ಮದುವೆ ಮಂಟಪಕ್ಕೆ ನುಗ್ಗಿದ ಪ್ರವಾಹ ನೀರು: ವಧುವನ್ನು ತೋಳಿನಲ್ಲಿ ಎತ್ತಿಕೊಂಡು ಹೊರಟ ವರ – Kannada News | Flooded Indore Wedding: Groom Carries Bride, Viral Monsoon Romance

ಇಂದೋರ್, ಜುಲೈ 08: ಮದುವೆ(Marriage)ಯ ದಿನ ಮಳೆ ಬಂದರೆ ಸಾಮಾನ್ಯವಾಗಿ ಎಲ್ಲರೂ ಬೇಸರ ಮಾಡಿಕೊಳ್ಳುತ್ತಾರೆ. ಆದರೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ವಿವಾಹವೊಂದರಲ್ಲಿ, ಭಾರೀ ಮಳೆಯಿಂದಾಗಿ ಇಡೀ ಮಂಟಪವೇ ಜಲಾವೃತಗೊಂಡರೂ ವಧು-ವರರು ಬೇಸರ ಮಾಡಿಕೊಳ್ಳದೆ, ಆ ಕ್ಷಣವನ್ನು ಸ್ಮರಣೀಯವಾಗಿಸಿಕೊಂಡಿದ್ದಾರೆ. ಸದ್ಯ ಇದಕ್ಕೆ ಸಂಬಂಧಿಸಿದ ಕ್ಯೂಟ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಮಂಟಪದಲ್ಲಿ 2 ಅಡಿ ನೀರು
ವರದಿಗಳ ಪ್ರಕಾರ, ಇಂದೋರ್‌ನ ಸಿಎಟಿ ರಸ್ತೆ ಪ್ರದೇಶದ ಮದುವೆ ಮಂಟಪವೊಂದರಲ್ಲಿ ‘ಪೂರ್ವ’ ಮತ್ತು ‘ವೈಭವ್’ ಎಂಬುವವರ ವಿವಾಹ ನಿಗದಿಯಾಗಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮದುವೆ ಸ್ಥಳದೊಳಗೆ ಸುಮಾರು 1.5 ರಿಂದ 2 ಅಡಿಗಳಷ್ಟು ನೀರು ನಿಂತಿತ್ತು. ಮಂಟಪದ ಸುತ್ತಲೂ ನೀರು ತುಂಬಿ ಅತಿಥಿಗಳು ಧರಿಸಿದ್ದ ಶೂ ಮತ್ತು ಚಪ್ಪಲಿಗಳು ನೀರಿನಲ್ಲಿ ತೇಲುತ್ತಿದ್ದವು.

ವಧುವನ್ನು ಎತ್ತಿಕೊಂಡ ನಡೆದ ವರ
ಪರಿಸ್ಥಿತಿ ಹೀಗಿದ್ದರೂ ವಧು-ವರರು ಧೃತಿಗೆಡಲಿಲ್ಲ. ಮದುವೆಯ ರೇಷ್ಮೆ ಸೀರೆ ಹಾಗೂ ಒಡವೆಗಳನ್ನು ಧರಿಸಿದ್ದ ವಧು ಪೂರ್ವ ಅವರಿಗೆ ನೀರಿನಲ್ಲಿ ನಡೆಯಲು ಕಷ್ಟವಾಗುತ್ತಿತ್ತು. ಇದನ್ನು ಕಂಡ ವರ ವೈಭವ್, ವಧುವನ್ನು ತನ್ನ ತೋಳುಗಳಲ್ಲಿ ಎತ್ತಿಕೊಂಡರು. ಪ್ರವಾಹದಂತೆ ತುಂಬಿದ್ದ ನೀರಿನ ನಡುವೆಯೇ ಆಕೆಯನ್ನು ಎತ್ತಿಕೊಂಡು ಊಟದ ಹಾಲ್‌ನ ಕಡೆಗೆ ಹೆಜ್ಜೆ ಹಾಕಿದರು.

ಮತ್ತಷ್ಟು ಓದಿ: Chanakya Niti: ಇಂತವರನ್ನು ಮದುವೆಯಾದರೆ ಜೀವನ ತುಂಬಾನೇ ಕಷ್ಟ ಎಂದಿದ್ದಾರೆ ಚಾಣಕ್ಯ

ಅಷ್ಟೇ ಅಲ್ಲ, ದಾರಿಯ ಮಧ್ಯೆ ವಧುವನ್ನು ನೀರಿನಲ್ಲಿ ಬೀಳಿಸುವಂತೆ ತಮಾಷೆಯಾಗಿ ನಟಿಸಿ ಆಕೆ ಜೋರಾಗಿ ನಗುವಂತೆ ಮಾಡಿದರು. ವರನ ಈ ಕ್ಯೂಟ್ ಆಟಕ್ಕೆ ನೆರೆದಿದ್ದ ಅತಿಥಿಗಳು ಜೋರಾಗಿ ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು.

ವಿಡಿಯೋ

ಮಂಟಪ ಜಲಾವೃತಗೊಂಡಿದ್ದರೂ, ಅತಿಥಿಗಳು ನೀರಿನಲ್ಲೇ ನಿಂತು ಮದುವೆ ಸಮಾರಂಭವನ್ನು ಕಣ್ಣುಂಬಿಕೊಂಡರು. ದಂಪತಿ ಯಾವುದೇ ಅಡೆತಡೆಯಿಲ್ಲದೆ ಎಲ್ಲಾ ಸಾಂಪ್ರದಾಯಿಕ ವಿಧಿವಿಧಾನಗಳನ್ನು ನಗುತ್ತಲೇ ಪೂರ್ಣಗೊಳಿಸಿದರು. ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋ ನೋಡಿದ ನೆಟ್ಟಿಗರು, ಇದು ನಿಜಕ್ಕೂ ಅತ್ಯಂತ ಸ್ಮರಣೀಯ ಹಾಗೂ ರೋಮ್ಯಾಂಟಿಕ್ ಮಾನ್ಸೂನ್ ವಿವಾಹ ಎಂದು ಶ್ಲಾಘಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಶತಕೋಟಿ ಕ್ಲಬ್ ಸೇರಿದ ತಮಿಳು ನಟ ಸೂರ್ಯ; 100 ಕೋಟಿ ರೂಪಾಯಿ ಸಂಭಾವನೆ – Kannada News | Suriya Joins 100 Crore Club After Karuppu Blockbuster: Kollywood New Box Office King

ತಮಿಳು ಚಿತ್ರರಂಗದ ಸ್ಟಾರ್ ನಟ ಸೂರ್ಯ ಅವರ ಮಾರುಕಟ್ಟೆ ಮೌಲ್ಯ ಈಗ ಗಗನಕ್ಕೇರಿದೆ. ಇತ್ತೀಚಿನ ವರ್ಷಗಳಲ್ಲಿ ಅವರಿಗೆ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಮಟ್ಟದ ದೊಡ್ಡ ಯಶಸ್ಸು ಸಿಕ್ಕಿರಲಿಲ್ಲ. ಸತತ ಸೋಲುಗಳು ಹಾಗೂ ಕೆಲವು ಚಿತ್ರಗಳು ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಿದ್ದರಿಂದ ಅವರ ಮಾರುಕಟ್ಟೆ ಕೊಂಚ ಡಲ್ ಹೊಡೆದಂತಿತ್ತು. ಆದರೆ, ಇದೀಗ ಬಂದಿರುವ ‘ಕರುಪ್ಪು’ ಚಿತ್ರದ ಭರ್ಜರಿ ಯಶಸ್ಸು ಸೂರ್ಯ ಅವರ ಕಂ‌ಬ್ಯಾಕ್‌ಗೆ ಭದ್ರ ಬುನಾದಿ ಹಾಕಿದೆ. ಇದರ ಬೆನ್ನಲ್ಲೇ ನಟ ಸೂರ್ಯ ತಮ್ಮ ಮುಂದಿನ ಸಿನಿಮಾಗಳಿಗಾಗಿ ಬರೋಬ್ಬರಿ 100 ಕೋಟಿ ರೂಪಾಯಿ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರೆ ಎಂದು ವರದಿಯಾಗಿದೆ.

‘ಕರುಪ್ಪು’ ಚಿತ್ರದ ಸಕ್ಸಸ್ ತಂದ ಭಾರಿ ಆರ್ಥಿಕ ಬಲ

ಸಿನಿಮಾ ರಂಗದಲ್ಲಿ ನಟನ ಮಾರುಕಟ್ಟೆ ಮೌಲ್ಯ ನಿರ್ಧಾರವಾಗುವುದೇ ಅವರ ಚಿತ್ರ ಗಳಿಸುವ ಕಲೆಕ್ಷನ್ ಆಧಾರದ ಮೇಲೆ. ಇತ್ತೀಚೆಗೆ ಬಿಡುಗಡೆಯಾದ ಸೂರ್ಯ ನಟನೆಯ ‘ಕರುಪ್ಪು’ ಚಿತ್ರವು ಕೇವಲ ತಮಿಳುನಾಡಿನಲ್ಲಿಯೇ ಬರೋಬ್ಬರಿ 170 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ ಸೂಪರ್ ಹಿಟ್ ಎನಿಸಿಕೊಂಡಿದೆ.
ಈ ಚಿತ್ರದ ದೈತ್ಯ ಯಶಸ್ಸು ಸೂರ್ಯ ಅವರ ಬ್ಯುಸಿನೆಸ್ ವ್ಯಾಲ್ಯೂ ಅನ್ನು ಗಣನೀಯವಾಗಿ ಹೆಚ್ಚಿಸಿದೆ. ಈ ಭರ್ಜರಿ ಸಕ್ಸಸ್ ಕೊಟ್ಟ ಮೈಲೇಜ್‌ನಿಂದಾಗಿ ಸೂರ್ಯ ತಮ್ಮ ಸಂಭಾವನೆಯನ್ನು ಶತಕೋಟಿ ಗಡಿದಾಟಿಸಿದ್ದಾರೆ ಎಂದು ಕಾಲಿವುಡ್ ಅಂಗಳದಲ್ಲಿ ಚರ್ಚೆಯಾಗುತ್ತಿದೆ. ಸಾಮಾನ್ಯವಾಗಿ ಸೂರ್ಯ ಅವರು ತಮ್ಮದೇ ಆದ ಸ್ವಂತ ನಿರ್ಮಾಣ ಸಂಸ್ಥೆಯ (ಟು ಡಿ ಎಂಟರ್ಟೈನ್ಮೆಂಟ್) ಅಡಿಯಲ್ಲಿ ಹೆಚ್ಚು ಸಿನಿಮಾಗಳನ್ನು ಮಾಡುತ್ತಾರೆ. ಆದಾಗ್ಯೂ, ಹೊರಗಿನ ಬ್ಯಾನರ್‌ಗಳಿಗೆ ಅವರು 100 ಕೋಟಿ ರೂ. ಸಂಭಾವನೆ ನಿಗದಿಪಡಿಸಿದ್ದಾರೆ ಎನ್ನಲಾಗಿದೆ.

