶರ್ಮಾ

ಎಥನಾಲ್ ಮಿಶ್ರಣ: ಭಾರತದ ಮಾಸ್ಟರ್ ಪ್ಲಾನ್

ಭಾರತವು ಕಚ್ಚಾ ತೈಲ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಎಥನಾಲ್ ಮಿಶ್ರಣ (Ethanol Blending) ತಂತ್ರಗಾರಿಕೆಯನ್ನು ಅತ್ಯಂತ ವೇಗವಾಗಿ ಅನುಷ್ಠಾನಗೊಳಿಸುತ್ತಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವರು ವಿವರಿಸಿದ್ದಾರೆ.

2014 ರಲ್ಲಿ ಪೆಟ್ರೋಲ್‌ನಲ್ಲಿ ಎಥನಾಲ್ ಮಿಶ್ರಣದ ಪ್ರಮಾಣ ಕೇವಲ ಶೇಕಡಾ 1.4 ರಷ್ಟಿತ್ತು. ಸರ್ಕಾರದ ನಿರಂತರ ಪ್ರಯತ್ನದಿಂದಾಗಿ ಇದು ಈಗ ಶೇ. 15 ಕ್ಕೆ ತಲುಪಿದೆ. ಪೆಟ್ರೋಲ್‌ನಲ್ಲಿ ಶೇ. 20 ರಷ್ಟು ಎಥನಾಲ್ ಮಿಶ್ರಣ ಮಾಡುವ (E20) ಗುರಿಯನ್ನು ಸರ್ಕಾರ ಹೊಂದಿದ್ದು, ಇದನ್ನು ನಿಗದಿತ ಅವಧಿಗಿಂತ ಮುಂಚಿತವಾಗಿಯೇ ತಲುಪಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಬ್ಬು ಮತ್ತು ಧಾನ್ಯಗಳ ಬಳಕೆ: ರೈತರಿಗೆ ಹೆಚ್ಚುವರಿ ಆದಾಯ

ಎಥನಾಲ್ ಉತ್ಪಾದನೆಗಾಗಿ ಕಬ್ಬಿನ ರಸ, ಕಾಕಂಬಿ (Molasses) ಮಾತ್ರವಲ್ಲದೆ ಹಾನಿಗೊಳಗಾದ ಧಾನ್ಯಗಳು ಮತ್ತು ಹೆಚ್ಚುವರಿ ಅಕ್ಕಿಯನ್ನು ಬಳಸಲಾಗುತ್ತಿದೆ. ಇದರಿಂದಾಗಿ ದೇಶದ ರೈತರಿಗೆ ಕಳೆದ ಹತ್ತು ವರ್ಷಗಳಲ್ಲಿ ₹1.45 ಲಕ್ಷ ಕೋಟಿಗೂ ಅಧಿಕ ಹಣ ಸಂದಾಯವಾಗಿದೆ ಎನ್ನುವ ಮಾಹಿತಿಯನ್ನೂ ಸಚಿವರ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ವೋಕ್ಸಾ; ಭಾರತ ಮೂಲದ 12 ವರ್ಷದ ಬಾಲಕಿ ಮಾನ ಜಂಪಾಲ ಸ್ಥಾಪಿಸಿದ ಎಐ ಸ್ಟಾರ್ಟಪ್

ಜಾಗತಿಕ ಇಂಧನ ದರಗಳ ಏರಿಳಿತ (2021-2024ರಲ್ಲಿ)

2021-24ರಲ್ಲಿ ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಭಾರತವು ಇಂಧನ ದರ ಏರಿಕೆಯನ್ನು ಎಷ್ಟು ಸಮರ್ಥವಾಗಿ ತಡೆದಿದೆ ಎಂಬುದಕ್ಕೆ ಈ ಕೆಳಗಿನ ಅಂಕಿ-ಅಂಶಗಳು ಸಾಕ್ಷಿಯಾಗಿವೆ:

  • ಭಾರತ: ಶೇ. 4.65 ರಷ್ಟು ಇಳಿಕೆ
  • ಫ್ರಾನ್ಸ್: ಶೇ. 23.15 ರಷ್ಟು ಏರಿಕೆ
  • ಜರ್ಮನಿ: ಶೇ. 21.95 ರಷ್ಟು ಏರಿಕೆ
  • ಇಟಲಿ: ಶೇ. 15.75 ರಷ್ಟು ಏರಿಕೆ
  • ಬ್ರಿಟನ್ (UK): ಶೇ. 11.65 ರಷ್ಟು ಏರಿಕೆ

ಪ್ರಸ್ತುತ ತೈಲ ಉತ್ಪಾದಿಸುವ ರಾಷ್ಟ್ರಗಳಲ್ಲೇ ಪೆಟ್ರೋಲ್ ಬೆಲೆ ಬಹುತೇಕ ಭಾರತದ ದರಗಳ ಸಮೀಪಕ್ಕೆ ಬಂದಿದೆ. ಯೂರೋಪ್​ನಲ್ಲಿ ಕೆಲವೆಡೆ ಎರಡು ಪಟ್ಟು ಹೆಚ್ಚು ಬೆಲೆ ಇದೆ. ವಿಶ್ವದ ಹೆಚ್ಚಿನ ದೇಶಗಳಲ್ಲಿ ಪೆಟ್ರೋಲ್ ಬೆಲೆ ಭಾರತದಕ್ಕಿಂತ ಹೆಚ್ಚು ಇದೆ.

ಹಸಿರು ಇಂಧನದಿಂದ ರಾಷ್ಟ್ರ, ಪರಿಸರ ಮತ್ತು ರೈತರಿಗೆ ಅನುಕೂಲ

“ಹಸಿರು ಇಂಧನ ಮತ್ತು ಇಂಧನ ಭದ್ರತೆಯತ್ತ ಭಾರತದ ಪಯಣ ಕೇವಲ ಪರಿಸರ ರಕ್ಷಣೆಯಷ್ಟೇ ಅಲ್ಲ, ಅದು ದೇಶದ ಆರ್ಥಿಕತೆಯನ್ನು ಬಲಪಡಿಸುವ ಮತ್ತು ನಮ್ಮ ರೈತರನ್ನು ಸಬಲೀಕರಣಗೊಳಿಸುವ ಮಹತ್ವದ ಹೆಜ್ಜೆಯಾಗಿದೆ. ಭಾರತವು ಕೇವಲ ಪೆಟ್ರೋಲ್ ಮಾತ್ರವಲ್ಲದೆ ಮುಂಬರುವ ದಿನಗಳಲ್ಲಿ ಡೀಸೆಲ್‌ನಲ್ಲೂ ಬಯೋ-ಡೀಸೆಲ್ ಮಿಶ್ರಣ ಮಾಡುವ ಮತ್ತು ಹಸಿರು ಹೈಡ್ರೋಜನ್ (Green Hydrogen) ಬಳಕೆಯನ್ನು ಹೆಚ್ಚಿಸುವತ್ತ ಬಲವಾದ ಕಾರ್ಯತಂತ್ರವನ್ನು ರೂಪಿಸುತ್ತಿದೆ” ಎಂದು ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.

ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು, ಸಂದೇಹಗಳು (FAQs)

ಪ್ರಶ್ನೆ: ಭಾರತದಲ್ಲಿ ಪೆಟ್ರೋಲ್ ಬೆಲೆ ದುಬಾರಿ ಇದೆಯಾ?

ಉತ್ತರ: ಜಾಗತಿಕವಾಗಿ ಇತರ ಹೆಚ್ಚಿನ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಪೆಟ್ರೋಲ್ ಬೆಲೆ ಕಡಿಮೆ ಇದೆ.

ಪ್ರಶ್ನೆ: ಭಾರತದಲ್ಲಿ ಪೆಟ್ರೋಲ್ ಬೆಲೆ ನಿಯಂತ್ರಣ ಹೇಗೆ ಸಾಧ್ಯವಾಯಿತು?

ಉತ್ತರ: ಸರ್ಕಾರ ಅಬಕಾರಿ ಸುಂಕ ಕಡಿಮೆ ಮಾಡಿತು. ಒಎಂಸಿಗಳು ಕಚ್ಚಾ ತೈಲ ಬೆಲೆ ಹೆಚ್ಚಾದರೂ ಪೆಟ್ರೋಲ್ ಬೆಲೆ ಏರಿಸಲಿಲ್ಲ.

ಪ್ರಶ್ನೆ: ಇ-20 ಇಂಧನದ ಪ್ರಯೋಜನವೇನು?

ಉತ್ತರ: ಶೇ. 20ರಷ್ಟು ಎಥನಾಲ್ ಮಿಶ್ರಣ ಇರುವ ಇಂಧನವೇ ಇ-20. ಕಬ್ಬು ಮತ್ತು ಕಾಕಂಬಿಯಿಂದ ಎಥನಾಲ್ ತಯಾರಿಸಲಾಗುತ್ತದೆ. ಇದರಿಂದ ರೈತರು ಹಾಗೂ ಸರ್ಕಾರಕ್ಕೆ ಅನುಕೂಲವಾಗುತ್ತದೆ.

Source link

ಬೇಬಿ ಯಡಿಯೂರಪ್ಪ ತಮ್ಮ ನಾಯಕರ ಮೇಲಿರುವ ಕೇಸ್​ಗಳ ಬಗ್ಗೆ ಮಾತನಾಡಿದ್ರೆ ಒಳ್ಳೆಯದು: ವಿಜಯೇಂದ್ರಗೆ ಹರಿಪ್ರಸಾದ್ ತಿರುಗೇಟು – Kannada News | It Would Be Better If He Spoke About the Cases Against His Leaders: BK Hariprasad sparks Vijayendra

ಬೆಂಗಳೂರು, ಜುಲೈ 10: ಸೋನಿಯಾ ಗಾಂಧಿ ಮೇಲೆ ಯಾವುದೇ ಪ್ರಕರಣಗಳಿಲ್ಲವೇ ಎಂದು ಪ್ರಶ್ನಿಸುವ ಮೊದಲು, ಚೆಕ್ ಮೂಲಕ ಲಂಚ ಪಡೆದು ಜೈಲಿಗೆ ಹೋಗಿದ್ದ ಬಿಎಸ್​ ಯಡಿಯೂರಪ್ಪ ಇತಿಹಾಸವನ್ನು ನೆನಪಿಸಿಕೊಳ್ಳಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್​​ ತಿರುಗೇಟು ನೀಡಿದ್ದಾರೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಬಿವೈ ವಿಜಯೇಂದ್ರ ಮಾಡಿರುವ ಟೀಕೆಗಳಿ ಬಗ್ಗೆ ಮಾತನಾಡಿದ ಅವರು, ವಿಜಯೇಂದ್ರರನ್ನ ಬೇಬಿ ಯಡಿಯೂರಪ್ಪ ಎಂದು ಕರೆದಿದ್ದಾರೆ. ತಮ್ಮ ನಾಯಕರ ಮೇಲಿನ ಆರೋಪಗಳಿಗೆ ಬೇಬಿ ಯಡಿಯೂರಪ್ಪ ಉತ್ತರಿಸಿದ್ದರೆ ಚೆನ್ನಾಗಿತ್ತು ಎಂದು ಕಿಡಿಕಾರಿದ್ದಾರೆ. ರಾಷ್ಟ್ರೀಯ ಹೆರಾಲ್ಡ್ ಪ್ರಕರಣವು 10 ವರ್ಷದಿಂದ ನಡೆಯುತ್ತಿದೆ. ಅದು ನ್ಯಾಷನಲ್ ಹೆರಾಲ್ಡ್ ಕಂಪನಿ‌ ಆ್ಯಕ್ಟ್​ನಲ್ಲಿದೆ. ಇದರಲ್ಲಿ 10 ರೂ ತೆಗೆದುಕೊಳ್ಳಲು ಆಗುವುದಿಲ್ಲ, 10 ರೂ ಕೊಡಲು ಆಗುವುದಿಲ್ಲ. ಕೇಂದ್ರದಲ್ಲಿ ಸರ್ಕಾರ ತಮ್ಮದೇ ಇರುವುದರಿಂದ, ಏನಾದರೂ ಅವ್ಯವಹಾರ ನಡೆದಿರುವುದು ಸಾಬೀತಾದರೆ, ಅದನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸುವಂತೆ ಸವಾಲು ಹಾಕಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ವಯನಾಡು ಭೂಕುಸಿತ, ಮೃತರ ಸಂಖ್ಯೆ 7ಕ್ಕೆ ಏರಿಕೆ

ತಿರುವನಂತಪುರಂ, ಜುಲೈ 10: ವಯನಾಡು ಭೂಕುಸಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಏಳಕ್ಕೇರಿದೆ. ನಾಪತ್ತೆಯಾಗಿದ್ದ ಐವರ ಪೈಕಿ ನಾಲ್ವರ ಮೃತದೇಹಗಳು ಈಗಾಗಲೇ ಪತ್ತೆಯಾಗಿದ್ದು, ಒಬ್ಬರಿಗಾಗಿ ಎನ್‌ಡಿಆರ್‌ಎಫ್ ಸಿಬ್ಬಂದಿ ಶೋಧ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ. ಮಳೆ ಹಾಗೂ ನೀರಿನ ಹರಿವಿನ ನಡುವೆಯೂ ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಕಲ್ಲಾಡಿಯಲ್ಲಿ ಸಂಭವಿಸಿದ ಈ ಭೂಕುಸಿತವು ಕೃತಕ ಮಣ್ಣಿನ ಗುಡ್ಡದಿಂದಲೇ ಉಂಟಾಗಿದೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಸುರಂಗ ಮಾರ್ಗ ಕಾಮಗಾರಿಗಾಗಿ ತೆಗೆದಿದ್ದ ಮಣ್ಣನ್ನು ಸ್ಥಳದಲ್ಲೇ ಸಂಗ್ರಹಿಸಿದ್ದರಿಂದ ಇದು ಕೃತಕ ಬೆಟ್ಟದಂತೆ ರೂಪುಗೊಂಡಿತ್ತು. ಜಿಲ್ಲಾಡಳಿತವು ಈ ಮಣ್ಣನ್ನು ತೆರವುಗೊಳಿಸಲು ಸೂಚನೆ ನೀಡಿದ್ದರೂ, ಅದನ್ನು ಪಾಲಿಸಿರಲಿಲ್ಲ. ಈ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣವಾಗಿದೆ ಎಂದು ಆರೋಪಿಸಲಾಗಿದೆ.

