ಚಿತ್ರಮಂದಿರಗಳಲ್ಲಿ ಬ್ಯಾನ್, ಈಗ ಒಟಿಟಿಯಿಂದಲೂ ಹೊರಕ್ಕೆ, ಯಾವುದು ಈ ‘ಸಟ್ಲುಜ್’ ಸಿನಿಮಾ? – Kannada News | Diljit Dosanjh’s Satluj Removed From Zee5 In India Two Days After Release

ಭಾರತದಲ್ಲಿ ಸಿನಿಮಾ (Cinema) ಬ್ಯಾನ್ ಎನ್ನುವುದು ಸಾಮಾನ್ಯ ಎಂಬಂತಾಗಿದೆ. ಸಣ್ಣ-ಪುಟ್ಟ ವಿಷಯಕ್ಕೂ ಸಿನಿಮಾಗಳ ಮೇಲೆ ಕೆಲ ಸಂಘಟನೆಯವರು, ನೆಟ್ಟಿಗರು ಆಗಾಗ್ಗೆ ಬ್ಯಾನ್ ಹೇರುತ್ತಲೇ ಇರುತ್ತಾರೆ. ಆದರೆ ಅದೆಲ್ಲ ವರ್ಕೌಟ್ ಆಗುವುದಿಲ್ಲ. ಸಿಬಿಎಫ್​​ಸಿ ಪ್ರಮಾಣ ಪತ್ರ ಪಡೆದ ಯಾವ ಸಿನಿಮಾ ಸಹ ಬಿಡುಗಡೆ ಆಗದೇ ಇರುವುದಿಲ್ಲ. ಆದರೆ ಇಲ್ಲೊಂದು ಸಿನಿಮಾ ಕಳೆದ ಮೂರು ವರ್ಷಗಳಿಂದಲೂ ಸಿಬಿಎಫ್​​ಸಿಯ ಪ್ರಮಾಣ ಪತ್ರಕ್ಕಾಗಿ ಹೋರಾಡಿ, ಕೊನೆಗೆ ಸಿನಿಮಾ ಬಿಡುಗಡೆ ಆಗುವುದಿಲ್ಲವೆಂದು ಕೈಚೆಲ್ಲಿ, ಬಳಿಕ ಒಟಿಟಿಯಲ್ಲಿ ಬಿಡುಗಡೆ ಮಾಡಿತ್ತು. ಆದರೆ ಒಟಿಟಿಯಲ್ಲಿ ಸಿನಿಮಾ ರಿಲೀಸ್ ಮಾಡಿದ ಎರಡನೇ ದಿನಕ್ಕೆ ಸಿನಿಮಾವನ್ನು ಅಲ್ಲಿಂದಲೂ ಹೊರಗಟ್ಟಲಾಗಿದೆ.

ಖ್ಯಾತ ಪಂಜಾಬಿ ಗಾಯಕ ಮತ್ತು ನಟ ದಿಲ್ಜಿತ್ ದೊಸ್ಸಾಂಜ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಸಟ್ಲುಜ್’ ಸಿನಿಮಾ ಮೇಲೆ ನಿಷೇಧ ಹೇರಲಾಗಿದೆ. ಕಳೆದ ಮೂರು ವರ್ಷಗಳಿಂದಲ ಕಾನೂನು ಹೋರಾಟ ನಡೆಸಿದ ಚಿತ್ರತಂಡ ಬೇರೆ ದಾರಿ ಕಾಣದೆ, ಜೀ5ನಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಿತ್ತು. ಜೀ5 ನಲ್ಲಿ ಎರಡು ದಿನಗಳ ಹಿಂದಷ್ಟೆ ‘ಸಟ್ಲುಜ್’ ಸಿನಿಮಾ ರಿಲೀಸ್ ಆಗಿತ್ತು. ಆದರೆ ಎರಡೇ ದಿನಕ್ಕೆ ಸಿನಿಮಾವನ್ನು ಜೀ5ನಿಂದ ತೆಗೆದು ಹಾಕಲಾಗಿದೆ. ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಜೀ5, ಆದಷ್ಟು ಬೇಗ ಸಿನಿಮಾವನ್ನು ಮತ್ತೆ ಒಟಿಟಿಗೆ ತರುತ್ತೇವೆ’ ಎಂದಿದ್ದಾರೆ.

ಇದನ್ನೂ ಓದಿ:ಉಚಿತವಾಗಿ ನೋಡಿ ಪ್ರಭಾಸ್, ಅಕ್ಷಯ್, ಮೋಹನ್​​ಲಾಲ್, ವಿಷ್ಣು ಸಿನಿಮಾ: ಎಲ್ಲಿ?

‘ಸಟ್ಲುಜ್’ ಸಿನಿಮಾ ಪಂಜಾಬಿನ ಹೋರಾಟಗಾರ ಜಸ್ವಂತ್ ಸಿಂಗ್ ಕಾಲ್ರಾ ಅವರ ಜೀವನ ಆಧರಿಸಿದ ಸಿನಿಮಾ. 1980 ರಿಂದ 90ರ ವರೆಗೆ ಪಂಜಾಬಿನಲ್ಲಿ ನಡೆದ ಪೊಲೀಸ್ ದೌರ್ಜನ್ಯದ ವಿರುದ್ಧ ಜಸ್ವಂತ್ ಸಿಂಗ್ ಹೋರಾಟ ಮಾಡಿದ್ದರು. ಒಂದು ದಶಕದ ಅವಧಿಯಲ್ಲಿ ನೂರಾರು ಮಂದಿ ಸಿಖ್ಖರನ್ನು ಪೊಲೀಸರು ಕೊಲೆ ಮಾಡಿ ಸಾಮೂಹಿಕವಾಗಿ ಹೂತಿದ್ದಾರೆ ಎಂದು ಜಸ್ವಂತ್ ಸಿಂಗ್ ಹೇಳಿದ್ದರು. ಅದರ ಬಗ್ಗೆ ತನಿಖೆ ಮಾಡಿದ್ದರು. ಅದೇ ಕತೆಯನ್ನು ಆಧರಿಸಿ ಇದೀಗ ಸಿನಿಮಾ ಮಾಡಲಾಗಿದೆ.

ಈ ಸಿನಿಮಾದ ಕತೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಸಿಬಿಎಫ್​​ಸಿ ಬರೋಬ್ಬರಿ 127 ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚಿಸಿತ್ತು. ಸಿನಿಮಾದ ನಾಯಕನ ಹೆಸರು ಬದಲಾಯಿಸುವಂತೆ, ಸಿನಿಮಾನಲ್ಲಿ ಬಳಸಲಾಗಿರುವ ಸ್ಥಳಗಳ ಹೆಸರು ಬದಲಾಯಿಸುವಂತೆ ಸೂಚಿಸಿತ್ತು. ಆದರೆ ಸಿನಿಮಾದ ನಿರ್ದೇಶಕರು ಮತ್ತು ನಿರ್ಮಾಪಕರು ಇದಕ್ಕೆ ಒಪ್ಪಲಿಲ್ಲ. ಬದಲಿಗೆ ಜೀ5ನಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಿದ್ದರು. ಆದರೆ ಅಲ್ಲಿಂದಲೂ ಈಗ ಸಿನಿಮಾವನ್ನು ಹಿಂಪಡೆಯಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

20 ವರ್ಷವಾದ್ರೂ ಕೊಡದ ಗೊಮ್ಮಟೇಶ್ವರನ ಮಹಾಮಸ್ತಕಾಭಿಷೇಕದ ಬಿಲ್: ಸರ್ಕಾರಿ ಕಚೇರಿ ಜಪ್ತಿ – Kannada News | 20 Year Old Gommateshwara Mahamastakabhisheka Dues: Government Office Attached Over Unpaid Bills

ಹಾಸನ, ಜುಲೈ 05: ಅದು 2006ರಲ್ಲಿ ನಡೆದಿದ್ದ 87ನೇ ಮಹಾಮಸ್ತಕಾಭಿಷೇಕ (Mahamastakabhisheka) ಕಾರ್ಯಕ್ರಮ. ದೇಶದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಲಕ್ಷ ಲಕ್ಷ ಭಕ್ತರು ವೈರಾಗ್ಯ ಮೂರ್ತಿಗೆ ಮಹಾ ಮಜ್ಜನ ಮಾಡಿದರು. ವರ್ಣರಂಜಿತ ಬಾಹುಬಲಿಯ ಮಸ್ತಕಾಭಿಷೇಕವನ್ನ ಕಣ್ತುಂಬಿಕೊಂಡಿದ್ದರು. ಇದೀಗ ಮಹಾಮಸ್ತಕಾಭಿಷೇಕ ಮುಗಿದು 9 ವರ್ಷಗಳಾಗುತ್ತಾ ಬಂದಿದ್ದು, ಇನ್ನೊಂದು ವರ್ಷ ಕಳೆದರೆ ಮತ್ತೆ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ತಯಾರಿ ಆರಂಭಿಸಬೇಕು. ಆದರೆ ದುರಂತ ಎಂದರೆ 2006ರಲ್ಲಿ ಮಹಾಮಸ್ತಕಾಭಿಷೇಕಕ್ಕೆ ಬೆಟ್ಟದ ಮೇಲೆ ಅಟ್ಟಣಿಗೆ ನಿರ್ಮಾಣಕ್ಕೆ ಐದು ಕೋಟಿ ರೂ ವೆಚ್ಚದ ಕಾಮಗಾರಿ ಮಾಡಿದ್ದ ಗುತ್ತಿಗೆದಾರನಿಗೆ ಸರ್ಕಾರ ಇನ್ನೂ ಹಣವನ್ನು ಕೊಟ್ಟಿಲ್ಲವಂತೆ. ಬಡ್ಡಿ ಸಹಿತ ಆರು ಕೋಟಿ ರೂ ಹಣ ಪಾವತಿಗೆ ಕೋರ್ಟ್ ಆದೇಶ ಮಾಡಿದ್ದರು ಹಣ ಕೊಡುತ್ತಿಲ್ಲವೆಂದು ಲೋಕೋಪಯೋಗಿ ಇಲಾಖೆ ಅಧಿಕಾರಿ ಕಾರು ಸಹಿತ ಕಚೆರಿಯನ್ನೇ ಜಪ್ತಿ ಮಾಡಿದ್ದಾರೆ.

