Headlines

ಸೋಲರಿಯದ ಸರದಾರರು: 37 ಪಂದ್ಯಗಳ ‘ಸ್ಪೇನ್’ ಸಾಮ್ರಾಜ್ಯ! – Kannada News | Spain’s Unstoppable 37 Match Invincible Strea

ಫುಟ್‌ಬಾಲ್ ಕೇವಲ ಒಂದು ಆಟವಲ್ಲ, ಅದೊಂದು ನಿರಂತರ ಹೋರಾಟ. ಅಲ್ಲಿ ದಾಖಲೆಗಳು ಹುಟ್ಟುವುದೇ ಮುರಿಯುವುದಕ್ಕೆ. ಆದರೆ, ಕೆಲವು ದಾಖಲೆಗಳು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೇ ಉಳಿಯುತ್ತವೆ. ಅಂತಹದೊಂದು ಅಪರೂಪದ ಇತಿಹಾಸಕ್ಕೆ ಈಗ ಸ್ಪೇನ್ ಫುಟ್‌ಬಾಲ್ ತಂಡ ಸಾಕ್ಷಿಯಾಗಿದೆ. ಕೋಚ್ ಲುಯಿಸ್ ಡಿ ಲಾ ಫ್ಯುಯೆಂಟೆ ಅವರ ಸಾರಥ್ಯದಲ್ಲಿ ಕಲಾತ್ಮಕ ಫುಟ್‌ಬಾಲ್ ಆಡುತ್ತಿರುವ ಸ್ಪೇನ್, ಸತತ 37 ಪಂದ್ಯಗಳಲ್ಲಿ ಸೋಲನ್ನೇ ಕಾಣದೆ ಜಾಗತಿಕ ಫುಟ್‌ಬಾಲ್ ಜಗತ್ತನ್ನು ತನ್ನ ಅಂಗೈಯಲ್ಲಿಟ್ಟುಕೊಂಡಿದೆ. ಅಂದರೆ ಸ್ಪೇನ್ ತಂಡವು ಕಳೆದ 37 ಪಂದ್ಯಗಳಲ್ಲಿ ಸೋಲನ್ನೇ ಕಂಡಿಲ್ಲ!…

Read More

ಹ್ಯಾಂಗ್ ಆಗಲ್ಲ, ಪಾವತಿ ವಿಫಲಗೊಳ್ಳಲ್ಲ,ಇನ್ಮುಂದೆ ರೈಲಿನಲ್ಲಿ ನೀವೇ ಆರಿಸಿಕೊಳ್ಳಿ ನಿಮ್ಮಿಷ್ಟದ ಸೀಟು, ಹೊಸ ವೆಬ್​ಸೈಟ್ ಬಿಡುಗಡೆ ಮಾಡಿದ ಐಆರ್​ಸಿಟಿಸಿ – Kannada News | IRCTC New Website: Faster Train Ticket Booking, Choose Your Seat and More

ನವದೆಹಲಿ, ಜುಲೈ 15: ರೈಲು ಟಿಕೆಟ್(Railway Ticket) ಬುಕ್ ಮಾಡುವಾಗ, ಅದರಲ್ಲೂ ವಿಶೇಷವಾಗಿ ಬೆಳಗ್ಗೆ 10 ಮತ್ತು 11 ಗಂಟೆಯ ‘ತತ್ಕಾಲ್’ ಸಮಯದಲ್ಲಿ ವೆಬ್‌ಸೈಟ್ ಹ್ಯಾಂಗ್ ಆಗಿ, ಪಾವತಿ ವಿಫಲಗೊಂಡು ಕೋಪಗೊಂಡ ಉದಾಹರಣೆಗಳು ನಿಮ್ಮ ಜೀವನದಲ್ಲಿ ನೂರಾರು ಇರಬಹುದು. ಆದರೆ ಇನ್ಮುಂದೆ ಆ ಕಿರಿಕಿರಿ ಇರುವುದಿಲ್ಲ. ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ಇಂದು ತನ್ನ ಸಂಪೂರ್ಣ ಹೊಸ ವಿನ್ಯಾಸದ, ಅಲ್ಟ್ರಾ-ಫಾಸ್ಟ್ ಟಿಕೆಟ್ ಬುಕಿಂಗ್ ವೆಬ್‌ಸೈಟ್ ಅನ್ನು ದೇಶಕ್ಕೆ ಸಮರ್ಪಿಸಿದೆ. ಹೊಸ ಪ್ಲಾಟ್‌ಫಾರ್ಮ್ ಕೇವಲ…

