Horoscope Today: ಇಂದು ಈ ರಾಶಿಯವರ ವ್ಯಾಪಾರದಲ್ಲಿ ಅಧಿಕ ಲಾಭ

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜುಲೈ 07, ಮಂಗಳವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನಪರಾಭವನಾಮ ಸಂವತ್ಸರ, ಉತ್ತರಾಯಣ, ಜೇಷ್ಠ ಮಾಸ, ಗ್ರೀಷ್ಮ ಋತು, ಕೃಷ್ಣ ಪಕ್ಷದ ಸಪ್ತಮಿ ತಿಥಿ, ಉತ್ತರಾಭಾದ್ರ ನಕ್ಷತ್ರ, ಶೋಭನ ಯೋಗ ಮತ್ತು ಭವಕರಣಗಳನ್ನು ಒಳಗೊಂಡಿದೆ. ದಿನದ ಪ್ರಮುಖ ಸಮಯಗಳಾದ ರಾಹುಕಾಲವು ಮಧ್ಯಾಹ್ನ 3 ಗಂಟೆ 35 ನಿಮಿಷದಿಂದ ಸಂಜೆ 5 ಗಂಟೆ 11 ನಿಮಿಷದವರೆಗೆ ಇರಲಿದೆ. ಶುಭ ಕಾರ್ಯಗಳಿಗೆ ಸೂಕ್ತವಾದ ಸರ್ವ ಸಿದ್ಧಿ ಕಾಲವು ಬೆಳಗಿನ ಜಾವ 10 ಗಂಟೆ 47 ನಿಮಿಷದಿಂದ ಮಧ್ಯಾಹ್ನ 12 ಗಂಟೆ 24 ನಿಮಿಷದವರೆಗೆ ಇರಲಿದೆ ಎಂದು ಗುರೂಜಿ ಹೇಳಿದ್ದಾರೆ.

Source link

ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಅಬ್ಬರ: ಇಂದು ಎಲ್ಲೆಲ್ಲಿ ಶಾಲೆಗಳಿಗೆ ರಜೆ? ಇಲ್ಲಿದೆ ಪೂರ್ತಿ ವಿವರ – Kannada News | Karnataka Rain Fury: Schools and Colleges Declared Holiday in Chikkamagaluru, Shivamogga, Uttara Kannada and Belagavi

ಬೆಳಗಾವಿ ಮಳೆ ಮತ್ತು ದಾವಣಗೆರೆಯ ಯಲದೋಹಳ್ಳಿ ಶಾಲೆ (ಸಾಂದರ್ಭಿಕ ಚಿತ್ರ)Image Credit source: tv9

ಬೆಂಗಳೂರು, ಜುಲೈ 7: ಕರ್ನಾಟಕ ಕರಾವಳಿ, ಮಲೆನಾಡು ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆ ಆರ್ಭಟ ಮುಂದುವರಿದಿದೆ. ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿಯುತ್ತಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ಭಾರಿ ಗಾಳಿಗೆ ಹಲವೆಡೆ ಮರಗಳು ಬುಡಮೇಲಾಗಿ ರಸ್ತೆ ಸಂಪರ್ಕಗಳು ಕಡಿತಗೊಂಡಿವೆ. ಇತ್ತ ಮಹಾರಾಷ್ಟ್ರದ ಘಟ್ಟಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಮುಂಗಾರು ಮಳೆಯ (Monsoon Rain ಈ ರೌದ್ರಾವತಾರದ ನಡುವೆ, ಮುಂಜಾಗ್ರತಾ ಕ್ರಮವಾಗಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಪ್ರಮುಖ ಜಿಲ್ಲೆಗಳ ಹಲವು ತಾಲೂಕುಗಳಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಚಿಕ್ಕಮಗಳೂರಿನ 6 ತಾಲೂಕುಗಳಲ್ಲಿ ರಜೆಯ ಘೋಷಣೆ

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯ ತೀವ್ರತೆ ಹೆಚ್ಚಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ 6 ತಾಲೂಕುಗಳ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಜಿಲ್ಲೆಯ ಮೂಡಿಗೆರೆ, ಕೊಪ್ಪ ಮತ್ತು ಎನ್.ಆರ್.ಪುರ ತಾಲೂಕುಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಶೃಂಗೇರಿ ತಾಲೂಕಿನಲ್ಲಿ ಮಳೆಯ ಆರ್ಭಟ ಜೋರಾಗಿರುವುದರಿಂದ ಶಾಲೆ ಹಾಗೂ ಕಾಲೇಜುಗಳೆರಡಕ್ಕೂ ರಜೆ ನೀಡಲಾಗಿದೆ. ಇನ್ನು ಕಳಸ ತಾಲೂಕಿನಲ್ಲಿ ಅಂಗನವಾಡಿ ಸೇರಿದಂತೆ 1 ರಿಂದ 7ನೇ ತರಗತಿಯವರೆಗಿನ ಪ್ರಾಥಮಿಕ ಶಾಲೆಗಳಿಗೆ ಮಾತ್ರ ರಜೆ ಇರಲಿದೆ. ಉಳಿದಂತೆ ಚಿಕ್ಕಮಗಳೂರು ತಾಲೂಕಿನ ವ್ಯಾಪ್ತಿಯ ಜಾಗರ, ವಸ್ತಾರೆ, ಖಾಂಡ್ಯ, ಆಲ್ದೂರು ಮತ್ತು ಆವತಿ ಹೋಬಳಿಗಳ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ನೀಡಿ ಆದೇಶ ಹೊರಡಿಸಲಾಗಿದೆ.

ಶಿವಮೊಗ್ಗದ 3 ತಾಲೂಕುಗಳ ಶಾಲಾ-ಕಾಲೇಜು ರಜೆ

ಶಿವಮೊಗ್ಗ ಜಿಲ್ಲೆಯಲ್ಲೂ ಮಳೆಯ ಅಬ್ಬರ ಜೋರಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಮೂರು ಪ್ರಮುಖ ತಾಲೂಕುಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ತೀರ್ಥಹಳ್ಳಿ, ಹೊಸನಗರ ಹಾಗೂ ಸಾಗರ ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲಾ ಮತ್ತು ಕಾಲೇಜುಗಳಿಗೆ ಇಂದು ರಜೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಕನ್ನಡದ 5 ತಾಲೂಕುಗಳಲ್ಲಿ ಶಾಲೆಗಳಿಗೆ ರಜೆ

ಕರಾವಳಿ ಮತ್ತು ಮಲೆನಾಡು ಭಾಗವನ್ನು ಒಳಗೊಂಡಿರುವ ಉತ್ತರ ಕನ್ನಡ ಜಿಲ್ಲೆಯಲ್ಲೂ ಬಿಡುವಿಲ್ಲದೆ ಮಳೆ ಸುರಿಯುತ್ತಿದೆ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲೆಯ ಶಿರಸಿ, ಸಿದ್ದಾಪುರ, ಜೋಯಿಡಾ, ದಾಂಡೇಲಿ ಮತ್ತು ಯಲ್ಲಾಪುರ ಸೇರಿದಂತೆ ಒಟ್ಟು ಐದು ತಾಲೂಕುಗಳ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಇಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು ಆದೇಶ ಹೊರಡಿಸಿದ್ದಾರೆ.

ಹಾಸನ ಮತ್ತು ಬೆಳಗಾವಿಯಲ್ಲೂ ರಜೆ

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಕಳೆದ 5 ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಸಕಲೇಶಪುರ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಿ ತಹಶೀಲ್ದಾರ್ ಸುಪ್ರಿತಾ ಆದೇಶಿಸಿದ್ದಾರೆ. ಮತ್ತೊಂದೆಡೆ, ಬೆಳಗಾವಿ ಜಿಲ್ಲೆಯಲ್ಲೂ ಮಳೆಯ ಅಬ್ಬರ ಹೆಚ್ಚಾಗಿದ್ದು, ಬೆಳಗಾವಿ ನಗರ ಮತ್ತು ಖಾನಾಪುರ ತಾಲೂಕಿನಾದ್ಯಂತ ಎಲ್ಲಾ ಶಾಲೆಗಳು ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಆದೇಶ ಹೊರಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಿತ್ಯ ಭವಿಷ್ಯ : ಇಂದು ಈ ರಾಶಿಯವರ ಪ್ರಯಾಣದಲ್ಲಿ ಅವಘಡ ಸಂಭವಿಸುವುದು.. – Kannada News | Daily Horoscope July 7: Find Your Rashi’s Fortune, Career, Love and Health Forecasts

ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ಗ್ರೀಷ್ಮ ಋತುವಿನ ನಿಜ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಅಷ್ಟಮೀ ತಿಥಿಯ ಮಂಗಳವಾರದಂದು ವರದಾನ, ಸ್ಪರ್ಧೆಗೆ ಸಿದ್ಧತೆ, ಹಿರಿಯರಿಂದ ಪ್ರಶಂಸೆ, ಕೊನೆಯ ಕ್ಷಣದಲ್ಲಿ ಸರಿ ನಿರ್ಧಾರ, ವಿಳಂಬ ಯೋಜನೆ, ನಿವೃತ್ತಿಯಿಂದ ಬೇಸರ, ಅಪರಿಚಿತರ ಕೋಪಕ್ಕೆ ಬಲಿ ಇವೆಲ್ಲ ಇಂದಿನ ಭವಿಷ್ಯ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ನಿಜ ಜ್ಯೇಷ್ಠ, ಸೌರ ಮಾಸ : ಮಿಥುನ, ಮಹಾನಕ್ಷತ್ರ : ಪುನರ್ವಸು, ವಾರ : ಮಂಗಳ, ಪಕ್ಷ : ಕೃಷ್ಣ, ತಿಥಿ : ಅಷ್ಟಮೀ, ನಿತ್ಯನಕ್ಷತ್ರ : ರೇವತೀ, ಯೋಗ : ಶೋಭನ, ಕರಣ : ಬವ, ಸೂರ್ಯೋದಯ – 06 – 00 am, ಸೂರ್ಯಾಸ್ತ – 06 – 49 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:37 – 17:13, ಯಮಗಂಡ ಕಾಲ 09:12 – 10:48, ಗುಳಿಕ ಕಾಲ 12:25 – 14:01

