ಅಪ್ಪ ಅಮ್ಮನಿಗೋಸ್ಕರ 2 ಕೋಟಿ ಸಂಬಳದ ಕೆಲಸ ತಿರಸ್ಕರಿಸಿದ ಐಐಟಿ ಗೋಲ್ಡ್ ಮೆಡಲಿಸ್ಟ್? ಇದು ಫೇಕ್ ಸ್ಟೋರಿಯಾ? – Kannada News | Viral story of Vivek Sharma rejecting us job offer to take care of parents, turns out to be fake

ವಿವೇಕ್ ಶರ್ಮಾ ಎನ್ನಲಾದ ವ್ಯಕ್ತಿಯ ಚಿತ್ರImage Credit source: X user @Vikasalwys

ನವದೆಹಲಿ, ಜುಲೈ 5: ಈತ ಐಐಟಿ ಬಾಂಬೆಯಲ್ಲಿ ಕಂಪ್ಯೂಟರ್ ಸೈನ್ಸ್​ನಲ್ಲಿ ಗೋಲ್ಡ್ ಮೆಡಲಿಸ್ಟ್. ಅಮೆರಿಕದ ಸ್ಟಾರ್ಟಪ್​ವೊಂದರಿಂದ 2.2 ಕೋಟಿ ರೂ ಸಂಬಳದ ಆಫರ್ ಗಿಟ್ಟಿಸಿದ್ದವ. ಇನ್ನೇನು ಅಮೆರಿಕಕ್ಕೆ ಹಾರಬೇಕು ಎನ್ನುವಷ್ಟರಲ್ಲಿ ಅಪ್ಪ ಮತ್ತು ಅಮ್ಮನಿಗೆ ಗಂಭೀರ ಅನಾರೋಗ್ಯ. ಹೆತ್ತ ತಂದೆ ತಾಯಿಗಿಂತ ಯಾವ ಕಂಪನಿಯ ಆಫರ್ ಬೇಕಿಲ್ಲ ಎಂದು ನಿರ್ಧರಿಸಿದ ಮಗ (Vivek Sharma) ತನ್ನೂರಲ್ಲೇ ಉಳಿದುಕೊಂಡು ಅಪ್ಪ ಅಮ್ಮನ ಆರೈಕೆಯಲ್ಲಿ ತೊಡಗಿದೆ. ಜೀವನಕ್ಕೆ ದಿನಸಿ ಅಂಗಡಿ ತೆರೆದ. ಈತನ ಸ್ಟೋರಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿಹೋಯಿತು. ಅಬ್ಬಬ್ಬಾ, ಇದ್ದರೆ ಇಂಥ ಮಗ ಇರಬೇಕು ಎಂದು ಎಲ್ಲರೂ ಬಾಯಿಯ ಮೇಲೆ ಕೈಇಟ್ಟುಕೊಂಡಿದ್ದರು. ಆದರೆ, ಈ ಕಥೆ ಪೂರ್ಣ ಫೇಕ್ ಎಂಬುದು ಗೊತ್ತಾಗಿದೆ.

ಎಕ್ಸ್ ಬಳಕೆದಾರರಾದ ವಿಕಾಸ್ ಆಲ್ವೇಸ್ (X user @VikasAlwys) ಎಂಬ ಹೆಸರಿನ ಅಕೌಂಟ್​ನಲ್ಲಿ ಜುಲೈ 4ರಂದು ಈ ಸ್ಟೋರಿ ಅಪ್​ಲೋಡ್ ಮಾಡಲಾಗಿತ್ತು. ಈ ಅಕೌಂಟ್​ನಲ್ಲಿ ದಿನವೂ ನಿಜ ಜೀವನದ ಸ್ಫೂರ್ತಿಯುತ ಕಥೆಗಳು ಪೋಸ್ಟ್ ಆಗುತ್ತಿರುತ್ತವೆ. ಹೀಗಾಗಿ, ಅಪ್ಪ ಅಮ್ಮನಿಗೋಸ್ಕರ ದೊಡ್ಡ ಕೆಲಸದ ಆಫರ್ ಬಿಟ್ಟ ವಿವೇಕ್ ಶರ್ಮಾ ಅವರ ಕಥೆ ಭಾರೀ ವೈರಲ್ ಆಗಿದೆ. ಆದರೆ, ಈ ಸ್ಟೋರಿ ನಕಲಿ ಎಂದು ಹಿಂದೂಸ್ತಾನ್ ಟೈಮ್ಸ್ ವೆಬ್​ಸೈಟ್ ಹೇಳುತ್ತಿದೆ.

ಇದನ್ನೂ ಓದಿ: ಬಾಲ್ಯದಲ್ಲಿ ಎನ್​ಸೈಕ್ಲೊಪಿಡಿಯಾ, ಈಗ ಬಾಹ್ಯಾಕಾಶ ಕ್ಷೇತ್ರದಲ್ಲಿ ಪಿಕ್ಸೆಲ್ ಮ್ಯಾನ್; ಇದು ಕನ್ನಡಿಗ ಅವೈಸ್​ನ ರೋಚಕ ಕಥೆ

ವಿವೇಕ್ ಶರ್ಮಾ ಅವರ ಕಥೆ ಒಂದು ತಿಂಗಳ ಹಿಂದೆ ಡಾ. ದಿಲೀಪ್ ಗೋಸಾಯಿ ಎಂಬುವವರ ಲಿಂಕ್ಡ್​ಇನ್​ನಲ್ಲಿ ಪೋಸ್ಟ್ ಆಗಿತ್ತು. ಅದರ ಆಧಾರದ ಮೇಲೆ ವಿವೇಕ್ ಶರ್ಮಾ ತಮ್ಮ ಎಕ್ಸ್​ನಲ್ಲಿ ಸ್ಟೋರಿ ಹಂಚಿಕೊಂಡಂತಿತ್ತು. ಆದರೆ, ದಿಲೀಪ್ ಗೋಸಾಯಿ ಅವರು ಜನರಿಗೆ ಸ್ಫೂರ್ತಿ ನೀಡಲು ವಿವೇಕ್ ಶರ್ಮಾ ಎನ್ನುವ ಕಟ್ಟುಕಥೆ ಹಂಚಿಕೊಂಡಿದ್ದರು.

ವಿವೇಕ್ ಶರ್ಮಾ ಸ್ಟೋರಿ ಯಾವಾಗ ವೈರಲ್ ಆಗತೊಡಗಿತೋ, ಗೋಸಾಯಿ ಅವರು ತಾವು ಪೋಸ್ಟ್ ಮಾಡಿದ್ದು ಕಟ್ಟುಕಥೆ ಎಂದು ತಪ್ಪೊಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಮದುವೆಯಾದ ಎರಡೇ ತಿಂಗಳಿಗೆ ನವವಿವಾಹಿತೆ ನಿಗೂಢ ಸಾವು

ದಿಲೀಪ್ ಗೋಸಾಯಿ ಪೋಸ್ಟ್​ನಲ್ಲಿ ವಿವೇಕ್ ಶರ್ಮಾ ಕಥೆ ಹೀಗಿತ್ತು…

ವಿವೇಕ್ ಶರ್ಮಾ 2012ರಲ್ಲಿ 147ನೇ ಜೆಇಇ ರ್ಯಾಂಕಿಂಗ್ ಪಡೆದು ಐಐಟಿ ಬಾಂಬೆ ಸೇರಿದ್ದರು. ಕಂಪ್ಯೂಟರ್ ಸೈನ್ಸ್​ನಲ್ಲಿ ಗೋಲ್ಡ್ ಮೆಡಲ್ ಪಡೆದರು. ಕ್ಯಾಲಿಫೋರ್ನಿಯಾದ ಸ್ಟಾರ್ಟಪ್​ನಲ್ಲಿ 2.2 ಕೋಟಿ ರೂ ಸಂಬಳದ ಕೆಲಸದ ಆಫರ್ ಪಡೆದರು. ಅಷ್ಟರಲ್ಲಿ ಅಪ್ಪ ಅಮ್ಮನಿಗೆ ಅನಾರೋಗ್ಯ ಎದುರಾಯಿತು. ಅವರನ್ನು ನೋಡಿಕೊಳ್ಳಲು ಕಾನಪುರ್​ನಲ್ಲೇ ಅವರು ದಿನಸಿ ಅಂಗಡಿ ಆರಂಭಿಸಿದರು. ಇದೇ ವೇಳೆ, ಅಪ್ಪ ಅಮ್ಮನ ಆರೋಗ್ಯವೂ ಸುಧಾರಿಸಿತು. ಇದು ದಿಲೀಪ್ ಗೋಸಾಯಿ ಅವರ ಪೋಸ್ಟ್​ನಲ್ಲಿದ್ದ ಸಾರಾಂಶ.

