ನಟ ಆಮಿರ್ ಖಾನ್ ಮೂರನೇ ಮದುವೆ: ಭಾರಿ ಮಳೆಯಲ್ಲೇ ಸಿಂಗಾರಗೊಂಡ ಪಾಲಿ ಹಿಲ್ ನಿವಾಸ – Kannada News | Aamir Khan third Wedding With Gauri Spratt Pali Hill Home Decoration

ಬಾಲಿವುಡ್‌ ನಟ ಆಮಿರ್ ಖಾನ್ (Aamir Khan) ತಮ್ಮ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ. 60 ವರ್ಷದ ನಟ ಆಮಿರ್ ಖಾನ್ ಅವರು ತಮ್ಮ ಪ್ರೇಯಸಿ ಗೌರಿ ಸ್ಪ್ರ್ಯಾಟ್ (Gauri Spratt) ಅವರೊಂದಿಗೆ ಇಂದು (ಜುಲೈ 5) ಮೂರನೇ ಮದುವೆ ಆಗುತ್ತಿದ್ದಾರೆ. ನಟನ ಮದುವೆಯ ಸಂಭ್ರಮದ ಸಿದ್ಧತೆಗಳು ಶನಿವಾರವೇ ಜೋರಾಗಿ ನಡೆಯಿತು. ಭಾರಿ ಮಳೆಯ ನಡುವೆಯೂ ಮದುವೆ ತಯಾರಿ ನಡೆದ ವಿಡಿಯೋಗಳು ವೈರಲ್ ಆಗಿವೆ.

ಮುಂಬೈನ ಪಾಲಿ ಹಿಲ್‌ನಲ್ಲಿರುವ ಆಮಿರ್ ಖಾನ್ ಅವರ ನಿವಾಸದಲ್ಲಿ ಮದುವೆ ಶಾಸ್ತ್ರಗಳು ನೆರವೇರಲಿದ್ದು, ಇಡೀ ಮನೆಯನ್ನು ವಿದ್ಯುತ್ ದೀಪಗಳಿಂದ ಹಾಗೂ ಸುಂದರವಾದ ಅಲಂಕಾರಿಕ ವಸ್ತುಗಳಿಂದ ಸಿಂಗರಿಸಲಾಗುತ್ತಿದೆ. ಮುಂಬೈನಲ್ಲಿ ಭಾರೀ ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ, ಕಾರ್ಮಿಕರು ರೇನ್‌ಕೋಟ್ ಧರಿಸಿ ಮದುವೆಗೆ ಬೇಕಾದ ಪೀಠೋಪಕರಣಗಳು ಹಾಗೂ ಅಲಂಕಾರಿಕ ಸಾಮಗ್ರಿಗಳನ್ನು ಜೋಡಿಸುತ್ತಿರುವ ದೃಶ್ಯಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ.

ಮದುವೆ ಬಗ್ಗೆ ಆಮಿರ್ ಖಾನ್ ಹೇಳಿದ್ದೇನು?

ಇತ್ತೀಚೆಗೆ ನಿರ್ದೇಶಕ ರಾಜ್ಕುಮಾರ್ ಹಿರಾನಿ ಅವರ ‘ಪ್ರೀತಮ್ ಆ್ಯಂಡ್ ಪೆಡ್ರೋ’ ಚಿತ್ರದ ಪ್ರದರ್ಶನದಲ್ಲಿ ಭಾಗವಹಿಸಿದ್ದ ಆಮಿರ್ ಖಾನ್, ಮಾಧ್ಯಮಗಳೊಂದಿಗೆ ಮಾತನಾಡುವಾಗ ತಮ್ಮ ಮದುವೆಯ ಸುದ್ದಿಯನ್ನು ಅಧಿಕೃತಪಡಿಸಿದ್ದರು. ‘ಹೌದು, ಜುಲೈ 5ರಂದು ನನ್ನ ಮದುವೆ ನಡೆಯುತ್ತಿದೆ. ಇದು ಅತ್ಯಂತ ಸರಳ ಮತ್ತು ಆಪ್ತರ ಸಮ್ಮುಖದಲ್ಲಿ ನಡೆಯಲಿರುವ ಮದುವೆಯಾಗಿದ್ದು, ಮನೆಯಲ್ಲೇ ಆಯೋಜಿಸಿದ್ದೇವೆ. ಜುಲೈ 5 ನಮ್ಮಿಬ್ಬರ ಜೀವನದಲ್ಲಿ ಅತ್ಯಂತ ವಿಶೇಷವಾದ ದಿನ. ಕೇವಲ ಎರಡು ಕುಟುಂಬದ ಸದಸ್ಯರು ಮತ್ತು ಕೆಲವು ಆಪ್ತ ಸ್ನೇಹಿತರು ಮಾತ್ರ ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ನಮ್ಮ ಹೊಸ ಜೀವನಕ್ಕೆ ಎಲ್ಲರ ಹಾರೈಕೆ ಇರಲಿ’ ಎಂದು ಆಮಿರ್ ಖಾನ್ ಹೇಳಿದ್ದಾರೆ.

ಆಮಿರ್ ಖಾನ್ ಅವರ ಹಿಂದಿನ ದಾಂಪತ್ಯ ಜೀವನ:

ಇದು ಆಮಿರ್ ಖಾನ್ ಅವರಿಗೆ ಮೂರನೇ ಮದುವೆಯಾಗಿದೆ. 1986ರಲ್ಲಿ ಆಮಿರ್ ಖಾನ್ ಅವರು ಮೊದಲ ಬಾರಿಗೆ ರೀನಾ ದತ್ತಾ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಜುನೈದ್ ಖಾನ್ ಮತ್ತು ಇರಾ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. 2002ರಲ್ಲಿ ಇವರು ವಿಚ್ಛೇದನ ಪಡೆದರು. ನಂತರ 2005ರಲ್ಲಿ ನಿರ್ಮಾಪಕಿ, ನಿರ್ದೇಶಕಿ ಕಿರಣ್ ರಾವ್ ಅವರನ್ನು ಆಮಿರ್ ಮದುವೆಯಾದರು. 16 ವರ್ಷಗಳ ದಾಂಪತ್ಯದ ನಂತರ 2021ರಲ್ಲಿ ಅವರು ಬೇರ್ಪಟ್ಟರು. ಅವರಿಗೆ ಆಜಾದ್ ರಾವ್ ಖಾನ್ ಎಂಬ ಮಗನಿದ್ದು, ಇಬ್ಬರೂ ಜೊತೆಯಾಗಿಯೇ ಮಗನ ಜವಾಬ್ದಾರಿ ನೋಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಆಮಿರ್ ಖಾನ್ ಮದುವೆಗೂ ಮುನ್ನ ಕ್ಷಮೆಯಾಚಿಸಿದ ಸಹೋದರ ಫೈಸಲ್ ಖಾನ್: ಹಳೆಯ ವಿವಾದಕ್ಕೆ ತೆರೆ

25 ವರ್ಷಗಳ ಪರಿಚಯ ಪ್ರೀತಿಯಾಗಿದ್ದು ಹೇಗೆ?

