ಹೀರೋ ಆದ ಸಿಪಿ ಯೋಗೇಶ್ವರ್ ಪುತ್ರ ಧ್ಯಾನ್; ಕ್ಲ್ಯಾಪ್ ಮಾಡಿದ ಮುಖ್ಯಮಂತ್ರಿ ಡಿಕೆಶಿ

Source link

ಮೈಸೂರು ಮಾರ್ಕೆಟ್‌ನಲ್ಲಿ FSSAI ಭರ್ಜರಿ ದಾಳಿ; 106 ಕೆಜಿ ಕೃತಕ ಬಣ್ಣದ ಹಸಿರು ಬಟಾಣಿ ವಶ! – Kannada News | Mysuru FSSAI Raid: 106 kg Artificially Coloured Green Peas Seized at MG Road Veg Market

ಮೈಸೂರು, ಜುಲೈ 05: ಗ್ರಾಹಕರನ್ನು ಆಕರ್ಷಿಸಲು ಒಣಗಿದ ಬಟಾಣಿಗೆ ರಾಸಾಯನಿಕಯುಕ್ತ ಕೃತಕ ಹಸಿರು ಬಣ್ಣ ಬಳಿದು ಮಾರಾಟ ಮಾಡುತ್ತಿದ್ದ ದಂಧೆಯನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕ್ರಾಂತಿ ಪ್ರಾಧಿಕಾರದ (FSSAI) ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಮೈಸೂರಿನ (Mysore) ಪ್ರಸಿದ್ಧ ಎಂ.ಜಿ. ರಸ್ತೆ ಸಗಟು ತರಕಾರಿ ಮಾರುಕಟ್ಟೆಯಲ್ಲಿ ಶನಿವಾರ ಮುಂಜಾನೆ ಅಧಿಕಾರಿಗಳ ತಂಡ ಭರ್ಜರಿ ದಾಳಿ ನಡೆಸಿ, ಒಟ್ಟು 106 ಕೆಜಿ ಕೃತಕ ಬಣ್ಣದ ಹಸಿರು ಬಟಾಣಿಯನ್ನು ಜಪ್ತಿ ಮಾಡಿದೆ.

ಎಫ್‌ಎಸ್‌ಎಸ್‌ಎಐ ನಿಯೋಜಿತ ಅಧಿಕಾರಿ ಎಸ್‌.ಎಲ್. ರವೀಂದ್ರ ಅವರ ನೇತೃತ್ವದಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳ ತಂಡ ಶನಿವಾರ ಮುಂಜಾನೆ 4.30ರ ಸುಮಾರಿಗೆ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ವೇಳೆ ಆರು ಮಂದಿ ವ್ಯಾಪಾರಿಗಳು ಹಸಿರು ಬಣ್ಣದ ರಾಸಾಯನಿಕ ಏಜೆಂಟ್‌ಗಳನ್ನು ಬಳಸಿ ಕೃತಕವಾಗಿ ಬಣ್ಣ ಹಚ್ಚಿದ ಬಟಾಣಿ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ. ಎಂ.ಜಿ. ರಸ್ತೆ ತರಕಾರಿ ಮಾರುಕಟ್ಟೆಯಲ್ಲಿ ಇಂತಹ ಕೃತಕ ಬಣ್ಣದ ಬಟಾಣಿ ದಂಧೆ ಗುರಿಯಾಗಿಸಿ ನಡೆಸಲಾದ ಮೂರನೇ ದೊಡ್ಡ ಕಾರ್ಯಾಚರಣೆ ಇದಾಗಿದೆ.

ಲ್ಯಾಬ್‌ಗೆ ಸ್ಯಾಂಪಲ್ ರವಾನೆ – ಕಠಿಣ ಕ್ರಮದ ಎಚ್ಚರಿಕೆ

ವಶಪಡಿಸಿಕೊಳ್ಳಲಾದ 106 ಕೆಜಿ ಸಂಶಯಾಸ್ಪದ ಬಟಾಣಿಗಳ ಸ್ಯಾಂಪಲ್​ಗಳನ್ನು ಸಂಗ್ರಹಿಸಲಾಗಿದ್ದು, ಅವುಗಳಲ್ಲಿ ಯಾವ ರೀತಿಯ ಅಪಾಯಕಾರಿ ರಾಸಾಯನಿಕ ಬಣ್ಣ ಬಳಸಲಾಗಿದೆ ಎಂಬುದನ್ನು ಪತ್ತೆಹಚ್ಚಲು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ವ್ಯಾಪಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಲ ವ್ಯಾಪಾರಿಗಳು ಒಣಗಿದ ಹಸಿರು ಬಟಾಣಿಗಳನ್ನು ತಂದು, ಅವು ಹಸಿರು ಮತ್ತು ತಾಜಾ ಆಗಿ ಕಾಣುವಂತೆ ಮಾಡಲು ಕೃತಕ ಬಣ್ಣಗಳನ್ನು ಹಚ್ಚಿ ಗ್ರಾಹಕರಿಗೆ ವಂಚಿಸುತ್ತಿದ್ದಾರೆ ಎಂದು ತನಿಖೆ ವೇಳೆ ತಿಳಿದುಬಂದಿದೆ. ದಾಳಿಯ ವೇಳೆ ಮಾರುಕಟ್ಟೆಯ ಸುಮಾರು 25ಕ್ಕೂ ಹೆಚ್ಚು ವ್ಯಾಪಾರಿಗಳಿಗೆ ಇಂತಹ ಅನಧಿಕೃತ ಬಣ್ಣದ ಬಳಕೆಯಿಂದ ಸಾರ್ವಜನಿಕರ ಆರೋಗ್ಯದ ಮೇಲಾಗುವ ಗಂಭೀರ ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಯಿತು.

ಕೃತಕ ಬಣ್ಣ ಗುರುತಿಸುವುದು ಹೇಗೆ?

ಬಟಾಣಿಗೆ ಕೃತಕ ಬಣ್ಣ ಹಚ್ಚಲಾಗಿದೆಯೇ ಎಂಬುದನ್ನು ಗ್ರಾಹಕರು ಸುಲಭವಾಗಿ ಪತ್ತೆಹಚ್ಚಬಹುದು ಎಂದು ಅಧಿಕಾರಿ ರವೀಂದ್ರ ತಿಳಿಸಿದ್ದಾರೆ. ಸಂಶಯಾಸ್ಪದ ಬಟಾಣಿಗಳನ್ನು ಒಂದು ಪಾರದರ್ಶಕ ಗ್ಲಾಸ್ ಅಥವಾ ಪಾತ್ರೆಯ ನೀರಿನಲ್ಲಿ ಹಾಕಿ ಸ್ವಲ್ಪ ಅಲ್ಲಾಡಿಸಿದರೆ, ಬಟಾಣಿಗೆ ಬಳಸಲಾದ ಕೃತಕ ಹಸಿರು ಬಣ್ಣವು ತಕ್ಷಣವೇ ನೀರಿಗೆ ಬಿಟ್ಟುಕೊಳ್ಳುತ್ತದೆ. ಇದರಿಂದ ರಾಸಾಯನಿಕ ಬಣ್ಣ ಬಳಸಿರುವುದನ್ನು ಸುಲಭವಾಗಿ ತಿಳಿಯಬಹುದು ಎಂದಿದ್ದಾರೆ.

ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಮೈಸೂರಿನ ಮೂರು ವಲಯಗಳ ಆಹಾರ ಸುರಕ್ಷತಾ ಅಧಿಕಾರಿಗಳಾದ ಗಿರೀಶ್ ಎಸ್.ಆರ್ (ವಲಯ 1), ರಾಜೇಶ್ (ವಲಯ 2) ಮತ್ತು ಬಾಲಸುಬ್ರಹ್ಮಣ್ಯ (ವಲಯ 3) ಪಾಲ್ಗೊಂಡಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಆಟೋ ಚಾಲಕ ಕೇಳಿದ್ದಕ್ಕೆ ಲ್ಯಾಂಬೋರ್ಗಿನಿ ಕೀಯನ್ನೇ ಕೊಟ್ಟ ಉದ್ಯಮಿ: ವಿಡಿಯೋ ವೈರಲ್​ – Kannada News | Bengaluru Businessman Handing Over His Lamborghini Keys to an Auto Driver Goes Viral

ಆಟೋ ಚಾಲಕ ಕೇಳಿದ್ದಕ್ಕೆ ಲ್ಯಾಂಬೋರ್ಗಿನಿ ಕೀಯನ್ನೇ ಕೊಟ್ಟ ಉದ್ಯಮಿImage Credit source: rakesh_knv Instagram

ಬೆಂಗಳೂರು, ಜುಲೈ 05: ಒಂದು ಸಾಮಾನ್ಯ ಮಾತುಕತೆ ಅಚ್ಚರಿಯ ಕ್ಷಣವಾಗಿ ಮಾರ್ಪಟ್ಟಿದ್ದು, ಉದ್ಯಮಿ ತಮ್ಮ ಲ್ಯಾಂಬೋರ್ಗಿನಿ (Lamborghini) ಸೂಪರ್‌ಕಾರಿನ ಕೀ ಅನ್ನು ಆಟೋ ಚಾಲಕನಿಗೆ ನೀಡಿ ಕಾರು ಓಡಿಸುವ ಅವಕಾಶ ಕಲ್ಪಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಅಪರೂಪದ ಮಾನವೀಯ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಲಕ್ಷಾಂತರ ಮಂದಿ ಪ್ರತಿಕ್ರಿಯಿಸಿದ್ದಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ಲ್ಯಾಂಬೋರ್ಗಿನಿಯನ್ನು ಅಪರಿಚಿತ ವ್ಯಕ್ತಿಗೆ ಚಾಲನೆ ಮಾಡಲು ನೀಡಿದ ಉದ್ಯಮಿಯ ವಿಶ್ವಾಸವನ್ನು ಅನೇಕರು ಶ್ಲಾಘಿಸಿದ್ದಾರೆ.

ವೈರಲ್​​ ಆದ ವಿಡಿಯೋದಲ್ಲಿ ಏನಿದೆ?

ವಿಡಿಯೊದಲ್ಲಿ ಉದ್ಯಮಿ ತಮ್ಮ ಲ್ಯಾಂಬೋರ್ಗಿನಿಯನ್ನು ಬೆಂಗಳೂರಿನ ರಸ್ತೆಯಲ್ಲಿ ಚಲಾಯಿಸುತ್ತಿರುವಾಗ, ಪಕ್ಕದಲ್ಲಿ ಬಂದ ಆಟೋ ಚಾಲಕ ಅವರನ್ನು ಗುರುತಿಸುತ್ತಾನೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿಡಿಯೊಗಳನ್ನು ನೋಡುತ್ತಿದ್ದೇನೆ ಎಂದು ಹೇಳಿದ ಚಾಲಕ, ಲ್ಯಾಂಬೋರ್ಗಿನಿ ಓಡಿಸಬೇಕು ಎಂಬ ತನ್ನ ಕನಸನ್ನು ವ್ಯಕ್ತಪಡಿಸುತ್ತಾನೆ. ಇದನ್ನು ಕೇಳಿದ ಉದ್ಯಮಿ, ಕೇವಲ ಧನ್ಯವಾದ ಹೇಳಿ ಮುಂದೆ ಸಾಗದೆ, ರಸ್ತೆಯ ಬದಿಗೆ ವಾಹನ ನಿಲ್ಲಿಸುವಂತೆ ಹೇಳಿ ತಮ್ಮ ಲ್ಯಾಂಬೋರ್ಗಿನಿಯ ಕೀಗಳನ್ನು ಆಟೋ ಚಾಲಕನ ಕೈಗೆ ನೀಡುತ್ತಾರೆ. ನಂತರ ಇಬ್ಬರೂ ತಮ್ಮ ತಮ್ಮ ವಾಹನಗಳನ್ನು ಪರಸ್ಪರ ಬದಲಾಯಿಸಿಕೊಂಡು ಪ್ರಯಾಣ ಆರಂಭಿಸುತ್ತಾರೆ. ಆಟೋ ಚಾಲಕ ಅತ್ಯಂತ ಎಚ್ಚರಿಕೆಯಿಂದ ಸೂಪರ್‌ಕಾರನ್ನು ಚಲಾಯಿಸಿದರೆ, ಉದ್ಯಮಿ ನಗುತ್ತಲೇ ಆಟೋದಲ್ಲಿ ಪ್ರಯಾಣಿಸುತ್ತಾರೆ.

ಇದನ್ನೂ ಓದಿ: ಇದೇ ನೋಡಿ ತಾಯಿ ಪ್ರೀತಿ; ತನ್ನ ಕರುವನ್ನು ತೋರಿಸಲು ಮಾಲೀಕನನ್ನು ಕರೆದೊಯ್ದ ಹಸು

ಭಾವುಕ ಸಂದೇಶ

ವಿಡಿಯೊದಲ್ಲಿ ಇಬ್ಬರೂ ತಮ್ಮ ತಮ್ಮ ವಿಭಿನ್ನ ವಾಹನಗಳಲ್ಲಿ ಪಕ್ಕಪಕ್ಕದಲ್ಲೇ ಸಾಗುತ್ತಿರುವ ದೃಶ್ಯಗಳು ಕಾಣಿಸುತ್ತವೆ. ಈ ವಿಡಿಯೊವನ್ನು ಹಂಚಿಕೊಂಡಿರುವ ಉದ್ಯಮಿ, ಆಟೋದಲ್ಲಿ ಕುಳಿತ ಕ್ಷಣವೇ ತಮ್ಮ ಜೀವನದ ಆರಂಭದ ದಿನಗಳು ಕಣ್ಣಮುಂದೆ ಬಂದವು ಎಂದು ಬರೆದುಕೊಂಡಿದ್ದಾರೆ. ವೃತ್ತಿ ಜೀವನದ ಆರಂಭದಲ್ಲಿ ಆರ್ಥಿಕ ಸಂಕಷ್ಟಗಳನ್ನು ಎದುರಿಸಿದ್ದ ಸಂದರ್ಭಗಳಲ್ಲಿ, ಆಟೋ ದರವನ್ನು ಪಾವತಿಸುವುದೇ ಕಷ್ಟವಾಗುತ್ತಿತ್ತು. ಹಲವು ವರ್ಷಗಳ ನಂತರ ಮತ್ತೆ ಆಟೋದಲ್ಲಿ ಪ್ರಯಾಣಿಸಿದಾಗ ತಾವು ಎಷ್ಟು ದೂರ ಬಂದಿದ್ದೇವೆ ಎಂಬುದು ಅರಿವಾಯಿತು ಎಂದು ಅವರು ಹೇಳಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ಗಳಿಸಿದ್ದು, ಒಬ್ಬ ನೆಟ್ಟಿಗ “ಬ್ರೋ, ನೀವು ನನ್ನ ಗೌರವ ಗಳಿಸಿದ್ದೀರಿ” ಎಂದು ಪ್ರತಿಕ್ರಿಯಿಸಿದರೆ, ಮತ್ತೊಬ್ಬರು “ಆಟೋ ಚಾಲಕನ ಮುಖದಲ್ಲಿನ ನಗು ಎಲ್ಲವನ್ನೂ ಹೇಳುತ್ತದೆ” ಎಂದು ಕಾಮೆಂಟ್ ಮಾಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

40ನೇ ವಯಸ್ಸಿನಲ್ಲಿ ಸಾಫ್ಟ್‌ವೇರ್ ಕೆಲಸಕ್ಕೆ ಗುಡ್‌ಬೈ ಹೇಳಿ ಎಂಬಿಬಿಎಸ್ ಮುಗಿಸಿದ ಜಾಹ್ನವಿ: ಈಗ ಅಮೆರಿಕದಲ್ಲಿ ವೈದ್ಯೆ – Kannada News | Age No Bar: Jahnavi Rao’s Journey from Tech to Doctor at 40 and Success in US

