ಪೀರಿಯಡ್ಸ್‌ ಸರಿಯಾಗಿ ಆಗದಿರಲು ಕಾರಣವೇನು? ಪಿಸಿಒಎಸ್, ಥೈರಾಯ್ಡ್‌ ಸೇರಿ 7 ಕಾರಣಗಳು ಇಲ್ಲಿವೆ – Kannada News | Why Are Your Periods Getting Irregular? These Health Issues Could Be the Reason

ಮಹಿಳೆಯರ ಆರೋಗ್ಯದಲ್ಲಿ ಪೀರಿಯಡ್ಸ್‌ (ಮಾಸಿಕ ಧರ್ಮ) ಚಕ್ರ ಪ್ರಮುಖ ಪಾತ್ರ ವಹಿಸುತ್ತದೆ. ಸಾಮಾನ್ಯವಾಗಿ ಪೀರಿಯಡ್ಸ್‌ ದಿನಾಂಕದಲ್ಲಿ ಕೆಲವು ದಿನಗಳ ವ್ಯತ್ಯಾಸವಾಗುವುದು ಸಹಜ. ಆದರೆ ಪದೇಪದೇ ಪೀರಿಯಡ್ಸ್‌ ತಡವಾಗುವುದು, ಬೇಗ ಬರುವುದು, ಎರಡು ಪೀರಿಯಡ್ಸ್‌ಗಳ ನಡುವಿನ ಅವಧಿ ಬದಲಾಗುವುದು ಅಥವಾ ರಕ್ತಸ್ರಾವದ ಪ್ರಮಾಣದಲ್ಲಿ ದೊಡ್ಡ ಬದಲಾವಣೆ ಕಂಡುಬಂದರೆ ಅದನ್ನು ನಿರ್ಲಕ್ಷಿಸಬಾರದು. ಒತ್ತಡ, ತೂಕದಲ್ಲಿ ತ್ವರಿತ ಬದಲಾವಣೆ, ಹಾರ್ಮೋನ್‌ಗಳ ಅಸಮತೋಲನ, ಪಿಸಿಒಎಸ್ (PCOS), ಥೈರಾಯ್ಡ್‌ ಸಮಸ್ಯೆ, ಅತಿಯಾದ ವ್ಯಾಯಾಮ ಹಾಗೂ ಗರ್ಭಧಾರಣೆ ಸೇರಿದಂತೆ ಹಲವು ಕಾರಣಗಳಿಂದ ಪೀರಿಯಡ್ಸ್‌ ಅನಿಯಮಿತವಾಗಬಹುದು. ಕೆಲವೊಮ್ಮೆ ಇದು ಸಾಮಾನ್ಯ ಬದಲಾವಣೆಯಾಗಿರಬಹುದು, ಆದರೆ ನಿರಂತರವಾಗಿ ಚಕ್ರದಲ್ಲಿ ವ್ಯತ್ಯಾಸ ಕಂಡುಬಂದರೆ ಮೂಲ ಕಾರಣ ತಿಳಿಯಲು ವೈದ್ಯಕೀಯ ಪರೀಕ್ಷೆ ಅಗತ್ಯವಾಗಬಹುದು.

ಪೀರಿಯಡ್ಸ್‌ ಸಮಯಕ್ಕೆ ಸರಿಯಾಗಿ ಬರದಿರಲು ಕಾರಣವೇನು?

Cleveland Clinic ಪ್ರಕಾರ, ಪೀರಿಯಡ್ಸ್‌ ಅನಿಯಮಿತವಾಗಲು ಹಲವು ಕಾರಣಗಳಿವೆ. ಮಾನಸಿಕ ಒತ್ತಡ, ತೂಕ ಹೆಚ್ಚಾಗುವುದು ಅಥವಾ ಕಡಿಮೆಯಾಗುವುದು, ಅತಿಯಾದ ವ್ಯಾಯಾಮ ಮತ್ತು ಹಾರ್ಮೋನ್‌ಗಳ ಬದಲಾವಣೆ ಪ್ರಮುಖ ಕಾರಣಗಳಾಗಬಹುದು. ಟೀನೇಜ್‌ನಲ್ಲಿ ಪೀರಿಯಡ್ಸ್‌ ಆರಂಭವಾದ ಮೊದಲ ಕೆಲವು ವರ್ಷಗಳಲ್ಲಿ ಹಾಗೂ ಮೆನೋಪಾಸ್‌ ಸಮೀಪಿಸುವ ಸಮಯದಲ್ಲಿಯೂ ಚಕ್ರದಲ್ಲಿ ಬದಲಾವಣೆ ಕಾಣಿಸಿಕೊಳ್ಳಬಹುದು. ಲೈಂಗಿಕವಾಗಿ ಸಕ್ರಿಯರಾಗಿದ್ದರೆ ಗರ್ಭಧಾರಣೆ ಕೂಡ ಪೀರಿಯಡ್ಸ್‌ ತಡವಾಗಲು ಅಥವಾ ನಿಲ್ಲಲು ಪ್ರಮುಖ ಕಾರಣವಾಗಿರಬಹುದು.

ಪಿಸಿಒಎಸ್ ಮತ್ತು ಥೈರಾಯ್ಡ್‌ ಸಮಸ್ಯೆಯೂ ಕಾರಣವಾಗಬಹುದು

ಪಿಸಿಒಎಸ್ (ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್) ಇರುವ ಮಹಿಳೆಯರಲ್ಲಿ ಹಾರ್ಮೋನ್‌ಗಳ ಅಸಮತೋಲನದಿಂದ ಪೀರಿಯಡ್ಸ್‌ ತಡವಾಗಬಹುದು ಅಥವಾ ಅನಿಯಮಿತವಾಗಬಹುದು. ಅದೇ ರೀತಿ ಥೈರಾಯ್ಡ್‌ ಹಾರ್ಮೋನ್‌ಗಳ ಸಮಸ್ಯೆ ಕೂಡ ಮಾಸಿಕ ಚಕ್ರ ಮತ್ತು ರಕ್ತಸ್ರಾವದ ಪ್ರಮಾಣದ ಮೇಲೆ ಪರಿಣಾಮ ಬೀರಬಹುದು. ಕೆಲವರಿಗೆ ಗರ್ಭಾಶಯದಲ್ಲಿ ಫೈಬ್ರಾಯ್ಡ್‌ಗಳಿದ್ದರೆ ಹೆಚ್ಚು ಪ್ರಮಾಣದಲ್ಲಿ ಅಥವಾ ಹೆಚ್ಚು ದಿನಗಳ ಕಾಲ ರಕ್ತಸ್ರಾವವಾಗುವ ಸಾಧ್ಯತೆ ಇದೆ. ಕೆಲವು ಔಷಧಿಗಳು, ತೀವ್ರ ಒತ್ತಡ ಮತ್ತು ದೇಹದ ತೂಕದಲ್ಲಿನ ದೊಡ್ಡ ಬದಲಾವಣೆಗಳೂ ಪೀರಿಯಡ್ಸ್‌ ಮೇಲೆ ಪರಿಣಾಮ ಬೀರಬಹುದು.

ಇದನ್ನೂ ಓದಿ: ಐವಿಎಫ್ ಬಳಿಕ ಬಾಣಂತಿಯರು ಮಗುವಿಗೆ ಹಾಲುಣಿಸಬಹುದೇ? ತಜ್ಞರು ನೀಡಿರುವ ಉತ್ತರವೇನು?

ಪೀರಿಯಡ್ಸ್‌ ಅನಿಯಮಿತವಾಗಿದ್ದರೆ ಯಾವಾಗ ವೈದ್ಯರನ್ನು ಭೇಟಿಯಾಗಬೇಕು?

  • 3 ತಿಂಗಳವರೆಗೆ ಪೀರಿಯಡ್ಸ್‌ ಆಗದಿದ್ದರೆ
  • ತುಂಬಾ ಹೆಚ್ಚಿನ ಪ್ರಮಾಣದಲ್ಲಿ ರಕ್ತಸ್ರಾವವಾಗುತ್ತಿದ್ದರೆ
  • ಹಲವು ದಿನಗಳವರೆಗೆ ರಕ್ತಸ್ರಾವ ಮುಂದುವರಿದರೆ
  • ಪೀರಿಯಡ್ಸ್‌ಗಳ ಮಧ್ಯೆ ಸ್ಪಾಟಿಂಗ್ ಅಥವಾ ರಕ್ತಸ್ರಾವವಾಗುತ್ತಿದ್ದರೆ
  • ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡರೆ
  • ತಲೆಸುತ್ತು, ಅತಿಯಾದ ದುರ್ಬಲತೆ ಅಥವಾ ಉಸಿರಾಟದ ತೊಂದರೆ ಇದ್ದರೆ ವೈದ್ಯಕೀಯ ಸಲಹೆ ಪಡೆಯುವುದು ಅಗತ್ಯ.

ಪೀರಿಯಡ್ಸ್‌ ನಿಯಮಿತವಾಗಿರಲು ಏನು ಮಾಡಬೇಕು?

ಸಮತೋಲಿತ ಆಹಾರ, ಸರಿಯಾಗಿ ನಿದ್ರೆ ಮತ್ತು ಒತ್ತಡ ನಿಯಂತ್ರಣ ಮುಖ್ಯ. ತೂಕವನ್ನು ತುಂಬಾ ವೇಗವಾಗಿ ಹೆಚ್ಚಿಸುವುದು ಅಥವಾ ಕಡಿಮೆ ಮಾಡುವುದು ತಪ್ಪಿಸಿ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ನಿಯಮಿತ ವ್ಯಾಯಾಮ ಮಾಡಿ.

ಪೀರಿಯಡ್ಸ್‌ ಯಾವ ದಿನ ಆರಂಭವಾಯಿತು, ಎಷ್ಟು ದಿನ ರಕ್ತಸ್ರಾವವಾಯಿತು ಮತ್ತು ಪ್ರಮಾಣದಲ್ಲಿ ಯಾವುದೇ ಬದಲಾವಣೆ ಇದೆಯೇ ಎಂಬುದನ್ನು ದಾಖಲಿಸಿಕೊಳ್ಳಿ. ಇದರಿಂದ ನಿಮ್ಮ ಪೀರಿಯಡ್ಸ್‌ ಪ್ಯಾಟರ್ನ್‌ ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ.

