Headlines

ಹೊಸ ಐಆರ್​ಸಿಟಿಸಿ ವೆಬ್​ಸೈಟ್ ಸಿದ್ಧ; ಬೀಟಾ ಆವೃತ್ತಿ ಬಿಡುಗಡೆ; ರೈಲ್ವೆ ಟಿಕೆಟ್ ಬುಕಿಂಗ್ ಇನ್ಮುಂದೆ ಸರಳ – Kannada News | Indian Railways launch Beta version of new IRCTC website, simpler, stronger ticket booking process

ನವದೆಹಲಿ, ಜುಲೈ 16: ಆನ್‌ಲೈನ್ ರೈಲ್ವೆ ಟಿಕೆಟ್ ಬುಕಿಂಗ್ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭಗೊಳಿಸಲು ಭಾರತೀಯ ರೈಲ್ವೆ ಇಲಾಖೆಯು ಬಹುನಿರೀಕ್ಷಿತ ಹೊಸ ಐಆರ್‌ಸಿಟಿಸಿ (IRCTC) ವೆಬ್‌ಸೈಟ್‌ನ ಬೀಟಾ (ಪ್ರಾಯೋಗಿಕ) ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಸಾರ್ವಜನಿಕರು ಈ ಬೀಟಾ ಆವೃತ್ತಿಯನ್ನು ಬಳಸಬಹುದು. ಜುಲೈ 16, ರಾತ್ರಿ 9 ಗಂಟೆಯಿಂದ ಇದು ಸಾರ್ವಜನರಿಗೆ ಲಭ್ಯ ಇರುತ್ತದೆ. ಈಗಿರುವ ಅಧಿಕೃತ ಐಆರ್​ಸಿಟಿಸಿ ವೆಬ್​ಸೈಟ್​ನಲ್ಲೇ ಬೀಟಾ ಆವೃತ್ತಿಯ ಲಿಂಕ್ ಇದ್ದು ಅದನ್ನು ಕ್ಲಿಕ್ ಮಾಡಿ ಪ್ರವೇಶ ಪಡೆಯಬಹುದು. ಈ ಲಿಂಕ್ ರಾತ್ರಿ 9ಕ್ಕೆ ಎನೇಬಲ್…

Read More

ನಿಷೇಧವಾಗಿರುವ ‘ಸತ್ಲಜ್’ ಸಿನಿಮಾಕ್ಕೆ ದಿಲ್ಜೀತ್ ಪಡೆದ ಸಂಭಾವನೆ 1 ರೂಪಾಯಿ ಮಾತ್ರ – Kannada News | Diljit Dosanjh only took 1 rs for Satluj movie says director

ದಿಲ್ಜಿತ್ ದುಸ್ಸಾಂಜ್ (diljit dosanjh), ಬಾಲಿವುಡ್​ ಮತ್ತು ಪಂಜಾಬಿ ಚಿತ್ರರಂಗದ ಬಲು ಜನಪ್ರಿಯ ನಟ, ಜೊತೆಗೆ ವಿಶ್ವಮಟ್ಟದಲ್ಲಿ ದೊಡ್ಡ ಅಭಿಮಾನಿ ವರ್ಗ ಹೊಂದಿರುವ ಗಾಯಕ ಸಹ. ಅವರ ಲೈವ್ ಕಾನ್ಸರ್ಟ್​​ಗಳಿಗೆ ಲಕ್ಷಾಂತರ ರೂಪಾಯಿ ಟಿಕೆಟ್ ಕೊಟ್ಟು, ಲಕ್ಷಾಂತರ ಜನ ಭಾಗವಹಿಸುತ್ತಾರೆ. ಇತ್ತೀಚೆಗಷ್ಟೆ ಅವರ ನಟನೆಯ ‘ಸತ್ಲಜ್’ ಚಿತ್ರ ವಿವಾದಕ್ಕೆ ಸಿಲುಕಿಕೊಂಡಿದೆ. ಸಿನಿಮಾಕ್ಕೆ ಸಿಬಿಎಫ್​​ಸಿ, ಪ್ರಮಾಣ ಪತ್ರ ನೀಡುವುದನ್ನೇ ನಿರಾಕರಿಸಿದೆ. ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಯ್ತಾದರೂ ಕೇವಲ ಎರಡು ದಿನದ ಒಳಗೆ ಅಲ್ಲಿಂದಲೂ ಅದನ್ನು ತೆಗೆದು ಹಾಕಲಾಗಿದೆ. ಬಂಡವಾಳ…