ರಜನಿ, ವಿಜಯ್ ಲೀಗ್ ಸೇರಿದ ಸೂರ್ಯ

ತಮಿಳು ಚಿತ್ರರಂಗದಲ್ಲಿ ಈಗಾಗಲೇ ತಲೈವಾ ರಜನಿಕಾಂತ್, ಕಮಲ್ ಹಾಸನ್, ಅಜಿತ್ ಕುಮಾರ್ ಮತ್ತು ರಾಜಕೀಯಕ್ಕೆ ಪ್ರವೇಶಿಸಿರುವ ತಮಿಳಗ ವೆಟ್ರಿ ಕಳಗಂ ಪಕ್ಷದ ಅಧ್ಯಕ್ಷ, ನಟ ವಿಜಯ್ (ಇಳಯದಳಪತಿ) ಅವರ ಸಂಭಾವನೆ 100 ಕೋಟಿ ರೂಪಾಯಿಯ ಗಡಿಯನ್ನು ದಾಟಿದೆ. ಸೂರ್ಯ ಅವರಿಗೆ ಈ ಹಿಂದೆ ಸೂಕ್ತ ಯಶಸ್ಸು ಇಲ್ಲದ ಕಾರಣ ಆ ಲೀಗ್ ತಲುಪಲು ಸಾಧ್ಯವಾಗಿರಲಿಲ್ಲ. ಆದರೆ ಈಗ ‘ಕರುಪ್ಪು’ ಚಿತ್ರದ ಸಕ್ಸಸ್ ಸೂರ್ಯ ಅವರನ್ನು ಈ ಘಟಾನುಘಟಿ ನಟರ ಸಾಲಿಗೆ ತಂದು ನಿಲ್ಲಿಸಿದೆ.

ಬ್ಯಾಕ್-ಟು-ಬ್ಯಾಕ್ ಸಿನಿಮಾಗಳು

ಸದ್ಯ ‘ಕರುಪ್ಪು’ ಚಿತ್ರದ ಭರ್ಜರಿ ಯಶಸ್ಸಿನ ಉಮ್ಮಸ್ಸಿನಲ್ಲಿರುವ ಸೂರ್ಯ, ತಮ್ಮ ಮುಂದಿನ ಚಿತ್ರ ‘ವಿಶ್ವನಾಥ್ ಅಂಡ್ ಸನ್ಸ್’ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಖ್ಯಾತ ನಿರ್ದೇಶಕ ವೆಂಕಟ್ ಅಟ್ಲೂರಿ ನಿರ್ದೇಶನದ ಈ ಚಿತ್ರದ ಮೇಲೆ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಗಳಿವೆ.

ಇದರ ಬೆನ್ನಲ್ಲೇ ರೋಮಾಂಚಕ ಚಿತ್ರಗಳ ಸರಮಾಲೆಯೇ ಸೂರ್ಯ ಅವರ ಬತ್ತಳಿಕೆಯಲ್ಲಿದೆ. ಸೂಪರ್ ಹಿಟ್ ‘ಆವೇಶಂ’ ಖ್ಯಾತಿಯ ಜಿತು ಮಾಧವನ್ ನಿರ್ದೇಶನದಲ್ಲಿ ಸೂರ್ಯ ಅವರ 47ನೇ ಸಿನಿಮಾ (ಸೂರ್ಯ-47) ಮೂಡಿಬರಲಿದೆ. ಅದಾದ ನಂತರ, ‘ಜೈ ಭೀಮ್’ ನಂತಹ ಸಮಾಜಮುಖಿ ಕ್ರಾಂತಿಕಾರಿ ಸಿನಿಮಾ ನೀಡಿದ್ದ ಖ್ಯಾತ ನಿರ್ದೇಶಕ ಟಿ.ಎಸ್. ಜ್ಞಾನವೇಲ್ ಅವರೊಂದಿಗೆ ಸೂರ್ಯ ತಮ್ಮ 48ನೇ ಚಿತ್ರಕ್ಕಾಗಿ ಕೈಜೋಡಿಸಲಿದ್ದಾರೆ. ವಿಶೇಷವೆಂದರೆ, ಈ ಮೆಗಾ ಪ್ರಾಜೆಕ್ಟ್ ಅನ್ನು ಕನ್ನಡದ ಹೆಮ್ಮೆಯ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್ ನಿರ್ಮಿಸುತ್ತಿರುವುದು ಚಿತ್ರದ ಮೇಲಿನ ಕುತೂಹಲವನ್ನು ದುಪ್ಪಟ್ಟುಗೊಳಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಟಿ20 ಇತಿಹಾಸದಲ್ಲೇ ಹೀನಾಯವಾಗಿ ಸೋತ ಟೀಮ್ ಇಂಡಿಯಾ – Kannada News | England hand Team India their biggest defeat in T20I

ಸೋಲು… ಹೀನಾಯ ಸೋಲು… ಟೀಮ್ ಇಂಡಿಯಾ ಟಿ20 ಕ್ರಿಕೆಟ್​ ಇತಿಹಾಸದಲ್ಲೇ ಅತ್ಯಂತ ಹೀನಾಯ ಸೋಲು ಕಂಡಿದೆ. ಅದು ಸಹ ಬರೋಬ್ಬರಿ 125 ರನ್​ಗಳ ಅಂತರದಿಂದ.  ಜುಲೈ 7, 2026 ರಂದು ನಾಟಿಂಗ್​ಹ್ಯಾಮ್​ನ ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಭಾರತ ತಂಡವು ಬರೋಬ್ಬರಿ 125 ರನ್‌ಗಳ ಭಾರಿ ಅಂತರದ ಹೀನಾಯ ಸೋಲು ಅನುಭವಿಸಿದೆ. ರನ್‌ಗಳ ಲೆಕ್ಕಾಚಾರದಲ್ಲಿ ಇದು ಟಿ20 ಕ್ರಿಕೆಟ್ ಇತಿಹಾಸದಲ್ಲೇ ಭಾರತ ಅನುಭವಿಸಿದ ಅತಿ ದೊಡ್ಡ ಸೋಲಾಗಿದೆ.

ಇಂಗ್ಲೆಂಡ್ ಬ್ಯಾಟರ್‌ಗಳ ಅಬ್ಬರ:

ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ  ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಭಾರತೀಯ ಬೌಲರ್‌ಗಳನ್ನು ಮನಬಂದಂತೆ ದಂಡಿಸಿತು. ಈ ಮೂಲಕ ಆತಿಥೇಯ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 201 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

ಕೇವಲ 76 ರನ್‌ಗಳಿಗೆ ಆಲೌಟ್:

202 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಇಂಗ್ಲೆಂಡ್ ವೇಗಿಗಳ ಮಾರಕ ದಾಳಿಗೆ ತತ್ತರಿಸಿದ ಭಾರತೀಯ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ನಿಲ್ಲುವ ಧೈರ್ಯವನ್ನೇ ತೋರಲಿಲ್ಲ. ಹಿರಿಯ ಆಟಗಾರರಿಂದ ಹಿಡಿದು ಯುವ ಆಟಗಾರರವರೆಗೆ ಎಲ್ಲರೂ ಪೆವಿಲಿಯನ್ ಪೆರೇಡ್ ನಡೆಸಿದರು.

ಅಂತಿಮವಾಗಿ ಭಾರತ ತಂಡ ಕೇವಲ 76 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಭಾರೀ ಮುಖಭಂಗ ಅನುಭವಿಸಿತು. ಇದು ಟಿ20 ಕ್ರಿಕೆಟ್‌ನಲ್ಲಿ ಭಾರತ ದಾಖಲಿಸಿದ ಎರಡನೇ ಅತ್ಯಂತ ಕನಿಷ್ಠ ಮೊತ್ತವಾಗಿದೆ.