ಆಮಿರ್ ಖಾನ್ ಮತ್ತು ಗೌರಿ ಸ್ಪ್ರ್ಯಾಟ್ ಸುಮಾರು 25 ವರ್ಷಗಳ ಹಿಂದೆಯೇ ಮೊದಲ ಬಾರಿಗೆ ಭೇಟಿಯಾಗಿದ್ದರು. ಆದರೆ ದಿನಕಳೆದಂತೆ ಇಬ್ಬರ ನಡುವಿನ ಸಂಪರ್ಕ ಇರಲಿಲ್ಲ. ಕೆಲವು ವರ್ಷಗಳ ನಂತರ ಮತ್ತೆ ಇಬ್ಬರು ಭೇಟಿಯಾದಾಗ ಇವರ ಸ್ನೇಹ ಗಟ್ಟಿಯಾಗಿ, ಅದು ಪ್ರೀತಿಗೆ ತಿರುಗಿದೆ. ಇದೇ ವರ್ಷದ ಆರಂಭದಲ್ಲಿ ನಡೆದ ತಮ್ಮ 60ನೇ ವರ್ಷದ ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ ಆಮಿರ್ ಖಾನ್ ಅವರು ಗೌರಿ ಸ್ಪ್ರ್ಯಾಟ್ ಅವರನ್ನು ಮೊದಲ ಬಾರಿಗೆ ಮಾಧ್ಯಮಗಳಿಗೆ ಪರಿಚಯಿಸಿದ್ದರು. ಸದ್ಯ ಈ ಜೋಡಿಯ ಹೊಸ ಜೀವನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಳಗ್ಗೆ ಎದ್ದ ತಕ್ಷಣ ಫೋನ್‌ ನೋಡುವ ಅಭ್ಯಾಸದಿಂದಾಗುವ ಪರಿಣಾಮಗಳೇನು? – Kannada News | Know the side effects of using phone in morning

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್‌ ಫೋನ್‌ (Phone) ಜೀವನದ ಅವಿಭಾಜ್ಯ ಅಂಗವಾಗಿದೆ. ಹೆಚ್ಚಿನವರ ದಿನ ಆರಂಭವಾಗುವುದೇ ಮೊಬೈಲ್‌ ಫೋನ್‌ಗಳಿಂದ ಹೌದು ಅನೇಕರು ಬೆಳಗ್ಗೆ ಎಚ್ಚರಗೊಂಡ ತಕ್ಷಣ, ಎದ್ದು ನಿತ್ಯಕರ್ಮಗಳನ್ನು ಮಾಡುವ ಬದಲು ಹಾಸಿಗೆಯಲ್ಲೇ ಗಂಟೆಗಟ್ಟಲೆ ಮಲಗಿ ಈಮೇಲ್ಸ್‌, ವಾಟ್ಸಾಪ್‌ ಮೆಸೇಜ್‌, ಸೋಷಿಯಲ್‌ ಮೀಡಿಯಾದಲ್ಲಿ ಮೀಮ್ಸ್‌, ವಿಡಿಯೋ, ರೀಲ್ಸ್‌ಗಳನ್ನು ನೋಡುತ್ತಿರುತ್ತಾರೆ. ಈ ಅಭ್ಯಾಸವು ಸಾಮಾನ್ಯದಂತೆ ಕಂಡರೂ, ಇದು ಕ್ರಮೇಣ ದೇಹ, ಮನಸ್ಸು ಮತ್ತು ಮಾನಸಿಕ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಮೊಬೈಲ್ ಫೋನ್ ನೋಡುವುದು ನಿಮ್ಮ ಮಾನಸಿಕ ಸ್ಥಿತಿ ಮತ್ತು ದಿನವಿಡೀ ಉತ್ಪಾದಕತೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗೆ ಬೆಳಗ್ಗೆ ಎದ್ದ ತಕ್ಷಣ ಫೋನ್‌ ನೋಡುವುದರಿಂದ ಏನೆಲ್ಲಾ ಸಮಸ್ಯೆಗಳು ಉಂಟಾಗುತ್ತವೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

ಬೆಳಗ್ಗೆ ಎದ್ದ ತಕ್ಷಣ ಫೋನ್‌ ನೋಡುವ ಅಭ್ಯಾಸದಿಂದ ಅಗುವ ತೊಂದರೆಗಳೇನು?

ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ: ಬೆಳಿಗ್ಗೆ ಎದ್ದ ತಕ್ಷಣ, ಮೆದುಳು ಕ್ರಮೇಣ ಸಕ್ರಿಯಗೊಳ್ಳಬೇಕಾಗುತ್ತದೆ. ಹೀಗಿರುವಾಗ ಎಚ್ಚರಗೊಂಡ ತಕ್ಷಣವೇ ಮೊಬೈಲ್‌ ನೋಡಿದರೆ, ಮೊಬೈಲ್ ಫೋನ್‌ನ ಪ್ರಕಾಶಮಾನವಾದ ಬೆಳಕು ಮತ್ತು ಮೊಬೈಲ್‌ ನೋಟಿಫಿಕೇಶನ್‌ಗಳು ಮೆದುಳಿನ ಮೇಲೆ ಒಂದು ರೀತಿಯ ಡಿಜಿಟಲ್ ಒತ್ತಡವನ್ನು ಉಂಟುಮಾಡುತ್ತದೆ, ಇದು ಗಮನವನ್ನು ಕೇಂದ್ರೀಕರಿಸುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಆತಂಕವನ್ನು ಹೆಚ್ಚಿಸುತ್ತದೆ.

ಒತ್ತಡದ ಹಾರ್ಮೋನುಗಳು, ಹೃದಯ ಬಡಿತದ ಮೇಲೆ ಪರಿಣಾಮ: ತಜ್ಞರ ಪ್ರಕಾರ, ಬೆಳಿಗ್ಗೆ ನಿಮ್ಮ ಮೊಬೈಲ್ ಫೋನ್ ನೋಡುವುದರಿಂದ ದೇಹದಲ್ಲಿ ಒತ್ತಡದ ಹಾರ್ಮೋನ್ ಮಟ್ಟ ಹೆಚ್ಚಾಗುತ್ತದೆ. ಇದು ಹೃದಯ ಬಡಿತ ಮತ್ತು ರಕ್ತದೊತ್ತಡದಲ್ಲಿ ಹಠಾತ್ ಏರಿಕೆಗೆ ಕಾರಣವಾಗಬಹುದು.

ಮಾನಸಿಕ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ: ಬೆಳಿಗ್ಗೆ ಸಾಮಾಜಿಕ ಮಾಧ್ಯಮ ಅಥವಾ ಸುದ್ದಿಗಳನ್ನು ಪರಿಶೀಲಿಸುವುದರಿಂದ ಮನಸ್ಸಿನಲ್ಲಿ ಬಹಳಷ್ಟು ಮಾಹಿತಿ ಸಂಗ್ರಹವಾಗುತ್ತದೆ. ನಕಾರಾತ್ಮಕ ಸುದ್ದಿಗಳು ಹೆಚ್ಚಾಗಿ ಮನಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ, ಇದು ದಿನವಿಡೀ ಒತ್ತಡ, ಕಿರಿಕಿರಿ ಮತ್ತು ಚಡಪಡಿಕೆಗೆ ಕಾರಣವಾಗುತ್ತದೆ. ದೀರ್ಘಕಾಲದಲ್ಲಿ ಈ ಅಭ್ಯಾಸವು ಆತಂಕ ಮತ್ತು ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ.