ಇದು ಮಾನವ ನಿರ್ಮಿತ ದುರಂತವಾಗಿದ್ದು, ಅಭಿವೃದ್ಧಿ ಕಾಮಗಾರಿಗಳ ಸಂದರ್ಭದಲ್ಲಿ ಉಂಟಾಗುವ ನಿರ್ಲಕ್ಷ್ಯಕ್ಕೆ ಮತ್ತೊಂದು ಉದಾಹರಣೆಯಾಗಿದೆ. ಕಳೆದ ವರ್ಷ ಉತ್ತರ ಕನ್ನಡದಲ್ಲಿ ಸಂಭವಿಸಿದ ದುರಂತಗಳು, ಕೇರಳದ ಇತರೆಡೆಗಳಲ್ಲಿ ಆದ ಅನಾಹುತಗಳೂ ಕೂಡ ಇಂತಹ ಆರೋಪಗಳಿಗೆ ಗುರಿಯಾಗಿವೆ. ಅಮೂಲ್ಯ ಜೀವಗಳನ್ನು ಉಳಿಸಲು ಇಂತಹ ನಿರ್ಲಕ್ಷ್ಯಗಳನ್ನು ತಡೆಯುವುದು ಅನಿವಾರ್ಯವಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಧಮಾಲ್ 4’ ನೋಡಿದ ಪ್ರೇಕ್ಷಕರು ಏನಂದ್ರು? ಇಲ್ಲಿದೆ ಟ್ವಿಟರ್ ವಿಮರ್ಶೆ

2007ರಲ್ಲಿ ಬಂದ ‘ಧಮಾಲ್’ ಸಖತ್ ನಗು ಉಕ್ಕಿಸಿತ್ತು. ಆದರೆ ಈ ನಾಲ್ಕನೇ ಭಾಗ ಅತಿಯಾದ ತಲೆನೋವು ತರಿಸುತ್ತದೆ’- ‘ಧಮಾಲ್ 4’ ನೋಡಿದವರ ವಿಮರ್ಶೆ ಇದು. ಅಜಯ್ ದೇವಗನ್ ಮೊದಲಾದವರು ನಟಿಸಿರೋ ಈ ಚಿತ್ರ ಇಂದು (ಜುಲೈ 10) ರಿಲೀಸ್ ಆಗಿದೆ. ಚಿತ್ರದ ಕಥೆ ಹಳೆಯ ಶೈಲಿಯಲ್ಲೇ ಇದೆ ಎಂದು ಫ್ಯಾನ್ಸ್ ಹೊರಹಾಕಿದ್ದಾರೆ.

‘ಧಮಾಲ್’ ಸರಣಿಯಲ್ಲಿ ನಿಧಿ/ಹಣ ಹುಡುಕೋ ಕಥೆ ಇರುತ್ತದೆ. ‘ಧಮಾಲ್ 4’ ಚಿತ್ರದಲ್ಲೂ ಅದು ಮುಂದುವರಿದಿದೆ. ಆದರೆ, ಇದು ‘ಪೈರೇಟ್ಸ್ ಆಫ್ ದಿ ಕೆರಿಬಿಯನ್’ ಮತ್ತು ‘ಇಂಡಿಯಾನಾ ಜೋನ್ಸ್’ ಚಿತ್ರಗಳ ಕಳಪೆ ಕಾಪಿ ತರಹ ಇದೆ ಎಂದು ಪ್ರೇಕ್ಷಕರು ಕಿಡಿಕಾರುತ್ತಿದ್ದಾರೆ. ಕೊನೆಯಿಲ್ಲದ ನಿಧಿ (ಖಜಾನೆ) ಹುಡುಕಾಟದ ಕಥೆ ಪ್ರೇಕ್ಷಕರಿಗೆ ಸಾಕು ಅನ್ನಿಸಿದೆ.

ಹಳೆ ಆ್ಯಕ್ಟಿಂಗ್

ಚಿತ್ರದಲ್ಲಿ ಅಜಯ್ ದೇವಗನ್ ಹೀರೋಯಿಸಂ ತೋರಿಸುತ್ತಾ ಹಡಗು, ಬೆಟ್ಟಗಳಿಂದ ಜಿಗಿಯುವ ಸಾಹಸ ಮಾಡಿದ್ದಾರೆ ಎಂದು ಪ್ರೇಕ್ಷಕರು ಹೇಳಿದ್ದಾರೆ. ಇದು ಹಳೇ ಸ್ಟೈಲ್ ಎಂದು ಫ್ಯಾನ್ಸ್ ಕಿಡಿಕಾರುತ್ತಿದ್ದಾರೆ. ಸಂಜಯ್ ಮಿಶ್ರಾ ಪ್ರತಿಯೊಂದು ಲೈನ್‌ಗೂ ‘ಬ್ರೋ’ ಅಂತ ಸೇರಿಸೋ ಸ್ಟೈಲ್ ಇಷ್ಟ ಆಗಲ್ಲ ಎಂದಿದ್ದಾರೆ ಫ್ಯಾನ್ಸ್.

ಸಿನಿಮಾದಲ್ಲಿ ಇಷ್ಟ ಆಗಿದ್ದು ಇವರೊಬ್ಬರೇ

ಈ ಸರಣಿಗೆ ನಟ ರವಿ ಕಿಶನ್ ಹೊಸದಾಗಿ ಸೇರ್ಪಡೆ ಆಗಿದ್ದಾರೆ. ಅವರ ಪಾತ್ರಕ್ಕೆ ಮಾತ್ರ ಸ್ವಲ್ಪ ಮೆಚ್ಚುಗೆ ಸಿಗುತ್ತಿದೆ. ಜಾಕ್ ಸ್ಪ್ಯಾರೋ ತರಹ ಸಮುದ್ರದ ಕಳ್ಳನಾಗಿ, ಕಣ್ಣಿಗೆ ಕಾಡಿಗೆ ಹಚ್ಚಿಕೊಂಡು ಬರುವ ರವಿ ಕಿಶನ್ ಅವರ ಪಾತ್ರ ಮಾತ್ರ ಪ್ರೇಕ್ಷಕರನ್ನು ಕೊಂಚ ನಗಿಸುವಲ್ಲಿ ಯಶಸ್ವಿಯಾಗಿದೆ.

ವಿಪರೀತ CGI ಗ್ರಾಫಿಕ್ಸ್ ಮತ್ತು ಬಾಲಿಶ ಜೋಕ್ಸ್

ಚಿತ್ರದಲ್ಲಿ ಕಾಮಿಡಿಗಿಂತ ಹೆಚ್ಚಾಗಿ ಕಣ್ಣಿಗೆ ಚುಚ್ಚುವಂತಹ ಸಿಜಿಐ (CGI) ಗ್ರಾಫಿಕ್ಸ್ ತುಂಬಿಹೋಗಿದೆ ಎಂಬುದು ಪ್ರೇಕ್ಷಕರ ಅಭಿಪ್ರಾಉ. ಹುಲಿ, ಮೊಸಳೆ, ಬೆಟ್ಟಗಳು ಎಲ್ಲವೂ ಗ್ರಾಫಿಕ್ಸ್‌ನಲ್ಲೇ ಇವೆ ಎಂಬ ಮಾತು ವ್ಯಕ್ತವಾಗಿದೆ.

