ಜಿಬಿಎ ನಿರ್ಲಕ್ಷ್ಯಕ್ಕೆ ವಾಹನ ಸವಾರರಿಗೆ ಪ್ರಾಣಸಂಕಟ: ಹೊಂಡದಲ್ಲಿ ಕಾರಿನ ಚಕ್ರ ಸಿಲುಕಿ ಚಾಲಕನ ಪರದಾಟ – Kannada News | Bengaluru: Driver Stranded as Car Gets Stuck in Okalipuram Underpass Due to Civic Negligence

ಬೆಂಗಳೂರು, ಜುಲೈ 08: ಜಿಬಿಎ ನಿರ್ಲಕ್ಷ್ಯದಿಂದ ಉಂಟಾಗುತ್ತಿದ್ದ ಭಾರೀ ಅನಾಹುತದಿಂದ ಕಾರು ಚಾಲಕ ಪಾರಾಗಿರುವ ಘಟನೆ ಬೆಂಗಳೂರಿನ ಓಕಳಿಪುರಂನಲ್ಲಿ ನಡೆದಿದೆ. ರಾಜೀವ್ ಗಾಂಧಿ ಅಷ್ಟ ಪಥ ರೈಲ್ವೆ ಬ್ರಿಡ್ಜ್ ಕೆಳಗಿರುವ ಗುಂಡಿಯಲ್ಲಿ ಕಾರಿನ ಚಕ್ರ ಸಿಲುಕಿದ್ದು, ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜೂನ್ 1ರಂದು ಇದೇ ಗುಂಡಿಯ ಬಗ್ಗೆ TV9ನಲ್ಲಿ ಸುದ್ದಿ ಪ್ರಸಾರವಾಗಿತ್ತು. ಆದರೆ ಗುಂಡಿ ಬಗ್ಗೆ ನಿರ್ಲಕ್ಷ್ಯವನ್ನು ಜಿಬಿಎ ಮುಂದುವರಿಸಿದ ಪರಿಣಾಮ, ಅನಾಹುತಗಳು ನಡೆಯುತ್ತಲೇ ಇವೆ. ಇನ್ನೆಷ್ಟು ಅನಾಹುತಗಳಾದ ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದು, ತಕ್ಷಣ ರಸ್ತೆ ದುರಸ್ತಿಗೆ ಒತ್ತಾಯಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸರ್ಕಾರದ ವಿರುದ್ಧ ಸಿಡಿದೆದ್ದ ಬೆಂಗಳೂರಿನ ಬೀದಿಬದಿ ವ್ಯಾಪಾರಿಗಳು: ಇವರ ಹಕ್ಕೊತ್ತಾಯಗಳೇನು? – Kannada News | Street Vendor Protest Against Eviction: Vendors Demand Fair Trading Spaces

ಬೀದಿಬದಿ ವ್ಯಾಪಾರಿಗಳಿಂದ ಪ್ರತಿಭಟನೆImage Credit source: tv9 kannada

ಬೆಂಗಳೂರು, ಜುಲೈ 08: ನಗರದಲ್ಲಿ ಫುಟ್​​ಪಾತ್ ಒತ್ತುವರಿ ತೆರವು (Footpath Encroachment) ಕಾರ್ಯಚರಣೆ ಮುಂದುವರೆದಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಈ ಆಪರೇಷನ್​ ಬೀದಿಬದಿ ವ್ಯಾಪಾರಿಗಳ ನಿದ್ದೆಗೆಡಿಸಿದೆ. ಹೀಗಾಗಿ  ವ್ಯಾಪಾರ, ವಹಿವಾಟು ಬಂದ್ ಮಾಡಿ ನೂರಾರು ಬೀದಿಬದಿ ವ್ಯಾಪಾರಿಗಳು ಇಂದು ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟಿಸಿದರು. ಒಕ್ಕಲೆಬ್ಬಿಸಿದ ಬೀದಿಬದಿ ವ್ಯಾಪಾರಿಗಳಿಗೆ ಮತ್ತೆ ಅದೇ ಸ್ಥಳವನ್ನು ನೀಡಬೇಕು ಎಂದು ಒತ್ತಾಯಿಸಿದ್ದು ಜೊತೆಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ್ದಾರೆ.

ಬೀದಿಬದಿ ವ್ಯಾಪಾರಿಗಳಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ 

ಫುಟ್​​ಪಾತ್​​ ಅತಿಕ್ರಮಿಸಿ ಅಂಗಡಿಗಳನ್ನ ಇಟ್ಟುಕೊಂಡವರಿಗೆ ಜಿಬಿಎ ಅಧಿಕಾರಿಗಳು ತೆರವು ಮಾಡುವ ಮೂಲಕ ಬಿಸಿ ಮುಟ್ಟಿಸಿದ್ದಾರೆ. ಬೆಂಗಳೂರು ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಪಾಲಿಕೆಗಳ ವ್ಯಾಪ್ತಿಯಲ್ಲಿ ಜಿಬಿಎ ಅಧಿಕಾರಿಗಳು ಕಾರ್ಯಾಚರಣೆ ಮಾಡಿ ತೆರವು ಮಾಡುತ್ತಿದ್ದಾರೆ. ಇದು ಬೀದಿಬದಿ ವ್ಯಾಪಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಫುಟ್​ಪಾತ್​ ತೆರವು ಖಂಡಿಸಿ ಫ್ರೀಡಂಪಾರ್ಕ್​ನಲ್ಲಿಂದು ವ್ಯಾಪಾರಿಗಳು ಪ್ರತಿಭಟಿಸಿದ್ದು, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.

ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಪ್ರತಿಭಟನಾಕಾರರು

ಇನ್ನು ಈ ವೇಳೆ ಪ್ರತಿಕ್ರಿಯಿಸಿರುವ ಪ್ರತಿಭಟನಾಕಾರರು, ‘ಫುಟ್​ಪಾತ್ ಕಾರ್ಯಾಚರಣೆ ಸದ್ಯಕ್ಕೆ ಸ್ಥಗಿತಗೊಳಿಸಿ, ಸಚಿವ ಕೃಷ್ಣಬೈರೇಗೌಡ ಇಲ್ಲಿಗೆ ಬರಬೇಕು. ಇಲ್ಲವಾದರೆ ನಾವು ಹೋರಾಟ ತೀವ್ರಗೊಳಿಸುವುದಾಗಿ’ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಫುಟ್‌ಪಾತ್ ತೆರವು ಅಭಿಯಾನ: ಆರ್.ಟಿ. ನಗರದಲ್ಲಿ ಬೀದಿ ಬದಿ ವ್ಯಾಪಾರಿಗಳಿಂದ ಪ್ರತಿಭಟನೆ

ಬೀದಿಬದಿ ವ್ಯಾಪಾರಿಗಳ ಬೇಡಿಕೆಗಳು ಏನು?

  • ಒಕ್ಕಲೆಬ್ಬಿಸಿದ ಬೀದಿ ವ್ಯಾಪಾರಿಗಳಿಗೆ ಮತ್ತೆ ಅದೇ ಸ್ಥಳವನ್ನು ನೀಡಬೇಕು.
  • ಫುಟ್​ಪಾತ್​ಗೆ ಅಂಗಡಿ ಅಡ್ಡವಿದ್ದರೆ ಅಷ್ಟೇ ವ್ಯಾಪಾರ ಆಗುವ ಪರ್ಯಾಯ ಸ್ಥಳ ನೀಡಬೇಕು.
  • ಜಪ್ತಿ ಮಾಡಲಾದ ಸರಕುಗಳನ್ನು ವಾಪಸ್ ನೀಡಬೇಕು.
  • ಬೀದಿಬದಿ ವ್ಯಾಪಾರಿಗಳ ಕಾಯ್ದೆ ಜಾರಿಗೆ ತರಬೇಕು.
  • ಸಮಗ್ರ ಸಮೀಕ್ಷೆ ಆಗುವವರೆಗೂ ಎತ್ತಗಂಡಿ ನಿಲ್ಲಿಸಬೇಕು.
  • ನಗರದಲ್ಲಿರುವ ಫುಟ್​ಪಾತ್​ಗಳ ಅಗಲೀಕರಣ ಮಾಡಿಬೇಕು.
  • ಹೊಸ ನಗರ ಪಾಲಿಕೆಗಳಲ್ಲಿ ಟೌನ್ ವೆಂಡಿಂಗ್ ಕಮಿಟಿ ರಚಿಸಬೇಕು.