ಉತ್ಪಾದಕತೆ ಮತ್ತು ಗಮನ ಕಡಿಮೆಯಾಗುತ್ತದೆ: ಬೆಳಗಿನ ಸಮಯವು ಹೆಚ್ಚಿನ ಗಮನ ಮತ್ತು ಯೋಜನೆಗೆ ಸೂಕ್ತವೆಂದು ಪರಿಗಣಿಸಲಾಗುತ್ತದೆ, ಆದರೆ ಈ ಸಮಯದಲ್ಲಿ ನೀವು ನಿಮ್ಮ ಮೊಬೈಲ್ ಫೋನ್‌ ನೋಡುವುದರಿಂದ ನಿಮ್ಮ ಗಮನ ಬೇರೆಡೆಗೆ ತಿರುಗಬಹುದು ಮತ್ತು ಅನಗತ್ಯ ಸಮಯ ವ್ಯರ್ಥವಾಗಬಹುದು. ಇದು ದಿನವಿಡೀ ನಿಮ್ಮ ಉತ್ಪಾದಕತೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ನಿಮ್ಮ ಕೆಲಸದ ಮೇಲೆ ಗಮನಹರಿಸಲು ಕಷ್ಟವಾಗುತ್ತದೆ.

ಇದನ್ನೂ ಓದಿ: ರಾತ್ರಿ ಮಲಗುವಾಗ ಅತಿಯಾಗಿ ಯೋಚಿಸುವುದರಿಂದ ಉಂಟಾಗುವ ಸಮಸ್ಯೆಗಳೇನು?

ಏಕಾಗ್ರತೆಯ ಕೊರತೆ: ಹೊಸ ಆಲೋಚನೆಗಳು ಮತ್ತು ಸೃಜನಶೀಲತೆಗೆ ಬೆಳಿಗ್ಗೆ ಅತ್ಯುತ್ತಮ ಸಮಯ. ಆದರೆ ನೀವು ಎಚ್ಚರವಾದಾಗ ಮೊಬೈಲ್‌ನಿಂದ ಬರುವ ಸಂದೇಶಗಳು, ಸುದ್ದಿಗಳು ಮತ್ತು ರೀಲ್‌ಗಳನ್ನು ನೋಡುವುದರಿಂದ ನಿಮ್ಮ ಯೋಚಿಸುವ ಮತ್ತು ಗಮನಹರಿಸುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಇದರಿಂದಾಗಿ ನೀವು ದಿನವಿಡೀ ಒಂದೇ ಕೆಲಸದ ಮೇಲೆ ಗಮನಹರಿಸಲು ಸಾಧ್ಯವಿಲ್ಲ ಮತ್ತು ನಿಮ್ಮ ಫೋನ್ ಅನ್ನು ನಿರಂತರವಾಗಿ ಪರಿಶೀಲಿಸುವ ಅಭ್ಯಾಸಕ್ಕೆ ಬಲಿಯಾಗುತ್ತೀರಿ.

ಬೆಳಗ್ಗೆ ಫೋನ್‌ ನೋಡುವ ಅಭ್ಯಾಸವನ್ನು ಹೇಗೆ ಬದಲಾಯಿಸುವುದು?

  • ಬೆಳಿಗ್ಗೆ ಎದ್ದ ನಂತರ ಮೊದಲ 30 ನಿಮಿಷಗಳ ಕಾಲ ನಿಮ್ಮ ಫೋನ್ ಮುಟ್ಟಬಾರದು ಎಂಬ ನಿಯಮವನ್ನು ಮಾಡಿ.
  • ಮೊಬೈಲ್‌ ಫೋನ್‌ ನೋಡುವ ಬದಲು ಬೆಳಗ್ಗೆ ವ್ಯಾಯಾಮ ಮಾಡಿ, ಧ್ಯಾನ ಮಾಡಿ, ಮೊಬೈಲ್‌ ಮನೆಯಲ್ಲಿಯೇ ಬಿಟ್ಟು ವಾಕಿಂಗ್‌ ಹೋಗಿ.
  • ಸಕಾರಾತ್ಮಕ ಪುಸ್ತಕಗಳನ್ನು ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗ್ರಾಮ ಆಡಳಿತ ಅಧಿಕಾರಿ ಭುವನಾ ದುರ್ಮರಣ: ಮಗಳ ಮದುವೆ ಕನಸು ಕಂಡಿದ್ದ ಕುಟುಂಬಕ್ಕೆ ಭಾರಿ ಆಘಾತ – Kannada News | VAO Bhuvana’s Death Leaves Family Devastated, Daughter’s Wedding Dreams Shattered

ತುಮಕೂರು, ಜುಲೈ 05: ಎಸ್ಐಆರ್ (Special Intensive Revision) ಕರ್ತವ್ಯಕ್ಕೆ ತೆರಳುತ್ತಿದ್ದಾಗ ಗೂಳೂರು ಬಳಿ ನಡೆದ ಅಪಘಾತದಲ್ಲಿ ಭುವನಾ ಮೃತಪಟ್ಟಿದ್ದ ಭುವನಾ ಅವರ ಮದುಗೆ ಕುಟುಂಬ ಸಿದ್ಧತೆ ನಡೆಸುತ್ತಿತ್ತು ಎಂಬ ವಿಚಾರವೀಗ ಬಹಿರಂಗೊಂಡಿದೆ. ಮನೆಮಗಳ ವಿವಾಹದ ಕನಸು ಕಂಡಿದ್ದ ಕುಟುಂಬಕ್ಕೆ ಘಟನೆಯಿಂದ ಬರಸಿಡಿಲು ಬಡಿದಂತಾಗಿದ್ದು, ಮತ್ತೊಂದೆಡೆ ಸರ್ಕಾರಿ ನೌಕರರ ಹೋರಾಟವೂ ತೀವ್ರಗೊಂಡಿದೆ. ತುಮಕೂರು ಡಿಸಿ ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸಿರುವ ನೌಕರರು, ಭುವನಾ ಸಾವಿಗೆ ನ್ಯಾಯ ನೀಡುವಂತೆ ಆಗ್ರಹಿಸಿದ್ದಾರೆ. ಮೇಲಧಿಕಾರಿಗಳ ಒತ್ತಡವೇ ಈ ದುರಂತಕ್ಕೆ ಕಾರಣ ಎಂದು ಆರೋಪಿಸಿ, ಜಿಲ್ಲಾಧಿಕಾರಿಗಳ ವರ್ಗಾವಣೆಗೂ ಬಿಗಿಪಟ್ಟು ಹಿಡಿದಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Weekly Horoscope: ನಿಮ್ಮ ರಾಶಿಗನುಗುಣವಾಗಿ ಈವಾರದ ಭವಿಷ್ಯ ತಿಳಿಯಿರಿ; ವಾರಭವಿಷ್ಯ ಇಲ್ಲಿದೆ – Kannada News | Weekly Horoscope: July 5 11, 2026 – Zodiac Predictions and Planetary Influences

ಜುಲೈ 5 ರಿಂದ ಜುಲೈ 11, 2026 ರವರೆಗೆ ಸೂರ್ಯ-ಬುಧ ಮಿಥುನದಲ್ಲಿ, ಚಂದ್ರ-ಮಂಗಳ ವೃಷಭದಲ್ಲಿ, ಶುಕ್ರ-ಕೇತು ಸಿಂಹದಲ್ಲಿ, ಗುರು ಕರ್ಕಾಟಕದಲ್ಲಿ, ಶನಿ ಮೀನದಲ್ಲಿ ಮತ್ತು ರಾಹು ಕುಂಭ ರಾಶಿಯಲ್ಲಿದ್ದಾರೆ. ಕಾಲಕಾಲಕ್ಕೆ ಬದಲಾಣೆ ಬೇಕಿದ್ದು, ಸೂಕ್ತ ರೀತಿಯಲ್ಲಿ ವರ್ತಿಸಿದರೆ ಶುಭವಾಗಲಿದೆ.