ನವದೆಹಲಿ, ಜುಲೈ 05: ಜೀವನದಲ್ಲಿ ಏನನ್ನಾದರೂ ಸಾಧಿಸಲು ವಯಸ್ಸು ಕೇವಲ ಒಂದು ನಂಬರ್ ಅಷ್ಟೇ ಎಂಬುದನ್ನು ಜಾಹ್ನವಿ ಅಜಿತ್ ರಾವ್ ಎಂಬ ಮಹಿಳೆ ಸಾಬೀತುಪಡಿಸಿದ್ದಾರೆ. ಜನರು ತಮ್ಮ 40ನೇ ವಯಸ್ಸಿನಲ್ಲಿ ನಿವೃತ್ತಿ ಅಥವಾ ಭವಿಷ್ಯದ ಆರ್ಥಿಕ ಭದ್ರತೆಯ ಬಗ್ಗೆ ಯೋಚಿಸುತ್ತಿದ್ದರೆ, ಜಾಹ್ನವಿ ಮಾತ್ರ ತಮಗಿದ್ದ ಯಶಸ್ವಿ ಎಂಜಿನಿಯರಿಂಗ್ ವೃತ್ತಿಜೀವನವನ್ನು ತ್ಯಜಿಸಿ, ವೈದ್ಯಕೀಯ ಲೋಕಕ್ಕೆ ಹೆಜ್ಜೆ ಇಟ್ಟಿದ್ದಾರೆ. ಸದ್ಯ ಇವರ ಸ್ಪೂರ್ತಿದಾಯಕ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ತಂತ್ರಜ್ಞಾನ ಲೋಕದಲ್ಲಿ 18 ವರ್ಷ
ಮಹಾರಾಷ್ಟ್ರದ ಔರಂಗಾಬಾದ್ ಮೂಲದ ಜಾಹ್ನವಿ ಅವರು ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು. ಸ್ಯಾನ್ ಡಿಯಾಗೋದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ಪದವಿ ಮತ್ತು ಸಾಂಟಾ ಬಾರ್ಬರಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ (Post Graduation) ಪಡೆದರು. ಆ ನಂತರ ಅಮೆರಿಕದ ಪ್ರಮುಖ ತಂತ್ರಜ್ಞಾನ ಕಂಪನಿಗಳಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡಿದರು.

2002 ರಲ್ಲಿ ತಮ್ಮ ಎಂಜಿನಿಯರ್ ಪತಿಯೊಂದಿಗೆ ಬೆಂಗಳೂರಿಗೆ ಬಂದ ಜಾನ್ಹವಿ, ಇಲ್ಲೂ ಕೂಡ ಹಲವು ಪ್ರತಿಷ್ಠಿತ ಕಂಪನಿಗಳಲ್ಲಿ ಸೇವೆ ಸಲ್ಲಿಸಿದರು. ಆ ಬಳಿಕ ರಕ್ಷಣಾ ಎಲೆಕ್ಟ್ರಾನಿಕ್ಸ್ ವಲಯದಲ್ಲಿ ಸ್ವಂತ ತಂತ್ರಜ್ಞಾನ ಕಂಪನಿಯನ್ನೂ ಸಹ ಆರಂಭಿಸಿ ಯಶಸ್ವಿಯಾಗಿದ್ದರು. ತಂತ್ರಜ್ಞಾನ ರಂಗದಲ್ಲಿ ಭರೋಸೆಯ 18 ವರ್ಷಗಳನ್ನು ಕಳೆದ ನಂತರ ಜಾಹ್ನವಿ ಅವರ ಜೀವನದಲ್ಲಿ ದೊಡ್ಡ ತಿರುವು ಎದುರಾಯಿತು.

ಮತ್ತಷ್ಟು ಓದಿ: ವಿದ್ಯಾರ್ಥಿಗಳಿಗೆ ಗುಡ್​​ನ್ಯೂಸ್: ಆಂಗ್ಲ ಮಾಧ್ಯಮ ಶಾಲೆಗಳ ಮೇಲ್ದರ್ಜೆಗೆ ಮುಂದಾದ ಶಿಕ್ಷಣ ಇಲಾಖೆ

40ನೇ ವಯಸ್ಸಿನಲ್ಲಿ ವೈದ್ಯಕೀಯ ಕಾಲೇಜಿಗೆ ಎಂಟ್ರಿ
ಎಲ್ಲವೂ ಸುಗಮವಾಗಿ ಸಾಗುತ್ತಿದ್ದಾಗ, ಜಾಹ್ನವಿ ತಮ್ಮ ಮನಸ್ಸಿನ ಆಳದಲ್ಲಿದ್ದ ವೈದ್ಯೆಯಾಗುವ ಕನಸನ್ನು ನನಸು ಮಾಡಿಕೊಳ್ಳಲು ನಿರ್ಧರಿಸಿದರು. ಎಂಜಿನಿಯರಿಂಗ್ ವೃತ್ತಿಯನ್ನು ಸಂಪೂರ್ಣವಾಗಿ ತೊರೆದು, 40ನೇ ವಯಸ್ಸಿನಲ್ಲಿ ವೈದ್ಯಕೀಯ ಕಾಲೇಜಿನ ಹೊಸ್ತಿಲು ತುಳಿದರು. ಕಠಿಣ ಪರಿಶ್ರಮದಿಂದ ಎಂಬಿಬಿಎಸ್ ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.

ಇಂದು ಅಮೆರಿಕದಲ್ಲಿ ವೈದ್ಯೆ
ಅಂದು ಜಾಹ್ನವಿ ತೆಗೆದುಕೊಂಡ ಆ ಒಂದು ಧೈರ್ಯದ ನಿರ್ಧಾರ, ಇಂದು ಅವರನ್ನು ಅಮೆರಿಕದಲ್ಲಿ ಯಶಸ್ವಿ ವೈದ್ಯೆಯನ್ನಾಗಿ ಮಾಡಿದೆ. ನೆಟ್ಟಿಗರು ಇವರ ಅದ್ಭುತ ಮನೋಭಾವ ಮತ್ತು ನಿರ್ಭೀತ ನಿರ್ಧಾರವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. ಬದುಕಿನಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ವಯಸ್ಸಿನ ಮಿತಿ ಇಲ್ಲ ಎಂಬುದಕ್ಕೆ ಜಾನ್ಹವಿ ಅವರೇ ಬೆಸ್ಟ್ ಎಕ್ಸಾಂಪಲ್ ಎಂದು ಜನರು ಕೊಂಡಾಡುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 12:12 pm, Sun, 5 July 26

Source link

Vastu Tips: ಮನೆಯ ಮುಖ್ಯ ದ್ವಾರದ ಡೋರ್‌ಮ್ಯಾಟ್ ಹೀಗಿದ್ದರೆ ಐಶ್ವರ್ಯ ವೃದ್ಧಿ! – Kannada News | Vastu Tips for Main Door Mats: Attract Prosperity and Positive Energy Home

ಹಿಂದೂ ಧರ್ಮ ಮತ್ತು ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಖ್ಯ ದ್ವಾರವು ಕೇವಲ ಒಳಬರುವ ದಾರಿಯಲ್ಲ. ಅದು ಸಕಾರಾತ್ಮಕ ಶಕ್ತಿ, ಸಂತೋಷ, ಸಮೃದ್ಧಿ ಮತ್ತು ಲಕ್ಷ್ಮಿ ದೇವಿ ಮನೆಗೆ ಪ್ರವೇಶಿಸುವ ಪವಿತ್ರ ಸ್ಥಳವಾಗಿದೆ. ಆದ್ದರಿಂದ, ಈ ಮುಖ್ಯ ದ್ವಾರದ ಬಳಿ ಇರಿಸುವ ಪ್ರತಿಯೊಂದು ವಸ್ತುವೂ ಧನಾತ್ಮಕ ಶಕ್ತಿಯನ್ನು ಆಕರ್ಷಿಸುವಂತಿರಬೇಕೇ ಹೊರತು, ನಕಾರಾತ್ಮಕತೆಯನ್ನು ತರುವಂತಿರಬಾರದು. ಮುಖ್ಯ ಬಾಗಿಲಿನ ಮುಂದೆ ಹಾಕುವ ಡೋರ್‌ಮ್ಯಾಟ್‌ನ ಬಣ್ಣ, ವಿನ್ಯಾಸ ಮತ್ತು ದಿಕ್ಕಿನ ಬಗ್ಗೆ ಜನರು ಸಾಮಾನ್ಯವಾಗಿ ನಿರ್ಲಕ್ಷ್ಯ ವಹಿಸುತ್ತಾರೆ. ಆದರೆ ವಾಸ್ತು ಪ್ರಕಾರ ಇದಕ್ಕೆ ವಿಶೇಷ ಮಹತ್ವವಿದೆ.