2012ರಲ್ಲಿ ಜೆಇಇಯಲ್ಲಿ 147ನೇ ರ್ಯಾಂಕ್ ಪಡೆದದ್ದು ವಿವೇಕ್ ಶರ್ಮಾ ಎನ್ನುವುದು ಖಚಿತವಾಗಿತ್ತು. ಆ ಹೆಸರಿನವ 2012ರಲ್ಲಿ ಜೆಇಇ ರ್ಯಾಂಕಿಂಗನ್ನೇ ಪಡೆದಿಲ್ಲ. ಹಾಗೆಯೇ, ವಿವೇಕ್ ಶರ್ಮಾ ಕಿರಾಣಿ ಅಂಗಡಿಯಲ್ಲಿದ್ದ ಚಿತ್ರವೂ ಕೂಡ ಬೇರೆಯವರದ್ದಾಗಿತ್ತು. ಸುಮಿತ್ ಗೊರೈ ಎನ್ನುವ ವ್ಯಕ್ತಿಯ ಯೂಟ್ಯೂಬ್ ವಿಡಿಯೋದಿಂದ ಆ ಫೋಟೋ ಪಡೆದು ಹಾಕಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ರಾಮ ಮಂದಿರಕ್ಕೆ ಬಂದಿದ್ದ ಟನ್‌ಗಟ್ಟಲೆ ಬೆಳ್ಳಿ ಹೈದರಾಬಾದ್‌ಗೆ ಶಿಫ್ಟ್: ಕಾರಣವೇನು? ಇಲ್ಲಿದೆ ಅಸಲಿ ಸಂಗತಿ – Kannada News | Ram Mandir Silver Shift to Hyderabad: Why Ayodhya Donations are Repurposed

ಅಯೋಧ್ಯೆ, ಜುಲೈ 06: ರಾಮ ಮಂದಿರ(Ram Mandir)ದಲ್ಲಿ ದೇಣಿಗೆ ಕಳ್ಳತನದ ಆರೋಪಗಳ ಕುರಿತು ದೇಶಾದ್ಯಂತ ರಾಜಕೀಯ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಭಕ್ತರು ದಾನ ಮಾಡಿದ್ದ ಬೆಳ್ಳಿಯ ವಸ್ತುಗಳನ್ನು ಹೈದರಾಬಾದ್‌ಗೆ ಕಳುಹಿಸಿರುವ ವಿಚಾರ ಈಗ ತೀವ್ರ ಕುತೂಹಲ ಮೂಡಿಸಿದೆ. ಅಯೋಧ್ಯೆಯಲ್ಲಿದ್ದ ಬೆಳ್ಳಿಯನ್ನು ಹೈದರಾಬಾದ್‌ಗೆ ಏಕೆ ಕಳುಹಿಸಲಾಯಿತು ಮತ್ತು ಅದಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ್ದೇಕೆ ಎಂಬ ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದೆ.

ಹೈದರಾಬಾದ್‌ಗೆ ಕಳುಹಿಸಲು ಕಾರಣವೇನು?
ರಾಮ ಮಂದಿರಕ್ಕೆ ದೇಶ-ವಿದೇಶಗಳ ಭಕ್ತರು ವಿವಿಧ ರೂಪಗಳಲ್ಲಿ (ಲೋಟ, ತಟ್ಟೆ, ಒಡವೆಗಳು ಇತ್ಯಾದಿ) ಬೆಳ್ಳಿ ವಸ್ತುಗಳನ್ನು ದಾನವಾಗಿ ನೀಡುತ್ತಿದ್ದಾರೆ. ಈ ಎಲ್ಲ ಸಣ್ಣ-ಪುಟ್ಟ ವಸ್ತುಗಳನ್ನು ಪ್ರತ್ಯೇಕವಾಗಿ ಸುರಕ್ಷಿತವಾಗಿಡುವುದು ಮತ್ತು ಸಂರಕ್ಷಿಸುವುದು ದೇವಾಲಯದ ಆಡಳಿತ ಮಂಡಳಿಗೆ ದೊಡ್ಡ ಸವಾಲಾಗಿತ್ತು.

ಹೀಗಾಗಿ, ಈ ಎಲ್ಲಾ ವಸ್ತುಗಳನ್ನು ಕರಗಿಸಿ ಒಂದೇ ಗಾತ್ರದ ಇಟ್ಟಿಗೆಗಳನ್ನಾಗಿ ಪರಿವರ್ತಿಸಲು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನಿರ್ಧರಿಸಿತು. ಇದಕ್ಕಾಗಿ ಸುಮಾರು 1,000 ಕಿಲೋಗ್ರಾಂ (1 ಟನ್) ಬೆಳ್ಳಿಯನ್ನು ಹೈದರಾಬಾದ್‌ಗೆ ಕಳುಹಿಸಲಾಯಿತು.

ಹೈದರಾಬಾದ್‌ನಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ‘ಸೆಕ್ಯುರಿಟಿ ಪ್ರಿಂಟಿಂಗ್ ಮತ್ತು ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್’ (SPMCIL) ಸಂಸ್ಥೆಯಿದೆ. ಇದು ಅತ್ಯಂತ ಸುರಕ್ಷಿತ ಹಾಗೂ ಅಧಿಕೃತವಾಗಿ ಚಿನ್ನ-ಬೆಳ್ಳಿಯನ್ನು ಕರಗಿಸುವ ಮತ್ತು ನಾಣ್ಯ, ಇಟ್ಟಿಗೆಗಳನ್ನು ತಯಾರಿಸುವ ಸರ್ಕಾರಿ ಸಂಸ್ಥೆಯಾಗಿದೆ. ಭದ್ರತೆ ಹಾಗೂ ಪಾರದರ್ಶಕತೆಯ ದೃಷ್ಟಿಯಿಂದ ಟ್ರಸ್ಟ್ ಈ ನಿರ್ಧಾರ ಕೈಗೊಂಡಿದೆ.

ಮತ್ತಷ್ಟು ಓದಿ: ಅಯೋಧ್ಯೆ ರಾಮ ಮಂದಿರದ ದೇಣಿಗೆ ಲೂಟಿ: ಬಯಲಾಯ್ತು ಆರೋಪಿಗಳ ಭ್ರಷ್ಟಾಚಾರ

ಲಕ್ಷಾಂತರ ರೂಪಾಯಿ ಖರ್ಚಾಗಿದ್ದು ಏಕೆ?
ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಈ ಬೆಳ್ಳಿಯನ್ನು ಅಯೋಧ್ಯೆಯಿಂದ ಹೈದರಾಬಾದ್‌ಗೆ ಕೊಂಡೊಯ್ಯಲು ಮತ್ತು ಇಟ್ಟಿಗೆಗಳನ್ನಾಗಿ ಮಾಡಿದ ನಂತರ ಮರಳಿ ಅಯೋಧ್ಯೆಗೆ ತರಲು ಲಕ್ಷಾಂತರ ರೂಪಾಯಿ ವೆಚ್ಚವಾಗಿದೆ. ಭಾರಿ ಭದ್ರತೆಯೊಂದಿಗೆ ಟನ್‌ಗಟ್ಟಲೆ ಬೆಳ್ಳಿಯನ್ನು ಸಾಗಿಸಲು ಹಣ ಖರ್ಚಾಗಿದೆ.

ಶುದ್ಧತೆಯ ಪರೀಕ್ಷೆ: ಬೆಳ್ಳಿಯ ಶುದ್ಧತೆಯನ್ನು (Purity) ಕಟ್ಟುನಿಟ್ಟಾಗಿ ಪರೀಕ್ಷಿಸಲು ಮತ್ತು ಅದನ್ನು ಇಟ್ಟಿಗೆ ರೂಪಕ್ಕೆ ಬದಲಾಯಿಸಲು ಸರ್ಕಾರಿ ಸಂಸ್ಥೆಗೆ ಶುಲ್ಕ ಪಾವತಿಸಲಾಗಿದೆ.

ಭಕ್ತರ ನಂಬಿಕೆ ಉಳಿಸಲು ಹೊಸ ವ್ಯವಸ್ಥೆ
ದೇಣಿಗೆ ಕಳ್ಳತನದ ವಿವಾದದಿಂದ ಭಕ್ತರಲ್ಲಿ ಉಂಟಾಗಿರುವ ಗೊಂದಲವನ್ನು ನಿವಾರಿಸಲು ರಾಮ ಮಂದಿರ ಟ್ರಸ್ಟ್ ಮಹತ್ವದ ಸಭೆ ನಡೆಸುತ್ತಿದೆ. ದೇಣಿಗೆ ಪೆಟ್ಟಿಗೆಗಳಿಗೆ ಇನ್ನು ಮುಂದೆ ಆಭರಣಗಳನ್ನು ಹಾಕುವಾಗ ಜವಾಬ್ದಾರಿಯುತ ಮತ್ತು ‘ಫೂಲ್‌ಪ್ರೂಫ್’ ವ್ಯವಸ್ಥೆಯನ್ನು ಜಾರಿಗೆ ತರಲು ಟ್ರಸ್ಟ್ ಸದಸ್ಯರು ಒತ್ತಾಯಿಸಿದ್ದಾರೆ. ದೇಣಿಗೆ ಎಣಿಕೆ ಪ್ರಕ್ರಿಯೆಯನ್ನು ಇನ್ನಷ್ಟು ಪಾರದರ್ಶಕಗೊಳಿಸಿ, ಅದನ್ನು ಸಾರ್ವಜನಿಕರಿಗೆ ತಿಳಿಸುವ ಮೂಲಕ ಭಕ್ತರ ನಂಬಿಕೆಯನ್ನು ಮರಳಿ ಗಳಿಸಲು ಟ್ರಸ್ಟ್ ಮುಂದಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 12:46 pm, Mon, 6 July 26

