‘3 ಇಡಿಯಟ್ಸ್’ಗೂ ಸೋನಮ್ ವಾಂಗ್‌ಚುಕ್ ಸಂಬಂಧವಿಲ್ಲ: ಆಮೀರ್ ಖಾನ್ – Kannada News | Aamir Khan says 3 Idiots movie is not based on Sonam Wangchuk

ಆಮಿರ್ ಖಾನ್ (Aamir Khan), ಮಾಧವನ್, ಶರ್ಮನ್ ಜೋಶಿ, ಕರೀನಾ ನಟಿಸಿ ರಾಜ್​​ಕುಮಾರ್ ಹಿರಾನಿ ನಿರ್ದೇಶನ ಮಾಡಿದ್ದ ‘3 ಇಡಿಯಟ್ಸ್’ ಸಿನಿಮಾ ಬ್ಲಾಕ್ ಬಸ್ಟರ್ ಸಿನಿಮಾ. ಅದ್ಭುತವಾದ ಸಂದೇಶ ಹೊಂದಿದ್ದ ಆ ಸಿನಿಮಾ ಭಾರತೀಯ ಚಿತ್ರರಂಗದ ಕಲ್ಟ್ ಸಿನಿಮಾ ಎನಿಸಿಕೊಂಡಿದೆ. ಆ ಸಿನಿಮಾ, ಭಾರತದ ಹೆಮ್ಮೆಯ ವಿಜ್ಞಾನಿ ಮತ್ತು ಈಗ ವಿದ್ಯಾರ್ಥಿಗಳ ಪರವಾಗಿ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಸೋನಂ ವಾಂಗ್ಚುಕ್ ಅವರ ಜೀವನ ಆಧರಿಸಿದೆ ಎನ್ನಲಾಗಿತ್ತು. ಈ ಕುರಿತು ಹಲವಾರು ಪೋಸ್ಟ್​​ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇರುತ್ತವೆ. ಆದರೆ ಇದೀಗ ‘3 ಇಡಿಯಟ್ಸ್’ ಸಿನಿಮಾದ ನಾಯಕ ಆಮಿರ್ ಖಾನ್, ಆ ಸಿನಿಮಾಕ್ಕೂ ಸೋನಂ ವಾಂಗ್ಚುಕ್ ಅವರಿಗೂ ಸಂಬಂಧವಿಲ್ಲ ಎಂದಿದ್ದಾರೆ.

‘3 ಇಡಿಯಟ್ಸ್’ ಸಿನಿಮಾನಲ್ಲಿ ಸೈಲೆನ್ಸರ್ ಪಾತ್ರದಲ್ಲಿ ನಟಿಸಿದ್ದ ಓಮಿ ವೈದ್ಯ, ಸೋನಂ ವಾಂಗ್ಚುಕ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದು ಮಾತ್ರವಲ್ಲದೆ, ‘ಅವರ ಜೀವನ ಆಧರಿಸಿದ್ದ ‘3 ಇಡಿಯಟ್ಸ್’ ಸಿನಿಮಾದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದ ನಟರು ಸಹ ಈ ಬಗ್ಗೆ ಮಾತನಾಡಬೇಕು’ ಎಂದಿದ್ದರು. ಇದೇ ಕಾರಣಕ್ಕೆ, ಲಂಡನ್​​ನ ಇಂಡಿಯನ್ ಫಿಲಂ ಫೆಸ್ಟಿವಲ್​​​ನ ಸಮಾರೋಪ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ನಟ, ನಿರ್ಮಾಪಕ ಆಮಿರ್ ಖಾನ್ ಅವರಿಗೆ ‘3 ಇಡಿಯಟ್ಸ್’ ಸಿನಿಮಾ ಬಗ್ಗೆ ಮತ್ತು ಸೋನಂ ವಾಂಗ್ಚುಕ್ ಅವರ ಬಗ್ಗೆ ಪ್ರಶ್ನೆ ಎದುರಾಯ್ತು.

ಲಂಡನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್‌ನ ಸಮಾರೋಪ ಸಮಾರಂಭದಲ್ಲಿ ‘ಲಗಾನ್’ ಸಿನಿಮಾದ ವಿಶೇಷ ಪ್ರದರ್ಶನದಲ್ಲಿ ನಟ ಆಮಿರ್ ಖಾನ್ ಭಾಗಿ ಆಗಿದ್ದರು. ಬಳಿಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರಿಗೆ ಸೋನಮ್ ವಾಂಗ್‌ಚುಕ್ ಅವರ ಕುರಿತು ಪ್ರಶ್ನೆಯನ್ನು ಕೇಳಲಾಯಿತು. ‘3 ಇಡಿಯಟ್ಸ್’ ಸಿನಿಮಾದ ರಾಂಚೋ ಪಾತ್ರಕ್ಕೆ ಸೋನಮ್ ವಾಂಗ್‌ಚುಕ್ ಅವರ ಜೀವನ ಸ್ಫೂರ್ತಿ ಎಂಬುದು ವ್ಯಾಪಕವಾಗಿ ನಂಬಲ್ಪಟ್ಟಿದೆ, ಆದರೆ ಅದನ್ನು ಅಲ್ಲಗಳೆದ ಆಮೀರ್, ‘ಇಲ್ಲ, ಅದು ನಿಜವಲ್ಲ. ಅದು ತಪ್ಪು ಕಲ್ಪನೆ. ನಾವು ‘3 ಇಡಿಯಟ್ಸ್’ ಚಿತ್ರವನ್ನು ಮಾಡುತ್ತಿದ್ದಾಗ ಸೋನಮ್ ಅವರ ಬಗ್ಗೆ ನಮಗೆ ತಿಳಿದಿರಲಿಲ್ಲ. ನಾನು ಇತ್ತೀಚೆಗೆ ಚತುರ್ (ನಟ ಓಮಿ ವೈದ್ಯ) ಅವರ ವಿಡಿಯೋವನ್ನು ನೋಡಿದೆ, ಅವರು ಕೂಡ ಹಾಗೆಯೇ ಹೇಳಿದ್ದಾರೆ. ಆದರೆ ಅವರದ್ದು ತಪ್ಪು ಮಾಹಿತಿ. ರಾಜು ಅಥವಾ ಅಭಿಜತ್ (ರಾಜಕುಮಾರ್ ಹಿರಾನಿ ಅಥವಾ ಅಭಿಜತ್ ಜೋಶಿ – ‘3 ಇಡಿಯಟ್ಸ್’ ಸಿನಿಮಾದ ಬರಹಗಾರರು) ಯಾರಿಗೂ ಸೋನಮ್ ಅವರ ಬಗ್ಗೆ ತಿಳಿದಿರಲಿಲ್ಲ’ ಎಂದಿದ್ದಾರೆ.

ಇದನ್ನೂ ಓದಿ:ಆಮಿರ್ ಖಾನ್‌ಗೆ ಕೊಲೆ ಬೆದರಿಕೆ; ಕೊಂದವರಿಗೆ 5 ಕೋಟಿ ರೂ. ಬಹುಮಾನ ಘೋಷಿಸಿದ ಅಯೋಧ್ಯೆ ಧಾರ್ಮಿಕ ಮುಖಂಡ

ಮುಂದುವರೆದು ಮಾತನಾಡಿದ ಆಮಿರ್ ಖಾನ್, ‘ಸೋನಮ್ ಅವರು ಮಾಡುತ್ತಿರುವ ಕೆಲಸ ಒಳ್ಳೆಯದು. ಅವರನ್ನು ಗೌರವಿಸಲು ಅವರು ‘3 ಇಡಿಯಟ್ಸ್’ ಚಿತ್ರದ ಪಾತ್ರದ ಮೇಲೆ ಆಧಾರಿತರಾಗಿರಬೇಕು ಎಂದೇನೂ ಇಲ್ಲ. ವಾಸ್ತವಿಕ ದೃಷ್ಟಿಕೋನದಿಂದ ನಾನು ಇದನ್ನು ಹಂಚಿಕೊಳ್ಳಲು ಬಯಸುತ್ತೇನೆ. ನಾವೆಲ್ಲರೂ ಅವರ ಆರೋಗ್ಯ ಮತ್ತು ಜೀವನದ ಬಗ್ಗೆ ತುಂಬಾ ಕಳವಳ ಹೊಂದಿದ್ದೇವೆ. ಎಲ್ಲವೂ ಸುಖಾಂತ್ಯವಾಗಬೇಕೆಂದು ನಾವು ಆಶಿಸುತ್ತೇವೆ. ಅವರೆಲ್ಲರೂ (ಸೋನಂ) ಉಪವಾಸವನ್ನು ಕೈಬಿಡುತ್ತಾರೆ ಎಂದು ನಾವೆಲ್ಲರೂ ಆಶಿಸುತ್ತಿದ್ದೇವೆ’ ಎಂದು ಅಮೀರ್ ಹೇಳಿದರು.