ಸೆಣಬಿನ ಡೋರ್‌ಮ್ಯಾಟ್:

ಇಂದಿನ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್, ಫೈಬರ್ ಮತ್ತು ರಬ್ಬರ್‌ನಿಂದ ಮಾಡಿದ ನೂರಾರು ವಿನ್ಯಾಸದ ಡೋರ್‌ಮ್ಯಾಟ್‌ಗಳು ಲಭ್ಯವಿವೆ. ಆದರೆ, ವಾಸ್ತು ಪ್ರಕಾರ ಮನೆಯ ಮುಖ್ಯ ದ್ವಾರದಲ್ಲಿ ಯಾವಾಗಲೂ ಸೆಣಬಿನಿಂದ (Jute) ಮಾಡಿದ ಡೋರ್‌ಮ್ಯಾಟ್ ಅನ್ನು ಬಳಸುವುದು ಅತ್ಯಂತ ಶ್ರೇಷ್ಠ. ಹಿಂದೂ ಧರ್ಮದಲ್ಲಿ ಸೆಣಬನ್ನು ಅತ್ಯಂತ ಪವಿತ್ರ ವಸ್ತು ಎಂದು ಪರಿಗಣಿಸಲಾಗುತ್ತದೆ; ಇದೇ ಕಾರಣಕ್ಕೆ ಪೂಜೆಯ ಆಸನಗಳನ್ನೂ ಸೆಣಬಿನಿಂದಲೇ ಸಿದ್ಧಪಡಿಸಲಾಗುತ್ತದೆ. ಮುಖ್ಯ ದ್ವಾರದಲ್ಲಿ ಈ ಮ್ಯಾಟ್ ಹಾಕುವುದರಿಂದ, ಜಾತಕದಲ್ಲಿನ ರಾಹು ಮತ್ತು ಕೇತು ದೋಷಗಳ ಋಣಾತ್ಮಕ ಪರಿಣಾಮಗಳು ಮನೆಗೆ ಪ್ರವೇಶಿಸದಂತೆ ತಡೆಯಬಹುದು ಎಂಬ ನಂಬಿಕೆಯಿದೆ.

ಇದನ್ನೂ ಓದಿ: ಗರುಡ ಪುರಾಣದ ಪ್ರಕಾರ ಈ 4 ಕೆಟ್ಟ ಅಭ್ಯಾಸಗಳಿದ್ದರೆ ಕೋಟ್ಯಧಿಪತಿಯೂ ಭಿಕ್ಷುಕನಾಗುತ್ತಾನೆ!

ಬಣ್ಣದ ಆಯ್ಕೆ:

ಮನೆಯ ಬಾಗಿಲಿಗೆ ಡೋರ್‌ಮ್ಯಾಟ್ ಆಯ್ಕೆ ಮಾಡುವಾಗ ಅದರ ಬಣ್ಣವೂ ಮುಖ್ಯ ಪಾತ್ರ ವಹಿಸುತ್ತದೆ. ವಾಸ್ತು ಪ್ರಕಾರ, ಹಸಿರು ಬಣ್ಣದ ಡೋರ್‌ಮ್ಯಾಟ್ ಅತ್ಯುತ್ತಮ ಆಯ್ಕೆಯಾಗಿದೆ. ಹಸಿರು ಪ್ರಕೃತಿಯ ಸಂಕೇತವಾಗಿದ್ದು, ಇದು ಮನಸ್ಸಿಗೆ ಪ್ರಶಾಂತತೆ ನೀಡುವುದಲ್ಲದೆ ಸಕಾರಾತ್ಮಕ ಶಕ್ತಿಯನ್ನು ಸೆಳೆಯುತ್ತದೆ. ಹಸಿರು ಬಣ್ಣದ ಚಾಪೆಯು ಮುಖ್ಯ ದ್ವಾರವನ್ನು ಎದ್ದು ಕಾಣುವಂತೆ ಮಾಡುತ್ತದೆ, ಇದು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯ ಆಗಮನಕ್ಕೆ ಅತ್ಯಂತ ಪೂರಕ ವಾತಾವರಣವನ್ನು ನಿರ್ಮಿಸುತ್ತದೆ.

ಆಕಾರದ ಮಹತ್ವ:

ಡೋರ್‌ಮ್ಯಾಟ್‌ನ ಗಾತ್ರ ಮತ್ತು ಆಕಾರವು ಮನೆಯಲ್ಲಿನ ಶಕ್ತಿಯ ಸ್ಥಿರತೆಯನ್ನು ನಿರ್ಧರಿಸುತ್ತದೆ. ಸಾಮಾನ್ಯವಾಗಿ ಆಯತಾಕಾರದ (Rectangular) ಡೋರ್‌ಮ್ಯಾಟ್‌ಗಳನ್ನು ಬಳಸುವುದು ಮನೆಗೆ ಸ್ಥಿರತೆ ಮತ್ತು ನಿರಂತರ ಪ್ರಗತಿಯನ್ನು ತರುತ್ತದೆ. ಒಂದು ವೇಳೆ ನಿಮ್ಮ ಮನೆಯ ಮುಖ್ಯ ಬಾಗಿಲು ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿದ್ದರೆ, ನೀವು ದುಂಡಗಿನ (Round) ಆಕಾರದ ಡೋರ್‌ಮ್ಯಾಟ್ ಅನ್ನು ಸಹ ಬಳಸಬಹುದು. ಧಾರ್ಮಿಕ ದೃಷ್ಟಿಕೋನದಿಂದ ಈ ಎರಡು ಆಕಾರಗಳನ್ನು ಅತ್ಯಂತ ಮಂಗಳಕರ ಎಂದು ಹೇಳಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅವನು ನನ್ನ ಆತ್ಮೀಯ ಗೆಳೆಯ: ದಿನೇಶ್ ಕಾರ್ತಿಕ್ ಬಗ್ಗೆ ಮುರಳಿ ವಿಜಯ್ ಭಾವುಕ! – Kannada News | Murali Vijay Calls Dinesh Karthik Dear Friend

ಟೀಮ್ ಇಂಡಿಯಾದ ಮಾಜಿ ಆಟಗಾರ ಮುರಳಿ ವಿಜಯ್ ಅವರು ತಮ್ಮ ಹಳೆಯ ಸಹ-ಆಟಗಾರ ದಿನೇಶ್ ಕಾರ್ತಿಕ್ ಬಗ್ಗೆ ಸಾರ್ವಜನಿಕ ವೇದಿಕೆಯೊಂದರಲ್ಲಿ ಅತ್ಯಂತ ಭಾವುಕರಾಗಿ ಮಾತನಾಡಿದ್ದಾರೆ. ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ (TNCA) ಆಯೋಜಿಸಿದ್ದ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿದ್ದ ಮುರಳಿ ವಿಜಯ್, ದಿನೇಶ್ ಕಾರ್ತಿಕ್​ ಜೊತೆಗಿನ ತಮ್ಮ ಹಳೆಯ ಸ್ನೇಹ ಮತ್ತು ಅವರ ಕ್ರಿಕೆಟ್ ಕೊಡುಗೆಯನ್ನು ಮೆಲುಕು ಹಾಕಿದರು.