ಮೇಷ ರಾಶಿ :

ತೆರೆ ತೆರೆದರೆ ಬೆಳಕು, ತೆರೆಯದಿದ್ದರೆ ಕತ್ತಲು ಇರುತ್ತದೆ ಎನ್ನುವುದನ್ನು ಅರಿತುಕೊಳ್ಳಿ. ಸಂಗಾತಿಯ ಆಯ್ಕೆಯನ್ನು ನೀವೇ ಮಾಡಿ. ಪರಿಶ್ರಮವು ಎಂದಿಗಿಂತ ಅಧಿಕವಾಗಿದ್ದು, ಅದಕ್ಕೆ ಯೋಗ್ಯವಾದ ಫಲವು ಸಿಗುವುದು. ನಡೆಯುವಾಗ ಉಳುಕಿದ ಕಾಲು, ದೊಡ್ಡ ತೊಂದರೆಯನ್ನು ಮಾಡುವುದು. ವಾಹನ ಖರೀದಿಗೆ ಓಡಾಟ ಮಾಡಬೇಕಾದೀತು. ಯಾವ ಸಂತೋಷವೂ ಸುಮ್ಮನೇ ಸಿಕ್ಕದು. ಕರ್ತವ್ಯಕ್ಕೆ ನಿಮ್ಮ ಮನಸ್ಸನ್ನು ಕೊಟ್ಟುಕೊಳ್ಳುವಿರಿ. ಸಂಗಾತಿಯ ಜೊತೆ ದೂರ ಪ್ರಯಾಣ ಮಾಡುವಿರಿ.

ವೃಷಭ ರಾಶಿ :

ನಿಮ್ಮ‌ ಪ್ರಾಮಾಣಿಕ ಕೆಲಸಕ್ಕೆ ಅಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ಮಿತ್ರರೆಂದು ಬಂದವರ ವಿಚಾರದಲ್ಲಿ ಜಾಗರೂಕತೆ ಇರಲಿ. ಕೆಟ್ಟ ವಾತಾವರಣದಿಂದ ಮುಕ್ತಿ ದೊರೆತಂತಹ ಅನುಭವ ನಿಮಗಿಂದು. ಮಾನಸಿಕವಾಗಿ ನಿಮಗೆ ನೆರೆಹೊರೆಯವರು ನೀರಿನ ವಿಚಾರಕ್ಕೆ ತೊಂದರೆ ಕೊಡಬಹುದು. ಕುಟುಂಬ ನಿರ್ವಹಣೆಯ ವಿಚಾರದಲ್ಲಿ ದಂಪತಿಗಳ ನಡುವೆ ಭಿನ್ನಾಭಿಪ್ರಾಯ ಬರಬಹುದು. ಕಛೇರಿಗೆ ಒಲ್ಲದ ಮನಸ್ಸಿನಿಂದ ಹೋಗುವಿರಿ. ವಿನೀತಭಾವವು ನಿಮ್ಮನ್ನು ಇಷ್ಟಪಡುವಂತೆ ಮಾಡಬಹುದು.

ಮಿಥುನ ರಾಶಿ :

ದಾಂಪತ್ಯ ಜೀವನವು ಜೀವನ್ಮರಣದ ಮಧ್ಯದಲ್ಲಿ ಒದ್ದಾಗುತ್ತಿದ್ದು ಬದುಕಿಸಿಕೊಳ್ಳಿ. ಸ್ತ್ರೀಯರು ಮನೆಯಲ್ಲಿ ಆದ ಘಟನೆಯಿಂದ ತಾಳ್ಮೆಯನ್ನು ಕಳೆದುಕೊಳ್ಳಬಾರದು. ಕಛೇರಿಯಲ್ಲಿ ಇಂದು ನಿಮ್ಮ ಅವಶ್ಯಕತೆ ಬಹಳವಾಗಿ ಕಾಣಿಸುವುದು. ಸಾಹಸ ಪ್ರವೃತ್ತಿಯಿಂದ ನಿನಗೆ ಯಶಸ್ಸು ಸಿಗಬಹುದು. ಸಂಗಾತಿಯ ಬಗ್ಗೆ ನೀವೇ ಇಲ್ಲದ ಮಾತನಾಡುವಿರಿ. ಮೋಜಿನ‌ ಆಟಕ್ಕೆ ಬಲಿಯಾಗುವ ಸಾಧ್ಯತೆ ಇದೆ. ಕಛೇರಿಯಲ್ಲಿ ಕೆಲವರ ವರ್ತನೆಯು ಬದಲಾದಂತೆ ತೋರುವುದು.

ಕರ್ಕಾಟಕ ರಾಶಿ :

ಯಾರ ಒತ್ತಾಯಕ್ಕೋ ಮಣಿದು ನಿಮ್ಮ ನಿರ್ಧಾರಗಳನ್ನು ಬದಲಿಸಿಕೊಳ್ಳಬೇಡಿ. ಕಛೇರಿಯಲ್ಲಿ ಉದ್ಯೋಗದ ಕಾರಣ ನಿಮ್ಮನ್ನು ದೂರದ ಊರಿಗೆ ಕಳುಹಿಸಬಹುದು. ಸಿಗದುದನ್ನು ಎಷ್ಟು ನೆನೆದರೂ ಪ್ರಯೋಜನವಾಗದು. ಸಮಯ ಬಂದಾಗ ತಾನಾಗಿಯೇ ನಿಮ್ಮದಾಗುವುದು. ಬಾಂಧವ್ಯವನ್ನು ಗಟ್ಟಿಯಾಗಿಸಲು ಇಷ್ಟಪಡುವಿರಿ. ನಿಮ್ಮ ಮಾತಿನ ವೇಗವನ್ನು ಅರ್ಥಮಾಡಿಕೊಳ್ಳಲು ಕಷ್ಟವಾದೀತು. ಕಛೇರಿಯಲ್ಲಿ ಸ್ತ್ರೀಯರಿಂದ ಸಹಕಾರವನ್ನು ಪಡೆಯುವಿರಿ.

ಸಿಂಹ ರಾಶಿ :

ಹೊಸ ಉದ್ಯೋಗವನ್ನು ಆರಂಭಿಸುವುದಿದ್ದರೆ ಒಳ್ಳೆಯದು. ಹೆಚ್ಚು ಮಾತನಾಡಿ ನಿಮ್ಮನ್ನು ನೀವೇ ಸಣ್ಣವರನ್ನಾಗಿ ಮಾಡಿಕೊಳ್ಳಬೇಡಿ. ನಾನಾ ಮೂಲಗಳಿಂದ ವಿವಿಧ ಸಂಪತ್ತುಗಳು ಬರಲಿದೆ. ದಾಂಪತ್ಯದಲ್ಲಿ ವಿರಸವು ನಷ್ಟವಾಗುವುದು. ಅಧಿಕ ಆದಾಯಕ್ಕೆ ನಿಮ್ಮ ಉದ್ಯಮವನ್ನು ವಿಸ್ತರಿಸುವಿರಿ. ತಣ್ಣೀರಾದರೂ ತಣಿಸಿ ಕುಡಿಯುವುದೇ ಒಳ್ಳೆಯದು. ನಿಮ್ಮ ಸಮಜಾಯಿಷಿಯ ಅಗತ್ಯವಿಲ್ಲ. ಖರೀದಿಯನ್ನು ನೀವು ಬಹಳ ಉತ್ಸಾಹದಿಂದ ಮಾಡುವಿರಿ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ.

ಕನ್ಯಾ ರಾಶಿ :

ಅಪರೂಪಕ್ಕೆ ಕುಟುಂಬದಲ್ಲಿ ಸಣ್ಣ ಮಟ್ಟಿನ ಕಲಹವೂ ಆದೀತು. ತಂದೆ ತಾಯಿಗಳನ್ನು ಬಹಳ ಸಂತೋಷದಿಂದ‌ ನೋಡಿಕೊಳ್ಳುವಿರಿ. ರಾಜಕೀಯದ ಮನೋಭಾವ ನಿಮ್ಮಲ್ಲಿ ಜಾಗ್ರತಿ ಹೊಂದುವುದು. ಅವರು ಅಪೇಕ್ಷಿಸಿದ ಸ್ಥಳಕ್ಕೆ ಅವರನ್ನು ಕರೆದೊಯ್ಯುವಿರಿ. ನಿಮ್ಮ ಕೈಲಾದವರಿಗೆ ಸಹಾಯವನ್ನು ಮಾಡುವುದು ಒಳ್ಳೆಯದು. ನಿಮ್ಮ ಮಾತು ಇತರಿಗೆ ಹಗುರವಾಗಿ‌ ಅನ್ನಿಸುವುದು.