ಕೋರ್ಟ್ ಆದೇಶಕ್ಕೂ ಕ್ಯಾರೆ ಎನ್ನದ ಪಿಡಬ್ಲ್ಯೂಡಿ ಅಧಿಕಾರಿಗಳು

ಮಹಾಮಸ್ತಕಾಭಿಷೇಕ ಎಂದರೆ ಇಡೀ ದೇಶದ ಮೂಲೆಮೂಲೆಯಿಂದ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ವಿಂದ್ಯಗಿರಿಯಲ್ಲಿ ನೆಲೆನಿಂತಿರುವ ವೈರಾಗ್ಯ ಮೂರ್ತಿಗೆ 12 ವರ್ಷಕ್ಕೊಮ್ಮೆ ಮಹಾಮಜ್ಜನ ನೆರವೇರುತ್ತೆ. ಇದಕ್ಕಾಗಿ ನೂರಾರು ಕೋಟಿ ರೂ ವೆಚ್ಚವು ತಗುಲುತ್ತದೆ. ಬಾಬುಬಲಿ ಮೂರ್ತಿಗೆ ಮಜ್ಜನ ಮಾಡಲು 52 ಅಡಿ ಎತ್ತರದ ಮೂರ್ತಿಗೆ 50 ಅಡಿ ಎತ್ತರದ ಅಟ್ಟಣಿಗೆ ನಿರ್ಮಾಣ ಮಾಡಲಾಗುತ್ತೆ. ಇದಕ್ಕಾಗಿ 87ನೇ ಮಹಾಮಸ್ತಕಾಭಿಷೇಕದಲ್ಲಿ 5 ಕೋಟಿ ರೂ ಟೆಂಡರ್ ಕರೆಯಲಾಗಿತಂತೆ. ಗುತ್ತಿಗೆ ಪಡೆದ ಜಗನ್ನಾಥ ಎಂಬುವವರು ಕಾಮಗಾರಿ ಮುಗಿಸಿ ಮಹಾಮಸ್ತಕಾಭಿಷೇಕದ ಯಶಸ್ಸಿಗೂ ಕಾರಣವಾಗಿದ್ದರು.

ಇದನ್ನೂ ಓದಿ: 28 ಕೋಟಿ ರೂ. ಪರಿಹಾರದ ಕ್ರೆಡಿಟ್ ವಾರ್: ಸಚಿವ ರಾಮಲಿಂಗಾರೆಡ್ಡಿ ಎದುರೇ ಶಾಸಕರಾದ ಶಿವಲಿಂಗೇಗೌಡ – ಹೆಚ್.ಕೆ. ಸುರೇಶ್ ಜಟಾಪಟಿ

87ನೇ ಮಹಾಮಸ್ತಕಾಭಿಷೇಕ ಮುಗಿದು 9 ವರ್ಷವಾಗುತ್ತಾ ಬಂದಿದೆ, ಆದರೆ 87ನೇ ಮಹಾಮಸ್ತಕಾಭಿಷೇಕದ 5 ಕೋಟಿ ರೂಪಾಯಿಗಾಗಿ ಗುತ್ತಿಗೆದಾರನ ಹೋರಾಟ ಮಾತ್ರ ಇನ್ನೂ ನಿಂತಿಲ್ಲ. ಲೋಕೋಪಯೋಗಿ ಇಲಾಖೆ ತಮಗೆ ಹಣ ಪಾವತಿ ಮಾಡ್ತಿಲ್ಲ ಎಂದು ಕೋರ್ಟ್ ಮೆಟ್ಟಿಲೇರಿದ್ದ ಗುತ್ತಿಗೆದಾರ ಹಾಸನದ ಜಿಲ್ಲಾ ಪ್ರದಾನ ನ್ಯಾಯಾಲಯದಿಂದ ಬಡ್ಡಿ ಸಮೇತ 6 ಕೋಟಿ ರೂ ಪಡೆಯಲು ಆದೇಶ ಪಡೆದಿದ್ದಾರೆ, ಆದರೆ ಕೋರ್ಟ್ ಆದೇಶಕ್ಕೂ ಅಧಿಕಾರಿಗಳು ಕ್ಯಾರೆ ಎಂದಿಲ್ಲ. ಹೀಗಾಗಿ ಕಚೇರಿ ಜಪ್ತಿಗೆ ಆದೇಶಿಸಲಾಗಿದ್ದು, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಕಾರು ಹಾಗೂ ಕಚೇರಿಯನ್ನ ಜಪ್ತಿ ಮಾಡಲಾಗಿದ್ದು, ತಮಗೆ ಸೇರಬೇಕಾದ ಹಣವನ್ನ ಕೂಡಲೇ ನೀಡಿ ಎಂದು ಗುತ್ತಿಗೆದಾರರು ಆಗ್ರಹಿಸಿದ್ದಾರೆ.

6 ಕೋಟಿ ರೂ ಬಾಕಿ

ಒಂದು ಮಹಾಮಸ್ತಕಾಭಿಷೇಕ ನಡೆಯಬೇಕು ಎಂದರೆ ವರ್ಷಾನುಗಟ್ಟಲೆ ಕೆಲಸ ಕಾರ್ಯ ಆರಂಭಗೊಳ್ಳುತ್ತವೆ. 2018ರಲ್ಲಿ 88ನೇ ಮಹಾಮಸ್ತಕಾಭಿಷೇಕ ನೆರವೇರಿದ್ದು, 89ನೇ ಮಹಾಮಸ್ತಕಾಭಿಷೇಕ 2030ಕ್ಕೆ ನೆರವೇರಲಿದ್ದು, ಇದಕ್ಕಾಗಿ ತಯಾರಿ ಕಾರ್ಯ ಮುಂದಿನ ವರ್ಷದಿಂದಲೇ ಶುರುವಾಗಬೇಕಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳ ಎಂದರೆ ಎಲ್ಲರಿಗೂ ನೆನಪಾಗುವುದು ಗೊಮ್ಮಟೇಶ್ವರನ ಏಕ ಶಿಲಾ ಮೂರ್ತಿ. ಜೀವನದ ಎಲ್ಲಾ ವೈಭೋಗ ತೊರೆದು ವೈರಾಗ್ಯಮೂರ್ತಿಯಾಗಿ ನೆಲೆ ನಿಂತಿರುವ ಬಾಹುಬಲಿ. ಇಂತಹ ವಿಶ್ವವಿಖ್ಯಾತ ಬಾಹುಬಲಿಯ ಮಹಾಮಸ್ತಕಾಭಿಷೇಕದ ಕಾಮಗಾರಿಯ ಹಣ ನೀಡಿಲ್ಲವಂತೆ. 20 ವರ್ಷಗಳ ಹಿಂದೆ ನಡೆದ ಮಹಾಮಸ್ತಕಾಭಿಷೇಕದ ಕಾಮಗಾರಿ ಬಿಲ್ ಇನ್ನು ಪಾವತಿ ಆಗಿಲ್ಲ ಎನ್ನುವುದು ಎಲ್ಲರಿಗೂ ಅಚ್ಚರಿ ಹುಟ್ಟಿಸಿದೆ. ಗುತ್ತಿಗೆದಾರನ ಪ್ರಕಾರ 5 ಕೋಟಿ ಕಾಮಗಾರಿ ವೆಚ್ಚ ಹಾಗೂ 20 ವರ್ಷ ಹಣ ನೀಡದ ಕಾರಣ ಬಡ್ಡಿ ಸೇರಿಸಿ 6 ಕೋಟಿ ಕೊಡಬೇಕು ಎನ್ನುವುದು ಅವರ ವಾದ.

ಲೋಕೋಪಯೋಗಿ ಇಲಾಖೆಯ ಅಧಿಕಾರಿ ಜಯಣ್ಣ ಹೇಳಿದ್ದಿಷ್ಟು

ಇನ್ನು ಈ ಬಗ್ಗೆ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಜಯಣ್ಣ ಪ್ರತಿಕ್ರಿಯಿಸಿದ್ದು, ಕಾಮಗಾರಿ ಮೊತ್ತ 5 ಕೋಟಿಯನ್ನ ಈಗಾಗಲೇ ಪಾವತಿ ಮಾಡಲಾಗಿದೆ. ಆದರೆ ಅವರು ಕಾಮಗಾರಿಗೆ ಬಿಡ್ಡಿಂಗ್ ಮಾಡುವಾಗ ನೀಡಿದ್ದ ಡೆಪಾಸಿಟ್ ಹಣ 27 ಲಕ್ಷ ರೂ ಮಾತ್ರ ನಾವು ಪಾವತಿ ಮಾಡಬೇಕಿದೆ. ಅವರು ಹೆಚ್ಚುವರಿ ಕಾಮಗಾರಿ ಮಾಡಿಸಲಾಗಿದೆ ಎಂದು ಹೇಳಿ ಬಿಲ್ ಕೇಳುತ್ತಿದ್ದಾರೆ. ಜನರ ಹಣ, 6 ಕೋಟಿ ರೂ ಕೊಡಲು ಸಾಧ್ಯವಿಲ್ಲ. ಅದೂ ಕೂಡ ನಮ್ಮ ಗಮನಕ್ಕೆ ಬರದಂತೆ ಕೋರ್ಟ್​ನಲ್ಲಿ ಕೇಸ್ ಹಾಕಿ ನಮಗೆ ನೋಟಿಸ್ ಕೂಡ ಜಾರಿಯಾಗದಂತೆ ಮಾಡಿ ಏಕಪಕ್ಷೀಯ ತೀರ್ಪು ಪಡೆದುಕೊಂಡಿದ್ದಾರೆ. ಕೋರ್ಟ್ ಆದೇಶದಂತೆ ಕಚೇರಿ ಜಪ್ತಿ ಮಾಡಿದ್ದಾರೆ. ಕಾರ್ ಜಪ್ತಿ ಮಾಡಿದ್ದಾರೆ ಕೋರ್ಟ್ ಆದೇಶ ಪಾಲನೆ ಅವರು ಮಾಡಲಿ, ಆದರೆ ಇಷ್ಟೊಂದು ದೊಡ್ಡ ಮೊತ್ತದ ಹಣ, ಜನರ ಹಣ ಅದನ್ನ ಸುಮ್ಮನೇ ಕೊಡಲು ಆಗಲ್ಲ. ಈ ತೀರ್ಪಿನ ವಿರುದ್ಧ ಹೈಕೋರ್ಟ್​ನಲ್ಲಿ ನಾವು ಮೇಲ್ಮನವಿ ಸಲ್ಲಿಸುತ್ತೇವೆ. ಕಾನೂನು ಹೋರಾಟ ಮಾಡುತ್ತೇವೆ ಎನ್ನುವುದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ವಾದ.