“ಅವನೊಬ್ಬ ಅದ್ಭುತ ಗೆಳೆಯ”

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮುರಳಿ ವಿಜಯ್, “ದಿನೇಶ್ ಕಾರ್ತಿಕ್ ಬಗ್ಗೆ ನಾನು ಇಲ್ಲಿ ಮಾತನಾಡುವುದು ಕೆಲವರಿಗೆ ಸ್ವಲ್ಪ ವಿಚಿತ್ರ ಎನಿಸಬಹುದು. ಆದರೆ ನಾನು ಅವರನ್ನು ನನ್ನ ಬಾಲ್ಯದಿಂದಲೂ ಬಲ್ಲೆ. ಅವರು ಅತ್ಯಂತ ಅದ್ಭುತ ವ್ಯಕ್ತಿತ್ವ ಹೊಂದಿರುವ ನನ್ನ ಅತ್ಯಂತ ಆತ್ಮೀಯ ಗೆಳೆಯ” ಎಂದು ಬಣ್ಣಿಸಿದರು.

ಮುಂದುವರಿದು ಮಾತನಾಡಿದ ಮುರಳಿ ವಿಜಯ್, “ಕಾರ್ತಿಕ್ ಅವರ ಅದ್ಭುತ ಕ್ರಿಕೆಟ್ ಜ್ಞಾನದಿಂದ ನನಗೆ ವೈಯಕ್ತಿಕವಾಗಿ ಸಾಕಷ್ಟು ಸಹಾಯವಾಗಿದೆ. ಅದಕ್ಕಾಗಿ ನಾನು ಅವರಿಗೆ ಸದಾ ಧನ್ಯವಾದ ಅರ್ಪಿಸುತ್ತೇನೆ. ದಿನೇಶ್ ಕಾರ್ತಿಕ್ ಅವರ ಶೈಲಿಯಲ್ಲಿ ಆಡುವುದನ್ನು ನಾನು ಇದುವರೆಗೆ ಬೇರೆ ಯಾವೊಬ್ಬ ಆಟಗಾರನಲ್ಲೂ ನೋಡಿಲ್ಲ” ಎಂದು ಗುಣಗಾನ ಮಾಡಿದರು.

ಗೆಳೆಯರು ದೂರವಾಗಲು ಕಾರಣವೇನು?

ಮುರಳಿ ವಿಜಯ್ ಅವರ ಈ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಲು ಇಬ್ಬರ ನಡುವಿನ ಹಳೆಯ ವೈಯಕ್ತಿಕ ಇತಿಹಾಸವೇ ಕಾರಣ. ತಮಿಳುನಾಡು ದೇಶಿ ಕ್ರಿಕೆಟ್ ತಂಡದಲ್ಲಿ ಒಟ್ಟಿಗೆ ಬೆಳೆದ ಇವರಿಬ್ಬರು ಆತ್ಮೀಯ ಸ್ನೇಹಿತರಾಗಿದ್ದರು.

ಆದರೆ, 2012ರ ಆಸುಪಾಸಿನಲ್ಲಿ ದಿನೇಶ್ ಕಾರ್ತಿಕ್ ಅವರ ಮೊದಲ ಪತ್ನಿ ನಿಕಿತಾ ಮತ್ತು ಮುರಳಿ ವಿಜಯ್ ನಡುವೆ ಪ್ರೇಮ ಸಂಬಂಧ ಏರ್ಪಟ್ಟಿತ್ತು. ಈ ವಿಷಯ ತಿಳಿದ ತಕ್ಷಣ ದಿನೇಶ್ ಕಾರ್ತಿಕ್ ಅವರು ನಿಕಿತಾ ಅವರಿಗೆ ವಿಚ್ಛೇದನ ನೀಡಿದರು.  ಆ ನಂತರ ನಿಕಿತಾ ಮತ್ತು ಮುರಳಿ ವಿಜಯ್ ವಿವಾಹವಾದರು.

ಈ ಘಟನೆಯ ಬಳಿಕ ಇಬ್ಬರ ನಡುವಿನ ದಶಕಗಳ ಸ್ನೇಹ ಸಂಪೂರ್ಣವಾಗಿ ಮುರಿದು ಬಿದ್ದಿತ್ತು. ಇದಾದ ನಂತರ ಇಬ್ಬರೂ ಭಾರತ ತಂಡದಲ್ಲಿದ್ದಾಗಲೂ ಪರಸ್ಪರ ಮಾತನಾಡುತ್ತಿರಲಿಲ್ಲ.

ಡಿಕೆ ಹೊಸ ಇನಿಂಗ್ಸ್​:

ಕಾಲ ಕಳೆದಂತೆ ಇಬ್ಬರೂ ತಮ್ಮ ಜೀವನದಲ್ಲಿ ಮುಂದೆ ಸಾಗಿದ್ದಾರೆ. ದಿನೇಶ್ ಕಾರ್ತಿಕ್ ಅವರು ಭಾರತದ ಖ್ಯಾತ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಅವರನ್ನು ವಿವಾಹವಾಗಿ ಸುಖಿ ಸಂಸಾರ ನಡೆಸುತ್ತಿದ್ದಾರೆ.

2024 ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿರುವ ದಿನೇಶ್ ಕಾರ್ತಿಕ್, ಪ್ರಸ್ತುತ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಬ್ಯಾಟಿಂಗ್ ಕೋಚ್ ಹಾಗೂ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: ಇತಿಹಾಸದಲ್ಲೇ ಮೊದಲು… ಟೀಮ್ ಇಂಡಿಯಾ ಕ್ಯಾಪ್ಟನ್ ಹೆಗಲಿಗೆ ಬೇಡದ ದಾಖಲೆ!

ಇದೀಗ ದಿನೇಶ್ ಕಾರ್ತಿಕ್ ಹಾಗೂ ಮುರಳಿ ವಿಜಯ್ ನಡುವಣ ಸ್ನೇಹದ ‘ಕಥೆ’ ಮತ್ತೆ ಮುನ್ನಲೆಗೆ ಬಂದಿದೆ. ವರ್ಷಗಳ ಕಾಲ ಇಬ್ಬರ ನಡುವೆ ಇದ್ದ ಕಹಿಯನ್ನು ಮರೆತು, ಮುರಳಿ ವಿಜಯ್ ಅವರು ಸಾರ್ವಜನಿಕವಾಗಿ ದಿನೇಶ್ ಕಾರ್ತಿಕ್ ಅವರನ್ನು “ಆತ್ಮೀಯ ಗೆಳೆಯ” ಎಂದು ಕರೆದಿರುವುದು ಇದೀಗ ಸೋಷಿಯಲ್ ಮೀಡಿಯಾ ಚರ್ಚೆಗೆ ಕಾರಣವಾಗಿದೆ.

Source link

ಇರಾನ್ ಜನರು ಖಮೇನಿಯನ್ನು ದ್ವೇಷಿಸುತ್ತಾರೆ ಅಂದುಕೊಂಡಿದ್ದೆ, ಆದರೆ : ಡೊನಾಲ್ಡ್ ಟ್ರಂಪ್ ಆಶ್ಚರ್ಯ – Kannada News | Trump Stunned by Iran Khamenei Funeral Crowds: Millions Mourn Slain Leader

ವಾಷಿಂಗ್ಟನ್, ಜುಲೈ 05: ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಲಕ್ಷಾಂತರ ಜನರು ಭಾಗವಹಿಸಿ ಕಣ್ಣೀರು ಹಾಕುತ್ತಿರುವುದನ್ನು ನೋಡಿ ತಮಗೆ ಆಘಾತವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಹೇಳಿದ್ದಾರೆ. ಇರಾನ್‌ನೊಳಗೆ ಪರಿಸ್ಥಿತಿ ತದ್ವಿರುದ್ಧವಾಗಿರುತ್ತದೆ ಎಂದು ತಾವು ನಿರೀಕ್ಷಿಸಿದ್ದಾಗಿ ಅವರು ತಿಳಿಸಿದ್ದಾರೆ.