ಇದನ್ನೂ ಓದಿ: ಫುಟ್​​ಪಾತ್​​ ಒತ್ತುವರಿ ತೆರವು ಕಾರ್ಯಾಚರಣೆ: ಜಂಟಿ ಹೋರಾಟ ಸಮಿತಿಯಿಂದ ಸರ್ಕಾರಕ್ಕೆ ಸಪ್ತ ಪ್ರಶ್ನೆ

ಪ್ರತಿಭಟನೆಗೆ ಯಾರೆಲ್ಲಾ ಬೆಂಬಲ

ಇನ್ನು ಬೀದಿಬದಿ ವ್ಯಾಪಾರಿಗಳ ಜಂಟಿ ಹೋರಾಟ ಸಮಿತಿಯಿಂದ ನಡೆದ ಪ್ರತಿಭಟನೆಗೆ ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘ (ರಿ), ಕರುನಾಡು ಬೀದಿ ಬದಿ ವ್ಯಾಪಾರಿಗಳ ಸಂಘಟನೆಗಳ ಒಕ್ಕೂಟ (ರಿ), ನವ ಕರ್ನಾಟಕ ರಾಜ್ಯ ಬೀದಿಬದಿ ವ್ಯಾಪಾರಿಗಳ ಸಂಘ (ರಿ), ಬೀದಿಬದಿ ವ್ಯಾಪಾರಿಗಳ ಸಂಘ (ರಿ), ಕರ್ನಾಟಕ ರಾಜ್ಯ ರಸ್ತೆ ಬದಿ ವ್ಯಾಪಾರಿಗಳ ಮಹಾಮಂಡಳ (ರಿ) ಮತ್ತು ಕರ್ನಾಟಕ ಮಹಿಳಾ ಬೀದಿಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ (ರಿ)ದಿಂದ ಬೆಂಬಲ ನೀಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ತಬಾಹಿ’ ಹಾಡಿಗೆ ಫಿದಾ ಆದ ನೆಟ್ಟಿಗರು, ಥರಹೇವಾರಿ ಕಮೆಂಟ್​​ಗಳು – Kannada News | Toxic movie Tabaahi song released, here is netizen comments

ಟಾಕ್ಸಿಕ್’ (Toxic) ಸಿನಿಮಾದ ‘ತಬಾಹಿ’ ಹಾಡು ಇಂದು (ಜುಲೈ 08) ಯೂಟ್ಯೂಬ್​​ನಲ್ಲಿ ಬಿಡುಗಡೆ ಆಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ‘ತಬಾಹಿ’ ಹಾಡು ಬಿಡುಗಡೆ ಆಗಿದ್ದು, ಅಭಿಮಾನಿಗಳಿಗೆ ಸಖತ್ ಕಿಕ್ ಕೊಡುತ್ತಿದೆ. ಹಾಡು ಬಿಡುಗಡೆ ಆದ ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಾಡಿನ ಸ್ಕ್ರೀನ್ ಶಾಟ್​​ಗಳು, ಶಾರ್ಟ್ ವಿಡಿಯೋಗಳು, ರೀಲ್​​ಗಳು ಹರಿದಾಡಲು ಆರಂಭವಾಗಿದ್ದು, ನೆಟ್ಟಿಗರು ಥರಹೇವಾರಿ ಕೆಮಂಟುಗಳನ್ನು ಸಹ ಮಾಡುತ್ತಿದ್ದಾರೆ. ಯೂಟ್ಯೂಬ್​​ನಲ್ಲಿ ‘ತಬಾಹಿ‘ ಹಾಡಿಗೆ ಬಂದಿರುವ ನೂರಾರು ಕಮೆಂಟುಗಳಲ್ಲಿ ಆಯ್ದ ಕೆಲವು ಅಭಿಪ್ರಾಯಗಳು ಇಲ್ಲಿವೆ.

ಯೂಟ್ಯೂಬ್​​ನಲ್ಲಿ ಹಾಡು ನೋಡಿದವರು ಅಲ್ಲಿಯೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಬಹುತೇಕ ಮಂದಿ ಹಾಡನ್ನು, ಹಾಡಿನ ಗುಣಮಟ್ಟವನ್ನು ಬಹುವಾಗಿ ಕೊಂಡಾಡಿದ್ದಾರೆ. ಹಾಲಿವುಡ್ ಗುಣಮಟ್ಟದ ದೃಶ್ಯಗಳು ಹಾಡಿನಲ್ಲಿವೆ, ದೃಶ್ಯಗಳ ಗುಣಮಟ್ಟವೇ ಸಿನಿಮಾದ ಗುಣಮಟ್ಟದ ಬಗ್ಗೆ ಸುಳಿವು ಕೊಡುತ್ತಿವೆ. ಇದು ಖಂಡಿತ ಹಾಲಿವುಡ್ ಲೆವೆಲ್ ಸಿನಿಮಾ ಎಂದು ಹಲವರು ಕಮೆಂಟುಗಳನ್ನು ಮಾಡಿದ್ದಾರೆ. ಹಾಲಿವುಡ್​​ಗೆ ಟಕ್ಕರ್ ಕೊಡಬಲ್ಲ ಭಾರತೀಯ ಸಿನಿಮಾ ಇದಾಗಲಿದೆ ಎಂದು ಹಲವರು ಹೇಳಿದ್ದಾರೆ.

ಯಶ್ ಅವರನ್ನು ಹಲವು ನೆಟ್ಟಿಗರು ಕೊಂಡಾಡಿದ್ದಾರೆ. ವಿಶೇಷವಾಗಿ ಹಾಡಿನಲ್ಲಿ ಬರುವ ಯಶ್ ಅವರ ಸಿಕ್ಸ್ ಪ್ಯಾನ್​​ ಬಗ್ಗೆಯಂತೂ ಹಲವಾರು ಮಂದಿ ಕಮೆಂಟ್ ಮಾಡಿದ್ದಾರೆ. ಯಶ್ ಅವರು ಸಖತ್ ಆಗಿ ಬಾಡಿ ಮಾಡಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಇನ್ನು ಕೆಲವರು ಯಶ್ ಅವರ ರಗಡ್ ಲುಕ್, ಅವರ ತೀಕ್ಷ್ಣವಾದ ನೋಟ, ಗಂಭೀರವಾದ ಮುಖಚಹರೆ, ನಟನೆಯನ್ನು ಹೊಗಳಿದ್ದಾರೆ. ಜೊತೆಗೆ ಕಿಯಾರಾ ಅವರ ಲುಕ್, ಅವರ ಅಂದವನ್ನು ಸಹ ಹಲವರು ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ:ಹಿಂದಿ ಸಿನಿಮಾ ವೀಕ್ಷಿಸಿ ಕೊಂಡಾಡಿದ ‘ಟಾಕ್ಸಿಕ್’ ನಿರ್ದೇಶಕಿ, ಹೇಳಿದ್ದೇನು?