​ಮೇಷ ರಾಶಿ:

ನಿಮ್ಮ ರಾಶ್ಯಾಧಿಪತಿ ಮಂಗಳ ಚಂದ್ರನೊಂದಿಗೆ ದ್ವಿತೀಯದಲ್ಲಿದ್ದಾನೆ. ಆರ್ಥಿಕವಾಗಿ ಧನಲಾಭದ ಯೋಗವಿದೆ. ಆದರೆ ಮಾತಿನ ಮೇಲೆ ನಿಯಂತ್ರಣವಿರಲಿ. ಕುಟುಂಬದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬರಬಹುದು. ಉದ್ಯೋಗದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಮನ್ನಣೆ ಸಿಗಲಿದೆ.

​ವೃಷಭ ರಾಶಿ:

ನಿಮ್ಮದೇ ರಾಶಿಯಲ್ಲಿ ಚಂದ್ರ ಮತ್ತು ಮಂಗಳನ ಯುತಿಯ ಕಾರಣ ಲಕ್ಷ್ಮಿ ಯೋಗ ಇರುವುದರಿಂದ ಆತ್ಮವಿಶ್ವಾಸ ಹೆಚ್ಚಿರುತ್ತದೆ. ಹೊಸ ಕಾರ್ಯಗಳಿಗೆ ಕೈಹಾಕಲು ಸೂಕ್ತ ಸಮಯ. ಆದರೆ ಕೋಪ ಮತ್ತು ಆತುರದ ನಿರ್ಧಾರಗಳಿಂದ ದೂರವಿರಿ. ಆರೋಗ್ಯದ ಕಡೆ ಗಮನಹರಿಸಿ.

​ಮಿಥುನ ರಾಶಿ:

ಸೂರ್ಯ ಮತ್ತು ಬುಧ ನಿಮ್ಮ ರಾಶಿಯಲ್ಲೇ ಇರುವುದರಿಂದ ಬುದ್ಧಿಶಕ್ತಿ ತೀಕ್ಷ್ಣವಾಗಿರುತ್ತದೆ. ಸರ್ಕಾರಿ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳಲಿವೆ. ಆದಾಗ್ಯೂ, ವೆಚ್ಚಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಬಜೆಟ್ ಕಡೆ ಗಮನ ಕೊಡುವುದು ಉತ್ತಮ.

​ಕರ್ಕಾಟಕ ರಾಶಿ:

ನಿಮ್ಮ ರಾಶಿಯಲ್ಲಿ ಗುರು ಇರುವುದರಿಂದ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳು ಹೆಚ್ಚಾಗುತ್ತವೆ. ಸಮಾಜದಲ್ಲಿ ಗೌರವ ಪ್ರಾಪ್ತಿಯಾಗಲಿದೆ. ಹಿರಿಯರ ಬೆಂಬಲ ಸಿಗಲಿದೆ. ಆದಾಯದ ಮೂಲಗಳು ಹೆಚ್ಚಾಗಲಿವೆ.

​ಸಿಂಹ ರಾಶಿ:

ಶುಕ್ರ ಮತ್ತು ಕೇತು ನಿಮ್ಮ ರಾಶಿಯಲ್ಲಿ ಇರುವುದರಿಂದ ಕಲಾತ್ಮಕ ಮತ್ತು ಸೃಜನಶೀಲ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಆದರೆ ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬರಬಹುದು. ಅನಗತ್ಯ ಆಲೋಚನೆಗಳಿಂದ ದೂರವಿರಿ.

​ಕನ್ಯಾ ರಾಶಿ:

ನಿಮ್ಮ ರಾಶ್ಯಾಧಿಪತಿ ಬುಧ ಮಿಥುನದಲ್ಲಿ ಬಲಿಷ್ಠವಾಗಿದ್ದಾನೆ. ವೃತ್ತಿಜೀವನದಲ್ಲಿ ದೊಡ್ಡ ಬದಲಾವಣೆ ಅಥವಾ ಹೊಸ ಉದ್ಯೋಗಾವಕಾಶಗಳು ಸಿಗುವ ಸಾಧ್ಯತೆ ಇದೆ. ತಂದೆಯ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡುವುದು ಅಗತ್ಯ.

​ತುಲಾ ರಾಶಿ:

ಈ ವಾರ ಮಿಶ್ರಫಲಗಳನ್ನು ನೀಡಲಿದೆ. ಕೆಲಸದ ಸ್ಥಳದಲ್ಲಿ ಒತ್ತಡ ಹೆಚ್ಚಾಗಬಹುದು. ದೂರದ ಪ್ರಯಾಣದ ಯೋಗವಿದೆ ಆದರೆ ಪ್ರಯಾಣದಲ್ಲಿ ಜಾಗ್ರತೆ ಅಗತ್ಯ. ಹೂಡಿಕೆ ಮಾಡುವ ಮುನ್ನ ಎಚ್ಚರಿಕೆ ವಹಿಸಿ.

​ವೃಶ್ಚಿಕ ರಾಶಿ:

ದಾಂಪತ್ಯ ಜೀವನದಲ್ಲಿ ಮಧುರತೆ ಇರಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಕಂಡುಬರಲಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬಂದರೂ, ಕೋಪವನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ.

ಇದನ್ನೂ ಓದಿ: ಸಿಂಹ ರಾಶಿಗೆ ಶುಕ್ರ ಪ್ರವೇಶ; ಜು.4 ರಿಂದ ಈ ರಾಶಿಗಳ ಜಾತಕದಲ್ಲಿ ಅದೃಷ್ಟದ ಮಳೆ!

​ಧನು ರಾಶಿ:

ನಿಮ್ಮ ಲಗ್ನ ಧನುವಿನಲ್ಲಿದೆ. ಶತ್ರುಗಳ ಮೇಲೆ ಜಯ ಸಿಗಲಿದೆ. ಕೋರ್ಟ್ ಕಚೇರಿ ಕೆಲಸಗಳಲ್ಲಿ ಯಶಸ್ಸು ನಿಮ್ಮದಾಗಬಹುದು. ಉದ್ಯೋಗಿಗಳಿಗೆ ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಉತ್ತಮ ಸಹಕಾರ ದೊರೆಯಲಿದೆ.

​ಮಕರ ರಾಶಿ:

ವಿದ್ಯಾರ್ಥಿಗಳಿಗೆ ಈ ವಾರ ಅತ್ಯುತ್ತಮವಾಗಿದೆ, ಏಕಾಗ್ರತೆ ಹೆಚ್ಚಲಿದೆ. ಪ್ರೇಮ ಜೀವನದಲ್ಲಿ ಯಶಸ್ಸು ಸಿಗಲಿದೆ. ಆದರೆ ಆರ್ಥಿಕವಾಗಿ ಸ್ವಲ್ಪ ತೊಂದರೆ ಎದುರಾಗಬಹುದು, ಜೂಜು ಅಥವಾ ರಿಸ್ಕ್ ಇರುವ ಹೂಡಿಕೆಗಳಿಂದ ದೂರವಿರಿ.

​ಕುಂಭ ರಾಶಿ:

ರಾಹು ನಿಮ್ಮ ರಾಶಿಯಲ್ಲಿದ್ದಾನೆ. ಮಾನಸಿಕ ಗೊಂದಲಗಳು ಹೆಚ್ಚಾಗಬಹುದು. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಆಸ್ತಿ ಅಥವಾ ವಾಹನ ಖರೀದಿ ಮಾಡುವ ಯೋಗವಿದೆ, ಆದರೆ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿ.