ಟಿ20 ಇತಿಹಾಸದಲ್ಲಿ ಭಾರತದ ಅತಿ ದೊಡ್ಡ ಸೋಲುಗಳು (ರನ್‌ಗಳ ಆಧಾರದಲ್ಲಿ):

    1. vs ಇಂಗ್ಲೆಂಡ್ (2026): 125 ರನ್‌ಗಳ ಸೋಲು (ನಾಟಿಂಗ್‌ಹ್ಯಾಮ್)
    2. vs ನ್ಯೂಝಿಲೆಂಡ್ (2019): 80 ರನ್‌ಗಳ ಸೋಲು (ವೆಲ್ಲಿಂಗ್ಟನ್)
    3.  vs ಸೌತ್ ಆಫ್ರಿಕಾ (2026): 76 ರನ್‌ಗಳ ಸೋಲು (ಅಹಮದಾಬಾದ್)

ಗಂಭೀರ್-ಅಯ್ಯರ್ ಜೋಡಿಗೆ ಭಾರಿ ಹಿನ್ನಡೆ:

ಶ್ರೇಯಸ್ ಅಯ್ಯರ್ ನಾಯಕತ್ವ ಹಾಗೂ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಅವರ ಮಾರ್ಗದರ್ಶನದಲ್ಲಿ ಆಡುತ್ತಿರುವ ಭಾರತ ತಂಡಕ್ಕೆ ಈ ಸೋಲು ದೊಡ್ಡ ಆಘಾತ ನೀಡಿದೆ. ಈ ಮುಖಭಂಗದೊಂದಿಗೆ 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 2-0 ಅಂತರದ ಹಿನ್ನಡೆ ಅನುಭವಿಸಿದೆ.  ಇನ್ನು ಈ ಸರಣಿ ಸೋಲನ್ನು ತಪ್ಪಿಸಿಕೊಳ್ಳಬೇಕಾದರೆ ಟೀಮ್ ಇಂಡಿಯಾ ಮುಂದಿನ ಪಂದ್ಯಗಳಲ್ಲಿ ಗೆಲ್ಲುವುದು ಅನಿವಾರ್ಯ.

ಇತ್ತ ಈಗಾಗಲೇ ಎರಡು ಮ್ಯಾಚ್ ಗೆದ್ದಿರುವ ಇಂಗ್ಲೆಂಡ್ ತಂಡವು ಮುಂದಿನ ಪಂದ್ಯದ ಮೂಲಕ ಸರಣಿಯನ್ನು ವಶಪಡಿಸಿಕೊಳ್ಳುವ ಇರಾದೆಯಲ್ಲಿದೆ. ಹೀಗಾಗಿ ಜುಲೈ 9 ರಂದು ನಡೆಯಲಿರುವ ನಾಲ್ಕನೇ ಪಂದ್ಯದಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಬಹುದು.

ಇಂಗ್ಲೆಂಡ್ ಪ್ಲೇಯಿಂಗ್ 11: ಫಿಲ್ ಸಾಲ್ಟ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಹ್ಯಾರಿ ಬ್ರೂಕ್ (ನಾಯಕ), ಜೇಕಬ್ ಬೆಥೆಲ್, ಟಾಮ್ ಬ್ಯಾಂಟನ್, ಸ್ಯಾಮ್ ಕರನ್, ವಿಲ್ ಜಾಕ್ಸ್, ಲಿಯಾಮ್ ಡಾಸನ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಜೋಶ್ ಟಂಗ್.

ಇದನ್ನೂ ಓದಿ: ಕ್ರಿಸ್ಟಿಯಾನೊ ಕಡೆಯಿಂದ ಈಡೇರಲಿದೆಯಾ ರೊನಾಲ್ಡೊ ವಿಶ್ವಕಪ್ ಕನಸು!

ಭಾರತ ಪ್ಲೇಯಿಂಗ್ 11: ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಹರ್ಷಿತ್ ರಾಣಾ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಪ್ರಿನ್ಸ್ ಯಾದವ್, ವರುಣ್ ಚಕ್ರವರ್ತಿ.

Source link

ವಿಶ್ವಕಪ್​ನಲ್ಲಿ ಇನ್ನು 8 ತಂಡಗಳ ಕದನ: ಇಲ್ಲಿದೆ ವೇಳಾಪಟ್ಟಿ – Kannada News | Fifa world cup 2026 quarter final Schedule

ಫಿಫಾ ವಿಶ್ವಕಪ್ 2026ರ ರೌಂಡ್ ಆಫ್ 16 ಪಂದ್ಯಗಳು ಮುಕ್ತಾಯಗೊಂಡಿದ್ದು, ಫುಟ್‌ಬಾಲ್ ಜಗತ್ತಿನ  8 ಬಲಿಷ್ಠ ತಂಡಗಳು ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿವೆ. ಫ್ರಾನ್ಸ್, ಮೊರಾಕೊ, ಸ್ಪೇನ್, ಬೆಲ್ಜಿಯಂ, ನಾರ್ವೆ, ಇಂಗ್ಲೆಂಡ್, ಅರ್ಜೆಂಟೀನಾ ಮತ್ತು ಸ್ವಿಟ್ಜರ್ಲೆಂಡ್ ತಂಡಗಳು ಮುಂದಿನ ಸುತ್ತಿನಲ್ಲಿ ಕಾದಾಡಲಿವೆ. ಈ ರೋಚಕ ಕ್ವಾರ್ಟರ್ ಫೈನಲ್ ಪಂದ್ಯಗಳು ಜುಲೈ 9 ರಿಂದ ಜುಲೈ 11 ರವರೆಗೆ ನಡೆಯಲಿದ್ದು, ಈ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ.

ಕ್ವಾರ್ಟರ್ ಫೈನಲ್ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ:

ಪಂದ್ಯದ ಸಂಖ್ಯೆ ಮುಖಾಮುಖಿ ದಿನಾಂಕ ಮತ್ತು ಸಮಯ  (IST) ಕ್ರೀಡಾಂಗಣ (ಸ್ಥಳ)
ಪಂದ್ಯ 97 ಫ್ರಾನ್ಸ್ vs ಮೊರಾಕೊ ಜುಲೈ 10, ಶುಕ್ರವಾರ – 1:30 AM ಬೋಸ್ಟನ್ ಸ್ಟೇಡಿಯಂ, ಮ್ಯಾಸಚೂಸೆಟ್ಸ್
ಪಂದ್ಯ 98 ಸ್ಪೇನ್ vs ಬೆಲ್ಜಿಯಂ ಜುಲೈ 11, ಶನಿವಾರ –  12:30 AM ಲಾಸ್ ಏಂಜಲೀಸ್ ಸ್ಟೇಡಿಯಂ, ಕ್ಯಾಲಿಫೋರ್ನಿಯಾ
ಪಂದ್ಯ 99 ನಾರ್ವೆ vs ಇಂಗ್ಲೆಂಡ್ ಜುಲೈ 12, ಭಾನುವಾರ –  2:30 AM ಮಿಯಾಮಿ ಸ್ಟೇಡಿಯಂ, ಫ್ಲೋರಿಡಾ
ಪಂದ್ಯ 100 ಅರ್ಜೆಂಟೀನಾ vs ಸ್ವಿಟ್ಜರ್ಲೆಂಡ್ ಜುಲೈ 12, ಭಾನುವಾರ –  6:30 AM ಕಾನ್ಸಾಸ್ ಸಿಟಿ ಸ್ಟೇಡಿಯಂ, ಮಿಸೌರಿ

ಸೆಮಿಫೈನಲ್ ಲೆಕ್ಕಾಚಾರ ಹೇಗಿದೆ?

  • ಸೆಮಿಫೈನಲ್ 1: ಫ್ರಾನ್ಸ್ ಮತ್ತು ಮೊರಾಕೊ ಪಂದ್ಯದ ವಿಜೇತರು, ಸ್ಪೇನ್ ಮತ್ತು ಬೆಲ್ಜಿಯಂ ಪಂದ್ಯದ ವಿಜೇತರನ್ನು ಜುಲೈ 14 ರಂದು ಎದುರಿಸಲಿದ್ದಾರೆ.
  • ಸೆಮಿಫೈನಲ್ 2: ನಾರ್ವೆ ಮತ್ತು ಇಂಗ್ಲೆಂಡ್ ಪಂದ್ಯದ ವಿಜೇತರು, ಲಿಯೋನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ಮತ್ತು ಸ್ವಿಟ್ಜರ್ಲೆಂಡ್ ಪಂದ್ಯದ ವಿಜೇತರನ್ನು ಜುಲೈ 15 ರಂದು ಎದುರಿಸಲಿದ್ದಾರೆ.

40 ತಂಡಗಳು ಔಟ್:

48 ತಂಡಗಳೊಂದಿಗೆ ಶುರುವಾದ ಫಿಫಾ ವಿಶ್ವಕಪ್​ನಲ್ಲಿ ಈಗ ಉಳಿದಿರುವುದು 8 ತಂಡಗಳು ಮಾತ್ರ. ಇನ್ನುಳಿದ ನಲ್ವತ್ತು ಟೀಮ್​ಗಳ ವಿಶ್ವಕಪ್ ಕನಸು ಕಮರಿದೆ. ಹೀಗೆ ಪ್ರತಿ ಹಂತದಲ್ಲಿ ಹೊರಬಿದ್ದ ತಂಡಗಳ ಪಟ್ಟಿ ಈ ಕೆಳಗಿನಂತಿದೆ.