PCOS, ಥೈರಾಯ್ಡ್‌ ಅಥವಾ ಇನ್ನಾವುದೇ ಆರೋಗ್ಯ ಸಮಸ್ಯೆ ಇದ್ದರೆ ವೈದ್ಯರ ಸಲಹೆ ಪಡೆಯಿರಿ. ಪೀರಿಯಡ್ಸ್‌ ರೆಗ್ಯುಲರ್‌ ಮಾಡಲು ಸ್ವಯಂಪ್ರೇರಿತವಾಗಿ ಹಾರ್ಮೋನ್‌ ಮಾತ್ರೆಗಳನ್ನು ತೆಗೆದುಕೊಳ್ಳಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುಂಬೈ ಔಟ್..! ಪ್ಲೇಆಫ್​ಗೇರಿದ ಸನ್‌ರೈಸರ್ಸ್ ಮತ್ತು ಸೂಪರ್‌ಜೈಂಟ್ಸ್ – Kannada News | The Hundred 2026 Playoffs: MI London Out, Trent Rockets to Final! Qualified Teams and Schedule

2026 ರ ದಿ ಹಂಡ್ರೆಡ್ ಲೀಗ್​ನಲ್ಲಿ ಪ್ಲೇಆಫ್‌ ಸುತ್ತು ಇನ್ನೇನು ಆರಂಭವಾಗಲಿದೆ. ಆದರೆ ಅದಕ್ಕೂ ಮುನ್ನ ಈ ಸುತ್ತಿಗೆ ಅರ್ಹತೆ ಪಡೆದ ತಂಡಗಳ ಪಟ್ಟಿ ಅಂತಿಮಗೊಂಡಿದೆ. ಆದರೆ ತನ್ನ ಕೊನೆಯ ಲೀಗ್ ಪಂದ್ಯವನ್ನು ಗೆದ್ದರೂ, ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಎಂಐ ಲಂಡನ್ ಪಂದ್ಯಾವಳಿಯಿಂದ ಹೊರಬಿದ್ದಿದೆ.

1 / 5

ಇತ್ತ ಭಾರತೀಯ ಮಾಲೀಕತ್ವದ ಸನ್‌ರೈಸರ್ಸ್ ಲೀಡ್ಸ್ ಮತ್ತು ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ಪ್ಲೇಆಫ್‌ಗೆ ಅರ್ಹತೆ ಪಡೆದಿವು. ಇದಲ್ಲದೆ, ಟ್ರೆಂಟ್ ರಾಕೆಟ್ಸ್ ಲೀಗ್ ಹಂತದಲ್ಲಿ ಅಗ್ರಸ್ಥಾನ ಪಡೆದು ನೇರವಾಗಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ.

2 / 5

ಇತ್ತ ಬರ್ಮಿಂಗ್ಹ್ಯಾಮ್ ಫೀನಿಕ್ಸ್ ತಂಡ ತನ್ನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಸೋತು ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದರೆ, ಮುಂಬೈ ನಾಲ್ಕನೇ ಸ್ಥಾನಕ್ಕೆ ಏರುವಲ್ಲಿ ಯಶಸ್ವಿಯಾಯಿತು. ಲೀಗ್ ಹಂತದ ನಂತರ ಲೀಗ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಟ್ರೆಂಟ್ ರಾಕೆಟ್ಸ್ ಫೈನಲ್‌ಗೆ ನೇರ ಪ್ರವೇಶ ಪಡೆದುಕೊಂಡಿದೆ.

3 / 5

ಉಳಿದಂತೆ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ಎರಡನೇ ಸ್ಥಾನ ಮತ್ತು ಸನ್‌ರೈಸರ್ಸ್ ಲೀಡ್ಸ್ ಮೂರನೇ ಸ್ಥಾನ ಪಡೆದುಕೊಂಡಿವೆ. ಹೀಗಾಗಿ ಈ ಎರಡೂ ತಂಡಗಳು ಆಗಸ್ಟ್ 14 ರಂದು ಎಲಿಮಿನೇಟರ್‌ನಲ್ಲಿ ಆಡಲಿವೆ. ಈ ಪಂದ್ಯದ ವಿಜೇತರು ಆಗಸ್ಟ್ 16 ರಂದು ನಡೆಯಲಿರುವ ಫೈನಲ್‌ನಲ್ಲಿ ಟ್ರೆಂಟ್ ರಾಕೆಟ್ಸ್ ತಂಡವನ್ನು ಎದುರಿಸಲಿದ್ದಾರೆ.

4 / 5

ಎಂಐ ಜೊತೆಗೆ, ಸದರ್ನ್ ಬ್ರೇವ್, ವೆಲ್ಷ್ ಫೈರ್, ಲಂಡನ್ ಸ್ಪಿರಿಟ್ ಮತ್ತು ಬರ್ಮಿಂಗ್ಹ್ಯಾಮ್ ಫೀನಿಕ್ಸ್ ಕೂಡ ಪ್ಲೇಆಫ್ ರೇಸ್‌ನಿಂದ ಹೊರಬಿದ್ದವು. ಬರ್ಮಿಂಗ್ಹ್ಯಾಮ್ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿತು. ಇತ್ತ ಎಂಐ ಲಂಡನ್ ಪುರುಷ ಹಾಗೂ ಮಹಿಳಾ ತಂಡಗಳೆರಡು ಪ್ಲೇಆಫ್‌ ರೇಸ್​ನಿಂದ ಹೊರಬಿದ್ದಿವೆ.

5 / 5

Published On – 6:33 pm, Thu, 13 August 26

Source link

Indian Independence 2026: ತ್ರಿವರ್ಣ ಧ್ವಜದ ಮಧ್ಯದಲ್ಲಿ “ಅಶೋಕ ಚಕ್ರ”ದ ಕುತೂಹಲಕಾರಿ ಸಂಗತಿಗಳು – Kannada News | Independence Day 2026; Interesting Facts About the Ashoka Chakra in Kannada

ಇದೇ  ಆಗಸ್ಟ್ 15ರಂದು 80ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲು ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ವಿಶೇಷ ರೀತಿಯಲ್ಲಿ ಆಚರಿಸಲು ಕೇಂದ್ರ ಸರ್ಕಾರ ಹರ್ ಘರ್ ತಿರಂಗಾ ಅಭಿಯಾನ ಸಹ ಹಮ್ಮಿಕೊಂಡಿದ್ದು, ಇದಕ್ಕಾಗಿ ಸಿದ್ಧತೆಗಳು ಬಹಳ ಉತ್ಸಾಹ ಮತ್ತು ಹುರುಪಿನಿಂದ ನಡೆಯುತ್ತಿದೆ. ಇನ್ನು ನಮ್ಮ ದೇಶದ ತ್ರಿವರ್ಣ ಧ್ವಜದಲ್ಲಿರುವ ಅಶೋಕ ಚಕ್ರ ಅದೆಷ್ಟೋ ಜನರಿಗೆ ಗೊತ್ತಿಲ್ಲ. ಹೀಗಾಗಿ ಈ ಅಶೋಕ್ ಚಕ್ರವನ್ನು ಏಕೆ ಅಳವಡಿಸಲಾಯ್ತು? ಮತ್ತು ಅಶೋಕ ಚಕ್ರದಲ್ಲಿರುವ 24 ಗೆರೆಗಳು ಇದ್ದು, ಇವು ಏನನ್ನು ಸೂಚಿಸುತ್ತವೆ ಎನ್ನುವುದು ಈ ಕೆಳಗಿನಂತಿದೆ.

ಅಶೋಕ ಚಕ್ರದ ಬಗ್ಗೆ ಒಂದಿಷ್ಟು ತಿಳಿಯಿರಿ

ಅಶೋಕ ಚಕ್ರವು ‘ಧರ್ಮಚಕ್ರ’ದ ಚಿತ್ರಣ. ಅಶೋಕ ಚಕ್ರವನ್ನು ಕರ್ತವ್ಯದ ಚಕ್ರ ಎಂದೂ ಕರೆಯಲಾಗುತ್ತದೆ. ತ್ರಿವರ್ಣ ಧ್ವಜದ ಮಧ್ಯದಲ್ಲಿ ಅಶೋಕ ಚಕ್ರವನ್ನು ಜುಲೈ 22, 1947ರಂದು ಅಳವಡಿಸಲಾಯಿತು. ಜಲಂಧರ್‌ನ ಲಾಲಾ ಹಂಸರಾಜ್ ಅವರು ರಾಷ್ಟ್ರಧ್ವಜದಲ್ಲಿ ಚರಕ ಸೇರ್ಪಡಗೆ ಸಲಹೆ ನೀಡಿದ್ದರು. ಅದರಂತೆ ಮೊದಲು ಕೆಸರಿ, ಬಿಳಿ, ಹಸಿರು ಬಣ್ಣದ ತ್ರಿವರ್ಣ ಧ್ವಜದಲ್ಲಿ ಚರಕವನ್ನು ಸೇರಿಸಲಾಗಿತ್ತು. ಭಾರತದ ರಾಷ್ಟ್ರಧ್ವಜದಲ್ಲಿ ಅಶೋಕ ಚಕ್ರವು ಬಿಳಿ ಬಣ್ಣದ ಹಿನ್ನೆಲೆಯಲ್ಲಿ ನೀಲಿ ಬಣ್ಣದಲ್ಲಿ ಚಿತ್ರಿತವಾಗಿದೆ. ವಾಸ್ತವವಾಗಿ ಭಾರತ ಸಂವಿಧಾನದ ಪೀಠಿಕೆ ಶುರುವಾಗುವುದೂ ಅಶೋಕ ಚಕ್ರದ ಮೂಲಕ.