ಇದನ್ನೂ ಓದಿ: ಕೋವಿಡ್ ಸಮಯದಲ್ಲಿ ಬೇಕಿದ್ವಿ, ಈಗ ಬೇಡವಾದ್ವಾ?; ಹಾಸನದಲ್ಲಿ ಗ್ರೂಪ್ ಡಿ ನೌಕರರ ಕಣ್ಣೀರು: 20 ಸ್ವಚ್ಛತಾ ಸಿಬ್ಬಂದಿ ಏಕಾಏಕಿ ವಜಾ

ಒಟ್ಟಿನಲ್ಲಿ 20 ವರ್ಷದ ಹಿಂದೆ ನಾವು 5 ಕೋಟಿ ರೂ ವೆಚ್ಚದ ಕಾಮಗಾರಿ ಮಾಡಿದ್ದೇವೆ. ಬಾಹುಬಲಿಯ ಮಹಾ ಮಜ್ಜನ ಸಕ್ಸಸ್ ಆಗಲು ಹಣ ಖರ್ಚು ಮಾಡಿದ್ಧೇವೆ. ಆದರೆ ಹಣ ಪಾವತಿ ಮಾಡಬೇಕಾದ ಸರ್ಕಾರ ಅನುದಾನ ಕೊಡುತ್ತಿಲ್ಲ ಎನ್ನುವುದು ಗುತ್ತಿಗೆದಾರನ ವಾದವಾದರೆ, ಕೊಡುವುದನ್ನೆಲ್ಲಾ ಕೊಟ್ಟಾಗಿದೆ. ಸುಳ್ಳು ಮಾಹಿತಿ ನೀಡಿ ಕೋರ್ಟ್​ನಿಂದ ಆದೇಶ ಪಡೆದಿದ್ದಾರೆ ಎನ್ನೋದು ಅಧಿಕಾರಿಗಳ ವಾದ. ಇಬ್ಬರ ನಡುವಿನ ಜಟಾಪಟಿ ಈಗ ಹೈಕೋರ್ಟ್ ಮೆಟ್ಟಿಲೇರಲು ಸಜ್ಜಾಗಿರುವುದು ಕುತೂಹಲ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ವಿಶ್ವ ವಿಖ್ಯಾತ ಜೋಗ್ ಫಾಲ್ಸ್ ಗೆ ರಾಜಕಳೆ, ರಾಜ, ರಾಣಿ, ರೋರರ್, ರಾಕೆಟ್ ಭೋರ್ಗರೆತ – Kannada News | Monsoon tourism picks up in Karnataka; Jog falls see rise in footfall

ಶಿವಮೊಗ್ಗ, (ಜುಲೈ 05): ಮಲೆನಾಡು ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ  ( Jog falls) ಮತ್ತೆ ರಾಜಕಳೆ ಬಂದಿದೆ. ಹೌದು….ಜುಲೈ ಆರಂಭದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಜೋಗ ಜಲಪಾತದಲ್ಲಿ ನೀರಿನ ಪ್ರಮಾಣ ಏರಿಕೆಯಾಗುತ್ತಿದೆ. ರಾಜ, ರಾಣಿ, ರೋರರ್, ರಾಕೆಟ್ ಭೋರ್ಗರೆಯುತ್ತಿದ್ದು, ಈ ಅದ್ಭುತ ರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು ಹರಿದುಬರುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಹೇರಾ ಪೇರಿ’ ತಂಟೆಗೆ ಬರಬೇಡಿ, ಎಚ್ಚರಿಕೆ ಕೊಟ್ಟ ಅಕ್ಷಯ್ ಕುಮಾರ್ – Kannada News | Akshay Kumar’s production house claims Hera Pheri 3 movie rights warns legal action

ಹೇರಾ ಪೇರಿ’ (Hera Peri) ಹಿಂದಿ ಚಿತ್ರರಂಗದ ಕಲ್ಟ್ ಕ್ಲಾಸಿಕ್ ಸಿನಿಮಾ ಎನಿಸಿಕೊಂಡಿದೆ. ಆ ಸಿನಿಮಾಕ್ಕೆ ಪ್ರತ್ಯೇಕ ಅಭಿಮಾನಿ ವರ್ಗವೇ ಇದೆ. ಈ ಸಿನಿಮಾದ ಎರಡು ಭಾಗ ಈಗಾಗಲೇ ಬಿಡುಗಡೆ ಆಗಿದ್ದು, ಎರಡೂ ಸಿನಿಮಾಗಳು ದೊಡ್ಡ ಹಿಟ್ ಆಗಿವೆ. ಇದೀಗ ಈ ಸಿನಿಮಾದ ಮೂರನೇ ಭಾಗದ ನಿರ್ಮಾಣಕ್ಕೆ ಪ್ರಯತ್ನಗಳು ನಡೆಯುತ್ತಿವೆ. ಆದರೆ ಪ್ರತಿ ಭಾರಿ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಲೇ ಇದೆ. ಮೊದಲಿಗೆ ಸಿನಿಮಾದ ಮುಖ್ಯ ಪಾತ್ರಧಾರಿ ಪರೇಶ್ ರಾವಲ್ ಸಿನಿಮಾದಿಂದ ಹೊರನಡೆದರು. ಸಿನಿಮಾದ ನಿರ್ದೇಶಕ ಪ್ರಿಯದರ್ಶನ್ ಸಹ ಸಿನಿಮಾದಿಂದ ಬೇಸರಗೊಂಡು ಹೊರನಡೆದರು. ಈಗ ಸಿನಿಮಾದ ಹಕ್ಕಿನ ವಿಷಯದಲ್ಲಿ ನಿರ್ಮಾಣ ಸಂಸ್ಥೆಗಳ ನಡುವೆ ಕಿತ್ತಾಟ ಆರಂಭವಾಗಿದೆ.

‘ಹೇರಾ ಪೇರಿ’ ಸಿನಿಮಾ ಸರಣಿಗಳ ಮೂವರು ನಾಯಕರುಗಳಲ್ಲಿ ಒಬ್ಬರಾಗಿರುವ ಅಕ್ಷಯ್ ಕುಮಾರ್, ಅವರ ನಿರ್ಮಾಣ ಸಂಸ್ಥೆಯಾದ ಕೇಪ್ ಆಫ್ ಗುಡ್ ಫಿಲ್ಮ್ಸ್ ‘ಹೇರಾ ಫೇರಿ 3’ ಚಿತ್ರದ ಹಕ್ಕುಗಳು ತಮ್ಮ ಬಳಿ ಇರುವುದಾಗಿ ಘೋಷಿಸಿದೆ. ಈ ಕುರಿತು ಕಂಪನಿಯು ಸಾರ್ವಜನಿಕ ಪ್ರಕಟಣೆಯನ್ನು ಹೊರಡಿಸಿದ್ದು, ಚಿತ್ರಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಅನಧಿಕೃತ ಹಕ್ಕುಗಳನ್ನು ಪಡೆಯದಂತೆ ಅಥವಾ ಅದರ ಹೆಸರಿನಲ್ಲಿ ಯಾವುದೇ ವಹಿವಾಟು ನಡೆಸದಂತೆ ಎಚ್ಚರಿಕೆ ನೀಡಿದೆ.

ಕಂಪನಿಯು ನೀಡಿರುವ ಸಾರ್ವಜನಿಕ ನೋಟಿಸ್‌ನಲ್ಲಿ, ‘ಹೇರಾ ಫೇರಿ 3’ ಚಿತ್ರದ ನಿರ್ಮಾಣ ಮತ್ತು ವಿತರಣೆಗೆ ಸಂಬಂಧಿಸಿದ ಸಂಪೂರ್ಣ ಮತ್ತು ವಿಶೇಷ ಹಕ್ಕುಗಳನ್ನು ತಮ್ಮ ಸಂಸ್ಥೆಯು ಹೊಂದಿದೆ ಎಂದು ಸ್ಪಷ್ಟಪಡಿಸಿದೆ. ಮೂರನೇ ವ್ಯಕ್ತಿಗಳು ಅಥವಾ ಸಂಸ್ಥೆಗಳು ಈ ಚಿತ್ರದ ಹಕ್ಕುಗಳನ್ನು ಹೊಂದಿದ್ದೇವೆ ಎಂದು ಸುಳ್ಳು ಹಕ್ಕು ಸಾಧಿಸುವುದರ ವಿರುದ್ಧ ಸಂಸ್ಥೆಯು ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ. ಯಾವುದೇ ವಿತರಕರು, ಪ್ರದರ್ಶಕರು ಅಥವಾ ಸಂಬಂಧಿತ ವ್ಯಕ್ತಿಗಳು ಈ ವಿಷಯಕ್ಕೆ ಸಂಬಂಧಿಸಿದಂತೆ ‘ಕೇಪ್ ಆಫ್ ಗುಡ್ ಫಿಲ್ಮ್ಸ್’ನಿಂದ ಪೂರ್ವಾನುಮತಿ ಪಡೆಯದೆ ಯಾವುದೇ ಒಪ್ಪಂದ ಮಾಡಿಕೊಳ್ಳಬಾರದು ಎಂದು ಸೂಚಿಸಲಾಗಿದೆ. ಸಂಸ್ಥೆಯು ಇಂತಹ ಅನಧಿಕೃತ ಚಟುವಟಿಕೆಗಳ ಬಗ್ಗೆ ಜಾಗರೂಕರಾಗಿರಲು ಮತ್ತು ಹಕ್ಕುಸ್ವಾಮ್ಯ ಉಲ್ಲಂಘನೆಯ ಯಾವುದೇ ಪ್ರಯತ್ನಗಳನ್ನು ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿದೆ.