  • ರೌಂಡ್ ಆಫ್ 16 ಹಂತದಲ್ಲಿ ಹೊರಬಿದ್ದ ತಂಡಗಳು (8 ತಂಡಗಳು: ಕೆನಡಾ, ಪರಾಗ್ವೆ, ಬ್ರೆಝಿಲ್, ಮೆಕ್ಸಿಕೋ, ಪೋರ್ಚುಗಲ್, ಅಮೆರಿಕ, ಈಜಿಪ್ಟ್, ಕೊಲಂಬಿಯಾ.
  • ರೌಂಡ್ ಆಫ್ 32 ಹಂತದಲ್ಲಿ ಹೊರಬಿದ್ದ ತಂಡಗಳು (16 ತಂಡಗಳು): ಸೌತ್ ಆಫ್ರಿಕಾ, ಜರ್ಮನಿ, ನೆದರ್ಲ್ಯಾಂಡ್ಸ್ , ಐವರಿ ಕೋಸ್ಟ್, ಆಸ್ಟ್ರೇಲಿಯಾ, ಸ್ವೀಡನ್, ಈಕ್ವಡಾರ್, ಡಿಆರ್ ಕಾಂಗೋ, ಸೆನೆಗಲ್, ಬೋಸ್ನಿಯಾ ಅ್ಯಂಡ್ ಹೆರ್ಜೆಗೋವಿನಾ, ಆಸ್ಟ್ರಿಯಾ, ಕ್ರೊಯೇಷಿಯಾ, ಅಲ್ಜೀರಿಯಾ, ಕೇಪ್ ವರ್ಡೆ, ಘಾನಾ, ಉಝ್ಬೇಕಿಸ್ತಾನ್.
  • ಲೀಗ್ ಹಂತದಲ್ಲೇ ಹೊರಬಿದ್ದ ತಂಡಗಳು (16 ತಂಡಗಳು): ಸೌತ್ ಕೊರಿಯಾ, ಚೆಕಿಯಾ, ಖತಾರ್, ಸ್ಕಾಟ್ಲೆಂಡ್ , ಹೈಟಿ, ಟರ್ಕಿ, ಕುರಾಸಾವೊ, ಟುನೀಶಿಯಾ, ಇರಾನ್ , ನ್ಯೂಝಿಲೆಂಡ್, ಉರುಗ್ವೆ, ಸೌದಿ ಅರೇಬಿಯಾ, ಇರಾಕ್, ಜೋರ್ಡನ್ , ಪನಾಮ, ಜಪಾನ್.

ಇದನ್ನೂ ಓದಿ: ಟಿ20 ಇತಿಹಾಸದಲ್ಲೇ ಹೀನಾಯವಾಗಿ ಸೋತ ಟೀಮ್ ಇಂಡಿಯಾ

ಫೈನಲ್ ಪಂದ್ಯ ಯಾವಾಗ?

2026ರ ಫಿಫಾ ವಿಶ್ವಕಪ್‌ನ ಮಹಾ ಫೈನಲ್ ಪಂದ್ಯವು ಭಾರತೀಯ ಕಾಲಮಾನದ ಪ್ರಕಾರ ಜುಲೈ 20, ಸೋಮವಾರದಂದು ಮಧ್ಯರಾತ್ರಿ 12:30 ಗಂಟೆಗೆ (ಭಾನುವಾರ ತಡರಾತ್ರಿ) ನಡೆಯಲಿದೆ.

Source link

ಆಮಿರ್ ಮದುವೆಗೆ ಶಾರುಖ್​​-ಸಲ್ಮಾನ್ ಖಾನ್ ಗೈರಾಗಿದ್ದೇಕೆ? – Kannada News | Aamir Khan Third Marriage: why Shah Rukh Khan And Salman Khan Missed Wedding

ಪ್ರೀತಿಗೆ ವಯಸ್ಸಿನ ಮಿತಿ ಇಲ್ಲ ಎಂದು ಹೇಳಲಾಗುತ್ತದೆ. ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ (Aamir Khan) ನಿಜ ಜೀವನದಲ್ಲಿ ಇದನ್ನು ಸಾಬೀತುಪಡಿಸಿದ್ದಾರೆ. 61ನೇ ವಯಸ್ಸಿನಲ್ಲಿ, ಅವರು ಗೆಳತಿ ಗೌರಿ ಸ್ಪ್ರಾಟ್ ಅವರನ್ನು ಮೂರನೇ ಬಾರಿಗೆ ಮದುವೆಯಾಗುವ ಮೂಲಕ ತಮ್ಮ ಜೀವನವನ್ನು ಹೊಸದಾಗಿ ಪ್ರಾರಂಭಿಸಿದ್ದಾರೆ. ಅವರ ವಿವಾಹದ ಫೋಟೋಗಳು ಮತ್ತು ವೀಡಿಯೊಗಳು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಆದಾಗ್ಯೂ, ಆಮಿರ್ ಅವರ ಇಬ್ಬರು ಮಾಜಿ ಪತ್ನಿಯರಾದ ರೀನಾ ದತ್ತಾ ಮತ್ತು ಕಿರಣ್ ರಾವ್ ಅದರಲ್ಲಿ ಎಲ್ಲಿಯೂ ಕಾಣಿಸಲಿಲ್ಲ. ಅಷ್ಟೇ ಅಲ್ಲ, ಆಮಿರ್ ಅವರ ಆಪ್ತ ಸ್ನೇಹಿತರಾದ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಕೂಡ ಮದುವೆಯಲ್ಲಿ ಇರಲಿಲ್ಲ.

ಮದುವೆಗೆ ಮುನ್ನ, ಆಮಿರ್ ಅವರ ಇಬ್ಬರು ಮಾಜಿ ಪತ್ನಿಯರು ಅವರ ಜೊತೆ ಮತ್ತು ಗೌರಿ ಜೊತೆ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲ, ಅವರು ಒಂದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದರೂ ಸಹ ಕಂಡುಬಂದಿತ್ತು. ಆದ್ದರಿಂದ, ರೀನಾ ಮತ್ತು ಕಿರಣ್ ಕೂಡ ಅಮೀರ್ ಅವರ ಮೂರನೇ ಮದುವೆಯಲ್ಲಿ ಭಾಗವಹಿಸುತ್ತಾರೆ ಎಂದು ಊಹಿಸಲಾಗಿತ್ತು. ಅವರ ಎಲ್ಲಾ ಮಕ್ಕಳು ಆಮಿರ್ ಮತ್ತು ಗೌರಿಯ ಮದುವೆಯಲ್ಲಿ ಭಾಗವಹಿಸಿದ್ದರು. ಜುನೈದ್, ಐರಾ ಮತ್ತು ಆಜಾದ್ ಮದುವೆಯಲ್ಲಿ ಭಾಗವಹಿಸಿದ್ದರು. ಇದಲ್ಲದೆ, ಉದ್ಯಮದ ಪರಿಚಿತ ಮುಖಗಳು ಸಹ ಈ ಮದುವೆಗೆ ಸಾಕ್ಷಿಯಾದವು. ಆದಾಗ್ಯೂ, ರೀನಾ ದತ್ತಾ ಮತ್ತು ಕಿರಣ್ ರಾವ್ ಅಮೀರ್ ಅವರ ಮೂರನೇ ಮದುವೆಯಿಂದ ದೂರ ಉಳಿದಿದ್ದರು.

ಆಮಿರ್ ಮದುವೆಯಲ್ಲಿ ರೀನಾ ಮತ್ತು ಕಿರಣ್ ಅನುಪಸ್ಥಿತಿ ಅಭಿಮಾನಿಗಳಿಗೆ ಮಾತ್ರವಲ್ಲ, ಆಪ್ತ ಸ್ನೇಹಿತರಾದ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಅನುಪಸ್ಥಿತಿಯೂ ಎಲ್ಲರ ಗಮನ ಸೆಳೆಯಿತು. ಸಲ್ಮಾನ್ ಮತ್ತು ಶಾರುಖ್ ಪ್ರತಿ ಸಂತೋಷ ಮತ್ತು ದುಃಖದಲ್ಲಿ ಆಮಿರ್ ಜೊತೆಗಿದ್ದರು. ಆಮಿರ್ ಮೊದಲು ತನ್ನ ಗೆಳತಿಯನ್ನು ಈ ಇಬ್ಬರಿಗೆ ಪರಿಚಯಿಸಿದ್ದರು. ಆದಾಗ್ಯೂ, ಆಮಿರ್ ಮತ್ತು ಗೌರಿಯ ವಿಶೇಷ ದಿನದಂದು ಇಬ್ಬರೂ ಗೈರುಹಾಜರಾಗಿದ್ದರು. ಅವರು ತಮ್ಮ ಕೆಲಸ ಅಥವಾ ಶೂಟಿಂಗ್‌ನಲ್ಲಿ ನಿರತರಾಗಿರಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಸರಳವಾಗಿ ನಡೆದ ಆಮಿರ್ ಖಾನ್ ಮೂರನೇ ಮದುವೆ, ಅತಿಥಿಗಳು ಯಾರ್ಯಾರು?

ಆಮಿರ್ ಖಾನ್ ಮತ್ತು ಗೌರಿ ಸ್ಪ್ರಾಟ್ 20 ವರ್ಷಗಳಿಗೂ ಹೆಚ್ಚು ಕಾಲ ಪರಸ್ಪರ ಪರಿಚಿತರಾಗಿದ್ದರು. ಅವರು 2024 ರಲ್ಲಿ ಬೆಂಗಳೂರಿನಲ್ಲಿ ಮತ್ತೆ ಭೇಟಿಯಾದರು ಮತ್ತು ಈ ಭೇಟಿಯು ಸ್ನೇಹಕ್ಕೆ ತಿರುಗಿತು. ಕ್ರಮೇಣ, ಆಮಿರ್ ಮತ್ತು ಗೌರಿ ಪರಸ್ಪರ ಪ್ರೀತಿಸುತ್ತಿದ್ದರು ಮತ್ತು ನಂತರ ಮುಂಬೈನಲ್ಲಿ ಲಿವ್-ಇನ್ ಸಂಬಂಧದಲ್ಲಿ ವಾಸಿಸಲು ಪ್ರಾರಂಭಿಸಿದರು. ಇದು ಗೌರಿಯ ಎರಡನೇ ಮದುವೆ ಮತ್ತು ಅವರ ಮೊದಲ ಪತಿಯಿಂದ ಅವರಿಗೆ ಒಬ್ಬ ಮಗನಿದ್ದಾನೆ. ಆಮಿರ್ ಮತ್ತು ಗೌರಿ ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ವಿವಾಹವಾದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇರಾನ್ ಮೇಲೆ ಅಮೆರಿಕ ಭೀಕರ ವಾಯುದಾಳಿ: ಹಾರ್ಮುಜ್ ಜಲಸಂಧಿಯಲ್ಲಿ 3 ಹಡಗುಗಳ ಮೇಲಿನ ದಾಳಿಗೆ ಪ್ರತೀಕಾರ – Kannada News | US Airstrikes Iran: Hormuz Ship Attack Retaliation Escalates Conflict and Oil Prices