‘3 ಇಡಿಯಟ್ಸ್’ ಚಿತ್ರದಲ್ಲಿ ಚತುರ್ ರಾಮಲಿಂಗಂ ಪಾತ್ರದಲ್ಲಿ ನಟಿಸಿದ್ದ ಓಮಿ ವೈದ್ಯ ಅವರು ಸೋನಮ್ ವಾಂಗ್‌ಚುಕ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ಅಮೀರ್ ಖಾನ್ ಅವರ ಪಾತ್ರ ಫುನ್ಸುಖ್ ವಾಂಗ್ಡು ಸೋನಮ್ ವಾಂಗ್‌ಚುಕ್ ಅವರ ಜೀವನದಿಂದ ಸ್ಫೂರ್ತಿ ಪಡೆದಿದೆ ಎಂದು ಓಮಿ ನೆನಪಿಸಿದ್ದರು ಮತ್ತು ಅವರ ಆರೋಗ್ಯದ ಕಡೆಗೆ ಗಮನ ಹರಿಸುವಂತೆ ಎಲ್ಲರಿಗೂ ಒತ್ತಾಯಿಸಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Video: ‘ದಿನಕ್ಕೆ 17 ಗಂಟೆ ಓದು, ನಿದ್ದೆಯನ್ನೂ ತ್ಯಜಿಸಿದ್ದೆ’; NEET UG ಟಾಪರ್ ಆರ್ಯನ್ ಗುಪ್ತಾ ಯಶಸ್ಸಿನ ಗುಟ್ಟು – Kannada News | NEET UG 2026 AIR 1: Aryan Gupta’s Success Story, 715 Marks and Oncologist Dream

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ‘ನೀಟ್ ಯುಜಿ 2026’ ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಿದೆ. ಈ ಪರೀಕ್ಷೆಯಲ್ಲಿ 720ಕ್ಕೆ 715 ಅಂಕಗಳನ್ನು ಪಡೆದು ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ್ಯಾಂಕ್ (AIR 1) ಸಾಧಿಸಿರುವ ಪಂಜಾಬ್‌ನ ಲುಧಿಯಾನದ ಆರ್ಯನ್ ಗುಪ್ತಾ ತಮ್ಮ ಯಶಸ್ಸಿನ ಬಗ್ಗೆ PTI ಜೊತೆ ಹಂಚಿಕೊಂಡಿದ್ದಾರೆ. “ನನ್ನ ತಂದೆ ಮತ್ತು ತಾಯಿ ಇಬ್ಬರೂ ವೈದ್ಯರಾಗಿದ್ದಾರೆ. ನಾನು ಈ ಸಾಧನೆಗಾಗಿ ದಿನಕ್ಕೆ 16 ರಿಂದ 17 ಗಂಟೆಗಳ ಕಾಲ ಅತ್ಯಂತ ಕಷ್ಟಪಟ್ಟು ಅಭ್ಯಾಸ ಮಾಡುತ್ತಿದ್ದೆ, ಕೆಲವೊಮ್ಮೆ ಸರಿಯಾಗಿ ನಿದ್ದೆಯೂ ಇರುತ್ತಿರಲಿಲ್ಲ. ಆದರೆ ಈಗ ಸಿಕ್ಕಿರುವ ಈ ಯಶಸ್ಸು ಒಂದು ಸುಂದರ ಕನಸಿನಂತೆ ಅನಿಸುತ್ತಿದೆ ಮತ್ತು ಮನೆಯಲ್ಲಿ ಎಲ್ಲರೂ ತುಂಬಾ ಸಂತೋಷವಾಗಿದ್ದಾರೆ. ನಾನು ಮೂರನೇ ತರಗತಿಯಲ್ಲಿದ್ದಾಗ ನನ್ನ ಅಜ್ಜಿ ಕ್ಯಾನ್ಸರ್ ಕಾಯಿಲೆಯಿಂದ ನಿಧನರಾದರು, ಆ ಸಮಯದಲ್ಲಿಯೇ ನಾನು ಭವಿಷ್ಯದಲ್ಲಿ ಒಬ್ಬ ಕ್ಯಾನ್ಸರ್ ತಜ್ಞ (Oncologist) ಆಗಬೇಕೆಂದು ಪ್ರತಿಜ್ಞೆ ಮಾಡಿದ್ದೆ. ಜೀವನದಲ್ಲಿ ಮುಂದೆ ಮಾಡಬೇಕಾದದ್ದು ಇನ್ನು ತುಂಬಾ ಇದೆ, ಆದರೆ ಸದ್ಯಕ್ಕೆ ಈ ಯಶಸ್ಸು ನನಗೆ ಅತ್ಯಂತ ಹೆಮ್ಮೆ ಮತ್ತು ಸಂತೋಷ ತಂದಿದೆ” ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಝಗಮಗಿಸಲಿದೆ ವೀಕೆಂಡ್! ಭಾನುವಾರ ಮುಂಜಾನೆ 5 ರ ವರೆಗೂ ಪಬ್, ಬಾರ್, ರೆಸ್ಟೋರೆಂಟ್ ಓಪನ್ ಸಾಧ್ಯತೆ – Kannada News | Bengaluru Weekend Buzz: Pubs, Bars and Restaurants Likely to Stay Open Till 5 AM for Football World Cup Screenings

ಬೆಂಗಳೂರು, ಜುಲೈ 17: ಈ ವಾರಾಂತ್ಯ ಐಟಿ ನಗರಿ ಬೆಂಗಳೂರಿನಲ್ಲಿ (Bengaluru) ಫುಟ್‌ಬಾಲ್ ಅಭಿಮಾನಿಗಳ ಸಂಭ್ರಮ ಜೋರಾಗುವ ಲಕ್ಷಣಗಳು ಗೋಚರಿಸುತ್ತಿವೆ. ಫುಟ್‌ಬಾಲ್ ವಿಶ್ವಕಪ್‌ನ ಮೂರನೇ ಸ್ಥಾನಕ್ಕಾಗಿ ನಡೆಯಲಿರುವ ಫ್ರಾನ್ಸ್–ಇಂಗ್ಲೆಂಡ್ ಪಂದ್ಯ ಹಾಗೂ ಫೈನಲ್ ಪಂದ್ಯವನ್ನು ಅಭಿಮಾನಿಗಳು ಒಟ್ಟಾಗಿ ವೀಕ್ಷಿಸಲು ನಗರದ ಪಬ್‌ಗಳು, ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳು ವಿಶೇಷ ಸಿದ್ಧತೆ ಆರಂಭಿಸಿವೆ. ಪಂದ್ಯಗಳ ಸಮಯ ಮುಂಜಾನೆ ಇರುವುದರಿಂದ, ಭಾನುವಾರ ಬೆಳಗ್ಗೆ 5 ಗಂಟೆಯವರೆಗೆ ವ್ಯಾಪಾರ ನಡೆಸಲು ಅನುಮತಿ ನೀಡುವಂತೆ ಉದ್ಯಮಿಗಳು ಸರ್ಕಾರ ಹಾಗೂ ಬೆಂಗಳೂರು ನಗರ ಪೊಲೀಸರನ್ನು ಕೋರಿದ್ದಾರೆ. ಈಗಾಗಲೇ ಅಬಕಾರಿ ಇಲಾಖೆಯಿಂದ ಅಗತ್ಯ ಅನುಮತಿ ದೊರೆತಿದ್ದು, ಪೊಲೀಸ್ ಇಲಾಖೆಯ ಅಂತಿಮ ಅನುಮತಿಗಾಗಿ ಕಾಯಲಾಗುತ್ತಿದೆ.

ಈಗಾಗಲೇ ತಡರಾತ್ರಿ ವರೆಗೆ ಪಬ್, ಬಾರ್ ತೆರೆಯಲು ಅನುಮತಿ

ಜುಲೈ 14 ಮತ್ತು 15ರಂದು ಫುಟ್​ಬಾಲ್ ವಿಶ್ವಕಪ್ ಸೆಮಿಫೈನಲ್ ಪಂದ್ಯಗಳ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ಬೆಂಗಳೂರು ನಗರ ಪೊಲೀಸರು ಮಧ್ಯರಾತ್ರಿಯ ನಂತರವೂ ರೆಸ್ಟೋರೆಂಟ್‌ಗಳು ಮತ್ತು ಆಹಾರ ಮಳಿಗೆಗಳು ಕಾರ್ಯನಿರ್ವಹಿಸಲು ಅವಕಾಶ ನೀಡಿದ್ದರು. ಬಳಿಕ ಅಬಕಾರಿ ಇಲಾಖೆಯೂ ಅನುಮತಿ ನೀಡಿದ ಪರಿಣಾಮ ಹಲವು ಪಬ್ ಹಾಗೂ ಬಾರ್‌ಗಳಲ್ಲಿ ಅಭಿಮಾನಿಗಳು ಪಂದ್ಯ ವೀಕ್ಷಿಸಿ ಸಂಭ್ರಮಿಸಿದ್ದರು. ಈ ಪ್ರಯೋಗಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತ ಹಿನ್ನೆಲೆಯಲ್ಲಿ, ಇದೀಗ ವಾರಾಂತ್ಯದ ಪಂದ್ಯಗಳಿಗೂ ಇದೇ ಮಾದರಿಯ ವ್ಯವಸ್ಥೆ ಮುಂದುವರಿಸಲು ಉದ್ಯಮಿಗಳು ಮನವಿ ಮಾಡಿದ್ದಾರೆ.