ತುಲಾ ರಾಶಿ :

ಕಾರ್ಯದ ನಿಮಿತ್ತ ವ್ಯರ್ಥ ಓಡಾಟವನ್ನು ಮಾಡುವಿರಿ. ನಿಮ್ಮ ಬಗ್ಗೆ ಸದ್ಭಾವನೆ ಇರುವವರು ನಿಮಗೆ ಶ್ರೇಯಸ್ಸನ್ನು ಹರಸುವರು. ಹಣಕಾಸಿನ ವಿಚಾರಕ್ಕೆ ಸಲ್ಲದ ಅಪವಾದ ಬಂದೀತು. ನಿಮ್ಮ ಸಮಸ್ಯೆಗಳನ್ನು ಆಪ್ತರ ಜೊತೆ ಹಂಚಿಕೊಳ್ಳುವುದು ಉತ್ತಮ. ಇಂದು ಕುಟುಂಬದ ಮಂಗಲ ಕಾರ್ಯದಲ್ಲಿ ಭಾಗಿಯಾಗುವಿರಿ. ನಿಮ್ಮ ಸಣ್ಣ ವಿಷಯಗಳೂ ಬೇಕಾದಷ್ಟು ಪ್ರಯೋಜನಕಾರಿ. ನಿಮ್ಮ ಇಂದಿನ ಸ್ಥಿತಿಯು ಅಭಿವೃದ್ದಿಗೆ ಹಲವಾರು ದಾರಿಗಳನ್ನು ಹುಡುಕುವಿರಿ.

ಇದನ್ನೂ ಓದಿ;  ಜುಲೈ ತಿಂಗಳಲ್ಲಿ ಈ ರಾಶಿಯವರಿಗೆ ಆರ್ಥಿಕ ಒತ್ತಡ, ವಿಪರೀತ ಕೋಪ; ಸಮಸ್ಯೆಗಳಿಂದ ಪಾರಾಗಲು ಇವೇ ನೋಡಿ ಸರಳ ಪರಿಹಾರಗಳು

ವೃಶ್ಚಿಕ ರಾಶಿ :

ಇಂದು ನಿಮ್ಮ ಪ್ರತಿಭೆಯ ಪ್ರದರ್ಶನವಾಗಲಿದೆ‌. ಸ್ನೇಹಿತರ ಜೊತೆ ಹೆಚ್ಚು ಕಾಲವನ್ನು ಕಳೆದು ನೋವನ್ನು ಹಂಚಿಕೊಳ್ಳುವರು. ಅಲ್ಪ ಆದಾಯದ ಉದ್ಯೋಗವು ನಿಮಗೆ ಬಲ ನೀಡುವುದು. ವಿದ್ಯುತ್ ಉಪಕರಣಗಳ ಮಾರಾಟವನ್ನು ನೀವು ಮಾಡುತ್ತಿದ್ದರೆ ಲಾಭವನ್ನು ಪಡೆಯಬಹುದಾಗಿದೆ. ನಿಮ್ಮಿಂದ ಆಗುವ ಕೆಲಸಕ್ಕೆ ಹೆಚ್ಚು ಒತ್ತು ಕೊಡಿ. ತೊಂದರೆಗೆ ಸಿಕ್ಕಿಕೊಳ್ಳಲು ನೀವೇ ಕಾರಣ. ಇದೇ ನಿಮಗೆ ಮುಳುವಾಗಬಹುದು. ಇನ್ನೊಬ್ಬರಿಗೆ ನಿಮ್ಮನ್ನು ಹೋಲಿಸಿಕೊಂಡು ಬೇಸರಿಸುವಿರಿ.

ಧನು ರಾಶಿ :

ನಿಮಗಾದ ವಂಚನೆಯನ್ನು ಸರಿ ಮಾಡಿಕೊಳ್ಳಲು ಕಾನೂನಿಗೆ ವಿರುದ್ಧವಾಗಿ ಹೋಗುವಿರಿ. ಇದನ್ನು ತಡೆಯುವವರ ಮೇಲೆ ಸಿಟ್ಟಾಗುವಿರಿ. ವ್ಯಾಪಾರದಲ್ಲಿ ಅಧಿಕಲಾಭವನ್ನು ಗಳಿಸಲಿದ್ದೀರಿ. ಸರ್ಕಾರಿ ಅಧಿಕಾರಿಗಳು ಸಂಕಷ್ಟದಲ್ಲಿ ಸಿಲುಕಿಕೊಳ್ಳುವರು. ಇಂದು ಪರರ ವಿಚಾರದಲ್ಲಿ ಹೆಚ್ಚು ಮನಸ್ಸು ಇರಲಿದೆ. ಮಾತಿನ‌ ಮೇಲೆ ಯಾರನ್ನೂ ಅಳೆಯಬೇಡಿ. ಜೀವನ ನಿರ್ವಹಣೆಗೆ ಮತ್ತೊಂದು ವೃತ್ತಿಯನ್ನು ಆಶ್ರಯಿಸುವ ಸಂಭವವೂ ಇದೆ. ಆಪ್ತರ ಬಗ್ಗೆ ಇರುವ ನಕಾರತ್ಮಕ ಭಾವವನ್ನು ನೀವು ಅವರಿಗೆ ಹೇಳುವಿರಿ.

ಮಕರ ರಾಶಿ :

ಹತಾಶೆಯಿಂದ ಹೊರಬಂದು ಒಳ್ಳೆಯ ಕಾರ್ಯದವನ್ನು ಮಾಡುವತ್ತ ಗಮನಹರಿಸಿ. ನಕಾರಾತ್ಮಕ ಭಾವನೆಗಳಿಗೆ ದಾರಿ ಮಾಡಿ ಕೊಡಬೇಡಿ. ಚಂಚಲಸ್ವಭಾವವನ್ನು ನಿಯಂತ್ರಿಸಲು ಕಷ್ಟವಾದೀತು.‌ ಅಲಂಕಾರಕಕ್ಕೆ ಹೆಚ್ಚು ಸಮಯ ಬೇಕಾಗುವುದು. ಆಕರ್ಷಣೆಯಿಂದ ಕೆಲವು ಲಾಭ ಜೀವನಕ್ಕೆ ಆಗುವುದು. ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಮನಸ್ಸು ಮಾಡುವರು. ಮನೆಮಂದಿಯವರ ಜೊತೆ ಸಿಟ್ಟಗೊಂಡರೆ ನಿಮಗೇ ತೊಂದರೆಯಾದೀತು. ನಿಮ್ಮ ಇಂದಿನ ಕಾರ್ಯದಿಂದ ಕಛೇರಿಯಲ್ಲಿ ನಿರೀಕ್ಷೆ ಮೀರಿ ಪ್ರಶಂಸೆ ಸಿಗುವುದು.

ಕುಂಭ ರಾಶಿ :

ಯಾರ ಮೇಲೂ ದ್ವೇಷವನ್ನು ಸಾಧಿಸುವುದು ಬೇಡ. ಮನಸ್ಸು ಕೆಡುತ್ತದೆಯಷ್ಟೇ. ಇನ್ನೊಬ್ಬರು ಆಡುವ ಮಾತುಗಳು ಅಸತ್ಯವೆನಿಸುವುದು. ಕಾರ್ಯದಲ್ಲಿ ವಿಳಂಬಗತಿ ಇರುವುದು. ಧಾರ್ಮಿಕ ನಂಬಿಕೆಯನ್ನು ಬದಲಿಸುವರು. ನಂಬಿಕೆಯನ್ನು ಉಳಿಸಿಕೊಳ್ಳಲು ಬೇಕಾದ ಪ್ರಯತ್ನ ಮಾಡುವಿರಿ. ಯಶಸ್ಸಿಗೆ ಅಡ್ಡದಾರಿಯನ್ನು ಹುಡುಕಬೇಡಿ. ನೀವು ಖರೀದಿಸುವ ಭೂಮಿಯ ದಾಖಲೆಯನ್ನು ಸಮಾಧಾನಚಿತ್ತದಿಂದ ಕೂಲಂಕಷವಾಗಿ ಪರಿಶೀಲಿಸಿ.

ಮೀನ ರಾಶಿ :

ನಿಮ್ಮ ಬುದ್ಧಿ, ಮನಸ್ಸುಗಳಿಗೆ ಕೆಲಸವನ್ನು ಕೊಡಿ. ಸಂಗಾತಿಯ ಜೊತೆ ವಿವಾದವಾಗುವುದು. ಯಾವುದೇ ವಿವಾದವನ್ನು ಎಳೆದುಕೊಳ್ಳಬೇಡಿ. ಆದರ್ಶವನ್ನು ಹೇಳಿ ಪ್ರಯೋಜನವಾಗದು, ಮಾಡಿದರೆ ಹೆಚ್ಚು ಪರಿಣಾಮ ಬೀರುವುದು. ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಮುಂದೆ ಸಾಗಿರಿ. ಇಂದಿನ ಕಾರ್ಯವನ್ನು ಮುಂದೂಡುವುದು ಬೇಡ. ನಿಮ್ಮ ಗುಣಗಳನ್ನು ಇತರರು ಆಡಿಕೊಳ್ಳಬಹುದು. ಪೋಷಕರನ್ನು ಕಡೆಗಣಿಸಿದ್ದು ನಿಮಗೆ ಪಾಪಪ್ರಜ್ಞೆ ಕಾಡಬಹುದು.