ಕನ್ನಡದ ಹಾಡಿನ ಕಮೆಂಟ್ ಬಾಕ್ಸ್​​ನಲ್ಲಿ ಕೆಲವರು ‘ದರ್ಶನ್ ಅಭಿಮಾನಿಗಳ ಕಡೆಯಿಂದ ಆಲ್​​ ದಿ ಬೆಸ್ಟ್’ ಎಂದರೆ ಇನ್ನು ಕೆಲವರು ‘ಕಿಚ್ಚ ಅಭಿಮಾನಿಗಳಿಂದ ಆಲ್​ ದಿ ಬೆಸ್ಟ್’ ಎಂದಿದ್ದಾರೆ. ‘ಈ ಸಿನಿಮಾ 2000 ಕೋಟಿ ಪಡೆಯುವುದು ಪಕ್ಕಾ’ ಎಂದು ಇನ್ನು ಕೆಲವರು ಹೇಳಿದ್ದಾರೆ. ‘ಸಣ್ಣ ಹಳ್ಳಿಯಿಂದ ಬಂದ ಯಶ್ ಈಗ ಹಾಲಿವುಡ್​​ ಲೆವೆಲ್​​ಗೆ ಬೆಳೆದು ನಿಂತಿರುವುದು ಸಾಮಾನ್ಯ ಸಾಧನೆಯಲ್ಲ’ ಎಂದು ಕೆಲವರು ಭೇಷ್ ಎಂದಿದ್ದಾರೆ. ಸಿನಿಮಾಕ್ಕೆ ಕಾಯುತ್ತಿರುವುದಾಗಿ ಹಲವರು ಕಮೆಂಟ್ ಮಾಡಿದ್ದಾರೆ. ಭಟ್ಟರ ಸಾಹಿತ್ಯ ಕೆಲವರಿಗೆ ಇಷ್ಟವಾದರೆ, ಕೆಲವರಿಗೆ ವಿಶಾಲ್ ಮಿಶ್ರಾ ಸಂಗೀತ ಇಷ್ಟವಾಗಿದೆ.

ಇನ್ನು ಕೆಲವರು ತಮಾಷೆಯ, ವ್ಯಂಗ್ಯದ ಕಮೆಂಟ್​​ಗಳನ್ನು ಸಹ ಮಾಡಿದ್ದಾರೆ. ವಿಶೇಷವಾಗಿ ಕಿಯಾರಾ ಹಾಗೂ ಯಶ್ ಅವರ ನಡುವಿನ ಹಾಟ್ ದೃಶ್ಯಗಳ ಕುರಿತಾಗಿ ಈ ಕಮೆಂಟ್​​ಗಳಿವೆ. ಕಿಯಾರಾ ಪತಿ ನಟ ಸಿದ್ಧಾಂತ್ ಮಲ್ಹೋತ್ರಾ ಕುರಿತು ಜೋಕುಗಳನ್ನು ಮಾಡಿದ್ದಾರೆ. ಯಶ್ ಅವರು ಪದೇ-ಪದೇ ರೀಟೇಕ್ ನೀಡಿರಬಹುದು ಎಂದು ಕೆಲವರು ತರ್ಲೆ ಮಾಡಿದ್ದಾರೆ. ಇನ್ನು ಕೆಲವರು ‘ಪಾಪ ಸಿದ್ಧಾರ್ಥ್’ ಎಂದಿದ್ದಾರೆ. ಏನೇ ಆಗಲಿ ಹಾಡು ಹೆಚ್ಚು ಜನರಿಗೆ ತಲುಪಿದೆ, ಜನರಿಗೆ ಹಾಡು ಇಷ್ಟವಾಗಿದೆ. ‘ಟಾಕ್ಸಿಕ್’ ತಂಡದ ಪರಿಶ್ರಮ ಸಾರ್ಥಕವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs ENG: ಟೀಂ ಇಂಡಿಯಾವನ್ನು ಕಾಡುತ್ತಿರುವ ಇಬ್ಬರು ಆರ್​ಸಿಬಿ ಆಟಗಾರರು – Kannada News | India’s T20 Series Loss to England: RCB Stars Jacob Bethell and Phil Salt Shine for Hosts

ಐದು ಪಂದ್ಯಗಳ ಟಿ20 ಸರಣಿಗಾಗಿ ಇಂಗ್ಲೆಂಡ್‌ ಪ್ರವಾಸ ಮಾಡಿದ್ದ ಟೀಂ ಇಂಡಿಯಾ ಇದುವರೆಗೂ ತನ್ನ ಗೆಲುವಿನ ಖಾತೆ ತೆರೆದಿಲ್ಲ ನಡೆದಿರುವ ಮೂರು ಪಂದ್ಯಗಳಲ್ಲಿ ಎರಡು ಪಂದ್ಯಗಳಲ್ಲಿ ಟೀಂ ಇಂಡಿಯಾ ಸೋತಿದ್ದರೆ, ಇನ್ನೊಂದು ಪಂದ್ಯ ಮಳೆಯಿಂದ ರದ್ದಾಗಿತ್ತು. ಶ್ರೇಯಸ್ ಪಡೆಯ ಈ ಕಳಪೆ ಪ್ರದರ್ಶನವನ್ನು ನೋಡಿದರೆ, ಮಳೆಯಿಂದ ಮೊದಲ ಪಂದ್ಯ ರದ್ದಾಗದಿದ್ದರೆ, ಆ ಪಂದ್ಯವನ್ನು ಭಾರತ ಸೋಲುವ ಸಾಧ್ಯತೆಗಳಿದ್ದವು (PC-BCCI).

ಸರಣಿಯ ಎರಡನೇ ಪಂದ್ಯವನ್ನು 4 ವಿಕೆಟ್‌ಗಳಿಂದ ಸೋತಿದ್ದ ಭಾರತ ತಂಡ, ಎರಡನೇ ಪಂದ್ಯವನ್ನು ಬರೋಬ್ಬರಿ 125 ರನ್​ಗಳಿಂದ ಸೋತಿತು. ಟಿ20 ಕ್ರಿಕೆಟ್ ಇತಿಹಾಸದಲ್ಲಿ ಟೀಂ ಇಂಡಿಯಾ ಕಂಡ ಅತಿದೊಡ್ಡ ಸೋಲು ಇದಾಗಿದೆ. ಹಾಗೆಯೇ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಭಾರತ ತಂಡ ಸತತ ಐದು ಪಂದ್ಯಗಳನ್ನು ಗೆಲ್ಲಲು ವಿಫಲವಾಗಿರುವುದು ಇದೇ ಮೊದಲು (PC-BCCI).

ವಾಸ್ತವವಾಗಿ ಟೀಂ ಇಂಡಿಯಾದ ಸತತ ಈ ಎರಡು ಸೋಲುಗಳಿಗೆ ಒಂದರ್ಥದಲ್ಲಿ ಇಬ್ಬರು ಆರ್​ಸಿಬಿ ಆಟಗಾರರೇ ಪ್ರಮುಖ ಕಾರಣ ಎನ್ನಬಹುದು. ಮೊದಲ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 190 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್​ಗೆ ಉತ್ತಮ ಆರಂಭ ಸಿಗಲಿಲ್ಲ. ಆದರೆ 4ನೇ ಕ್ರಮಾಂಕದಲ್ಲಿ ಬಂದ ಜೇಕಬ್ ಬೆಥೆಲ್ ಕೊನೆಯವರೆಗೂ ಅಜೇಯರಾಗಿ ಉಳಿದು 76 ರನ್​ಗಳ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಬೆಥೆಲ್ ಐಪಿಎಲ್‌ನಲ್ಲಿ ಆರ್​ಸಿಬಿ ಪರ ಆಡುತ್ತಾರೆ ಎಂಬುದು ಗಮನಿಸಬೇಕಾದ ಸಂಗತಿ (PC-ECB).

ಮೂರನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್‌ ಮೊದಲು ಬ್ಯಾಟಿಂಗ್‌ ಮಾಡಿತು. ಈ ಪಂದ್ಯದಲ್ಲಿ ಇಂಗ್ಲೆಂಡ್‌ ಪರ ಆರಂಭಿಕ ಫಿಲ್ ಸಾಲ್ಟ್ ಅರ್ಧಶತಕದ ಇನ್ನಿಂಗ್ಸ್ ಆಡಿ ತಂಡ 200 ರನ್​ಗಳ ಗಡಿ ದಾಟುವಲ್ಲಿ ಪ್ರಮುಖ ಪಾತ್ರವಹಿಸಿದರು. ಆರಂಭಿಕನಾಗಿ ಕಣಕ್ಕಿಳಿದಿದ್ದ ಸಾಲ್ಟ್ 17ನೇ ಓವರ್​ನವರೆಗೂ ಕ್ರಿಸ್​ನಲ್ಲಿ ನಿಂತು ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಹಾಗೆಯೇ ವೈಯಕ್ತಿಕವಾಗಿ 70 ರನ್​ಗಳ ಇನ್ನಿಂಗ್ಸ್ ಕೂಡ ಆಡಿದರು. ಸಾಲ್ಟ್ ಕೂಡ ಐಪಿಎಲ್‌ನಲ್ಲಿ ಆರ್​ಸಿಬಿ ಪರ ಆಡುತ್ತಾರೆ ಎಂಬುದನ್ನು ಹೊಸದಾಗಿ ಹೇಳಬೇಕಿಲ್ಲ (PC-PTI).

