ಮಹಿಳೆಯರ ಕಷ್ಟ ಕೇಳೋಕೆ ಎಲ್ಲರೂ ಇರ್ತಾರೆ, ಆದ್ರೆ ಪುರುಷರ ನೋವು ಕೇಳೋರ ಯಾರು? – Kannada News | “Men Also Face Cruelty”: Karnataka Witnessing Formation of a National Mens Rights Protection Committee.

ಮಂಡ್ಯ, ಜು.4: ಜಿಲ್ಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಪುರುಷರ ಹಿತರಕ್ಷಣಾ ಸಮಿತಿ ಎಂಬ ಹೊಸ ಸಂಸ್ಥೆ ರಚನೆಯಾಗಿದೆ. ಮಹಿಳೆಯರಿಗೆ ಯಾವುದೇ ರೀತಿಯ ತೊಂದರೆಯಾದಾಗ ಮಾಧ್ಯಮ, ಪೊಲೀಸ್ ಮತ್ತು ಸಾರ್ವಜನಿಕರ ಗಮನ ತಕ್ಷಣವೇ ಸೆಳೆಯುತ್ತದೆ. ಆದರೆ, ಪುರುಷರ ಮೇಲೆ ನಡೆಯುವ ದೌರ್ಜನ್ಯ ಅಥವಾ ಕಿರುಕುಳಕ್ಕೆ ಅಷ್ಟೊಂದು ಗಮನ ಸಿಗುತ್ತಿಲ್ಲ ಎಂದು ಈ ಸಮಿತಿಯ ಸದಸ್ಯರು ಮತ್ತು ಮಾಜಿ ಎಂಎಲ್ಸಿ ಹೆಚ್. ವಿಶ್ವನಾಥ್ ವಿಷಾದ ವ್ಯಕ್ತಪಡಿಸಿದ್ದಾರೆ. ರಜಿನಿ ರಾಜ್ ಅವರು ಈ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾಗಿದ್ದಾರೆ. ಪುರುಷರ ಹಕ್ಕುಗಳನ್ನು ರಕ್ಷಿಸುವುದು ಮತ್ತು ಅವರಿಗೆ ಎದುರಾಗುವ ಸಮಸ್ಯೆಗಳನ್ನು ಪರಿಹರಿಸುವುದು ಈ ಸಮಿತಿಯ ಮುಖ್ಯ ಧ್ಯೇಯವಾಗಿದೆ. ಮಹಿಳೆಯರಿಂದ ಪುರುಷರ ಮೇಲೆ ನಡೆಯುವ ದೌರ್ಜನ್ಯಗಳ ಬಗ್ಗೆ ಇತ್ತೀಚೆಗೆ ಮೈಸೂರು, ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ವರದಿಯಾದ ಕೆಲವು ಘಟನೆಗಳನ್ನು ಉಲ್ಲೇಖಿಸಿ, ಪೊಲೀಸರು ಪುರುಷರ ದೂರುಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಆರೋಪಿಸಲಾಗಿದೆ. ಈ ಸಮಿತಿಯು ಪುರುಷರಿಗೆ ಆಗುವ ಅನ್ಯಾಯವನ್ನು ಎತ್ತಿ ಹಿಡಿದು, ಅದಕ್ಕೆ ಪರಿಹಾರ ಒದಗಿಸಲು ಶ್ರಮಿಸಲಿದೆ. ಮಾಧ್ಯಮಗಳು ಈ ಪ್ರಯತ್ನಕ್ಕೆ ಬೆಂಬಲ ನೀಡುವಂತೆ ಸಮಿತಿ ಮನವಿ ಮಾಡಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಏನಾದ್ರು ಆಗ್ಲಿ, ನಾನು ಕ್ಷಮೆ ಕೇಳಲ್ಲ’: ಸೋನು ಗೌಡ ದಿಟ್ಟ ಮಾತು – Kannada News | Sonu Gowda says she wont apologize for her statement about men

ಮಾಜಿ ಬಿಗ್​​ಬಾಸ್ (Bigg Boss) ಸ್ಪರ್ಧಿ, ಸಾಮಾಜಿಕ ಜಾಲತಾಣ ಇನ್​​ಫ್ಲುಯೆನ್ಸರ್ ಆಗಿರುವ ಸೋನು ಗೌಡ ಈಗ ಮತ್ತೊಮ್ಮೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇತ್ತೀಚೆಗೆ ನಟಿ ಹುಡುಗರ ಬಗ್ಗೆ ಆಡಿರುವ ಮಾತು ವಿವಾದಕ್ಕೆ ಕಾರಣವಾಗಿದೆ. ಇದೀಗ ಸೋನು ಗೌಡ ಟಿವಿ9 ಜೊತೆಗೆ ಈ ಬಗ್ಗೆ ಮಾತನಾಡಿದ್ದು, ‘ಮೋಸ ಮಾಡುವ ಹುಡುಗರ ಬಗ್ಗೆ’ ನಾನು ತಮಾಷೆಯಾಗಿ ಹೇಳಿದ ಮಾತನ್ನು ಗಂಭೀರವಾಗಿ ತೆಗೆದುಕೊಂಡು ನನ್ನ ಮೇಲೆ ದಾಳಿ ಮಾಡಲಾಗುತ್ತಿದೆ. ಆದರೆ ನಾನು ಇದಕ್ಕೆಲ್ಲ ಹೆದರುವಳಲ್ಲ. ನಾನು ತಪ್ಪಾಗಿ ಹೇಳಿಲ್ಲ ಹಾಗಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಏನೇ ಆಗಲಿ ನಾನು ಕ್ಷಮೆ ಕೇಳುವುದಿಲ್ಲ’ ಎಂದಿದ್ದಾರೆ ಸೋನು ಗೌಡ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