ಇದನ್ನೂ ಓದಿ: Independence Day 2026: ಇವರೇ ನೋಡಿ ತಿರಂಗಾದ ರೂವಾರಿ ಪಿಂಗಳಿ ವೆಂಕಯ್ಯ; ಇಲ್ಲಿದೆ ತ್ರಿವರ್ಣ ಧ್ವಜ ಹುಟ್ಟಿದ ಕಥೆ

ಸ್ವಾತಂತ್ರ್ಯ ಪೂರ್ವದಲ್ಲಿ ಧ್ವಜದ ಮಧ್ಯೆ ಮಹಾತ್ಮ ಗಾಂಧೀಜಿಯವರ ಚರಕ (ರಾಟೆ) ಇತ್ತು. ಆದರೆ, ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಕೆಲವೇ ದಿನಗಳ ಮುನ್ನ, ಅಂದರೆ ಜುಲೈ 22, 1947 ರಂದು ಸಂವಿಧಾನ ರಚನಾ ಸಭೆಯು ಚರಕದ ಬದಲಿಗೆ ಅಶೋಕ ಚಕ್ರವನ್ನು ಅಧಿಕೃತವಾಗಿ ಅಳವಡಿಸಿತು.

ಅಶೋಕ ಚಕ್ರದ ಗೆರೆಗಳು ದಿನದ ಇಪ್ಪತ್ನಾಲ್ಕು ಗಂಟೆಗಳನ್ನು ಪ್ರತಿನಿಧಿಸುವುದರಿಂದ ಈ ಚಕ್ರವನ್ನು ‘ಸಮಯದ ಚಕ್ರ’ ಎಂದೂ ಕೂಡಾ ಕರೆಯಲಾಗುತ್ತದೆ. ಅಶೋಕ ಚಕ್ರವನ್ನು ಜೈನ ಧರ್ಮ, ಹಿಂದೂ ಧರ್ಮ ಮತ್ತು ಬೌದ್ಧ ಧರ್ಮದ ಧಾರ್ಮಿಕ ಸೂಚಕವಾಗಿ ರೂಪಿಸಲಾಗಿದೆ. ಅದಕ್ಕಾಗಿಯೇ ಅಶೋಕ ಚಕ್ರವನ್ನು ‘ಧರ್ಮದ ಚಕ್ರ’ ಎಂದು ಕೂಡಾ ಕರೆಯಲಾಗುತ್ತದೆ.

ಅಶೋಕ ಚಕ್ರದಲ್ಲಿರುವ ಗೆರೆಗಳು ಧೈರ್ಯ, ತಾಳ್ಮೆ, ಸ್ವಯಂ ತ್ಯಾಗ, ಸತ್ಯತೆ, ಸದಾಚಾರ, ಪ್ರೀತಿ, ಆಧ್ಯಾತ್ಮಿಕ ಜ್ಞಾನ, ನೈತಿಕತೆ, ಕಲ್ಯಾಣ, ಉದ್ಯಮ, ಸಮೃದ್ಧಿ ಮತ್ತು ನಂಬಿಕೆಯಂತಹ ತತ್ವಗಳನ್ನು ಪ್ರತಿನಿಧಿಸುತ್ತವೆ.

ಅಶೋಕ ಚಕ್ರದಲ್ಲಿರವ 24 ಗೆರೆಗಳು ಏನು ಹೇಳುತ್ತವೆ?

  • ಮೊದಲ ಗೆರೆ: ಪ್ರೀತಿ (Love) – ಜಗತ್ತಿನ ಎಲ್ಲಾ ಜೀವಿಗಳ ಮೇಲೆ ಪ್ರೀತಿ ಇಡುವುದು.
  • ಎರಡನೇ ಗೆರೆ: ಧೈರ್ಯ (Courage) – ಕಷ್ಟದ ಸಮಯದಲ್ಲಿ ಧೈರ್ಯದಿಂದ ಮುನ್ನಡೆಯುವುದು.
  • ಮೂರನೇ ಗೆರೆ: ಶಾಂತಿ (Peace) – ಸಮಾಜದಲ್ಲಿ ಸೌಹಾರ್ದತೆ ಮತ್ತು ಶಾಂತಿಯನ್ನು ಕಾಪಾಡುವುದು.
  • ನಾಲ್ಕನೇ ಗೆರೆ: ತ್ಯಾಗ (Magnanimity) – ಇತರರ ಒಳಿತಿಗಾಗಿ ಸ್ವಾರ್ಥವನ್ನು ತ್ಯಾಗ ಮಾಡುವುದು.
  • ಐದನೇ ಗೆರೆ: ಸಂಯಮ (Self-control) – ಆಸೆ ಮತ್ತು ಕೋಪವನ್ನು ನಿಯಂತ್ರಣದಲ್ಲಿಡುವುದು.
  • ಆರನೇ ಗೆರೆ: ಪ್ರಾಮಾಣಿಕತೆ (Righteousness) – ಸದಾ ಸತ್ಯದ ಹಾದಿಯಲ್ಲಿ ನಡೆಯುವುದು.
  • ಏಳನೇ ಗೆರೆ: ನ್ಯಾಯ (Justice) – ಎಲ್ಲರಿಗೂ ಸಮಾನವಾಗಿ ನ್ಯಾಯ ಒದಗಿಸುವುದು.
  • ಎಂಟನೇ ಗೆರೆ: ರುಣೆ (Mercy) – ದುರ್ಬಲರು ಮತ್ತು ಪ್ರಾಣಿಗಳ ಮೇಲೆ ದಯೆ ತೋರುವುದು.
  • ಒಂಬತ್ತನೇ ಗೆರೆ: ಸಹನೆ (Gracefulness) – ಇತರರ ದೋಷಗಳನ್ನು ಕ್ಷಮಿಸುವ ಗುಣ ಹೊಂದುವುದು.
  • ಹತ್ತನೇ ಗೆರೆ: ವಿನಮ್ರತೆ (Humility) – ನಡವಳಿಕೆಯಲ್ಲಿ ಅಹಂಕಾರವಿಲ್ಲದೆ ವಿನಯದಿಂದ ಇರುವುದು..
  • ಹನ್ನೊಂದನೇ ಗೆರೆ: ಸೇವೆ (Service) – ದೇಶ ಮತ್ತು ಸಮಾಜದ ಸೇವೆಗೆ ಸದಾ ಸಿದ್ಧರಿರುವುದು.
  • ಹನ್ನೆರಡನೇ ಗೆರೆ: ಸಹಾನುಭೂತಿ (Empathy) – ಇತರರ ಕಷ್ಟಗಳನ್ನು ತನ್ನದೇ ಎಂದು ತಿಳಿಯುವುದು.
  • ಹದಿಮೂರನೇ ಗೆರೆ: ಜ್ಞಾನ (Sympathy) – ಸತ್ಪ್ರಜೆಗಳಾಗಲು ಜ್ಞಾನ ಮತ್ತು ವಿವೇಕವನ್ನು ಬೆಳೆಸಿಕೊಳ್ಳುವುದು
  • ಹದಿನಾಲ್ಕನೇ ಗೆರೆ: ಶಿಸ್ತು (Self-governance) – ವೈಯಕ್ತಿಕ ಮತ್ತು ಸಾಮಾಜಿಕ ಜೀವನದಲ್ಲಿ ಶಿಸ್ತು ಪಾಲಿಸುವುದು.
  • ಹದಿನೈದನೇ ಗೆರೆ: ಸಮಾನತೆ (Equality) – ಜಾತಿ, ಧರ್ಮ, ಲಿಂಗ ಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವುದು.
  • ಹದಿನಾರನೇ ಗೆರೆ: ಅಹಿಂಸೆ (Non-violence) – ಮನಸ್ಸು, ಮಾತು ಅಥವಾ ಕೃತಿಯಿಂದ ಯಾರಿಗೂ ನೋವು ಮಾಡದಿರುವುದು
  • ಹದಿನೇಳನೇ ಗೆರೆ: ಸಹಕಾರ (Cooperation) – ಸಮಾಜದ ಉನ್ನತಿಗಾಗಿ ಎಲ್ಲರೊಂದಿಗೆ ಒಟ್ಟಾಗಿ ಕೆಲಸ ಮಾಡುವುದು.
  • ಹದಿನೆಂಟನೇ ಗೆರೆ: ಕ್ಷಮೆ (Forbearance) – ಸೇಡಿನ ಭಾವನೆ ಇಲ್ಲದೆ ಇತರರನ್ನು ಕ್ಷಮಿಸುವುದು.
  • ಹತ್ತೊಂಬತ್ತನೇ ಗೆರೆ: ಸ್ನೇಹ (Friendliness) – ಎಲ್ಲರೊಂದಿಗೆ ಆತ್ಮೀಯ ಸೌಹಾರ್ದತೆಯಿಂದ ಇರುವುದು.
  • ಇಪ್ಪತ್ತನೇ ಗೆರೆ: ನೈತಿಕತೆ (Morality) – ಜೀವನದಲ್ಲಿ ಉನ್ನತ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು.
  • ಇಪ್ಪತ್ತೊಂದನೇ ಗೆರೆ: ಪವಿತ್ರತೆ (Purity) – ಆಲೋಚನೆ ಮತ್ತು ನಡವಳಿಕೆಯಲ್ಲಿ ಶುದ್ಧತೆ ಕಾಯ್ದುಕೊಳ್ಳುವುದು
  • ಇಪ್ಪತ್ತೆರಡನೇ ಗೆರೆ: ಉದಾರತೆ (Charity) – ಇಲ್ಲದವರಿಗೆ ದಾನ ಮತ್ತು ಸಹಾಯ ಮಾಡುವುದು.
  • ಇಪ್ಪತ್ತಮೂರನೇ ಗೆರೆ: ಆಶಾವಾದ (Hope) – ಭವಿಷ್ಯದ ಬಗ್ಗೆ ಸದಾ ಸಕಾರಾತ್ಮಕ ಚಿಂತನೆ ಹೊಂದುವುದು.
  • ಇಪ್ಪತ್ತನಾಲ್ಕನೇ ಗೆರೆ: ವಿಶ್ವಾಸ (Faith) – ದೇಶದ ಸಂವಿಧಾನ ಮತ್ತು ಮಾನವೀಯತೆಯ ಮೇಲೆ ನಂಬಿಕೆ ಇಡುವುದು.