Source link

ಹೊಸ ವಿವಾದ… ಟ್ರಂಪ್ ಫೋನ್ ಕರೆ ಬೆನ್ನಲ್ಲೇ ಅಮೆರಿಕ ಆಟಗಾರನ ನಿಷೇಧ ರದ್ದು! – Kannada News | Fury as FIFA Bends Rules for Balogun After Trump Phone Call

ಫಿಫಾ ವಿಶ್ವಕಪ್‌ನಲ್ಲಿ ಹೊಸ ವಿವಾದವೊಂದು ಹುಟ್ಟಿಕೊಂಡಿದೆ. ಈ ವಿವಾದದ ಕೇಂದ್ರಬಿಂದುವಾಗಿರುವುದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಮೈದಾನದಲ್ಲಿ ತಪ್ಪು ಎಸಗಿ ರೆಡ್ ಕಾರ್ಡ್ ಪಡೆದಿದ್ದ ಅಮೆರಿಕ ತಂಡದ ಸ್ಟಾರ್ ಸ್ಟ್ರೈಕರ್ ಫೋಲರಿನ್ ಬಾಲೋಗನ್ ಮೇಲಿನ ಒಂದು ಪಂದ್ಯದ ಕಡ್ಡಾಯ ನಿಷೇಧವನ್ನು, ಟ್ರಂಪ್ ಸೂಚನೆ ಮೇರೆಗೆ ಫಿಫಾ (FIFA) ದಿಢೀರ್ ರದ್ದುಗೊಳಿಸಿದೆ. ಈ ವಿಚಾರ ಬಹಿರಂಗವಾಗುತ್ತಿದ್ದಂತೆ, ಫುಟ್‌ಬಾಲ್ ಪ್ರೇಮಿಗಳಿಂದ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಕ್ರೀಡಾಂಗಣದಲ್ಲೂ ಇಂತಹ ರಾಜಕೀಯ ಹಸ್ತಕ್ಷೇಪ ನಡೆದಿರುವುದು ಜಾಗತಿಕ ಮಟ್ಟದಲ್ಲಿ ಹೊಸ ವಿವಾದಕ್ಕೆ ನಾಂದಿ ಹಾಡಿದೆ.

ವಿವಾದದ ಹಿನ್ನಲೆಯೇನು?

ಬೋಸ್ನಿಯಾ ಮತ್ತು ಹೆರ್ಜೆಗೋವಿನಾ ವಿರುದ್ಧದ ‘ರೌಂಡ್ ಆಫ್ 32’ ಪಂದ್ಯದಲ್ಲಿ ಬಾಲೋಗನ್ ಎದುರಾಳಿ ಡಿಫೆಂಡರ್ ಕಾಲಿನ ಮೇಲೆ ಅಕಸ್ಮಾತ್ ಆಗಿ ಕಾಲಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ರೆಫರಿ ಅವರಿಗೆ ನೇರ ರೆಡ್ ಕಾರ್ಡ್ ತೋರಿಸಿ ಮೈದಾನದಿಂದ ಹೊರಗಟ್ಟಿದ್ದರು.

ಫಿಫಾ ನಿಯಮಾವಳಿಗಳ ಪ್ರಕಾರ, ನೇರ ರೆಡ್ ಕಾರ್ಡ್ ಪಡೆದ ಆಟಗಾರನಿಗೆ ಮುಂದಿನ ಪಂದ್ಯದಿಂದ ಸ್ವಯಂಚಾಲಿತವಾಗಿ ನಿಷೇಧ ವಿಧಿಸಲಾಗುತ್ತದೆ. ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಯಾವುದೇ ಅವಕಾಶವಿರುವುದಿಲ್ಲ. ಅದರಂತೆ ಬೆಲ್ಜಿಯಂ ವಿರುದ್ಧ ಪ್ರಿ-ಕ್ವಾರ್ಟರ್​ ಫೈನಲ್​ನಲ್ಲಿ ಪಂದ್ಯದಲ್ಲಿ ಕಣಕ್ಕಿಳಿಯಲು ಫೋಲರಿನ್ ಬಾಲೋಗನ್ ಅವಕಾಶವಿಲ್ಲ.

ಟ್ರಂಪ್ ಕರೆ:

ಅಮೆರಿಕ ತಂಡದ ಪ್ರಮುಖ ಆಟಗಾರ ಹೊರಬೀಳುತ್ತಿದ್ದಂತೆ ಕಾರ್ಯಪ್ರವೃತ್ತರಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಫಿಫಾ ಅಧ್ಯಕ್ಷ ಜಿಯಾನಿ ಇನ್ಫಾಂಟಿನೊ ಅವರಿಗೆ ಸತತ ಮೂರು ಬಾರಿ ಫೋನ್ ಕರೆ ಮಾಡಿ ತೀರ್ಪನ್ನು ಮರುಪರಿಶೀಲಿಸುವಂತೆ ಕಠಿಣ ಒತ್ತಡ ಹೇರಿದ್ದಾರೆ.

ಅಷ್ಟೇ ಅಲ್ಲದೆ ಅಮೆರಿಕ ಮತ್ತು ಬೋಸ್ನಿಯಾ-ಹೆರ್ಜೆಗೋವಿನಾ ನಡುವಿನ ಪಂದ್ಯದ ವೇಳೆ ಬಾಲೋಗನ್ ಅವರಿಗೆ ರೆಡ್ ಕಾರ್ಡ್ ನೀಡಿದ ಆ ಪಂದ್ಯದ ಮುಖ್ಯ ರೆಫರಿ ಬ್ರೆಜಿಲ್ ದೇಶದ ರಾಫೆಲ್ ಕ್ಲಾಸ್ ವಿರುದ್ಧ ಅಮೆರಿಕ ಸರ್ಕಾರವು ಮ್ಯಾಚ್ ಫಿಕ್ಸಿಂಗ್‌ನಂತಹ ಗಂಭೀರ ಆರೋಪಗಳನ್ನು ಒಳಗೊಂಡ ದಾಖಲೆಗಳನ್ನು ಫಿಫಾಗೆ ಸಲ್ಲಿಸಿದೆ.

ಫಿಫಾ ಶರಣಾಗತಿ!

ಟ್ರಂಪ್ ಅವರ ಒತ್ತಡಕ್ಕೆ ಮಣಿದ ಫಿಫಾ ಶಿಸ್ತು ಸಮಿತಿಯು, ತನ್ನ ಶಿಸ್ತು ಸಂಹಿತೆಯ ‘ಆರ್ಟಿಕಲ್ 27’ ನಿಯಮವನ್ನು ಆಯುಧವಾಗಿ ಬಳಸಿಕೊಂಡಿದೆ. ಈ ವಿಶಿಷ್ಟ ನಿಯಮದ ಪ್ರಕಾರ, ಆಟಗಾರನಿಗೆ ವಿಧಿಸಲಾದ ಶಿಕ್ಷೆಯನ್ನು ಒಂದು ವರ್ಷದ ‘ಪರಿವೀಕ್ಷಣಾ ಅವಧಿ’ ಅವಧಿಗೆ ಮುಂದೂಡಬಹುದು.

ಈ ಆಯ್ಕೆಯ ಮೂಲಕ ಇದೀಗ ಫಿಫಾ ಶಿಸ್ತು ಸಮಿತಿಯು ಬಾಲೋಗನ್ ಮೇಲಿನ ನಿಷೇಧವನ್ನು ಸದ್ಯಕ್ಕೆ ಅಮಾನತ್ತಿನಲ್ಲಿಡಲಾಗಿದೆ. ಇದರಿಂದಾಗಿ ಇಂದು (ಸೋಮವಾರ) ಸಿಯಾಟಲ್‌ನಲ್ಲಿ ಬೆಲ್ಜಿಯಂ ವಿರುದ್ಧ ನಡೆಯಲಿರುವ ಹೈ-ವೋಲ್ಟೇಜ್ ‘ರೌಂಡ್ ಆಫ್ 16’ ಪಂದ್ಯದಲ್ಲಿ ಬಾಲೋಗನ್ ಅಮೆರಿಕ ಪರ ಕಣಕ್ಕಿಳಿಯಲು ಹಸಿರು ನಿಶಾನೆ ಸಿಕ್ಕಿದೆ.

ಅಂದರೆ ಇಲ್ಲಿ ಪ್ರೊಬೇಷನರಿ ಅವಧಿಯ ಆಯ್ಕೆಯನ್ನು ಬಳಸಿಕೊಂಡಿರುವ ಫಿಫಾ ಶಿಸ್ತು ಸಮಿತಿ ಅಮೆರಿಕ ಆಟಗಾರನ ಶಿಕ್ಷೆಯನ್ನು ಮುಂದೂಡಿದೆ. ಈ ಅವಧಿಯಲ್ಲಿ ಆಟಗಾರನಿಗೆ ವಿಧಿಸಲಾದ ನಿಷೇಧ ಅಥವಾ ಶಿಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವುದಿಲ್ಲ. ಬದಲಿಗೆ, ಆ ಶಿಕ್ಷೆಯನ್ನು ಜಾರಿಗೆ ತರದೇ ಸದ್ಯಕ್ಕೆ ತಡೆಹಿಡಿಯಲಾಗುತ್ತದೆ.