“ಕೋಪದ ಕೈಗೆ ಬುದ್ಧಿ ಕೊಡಬೇಡಿ, ಜೈಲಿನಲ್ಲಿ ಎಲ್ಲ ಕಳೆದುಕೊಂಡೆ”: ಕೊಲೆ ಕೇಸ್‌ನಲ್ಲಿ ಜೈಲಿಗೆ ಹೋದ್ರೂ ಕೈಬಿಡದ ಪ್ರೇಯಸಿ – Kannada News | Don’t Let Anger Guide You”: Manikantha’s 14 Year Jail Story, Love’s Loyalty and Advice

ಬೆಂಗಳೂರು, ಜು.4 : ತಿಳಿಯದೇ ಮಾಡಿದ ಒಂದು ತಪ್ಪು ಇಡೀ ಬದುಕನ್ನೇ ಕತ್ತಲಿಗೆ ತಳ್ಳಬಹುದು. ಜೈಲು ಶಿಕ್ಷೆ ಮನುಷ್ಯನನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ ಎನ್ನುವುದಕ್ಕೆ ಸನ್ನಡತೆ ಆಧಾರದ ಮೇಲೆ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದ ಮಣಿಕಂಠ ಅವರ ಕಥೆಯೇ ಸಾಕ್ಷಿ. ಆಕಸ್ಮಿಕವಾಗಿ ನಡೆದ ಕೊಲೆ ಪ್ರಕರಣದಲ್ಲಿ ಸಿಲುಕಿ ಬರೋಬ್ಬರಿ 14 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಇಂದು ಮುಕ್ತರಾಗಿ ಹೊರಬಂದ ಮಣಿಕಂಠ, ತಮ್ಮ ಜೀವನದ ಏಳುಬೀಳುಗಳನ್ನು ಹಂಚಿಕೊಂಡಿದ್ದಾರೆ.

ಮಣಿಕಂಠ ಅವರ ಈ ಕಷ್ಟದ ದಿನಗಳಲ್ಲೂ ಅವರ ಕೈಹಿಡಿದಿದ್ದು ಅವರ ಪ್ರೀತಿಸಿದ ಹುಡುಗಿ. ಕೊಲೆ ಪ್ರಕರಣದಲ್ಲಿ ಜೈಲು ಸೇರುವ ಮುನ್ನ ಮಣಿಕಂಠ ಒಬ್ಬ ಯುವತಿಯನ್ನು ತುಂಬಾ ಪ್ರೀತಿಸುತ್ತಿದ್ದರು. ತಾನು ಪ್ರೀತಿಸಿದ ಹುಡುಗ ಕೊಲೆ ಕೇಸ್‌ನಲ್ಲಿ 14 ವರ್ಷ ಜೈಲು ಪಾಲಾದರೂ ಆ ಯುವತಿ ಮಾತ್ರ ಆತನ ಮೇಲಿನ ಪ್ರೀತಿಯನ್ನು ಕೈಬಿಡಲಿಲ್ಲ. ಜೈಲಿನಲ್ಲಿದ್ದರೂ ಅವರಿಗಾಗಿ ಕಾದಿದ್ದರು.

ಹುಡುಗಿಯ ನಿಶ್ಚಲ ಪ್ರೀತಿಗೆ ಗೌರವ ಕೊಟ್ಟ ಮಣಿಕಂಠ, ಕಳೆದ 2017ರಲ್ಲಿ ಜೈಲಿನಿಂದ ಪೆರೋಲ್ ಮೇಲೆ ಹೊರಬಂದಾಗ ತಮ್ಮ ಮನೆ ದೇವರ ದೇವಸ್ಥಾನದಲ್ಲಿ ಆಕೆಯನ್ನು ಮದುವೆಯಾದರು. ಸದ್ಯ ಈ ದಂಪತಿಗೆ 7 ವರ್ಷದ ಮಗನಿದ್ದು, ಆತ ಈಗ ಒಂದನೇ ತರಗತಿಯಲ್ಲಿ ಓದುತ್ತಿದ್ದಾನೆ.

ಜೈಲಿನಲ್ಲಿ 10 ವರ್ಷ ಬೇಕರಿ ಕೆಲಸ:

ಜೈಲು ಜೀವನದ ಬಗ್ಗೆ ಮಾತನಾಡಿದ ಮಣಿಕಂಠ, “ಕಾನೂನಿನ ಅರಿವಿಲ್ಲದೆ, ಸಿಟ್ಟಿನ ಕೈಗೆ ಬುದ್ಧಿ ಕೊಟ್ಟು ಮಾಡಿದ ತಪ್ಪಿನಿಂದಾಗಿ 14 ವರ್ಷ ಜೈಲಿನಲ್ಲಿ ಕಳೆಯಬೇಕಾಯಿತು. ಜೈಲು ಶಿಕ್ಷೆಯೇ ನನ್ನ ಮನಪರಿವರ್ತನೆ ಮಾಡಿದೆ. ಜೈಲಿನಲ್ಲಿದ್ದಾಗ ಸುಮಾರು 10 ವರ್ಷಗಳ ಕಾಲ ಬೇಕರಿ ಕೆಲಸ ಮಾಡಿಕೊಂಡಿದ್ದೆ. ಅಲ್ಲಿ ಎಲ್ಲವನ್ನೂ ಕಳೆದುಕೊಂಡಿದ್ದೇನೆ. ತಂದೆ-ತಾಯಿ, ಇಡೀ ಕುಟುಂಬವನ್ನು ಬಿಟ್ಟು ಬದುಕುವುದು ಎಷ್ಟು ಕಷ್ಟ ಎಂಬುದು ನನಗೀಗ ಅರ್ಥವಾಗಿದೆ” ಎಂದು ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ: ಸನ್ನಡತೆ ಆಧಾರದ ಮೇಲೆ ಪರಪ್ಪನ ಅಗ್ರಹಾರದಿಂದ 24 ಜೀವಾವಧಿ ಖೈದಿಗಳಿಗೆ ಅವಧಿ ಪೂರ್ವ ಬಿಡುಗಡೆ ಭಾಗ್ಯ

ಯುವಕರಿಗೆ ಮಣಿಕಂಠ ಕಿವಿಮಾತು:

“ಯಾರೂ ಕೂಡ ಕೋಪದ ಕೈಗೆ ಬುದ್ಧಿ ಕೊಡಬೇಡಿ, ಎಲ್ಲವನ್ನೂ ಪ್ರೀತಿಯಿಂದಲೇ ಗೆಲ್ಲಬೇಕು. ಇಲ್ಲದಿದ್ದರೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ನಿಮ್ಮ ಅಮೂಲ್ಯವಾದ ಸಮಯ, ಹೆತ್ತ ತಂದೆ-ತಾಯಿಯ ಪ್ರೀತಿ ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ” ಎಂದು ಯುವ ಪೀಳಿಗೆಗೆ ಮಣಿಕಂಠ ಕಿವಿಮಾತು ಹೇಳಿದ್ದಾರೆ. “ಈಗ ಪತ್ನಿ ಮತ್ತು ಮಗನ ಜೊತೆ ಹೊಸದಾಗಿ ನೆಮ್ಮದಿಯ ಜೀವನ ಶುರು ಮಾಡುತ್ತೇನೆ” ಎಂದು ಅವರು ಭಾವುಕರಾಗಿ ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:56 pm, Sat, 4 July 26

Source link

ಗಂಡನನ್ನು ಕೊಂದು, ಬಾತ್​​ರೂಂನಲ್ಲಿ ಶವ ಹೂತಿಟ್ಟ ಹೆಂಡತಿ; ಪತಿ ನಾಪತ್ತೆಯಾಗಿದ್ದಾನೆಂದು ನಾಟಕ – Kannada News | Agra wife Kills her Husband Buries Body In Bathroom how the death secret revealed

ಆಗ್ರಾ, ಜುಲೈ 4: ಉತ್ತರ ಪ್ರದೇಶದ ಆಗ್ರಾದಲ್ಲಿ (Agra) 40 ವರ್ಷದ ಮಹಿಳೆಯೊಬ್ಬಳು ತನ್ನ ಪತಿಯನ್ನು ಕೊಲೆ ಮಾಡಿ, ಶವವನ್ನು ತನ್ನದೇ ಮನೆಯ ಬಾತ್‌ರೂಂನಲ್ಲಿ ಹೂತಿಟ್ಟಿದ್ದ ಭೀಕರ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಕೊಲೆ ಮತ್ತು ಸಾಕ್ಷ್ಯ ನಾಶದ ಕೃತ್ಯದಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಕೋನದಲ್ಲಿ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆಕೆಯ ಮನೆಯ ಬಾತ್‌ರೂಂ ನೆಲದ ಮೇಲಿದ್ದ ಪ್ಲಾಸ್ಟರ್ ಪದರವನ್ನು ಕಾರ್ಮಿಕರ ಸಹಾಯದಿಂದ ಒಡೆದು ಪೊಲೀಸರು ಶವವನ್ನು ಹೊರತೆಗೆದಿದ್ದಾರೆ. ಪತಿ ನಾಪತ್ತೆಯಾಗಿದ್ದಾನೆ ಎಂದು ದೂರು ದಾಖಲಾದ ದಿನದಿಂದ ಕಳೆದ 45 ದಿನಗಳಿಂದ ಪೊಲೀಸರು ಈ ಪ್ರಕರಣದ ಬೆನ್ನುಬಿದ್ದಿದ್ದರು.

ಪೊಲೀಸರ ಜೊತೆಗೇ ಇದ್ದು ನಾಟಕವಾಡಿದ ಪತ್ನಿ!

ಈ ಪ್ರಕರಣದ ತನಿಖೆಯ ಅವಧಿಯಲ್ಲಿ, ರೂಬಿ ಶರ್ಮ ಎಂಬ ಈ ಆರೋಪಿ ಮಹಿಳೆ ತನ್ನ ಪತಿ ಸುರೇಂದ್ರ ಶರ್ಮನ ಪತ್ತೆಗಾಗಿ ಪೊಲೀಸರ ಜೊತೆಗೂಡಿ ಹುಡುಕುವಂತೆ ನಾಟಕವಾಡಿ ಹಾದಿ ತಪ್ಪಿಸಲು ಯತ್ನಿಸಿದ್ದಾಳೆ. ಆದರೆ, ಕೊಲೆಯಾದ ಸುರೇಂದ್ರನ ಸಹೋದರನಿಗೆ ರೂಬಿಯ ಮೇಲೆ ಅನುಮಾನ ಬಂದ ಹಿನ್ನೆಲೆಯಲ್ಲಿ ಪೊಲೀಸರಿಗೆ ಈ ಪ್ರಕರಣದಲ್ಲಿ ದೊಡ್ಡ ಸುಳಿವು ಸಿಕ್ಕಿತ್ತು.

ಇದನ್ನೂ ಓದಿ: ನ್ಯಾಯಾಲಯದಲ್ಲಿ ಹೈಡ್ರಾಮಾ; ಸಿಯಾ ಗೋಯಲ್ ಸಹೋದರನಿಗೆ ವಕೀಲರಿಂದ 10 ಕೋಟಿ ರೂ. ಮಾನನಷ್ಟ ನೋಟಿಸ್ ಜಾರಿ!

ನನ್ನ ಗಂಡ ನಾಪತ್ತೆಯಾದಾಗಿನಿಂದ ನನಗೆ ದಿಕ್ಕೇ ತೋಚದಂತಾಗಿದೆ ಎಂದು ಗೋಳಾಡುತ್ತಿದ್ದ ಆಕೆ ನೆರೆಹೊರೆಯವರ ಮುಂದೆ ಕಣ್ಣೀರಿಟ್ಟು ನಾಟಕವಾಡುತ್ತಿದ್ದಳು. ಆದರೆ, ಸುರೇಂದ್ರ ನಾಪತ್ತೆಯಾದ ಸಂದರ್ಭ ಮತ್ತು ಆಕೆ ನೀಡುತ್ತಿದ್ದ ಹೇಳಿಕೆಗಳ ನಡುವೆ ಹಲವಾರು ವ್ಯತ್ಯಾಸಗಳಿರುವುದನ್ನು ಸುರೇಂದ್ರನ ಕುಟುಂಬಸ್ಥರು ಗಮನಿಸಿದ್ದರು.