ಇದನ್ನೂ ಓದಿ:ಮಹಿಳಾ ಪ್ರಧಾನ ಕಥಾಹಂದರ ಇರುವ ‘ವಿದಿ’ ಸಿನಿಮಾಗೆ ಜಯಮಾಲಾ ಬೆಂಬಲ

‘ಹೇರಾ ಫೇರಿ’ ಸರಣಿಯು ಬಾಲಿವುಡ್‌ನ ಅತ್ಯಂತ ಜನಪ್ರಿಯ ಕಾಮಿಡಿ ಚಿತ್ರಗಳಲ್ಲಿ ಒಂದಾಗಿದೆ. ಅಕ್ಷಯ್ ಕುಮಾರ್, ಸುನಿಲ್ ಶೆಟ್ಟಿ ಮತ್ತು ಪರೇಶ್ ರಾವಲ್ ಅವರ ಐಕಾನಿಕ್ ಪಾತ್ರಗಳಿಗಾಗಿ ಈ ಸರಣಿ ಅಪಾರ ಅಭಿಮಾನಿಗಳನ್ನು ಹೊಂದಿದೆ. ಇತ್ತೀಚೆಗಷ್ಟೆ ಬೇರೊಂದು ನಿರ್ಮಾಣ ಸಂಸ್ಥೆಯು ‘ಹೇರಾ ಪೇರಿ 3’ ಸಿನಿಮಾ ನಿರ್ಮಾಣ ಮಾಡುವುದಾಗಿ ಪ್ರಕಟಣೆ ಹೊರಡಿಸಿತ್ತು. ಅದರ ಬೆನ್ನಲ್ಲೆ ಇದೀಗ ಅಕ್ಷಯ್ ಕುಮಾರ್ ಅವರ ನಿರ್ಮಾಣ ಸಂಸ್ಥೆಯು ಈ ಪ್ರಕಟಣೆಯನ್ನು ಹೊರಡಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಸುಕಾದ ಚಿನ್ನದ ಆಭರಣಗಳ ಹೊಳಪನ್ನು ಹೆಚ್ಚಿಸಲು ಈ ಸಲಹೆಯನ್ನು ಪಾಲಿಸಿ – Kannada News | Clean gold jewelry easily at home like this

ಚಿನ್ನದ ಆಭರಣಗಳು (gold jewelry) ಕಾಲಾನಂತರದಲ್ಲಿ ಮಸುಕಾಗಲು ಪ್ರಾರಂಭಿಸುತ್ತದೆ. ಅದರಲ್ಲೂ ದೈನಂದಿನ ಬಳಕೆಯ ಚಿನ್ನದ ಉಂಗುರ, ಸರ, ಕಿವಿಯೋಲೆಗಳು ಹೊಳಪನ್ನು ಕಳೆದುಕೊಂಡು ಬಹುಬೇಗನೆ ಕಪ್ಪಾಗಿ ಕಾಣಿಸುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಹೆಚ್ಚಿನವರು ಆಭರಣದ ಅಂಗಡಿಯಲ್ಲೇ ಚಿನ್ನವನ್ನು ಸ್ವಚ್ಛಗೊಳಿಸುತ್ತಾರೆ. ಇದರ ಬದಲು ಮನೆಯಲ್ಲಿಯೇ ಸುಲಭವಾಗಿ ಚಿನ್ನದ ಆಭರಣಗಳನ್ನು ಸ್ವಚ್ಛಗೊಳಿಸಬಹುದು, ಹೌದು ಮನೆಯಲ್ಲೇ ಲಭ್ಯವಿರುವ ಈ ಕೆಲವೊಂದು ವಸ್ತುಗಳ ಸಹಾಯದಿಂದ ಮಸುಕಾದ ಚಿನ್ನವನ್ನು ಹೊಸದರಂತೆ ಕಾಣುವಂತೆ ಮಾಡಬಹುದು.

ಮಸುಕಾದ ಚಿನ್ನದ ಆಭರಣಗಳನ್ನು ಈ ರೀತಿ ಮನೆಯಲ್ಲಿಯೇ ಕ್ಲೀನ್‌ ಮಾಡಿ:

ಅಡಿಗೆ ಸೋಡಾ ಬಳಸಿ:  ಚಿನ್ನದ ಆಭರಣಗಳು ಹೆಚ್ಚು ಮಸುಕಾಗಿದ್ದರೆ ಅಡುಗೆ ಸೋಡಾವನ್ನು ಬಳಸಿ ಅದನ್ನು ಸ್ವಚ್ಛಗೊಳಿಸಬಹುದು. ಇದಕ್ಕಾಗಿ ಎರಡು ಟೀ ಚಮಚ ಅಡಿಗೆ ಸೋಡಾವನ್ನು ಸ್ವಲ್ಪ ಬೆಚ್ಚಗಿನ ನೀರಿನೊಂದಿಗೆ ಬೆರೆಸಿ. ಪೇಸ್ಟ್‌ ತಯಾರಿಸಿಕೊಳ್ಳಿ. ಹಲ್ಲುಜ್ಜುವ ಬ್ರಷ್‌ ಸಹಾಯದಿಂದ ಆಭರಣಗಳಿಗೆ ಹಚ್ಚಿ 4 ರಿಂದ 5 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ, ನೀರಿನಿಂದ ತೊಳೆಯಿರಿ ಮತ್ತು ಮೃದುವಾದ ಬಟ್ಟೆಯ ಸಹಾಯದಿಂದ  ಅದನ್ನು ಒಣಗಿಸಿ. ಅಡಿಗೆ ಸೋಡಾದ ಸೌಮ್ಯವಾದ ಶುಚಿಗೊಳಿಸುವ ಗುಣಲಕ್ಷಣಗಳು ಮೊಂಡುತನದ ಕೊಳೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಆದರೆ ಆಭರಣಗಳನ್ನು ತುಂಬಾ ಬಲವಾಗಿ ಉಜ್ಜುವುದನ್ನು ತಪ್ಪಿಸುವುದು ಮುಖ್ಯ.

ಟೂತ್‌ಪೇಸ್ಟ್‌ನಿಂದ ಸ್ವಚ್ಛಗೊಳಿಸುವುದು: ಟೂತ್‌ಪೇಸ್ಟ್‌ನಿಂದಲೂ ಚಿನ್ನದ ಆಭರಣಗಳನ್ನು ಸ್ವಚ್ಛಗೊಳಿಸಬಹುದು. ಇದಕ್ಕಾಗಿ ನೀವು ಯಾವುದೇ ಬಿಳಿ ಟೂತ್‌ಪೇಸ್ಟ್ ತೆಗೆದುಕೊಳ್ಳಿ. ಅದನ್ನು ಮೃದುವಾದ ಹಲ್ಲುಜ್ಜುವ ಬ್ರಷ್‌ಗೆ ಹಚ್ಚಿ ಆಭರಣದ ಮೇಲೆ ನಿಧಾನವಾಗಿ ಉಜ್ಜಿ. ಐದು ನಿಮಿಷಗಳ ನಂತರ, ಉಗುರು ಬೆಚ್ಚಗಿನ ನೀರಿನಿಂದ ತೊಳೆದು ಒಣಗಿಸಿ. ಇದು ಆಭರಣದ ಕಳೆದುಹೋದ ಹೊಳಪನ್ನು ಪುನಃಸ್ಥಾಪಿಸುತ್ತದೆ.

ಮುಲ್ತಾನಿ ಮಿಟ್ಟಿ ಮತ್ತು ರೋಸ್ ವಾಟರ್: ಒಂದು ಚಮಚ ಮುಲ್ತಾನಿ ಮಿಟ್ಟಿಯನ್ನು ಸ್ವಲ್ಪ ರೋಸ್ ವಾಟರ್‌ನೊಂದಿಗೆ ಬೆರೆಸಿ. ಈ ಪೇಸ್ಟ್ ಅನ್ನು ಆಭರಣಗಳ ಮೇಲೆ ಹಚ್ಚಿ, ಸ್ವಲ್ಪ ಸಮಯ ಒಣಗಲು ಬಿಡಿ ಮತ್ತು ನಂತರ ನೀರಿನಿಂದ ತೊಳೆಯಿರಿ. ಇದು ಚಿನ್ನದ ಆಭರಣಗಳ ಹೊಳಪನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ನಿಮ್ಮ ತಪ್ಪುಗಳೇ ಫ್ರಿಡ್ಜ್‌ನಿಂದ ಕೆಟ್ಟ ವಾಸನೆ ಬರಲು ಕಾರಣ

ಚಿನ್ನದ ಆಭರಣಗಳನ್ನು ಸ್ವಚ್ಛಗೊಳಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ:

ಚಿನ್ನದ ಆಭರಣಗಳನ್ನು ಸ್ವಚ್ಛಗೊಳಿಸುವಾಗ ಬಲವಾದ ರಾಸಾಯನಿಕಗಳು ಅಥವಾ ಕಠಿಣ ಕ್ಲೀನರ್‌ಗಳನ್ನು ಬಳಸಬಾರದು ಎಂಬುದನ್ನು ನೆನಪಿನಲ್ಲಿಡಿ.

ಬ್ಲೀಚ್ ಮತ್ತು ಕಠಿಣ ರಾಸಾಯನಿಕಗಳು: ಇವುಗಳಿಂದ ಚಿನ್ನವನ್ನು ಸ್ವಚ್ಛಗೊಳಿಸಬಾರದು. ಏಕೆಂದರೆ ಅವು ಆಭರಣಗಳ ಹೊಳಪನ್ನು ಕಸಿದುಕೊಳ್ಳಬಹುದು ಮತ್ತು ದೀರ್ಘಾವಧಿಯಲ್ಲಿ ಚಿನ್ನದ ಗುಣಮಟ್ಟದ ಮೇಲೂ ಪರಿಣಾಮ ಬೀರಬಹುದು.

ಉಪ್ಪು: ಚಿನ್ನದ ಆಭರಣಗಳನ್ನು ಕ್ಲೀನ್‌ ಮಾಡಲು ಉಪ್ಪನ್ನು ಸಹ ಬಳಸಬಾರದು. ಇದು ಆಭರಣದ ಮೇಲ್ಮೈಯನ್ನು ಒರಟಾಗಿ ಮಾಡುತ್ತದೆ ಮತ್ತು ಹೊಳಪನ್ನು ಕಡಿಮೆ ಮಾಡುತ್ತದೆ.