ಕೆಲವರಿಗೆ ಇಷ್ಟ ಆಯ್ತು

ಕೆಲವರಿಗೆ ಈ ‘ಧಮಾಲ್ 4’ ಸಿನಿಮಾ ಇಷ್ಟ ಆಗಿದೆ. ಮೈಂಡ್​​ಲೆಸ್ ಕಾಮಿಡಿ ಶೈಲಿಯಲ್ಲಿ ಈ ಸಿನಿಮಾ ಮೂಡಿಬರುವುದರಿಂದ ಅದು ಒಂದು ವರ್ಗದ ಜನರು ಇಷ್ಟಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ನಮ್ಮಿಬ್ರನ್ನ ಊರಿಗೆ ಕರ್ಕೊಂಡು ಹೋಗಿ’: ಪೊಲೀಸರಿಗೆ ಕರೆ ಮಾಡಿ ದಂಪತಿ ಕಿರಿಕ್! ವೀಡಿಯೋ ವೈರಲ್ – Kannada News | Couple Calls 112 Emergency Help Number and Argues with Police for Drop Home

ಧಾರವಾಡ, ಜುಲೈ 10: ಜಿಲ್ಲಾಸ್ಪತ್ರೆಯಲ್ಲಿ ನಿನ್ನೆ ರಾತ್ರಿ ಚಿಕಿತ್ಸೆ ಪಡೆಯಲು ಬಂದ ದಂಪತಿ 112 ಸಹಾಯವಾಣಿಗೆ ಕರೆ ಮಾಡಿ ಪೊಲೀಸರೊಂದಿಗೇ ಕಿರಿಕ್ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಧಾರವಾಡ ತಾಲೂಕಿನ ಅಮ್ಮಿನಭಾವಿ ಗ್ರಾಮದ ದಂಪತಿ, ಪತ್ನಿಯ ಬೆನ್ನು ನೋವಿನ ಹಿನ್ನೆಲೆ ಆ್ಯಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಬಂದಿದ್ದರು. ಆದರೆ, ಚಿಕಿತ್ಸೆ ಮುಗಿದ ಬಳಿಕ ಹೊಸ ವರಸೆ ಆರಂಭಿಸಿದ ಪತಿ, ನಮಗೆ ಸೂಕ್ತ ಚಿಕಿತ್ಸೆ ಸಿಕ್ಕಿಲ್ಲ ಎಂದು ಆರೋಪಿಸಿ 112ಕ್ಕೆ ಕರೆ ಮಾಡಿದ್ದಾನೆ. ಸ್ಥಳಕ್ಕೆ ಬಂದ ತುರ್ತು ವಾಹನದ ಪೊಲೀಸ್ ಸಿಬ್ಬಂದಿ ಬಳಿ, ನಮ್ಮಿಬ್ಬರನ್ನೂ ನಮ್ಮ ಊರಿಗೆ ಕರೆದುಕೊಂಡು ಹೋಗಿ ಬಿಡಬೇಕು ಎಂದು ಹಠ ಹಿಡಿದು ಕಿರಿಕ್ ಮಾಡಿದ್ದಾನೆ.

ಅದಕ್ಕೆ ನಿಯಮಾವಳಿಗಳ ಪ್ರಕಾರ ಅವಕಾಶವಿಲ್ಲ ಎಂದು ಪೊಲೀಸರು ನಿರಾಕರಿಸಿದಾಗ, ದಂಪತಿ ಪೊಲೀಸರೊಂದಿಗೇ ತೀವ್ರ ವಾಗ್ವಾದಕ್ಕಿಳಿದಿದ್ದಾರೆ. ಸದ್ಯ ಪೊಲೀಸರೊಂದಿಗೆ ವಾದ ನಡೆಸಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಣಿಪಾಲ ಬಳಿ ಕಂದಕಕ್ಕೆ ಉರುಳಿದ ಶಾಲಾ ಬಸ್: ಎಂಟು ಮಕ್ಕಳಿಗೆ ಗಾಯ – Kannada News | Udupi School Bus Plunges into Ditch, Eight Children Injured in Manipal Incident

ಉಡುಪಿ, ಜುಲೈ 10: ಮಣಿಪಾಲ ಸಮೀಪದ ಕೊಡಂಗೆಯಲ್ಲಿ ಇಂದು ಬೆಳಿಗ್ಗೆ ಶಾಲಾ ಬಸ್‌ವೊಂದು ಕಂದಕಕ್ಕೆ ಉರುಳಿಬಿದ್ದಿದೆ. ಈ ಅಪಘಾತದಲ್ಲಿ ಎಂಟು ಮಕ್ಕಳಿಗೆ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಣಿಪಾಲದ ಕ್ರಸ್ಟ್ ಸ್ಕೂಲ್‌ಗೆ ಸೇರಿದ ಬಸ್ ಇದಾಗಿದ್ದು, ಮಕ್ಕಳನ್ನು ಶಾಲೆಗೆ ಕರೆದೊಯ್ಯುವಾಗ ಈ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮವಾಗಿ ಬಸ್ ರಸ್ತೆ ಪಕ್ಕದ ಕಂದಕಕ್ಕೆ ಮಗುಚಿಬಿದ್ದಿದೆ. ಅಪಘಾತದಲ್ಲಿ ಏಳು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಓರ್ವ ಮಗುವಿಗೆ ಹೆಚ್ಚಿನ ಪೆಟ್ಟಾಗಿದೆ. ಗಾಯಗೊಂಡ ಮಗುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

DKHFW Recruitment 2026: ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಗುಡ್​ ನ್ಯೂಸ್; DKHFWನಲ್ಲಿ 33 ಹುದ್ದೆಗಳಿಗೆ ನೇಮಕಾತಿ – Kannada News | DKHFW Recruitment 2026: Senior Lab Tech and Pharmacy Officer Jobs in Dakshina Kannada

ದಕ್ಷಿಣ ಕನ್ನಡದಲ್ಲಿ ನೇಮಕಾತಿ
Image Credit source: dkhfw.in

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ (DKHFW) ಉತ್ತಮ ಅವಕಾಶ ಲಭ್ಯವಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ, ಮಂಗಳೂರು ವತಿಯಿಂದ ಹಿರಿಯ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ ಹಾಗೂ ಫಾರ್ಮಸಿ ಅಧಿಕಾರಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಜುಲೈ 15ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿ ಪ್ರಕ್ರಿಯೆಯಲ್ಲಿ ಒಟ್ಟು 33 ಹುದ್ದೆಗಳು ಭರ್ತಿಯಾಗಲಿದ್ದು, ಅವುಗಳಲ್ಲಿ ಹಿರಿಯ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗೆ 22 ಹುದ್ದೆಗಳು ಮತ್ತು ಫಾರ್ಮಸಿ ಅಧಿಕಾರಿಗೆ 11 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಹುದ್ದೆಗಳು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಗುತ್ತಿಗೆ ಆಧಾರದ ಮೇಲೆ ನಡೆಯಲಿದೆ.