ಇವರಿಬ್ಬರ ಜೊತೆಗೆ ಇಡೀ ಇಂಗ್ಲೆಂಡ್‌ ತಂಡದ ಸಾಂಘಿಕ ಪ್ರದರ್ಶನ ಗೆಲುವಿಗೆ ಪ್ರಮುಖ ಕಾರಣವಾಗಿದ್ದರೂ ಇವರಿಬ್ಬರ ನಿರ್ಣಾಯಕ ರನ್ ಕೊಡುಗೆ ತಂಡವನ್ನು ಒತ್ತಡದಿಂದ ದೂರ ಮಾಡಿತು. ಅದರಲ್ಲೂ 2ನೇ ಟಿ20 ಪಂದ್ಯದಲ್ಲಿ ಬೆಥೆಲ್ ಆಡಿದ ಅಜೇಯ ಇನ್ನಿಂಗ್ಸ್​ನಿಂದಾಗಿಯೇ ಇಂಗ್ಲೆಂಡ್‌ ಗೆದ್ದಿತು ಎಂಬುದರಲ್ಲಿ ಯಾವುದೇ ಸುಳ್ಳಿಲ್ಲ. ಹಾಗೆಯೇ ಮೂರನೇ ಪಂದ್ಯದಲ್ಲಿ ಸಾಲ್ಟ್ ಕಟ್ಟಿದ ಇನ್ನಿಂಗ್ಸ್ ಕೂಡ ಇಂಗ್ಲೆಂಡ್‌ ಗೆಲುವಿಗೆ ಕಾರಣವಾಯಿತು. ಒಟ್ಟಾರೆ ಐಪಿಎಲ್‌ನಲ್ಲಿ ಆರ್​ಸಿಬಿ ಅಭಿಮಾನಿಗಳ ಫೆವರೇಟ್ ಆಟಗಾರರೆನಿಸಿಕೊಂಡಿರುವವರು, ಇದೀಗ ಟೀಂ ಇಂಡಿಯಾ ಪಾಲಿಗೆ ವಿಲನ್​ಗಳಾಗಿದ್ದಾರೆ ಎಂದರೆ ತಪ್ಪಾಗಲಾರದು (PC-PTI).

Published On – 3:21 pm, Wed, 8 July 26

Source link

ಸಮೋಸಾ ತಿನ್ನಲು ರೈಲು ನಿಲ್ಲಿಸಿದ್ರಾ ಲೊಕೊ ಪೈಲಟ್? – Kannada News | Loco Pilot Samosa Stop, Indian Railways Debunks Viral Train Video Truth

ಇಂದೋರ್, ಜುಲೈ 08: ಸಮೋಸಾ ಮತ್ತು ಕಚೋರಿ ಖರೀದಿಸಲು ಲೊಕೊ ಪೈಲಟ್ ಒಬ್ಬರು ರೈಲು(Train) ನಿಲ್ಲಿಸಿದ್ದಾರೆ ಎಂದು ಆರೋಪಿಸಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿದೆ. ಲಕ್ಷಾಂತರ ಜನರು ಇದನ್ನು ವೀಕ್ಷಿಸಿದ್ದು, ಇದು ರೈಲ್ವೆ ಸಿಬ್ಬಂದಿಯ ಬೇಜವಾಬ್ದಾರಿ ಎಂದು ಟೀಕಿಸಿದ್ದಾರೆ. ಆದರೆ ಈಗ ಈ ಇಡೀ ಘಟನೆಗೆ ಭಾರತೀಯ ರೈಲ್ವೆ ಇಲಾಖೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅಸಲಿ ಸತ್ಯವನ್ನು ಜನರ ಮುಂದಿಟ್ಟಿದೆ.

ವೈರಲ್ ವಿಡಿಯೋದಲ್ಲೇನಿತ್ತು?
ವೈರಲ್ ಆದ ವಿಡಿಯೋದಲ್ಲಿ ‘ಇಂದೋರ್-ಮೋವ್ ಡೆಮು’ಪ್ರಯಾಣಿಕರ ರೈಲಿನ ಲೊಕೊ ಪೈಲಟ್ ಹಳಿಯ ಪಕ್ಕದ ಅಂಗಡಿಯಿಂದ ಸಮೋಸಾ ಖರೀದಿಸಲು ರೈಲನ್ನು ನಿಲ್ಲಿಸಿದ್ದರು. ಅವರು ತಿಂಡಿ ಖರೀದಿಸಿ ರೈಲು ಹತ್ತಿದ ತಕ್ಷಣವೇ ರೈಲು ಚಲಿಸಲು ಪ್ರಾರಂಭಿಸಿತು ಎಂದು ವಿಡಿಯೋ ಮಾಡಿದ ವ್ಯಕ್ತಿ ಸಾರ್ವಜನಿಕರನ್ನು ದಾರಿ ತಪ್ಪಿಸಿದ್ದ.

ರೈಲ್ವೆ ಇಲಾಖೆ ನಡೆಸಿದ ‘ಸತ್ಯ ಪರಿಶೀಲನೆ’
ವಿವಾದ ದೊಡ್ಡದಾಗುತ್ತಿದ್ದಂತೆ ಎಚ್ಚೆತ್ತ ಪಶ್ಚಿಮ ರೈಲ್ವೆ ವಿಡಿಯೋವನ್ನು ಸಂಪೂರ್ಣವಾಗಿ ಪರಿಶೀಲಿಸಿ ಅಧಿಕೃತ ಎಕ್ಸ್ ಖಾತೆಯಲ್ಲಿ ಸ್ಪಷ್ಟನೆ ನೀಡಿದೆ.

ಮೊದಲನೆಯದಾಗಿ, ವಿಡಿಯೋದಲ್ಲಿರುವ ರೈಲು ಯಾವುದೇ ಪ್ರಯಾಣಿಕರ (DEMU) ರೈಲಲ್ಲ. ಅದು ‘ಕಾನ್ಕಾರ್ ಗ್ರೀನ್ ಫೀಲ್ಡ್ ಪ್ರೈವೇಟ್ ಟರ್ಮಿನಸ್’ಗೆ ಸೇರಿದ ಸರಕು ಸಾಗಣೆ ರೈಲಾಗಿದೆ.

ತಿಂಡಿಗಾಗಿ ರೈಲು ನಿಂತಿಲ್ಲ: ರೈಲ್ವೆ ಯಾರ್ಡ್‌ನಲ್ಲಿ ಮೊದಲೇ ನಿಗದಿಯಾಗಿದ್ದ ತುರ್ತು ಎಂಜಿನಿಯರಿಂಗ್ ಕಾಮಗಾರಿಗಳ (Engineering Work) ಕಾರಣದಿಂದಾಗಿ, ಆ ರೈಲನ್ನು ಆರ್‌ಎಯು ಹೋಮ್ ಸಿಗ್ನಲ್ ಬಳಿ ಮೊದಲೇ ನಿಲ್ಲಿಸಲಾಗಿತ್ತು. ರೈಲು ಅಧಿಕೃತವಾಗಿ ಸಿಗ್ನಲ್‌ನಲ್ಲಿ ನಿಂತಿದ್ದ ಆ ಬಿಡುವಿನ ಸಮಯದಲ್ಲಿ, ಹಸಿವಾಗಿದ್ದರಿಂದ ಸಹಾಯಕ ಲೊಕೊ ಪೈಲಟ್ ಕೆಳಗಿಳಿದು ಪಕ್ಕದ ಅಂಗಡಿಯಿಂದ ಆಹಾರ ಖರೀದಿಸಿದ್ದರು.