-ಲೋಹಿತ್ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಭಾರತದ ಎಡಿಸನ್’ ಜಿ.ಡಿ. ನಾಯ್ಡು ಬಯೋಪಿಕ್; ಟ್ರೇಲರ್​ನಲ್ಲಿ ಗಮನ ಸೆಳೆದ ಆರ್. ಮಾಧವನ್ – Kannada News | R Madhavan GD Naidu Biopic GDN trailer released transformation look goes viral

‘ರಾಕೆಟ್ರಿ: ದಿ ನಂಬಿ ಎಫೆಕ್ಟ್’ ಚಿತ್ರದಲ್ಲಿ ಇಸ್ರೋ ವಿಜ್ಞಾನಿ ನಂಬಿ ನಾರಾಯಣ್ ಪಾತ್ರದಲ್ಲಿ ಅದ್ಭುತವಾಗಿ ನಟಿಸಿ ಸೈ ಎನಿಸಿಕೊಂಡಿದ್ದ ಬಹುಮುಖ ಪ್ರತಿಭೆ ಆರ್. ಮಾಧವನ್ (R Madhavan) ಮತ್ತೊಂದು ಐತಿಹಾಸಿಕ ಬಯೋಪಿಕ್‌ನೊಂದಿಗೆ ಪ್ರೇಕ್ಷಕರ ಎದುರು ಬರಲು ಸಜ್ಜಾಗಿದ್ದಾರೆ. ಭಾರತದ ಪ್ರಸಿದ್ಧ ಎಂಜಿನಿಯರ್ ಹಾಗೂ ಸಂಶೋಧಕ ಗೋಪಾಲಸ್ವಾಮಿ ದೊರೈಸ್ವಾಮಿ ನಾಯ್ಡು (GD Naidu) ಅವರ ಜೀವನ ಆಧಾರಿತ ‘ಜಿಡಿಎನ್’ (GDN) ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದ್ದು, ಮಾಧವನ್ ಅವರ ಮೇಕ್ ಓವರ್ ಸಿನಿರಂಗದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.

ಕೃಷ್ಣಕುಮಾರ್ ರಾಮಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ಮಾಧವನ್ ಕೂಡ ಚಿತ್ರಕಥೆ ಬರವಣಿಗೆಯಲ್ಲಿ ಕೈ ಜೋಡಿಸಿದ್ದಾರೆ. ‘ಭಾರತದ ಎಡಿಸನ್’ ಎಂದೇ ಖ್ಯಾತರಾಗಿದ್ದ ಜಿ.ಡಿ. ನಾಯ್ಡು ಅವರ ಯೌವನದ ದಿನಗಳಿಂದ ಹಿಡಿದು ವೃದ್ಧಾಪ್ಯದವರೆಗಿನ ವಿವಿಧ ಹಂತಗಳನ್ನು ಈ ಚಿತ್ರದಲ್ಲಿ ತೋರಿಸಲಾಗಿದ್ದು, ವೃದ್ಧನ ಗೆಟಪ್‌ನಲ್ಲಿ ಮಾಧವನ್ ಅವರನ್ನು ಗುರುತಿಸಲೂ ಸಾಧ್ಯವಾಗದಷ್ಟು ಬದಲಾಗಿದ್ದಾರೆ.

‘ಜಿಡಿಎನ್’ ಚಿತ್ರದ ಟ್ರೇಲರ್:

ಜಿ.ಡಿ. ನಾಯ್ಡು ಜೀವನದ ಕಥೆ:

ಸುಮಾರು 3 ನಿಮಿಷಗಳ ಈ ಟ್ರೇಲರ್ ಜಿ.ಡಿ. ನಾಯ್ಡು ಅವರ ಕೊನೆಯ ದಿನಗಳ ವದಂತಿಗಳೊಂದಿಗೆ (ಅವರಿಗೆ ಹುಚ್ಚು ಹಿಡಿದಿದೆ ಮತ್ತು ಸ್ವಂತ ಕಟ್ಟಡಕ್ಕೆ ತಾವೇ ಬಾಂಬ್ ಇಟ್ಟಿದ್ದಾರೆ ಎಂಬ ಗಾಳಿಸುದ್ದಿ) ಆರಂಭವಾಗುತ್ತದೆ. ತಳಮಟ್ಟದ ಸಂಶೋಧಕನಾಗಿದ್ದ ಒಬ್ಬ ವ್ಯಕ್ತಿ, ಭಾರತದ ಪ್ರಮುಖ ಉದ್ಯಮಿಯಾಗಿ ಬೆಳೆದು, ಯುವಿಎಂಎಸ್ (UMS) ಸಾರಿಗೆ ಜಾಲವನ್ನು ನಿರ್ಮಿಸಿ, ದೇಶದ ಮೊದಲ ಪಾಲಿಟೆಕ್ನಿಕ್ ಕಾಲೇಜುಗಳನ್ನು ಸ್ಥಾಪಿಸಿದ ರೋಚಕ ಪಯಣವನ್ನು ಟ್ರೇಲರ್‌ನಲ್ಲಿ ಕಣ್ಣಿಗೆ ಕಟ್ಟುವಂತೆ ತೋರಿಸಲಾಗಿದೆ.

ಬ್ರಿಟಿಷರ ದ್ವೇಷ; ಸ್ವದೇಶಿಗರ ನಿರ್ಲಕ್ಷ್ಯ:

ಬ್ರಿಟಿಷ್ ಅಧಿಕಾರಿಗಳ ವಿರುದ್ಧ ಜಿ.ಡಿ. ನಾಯ್ಡು ನಡೆಸಿದ ಹೋರಾಟ ಮತ್ತು ಅಧಿಕಾರದಲ್ಲಿದ್ದವರಿಂದ ಅವರು ಎದುರಿಸಿದ ತೊಂದರೆಗಳನ್ನು ಚಿತ್ರದ ಪ್ರಮುಖ ಕಥಾವಸ್ತುವನ್ನಾಗಿ ಮಾಡಲಾಗಿದೆ. ಟ್ರೇಲರ್‌ನಲ್ಲಿ ಬ್ರಿಟಿಷ್ ಅಧಿಕಾರಿಯೊಬ್ಬ ‘ಯಾರೀ ಫಕೀರ?’ ಎಂದು ಕೇಳುವ ದೃಶ್ಯವಿದ್ದು, ಅದರ ಬೆನ್ನಲ್ಲೇ ‘ಬ್ರಿಟಿಷರು ಇವರನ್ನು ನೋಡಿ ಹೆದರಿದ್ದರು, ಆದರೆ ಸ್ವದೇಶಿಗರು ಇವರನ್ನು ಮರೆತರು’ ಎಂಬ ಪವರ್‌ಫುಲ್ ಟ್ಯಾಗ್‌ಲೈನ್ ಮೂಡಿಬರುತ್ತದೆ.

‘ದೇಶದ್ರೋಹ’ದ ಗಂಭೀರ ಆರೋಪ:

ಇದಲ್ಲದೆ, ಜಿ.ಡಿ. ನಾಯ್ಡು ಅವರ ಉದ್ಯಮದ ಮೇಲೆ ನಡೆದ ಪೊಲೀಸ್ ದಾಳಿಗಳು, ತೆರಿಗೆ ವಂಚನೆಯ ಸುಳ್ಳು ಆರೋಪಗಳು ಮತ್ತು ಎರಡನೇ ಮಹಾಯುದ್ಧದ ಸಮಯದಲ್ಲಿ ನಾಜಿಗಳೊಂದಿಗೆ ವ್ಯಾಪಾರ ಸಂಬಂಧ ಹೊಂದಿದ್ದರು ಎಂಬ ಕಾರಣಕ್ಕೆ ಅವರ ಮೇಲೆ ಹೊರಿಸಲಾದ ‘ದೇಶದ್ರೋಹ’ದ ಗಂಭೀರ ಆರೋಪಗಳ ಸುತ್ತ ಸಿನಿಮಾ ಸಾಗಲಿದೆ ಎಂಬುದನ್ನು ಟ್ರೇಲರ್ ಮೂಲಕ ತೋರಿಸಲಾಗಿದೆ.

ಇದನ್ನೂ ಓದಿ: ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ‘ಧುರಂಧರ್’ ನಟ ಆರ್. ಮಾಧವನ್: ವಿಡಿಯೋ ನೋಡಿ..

ಈ ಬಿಗ್ ಬಜೆಟ್ ಬಯೋಪಿಕ್​ನಲ್ಲಿ ಸತ್ಯರಾಜ್, ಜಯರಾಮ್, ಪ್ರಿಯಾಮಣಿ, ವಿನಯ್ ರಾಯ್, ಅದಿತಿ ಬಾಲನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗೋವಿಂದ್ ವಸಂತ ಅವರ ಹಿನ್ನೆಲೆ ಸಂಗೀತವಿದ್ದು, ಅರವಿಂದ್ ಕಮಲನಾಥನ್ ಛಾಯಾಗ್ರಹಣ ಮಾಡಿದ್ದಾರೆ. ‘ವರ್ಗೀಸ್ ಮೂಲನ್ ಪಿಕ್ಚರ್ಸ್’ ಮತ್ತು ಮಾಧವನ್ ಅವರ ‘ಟ್ರೈಕಲರ್ ಫಿಲ್ಮ್ಸ್’ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಸುರಂಗದೊಳಗೆ ನುಗ್ಗಿದ ನೀರು; ಭೀಕರ ಭೂಕುಸಿತಕ್ಕೆ ರಸ್ತೆ ಸಂಪೂರ್ಣ ಬಂದ್ – Kannada News | After Heavy Rain Water Gushes Through Mumbai Pune Expressway Tunnel Watch Video

ಮುಂಬೈ, ಜುಲೈ 6: ಮುಂಬೈ (Mumbai Rains) ಮತ್ತು ಅದರ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನ ಹೊಸದಾಗಿ ನಿರ್ಮಿಸಲಾದ ‘ಮಿಸ್ಸಿಂಗ್ ಲಿಂಕ್’ (Missing Link) ಯೋಜನೆಯ ಸುರಂಗ ಮಾರ್ಗದೊಳಗೆ ಬೆಟ್ಟದ ಮೇಲಿಂದ ಭಾರಿ ಪ್ರಮಾಣದ ನೀರು ಜಲಪಾತದಂತೆ ಧುಮುಕಿದೆ. ಸುರಂಗದ ಒಳಗಡೆ ನದಿಯಂತೆ ನೀರು ನುಗ್ಗುತ್ತಿರುವುದನ್ನು ಕಂಡು ವಾಹನ ಸವಾರರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇದರ ವಿಡಿಯೋಗಳು ವೈರಲ್ ಆಗಿದ್ದು, ಸುರಂಗದ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ವ್ಯಕ್ತವಾಗಿದೆ.