ವಿದ್ಯಾರ್ಹತೆ ಏನು?

ಹಿರಿಯ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು M.Sc ಅಥವಾ DMLT (Diploma in Medical Laboratory Technology) ವಿದ್ಯಾರ್ಹತೆಯನ್ನು ಹೊಂದಿರಬೇಕು. ಸಂಬಂಧಿತ ಕ್ಷೇತ್ರದಲ್ಲಿ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ. ಫಾರ್ಮಸಿ ಅಧಿಕಾರಿ ಹುದ್ದೆಗೆ B.Pharm ಪದವಿ ಪಡೆದಿರಬೇಕು. ಜೊತೆಗೆ ಕರ್ನಾಟಕ ಫಾರ್ಮಸಿ ಕೌನ್ಸಿಲ್‌ನಲ್ಲಿ ನೋಂದಣಿ ಕಡ್ಡಾಯವಾಗಿದೆ. ಸಂಬಂಧಿತ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.

ಇದನ್ನೂ ಓದಿ: ಕರ್ನಾಟಕ ಅರಣ್ಯ ಇಲಾಖೆಯಲ್ಲಿ 750 ಅರಣ್ಯ ವೀಕ್ಷಕ ಹುದ್ದೆಗಳಿಗೆ ನೇಮಕಾತಿ; 10th ಪಾಸಾಗಿದ್ರೆ ಸಾಕು!

ಆಯ್ಕೆ ಪ್ರಕ್ರಿಯೆ ಹೇಗಿರಲಿದೆ?

ಅಭ್ಯರ್ಥಿಗಳ ವಿದ್ಯಾರ್ಹತೆ ಮತ್ತು ಅರ್ಹತೆಯ ಆಧಾರದ ಮೇಲೆ ಪ್ರಾಥಮಿಕ ಆಯ್ಕೆ ನಡೆಸಲಾಗುತ್ತದೆ. ಬಳಿಕ 1:2 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ಅಂತಿಮ ಆಯ್ಕೆ ಸಂದರ್ಶನದಲ್ಲಿ ಅಭ್ಯರ್ಥಿಗಳ ಸಾಧನೆಯ ಆಧಾರದ ಮೇಲೆ ನಡೆಯಲಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 45 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ:

ಅಭ್ಯರ್ಥಿಗಳು dkhfw.in ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಪ್ರಕಟಣೆಯನ್ನು ಸಂಪೂರ್ಣವಾಗಿ ಓದಿ, ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುವುದು ಸೂಕ್ತ. ಅರ್ಜಿ ಸಲ್ಲಿಸುವಾಗ ನೀಡುವ ಮಾಹಿತಿಯು ನಿಖರವಾಗಿರಬೇಕು. ಅಪೂರ್ಣ ಅಥವಾ ತಪ್ಪಾದ ಮಾಹಿತಿಯಿರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಮುಂಚಿತವಾಗಿಯೇ ಅರ್ಜಿ ಸಲ್ಲಿಸುವುದು ಒಳಿತು.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On – 2:19 pm, Fri, 10 July 26

Source link

ಇದು ಕರ್ನಾಟಕದಲ್ಲೇ ಮೊದಲು: ಮಂಗಳೂರಲ್ಲಿ ಒಣ ಕಸದಿಂದ ‘ಇಂಧನ ಪೆಲ್ಲೆಟ್‌’ ತಯಾರಿಕೆ; ಕಲ್ಲಿದ್ದಲಿಗೆ ಪರ್ಯಾಯವಾಗಿ ಪರಿಸರಸ್ನೇಹಿ ಆವಿಷ್ಕಾರ – Kannada News | Dakshina Kannada ZP Pioneers Waste Management with New RDF Plant, Boosting Green Energy

ಮಂಗಳೂರು, ಜು.10: ವೈಜ್ಞಾನಿಕ ಕಸ ವಿಲೇವಾರಿ ಮತ್ತು ಪರಿಸರ ಸಂರಕ್ಷಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಇಡೀ ರಾಜ್ಯಕ್ಕೆ ಮಾದರಿಯಾಗಬಲ್ಲ ಹೊಸ ಮೈಲಿಗಲ್ಲೊಂದನ್ನು ಸ್ಥಾಪಿಸಿದೆ. ಮರುಬಳಕೆ ಮಾಡಲು ಸಾಧ್ಯವಾಗದ ಒಣ ಕಸವನ್ನು ಕೈಗಾರಿಕೆಗಳಿಗೆ ಬಳಸಬಹುದಾದ ಪರ್ಯಾಯ ಇಂಧನವನ್ನಾಗಿ (Alternative Industrial Fuel) ಪರಿವರ್ತಿಸುವ ವಿಶೇಷ ಘಟಕವನ್ನು ಮಂಗಳೂರು ಸಮೀಪದ ಕೆಮ್ರಾಲ್‌ನಲ್ಲಿ ಅಧಿಕೃತವಾಗಿ ಕಾರ್ಯಾರಂಭ ಮಾಡಲಾಗಿದೆ. ಈ ರೀತಿಯ ತಂತ್ರಜ್ಞಾನ ಆಧರಿತ ಘಟಕವು ಕರ್ನಾಟಕದಲ್ಲೇ ಮೊದಲನೆಯದಾಗಿದೆ. ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆಯಡಿ ಸರಿಸುಮಾರು 15 ದಿನಗಳ ಹಿಂದಷ್ಟೇ ಈ ಪ್ರಾಯೋಗಿಕ ಘಟಕವನ್ನು ಆರಂಭಿಸಲಾಗಿದೆ.

ಇದುವರೆಗೆ ಸಂಪೂರ್ಣ ಅನುಪಯುಕ್ತ ಎಂದು ಭಾವಿಸಲಾಗಿದ್ದ ಹಳೆಯ ಬಟ್ಟೆಗಳು, ಪಾದರಕ್ಷೆಗಳು, ಏಕಬಳಕೆಯ ಪ್ಲಾಸ್ಟಿಕ್ ಹಾಗೂ ಮರುಬಳಕೆಗೆ ಬಾರದ ಇತರ ಒಣ ತ್ಯಾಜ್ಯಗಳನ್ನು ಸಂಸ್ಕರಿಸಿ, ಅದರಿಂದ ‘ರೆಫ್ಯೂಸ್ ಡಿರೈವ್ಡ್ ಫ್ಯುಯೆಲ್’ (RDF) ಪೆಲ್ಲೆಟ್‌ಗಳನ್ನು (ಸಣ್ಣ ಇಂಧನ ಉಂಡೆಗಳು) ಇಲ್ಲಿ ಉತ್ಪಾದಿಸಲಾಗುತ್ತದೆ. ಈ ಉಂಡೆಗಳನ್ನು ಕೈಗಾರಿಕಾ ಬಾಯ್ಲರ್‌ಗಳಲ್ಲಿ ಇಂಧನವಾಗಿ ಬಳಸಬಹುದು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಿಇಒ ನರವಾಡೆ ವಿನಾಯಕ್ ಕಾರ್ಭಾರಿ ಅವರ ಪ್ರಕಾರ, “ಮಹಾರಾಷ್ಟ್ರದ ಇಂತಹದ್ದೇ ಒಂದು ಘಟಕಕ್ಕೆ ಅಧ್ಯಯನ ಪ್ರವಾಸ ಕೈಗೊಂಡ ಬಳಿಕ ಈ ವಿಶಿಷ್ಟ ಯೋಜನೆಯನ್ನು ರೂಪಿಸಲಾಯಿತು. ಯಂತ್ರೋಪಕರಣಗಳಿಗಾಗಿ ಸುಮಾರು 50 ಲಕ್ಷ ರೂ. ವೆಚ್ಚ ಮಾಡಲಾಗಿದ್ದು, ಕೆಮ್ರಾಲ್‌ನಲ್ಲಿರುವ ಹಳೆಯ ಒಣ ಕಸ ಸಂಸ್ಕರಣಾ ಶೆಡ್ ಅನ್ನು ಇದಕ್ಕಾಗಿ ನವೀಕರಿಸಲಾಗಿದೆ.” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಾಹ್ಯಾಕಾಶದಲ್ಲೊಂದು ಮಿನಿ ಉದ್ಯಾನ, ವಿಡಿಯೋ ಹಂಚಿಕೊಂಡ ಗಗನಯಾತ್ರಿ