ನಿದ್ರೆ ಮಾತ್ರೆ ಬೆರೆಸಿದ ಪಾಯಸ ನೀಡಿದ್ದಳು:

ಆರೋಪಿ ರೂಬಿ ಶರ್ಮ ತನ್ನ 44 ವರ್ಷದ ಪತಿ ಸುರೇಂದ್ರ ಶರ್ಮನನ್ನು ಕೊಲೆ ಮಾಡಿ, ಶವವನ್ನು ಬಾತ್‌ರೂಂ ನೆಲದ ಅಡಿಯಲ್ಲಿ ಹೂತು, ಆ ಜಾಗವನ್ನು ಕಾಂಕ್ರೀಟ್ ಮತ್ತು ಹೊಸ ಟೈಲ್ಸ್‌ಗಳಿಂದ ಮುಚ್ಚಿದ್ದಳು. ಪತಿ ನಾಪತ್ತೆಯಾಗಿದ್ದಾನೆ ಎಂದು ಸುಳ್ಳು ಹೇಳುತ್ತಾ ಆಕೆ ಅದೇ ಮನೆಯಲ್ಲಿ ವಾಸ ಮುಂದುವರಿಸಿದ್ದಳು.

ಏನಿದು ಪ್ರಕರಣ?:

ಮೇ 26ರಂದು ಸಿಕಂದ್ರಾ ಪೊಲೀಸ್ ಠಾಣೆಯಲ್ಲಿ ಸುರೇಂದ್ರ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ತನಿಖೆ ನಡೆಸುತ್ತಿದ್ದ ಅಧಿಕಾರಿಗಳಿಗೆ ಕುಟುಂಬದ ಸದಸ್ಯರು ನೀಡಿದ ಹೇಳಿಕೆಗಳಲ್ಲಿ ವ್ಯತ್ಯಾಸಗಳು ಕಂಡುಬಂದವು. ಅಲ್ಲದೆ, ಕುಟುಂಬದ ಬ್ಯಾಂಕ್ ಖಾತೆಯಿಂದ ಶಂಕಾಸ್ಪದವಾಗಿ ಹಣ ಡ್ರಾ ಆಗುತ್ತಿರುವುದು ಅವರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ತನಿಖೆಯನ್ನು ತೀವ್ರಗೊಳಿಸಲಾಯಿತು. ಈ ತನಿಖೆಯು ಅಂತಿಮವಾಗಿ ಪೊಲೀಸರನ್ನು ಆಗ್ರಾದ ದೇಹ್ಟೋರಾ ಪ್ರದೇಶದ ರೇಣುಕಾ ಧಾಮ್ ಕಾಲೋನಿಯಲ್ಲಿರುವ ದಂಪತಿಯ ಮನೆಗೆ ಕರೆದೊಯ್ದಿತು. ಅಧಿಕಾರಿಗಳು ಬಾತ್‌ರೂಂನ ಟೈಲ್ಸ್ ನೆಲವನ್ನು ಒಡೆದು ಸುರೇಂದ್ರನದ್ದೇ ಇರಬಹುದು ಎಂದು ಶಂಕಿಸಲಾದ ಅಸ್ಥಿಪಂಜರವನ್ನು ವಶಪಡಿಸಿಕೊಂಡರು. ಸಾವಿನ ನಿಖರ ಕಾರಣವನ್ನು ಕಂಡುಹಿಡಿಯಲು ಶವದ ಅವಶೇಷಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಇದನ್ನೂ ಓದಿ: 3 ವರ್ಷದ ಮಗುವಿನ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿದ 65 ವರ್ಷದ ವ್ಯಕ್ತಿಗೆ ಗಲ್ಲು ಶಿಕ್ಷೆ!

ಮರಣೋತ್ತರ ಪರೀಕ್ಷೆಗೆ ಶವ ರವಾನೆ:

ಸದ್ಯಕ್ಕೆ ಸುರೇಂದ್ರನ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಶವವನ್ನು ಹೂತುಹಾಕಲು ರೂಬಿಗೆ ಬೇರೆ ಯಾರಾದರೂ ಸಹಾಯ ಮಾಡಿದ್ದಾರೆಯೇ? ಈ ಪ್ರಕರಣದಲ್ಲಿ ಇನ್ನೂ ಹೆಚ್ಚಿನ ಆರೋಪಿಗಳು ಭಾಗಿಯಾಗಿದ್ದಾರೆಯೇ? ಎಂಬ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಸುರೇಂದ್ರ ಕೆಲವು ಸಮಯದಿಂದ ನಿರುದ್ಯೋಗಿಯಾಗಿದ್ದ ಮತ್ತು ಮದ್ಯದ ವ್ಯಸನಿಯಾಗಿದ್ದ. ಆತ ಮದ್ಯ ಖರೀದಿಸಲು ರೂಬಿ ಬಳಿ ಪದೇ ಪದೇ ಹಣಕ್ಕಾಗಿ ಪೀಡಿಸುತ್ತಿದ್ದ ಮತ್ತು ಆಕೆ ನಿರಾಕರಿಸಿದಾಗ ಆಕೆಯ ಮೇಲೆ ಹಲ್ಲೆ ನಡೆಸುತ್ತಿದ್ದ ಎನ್ನಲಾಗಿದೆ. ದಂಪತಿಗಳು ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ.