ಮುಂಬೈನಲ್ಲಿ ನಿರಂತರ ಮಳೆಯಿಂದಾಗಿ ಸುರಂಗ ಮಾರ್ಗದ ಸಮೀಪವಿರುವ ಬೆಟ್ಟದ ಇಳಿಜಾರಿನಲ್ಲಿ ಭಾರಿ ಭೂಕುಸಿತ ಸಂಭವಿಸಿದೆ. ದೊಡ್ಡ ಬಂಡೆಗಳು ಮತ್ತು ಮಣ್ಣು ರಸ್ತೆಯ ಮೇಲೆ ಬಿದ್ದಿದ್ದರಿಂದ, ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನ ಈ ಪ್ರಮುಖ ‘ಮಿಸ್ಸಿಂಗ್ ಲಿಂಕ್’ ರಸ್ತೆಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಅದೃಷ್ಟವಶಾತ್, ಭೂಕುಸಿತ ಸಂಭವಿಸಿದ ಸಮಯದಲ್ಲಿ ಯಾವುದೇ ವಾಹನಗಳು ಸಿಲುಕದ ಕಾರಣ ದೊಡ್ಡ ಅನಾಹುತ ತಪ್ಪಿದೆ.

ಮುಂಬೈ ಮತ್ತು ಪುಣೆ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಮತ್ತು ಖಂಡಾಲಾ ಘಾಟ್‌ನ ಕಡಿದಾದ ತಿರುವುಗಳನ್ನು ತಪ್ಪಿಸಲು ಈ ಬೃಹತ್ ಸುರಂಗ ಮಾರ್ಗ ಮತ್ತು ಮೇಲ್ಸೇತುವೆಯ ‘ಮಿಸ್ಸಿಂಗ್ ಲಿಂಕ್’ ಯೋಜನೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ, ಮೊದಲ ಮಳೆಗೇ ಈ ಅತ್ಯಾಧುನಿಕ ಸುರಂಗದೊಳಗೆ ನೀರು ನುಗ್ಗಿರುವುದು ಆಡಳಿತ ಮಂಡಳಿಗೆ ತಲೆನೋವಾಗಿ ಪರಿಣಮಿಸಿದೆ.

(Video Source: ANI)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಂಡೋನೇಷ್ಯಾದಲ್ಲಿ ರಾಮಾಯಣದ ತೊಗಲು ಬೊಂಬೆಯಾಟ ನೋಡಿ ಅಚ್ಚರಿಗೊಂಡ ಮೋದಿ – Kannada News | PM Modi witnessed Ramayana shadow puppetry in Indonesia Jakarta

ಜಕಾರ್ತ, ಜುಲೈ 6: ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ 3 ದೇಶಗಳ ಪ್ರವಾಸದ ಮೊದಲ ಭಾಗವಾಗಿ 3 ದಿನಗಳ ಅಧಿಕೃತ ಭೇಟಿಗಾಗಿ ಇಂದು ಇಂಡೋನೇಷ್ಯಾದ ರಾಜಧಾನಿ ಜಕಾರ್ತಾಕ್ಕೆ ಆಗಮಿಸಿದ್ದು, ಅವರಿಗೆ ಅಲ್ಲಿ ಭವ್ಯ ಸ್ವಾಗತ ದೊರೆತಿದೆ. ಇಂಡೋನೇಷ್ಯಾದ ಅಧ್ಯಕ್ಷರಾದ ಪ್ರಬೋವೊ ಸುಬಿಯಾಂಟೊ ಅವರು ಸ್ವತಃ ವಿಮಾನ ನಿಲ್ದಾಣಕ್ಕೆ ಆಗಮಿಸಿ ಪ್ರಧಾನಮಂತ್ರಿ ಮೋದಿಯವರನ್ನು (PM Narendra Modi) ಬರಮಾಡಿಕೊಂಡರು. ಪ್ರಧಾನಮಂತ್ರಿ ಮೋದಿಯವರ ವಿಮಾನವು ಇಂಡೋನೇಷ್ಯಾದ ವೈಮಾನಿಕ ವಲಯವನ್ನು ಪ್ರವೇಶಿಸುತ್ತಿದ್ದಂತೆ ಇಂಡೋನೇಷ್ಯಾ ವಾಯುಪಡೆಯ ಯುದ್ಧ ವಿಮಾನಗಳು ಅದಕ್ಕೆ ಬೆಂಗಾವಲಾಗಿ ಬಂದವು. ಭಾರತದ ನಾಯಕರನ್ನು ಸ್ವಾಗತಿಸಲು ಇಂಡೋನೇಷ್ಯಾದ ನಾಲ್ವರು ಪ್ರಮುಖ ಸಚಿವರು ಕೂಡ ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿದ್ದರು.

ಜಕಾರ್ತಾಗೆ ಆಗಮಿಸಿದ ಬಳಿಕ ಮೋದಿ ಅವರು ಅಲ್ಲಿನ ವಿಶೇಷ ಸಾಂಸ್ಕೃತಿಕ ನೃತ್ಯ ಪ್ರದರ್ಶನವನ್ನು ವೀಕ್ಷಿಸಿದರು. ಪ್ರಧಾನಿ ಮೋದಿಗಾಗಿ ವಿಶೇಷ ಸಾಂಸ್ಕೃತಿಕ ಪ್ರದರ್ಶನಗಳನ್ನು ಆಯೋಜಿಸಲಾಗಿತ್ತು. ಇದನ್ನು ನೋಡಿ ಖುಷಿಪಟ್ಟ ಪ್ರಧಾನಿ ಮೋದಿ ಚಪ್ಪಾಳೆ ತಟ್ಟಿ ಶ್ಲಾಘಿಸಿದರು. ಇದರಲ್ಲಿ ಪ್ರಮುಖವಾಗಿ, ರಾಮಾಯಣದ ಸಾರ್ವಕಾಲಿಕ ವೈಭವವನ್ನು ಬಿಂಬಿಸುವ ಇಂಡೋನೇಷ್ಯಾದ ಸಾಂಪ್ರದಾಯಿಕ ಶ್ಯಾಡೋ ಪಪೆಟ್ರಿ (ತೊಗಲು ಬೊಂಬೆಯಾಟ) ಪ್ರದರ್ಶನವು ಮೋದಿಯ ಗಮನ ಸೆಳೆಯಿತು.

ಇಂಡೋನೇಷ್ಯಾದಲ್ಲಿ ಇಂದಿಗೂ ರಾಮಾಯಣ ಮತ್ತು ಮಹಾಭಾರತದಂತಹ ಭಾರತೀಯ ಮಹಾಕಾವ್ಯಗಳ ಪ್ರಭಾವ ಗಾಢವಾಗಿದೆ. ಅಲ್ಲಿನ ಸಾಂಪ್ರದಾಯಿಕ ನೃತ್ಯ ಪ್ರಕಾರಗಳಲ್ಲಿಯೂ ಈ ಜಾನಪದ ಕಲೆಗಳು ಎದ್ದು ಕಾಣುತ್ತವೆ. ಪ್ರಧಾನಿ ಮೋದಿ ಅವರ ಭೇಟಿಯ ಆರಂಭದಲ್ಲೇ ನಡೆದ ಈ ಸಾಂಸ್ಕೃತಿಕ ಸ್ವಾಗತವು ಉಭಯ ದೇಶಗಳ ನಡುವಿನ ‘ಜನರಿಂದ ಜನರ ಬಾಂಧವ್ಯ’ (People-to-People ties) ಮತ್ತು ನಾಗರಿಕ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಸಂಕೇತವಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ರಾತ್ರಿ ಚೆನ್ನಾಗಿ ನಿದ್ರೆ ಬರಬೇಕು ಅಂದ್ರೆ ಈ 5 ಆಹಾರಗಳನ್ನು ಸೇವನೆ ಮಾಡಿ – Kannada News | Top 5 Foods That Can Improve Sleep Quality Naturally

Top 5 Foods That Can Improve Sleep Quality NaturallyImage Credit source: Getty Images