​ಮೀನ ರಾಶಿ:

ಶನಿ ನಿಮ್ಮ ರಾಶಿಯಲ್ಲಿದ್ದಾನೆ. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಒಡಹುಟ್ಟಿದವರಿಂದ ಸಹಾಯ ದೊರೆಯಲಿದೆ. ಧೈರ್ಯ ಮತ್ತು ಪರಾಕ್ರಮ ಹೆಚ್ಚಾಗಲಿದ್ದು, ಅಂದುಕೊಂಡ ಕೆಲಸಗಳನ್ನು ಯಶಸ್ವಿಯಾಗಿ ಮುಗಿಸುವಿರಿ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು, ಧಾರಾಕಾರ ಮಳೆ: ಪ್ರವಾಸಿಗರು ಫುಲ್ ಖುಷ್! – Kannada News | Charmadi Ghat Weather: Heavy Rain and Dense Fog Create Magical Views for Tourists

ಚಿಕ್ಕಮಗಳೂರು, ಜುಲೈ 05: ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ವಾತಾವರಣ ಕ್ಷಣ ಕ್ಷಣಕ್ಕೂ ಬದಲಾಗುತ್ತಿದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಹಸಿರು ರಾಶಿಯ ಮೇಲೆ ದಟ್ಟ ಮಂಜು ಚಿತ್ತಾರ ಬಿಡಿಸಿದೆ. ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರನ್ನು ಸಂಪರ್ಕಿಸುವ ಈ ಘಾಟಿಯಲ್ಲಿ ಒಮ್ಮೆ ದಟ್ಟ ಮಂಜು ಕವಿದರೆ, ಮತ್ತೊಂದು ಕ್ಷಣದಲ್ಲೇ ಮಳೆರಾಯ ಅಬ್ಬರಿಸುತ್ತಿದ್ದಾನೆ. ಮಲೆಯಮಾರುತಗಳ ಈ ಮೋಡಿ ವಾಹನ ಸವಾರರಿಗೆ ಸವಾಲಾಗಿದ್ದರೂ, ಪ್ರವಾಸಿಗರನ್ನು ಮಾತ್ರ ಮಂತ್ರಮುಗ್ಧರನ್ನಾಗಿಸಿದೆ. ಪ್ರಕೃತಿಯ ಈ ಅದ್ಭುತ ಸೌಂದರ್ಯವನ್ನು ಪ್ರವಾಸಿಗರು ತಮ್ಮ ಮೊಬೈಲ್‌ಗಳಲ್ಲಿ ಫುಲ್ ಖುಷಿಯಿಂದ ಸೆರೆಹಿಡಿದಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಹಿಳಾ ಪ್ರಧಾನ ಕಥಾಹಂದರ ಇರುವ ‘ವಿದಿ’ ಸಿನಿಮಾಗೆ ಜಯಮಾಲಾ ಬೆಂಬಲ – Kannada News | Karnataka Film Chamber of Commerce president Jayamala launches poster of female centric movie Vidhi

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಆಗಿರುವ ನಟಿ ಜಯಮಾಲಾ ಅವರು ‘ವಿದಿ’ (Vidhi) ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಈ ಸಿನಿಮಾದಲ್ಲಿ ಮಹಿಳಾ ಪ್ರಧಾನ ಕಥಾಹಂದರ ಇರಲಿದೆ ಎಂದು ಚಿತ್ರತಂಡ ಹೇಳಿದೆ. ಇತ್ತೀಚೆಗೆ ಚಿತ್ರತಂಡದವರು ಜಯಮಾಲಾ ಅವರನ್ನು ಭೇಟಿ ಮಾಡಿದರು. ಈ ವೇಳೆ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ ಜಯಮಾಲಾ (Jayamala) ಅವರು ಚಿತ್ರತಂಡಕ್ಕೆ ಶುಭ ಕೋರಿದರು.

‘ವಿದಿ’ ಸಿನಿಮಾದ ಪೋಸ್ಟರ್‌ ಅನಾವರಣ ಮಾಡಿದ ಬಳಿಕ ಜಯಮಾಲಾ ಅವರು ಮಾತನಾಡಿದರು. ಮಹಿಳಾಪ್ರಧಾನ ಕಥೆ ಇರುವ ಸಿನಿಮಾ ಎಂಬುದನ್ನು ತಿಳಿದು ಅವರು ಸಂತಸ ವ್ಯಕ್ತಪಡಿಸಿದರು. ಈ ರೀತಿಯ ಸಿನಿಮಾಗಳ ಅವಶ್ಯಕತೆ ಹೆಚ್ಚಿದೆ ಎಂದು ಅವರು ಅಭಿಪ್ರಾಯಪಟ್ಟರು. ತಾವು ಕೂಡ ಇಂಥ ಸಿನಿಮಾಗಳನ್ನು ನೋಡಲು ಆಸಕ್ತಿ ಹೊಂದಿರುವುದಾಗಿ ಅವರು ತಿಳಿಸಿದರು.

‘ಈ ಚಿತ್ರದಲ್ಲಿ ಹೆಣ್ಣುಮಗಳ ಕಥೆ ಇರುತ್ತದೆಂದು ಚಿತ್ರತಂಡದವರು ಹೇಳಿದ್ದಾರೆ. ದೀಪವು ನಿನ್ನದೆ ಗಾಳಿಯೂ ನಿನ್ನದೆ. ಆರದಿರಲಿ ಬೆಳಕು ಎಂಬ ಮನಮುಟ್ಟುವಂತಹ ಪದಗಳು ಕುತೂಹಲ ಮೂಡಿಸುತ್ತದೆ. ಇಂತಹ ಚಿತ್ರಗಳು ಮಹಿಳೆಯರಿಗೆ ಧೈರ್ಯ ತುಂಬುವಂತಿರಬೇಕು. ನಾನು ಕೂಡ ಚಿತ್ರ ನೋಡಲು ಉತ್ಸುಕಳಾಗಿದ್ದೇನೆ’ ಎಂದು ಜಯಮಾಲಾ ಅವರು ಹೇಳಿದರು.

ಜಯಮಾಲಾ ಅವರನ್ನು ‘ವಿದಿ’ ಚಿತ್ರತಂಡ ಭೇಟಿಯಾದಾಗ ಹಿರಿಯ ಕಲಾವಿದರಾದ ಸುಂದರ್ ರಾಜ್, ಕರಿಸುಬ್ಬು, ಜಯಸಿಂಹ ಮುಸೂರಿ ಮುಂತಾದವರು ಉಪಸ್ಥಿತರಿದ್ದರು. ‘ವಿ.ಆರ್.ಎಸ್. ಪ್ರೊಡಕ್ಷನ್’ ಮೂಲಕ ಉದ್ಯಮಿ ಮತ್ತು ಸಮಾಜ ಸೇವಕರಾಗಿರುವ ಎಸ್.ವಿ. ಉಮಾಶಂಕರ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದು ಅವರ ಮೊದಲ ಸಿನಿಮಾ.