Read More

‘ಮೈಸೂರು ದಸರಾದಲ್ಲಿ ಕಂಬಳ ಬೇಡ’: ಯಾಕೆಂಬ ಕಾರಣ ನೀಡಿದ ಡಾ. ಶೆಲ್ವಪಿಳ್ಳೈ ಅಯ್ಯಂಗಾರ್! – Kannada News | Mysuru Dasara 2026: Historian Dr. Shelvapillai Iyengar Opposes Kambala Event, Explains Why

ಮೈಸೂರು, ಜುಲೈ 15: ಮೈಸೂರು ದಸರಾದಲ್ಲಿ ಕಂಬಳ ಆಚರಣೆ ಕುರಿತು ಪರ-ವಿರೋಧ ಚರ್ಚೆ ಜೋರಾಗಿರುವ ಸಂದರ್ಭದಲ್ಲೇ, ಇತಿಹಾಸ ತಜ್ಞ ಡಾ. ಶೆಲ್ವಪಿಳ್ಳೈ ಅಯ್ಯಂಗಾರ್ ಅವರು ಸ್ಪಷ್ಟವಾದ ನಿಲುವನ್ನು ವ್ಯಕ್ತಪಡಿಸಿದ್ದಾರೆ. 2026ರ ಮೈಸೂರು ದಸರಾದಲ್ಲಿ ಕಂಬಳ ಆಚರಣೆ ಮಾಡುವ ಪ್ರಸ್ತಾಪಕ್ಕೆ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ‘ಟಿವಿ9’ ಜತೆ ಮಾತನಾಡಿದ ಅವರು, ಕಂಬಳವು ಕರಾವಳಿ ಪ್ರದೇಶದ ವಿಶಿಷ್ಟ ಕ್ರೀಡೆಯಾಗಿದ್ದು, ಮೈಸೂರಿನ ಐತಿಹಾಸಿಕ ದಸರಾ ಮಹೋತ್ಸವದ ಭಾಗವಾಗಿರಬಾರದು. ಭಾರತದ ಪ್ರತಿಯೊಂದು ಪ್ರದೇಶವೂ ತನ್ನದೇ ಆದ ಅನನ್ಯ ಸಂಸ್ಕೃತಿ ಮತ್ತು…

Read More

Prasada in Hinduism: ಪೂಜೆಯ ನಂತರ ಪ್ರಸಾದ ವಿತರಿಸುವುದು ಏಕೆ ಮುಖ್ಯ? ಇಲ್ಲಿದೆ ಭಗವದ್ಗೀತೆ ಸಾರುವ ಅಸಲಿ ಮಹತ್ವ! – Kannada News | Prasada in Hinduism: Spiritual Significance and Benefits of Divine Offerings

ಪೂಜೆಯ ನಂತರ ಪ್ರಸಾದ ವಿತರಿಸುವುದು ಏಕೆ ಮುಖ್ಯ?Image Credit source: Getty Images ಹಿಂದೂ ಧರ್ಮದಲ್ಲಿ ಪೂಜೆ-ಪುನಸ್ಕಾರಗಳಿಗೆ ತನ್ನದೇ ಆದ ಕಟ್ಟುನಿಟ್ಟಿನ ನಿಯಮಗಳಿವೆ. ಅವುಗಳಲ್ಲಿ ಅತ್ಯಂತ ಪ್ರಮುಖವಾದದ್ದು ಪೂಜೆಯ ಕೊನೆಯಲ್ಲಿ ದೇವರಿಗೆ ನೈವೇದ್ಯವನ್ನು ಅರ್ಪಿಸುವುದು ಮತ್ತು ನಂತರ ಅದನ್ನು ‘ಪ್ರಸಾದ’ದ ರೂಪದಲ್ಲಿ ಎಲ್ಲರಿಗೂ ವಿತರಿಸುವುದು. ಪೂಜೆ ಮುಗಿದ ನಂತರ ಪ್ರಸಾದವನ್ನು ಇತರರಿಗೆ ಹಂಚಿ, ತಾವೂ ಸೇವಿಸಿದಾಗ ಮಾತ್ರ ಆ ಪೂಜೆಯು ಸಂಪೂರ್ಣ ಫಲವನ್ನು ನೀಡುತ್ತದೆ ಎಂದು ನಂಬಲಾಗಿದೆ. ಪ್ರಸಾದದ ಸ್ವೀಕಾರದಿಂದ ಮಾನಸಿಕ ಶಾಂತಿ ಮಾತ್ರವಲ್ಲದೆ, ದೈಹಿಕ ಕಾಯಿಲೆಗಳೂ…