Read More

Gold Rate: ಚಿನ್ನದ ಬೆಲೆಯಲ್ಲಿ ಇಳಿಕೆ; ಗ್ರಾಮ್​ಗೆ 25 ರೂ ಕಡಿಮೆ – Kannada News | Gold Price Today on 16th July 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಜುಲೈ 16: ಚಿನ್ನದ ಬೆಲೆ ಹೊಯ್ದಾಟದ ಹಂತಕ್ಕೆ ಬಂದಿರುವಂತಿದೆ. ಮೊನ್ನೆ 140 ರೂ ಕಡಿಮೆಗೊಂಡು, ನಿನ್ನೆ 70 ರೂ ಹೆಚ್ಚಿದ್ದ ಬಂಗಾರದ ದರ (Gold Price) ಇವತ್ತು 25 ರೂ ತಗ್ಗಿದೆ. ವಿದೇಶಗಳಲ್ಲೂ ಇದರ ಬೆಲೆಯ ತೂಗುಯ್ಯಾಲೆ ಮುಂದುವರಿದಿದೆ. ಬೆಳ್ಳಿ ಬೆಲೆ ಹೆಚ್ಚು ಸ್ಥಿರವಾಗಿದೆ. ಕಳೆದ ಕೆಲ ದಿನಗಳಿಂದ ಇರುವ 235 ರು ಬೆಲೆಯೇ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,31,350 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ…

Read More

ಇರಾನ್ ಬೆದರಿಕೆ ವಿರುದ್ಧ ಗಲ್ಫ್​ ರಾಷ್ಟ್ರಗಳ ಮಾಸ್ಟರ್ ಪ್ಲ್ಯಾನ್, ಹಾರ್ಮುಜ್ ಜಲಸಂಧಿಗೆ ಪರ್ಯಾಯವಾಗಿ ಹೊಸ ಬಂದರು ನಿರ್ಮಾಣ – Kannada News | Gulf Nations Bypass Iran Threat: New Ports and Pipelines Alternative to Strait of Hormuz

ದುಬೈ, ಜುಲೈ 16: ಅಮೆರಿಕ ಮತ್ತು ಇರಾನ್(Iran) ನಡುವಿನ ಮಿಲಿಟರಿ ಸಂಘರ್ಷದಿಂದಾಗಿ ವಿಶ್ವದ ಅತ್ಯಂತ ಬಿಡುವಿಲ್ಲದ ತೈಲ ಸಾರಿಗೆ ಮಾರ್ಗವಾದ ಹಾಮರ್ಮಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಜಾಗತಿಕ ತೈಲ ಪೂರೈಕೆಗೆ ಕಂಟಕ ಎದುರಾಗಿರುವ ಈ ಸಂದರ್ಭದಲ್ಲಿ ಯುಎಇ (UAE), ಸೌದಿ ಅರೇಬಿಯಾ ಮತ್ತು ಇರಾಕ್ ದೇಶಗಳು ಇರಾನ್‌ನ ಈ ಜಲಮಾರ್ಗದ ಮೇಲಿನ ತಮ್ಮ ಅವಲಂಬನೆಯನ್ನು ಶಾಶ್ವತವಾಗಿ ಕಡಿತಗೊಳಿಸಲು ಯುದ್ಧೋಪಾದಿಯಲ್ಲಿ ಸಜ್ಜಾಗುತ್ತಿವೆ. ಯುದ್ಧಕ್ಕೂ ಮುನ್ನ ಜಗತ್ತಿನ ಒಟ್ಟು ಕಚ್ಚಾ ತೈಲದ ಶೇಕಡಾ 20 ರಷ್ಟು ಭಾಗ…