ಇತ್ತೀಚಿನ ದಿನಗಳಲ್ಲಿ ಅನೇಕರಿಗೆ ನಿದ್ರೆ ಸರಿಯಾಗಿ ಬರುವುದಿಲ್ಲ. ಅನೇಕರು ಗಾಢ ನಿದ್ರೆಯ ಕೊರತೆಯಿಂದ ಬಳಲುತ್ತಿದ್ದಾರೆ. ರಾತ್ರಿ ತಡವಾಗಿ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಬಳಸುವುದು, ನಿದ್ರೆ ಮಾಡುವ ಸಮಯ ಬದಲಾಗುವುದು, ಒತ್ತಡ, ಅತಿಯಾದ ಕ್ಯಾಫಿನ್ ಸೇವನೆ ಮತ್ತು ದೈಹಿಕ ಚಟುವಟಿಕೆಯ ಕೊರತೆ ನಿದ್ರೆಯ ಗುಣಮಟ್ಟವನ್ನು ಹದಗೆಡಿಸಬಹುದು. ಆದರೆ ದೀರ್ಘಕಾಲ ನಿದ್ರೆಯ ಸಮಸ್ಯೆ ಮುಂದುವರಿದರೆ ವೈದ್ಯರ ಸಲಹೆ ಪಡೆಯುವುದು ಅಗತ್ಯ. ಹಾಗಾದರೆ ನಿದ್ರೆ (Sleep) ಚೆನ್ನಾಗಿ ಬರಲು ಯಾವ ರೀತಿಯ ಆಹಾರ ಸೇವಿಸಬೇಕು, ಯಾವ ರೀತಿಯ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಉತ್ತಮ ನಿದ್ರೆಗೆ ಈ 5 ಆಹಾರಗಳು ಸಹಕಾರಿ:

ಬಾದಾಮಿ: ಸಾಮಾನ್ಯವಾಗಿ ಬಾದಾಮಿಯಲ್ಲಿ ಮೆಗ್ನೀಷಿಯಂ, ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳಿವೆ. ಇವು ದೇಹವನ್ನು ಶಾಂತಗೊಳಿಸಿ ಉತ್ತಮ ನಿದ್ರೆಗೆ ಸಹಾಯ ಮಾಡಬಹುದು.

ಅಖರೋಟ್: ಇದರಲ್ಲಿ ಮೆಲಟೋನಿನ್, ಒಮೆಗಾ-3 ಫ್ಯಾಟಿ ಆಮ್ಲಗಳು ಮತ್ತು ಆರೋಗ್ಯಕರ ಕೊಬ್ಬುಗಳಿದ್ದು, ನಿದ್ರೆಯ ಚಕ್ರವನ್ನು ಸಮತೋಲನದಲ್ಲಿಡಲು ನೆರವಾಗುತ್ತವೆ.

ಕಿವಿ ಹಣ್ಣು: ವಿಟಮಿನ್ ಸಿ, ಫೋಲೇಟ್ ಮತ್ತು ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಕಿವಿ ಹಣ್ಣನ್ನು ನಿಯಮಿತವಾಗಿ ಸೇವಿಸಿದರೆ ನಿದ್ರೆ ಬೇಗ ಬರಲು ಹಾಗೂ ನಿದ್ರೆಯ ಗುಣಮಟ್ಟ ಸುಧಾರಿಸಲು ಸಹಕಾರಿ ಎಂದು ಕೆಲವು ಅಧ್ಯಯನಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ: ದಿನಕ್ಕೆ ಕೇವಲ 30 ನಿಮಿಷ ನಡೆಯುವುದರಿಂದ ಆರೋಗ್ಯದಲ್ಲಿ ಯಾವ ರೀತಿ ಬದಲಾವಣೆ ಆಗುತ್ತೆ ಗೊತ್ತಾ?

ಕೊಬ್ಬಿನಾಂಶ ಹೆಚ್ಚಿರುವ ಮೀನು: ಸಾಲ್ಮನ್ ಮತ್ತು ಮ್ಯಾಕರಲ್‌ಗಳಂತಹ ಮೀನುಗಳಲ್ಲಿ ಒಮೆಗಾ-3 ಹಾಗೂ ವಿಟಮಿನ್ ಡಿ ಸಮೃದ್ಧವಾಗಿದ್ದು, ಉತ್ತಮ ನಿದ್ರೆ ಹಾಗೂ ಹೃದಯದ ಆರೋಗ್ಯಕ್ಕೆ ಸಹಕಾರಿಯಾಗಬಹುದು.

ಕ್ಯಾಮೊಮೈಲ್ ಟೀ: ಕ್ಯಾಫಿನ್ ರಹಿತ ಈ ಹರ್ಬಲ್ ಟೀಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಮನಸ್ಸು ಮತ್ತು ದೇಹವನ್ನು ಶಾಂತಗೊಳಿಸಿ ಗಾಢ ನಿದ್ರೆಗೆ ನೆರವಾಗಬಹುದು.

ಉತ್ತಮ ನಿದ್ರೆಗಾಗಿ ಈ ಅಭ್ಯಾಸಗಳೂ ಮುಖ್ಯ:

  • ಪ್ರತಿದಿನ ಒಂದೇ ಸಮಯಕ್ಕೆ ಮಲಗಿ ಮತ್ತು ಎದ್ದೇಳಿ.
  • ಮಲಗುವ ಒಂದು ಗಂಟೆ ಮೊದಲು ಮೊಬೈಲ್, ಟಿವಿ, ಲ್ಯಾಪ್‌ಟಾಪ್ ಬಳಕೆಯನ್ನು ತಪ್ಪಿಸಿ.
  • ಸಂಜೆ ನಂತರ ಚಹಾ, ಕಾಫಿ ಹಾಗೂ ಕ್ಯಾಫಿನ್ ಇರುವ ಪಾನೀಯಗಳನ್ನು ಕಡಿಮೆ ಮಾಡಿ.
  • ರಾತ್ರಿ ಹಗುರವಾದ ಆಹಾರ ಸೇವಿಸಿ.
  • ಮಲಗುವ ಕೋಣೆಯನ್ನು ಶಾಂತ ಮತ್ತು ಆರಾಮದಾಯಕವಾಗಿಡಿ.
  • ಪ್ರತಿದಿನ ನಿಯಮಿತ ವ್ಯಾಯಾಮ ಮಾಡಿ, ಆದರೆ ಮಲಗುವ ಮುನ್ನ ಭಾರೀ ವ್ಯಾಯಾಮ ಮಾಡಬೇಡಿ.

ನಿದ್ರೆಯ ಸಮಸ್ಯೆ ದೀರ್ಘಕಾಲ ಮುಂದುವರಿದರೆ ಅಥವಾ ಹಗಲಿನಲ್ಲಿ ನಿರಂತರ ಆಯಾಸ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗೋಲ್ಡನ್ ಮೆಗಾ ಸ್ಟಾರ್ ಆದ ಗಣೇಶ್; ‘ಪಿನಾಕ’ ವೇದಿಕೆಯಲ್ಲಿ ಸಾಧು ಕೋಕಿಲ ಹೇಳಿದ್ದೇನು? – Kannada News | Golden Star Ganesh is now Golden Megastar says Sadhu Kokila in Pinaka teaser launch event

ಸಾಧು ಕೋಕಿಲ ಮತ್ತು ಗಣೇಶ್ (Golden Star Ganesh) ನಡುವೆ ಹಲವು ವರ್ಷಗಳ ನಂಟು ಇದೆ. ‘ಪಿನಾಕ’ ಸಿನಿಮಾದ ಟೀಸರ್ ಲಾಂಚ್ ವೇದಿಕೆಯಲ್ಲಿ ಗಣೇಶ್ ಬಗ್ಗೆ ಸಾಧು ಕೋಕಿಲ ಮಾತನಾಡಿದರು. ಈ ಚಿತ್ರದಲ್ಲಿ ಗಣೇಶ್ ಅವರನ್ನು ‘ಗೋಲ್ಡನ್ ಮೆಗಾ ಸ್ಟಾರ್’ ಎಂದು ಕರೆಯಲಾಗಿದೆ. ಇದರಿಂದ ಸಾಧು ಕೋಕಿಲ ಅವರಿಗೆ ಹೆಚ್ಚು ಖುಷಿ ಆಗಿದೆ. ಹಳೆಯ ಕಲಾವಿದರನ್ನು ಗಣೇಶ್ ಅವರು ಮರೆತಿಲ್ಲ. ಪ್ಯಾನ್ ಇಂಡಿಯಾ ಮಟ್ಟದ ಚಿತ್ರದಲ್ಲಿ ಸಾಧು ಕೋಕಿಲ, ರಂಗಾಯಣ ರಘು ಮುಂತಾದ ನಟರಿಗೆ ಅವಕಾಶ ಸಿಗುವಂತೆ ಗಣೇಶ್ ನೋಡಿಕೊಂಡಿದ್ದಾರೆ. ಈ ವಿಷಯದ ಬಗ್ಗೆ ಮಾತನಾಡಿದ ಸಾಧು ಕೋಕಿಲ ಅವರು ಗಣೇಶ್ ಅವರ ವ್ಯಕ್ತಿತ್ವವನ್ನು ಹೊಗಳಿದರು. ವೇದಿಕೆಯಲ್ಲಿ ಅವರು ಮಾತನಾಡಿದ ವಿಡಿಯೋ ಇಲ್ಲಿದೆ ನೋಡಿ. ‘ಪಿನಾಕ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಟೀಸರ್ ಗಮನ ಸೆಳೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸಿಂಧೂ ಜಲ ಒಪ್ಪಂದ ವಿವಾದ; ಭಾರತಕ್ಕೆ ಯುದ್ಧದ ಬೆದರಿಕೆ ಹಾಕಿದ ಪಾಕಿಸ್ತಾನದ ಬಿಲಾವಲ್ ಭುಟ್ಟೋ – Kannada News | Pakistan Leader Bilawal Bhutto Threatens India With War Over Indus Waters Treaty

ಇಸ್ಲಮಾಬಾದ್, ಜುಲೈ 6: ಭಾರತ ಮತ್ತು ಪಾಕಿಸ್ತಾನದ ನಡುವಿನ ದಶಕಗಳ ಇತಿಹಾಸವಿರುವ ಸಿಂಧೂ ನದಿ ನೀರು ಒಪ್ಪಂದದ (Indus Waters Treaty) ವಿವಾದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಭಾರತದ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಸಿಂಧೂ ಜಲ ಒಪ್ಪಂದದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪಾಕಿಸ್ತಾನವು ಭಾರತದ ವಿರುದ್ಧ ಎಲ್ಲಾ ರೀತಿಯಲ್ಲೂ ಹೋರಾಡಲು ಸಿದ್ಧವಾಗಿದೆ ಎಂದು ಅವರು ಯುದ್ಧದ ಬೆದರಿಕೆ ಹಾಕಿದ್ದಾರೆ.