ಇದನ್ನೂ ಓದಿ: 93 ವರ್ಷದ ಸಂಭ್ರಮಾಚರಣೆ ಬೇಡ ಎನ್ನಲು ಯಾರಿಗೂ ಅಧಿಕಾರವಿಲ್ಲ: ಜಯಮಾಲ

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಾದ ನಾಗತ್ತಿಹಳ್ಳಿ ಚಂದ್ರಶೇಖರ್ ಹಾಗೂ ಪಿ. ಶೇಷಾದ್ರಿ ಅವರ ಶಿಷ್ಯನೆಂದು ಗುರುತಿಸಿಕೊಂಡ ಜಗದೀಶ್‌ ಕೊಪ್ಪ ಅವರು ‘ವಿದಿ’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಮೂರನೇ ಸಿನಿಮಾ. ನಿರ್ದೇಶನದ ಜೊತೆ ಚಿತ್ರಕಥೆ ಬರೆದು, ನಿರ್ಮಾಣದಲ್ಲಿಯೂ ಅವರ ಕೈ ಜೋಡಿಸಿದ್ದಾರೆ. ಪಾತ್ರವರ್ಗ ಮತ್ತು ತಂತ್ರಜ್ಞರ ವಿವರಗಳನ್ನು ಸದ್ಯದಲ್ಲೇ ತಿಳಿಸುವುದಾಗಿ ಚಿತ್ರತಂಡ ಹೇಳಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

SIR ಕರ್ತವ್ಯಕ್ಕೆ ತೆರಳುತ್ತಿದ್ದಾಗ ಅಪಘಾತದಲ್ಲಿ ಅಧಿಕಾರಿ ಸಾವು: ಡಿಸಿ ಕಚೇರಿ ಮುಂದೆ ಅಹೋರಾತ್ರಿ ಧರಣಿ! – Kannada News | Tumakuru DC Office Protest: Revenue Employees Night Long Dharna Over VAO Bhuvana Death

ಡಿಸಿ ಕಚೇರಿ ಮುಂದೆ ಅಹೋರಾತ್ರಿ ಧರಣಿ ತೀವ್ರ!

ತುಮಕೂರು, ಜುಲೈ 05: ಕರ್ತವ್ಯದ ಒತ್ತಡ ಮತ್ತು ಮೇಲಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ತುಮಕೂರು ಜಿಲ್ಲಾಧಿಕಾರಿ (DC) ಕಚೇರಿ ಮುಂದೆ ಕಂದಾಯ ಇಲಾಖೆ ನೌಕರರು ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಇತ್ತೀಚೆಗಷ್ಟೇ ಜಾರಿಗೆ ಬಂದಿರುವ ಎಸ್‌ಐಆರ್ (SIR) ಕರ್ತವ್ಯದ ನಿಮಿತ್ತ ಮುಂಜಾನೆ ಗಡಿಬಿಡಿಯಲ್ಲಿ ತೆರಳುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಗ್ರಾಮ ಆಡಳಿತ ಅಧಿಕಾರಿ (VAO) ಭುವನಾ ಮೃತಪಟ್ಟಿದ್ದರು. ಆಕೆಯ ಸಾವಿಗೆ ನ್ಯಾಯ ಸಿಗಬೇಕು ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನೌಕರರು ಪ್ರತಿಭಟನೆ ಮುಂದುವರಿಸಿದ್ದಾರೆ.

ತಡರಾತ್ರಿ ಸಂಧಾನ ವಿಫಲ: ಮುಂದುವರಿದ ಅಹೋರಾತ್ರಿ ಧರಣಿ

ನಿನ್ನೆ ರಾತ್ರಿ ಇಡೀ ಜಿಲ್ಲಾಧಿಕಾರಿ ಕಚೇರಿ ಮುಂದೆ ನೌಕರರು ಅಹೋರಾತ್ರಿ ಧರಣಿ ನಡೆಸಿದ್ದಾರೆ. ತಡರಾತ್ರಿ 11:15 ರ ಸುಮಾರಿಗೆ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಸುಮಾರು ಒಂದೂವರೆ ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದರಾದರೂ, ಸಂಧಾನ ಯಶಸ್ವಿಯಾಗಲಿಲ್ಲ. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಕಂದಾಯ ನೌಕರರ ಸಂಘ ಪಟ್ಟು ಹಿಡಿದಿದೆ. ಇಂದು ಬೆಳಗ್ಗೆ 9 ಗಂಟೆಯ ನಂತರ ಪ್ರತಿಭಟನೆಯ ಧ್ವನಿ ಮತ್ತಷ್ಟು ತೀವ್ರಗೊಳ್ಳುವ ಮುನ್ಸೂಚನೆ ಸಿಕ್ಕಿದೆ.

ಮೇಲಧಿಕಾರಿಗಳ ಒತ್ತಡವೇ ಸಾವಿಗೆ ಕಾರಣ ಎಂದು ಆರೋಪ

ತುಮಕೂರು ನಾಡಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಭುವನಾ ಅವರಿಗೆ ಮೇಲಧಿಕಾರಿಗಳು ತೀವ್ರ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಸಿಬ್ಬಂದಿ ಗಂಭೀರವಾಗಿ ಆರೋಪಿಸಿದ್ದಾರೆ. ಮುಂಜಾನೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಿರಂತರವಾಗಿ ಕೆಲಸ ಮಾಡಿಸಲಾಗುತ್ತಿತ್ತು. ಅಪಘಾತ ಸಂಭವಿಸಿದ ದಿನ ಮುಂಜಾನೆ 6:30ರೊಳಗೆ ಕಡ್ಡಾಯವಾಗಿ ಕೆಲಸಕ್ಕೆ ಹಾಜರಾಗಬೇಕು ಎಂದು ಮೇಲಧಿಕಾರಿಗಳು ಕಠಿಣ ಸೂಚನೆ ನೀಡಿದ್ದರು. ಮೇಲಧಿಕಾರಿಗಳ ಒತ್ತಡಕ್ಕೆ ಹೆದರಿ ಗಡಿಬಿಡಿಯಲ್ಲಿ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಗೂಳೂರು ಬಳಿ ಭೀಕರ ಅಪಘಾತ ಸಂಭವಿಸಿ ಭುವನಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಆರೋಪಿಸಲಾಗಿದೆ.

ಡಿಸಿ, ಎಡಿಸಿ, ಎಸಿ ಹಾಗೂ ತಹಶೀಲ್ದಾರ್ ಅವರುಗಳು ನೀಡುತ್ತಿದ್ದ ಅತಿಯಾದ ಕೆಲಸದ ಒತ್ತಡವೇ ಈ ದುರಂತಕ್ಕೆ ನೇರ ಕಾರಣ ಎಂದು ನೌಕರರು ಆಕ್ರೋಶ ಹೊರಹಾಕಿದ್ದು, ಜಿಲ್ಲಾಧಿಕಾರಿಗಳ ವರ್ಗಾವಣೆಗೂ ಆಗ್ರಹಿಸಿದ್ದಾರೆ.

ಇದನ್ನೂ ಓದಿ SIR ಕರ್ತವ್ಯಕ್ಕೆ ತೆರಳುವಾಗ ಭೀಕರ ಅಪಘಾತ: ಚಿಕಿತ್ಸೆ ಫಲಿಸದೆ ಭುವನಾ ಸಾವು; ಸಿಬ್ಬಂದಿಯಿಂದ ಪ್ರತಿಭಟನೆ

ವರದನಾಯಕನಹಳ್ಳಿಯಲ್ಲಿ ಇಂದು ಅಂತ್ಯಸಂಸ್ಕಾರ

ಇತ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ವರದನಾಯಕನಹಳ್ಳಿಯಲ್ಲಿರುವ ಭುವನಾ ಅವರ ನಿವಾಸದ ಬಳಿ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಪ್ರತಿದಿನ ಮನೆಯಿಂದಲೇ ತುಮಕೂರಿಗೆ ಕೆಲಸಕ್ಕೆ ಓಡಾಡುತ್ತಿದ್ದ ಭುವನಾ, ಎಸ್‌ಐಆರ್ (SIR) ಕರ್ತವ್ಯದ ಒತ್ತಡದಿಂದ ತೀವ್ರ ಕಂಗೆಟ್ಟಿದ್ದರು ಎಂದು ಅವರ ಚಿಕ್ಕಪ್ಪ ರಮೇಶ್ ತಿಳಿಸಿದ್ದಾರೆ. ತಂದೆ ರಮೇಶ್ ಹಾಗೂ ತಾಯಿ ಸರೋಜಾ ಅವರ ಆಸರೆಯಾಗಿದ್ದ ಯುವ ಅಧಿಕಾರಿಯ ಅಗಲಿಕೆ ಇಡೀ ಕುಟುಂಬವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

