ಟ್ರಾಫಿಕ್ ಫೈನ್ ರಿಯಾಯಿತಿಗೆ ಗುಡ್ ರೆಸ್ಪಾನ್ಸ್: ಕೇವಲ 14 ದಿನದಲ್ಲಿ 18 ಕೋಟಿಗೂ ಅಧಿಕ ದಂಡ ಸಂಗ್ರಹ – Kannada News | 50% Traffic Fine Discount Drives Record Collections: Over ₹18 Crore Recovered in Just 14 Days

ಪ್ರಾತಿನಿಧಿಕ ಚಿತ್ರ Image Credit source: thehindu.com

ಬೆಂಗಳೂರು, ಜುಲೈ 05: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಸಂಚಾರ ನಿಯಮ ಉಲ್ಲಂಘನೆಯ ಬಾಕಿ ದಂಡದ ಮೇಲಿನ ಶೇಕಡಾ 50ರಷ್ಟು ರಿಯಾಯಿತಿ ಯೋಜನೆಗೆ (Traffic Fine Discount) ಸಾರ್ವಜನಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜೂನ್ 21, ರಿಂದ ಜುಲೈ 4ರವರೆಗೆ ಅಂದರೆ ಕೇವಲ 14 ದಿನಗಳ ಅವಧಿಯಲ್ಲಿ ಒಟ್ಟು 18,15,42,200 ರೂ ದಂಡದ ಹಣ ಪಾವತಿಯಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.

ಕೋಟಿ ಕೋಟಿ ದಂಡದ ಹಣ ಪಾವತಿ

ಈ ಕುರಿತಾಗಿ ಬೆಂಗಳೂರು ಸಂಚಾರ ಪೊಲೀಸರು ಟ್ವೀಟ್ ಮಾಡಿದ್ದು, ಕರ್ನಾಟಕ ರಾಜ್ಯ ಸರ್ಕಾರವು ಜೂನ್​​ 04ರಿಂದ ಪೊಲೀಸ್ ಇಲಾಖೆಯಲ್ಲಿ ಸಂಚಾರಿ ಇ-ಚಲನ್‌ನಲ್ಲಿ ದಾಖಲಾದ ಪ್ರಕರಣಗಳಿಗೆ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳಲ್ಲಿ ದಂಡವನ್ನು ಪಾವತಿಸಲು ಶೇ.50% ರಷ್ಟು ರಿಯಾಯಿತಿಗೆ ಆದೇಶಿಸಿತ್ತು. ಅದರಂತೆ ಜೂನ್​​ 21ರಿಂದ ಜಾರಿಗೆ ಬಂದಿತ್ತು.

ಬೆಂಗಳೂರು ಸಂಚಾರ ಪೊಲೀಸರು ಟ್ವೀಟ್

ದಂಡವನ್ನು ಪಾವತಿಸಲು ನಿಗದಿಪಡಿಸಲಾಗಿದ್ದ ರಿಯಾಯಿತಿ ಅವಧಿ ಅಂದರೆ ಜೂನ್​​ 21ರಿಂದ ಜುಲೈ 04ರ ವರೆಗೆ ವಿವಿಧ ಮಾಧ್ಯಮಗಳ ಮೂಲಕ ಬರೋಬ್ಬರಿ 6,06,032 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಒಟ್ಟು ರೂ.18,15,42,200 ರೂ ದಂಡ ಸಂಗ್ರಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಟ್ರಾಫಿಕ್ ಫೈನ್ ಶೇ 50 ರಿಯಾಯಿತಿ: ಕೇವಲ 4 ದಿನದಲ್ಲಿ 6 ಕೋಟಿ ರೂ. ಸಂಗ್ರಹ!

ವಾಹನ ಸವಾರರು ಈ ರಿಯಾಯಿತಿ ದರದಲ್ಲಿ ಬಾಕಿ ದಂಡ ಪಾವತಿಸಲು ಜುಲೈ 10ರವರೆಗೆ ಮಾತ್ರ ಅವಕಾಶವಿದೆ. ಇನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಹಾಗೂ ದಂಡ ಪಾವತಿ ಪ್ರಕ್ರಿಯೆಯನ್ನು ಸುಗಮಗೊಳಿಸಲು ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಪಿಎಸ್​ಐ ಒಳಗೊಂಡಂತೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದರೊಂದಿಗೆ, ವಾಹನ ಸವಾರರು ಸಂಚಾರ ನಿಯಮಗಳನ್ನು ಉಲ್ಲಂಘಿಸದಂತೆ ಜಾಗೃತಿ ಮೂಡಿಸುವ ಕಾರ್ಯದಲ್ಲೂ ಸಿಬ್ಬಂದಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ವರದಿ: ನಟರಾಜ್​, ಮೆಟ್ರೋ ಟಿವಿ9 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸಿಎಂ ಡಿ.ಕೆ. ಶಿವಕುಮಾರ್ ಭೇಟಿಯಾದ ನಟ ರಿಷಬ್ ಶೆಟ್ಟಿ; ಪ್ರವಾಸೋದ್ಯಮ ನೀತಿ ಬಗ್ಗೆ ಸಮಾಲೋಚನೆ – Kannada News | Rishab Shetty meets CM DK Shivakumar in Bengaluru to discuss Coastal and Malnad tourism

ಸ್ಯಾಂಡಲ್‌ವುಡ್ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರು ಇಂದು (ಜುಲೈ 5) ಬೆಂಗಳೂರಿನ ಸದಾಶಿವನಗರದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಮಹತ್ವದ ಸಮಾಲೋಚನೆ ನಡೆಸಿದರು. ಇತ್ತೀಚೆಗಷ್ಟೇ ರಾಜ್ಯ ಸರ್ಕಾರದ ಕರಾವಳಿ ಹಾಗೂ ಮಲೆನಾಡು ಪ್ರವಾಸೋದ್ಯಮದ ಅಧಿಕೃತ ಪ್ರಚಾರ ರಾಯಭಾರಿಯಾಗಿ ನೇಮಕಗೊಂಡಿದ್ದ ‘ಕಾಂತಾರ’ ಖ್ಯಾತಿಯ ರಿಷಬ್ ಶೆಟ್ಟಿ, ಆ ಭಾಗದ ಪ್ರವಾಸೋದ್ಯಮದ ಅಭಿವೃದ್ಧಿ ಹಾಗೂ ನೂತನ ನೀತಿಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿದರು. ಕರಾವಳಿ ಹಾಗೂ ಮಲೆನಾಡಿನ ಸಂಸ್ಕೃತಿ ಮತ್ತು ಚಿತ್ರೀಕರಣಕ್ಕೆ ಹೆಚ್ಚಿನ ಸೌಲಭ್ಯ ಒದಗಿಸುವ ಬಗ್ಗೆ ಈ ವೇಳೆ ಸಮಾಲೋಚನೆ ನಡೆಸಲಾಯಿತು. ಈ ಭೇಟಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ರಿಷಬ್ ಶೆಟ್ಟಿ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬ್ಯುಸಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪತಿಯ ಕೊಂದು ಬಾತ್​ರೂಮನ್​ನಲ್ಲಿ ಹೂಳುವ ಮುನ್ನ ಊಟದಲ್ಲಿ 20 ನಿದ್ರೆ ಮಾತ್ರೆಗಳನ್ನು ಬೆರೆಸಿದ್ದ ಪತ್ನಿ – Kannada News | Agra Man’s Disappearance Ends With Shocking Discovery Beneath Bathroom Floor

