ದೇವರ ದರ್ಶನಕ್ಕೆಂದು ಕರೆದೊಯ್ದು, ಪರ್ಸ್ ಬೀಳಿಸಿ ಗಂಡನನ್ನು ಹಂತಕರಿಗೆ ಒಪ್ಪಿಸಿದ ಪತ್ನಿ, ಮಗುವಿನೆದುರೇ ಭೀಕರ ಹತ್ಯೆ – Kannada News | Chittoor Temple: Family Visit Takes Shocking Turn Near Temple, Investigation Reveals New Details
ಚಿತ್ತೂರು, ಜುಲೈ 16: ವಿವಾಹೇತರ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಮಹಿಳೆ ದೇವಸ್ಥಾನಕ್ಕೆ ಕರೆದೊಯ್ದು, ಪರ್ಸ್ ಬೀಳಿಸುವ ನಾಟಕವಾಡಿ ಹಂತಕರ ಕೈಗೆ ಒಪ್ಪಿಸಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಗುಡಿಪಲ್ಲಿ ಮಂಡಲದಲ್ಲಿ ನಡೆದಿದೆ. ಕೊಲೆಯಾದ ದುರ್ದೈವಿಯನ್ನು ತಮಿಳುನಾಡಿನ ಸುಳಗಿರಿ ನಿವಾಸಿ ರಮೇಶ್ ಎಂದು ಗುರುತಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ರಮೇಶ್ ಪತ್ನಿ ಹಾಸಿನಿ, ಆಕೆಯ ಪ್ರಿಯಕರ ಯುಗಂಧರ್ ಸೇರಿದಂತೆ ನಾಲ್ವರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಲ್ಯದ ಗೆಳೆಯನ ಜೊತೆ ಮದುವೆಯ ನಂತರವೂ ಸಂಬಂಧ ಶಾಂತಿಪುರಂ ಮಂಡಲದ ಬೋಯಿನಪಲ್ಲಿ…