Read More

‘ಪ್ಯಾರಡೈಸ್’ ಸಿನಿಮಾ ಮುಂದೂಡಿಕೆ, ‘ಟಾಕ್ಸಿಕ್’ ಕಾರಣವಾ? – Kannada News | Nani’s The Pradise movie avoids clash with Toxic

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಭಾರತದ ಬಹು ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಜಾಗತಿಕ ಮಟ್ಟದಲ್ಲಿಯೂ ಸಹ ಬಲು ಅದ್ಧೂರಿಯಾಗಿ ಈ ಸಿನಿಮಾ ಬಿಡುಗಡೆ ಆಗಲಿದೆ. ಭಾರತದಲ್ಲಿ ಕನ್ನಡ ಸೇರಿದಂತೆ ಇನ್ನೂ ಕೆಲವು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದ್ದು, ಪ್ರೇಕ್ಷಕರು ಸಿನಿಮಾಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಸಿನಿಮಾದ ಟೀಸರ್, ಹಾಡು, ಪೋಸ್ಟರ್​​ಗಳು ವೈರಲ್ ಆಗಿದ್ದು, ಸಿನಿಮಾ ಸಹ ಭರ್ಜರಿ ಹಿಟ್ ಆಗುವ ನಿರೀಕ್ಷೆ ಅಭಿಮಾನಿಗಳಿಗಿದೆ. ಸಿನಿಮಾ ಅದ್ಧೂರಿಯಾಗಿ ಬಿಡುಗಡೆ ಆಗುತ್ತಿರುವ ಕಾರಣ, ‘ಟಾಕ್ಸಿಕ್’…

Read More

ಕರ್ನಾಟಕ ಲೋಕ ಅದಾಲತ್‌ನಲ್ಲಿ ಹೊಸ ದಾಖಲೆ: ಶೇ.50 ಟ್ರಾಫಿಕ್‌ ದಂಡದ ಆಫರ್‌ಗೆ 19 ಲಕ್ಷ ಕೇಸ್ ಕ್ಲೋಸ್; ಸರ್ಕಾರಕ್ಕೆ 55 ಕೋಟಿ ಆದಾಯ – Kannada News | Mega Lok Adalat Success: KSLSA’s 50% Traffic Fine Scheme Boosts Revenue and Clears 78 Lakh Cases

ಬೆಂಗಳೂರು, ಜು.15: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (KSLSA) ವಿಶೇಷ ಪ್ರಯತ್ನದ ಫಲವಾಗಿ, ರಾಜ್ಯ ಸರ್ಕಾರವು ಸಂಚಾರ ನಿಯಮ ಉಲ್ಲಂಘನೆಯ ಬಾಕಿ ದಂಡದ ಪಾವತಿಗೆ ಘೋಷಿಸಿದ್ದ ಶೇಕಡಾ 50 ರಷ್ಟು ರಿಯಾಯಿತಿ ಯೋಜನೆಗೆ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಈ ರಿಯಾಯಿತಿ ಯೋಜನೆಯಡಿ ಒಟ್ಟು 19,13,659 ಸಂಚಾರ ಚಲನ್ ಪ್ರಕರಣಗಳು ಇತ್ಯರ್ಥಗೊಂಡಿದ್ದು, ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 55 ಕೋಟಿ ರೂಪಾಯಿ ದಂಡದ ಆದಾಯ ಹರಿದುಬಂದಿದೆ. ಜುಲೈ 11 ರಂದು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದ್ದ ಮೆಗಾ ಲೋಕ ಅದಾಲತ್‌ನಲ್ಲಿ…

Read More

Video: ರೈಲು ಹಳಿ ದಾಟಲು ಕಷ್ಟ ಪಡುತ್ತಿದ್ದ ಮರಿಯಾನೆಗೆ ತಾಯಾನೆ ಸಾಥ್‌, ವೈರಲ್‌ ಆಯ್ತು ದೃಶ್ಯ – Kannada News | Mother elephant prevents baby elephant from falling while crossing railway tracks.