ಸಿಬ್ಬಂದಿಗೆ ವಿಶೇಷ ವ್ಯವಸ್ಥೆ

ರಾತ್ರಿ ತಡವರೆಗೆ ಕಾರ್ಯಾಚರಣೆ ನಡೆಸಲು ರೆಸ್ಟೋರೆಂಟ್ ಹಾಗೂ ಪಬ್‌ಗಳು ಸಿಬ್ಬಂದಿಗಾಗಿ ವಿಶೇಷ ವ್ಯವಸ್ಥೆ ಮಾಡಿಕೊಂಡಿವೆ. ಹಂತ ಹಂತವಾಗಿ ಶಿಫ್ಟ್‌ಗಳನ್ನು ರೂಪಿಸುವುದು, ಮಹಿಳಾ ಸಿಬ್ಬಂದಿಗೆ ಸುರಕ್ಷಿತ ಸಾರಿಗೆ ವ್ಯವಸ್ಥೆ, ಹೆಚ್ಚುವರಿ ಭದ್ರತಾ ಸಿಬ್ಬಂದಿ, ಸಿಸಿಟಿವಿ ನಿಗಾ, ಒಳಾಂಗಣದಲ್ಲಿ ಮಾತ್ರ ಪಂದ್ಯ ಪ್ರದರ್ಶನ ಹಾಗೂ ಬೆಟ್ಟಿಂಗ್‌ಗೆ ಸಂಪೂರ್ಣ ನಿರ್ಬಂಧ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.

ಅಭಿಮಾನಿಗಳಲ್ಲಿ ಹೆಚ್ಚಿದ ಉತ್ಸಾಹ

ಸೆಮಿಫೈನಲ್ ಪಂದ್ಯಗಳ ವೇಳೆ ನಗರದ ವಿವಿಧ ಭಾಗಗಳಲ್ಲಿ ನೂರಾರು ಫುಟ್‌ಬಾಲ್ ಅಭಿಮಾನಿಗಳು ಸೇರಿ ಪಂದ್ಯ ವೀಕ್ಷಿಸಿ ಸಂಭ್ರಮಿಸಿದ್ದರು. ಇದೀಗ ಮೂರನೇ ಸ್ಥಾನಕ್ಕಾಗಿ ನಡೆಯಲಿರುವ ಪಂದ್ಯ ಮತ್ತು ಫೈನಲ್‌ಗೂ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುವ ನಿರೀಕ್ಷೆಯಿದೆ.

ಇದನ್ನೂ ಓದಿ: ಬೆಂಗಳೂರಿನ ಜನರಿಗೆ ಗುಡ್​​​ ನ್ಯೂಸ್; ಫಿಫಾ ವಿಶ್ವಕಪ್ ಸೆಮಿಫೈನಲ್ ನೋಡಲು ವಿಶೇಷ ಆದೇಶ

ಒಟ್ಟಾರೆ, ಈ ವಾರಾಂತ್ಯ ಬೆಂಗಳೂರಿನಲ್ಲಿ ಕ್ರೀಡಾ ಸಂಭ್ರಮದ ಜೊತೆಗೆ ನೈಟ್‌ಲೈಫ್ ಕೂಡ ಝಗಮಗಿಸಲಿದ್ದು, ಪಬ್‌, ಬಾರ್‌, ರೆಸ್ಟೋರೆಂಟ್‌ಗಳಲ್ಲಿ ಹಬ್ಬದ ವಾತಾವರಣ ಕಂಡುಬರುವ ಸಾಧ್ಯತೆ ಇದೆ. ಪೊಲೀಸ್ ಇಲಾಖೆಯಿಂದ ಅಂತಿಮ ಅನುಮತಿ ದೊರೆತರೆ, ಭಾನುವಾರ ಮುಂಜಾನೆ 5 ಗಂಟೆಯವರೆಗೆ ನಗರದಲ್ಲಿ ಫುಟ್‌ಬಾಲ್ ಫೀವರ್ ಮುಂದುವರಿಯಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:34 am, Fri, 17 July 26

Source link

ಮೊದಲ ಬಾರಿಗೆ ಇರಾನ್ ಮೇಲೆ ದಾಳಿ ನಡೆಸಿದ ಯುಎಇ – Kannada News | US Escalates Attacks on Irans Infrastructure, UAE Joins Conflict and Red Sea Threat Looms

ಟೆಹ್ರಾನ್, ಜುಲೈ 17: ಅಮೆರಿಕ ಇರಾನ್ ಮೇಲೆ ತನ್ನ ಭೀಕರ ದಾಳಿಗಳನ್ನು ಮುಂದುವರೆಸಿದೆ. ಆದರೆ ಮೊದಲ ಬಾರಿಗೆ ಇರಾನ್ ಮೇಲೆ ಯುಎಇ ದಾಳಿ ನಡೆಸಿ ಅಚ್ಚರಿ ಮೂಡಿಸಿದೆ. ಇರಾನ್ ರಾಜಧಾನಿ ಟೆಹ್ರಾನ್ ಮತ್ತು ಇತರ ಪ್ರಮುಖ ಸ್ಥಳಗಳಲ್ಲಿ ಭಯಾನಕ ದಾಳಿಗಳನ್ನು ನಡೆಸಿದೆ. ಚಬಹಾರ್ ಬಂದರು, ಬುಶೆಹರ್ ಪರಮಾಣು ಸಂಕೀರ್ಣ, ಇರಾನಿಶಾಹರ್ ವಿಮಾನ ನಿಲ್ದಾಣದಲ್ಲಿ ಪ್ರಬಲ ಸ್ಫೋಟಗಳು ಸಂಭವಿಸಿವೆ. ರೈಲ್ವೆ ಸೇತುವೆಗಳು ಮತ್ತು ರಸ್ತೆಗಳು ಸೇರಿದಂತೆ ಇರಾನ್‌ನ ಮೂಲಸೌಕರ್ಯಗಳನ್ನು ಅಮೆರಿಕ ಪ್ರಮುಖ ಗುರಿಯಾಗಿಸಿಕೊಂಡಿದೆ. ಈ ದಾಳಿಗಳಿಂದ ರೈಲ್ವೆ ಮತ್ತು ರಸ್ತೆಗಳು ಸಂಪೂರ್ಣವಾಗಿ ಧ್ವಂಸಗೊಂಡಿವೆ.

ಇದೇ ವೇಳೆ, ಮಧ್ಯಪ್ರಾಚ್ಯ ಯುದ್ಧದಲ್ಲಿ ಅನಿರೀಕ್ಷಿತ ತಿರುವು ಪಡೆದಿದ್ದು, ಯುಎಇ ಮೊದಲ ಬಾರಿಗೆ ಇರಾನ್ ವಿರುದ್ಧ ಯುದ್ಧಕ್ಕಿಳಿದಿದೆ. ಅಮೆರಿಕ ನಿರ್ಮಿತ ಡ್ರೋನ್‌ಗಳಿಂದ ಯುಎಇ ದಾಳಿ ನಡೆಸಿದ್ದು, ಬಂದರ್ ಅಬ್ಬಾಸ್ ಬಂದರನ್ನು ಗುರಿಯಾಗಿಸಿದೆ. ಇದಕ್ಕೆ ಪ್ರತಿಯಾಗಿ, ಇರಾನ್ ಯುಎಇಯ ಡ್ರೋನ್‌ಗಳನ್ನು ಹೊಡೆದುರುಳಿಸಿದೆ. ಅಮೆರಿಕದ ನಿರಂತರ ದಾಳಿಗಳಿಂದ ಕೆಂಡಾಮಂಡಲವಾಗಿರುವ ಇರಾನ್, ಹಾರ್ಮುಸ್ ಬಳಿ ಕೆಂಪು ಸಮುದ್ರವನ್ನು ಟಾರ್ಗೆಟ್ ಮಾಡಿದೆ.