ಈ 24 ಕಡ್ಡಿಗಳು ದಿನದ 24 ಗಂಟೆಗಳನ್ನು ಸಹ ಪ್ರತಿನಿಧಿಸುತ್ತವೆ. ದೇಶವು ದಿನದ 24 ಗಂಟೆಯೂ ನಿರಂತರವಾಗಿ ಅಭಿವೃದ್ಧಿಯತ್ತ ಸಾಗಬೇಕು ಮತ್ತು ಪ್ರತಿಯೊಬ್ಬ ನಾಗರಿಕನೂ ಈ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದೇ ಇದರ ಮುಖ್ಯ ಸಂದೇಶವಾಗಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಅಯೋಗ್ಯ 2’ ಸಿನಿಮಾ ನೋಡಿ ಮೆಚ್ಚಿ ಮಾತನಾಡಿದ ನಟ ಶರಣ್ – Kannada News | Actor Sharan watched Ayogya 2 movie and praised watch video

ಸತೀಶ್ ನೀನಾಸಂ (Satish Neenasam), ರಚಿತಾ ರಾಮ್ ನಟಿಸಿರುವ ‘ಅಯೋಗ್ಯ 2’ ಸಿನಿಮಾ ಕಳೆದ ವಾರ ಬಿಡುಗಡೆ ಆಗಿದೆ. ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ತುಂಬಿದ ಚಿತ್ರಮಂದಿರಗಳ ವಿಡಿಯೋಗಳನ್ನು ಸತೀಶ್ ನೀನಾಸಂ ಹಂಚಿಕೊಳ್ಳುತ್ತಲೇ ಇದ್ದಾರೆ. ಇತ್ತೀಚೆಗಷ್ಟೆ ನಟ ಶರಣ್ ‘ಅಯೋಗ್ಯ 2’ ಸಿನಿಮಾ ವೀಕ್ಷಿಸಿದ್ದು, ಸಿನಿಮಾ ಅನ್ನು ಮೆಚ್ಚಿ ಮಾತನಾಡಿದ್ದಾರೆ. ‘ಈ ಸಿನಿಮಾಕ್ಕಾಗಿ ಕೆಲಸ ಮಾಡಿದವರೆಲ್ಲ, ಒಂದೇ ಭಾವದಿಂದ ದುಡಿದಿದ್ದಾರೆ. ಅವರು ಗೆದ್ದರೆ, ನಾನು ಗೆದ್ದಂತೆ’ ಎಂದಿದ್ದಾರೆ. ಶರಣ್ ಹೊಗಳಿಕೆಗೆ ನಟ ಸತೀಶ್ ಧನ್ಯವಾದ ಹೇಳಿದ್ದಾರೆ. ಶರಣ್ ಹೇಳಿದ್ದೇನು? ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಾಫಿ ಸಾಕ್ಷಿ: ನಟ ದರ್ಶನ್ ಮೇಲ್ಮನವಿ ವಜಾ; ಹೈಕೋರ್ಟ್​ನಲ್ಲಿ ಮತ್ತೆ ಹಿನ್ನಡೆ – Kannada News | Actor Darshan High Court appeal rejected Pradosh approver petition

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ಪ್ರಮುಖ ಆರೋಪಿ ಆಗಿರುವ ನಟ ದರ್ಶನ್ ಅವರಿಗೆ ಕಾನೂನಿನ ಸಂಕಷ್ಟ ಹೆಚ್ಚುತ್ತಲೇ ಇದೆ. ಇನ್ನೋರ್ವ ಆರೋಪ ಪ್ರದೋಷ್ (Pradosh) ಮಾಫಿ ಸಾಕ್ಷಿಯಾಗಲು ಮುಂದಾಗಿರುವುದರಿಂದ ದರ್ಶನ್ ಎದೆಯಲ್ಲಿ ಢವಢವ ಶುರುವಾಗಿದೆ. ಮಾಫಿ ಸಾಕ್ಷಿಗೆ ಆಕ್ಷೇಪಣೆ ಸಲ್ಲಿಸಲು ದರ್ಶನ್ ಹಾಗೂ ಇತರೆ ಆರೋಪಿಗಳಿಗೆ ಯಾವುದೇ ಹಕ್ಕು ಇಲ್ಲ ಎಂದು 59ನೇ ಸಿಸಿಹೆಚ್ ಕೋರ್ಟ್ ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿ ದರ್ಶನ್ (Darshan) ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿ ಕೂಡ ಅವರಿಗೆ ಹಿನ್ನಡೆ ಆಗಿದೆ.

ದರ್ಶನ್ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ವಿನಯ್ ಕುಲಕರ್ಣಿ ಕೇಸ್‌ನಲ್ಲಿ ಈಗಾಗಲೇ ಈ ಅಂಶದ ತೀರ್ಮಾನವಾಗಿದೆ. ಹೈಕೋರ್ಟ್ ನೀಡಿದ ತೀರ್ಪನ್ನು ಸುಪ್ರೀಂಕೋರ್ಟ್ ಒಪ್ಪಿದೆ. ಹೀಗಾಗಿ 59ನೇ ಸಿಸಿಹೆಚ್ ಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಆದೇಶ ನೀಡಿದೆ.

ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ವಾದ ಮಾಡಿದರು. ‘ಮಾಫಿ ಸಾಕ್ಷಿಯಾಗುವಂತೆ ಕೋರಿರುವ ಅರ್ಜಿಯ ಪ್ರತಿಯನ್ನೂ ನೀಡಿಲ್ಲ. ಪ್ರಕ್ರಿಯೆಯ ಲೋಪದ ಬಗ್ಗೆಯಷ್ಟೇ ನಾವು ವಾದ ಮಾಡುತ್ತೇವೆ. ಅದಕ್ಕೂ ಅವಕಾಶ ಕೊಟ್ಟಿಲ್ಲ’ ಎಂದು ಹಷ್ಮತ್ ಪಾಷಾ ವಾದ ಮಂಡಿಸಿದರು. ‘ಮಾಫಿ ಸಾಕ್ಷಿಯಾಗಿಸಿದ ನಂತರವಷ್ಟೇ ಪ್ರಕ್ರಿಯೆ ಲೋಪವನ್ನು ಪ್ರಶ್ನಿಸಬಹುದು. ಮಾಫಿ ಸಾಕ್ಷಿಯನ್ನು ಆಕ್ಷೇಪಿಸಲು ಸಹ-ಆರೋಪಿಗೆ ಹಕ್ಕಿಲ್ಲ’ ಎಂದು ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: ‘ಹೊಡೆದರು, ಸುಟ್ಟರು, ಕೊನೆಗೆ ‘ಶೂಟ್ ಮಾಡ್ಕೊಂಡು ಸಾಯ್ತೀನಿ’ ಎಂದ ದರ್ಶನ್’

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ತ್ವರಿತ ಗತಿಯಲ್ಲಿ ನಡೆಯುತ್ತಿವೆ. ಈ ಹಂತದಲ್ಲಿ 14ನೇ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ನಿರ್ಧರಿಸಿ ಅರ್ಜಿ ಸಲ್ಲಿಸಿದ್ದಾನೆ. ದರ್ಶನ್ ಜೊತೆ ಪ್ರದೋಷ್ ಆಪ್ತನಾಗಿದ್ದ. ಆದರೆ ಈಗ ಆತನೇ ಎಲ್ಲವನ್ನೂ ಒಪ್ಪಿಕೊಳ್ಳಲು ಸಿದ್ಧವಾಗಿರುವುದರಿಂದ ದರ್ಶನ್​ಗೆ ನಡುಕ ಶುರುವಾಗಿದೆ. ಮಾಫಿ ಸಾಕ್ಷಿ ಆಗಲು ಪ್ರದೋಷ್​ಗೆ ಅವಕಾಶ ಇದೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಕಾನೂನು ಪ್ರಕ್ರಿಯೆ ನಡೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹಲ್ಲೆಗೊಳಗಾದ ಸುಖ್‌ಬೀರ್ ಸಿಂಗ್ ಬಾದಲ್ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ; ದಾಳಿಯ ತನಿಖೆಗೆ ಮಹಾರಾಷ್ಟ್ರ ಸಿಎಂ ಆದೇಶ – Kannada News | PM Narendra Modi inquires about Sukhbir Singh Badal health after attack CM Fadnavis orders probe into Motive

ಮುಂಬೈ, ಆಗಸ್ಟ್ 13: ಮಹಾರಾಷ್ಟ್ರದ ನಾಂದೇಡ್‌ನ ಗುರುದ್ವಾರದಲ್ಲಿ ನಡೆದ ದಾಳಿಯಲ್ಲಿ ಗಾಯಗೊಂಡಿರುವ ಶಿರೋಮಣಿ ಅಕಾಲಿದಳ (SAD) ಅಧ್ಯಕ್ಷ ಸುಖ್‌ಬೀರ್ ಸಿಂಗ್ ಬಾದಲ್ ಅವರ ಆರೋಗ್ಯದ ಕುರಿತು ಪ್ರಧಾನಿ ನರೇಂದ್ರ ಮೋದಿ (PM Modi) ಇಂದು ಬಾದಲ್ ಅವರ ಪತ್ನಿ ಹಾಗೂ ಅಕಾಲಿದಳದ ಸಂಸದೆ ಹರ್‌ಸಿಮ್ರತ್ ಕೌರ್ ಬಾದಲ್ ಅವರಿಗೆ ಕರೆ ಮಾಡಿ ವಿಚಾರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಘಟನೆ ನಡೆದ ಸಮಯದಲ್ಲಿ ಸುಖ್‌ಬೀರ್ ಬಾದಲ್ ಅವರೊಂದಿಗೆ ಅವರ ಪತ್ನಿ ಹರ್‌ಸಿಮ್ರತ್ ಕೂಡ ಅಲ್ಲೇ ಇದ್ದರು.