ತಾಯಿಯೇ ಪ್ರೀತಿಯೇ ಹಾಗೆ, ವಿವರಿಸಲು ಪದಗಳೇ ಇಲ್ಲ. ಪ್ರಾಣಿಗಳು ಕೂಡ ತನ್ನ ಕಂದಮ್ಮಗಳ ಮೇಲೆ ಕಾಳಜಿ ವಹಿಸುತ್ತವೆ, ತಪ್ಪು ಮಾಡಿದರೆ ಗದರುತ್ತವೆ. ಇದೀಗ ತಾಯಾನೆ (mother elephant) ತನ್ನ ಮರಿಯನ್ನು ಎಷ್ಟು ಕೇರ್ ಮಾಡುತ್ತದೆ ಎನ್ನುವುದಕ್ಕೆ ಸಾಕ್ಷಿಯೆನ್ನುವಂತಿದೆ ಈ ದೃಶ್ಯ. ಹೌದು, ಮರಿಯಾನೆ ರೈಲು ಹಳಿ ದಾಟಲು ಕಷ್ಟ ಪಡುತ್ತಿದೆ. ಇದೇ ವೇಳೆ ತಾಯಿ ಆನೆ ತನ್ನ ಕಂದಮ್ಮನನ್ನು ರೈಲು ಹಳಿ ದಾಟಿಸಿ ತನ್ನ ಜತೆಗೆ ಕರೆದುಕೊಂಡು ಹೋಗಿರುವ ದೃಶ್ಯವು ನೆಟ್ಟಿಗರ ಗಮನ ಸೆಳೆದಿದೆ. ಎಲಿಫೆಂಟ್ ಸೆಕ್ಯೂರ್…

Read More

ನಿತಿನ್ ಗಡ್ಕರಿ ಇಮೇಜ್‌ಗೆ ಧಕ್ಕೆ: E20 ಇಂಧನ ನೀತಿ ವಿರುದ್ಧ ಅಪಪ್ರಚಾರ, ಮನೀಶ್ ಕಶ್ಯಪ್ ಸೇರಿ ನಾಲ್ವರ ವಿರುದ್ಧ ಎಫ್​ಐಆರ್ – Kannada News | Nitin Gadkari E20 Fuel FIR: Manish Kashyap and 3 Influencers Booked for Misinformation

ನಾಗ್ಪುರ, ಜುಲೈ 15: ಕೇಂದ್ರ ಸಚಿವ ನಿತಿನ್ ಗಡ್ಕರಿ(Nitin Gadkari) ಅವರ ಹೆಸರನ್ನು ದುರುಪಯೋಗಪಡಿಸಿಕೊಂಡು, ಎಥೆನಾಲ್ ಮಿಶ್ರಿತ ಇಂಧನ(E20 Petrol) ನೀತಿಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ದಾರಿತಪ್ಪಿಸುವ ಮಾಹಿತಿಯನ್ನು ಹರಡಿದ ಆರೋಪದ ಮೇಲೆ ಬಿಹಾರದ ಪ್ರಸಿದ್ಧ ಯೂಟ್ಯೂಬರ್ ಮನೀಷ್ ಕಶ್ಯಪ್ ಸೇರಿ ನಾಲ್ವರು ಇನ್​ಫ್ಲುಯೆನ್ಸರ್​ಗಳ ವಿರುದ್ಧ ನಾಗ್ಪುರ ಸೈಬರ್ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ. ಮನೀಶ್ ಕಶ್ಯಪ್ ಹೊರತುಪಡಿಸಿ, ಎಫ್‌ಐಆರ್‌ನಲ್ಲಿ ಹೆಸರಿಸಲಾದ ಇತರ ಸೋಶಿಯಲ್ ಮೀಡಿಯಾ ಇನ್​ಫ್ಲುಯೆನ್ಸರ್​ಗಳೆಂದರೆ ‘ದೇಸಿ ಬಾಯ್ಸ್ ಎನ್​ಸಿಆರ್’, ಹರ್ಷಿತ್ ರಥಿ ಮತ್ತು ಅಂಕಲೇಶ್ ಇನ್ವಾಟೆ….