ಮತ್ತಷ್ಟು ಓದಿ: Video: ಆತುರದಿಂದ ಹಳಿ ದಾಟುವಾಗ ಬಂದೇ ಬಿಡ್ತು ರೈಲು, ಮಕ್ಕಳನ್ನು ಎದೆಗಪ್ಪಿ ಕುಳಿತ ಮಹಿಳೆ

ಅಧಿಕೃತ ಕಾರಣಗಳಿಗಾಗಿ ರೈಲು ನಿಂತಿದ್ದಾಗ ಸಿಬ್ಬಂದಿ ಆಹಾರ ಖರೀದಿಸಿದ್ದನ್ನು, ಕೇವಲ ತಿಂಡಿಗಾಗಿಯೇ ರೈಲು ನಿಲ್ಲಿಸಲಾಗಿದೆ ಎಂದು ಆಯ್ದ ಭಾಗಗಳನ್ನು ಎಡಿಟ್ ಮಾಡಿ ತಪ್ಪು ನಿರೂಪಣೆ ಮಾಡಲಾಗಿದೆ. ಇಂತಹ ಸುಳ್ಳು ಸುದ್ದಿಗಳು ಸಾರ್ವಜನಿಕರಲ್ಲಿ ಇಲಾಖೆಯ ಮೇಲಿನ ನಂಬಿಕೆಯನ್ನು ಹಾಳುಮಾಡುತ್ತವೆ. ಹಂಚಿಕೊಳ್ಳುವ ಮುನ್ನ ಸತ್ಯಾಸತ್ಯತೆ ಪರಿಶೀಲಿಸಿ ಎಂದು ಪಶ್ಚಿಮ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ರೈಲ್ವೆ ನಿಯಮಗಳ ಹೆಚ್ಚುವರಿ ಮಾಹಿತಿ
ಭಾರತೀಯ ರೈಲ್ವೆ ನಿಯಮಾವಳಿಗಳ ಪ್ರಕಾರ, ಗೂಡ್ಸ್ ರೈಲುಗಳು ಸಿಗ್ನಲ್ ಅಥವಾ ಕ್ರಾಸಿಂಗ್‌ಗಾಗಿ ಗಂಟೆಗಟ್ಟಲೆ ಕಾಯಬೇಕಾಗಿ ಬರುತ್ತದೆ. ಅಂತಹ ಸಂದರ್ಭಗಳಲ್ಲಿ ಇಂಜಿನ್ ಚಾಲನೆಯಲ್ಲಿಟ್ಟುಕೊಂಡೇ, ಸ್ಟೇಷನ್ ಮಾಸ್ಟರ್ ಅನುಮತಿ ಪಡೆದು ಸಿಬ್ಬಂದಿ ಆಹಾರ ಅಥವಾ ನೀರನ್ನು ಖರೀದಿಸಲು ಅವಕಾಶವಿರುತ್ತದೆ. ಸದ್ಯ ಪಿಟಿಐ ಸೇರಿದಂತೆ ಪ್ರಮುಖ ಮಾಧ್ಯಮಗಳು ರೈಲ್ವೆಯ ಈ ಫ್ಯಾಕ್ಟ್ ಚೆಕ್ ಅನ್ನು ಪ್ರಕಟಿಸಿದ್ದು, ಸುಳ್ಳು ಸುದ್ದಿ ಹರಡಿದವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಿಗ್ ಅಪ್​ಡೇಟ್​; ‘ಕಾಂತಾರ: ಚಾಪ್ಟರ್ 2’ ಸ್ಕ್ರಿಪ್ಟ್ ಆರಂಭಿಸಿದ ರಿಷಬ್ ಶೆಟ್ಟಿ – Kannada News | Rishab Shetty Begins Scripting Kantara Chapter 2 Divine Saga Continues

ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದ ‘ಕಾಂತಾರ’ ಚಿತ್ರದ ಪ್ರೀಕ್ವೆಲ್ ಆಗಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೂಡಿ ಬಂದಿತ್ತು. 2025ರಲ್ಲಿ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿ ದಾಖಲೆಬರೆದಿತ್ತು. ದೈವಿಕ ಶಕ್ತಿಗಳ ಹಿನ್ನೆಲೆಯಲ್ಲಿ ಮೂಡಿಬಂದಿದ್ದ ಈ ಚಿತ್ರದ ಕೊನೆಯಲ್ಲಿ, ಈ ಫ್ರಾಂಚೈಸಿಗೆ ಮತ್ತೊಂದು ಪಾರ್ಟ್ ಬರಲಿದೆ ಎಂಬ ಸ್ಪಷ್ಟ ಸೂಚನೆಯನ್ನು ಚಿತ್ರತಂಡ ನೀಡಿತ್ತು. ಇದೀಗ ಆ ಕುತೂಹಲಕ್ಕೆ ಸ್ವತಃ ರಿಷಬ್ ಶೆಟ್ಟಿ ಅವರೇ ತೆರೆ ಎಳೆದಿದ್ದು, ‘ಕಾಂತಾರ ಚಾಪ್ಟರ್ 2’ (ಫ್ರಾಂಚೈಸಿಯ 3ನೇ ಭಾಗ) ಬರೆಯುವ ಕೆಲಸ ಈಗಾಗಲೇ ಆರಂಭವಾಗಿದೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.

‘ಸುಮ್ಮನೆ ಕೂರಲು ಸಾಧ್ಯವಿಲ್ಲ’

ಅಂತರರಾಷ್ಟ್ರೀಯ ಮಾಧ್ಯಮವೊಂದರ ಜೊತೆ ಮಾತನಾಡುತ್ತಾ ರಿಷಬ್ ಶೆಟ್ಟಿ ಅವರು ತಮ್ಮ ಮುಂದಿನ ಸಿನೆಮಾ ನಿರ್ದೇಶನದ ಕನಸನ್ನು ಹಂಚಿಕೊಂಡಿದ್ದಾರೆ. ‘ನಾನು ಆ ಸಿನಿಮಾ ಮಾಡಿಯೇ ತೀರುತ್ತೇನೆ. ನನ್ನ ನಿರ್ದೇಶನದ ಕೆಲಸದ ಬಗ್ಗೆ ನನಗೆ ಸುಮ್ಮನೆ ಕೂರಲು ಸಾಧ್ಯವೇ ಇಲ್ಲ. ಆ ಕೆಲಸ ಮಾಡುತ್ತಿದ್ದಾಗಷ್ಟೇ ನನಗೆ ನಿಜವಾದ ನೆಮ್ಮದಿ ಮತ್ತು ಸಂತೋಷ ಸಿಗುತ್ತದೆ. ನನ್ನ ಲೇಖಕರ ತಂಡ ಈಗಾಗಲೇ ನನ್ನೊಂದಿಗಿದೆ. ನಾವೆಲ್ಲರೂ ಒಟ್ಟಾಗಿ ‘ಕಾಂತಾರ: ಚಾಪ್ಟರ್ 2′ ಸ್ಕ್ರಿಪ್ಟ್ ಕೆಲಸವನ್ನು ಈಗಾಗಲೇ ಆರಂಭಿಸಿದ್ದೇವೆ’ ಎಂದು ರಿಷಬ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

ಯಾವ ಹಂತದಲ್ಲಿದೆ ಕಥೆ?