ವಿನೆಗರ್ ಅಥವಾ ನಿಂಬೆಹಣ್ಣಿನಂತಹ ಆಮ್ಲೀಯ ವಸ್ತುಗಳು: ವಿನೆಗರ್ ಮತ್ತು ನಿಂಬೆ ರಸವನ್ನು ಬಳಸುವುದರಿಂದ ಆಭರಣದ ಹೊರ ಪದರಕ್ಕೆ ಹಾನಿಯಾಗಬಹುದು ಮತ್ತು ಇವು ಚಿನ್ನದ ಹೊಳಪನ್ನು ಮಂದಗೊಳಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RSS ತರಾಟೆ ಬೆನ್ನಲ್ಲೇ ಎಚ್ಚೆತ್ತ ಬಿಜೆಪಿ: ಸುಧಾಕರ್-SR ವಿಶ್ವನಾಥ್ ಸಂಧಾನ ಸಕ್ಸಸ್ – Kannada News | Finally negotiation Meeting success between BJP Leaders Dr Sudhakar And SR Vishwanath. here Is Inside details

ಬೆಂಗಳೂರು, (ಜುಲೈ 05): ಕರ್ನಾಟಕ ಬಿಜೆಪಿಯಲ್ಲಿನ (Karnataka BJP) ಒಳಜಗಳಗಳಿಗೆ ಬ್ರೇಕ್ ಹಾಕುವ ಕಾರ್ಯ ಶುರುವಾಗಿದೆ. ಹೌದು….ಮೊನ್ನೆ ನಡೆದ ಆರ್ ಎಸ್ ಎಸ್ ಮತ್ತು ಬಿಜೆಪಿ ಸಮನ್ವಯ ಸಮಿತಿ ಸಭೆಯಲ್ಲಿ ಪಕ್ಷದೊಳಗೆ ಮೊದಲು ಸಮನ್ವಯ ಮೂಡಿಸಿಕೊಳ್ಳುವಂತೆ ಸಲಹೆ ನೀಡಲಾಗಿತ್ತು. ಆಗಾಗ ಸಭೆ ಸೇರುವುದೇ ಸಮನ್ವಯತೆ ಮೂಡಲು ಏಕೈಕ ಪರಿಹಾರ ಎಂಬುದನ್ನೂ ರಾಜ್ಯ ಬಿಜೆಪಿ ನಾಯಕರಿಗೆ ಕಿವಿಮಾತು ಹೇಳಲಾಗಿತ್ತು. ಇದರ ಬೆನ್ನಲ್ಲೇ ಇಂದು (ಜುಲೈ 05) ಚಿಕ್ಕಬಳ್ಳಾಪುರ ಸಂಸದ ಡಾ ಕೆ ಸುಧಾಕರ್ ಹಾಗೂ ಯಲಹಂಕ ಶಾಸಕ ಎಸ್​​ಆರ್ ವಿಶ್ವನಾಥ್ ನಡುವೆ ಸಂಧಾನ ಮಾಡಿಸಿದ್ದು, ಈ ಸಂಧಾನ ಯಶಸ್ವಿಯಾಗಿದೆ.

ಮೂವರು ನಾಯಕರ ಸಂಧಾನ

ಇಂದು (ಜುಲೈ 05) ಬಿಜೆಪಿ ಕೋರ್ ಕಮಿಟಿ ಸಭೆ ಆರಂಭಕ್ಕೂ ಮುನ್ನ ಪಕ್ಷದ ಕಚೇರಿಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ರಾಜ್ಯ ಬಿಜೆಪಿ ಸಹ ಉಸ್ತುವಾರಿ ಸುಧಾಕರ ರೆಡ್ಡಿ ಸಮ್ಮುಖದಲ್ಲಿ ಸಂಧಾನ ಸಭೆ ನಡೆದಿದ್ದು, ಸಂಘ ಪರಿವಾರ ಆಕ್ರೋಶ ವ್ಯಕ್ತಪಡಿಸಿರುವ ಬಗ್ಗೆ ಸಭೆಯಲ್ಲಿ ಉಲ್ಲೇಖಿಸಿ ಇನ್ಮುಂದೆ ಬಹಿರಂಗ ಹೇಳಿಕೆ ನೀಡದಂತೆ ಸುಧಾಕರ್, ವಿಶ್ವನಾಥ್ ಹಾಗೂ ಸದಾನಂದಗೌಡ ಅವರಿಗೆ ತಾಕೀತು ಮಾಡಲಾಗಿದೆ. ಅಲ್ಲದೇ ಏನೇ ಸಮಸ್ಯೆಯಿದ್ರೂ ಪಕ್ಷದ ಕಚೇರಿಗೆ ಬಂದು ಚರ್ಚೆ ನಡೆಸಬೇಕು. ನಿಮ್ಮ ವೈಯಕ್ತಿಕ ಸಮಸ್ಯೆಗಳನ್ನು ಕೂಡ ಬಹಿರಂಗವಾಗಿ ಚರ್ಚಿಸಬೇಡಿ. ಇದು ನಿಮ್ಮ ಸಮಸ್ಯೆ ಅಷ್ಟೇ ಅಲ್ಲೇ, ಪಕ್ಷಕ್ಕೂ ಸಮಸ್ಯೆ ತಂದೊಡ್ಡಲಿದೆ. ದೊಡ್ಡ ಸಮಸ್ಯೆ ಆದ್ರೆ ನಾಯಕರ ಗಮನಕ್ಕೆ ತಂದು ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಲಾಗಿದೆ.

ಇದನ್ನೂ ಓದಿ: ಬಿಜೆಪಿಯಲ್ಲಿ ಮತ್ತೆ ಶುರುವಾಯ್ತು ನಾಯಕರ ವಾರ್:ಸುಧಾಕರ್​​ಗೆ ವಿಶ್ವನಾಥ್ ಬಹಿರಂಗ ಸವಾಲ್

ಸಂಧಾನ ಸಭೆ ಸಕ್ಸಸ್

ಬಹಿರಂಗವಾಗಿ ಏಕವಚನದಲ್ಲಿ ಪರಸ್ಪರ ಬೈದಾಡಿಕೊಂಡು ಸವಾಲು ಹಾಕಿದ್ದ ಡಾ.ಕೆ.ಸುಧಾಕರ್ ಮತ್ತು S.R.ವಿಶ್ವನಾಥ್ ನಡುವೆ ನಡೆದ ಸಂಧಾನ ಸಭೆ ಸಕ್ಸಸ್ ಆಗಿದೆ. ಹಿರಿಯರ ಸಮ್ಮುಖದಲ್ಲಿ ಸಂಧಾನ ಆಗಿದ್ದು, ಜಟಾಪಟಿಯನ್ನ ಹೈಕಮಾಂಡ್​ ಗಂಭೀರವಾಗಿ ಪರಿಗಣಿಸಿದೆ. ಪರಸ್ಪರ ಕಿತ್ತಾಡಿಕೊಳ್ಳೋದು ಇಬ್ಬರಿಗೂ ಶೋಭೆ ತರಲ್ಲ. ಪರಸ್ಪರ ಹೇಳಿಕೆಗಳನ್ನ ಕೊಡದಂತೆ ಇಬ್ಬರಿಗೂ ಸೂಚನೆ ನೀಡಲಾಗಿದೆ. ಹಿರಿಯರ ಮಾತಿಗೆ ಮನ್ನಣೆ ನೀಡಿದ ಇಬ್ಬರು ಸುಧಾಕರ್ ಹಾಗೂ ವಿಶ್ವನಾಥ್ ಪರಸ್ಪರ ಶೇಕ್ ಹ್ಯಾಂಡ್ ಮಾಡಿಕೊಂಡರು.

ಒಟ್ಟಿನಲ್ಲಿ ಆರ್​​ಎಸ್​​ಎಸ್​​ ನಾಯಕರು ಕೆಲವೊಂದಿಷ್ಟು ಬುದ್ಧಿ ಹೇಳಿದ್ದರಿಂದ ಎಚ್ಚೆತ್ತುಕೊಂಡಿರುವ ಬಿಜೆಪಿ ನಾಯಕರು,ಕೆಲ ಸಲಹೆ ಸೂಚನೆಗಳೊಂದಿಗೆ ಪಕ್ಷದೊಳಗಿನ ಒಳಜಗಳಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದಾರೆ. ಆದ್ರೆ, ನಾಯಕರು ಜಗಳ ಮಾಡಿಕೊಳ್ಳದೇ ಇಲ್ಲಿಗೆ ಕೈ ಬಿಡುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸಿಪಿ ಯೋಗೇಶ್ವರ್ ಪುತ್ರನ ಸಿನಿಮಾಕ್ಕೆ ಕ್ಲ್ಯಾಪ್ ಮಾಡಿದ ಸಿಎಂ ಡಿಕೆಶಿ – Kannada News | CM DK Shivakumar best wishes to CP Yogeshwar son’s new movie

ಶಾಸಕ ಸಿಪಿ ಯೋಗೇಶ್ವರ್ (CP Yogeshwar) ಪುತ್ರ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ‘ಸೈನಿಕ’, ‘ಉತ್ತರ ಧ್ರುವ ದಕ್ಷಿಣ ಧ್ರುವ’ ಇನ್ನೂ ಕೆಲ ಸಿನಿಮಾಗಳಲ್ಲಿ ನಟಿಸಿ ಹಿಟ್ ನೀಡಿದ್ದ ಯೋಗೇಶ್ವರ್ ರಾಜಕಾರಣಿಯಾಗಿ ಯಶಸ್ಸು ಕಂಡರು. ಇದೀಗ ಅವರ ಪುತ್ರ ಧ್ಯಾನ್ ಯೋಗೇಶ್ವರ್ ಅವರು ‘ಸೈನಿಕ 2’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಅವರ ನಟನೆಯ ಎರಡು ಸಿನಿಮಾಗಳು ಒಟ್ಟಿಗೆ ಸೆಟ್ಟೇರಿದ್ದು, ಸಿನಿಮಾದ ಮುಹೂರ್ತಕ್ಕೆ ಖುದ್ದು ಸಿಎಂ ಡಿಕೆ ಶಿವಕುಮಾರ್ ಹಾಜರಾಗಿ, ಸಿನಿಮಾಕ್ಕೆ ಕ್ಲ್ಯಾಪ್ ಮಾಡಿ, ಯುವ ನಟನಿಗೆ ಹಾಗೂ ಇಡೀ ಚಿತ್ರತಂಡಕ್ಕೆ ಶುಭ ಹಾರೈಕೆಗಳನ್ನು ಸಹ ನೀಡಿದ್ದಾರೆ. ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನಿಮ್ಮ ಕೃಷಿ ಜಮೀನಿಗೆ ಸಬ್ಸಿಡಿ ಪಂಪ್​ ಸೆಟ್​ ಪಡೆಯುವುದು ಹೇಗೆ? ಅರ್ಜಿ ಸಲ್ಲಿಸುವುದು ಹೇಗೆ? – Kannada News | Karnataka: How to Get a Subsidized Pump Set for Agricultural Land: Eligibility, Documents and Application Process