ಕೆಮ್ರಾಲ್‌ನಲ್ಲಿ ಸ್ಥಾಪಿತವಾಗಿರುವ ಈ ಒಣ ತ್ಯಾಜ್ಯ ಸಂಸ್ಕರಣಾ ಘಟಕವು ಕೇವಲ ಒಂದು ಸಾಮಾನ್ಯ ಕಸ ವಿಲೇವಾರಿ ಕೇಂದ್ರವಲ್ಲ. ಇದು ಆರ್ಥಿಕತೆ, ಪರಿಸರ ಮತ್ತು ಸಾರಿಗೆ ವ್ಯವಸ್ಥೆಯ ಮೇಲೆ ದೀರ್ಘಕಾಲೀನ ಸಕಾರಾತ್ಮಕ ಪ್ರಭಾವ ಬೀರಬಲ್ಲ ಸಾಮರ್ಥ್ಯ ಹೊಂದಿದೆ. ಇದರಿಂದಾಗುವ ಪ್ರಯೋಜನಗಳೇನು? ಹಾಗೂ ಯಾರಿಗೆ ಸಹಾಯವಾಗಲಿದೆ.

ಸಾರಿಗೆ ವೆಚ್ಚದಲ್ಲಿ ಭಾರಿ ಉಳಿತಾಯ

ಇದುವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಮೆಟೀರಿಯಲ್ ರಿಕವರಿ ಫೆಸಿಲಿಟಿ ಕೇಂದ್ರಗಳಲ್ಲಿ ಸಂಗ್ರಹವಾಗುತ್ತಿದ್ದ ಮರುಬಳಕೆ ಮಾಡಲಾಗದ ಕಸವನ್ನು ಸಹ-ಸಂಸ್ಕರಣೆಗಾಗಿ ನೂರಾರು ಕಿಲೋಮೀಟರ್ ದೂರದಲ್ಲಿರುವ ಬೆಳಗಾವಿ ಹಾಗೂ ಕಲ್ಬುರ್ಗಿಯ ಸಿಮೆಂಟ್ ಕಾರ್ಖಾನೆಗಳಿಗೆ ಸಾಗಿಸಲಾಗುತ್ತಿತ್ತು. ಇದಕ್ಕೆ ಪ್ರತಿ ಟ್ರಕ್ ಲೋಡ್‌ಗೆ ಅಂದಾಜು ₹48,000 ಸಾರಿಗೆ ವೆಚ್ಚ ತಗಲುತ್ತಿತ್ತು. ಈಗ ಸ್ಥಳೀಯವಾಗಿಯೇ ಕಸ ಸಂಸ್ಕರಣೆಯಾಗಿ ಇಂಧನವಾಗಿ ಬದಲಾಗುವುದರಿಂದ ಈ ಭಾರಿ ಹಣಕಾಸಿನ ಹೊರೆ ಇಲಾಖೆಗೆ ತಪ್ಪಲಿದೆ.

ಪಳೆಯುಳಿಕೆ ಇಂಧನದ ಮೇಲಿನ ಅವಲಂಬನೆ ಕಡಿತ

ಈ ಘಟಕದಲ್ಲಿ ತಯಾರಾಗುವ ‘ಆರ್‌ಡಿಎಫ್’ ಇಂಧನ ಉಂಡೆಗಳು ಅತ್ಯಧಿಕ ಶಾಖೋತ್ಪನ್ನ ಮೌಲ್ಯವನ್ನು ಹೊಂದಿರುತ್ತವೆ. ಇವುಗಳನ್ನು ಕೈಗಾರಿಕೆಗಳಲ್ಲಿ ಕಲ್ಲಿದ್ದಲಿಗೆ ಪರ್ಯಾಯವಾಗಿ ಬಳಸಬಹುದು. ಇದರಿಂದಾಗಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಕಲ್ಲಿದ್ದಲಿನಂತಹ ಪಳೆಯುಳಿಕೆ ಇಂಧನಗಳ ಬಳಕೆ ಗಣನೀಯವಾಗಿ ಕಡಿಮೆಯಾಗಲಿದ್ದು, ಹಸಿರು ಇಂಧನ ಪರಿಕಲ್ಪನೆಗೆ ವೇಗ ಸಿಗಲಿದೆ.

ಕಸಕ್ಕೂ ಬಂತು ಕಾಸಿನ ಮೌಲ್ಯ

ಈ ಯೋಜನೆ ‘ವೃತ್ತಾಕಾರದ ಆರ್ಥಿಕತೆ’ಗೆ ಅತ್ಯುತ್ತಮ ಉದಾಹರಣೆಯಾಗಿದೆ. ಭೂಮಿಗೆ ಭಾರವಾಗುತ್ತಿದ್ದ ಸಿಂಗಲ್ ಯೂಸ್ ಪ್ಲಾಸ್ಟಿಕ್, ಹಳೇ ಬಟ್ಟೆ, ಚಪ್ಪಲಿಗಳಂತಹ ಅನುಪಯುಕ್ತ ಒಣ ಕಸಕ್ಕೆ ಈಗ ಮಾರುಕಟ್ಟೆಯಲ್ಲಿ ವಾಣಿಜ್ಯ ಬೆಲೆ ಸಿಕ್ಕಿದೆ. ಉತ್ಪಾದನೆಯಾಗುವ ಪೆಲೆಟ್‌ಗಳನ್ನು ಕೆಜಿಗೆ ₹5 ರಂತೆ ಪುಣೆಯ ಕಂಪನಿಯು ನೇರವಾಗಿ ಖರೀದಿಸುವುದರಿಂದ ಜಿ.ಪಂಗೆ ಖಾತರಿ ಆದಾಯದ ಮೂಲ ಸೃಷ್ಟಿಯಾಗಿದೆ.