ಆಗ್ರಾ, ಜುಲೈ 05: ಉತ್ತರ ಪ್ರದೇಶದ ಆಗ್ರಾದಲ್ಲಿ ಭೀಕರ ಕೊಲೆಯೊಂದು ಜರುಗಿದೆ. ಪತಿ(Husband)ಯನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಿ, ಆತನ ಶವವನ್ನು ಮನೆಯ ಸ್ನಾನಗೃಹದಲ್ಲೇ ಹೂತುಹಾಕಿ, ಅದರ ಮೇಲೆ ಕಾಂಕ್ರೀಟ್ ಹಾಕಿದ್ದ ಮಹಿಳೆಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಮಾಡುವ ಮುನ್ನ ಆಕೆ ಪತಿಯ ಊಟದಲ್ಲಿ 15 ರಿಂದ 20 ನಿದ್ರೆ ಮಾತ್ರೆಗಳನ್ನು ಬೆರೆಸಿ ಕೊಟ್ಟಿದ್ದಳು ಎಂಬ ಆಘಾತಕಾರಿ ಸತ್ಯ ತನಿಖೆಯಿಂದ ಬಯಲಾಗಿದೆ. ಮೃತರನ್ನು ಸುರೇಂದ್ರ ಶರ್ಮಾ ಎಂದು ಗುರುತಿಸಲಾಗಿದ್ದು, ಆರೋಪಿ ಪತ್ನಿಯನ್ನು ರೂಬಿ ಶರ್ಮಾ ಎಂದು ಗುರುತಿಸಲಾಗಿದೆ.

45 ದಿನಗಳ ಕಾಲ ನಾಪತ್ತೆಯಾಗಿದ್ದ ಪತಿ
ಸುರೇಂದ್ರ ಶರ್ಮಾ ಅವರು ಸುಮಾರು 45 ದಿನಗಳಿಂದ ಕಾಣೆಯಾಗಿದ್ದರು. ಮೇ 26 ರಂದು ಪತ್ನಿ ರೂಬಿ ಮತ್ತು ಆಕೆಯ ಸೋದರ ಮಾವ ಅನಿಲ್ ಸೇರಿ, ಮೇ 18 ರಿಂದ ಸುರೇಂದ್ರ ಕಾಣೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ನೆರೆಹೊರೆಯವರು ಹಾಗೂ ಸಂಬಂಧಿಕರು ಸುರೇಂದ್ರ ಎಲ್ಲಿದ್ದಾರೆ ಎಂದು ಕೇಳಿದಾಗಲೆಲ್ಲಾ ರೂಬಿ, ಅವರು ಕೆಲಸದ ಮೇಲೆ ಹೊರಗೆ ಹೋಗಿದ್ದಾರೆ, ಶೀಘ್ರದಲ್ಲೇ ಬರುತ್ತಾರೆ ಎಂದು ನಂಬಿಸುತ್ತಿದ್ದಳು. ಅಲ್ಲದೆ, ಪತಿ ಕಾಣೆಯಾಗಿದ್ದಕ್ಕೆ ತನಗೆ ತುಂಬ ಬೇಸರವಾಗಿದೆ ಎಂದು ತೋರಿಸಿಕೊಳ್ಳಲು ಜನರ ಮುಂದೆ ಕಣ್ಣೀರು ಹಾಕುತ್ತಾ ನಾಟಕವಾಡುತ್ತಿದ್ದಳು.

ಕಥೆ ಕಟ್ಟಿ ಸಿಕ್ಕಿಬಿದ್ದ ಕಿರಾತಕಿ
ಪೊಲೀಸ್ ತನಿಖೆ ತೀವ್ರಗೊಂಡಾಗ ರೂಬಿ ನೀಡುತ್ತಿದ್ದ ಹೇಳಿಕೆಗಳಲ್ಲಿ ಹಲವು ಗೊಂದಲಗಳು ಮತ್ತು ಅಸಮಂಜಸತೆಗಳು ಕಂಡುಬಂದವು. ಸೋದರ ಮಾವ ಅನಿಲ್ ಕೂಡ ರೂಬಿ ಮೇಲೆಯೇ ಅನುಮಾನ ವ್ಯಕ್ತಪಡಿಸಿದರು. ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ಕಠಿಣವಾಗಿ ವಿಚಾರಣೆ ನಡೆಸಿದಾಗ, ಆಕೆ ತನ್ನ ಪಾಪಕೃತ್ಯವನ್ನು ಒಪ್ಪಿಕೊಂಡಿದ್ದಾಳೆ.

ಆಕೆಯ ಪ್ರಕಾರ, ಪತಿ ಸುರೇಂದ್ರ ಭರತ್‌ಪುರದಲ್ಲಿ ಸಂಬಂಧಿಕರೊಂದಿಗೆ ಕುಡಿದು ಜಗಳವಾಡಿದ್ದರು. ಆ ಜಗಳದ ನಂತರ ನ್ಯಾಯಾಲಯ ಮತ್ತು ಕಾನೂನು ಕ್ರಮ ಎದುರಿಸಬೇಕಾಗಬಹುದು ಎಂಬ ಭಯ ಸುರೇಂದ್ರಗೆ ಇತ್ತು ಎಂದು ಆಕೆ ಪೊಲೀಸರಿಗೆ ತಿಳಿಸಿದ್ದಾಳೆ.

ಮತ್ತಷ್ಟು ಓದಿ:
ರೋಗಿಗಳ ಜೀವದ ಜೊತೆ ಚೆಲ್ಲಾಟ: ಪತಿ ಸರಕಾರಿ ವೈದ್ಯ, ಆದರೆ ಚಿಕಿತ್ಸೆ ನೀಡೋದು ಪತ್ನಿ!

ಯೋಜನೆಯ ಪ್ರಕಾರ ರೂಬಿ ಮೊದಲು ಸುರೇಂದ್ರನ ಊಟದಲ್ಲಿ 20 ನಿದ್ರೆ ಮಾತ್ರೆಗಳನ್ನು ಬೆರೆಸಿದ್ದಳು. ಸುರೇಂದ್ರ ಗಾಢ ನಿದ್ರೆಗೆ ಜಾರಿದ ತಕ್ಷಣ ಆಕೆಯೇ ಆತನನ್ನು ಕೊಲೆ ಮಾಡಿದ್ದಾಳೆ. ನಂತರ ಆತನ ಶವವನ್ನು ಮಣ್ಣಿನ ನೆಲವಿದ್ದ ಸ್ನಾನಗೃಹಕ್ಕೆ ಎಳೆದುಕೊಂಡು ಹೋಗಿ ಹೂತುಹಾಕಿದ್ದಾಳೆ. ಮರುದಿನವೇ ಕಾರ್ಮಿಕರನ್ನು ಕರೆಸಿ ಸ್ನಾನಗೃಹಕ್ಕೆ ಹೆಚ್ಚುವರಿ ಮಣ್ಣು ತರಿಸಿ ಶವದ ಮೇಲೆ ಹಾಕಿಸಿದ್ದಾಳೆ. ದೇಹ ಸಂಪೂರ್ಣವಾಗಿ ಮುಚ್ಚಿದ ನಂತರ, ಅದರ ಮೇಲೆ ಮೇಸ್ತ್ರಿಯನ್ನು ಕರೆಸಿ ಕಾಂಕ್ರೀಟ್ ನೆಲವನ್ನು ಹಾಕಿಸಿದ್ದಾಳೆ.

ಕೊಲೆಯಾದ ಒಂದೇ ದಿನದಲ್ಲಿ ಸ್ನಾನಗೃಹಕ್ಕೆ ಕಾಂಕ್ರೀಟ್ ಹಾಕಿಸಿದ್ದರಿಂದ ಸಂಬಂಧಿಕರಿಗಾಗಲಿ ಅಥವಾ ನೆರೆಹೊರೆಯವರಿಗಾಗಲಿ ಯಾವುದೇ ರೀತಿಯ ದುರ್ವಾಸನೆ ಬರಲಿಲ್ಲ.