ಅಂತ್ಯಕ್ರಿಯೆಯ ದೃಶ್ಯಗಳ ಕುರಿತು ಆಕ್ಸಿಯಾಸ್ ಸಂಸ್ಥೆಯೊಂದಿಗೆ ಮಾತನಾಡಿದ ಟ್ರಂಪ್, ಅಲ್ಲಿನ ಜನಸಾಗರ ನೋಡಿ ನನಗೆ ಆಘಾತವಾಯಿತು. ಇರಾನ್‌ನ ಜನರು ಖಮೇನಿಯನ್ನು ದ್ವೇಷಿಸುತ್ತಾರೆ ಎಂದೇ ನಾನು ಭಾವಿಸಿದ್ದೆ ಎಂದು ತಮ್ಮ ಆಶ್ಚರ್ಯವನ್ನು ಹೊರಹಾಕಿದ್ದಾರೆ.

ಟೆಹ್ರಾನ್‌ನಲ್ಲಿ ಹರಿದುಬಂದ ಜನಸಾಗರ
ಶನಿವಾರ ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಖಮೇನಿ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳು ಆರಂಭವಾಗಿದ್ದು, ಲಕ್ಷಾಂತರ ಶೋಕತಪ್ತರು ಜಮಾಯಿಸಿದ್ದಾರೆ. ಜನರು ಖಮೇನಿ ಅವರ ಚಿತ್ರವಿರುವ ಬ್ಯಾನರ್‌ಗಳನ್ನು ಹಿಡಿದು, ನಮ್ಮ ಮಾತು ಒಂದೇ ಸೇಡು ಸೇಡು ಎಂದು ಘೋಷಣೆ ಕೂಗುತ್ತಿದ್ದಾರೆ. ಶಿಯಾ ಸಂಪ್ರದಾಯದಂತೆ ಪುರುಷರ ಗುಂಪುಗಳು ದುಃಖದಿಂದ ಎದೆಗೆ ಬಡಿದುಕೊಳ್ಳುತ್ತಿರುವುದು ಕಂಡುಬಂದಿದೆ.

ಮತ್ತಷ್ಟು ಓದಿ: ಅಮೆರಿಕ ಮತ್ತು ಇರಾನ್ ನಡುವೆ ಉತ್ತಮ ಬಾಂಧವ್ಯವಿದೆ; ಡೊನಾಲ್ಡ್ ಟ್ರಂಪ್ ಮಹತ್ವದ ಹೇಳಿಕೆ

1989 ರಿಂದ ಇರಾನ್ ಅನ್ನು ಮುನ್ನಡೆಸಿದ್ದ 86 ವರ್ಷದ ಖಮೇನಿ ಅವರು, ಇರಾನ್-ಇಸ್ರೇಲ್ ಯುದ್ಧದ ಆರಂಭದಲ್ಲಿ ನಡೆದ ಇಸ್ರೇಲಿ ದಾಳಿಯಲ್ಲಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಹತರಾಗಿದ್ದರು. ಯುದ್ಧದ ತೀವ್ರತೆಯ ಕಾರಣದಿಂದಾಗಿ ಇಷ್ಟು ದಿನ ಅವರ ಅಂತ್ಯಕ್ರಿಯೆಯನ್ನು ಮುಂದೂಡಲಾಗಿತ್ತು.

ಖಮೇನಿ ಅವರ ಪಾರ್ಥಿವ ಶರೀರವನ್ನು ಮೂರು ದಿನಗಳ ಕಾಲ ಟೆಹ್ರಾನ್‌ನಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಜುಲೈ 7 (ಮಂಗಳವಾರ), ಪವಿತ್ರ ನಗರವಾದ ಕೋಮ್‌ಗೆ ಕೊಂಡೊಯ್ಯಲಾಗುವುದು. ಬುಧವಾರ ನೆರೆಯ ದೇಶವಾದ ಇರಾಕ್‌ನಲ್ಲಿ ಮೆರವಣಿಗೆ ನಡೆಸಲಾಗುವುದು.

ಗುರುವಾರ: ಅವರ ಹುಟ್ಟೂರಾದ ಮಶಾದ್‌ನಲ್ಲಿ ಸಮಾಧಿ ಮಾಡಲಾಗುವುದು. ದಾಳಿಯಲ್ಲಿ ಮೃತಪಟ್ಟ ಅವರ ಮಗಳು, ಅಳಿಯ ಹಾಗೂ ಮೊಮ್ಮಗಳ ಪಕ್ಕದಲ್ಲೇ ಖಮೇನಿ ಅವರನ್ನು ಹೂಳಲಾಗುವುದು.

ತಂದೆಯ ಅಂತ್ಯಕ್ರಿಯೆಗೆ ಗೈರಾದ ಹೊಸ ಸುಪ್ರೀಂ ಲೀಡರ್
ಇರಾನ್‌ನ ಪ್ರಸ್ತುತ ಹೊಸ ಸರ್ವೋಚ್ಚ ನಾಯಕ ಹಾಗೂ ಖಮೇನಿ ಅವರ ಪುತ್ರರಾದ ಮೊಜ್ತಬಾ ಖಮೇನಿ ಅವರು ಭದ್ರತಾ ಕಾರಣಗಳಿಂದಾಗಿ ತಮ್ಮ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸುತ್ತಿಲ್ಲ. ಇಸ್ರೇಲ್‌ನ ನಿರಂತರ ಬೆದರಿಕೆ ಹಾಗೂ ಕಣ್ಗಾವಲು ಇರುವುದರಿಂದ, ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಅಪಾಯಕಾರಿ ಎಂದು ಭಾರತದಲ್ಲಿನ ಇರಾನ್ ಪ್ರತಿನಿಧಿ ಅಯತೊಲ್ಲಾ ಹಕೀಮ್ ಇಲಾಹಿ ಸ್ಪಷ್ಟಪಡಿಸಿದ್ದಾರೆ.

ಇರಾನ್‌ಗೆ ಈ ಅಂತ್ಯಕ್ರಿಯೆ ಏಕೆ ಮುಖ್ಯ?
ಈ ಭಾರಿ ಅಂತ್ಯಕ್ರಿಯೆಯು ಇರಾನ್‌ನ ಹೊಸ ನಾಯಕತ್ವಕ್ಕೆ ಮತ್ತು ಅಲ್ಲಿನ ಆಡಳಿತಕ್ಕೆ ಹೊಸ ಶಕ್ತಿ ನೀಡುವ ಸಾಧ್ಯತೆಯಿದೆ. ಸದ್ಯ ಇರಾನ್ ಹಾರ್ಮುಜ್ ಜಲಸಂಧಿಯ ಮೇಲಿನ ತನ್ನ ಹಿಡಿತವನ್ನು ಬಳಸಿಕೊಂಡು, ಯುದ್ಧವನ್ನು ಶಾಶ್ವತವಾಗಿ ಕೊನೆಗೊಳಿಸಲು ಅಮೆರಿಕದೊಂದಿಗೆ ಮಾತುಕತೆ ನಡೆಸಲು ಪ್ರಯತ್ನಿಸುತ್ತಿದೆ. ಮತ್ತೊಂದೆಡೆ ಇಸ್ರೇಲ್ ಮತ್ತೆ ದಾಳಿ ಮಾಡಬಹುದು ಎಂಬ ಆತಂಕವೂ ಇರಾನ್ ಅನ್ನು ಕಾಡುತ್ತಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Video: ಮಗಳ ಮಾರ್ಗದರ್ಶನದಲ್ಲಿ ಅಮೆಜಾನ್‌ನಲ್ಲಿ ಆರ್ಡರ್ ಮಾಡುವುದನ್ನು ಕಲಿತ ತಾಯಿ – Kannada News | A mother learned how to place orders on Amazon under her daughter’s guidance.