ಅದರಂತೆ ಅಮೆರಿಕ ತಂಡದ ಸ್ಟಾರ್ ಸ್ಟ್ರೈಕರ್ ಫೋಲರಿನ್ ಬಾಲೋಗನ್ ಮೇಲಿನ ಮುಂದಿನ ಪಂದ್ಯದ ಕಡ್ಡಾಯ ನಿಷೇಧವನ್ನು ತೆಗೆದು ಹಾಕಲಾಗಿದೆ.

“ಏಪ್ರಿಲ್ ಫೂಲ್” ಎಂದ ಬೆಲ್ಜಿಯಂ:

ಫಿಫಾದ ಈ ತಾರತಮ್ಯದ ನಿರ್ಧಾರದ ವಿರುದ್ಧ ಬೆಲ್ಜಿಯಂ ಫುಟ್‌ಬಾಲ್ ಸಂಸ್ಥೆ ತೀವ್ರ ಆಕ್ರೋಶ ಹೊರಹಾಕಿದೆ. ಇದು ಕ್ರೀಡಾ ನಿಯಮಗಳಿಗೆ ಬಗೆದ ದ್ರೋಹ ಎಂದಿರುವ ಬೆಲ್ಜಿಯಂ ಕೋಚ್ ರೂಡಿ ಗಾರ್ಸಿಯಾ, “ಫಿಫಾ ವಿಶ್ವಕಪ್ ಅನ್ನು ಏಪ್ರಿಲ್ ಫೂಲ್ ಜೋಕ್ ಆಗಿ ಪರಿವರ್ತಿಸಿದೆ” ಎಂದು ಲೇವಡಿ ಮಾಡಿದ್ದಾರೆ. ಅಲ್ಲದೆ ಬೆಲ್ಜಿಯಂ ಈ ನಿರ್ಧಾರದ ವಿರುದ್ಧ ಅಂತಾರಾಷ್ಟ್ರೀಯ ಕ್ರೀಡಾ ನ್ಯಾಯಾಲಯದ ಮೆಟ್ಟಿಲೇರಲು ಸಜ್ಜಾಗಿದೆ.

ಡೊನಾಲ್ಡ್ ಟ್ರಂಪ್ ಸಂಭ್ರಮ:

ಇತ್ತ ಡೊನಾಲ್ಡ್ ಟ್ರಂಪ್ ತಮ್ಮ ಟ್ರುತ್ ಸೋಶಿಯಲ್ ಖಾತೆಯಲ್ಲಿ, “ದೊಡ್ಡ ಅನ್ಯಾಯವನ್ನು ಸರಿಪಡಿಸಿದ್ದಕ್ಕಾಗಿ ಫಿಫಾಗೆ ಧನ್ಯವಾದಗಳು! ಇದು ಅಮೆರಿಕಕ್ಕೆ ಸಿಕ್ಕ ಜಯ” ಎಂದು ಬರೆದುಕೊಂಡು ಸಂಭ್ರಮಿಸಿದ್ದಾರೆ.

ಮತ್ತೊಂದೆಡೆ ಯುಎಸ್ ಕೋಚ್ ಮೌರಿಸಿಯೊ ಪೊಚೆಟ್ಟಿನೊ ಮತ್ತು ನಾಯಕ ಕ್ರಿಸ್ಟಿಯನ್ ಪುಲಿಸಿಕ್ ಫಿಫಾ ತೀರ್ಪನ್ನು ಸ್ವಾಗತಿಸಿದ್ದು, ಬಾಲೋಗನ್‌ಗೆ ರೆಡ್ ಕಾರ್ಡ್ ನೀಡಿದ್ದೇ ತಪ್ಪು ತೀರ್ಪಾಗಿತ್ತು ಎಂದು ವಾದಿಸಿದ್ದಾರೆ.

ಇದನ್ನೂ ಓದಿ: 23 ವರ್ಷಗಳಿಂದ ನನ್ನನ್ನು ಮುಗಿಸಲು ನೋಡ್ತಿದ್ದೀರಿ: ಸಿಡಿದೆದ್ದ ರೊನಾಲ್ಡೊ!

ಒಟ್ಟಾರೆಯಾಗಿ ಹೇಳುವುದಾದರೆ, ಫಿಫಾ ವಿಶ್ವಕಪ್‌ನಂತಹ ಅತ್ಯುನ್ನತ ಜಾಗತಿಕ ಕ್ರೀಡಾಕೂಟವೊಂದು ರಾಜಕೀಯ ರಣರಂಗವಾಗಿ ಮಾರ್ಪಟ್ಟಿರುವುದು ಕ್ರೀಡಾಲೋಕದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೇರ ಹಸ್ತಕ್ಷೇಪ ಮತ್ತು ಅದಕ್ಕೆ ಫಿಫಾ ಮಣಿದಿರುವ ನಡೆ, ‘ಕ್ರೀಡೆಗಳಲ್ಲಿ ರಾಜಕೀಯ ಪ್ರಭಾವ ಇರಬಾರದು’ ಎಂಬ ಜಾಗತಿಕ ನಿಯಮಕ್ಕೆ ಬಿದ್ದ ದೊಡ್ಡ ಹೊಡೆತ ಎಂದೇ ವಿಶ್ಲೇಷಿಸಲಾಗುತ್ತಿದೆ.

Published On – 12:43 pm, Mon, 6 July 26

Source link

ಎಸ್ಐಆರ್ ಪ್ರಕ್ರಿಯೆಯಲ್ಲಿ ಅಕ್ರಮ: ಮುಖ್ಯ ಚುನಾವಣಾ ಅಧಿಕಾರಿಗೆ ಬಿಜೆಪಿ, ಜೆಡಿಎಸ್ ದೂರು – Kannada News | Karnataka SIR Discrepancies: BJP JDS Delegation Submits Complaint to Chief Electoral Officer Alleging Electoral Fraud

ಬೆಂಗಳೂರು, ಜುಲೈ 6: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ ಎಂದು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ನಾಯಕರು ಆರೋಪಿಸಿದ್ದಾರೆ. ಈ ಕುರಿತು ಮೈತ್ರಿ ನಾಯಕರು ಮುಖ್ಯ ಚುನಾವಣಾ ಅಧಿಕಾರಿಗೆ ಸೋಮವಾರ ದೂರು ಸಲ್ಲಿಸಿದ್ದಾರೆ. ಎಸ್ಐಆರ್ ಪ್ರಕ್ರಿಯೆಯು ಆಯೋಗದ ಮಾರ್ಗಸೂಚಿಗಳ ಪ್ರಕಾರ ನಡೆಯುತ್ತಿಲ್ಲ ಎಂದು ವಿಪಕ್ಷಗಳು ಹೇಳಿವೆ.

ಮನೆ ಮನೆಗೆ ತೆರಳಿ ಮಾಡಬೇಕಾದ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಹಲವೆಡೆ ಸಾಮೂಹಿಕವಾಗಿ, ಮಸೀದಿಗಳು ಮತ್ತು ಚೌಲ್ಟ್ರಿಗಳಂತಹ ಸ್ಥಳಗಳಲ್ಲಿ ನಡೆಸಲಾಗುತ್ತಿದೆ. ಅನರ್ಹರನ್ನು ಮತದಾರರ ಪಟ್ಟಿಗೆ ಸೇರಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್ಒ) ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಆರೋಪಿಸಿದ್ದಾರೆ. ರಾಮನಗರ, ಯಶವಂತಪುರ, ಜಯನಗರ, ಇಂಡಿ, ಕುಣಿಗಲ್, ಪಾವಗಡ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಈ ಲೋಪಗಳು ಕಂಡುಬಂದಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಸಾಮೂಹಿಕವಾಗಿ ನಡೆಸಿದ ಎಸ್ಐಆರ್ ಪ್ರಕ್ರಿಯೆಗಳನ್ನು ರದ್ದುಗೊಳಿಸಿ, ಹೊಸದಾಗಿ ಪಾರದರ್ಶಕವಾಗಿ ಪ್ರಕ್ರಿಯೆ ನಡೆಸಬೇಕು ಮತ್ತು ಅಗತ್ಯವಿದ್ದರೆ ಹೊರರಾಜ್ಯಗಳ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ವಿಪಕ್ಷಗಳು ಮನವಿ ಮಾಡಿವೆ. ಕೇಂದ್ರ ಸಚಿವ ಕುಮಾರಸ್ವಾಮಿ, ಪ್ರಲ್ಹಾದ್ ಜೋಶಿ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್, ಎಂಎಲ್​ಸಿ ಸಿ.ಟಿ. ರವಿ, ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ನಾಯಕರು ಬಿಜೆಪಿ-ಜೆಡಿಎಸ್ ನಿಯೋಗದಲ್ಲಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುಂದಿನ ತಿಂಗಳು ಪಿಎಸ್​ಐ, ಕಾನ್ಸ್​ಟೇಬಲ್​ ಹುದ್ದೆ ನೇಮಕಾತಿ ಅಧಿಸೂಚನೆ ಹೊರಡಿಸ್ತೇವೆ: ಪ್ರಿಯಾಂಕ್ ಖರ್ಗೆ – Kannada News | Karnataka Home Minister Priyank Kharge Announces Major Police Reforms and Recruitment Drives