2025ರ ಸೂಪರ್ ಹಿಟ್ ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ಕಾಂತಾರ ಬುಡಕಟ್ಟು ಜನಾಂಗ ಮತ್ತು ಕ್ರೂರ ರಾಜನ ನಡುವಿನ ಸಂಘರ್ಷ ಕಥೆಯನ್ನು ತೋರಿಸಲಾಗಿತ್ತು. ರಾಜನ ಮಕ್ಕಳು ಕೂಡ ಕ್ರೂರ ಗುಣಗಳನ್ನು ಹೊಂದಿದ್ದು ಹೈಲೈಟ್ ಆಗಿತ್ತು. ಈಗ ಬರಲಿರುವ ಭಾಗದಲ್ಲಿ ಆ ರಾಜಮನೆತನ ಹಾಗೂ ಬುಡಕಟ್ಟು ಸಮುದಾಯದ ನಡುವಿನ ಮುಂದಿನ ತಲೆಮಾರಿನ ಬಿಗ್ ಫೈಟ್ ಮತ್ತು ದೈವಿಕ ಶಕ್ತಿಗಳ ಹಸ್ತಕ್ಷೇಪದ ರೋಚಕ ಕಥೆ ಅನಾವರಣಗೊಳ್ಳಲಿದೆ.

ಇದನ್ನೂ ಓದಿ: ರಿಷಬ್ ಶೆಟ್ಟಿ  ಜನ್ಮದಿನ; ಸ್ಟಾರ್ ನಟ ನಡೆದು ಬಂದ ಹಾದಿ ಇಲ್ಲಿದೆ

ರಿಷಬ್ ಕೈಯಲ್ಲಿವೆ ಎರಡು ಮೆಗಾ ಸಿನಿಮಾಗಳು

ಚಿತ್ರ ನಿರ್ದೇಶನದ ಜೊತೆಗೆ ರಿಷಬ್ ಶೆಟ್ಟಿ ಅವರ ನಟನಾ ಬತ್ತಳಿಕೆಯಲ್ಲೂ ಎರಡು ದೈತ್ಯ ಪ್ಯಾನ್-ಇಂಡಿಯಾ ಸಿನಿಮಾಗಳಿವೆ. ಆದರೆ, ಏಕಕಾಲಕ್ಕೆ ಎರಡು ಸಿನಿಮಾಗಳನ್ನು ಮಾಡಲು ತಮಗೆ ಇಷ್ಟವಿಲ್ಲ ಎಂದು ಅವರು ಹೇಳಿದ್ದಾರೆ. ‘ನನ್ನ ಕೈಯಲ್ಲಿ ಎರಡು ಬಿಗ್ ಸಿನಿಮಾಗಳಿವೆ. ನನಗೆ ಮಲ್ಟಿಟಾಸ್ಕ್ ಮಾಡಲು ಸಾಧ್ಯವಿಲ್ಲ. ಅಂದರೆ ಒಟ್ಟಿಗೆ ಎರಡು ಸಿನಿಮಾಗಳಲ್ಲಿ ನಟಿಸಲು ಆಗುವುದಿಲ್ಲ. ಹಾಗಾಗಿ ಮೊದಲು ‘ಜೈ ಹನುಮಾನ್’ ಮುಗಿಸಿ, ಆ ಬಳಿಕ ‘ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್’ ಚಿತ್ರದಲ್ಲಿ ನಟಿಸಲಿದ್ದೇನೆ. ಎರಡು ಚಿತ್ರಗಳಿಗೂ ನನಗೆ ಸಂಪೂರ್ಣ ಭಿನ್ನವಾದ ಲುಕ್ ಮತ್ತು ತಯಾರಿ ಬೇಕಾಗಿದೆ’ ಎಂದು ರಿಷಬ್ ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

RRB Recruitment 2026: ರೈಲ್ವೆ ಇಲಾಖೆಯಿಂದ 119 ಸೆಕ್ಷನ್ ಕಂಟ್ರೋಲರ್ ಮತ್ತು 6565 ಟೆಕ್ನೀಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ – Kannada News | RRB Section Controller and Technician Recruitment 2026: Apply for 119 + 6565 Posts!

ಭಾರತ ಸರ್ಕಾರದ ರೈಲ್ವೆ ಸಚಿವಾಲಯವು ಉದ್ಯೋಗಾಕಾಂಕ್ಷಿಗಳಿಗೆ ಮತ್ತೊಂದು ಸಿಹಿಸುದ್ದಿ ನೀಡಿದೆ. ರೈಲ್ವೆ ನೇಮಕಾತಿ ಮಂಡಳಿ (RRB) ದೇಶದ ವಿವಿಧ ರೈಲ್ವೆ ವಲಯಗಳಲ್ಲಿ 119 ಸೆಕ್ಷನ್ ಕಂಟ್ರೋಲರ್ (Section Controller) ಹುದ್ದೆಗಳ ಭರ್ತಿಗೆ ಶೀಘ್ರದಲ್ಲೇ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಲಿದೆ. CEN No. 03/2026 ಅಡಿಯಲ್ಲಿ ಕಿರು ಅಧಿಸೂಚನೆ ಪ್ರಕಟವಾಗಿದ್ದು, ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಜುಲೈ 15ರಿಂದ ಆನ್‌ಲೈನ್ ಅರ್ಜಿ ಪ್ರಕ್ರಿಯೆ ಆರಂಭ:

ಕಿರು ಅಧಿಸೂಚನೆಯ ಪ್ರಕಾರ, 2026ರ ಜುಲೈ 15ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಅಭ್ಯರ್ಥಿಗಳು ಆಗಸ್ಟ್ 14, 2026ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ವಯೋಮಿತಿ ಎಷ್ಟು?

  • ಅಭ್ಯರ್ಥಿಗಳ ವಯಸ್ಸು 2026ರ ಜುಲೈ 1ರಂತೆ 20 ರಿಂದ 30 ವರ್ಷಗಳೊಳಗೆ ಇರಬೇಕು.

ಸರ್ಕಾರದ ನಿಯಮಾನುಸಾರ ವಯೋಮಿತಿಯಲ್ಲಿ ಈ ಕೆಳಗಿನಂತೆ ಸಡಿಲಿಕೆ ನೀಡಲಾಗಿದೆ:

  • SC/ST ಅಭ್ಯರ್ಥಿಗಳು: 5 ವರ್ಷ
  • OBC ಅಭ್ಯರ್ಥಿಗಳು: 3 ವರ್ಷ
  • PwBD ಅಭ್ಯರ್ಥಿಗಳು: 10 ವರ್ಷ
  • OBC-PwBD ಅಭ್ಯರ್ಥಿಗಳು: 13 ವರ್ಷ
  • SC/ST-PwBD ಅಭ್ಯರ್ಥಿಗಳು: 15 ವರ್ಷ

ವೇತನ ಮತ್ತು ಅರ್ಜಿ ಶುಲ್ಕ:

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ 35,400 ರೂ. ಮೂಲ ವೇತನ ಜೊತೆಗೆ ಕೇಂದ್ರ ಸರ್ಕಾರದ ನಿಯಮಾನುಸಾರ ವಿವಿಧ ಭತ್ಯೆಗಳು ದೊರೆಯಲಿವೆ.

ಅರ್ಜಿ ಶುಲ್ಕ:

ಮಹಿಳೆಯರು, SC/ST, ಮಾಜಿ ಸೈನಿಕರು, PwBD, ಟ್ರಾನ್ಸ್‌ಜೆಂಡರ್ ಹಾಗೂ EBC ಅಭ್ಯರ್ಥಿಗಳಿಗೆ 250ರೂ. ಮತ್ತು ಇತರೆ ಅಭ್ಯರ್ಥಿಗಳಿಗೆ 500ರೂ. ಅರ್ಜಿ ಶುಲ್ಕ ವಿಧಿಸಲಾಗಿದೆ. ಇದಲ್ಲದೇ CBT ಪರೀಕ್ಷೆಗೆ ಹಾಜರಾಗುವ ಸಾಮಾನ್ಯ ಅಭ್ಯರ್ಥಿಗಳಿಗೆ 400 ಮರುಪಾವತಿ ಮಾಡಲಾಗುತ್ತದೆ.