ಹೆಚ್ಚಿನ ತಂದೆ ತಾಯಿ, ಅಜ್ಜ ಅಜ್ಜಿಯಂದಿರಿಗೆ ಸ್ಮಾರ್ಟ್ ಫೋನ್ ಬಳಕೆ ಅಷ್ಟೊಂದು ತಿಳಿದಿಲ್ಲ. ಆದರೆ ಈಗಿನ ಮಕ್ಕಳು ಮನೆಯಲ್ಲಿ ತಂದೆ ತಾಯಿ ಅಥವಾ ಅಜ್ಜ ಅಜ್ಜಿಯಂದಿರು ಇದ್ದರೆ ಅವರಿಗೆ ಸ್ಮಾರ್ಟ್ ಫೋನ್ (smart phone) ಹಾಗೂ ಕಂಪ್ಯೂಟರ್ ಬಳಕೆ ಹೀಗೆ ಹತ್ತು ಹಲವು ವಿಷಯಗಳನ್ನು ಹೇಳಿ ಕೊಡುವುದನ್ನು ನೋಡಬಹುದು. ಇದೀಗ ಇಂತಹದ್ದೇ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದೆ. ಅಮೆಜಾನ್‌ನಲ್ಲಿ (amazon) ಆರ್ಡರ್ ಮಾಡುವುದು ಹೇಗೆಂದು ತನ್ನ ತಾಯಿಗೆ ಕಲಿಸುತ್ತಿರುವ ಯುವತಿಯ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಈ ಕ್ಲಿಪಿಂಗ್‌ಗೆ ಫಿದಾ ಆಗಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಿಧಿ ಚೌಧರಿ (nikum_diaries) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ಗೆ ತಂತ್ರಜ್ಞಾನದ ಬಗ್ಗೆ ಸಣ್ಣಪುಟ್ಟ ವಿಷಯಗಳನ್ನು ಅವಳಿಗೆ ಕಲಿಸುವುದು ನನಗೆ ತುಂಬಾ ಇಷ್ಟ. ಇಂದು, ನಾನು ಅವಳಿಗೆ ಅಮೆಜಾನ್ ನಿಂದ ಹೇಗೆ ಆರ್ಡರ್ ಮಾಡಬೇಕೆಂದು ಕಲಿಸಿದೆ. ಅವಳು ತನ್ನ 2002 ರಿಂದ ತನ್ನ ದಿನಚರಿಯಲ್ಲಿ ಪ್ರತಿ ಕೆಲಸವನ್ನು ಎಚ್ಚರಿಕೆಯಿಂದ ಬರೆದಿದ್ದಾಳೆ ಎಂದು ಶೀರ್ಷಿಕೆ ನೀಡಲಾಗಿದೆ.

ವೈರಲ್‌ ವಿಡಿಯೋ ಇಲ್ಲಿದೆ

ಯುವತಿ ಅಮೆಜಾನ್‌ನಿಂದ ಆರ್ಡರ್ ಮಾಡುವ ಪ್ರಕ್ರಿಯೆಯನ್ನು ಹಂತ ಹಂತವಾಗಿ ವಿವರಿಸುವುದನ್ನು ಕಾಣಬಹುದು. ಯುವತಿಯ ತಾಯಿ ಬಹಳ ಎಚ್ಚರಿಕೆಯಿಂದ ಆಲಿಸುತ್ತಾ, ತನ್ನ 2002ರ ಹಳೆಯ ಡೈರಿಯಲ್ಲಿ ಪ್ರತಿ ಸೂಚನೆಯನ್ನು ಬರೆದಿಡುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ: ಆರ್ಡರ್‌ನ್ನು ಮನೆಗೆ ತಲುಪಿಸಿದ ಡೆಲಿವರಿ ಬಾಯ್‌ಗೆ 500 ರೂ ಟಿಪ್ಸ್ ಕೊಟ್ಟ ಯುವತಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಿಮ್ಮ ತಾಯಿಯ ಕೈ ಬರಹ ನನ್ನ ತಾಯಿಯ ಕೈಬರಹವನ್ನು ಹೋಲುತ್ತದೆ. ದಯವಿಟ್ಟು ಇಂದು ನಿಮ್ಮ ತಾಯಿಗೆ ನನ್ನದೊಂದು ಅಪ್ಪುಗೆ ನೀಡಿ ಎಂದಿದ್ದಾರೆ. ಇನ್ನೊಬ್ಬರು, ಈ ವಯಸ್ಸಿನಲ್ಲಿ ಕಲಿಯುವ ಮನಸ್ಸು ಇರುವುದು ನಿಜಕ್ಕೂ ಖುಷಿಯ ವಿಚಾರ ಎಂದು ಹೇಳಿದ್ದಾರೆ. ಮತ್ತೊಬ್ಬರು, ಹೊಸದ್ದನ್ನು ಕಲಿಯುವ ನಿಮ್ಮ ತಾಯಿಯ ಉತ್ಸಾಹಕ್ಕೆ ನನ್ನದೊಂದು ಸಲಾಂ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Gold Rate: ಚಿನ್ನದ ಬೆಲೆ 25 ರೂ ಇಳಿಕೆ; 13,450 ರೂಗೆ ಇಳಿದ ಆಭರಣ ಚಿನ್ನದ ಬೆಲೆ – Kannada News | Gold Price Today on 5th July 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಜುಲೈ 5: ಈ ವಾರ ಸಖತ್ ಏರಿದ್ದ ಚಿನ್ನದ ಬೆಲೆ (Gold Rates) ವಾರಾಂತ್ಯದಲ್ಲಿ ತುಸು ಶಾಂತಗೊಂಡಿದೆ. ಗ್ರಾಮ್​ಗೆ 25 ರೂ ಕಡಿಮೆ ಆಗಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಬೆಲೆಯಲ್ಲಿ ಅಲ್ಪ ವ್ಯತ್ಯಯ ಆಗಿದೆ. ಬೆಳ್ಳಿ ಬೆಲೆಯಲ್ಲಿ ಬದಲಾವಣೆ ಆಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,34,500 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,46,730 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,34,500 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 25,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 26,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜುಲೈ 5ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,673 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,450 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,005 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,673 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,450 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,450 ರೂ
  • ಚೆನ್ನೈ: 13,700 ರೂ
  • ಮುಂಬೈ: 13,450 ರೂ
  • ದೆಹಲಿ: 13,465 ರೂ
  • ಕೋಲ್ಕತಾ: 13,450 ರೂ
  • ಕೇರಳ: 13,450 ರೂ
  • ಅಹ್ಮದಾಬಾದ್: 13,455 ರೂ
  • ಜೈಪುರ್: 13,465 ರೂ
  • ಲಕ್ನೋ: 13,465 ರೂ
  • ಭುವನೇಶ್ವರ್: 13,450 ರೂ

ಇದನ್ನೂ ಓದಿ: ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ: ಜುಲೈನಲ್ಲಿ 80ನೇ ಸ್ಥಾನಕ್ಕೆ ಕುಸಿದ ಭಾರತ; 56 ದೇಶಗಳಿಗೆ ವೀಸಾ ರಹಿತ ಪ್ರವೇಶ