ಈ ದಂಪತಿಗೆ ಮದುವೆಯಾಗಿ ಸುಮಾರು 16 ವರ್ಷಗಳಾಗಿದ್ದು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸುರೇಂದ್ರನ ದಿವಂಗತ ತಂದೆಯ ಪೆನ್ಷನ್ (ಪಿಂಚಣಿ) ಹಣವೇ ಇವರ ಪ್ರಾಥಮಿಕ ಆದಾಯದ ಮೂಲವಾಗಿತ್ತು. ಇದನ್ನು ಸುರೇಂದ್ರ ಮತ್ತು ಆತನ ಸಹೋದರ ಅನಿಲ್ ಶರ್ಮಾ ಹಂಚಿಕೊಳ್ಳುತ್ತಿದ್ದರು. ಈ ಕೊಲೆ ಮೇ 18 ರಂದು ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಖೀರ್‌ನಲ್ಲಿ ನಿದ್ದೆ ಮಾತ್ರೆ:

ರೂಬಿ ತನ್ನ ಪತಿಗೆ ನೀಡುವ ಮುನ್ನ ಒಂದು ಬೌಲ್ ಖೀರ್‌ನಲ್ಲಿ ಭಾರಿ ಪ್ರಮಾಣದ ನಿದ್ದೆ ಮಾತ್ರೆಗಳನ್ನು ಬೆರೆಸಿದ್ದಳು ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ. ಆತ ಮಲಗಿದ್ದಾಗ ಯಾವುದೇ ಚಲನೆ ಇಲ್ಲದಿರುವುದನ್ನು ಕಂಡ ಅವರ ಹೆಣ್ಣು ಮಕ್ಕಳಿಗೆ ಯಾವುದೇ ಅನುಮಾನ ಬರಲಿಲ್ಲ. ಏಕೆಂದರೆ ಆತ ಮದ್ಯ ಸೇವಿಸಿದರೆ ಇದೇ ರೀತಿ ದಿನಗಟ್ಟಲೆ ಮಲಗಿರುತ್ತಿದ್ದರು. ಸುರೇಂದ್ರನಿಗೆ ಪ್ರಜ್ಞೆ ತಪ್ಪಿದ ನಂತರ ಆತನನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಸಾವಿನ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.

ಕೊಲೆ ನಡೆದ ಮರುದಿನ ಬೆಳಗ್ಗೆ ರೂಬಿ ತನ್ನ ಹೆಣ್ಣು ಮಕ್ಕಳನ್ನು ಮೈದುನನ ಮನೆಗೆ ಬಿಟ್ಟು ವಾಪಸ್ ಮನೆಗೆ ಬಂದಿದ್ದಳು. ನಂತರ ಬಾತ್‌ರೂಂನೊಳಗೆ ಹೊಂಡ ತೋಡಿ, ಸುರೇಂದ್ರನ ಶವವನ್ನು ನೆಲದ ಅಡಿಯಲ್ಲಿ ಹೂತು, ಕಾಂಕ್ರೀಟ್‌ನಿಂದ ಮುಚ್ಚಿ, ಅಪರಾಧವನ್ನು ಮರೆಮಾಚಲು ಅದರ ಮೇಲೆ ಹೊಸ ಟೈಲ್ಸ್‌ಗಳನ್ನು ಹಾಕಿದ್ದಾಳೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ತನ್ನ ಮೇಲೆ ಯಾರಿಗೂ ಅನುಮಾನ ಬರಬಾರದು ಎಂದು ಆಕೆ ತಾನೇ ಹೋಗಿ ತನ್ನ ಗಂಡ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದರು.

ಆದರೆ, ಸುರೇಂದ್ರ ನಾಪತ್ತೆಯಾದ ನಂತರವೂ ಕುಟುಂಬದ ಪೆನ್ಷನ್ ಖಾತೆಯಿಂದ ಹಣ ಡ್ರಾ ಆಗುತ್ತಿರುವುದನ್ನು ಸುರೇಂದ್ರನ ಸಹೋದರ ಅನಿಲ್ ಶರ್ಮಾ ಗಮನಿಸಿದಾಗ ತನಿಖೆ ಮಹತ್ವದ ತಿರುವು ಪಡೆಯಿತು. ಸುರೇಂದ್ರ ತನ್ನ ಬಳಿಯೇ ಎಟಿಎಂ ಕಾರ್ಡ್ ಹೊಂದಿದ್ದರಿಂದ ಅನಿಲ್ ಈ ವಿಷಯವನ್ನು ಪೊಲೀಸರಿಗೆ ತಿಳಿಸಿದರು. ಇದರಿಂದ ತನಿಖಾಧಿಕಾರಿಗಳ ಅನುಮಾನ ರೂಬಿ ಕಡೆಗೆ ತಿರುಗಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಪ್ಯಾಟೆ ಮಂದಿ..’ ರಿಯಾಲಿಟಿ ಶೋ ಸ್ಪರ್ಧಿ ಪದ್ದು ನಿಧನ: ನಡೆದಿದ್ದೇನು? – Kannada News | Reality show contestant Paddu Gowda passed away, what was happened to him

‘ಪ್ಯಾಟೆ ಮಂದಿ ಕಾಡಿಗೆ ಬಂದ್ರು’ ರಿಯಾಲಿಟಿ ಶೋ (Reality Show) ಸ್ಪರ್ಧಿ ಆಗಿದ್ದ ಪದ್ದು ಗೌಡ ಅಲಿಯಾಸ್ ಪದ್ಮನಾಭ್ ಗೌಡ ಅವರು ನಿಧನ ಹೊಂದಿದ್ದಾರೆ. ಅವರು ಕಳೆದ ಕೆಲ ಸಮಯದಿಂದಲೂ ಅನಾರೋಗ್ಯದಿಂದಿದ್ದರು. ಪದ್ದು ಗೌಡ ಜೊತೆಗೆ ‘ಪ್ಯಾಟೆ ಮಂದಿ ಕಾಡಿಗೆ ಬಂದ್ರು’ ರಿಯಾಲಿಟಿ ಶೋನಲ್ಲಿ ಸಹ ಸ್ಪರ್ಧಿ ಆಗಿದ್ದ ಭಾರತಿ ಅವರು ಪದ್ದು ಬಗ್ಗೆ, ಅವರಿಗೆ ಆಗಿದ್ದ ಸಮಸ್ಯೆ ಬಗ್ಗೆ, ಇನ್ನೂ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಪದ್ದುಗೆ ಇದ್ದ ಜೀವನ ಪ್ರೀತಿಯ ಬಗ್ಗೆಯೂ ಸಹ ಅವರು ಮಾತನಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಳಗಾವಿ: ಧಾರಾಕಾರ ಮಳೆಗೆ ಕುಸಿದ ಮನೆ ಗೋಡೆ; 7 ಜನರು ಜಸ್ಟ್ ಮಿಸ್​! – Kannada News | Belagavi: Seven Have Narrow Escape After House Wall Collapses in Heavy Rain