ಗ್ರಾಮೀಣ ಮಹಿಳಾ ಸಬಲೀಕರಣ

ಈ ಇಡೀ ಘಟಕವನ್ನು ಗ್ರಾಮೀಣ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟವಾದ ‘ಕೋರ್ದಬ್ಬು ಸಂಜೀವಿನಿ ಒಕ್ಕೂಟ’ಕ್ಕೆ ವಹಿಸಿಕೊಟ್ಟಿರುವುದು ಶ್ಲಾಘನೀಯ. ಇದು ಗ್ರಾಮೀಣ ಭಾಗದ ಮಹಿಳೆಯರಲ್ಲಿ ತಾಂತ್ರಿಕ ಕೌಶಲ್ಯವನ್ನು ಬೆಳೆಸುವುದಲ್ಲದೆ, ಸ್ಥಳೀಯವಾಗಿ ಸುಸ್ಥಿರ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ.

ಭವಿಷ್ಯದ ವಿಸ್ತರಣೆಗೆ ಮುನ್ನುಡಿ

ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಡಪದವು, ಉಜಿರೆ, ಕೆದಂಬಾಡಿ ಮತ್ತು ನರಿಕೊಂಬು ಸೇರಿದಂತೆ 4 MRF ಕೇಂದ್ರಗಳಿದ್ದು, ಇವು ದಿನಕ್ಕೆ ಒಟ್ಟು 31 ಟನ್ ಒಣ ಕಸ ನಿರ್ವಹಿಸುತ್ತವೆ. ಇದರಲ್ಲಿ ಅರ್ಧದಷ್ಟು ಕಸ ಇಂಧನ ತಯಾರಿಕೆಗೆ ಯೋಗ್ಯವಾಗಿದೆ. ಹಾಗಾಗಿ, ಕೆಮ್ರಾಲ್‌ನಲ್ಲಿ ಆರಂಭವಾಗಿರುವ ಈ ಪ್ರಾಯೋಗಿಕ ಪ್ಲಾಂಟ್ ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಇಂತಹ ಮತ್ತಷ್ಟು ಘಟಕಗಳನ್ನು ಸ್ಥಾಪಿಸಿ ಇಡೀ ಜಿಲ್ಲೆಯನ್ನು ಕಸಮುಕ್ತ ಹಾಗೂ ಇಂಧನ ಸ್ವಾವಲಂಬಿಯನ್ನಾಗಿ ಮಾಡಬಹುದು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಿರುಪತಿಗೆ ರೈಲು ಸಿಗದಿದ್ದಕ್ಕೆ ಎಣ್ಣೆ ಮತ್ತಿನಲ್ಲಿ ಆರ್​ಟಿಸಿ ಬಸ್ಸನ್ನೇ ಕದ್ದು ಓಡಿಸಿದ ವ್ಯಕ್ತಿ, ಟೋಲ್​ ಗೇಟ್​ನಲ್ಲಿ ಸಿಕ್ಕಿಬಿದ್ದ – Kannada News | Telangana: Drunk Man Steals RTC Bus for Tirupati After Missing Train, Caught at Toll

ಜನಗಾಂವ್, ಜುಲೈ 10: ಮದ್ಯದ ಅಮಲಿನಲ್ಲಿ ಮನುಷ್ಯ ಏನೆಲ್ಲಾ ಮಾಡಲು ಸಾಧ್ಯ ಎಂಬುದಕ್ಕೆ ತೆಲಂಗಾಣದ ಜನಗಾಂವ್ ಜಿಲ್ಲೆಯಲ್ಲಿ ನಡೆದಿರುವ ಈ ವಿಲಕ್ಷಣ ಘಟನೆಯೇ ಸಾಕ್ಷಿ. ತಿರುಪತಿಗೆ ಹೋಗಲು ರೈಲು ಸಿಗಲಿಲ್ಲ ಎಂಬ ಒಂದೇ ಒಂದು ಕಾರಣಕ್ಕೆ, ಟ್ರ್ಯಾಕ್ಟರ್ ಚಾಲಕನೊಬ್ಬ ಬಸ್ ನಿಲ್ದಾಣದಲ್ಲಿದ್ದ ಸರ್ಕಾರಿ ಆರ್​​ಟಿಸಿ (RTC) ಬಸ್ಸನ್ನೇ ಕದ್ದು ಬರೋಬ್ಬರಿ 21 ಕಿಲೋಮೀಟರ್ ಓಡಿಸಿಕೊಂಡು ಹೋಗಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಅಂತಿಮವಾಗಿ ಟೋಲ್ ಪ್ಲಾಜಾ ಬಳಿ ಬಸ್ ಅಪಘಾತ(Accident)ಕ್ಕೀಡಾದಾಗ ಈ ಕಳ್ಳತನ ಬಯಲಾಗಿದೆ.

ಪೊಲೀಸರ ಪ್ರಕಾರ, ಜನಗಾಂವ್ ಜಿಲ್ಲೆಯ ಚೆನ್ನೂರು ಗ್ರಾಮದ ನಿವಾಸಿ ವೆಂಕಣ್ಣ ವೃತ್ತಿಯಲ್ಲಿ ಟ್ರ್ಯಾಕ್ಟರ್ ಡ್ರೈವರ್. ಈತನಿಗೆ ತಿರುಪತಿ ತಿಮ್ಮಪ್ಪನ ದರ್ಶನ ಮಾಡಬೇಕೆಂಬ ಭಾರಿ ಆಸೆಯಿತ್ತು. ಇದಕ್ಕಾಗಿ ಎರಡು ಬಾರಿ ರೈಲ್ವೆ ನಿಲ್ದಾಣಕ್ಕೆ ಹೋಗಿದ್ದನಾದರೂ, ತಿರುಪತಿಗೆ ಹೋಗುವ ರೈಲುಗಳು ಸಿಗದ ಕಾರಣ ರೈಲ್ವೆ ಸಿಬ್ಬಂದಿ ಈತನನ್ನು ವಾಪಸ್ ಕಳುಹಿಸಿದ್ದರು.

ರೈಲು ಸಿಗದ್ದಕ್ಕೆ ಬೇಸರಗೊಂಡ ವೆಂಕಣ್ಣ, ಸೀದಾ ಹೋಗಿ ಮದ್ಯ ಸೇವಿಸಿ ಫುಲ್ ಟೈಟ್ ಆಗಿದ್ದ. ಅದೇ ಅಮಲಿನಲ್ಲಿ ಜನಗಾಂವ್ ಬಸ್ ನಿಲ್ದಾಣದ ಬಳಿ ಅಲೆದಾಡುತ್ತಿದ್ದಾಗ, ಅಲ್ಲಿ ಲಾಕ್ ಆಗದೆ ನಿಂತಿದ್ದ ಟಿಎಸ್ 27 ಟಿ 7231 ನಂಬರಿನ ಆರ್​​ಟಿಸಿ ಬಸ್ ಕಣ್ಣಿಗೆ ಬಿದ್ದಿದೆ.