ಬೆಂಗಳೂರು, ಜುಲೈ 05: ರೈತರು ತಮ್ಮ ಕೃಷಿ ಜಮೀನಿಗೆ ಸಬ್ಸಿಡಿ ದರದಲ್ಲಿ ಪಂಪ್‌ಸೆಟ್‌ಗಳನ್ನು (Pump Set) (ಸೌರಶಕ್ತಿ ಅಥವಾ ವಿದ್ಯುತ್ ಚಾಲಿತ) ಪಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವಾರು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿವೆ. ಅದರಲ್ಲಿ ಪ್ರಮುಖವಾಗಿ ಕೇಂದ್ರ ಸರ್ಕಾರದ ‘ಪಿಎಂ-ಕುಸುಮ್’ ಮತ್ತು ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ‘ಗಂಗಾ ಕಲ್ಯಾಣ’ ಯೋಜನೆ ಅಡಿಯಲ್ಲಿ ಸಬ್ಸಿಡಿ ಪಂಪ್‌ಸೆಟ್‌ಗಳನ್ನು ನೀಡಲಾಗುತ್ತಿದೆ. ರೈತರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಸೌರಶಕ್ತಿ ಚಾಲಿತ ಅಥವಾ ವಿದ್ಯುತ್ ಪಂಪ್‌ಸೆಟ್‌ಗಳನ್ನು ಒದಗಿಸುವ ಮೂಲಕ ಕೃಷಿಗೆ ನಿರಂತರ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ.

ಪಿಎಂ-ಕುಸುಮ್ ಯೋಜನೆಯಡಿ ಸೋಲಾರ್ ಪಂಪ್‌ಸೆಟ್‌ ಅಳವಡಿಕೆಗೆ ಶೇಕಡಾ 60 ರವರೆಗೆ ಸಬ್ಸಿಡಿ ಇದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಗಂಗಾ ಕಲ್ಯಾಣ ಯೋಜನೆಯಡಿ ಶೇಕಡಾ 80  ಸಬ್ಸಿಡಿಯೊಂದಿಗೆ ಉಚಿತವಾಗಿ ಪಂಪ್‌ಸೆಟ್‌ಗಳನ್ನು ನೀಡಲಾಗುತ್ತದೆ.

ಅರ್ಹತಾ ಮಾನದಂಡಗಳು

  • ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿದ್ದು, ವೃತ್ತಿಯಲ್ಲಿ ರೈತರಾಗಿಬೇಕು.
  • ರೈತರು ತಮ್ಮದೆ ಹೆಸರಿನಲ್ಲಿ ಸ್ವಂತ ಕೃಷಿ ಜಮೀನು ಹೊಂದಿರಬೇಕು.
  • ಕೃಷಿ ಜಮೀನಿನಲ್ಲಿ ನೀರಿನ ಮೂಲ ಅಂದರೆ ಬಾವಿ, ಕೊಳವೆಬಾವಿ ಹೊಂದಿರಬೇಕು.
  • ಸಣ್ಣ ಮತ್ತು ಅತಿ ಸಣ್ಣ ಹಾಗೂ ಎಸ್​​ಸಿ, ಎಸ್​​ಟಿ ರೈತರಿಗೆ ಹೆಚ್ಚಿನ ಆದ್ಯತೆ ಹಾಗೂ ಸಬ್ಸಿಡಿ ಸಿಗುತ್ತದೆ.

ಅರ್ಜಿ ಸಲ್ಲಿಸಲು ಯಾವೆಲ್ಲಾ ದಾಖಲೆಗಳು ಬೇಕು?

  • ಆಧಾರ್​ ಕಾರ್ಡ್​​
  • ಜಮೀನಿನ ನಕ್ಷೆ, ಆರ್​ಟಿಸಿ, ಪಹಣಿ
  • ಬ್ಯಾಂಕ್​ ಪಾಸ್​ಬುಕ್​​
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಬಾವಿ ಅಥವಾ ಕೊಳವೆಬಾವಿ ಇರುವ ಬಗ್ಗೆ ದೃಢೀಕರಣ ಪತ್ರ
  • ಮತ್ತು ಪಾಸ್​ಪೋರ್ಟ್​ ಸೈಜ್​​ ಫೋಟೋ

ಪಿಎಂ-ಕುಸುಮ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

  • ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಅಥವಾ ನಿಮ್ಮ ಭಾಗದಲ್ಲಿರುವ ವಿದ್ಯುತ್​​ ಸರಬರಾಜು ಕಂಪನಿಯ ಅಧಿಕೃತ ವೆಬ್​ಸೈಟ್​​ಗೆ ಭೇಟಿ ನೀಡಿ.
  • ಬಳಿಕ ಪಿಎಂ-ಕುಸುಮ್ ಯೋಜನೆ ಲಿಂಕ್​ ಮೇಲೆ ಕ್ಲಿಕ್​ ಮಾಡಿ, ಫ್ರೂಟ್ಸ್ ಐಡಿ ಮತ್ತು ಆಧಾರ್ ಕಾರ್ಡ್​​ ಬಳಸಿ ಲಾಗಿನ್​​ ಆಗಬೇಕು.
  • ನಂತರ ನಿಮ್ಮ ಜಮೀನಿನ ವಿವರ ಹಾಗೂ ಎಷ್ಟು ಹೆಚ್​​ಪಿ ಸಾಮರ್ಥ್ಯದ ಪಂಪ್‌ಸೆಟ್​​ ಬೇಕು ಎಂಬುವುದನ್ನು ಆಯ್ಕೆ ಮಾಡಿ ಅರ್ಜಿ ಸಲ್ಲಿಸಿ.
  • ಕೊನೆಯ ಹಂತದಲ್ಲಿ ಅರ್ಜಿ ಅಂಗೀಕಾರವಾದ ಬಳಿಕ ರೈತರು ತಮ್ಮ ಪಾಲಿನ ಬಾಕಿ ಹಣವನ್ನು ಪಾವತಿಸಬೇಕು.

ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲಿಗೆ ನಿಮ್ಮ ಭಾಗದಲ್ಲಿ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ.
  • ಸಬ್ಸಿಡಿಯಲ್ಲಿ ಡೀಸೆಲ್​​, ವಿದ್ಯುತ್​​​ ಪಂಪಸೆಟ್​ ವಿತರಣೆಯ ಯೋಜನೆ ಚಾಲ್ತಿಯಲ್ಲಿದ್ದರೆ ಅರ್ಜಿ ಪಡೆದು ಭರ್ತಿ ಮಾಡಿ, ದಾಖಲೆಗಳೊಂದಿಗೆ ಸಲ್ಲಿಸಿ.
  • ಇನ್ನು ಆನ್​​ಲೈನ್​​ನಲ್ಲಿ ಅರ್ಜಿ ಸಲ್ಲಿಸಲು ಬಯಸುವವರು ಸೇವಾ ಸಿಂಧು ಪೋರ್ಟಲ್​​ ಮೂಲಕ ಫಾರ್ಮ್​ ಭರ್ತಿ ಮಾಡಿ ದಾಖಲೆಗಳನ್ನು ಅಪ್​ಲೋಡ್​ ಮಾಡಬೇಕು.

ಅರ್ಜಿ ಸಲ್ಲಿಸಿದ ಆನಂತರದ ಪ್ರಕ್ರಿಯೆ ಏನು? 

ನೀವು ಅರ್ಜಿ ಸಲ್ಲಿಸಿದ ನಂತರ ಕೃಷಿ ಇಲಾಖೆ ಅಥವಾ ವಿದ್ಯುತ್​ ಕಂಪನಿಯ ಅಧಿಕಾರಿಗಳು ನಿಮ್ಮ ಜಮೀನಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡುತ್ತಾರೆ. ಒಂದು ವೇಳೆ ನಿಮ್ಮ ಅರ್ಜಿ ಅರ್ಹವಾಗಿದ್ದರೆ ಸಬ್ಸಿಡಿ ಮಂಜೂರು ಮಾಡಲಾಗುತ್ತದೆ. ಆ ಬಳಿಕ ಸರ್ಕಾರದ ಅಂಗೀಕೃತ ಕಂಪನಿಗಳು ನಿಮ್ಮ ಜಮೀನಿನಲ್ಲಿ ಪಂಪ್​​ಸೆಟ್​​  ಅಳವಡಿಸುತ್ತಾರೆ.