ವಿವಾದಕ್ಕೆ ಕಾರಣವೇನು?:

ಭಾರತ ಮತ್ತು ಪಾಕಿಸ್ತಾನದ ನಡುವೆ 1960ರಲ್ಲಿ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ‘ಸಿಂಧೂ ನದಿ ನೀರು ಒಪ್ಪಂದ’ ಏರ್ಪಟ್ಟಿತ್ತು. ಜಮ್ಮು ಕಾಶ್ಮೀರದ ಪಹಲ್ಗಾಮ್​ನಲ್ಲಿ ಉಗ್ರರ ದಾಳಿ ನಡೆದ ಬಳಿಕ ಆ ಉಗ್ರರು ಪಾಕಿಸ್ತಾನದ ಆಶ್ರಯ ಪಡೆದವರು ಎಂಬುದು ತನಿಖೆಯಲ್ಲಿ ಬಯಲಾಗಿತ್ತು. ಈ ಹಿನ್ನೆಲೆಯಲ್ಲಿ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸುವವರೆಗೂ ಭಾರತ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸುವುದಾಗಿ ಘೋಷಿಸಿತ್ತು.

ಇದನ್ನೂ ಓದಿ: ಸಿಂಧೂ ಜಲ ಒಪ್ಪಂದದ ಬಗ್ಗೆ ನಮ್ಮ ನಿಲುವು ಬದಲಾಗಿಲ್ಲ; ಪಾಕಿಸ್ತಾನದ ಬೆದರಿಕೆಗೆ ಭಾರತ ತಿರುಗೇಟು

ಕಳೆದ 2025ರ ಏಪ್ರಿಲ್ 22ರಂದು 26 ಜನರ ಬಲಿಪಡೆದ ಭೀಕರ ‘ಪಹಲ್ಗಾಮ್ ಭಯೋತ್ಪಾದನಾ ದಾಳಿ’ಯ ನಂತರ, ಪಾಕಿಸ್ತಾನಕ್ಕೆ ಶಿಕ್ಷೆ ವಿಧಿಸುವ ಕಠಿಣ ಕ್ರಮಗಳ ಭಾಗವಾಗಿ ಭಾರತವು 2025 ರಲ್ಲಿ ಈ ಒಪ್ಪಂದವನ್ನು ಅಮಾನತುಗೊಳಿಸಿತ್ತು. ಕಳೆದ ಶುಕ್ರವಾರವಷ್ಟೇ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ಒಪ್ಪಂದದ ಮೇಲಿನ ಭಾರತದ ಕಟ್ಟುನಿಟ್ಟಿನ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸ್ಪಷ್ಟಪಡಿಸಿತ್ತು.

ಬಿಲಾವಲ್ ಭುಟ್ಟೋ ಹೇಳಿದ್ದೇನು?:

ಪಾಕಿಸ್ತಾನದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಬಿಲಾವಲ್ ಭುಟ್ಟೋ, ಭಾರತವು ಏಕಪಕ್ಷೀಯವಾಗಿ ಸಿಂಧೂ ಜಲ ಒಪ್ಪಂದವನ್ನು ಬದಲಾಯಿಸಲು ಅಥವಾ ಅಮಾನತುಗೊಳಿಸಲು ಸಾಧ್ಯವಿಲ್ಲ ಎಂದು ವಾದಿಸಿದ್ದಾರೆ. “ನಮ್ಮ ಪಾಲಿನ ನೀರನ್ನು ಕಸಿದುಕೊಳ್ಳಲು ಭಾರತ ಪ್ರಯತ್ನಿಸಿದರೆ, ಪಾಕಿಸ್ತಾನವು ತನ್ನ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಯಾವುದೇ ಹಂತಕ್ಕೆ ಹೋಗಲು ಕೂಡ ಸಿದ್ಧವಿದೆ. ನಾವು ರಾಜತಾಂತ್ರಿಕವಾಗಿ ಮಾತ್ರವಲ್ಲದೆ, ಯುದ್ಧ ಸೇರಿದಂತೆ ಎಲ್ಲಾ ರೀತಿಯಲ್ಲೂ ಭಾರತವನ್ನು ಎದುರಿಸಲು ಸಿದ್ಧರಾಗಿದ್ದೇವೆ” ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

“ಪಾಕಿಸ್ತಾನವು ಯುದ್ಧಕ್ಕೆ ಸದಾ ಸಿದ್ಧವಾಗಿದೆ ಮತ್ತು ಸಿಂಧೂ ನದಿಯ ಹಕ್ಕುಗಳ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಇದು ನಮ್ಮ ವಿರುದ್ಧ ನದಿ ನೀರನ್ನು ಅಸ್ತ್ರವನ್ನಾಗಿ ಬಳಸುವ ಭಾರತದ ಪ್ರಯತ್ನವಾಗಿದೆ” ಎಂದು ಭುಟ್ಟೋ ಹೇಳಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದ ಬಿಕ್ಕಟ್ಟಿಗೆ ಅಲ್ಲಿನ ಮಿಲಿಟರಿ ಕಾರಣವೇ ವಿನಃ ಭಾರತವಲ್ಲ; ಸಿಂಗಾಪುರದ ಮಾಜಿ ರಾಯಭಾರಿ ವ್ಯಂಗ್ಯ

ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟು:

ರಾಜತಾಂತ್ರಿಕ ತಜ್ಞರ ಪ್ರಕಾರ, ಪಾಕಿಸ್ತಾನವು ಪ್ರಸ್ತುತ ತೀವ್ರ ಆರ್ಥಿಕ ಬಿಕ್ಕಟ್ಟು ಮತ್ತು ಆಂತರಿಕ ರಾಜಕೀಯ ಅಸ್ಥಿರತೆಯನ್ನು ಎದುರಿಸುತ್ತಿದೆ. ದೇಶದ ಮೂಲಭೂತ ಸಮಸ್ಯೆಗಳಿಂದ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯಲು ಬಿಲಾವಲ್ ಭುಟ್ಟೋ ಅವರಂತಹ ನಾಯಕರು ಭಾರತದ ವಿರುದ್ಧ ಇಂತಹ ಪ್ರಚೋದನಾಕಾರಿ ಮತ್ತು ಯುದ್ಧದ ಮಾತುಗಳನ್ನು ಆಡುತ್ತಿದ್ದಾರೆ ಎನ್ನಲಾಗಿದೆ. ಸಿಂಧೂ ನದಿಯ ನೀರು ಪಾಕಿಸ್ತಾನದ ಕೃಷಿ ಮತ್ತು ಆರ್ಥಿಕತೆಗೆ ಜೀವಾಳವಾಗಿರುವುದರಿಂದ, ಭಾರತ ನದಿ ನೀರು ಬಿಡಲು ನಿರಾಕರಿಸುವುದು ಪಾಕಿಸ್ತಾನವನ್ನು ಮತ್ತಷ್ಟು ಕಂಗಾಲಾಗಿಸಿದೆ.

ಭಾರತದ ಕಟ್ಟುನಿಟ್ಟಿನ ನಿಲುವು:

ಭಾರತವು ಭಯೋತ್ಪಾದನೆ ಮತ್ತು ಮಾತುಕತೆ ಜೊತೆಯಾಗಿ ಸಾಗಲು ಸಾಧ್ಯವಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದೆ. ಕಳೆದ ವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲವನ್ನು ಮುಂದುವರಿಸಿರುವುದರಿಂದ ಸಿಂಧೂ ನದಿ ನೀರು ಒಪ್ಪಂದವು ಅಮಾನತುಗೊಂಡಿದೆ ಎಂದು ಹೇಳಿದ್ದರು. “ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ನೀಡುತ್ತಿರುವ ತನ್ನ ಬೆಂಬಲವನ್ನು ಶಾಶ್ವತವಾದ ರೀತಿಯಲ್ಲಿ ಸಂಪೂರ್ಣವಾಗಿ ನಿಲ್ಲಿಸಬೇಕು” ಎಂದು ಜೈಸ್ವಾಲ್ ಒತ್ತಾಯಿಸಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

World Chocolate Day 2026: ಚಾಕೊಲೇಟ್‌ನ ಹಿತಮಿತ ಸೇವನೆಯಿಂದಲೂ ಪಡೆಯಬಹುದು ಸಾಕಷ್ಟು ಪ್ರಯೋಜನ – Kannada News | World Chocolate Day 2026: What is the purpose of celebrating World Chocolate Day?