ನೆಲ ಒಡೆದು ಶವ ಹೊರತೆಗೆದ ಪೊಲೀಸರು
ಸುಮಾರು 45 ದಿನಗಳ ನಿರಂತರ ತನಿಖೆಯ ನಂತರ ಪೊಲೀಸರು ಈ ಕರಾಳ ರಹಸ್ಯವನ್ನು ಭೇದಿಸಿದ್ದಾರೆ. ಮಣ್ಣಿನಲ್ಲಿ ಹೂತಿದ್ದ ಶವವನ್ನು ಹೊರತೆಗೆಯಲು ಪೊಲೀಸರು ಸ್ನಾನಗೃಹದ ಕಾಂಕ್ರೀಟ್ ನೆಲವನ್ನು ಒಡೆದು ಹಾಕಬೇಕಾಯಿತು. ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಭೀಕರ ಅಪರಾಧದಲ್ಲಿ ರೂಬಿಗೆ ಬೇರೆ ಯಾರಾದರೂ ಸಹಾಯ ಮಾಡಿದ್ದಾರೆಯೇ ಮತ್ತು ಈ ಕೊಲೆಯ ಹಿಂದೆ ಬೇರೆ ಯಾವುದಾದರೂ ದೊಡ್ಡ ಕಾರಣವಿದೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರಾಷ್ಟ್ರೀಯ ಗೋಕುಲ್ ಮಿಷನ್; ಸರ್ಕಾರದ ಸಬ್ಸಿಡಿ, ಸಹಾಯಧನಗಳನ್ನು ಬಳಸಿ ಹೈನುಗಾರಿಕೆಯಿಂದ ಆದಾಯ ಗಳಿಸಿ – Kannada News | Rashtriya Gokul Mission, govt initiative to conserve indigenous bovine breeds

ಹಸುವಿನ ಮೈ ತೊಳೆಯುತ್ತಿರುವ ಸಾಂದರ್ಭಿಕ ಚಿತ್ರImage Credit source: PTI

ರಾಷ್ಟ್ರೀಯ ಗೋಕುಲ್ ಮಿಷನ್ (Rashtriya Gokul Mission – RGM), ಭಾರತ ಸರ್ಕಾರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು ದೇಶಿ ತಳಿಯ ಹಸು ಹಾಗೂ ಎಮ್ಮೆಗಳ ಸಂರಕ್ಷಣೆ, ಹಾಲಿನ ಉತ್ಪಾದನೆ ಹೆಚ್ಚಳ ಮತ್ತು ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶದಿಂದ ಜಾರಿಗೆ ತಂದಿರುವ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಈ ಯೋಜನೆಯಡಿ ಹೈನುಗಾರಿಕೆಯನ್ನು ಲಾಭದಾಯಕ ಉದ್ಯಮವನ್ನಾಗಿ ಪರಿವರ್ತಿಸಲು ಮತ್ತು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ರೈತರಿಗೆ ಹಾಗೂ ಉದ್ಯಮಿಗಳಿಗೆ ಬಂಪರ್ ಸಬ್ಸಿಡಿ ಮತ್ತು ಪ್ರೋತ್ಸಾಹಧನಗಳನ್ನು ನೀಡಲಾಗುತ್ತಿದೆ.

ಗೋಕುಲ್ ಮಿಷನ್ ಅಡಿಯಲ್ಲಿ ಸಿಗುವ ಸಬ್ಸಿಡಿಗಳು ಮತ್ತು ಆರ್ಥಿಕ ಸೌಲಭ್ಯಗಳು

ರಾಷ್ಟ್ರೀಯ ಗೋಕುಲ್ ಮಿಷನ್ ಅಡಿಯಲ್ಲಿ ಮುಖ್ಯವಾಗಿ 3 ರೀತಿಯ ದೊಡ್ಡ ಮಟ್ಟದ ಆರ್ಥಿಕ ಪ್ರಯೋಜನಗಳು ಲಭ್ಯವಿವೆ. ಬ್ರೀಡ್ ಮಲ್ಟಿಪ್ಲಿಕೇಶನ್ ಫಾರ್ಮ್​ಗಳಿಗೆ ಸಬ್ಸಿಡಿ, ಐವಿಎಫ್ ತಂತ್ರಜ್ಞಾನಕ್ಕೆ ಪ್ರೋತ್ಸಾಹಧನ, ಲಿಂಗ ಆಧಾರಿತ ವೀರ್ಯಾಣು ಬಳಕೆಗೆ ಸಹಾಯಧನ ಸಿಗುತ್ತದೆ.

ತಳಿ ಫಾರ್ಮ್‌ಗಳಿಗೆ 2 ಕೋಟಿ ರೂ.ವರೆಗೆ ಸಬ್ಸಿಡಿ

ನೀವು ಕನಿಷ್ಠ 200 ಹಸು ಅಥವಾ ಎಮ್ಮೆಗಳ ಅತ್ಯಾಧುನಿಕ ಡೇರಿ ಫಾರ್ಮ್ (Breed Multiplication Farms) ಸ್ಥಾಪಿಸಲು ಬಯಸಿದರೆ, ಕೇಂದ್ರ ಸರ್ಕಾರದಿಂದ ಭಾರಿ ಹಣಕಾಸಿನ ನೆರವು ಸಿಗುತ್ತದೆ. ಒಟ್ಟು ಯೋಜನಾ ವೆಚ್ಚದ (Project Cost) 50% ಕ್ಯಾಪಿಟಲ್ ಸಬ್ಸಿಡಿ ಸಿಗುತ್ತದೆ.

ಒಬ್ಬ ಉದ್ಯಮಿಗೆ ಗರಿಷ್ಠ 2 ಕೋಟಿ ರೂಪಾಯಿವರೆಗೆ ಸಬ್ಸಿಡಿ ಲಭ್ಯವಿದೆ. ಉಳಿದ 50% ಹಣಕ್ಕೆ ಬ್ಯಾಂಕ್ ಲೋನ್ ಪಡೆದರೆ, AHIDF ಯೋಜನೆಯಡಿ 3% ಬಡ್ಡಿ ರಿಯಾಯಿತಿ (Interest Subvention) ಕೂಡ ಸಿಗುತ್ತದೆ.

ಇದನ್ನೂ ಓದಿ: ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಗ್ಗೆ ತಪ್ಪು ಕಲ್ಪನೆಗಳು; ಸರ್ಕಾರ ಒಂದೊಂದಕ್ಕೂ ನೀಡಿದ ಉತ್ತರ ಇಲ್ಲಿದೆ

ಐವಿಎಫ್ (IVF) ತಂತ್ರಜ್ಞಾನಕ್ಕೆ ಪ್ರೋತ್ಸಾಹಧನ

ಹೆಚ್ಚು ಹಾಲು ಕೊಡುವ ತಳಿಗಳನ್ನು ಉತ್ಪಾದಿಸಲು ಐವಿಎಫ್ (In-Vitro Fertilization) ತಂತ್ರಜ್ಞಾನ ಬಳಸುವ ರೈತರಿಗೆ ಸರ್ಕಾರ ಸಹಾಯ ಮಾಡುತ್ತದೆ.

ಐವಿಎಫ್ ತಂತ್ರಜ್ಞಾನದ ಮೂಲಕ ಯಶಸ್ವಿಯಾಗಿ ಕರು ಜನಿಸಿದರೆ, ಪ್ರತಿ ಗರ್ಭಧಾರಣೆಗೆ (Assured Pregnancy) ರೈತರಿಗೆ 5,000 ರೂ. ಪ್ರೋತ್ಸಾಹಧನ ನೀಡಲಾಗುತ್ತದೆ.