ಇಂದು ನಾಂದೇಡ್‌ನ ಗುರುದ್ವಾರ ಮಾತಾ ಸಾಹಿಬ್ ಕೌರ್‌ನಲ್ಲಿ ನಿಹಾಂಗ್ ಉಡುಪಿನಲ್ಲಿದ್ದ ವ್ಯಕ್ತಿಯೊಬ್ಬ ತಲ್ವಾರ್​​ನಿಂದ ಬಾದಲ್ ಅವರ ಮೇಲೆ ದಾಳಿ ನಡೆಸಿದ್ದ. ಈ ದಾಳಿಯಲ್ಲಿ ಬಾದಲ್ ಅವರ ಕೈಗೆ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಯಿತು. ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಬಾದಲ್ ಅವರು ಪ್ರಸಾದದ ಹಾಲ್‌ನತ್ತ ತೆರಳುತ್ತಿದ್ದಾಗ ಈ ದಾಳಿ ಸಂಭವಿಸಿದೆ. ಈ ಪವಿತ್ರ ಸ್ಥಳವು ಸಿಖ್ ಧರ್ಮದ ಐದು ಪ್ರಮುಖ ಪೀಠಗಳಲ್ಲಿ (ತಖ್ತ್) ಒಂದಾದ ‘ತಖ್ತ್ ಶ್ರೀ ಹಜೂರ್ ಸಾಹಿಬ್’‌ನಿಂದ ಸುಮಾರು 15 ಕಿ.ಮೀ ದೂರದಲ್ಲಿದೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಪಂಜಾಬ್ ಮಾಜಿ ಡಿಸಿಎಂ ಸುಖ್‌ಬೀರ್ ಸಿಂಗ್ ಬಾದಲ್ ಮೇಲೆ ತಲ್ವಾರ್ ದಾಳಿ; ಆಸ್ಪತ್ರೆಗೆ ದಾಖಲು

ಪ್ರಧಾನಿ ನರೇಂದ್ರ ಮೋದಿ ಅವರು ಸುಖ್‌ಬೀರ್ ಸಿಂಗ್ ಬಾದಲ್ ಅವರ ಪತ್ನಿ ಹರ್‌ಸಿಮ್ರತ್ ಕೌರ್ ಬಾದಲ್ ಅವರಿಗೆ ಫೋನ್ ಮಾಡಿ ಮಾತನಾಡಿ, ಬಾದಲ್ ಅವರ ಆರೋಗ್ಯದ ಕುರಿತು ವಿಚಾರಿಸಿದ್ದಾರೆ. ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರನ್ನು ಸುಖ್​​ಬೀರ್ ಸಿಂಗ್ ಭೇಟಿಯಾಗಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. ಪಂಜಾಬ್ ವಿಧಾನಸಭೆ ಚುನಾವಣೆಗೆ ಮುನ್ನ ಅಕಾಲಿದಳ ಮತ್ತು ಬಿಜೆಪಿ ನಡುವೆ ಮತ್ತೆ ಮೈತ್ರಿ ಏರ್ಪಡಬಹುದು ಎಂಬ ಊಹಾಪೋಹಗಳ ನಡುವೆ ಇಬ್ಬರೂ ನಾಯಕರುಭೇಟಿಯಾಗಿದ್ದರು. ಆ ಭೇಟಿಯ ಬೆನ್ನಲ್ಲೇ ಈ ದಾಳಿ ನಡೆದಿದೆ.

ದಾಳಿ ಕುರಿತು ತನಿಖೆಗೆ ಸಿಎಂ ಫಡ್ನವೀಸ್ ಆದೇಶ:

ಇದೇ ವೇಳೆ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ ಸುಖ್‌ಬೀರ್ ಸಿಂಗ್ ಬಾದಲ್ ಮೇಲಿನ ದಾಳಿಯ ಕುರಿತು ತನಿಖೆಗೆ ಆದೇಶಿಸಿದ್ದಾರೆ. ದೇವೇಂದ್ರ ಫಡ್ನವೀಸ್ ಅವರು ಬಾದಲ್ ಅವರಿಗೆ ಕರೆ ಮಾಡಿ ಅವರ ಕ್ಷೇಮ ವಿಚಾರಿಸಿದ್ದಾರೆ ಎಂದು ಪಿಟಿಐ ತಿಳಿಸಿದೆ.

ಇದನ್ನೂ ಓದಿ: Video: ಪ್ರಧಾನಿ ಮೋದಿ ನಿಂದಿಸುವವರಿಗೆ ಹೊದಿಕೆ ಇಲ್ಲ, ಮುಸ್ಲಿಮರಿಗೆ ಬೆಡ್​ಶೀಟ್ ಕೊಡದ ಬಿಜೆಪಿ ಮಾಜಿ ಸಂಸದ ಸುಖ್​ಬೀರ್

ಮುಖ್ಯಮಂತ್ರಿ ಫಡ್ನವೀಸ್ ಅವರು ನಾಂದೇಡ್ ಎಸ್​ಪಿಯಿಂದ ಘಟನೆಯ ವಿವರಗಳನ್ನು ಪಡೆದುಕೊಂಡಿದ್ದು, ದಾಳಿಯ ಹಿಂದಿನ ಉದ್ದೇಶವನ್ನು ತನಿಖೆ ಮಾಡುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ. ಮಾತಾ ಸಾಹಿಬ್ ಗುರುದ್ವಾರದಲ್ಲಿ ಜಸ್‌ಪಾಲ್ ಸಿಂಗ್ ಎಂಬಾತ ಸುಖ್‌ಬೀರ್ ಸಿಂಗ್ ಬಾದಲ್ ಮೇಲೆ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬಾದಲ್ ಅವರು ಪ್ರಾರ್ಥನೆ ಸಲ್ಲಿಸಿ ಮೆಟ್ಟಿಲುಗಳನ್ನು ಇಳಿಯುತ್ತಿದ್ದಾಗ ಈ ದಾಳಿ ನಡೆದಿದೆ. ಅವರನ್ನು ರಕ್ಷಿಸಲು ಯತ್ನಿಸಿದ ಇನ್ಸ್‌ಪೆಕ್ಟರ್ ಸಂತೋಷ್ ಕೇಂಗ್ರೆ ಅವರಿಗೂ ಗಾಯಗಳಾಗಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

ದಾಳಿಕೋರ ಜಸ್‌ಪಾಲ್ ಸಿಂಗ್ ನಿಹಾಂಗ್ ಸಿಖ್ ಆಗಿದ್ದು, ಕಳೆದ 2 ವರ್ಷಗಳಿಂದ ಗುರುದ್ವಾರದಲ್ಲಿ ಕೆಲಸ ಮಾಡುತ್ತಿದ್ದ. ಗಾಯಗೊಂಡ ಇಬ್ಬರನ್ನೂ ನಾಂದೇಡ್‌ನ ಯಶೋಸಾಯಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೋಲಿಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ಆತನ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2027: ಆರ್​ಸಿಬಿಗೆ ಇಶಾನ್ ಕಿಶನ್, ಸನ್‌ರೈಸರ್ಸ್​ಗೆ ಜಿತೇಶ್ ಶರ್ಮಾ..! – Kannada News | IPL 2027 Trade Rumor: SRH RCB Eye Jitesh Sharma, Ishan Kishan Swap Deal

2027 ರ ಐಪಿಎಲ್‌ಗೆ ಇನ್ನು ಸಾಕಷ್ಟು ಸಮಯವಿದೆ. ಆದರೆ ಈಗಾಗಲೇ ಕೆಲವು ಫ್ರಾಂಚೈಸಿಗಳು ತಮ್ಮ ತಮ್ಮ ತಂಡಗಳಲ್ಲಿನ ಲೋಪದೋಷಗಳನ್ನು ಸರಿ ಮಾಡಲಾರಂಭಿಸಿವೆ. ಇದೀಗ ಕೇಳಿ ಬಂದಿರುವ ಸುದ್ದಿಯ ಪ್ರಕಾರ, ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಬಿಗ್ ಡೀಲ್ ನಡೆಯುತ್ತಿದೆ ಎಂದು ವರದಿಯಾಗಿದೆ(PC-PTI).

1 / 5

ಐಪಿಎಲ್ 2026 ರಲ್ಲಿ ಅದ್ಭುತ ಪ್ರದರ್ಶನದೊಂದಿಗೆ ಸನ್‌ರೈಸರ್ಸ್ ಹೈದರಾಬಾದ್ ಪ್ಲೇಆಫ್ ತಲುಪಿತು, ಆದರೆ ಎಲಿಮಿನೇಟರ್ ಪಂದ್ಯದಲ್ಲಿ ಸೋತು ಐಪಿಎಲ್ ರೇಸ್‌ನಿಂದ ನಿರ್ಗಮಿಸಿತು. ಇದೀಗ ಕಾವ್ಯ ಮಾರನ್ ನೇತೃತ್ವದ ಎಸ್‌ಆರ್‌ಎಚ್ ಮ್ಯಾನೇಜ್‌ಮೆಂಟ್ ಮುಂಬರುವ ಸೀಸನ್​ಗೆ ತಂಡವನ್ನು ಮತ್ತಷ್ಟು ಬಲಪಡಿಸಲು ತಯಾರಿ ಶುರು ಮಾಡಿದೆ. ವಿಶೇಷವಾಗಿ, ಕೆಳ ಕ್ರಮಾಂಕದಲ್ಲಿ ವೇಗವಾಗಿ ರನ್ ಗಳಿಸಬಲ್ಲ ಸರಿಯಾದ ಭಾರತೀಯ ಫಿನಿಷರ್ ಕೊರತೆಯು ತಂಡದಲ್ಲಿ ಪ್ರಮುಖ ಸಮಸ್ಯೆಯಾಗಿದೆ(PC-PTI).

2 / 5

ಈ ದೌರ್ಬಲ್ಯವನ್ನು ನಿವಾರಿಸಲು, ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಹಾಗೂ ಉಪನಾಯಕ ಜಿತೇಶ್ ಶರ್ಮಾ ಮೇಲೆ ಕಣ್ಣಿಟ್ಟಿದೆ. ಇತ್ತ ಜಿತೇಶ್ ಶರ್ಮಾ ಅವರನ್ನು ಬಿಟ್ಟುಕೊಡಲು ಆರ್​ಸಿಬಿ ಕೂಡ ಸಿದ್ಧವಿದ್ದು, ಜಿತೇಶ್ ಬದಲಿಗೆ ಸನ್‌ರೈಸರ್ಸ್ ತಂಡದಲ್ಲಿರುವ ಮತ್ತೊಬ್ಬ ಸ್ಟಾರ್ ಆಟಗಾರನನ್ನು ಕೇಳಿದೆ ಎಂದು ವರದಿಯಾಗಿದೆ(PC-PTI).