ವಿಶ್ವ ಚಾಕೊಲೇಟ್‌ ದಿನImage Credit source: Getty Images

ವಿಶ್ವದ ಅತ್ಯಂತ ಜನಪ್ರಿಯ ಮತ್ತು ಪ್ರೀತಿಯ ಸಿಹಿ ತಿನಿಸುಗಳಲ್ಲಿ ಚಾಕೊಲೇಟ್‌ (Chocolate) ಕೂಡ ಒಂದು. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರರವರೆಗೆ ಎಲ್ಲರಿಗೂ ಚಾಕೊಲೇಟ್‌ ಅಂದರೆ ಸಖತ್‌  ಇಷ್ಟ. ಎಲ್ಲರೂ ಇಷ್ಟಪಟ್ಟು ತಿನ್ನುವ ಚಾಕೊಲೇಟ್‌ ಕೇವಲ ಸಿಹಿ ಪದಾರ್ಥ ಮಾತ್ರವಲ್ಲ, ಇದನ್ನು ಪ್ರೀತಿ, ವಾತ್ಸಲ್ಯ ಮತ್ತು ಸಂಬಂಧಗಳ ಮಾಧುರ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಷ್ಟೇ ಅಲ್ಲದೆ ಇವು ಆರೋಗ್ಯ ಪ್ರಯೋಜನಗಳನ್ನೂ ಹೊಂದಿವೆ. ಹೌದು ಕೆಲವೊಂದು ಚಾಕೊಲೇಟ್‌ನ ಹಿತಮಿತ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಇದರ ಈ ಮಹತ್ವದ ಬಗ್ಗೆ ತಿಳಿಸಲು ಪ್ರತಿವರ್ಷ ಜುಲೈ 7 ರಂದು ವಿಶ್ವ ಚಾಕೊಲೇಟ್‌ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿದುಕೊಳ್ಳಿ.

ವಿಶ್ವ ಚಾಕೊಲೇಟ್ ದಿನದ ಇತಿಹಾಸವೇನು?

ವಿಶ್ವ ಚಾಕೊಲೇಟ್ ದಿನವನ್ನು ಜುಲೈ 7, 2009 ರಂದು ಪ್ರಾರಂಭಿಸಲಾಯಿತು. 16 ನೇ ಶತಮಾನದಲ್ಲಿ ಅಂದರೆ, ಜುಲೈ 07, 1550 ರಂದು  ಯುರೋಪಿನಲ್ಲಿ ಚಾಕೊಲೇಟನ್ನು ಪರಿಚಯಿಸಲಾಯಿತು ಎಂದು ನಂಬಲಾಗಿದೆ. ಈ ದಿನದ ನೆನಪಿಗಾಗಿ 2009 ರಲ್ಲಿ ವಿಶ್ವ ಚಾಕೊಲೇಟ್‌ ದಿನವನ್ನು ಆಚರಿಸಲು ನಿರ್ಧರಿಸಲಾಯಿತು.ಅಂದಿನಿಂದ ಪ್ರತಿವರ್ಷ ಜುಲೈ 7 ರಂದು ಈ ವಿಶೇಷ ದಿನವನ್ನು ಆಚರಿಸಲಾಗುತ್ತಿದೆ.

ವಿಶ್ವ ಚಾಕೊಲೇಟ್ ದಿನದ ಮಹತ್ವವೇನು?

  • ಈ ದಿನವು ಚಾಕೊಲೇಟ್ ಮೇಲಿನ ಜನರ ಪ್ರೀತಿ ಮತ್ತು ಉತ್ಸಾಹವನ್ನು ಪ್ರತಿಬಿಂಬಿಸುತ್ತದೆ.
  • ಇದು ಸಂತೋಷ ಮತ್ತು ಆಚರಣೆಯ ಸಂಕೇತವಾಗಿದ್ದು, ಜನರನ್ನು ಒಂದುಗೂಡಿಸುತ್ತದೆ.
  • ಈ ದಿನದಂದು ಜನರು ಚಾಕೊಲೇಟ್‌ಗಳನ್ನು ಉಡುಗೊರೆಯಾಗಿ ವಿನಿಮಯ ಮಾಡಿಕೊಳ್ಳುತ್ತಾರೆ, ಸಂತೋಷವನ್ನು ಹಂಚಿಕೊಳ್ಳುತ್ತಾರೆ ಮತ್ತು ಸಂಬಂಧಗಳನ್ನು ಸಿಹಿಗೊಳಿಸುತ್ತಾರೆ.
  • ಚಾಕೊಲೇಟ್‌ನ ಆರೋಗ್ಯ ಪ್ರಯೋಜನಗಳ ಬಗ್ಗೆ ಪ್ರಚಾರ ಮಾಡಲು ಈ ದಿನವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್‌ಗಳ ಕೊಡುಗೆ ಅತ್ಯಂತ ಮಹತ್ವದ್ದು

ಚಾಕೊಲೇಟ್‌ಪ್ರಯೋಜನಗಳೇನು?

ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ: ಡಾರ್ಕ್ ಚಾಕೊಲೇಟ್ ಪಾಲಿಫಿನಾಲ್‌ಗಳು, ಫ್ಲಾವನಾಲ್‌ಗಳು ಮತ್ತು ಕ್ಯಾಟೆಚಿನ್‌ಗಳಂತಹ ಜೈವಿಕವಾಗಿ ಸಕ್ರಿಯವಾಗಿರುವ ಸಾವಯವ ಸಂಯುಕ್ತಗಳನ್ನು ಹೊಂದಿದ್ದು, ಅವು ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳಾಗಿ ಕಾರ್ಯನಿರ್ವಹಿಸುತ್ತವೆ. ಅವು ದೇಹದಲ್ಲಿನ ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡುತ್ತವೆ ಮತ್ತು ಜೀವಕೋಶಗಳನ್ನು ಹಾನಿಯಿಂದ ರಕ್ಷಿಸುತ್ತವೆ.

ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ: ಕೋಕೋದಲ್ಲಿರುವ ಫ್ಲಾವನಾಲ್‌ಗಳು ಅಪಧಮನಿಗಳನ್ನು ನಮ್ಯವಾಗಿಡಲು ಸಹಾಯ ಮಾಡುತ್ತದೆ. ಇದು ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ನಿಯಮಿತವಾಗಿ ಸ್ವಲ್ಪ ಪ್ರಮಾಣದ ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ಹೃದಯ ಕಾಯಿಲೆ ಮತ್ತು ಪಾರ್ಶ್ವವಾಯು ಅಪಾಯವನ್ನು ಗಮನಾರ್ಹವಾಗಿ ಕಡಿಮೆಯಾಗುತ್ತದೆ.

ಒತ್ತಡ ನಿವಾರಣೆಯಾಗುತ್ತದೆ: ಚಾಕೊಲೇಟ್ ತಿನ್ನುವುದರಿಂದ ಮೆದುಳಿನಲ್ಲಿ ಎಂಡಾರ್ಫಿನ್‌ಗಳು ಮತ್ತು ಸಿರೊಟೋನಿನ್‌ನಂತಹ ಸಂತೋಷದ ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ಇದು “ಪ್ರೀತಿಯ ರಾಸಾಯನಿಕ” ಎಂದು ಕರೆಯಲ್ಪಡುವ ಫಿನೈಲೆಥೈಲಮೈನ್ (PEA) ಅನ್ನು ಸಹ ಹೊಂದಿರುತ್ತದೆ. ಇದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ ಮತ್ತು ಮನಸ್ಥಿತಿಯನ್ನು ಸುಧಾರಿಸುತ್ತದೆ. ಚಾಕೊಲೇಟ್‌ನಲ್ಲಿರುವ ಟ್ರಿಪ್ಟೊಫಾನ್ ನಮಗೆ ಸಂತೋಷದ ಭಾವನೆಯನ್ನು ನೀಡುತ್ತದೆ.

ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ: ಕೋಕೋದಲ್ಲಿ ಕೆಫೀನ್ ಮತ್ತು ಥಿಯೋಬ್ರೋಮಿನ್ ನಂತಹ ಸಂಯುಕ್ತಗಳಿದ್ದು, ಇದು ಮೆದುಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಇದು ಏಕಾಗ್ರತೆ, ಸ್ಮರಣಶಕ್ತಿ ಮತ್ತು ಮಾನಸಿಕ ಜಾಗರೂಕತೆಯನ್ನು ಸುಧಾರಿಸುತ್ತದೆ.

ಚರ್ಮಕ್ಕೆ ಪ್ರಯೋಜನಕಾರಿ: ಡಾರ್ಕ್ ಚಾಕೊಲೇಟ್‌ನಲ್ಲಿರುವ ಫ್ಲಾವನಾಲ್‌ಗಳು ಚರ್ಮವನ್ನು ಸೂರ್ಯನ ಹಾನಿಕಾರಕ ನೇರಳಾತೀತ (UV) ಕಿರಣಗಳಿಂದ ರಕ್ಷಿಸುತ್ತದೆ. ಇದು ಚರ್ಮದ ಸಾಂದ್ರತೆ ಮತ್ತು ಜಲಸಂಚಯನವನ್ನು ಸುಧಾರಿಸುತ್ತದೆ, ಚರ್ಮವು ಕಾಂತಿಯುತ ಮತ್ತು ಆರೋಗ್ಯಕರವಾಗಿ ಕಾಣುವಂತೆ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version