ಲಿಂಗ ಆಧಾರಿತ ವೀರ್ಯಾಣು ಬಳಕೆಗೆ ಸಹಾಯಧನ

ಕೇವಲ ಹೆಣ್ಣು ಕರುಗಳೇ (ಆಕಳು) ಜನಿಸುವಂತೆ ಮಾಡುವ ಅತ್ಯಾಧುನಿಕ ‘ಸೆಕ್ಸ್ ಸಾರ್ಟೆಡ್ ಸೆಮೆನ್’ (Sex-Sorted Semen) ತಂತ್ರಜ್ಞಾನಕ್ಕೆ ಸರ್ಕಾರ ಪ್ರೋತ್ಸಾಹ ನೀಡುತ್ತದೆ.

ಈ ವೀರ್ಯಾಣು ಬಳಕೆಯ ವೆಚ್ಚದ ಮೇಲೆ ರೈತರಿಗೆ 50% ವರೆಗೆ ಸಬ್ಸಿಡಿ ಸಿಗುತ್ತದೆ. ಇದರಿಂದ ಡೈರಿ ಫಾರ್ಮ್‌ಗಳಲ್ಲಿ ಗಂಡು ಕರುಗಳ ಸಂಖ್ಯೆ ಕಡಿಮೆಯಾಗಿ, ಹಾಲಿನ ಉತ್ಪಾದನೆ ಹೆಚ್ಚುತ್ತದೆ.

ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?

  • ವೈಯಕ್ತಿಕ ರೈತರು ಮತ್ತು ಹೈನುಗಾರರು.
  • ಸ್ವಸಹಾಯ ಸಂಘಗಳು (SHGs) ಮತ್ತು ಜಂಟಿ ಹೊಣೆಗಾರಿಕೆ ಗುಂಪುಗಳು (JLGs).
  • ರೈತ ಉತ್ಪಾದಕ ಸಂಸ್ಥೆಗಳು (FPOs / FPCs).
  • ಸೆಕ್ಷನ್ 8 ಕಂಪನಿಗಳು ಮತ್ತು ಖಾಸಗಿ ಉದ್ಯಮಿಗಳು.

ದೊಡ್ಡ ಮಟ್ಟದ ತಳಿ ಗುಣಾಕಾರ ಫಾರ್ಮ್ (200 ದನಗಳ ಫಾರ್ಮ್) ಮಾಡಲು ಕನಿಷ್ಠ 5 ಎಕರೆ ಸ್ವಂತ ಅಥವಾ ಲೀಸ್ ಭೂಮಿ ಹೊಂದಿರಬೇಕು ಹಾಗೂ ಮೇವಿನ ವ್ಯವಸ್ಥೆ ಇರಬೇಕು.

ಇದನ್ನೂ ಓದಿ: ನಿಮ್ಮ ಮನೆಗೆ ಸೌರ ಫಲಕಗಳನ್ನು ಅಳವಡಿಸಲು ಕೇಂದ್ರ ಸರ್ಕಾರದ ಯಾವ ಯೋಜನೆ ಬೆಸ್ಟ್​? ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸುವುದು ಹೇಗೆ?

ಬ್ರೀಡಿಂಗ್ ಫಾರ್ಮ್ ಮತ್ತು ದೊಡ್ಡ ಸಬ್ಸಿಡಿಗಾಗಿ ನೀವು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗುತ್ತದೆ.

  • ಹಂತ 1: ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ (NDDB) ಅಧಿಕೃತ ಇಒಐ ಪೋರ್ಟಲ್ eoi.nddb.coop/ ಅಥವಾ eoi.nddb.coop/ ಗೆ ಭೇಟಿ ನೀಡಿ ನೋಂದಣಿ (Sign Up) ಮಾಡಿಕೊಳ್ಳಿ.
  • ಹಂತ 2: ಯೋಜನಾ ವರದಿ (Project Report) ಸಿದ್ಧಪಡಿಸುವುದು. ನಿಮ್ಮ ಫಾರ್ಮ್‌ಗೆ ಸಂಬಂಧಿಸಿದಂತೆ ಬ್ಯಾಂಕ್ ಒಪ್ಪುವಂತಹ ಸಮಗ್ರ ಯೋಜನಾ ವರದಿಯನ್ನು (Bankable Project Proposal) ಸಿದ್ಧಪಡಿಸಿ, ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು.
  • ಹಂತ 3: ಬ್ಯಾಂಕ್ ಲೋನ್ ಮಂಜೂರಾತಿ. NDDB ನಿಮ್ಮ ಅರ್ಜಿಯನ್ನು ಪರಿಶೀಲಿಸಿ ಅರ್ಹವಾಗಿದ್ದರೆ ಬ್ಯಾಂಕ್‌ಗೆ ಶಿಫಾರಸು ಮಾಡುತ್ತದೆ. ಯೋಜನೆಯ 50% ವೆಚ್ಚಕ್ಕೆ ಬ್ಯಾಂಕ್‌ನಿಂದ ಲೋನ್ ಮಂಜೂರಾತಿ ಪತ್ರವನ್ನು (Sanction Letter) ಪಡೆಯಬೇಕು.
  • ಹಂತ 4: ಸಬ್ಸಿಡಿ ಬಿಡುಗಡೆ. ಕೇಂದ್ರ ಸರ್ಕಾರದ ಅನುಮೋದನೆ ಸಿಕ್ಕ ತಕ್ಷಣ, ಮೊದಲ ಕಂತಿನ ಸಬ್ಸಿಡಿ (50%) ನೇರವಾಗಿ ನಿಮ್ಮ ಲೋನ್ ಖಾತೆಗೆ ಜಮೆಯಾಗುತ್ತದೆ. ಫಾರ್ಮ್ ಸಿದ್ಧವಾದ ನಂತರ ಉಳಿದ ಹಣ ಹಂತ-ಹಂತವಾಗಿ ಬಿಡುಗಡೆಯಾಗುತ್ತದೆ.

ಸಣ್ಣ ಮಟ್ಟದ ಐವಿಎಫ್ (IVF) ಸೌಲಭ್ಯ ಅಥವಾ ಕೃತಕ ಗರ್ಭಧಾರಣೆ ಸಬ್ಸಿಡಿಗಳ ಪ್ರಯೋಜನ ಪಡೆಯಲು ರೈತರು ತಮ್ಮ ಹತ್ತಿರದ ಸರ್ಕಾರಿ ಪಶು ಆಸ್ಪತ್ರೆ, ಸ್ಥಳೀಯ ಹಾಲಿನ ಒಕ್ಕೂಟ (KMF/ಬಮುಲ್/ಕೆಮುಲ್ ಇತ್ಯಾದಿ) ಅಥವಾ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳನ್ನು ನೇರವಾಗಿ ಸಂಪರ್ಕಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮನಮೋಹಕವಾಗಿ ಕಾಣುವ ಕೂಡ್ಲು ಫಾಲ್ಸ್ ಅಷ್ಟೇ ಅಪಾಯಕಾರಿ, ಪ್ರವಾಸಿಗರಿಗೆ ನಿಷೇಧ – Kannada News | Forest Department enforces ban tourists entry to kudlu water falls