ಇದನ್ನೂ ಓದಿ: ಕಾವೇರಿ 2.0 ಮೂಲಕ ಕಾಗದ ರಹಿತ ಆಸ್ತಿ ನೋಂದಣಿ ಹೇಗೆ? ಇಲ್ಲಿದೆ ಸರಳ ವಿಧಾನಗಳು

ಸಬ್ಸಿಡಿ ದರದಲ್ಲಿ ಪಂಪ್‌ಸೆಟ್​ ಅಳವಡಿಕೊಳ್ಳಲು ಇಚ್ಛಿಸುವ ರೈತರು ಪ್ರಮುಖವಾಗಿ ಗಮನಿಸಬೇಕಾ ಅಂಶ ಅಂದರೆ ಪ್ರತಿ ವರ್ಷದ ಆಯಾ ತ್ರೈಮಾಸಿಕ ಅಥವಾ ಆರ್ಥಿಕ ವರ್ಷದ ಆರಂಭದಲ್ಲಿ ಸರ್ಕಾರ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ. ಹಾಗಾಗಿ ಇದನ್ನ ನೆನಪಿನಲ್ಲಿಡಬೇಕು. ಇನ್ನು ಪ್ರಸ್ತುತ ಅರ್ಜಿ ಸಲ್ಲಿಸುವ ಅವಧಿ ಮುಗಿದಿದೆಯಾ ಎಂದು ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರ ಅಥವಾ ರೈತ ಸಂಪರ್ಕ ಕೇಂದ್ರದಲ್ಲಿ ಪರಿಶೀಲನೆ ಮಾಡಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 8:34 pm, Sun, 5 July 26

Source link

ಬಾಲ್ಯದಲ್ಲಿ ಎನ್​ಸೈಕ್ಲೊಪಿಡಿಯಾ, ಈಗ ಬಾಹ್ಯಾಕಾಶ ಕ್ಷೇತ್ರದಲ್ಲಿ ಪಿಕ್ಸೆಲ್ ಮ್ಯಾನ್; ಇದು ಕನ್ನಡಿಗ ಅವೈಸ್​ನ ರೋಚಕ ಕಥೆ – Kannada News | Pixxel founder’s journey, From a village in Chikmagaluru to collab with NASA, Awais Ahmed inspiring story

ಅವೈಸ್ ಅಹ್ಮದ್ ಎನ್ ಎImage Credit source: X @awaisahmedna

ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಸಣ್ಣ ಗ್ರಾಮವೊಂದರಿಂದ ಬಂದ ಯುವಕ, ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಸಾಧನೆ ಮಾಡಿರುವ ಅವೈಸ್ ಅಹ್ಮದ್ (Awais Ahmed) ಅವರ ಯಶೋಗಾಥೆ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಇವರು ಬಾಹ್ಯಾಕಾಶ ತಂತ್ರಜ್ಞಾನ ಸ್ಟಾರ್ಟಪ್ ‘ಪಿಕ್ಸೆಲ್’ (Pixxel) ಸಂಸ್ಥೆಯ ಸಹ-ಸ್ಥಾಪಕರು. ಭೂಮಿಯನ್ನು ಬಹಳ ಸೂಕ್ಷ್ಮವಾಗಿ ಅಧ್ಯಯನ ಮಾಡಲು ನೆರವಾಗುವಂತಹ ಬಲಿಷ್ಠ ಸೆಟಿಲೈಟ್​ಗಳನ್ನು ನಿರ್ಮಿಸುತ್ತಿದೆ ಇವರ ಪಿಕ್ಸೆಲ್ ಕಂಪನಿ.

ಅವೈಸ್ ಅಹ್ಮದ್ ಅವರು ಚಿಕ್ಕಮಗಳೂರಿನ ಆಲ್ದೂರು ಗ್ರಾಮದವರು. ಬಾಲ್ಯದಲ್ಲಿ ಇಂಟರ್ನೆಟ್ ಸೌಲಭ್ಯ ಇಲ್ಲದಿದ್ದಾಗ, ತಂದೆ ತರುತ್ತಿದ್ದ ವಿಶ್ವಕೋಶಗಳನ್ನು (Encyclopaedias) ಓದುವ ಮೂಲಕ ಬಾಹ್ಯಾಕಾಶದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದರು. ಆ ಆಸಕ್ತಿಯೇ ಅವರನ್ನು ಹೊಸ ಸಾಧನೆಗಳ ಎತ್ತರಕ್ಕೆ ಎಳೆದೊಯ್ಯುತ್ತಿದೆ.

ಪಿಕ್ಸೆಲ್ ಆರಂಭಿಸಿದ್ದು ಮತ್ತು ಹೂಡಿಕೆದಾರರನ್ನು ಆಕರ್ಷಿಸಿದ್ದು…

ಅವೈಸ್ ಅಹ್ಮದ್ ಅವರು ಐಐಟಿ ಮದ್ರಾಸ್​ನಲ್ಲಿ ಓದಿದವರು. ಸ್ಟಾರ್ಟಪ್​ಗಳಿಗೆ ಅತಿಹೆಚ್ಚು ಉತ್ತೇಜನ ನೀಡುವ ಶಿಕ್ಷಣ ಸಂಸ್ಥೆಗಳಲ್ಲಿ ಇದೂ ಒಂದು. ಇಲ್ಲಿ ಅವೈಸ್ ಅವರು 2019ರಲ್ಲಿ ತಮ್ಮ ಸಹಪಾಠಿ ಕ್ಷಿತಿಜ್ ಖಂಡೇಲ್ವಾಲ್ ಅವರೊಂದಿಗೆ ಸೇರಿ ಪಿಕ್ಸೆಲ್ ಸ್ಟಾರ್ಟಪ್‌ನ್ನು ಆರಂಭಿಸಿದರು. ಪ್ರಾರಂಭದಲ್ಲಿ ತಂದೆಯಿಂದ ಸಾಲ ಪಡೆದು ಕೇವಲ ತಿಂಗಳಿಗೆ ₹10,000 ಖರ್ಚಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಇದನ್ನೂ ಓದಿ: ರಾಷ್ಟ್ರೀಯ ಗೋಕುಲ್ ಮಿಷನ್; ಸರ್ಕಾರದ ಸಬ್ಸಿಡಿ, ಸಹಾಯಧನಗಳನ್ನು ಬಳಸಿ ಹೈನುಗಾರಿಕೆಯಿಂದ ಆದಾಯ ಗಳಿಸಿ

ಪಿಕ್ಸೆಲ್ ಸಂಸ್ಥೆಯು ಗೂಗಲ್, ರಾಡಿಕಲ್ ವೆಂಚರ್ಸ್ ಮತ್ತು ಲೈಟ್‌ಸ್ಪೀಡ್‌ನಂತಹ ಜಾಗತಿಕ ಹೂಡಿಕೆದಾರರಿಂದ ಸುಮಾರು ₹900 ಕೋಟಿಗೂ ($95 ಮಿಲಿಯನ್) ಹೆಚ್ಚು ಬಂಡವಾಳವನ್ನು ಸಂಗ್ರಹಿಸಿದೆ. ಇದು ಹೈಪರ್‌ಸ್ಪೆಕ್ಟ್ರಲ್ ಇಮೇಜಿಂಗ್ ಕ್ಷೇತ್ರದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ನಿಧಿ ಪಡೆದ ಕಂಪನಿಗಳಲ್ಲಿ ಒಂದಾಗಿದೆ.

ಪಿಕ್ಸೆಲ್ ಸಂಸ್ಥೆ ಏನು ಮಾಡುತ್ತದೆ?

ಇದು ಹೈಪರ್‌ಸ್ಪೆಕ್ಟ್ರಲ್ (Hyperspectral) ಇಮೇಜಿಂಗ್ ತಂತ್ರಜ್ಞಾನವನ್ನು ಹೊಂದಿರುವ ಉಪಗ್ರಹಗಳನ್ನು ನಿರ್ಮಿಸುತ್ತದೆ.

ಇವು ಸಾಮಾನ್ಯ ಉಪಗ್ರಹಗಳಿಗಿಂತ ಭಿನ್ನವಾಗಿ, ಭೂಮಿಯ ಮೇಲಿನ ಅತಿಸೂಕ್ಷ್ಮ ಬದಲಾವಣೆಗಳನ್ನು ಪತ್ತೆ ಹಚ್ಚಬಲ್ಲವು.

ರೈತರಿಗೆ ಬೆಳೆಗಳ ಆರೋಗ್ಯ ಪತ್ತೆ, ಪರಿಸರದಲ್ಲಿನ ಮೀಥೇನ್ ಅನಿಲ ಸೋರಿಕೆ ಗುರುತಿಸುವುದು, ಅಕ್ರಮ ಗಣಿಗಾರಿಕೆ ಪತ್ತೆ ಹಚ್ಚುವುದು ಮತ್ತು ಜಲಮಾಲಿನ್ಯದಂತಹ ಸಮಸ್ಯೆಗಳನ್ನು ಮೇಲ್ವಿಚಾರಣೆ ಮಾಡಲು ಈ ಉಪಗ್ರಹಗಳು ನೆರವಾಗುತ್ತವೆ.

2025 ರಲ್ಲಿ ಸಂಸ್ಥೆಯು ತನ್ನ ಆರು ‘ಫೈರ್ ಫ್ಲೈ’ (Firefly) ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ.

ಇದನ್ನೂ ಓದಿ: ಇಪಿಎಫ್ ಪೋರ್ಟಲ್​ನಲ್ಲಿ ಆಗಲ್ಲ ಯುಎಎನ್ ಆಕ್ಟಿವೇಶನ್; UMANG ಆಪ್​ನಲ್ಲಿ ಮಾತ್ರ ಸಾಧ್ಯ; ಇಲ್ಲಿವೆ ಮಹತ್ವದ ಅಪ್​ಡೇಟ್ಸ್

ಪಿಕ್ಸೆಲ್​ಗೆ ಜಾಗತಿಕ ಮನ್ನಣೆ, ನಾಸಾ ಒಪ್ಪಂದ

ಪಿಕ್ಸೆಲ್ ಸಂಸ್ಥೆಯು ನಾಸಾದೊಂದಿಗೆ ಒಪ್ಪಂದ ಮಾಡಿಕೊಂಡ ಮೊದಲ ಭಾರತೀಯ ಖಾಸಗಿ ಬಾಹ್ಯಾಕಾಶ ಸ್ಟಾರ್ಟಪ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಮೆರಿಕದ ನ್ಯಾಷನಲ್ ರಿಕಾನ್ನೈಸನ್ಸ್ ಆಫೀಸ್ (NRO) ಜೊತೆಗೂ ಐದು ವರ್ಷಗಳ ಒಪ್ಪಂದ ಮಾಡಿಕೊಂಡಿದೆ.