ಬೆಂಗಳೂರು, ಜುಲೈ 06: ಗೃಹ ಸಚಿವ ಪ್ರಿಯಾಂಕ್ ಖರ್ಗೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಹಲವು ಮಹತ್ವದ ಸುಧಾರಣೆಗಳನ್ನು ಮತ್ತು ನೇಮಕಾತಿ ಪ್ರಕ್ರಿಯೆಗಳನ್ನು ಘೋಷಿಸಿದ್ದಾರೆ. ಪೊಲೀಸ್ ಇಲಾಖೆಯ ಸಿಬ್ಬಂದಿಗಳ ವರ್ಗಾವಣೆ, ಹುದ್ದೆಗಳ ತರ್ಕಬದ್ಧಗೊಳಿಸುವಿಕೆ ಮತ್ತು ಸಮರ್ಪಕ ಕಾರ್ಯನಿರ್ವಹಣೆಗಾಗಿ ಮೇಜರ್ ಸರ್ಜರಿ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ಸದ್ಯ ಕೆಲವು ಸಿಬ್ಬಂದಿಗಳು ಒಂದೇ ಸ್ಥಳದಲ್ಲಿ ದೀರ್ಘಕಾಲದಿಂದ ಕಾರ್ಯನಿರ್ವಹಿಸುತ್ತಿದ್ದು, ಇದರ ಬದಲಾವಣೆಗೆ ಮುಖ್ಯಮಂತ್ರಿಗಳೂ ಆಸಕ್ತಿ ವಹಿಸಿದ್ದಾರೆ ಎಂದು ಖರ್ಗೆ ತಿಳಿಸಿದ್ದಾರೆ. ಪೊಲೀಸ್ ಇಲಾಖೆಯ ನೇಮಕಾತಿ ಕುರಿತು ಮಾತನಾಡಿದ ಅವರು, ಈಗಾಗಲೇ 7,000 ಸಿಬ್ಬಂದಿ ನೇಮಕಾತಿಗೆ ದಿನಾಂಕ ಪ್ರಕಟಗೊಂಡಿದೆ. ಇದರ ಜೊತೆಗೆ, ಮುಂದಿನ ತಿಂಗಳ ಅಂತ್ಯದ ವೇಳೆಗೆ ಪಿಎಸ್​ಐ ಮತ್ತು ಕಾನ್ಸ್‌ಟೇಬಲ್ ಹುದ್ದೆಗಳಿಗೆ ಮತ್ತೊಂದು 5,000-6,000 ಸಿಬ್ಬಂದಿ ನೇಮಕಾತಿ ಅಧಿಸೂಚನೆ ಹೊರಡಿಸುವುದಾಗಿ ಪ್ರಿಯಾಂಕ್ ಖರ್ಗೆ ಘೋಷಿಸಿದರು. ಅಪರಾಧ ಪ್ರಮಾಣದ ಆಧಾರದ ಮೇಲೆ ಪೊಲೀಸ್ ಠಾಣೆಗಳ ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆಯೇ ಹೊರತು ಜನಸಂಖ್ಯೆ ಆಧಾರದ ಮೇಲೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ 125ನೇ ಜಯಂತಿ: ಅಖಂಡ ಭಾರತದ ನಾಯಕನಿಗೆ ಪ್ರಧಾನಿ ಮೋದಿ ನಮನ – Kannada News | PM Modi Honors Dr. Shyama Prasad Mukherjee’s 125th Jayanti: A Visionary for Akhand Bharat

ನವದೆಹಲಿ, ಜುಲೈ 06: ಅಖಂಡ ಭಾರತದ ಪ್ರವರ್ತಕ, ಅಪ್ರತಿಮ ದೇಶಭಕ್ತ ಮತ್ತು ಶ್ರೇಷ್ಠ ಶಿಕ್ಷಣ ತಜ್ಞ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ 125ನೇ ಜಯಂತಿಯನ್ನು ಇಂದು ದೇಶಾದ್ಯಂತ ಗೌರವಪೂರ್ವಕವಾಗಿ ಆಚರಿಸಲಾಗುತ್ತಿದೆ. ಈ ಐತಿಹಾಸಿಕ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಡಾ. ಮುಖರ್ಜಿ ಅವರ ಅಮೂಲ್ಯ ಕೊಡುಗೆಗಳನ್ನು ಸ್ಮರಿಸಿ ವಿಶೇಷ ಲೇಖನವೊಂದನ್ನು ಬರೆದಿದ್ದಾರೆ ಹಾಗೂ ಭಾರತದ ಈ ಶ್ರೇಷ್ಠ ರಾಷ್ಟ್ರ ನಿರ್ಮಾತೃವಿಗೆ ಪ್ರಣಾಮಗಳನ್ನು ಸಲ್ಲಿಸಿದ್ದಾರೆ.

ಬಲಿಷ್ಠ ಹಾಗೂ ಸ್ವಾವಲಂಬಿ ಭಾರತವನ್ನು ನಿರ್ಮಿಸುವ ಡಾ. ಮುಖರ್ಜಿ ಅವರ ದೂರದೃಷ್ಟಿಯು ಇಂದಿಗೂ ನವ ಭಾರತದ ನಿರ್ಮಾಣದ ಸಂಕಲ್ಪಕ್ಕೆ ಹೊಸ ಶಕ್ತಿಯನ್ನು ತುಂಬುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಬಹುಮುಖಿ ವ್ಯಕ್ತಿತ್ವ ಮತ್ತು ಸಾಧನೆಗಳು
ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಕೇವಲ ಒಬ್ಬ ರಾಜಕೀಯ ನಾಯಕರಾಗಿರದೆ, ದೇಶದ ಪ್ರಮುಖ ಚಿಂತಕ ಹಾಗೂ ಶಿಕ್ಷಣ ತಜ್ಞರಾಗಿದ್ದರು. ಕೊಲ್ಕತ್ತಾ ವಿಶ್ವವಿದ್ಯಾಲಯದ ಅತ್ಯಂತ ಕಿರಿಯ ಉಪಕುಲಪತಿಯಾಗಿ ಅವರು ಶಿಕ್ಷಣ ಕ್ಷೇತ್ರದಲ್ಲಿ ತಂದ ನಾವೀನ್ಯತೆ ಮತ್ತು ಪ್ರಗತಿಪರ ಬದಲಾವಣೆಗಳು ಇಂದಿಗೂ ಮಾದರಿಯಾಗಿವೆ. ಸ್ವತಂತ್ರ ಭಾರತದ ಮೊದಲ ಕೈಗಾರಿಕಾ ಸಚಿವರಾಗಿ ದೇಶದ ಸ್ವಾವಲಂಬನೆಗೆ ಬಲವಾದ ಅಡಿಪಾಯ ಹಾಕಿದ ಅವರು, ಸಾಂಪ್ರದಾಯಿಕ ಉದ್ಯೋಗಗಳು ಮತ್ತು ಜನರ ಜೀವನೋಪಾಯವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಮತ್ತಷ್ಟು ಓದಿ: ಅಮರನಾಥ ಯಾತ್ರಿಕರಿಗೆ ಪ್ರಧಾನಿ ಮೋದಿ ಪತ್ರ: ಭಕ್ತರ ಮನ ಗೆದ್ದ ‘ಐದು ಪ್ರತಿಜ್ಞೆಗಳು’

ಬಂಗಾಳದ ಭೀಕರ ಕ್ಷಾಮದ ಸಮಯದಲ್ಲಿ ಅವರು ಕೈಗೊಂಡ ಮಾನವೀಯ ಕಾರ್ಯಗಳು ಸಂಕಷ್ಟದಲ್ಲಿದ್ದ ಜನರಿಗೆ ನೆರವಾದವು ಮತ್ತು ಅವರ ಕರುಣಾಮಯಿ ಸ್ವಭಾವಕ್ಕೆ ಸಾಕ್ಷಿಯಾಗಿದ್ದವು ಎಂದು ಪ್ರಧಾನಿ ನೆನಪಿಸಿಕೊಂಡಿದ್ದಾರೆ.