ಉಡುಪಿ, (ಜುಲೈ 05): ಜುಲೈ ಆರಂಭದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಅದರಲ್ಲೂ ಕರಾವಳಿ ಜಿಲ್ಲೆಗಳಲ್ಲಿ ಜೋರು ಮಳೆಯಾಗುತ್ತಿದೆ. ಇದರಿಂದ ಉಡುಪಿಯ ಪ್ರಸಿದ್ಧ ಫಾಲ್ಸ್ ತುಂಬಿ ಹರಿಯುತ್ತಿದೆ. ಹೌದು…ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನಲ್ಲಿರುವ ಕೂಡ್ಲು ಫಾಲ್ಸ್ 150-ಅಡಿ ಕಲ್ಲಿನ ಬಂಡೆಯ ಕೆಳಗೆ ದುಮ್ಮಿಕ್ಕಿ ಹರಿಯುತ್ತಿದೆ. ಇದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಪ್ರವಾಸಿಗರಿಗೆ ಫಾಲ್ಸ್ ಪ್ರವೇಶ ನಿಷೇಧಿಸಲಾಗಿದೆ. ಮಳೆಗಾಲದಲ್ಲಿ ಅತ್ಯಂತ ಮನಮೋಹಕವಾಗಿ ಕಾಣುವ ಫಾಲ್ಸ್ ಅಷ್ಟೇ ಅಪಾಯಕಾರಿಯಾಗಿದೆ. ಪ್ರವಾಸಿಗರು ಬಂದು ಯಾವುದೇ ಪ್ರಾಣಪಾಯಕ್ಕೆ ಒಳಗಾಗಬಹುದು ಎನ್ನುವ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಗೇಟ್ ಹಾಕಿ ಫಾಲ್ಸ್ ದಾರಿ ಬಂದ್ ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮೈಸೂರು ದಸರಾ ಅಂಬಾರಿ ಆನೆ ಅಭಿಮನ್ಯುವಿಗೆ ದಂತಭಗ್ನ; ದಸರಾ ಮಹೋತ್ಸವಕ್ಕೆ ಅಡ್ಡಿಯಾಗುತ್ತಾ? – Kannada News | Mysuru Dasara Star Elephant Abhimanyu’s Tusk Broken During Camp Activity, Remains Healthy

ಮೈಸೂರು ದಸರಾ ಅಂಬಾರಿ ಆನೆ ಅಭಿಮನ್ಯುವಿಗೆ ದಂತಭಗ್ನ

ಮೈಸೂರು, ಜುಲೈ 05: ವಿಶ್ವವಿಖ್ಯಾತ ಮೈಸೂರು ದಸರಾ (Dasara) ಜಂಬೂ ಸವಾರಿಯಲ್ಲಿ ಸತತವಾಗಿ ಚಿನ್ನದ ಅಂಬಾರಿ ಹೊತ್ತು ಸಾಗುವ ಗಜಪಡೆಯ ನಾಯಕ, 59 ವರ್ಷದ ‘ಅಭಿಮನ್ಯು’ ಆನೆಯ ಎಡಭಾಗದ ದಂತ ಮುರಿತಕ್ಕೊಳಗಾಗಿದೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಮತ್ತಿಗೋಡು ಆನೆ ಶಿಬಿರದಲ್ಲಿ ಮರದ ದಿಮ್ಮಿಗಳನ್ನು ಸ್ಥಳಾಂತರಿಸುವ ಕಾರ್ಯಚರಣೆ ನಡೆಸುವಾಗ ಈ ಅಚಾತುರ್ಯ ಸಂಭವಿಸಿದೆ.

ಶಿಬಿರದಲ್ಲಿ ನಿಯಮಿತ ಕೆಲಸದ ಭಾಗವಾಗಿ ಭಾರೀ ಗಾತ್ರದ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದಾಗ, ದಿಮ್ಮಿಗಳು ಆಕಸ್ಮಿಕವಾಗಿ ವಾಲಿಕೊಂಡಿವೆ. ಈ ವೇಳೆ ಭಾರವನ್ನು ತಡೆಯಲಾಗದೇ, ಮರದ ದಿಮ್ಮಿಗೆ ಬಡಿದು ಅಭಿಮನ್ಯುವಿನ ಎಡಭಾಗದ ದಂತದ ಮುಂದಿನ ತುದಿ ಭಾಗವು ಅರ್ಧಕ್ಕೆ ಕಟ್‌ ಆಗಿದೆ. ಕಾಡಾನೆ ಹಾಗೂ ಹುಲಿ ಕಾರ್ಯಾಚರಣೆಗಳಲ್ಲಿ ಎದುರಾಳಿ ಪ್ರಾಣಿಗಳನ್ನು ಮಟ್ಟಹಾಕಲು ಅಭಿಮನ್ಯುವಿಗೆ ಈ ದಂತವೇ ಪ್ರಮುಖ ಶಕ್ತಿಯಾಗಿತ್ತು.

ಆನೆ ಸಂಪೂರ್ಣ ಆರೋಗ್ಯವಾಗಿದೆ

ದಂತ ಮುರಿತಕ್ಕೊಳಗಾದ ತಕ್ಷಣವೇ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಪಶುವೈದ್ಯರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಅಭಿಮನ್ಯುವಿಗೆ ಯಾವುದೇ ರೀತಿಯ ಗಂಭೀರ ಗಾಯಗಳಾಗಿಲ್ಲ ಮತ್ತು ಆನೆ ಸದ್ಯ ಸಕ್ರಿಯವಾಗಿದ್ದು, ಆರೋಗ್ಯವಾಗಿದೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ದಂತದ ತುದಿ ಮುರಿದಿರುವುದರಿಂದ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಮುರಿದ ದಂತವು ಕಾಲಕ್ರಮೇಣ ಮತ್ತೆ ನೈಸರ್ಗಿಕವಾಗಿ ಬೆಳೆಯುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ದಸರಾ ಅಂಬಾರಿ ಹೊರುತ್ತಾನಾ ಅಭಿಮನ್ಯು?

2020ರಿಂದ ಸತತವಾಗಿ ಯಶಸ್ವಿಯಾಗಿ ಚಿನ್ನದ ಅಂಬಾರಿಯನ್ನು ಹೊರುತ್ತಾ ಬಂದಿರುವ ಅಭಿಮನ್ಯು, ಮುಂಬರುವ 2026ರ ದಸರಾ ಮಹೋತ್ಸವದಲ್ಲೂ ಪಾಲ್ಗೊಳ್ಳಲಿದ್ದಾನೆ. ಸತತ 7ನೇ ಬಾರಿ ಅಂಬಾರಿ ಹೊರಲು ಸಜ್ಜಾಗುತ್ತಿರುವ ಗಜಪಡೆ ನಾಯಕನ ದಸರಾ ಕರ್ತವ್ಯಕ್ಕೆ ಈ ದಂತ ಮುರಿತದಿಂದ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ಅರಣ್ಯ ಇಲಾಖೆ ಮೂಲಗಳು ಖಚಿತಪಡಿಸಿವೆ. ಆದರೆ, ಈ ಬಾರಿ ಜಂಬೂ ಸವಾರಿಯಲ್ಲಿ ಅಭಿಮನ್ಯು ಮುರಿದ ದಂತದೊಂದಿಗೆ ಹೊಸ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾನೆ.

ಕರ್ನಾಟಕದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕೊನೆಗೂ ತುಂಬಿದ ತುಂಗಾ ಜಲಾಶಯ, ತುಂಗಭದ್ರ ನದಿ ಪಾತ್ರದಲ್ಲಿ ಸಂಭ್ರಮ – Kannada News | Tungabhadra River People happy for Crest gates of Tunga reservoir lifted to release excess water