ನಿಲ್ದಾಣಕ್ಕೆ ಒಂದು ರೌಂಡ್ ಹಾಕಿ ಸೂರ್ಯಪೇಟೆಗೆ ಹಾರಿದ ವೆಂಕಣ್ಣ

ಮದ್ಯದ ಅಮಲಿನಲ್ಲಿದ್ದ ವೆಂಕಣ್ಣನಿಗೆ ಸಡನ್ನಾಗಿ ತಾನೊಬ್ಬ ಡ್ರೈವರ್ ಎಂಬ ವಿಷಯ ನೆನಪಾಗಿದೆ. ಬಸ್ಸಿನ ಚಾಲಕನ ಸೀಟಿನಲ್ಲಿ ಕೂತು ನೋಡಿದಾಗ ಅಲ್ಲಿ ಕೀ ಇರಲಿಲ್ಲ, ಆದರೆ ಬಸ್ಸಿನ ಟೂಲ್ ಬಾಕ್ಸ್ ಇತ್ತು. ಟ್ರ್ಯಾಕ್ಟರ್ ಓಡಿಸಿ ಅನುಭವವಿದ್ದ ವೆಂಕಣ್ಣ, ಟೂಲ್ ಕಿಟ್ ಬಳಸಿ ಕ್ಷಣಾರ್ಧದಲ್ಲಿ ಬಸ್ ಸ್ಟಾರ್ಟ್ ಮಾಡಿಯೇ ಬಿಟ್ಟ.

ಮತ್ತಷ್ಟು ಓದಿ: ಯಮ ಸ್ವರೂಪಿಯಾದ ಬಿಎಂಟಿಸಿ ಬಸ್​​​​​ಗಳು: ಬೆಂಗಳೂರಿನಲ್ಲಿ ಮತ್ತೊಂದು ಅಪಘಾತ

ಬಸ್ ಸ್ಟಾರ್ಟ್ ಆಗುತ್ತಿದ್ದಂತೆ ನೇರವಾಗಿ ಹೈವೇಗೆ ಹೋಗದ ವೆಂಕಣ್ಣ, ಮೊದಲು ಯಾರಿಗೂ ಸಂಶಯ ಬಾರದಂತೆ ಜನಗಾಂವ್ ಬಸ್ ನಿಲ್ದಾಣದ ಸುತ್ತಲೂ ರಾಜಾರೋಷವಾಗಿ ಒಂದು ರೌಂಡ್ ಹೊಡೆದಿದ್ದಾನೆ. ನಂತರ ಬಸ್ಸನ್ನು ಸೀದಾ ಸೂರ್ಯಪೇಟೆ ಹೆದ್ದಾರಿಯ ಕಡೆಗೆ ಬಿಟ್ಟಿದ್ದಾನೆ. ರಾತ್ರಿಯಲ್ಲಿ ಪ್ರಯಾಣಿಕರಿಲ್ಲದ ಬಸ್ಸನ್ನು ಈತ ಬರೋಬ್ಬರಿ 21 ಕಿಲೋಮೀಟರ್ ದೂರ ನಿರಾಯಾಸವಾಗಿ ಓಡಿಸಿದ್ದಾನೆ.

ಟೋಲ್ ಗೇಟ್‌ನಲ್ಲಿ ‘ರಿವರ್ಸ್ ಗೇರ್’ ಆಟ, ಪೊಲೀಸರ ಎಂಟ್ರಿ

ವೆಂಕಣ್ಣನ ಈ ಸಾಹಸಯಾತ್ರೆಗೆ ಬ್ರೇಕ್ ಬಿದ್ದಿದ್ದು ಸಿಂಗರಾಜುಪಲ್ಲಿ ಟೋಲ್ ಪ್ಲಾಜಾ ಬಳಿ. ಮಧ್ಯರಾತ್ರಿ ಟೋಲ್ ಗೇಟ್ ತಲುಪಿದ ವೆಂಕಣ್ಣ, ಮದ್ಯದ ಅಮಲಿನಲ್ಲಿ ಬಸ್ಸನ್ನು ನಿಯಂತ್ರಿಸಲಾಗದೆ ಟೋಲ್ ಡಿವೈಡರ್‌ಗೆ ಜೋರಾಗಿ ಡಿಕ್ಕಿ ಹೊಡೆಸಿದ್ದಾನೆ. ಅಪಘಾತವಾಗುತ್ತಿದ್ದಂತೆ ಗಾಬರಿಯಾದ ಆತ, ಬಸ್ಸನ್ನು ಹೈವೇಯಲ್ಲೇ ರಿವರ್ಸ್ ಮಾಡಲು ಕಷ್ಟಪಟ್ಟಿದ್ದಾನೆ. ಮುಂದೆ-ಹಿಂದೆ ಮಾಡುತ್ತಾ ಟೋಲ್ ಸಿಬ್ಬಂದಿಗೆ ಭಾರಿ ಅನುಮಾನ ಬರುವಂತೆ ಆಟ ಆಡಿದ್ದಾನೆ.

ಅನುಮಾನಗೊಂಡು ಟೋಲ್ ಸಿಬ್ಬಂದಿ ಪ್ರಶ್ನಿಸಿದಾಗ ವೆಂಕಣ್ಣ ತಡಬಡಾಯಿಸಿ ಅಸಂಬದ್ಧ ಉತ್ತರಗಳನ್ನು ನೀಡಿದ್ದಾನೆ. ತಕ್ಷಣ ಸಿಬ್ಬಂದಿ ಪೊಲೀಸರಿಗೆ ಫೋನ್ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ವೆಂಕಣ್ಣನನ್ನು ಹಿಡಿದು ವಿಚಾರಿಸಿದಾಗ, ಆತ ಬಸ್ಸನ್ನು ಕದ್ದು ತಂದಿರುವ ವಿಷಯ ತಿಳಿದು ಸ್ವತಃ ಪೊಲೀಸರೇ ಶಾಕ್ ಆಗಿದ್ದಾರೆ.

ಕದಿಯುವ ಉದ್ದೇಶವಿರಲಿಲ್ಲ, ಓಡಿಸುವ ಕ್ರೇಜ್ ಅಷ್ಟೇ

ಪೊಲೀಸ್ ತನಿಖೆಯಲ್ಲಿ ವೆಂಕಣ್ಣನಿಗೆ ಬಸ್ ಕದ್ದು ಮಾರಾಟ ಮಾಡುವ ಯಾವುದೇ ಕ್ರಿಮಿನಲ್ ಉದ್ದೇಶ ಇರಲಿಲ್ಲ ಎಂಬುದು ತಿಳಿದುಬಂದಿದೆ. ಮದ್ಯದ ಅಮಲಿನಲ್ಲಿ ದೊಡ್ಡ ಬಸ್ ಓಡಿಸಬೇಕೆಂಬ ಕ್ರೇಜ್ ಹಾಗೂ ತಿರುಪತಿಗೆ ಹೋಗದ ಹತಾಶೆಯಿಂದ ಆತ ಈ ಹುಚ್ಚು ಸಾಹಸಕ್ಕೆ ಕೈಹಾಕಿದ್ದ. ಅದೃಷ್ಟವಶಾತ್ ಈ 21 ಕಿಲೋಮೀಟರ್ ಜರ್ನಿಯಲ್ಲಿ ಹೈವೇಯಲ್ಲಿ ಯಾರಿಗೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸದ್ಯ ಪೊಲೀಸರು ಬಸ್ಸನ್ನು ವಶಕ್ಕೆ ಪಡೆದು, ವೆಂಕಣ್ಣನ ಮೇಲೆ ಕೇಸ್ ದಾಖಲಿಸಿ ಆತನನ್ನು ಜೈಲಿಗಟ್ಟಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version