ಕೆಂಪು ಸಮುದ್ರವನ್ನು ಬಂದ್ ಮಾಡುವ ಎಚ್ಚರಿಕೆ ನೀಡಿದ್ದು, ಇದು ಜಾಗತಿಕ ಇಂಧನ ಪೂರೈಕೆಗೆ ಅಡ್ಡಿಯಾಗುವ ಆತಂಕವನ್ನು ಹೆಚ್ಚಿಸಿದೆ. ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಕ್ಚಿ ಅಮೆರಿಕದ ಮೂಲಸೌಕರ್ಯ ಮೇಲಿನ ದಾಳಿಯನ್ನು ಯುದ್ಧಾಪರಾಧ ಮತ್ತು ಅಂತಾರಾಷ್ಟ್ರೀಯ ಕಾನೂನುಗಳ ಉಲ್ಲಂಘನೆ ಎಂದು ತೀವ್ರವಾಗಿ ಖಂಡಿಸಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪದೇ ಪದೇ ಗ್ಯಾಸ್‌, ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಿದ್ದರೆ ಪುದೀನಾ ಎಲೆಗಳನ್ನು ಈ ರೀತಿ ಸೇವಿಸಿ – Kannada News | Top Health Benefits Of Mint Leaves You Should Know

ಇತ್ತೀಚಿನ ದಿನಗಳಲ್ಲಿ ಊಟ ಸರಿಯಾಗಿ ಮಾಡದಿರುವುದು, ಜಂಕ್ ಫುಡ್‌, ಒತ್ತಡದ ಜೀವನಶೈಲಿ ಮತ್ತು ದೈಹಿಕ ಚಟುವಟಿಕೆಯನ್ನು ಕಡಿಮೆ ಮಾಡುವುದು ಗ್ಯಾಸ್‌, ಅಸಿಡಿಟಿ, ಹೊಟ್ಟೆ ಉಬ್ಬರ ಹಾಗೂ ಅಜೀರ್ಣ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ರೀತಿಯಾದಾಗ ಅಡುಗೆ ಮನೆಯಲ್ಲೇ ಸುಲಭವಾಗಿ ಸಿಗುವ ಪುದೀನಾ (Mint) ಪರಿಹಾರ ನೀಡಬಹುದು. ಇದು ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಆಯುರ್ವೇದದಲ್ಲೂ ಶತಮಾನಗಳಿಂದ ಬಳಸಲಾಗುತ್ತಿರುವ ಪುದೀನಾ ಕೇವಲ ಆಹಾರದ ರುಚಿ ಹೆಚ್ಚಿಸುವುದಲ್ಲ, ಜೀರ್ಣಕ್ರಿಯೆ ಸುಧಾರಿಸಲು, ಬಾಯಿಯ ಆರೋಗ್ಯ ಕಾಪಾಡಲು ಹಾಗೂ ದೇಹದ ರೋಗನಿರೋಧಕ ಶಕ್ತಿಯನ್ನು ಕಾಪಾಡಲು ಸಹಕಾರಿ. ಆದರೆ ಪುದೀನಾ ಯಾವುದೇ ರೋಗಕ್ಕೆ ನೇರ ಔಷಧಿಯಲ್ಲ. ಇದನ್ನು ಸಮತೋಲನ ಆಹಾರ ಹಾಗೂ ಆರೋಗ್ಯಕರ ಜೀವನಶೈಲಿಯ ಭಾಗವಾಗಿ ಬಳಸಿದರೆ ಕೆಲವು ಆರೋಗ್ಯ ಲಾಭಗಳನ್ನು ಪಡೆಯಬಹುದು.

ಜೀರ್ಣಕ್ರಿಯೆಗೆ ಪುದೀನಾ ಹೇಗೆ ಸಹಕಾರಿ?

ಪುದೀನಾದಲ್ಲಿ ಮೆಂಥಾಲ್ (Menthol) ಸೇರಿದಂತೆ ಹಲವು ಸಸ್ಯಜನ್ಯ ಸಂಯುಕ್ತಗಳು ಇವೆ. ಇವು ಜೀರ್ಣಾಂಗದ ಸ್ನಾಯುಗಳನ್ನು ಸಡಿಲಗೊಳಿಸಲು ನೆರವಾಗಬಹುದು. ಇದರಿಂದ ಕೆಲವರಿಗೆ ಹೊಟ್ಟೆ ಉಬ್ಬರ, ಗ್ಯಾಸ್‌, ಅಜೀರ್ಣದಂತಹ ಸಮಸ್ಯೆಗಳು ಕಡಿಮೆಯಾಗಲು ಸಹಾಯವಾಗಬಹುದು. ಊಟದ ನಂತರ ಒಂದು ಕಪ್ ಬಿಸಿ ಪುದೀನಾ ಟೀ ಅಥವಾ ಪುದೀನಾ ನೀರು ಕುದಿಯುವುದರಿಂದ ಜೀರ್ಣಕ್ರಿಯೆಗೆ ಅನುಕೂಲವಾಗಬಹುದು.

ಅಸಿಡಿಟಿ ಮತ್ತು ಗ್ಯಾಸ್‌ಗೆ ಪರಿಹಾರವೇ?

ಕೆಲವರಿಗೆ ಪುದೀನಾ ಸೇವನೆಯಿಂದ ಹೊಟ್ಟೆಯ ಅಸ್ವಸ್ಥತೆ ಕಡಿಮೆಯಾಗಬಹುದು. ಆದರೆ GERD (ಗ್ಯಾಸ್ಟ್ರೋ ಈಸೋಫೇಜಿಯಲ್ ರಿಫ್ಲಕ್ಸ್) ಅಥವಾ ತೀವ್ರ ಆಸಿಡ್ ರಿಫ್ಲಕ್ಸ್ ಇರುವವರಲ್ಲಿ ಪುದೀನಾ ಕೆಲವೊಮ್ಮೆ ಎದೆಯುರಿಯನ್ನು ಹೆಚ್ಚಿಸಬಹುದು. ಆದ್ದರಿಂದ ಇಂತಹವರು ವೈದ್ಯರ ಸಲಹೆಯಂತೆ ನಿಯಮಿತವಾಗಿ ಸೇವಿಸುವುದು ಉತ್ತಮ.

ಬಾಯಿಯ ದುರ್ವಾಸನೆ ನಿವಾರಣೆಗೆ ಸಹಕಾರಿ

ಪುದೀನಾದಲ್ಲಿ ಇರುವ ನೈಸರ್ಗಿಕ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಬಾಯಿಯಲ್ಲಿರುವ ಕೆಲವು ದುರ್ವಾಸನೆ ಉಂಟುಮಾಡುವ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ಕಡಿಮೆ ಮಾಡಲು ನೆರವಾಗಬಹುದು. ಊಟದ ಬಳಿಕ ಕೆಲವು ತಾಜಾ ಪುದೀನಾ ಎಲೆಗಳನ್ನು ಜಗಿಯುವುದು ಅಥವಾ ಪುದೀನಾ ಮೌತ್ ರಿನ್ಸ್ ಬಳಸುವುದು ಬಾಯಿಯ ತಾಜಾತನವನ್ನು ಹೆಚ್ಚಿಸಬಹುದು.

ರೋಗನಿರೋಧಕ ಶಕ್ತಿಗೆ ಬೆಂಬಲ

ಪುದೀನಾದಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಕಬ್ಬಿಣ, ಮ್ಯಾಂಗನೀಸ್ ಸೇರಿದಂತೆ ಕೆಲವು ಪ್ರಮುಖ ಪೋಷಕಾಂಶಗಳು ಹಾಗೂ ಆ್ಯಂಟಿಆಕ್ಸಿಡೆಂಟ್‌ಗಳಿವೆ. ಇವು ದೇಹದ ಕೋಶಗಳನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸಲು ನೆರವಾಗುತ್ತವೆ. ನಿಯಮಿತವಾಗಿ ಪುದೀನಾವನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಸಮತೋಲನ ಆಹಾರದ ಭಾಗವಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು.

ಚರ್ಮದ ಆರೋಗ್ಯಕ್ಕೂ ಉಪಕಾರಿ

ಪುದೀನಾದ ಉರಿಯೂತ ನಿವಾರಕ ಗುಣಗಳು ಮೊಡವೆ, ಸಣ್ಣ ಚರ್ಮದ ಉರಿಯೂತ ಹಾಗೂ ಹೆಚ್ಚುವರಿ ತೈಲ ಉತ್ಪಾದನೆಯನ್ನು ನಿಯಂತ್ರಿಸಲು ಸಹಾಯ ಮಾಡಬಹುದು. ಕೆಲವರು ಪುದೀನಾ ಪೇಸ್ಟ್ ಅಥವಾ ಫೇಸ್ ಪ್ಯಾಕ್ ಬಳಸುತ್ತಾರೆ. ಆದರೆ ಸೂಕ್ಷ್ಮ ಚರ್ಮ ಹೊಂದಿರುವವರು ಮೊದಲು ಒಂದು ಸಣ್ಣ ಭಾಗದಲ್ಲಿ ಪರೀಕ್ಷಿಸಿ ಬಳಿಕ ಬಳಸುವುದು ಸೂಕ್ತ.