ಅಖಂಡ ಭಾರತದ ಕನಸು ಮತ್ತು ಆರ್ಟಿಕಲ್ 370 ರದ್ದು
ಭಾರತದ ಏಕತೆ, ಸಮಗ್ರತೆ ಮತ್ತು ಹೆಮ್ಮೆಯನ್ನು ಕಾಯ್ದುಕೊಳ್ಳಲು ಡಾ. ಮುಖರ್ಜಿ ಅವರು ನಡೆಸಿದ ಹೋರಾಟ ಮತ್ತು ಬಲಿದಾನ ಇತಿಹಾಸದಲ್ಲಿ ಅಮರವಾಗಿದೆ. ದೇಶದಲ್ಲಿ ಒಂದೇ ಸಂವಿಧಾನ, ಒಂದೇ ಧ್ವಜ ಮತ್ತು ಒಂದೇ ಪ್ರಧಾನಿ ಇರಬೇಕೆಂಬುದು ಅವರ ಕಟು ನಿಲುವಾಗಿತ್ತು.

ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಅವರ ಈ ದೀರ್ಘಕಾಲದ ಹೋರಾಟಕ್ಕೆ ಗೌರವ ಸಲ್ಲಿಸುವ ಸಲುವಾಗಿ, 2019 ರಲ್ಲಿ ಕೇಂದ್ರ ಸರ್ಕಾರವು ಸಂವಿಧಾನದ 370 ಮತ್ತು 35(A) ವಿಧಿಗಳನ್ನು ರದ್ದುಗೊಳಿಸಿತು. ಇದು ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಅಖಂಡ ಭಾರತದ ಕನಸಿಗೆ ದೇಶ ಸಲ್ಲಿಸಿದ ಅತ್ಯಂತ ಸೂಕ್ತ ಹಾಗೂ ನಿಜವಾದ ಗೌರವವಾಗಿದೆ ಎಂದು ಪ್ರಧಾನಿ ಮೋದಿ ತಮ್ಮ ಲೇಖನದಲ್ಲಿ ಒತ್ತಿಹೇಳಿದ್ದಾರೆ.

ಯಾರು ಕೀರ್ತಿವಂತರೋ, ಪುಣ್ಯವಂತರೋ ಮತ್ತು ಕವಿಶ್ರೇಷ್ಠರೋ ಅವರಿಗೆ ಶರೀರದ ವಯಸ್ಸಾಗುವಿಕೆಯಿಂದ ಬರುವ ಸಾವು ಮತ್ತು ವಿನಾಶದ ಭಯವಿರುವುದಿಲ್ಲ. ಅವರ ಕೀರ್ತಿ ಸದಾ ಜೀವಂತವಾಗಿರುತ್ತದೆ.

ನಾವು ‘ವಿಕಸಿತ ಭಾರತ’ದ ಕಡೆಗೆ ಹೆಜ್ಜೆ ಇಡುತ್ತಿರುವ ಈ ಸಂದರ್ಭದಲ್ಲಿ, ಡಾ. ಮುಖರ್ಜಿ ಅವರ ಆದರ್ಶಗಳು ಮತ್ತು ದೇಶಪ್ರೇಮದ ದಾರಿದೀಪ ನಮ್ಮ ಹಾದಿಯನ್ನು ಸದಾ ಬೆಳಗುತ್ತಿರುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಜನರ ಒಳ್ಳೆಯದಕ್ಕೆ ನಾನು ನಿಷ್ಠುರ ಆದರೂ ಪರವಾಗಿಲ್ಲ: ಸಚಿವ ಕೃಷ್ಣ ಭೈರೇಗೌಡ – Kannada News | Bengaluru Footpath Clearance: Minister Krishna Byre Gowda Stands Firm for Public Welfare

ಬೆಂಗಳೂರು, ಜುಲೈ 06: ನಗರದಲ್ಲಿ ಫುಟ್ಪಾತ್ ತೆರವು ಕಾರ್ಯಾಚರಣೆ ತೀವ್ರಗೊಂಡಿದ್ದು, ಬುಲ್ಡೋಜರ್‌ಗಳು ಈಗಾಗಲೇ ಅಖಾಡಕ್ಕಿಳಿದಿವೆ. ಈ ಕಾರ್ಯಾಚರಣೆಯ ವಿರುದ್ಧ ದೊಡ್ಡ ಮಟ್ಟದಲ್ಲಿ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ. ಆದರೆ, ನಗರಾಭಿವೃದ್ಧಿ ಸಚಿವರಾದ ಕೃಷ್ಣಭೈರೇಗೌಡ ಅವರು, ಜನರ ಒಳ್ಳೆಯದಕ್ಕಾಗಿ ನಿಷ್ಠುರ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ್ದಾರೆ. ಯಾವುದೇ ಸುಧಾರಣೆ ಆಗಬೇಕಾದರೆ ಸವಾಲುಗಳನ್ನು ಎದುರಿಸುವುದು ಅನಿವಾರ್ಯ. ಏನೂ ಪ್ರಯತ್ನ ಮಾಡದೆ ಸುಮ್ಮನಿದ್ದರೆ ಹುದ್ದೆಯಲ್ಲಿ ಇರುವುದು ಸರಿಯಲ್ಲ ಎಂದು ಸಚಿವರು ತಿಳಿಸಿದ್ದಾರೆ. ಒತ್ತುವರಿ ತೆರವಿಗೆ ಶೇಕಡ 80ರಷ್ಟು ಜನರು ಬೆಂಬಲ ಸೂಚಿಸಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ. ಒಮ್ಮೆ ಕಾರ್ಯಕ್ಕೆ ಇಳಿದ ಮೇಲೆ ಅದನ್ನು ಪೂರ್ಣಗೊಳಿಸುವುದು ತಮ್ಮ ಕರ್ತವ್ಯ ಎಂದವರು ಸ್ಪಷ್ಟಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಆಟೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಜಾಸ್ತಿ ಹಣ ಕೇಳುವ ಆಟೋ ಚಾಲಕರ ಬಾಯಿಗೆ ಬೀಗ ಹಾಕಲಿದೆ ಡಿಜಿಟಲ್ ಆಟೋ ಮೀಟರ್! – Kannada News | Bengaluru Nagara Auto: New Digital Meter to End Ride Refusals and Overcharging

ಬೆಂಗಳೂರು, ಜುಲೈ 06: ಬೆಂಗಳೂರಿನಲ್ಲಿ ಆಟೋ (Auto) ಚಾಲಕರ ಸವಾರಿ ನಿರಾಕರಣೆ (Ride Refusal) ಮತ್ತು ಮೀಟರ್‌ಗಿಂತ ಒಂದೂವರೆ-ಎರಡು ಪಟ್ಟು ಹೆಚ್ಚು ಹಣ ಬೇಡುವ ದಂದೆಗೆ ಮುಕ್ತಿ ಹಾಡಲು ‘ನಗರ ಮೀಟರ್ ಆಟೋ’ (Nagara Meter Auto) ಸಂಸ್ಥೆಯು ಹೊಸದೊಂದು ವಿನೂತನ ಡಿಜಿಟಲ್ ಮೀಟರ್ ತಂತ್ರಜ್ಞಾನವನ್ನು ಪರಿಚಯಿಸಿದೆ.

ಏನಿದು ಹೊಸ ಡಿಜಿಟಲ್ ಮೀಟರ್ ವ್ಯವಸ್ಥೆ?

ಸಾಮಾನ್ಯವಾಗಿ ಓಲಾ, ಉಬರ್ ಅಥವಾ ನಮ್ಮ ಯಾತ್ರಿ ಆಪ್‌ಗಳ ಮೂಲಕ ಬುಕ್ ಮಾಡುವಾಗ ಮಾತ್ರ ಡಿಜಿಟಲ್ ಪಾರದರ್ಶಕತೆ ಇರುತ್ತಿತ್ತು. ಆದರೆ, ಈ ಹೊಸ ವ್ಯವಸ್ಥೆಯಲ್ಲಿ ಪ್ರಯಾಣಿಕರು ರಸ್ತೆಯಲ್ಲಿ ನೇರವಾಗಿ ಹೋಗುತ್ತಿರುವ ಆಟೋವನ್ನು ಕೈ ತೋರಿಸಿ ನಿಲ್ಲಿಸಿ ಸವಾರಿ ಮಾಡಬಹುದು. ಪ್ರಯಾಣ ಆರಂಭವಾಗುತ್ತಿದ್ದಂತೆ, ಚಾಲಕನು ತನ್ನ ‘ನಗರಮೀಟರ್’ (NagaraMeter) ಆಪ್‌ನಲ್ಲಿ ಡಿಜಿಟಲ್ ಮೀಟರ್ ಆನ್ ಮಾಡುತ್ತಾನೆ.

ಪ್ರಯಾಣಿಕರು ಆಟೋದ ಒಳಗಡೆ ಇರುವ ಕ್ಯೂಆರ್ ಕೋಡ್ (QR Code) ಸ್ಕ್ಯಾನ್ ಮಾಡುವ ಮೂಲಕ ಅಥವಾ ತಮಗೆ ಬರುವ ಎಸ್‌ಎಂಎಸ್/ವಾಟ್ಸಾಪ್ ಲಿಂಕ್ ಮೂಲಕ ಎಷ್ಟು ಬಾಡಿಗೆ ಆಗುತ್ತಿದೆ ಎಂಬುದನ್ನು ರಿಯಲ್ ಟೈಮ್‌ನಲ್ಲಿ ಲೈವ್ ಆಗಿ ಟ್ರ್ಯಾಕ್ ಮಾಡಬಹುದು. ವಿಶೇಷವೆಂದರೆ, ಈ ಬಾಡಿಗೆಯನ್ನು ಸರ್ಕಾರ ನಿಗದಿಪಡಿಸಿರುವ ಅಧಿಕೃತ ಮೀಟರ್ ದರಗಳ ಆಧಾರದ ಮೇಲೆಯೇ ಲೆಕ್ಕ ಹಾಕಲಾಗುತ್ತದೆ.