Read More

ಉಪ್ಪಿನಂಗಡಿಯಲ್ಲಿ ಹೈಟೆಕ್ ನಕಲಿ ನೋಟು ದಂಧೆ ಪತ್ತೆ: ಅಡಿಂಜೆಯಲ್ಲಿ ಪ್ರಿಂಟಿಂಗ್ ಮೆಷಿನ್ ಜಪ್ತಿ – Kannada News | Major Counterfeit Currency Operation Unearthed in Dakshina Kannadas Uppinangady

ಉಪ್ಪಿನಂಗಡಿ, ಜು.16: ಸಾರ್ವಜನಿಕ ವಲಯ ಹಾಗೂ ಬ್ಯಾಂಕಿಂಗ್ ವ್ಯವಸ್ಥೆಗೆ ದೊಡ್ಡ ತಲೆನೋವಾಗಿದ್ದ ನಕಲಿ ನೋಟು ತಯಾರಿಸುವ ಬೃಹತ್ ಜಾಲವೊಂದನ್ನು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಪೊಲೀಸರು, ನಕಲಿ ನೋಟು ಮುದ್ರಣಕ್ಕೆ ಬಳಸುತ್ತಿದ್ದ ಸುಧಾರಿತ ಮುದ್ರಣ ಯಂತ್ರಗಳನ್ನು ಜಪ್ತಿ ಮಾಡಿದ್ದಾರಲ್ಲದೆ, ಅಂತರರಾಜ್ಯ ಸಂಪರ್ಕ ಹೊಂದಿದ್ದ ಬರೋಬ್ಬರಿ 7 ಮಂದಿ ಖತರ್ನಾಕ್ ಆರೋಪಿಗಳನ್ನು ಬಂಧಿಸಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಅಡಿಂಜೆ ಎಂಬ ನಿರ್ಜನ ಹಾಗೂ ರಹಸ್ಯ ಪ್ರದೇಶದಲ್ಲಿ…

Read More

ಪ್ರವಾಸಿಗರ ಜೀವದ ಜೊತೆ ಚೆಲ್ಲಾಟ: ತುಕ್ಕು ಹಿಡಿದು ಅಪಾಯಕಾರಿ ಸ್ಥಿತಿ ತಲುಪಿರುವ ಅಬ್ಬಿ ಫಾಲ್ಸ್‌ನ ವೀಕ್ಷಣಾ ಗೋಪುರ – Kannada News | Negligence at Abbey Falls: Rusted View Tower Puts Tourist Lives at Risk

ಕೊಡಗು, ಜುಲೈ 16: ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲಿರುವ ಪ್ರಸಿದ್ಧ ಅಬ್ಬಿ ಫಾಲ್ಸ್‌ನ ವೀಕ್ಷಣಾ ಗೋಪುರವು ಸಂಪೂರ್ಣ ತುಕ್ಕು ಹಿಡಿದು ಅಪಾಯಕಾರಿ ಸ್ಥಿತಿ ತಲುಪಿದೆ. ಕಬ್ಬಿಣದ ತಡೆಬೇಲಿಗಳು ಕುಸಿದಿದ್ದು, ಕೆಲವೆಡೆ ಹಗ್ಗದಿಂದ ಕಟ್ಟಿರುವುದು ಕಂಡುಬಂದಿವೆ. ಪ್ರವಾಸಿಗರು ಸೆಲ್ಫಿ ತೆಗೆದುಕೊಳ್ಳಲು ತಡೆಬೇಲಿಗೆ ಒರಗುವಾಗ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ. ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಅಬ್ಬಿ ಫಾಲ್ಸ್‌ನಿಂದ ವರ್ಷಕ್ಕೆ 2 ಕೋಟಿಗೂ ಅಧಿಕ ಆದಾಯ ಬರುತ್ತದೆ. ಆದರೂ, ಬರುವ ಪ್ರವಾಸಿಗರ ಸುರಕ್ಷತೆಯ ಬಗ್ಗೆ ಪಂಚಾಯತಿ ಅಥವಾ ಪ್ರವಾಸೋದ್ಯಮ ಇಲಾಖೆ…