ಇಂದು ಬೆಳಗ್ಗೆ 10:30ರ ಸುಮಾರಿಗೆ ವರದನಾಯಕನಹಳ್ಳಿಯ ಸ್ವಗ್ರಾಮದಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಸಕಲ ವಿಧಿವಿಧಾನಗಳನ್ನು ನೆರವೇರಿಸಿ, ಅವರ ತೋಟದಲ್ಲೇ ಅಂತ್ಯಸಂಸ್ಕಾರ ಮಾಡಲು ಕುಟುಂಬಸ್ಥರು ಸಿದ್ಧತೆ ಮಾಡಿಕೊಂಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಒಂದೇ ಹೊಡೆತಕ್ಕೆ ಇರಾನ್ ನಾಯಕರನ್ನು ಮುಗಿಸಬಹುದು: ಟ್ರಂಪ್ ಬೆದರಿಕೆ – Kannada News | Trump Threatens Iran: One Strike Can Eliminate Leaders During Funeral

ವಾಷಿಂಗ್ಟನ್, ಜುಲೈ 05:ಇರಾನ್‌ನ ಮಾಜಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump)ಇರಾನ್ ವಿರುದ್ಧದ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ. ಅಂತ್ಯಕ್ರಿಯೆಗಾಗಿ ಇರಾನ್‌ನ ಎಲ್ಲಾ ಉನ್ನತ ನಾಯಕರು ಒಂದೇ ಕಡೆ ಸೇರಿದ್ದು, ಅಮೆರಿಕ ಮನಸ್ಸು ಮಾಡಿದರೆ ಒಂದೇ ಹೊಡೆತದಲ್ಲಿ ಅವರೆಲ್ಲರನ್ನೂ ನಾಶಪಡಿಸಬಲ್ಲದು ಎಂದು ಟ್ರಂಪ್ ಹೇಳಿದ್ದಾರೆ.

ಆಕ್ಸಿಯಾಸ್ ಸಂಸ್ಥೆಯೊಂದಿಗೆ ಮಾತನಾಡಿದ ಟ್ರಂಪ್, ಅವರೆಲ್ಲರೂ ಅಲ್ಲೇ ಇದ್ದಾರೆ. ಒಂದೇ ಒಂದು ದಾಳಿಯ ಮೂಲಕ ನಾವು ಇರಾನ್‌ನ ಇಡೀ ನಾಯಕತ್ವವನ್ನು ಇಲ್ಲದಂತೆ ಮಾಡಬಹುದು. ಆದರೆ ನಾವು ಹಾಗೆ ಮಾಡುತ್ತಿಲ್ಲ, ಏಕೆಂದರೆ ಆಮೇಲೆ ನಮ್ಮೊಂದಿಗೆ ಮಾತುಕತೆ ನಡೆಸಲು ಅಲ್ಲಿ ಯಾರೂ ಉಳಿಯುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಇತ್ತೀಚೆಗೆ ನಡೆದ ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಅಯತೊಲ್ಲಾ ಅಲಿ ಖಮೇನಿ ಹತರಾದ ಬಳಿಕವೂ ಟ್ರಂಪ್ ಇರಾನ್ ಮೇಲಿನ ಒತ್ತಡವನ್ನು ಕಡಿಮೆ ಮಾಡಿಲ್ಲ. ನಾವು ಇರಾನ್ ಅನ್ನು ಆರ್ಥಿಕವಾಗಿ ಸಂಪೂರ್ಣವಾಗಿ ನಾಶಪಡಿಸಿದ್ದೇವೆ. ಅಲ್ಲಿ ಹಣದುಬ್ಬರ ಗಗನಕ್ಕೇರಿದೆ. ಈಗ ಅವರು ಅಮೆರಿಕ ಜೊತೆ ಒಪ್ಪಂದ ಮಾಡಿಕೊಳ್ಳಲು ಹತಾಶರಾಗಿದ್ದಾರೆ.

ನಾವು ಒಳ್ಳೆಯವರಾದ್ದರಿಂದ ಅವರಿಗೆ ಅಂತ್ಯಕ್ರಿಯೆ ಮುಗಿಸಲು ಒಂದು ವಾರ ಕಾಲಾವಕಾಶ ನೀಡಿದ್ದೇವೆ ಎಂದು ಟ್ರಂಪ್ ವ್ಯಂಗ್ಯವಾಡಿದ್ದಾರೆ. ಅಲ್ಲದೆ, ರಾಜತಾಂತ್ರಿಕ ಮಾತುಕತೆಗಳು ಯಶಸ್ವಿಯಾದರೆ ಇರಾನ್‌ಗೆ ಅಮೆರಿಕದ ರೈತರು ಆಹಾರ ಪೂರೈಸಬಹುದು ಎಂದೂ ಅವರು ಹೇಳಿದ್ದಾರೆ.

ಮತ್ತಷ್ಟು ಓದಿ: ಇರಾನ್ ಮನವಿ ಮಾಡಿದ್ದರಿಂದ ನಾಳೆ ದೋಹಾದಲ್ಲಿ ಮಾತುಕತೆ; ಅಮೆರಿಕ ಅಧ್ಯಕ್ಷ ಟ್ರಂಪ್ ಮಾಹಿತಿ

ಇರಾನ್ ತೀವ್ರ ಆಕ್ರೋಶ
ಟ್ರಂಪ್ ಅವರ ಈ ಹೇಳಿಕೆಗೆ ಇರಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಅರ್ಮೇನಿಯಾದಲ್ಲಿರುವ ಇರಾನ್ ರಾಯಭಾರ ಕಚೇರಿಯು, ಅಮೆರಿಕ ಅಧ್ಯಕ್ಷರಿಗೆ ನಾಗರಿಕತೆ, ಇತಿಹಾಸ ಮತ್ತು ಗೌರವ ಯಾವುದೂ ಇಲ್ಲ ಎಂದು ಕಿಡಿಕಾರಿದೆ. ಇದೇ ವೇಳೆ ಇರಾನ್‌ನ ಮಿಲಿಟರಿ ಅಧಿಕಾರಿಗಳು ಅಮೆರಿಕ ಮತ್ತು ಇಸ್ರೇಲ್‌ಗೆ ಎಚ್ಚರಿಕೆ ನೀಡಿದ್ದು, ಯಾವುದೇ ರೀತಿಯ ಹೊಸ ಮಿಲಿಟರಿ ದಾಳಿ ಅಥವಾ ತಪ್ಪು ಲೆಕ್ಕಾಚಾರ ನಡೆದರೆ ಅದಕ್ಕೆ ತ್ವರಿತ ಮತ್ತು ಭೀಕರ ಪ್ರತಿಪ್ರಹಾರ ಎದುರಿಸಬೇಕಾಗುತ್ತದೆ ಎಂದಿದ್ದಾರೆ.