ಬಾರ್ಗೇನಿಂಗ್ ಕಿರಿಕಿರಿ ಇರುವುದಿಲ್ಲ

ಈ ಕುರಿತು ಮಾಹಿತಿ ನೀಡಿರುವ ‘ನಗರ’ ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಒ ನಿರಂಜನಾರಾಧ್ಯ, ಶೇ 90ರಷ್ಟು ಪ್ರಯಾಣಿಕರು ಆಟೋ ಚಾಲಕರು ಬರಲು ನಿರಾಕರಿಸುತ್ತಾರೆ ಅಥವಾ ದುಪ್ಪಟ್ಟು ಹಣ ಕೇಳುತ್ತಾರೆ ಎಂದು ದೂರುತ್ತಾರೆ. ಈ ಚೌಕಾಸಿ (Bargaining) ವ್ಯವಸ್ಥೆಯನ್ನು ಸಂಪೂರ್ಣವಾಗಿ ತೊಡೆದುಹಾಕಿ, ಜನರಿಗೆ ನ್ಯಾಯಯುತ ದರದಲ್ಲಿ ಸವಾರಿ ಒದಗಿಸುವುದು ನಮ್ಮ ಉದ್ದೇಶ ಎಂದಿದ್ದಾರೆ.

ಈ ಸೌಲಭ್ಯದಿಂದಾಗಿ ಚಾಲಕರು ಕೇವಲ ಆನ್‌ಲೈನ್ ಬುಕಿಂಗ್‌ಗೆ ಕಾಯಬೇಕಾಗಿಲ್ಲ. ಮೆಟ್ರೋ ನಿಲ್ದಾಣ, ಬಸ್ ನಿಲ್ದಾಣ ಹಾಗೂ ಟೆಕ್ ಪಾರ್ಕ್‌ಗಳಲ್ಲಿ ನಿಂತು ನೇರವಾಗಿ ಬರುವ ಗ್ರಾಹಕರನ್ನು ಸರ್ಕಾರಿ ದರದಲ್ಲೇ ಕರೆದೊಯ್ಯಬಹುದು. ಸದ್ಯ ಈ ವೇದಿಕೆಯಲ್ಲಿ ಆಟೋಗಳ ಸಂಖ್ಯೆ 150 ರಿಂದ 500 ಕ್ಕೆ ಏರಿಕೆಯಾಗಿದ್ದು, ದಿನನಿತ್ಯದ ಸವಾರಿಗಳ ಸಂಖ್ಯೆಯೂ 400 ರ ಗಡಿ ತಲುಪುತ್ತಿದೆ. ಒಟ್ಟಿನಲ್ಲಿ ಈ ತಂತ್ರಜ್ಞಾನ ಬೆಂಗಳೂರಿನ ಆಟೋ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:03 pm, Mon, 6 July 26

Source link

‘ಹೀರೋಗಳು ಲೇಡಿ ಡೈರೆಕ್ಟರ್ ಮಾತು ಕೇಳಲ್ಲ, ಆದ್ರೆ ಯಶ್ ಹಾಗಲ್ಲ’; ಹುಮಾ ಖುರೇಷಿ – Kannada News | Yash Toxic Huma Qureshi Praises Geetu Mohandas, Calls Film Unique Teaser Out

ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ (Toxic Movie) ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ‘ಲೇಡಿಸ್ ಆ್ಯಂಡ್ ಲೇಡಿಸ್’ ಅನ್ನೋದು ಟೀಸರ್ ಟೈಟಲ್. ಈ ಟೀಸರ್ ಮೂಲಕ ಎಲ್ಲಾ ಮಹಿಳಾ ಪಾತ್ರಗಳನ್ನು ಪರಿಚಯಿಸಲಾಗಿದೆ. ಈ ಗ್ಯಾಂಗ್‌ಸ್ಟರ್ ಸಿನಿಮಾವನ್ನು ನೋಡಲು ಅಭಿಮಾನಿಗಳು ಸಖತ್ ಕಾತರರಾಗಿದ್ದಾರೆ. ಚಿತ್ರದ ದೊಡ್ಡ ತಾರಾಗಣವೇ ಈ ಕುತೂಹಲಕ್ಕೆ ಮುಖ್ಯ ಕಾರಣ. ಇದೀಗ ಚಿತ್ರದಲ್ಲಿ ‘ಎಲಿಜಬೆತ್’ ಎಂಬ ಪಾತ್ರದಲ್ಲಿ ನಟಿಸುತ್ತಿರುವ ಬಾಲಿವುಡ್ ನಟಿ ಹುಮಾ ಖುರೇಷಿ ಸಿನಿಮಾದ ಬಗ್ಗೆ ಮಹತ್ವದ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾ ಎಲ್ಲರನ್ನೂ ಬೆಚ್ಚಿಬೀಳಿಸಲಿದೆ ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಹುಮಾ ಖುರೇಷಿ ಅವರಿಗೆ ‘ಟಾಕ್ಸಿಕ್’ ಚಿತ್ರದ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ಅವರು, ‘ಜನರು ಈ ಹಿಂದೆಂದೂ ಇಂತಹ ಸಿನಿಮಾವನ್ನು ನೋಡಿಲ್ಲ. ಚಿತ್ರದಲ್ಲಿ ನಟಿಸಿರುವ ಎಲ್ಲಾ ನಟಿಯರು ಅದ್ಭುತವಾಗಿ ಅಭಿನಯಿಸಿದ್ದಾರೆ’ ಎಂದು ಹೇಳಿದ್ದಾರೆ. ಚಿತ್ರದ ನಿರ್ದೇಶಕಿ ಗೀತು ಮೋಹನ್ ದಾಸ್ ಅವರ ಕೆಲಸವನ್ನು ಹುಮಾ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಸಿನಿಮಾ ರಂಗದಲ್ಲಿ ಮಹಿಳಾ ನಿರ್ದೇಶಕಿಯಾಗಿ ಕೆಲಸ ಮಾಡುವುದು ಸುಲಭವಲ್ಲ ಎಂದು ಹುಮಾ ಹೇಳಿದ್ದಾರೆ. ‘ಚಿತ್ರರಂಗದಲ್ಲಿ ಅನೇಕ ನಟರು ಮಹಿಳಾ ನಿರ್ದೇಶಕಿಯರ ಮಾತು ಕೇಳಲು ಇಷ್ಟಪಡುವುದಿಲ್ಲ. ಆದರೆ ಗೀತು ಮೋಹನ್ ದಾಸ್ ಅವರು ಯಶ್ ಅವರಂತಹ ಸೂಪರ್‌ಸ್ಟಾರ್ ಜೊತೆ ಅತ್ಯಂತ ಆರೋಗ್ಯಕರವಾದ ಒಡನಾಟ ಇಟ್ಟುಕೊಂಡು ಈ ಚಿತ್ರವನ್ನು ಮುನ್ನಡೆಸುತ್ತಿದ್ದಾರೆ. ಈ ಚಿತ್ರವು ಪ್ರೇಕ್ಷಕರ ಎಲ್ಲಾ ನಿರೀಕ್ಷೆಗಳನ್ನು ಮೀರಿ ನಿಲ್ಲಲಿದೆ’ ಎಂದು ಹುಮಾ ಖುರೇಷಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ ನಟ ಯಶ್ ಅವರು ಹುಮಾ ಖುರೇಷಿ ಅವರ ಧೈರ್ಯವನ್ನು ಸೋಶಿಯಲ್ ಮೀಡಿಯಾದಲ್ಲಿ ಕೊಂಡಾಡಿದ್ದಾರೆ. ಹುಮಾ ನಟಿಸಿ, ನಿರ್ಮಿಸಿರುವ ‘ಬೇಬಿ ಡೋ ಡೈ ಡೋ’ ಚಿತ್ರದ ಬಗ್ಗೆ ಯಶ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಚಿತ್ರ ನಿರ್ಮಾಣ ಮಾಡುವುದು ಸುಲಭವಲ್ಲ, ಅದಕ್ಕೆ ಸಾಕಷ್ಟು ಧೈರ್ಯ ಬೇಕು ಎಂದು ಹೇಳಿದ್ದಾರೆ. ಹುಮಾ ಅವರ ಈ ಪ್ರಯತ್ನಕ್ಕೆ ಯಶ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ಟಾಕ್ಸಿಕ್’ ಚಿತ್ರದ ‘ತಬಾಹಿ’ ವಿಡಿಯೋ ಸಾಂಗ್​​ಗೆ ಕಾದು ಕುಳಿತವರಿಗೆ ಗುಡ್ ನ್ಯೂಸ್