ದಾವಣಗೆರೆ, (ಜುಲೈ 05): ಜೂನ್ ತಿಂಗಳಲ್ಲಿ ಮುಂಗಾರು ಮಳೆ ಕೊರತೆಯಿಂ ಶಿವಮೊಗ್ಗ ತಾಲೂಕಿನ ಗಾಜನೂರಿನ ತುಂಗಾ ಸೇರಿದಂತೆ ಹಲವು ಜಲಾಶಯಗಳು ಬತ್ತಿ ಹೋಗಿವೆ. ಆದ್ರೆ, ಜುಲೈ ಆರಂಭದಲ್ಲಿ ಮಲೆನಾಡು ಭಾಗದಲ್ಲಿ ಕ್ರಮೇಣ ಮುಂಗಾರು ಮಳೆ ಚುರುಕುಗೊಳ್ಳಲಾರಂಭಿಸಿದೆ. ಹೀಗಾಗಿ ಶಿವಮೊಗ್ಗ ತಾಲೂಕಿನ ಗಾಜನೂರಿನ ತುಂಗಾ ಜಲಾಶಯ ಭರ್ತಿಯಾಗಿದೆ. 3.24 ಟಿಎಂಸಿ ಸಾಮರ್ಥ್ಯ ಗಾಜನೂರಿನ ತುಂಗಾ ಜಲಾಶಯವು ಪ್ರತಿ ವರ್ಷ ಜೂನ್ ಮೊದಲ ವಾರದಲ್ಲಿ ಭರ್ತಿಯಾಗುತ್ತಿತ್ತು. ಆದ್ರೆ ಬಾರಿ ಆರಂಭದಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಒಂದು ತಿಂಗಳು ತಡವಾಗೊ ಅಂದ್ರೆ ಜುಲೈ ಮೊದಲ ವಾರದಲ್ಲಿ ತುಂಗಾ ಜಲಾಶಯ ತುಂಬಿದೆ. ಇದರಿಂದ 10 ಗೇಟ್ ಓಪನ್ ಮಾಡಿ 20 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಬಿಡಲಾಗಿದ್ದು. ನದಿ ಪಾತ್ರದ ಜನರು ಸಂತಸಗೊಂಡಿದ್ದಾರೆ. ಕಳೆದ ಎರಡು ಮೂರು ದಿನಗಳ ಹಿಂದ ಸಂಪೂರ್ಣ ಖಾಲಿಯಾಗಿದ್ದ ತುಂಗಭದ್ರ ನದಿಗೆ ಕೊನೆಗೂ ನೀರು ಬಿಟ್ಟಿರಿವುದರಿಂದ ದಾವಣಗೆರೆ ಜಿಲ್ಲೆಯ ಹರಿಹರ, ಹೊನ್ನಾಳಿ, ನ್ಯಾಮತಿ ತಾಲೂಕಿನ ಜನರು ಫುಲ್ ಖುಷ್ ಆಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸರಳವಾಗಿ ನಡೆದ ಆಮಿರ್ ಖಾನ್ ಮೂರನೇ ಮದುವೆ, ಅತಿಥಿಗಳು ಯಾರ್ಯಾರು? – Kannada News | Aamir Khan, Gauri Spratt marriage, Here is the first photo of the newly wed couple

ಆಮಿರ್ ಖಾನ್ (Aamir Khan) ಇಂದು (ಜೂನ್ 05) ಮೂರನೇ ಮದುವೆ ಆಗಿದ್ದಾರೆ. ತಮ್ಮ ಗೆಳತಿ ಗೌರಿ ಸ್ಪ್ರಾಟ್ ಅವರನ್ನು ಆಮಿರ್ ಖಾನ್ ವರಿಸಿದ್ದಾರೆ. ಗೌರಿ ಅವರಿಗೆ ಇದು ಎರಡನೇ ಮದುವೆ ಆದರೆ, ಆಮಿರ್ ಖಾನ್ ಅವರಿಗೆ ಇದು ಮೂರನೇ ಮದುವೆ. ಆಮಿರ್ ಖಾನ್ ಅವರ ಮುಂಬೈ ನಿವಾಸದಲ್ಲಿಯೇ ಅತ್ಯಂತ ಸರಳವಾಗಿ ಈ ಮದುವೆ ಸಮಾರಂಭ ನೆರವೇರಿದೆ. ಆಮಿರ್ ಮತ್ತು ಗೌರಿ ಅವರುಗಳು ಮದುವೆಯ ರಿಜಿಸ್ಟರ್ ಪುಸ್ತಕಕ್ಕೆ ಸಹಿ ಹಾಕುತ್ತಿರುವ ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆ ಈ ಮದುವೆಗೆ ಹಾಜರಾದ ಅತಿಥಿಗಳ ಪಟ್ಟಿ ಆಶ್ಚರ್ಯಕರವಾಗಿದೆ.

ಈಗ ವೈರಲ್ ಆಗಿರುವ ಚಿತ್ರದಲ್ಲಿ ಆಮಿರ್ ಖಾನ್ ಮತ್ತು ಗೌರಿ ಅವರುಗಳ ಮಕ್ಕಳು ಕಾಣುತ್ತಿದ್ದಾರೆ. ಗೌರಿ ಅವರ ಹಿಂದಿನ ಮದುವೆಯಿಂದ ಪಡೆದ ಪುತ್ರ ಹಾಗೂ ಆಮಿರ್ ಖಾನ್ ಮತ್ತು ಕಿರಣ್ ರಾವ್ ಅವರ ಪುತ್ರ ಚಿತ್ರದಲ್ಲಿದ್ದಾರೆ. ಜೊತೆಗೆ ಆಮಿರ್ ಖಾನ್ ಅವರ ತಾಯಿ ಜೀನತ್ ಹುಸೇನ್ ಸೇರಿದಂತೆ ಆಮಿರ್ ಖಾನ್ ಮತ್ತು ಗೌರಿ ಅವರ ಕುಟುಂಬದ ಹಿರಿಯರುಗಳು ಚಿತ್ರದಲ್ಲಿದ್ದಾರೆ.

ಈ ಮದುವೆಗೆ ಆಮಿರ್ ಖಾನ್ ಅವರ ಈ ಹಿಂದಿನ ಎರಡು ಮದುವೆಯಿಂದ ಪಡೆದ ಮಕ್ಕಳು ಭಾಗವಹಿಸಿದ್ದರು. ಮೊದಲ ಮದುವೆಯಿಂದ ಪಡೆದ ಮಕ್ಕಳಾದ ಜುನೈದ್ ಖಾನ್, ಇರಾ ಅವರು ಮದುವೆಯಲ್ಲಿ ಭಾಗಿ ಆಗಿದ್ದರು. ಇರಾ ಅವರ ಪತಿ ನೂಪುರ್ ಶಿಖಾರೆ ಸಹ ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದರು. ಇನ್ನು ಎರಡನೇ ಪತ್ನಿ ಕಿರಣ್ ರಾವ್ ಅವರೊಟ್ಟಿಗೆ ಪಡೆದ ಪುತ್ರ ಆಜಾದ್ ಸಹ ಮದುವೆಯಲ್ಲಿ ಭಾಗಿ ಆಗಿದ್ದರು. ಮಕ್ಕಳ ಮುಂದೆ ಆಮಿರ್ ಖಾನ್ ಮೂರನೇ ಮದುವೆ ಆಗಿದ್ದಾರೆ.

ಇದನ್ನೂ ಓದಿ:ಆಮಿರ್ ಖಾನ್ ವಿವಾಹ ನಡೆಯೋದು ಎಲ್ಲಿ? ಅದ್ದೂರಿ ಸಮಾರಂಭಕ್ಕೆ ವೇದಿಕೆ ಸಿದ್ಧ

ಆಮಿರ್ ಖಾನ್ ಮತ್ತು ಗೌರಿ 25 ವರ್ಷಗಳ ಹಿಂದೆಯೇ ಪರಸ್ಪರ ಪರಿಚಿತರಾಗಿದ್ದರಂತೆ. ಆದರೆ ಕಾರಣಾಂತರಗಳಿಂದ ಇಬ್ಬರೂ ದೂರಾಗಿದ್ದರು. ಆದರೆ ಇತ್ತೀಚೆಗೆ ಇಬ್ಬರು ಮತ್ತೆ ಭೇಟಿ ಆಗಿದ್ದು, ಹಳೆಯ ಸ್ನೇಹ ಮತ್ತೆ ಚಿಗುರಿ ಪ್ರೀತಿಯಾಗಿ ಮಾರ್ಪಟ್ಟು ಈಗ ಇಬ್ಬರೂ ಮದುವೆ ಸಹ ಆಗಿದ್ದಾರೆ. ಕಳೆದ ಹಲವು ತಿಂಗಳುಗಳಿಂದಲೂ ಆಮಿರ್ ಖಾನ್ ಮತ್ತು ಗೌರಿ ಪರಸ್ಪರ ಜೊತೆಯಾಗಿ ಓಡಾಡುತ್ತಿದ್ದರು. ಈಗ ಕೊನೆಗೂ ವಿವಾಹವಾಗಿದ್ದಾರೆ.