ವಾಷಿಂಗ್ಟನ್, ಜುಲೈ 08: ಹಾರ್ಮುಜ್ ಜಲಸಂಧಿ(Hormuz Strait)ಯಲ್ಲಿ ಇರಾನ್ ಪಡೆಗಳು ಮೂರು ವಾಣಿಜ್ಯ ಸರಕು ಹಡಗುಗಳ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿದ ಬೆನ್ನಲ್ಲೇ, ಅಮೆರಿಕ ಸೇನೆಯು ಬುಧವಾರ ಮುಂಜಾನೆ ಇರಾನ್ ವಿರುದ್ಧ ಅತ್ಯಂತ ಪ್ರಬಲ ಮತ್ತು ಭೀಕರ ವಾಯುದಾಳಿ ಆರಂಭಿಸಿದೆ. ಈ ಹಠಾತ್ ಬೆಳವಣಿಗೆಯಿಂದಾಗಿ ಉಭಯ ದೇಶಗಳ ನಡುವಿನ ಯುದ್ಧವನ್ನು ಕೊನೆಗೊಳಿಸಲು ನಡೆಯುತ್ತಿದ್ದ ಮಧ್ಯಂತರ ಶಾಂತಿ ಒಪ್ಪಂದವು ಸಂಪೂರ್ಣವಾಗಿ ಹಳಿತಪ್ಪುವ ಭೀತಿ ಎದುರಾಗಿದೆ.

ಅಮೆರಿಕದ CENTCOM ಹೇಳಿದ್ದೇನು?
ಅಮೆರಿಕದ ಮಿಲಿಟರಿ ಕಮಾಂಡ್ (CENTCOM) ಈ ದಾಳಿಯನ್ನು ಅಧಿಕೃತವಾಗಿ ದೃಢಪಡಿಸಿದೆ.ಅಂತಾರಾಷ್ಟ್ರೀಯ ಜಲಮಾರ್ಗದಲ್ಲಿ ಮುಗ್ಧ ನಾಗರಿಕರಿರುವ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿಕೊಂಡು ಇರಾನ್ ದಾಳಿ ನಡೆಸಿದೆ. ಇದಕ್ಕೆ ಇರಾನ್ ಭಾರಿ ಬೆಲೆ ತೆರುವಂತೆ ಮಾಡಲು ಅಮೆರಿಕ ಸೇನೆಯು ಪ್ರಬಲ ದಾಳಿಗಳನ್ನು ಆರಂಭಿಸಿದೆ. ಇರಾನ್‌ನ ಈ ಆಕ್ರಮಣವು ಅನಗತ್ಯ, ಅಪಾಯಕಾರಿ ಮತ್ತು ಉಭಯ ದೇಶಗಳ ನಡುವಿನ ಕದನ ವಿರಾಮದ ಸ್ಪಷ್ಟ ಉಲ್ಲಂಘನೆಯಾಗಿದೆ.

ಇರಾನ್‌ನ ಯಾವೆಲ್ಲಾ ತಾಣಗಳ ಮೇಲೆ ದಾಳಿ?
ಅಮೆರಿಕದ ಯುದ್ಧ ವಿಮಾನಗಳು ದಕ್ಷಿಣ ಇರಾನ್‌ನ ಪ್ರಮುಖ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡಿವೆ. ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಗಳು, ಕರಾವಳಿ ಕಣ್ಗಾವಲು ಕೇಂದ್ರಗಳು, ನೆಲದಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ ತಾಣಗಳು ಹಾಗೂ ಹಡಗು ವಿರೋಧಿ ಕ್ರೂಸ್ ಕ್ಷಿಪಣಿ ಮತ್ತು ಡ್ರೋನ್ ಉಡಾವಣಾ ಕೇಂದ್ರಗಳ ಮೇಲೆ ಅಮೆರಿಕ ಬಾಂಬ್ ಮಳೆಗರೆದಿದೆ. ಇರಾನ್‌ನ ಸಿರಿಕ್, ಕೆಶ್ಮ್ ದ್ವೀಪ ಮತ್ತು ಪ್ರಮುಖ ಬಂದರು ನಗರವಾದ ‘ಬಂದರ್ ಅಬ್ಬಾಸ್’ನಲ್ಲಿ ಭಾರಿ ಸ್ಫೋಟಗಳು ಸಂಭವಿಸಿದ್ದು, ಹಲವು ಮೀನುಗಾರಿಕೆ ಹಾಗೂ ವಾಣಿಜ್ಯ ಹಡಗುಕಟ್ಟೆಗಳು ಬೆಂಕಿಗಾಹುತಿಯಾಗಿವೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.

ಮತ್ತಷ್ಟು ಓದಿ: ಎಲ್​ಎನ್​ಜಿ ಪೂರೈಕೆ ಪುನಾರಂಭಗೊಂಡ ಬೆನ್ನಲ್ಲೇ ತುರ್ತು ಗ್ಯಾಸ್ ನಿಯಂತ್ರಣ ಹಿಂಪಡೆದ ಭಾರತ

ಶಾಂತಿ ಒಪ್ಪಂದ ಹಳಿತಪ್ಪಿಸುತ್ತದೆಯೇ ಈ ಘಟನೆ?
ಫೆಬ್ರವರಿ 28 ರಂದು ಆರಂಭವಾಗಿದ್ದ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವನ್ನು ಕೊನೆಗೊಳಿಸಲು ಕಳೆದ ಜೂನ್ ತಿಂಗಳಿನಲ್ಲಿ ಕದನ ವಿರಾಮ ಹಾಗೂ 60 ದಿನಗಳ ಮಾತುಕತೆಯ ಒಪ್ಪಂದಕ್ಕೆ (MoU) ಸಹಿ ಹಾಕಲಾಗಿತ್ತು. ಆದರೆ ಈ ಹೊಸ ದಾಳಿಗಳು ಶಾಂತಿ ಪ್ರಕ್ರಿಯೆಗೆ ಚರಮಗೀತೆ ಹಾಡುವ ಸಾಧ್ಯತೆಯಿದೆ.

ಒಪ್ಪಂದ ಮುರಿಯಲು 3 ಪ್ರಮುಖ ಕಾರಣಗಳು

ಇರಾನ್‌ನ ತೈಲ ಪರವಾನಗಿ ರದ್ದು: ಮೂರು ಹಡಗುಗಳ ಮೇಲೆ ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ಅಮೆರಿಕ ಸರ್ಕಾರವು ಇರಾನ್‌ಗೆ ನೀಡಿದ್ದ ಅಂತಾರಾಷ್ಟ್ರೀಯ ತೈಲ ಮಾರಾಟದ ವಿಶೇಷ ಪರವಾನಗಿಯನ್ನು (Oil License) ತಕ್ಷಣದಿಂದಲೇ ರದ್ದುಗೊಳಿಸಿದೆ. ಇದು ಇರಾನ್‌ಗೆ ಆರ್ಥಿಕವಾಗಿ ಬಿದ್ದ ದೊಡ್ಡ ಹೊಡೆತವಾಗಿದ್ದು, ಒಪ್ಪಂದ ಮುರಿದುಬೀಳಲು ಮುಖ್ಯ ಕಾರಣವಾಗಬಹುದು.

ಜಲಸಂಧಿಯ ನಿಯಂತ್ರಣದ ಜಗಳ: ಹಾರ್ಮುಜ್ ಜಲಸಂಧಿಯ ಮೂಲಕ ಹಡಗುಗಳು ಸಂಚರಿಸಲು ಒಮಾನ್ ದೇಶದ ಕರಾವಳಿಯ ಮಾರ್ಗವನ್ನು ಬಳಸಬೇಕು ಎಂದು ಅಮೆರಿಕ ಬಯಸುತ್ತದೆ. ಆದರೆ ಈ ಜಲಮಾರ್ಗ ತನ್ನ ಹತೋಟಿಯಲ್ಲೇ ಇರಬೇಕು ಮತ್ತು ಅಲ್ಲಿ ಹಾದುಹೋಗುವ ಹಡಗುಗಳಿಂದ ತಾನು ಶುಲ್ಕ  ವಸೂಲಿ ಮಾಡಬೇಕು ಎಂದು ಇರಾನ್ ಹಠ ಹಿಡಿದಿದೆ. ಇದೇ ವಿವಾದ ಈಗ ಯುದ್ಧಕ್ಕೆ ಕಾರಣವಾಗಿದೆ.