6,565 ತಂತ್ರಜ್ಞ ಹುದ್ದೆಗಳಿಗೂ ಅರ್ಜಿ ಆಹ್ವಾನ:

ಸೆಕ್ಷನ್ ಕಂಟ್ರೋಲರ್ ನೇಮಕಾತಿಯ ಜೊತೆಗೆ, ರೈಲ್ವೆ ನೇಮಕಾತಿ ಮಂಡಳಿಯು ಒಟ್ಟು 6,565 ತಂತ್ರಜ್ಞ (Technician) ಹುದ್ದೆಗಳ ಭರ್ತಿಗೂ ಅಧಿಸೂಚನೆ ಪ್ರಕಟಿಸಿದೆ. ಈ ಹುದ್ದೆಗಳಿಗೆ ಜುಲೈ 29 ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಐಟಿಐ, ಡಿಪ್ಲೊಮಾ ಹಾಗೂ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಲಿಖಿತ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಸೇರಿದಂತೆ ನಿಗದಿತ ಆಯ್ಕೆ ಪ್ರಕ್ರಿಯೆಯ ಮೂಲಕ ಅಭ್ಯರ್ಥಿಗಳನ್ನು ನೇಮಕ ಮಾಡಲಾಗುತ್ತದೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಾಜ್​ ಬಿ. ಶೆಟ್ಟಿ ಮೇಲೆ ಅಸಮಾಧಾನವೇ? ಪ್ರಜ್ವಲ್ ದೇವರಾಜ್ ಉತ್ತರ ಏನು? – Kannada News | Prajwal Devaraj Reacts to Rumors of Rift with Raj B Shetty Over Karavali Movie

ಪ್ರಜ್ವಲ್ ದೇವರಾಜ್ ಈಗ ಸುದ್ದಿಯಲ್ಲಿದ್ದಾರೆ. ‘ಕರಾವಳಿ’ ಸಿನಿಮಾ ಟ್ರೇಲರ್ ಲಾಂಚ್ ಈವೆಂಟ್​​ಗೆ ಅವರು ಗೈರಾಗಿದ್ದರು. ಇದು ಚರ್ಚೆಯ ಕೇಂದ್ರ ಬಿಂದು ಆಯಿತು. ಅವರ ಫ್ಯಾನ್ಸ್ ಬಂದು ಟ್ರೇಲರ್ ಲಾಂಚ್ ಈವೆಂಟ್​ನಲ್ಲಿ ಗಲಾಟೆ ಮಾಡಿದರು. ಇದರ ಹಿಂದೆ ಪ್ರಜ್ವಲ್ ಕುಮ್ಮಕು ಇದೆ ಎಂಬ ಮಾತು ಕೇಳಿ ಬಂತು. ಈ ಎಲ್ಲಾ ವಿಷಯಕ್ಕೆ ಪ್ರಜ್ವಲ್ ದೇವರಾಜ್ ಅವರು ಸ್ಪಷ್ಟನೆ ನೀಡಿದ್ದಾರೆ. ರಾಜ್ ಬಿ. ಶೆಟ್ಟಿ ಜೊತೆಗೆ ಯಾವುದೇ ಅಸಮಾಧಾನ ಇಲ್ಲ ಎಂಬ ಮಾತನ್ನು ನೇರವಾಗಿಯೇ ಹೇಳಿದ್ದಾರೆ.

‘ಕರಾವಳಿ’ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರೋದು ಪ್ರಜ್ವಲ್ ದೇವರಾಜ್. ರಾಜ್ ಬಿ. ಶೆಟ್ಟಿ ಅವರದ್ದು ಅತಿಥಿ ಪಾತ್ರ. ಆದರೆ, ಪೋಸ್ಟರ್​​​ಗಳಲ್ಲಿ ಹೈಲೈಟ್ ಆಗುತ್ತಿರುವುದು ರಾಜ್ ಬಿ. ಶೆಟ್ಟಿ ಎಂಬ ಮಾತಿದೆ. ಬುಕ್ ಮೈ ಶೋ ಓಪನ್ ಮಾಡಿದರೆ ಸಿನಿಮಾದಲ್ಲಿ ರಾಜ್ ಅವರ ಪೋಸ್ಟರ್ ರಾರಾಜಿಸುತ್ತವೆ. ಇದೇನಾದರೂ ಪ್ರಜ್ವಲ್ ಅವರಿಗೆ ಬೇಸರ ಮೂಡಿಸಿತೇ ಎನ್ನುವ ಪ್ರಶ್ನೆ ಮೂಡೋದು ಸಹಜ. ಆದರೆ, ಇದನ್ನು ಅವರು ಸಂಪೂರ್ಣವಾಗಿ ಅಲ್ಲಗಳೆಯುತ್ತಾರೆ.

ಮಾಧ್ಯಮ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಜ್ವಲ್ ದೇವರಾಜ್ ಮಾತನಾಡಿದ್ದಾರೆ. ಅವರಿಗೆ ರಾಜ್ ಅವರ ಮೇಲೆ ಯಾವುದೇ ಕೋಪ ಇಲ್ಲವಂತೆ. ಅವರನ್ನು ಒಳ್ಳೆಯ ಮನುಷ್ಯ ಎಂದು ಕೊಂಡಾಡಿದ್ದಾರೆ. ಒಂದೊಮ್ಮೆ ಇದೇ ಕಾರಣ ಆಗಿದ್ದರೆ ಇಷ್ಟು ದಿನ ಸಿನಿಮಾ ಪ್ರಚಾರದಲ್ಲಿ ಏಕೆ ಭಾಗಿ ಆಗುತ್ತಿದ್ದೆ ಎಂದು ಪ್ರಜ್ವಲ್ ಅವರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್​ಗೆ 1 ಕೋಟಿ 25 ಲಕ್ಷ ರೂ. ಸಂಭಾವನೆ; ಬಾಕಿ ಹಣಕ್ಕಾಗಿ ಶುರುವಾಯ್ತಾ ‘ಕರಾವಳಿ’ ವಿವಾದ?

ಹಾಗಾದರೆ ಈ ನಿರ್ಧಾರಕ್ಕೆ ಕಾರಣ ಏನು? ‘ಹಣ’. ಈ ಚಿತ್ರಕ್ಕಾಗಿ ಪ್ರಜ್ವಲ್ ದೇವರಾಜ್ ಅವರು ಬಂದ ಆಫರ್​​ಗಳಲ್ಲಿ ಕೆಲವನ್ನು ಕೈ ಬಿಟ್ಟಿದ್ದಾರಂತೆ. ಇನ್ನು ಇವರೇ ನಟಿಸಿದ ಸಿನಿಮಾಗಳ ನಿರ್ಮಾಪಕರ ಕಷ್ಟ ಅರ್ಥ ಮಾಡಿಕೊಂಡು ಕೋಟ್ಯಂತರ ರೂಪಾಯಿ ಬಿಟ್ಟಿದ್ದಾರೆ. ಈಗ ‘ಕರಾವಳಿ’ ಚಿತ್ರಕ್ಕೆ ಸಾಕಷ್ಟು ಎಫರ್ಟ್ ಹಾಕಿ ಮತ್ತೆ ಇದರ ಹಣವನ್ನೂ ಬಿಡಬೇಕು ಎಂದಾಗ ಸಹಜವಾಗಿಯೇ ಅವರಿಗೆ ಬೇಸರ ಆಗಿದೆ. ಈ ಕಾರಣದಿಂದಲೇ ಅವರು ಡಬ್ಬಿಂಗ್ ಮಾಡಿಲ್ಲ. ಈಗಾಗಲೇ ‘ಕರಾವಳಿ’ ಸಿನಿಮಾದ ಟ್ರೇಲರ್​​ನಲ್ಲಿ ಪ್ರಜ್ವಲ್​ಗೆ ಬೇರೆಯವರ ಧ್ವನಿ ಬಳಕೆ ಮಾಡಲಾಗಿದೆ. ಇದು ಅವರ ಅಭಿಮಾನಿಗಳ ಕೋಪ ಹೆಚ್ಚಿಸಿದೆ. ಎಲ್ಲಾ ಸಮಸ್ಯೆ ಬಗೆಹರಿದು ಅವರೇ ಡಬ್ ಮಾಡಲಿ ಎಂಬುದು ಎಲ್ಲರ ಕೋರಿಕೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Wayanad Landslide: ವಯನಾಡು ಗುಡ್ಡ ಕುಸಿತ ದುರಂತದ ಬಗ್ಗೆ ಎಳೆಎಳೆಯಾಗಿ ಮಾಹಿತಿ ಬಿಚ್ಚಿಟ್ಟ ಹೊಟೇಲ್ ಮಾಲೀಕ

ವಯನಾಡು, ಜುಲೈ 08: ಕೇರಳದ ವಯನಾಡಿನ ಮೆಪ್ಪಾಡಿಯಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಮೂವರು ಸಾವನ್ನಪ್ಪಿದ್ದು ,ಐದು ಮಂದಿ ನಾಪತ್ತೆಯಾಗಿದ್ದಾರೆ. ಈ ದುರ್ಘಟನೆ ಮೆಪ್ಪಾಡಿಯ ಸೇತುವೆ ಸಮೀಪ ನಡೆದಿದ್ದು, ಸ್ಥಳೀಯ ಹೋಟೆಲ್ ಮಾಲೀಕರು ಘಟನೆಯ ಪ್ರತ್ಯಕ್ಷದರ್ಶಿಯಾಗಿದ್ದಾರೆ.