ಉದ್ವಿಗ್ನತೆ ನಡುವೆಯೂ ಮುಂದುವರೆದ ಮಾತುಕತೆ
ಉಭಯ ದೇಶಗಳ ನಡುವೆ ಇಷ್ಟೆಲ್ಲಾ ಮಾತಿನ ಸಮರ ನಡೆಯುತ್ತಿದ್ದರೂ, ಕತಾರ್‌ನ ದೋಹಾದಲ್ಲಿ ಅಮೆರಿಕ ಮತ್ತು ಇರಾನ್ ಅಧಿಕಾರಿಗಳ ನಡುವೆ ಪರೋಕ್ಷ ಮಾತುಕತೆಗಳು ಮುಂದುವರೆದಿವೆ. ಸಮುದ್ರ ಭದ್ರತೆ ಮತ್ತು ಆರ್ಥಿಕ ವಿಷಯಗಳ ಕುರಿತಾದ ಚರ್ಚೆಯಲ್ಲಿ ಸ್ವಲ್ಪ ಪ್ರಗತಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಆದರೆ, ಇರಾನ್‌ನ ಪರಮಾಣು ಕಾರ್ಯಕ್ರಮದ ಕುರಿತು ಇನ್ನೂ ಭಿನ್ನಾಭಿಪ್ರಾಯಗಳು ಜೀವಂತವಾಗಿದ್ದು, ಅಂತ್ಯಕ್ರಿಯೆಯ ನಂತರ ಮತ್ತೊಂದು ಸುತ್ತಿನ ಮಾತುಕತೆ ನಡೆಯುವ ಸಾಧ್ಯತೆ ಇದೆ. ರಾಜತಾಂತ್ರಿಕ ಮಾತುಕತೆಯ ಹಾದಿ ತೆರೆದಿದ್ದರೂ, ಇರಾನ್ ವಿರುದ್ಧ ಟ್ರಂಪ್ ಅವರ ಕಠಿಣ ನಿಲುವು ಮಾತ್ರ ಬದಲಾದಂತೆ ಕಾಣುತ್ತಿಲ್ಲ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Weekly Horoscope: ಜುಲೈ 6 ರಿಂದ 12 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿವೆ – Kannada News | Zodiac Signs Fortunes: A Detailed Weekly Horoscope by Astrologer Dr. Basavaraj Guruji

ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿಯವರು 2026ರ ಜುಲೈ 6 ರಿಂದ ಜುಲೈ 12 ರವರೆಗಿನ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ವಾರದಲ್ಲಿ ಆಗುವ ಆಗುಹೋಗುಗಳು, ವಿಶೇಷ ಕಾರ್ಯಕ್ರಮಗಳು, ತಿಥಿಗಳ ಮಹತ್ವ ಮತ್ತು ರಾಶಿಗಳ ಮೇಲಾಗುವ ಪ್ರಭಾವಗಳನ್ನು ತಿಳಿಸಲಾಗಿದೆ. ಈ ವಾರವು ಪರಾಭವ ನಾಮ ಸಂವತ್ಸರ, ಉತ್ತರಾಯಣ, ಜೇಷ್ಠ ಮಾಸ, ಗ್ರೀಷ್ಮ ಋತು, ಮತ್ತು ಕೃಷ್ಣಪಕ್ಷದಿಂದ ಕೂಡಿರುತ್ತದೆ. ಶನಿಗ್ರಹವು ಮೀನ ರಾಶಿಯಲ್ಲಿ, ಕುಜಗ್ರಹ ವೃಷಭ ರಾಶಿಯಲ್ಲಿ, ರವಿ ಗ್ರಹ ಮಿಥುನ ರಾಶಿಯಲ್ಲಿ ಸಂಚರಿಸಲಿದೆ. ಗುರು ಮತ್ತು ಬುಧ ಗ್ರಹಗಳು ಕರ್ಕಾಟಕ ರಾಶಿಯಲ್ಲಿದ್ದರೆ, ಶುಕ್ರ ಮತ್ತು ಕೇತು ಸಿಂಹ ರಾಶಿಯಲ್ಲಿ, ರಾಹು ಕುಂಭ ರಾಶಿಯಲ್ಲಿ ಇರಲಿವೆ.

ಮೇಷ ರಾಶಿಯವರಿಗೆ ಆರ್ಥಿಕವಾಗಿ ಅದೃಷ್ಟವಿದ್ದು, ವೃಷಭ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು. ಮಿಥುನ ರಾಶಿಯವರಿಗೆ ಇದು ಅದೃಷ್ಟದ ಸಮಯವಾಗಿದ್ದು, ಕರ್ಕಾಟಕ ರಾಶಿಯವರಿಗೆ ಆಕಸ್ಮಿಕ ಧನ ಯೋಗವಿದೆ. ಸಿಂಹ ರಾಶಿಯವರಿಗೆ ಆದಾಯದಲ್ಲಿ ಏರಿಕೆಯಾಗಲಿದ್ದು, ಕನ್ಯಾ ರಾಶಿಯವರಿಗೆ ಅಧಿಕ ಖರ್ಚು ಇರಬಹುದು. ತುಲಾ ರಾಶಿಯವರು ಆತುರದ ನಿರ್ಧಾರಗಳನ್ನು ತಪ್ಪಿಸಬೇಕು. ವೃಶ್ಚಿಕ ರಾಶಿಯವರಿಗೆ ಅರ್ಧಂಬರ್ಧ ಕೆಲಸಗಳು ಪೂರ್ಣಗೊಳ್ಳುತ್ತವೆ. ಧನು ರಾಶಿಯವರಿಗೆ ಆತುರದ ನಿರ್ಧಾರಗಳು ಸಮಸ್ಯೆ ತರಬಹುದು. ಮಕರ ರಾಶಿಯವರಿಗೆ ಆರ್ಥಿಕ ಯಶಸ್ಸು ಸಿಗಲಿದೆ. ಕುಂಭ ರಾಶಿಯವರು ಆತುರದ ಆರ್ಥಿಕ ನಿರ್ಧಾರಗಳಿಂದ ದೂರವಿರಿ. ಮೀನ ರಾಶಿಯವರಿಗೆ ಅದೃಷ್ಟ ಮತ್ತು ಆಕಸ್ಮಿಕ ಆದಾಯ ಇರಲಿದೆ ಎಂದು ಗುರೂಜಿ ಭವಿಷ್ಯ ನುಡಿದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Source link

ಎಡಗೈ ದಾಂಡಿಗರೊಂದಿಗೆ ವಿಶ್ವ ದಾಖಲೆ ಬರೆದ ಟೀಮ್ ಇಂಡಿಯಾ – Kannada News | India Sets World Record With 6 Lefties in Top 7

ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಎಡಗೈ ದಾಂಡಿಗರಾಗಿ ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ತಿಲಕ್ ವರ್ಮಾ, ಅಕ್ಷರ್ ಪಟೇಲ್ ಹಾಗೂ ಶಿವಂ ದುಬೆ ಕಣಕ್ಕಿಳಿದಿದ್ದರು. ಇನ್ನು ಟಾಪ್-7 ನಲ್ಲಿ ಕಾಣಿಸಿಕೊಂಡ ಏಕೈಕ ಬಲಗೈ ಬ್ಯಾಟರ್ ನಾಯಕ ಶ್ರೇಯಸ್ ಅಯ್ಯರ್ ಮಾತ್ರ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ 6 ಮಂದಿ ಲೆಫ್ಟ್​ ಹ್ಯಾಂಡರ್​ಗಳನ್ನು ಕಣಕ್ಕಿಳಿಸಿದ ವಿಶ್ವ ದಾಖಲೆಯನ್ನು ಟೀಮ್ ಇಂಡಿಯಾ ನಿರ್ಮಿಸಿದೆ. (PC: BCCI)

Source link

Exit mobile version