ಆಮಿರ್ ಖಾನ್ ಮದುವೆಗೆ ಉದ್ಯಮಿ ಮುಖೇಶ್ ಅಂಬಾನಿ, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ರಾಜಕಾರಣಿ ರಾಜ್ ಠಾಕ್ರೆ, ನಟ ವೀರ್ ದಾಸ್ ಇನ್ನೂ ಹಲವರಿಗೆ ಆಹ್ವಾನ ಇತ್ತಂತೆ. ಆದರೆ ಯಾರ್ಯಾರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು ಎಂಬ ಬಗ್ಗೆ ಖಾತ್ರಿ ಇಲ್ಲ. ಪ್ರಸ್ತುತ ಕೇವಲ ಒಂದು ಚಿತ್ರವಷ್ಟೆ ವೈರಲ್ ಆಗಿದೆ. ಆಮಿರ್ ಖಾನ್ ಅವರು ಸಹ ಮದುವೆಯನ್ನು ತೀರ ಖಾಸಗಿಯಾಗಿ ಇರಿಸಿದ್ದಾರೆ. ಮದುವೆಯ ಬಳಿಕ ಯಾವುದೇ ರಿಸೆಪ್ಷನ್ ಕಾರ್ಯಕ್ರಮ ಸಹ ಇರುವುದಿಲ್ಲವಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Video: ಮಾನಸಿಕ ಕಿರಿಕಿರಿ, ಒಂಟಿತನ ಫ್ರೀಯಾಗಿ ಕೊಟ್ಟ ವರ್ಕ್ ಫ್ರಮ್ ಹೋಮ್; ಯುವಕ ಹೀಗೆಂದಿದ್ದೇಕೆ? – Kannada News | Young man says ‘Work from Home’ robbed him of his peace of mind.

ವರ್ಕ್ ಫ್ರಂ ಹೋಮ್ ಆಯ್ಕೆಯ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ಕಾಮನ್ ಆಗಿ ಬಿಟ್ಟಿದೆ. ಆಫೀಸಿಗೆ ಹೋಗಿ ಕೆಲಸ ಮಾಡೋದಕ್ಕಿಂತ ವರ್ಕ್ ಫ್ರಮ್ ಹೋಮ್ (work from home) ಬೆಸ್ಟ್ ಎನ್ನುವುದು ಅನೇಕರ ಅಭಿಪ್ರಾಯ. ವರ್ಕ್ ಫ್ರಮ್ ಹೋಮ್ ಆಪ್ಷನ್ ಸಿಕ್ರೆ ಖುಷಿ ಎಷ್ಟಿದೆಯೋ, ಅಷ್ಟೇ ಕಿರಿಕಿರಿ ಕೂಡ. ಇದೀಗ ಯುವಕನೊಬ್ಬನದ್ದು ಇದೇ ಪರಿಸ್ಥಿತಿ. ಮನೆಯಲ್ಲೇ ಕೆಲಸ ಮಾಡಿಕೊಂಡು ತಾನು ಅನುಭವಿಸುವ ಒಂಟಿತನ ಹಾಗೂ ಕಿರಿಕಿರಿಯ ಬಗ್ಗೆ ಮಾತನಾಡಿದ್ದಾನೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು ನೆಟ್ಟಿಗರು ಈತನ ಮಾತನ್ನು ಒಪ್ಪಿಕೊಂಡಿದ್ದಾರೆ.

ನಮಾನ್ (better.with.naman) ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋ ದಲ್ಲಿ ವರ್ಕ್ ಫ್ರಮ್ ಹೋಮ್ ಬಗ್ಗೆ ಮಾತನಾಡಿದ್ದಾನೆ. ಈ ಕ್ಲಿಪಿಂಗ್ ನಲ್ಲಿ ಮನೆಯಿಂದಲೇ ಕೆಲಸ ಮಾಡುವುದು ನನ್ನ ಪಾಲಿನ ಬಹುದೊಡ್ಡ ಕನಸಾಗಿತ್ತು. ಆಫೀಸ್‌ಗೆ ಹೋಗಿ ಬರುವ ಸಮಯ ಉಳಿಯುತ್ತದೆ ಎಂದುಕೊಂಡಿದ್ದೆ. ಈ ವರ್ಕ್ ಫ್ರಮ್ ಕೆಲಸ ಸಿಕ್ಕ ಬಳಿಕ ಒಂದು ತಿಂಗಳಿನಿಂದ ಯಾರೊಂದಿಗೂ ಮುಖಾಮುಖಿ ಮಾತನಾಡಿಲ್ಲ. ಆಫೀಸ್‌ನಲ್ಲಿ ಸಣ್ಣದೊಂದು, ಸಹೋದ್ಯೋಗಿಗಳ ಜತೆಗೆ ಹರಟೆ, ಒಡನಾಟ, ಬಾಂಧವ್ಯವನ್ನು ಮಿಸ್ ಮಾಡುತ್ತಿದ್ದೇನೆ. ಟೈಮ್ ಏನೋ ಉಳಿಯಿತು. ಆದರೆ ಶೂನ್ಯಭಾವವೊಂದು ಕಾಡುತ್ತಿದೆ ಎಂದು ಹೇಳಿದ್ದಾನೆ.

ವೈರಲ್ ವಿಡಿಯೋ ಇಲ್ಲಿದೆ

ಕೈಯಲ್ಲಿ ಕೆಲಸ ಇಲ್ಲದಾಗ ಉದ್ಯೋಗವಿದ್ರೆ ಸಾಕು ಅನಿಸುತ್ತದೆ. ಕೆಲಸ ಸಿಕ್ಕರೆ ಫ್ರೀಡಂ ಬೇಕು ಎಂದೇನಿಸುತ್ತದೆ. ಆದರೆ ಪ್ರತಿಯೊಂದಕ್ಕೂ ಬಾಸ್ ಗಳ ಪರ್ಮಿಷನ್ ಕೇಳಬೇಕು. ಅದನ್ನು ಎನಿಸಿಕೊಂಡರೆ ಬೇಸರ. ನಮ್ಗೆ ಏನೇ ಸಿಕ್ಕರೂ ಅದರಲ್ಲಿ ತೃಪ್ತರಾಗಿ ಇಲ್ಲ. ನಾವು ಕೆಲಸ ಮಾಡುವ ಬದಲು, ಆ ಬಳಿಕ ಬರುವ ಫಲಿತಾಂಶದ ಬಗ್ಗೆ ಹೆಚ್ಚು ಯೋಚಿಸುತ್ತೇವೆ. ಇಲ್ಲಿ ಗುರಿಯೊಂದಿಗೆ ನಡೆಯುವ ದಾರಿಯೂ ಅಷ್ಟೇ ಮುಖ್ಯ. ಹೀಗಾಗಿ ಪ್ರತಿಯೊಂದು ಕ್ಷಣವನ್ನು ಆನಂದಿಸಲು ಕಲಿಯಬೇಕು ಎಂದು ವಿಡಿಯೋದ ಕೊನೆಗೆ ಹೇಳಿರುವುದನ್ನು ಕಾಣಬಹುದು.