Read More

ಕಾಫಿನಾಡಿನಲ್ಲಿ ಬಯಲಾಯ್ತು ಬೃಹತ್‌ ಬ್ಯಾಂಕ್‌ ಹಗರಣ: ಬಡವರ ಖಾತೆ ಬಳಸಿ ಕ್ರಿಕೆಟ್ ಬೆಟ್ಟಿಂಗ್ ಆ್ಯಪ್‌ ಮೂಲಕ ಕೋಟ್ಯಂತರ ರೂ. ಅಕ್ರಮ ವಹಿವಾಟು! – Kannada News | Chikkamagaluru Cyber Fraud: Mega Bank Scam Unearths Illicit Cricket Betting Transactions via Fake Accounts

ಕಾಫಿನಾಡಿನಲ್ಲಿ ಬಯಲಾಯ್ತು ಬೃಹತ್‌ ಬ್ಯಾಂಕ್‌ ಹಗರಣ ಚಿಕ್ಕಮಗಳೂರು, ಜುಲೈ 15: ಸಾಲ ಕೊಡಿಸುವ ಆಮಿಷವೊಡ್ಡಿ ಬಡವರು ಮತ್ತು ಕೂಲಿ ಕಾರ್ಮಿಕರ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು, ಕೋಟ್ಯಂತರ ರೂಪಾಯಿ ಅಕ್ರಮ ಹಣ ವರ್ಗಾವಣೆ ಮಾಡಿರುವ ಆಘಾತಕಾರಿ ಹಗರಣ ಚಿಕ್ಕಮಗಳೂರು ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಕಾಫಿನಾಡಿನ ಇತಿಹಾಸದಲ್ಲೇ ಇಂತಹ ಬೃಹತ್ ಸೈಬರ್ ವಂಚನೆ ಪ್ರಕರಣ ಇದೇ ಮೊದಲ ಬಾರಿಗೆ ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಬಡವರ ಆಧಾರ್ ಕಾರ್ಡ್‌ ದುರ್ಬಳಕೆ ಕಿಡಿಗೇಡಿಗಳು ದಿನಗೂಲಿ ಮಾಡುವ…

Read More

ಆಲೂಗಡ್ಡೆ ಚಿಪ್ಸ್ ಪ್ರಿಯರೇ ಹುಷಾರ್: ಕೊಳೆತ ಆಲೂಗಡ್ಡೆ, ಗಲೀಜು ನೀರಿಂದ ಚಿಪ್ಸ್ ತಯಾರಿ – Kannada News | Unsafe Chips Alert! Devanahalli Bakery Sealed for Using Rotten Potatoes & Filthy Water

ದೇವನಹಳ್ಳಿ, ಜು.15: ನೀವು ಬೇಕರಿಗಳಲ್ಲಿ ಬಾಯಿ ಚಪ್ಪರಿಸಿ ತಿನ್ನುವ ಆಲೂಗಡ್ಡೆ ಚಿಪ್ಸ್ ಎಷ್ಟು ಸುರಕ್ಷಿತ ಗೊತ್ತಾ? ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ಒಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ರಸ್ತೆ ಬದಿಯ ಬೇಕರಿಯೊಂದರಲ್ಲಿ ಸಾರ್ವಜನಿಕರ ಕಣ್ಣೆದುರೇ ಕೊಳೆತ ಆಲೂಗಡ್ಡೆ ಹಾಗೂ ಗಲೀಜು ನೀರನ್ನು ಬಳಸಿ ಚಿಪ್ಸ್ ತಯಾರಿಸುತ್ತಿದ್ದ ಕೃತ್ಯ ಬಯಲಾಗಿದ್ದು, ಅಧಿಕಾರಿಗಳು ತಕ್ಷಣವೇ ಬೇಕರಿಯನ್ನು ಸೀಜ್ ಮಾಡಿದ್ದಾರೆ. ವಿಜಯಪುರ ಪಟ್ಟಣದ ‘ಶ್ರೀಸಾಯಿರಾಮ್ ಹಾಟ್ ಚಿಪ್ಸ್’ ಬೇಕರಿಯಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ನಿವಾಸಿಯಾದ…

Read More