ಬೆಳಗಾವಿ, ಜುಲೈ 04: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮಳೆರಾಯ ಅಕ್ಷರಶಃ ರೌದ್ರಾವತಾರ ತಾಳಿದೆ. ಒಂದು ಕಡೆ ವರುಣಾರ್ಭಟಕ್ಕೆ ಮನೆ ಒಳಗೆ ನೀರು ನುಗ್ಗಿದ್ದರೆ, ಮತ್ತೊಂದು ಕಡೆ ಮನೆ ಗೋಡೆ ಕುಸಿದು ಬಿದ್ದಿದೆ. ಚಿಕ್ಕೋಡಿ ತಾಲೂಕಿನ ಜೋಡರಕುರುಳಿ ಗ್ರಾಮದಲ್ಲಿ ಗಂಗವ್ವ ವರಾಳೆ ಎಂಬುವವರಿಗೆ ಸೇರಿದ ಮನೆಯ ಗೋಡೆ ಕುಸಿದು ಬಿದ್ದಿದೆ. ಗೋಡೆ ಕುಸಿಯುವ ಭೀಕರ ಶಬ್ದ ಕೇಳಿ ಮನೆಯಲ್ಲಿದ್ದ 7 ಜನರು ತಕ್ಷಣ ಹೊರಗೆ ಓಡಿ ಬಂದಿದ್ದರಿಂದ ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ಸದ್ಯ ಮನೆ ಕಳೆದುಕೊಂಡು ಇಡೀ ಕುಟುಂಬ ಬೀದಿಗೆ ಬಿದ್ದಿದೆ. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅವಘಡ ಸಂಭವಿಸಿದೆ. ಬೆಳಗಾವಿ ನಗರದ ವೀರಭದ್ರ ನಗರದಲ್ಲೂ ಮಳೆ ಅವಾಂತರ ಸೃಷ್ಟಿಸಿದ್ದು, ಮೊಹಮ್ಮದ್ ಅಲಿ ಎಂಬುವವರ ಮನೆ ಸೇರಿದಂತೆ ಮೂರ್ನಾಲ್ಕು ಮನೆಗಳಿಗೆ ಮಳೆನೀರು ನುಗ್ಗಿದೆ. ಇದರಿಂದ ದವಸ ಧಾನ್ಯ, ಗೃಹೋಪಯೋಗಿ ಸಾಮಗ್ರಿಗಳು ನೀರಿನಲ್ಲಿ ಮುಳುಗಡೆಯಾಗಿದ್ದು, ನಿವಾಸಿಗಳು ಪರದಾಡುವಂತಾಗಿದೆ. ಮಹಾನಗರ ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಆಕ್ರೋಶ ಹೊರಹಾಕಿರುವ ಜನ, ಕೂಡಲೇ ಚರಂಡಿ ಸ್ವಚ್ಛಗೊಳಿಸುವಂತೆ ಒತ್ತಾಯಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ನಟ ಯಶ್ ಗುಣಗಾನ ಮಾಡಿದ ಕಾಜಲ್, ನಟಿ ಹೇಳಿದ್ದೇನು? – Kannada News | Kajal Aggarwal praised her Ramayana movie co actor Yash

ಯಶ್ (Yash) ನಟನೆಯ ಎರಡು ಸಿನಿಮಾಗಳು ಈ ವರ್ಷ ಬಿಡುಗಡೆ ಆಗಲಿವೆ. ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಸಿನಿಮಾಗಳು ಕೇಲವೇ ತಿಂಗಳ ಅಂತರದಲ್ಲಿ ಚಿತ್ರಮಂದಿರಕ್ಕೆ ಬರಲಿವೆ. ಎರಡೂ ಸಿನಿಮಾಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಸ್ಟಾರ್ ನಟ-ನಟಿಯರು ಕೆಲಸ ಮಾಡಿದ್ದಾರೆ. ಇವರುಗಳಲ್ಲಿ ಹಲವರು ಯಶ್ ಅವರ ಬಗ್ಗೆ ಬೇರೆ-ಬೇರೆ ಸಂದರ್ಶನಗಳಲ್ಲಿ ಮಾತನಾಡಿದ್ದು, ಯಶ್ ಅವರ ವ್ಯಕ್ತಿತ್ವ, ಅವರ ಕೆಲಸ ಮಾಡುವ ರೀತಿಯನ್ನು ಕೊಂಡಾಡಿದ್ದಾರೆ. ಇತ್ತೀಚೆಗಷ್ಟೆ ನಟಿಯರಾದ ಹುಮಾ ಖುರೇಷಿ, ತಾರಾ ಸುತಾರಿಯಾ, ಕಿಯಾರಾ ಅಡ್ವಾಣಿ ಇನ್ನೂ ಕೆಲವರು ಯಶ್ ಅವರ ಬಗ್ಗೆ ಮಾತನಾಡಿದ್ದರು, ಇದೀಗ ನಟಿ ಕಾಜಲ್ ಅಗರ್ವಾಲ್ ಯಶ್ ಅವರ ಬಗ್ಗೆ ಮಾತನಾಡಿದ್ದು, ಅವರ ವೃತ್ತಿಪರತೆಯನ್ನು ಕೊಂಡಾಡಿದ್ದಾರೆ.