Read More

Video: CET ಕೌನ್ಸೆಲಿಂಗ್ ಅಪ್ಡೇಟ್; ಮೊದಲ ಸುತ್ತಿನ ಫಲಿತಾಂಶ ಮತ್ತು ಪ್ರವೇಶ ಪ್ರಕ್ರಿಯೆ ಬಗ್ಗೆ KEA ಸ್ಪಷ್ಟನೆ! – Kannada News | KEA Executive Director H. Prasanna Provides Crucial CET Counselling Updates

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) 2026ರ CET ಕೌನ್ಸೆಲಿಂಗ್‌ನ ಮೊದಲ ಸುತ್ತಿನ ಅಂತಿಮ ಫಲಿತಾಂಶವನ್ನು ಪ್ರಕಟಿಸಿದೆ. ವಿದ್ಯಾರ್ಥಿಗಳು ತಮ್ಮ ಆಯ್ಕೆಗಳನ್ನು ಅಂತಿಮಗೊಳಿಸಲು ಜುಲೈ 24 ಸಂಜೆ 5:30ರವರೆಗೆ ಸಮಯ ನೀಡಲಾಗಿದೆ. KEA ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಅವರು ಫಲಿತಾಂಶದ ನಂತರ ವಿದ್ಯಾರ್ಥಿಗಳಿಗೆ ಲಭ್ಯವಿರುವ ನಾಲ್ಕು ಆಯ್ಕೆಗಳ (Choice 1, Choice 2, Choice 3, Choice 4) ಬಗ್ಗೆ ವಿವರವಾಗಿ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿಗಳು ತಾವು ಪಡೆದ ಸೀಟಿನ ಕುರಿತು ಸಂಪೂರ್ಣ ತೃಪ್ತರಾಗಿದ್ದರೆ ‘Choice 1’…

Read More

ಮಗಳ ಸರ್ಕಾರಿ ನೌಕರಿಗಾಗಿ ಸಾಹುಕಾರ್ ಅಕ್ರಮ ಎಸಗಿರೋದು ಅಕ್ಷಮ್ಯ ಅಪರಾಧ; ಕೆಪಿಎಸ್‌ಸಿ ಹಗರಣದ ತನಿಖೆ ಸಿಬಿಐಗೆ ಒಪ್ಪಿಸಲು ಯತ್ನಾಳ್ ಆಗ್ರಹ – Kannada News | Karnataka KPSC Fraud: Chairman Sahukar Faces Nepotism Charges, HC Denies Stay

ಬೆಂಗಳೂರು, ಜು.16: ಲಕ್ಷಾಂತರ ಯುವಕರ ಭವಿಷ್ಯವನ್ನು ನಿರ್ಧರಿಸುವ ಕರ್ನಾಟಕ ಲೋಕಸೇವಾ ಆಯೋಗದ (KPSC) ಅಧ್ಯಕ್ಷರು ತಮ್ಮ ಮಗಳಿಗೆ ಸರ್ಕಾರಿ ಹುದ್ದೆ ಕೊಡಿಸಲು ನಕಲಿ ಆದಾಯ ಪ್ರಮಾಣ ಪತ್ರ ಸೃಷ್ಟಿಸಿ ಅಕ್ರಮ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ. ಈ ಕಾರಣಕ್ಕೆ ಕೆಪಿಎಸ್​​​ಸಿ ಅಧ್ಯಕ್ಷ ಸ್ಥಾನದಿಂದ ಶಿವಶಂಕರಪ್ಪ ಸಾಹುಕಾರ್ ಅವರನ್ನು ಅಮಾನತುಗೊಳಿಸಿರುವ ರಾಜ್ಯಪಾಲರ ಆದೇಶದ ವಿರುದ್ಧ ಇದೀಗ ಕಾನೂನು ಹೋರಾಟ ನಡೆಯುತ್ತಿದೆ. ಇದರ ಹೊತ್ತಿನಲ್ಲೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಎಕ್ಸ್​​​ನಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ. ಇದೀಗ ಈ…