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 562 ರಿಂಗಿಟ್ (13,142 ರುಪಾಯಿ)
  • ದುಬೈ: 501.75 ಡಿರಾಮ್ (13,009 ರುಪಾಯಿ)
  • ಅಮೆರಿಕ: 137.50 ಡಾಲರ್ (13,093 ರುಪಾಯಿ)
  • ಸಿಂಗಾಪುರ: 183.80 ಸಿಂಗಾಪುರ್ ಡಾಲರ್ (13,551 ರುಪಾಯಿ)
  • ಕತಾರ್: 503.50 ಕತಾರಿ ರಿಯಾಲ್ (13,152 ರೂ)
  • ಸೌದಿ ಅರೇಬಿಯಾ: 518 ಸೌದಿ ರಿಯಾಲ್ (13,138 ರುಪಾಯಿ)
  • ಓಮನ್: 53.40 ಒಮಾನಿ ರಿಯಾಲ್ (13,209 ರುಪಾಯಿ)
  • ಕುವೇತ್: 42.14 ಕುವೇತಿ ದಿನಾರ್ (12,996 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 250 ರೂ
  • ಚೆನ್ನೈ: 260 ರೂ
  • ಮುಂಬೈ: 250 ರೂ
  • ದೆಹಲಿ: 250 ರೂ
  • ಕೋಲ್ಕತಾ: 250 ರೂ
  • ಕೇರಳ: 260 ರೂ
  • ಅಹ್ಮದಾಬಾದ್: 250 ರೂ
  • ಜೈಪುರ್: 250 ರೂ
  • ಲಕ್ನೋ: 250 ರೂ
  • ಭುವನೇಶ್ವರ್: 260 ರೂ
  • ಪುಣೆ: 250

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಜನವಸತಿ ಪ್ರದೇಶದ ಸಮೀಪವೇ ಅಕ್ರಮ ಗಣಿಗಾರಿಕೆ ಆರೋಪ: ಎಲ್ಲೆಂದರಲ್ಲಿ ಸಿಗುತ್ತಿವೆ ಬ್ಲಾಸ್ಟಿಂಗ್​​ ಪರಿಕರಗಳು! – Kannada News | Illegal Mining Havoc in Mangaluru: Detonators Found Openly in Residential Area

ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿದೆ ಎನ್ನಲಾದ ಕ್ರಷರ್​​ Image Credit source: Tv9 Kannada

ಮಂಗಳೂರು, ಜುಲೈ 05: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಪಜೀರು ಕೊಪ್ಪಳ ಗ್ರಾಮದಲ್ಲಿ ಬ್ಲಾಸ್ಟಿಂಗ್ ನಡೆಯುತ್ತಿದ್ದು, ಸರ್ಕಾರಿ ಜಾಗದಲ್ಲಿ ಕಳೆದ 40 ವರ್ಷದಿಂದ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಸರ್ವೆ ನಂ 178, 179ರಲ್ಲಿ ಅಕ್ರಮ ಗಣಿಗಾರಿಕೆ ಮಾಡಲಾಗುತ್ತಿದ್ದು, ಪಕ್ಕದಲ್ಲೇ ಬರೋಬ್ಬರಿ 25 ವರ್ಷಗಳಿಂದ ಕಾನೂನು ಬಾಹಿರವಾಗಿ ಕ್ರಷರ್​​ ಕಾರ್ಯನಿರ್ವಹಿಸುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ. ಈ ಪ್ರದೇಶದಲ್ಲಿ ಹಗಲು-ರಾತ್ರಿ ಎನ್ನದೆ ಸ್ಫೋಟಕ ಬಳಸಿ ಬ್ಲಾಸ್ಟಿಂಗ್ ಮಾಡಲಾಗುತ್ತಿದ್ದು, ಎಲ್ಲವನ್ನೂ ಕಂಡೂ ಕಾಣದಂತಿರುವ ಸಂಬಂಧ ಪಟ್ಟ ಅಧಿಕಾರಿಗಳ ದಿವ್ಯ ಮೌನದ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಗಣಿಗಾರಿಕೆ ಸ್ಥಳದ ಸಮೀಪವೇ ಇವೆ ಮನೆಗಳು

ಇನ್ನು ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಸಮೀಪದಲ್ಲೇ ಶಾಲೆ, ಮನೆ, ಧಾರ್ಮಿಕ ಕೇಂದ್ರಗಳಿವೆ. ನಾನ್ ಎಲೆಕ್ಟ್ರಿಕ್ ಡಿಟೋನೇಟರ್​​ಗಳನ್ನು ಗಣಿದಣಿಗಳು ಸಿಕ್ಕ ಸಿಕ್ಕ ಕಡೆ ಬಚ್ಚಿಟ್ಟಿದ್ದು, ಬ್ಲಾಸ್ಟಿಂಗ್​​ ಪರಿಕರಗಳು ಜನ ವಸತಿ ಪ್ರದೇಶದ ಸುತ್ತಮುತ್ತವೇ ಸಿಗುತ್ತಿವೆ. ಶಾಲಾ ಮಕ್ಕಳು ಓಡಾಡುವ ಜಾಗದ ಸಮೀಪವೇ ಇವುಗಳನ್ನು ಇಡುತ್ತಿರೋದು ಆತಂಕ ಹೆಚ್ಚಿಸಿದೆ. ಒಂದೊಮ್ಮೆ ದಾಳಿ ನಡೆದರೆ ಕೇಸ್ ಆಗಬಾರದು ಎಂದು ಸಾರ್ವಜನಿಕ ಜಾಗಗಳಲ್ಲಿ ಇವುಗಳನ್ನು ದಂಧೆಕೋರರು ಅಡಗಿಸಿಡುತ್ತಿದ್ದಾರೆ ಎಂಬ ಮಾಹಿತಿ ಇದೆ.

ಇದನ್ನೂ ಓದಿ: ಮಂಗಳೂರು ಚಿನ್ನದ ಉದ್ಯಮಿ ದರೋಡೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಆ ಒಂದು ಗೋಲ್ಡ್ ಬಿಸ್ಕತ್‌ಗಾಗಿ ಇಡೀ ಕಾರನ್ನೇ ಜಾಲಾಡಿದ ದರೋಡೆಕೋರರು

ಗಣಿಗಾರಿಕೆಗಾಗಿ ನೇತ್ರಾವತಿ ಉಪನದಿಯೇ ಬಂದ್!

ಗಣಿದಣಿಗಳ ಹಾವಳಿ ಈ ಪ್ರದೇಶದಲ್ಲಿ ಎಷ್ಟಿದೆಯಂದರೆ ಕೃಷಿ ಚಟುವಟಿಕೆಗಳಿಗೆ ನೀರುಣಿಸುತ್ತಿದ್ದ ನೇತ್ರಾವತಿಯ ಉಪ ನದಿಯೇ ಬಂದ್​​ ಆಗಿದೆ. ಗಣಿ-ಕ್ರಷರ್ ವೇಸ್ಟೇಜ್ ತುಂಬಿದ ಪರಿಣಾಮ ನೀರು ಹರಿಯುವಿಕೆಗೆ ಸಮಸ್ಯೆಯಾಗಿದೆ. ಈ ಬಗ್ಗೆ ಸಾಕಷ್ಟು ಭಾರಿ ಜಿಲ್ಲಾಡಳಿತ ಮತ್ತು ವಿವಿಧ ಇಲಾಖೆಗೆ ದೂರು ನೀಡಿದ್ರು ಇಲಾಖೆಗಳು ಮಾತ್ರ ಕೈಕಟ್ಟಿ ಕುಳಿತಿವೆ ಎಂಬ ಆರೋಪವೂ ಸ್ಥಳೀಯರಿಂದ ಕೇಳಿಬಂದಿದೆ. ಕ್ರಷರ್​​ಗಳ ಶಬ್ದದಿಂದ ಈ ಪ್ರದೇಶದಲ್ಲಿ ಶಬ್ದ ಮಾಲಿನ್ಯ ಉಂಟಾಗುತ್ತಿರುವ ಜೊತೆಗೆ, ಬ್ಲಾಸ್ಟ್​​ ವೇಳೆ ಭೂಕಂಪನದ ಅನುಭವ ಆಗುತ್ತಿದೆ. ಸಿಡಿದ ಕಲ್ಲುಗಳು ಮನೆಗಳ ಮೇಲೆ ಬಿದ್ದು ಹಾನಿಯಾಗಿರುವ ಘಟನೆಗಳೂ ನಡೆದಿವೆ ಎಂಬುದು ಇಲ್ಲಿನ ನಿವಾಸಿಗಳ ಅಳಲು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version