ಪ್ಯಾನ್ ಇಂಡಿಯಾ ನಟಿಯಾಗಿರುವ ಕಾಜಲ್ ಅಗರ್ವಾಲ್ ಅವರು ‘ರಾಮಾಯಣ’ ಸಿನಿಮಾನಲ್ಲಿ ಯಶ್ ಅವರೊಟ್ಟಿಗೆ ನಟಿಸಿದ್ದಾರೆ. ‘ರಾಮಾಯಣ’ ಸಿನಿಮಾನಲ್ಲಿ ಯಶ್ ರಾವಣನ ಪಾತ್ರದಲ್ಲಿ ನಟಿಸಿದ್ದರೆ, ರಾವಣನ ಪತ್ನಿ ಮಂಡೋದರಿಯ ಪಾತ್ರದಲ್ಲಿ ಕಾಜಲ್ ಅಗರ್ವಾಲ್ ನಟಿಸಿದ್ದಾರೆ. ಇತ್ತೀಚೆಗೆ ನೀಡಿರುವ ಸಂದರ್ಶನವೊಂದರಲ್ಲಿ ‘ರಾಮಾಯಣ’ ಸಿನಿಮಾ ಮತ್ತು ಯಶ್ ಅವರೊಟ್ಟಿಗೆ ನಟಿಸಿದ ಅನುಭವದ ಬಗ್ಗೆ ನಟಿ ಕಾಜಲ್ ಅಗರ್ವಾಲ್ ಮಾತನಾಡಿದ್ದಾರೆ.

‘ಯಶ್ ಒಬ್ಬ ಅದ್ಭುತ ನಟ. ನಾನು ಯಾವಾಗಲೂ ಅವರ ಕೆಲಸವನ್ನು ಮೆಚ್ಚಿಕೊಂಡಿದ್ದೇನೆ, ಮತ್ತು ಈ ನಿರ್ದಿಷ್ಟ ಸಿನಿಮಾನಲ್ಲಿ ಅವರೊಂದಿಗೆ ಕೆಲಸ ಮಾಡುವ ಅನುಭವ ಅದ್ಭುತವಾಗಿತ್ತು. ಯಶ್ ‘ರಾಮಾಯಣ’ ಸಿನಿಮಾಕ್ಕೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಇದು ನಮಗೆಲ್ಲರಿಗೂ ನಿಜವಾಗಿಯೂ ರೋಮಾಂಚನಕಾರಿ ಅನುಭವ ಎಂದು ನಾನು ಭಾವಿಸುತ್ತೇನೆ. ಯಶ್ ಅತ್ಯಂತ ವೃತ್ತಿಪರರು ಮತ್ತು ಸಹಜವಾಗಿಯೇ ಅಪಾರ ಪ್ರತಿಭಾನ್ವಿತರು’ ಎಂದಿದ್ದಾರೆ.

ಇದನ್ನೂ ಓದಿ:ಯಶ್ ‘ಟಾಕ್ಸಿಕ್’ ವಿರುದ್ಧ ಸೆಣೆಸಲು ವಿವಾದ ಬಗೆಹರಿಸಿಕೊಂಡ ಶ್ರದ್ಧಾ ಕಪೂರ್

‘ರಾಮಾಯಣ’ ಸಿನಿಮಾ ಬಗ್ಗೆಯೂ ಮಾತನಾಡಿರುವ ನಟಿ ಕಾಜಲ್ ಅಗರ್ವಾಲ್, ‘ನಾವು ಮೊದಲ ಭಾಗವನ್ನು ಮಾತ್ರ ಚಿತ್ರೀಕರಿಸಿದ್ದೇವೆ ಮತ್ತು ಸಹಜವಾಗಿಯೇ, ಲಂಕೆಯ ಕತೆ ಅದರಲ್ಲಿ ಕಡಿಮೆ ಇದೆ. ನಾನು ಮಂಡೋದರಿ ಪಾತ್ರದಲ್ಲಿ ನಟಿಸಿದ್ದೇನೆ ಆದ್ದರಿಂದ ನನ್ನ ಪಾತ್ರವು ಸ್ಪಷ್ಟವಾಗಿ ಬಹಳ ಸೀಮಿತವಾಗಿದೆ. ಅದೇನೇ ಇದ್ದರೂ, ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ. ಪ್ಯಾನ್ ವರ್ಲ್ಡ ಸಿನಿಮಾ ಆಗಲಿರುವ ಒಂದು ಮಹಾನ್ ಕೃತಿಯ ಭಾಗವಾಗಿರುವುದು ನನ್ನ ಪಾಲಿಗೆ ಅದ್ಭುತ ಅನುಭವವಾಗಿದೆ. ಈ ಅವಕಾಶ ನನಗೆ ಸಿಕ್ಕಿದ್ದಕ್ಕೆ ನಾನು ಕೃತಜ್ಞಳಾಗಿದ್ದೇನೆ’ ಎಂದಿದ್ದಾರೆ ನಟಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಾತ್ರಿ ಮಲಗುವಾಗ ಅತಿಯಾಗಿ ಯೋಚಿಸುವುದರಿಂದ ಉಂಟಾಗುವ ಸಮಸ್ಯೆಗಳೇನು? – Kannada News | Problems caused by overthinking while sleeping

ರಾತ್ರಿ ಮಲಗುವ (sleeping) ಮುನ್ನ ನಮಗೆ ಲೆಕ್ಕವಿಲ್ಲದಷ್ಟು ಆಲೋಚನೆಗಳು ಬರುತ್ತವೆ. ಇದರಿಂದ ಸಮಯಕ್ಕೆ ಸರಿಯಾಗಿ ನಿದ್ರೆ ಮಾಡಲು ಕಷ್ಟಕರವಾಗುತ್ತದೆ. ಒತ್ತಡ, ಆತಂಕ, ಆರ್ಥಿಕ ಸಮಸ್ಯೆಗಳು, ಕೌಟುಂಬಿಕ ಸಮಸ್ಯೆಗಳು ಸೇರಿದಂತೆ ಕೆಲವೊಂದು ಬಗೆಹರಿಯದ ಸಮಸ್ಯೆಗಳು ಅತಿಯಾಗಿ ಯೋಚಿಸುವುದಕ್ಕೆ ಕಾರಣವಾಗುತ್ತವೆ. ರಾತ್ರಿ ಮಲಗುವ ಸಮಯದಲ್ಲಿ ಈ ಅತಿಯಾದ ಯೋಚನೆಗಳು ತಲೆಯಲ್ಲಿ ಓಡಾಡುತ್ತಿರುತ್ತವೆ. ನಿಮಗೂ ಕೂಡ ಇದೇ ರೀತಿ ದಿಂಬಿನ ಮೇಲೆ ತಲೆಯಿಟ್ಟ ತಕ್ಷಣ ಹಲವು ಆಲೋಚನೆಗಳು ಮನದಲ್ಲಿ ಓಡಾಡುತ್ತಾ? ಈ ಅತಿಯಾದ ಆಲೋಚನೆ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮಗಳನ್ನು ಬೀರುತ್ತವೆ ಎಂಬುದನ್ನು ತಿಳಿಯಿರಿ.