ಭೂಕುಸಿತದ ಸಂದರ್ಭದಲ್ಲಿ ನೀರು ಮತ್ತು ಮಣ್ಣು ಮಿಶ್ರಿತ ರಭಸಕ್ಕೆ ಸಿಲುಕಿ ಬೃಹತ್ ಟ್ಯಾಂಕರ್ ಒಂದನ್ನು ಹೊತ್ತು ತಂದಿದೆ. ಘಟನೆ ನಡೆದ ಸ್ಥಳದಲ್ಲಿದ್ದ ಹೋಟೆಲ್ ಮಾಲೀಕರ ಸಿಸಿಟಿವಿ ಕ್ಯಾಮರಾದಲ್ಲಿ ಈ ಭಯಾನಕ ದೃಶ್ಯಗಳು ಸೆರೆಯಾಗಿವೆ. ಟ್ಯಾಂಕರ್ ಹೋಟೆಲ್ ಸಮೀಪವೇ ನಿಂತಿದ್ದರಿಂದ ದೊಡ್ಡ ಅನಾಹುತ ತಪ್ಪಿದ ಬಗ್ಗೆ ಮಾಲೀಕರು ವಿವರಿಸಿದ್ದಾರೆ.

ಅವರ ಪ್ರಕಾರ, ಭಾರೀ ಮಳೆಯಿಂದಾಗಿ ಮಣ್ಣು ಕುಸಿದು ನೀರು ಸೇರಿ ಹರಿದುಬಂದಿದೆ. ರಭಸಕ್ಕೆ ಸಿಲುಕಿದ ಒಬ್ಬ ಮಹಿಳೆ ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದ್ದು, ಕೂಡಲೇ ಸ್ಥಳೀಯರ ನೆರವಿನಿಂದ ಪಾರಾಗಿದ್ದಾರೆ. ಘಟನೆಯ ಸಮಯದಲ್ಲಿ ಹೋಟೆಲ್ ಮಾಲೀಕರು ಮತ್ತು ಅವರ ಹತ್ತು ಮಂದಿ ಸಿಬ್ಬಂದಿ ಜೀವಭಯದಿಂದ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಕೇರಳದಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.

ಒಂದು ಬಸ್ ಉರುಳಿ ಬೀಳುವ ದೃಶ್ಯ, ಮತ್ತೊಂದು ಬೃಹತ್ ಟ್ಯಾಂಕರ್ ಅನ್ನು ಕೆಸರು ಮಿಶ್ರಿತ ನೀರು ಕೊಚ್ಚಿಕೊಂಡು ಬರುವ ದೃಶ್ಯ. ಈ ಟ್ಯಾಂಕರ್ ಅದೃಷ್ಟವಶಾತ್ ಹೋಟೆಲ್‌ನ ಸಮೀಪಕ್ಕೆ ಬಂದು ನಿಂತಿದ್ದು, ಮತ್ತೊಂದು ದೊಡ್ಡ ಅನಾಹುತವನ್ನು ತಪ್ಪಿಸಿದೆ ಎಂದು ಮಾಲೀಕರು ಹೇಳಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ವಯನಾಡು ಭೂಕುಸಿತ, ಮೂವರು ಸಾವು, ಐವರು ನಾಪತ್ತೆ, ರಕ್ಷಣಾ ಕಾರ್ಯಾಚರಣೆ ಕುರಿತು ಡಿಸಿ ಮೇಘಶ್ರೀ ಮಾಹಿತಿ – Kannada News | Wayanad Landslide: Three Dead, Five Missing; DC Meghashree Details Rescue Efforts in Kalladi

ವಯನಾಡು, ಜುಲೈ 08: ಕೇರಳದ ವಯನಾಡು ಜಿಲ್ಲೆಯ ಕಲ್ಲಾಡಿಯಲ್ಲಿ ಸಂಭವಿಸಿದ ಭೀಕರ ಭೂಕುಸಿತ ದುರಂತದಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದು, ಐವರು ನಾಪತ್ತೆಯಾಗಿದ್ದಾರೆ. ಈ ಕುರಿತು ವಯನಾಡು ಜಿಲ್ಲಾಧಿಕಾರಿ ಮೇಘಶ್ರೀ ಅವರು ಮಾಹಿತಿ ನೀಡಿದ್ದಾರೆ. ಘಟನೆಯ ಕುರಿತು ಪ್ರತಿಕ್ರಿಯಿಸಿದ ಅವರು, ತಕ್ಷಣವೇ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಲಾಗಿದ್ದು, ಅಗ್ನಿಶಾಮಕ ದಳ, ನಾಗರಿಕ ರಕ್ಷಣಾ ಸ್ವಯಂಸೇವಕರು ಸೇರಿದಂತೆ ಒಟ್ಟು 167 ಸಿಬ್ಬಂದಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ದುರಂತ ಸಂಭವಿಸಿದ ಪ್ರದೇಶದಲ್ಲಿ ಜೂನ್ 27 ರಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ಕೇವಲ ಮೇಲ್ವಿಚಾರಣೆಗೆ ಅಗತ್ಯವಿದ್ದ ಸಿಬ್ಬಂದಿ ಮಾತ್ರ ಅಲ್ಲಿದ್ದರು. ಇದರಿಂದ ಹೆಚ್ಚಿನ ಸಾವು-ನೋವುಗಳನ್ನು ತಪ್ಪಿಸಲು ಸಾಧ್ಯವಾಯಿತು. ಆದಾಗ್ಯೂ, ಮೂವರು ಸಿಬ್ಬಂದಿ ಮೃತಪಟ್ಟಿದ್ದು, ಐವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ನಾಪತ್ತೆಯಾದವರ ಪತ್ತೆ ಕಾರ್ಯವು ಇಂದಿನ ಪ್ರಮುಖ ಆದ್ಯತೆಯಾಗಿದೆ.

ಮೆಪ್ಪಾಡಿ ಮತ್ತು ನಾಲ್ಕು ವಾರ್ಡ್‌ಗಳ ನಡುವೆ ಸಂಪರ್ಕ ಕಲ್ಪಿಸುವ ಪ್ರಮುಖ ಸೇತುವೆಯ ಸ್ಥಿರತೆಯನ್ನು ಪರಿಶೀಲಿಸಿ, ಸಾರಿಗೆ ಸಂಚಾರವನ್ನು ಪುನಃಸ್ಥಾಪಿಸಲು ರಾತ್ರಿಯಿಡೀ ಶ್ರಮಿಸಲಾಯಿತು. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಸ್ನಿಫರ್ ಡಾಗ್‌ಗಳು ಸೇರಿದಂತೆ ಅಗತ್ಯ ಸಲಕರಣೆಗಳನ್ನು ಬಳಸಿಕೊಂಡು ನಾಲ್ಕು ವಲಯಗಳಾಗಿ ವಿಂಗಡಿಸಿ ಶೋಧ ಕಾರ್ಯ ನಡೆಸಲಾಗುತ್ತಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version