ತೂಕ ನಿಯಂತ್ರಣಕ್ಕೆ ಹೇಗೆ ನೆರವಾಗಬಹುದು?

ಪುದೀನಾ ನೇರವಾಗಿ ತೂಕ ಕರಗಿಸುವುದಿಲ್ಲ. ಆದರೆ ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು, ಬಾಯಿಯ ರುಚಿ ಹೆಚ್ಚಿಸಲು ಹಾಗೂ ಸಕ್ಕರೆ ಇರುವ ತಂಪು ಪಾನೀಯಗಳ ಬದಲಿಗೆ ಪುದೀನಾ ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಂಡರೆ ಒಟ್ಟು ಕ್ಯಾಲೊರಿ ಸೇವನೆ ಕಡಿಮೆಯಾಗುತ್ತದೆ. ಇದರಿಂದ ತೂಕ ನಿಯಂತ್ರಣಕ್ಕೆ ಪರೋಕ್ಷವಾಗಿ ನೆರವಾಗಬಹುದು.

ಇದನ್ನೂ ಓದಿ: ಊಟ ಕಡಿಮೆ ಮಾಡಿದ್ರೂ ಅಸಿಡಿಟಿಯಾಗುತ್ತಾ? ಇದಕ್ಕೆ ಕಾರಣ ಏನ್ ಗೊತ್ತಾ?

ಪುದೀನಾವನ್ನು ಪ್ರತಿನಿತ್ಯ ಯಾವ ರೀತಿ ಸೇವಿಸಬಹುದು?

  • ಬೆಳಿಗ್ಗೆ ಬೆಚ್ಚಗಿನ ನೀರಿನಲ್ಲಿ 5–6 ಪುದೀನಾ ಎಲೆಗಳನ್ನು ಹಾಕಿ ಕುಡಿಯಬಹುದು.
  • ಪುದೀನಾ-ಶುಂಠಿ ಹರ್ಬಲ್ ಟೀ ತಯಾರಿಸಿ ಸೇವಿಸಬಹುದು.
  • ಚಟ್ನಿ, ಸಲಾಡ್‌, ಸ್ಯಾಂಡ್‌ವಿಚ್‌, ಸೂಪ್‌ಗಳಲ್ಲಿ ಬಳಸಬಹುದು.
  • ನಿಂಬೆಹಣ್ಣಿನೊಂದಿಗೆ ಪುದೀನಾ ಸೇರಿಸಿ ಕುಡಿಯಬಹುದು.
  • ಮಜ್ಜಿಗೆಗೆ ಪುದೀನಾ ಹಾಗೂ ಜೀರಿಗೆ ಪುಡಿ ಸೇರಿಸಿದರೆ ಜೀರ್ಣಕ್ರಿಯೆಗೆ ಸಹಕಾರಿ.

ಈ ವಿಷಯಗಳನ್ನು ಮರೆಯಬೇಡಿ

  • ಪುದೀನಾವನ್ನು ಅತಿಯಾಗಿ ಸೇವಿಸುವುದು ಎಲ್ಲರಿಗೂ ಸೂಕ್ತವಲ್ಲ.
  • ತೀವ್ರ ಆಸಿಡ್ ರಿಫ್ಲಕ್ಸ್‌, ಹೊಟ್ಟೆ ಹುಣ್ಣು ಅಥವಾ ದೀರ್ಘಕಾಲದ ಜೀರ್ಣ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸಿ.
  • ಗರ್ಭಿಣಿಯರು ಅಥವಾ ನಿರ್ದಿಷ್ಟ ಔಷಧಿಗಳನ್ನು ಸೇವಿಸುತ್ತಿರುವವರು ನಿಯಮಿತವಾಗಿ ಹೆಚ್ಚಿನ ಪ್ರಮಾಣದಲ್ಲಿ ಪುದೀನಾ
  • ಬಳಸುವ ಮೊದಲು ವೈದ್ಯರ ಸಲಹೆ ಪಡೆಯಬೇಕು. ಗ್ಯಾಸ್‌, ಹೊಟ್ಟೆ ನೋವು, ರಕ್ತ ಮಿಶ್ರಿತ ಮಲ ಅಥವಾ ನಿರಂತರ
  • ಅಜೀರ್ಣ ಸಮಸ್ಯೆ ಇದ್ದರೆ ಮನೆಮದ್ದಿನ ಮೇಲೆ ಮಾತ್ರ ಅವಲಂಬಿಸದೆ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ.

ಸೂಚನೆ: ಈ ಲೇಖನವು ಆರೋಗ್ಯ ಸಲಹೆಗಾಗಿ ಮಾತ್ರ. ಪುದೀನಾ ಆರೋಗ್ಯಕರ ಆಹಾರದ ಒಂದು ಭಾಗವಾಗಬಹುದು. ಆರೋಗ್ಯ ಸಮಸ್ಯೆಗಳಿದ್ದರೆ ಅರ್ಹ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಿರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಂಕೋಲ: ಕುಸಿದು ಬೀಳುವ ಸ್ಥಿತಿಯಲ್ಲಿದೆ 141 ವರ್ಷಗಳ ಇತಿಹಾಸವಿರುವ ಹಾರವಾಡ ಸರ್ಕಾರಿ ಶಾಲೆ – Kannada News | 141 Year Old Harawada Government School in Ankola on Verge of Collapse, Parents Fear for Students’ Safety

ಕಾರವಾರ, ಜುಲೈ 17: ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಹಾರವಾಡದಲ್ಲಿರುವ 141 ವರ್ಷಗಳ ಇತಿಹಾಸವಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಸಂಪೂರ್ಣವಾಗಿ ಶಿಥಿಲಗೊಂಡಿದೆ. ಈ ಶಾಲೆ ಯಾವಾಗ ಬೇಕಾದರೂ ಕುಸಿದು ಬೀಳುವ ಅಪಾಯದಲ್ಲಿದ್ದು, ಮಕ್ಕಳು ಪ್ರತಿದಿನ ಜೀವ ಭಯದಲ್ಲಿಯೇ ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲೆಯ ಮೇಲ್ಚಾವಣಿ ಗೆದ್ದಲು ಹಿಡಿದಿದ್ದು, ಮಣ್ಣಿನ ಗೋಡೆಗಳು ಬೀಳುವ ಹಂತದಲ್ಲಿವೆ. ಮಳೆಗಾಲದಲ್ಲಿ ಕಟ್ಟಡದ ಒಳಗಡೆ ನೀರು ಸೋರಿ, ಹುಳಗಳು ಕಾಣಿಸಿಕೊಳ್ಳುತ್ತವೆ. ಇದು ವಿದ್ಯಾರ್ಥಿಗಳ ಸುರಕ್ಷತೆಗೆ ದೊಡ್ಡ ಆತಂಕವನ್ನು ಸೃಷ್ಟಿಸಿದೆ. ಈ ದುಸ್ಥಿತಿಯಿಂದಾಗಿ ಪೋಷಕರು ತಮ್ಮ ಮಕ್ಕಳನ್ನು ಈ ಶಾಲೆಗೆ ದಾಖಲಿಸಲು ಹಿಂದೇಟು ಹಾಕುತ್ತಿದ್ದು, ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದೆ. ಪ್ರಸ್ತುತ ಕೇವಲ 46 ಮಕ್ಕಳಿದ್ದಾರೆ.