ಕತಾರ್ ಮತ್ತು ಸೌದಿ ಆಕ್ರೋಶ: ಇರಾನ್ ದಾಳಿ ನಡೆಸಿರುವ ಮೂರು ಹಡಗುಗಳಲ್ಲಿ ಕತಾರ್‌ನ ಎಲ್‌ಎನ್‌ಜಿ (LNG) ಗ್ಯಾಸ್ ಟ್ಯಾಂಕರ್ ಹಾಗೂ ಸೌದಿ ಅರೇಬಿಯಾದ ತೈಲ ಟ್ಯಾಂಕರ್ ಕೂಡ ಸೇರಿವೆ. ಹೀಗಾಗಿ ಕತಾರ್ ಮತ್ತು ಸೌದಿ ಅರೇಬಿಯಾ ದೇಶಗಳು ಇರಾನ್ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದು, ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಗಾಗಿ ಇರಾನ್ ಸಂಪೂರ್ಣ ಕಾನೂನು ಜವಾಬ್ದಾರಿ ಹೊರಬೇಕಾಗುತ್ತದೆ ಎಂದು ಎಚ್ಚರಿಸಿವೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನ್ಯಾಟೋ (NATO) ಶೃಂಗಸಭೆಗಾಗಿ ಟರ್ಕಿಯಲ್ಲಿದ್ದಾಗಲೇ ಅಮೆರಿಕ ಈ ಭೀಕರ ವಾಯುದಾಳಿ ನಡೆಸಿರುವುದು ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ತಲ್ಲಣ ಮೂಡಿಸಿದೆ. ಜಾಗತಿಕ ಇಂಧನ ಮಾರುಕಟ್ಟೆಯ ಜೀವನಾಡಿಯಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಮತ್ತೆ ಯುದ್ಧ ಸೃಷ್ಟಿಯಾಗಿರುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು (WTI Crude) ತಕ್ಷಣವೇ ಶೇ. 2.5 ಕ್ಕಿಂತ ಹೆಚ್ಚು ಏರಿಕೆಯಾಗಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ರಾಮಾಯಣ’ ಚಿತ್ರಕ್ಕೆ ಕರಣ್ ಜೋಹರ್ ಡಿಸ್ಟ್ರಿಬ್ಯೂಟರ್; ಕೇವಲ 250 ಕೋಟಿ ರೂ.ಗೆ ಡೀಲ್ – Kannada News | Ramayana Film India Distribution rights Acquires by Karan Johar Dharma Production

ನಿತೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದ (Ramayana Movie) ಮೊದಲ ಭಾಗ ಈ ವರ್ಷದ ದೀಪಾವಳಿ ಹಬ್ಬದ ವೇಳೆಗೆ ವಿಶ್ವಾದ್ಯಂತ ಬಿಡುಗಡೆಯಾಗಲು ಸಜ್ಜಾಗುತ್ತಿದೆ. ಬಾಲಿವುಡ್‌ನ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಅವರ ‘ಧರ್ಮ ಪ್ರೊಡಕ್ಷನ್ಸ್’ ಈ ಚಿತ್ರದ ಭಾರತದ ಹಂಚಿಕೆ ಹಕ್ಕನ್ನು ಪಡೆದಿದೆ. ಎರಡು ಭಾಗಗಳಲ್ಲಿ ಮೂಡಿಬರುತ್ತಿರುವ ಈ ದೃಶ್ಯ ವೈಭವದ ಚಿತ್ರವನ್ನು ಬರೋಬ್ಬರಿ 4,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಎಂದು ವರದಿಯಾಗಿದೆ.

ಡೀಲ್ ಕುದುರಿದ್ದು 250 ಕೋಟಿಗೆ!

ಇದು ಭಾರತೀಯ ಸಿನಿಮಾ ಇತಿಹಾಸದಲ್ಲೇ ಅತ್ಯಂತ ಬಿಗ್ ಬಜೆಟ್ ಸಿನಿಮಾ. ಇದರ ವಿತರಣಾ ಹಕ್ಕುಗಳಿಗಾಗಿ ಆರಂಭದಲ್ಲಿ ಭಾರಿ ದೊಡ್ಡ ಮೊತ್ತದ ಬೇಡಿಕೆ ಇಡಲಾಗಿತ್ತು. ಮೂಲಗಳ ಪ್ರಕಾರ, ಧರ್ಮ ಪ್ರೊಡಕ್ಷನ್ಸ್ ಜೊತೆಗಿನ ಮಾತುಕತೆ ಬರೋಬ್ಬರಿ 500 ಕೋಟಿ ರೂಪಾಯಿಗಳ ಭಾರಿ ಮೊತ್ತದಿಂದಲೇ ಆರಂಭವಾಗಿತ್ತು. ಆದರೆ, ಹಲವು ಸುತ್ತಿನ ಮಾತುಕತೆಗಳ ನಂತರ ಅಂತಿಮವಾಗಿ ಇದರ ಅರ್ಧದಷ್ಟು ಬೆಲೆಗೆ, ಅಂದರೆ ಕೇವಲ 250 ಕೋಟಿ ರೂಪಾಯಿಗಳಿಗೆ ಈ ಡೀಲ್ ಫೈನಲ್ ಆಗಿದೆ. ರೇಸ್​​ನಲ್ಲಿದ್ದ ವಿತರಕರಿಗೆ ನಿರ್ಮಾಪಕ ನಮಿತ್ ಮಲ್ಹೋತ್ರಾ ಚಿತ್ರದ 30 ನಿಮಿಷಗಳ ಎಡಿಟ್ ಮಾಡಿದ ವಿಶೇಷ ತುಣುಕನ್ನು ತೋರಿಸಿದ ನಂತರ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಅಪಾರ ಅನುಭವ

ಕೆಲವು ವರ್ಷಗಳ ಹಿಂದೆ ಆದರ್ ಪೂನಾವಾಲಾ ಅವರ ‘ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ’ ಧರ್ಮ ಪ್ರೊಡಕ್ಷನ್ಸ್‌ನ ಶೇ. 50 ರಷ್ಟು ಪಾಲನ್ನು 1,000 ಕೋಟಿ ರೂಪಾಯಿಗೆ ಖರೀದಿಸಿತ್ತು. ಇದಾದ ನಂತರ ಕರಣ್ ಜೋಹರ್ ಸಂಸ್ಥೆಗೆ ದೊಡ್ಡ ಆರ್ಥಿಕ ಬಲ ಬಂದಿತ್ತು. ಈ ಹಿಂದೆ ಎಸ್‌ಎಸ್ ರಾಜಮೌಳಿ ಅವರ ‘ಬಾಹುಬಲಿ’ ಸರಣಿ, ಘಾಜಿ ಅಟ್ಯಾಕ್, ಶಂಕರ್ ನಿರ್ದೇಶನದ ‘2.0’ ಮತ್ತು ಜೂನಿಯರ್ ಎನ್‌ಟಿಆರ್ ನಟನೆಯ ‘ದೇವರ: ಪಾರ್ಟ್ 1’ ನಂತಹ ದಕ್ಷಿಣ ಭಾರತದ ದೈತ್ಯ ಪ್ಯಾನ್-ಇಂಡಿಯಾ ಚಿತ್ರಗಳನ್ನು ಉತ್ತರ ಭಾರತದಲ್ಲಿ ಯಶಸ್ವಿಯಾಗಿ ವಿತರಣೆ ಮಾಡಿದ ಹೆಗ್ಗಳಿಕೆ ಧರ್ಮ ಪ್ರೊಡಕ್ಷನ್ಸ್‌ಗಿದೆ.

ಇದನ್ನೂ ಓದಿ: ‘ಬಿಟ್ಟಿ ಪ್ರಚಾರಕ್ಕಾಗಿ ರಾಮಾಯಣ ಚಿತ್ರದಲ್ಲಿ ಕಳಪೆ ವಿಎಫ್‌ಎಕ್ಸ್’: ಸೆಟ್‌ಗೆ ಭೇಟಿ ನೀಡಿದ ಕ್ರಿಯೇಟರ್ ಆರೋಪ

ಭಾರಿ ತಾರಾಗಣ

ಈ ವರ್ಷದ ಅತ್ಯಂತ ನಿರೀಕ್ಷಿತ ಭಾರತೀಯ ಸಿನಿಮಾ ಎಂದು ಗುರುತಿಸಲ್ಪಟ್ಟಿರುವ ‘ರಾಮಾಯಣ: ಪಾರ್ಟ್ 1’ ನಲ್ಲಿ ಭಾರಿ ತಾರಾಗಣವಿದೆ. ಶ್ರೀರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ಹಾಗೂ ಹನುಮಂತನಾಗಿ ಸನ್ನಿ ಡಿಯೋಲ್ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಅನೇಕ ಕಲಾವಿದರು ಸಿನಿಮಾದಲ್ಲಿದ್ದಾರೆ. ಇನ್ನು ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕರಾದ ಎ.ಆರ್. ರೆಹಮಾನ್ ಮತ್ತು ಹಾಲಿವುಡ್‌ನ ಹ್ಯಾನ್ಸ್ ಜಿಮ್ಮರ್ ಒಟ್ಟಾಗಿ ಸಂಗೀತ ನೀಡುತ್ತಿರುವುದು ಚಿತ್ರದ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ. ಸದ್ಯ ಚಿತ್ರದ ಮೊದಲ ಭಾಗದ ಚಿತ್ರೀಕರಣ ಮುಗಿದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಎರಡನೇ ಭಾಗದ ಪ್ರೀ-ಪ್ರೊಡಕ್ಷನ್ ಕೆಲಸಗಳು ಚಾಲ್ತಿಯಲ್ಲಿವೆ. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸಾರ್ವಕಾಲಿಕ ದಾಖಲೆಗಳನ್ನು ಧೂಳೀಪಟ ಮಾಡಲಿದೆ ಎಂದು ಟ್ರೇಡ್ ಅನಾಲಿಸ್ಟ್‌ಗಳು ಭವಿಷ್ಯ ನುಡಿದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Karnataka Air Quality: ಕರಾವಳಿ, ಮಲೆನಾಡಿನಲ್ಲಿ ಅತ್ಯುತ್ತಮ ಏರ್ ಕ್ವಾಲಿಟಿ; ಬೆಂಗಳೂರಿನಲ್ಲೂ ಶುದ್ಧ ಗಾಳಿ – Kannada News | Bengaluru AQI ‘Good’ Today: Karnataka Enjoys Clean Air Thanks to Monsoon Rains

ಬೆಂಗಳೂರು, ಜು.8: ರಾಜ್ಯದ ಜನತೆಗೆ ನಿರಾಳ ತರುವ ಸುದ್ದಿ, ಕರ್ನಾಟಕದ ಪ್ರಮುಖ ನಗರಗಳಲ್ಲಿ ಇಂದು ವಾಯು ಗುಣಮಟ್ಟವು ತೃಪ್ತಿಕರ ಹಾಗೂ ಉತ್ತಮ ಮಟ್ಟದಲ್ಲಿದೆ. ಮಾನ್ಸೂನ್ ಮಳೆಯ ಪ್ರಭಾವ ಹಾಗೂ ಪೂರಕ ಗಾಳಿಯ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ವಾಯು ಮಾಲಿನ್ಯದ ಪ್ರಮಾಣ ಗಣನೀಯವಾಗಿ ಕುಸಿದಿದೆ.