3 / 5

ಜಿತೇಶ್ ಶರ್ಮಾರನ್ನು ಬಿಟ್ಟುಕೊಡಲು ಮುಂದಾಗಿರುವ ಆರ್​ಸಿಬಿ, ಎಸ್‌ಆರ್‌ಹೆಚ್‌ನ ಸ್ಟಾರ್ ಬ್ಯಾಟರ್ ಇಶಾನ್ ಕಿಶನ್ ಅವರನ್ನು ನೀಡುವಂತೆ ಕೇಳಿದೆ. ಆರ್​ಸಿಬಿಯ ಈ ಬೇಡಿಕೆಯಿಂದ ಹೈದರಾಬಾದ್ ಮ್ಯಾನೇಜ್‌ಮೆಂಟ್ ಆಘಾತಕ್ಕೊಳಗಾಗಿದೆಯಾದರೂ ಈ ಬಗ್ಗೆ ಮಾತುಕತೆಗಳು ನಡೆಯುತ್ತಿದ್ದು, ಶೀಘ್ರದಲ್ಲೇ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದು ವರದಿಯಾಗಿದೆ(PC-PTI).

4 / 5

ಆದಾಗ್ಯೂ, ಫಾರ್ಮ್‌ನಲ್ಲಿರುವ ಇಶಾನ್ ಕಿಶನ್‌ನಂತಹ ಪಂದ್ಯ ವಿಜೇತರನ್ನು ಬಿಟ್ಟುಕೊಡುವುದು ಸನ್‌ರೈಸರ್ಸ್‌ಗೆ ದೊಡ್ಡ ಹೊಡೆತವಾಗಲಿದೆ. ಪ್ಯಾಟ್ ಕಮ್ಮಿನ್ಸ್ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ ಇಶಾನ್ ಕಿಶನ್ ಅವರನ್ನು ಎಸ್‌ಆರ್‌ಹೆಚ್ ತನ್ನ ಭವಿಷ್ಯದ ನಾಯಕನನ್ನಾಗಿ ನೋಡುತ್ತಿದೆ. ಮುಂಬರುವ ಸೀಸನ್​ನಲ್ಲಿ ಕಮ್ಮಿನ್ಸ್ ಆಡುವ ಬಗ್ಗೆ ಅನುಮಾನವಿರುವುದರಿಂದ ಹೈದರಾಬಾದ್ ಇಶಾನ್ ಅವರನ್ನು ಬಿಟ್ಟುಕೊಡಲು ಧೈರ್ಯ ಮಾಡದಿರಬಹುದು(PC-PTI).

5 / 5

Published On – 6:05 pm, Thu, 13 August 26

Source link

ಅತ್ಯಾಚಾರ ಆರೋಪ, ದೂರು ದಾಖಲಿಸಿದ ನಟಿಯ ಸಹೋದರಿ – Kannada News | Actress Sister: Blackmail Complaint Filed Against Raghavendra in Bengaluru

ಸ್ಯಾಂಡಲ್​​ವುಡ್ ನಟಿಯ (Sandalwood actress) ಸಹೋದರಿಯೊಬ್ಬರು ಅತ್ಯಾಚಾರ ಆರೋಪ ಮಾಡಿದ್ದು, ವ್ಯಕ್ತಿಯೊಬ್ಬನ ಮೇಲೆ ದೂರು ದಾಖಲಿಸಿದ್ದಾರೆ. ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ದೂರಿನ ಆಧಾರದ ಮೇಲೆ ರಾಘವೇಂದ್ರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ತಮ್ಮ ಇಚ್ಛೆಗೆ ವಿರುದ್ಧವಾಗಿ ತಮ್ಮೊಟ್ಟಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆಂದು ನಟಿಯ ಸಹೋದರಿ ಆರೋಪ ಮಾಡಿದ್ದಾರೆ.

ನಟಿಯ ಸಹೋದರಿ ನೀಡಿರುವ ದೂರಿನ ಅನ್ವಯ ಆಕೆ ಮತ್ತು ಬಂಧಿತ ರಾಘವೇಂದ್ರ ಇಬ್ಬರೂ ಒಂದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರಂತೆ. ಆ ವೇಳೆ ಪರಸ್ಪರ ಪರಿಚಯವಾಗಿತ್ತು, ಪರಿಚಯ ಸ್ನೇಹಕ್ಕೆ ತಿರುಗಿ, ಬಳಿಕ ಇಬ್ಬರೂ ಪ್ರೀತಿಸಲು ಪ್ರಾರಂಭಿಸಿದ್ದರು. ಈ ವೇಳೆ ರಾಘವೇಂದ್ರ ತಮ್ಮನ್ನು ಮದುವೆಯಾಗುವುದಾಗಿ ನಂಬಿಸಿದ್ದ, ಹಾಗೂ ತಮ್ಮೊಟ್ಟಿಗೆ ದೈಹಿಕ ಸಂಪರ್ಕ ಬೆಳೆಸಿದ್ದ ಎಂದು ನಟಿಯ ಸಹೋದರಿ ಹೇಳಿದ್ದಾರೆ.

ರಾಘವೇಂದ್ರ, ತಮ್ಮ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಸಾಲಗಳನ್ನು ಪಡೆದುಕೊಂಡಿದ್ದ. ಈ ವಿಷಯವಾಗಿ ತಮಗೂ ರಾಘವೇಂದ್ರಗೂ ಜಗಳ ಆಗಿತ್ತು. ಆ ಬಳಿಕ ವಿಚಾರಣೆ ಮಾಡಿದಾಗ ರಾಘವೇಂದ್ರಗೆ ಈಗಾಗಲೇ ಮದುವೆ ಆಗಿರುವುದು ಗೊತ್​ತಾಗಿತ್ತು. ಆದರೆ ರಾಘವೇಂದ್ರ, ಯುವತಿಯ ಖಾಸಗಿ ಚಿತ್ರಗಳನ್ನು ಇರಿಸಿಕೊಂಡು ಬ್ಲ್ಯಾಕ್ ಮೇಲ್ ಮಾಡಿದ್ದ. ಆ ವಿಷಯವನ್ನು ನಟಿಯ ಸಹೋದರಿ ಈ ಮೊದಲೇ ಪೊಲೀಸರಿಗೆ ತಿಳಿಸಿದ್ದರು. ಆಗ ಪೊಲೀಸರು ಕರೆದು ರಾಘವೇಂದ್ರಗೆ ಎಚ್ಚರಿಕೆ ಕೊಟ್ಟು ಕಳಿಸಿದ್ದರು.

ಇದನ್ನೂ ಓದಿ:ಟಾಕ್ಸಿಕ್ ಸಂಬಂಧದ ಕಷ್ಟ ತೆರೆದಿಟ್ಟ ನಟಿ ಅನುಪಮಾ ಪರಮೇಶ್ವರನ್

ಆದರೆ ಇತ್ತೀಚೆಗೆ ರಾಘವೇಂದ್ರ, ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಸಂದೇಶ ಕಳಿಸಿದ್ದ. ಕೈಗೆ ಗಾಯ ಮಾಡಿಕೊಂಡಿರುವುದಾಗಿ ಫೋಟೊಗಳನ್ನು ಕಳಿಸಿದ್ದ. ಕೂಡಲೇ ನಟಿಯ ಸಹೋದರಿ ಸ್ಥಳಕ್ಕೆ ತೆರಳಿದಾಗ, ಆತ ಟೊಮ್ಯಾಟೊ ಕೆಚಪ್ ಬಳಸಿ ಸುಳ್ಳು ಫೋಟೊಗಳನ್ನು ಸೃಷ್ಟಿಸಿ ಯುವತಿಗೆ ಕಳಿಸಿದ್ದ ಎಂದು ಯುವತಿ ದೂರಿನಲ್ಲಿ ಹೇಳಿದ್ದಾರೆ. ಆದರೆ ತಾನು ಅಲ್ಲಿಗೆ ಹೋದಾಗ ಮತ್ತೆ ಆಕೆಯ ಖಾಸಗಿ ಫೋಟೊಗಳನ್ನು ತೋರಿಸಿ ಅವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಒಡ್ಡಿ, ಯುವತಿಯ ಇಚ್ಛೆಗೆ ವಿರುದ್ಧವಾಗಿ ಆಕೆಯೊಟ್ಟಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ನಟಿಯ ಸಹೋದರಿಯ ದೂರು ದಾಖಲಿಸಿಕೊಂಡ ಪೊಲೀಸರು ರಾಘವೇಂದ್ರನ ಮೇಲೆ ಅತ್ಯಾಚಾರ, ಬ್ಲಾಕ್​​ಮೇಲ್, ಬೆದರಿಕೆ ಅಡಿಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಭಾರತೀಯ ರಾಜಕಾರಣಿಗಳು ಹೆಚ್ಚಾಗಿ ಬಿಳಿ ಬಣ್ಣದ ಬಟ್ಟೆಯನ್ನೇ ಧರಿಸುವುದೇಕೆ? – Kannada News | Reason behind Indian politicians wear white clothes?