ಹಲವಾರು ವರ್ಷಗಳಿಂದ ಶಾಲೆಯ ಶಿಕ್ಷಕರು, ಎಸ್.ಡಿ.ಎಂ.ಸಿ. ಸದಸ್ಯರು ಹಾಗೂ ಪೋಷಕರು ಶಿಕ್ಷಣ ಇಲಾಖೆ ಮತ್ತು ಸ್ಥಳೀಯ ಜನಪ್ರತಿನಿಧಿಗಳಿಗೆ ಹೊಸ ಕಟ್ಟಡ ನಿರ್ಮಾಣ ಮಾಡುವಂತೆ ಮನವಿ ಸಲ್ಲಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಹೊಸ ಕಟ್ಟಡ ನಿರ್ಮಿಸಿ ಮಕ್ಕಳ ಭವಿಷ್ಯವನ್ನು ಕಾಪಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ನಾಗಲಕ್ಷ್ಮಿ ಅವತಾರದಲ್ಲಿ ನಾಡ ಅಧಿದೇವತೆ ಶ್ರೀ ಚಾಮುಂಡೇಶ್ವರಿಯ ಅಲಂಕಾರ ಹೇಗಿದೆ ನೋಡಿ – Kannada News | Mysore Chamundeshwari Temple Shines on Ashadas First Friday with Nagalakshmi Alankara

ಆಷಾಢ ಮಾಸದ ಮೊದಲ ಶುಕ್ರವಾರದಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ನಾಡ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆಗಳು ಮತ್ತು ಆಚರಣೆಗಳು ಜರುಗಿದವು. ಈ ಪುಣ್ಯ ದಿನದಂದು ತಾಯಿ ಚಾಮುಂಡೇಶ್ವರಿಗೆ ನಾಗಲಕ್ಷ್ಮಿ ಅಲಂಕಾರವನ್ನು ಮಾಡಲಾಗಿತ್ತು. ಇದರಿಂದ ಉತ್ಸವಮೂರ್ತಿಯು ಹಸಿರು ಮತ್ತು ಗುಲಾಬಿ ಬಣ್ಣದ ಸೀರೆಯಲ್ಲಿ ಕಂಗೊಳಿಸಿತು. ದೇವಸ್ಥಾನದ ಗರ್ಭಗುಡಿ, ಗೋಪುರ ಮತ್ತು ದೇವಾಲಯದ ಆವರಣವನ್ನು ವಿವಿಧ ಬಗೆಯ ಸುಂದರ ಹೂಗಳಿಂದ ಆಕರ್ಷಕವಾಗಿ ಅಲಂಕರಿಸಲಾಗಿತ್ತು.

ಆಷಾಢ ಶುಕ್ರವಾರದ ಮಹತ್ವದಿಂದಾಗಿ, ಸಾವಿರಾರು ಭಕ್ತರು ಬೆಳಗಿನಿಂದಲೇ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ, ದೇವಿಯ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದರು. ಭಕ್ತ ಸಾಗರವೇ ಹರಿದುಬಂದ ಕಾರಣ, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮತ್ತು ನೂಕುನುಗ್ಗಲು ಉಂಟಾಗದಂತೆ ಪೊಲೀಸ್ ಇಲಾಖೆಯು ಸೂಕ್ತ ಬಂದೋಬಸ್ತ್ ವ್ಯವಸ್ಥೆಯನ್ನು ಕಲ್ಪಿಸಿತ್ತು. ಭಕ್ತರು ಸರಾಗವಾಗಿ ದರ್ಶನ ಪಡೆಯಲು ಅಗತ್ಯವಿರುವ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಈ ವಿಶೇಷ ದಿನದಂದು ದೇವಿಯ ದರ್ಶನ ಪಡೆದು ಪುನೀತರಾಗಲು ಬಂದ ಭಕ್ತರಿಗೆ ಅಗತ್ಯ ವ್ಯವಸ್ಥೆಗಳನ್ನು ಒದಗಿಸಲಾಗಿತ್ತು.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಡಿಕೆ ಶಿವಕುಮಾರ್ ಸಂಪುಟದ ಸಚಿವರ ಪಟ್ಟಿ ಫೈನಲ್: ಅಳೆದು ತೂಗಿ ಲಿಸ್ಟ್ ಅಂತಿಮಗೊಳಿಸಿದ ರಾಹುಲ್ ಗಾಂಧಿ – Kannada News | Karnataka Cabinet Expansion: Rahul Gandhi Holds Key Meetings with DK Shivakumar, Siddaramaiah and others

ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರು ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಡಿಕೆ ಶಿವಕುಮಾರ್ ಸಭೆImage Credit source: @kcvenugopalmp

ನವದೆಹಲಿ, ಜುಲೈ 17: ಮೊದಲ ಹಂತದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರೊಂದಿಗೆ 13 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ, ಒಂದೂವರೆ ತಿಂಗಳು ಕಳೆದರೂ ಸಚಿವ ಸಂಪುಟ ವಿಸ್ತರಣೆ (Cabinet Expansion) ಆಗದಿರುವುದು ಕಾಂಗ್ರೆಸ್ (Congress) ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿತ್ತು. ಖಾಲಿ ಇರುವ 20 ಸಚಿವ ಸ್ಥಾನಗಳಿಗೆ 50ಕ್ಕೂ ಹೆಚ್ಚು ಶಾಸಕರು ಮತ್ತು ನಾಯಕರು ಆಕಾಂಕ್ಷಿಗಳಾಗಿದ್ದು, ಅಂತಿಮ ತೀರ್ಮಾನಕ್ಕಾಗಿ ದೆಹಲಿಯಲ್ಲಿ ಸರಣಿ ಸಭೆಗಳು ನಡೆದಿವೆ. ದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ನಿವಾಸದಲ್ಲಿ ಗುರುವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರೊಂದಿಗೆ ರಾಹುಲ್ ಗಾಂಧಿ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ. ಮೊದಲಿಗೆ ಸಿದ್ದರಾಮಯ್ಯ, ಬಳಿಕ ಡಿ.ಕೆ. ಶಿವಕುಮಾರ್ ಹಾಗೂ ಅಂತಿಮವಾಗಿ ಬಿ.ಕೆ. ಹರಿಪ್ರಸಾದ್ ಅವರೊಂದಿಗೆ ಸಭೆ ನಡೆಸಿ ಸಚಿವ ಸಂಪುಟ ವಿಸ್ತರಣೆ ಕುರಿತು ಸಮಾಲೋಚನೆ ನಡೆಸಿದ್ದು, ತಮ್ಮದೇ ಆದ ಪಟ್ಟಿ ಸಿದ್ಧಪಡಿಸಿದ್ದಾರೆ ಎಂಬುದು ತಿಳಿದುಬಂದಿದೆ.

ಮೂಲಗಳ ಪ್ರಕಾರ, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಪ್ರತ್ಯೇಕ ಸಚಿವರ ಪಟ್ಟಿಯನ್ನು ರಾಹುಲ್ ಗಾಂಧಿ ಅವರಿಗೆ ಸಲ್ಲಿಸಿದ್ದಾರೆ. ಇದರ ಜೊತೆಗೆ ಕಾಂಗ್ರೆಸ್ ಹೈಕಮಾಂಡ್ ಸಿದ್ಧಪಡಿಸಿದ್ದ ಮತ್ತೊಂದು ಪಟ್ಟಿಯನ್ನೂ ಪರಿಶೀಲಿಸಿ, ವಿವಿಧ ಅಂಶಗಳನ್ನು ಪರಿಗಣಿಸಿ ಅಂತಿಮ ರೂಪುರೇಷೆ ಸಿದ್ಧಪಡಿಸಲಾಗಿದೆ ಎನ್ನಲಾಗಿದೆ. ಇದೇ ಸಭೆಯಲ್ಲಿ ಖಾಲಿ ಇರುವ ವಿಧಾನಸಭೆ ಸ್ಪೀಕರ್ ಹುದ್ದೆ ಭರ್ತಿ ಕುರಿತೂ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.

ಖರ್ಗೆ ಜತೆ ಚರ್ಚೆಯ ಬಳಿಕ ಅಂತಿಮ ನಿರ್ಧಾರ ಸಾಧ್ಯ

ದೆಹಲಿಯಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೂ ರಾಜ್ಯ ನಾಯಕರು ಸಭೆ ನಡೆಸುವ ಸಾಧ್ಯತೆ ಇತ್ತು. ಆದರೆ, ಅವರು ತುರ್ತಾಗಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ ಕಾರಣ ಆ ಸಭೆ ನಡೆಯಲಿಲ್ಲ. ಇದೀಗ ರಾಹುಲ್ ಗಾಂಧಿ ಪರಿಶೀಲಿಸಿರುವ ಪಟ್ಟಿಯನ್ನು ಖರ್ಗೆ ಅವರೊಂದಿಗೆ ಚರ್ಚಿಸಿದ ಬಳಿಕ ಸಚಿವ ಸಂಪುಟ ವಿಸ್ತರಣೆಯ ದಿನಾಂಕ ನಿಗದಿಯಾಗುವ ಸಾಧ್ಯತೆ ಇದೆ. ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಸಹ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆಗಳು ನಡೆದಿರುವುದನ್ನು ದೃಢಪಡಿಸಿದ್ದು, ಅಂತಿಮ ನಿರ್ಧಾರವನ್ನು ಪಕ್ಷದ ವರಿಷ್ಠರು ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಕೂಡ, ಸಚಿವ ಸಂಪುಟ ವಿಸ್ತರಣೆ ಶೀಘ್ರದಲ್ಲೇ ನಡೆಯಲಿದೆ. ಆಗಸ್ಟ್ 6ರಿಂದ ಆರಂಭವಾಗಲಿರುವ ಮುಂಗಾರು ಅಧಿವೇಶನಕ್ಕೂ ಮುನ್ನ ಪ್ರಕ್ರಿಯೆ ಪೂರ್ಣಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದ್ದಾರೆ. 20 ಸಚಿವ ಸ್ಥಾನಗಳು ಹಾಗೂ ಸ್ಪೀಕರ್ ಹುದ್ದೆ ಕುರಿತು ಚರ್ಚೆಗಳು ನಡೆಯುತ್ತಿದ್ದು, ಸೂಕ್ತ ಸಮಯದಲ್ಲಿ ಅಂತಿಮ ಘೋಷಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಯುವ ಮುಖಗಳು ಮತ್ತು ಮಹಿಳಾ ಪ್ರತಿನಿಧಿತ್ವಕ್ಕೆ ಒತ್ತು?