ಬೆಂಗಳೂರಿನ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (AQI) ಇಂದು 13 ರಿಂದ 57 ರ ಆಸುಪಾಸಿನಲ್ಲಿ ದಾಖಲಾಗಿದೆ. ಇದು ‘ಉತ್ತಮ’ (Good) ಹಾಗೂ ‘ಸಾಧಾರಣ’ (Moderate) ವಿಭಾಗಕ್ಕೆ ಸೇರುತ್ತದೆ. PM2.5 ಪ್ರಮಾಣ ಕೇವಲ 8 ಮತ್ತು PM10 ಪ್ರಮಾಣ 10-21 ನಷ್ಟಿದ್ದು, ಅತ್ಯಂತ ಸುರಕ್ಷಿತ ಮಟ್ಟದಲ್ಲಿದೆ. ನಗರದ ಬಿಟಿಎಂ ಲೇಔಟ್ ಮತ್ತು ಪೀಣ್ಯ ಕೈಗಾರಿಕಾ ಪ್ರದೇಶಗಳಲ್ಲಿ ಸಾಧಾರಣ (55-64 AQI) ಮಾಲಿನ್ಯವಿದ್ದರೆ, ಸನೇಗುರುವನಹಳ್ಳಿ ಹಾಗೂ ಸಿಟಿ ರೈಲ್ವೆ ಸ್ಟೇಷನ್ ಪರಿಸರದಲ್ಲಿ ಅತ್ಯಂತ ಸ್ವಚ್ಛವಾದ ಗಾಳಿ (11-13 AQI) ದಾಖಲಾಗಿದೆ.

ರಾಜ್ಯದ ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲೂ ಪರಿಸ್ಥಿತಿ ಉತ್ತಮವಾಗಿದೆ. ಇಂದಿನ ವರದಿಯ ಪ್ರಕಾರ ಕೇವಲ 11 AQI ದಾಖಲಿಸುವ ಮೂಲಕ ರಾಜ್ಯದಲ್ಲೇ ಅತ್ಯಂತ ಸ್ವಚ್ಛ ಮತ್ತು ಶುದ್ಧ ಗಾಳಿಯಿರುವ ಪ್ರದೇಶಗಳಾಗಿ ಹೊರಹೊಮ್ಮಿವೆ. ಇಲ್ಲಿನ ವಾಯು ಗುಣಮಟ್ಟವು 50 ರ ಒಳಗಿದ್ದು, ‘ಉತ್ತಮ’ ಶ್ರೇಣಿಯಲ್ಲಿದೆ. ಕೈಗಾರಿಕಾ ಚಟುವಟಿಕೆಗಳಿದ್ದರೂ ಇಲ್ಲಿನ AQI 50-55 ರ ಆಸುಪಾಸಿನಲ್ಲಿದ್ದು, ‘ಸಾಧಾರಣ’ ಮಟ್ಟದಲ್ಲಿದೆ.

ಇದನ್ನೂ ಓದಿ: ಕರಾವಳಿಗೆ ರೆಡ್ ಅಲರ್ಟ್, ಹಲವೆಡೆ ಶಾಲಾ-ಕಾಲೇಜುಗಳಿಗೆ ರಜೆ; ಸಕಲೇಶಪುರದಲ್ಲಿ ಟ್ರಕಿಂಗ್ ನಿಷೇಧ

ಕರ್ನಾಟಕದ ಇಂದಿನ ಹವಾಮಾನವು ಹೊರಾಂಗಣ ಚಟುವಟಿಕೆಗಳು, ವಾಯುವಿಹಾರ ಹಾಗೂ ವ್ಯಾಯಾಮಕ್ಕೆ ಅತ್ಯಂತ ಯೋಗ್ಯವಾಗಿದೆ. ಉಸಿರಾಟದ ತೊಂದರೆ ಇರುವವರು ಮತ್ತು ಹಿರಿಯ ನಾಗರಿಕರು ಯಾವುದೇ ಆತಂಕವಿಲ್ಲದೆ ಮುಕ್ತವಾಗಿ ಓಡಾಡಬಹುದಾದ ಪೂರಕ ವಾತಾವರಣ ಇಂದಿದೆ. ಕರಾವಳಿ ಮತ್ತು ಮಲೆನಾಡು ಭಾಗದ ಪ್ರಮುಖ ಜಿಲ್ಲೆಗಳಾದ ಮಂಗಳೂರು, ಚಿಕ್ಕಮಗಳೂರು, ಹಾಸನ ಮತ್ತು ಉಡುಪಿಯಲ್ಲಿ ಮಳೆ ಅತ್ಯಂತ ಚುರುಕಾಗಿರುವುದರಿಂದ ಮತ್ತು ಭಾರಿ ಬಿರುಗಾಳಿ ಬೀಸುತ್ತಿರುವುದರಿಂದ ವಾತಾವರಣದಲ್ಲಿನ ಧೂಳು ಹಾಗೂ ಕಲುಷಿತ ಕಣಗಳು ಸಂಪೂರ್ಣವಾಗಿ ತೊಳೆದುಹೋಗಿವೆ. ಹೀಗಾಗಿ ಮಲೆನಾಡು ಮತ್ತು ಕರಾವಳಿಯಾದ್ಯಂತ ಗಾಳಿಯ ಗುಣಮಟ್ಟವು ಅತ್ಯುತ್ತಮವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮಾಲಿನ್ಯದ ಪ್ರಮಾಣ ಶೂನ್ಯಕ್ಕೆ ತಲುಪಿದೆ. ಉಸಿರಾಡಲು ರಾಜ್ಯದಲ್ಲೇ ಅತ್ಯಂತ ಶುದ್ಧವಾದ ಗಾಳಿ ಇಲ್ಲಿ ದಾಖಲಾಗಿದೆ. AQI ಮಟ್ಟ 5 – 25 ಅತ್ಯುತ್ತಮವಾಗಿದೆ. ಮಂಗಳೂರಿನಂತೆಯೇ ಉಡುಪಿ ಮತ್ತು ಮಣಿಪಾಲ ಪರಿಸರದಲ್ಲೂ ವಾಯು ಗುಣಮಟ್ಟ ಅತ್ಯಂತ ಶ್ರೇಷ್ಠ ಮಟ್ಟದಲ್ಲಿದ್ದು, ಯಾವುದೇ ರೀತಿಯ ಮಾಲಿನ್ಯಕಾರಕ ಅಂಶಗಳು ವರದಿಯಾಗಿಲ್ಲ. AQI ಮಟ್ಟ 18 – 28 ಅತ್ಯುತ್ತಮವಾಗಿದೆ. ಕಾಫಿ ನಾಡಿನ ಮಲೆನಾಡು ಭಾಗಗಳಲ್ಲಿ ಹಸಿರು ಮತ್ತು ಮಳೆಯ ಪ್ರಭಾವದಿಂದಾಗಿ ಗಾಳಿಯು ಅತ್ಯಂತ ಶುದ್ಧ ಹಾಗೂ ಸೌಮ್ಯವಾಗಿದೆ. ಆರೋಗ್ಯಕ್ಕೆ ಇದು ಅತ್ಯಂತ ಪೂರಕ ವಾತಾವರಣವಾಗಿದೆ. AQI ಮಟ್ಟ 20 – 32 ಉತ್ತಮವಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅರಬ್ಬಿ ಸಮುದ್ರದಲ್ಲಿ ಪಾಕಿಸ್ತಾನದ ವಿಮಾನ ನಾಪತ್ತೆ, ಐವರು ಸಿಬ್ಬಂದಿಯ ಸುಳಿವಿಲ್ಲ – Kannada News | Pakistan Cargo Plane Disappears Over Arabian Sea: 5 Crew Missing, Search Underway

ಇಸ್ಲಾಮಾಬಾದ್, ಜುಲೈ 08: ಯುನೈಟೆಡ್ ಅರಬ್ ಎಮಿರೇಟ್ಸ್​​ನಿಂದ ಪಾಕಿಸ್ತಾನ(Pakistan)ಕ್ಕೆ ಹಾರುತ್ತಿದ್ದ ಸರಕು ವಿಮಾನವೊಂದು ಮಂಗಳವಾರ ರಾತ್ರಿ ಅರಬ್ಬಿ ಸಮುದ್ರದ ಮೇಲೆ ದಿಢೀರ್ ರಾಡಾರ್​ನಿಂದ ಕಣ್ಮರೆಯಾಗಿದೆ. ಐವರು ಸಿಬ್ಬಂದಿಯನ್ನು ಹೊತ್ತಿದ್ದ ಈ ‘ಕೆ2 ಏರ್‌ವೇಸ್’ ವಿಮಾನವನ್ನು ಪತ್ತೆಹಚ್ಚಲು ಇದೀಗ ಸಮುದ್ರದಲ್ಲಿ ಭಾರಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ.