ಈ ಸಂಸ್ಥೆಯನ್ನು ಟೈಮ್ (TIME) ನಿಯತಕಾಲಿಕೆಯು 2023ರ ‘100 ಅತ್ಯುತ್ತಮ ಆವಿಷ್ಕಾರಗಳಲ್ಲಿ’ ಒಂದೆಂದು ಗುರುತಿಸಿದೆ ಮತ್ತು ವಿಶ್ವ ಆರ್ಥಿಕ ವೇದಿಕೆಯು (WEF) ‘ಟೆಕ್ನಾಲಜಿ ಪಯೋನೀರ್’ ಎಂದು ಗೌರವಿಸಿದೆ.

ಅವೈಸ್ ಅಹ್ಮದ್ ಅವರ ಈ ಪಯಣ, ತಂತ್ರಜ್ಞಾನದ ಸೌಲಭ್ಯಗಳಿಲ್ಲದಿದ್ದರೂ ಕೇವಲ ಕುತೂಹಲ ಮತ್ತು ಓದಿನ ಹಸಿವಿನಿಂದ ಜಗತ್ತೇ ಬೆರಗಾಗುವ ಸಾಧನೆ ಮಾಡಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಪರೀಕ್ಷೆ ಮೌಲ್ಯಮಾಪನಕ್ಕೂ AI ತಂತ್ರಜ್ಞಾನ: ಒಂದೇ ಬಾರಿಗೆ 15 ಲಕ್ಷ ಉತ್ತರ ಪತ್ರಿಕೆ ಕರೆಕ್ಷನ್‌! – Kannada News | Karnataka Education Department Plan introduce AI for Students Exam answer sheet Evaluation

ಬೆಂಗಳೂರು, (ಜುಲೈ 05): ಕರ್ನಾಟಕದ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ತಂತ್ರಜ್ಞಾನ ಆವರಿಸಿದ್ದು, ಇದರ ಮುಂದುವರೆದ ಭಾಗವಾಗಿ ಇದೀಗ ಸರ್ಕಾರಿ ಶಾಲೆಗಳಲ್ಲಿ ಉತ್ತರ ಪ್ರತಿಕೆ ಮೌಲ್ಯಮಾಪನ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭ ಹಾಗೂ ವೇಗಗೊಳಿಸಲು ಎಐ (Artificial Intelligence (AI)) ತಂತ್ರಜ್ಞಾನ ಬಳಕೆ ಮಾಡಲು ಶಿಕ್ಷಣ ಇಲಾಖೆ (Karnataka Education Department) ಸಿದ್ದತೆ ನಡೆಸಿದೆ. ಹೌದು… ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಕ್ಷೇತ್ರ ಮತ್ತೊಂದು ಡಿಜಿಟಲ್ ಹೆಜ್ಜೆ ಇಡುತ್ತಿದೆ. ಸ್ಮಾರ್ಟ್ ಕ್ಲಾಸ್‌, ಆನ್‌ಲೈನ್‌ ಬೋಧನೆಯ ನಂತರ ಇದೀಗ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನವೂ ಎಐ ಆಧಾರಿತವಾಗಲಿದೆ.

ಪ್ರಾಥಮಿಕ ಹಂತದಲ್ಲಿ 8ರಿಂದ 12ನೇ ತರಗತಿಯ ಪರೀಕ್ಷೆಗಳಲ್ಲಿ ಈ ವ್ಯವಸ್ಥೆ ಅಳವಡಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಇದುವರೆಗೆ ಪರೀಕ್ಷೆ ಮುಗಿದ ಬಳಿಕ ಸಾವಿರಾರು ಉತ್ತರ ಪತ್ರಿಕೆಗಳನ್ನು ತಿದ್ದುವುದು, ಅಂಕ ದಾಖಲಿಸುವುದು ಹಾಗೂ ದತ್ತಾಂಶ ಸಂಗ್ರಹಿಸುವ ಕೆಲಸ ಶಿಕ್ಷಕರಿಗೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿತ್ತು. ಈ ಕಾರಣದಿಂದ ತರಗತಿ ಬೋಧನೆಯ ಮೇಲೂ ಪರಿಣಾಮ ಬೀಳುತ್ತಿತ್ತು. ಇದೀಗ ಆ ಹೊರೆ ಕಡಿಮೆ ಮಾಡಲು ಎಐ ತಂತ್ರಜ್ಞಾನ ನೆರವಾಗಲಿದೆ ಅಂತಿದ್ದಾರೆ ಆಯುಕ್ತರು.

ಇದನ್ನೂ ಓದಿ: SSLC ತೃತೀಯ ಭಾಷೆಗೆ ಅಂಕದ ಬದಲು ಗ್ರೇಡ್: ಶೈಕ್ಷಣಿಕ ವರ್ಷದ ಆರಂಭದಲ್ಲೇ ಗೊಂದಲ ತಪ್ಪಿಸಲು ಸಿದ್ಧತೆ

ಎಐಯಿಂದ ಉತ್ತರ ಪತ್ರಿಕೆ ಕರೆಕ್ಷನ್ ಹೇಗೆ?

ಶಿಕ್ಷಕರು ಉತ್ತರ ಪತ್ರಿಕೆಗಳನ್ನು ಮೊಬೈಲ್ ಅಥವಾ ಸ್ಕ್ಯಾನರ್ ಮೂಲಕ ಡಿಜಿಟಲ್ ರೂಪದಲ್ಲಿ ಅಪ್‌ಲೋಡ್ ಮಾಡಲಿದ್ದಾರೆ. ನಂತರ ಎಐ ಉತ್ತರಗಳನ್ನು ವಿಶ್ಲೇಷಿಸಿ ಅಂಕಗಳನ್ನು ಸೂಚಿಸುತ್ತದೆ. ಜೊತೆಗೆ ವಿದ್ಯಾರ್ಥಿಗಳ ದತ್ತಾಂಶವನ್ನು ಸ್ವಯಂಚಾಲಿತವಾಗಿ ಸಂಗ್ರಹಿಸುತ್ತದೆ. ಅಂತಿಮವಾಗಿ ಅಂಕಗಳ ನಿಖರತೆಯನ್ನು ಶಿಕ್ಷಕರೇ ಪರಿಶೀಲಿಸಿ ದೃಢೀಕರಿಸಲಿದ್ದಾರೆ. ಈ AI ವ್ಯವಸ್ಥೆ ಒಂದೇ ಬಾರಿಗೆ ಸುಮಾರು 15 ಲಕ್ಷ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವ ಸಾಮರ್ಥ್ಯ ಹೊಂದಿದ್ದು. ಈ ಶೈಕ್ಷಣಿಕ ವರ್ಷದಿಂದ ಹಂತ ಹಂತವಾಗಿ ಜಾರಿಗೊಳಿಸುವ ಗುರಿಯನ್ನ ಶಿಕ್ಷಣ ಇಲಾಖೆ ಹೊಂದಿದೆ.

ಒಂದೇ ಬಾರಿಗೆ 15 ಲಕ್ಷ ಉತ್ತರ ಪತ್ರಿಕ್ರ ಮೌಲ್ಯಮಾಪನ!

ಪ್ರತಿ ಪರೀಕ್ಷೆ ಬಳಿಕ ಉತ್ತರ ಪತ್ರಿಕೆಗಳ ಮೌಲ್ಯಮಾಪನ, ಡೇಟಾ ಸಂಗ್ರಹಕ್ಕೆ ಶಿಕ್ಷಕರಿಗೆ ಸಾಕಷ್ಟು ಸಮಯ ಬೇಕಾಗುತ್ತಿದ್ದು, ಇದರಿಂದಾಗಿ ಈ ಸಮಯದಲ್ಲಿ ತರಗತಿಗಳ ಪಾಠ-ಪ್ರವಚನಕ್ಕೆ ಅಡೆತಡೆ ಎದುರಾಗದಂತೆ ಶೀಘ್ರ ಮೌಲ್ಯಮಾಪನ ನಡೆಸಲು ಎಐ ತಂತ್ರಜ್ಞಾನ ನೆರವಾಗಲಿದೆ. ಐಐಟಿ ಧಾರವಾಡದ ಮೂಲಕ ಮೌಲ್ಯಮಾಪನಕ್ಕೆ ಎಐ ಆಧಾರಿತ ತಂತ್ರಜ್ಞಾನ ಸಿದ್ಧಪಡಿಸುತ್ತಿರುವ ಶಿಕ್ಷಣ ಇಲಾಖೆ, ಮುಂದಿನ ಶೈಕ್ಷಣಿಕ ವರ್ಷದಿಂದ ಇದನ್ನು ಜಾರಿಗೆ ತರಲು ತಯಾರಿ ನಡೆಸಿದೆ.ಎಐ ತಂತ್ರಜ್ಞಾನದ ಮೂಲಕ ಒಂದೇ ಬಾರಿಗೆ ಸುಮಾರು 15 ಲಕ್ಷ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವ ಸಾಮರ್ಥ್ಯವಿದೆ.

ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಕೆಲಸಕ್ಕೂ ಎಐ ನೆರವಾಗಲಿದ್ದು. ಇದರಿಂದ ಮೌಲ್ಯಮಾಪನದಲ್ಲಿ ಪಾರದರ್ಶಕತೆ, ವೇಗ ಹಾಗೂ ನಿಖರತೆ ಹೆಚ್ಚುವ ನಿರೀಕ್ಷೆ ಶಿಕ್ಷಣ ಇಲಾಖೆಯದ್ದಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು. ಆದರೆ ಎಐ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಉತ್ತರ ಪತ್ರಿಕೆಗಳಿಗೆ ಎಐ ನೀಡುವ ಅಂಕಗಳನ್ನು ಶಿಕ್ಷಕರೇ ಪರಿಶೀಲಿಸಿ ಅಂತಿಮಗೊಳಿಸಲಿದ್ದಾರೆ. ಹೀಗಾಗಿ ತಂತ್ರಜ್ಞಾನ ಮತ್ತು ಶಿಕ್ಷಕರ ಅನುಭವ ಎರಡನ್ನೂ ಸಂಯೋಜಿಸಿ ಮೌಲ್ಯಮಾಪನ ಪ್ರಕ್ರಿಯೆಯನ್ನು ಮತ್ತಷ್ಟು ವೇಗವಾಗಿ ಹಾಗೂ ಪರಿಣಾಮಕಾರಿಯಾಗಿ ನಡೆಸುವ ಗುರಿಯನ್ನು ಶಿಕ್ಷಣ ಇಲಾಖೆ ಹೊಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version