ಇದನ್ನೂ ಓದಿ: ಕೆಲಸ ಕಳೆದುಕೊಳ್ಳುತ್ತಿರುವುದಕ್ಕೆ ನಂಗೆ ಖುಷಿಯಾಗಿದೆ; ಉದ್ಯೋಗಿ ಹೀಗೆಂದಿದ್ದೇಕೆ?

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಮನುಷ್ಯನಿಗೆ ಏನೇ ಸಿಕ್ಕರೂ ತೃಪ್ತಿ ಇಲ್ಲ ಎಂದಿದ್ದಾರೆ. ಇನ್ನೊಬ್ಬರು, ಮನೆಯಲ್ಲೇ ಕೆಲಸ ಮಾಡುವುದು ಹಾಗೂ ಆಫೀಸಿಗೆ ಹೋಗಿ ಕೆಲಸ ಮಾಡುವುದು ಎರಡು ಭಿನ್ನ ಅನುಭವ ಎಂದು ಹೇಳಿದ್ದಾರೆ. ಮತ್ತೊಬ್ಬರು, ಸಿಕ್ಕಿದ್ದನ್ನು ಖುಷಿ ಪಡಿ. ಅದರ ಬಗ್ಗೆ ಗಮನ ಹರಿಸಿ. ಇಷ್ಟ ಪಟ್ಟು ಕೆಲಸ ಮಾಡಿದರೆ ಬೇಸರ ಕಾಡುವುದಿಲ್ಲ ಎಂದು ಸಲಹೆ ನೀಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುನಿಸಿಕೊಂಡು ತವರು ಮನೆಗೆ ಹೋದ ಪತ್ನಿಯನ್ನ ಕರೆಯಲು ಹೋದ ಪತಿಗೆ ಬೆಂಕಿ ಹಚ್ಚಿದ ಬಾಮೈದ – Kannada News | Punjab Tragedy: Brother in law Sets Husband Ablaze, Two Dead in Domestic Dispute

ಪಂಜಾಬ್, ಜುಲೈ 05: ಮುನಿಸಿಕೊಂಡು ತವರಿಗೆ ಹೋಗಿದ್ದ ಪತ್ನಿಯನ್ನು ಮರಳಿ ಮನೆಗೆ ಕರೆತರಲು ಅತ್ತೆ ಮನೆಗೆ ಹೋದ ವ್ಯಕ್ತಿಯೊಬ್ಬನಿಗೆ ಆಕೆಯ ಸಹೋದರನೇ ಪೆಟ್ರೋಲ್ ಸುರಿದು ಬೆಂಕಿ(Fire) ಹಚ್ಚಿರುವ ಭೀಕರ ಘಟನೆ ಪಂಜಾಬ್‌ನ ತರಣ್ ಜಿಲ್ಲೆಯಲ್ಲಿ ನಡೆದಿದೆ. ಈ ಘೋರ ಕೃತ್ಯದಲ್ಲಿ ಬೆಂಕಿ ಹಚ್ಚಲ್ಪಟ್ಟ ಪತಿ ಹಾಗೂ ಆತನನ್ನು ರಕ್ಷಿಸಲು ಹೋದ ಮಹಿಳೆಯಿಬ್ಬರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬಲಿಯಾದವರನ್ನು ಲವ್‌ಪ್ರೀತ್ ಸಿಂಗ್ ಮತ್ತು ಗುರ್ಜಿತ್ ಕೌರ್ ಎಂದು ಗುರುತಿಸಲಾಗಿದೆ.

ನಡೆದಿದ್ದೇನು?
ಲವ್‌ಪ್ರೀತ್ ಸಿಂಗ್ ಅವರ ಪತ್ನಿ ಸಂದೀಪ್ ಕೌರ್ ಕೆಲ ದಿನಗಳಿಂದ ಮುನಿಸಿಕೊಂಡು ತಾಯಿ ಮನೆಗೆ ಹೋಗಿ ಉಳಿದುಕೊಂಡಿದ್ದರು. ಜೂನ್ 13 ರಂದು ಲವ್‌ಪ್ರೀತ್ ಸಿಂಗ್ ಪತ್ನಿಯ ಮನವೊಲಿಸಿ ಮನೆಗೆ ಕರೆದೊಯ್ಯಲು ಅತ್ತೆಯ ಮನೆಗೆ ಹೋಗಿದ್ದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೋಪಗೊಂಡ ಸಂದೀಪ್ ಕೌರ್ ಸಹೋದರ ಸಜನ್ ಸಿಂಗ್, ಬಾವ ಲವ್‌ಪ್ರೀತ್ ಸಿಂಗ್ ಮೇಲೆ ದಹನಕಾರಿ ವಸ್ತುವನ್ನು ಸುರಿದು ದಿಢೀರನೆ ಬೆಂಕಿ ಹಚ್ಚಿದ್ದಾನೆ.

ರಕ್ಷಿಸಲು ಹೋದ ಮಹಿಳೆಯೂ ಸಾವು
ಲವ್‌ಪ್ರೀತ್ ಸಿಂಗ್ ಒದ್ದಾಡುತ್ತಾ ಬೆಂಕಿಯ ಜ್ವಾಲೆಯಲ್ಲಿ ಸಿಲುಕಿದ್ದನ್ನು ನೋಡಿ, ಸಜನ್ ಸಿಂಗ್ ಅವರ ಅತ್ತಿಗೆ ಗುರ್ಜಿತ್ ಕೌರ್ ರಕ್ಷಣೆಗೆ ಧಾವಿಸಿದ್ದಾರೆ. ಆದರೆ ದುರದೃಷ್ಟವಶಾತ್ ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ಅವರಿಗೂ ಭೀಕರವಾಗಿ ಸುಟ್ಟ ಗಾಯಗಳಾಗಿದ್ದವು. ತೀವ್ರವಾಗಿ ಗಾಯಗೊಂಡಿದ್ದ ಲವ್‌ಪ್ರೀತ್ ಮತ್ತು ಗುರ್ಜಿತ್ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ. ಕೃತ್ಯ ಎಸಗಿದ ಆರೋಪಿ ಸಜನ್ ಸಿಂಗ್‌ಗೂ ಸುಟ್ಟ ಗಾಯಗಳಾಗಿದ್ದು, ಆತನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಮತ್ತಷ್ಟು ಓದಿ: ಲಕ್ನೋ ಕೋಚಿಂಗ್ ಸೆಂಟರ್​​ನಲ್ಲಿ ಭೀಕರ ಬೆಂಕಿ ದುರಂತ; ಕಿಟಕಿಯಿಂದ ಹಾರಿದ ವಿದ್ಯಾರ್ಥಿಗಳು

ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಈ ಘಟನೆಯ ಮೈ ಜುಂ ಎನಿಸುವ ಸಿಸಿಟಿವಿ (CCTV) ದೃಶ್ಯಾವಳಿಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತಿವೆ. ವೀಡಿಯೊದಲ್ಲಿ ವ್ಯಕ್ತಿಯೊಬ್ಬನಿಗೆ ದಿಢೀರನೆ ಬೆಂಕಿ ಹಚ್ಚುವುದು, ಆತ ಪ್ರಾಣಭಯದಿಂದ ಬೆಂಕಿ ನಂದಿಸಲು ಓಡುವುದು ಮತ್ತು ಆತನನ್ನು ರಕ್ಷಿಸಲು ಹೋದ ಮಹಿಳೆಯ ಮೈಗೂ ಬೆಂಕಿ ಹೊತ್ತಿಕೊಂಡು ಇಬ್ಬರೂ ಕಿರುಚಾಡುತ್ತಾ ಓಡುತ್ತಿರುವ ದೃಶ್ಯಗಳು ಸೆರೆಯಾಗಿವೆ. ಘಟನೆಗೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರು ಆರೋಪಿ ಸಜನ್ ಸಿಂಗ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 2:19 pm, Sun, 5 July 26

Source link

Exit mobile version