ಭಾರತೀಯ ರಾಜಕೀಯ ನಾಯಕರು Image Credit source: Getty Images

ನಮ್ಮ ಭಾರತವು ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ರಾಷ್ಟ್ರವಾಗಿದೆ. ಇಲ್ಲಿ ಸ್ಥಳದಿಂದ ಸ್ಥಳಕ್ಕೆ ಆಹಾರ ಪದ್ಧತಿ, ಭಾಷೆ, ಆಚಾರ ವಿಚಾರ ಪ್ರತಿಯೊಂದರಲ್ಲೂ ಸಾಕಷ್ಟು ಭಿನ್ನತೆಗಳಿರುತ್ತವೆ. ಆದರೆ ರಾಜಕಾರಣಿಗಳ ಉಡುಗೆಯಲ್ಲಿ ಮಾತ್ರ ಯಾವುದೇ ಬದಲಾವಣೆಗಳಿಲ್ಲ. ಹಳ್ಳಿಯಿಂದ ದಿಲ್ಲಿಯವರೆಗೆ ಪ್ರತಿಯೊಬ್ಬ ರಾಜಕಾರಣಿಗಳು ಸಹ ಹೆಚ್ಚಾಗಿ ಬಿಳಿ ಬಣ್ಣದ ಉಡುಗೆಯನ್ನೇ (white clothes) ತೊಡುತ್ತಾರೆ. ಬಹುತೇಕ ರಾಜಕಾರಣಿಗಳು  ಬಿಳಿ ಬಣ್ಣದ ಕುರ್ತಾ-ಪೈಜಾಮ, ಧೋತಿ ಅಥವಾ ಲುಂಗಿ, ಪ್ಯಾಂಟ್‌ ಶರ್ಟ್‌  ಧರಿಸುತ್ತಾರೆ. ಇತರ ದೇಶಗಳ ರಾಜಕಾರಣಿಗಳು  ಕಪ್ಪು ಸೂಟ್ ಮತ್ತು ಬೂಟುಗಳಲ್ಲಿ ಕಾಣಿಸಿಕೊಂಡರೆ ಭಾರತೀಯ ರಾಜಕಾರಣಿಗಳು ಮಾತ್ರ ಬಿಳಿ ಬಣ್ಣದ ಉಡುಗೆಯನ್ನೇ ಧರಿಸುವುದೇಕೆ ಎಂಬುದನ್ನು ಎಂದಾದರೂ ಯೋಚಿಸಿದ್ದೀರಾ? ಇದರ ಹಿಂದೆಯೂ ಒಂದು ಕಾರಣವಿದೆಯಂತೆ, ಅದೇನಂಬುದನ್ನು ನೋಡೋಣ ಬನ್ನಿ.

ಇದೇ ಕಾರಣಕ್ಕಾಗಿ ಭಾರತೀಯ ರಾಜಕಾರಣಿಗಳು ಬಿಳಿ ಬಟ್ಟೆಗಳನ್ನು ಧರಿಸುವುದು:

ಈ ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸುವ ಸಂಪ್ರದಾಯ ಸ್ವಾತಂತ್ರ್ಯ ಹೋರಾಟ ಯುಗದ ನಾಯಕರಿಂದ ಪ್ರಾರಂಭವಾಯಿತು. ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ, ಮಹಾತ್ಮ ಗಾಂಧಿಜೀ ಸ್ವದೇಶಿ ಉತ್ಪನ್ನಗಳ ಬಳಕೆಗೆ ಘೋಷಣೆಯನ್ನು ನೀಡಿದರು. ನೂಲುವ ಚಕ್ರದ ಮೇಲೆ ಖಾದಿ ಬಟ್ಟೆಗಳನ್ನು ತಯಾರಿಸಿ ಅದನ್ನೇ ಧರಿಸಲು ತಮ್ಮ ದೇಶವಾಸಿಗಳನ್ನು ಪ್ರೋತ್ಸಾಹಿಸಿದರು. ಇವರ ಕರೆಗೆ ಓಗೊಟ್ಟ ಜನರು ವಿದೇಶಿ ಉತ್ಪನ್ನಗಳನ್ನು ಸಂಗ್ರಹಿಸಿ ದೊಡ್ಡ ಪ್ರಮಾಣದಲ್ಲಿ ಸುಟ್ಟು ಹಾಕಿದರು. ಖಾದಿಯಿಂದ ತಯಾರಿಸಿದ ಬಟ್ಟೆಗಳು ಹೆಚ್ಚಾಗಿ ಬಿಳಿ ಬಣ್ಣದ್ದಾಗಿದ್ದವು. ಆ ಸಮಯದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಂದ ಹಿಡಿದು ಜನಸಾಮಾನ್ಯರವರೆಗೆ ಎಲ್ಲರೂ ಖಾದಿ ಬಟ್ಟೆಳನ್ನೇ ಧರಿಸಲು ಆರಂಭಿಸಿದರು. ಹೌದು ಆ ಸಮಯದಲ್ಲಿ, ಸ್ವಾತಂತ್ರ್ಯ ಹೋರಾಟಗಾರರು, ನಾಯಕರು ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಎಲ್ಲಾ ಭಾರತೀಯರು ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಲು ಪ್ರಾರಂಭಿಸಿದರು. ಮತ್ತು ಕಾಲಾನಂತರದಲ್ಲಿ, ಈ ಬಣ್ಣವು ನಾಯಕರ ಗುರುತಾಯಿತು.  ಕ್ರಮೇಣ ಈ ಬಣ್ಣದ ಉಡುಗೆ ರಾಜಕಾರಣಿಗಳ ವಿಶಿಷ್ಟ ಲಕ್ಷಣವಾಯಿತು. ಅಂದಿನಿಂದ ಇಂದಿನವರೆಗೆ, ಭಾರತೀಯ ರಾಜಕಾರಣಿಗಳು ಹೆಚ್ಚಾಗಿ ಬಿಳಿ ಬಟ್ಟೆಗಳನ್ನೇ ಧರಿಸುತ್ತಿದ್ದಾರೆ.

ಇದನ್ನೂ ಓದಿ: ಭಾರತದಂತೆಯೇ ಆಗಸ್ಟ್‌ 15 ರಂದು ಸ್ವಾತಂತ್ರ್ಯ ದಿನವನ್ನು ಆಚರಿಸುವ ದೇಶಗಳಿವು

ಬಿಳಿ ಬಟ್ಟೆಗಳನ್ನು ಧರಿಸುವುದರ ಹಿಂದಿನ ಇತರ ಕಾರಣಗಳು:

ಬಣ್ಣಗಳು ಜೀವನಕ್ಕೆ ಸೌಂದರ್ಯವನ್ನು ತರುವುದಲ್ಲದೆ, ವ್ಯಕ್ತಿಯ ಮೇಲೆ ಆಳವಾದ ಪರಿಣಾಮ ಬೀರುತ್ತವೆ. ಪ್ರತಿಯೊಂದು ಬಣ್ಣವು ಒಂದು ನಿರ್ದಿಷ್ಟ ಗುಣದೊಂದಿಗೆ ಸಂಬಂಧ ಹೊಂದಿದೆ. ಬಿಳಿ ಬಣ್ಣವನ್ನು ಶಾಂತಿ, ಶುದ್ಧತೆ ಮತ್ತು ಕಲಿಕೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ.  ಅಲ್ಲದೆ ಬಿಳಿ ಬಣ್ಣವನ್ನು ಸತ್ಯ ಮತ್ತು ಅಹಿಂಸೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಬಣ್ಣದ ಬಟ್ಟೆ ಧರಿಸುವುದರಿಂದ ಸರಳತೆ ಹಾಗೂ ನಾಯಕತ್ವದ ಭಾವನೆಯನ್ನು ಮೂಡಿಸುತ್ತದೆ. ಈ ಬಣ್ಣ ಎಲ್ಲರೂ ಸಮಾನರು ಎಂಬ ಭಾವನೆಯನ್ನು ಮೂಡಿಸುತ್ತದೆ. ಈ ಕಾರಣಕ್ಕಾಗಿಯೇ ಭಾರತದ ರಾಜಕೀಯ ನಾಯಕರು ನಾಯಕರು ಮತ್ತು ಸಾಮಾಜಿಕ ಕಾರ್ಯಕರ್ತರು ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸುವುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದಲ್ಲಿ ಬಹಳ ಹೆಚ್ಚಾಗುತ್ತಿವೆ ಎಲೆಕ್ಟ್ರಿಕ್ ಸ್ಕೂಟರ್, ಬೈಕುಗಳು; ರಾಜ್ಯದ ಇವಿ ನೀತಿಗಳೇ ಇದಕ್ಕೆ ಕಾರಣವಾ? – Kannada News | Karnataka’s EV Policies helps changing the mobility scenario of the state

ಎಲೆಕ್ಟ್ರಿಕ್ ದ್ವಿಚಕ್ರ ವಾಹನImage Credit source: Getty Images

ಕರ್ನಾಟಕವು ದೇಶದಲ್ಲೇ ಎಲೆಕ್ಟ್ರಿಕ್ ವಾಹನ (EV) ಸ್ಟಾರ್ಟ್‌ಅಪ್‌ಗಳು ಮತ್ತು ಬೃಹತ್ ವಾಹನ ತಯಾರಕರ ಪ್ರಮುಖ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮಿದೆ. ಪರಿಸರ ಸ್ನೇಹಿ ಸಂಚಾರ ವ್ಯವಸ್ಥೆಯತ್ತ (Cleaner Mobility) ಭಾರತ ಮಾಡುತ್ತಿರುವ ಪಯಣದಲ್ಲಿ ಕರ್ನಾಟಕ ಪ್ರಮುಖ ಪಾತ್ರ ವಹಿಸುತ್ತಿದೆ.

ಈ ಬದಲಾವಣೆ ಈಗ ರಾಜ್ಯದ ರಸ್ತೆಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಮಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಇಂಧನ ಬೆಲೆ ಏರಿಕೆ, ಸಣ್ಣ ಅಂತರದ ನಗರ ಪ್ರಯಾಣ ಹಾಗೂ ಸರ್ಕಾರದ ಪ್ರೋತ್ಸಾಹಕಾರಿ ನೀತಿಗಳು ಜನರು ಪೆಟ್ರೋಲ್ ಸ್ಕೂಟರ್‌ಗಳ ಬದಲು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಆಯ್ಕೆ ಮಾಡಲು ಪ್ರಮುಖ ಕಾರಣಗಳಾಗಿವೆ.