Read More

ಐಪಿಎಲ್ ರೆಕಾರ್ಡ್​ ಉಡೀಸ್: ವಿಶ್ವ ದಾಖಲೆಯ ಚೇಸಿಂಗ್! – Kannada News | Washington Freedom Creates New World Record in T20 Cricket

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಗರಿಷ್ಠ ಸ್ಕೋರ್ ಚೇಸ್ ಮಾಡಿದ ತಂಡ ಯಾವುದು? ಈ ಪ್ರಶ್ನೆಗೆ ಹೊಸ ಉತ್ತರ ವಾಷಿಂಗ್ಟನ್ ಫ್ರೀಡಂ. ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಂ ಬರೋಬ್ಬರಿ 267 ರನ್​ಗಳನ್ನು ಚೇಸ್ ಮಾಡಿ ಹೊಸ ಇತಿಹಾಸ ನಿರ್ಮಿಸಿದೆ. ಒಕ್ಲಾಂಡ್​ನಲ್ಲಿ ನಡೆದ ಈ ನಿರ್ಣಾಯಕ ಪಂದ್ಯದಲ್ಲಿ ಎಂಐ ನ್ಯೂಯಾರ್ಕ್​ ಹಾಗೂ ವಾಷಿಂಗ್ಟನ್ ಫ್ರೀಡಂ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ವಾಷಿಂಗ್ಟನ್ ತಂಡದ ನಾಯಕ ಸ್ಟೀವ್ ಸ್ಮಿತ್ ಬೌಲಿಂಗ್…

Read More

ಆಷಾಢ ಮಾಸ ಅಶುಭವೆಂದಾದರೆ ಪುರಿ ಜಗನ್ನಾಥ ರಥಯಾತ್ರೆ ಇದೇ ತಿಂಗಳಲ್ಲಿ ನಡೆಯುವುದೇಕೆ? ಇಲ್ಲಿದೆ ಅಸಲಿ ರಹಸ್ಯ! – Kannada News | Ashada Masa and Rath Yatra: Why Puri Jagannath Yatra Happens in ‘Shunya Masa’?

ಪುರಿ ಜಗನ್ನಾಥ ರಥಯಾತ್ರೆImage Credit source: Getty Images ಹಿಂದೂ ಪಂಚಾಂಗದ ಪ್ರಕಾರ ಆಷಾಢ ಮಾಸ ವಿವಾಹ, ಗೃಹಪ್ರವೇಶ, ಹೊಸ ಮನೆ ನಿರ್ಮಾಣ, ಉಪನಯನದಂತಹ ಶುಭ ಕಾರ್ಯಗಳಿಗೆ ಸೂಕ್ತವಲ್ಲದಿರುವುದರಿಂದ ಈ ಮಾಸವನ್ನು’ಶೂನ್ಯ ಮಾಸ’ ಎಂದು ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಹಲವರ ಮನದಲ್ಲಿ ಒಂದು ಕುತೂಹಲದ ಪ್ರಶ್ನೆ ಮೂಡುವುದು ಸಹಜ—”ಆಷಾಢ ಮಾಸವೇ ಅಶುಭ ಎಂದಾದರೆ, ವಿಶ್ವಪ್ರಸಿದ್ಧ ಪುರಿ ಜಗನ್ನಾಥ ರಥಯಾತ್ರೆ ಇದೇ ತಿಂಗಳಲ್ಲಿ ಏಕೆ ವೈಭವದಿಂದ ಜರುಗುತ್ತದೆ?” ಎಂಬುದು. ಈ ದೈವಿಕ ಸಂಭ್ರಮ ಕೇವಲ ಒಡಿಶಾದ ಪುರಿಗೆ ಮಾತ್ರ…

Read More