‘ಟಾಕ್ಸಿಕ್’ ಚಿತ್ರದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಕೂಡ ನಟಿಸುತ್ತಿದ್ದಾರೆ. ಈ ಸಿನಿಮಾ ಇದೇ ವರ್ಷ ಆಗಸ್ಟ್ 26 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 12:05 pm, Mon, 6 July 26

Source link

23 ವರ್ಷಗಳಿಂದ ನನ್ನನ್ನು ಮುಗಿಸಲು ನೋಡ್ತಿದ್ದೀರಿ: ಸಿಡಿದೆದ್ದ ರೊನಾಲ್ಡೊ! – Kannada News | Trying To Kill Me For 23 Years: Cristiano Ronaldo

2026ರ ಫಿಫಾ ವಿಶ್ವಕಪ್‌ನ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯಕ್ಕೂ ಮುನ್ನ ಪೋರ್ಚುಗಲ್ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಮಾಧ್ಯಮಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಡಲ್ಲಾಸ್ ಸ್ಟೇಡಿಯಂನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡ, ರೊನಾಲ್ಡೊಗೆ ನಿವೃತ್ತಿ ಮತ್ತು ಫಾರ್ಮ್ ಬಗ್ಗೆ ಸರಣಿ ಪ್ರಶ್ನೆಗಳನ್ನು ಕೇಳಲಾಗಿತ್ತು. ಈ ಪ್ರಶ್ನೆಗೆ ಕ್ರಿಸ್ಟಿಯಾನೊ ಖಡಕ್ ಉತ್ತರ ನೀಡಿ ಗಮನ ಸೆಳೆದಿದ್ದಾರೆ.

ಪೋರ್ಚುಗಲ್ ತಂಡದ ಆರಂಭಿಕ ಆಟಗಾರರ ಪಟ್ಟಿಯಲ್ಲಿ ನಿಮ್ಮನ್ನು ಸೇರಿಸಿಕೊಳ್ಳುವ ಕುರಿತು ಕೇಳಿಬರುತ್ತಿರುವ ನಿರಂತರ ಟೀಕೆಗಳು ಮತ್ತು ಸಂಶಯಗಳನ್ನು ನೀವು ಹೇಗೆ ಎದುರಿಸುತ್ತೀರಿ? ಎಂದು ಕೇಳಲಾಗಿತ್ತು.

ಇಈ ಪ್ರಶ್ನೆಗೆ ಕುಪಿತಗೊಂಡ ಕ್ರಿಸ್ಟಿಯಾನೊ ರೊನಾಲ್ಡೊ, ನೀವು ಕಳೆದ 23 ವರ್ಷಗಳಿಂದ ನನ್ನನ್ನು ಮುಗಿಸಲು (ಆಟದ ವೃತ್ತಿಜೀವನವನ್ನು ಅಂತ್ಯಗೊಳಿಸಲು) ಪ್ರಯತ್ನಿಸುತ್ತಿದ್ದೀರಿ. ಆದರೆ ಅದು ವ್ಯರ್ಥ ಹಾಗೂ ಸಮಯದ ಪೋಲು ಎಂಬುದು ಈಗ ನಿಮಗೇ ಅರ್ಥವಾಗಿರಬೇಕು ಎಂದು ಗುಡುಗಿದ್ದಾರೆ.

41ನೇ ವಯಸ್ಸಿನಲ್ಲಿ ವಿಶ್ವಕಪ್ ಆಡುವುದು, ಇದರಲ್ಲಿ ನಿಮಗೆ ಎದುರಾಗುವ ಅತ್ಯಂತ ಕಠಿಣವಾದ ಸವಾಲು ಅಥವಾ ಕಷ್ಟದ ವಿಷಯ ಏನು ಎಂದು ಕೇಳಿದಾಗ,  ನಾನು ಮೊದಲಿನಂತೆಯೇ ಆಡುತ್ತಿಲ್ಲ ನಿಜ, ಆದರೆ ನಾನೇನು ಕೆಟ್ಟದಾಗಿ ಆಡುತ್ತಿಲ್ಲ. ಈ ವಿಶ್ವಕಪ್‌ನಲ್ಲೇ ಈಗಾಗಲೇ 3 ಗೋಲುಗಳನ್ನು ಬಾರಿಸಿದ್ದೇನೆ ಎಂದು ನೆನಪಿಸಿದರು.

ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ  ಪ್ರಸಿದ್ಧ ಪತ್ರಕರ್ತ ಮಾರ್ಸೆಲೊ ಬೆಕ್ಲರ್ ಅವರನ್ನು ಗುರುತಿಸಿದ ರೊನಾಲ್ಡೊ, “ಆ ಹುಡುಗನಿಗೆ ಮೈಕ್ ಕೊಡಿ, ಅವನಿಗೆ ನಾನೆಂದರೆ ಇಷ್ಟವಿಲ್ಲ. ನನಗೆ ಜನರ ಮುಖಗಳು ಚೆನ್ನಾಗಿ ನೆನಪಿರುತ್ತವೆ ಎಂದು ನಗುತ್ತಲೇ ಕಾಲೆಳೆದರು.

ಇನ್ನು ನಿವೃತ್ತಿ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರೊನಾಲ್ಡೊ, ಮಾಧ್ಯಮಗಳ ಒತ್ತಡಕ್ಕೆ ಮಣಿದು ತಾನು ನಿವೃತ್ತಿ ಘೋಷಿಸುವುದಿಲ್ಲ. ನನಗೆ ಸರಿ ಎನಿಸಿದಾಗ ಮಾತ್ರ ಆಟದಿಂದ ಹಿಂದೆ ಸರಿಯುವುದಾಗಿ ತಿಳಿಸಿದರು. ಇದಾಗ್ಯೂ ಇದು ತನ್ನ ವೃತ್ತಿಜೀವನದ ಕೊನೆಯ ವಿಶ್ವಕಪ್ ಪಂದ್ಯಾವಳಿ ಎಂಬುದನ್ನು ಅವರು ಖಚಿತಪಡಿಸಿದ್ದಾರೆ.

ತನ್ನ ಮೇಲೆ ಕೇಳಿ ಬರುತ್ತಿರುವ ಟೀಕೆಗಳ ಬಗ್ಗೆ ಮಾತನಾಡಿದ ರೊನಾಲ್ಡೊ, ಈ ವಯಸ್ಸಿನಲ್ಲೂ ನನ್ನ ಮೇಲಾಗುವ ದಾಳಿಗಳಿಗೆ ನಾನು ಧನ್ಯವಾದ ಹೇಳುತ್ತೇನೆ. ಯಾಕಂದರೆ ಈ ಟೀಕೆಗಳೇ ನೀವು ಇನ್ನಷ್ಟು ಬೆಳೆಯಲು ಸಹಾಯ ಮಾಡುತ್ತವೆ ಎಂದು  ಭಾವುಕರಾಗಿ ನುಡಿದರು.

ಒಟ್ಟಾರೆಯಾಗಿ ಹೇಳುವುದಾದರೆ, ಕ್ರಿಸ್ಟಿಯಾನೊ ರೊನಾಲ್ಡೊ ಅವರ ಈ ಉತ್ತರಗಳು ಅವರನ್ನು ಟೀಕಿಸುವರಿಗೆ ಮತ್ತು ಗುರಿಯಾಗಿಸುವವರಿಗೆ ನೀಡಿದ ತಿರುಗೇಟಷ್ಟೇ ಅಲ್ಲ. ಅದು ಅವರ 23 ವರ್ಷಗಳ ಅಪ್ರತಿಮ ಫುಟ್‌ಬಾಲ್ ಪಯಣದ ಹಠ ಮತ್ತು ಬದ್ಧತೆಯ ಸಂಕೇತವಾಗಿದೆ.

ಇದನ್ನೂ ಓದಿ: ಯಾರಿಂದಲೂ ಸಾಧ್ಯವಾಗದ ವಿಶ್ವ ದಾಖಲೆ ನಿರ್ಮಿಸಿದ ಕ್ರಿಸ್ಟಿಯಾನೊ ರೊನಾಲ್ಡೊ

41ನೇ ವಯಸ್ಸಿನಲ್ಲೂ ವಿಮರ್ಶಕರ ನಕಾರಾತ್ಮಕತೆಯನ್ನು ತಮಗೆ ಪ್ಲಸ್ ಪಾಯಿಂಟ್ ಮಾಡಿಕೊಂಡಿರುವ ಕ್ರಿಸ್ಟಿಯಾನೊ ರೊನಾಲ್ಡೊ ಈ ಬಾರಿಯ ವಿಶ್ವಕಪ್​ನಲ್ಲಿ ಟ್ರೋಫಿ ಎತ್ತಿ ಹಿಡಿಯುವ ಮೂಲಕ ನಿವೃತ್ತಿ ಘೋಷಿಸುವ ಇರಾದೆಯಲ್ಲಿದ್ದಾರೆ. ಇದಕ್ಕಾಗಿ ಪೋರ್ಚುಗಲ್ ಪಡೆ ಇನ್ನೂ 4 ಪಂದ್ಯಗಳನ್ನು ಗೆಲ್ಲಬೇಕಿದೆ.

Source link

Exit mobile version