ಸಂಪುಟ ವಿಸ್ತರಣೆಯಲ್ಲಿ ಯುವ ನಾಯಕರಿಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಜೊತೆಗೆ ಪ್ರಸ್ತುತ ಸಚಿವ ಸಂಪುಟದಲ್ಲಿ ಮಹಿಳಾ ಸದಸ್ಯರಿಲ್ಲದ ಹಿನ್ನೆಲೆಯಲ್ಲಿ ಕನಿಷ್ಠ ಒಬ್ಬ ಮಹಿಳಾ ಸಚಿವೆಯನ್ನು ಸೇರಿಸುವ ಸಾಧ್ಯತೆಯೂ ಚರ್ಚೆಯಲ್ಲಿದೆ. ಮಾಜಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಟಿ.ಬಿ. ಜಯಚಂದ್ರ, ಲಕ್ಷ್ಮಣ ಸವದಿ, ಕಾಶಪ್ಪನವರ್ ಸೇರಿದಂತೆ ಹಲವು ನಾಯಕರು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಪ್ರಾದೇಶಿಕ ಸಮತೋಲನ ಕಾಪಾಡುವ ಉದ್ದೇಶದಿಂದ ವಿವಿಧ ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಬೇಕೆಂಬ ಒತ್ತಾಯವೂ ಕೇಳಿಬಂದಿದೆ.

ಇದನ್ನೂ ಓದಿ: ಸಂಪುಟ ವಿಸ್ತರಣೆ: ದೆಹಲಿಯಲ್ಲಿ ಮಹತ್ವದ ಸಭೆ, ಯಾರಿಗೆಲ್ಲಾ ಮಂತ್ರಿ ಸ್ಥಾನ?

ಸದ್ಯ ರಾಹುಲ್ ಗಾಂಧಿ ಅವರೊಂದಿಗೆ ನಡೆದ ಸಭೆಗಳ ಬಳಿಕ ಸಚಿವರ ಪಟ್ಟಿಗೆ ಅಂತಿಮ ರೂಪ ಸಿಕ್ಕಿದೆಯೇ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಮನೆ ಮಾಡಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಬಣದ ನಾಯಕರಲ್ಲಿ ಯಾರಿಗೆ ಹೆಚ್ಚು ಅವಕಾಶ ದೊರೆಯಲಿದೆ ಎಂಬುದು ಸಂಪುಟ ವಿಸ್ತರಣೆಯ ಘೋಷಣೆಯ ಬಳಿಕ ಸ್ಪಷ್ಟವಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಂಗಾಳದ ರಥಯಾತ್ರೆಯಲ್ಲಿ ದುರಂತ: ವಿದ್ಯುತ್ ತಂತಿಗೆ ತಗುಲಿದ ರಥ, 15 ಭಕ್ತರಿಗೆ ವಿದ್ಯುತ್ ಆಘಾತ, ಹಲವರ ಸ್ಥಿತಿ ಗಂಭೀರ – Kannada News | West Bengal Rath Yatra Tragedy: 15 Electrocuted in Nandigram, Chariot Hits Power Line

ನಂದಿಗ್ರಾಮ, ಜುಲೈ 17: ದೇಶಾದ್ಯಂತ ಜಗನ್ನಾಥ ರಥಯಾತ್ರೆ(Jagannath Rath Yatra) ಆಚರಿಸಲಾಗುತ್ತಿದೆ, ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಗುರುವಾರ ಸಂಜೆ ಭೀಕರ ದುರಂತವೊಂದು ಸಂಭವಿಸಿದೆ. ರಥಯಾತ್ರೆ ಮೆರವಣಿಗೆ ಸಾಗುತ್ತಿದ್ದಾಗ ಭಾರಿ ಗಾತ್ರದ ರಥದ ಮೇಲ್ಭಾಗವು ರಸ್ತೆಯ ಮೇಲಿದ್ದ 11,000 ವೋಲ್ಟ್ ಹೈಟೆನ್ಷನ್ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ, ರಥದ ಹಗ್ಗ ಎಳೆಯುತ್ತಿದ್ದ ಕನಿಷ್ಠ 15 ಭಕ್ತರು ತೀವ್ರವಾಗಿ ವಿದ್ಯುತ್ ಆಘಾತಕ್ಕೊಳಗಾಗಿದ್ದಾರೆ. ನಂದಿಗ್ರಾಮದ ತೆಖಲಿ ರಥಯಾತ್ರೆ ಉತ್ಸವ ಸಮಿತಿ ಆಯೋಜಿಸಿದ್ದ ಮೆರವಣಿಗೆಯಲ್ಲಿ ಈ ಅಪಘಾತ ಸಂಭವಿಸಿದೆ.

ಗಾಯಗೊಂಡವರ ಪೈಕಿ 10 ಕ್ಕೂ ಹೆಚ್ಚು ಭಕ್ತರನ್ನು ತಕ್ಷಣವೇ ನಂದಿಗ್ರಾಮ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಕೆಲವರ ಪರಿಸ್ಥಿತಿ ತೀರಾ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಇಸ್ಕಾನ್ ರಥಯಾತ್ರೆ ಉದ್ಘಾಟಿಸಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ
ಈ ದುರಂತದ ನಡುವೆಯೂ ರಾಜ್ಯದಾದ್ಯಂತ ಭಾರಿ ಮಳೆಯ ನಡುವೆಯೇ ಸಾಂಪ್ರದಾಯಿಕ ಶ್ರದ್ಧಾಭಕ್ತಿಯಿಂದ ರಥಯಾತ್ರೆಗಳು ಜರುಗಿದವು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಸಾಂಪ್ರದಾಯಿಕ ಹಳದಿ ಕುರ್ತಾ ಮತ್ತು ಬಿಳಿ ಧೋತಿ ಧರಿಸಿ, ದಕ್ಷಿಣ ಕೋಲ್ಕತ್ತಾದ ಆಲ್ಬರ್ಟ್ ರಸ್ತೆಯಲ್ಲಿ ನಡೆದ ಇತಿಹಾಸ ಪ್ರಸಿದ್ಧ ಇಸ್ಕಾನ್ ರಥಯಾತ್ರೆಗೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.

ದೇವರ ರಥದ ಹಗ್ಗವನ್ನು ಎಳೆದು ಹಬ್ಬ ಉದ್ಘಾಟಿಸಿದ ಸಿಎಂ ಸುವೇಂದು ಅಧಿಕಾರಿ, ಐತಿಹಾಸಿಕ ಕೋಲ್ಕತ್ತಾ ಇಸ್ಕಾನ್ ರಥಯಾತ್ರೆಗೆ ಈ ವರ್ಷ 71 ವರ್ಷ ತುಂಬಿದೆ. ರಾಜ್ಯದ ಮುಖ್ಯಮಂತ್ರಿಗಳು ಪ್ರತಿ ವರ್ಷ ಇದರಲ್ಲಿ ಭಾಗವಹಿಸುವುದು ಇಲ್ಲಿನ ಸುದೀರ್ಘ ಸಂಪ್ರದಾಯ. ಈ ಬಾರಿ ರಾಧಾಮಾಧವ್ ಜಿ ಅವರ ‘ಮಂಗಲ ಆರತಿ’ ನೆರವೇರಿಸುವ ಭಾಗ್ಯ ನನಗೆ ಸಿಕ್ಕಿದ್ದು ನನ್ನ ಪುಣ್ಯ. ಜಗತ್ತಿನಲ್ಲಿ ಕೆಟ್ಟದ್ದರ ಮೇಲೆ ಒಳ್ಳೆಯದು ಸದಾ ಜಯಗಳಿಸಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.