ಘಟನೆ ನಡೆದಿದ್ದು ಹೇಗೆ?
ಪಾಕಿಸ್ತಾನದ ವಿಮಾನ ನಿಲ್ದಾಣ ಪ್ರಾಧಿಕಾರ ನೀಡಿರುವ ಮಾಹಿತಿ ಪ್ರಕಾರ,ಶಾರ್ಜಾದಿಂದ ಕರಾಚಿಗೆ ಹೊರಟಿದ್ದ ಈ ಕಾರ್ಗೋ ವಿಮಾನದಲ್ಲಿ ಮಾರ್ಗಮಧ್ಯೆ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ವಿಮಾನದ ನ್ಯಾವಿಗೇಷನ್ ಸಿಸ್ಟಮ್‌ನಲ್ಲಿ ದೋಷ ಕಂಡುಬಂದಿದೆ ಎಂದು ಪೈಲಟ್ ಕರಾಚಿ ವಾಯು ಸಂಚಾರ ನಿಯಂತ್ರಣ ಕೇಂದ್ರಕ್ಕೆ ಮಾಹಿತಿ ನೀಡಿದ್ದರು. ತಕ್ಷಣವೇ ನಿಯಂತ್ರಣ ಕೇಂದ್ರದಿಂದ ವಿಮಾನಕ್ಕೆ ಸೂಕ್ತ ಮಾರ್ಗದರ್ಶನ ನೀಡಲಾಗಿತ್ತು.ರಾತ್ರಿ 9.18ಕ್ಕೆ ಕೊನೆಯ ಸಂಪರ್ಕ ಸಿಕ್ಕಿತ್ತು.

ಆದರೆ, ಸಮಸ್ಯೆ ತಿಳಿಸಿದ ಕೇವಲ 4 ನಿಮಿಷಗಳಲ್ಲಿ, ಅಂದರೆ ರಾತ್ರಿ 9.22 ರ ಸುಮಾರಿಗೆ ವಿಮಾನವು ಇದ್ದಕ್ಕಿದ್ದಂತೆ ತನ್ನ ದಿಕ್ಕನ್ನು ಬದಲಾಯಿಸಿ ಅತಿ ವೇಗವಾಗಿ ಕೆಳಮುಖವಾಗಿ ಇಳಿಯುವುದನ್ನು ರಾಡಾರ್‌ನಲ್ಲಿ ಗಮನಿಸಲಾಯಿತು.

ಮತ್ತಷ್ಟು ಓದಿ: ಭಾರತದ ಜಲ ದಿಗ್ಬಂಧನಕ್ಕೆ ಕಂಗೆಟ್ಟು ಚೀನಾ ಸಹಾಯ ಕೋರಿದ ಪಾಕಿಸ್ತಾನ

ಇದಾದ ಕೆಲವೇ ಸೆಕೆಂಡುಗಳಲ್ಲಿ ಕರಾಚಿಯಿಂದ ಪಶ್ಚಿಮಕ್ಕೆ ಸುಮಾರು 155 ನಾಟಿಕಲ್ ಮೈಲಿ ದೂರದಲ್ಲಿ ವಿಮಾನದ ಜೊತೆಗಿನ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ವಿಮಾನವು ರಾಡಾರ್‌ನಿಂದ ಕಣ್ಮರೆಯಾಗಿದ್ದು, ಸಮುದ್ರಕ್ಕೆ ಅಪ್ಪಳಿಸಿರುವ ಭೀತಿ ಎದುರಾಗಿದೆ.

ರಕ್ಷಣಾ ಕಾರ್ಯಾಚರಣೆ ಚುರುಕು
ಸಂಪರ್ಕ ಕಡಿತಗೊಂಡ ತಕ್ಷಣವೇ ಎಚ್ಚೆತ್ತ ಪಾಕಿಸ್ತಾನ ವಿಮಾನ ನಿಲ್ದಾಣ ಪ್ರಾಧಿಕಾರವು, ರಕ್ಷಣಾ ಸಮನ್ವಯ ಕೇಂದ್ರವನ್ನು ಸಕ್ರಿಯಗೊಳಿಸಿದೆ. ನಾಪತ್ತೆಯಾಗಿರುವ ವಿಮಾನ ಹಾಗೂ ಅದರಲ್ಲಿದ್ದ ಐವರು ಸಿಬ್ಬಂದಿಯನ್ನು ಪತ್ತೆಹಚ್ಚಲು ಹಲವು ಸಂಸ್ಥೆಗಳ ಜಂಟಿ ಕಾರ್ಯಾಚರಣೆಯನ್ನು ಸಮುದ್ರದಲ್ಲಿ ಆರಂಭಿಸಲಾಗಿದೆ.

ವಿಮಾನದಲ್ಲಿದ್ದ ಐವರು ಸಿಬ್ಬಂದಿ ಯಾರು ಎಂಬ ಬಗ್ಗೆ ಪ್ರಾಧಿಕಾರ ಇನ್ನೂ ಅಧಿಕೃತ ಮಾಹಿತಿ ಬಿಡುಗಡೆ ಮಾಡಿಲ್ಲ. ದಿಕ್ಕು ತೋರಿಸುವ ವ್ಯವಸ್ಥೆಯ ದೋಷದ ಜೊತೆಗೆ ವಿಮಾನ ಇದ್ದಕ್ಕಿದ್ದಂತೆ ಕೆಳಗೆ ಬೀಳಲು ಅಸಲಿ ಕಾರಣವೇನು ಎಂಬುದು ತನಿಖೆ ಮತ್ತು ವಿಮಾನ ಪತ್ತೆಯಾದ ನಂತರವಷ್ಟೇ ತಿಳಿಯಬೇಕಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಟಾಕ್ಸಿಕ್’ ಚಿತ್ರದ ‘ತಬಾಹಿ’ ವಿಡಿಯೋ ಸಾಂಗ್ ರಿಲೀಸ್ ಬಗ್ಗೆ ಕಿಯಾರಾ ಅಧಿಕೃತ ಘೋಷಣೆ – Kannada News | Toxic Movie: Yash Kiara Tabaahi’ Song Release Today Grand Pan India Buzz

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ (Toxic Movie) ಇದೇ ಆಗಸ್ಟ್ 26ರಂದು ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಈಗ ಚಿತ್ರತಂಡ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಈ ಪ್ರಚಾರದ ಭಾಗವಾಗಿ ‘ತಬಾಹಿ’ ವಿಡಿಯೋ ಸಾಂಗ್ ರಿಲೀಸ್ ಮಾಡಲು ಚಿತ್ರತಂಡ ಮುಹೂರ್ತ ಫಿಕ್ಸ್ ಮಾಡಿದೆ. ಇಂದು (ಜುಲೈ 8) ಬೆಳಿಗ್ಗೆ 11.33ಕ್ಕೆ ಈ ಬಹುನಿರೀಕ್ಷಿತ ವಿಡಿಯೋ ಸಾಂಗ್ ಅಧಿಕೃತವಾಗಿ ಬಿಡುಗಡೆ ಆಗಲಿದೆ.

ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ಸಾಮಾಜಿಕ ಜಾಲತಾಣದಲ್ಲಿ ಈ ಹಾಡಿನ ಬಿಡುಗಡೆಯ ಬಗ್ಗೆ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಲಿರಿಕಲ್ ಸಾಂಗ್ ಮೂಲಕ ಈಗಾಗಲೇ ಧೂಳೆಬ್ಬಿಸಿರುವ ಈ ಹಾಡಿನ ದೃಶ್ಯ ವೈಭವವನ್ನು ಕಣ್ಣುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಕಿಯಾರಾ ಹಂಚಿಕೊಂಡಿರುವ ಪೋಸ್ಟ್ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ‘ಜುಲೈ 8ರ ಬೆಳಿಗ್ಗೆ 11.33ಕ್ಕೆ ಹಾಡು ರಿಲೀಸ್ ಆಗಲಿದೆ’ ಎಂದು ಅವರು ಹೇಳಿದ್ದಾರೆ.

‘ತಬಾಹಿ’ ಹಾಡಿನಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ಕಿಯಾರಾ ಅಡ್ವಾಣಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಇಬ್ಬರ ನಡುವಿನ ಕೆಮಿಸ್ಟ್ರಿ ಮತ್ತು ಬೋಲ್ಡ್ ಲುಕ್ ಹಾಡಿನ ಪ್ರಮುಖ ಆಕರ್ಷಣೆಯಾಗಿದ್ದು, ಬೆಳ್ಳಿಪರದೆ ಮೇಲೆ ಈ ಜೋಡಿಯ ಜುಗಲ್‌ಬಂದಿ ಕಣ್ಮನ ಸೆಳೆಯುವುದು ಗ್ಯಾರಂಟಿ ಎಂಬ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ: ಹಿಂದಿ ಸಿನಿಮಾ ವೀಕ್ಷಿಸಿ ಕೊಂಡಾಡಿದ ‘ಟಾಕ್ಸಿಕ್’ ನಿರ್ದೇಶಕಿ, ಹೇಳಿದ್ದೇನು?

ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಪ್ಯಾನ್ ಇಂಡಿಯಾ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ಬಂಡವಾಳ ಹೂಡಿವೆ. ಚಿತ್ರದಲ್ಲಿ ಯಶ್ ಹಾಗೂ ಕಿಯಾರಾ ಅಡ್ವಾಣಿ ಜೊತೆಗೆ ಹುಮಾ ಖುರೇಷಿ, ರುಕ್ಮಿಣಿ ವಸಂತ್ ಸೇರಿದಂತೆ ದಕ್ಷಿಣ ಹಾಗೂ ಬಾಲಿವುಡ್‌ನ ದಂಡೇ ನಟಿಸುತ್ತಿದೆ. ಭಾರಿ ತಾರಾಗಣವನ್ನು ಹೊಂದಿರುವ ಈ ಸಿನಿಮಾ ಸದ್ಯ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ. ಕನ್ನಡ ಹಾಗೂ ಇಂಗ್ಲಿಷ್​ನಲ್ಲಿ ಒಟ್ಟಿಗೆ ಶೂಟ್ ಆಗಿದ್ದು, ತೆಲುಗು, ತಮಿಳು ಮೊದಲಾದ ಭಾಷೆಗೆ ಡಬ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version