ಕರ್ನಾಟಕದ ಇವಿ ನೀತಿಯ ಪ್ರಮುಖ ಗುರಿಗಳು

ರಾಜ್ಯ ಸರ್ಕಾರದ ಹೊಸ ‘ಕ್ಲೀನ್ ಮೊಬಿಲಿಟಿ ಪಾಲಿಸಿ 2025–2030’ ಮೂಲಕ ಕೆಳಗಿನ ಪ್ರಮುಖ ಗುರಿಗಳನ್ನು ಹಮ್ಮಿಕೊಳ್ಳಲಾಗಿದೆ:

  • ಹೂಡಿಕೆ ಮತ್ತು ಉದ್ಯೋಗ: ₹50,000 ಕೋಟಿ ಹೂಡಿಕೆ ಆಕರ್ಷಿಸುವುದು ಮತ್ತು 1 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವುದು.
  • ಚಾರ್ಜಿಂಗ್ ಮೂಲಸೌಕರ್ಯ: ರಾಜ್ಯದಲ್ಲಿ ಹೊಸದಾಗಿ 2,600 ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುವುದು ಹಾಗೂ ಪ್ರಮುಖ ಹೆದ್ದಾರಿಗಳಲ್ಲಿ ಪ್ರತಿ 50 ಕಿ.ಮೀ ಗೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸುವುದು.
  • ಕ್ಲೀನ್ ಮೊಬಿಲಿಟಿ ಕ್ಲಸ್ಟರ್‌ಗಳು: ಗೌರಿಬಿದನೂರು, ಧಾರವಾಡ ಮತ್ತು ಹರೋಹಳ್ಳಿ ಪ್ರದೇಶಗಳಲ್ಲಿ ನೂತನ ಇವಿ ಕ್ಲಸ್ಟರ್‌ಗಳನ್ನು ಅಭಿವೃದ್ಧಿಪಡಿಸುವುದು.
  • ಪ್ರೋತ್ಸಾಹಧನ ಮತ್ತು ಸಬ್ಸಿಡಿ: ಇವಿ ನೋಂದಣಿ ಶುಲ್ಕ ವಿನಾಯಿತಿ, ರೋಡ್ ಟ್ಯಾಕ್ಸ್ ವಿನಾಯಿತಿ ಮತ್ತು PM E-DRIVE ಯೋಜನೆಯಡಿ ಪ್ರೋತ್ಸಾಹ ಒದಗಿಸುವುದು.

ಇದನ್ನೂ ಓದಿ: ಸ್ಮಾಲ್ ಫೈನಾನ್ಸ್ ಬ್ಯಾಂಕ್ vs ಕಾರ್ಪೊರೇಟ್ ಎಫ್​ಡಿ, ಎರಡರಲ್ಲೂ ಶೇ. 8ಕ್ಕಿಂತ ಹೆಚ್ಚು ಬಡ್ಡಿ; ಯಾವುದರಲ್ಲಿ ಹೂಡಿಕೆ ಸೂಕ್ತ?

ಖರೀದಿದಾರರು ಗಮನಿಸಬೇಕಾದ ಪ್ರಮುಖ ಅಂಶಗಳು

ದೈನಂದಿನ ಪ್ರಯಾಣ: ಬೆಂಗಳೂರಿನಂತಹ ನಗರಗಳಲ್ಲಿ ಸರಾಸರಿ ದೈನಂದಿನ ಪ್ರಯಾಣ 9–10 ಕಿ.ಮೀ ಮಾತ್ರ ಇರುವುದರಿಂದ, ಇವಿ ಸ್ಕೂಟರ್‌ಗಳು ನಗರದ ಸಂಚಾರ ದಟ್ಟಣೆಗೆ ಅತ್ಯಂತ ಸೂಕ್ತವಾಗಿವೆ.

ಬ್ಯಾಟರಿ ವಾರಂಟಿ ಮತ್ತು ವೆಚ್ಚ: ಬಹುತೇಕ ತಯಾರಕರು 3 ರಿಂದ 8 ವರ್ಷಗಳ ಬ್ಯಾಟರಿ ವಾರಂಟಿ ನೀಡುತ್ತಾರೆ. ಇವಿ ವಾಹನಗಳಲ್ಲಿ ಬ್ಯಾಟರಿಯೇ ಮುಖ್ಯ ವೆಚ್ಚವಾಗಿರುವುದರಿಂದ ವಾರಂಟಿ ನಿಯಮಗಳು ಮತ್ತು ಬದಲಿ ವೆಚ್ಚಗಳನ್ನು ಗಮನಿಸುವುದು ಅಗತ್ಯ.

ಇನ್ಶೂರೆನ್ಸ್ ಮತ್ತು ರಕ್ಷಣೆ: ಬ್ಯಾಟರಿ ಹಾನಿ, ಶಾರ್ಟ್ ಸರ್ಕ್ಯೂಟ್ ಮತ್ತು ಚಾರ್ಜಿಂಗ್ ಉಪಕರಣಗಳ ದೋಷಗಳಿಂದ ಉಂಟಾಗುವ ನಷ್ಟವನ್ನು ಸರಿದೂಗಿಸಲು ಸೂಕ್ತ ‘ಎಲೆಕ್ಟ್ರಿಕ್ ಬೈಕ್ ಇನ್ಶೂರೆನ್ಸ್’ (Electric Bike Insurance) ಹೊಂದುವುದು ಕಡ್ಡಾಯ ಮತ್ತು ಪ್ರಯೋಜನಕಾರಿ. ಥರ್ಡ್ ಪಾರ್ಟಿ ಇನ್ಷೂರೆನ್ಸ್ ಇಲ್ಲದ ವಾಹನಗಳಿಗೆ ನೊಂದಣಿ ಕೂಡ ಸಿಗುವುದಿಲ್ಲ.

ಎಲೆಕ್ಟ್ರಿಕ್ ಗಾಡಿಗೆ ಬದಲಾವಣೆ ಮಾಡುವ ಮುನ್ನ ಏನು ಲೆಕ್ಕ ಹಾಕಬೇಕು?

ಎಲೆಕ್ಟ್ರಿಕ್ ಟು-ವೀಲರ್ ಖರೀದಿಸುವ ಮೊದಲು ಈ ಕೆಳಗಿನ ಅಂಶಗಳನ್ನು ಗಮನಿಸಿ:

  • ದೈನಂದಿನ ಪ್ರಯಾಣದ ದೂರ ಮತ್ತು ವಾಹನದ ಬ್ಯಾಟರಿ ರೇಂಜ್ ಎಷ್ಟಿದೆ ಹೋಲಿಸಿ
  • ಮನೆ ಅಥವಾ ಕಚೇರಿಯಲ್ಲಿ ಚಾರ್ಜಿಂಗ್ ಸೌಲಭ್ಯ ಇದೆಯಾ?
  • ಇಂಧನ ಮತ್ತು ಮೈಂಟೆನೆನ್ಸ್ ವೆಚ್ಚದಲ್ಲಿ ಎಷ್ಟು ಉಳಿತಾಯ ಆಗಬಹುದು?
  • ಬ್ಯಾಟರಿ ವಾರಂಟಿ
  • ಅಧಿಕೃತ ಸರ್ವಿಸ್ ಬೆಂಬಲ ಲಭ್ಯತೆ ಹೇಗಿದೆ?
  • ಬ್ಯಾಟರಿ ಮತ್ತು ಎಲೆಕ್ಟ್ರಿಕಲ್ ಕಾಂಪೋನೆಂಟ್‌ಗಳಿಗೆ ಸೂಕ್ತ ಟು-ವೀಲರ್ ಇನ್ಶೂರೆನ್ಸ್ ಕವರ್ (Two-wheeler Insurance)

ಇದನ್ನೂ ಓದಿ: ಸರ್ಕಾರದ ಈ ಸೌಲಭ್ಯ ಪಡೆಯಲು ಹಿರಿಯ ನಾಗರಿಕರ ಕಾರ್ಡ್ ಅಗತ್ಯ, ಹೀಗೆ ಅರ್ಜಿ ಸಲ್ಲಿಸಿ

ದೀರ್ಘಕಾಲೀನ ಓನರ್‌ಶಿಪ್ ವೆಚ್ಚಗಳನ್ನು ಮೌಲ್ಯಮಾಪನ ಮಾಡುವಾಗ, ವಿವಿಧ ಟು-ವೀಲರ್ ಇನ್ಶೂರೆನ್ಸ್ ಯೋಜನೆಗಳನ್ನು ಹೋಲಿಕೆ ಮಾಡುವುದು ಸಹ ಮುಖ್ಯವಾಗಿದೆ. ಇದರಿಂದ ಬ್ಯಾಟರಿ ಸಂಬಂಧಿತ ಹಾನಿ, ಎಲೆಕ್ಟ್ರಿಕಲ್ ಕಾಂಪೋನೆಂಟ್‌ಗಳು ಮತ್ತು ರಿಪೇರಿ ವೆಚ್ಚಗಳಿಗೆ ಯಾವ ರೀತಿಯ ಕವರ್ ಲಭ್ಯವಿದೆ ಎಂಬುದನ್ನು ಖರೀದಿದಾರರು ಅರ್ಥಮಾಡಿಕೊಳ್ಳಬಹುದು.

ಕರ್ನಾಟಕ ಇವಿ ಮಾರುಕಟ್ಟೆಯ ಮುಂದಿನ ಹಂತ

ರಾಜ್ಯ ಸರ್ಕಾರದ ಅಂಕಿಅಂಶಗಳ ಪ್ರಕಾರ, FY21 ರಿಂದ FY26 ರ ನಡುವೆ ಇವಿ ಮಾರಾಟವು ಸುಮಾರು 17 ಪಟ್ಟು ಹೆಚ್ಚಾಗಿದೆ ಮತ್ತು ರಾಜ್ಯದಲ್ಲಿ ಇವಿ ಬಳಕೆ ಪ್ರಮಾಣ 13.65% ತಲುಪಿದೆ (ರಾಷ್ಟ್ರೀಯ ಸರಾಸರಿ 9.12%). ಪ್ರಸ್ತುತ ಕರ್ನಾಟಕದಲ್ಲಿ 8,600 ಕ್ಕೂ ಹೆಚ್ಚು ಚಾರ್ಜಿಂಗ್ ಸ್ಟೇಷನ್‌ಗಳಿದ್ದು, ದೇಶದಲ್ಲೇ ಅತ್ಯಧಿಕ ಸಂಖ್ಯೆಯನ್ನು ಹೊಂದಿದೆ.

ಮುಂದಿನ ದಿನಗಳಲ್ಲಿ ಸಣ್ಣ ನಗರಗಳಿಗೂ ಚಾರ್ಜಿಂಗ್ ಜಾಲ ವಿಸ್ತರಿಸುವುದು ಮತ್ತು ಬ್ಯಾಟರಿ ವೆಚ್ಚಗಳು ಕಡಿಮೆಯಾಗುವುದು ಈ ವಲಯದ ಮತ್ತಷ್ಟು ಬೆಳವಣಿಗೆಗೆ ಕಾರಣವಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version