ಮತ್ತಷ್ಟು ಓದಿ: ಆಷಾಢ ಮಾಸ ಅಶುಭವೆಂದಾದರೆ ಪುರಿ ಜಗನ್ನಾಥ ರಥಯಾತ್ರೆ ಇದೇ ತಿಂಗಳಲ್ಲಿ ನಡೆಯುವುದೇಕೆ? ಇಲ್ಲಿದೆ ಅಸಲಿ ರಹಸ್ಯ

ಬಂಗಾಳದ ಹೂಗ್ಲಿ ಜಿಲ್ಲೆಯ ‘ಮಹೇಶ್’ ನಲ್ಲಿ ದೇಶದ ಅತ್ಯಂತ ಹಳೆಯ ರಥಯಾತ್ರೆಗಳಲ್ಲಿ ಒಂದಾದ ಉತ್ಸವ ಜರುಗಿತು. ಇಲ್ಲಿನ ಲಕ್ಷಾಂತರ ಭಕ್ತರನ್ನು ನಿಯಂತ್ರಿಸಲು ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಹಾಗೆಯೇ, ಹಿಂದಿನ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವು ಪುರ್ಬಾ ಮೇದಿನಿಪುರ ಜಿಲ್ಲೆಯ ದಿಘಾದಲ್ಲಿ ನಿರ್ಮಿಸಿರುವ ಸುಂದರ ‘ಜಗನ್ನಾಥ ಸಾಂಸ್ಕೃತಿಕ ಕೇಂದ್ರ’ದಲ್ಲೂ ದೇವತೆಗಳ ದರ್ಶನಕ್ಕಾಗಿ ಬೆಳಗಿನಿಂದಲೇ ನೂರಾರು ಜನರು ಸರತಿ ಸಾಲಿನಲ್ಲಿ ನಿಂತಿದ್ದರು. ನಾಡಿಯಾ, ಬಂಕುರಾ, ಪುರುಲಿಯಾ ಮತ್ತು ಉತ್ತರ ಬಂಗಾಳದ ಸಿಲಿಗುರಿಯಲ್ಲೂ ಇಸ್ಕಾನ್ ವತಿಯಿಂದ ಭವ್ಯ ಮೆರವಣಿಗೆಗಳು ನಡೆದವು.

ರಥಯಾತ್ರೆಯ ದಿನವೇ ಆರಂಭವಾಗುವ ‘ದುರ್ಗಾ ಪೂಜೆ’ ಸಿದ್ಧತೆ
ಪಶ್ಚಿಮ ಬಂಗಾಳದ ಸಂಸ್ಕೃತಿಯಲ್ಲಿ ಜಗನ್ನಾಥ ರಥಯಾತ್ರೆಯ ದಿನಕ್ಕೆ ಮತ್ತೊಂದು ಐತಿಹಾಸಿಕ ಮಹತ್ವವಿದೆ. ಬಂಗಾಳದ ಅತಿ ದೊಡ್ಡ ಹಬ್ಬವಾದ ‘ದುರ್ಗಾ ಪೂಜೆ’ಯ ಭವ್ಯ ಪೆಂಡಾಲ್‌ಗಳ ನಿರ್ಮಾಣ ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ನೀಡುವ ‘ಖುತಿ ಪೂಜೆ’ಯನ್ನು ರಾಜ್ಯದ ಬಹುತೇಕ ಎಲ್ಲಾ ಪ್ರಮುಖ ಸಮುದಾಯ ಪೂಜಾ ಆಯೋಜಕರು ಇದೇ ರಥಯಾತ್ರೆಯ ಶುಭ ದಿನದಂದೇ ನೆರವೇರಿಸುತ್ತಾರೆ. ಅಂದರೆ, ರಥಯಾತ್ರೆ ಮುಗಿಯುತ್ತಿದ್ದಂತೆ ಬಂಗಾಳದಲ್ಲಿ ದುರ್ಗಾ ಪೂಜೆಯ ಕೌಂಟ್‌ಡೌನ್ ಆರಂಭವಾಗುತ್ತದೆ.

ರಥಗಳ ಎತ್ತರದ ಮೇಲಿನ  ಆತಂಕ: ಪ್ರತಿ ವರ್ಷ ರಥಯಾತ್ರೆಗಳ ಸಂದರ್ಭದಲ್ಲಿ ಇಂತಹ ವಿದ್ಯುತ್ ಅವಘಡಗಳು ದೇಶದ ವಿವಿಧೆಡೆ ಮರುಕಳಿಸುತ್ತಲೇ ಇವೆ. ರಥಗಳ ಮೇಲ್ಭಾಗದ ಅಲಂಕಾರಿಕ ಗೋಪುರಗಳು ಅತಿ ಹೆಚ್ಚು ಎತ್ತರವಿರುವುದರಿಂದ, ರಸ್ತೆ ಬದಿಯ ವಿದ್ಯುತ್ ತಂತಿಗಳನ್ನು ಮುಂಚಿತವಾಗಿ ಡಿಸ್‌ಕನೆಕ್ಟ್ ಮಾಡದ ಅಥವಾ ರಥದ ಎತ್ತರವನ್ನು ಮಿತಿಗೊಳಿಸದ ಆಡಳಿತ ಮಂಡಳಿಗಳ ನಿರ್ಲಕ್ಷ್ಯವೇ ಇಂತಹ ಘೋರ ಅಪಘಾತಗಳಿಗೆ ಮುಖ್ಯ ಕಾರಣವಾಗುತ್ತಿದ್ದು, ಈ ಕುರಿತು ಕಟ್ಟುನಿಟ್ಟಿನ ನಿಯಮಗಳ ಅಗತ್ಯವಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಪುರಿಯ ಜಗನ್ನಾಥ ರಥಯಾತ್ರೆಯಲ್ಲಿ ಕಾಲ್ತುಳಿತ ಉಂಟಾಗಿದ್ದು, ಘಟನೆಯಲ್ಲಿ ಓರ್ವ ಭಕ್ತ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

TV9 Kannada News Live: ಎಲ್ಲೆಡೆ ಬರಗಾಲದ ತೀವ್ರತೆ, ಕಂಗಾಲಾದ ಅನ್ನದಾತ! ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ – Kannada News | TV9 Kannada Live Breaking News 17 July 2026 CM DK Shivakumar, Karnataka Cabinet Expansion, Weather, Rain, SIR Latest Updates in Kannada

Breaking News Today Live Updates in Kannada: ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಮಂಡ್ಯದಲ್ಲಿ ಕಾವೇರಿ ನೀರಿಗಾಗಿ ರೈತರು ಹಾಗೂ ಕರಾವೆ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಸರ್ಕಾರ ಕೇವಲ ಕುಡಿಯುವ ನೀರು ಬಿಡುಗಡೆ ಮಾಡಿದೆ. ಇತ್ತ ಯಾದಗಿರಿಯಲ್ಲಿ ಒಣಗುತ್ತಿರುವ ಬೆಳೆಗಳು, ಚಿತ್ರದುರ್ಗದಲ್ಲಿ ಬತ್ತಿದ ಬೋರ್‌ವೆಲ್‌ಗಳು ಹಾಗೂ ವಿಜಯನಗರದ ಮಳೆ ಅಭಾವ ರೈತರನ್ನು ಕಂಗಾಲುಗೊಳಿಸಿದೆ. ಬರ ಪರಿಹಾರಕ್ಕಾಗಿ ಡಿಸಿಎಂ ಪರಮೇಶ್ವರ್ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಇನ್ನು ಕೊಪ್ಪಳದಲ್ಲಿ ಮಳೆಗಾಗಿ ಹರಕೆ ಹೊತ್ತ ಬೆನ್ನಲ್ಲೇ ಮಳೆರಾಯ ತಂಪೆರೆದಿದ್ದಾನೆ. ಕರ್ನಾಟಕದ ಕೆಲವೆಡೆ ವಾಡಿಕೆಗಿಂತ 3-5 ಡಿಗ್ರಿ ಹೆಚ್ಚಿರಲಿದೆ ಗರಿಷ್ಠ ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇತ್ತ ಜಾಗತಿಕವಾಗಿ, ಡೊನಾಲ್ಡ್ ಟ್ರಂಪ್ ಹತ್ಯೆಗೆ ಇರಾಕಿ ಉಗ್ರ ಸಂಘಟನೆ 84 ಕೋಟಿ ರೂ. ಬಹುಮಾನ ಘೋಷಿಸಿದ್ದು ತೀವ್ರ ಆತಂಕ ಸೃಷ್ಟಿಸಿದೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Tv9 Kannada Live TV ಇಲ್ಲಿ ವೀಕ್ಷಿಸಿ

Source link

Exit mobile version