ರಾತ್ರಿಯಲ್ಲಿ ಅತಿಯಾಗಿ ಯೋಚಿಸುವುದರಿಂದಾಗುವ ತೊಂದರೆಗಳೇನು?

ನಿದ್ರಾಹೀನತೆ: ರಾತ್ರಿ ಮಲಗುವಾಗ  ಅತಿಯಾದ ಯೋಚನೆಯಲ್ಲಿ ಮುಳುಗಿದರೆ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ಇದು ನಿದ್ರಾಹೀನತೆಗೆ ಕಾರಣವಾಗಬಹುದು. ಹೀಗೆ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗದಿದ್ದಾಗ, ಮರುದಿನ ಆಕ್ಟಿವ್‌ ಆಗಿರಲು ಸಹ ಆಗುವುದಿಲ್ಲ.

ಹೃದಯ ಮೇಲೆ ಪರಿಣಾಮ ಬೀರುತ್ತದೆ: ರಾತ್ರಿ ಮಲಗಿದ ಸಂದರ್ಭದಲ್ಲಿ ಅತಿಯಾಗಿ ಯೋಚಿಸುವ ಅಭ್ಯಾಸ ಹೃದಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಹೃದಯ ಬಡಿತ ಹೆಚ್ಚಾಗಲು, ಕೈಕಾಲುಗಳಲ್ಲಿ ನಡುಕ ಉಂಟಾಗಲು ಕಾರಣವಾಗಬಹುದು. ಅಲ್ಲದೆ ದೀರ್ಘಕಾಲ ಎಚ್ಚರವಾಗಿರುವುದರಿಂದ ಮಲಬದ್ಧತೆ, ಹೊಟ್ಟೆ ನೋವು, ವಾಕರಿಕೆ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

ಆತಂಕ ಹೆಚ್ಚಾಗುತ್ತದೆ: ರಾತ್ರಿ ಮಲಗುವ ಸಂದರ್ಭದಲ್ಲಿ ಅತಿಯಾಗಿ ಯೋಚಿಸುವುದರಿಂದ ಒತ್ತಡ, ಆತಂಕದ ಮಟ್ಟ ಹೆಚ್ಚಾಗುತ್ತದೆ. ಈ ಪರಿಸ್ಥಿತಿಯಲ್ಲಿ, ವ್ಯಕ್ತಿಯು ನಿರಂತರವಾಗಿ ಚಿಂತೆಗೀಡಾಗುತ್ತಾನೆ, ಇದು ಪ್ಯಾನಿಕ್ ಅಟ್ಯಾಕ್‌ಗೂ ಕಾರಣವಾಗಬಹುದು.

ಖಿನ್ನತೆಗೆ ಕಾರಣವಾಗಬಹುದು: ರಾತ್ರಿಯಿಡೀ ನಕಾರಾತ್ಮಕ ಆಲೋಚನೆಗಳನ್ನು ತಲೆಯಲ್ಲಿ ತುಂಬಿಕೊಂಡರೆ ನಂತರದಲ್ಲಿ ಇದರಿಂದ ಖಿನ್ನತೆ ಜಾರುವ ಸಾಧ್ಯತೆಯೂ ಇರುತ್ತದೆ.  ಅಲ್ಲದೆ ಅತಿಯಾಗಿ ಯೋಚಿಸುವುದರಿಂದ ಮಾನಸಿಕವಾಗಿ ದಣಿದ ಅನುಭವವಾಗುತ್ತದೆ.

ಇದನ್ನೂ ಓದಿ: ದೈಹಿಕ, ಮಾನಸಿಕ ದಣಿವನ್ನು ನಿವಾರಿಸಲು ಸುಲಭ ತಂತ್ರಗಳನ್ನು ತಪ್ಪದೇ ಪಾಲಿಸಿ

ರಾತ್ರಿಯಲ್ಲಿ ಅತಿಯಾಗಿ ಯೋಚಿಸುವುದನ್ನು ತಪ್ಪಿಸುವುದು ಹೇಗೆ?

  • ನಿಮ್ಮ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.
  • ಮಲಗುವ ಮುನ್ನ ಕನಿಷ್ಠ 10-15 ನಿಮಿಷಗಳ ಕಾಲ ಧ್ಯಾನ ಮಾಡಿ, ಇದು ಮನಸ್ಸನ್ನು ಶಾಂತಗೊಳಿಸುತ್ತದೆ.
  • ಹಾಸಿಗೆಯ ಮೇಲೆ ನೇರವಾಗಿ ಮಲಗಿ, ನಿಮ್ಮ ದೇಹವನ್ನು ಸಂಪೂರ್ಣವಾಗಿ ಸಡಿಲಗೊಳಿಸಿ ಮತ್ತು ನಿಮ್ಮ ಉಸಿರಾಟದ ಮೇಲೆ ಗಮನಹರಿಸಿ.
  • ತಜ್ಞರ ಪ್ರಕಾರ, ಎಡಮಗ್ಗುಲಾಗಿ ಮಲಗುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ದೇಹ ಮತ್ತು ಮನಸ್ಸಿಗೆ ತ್ವರಿತ ವಿಶ್ರಾಂತಿ ದೊರೆಯುತ್ತದೆ.
  • ಅಗತ್ಯವಿದ್ದರೆ, ತಜ್ಞರನ್ನು ಸಂಪರ್ಕಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

SIR ಕರ್ತವ್ಯಕ್ಕೆ ತೆರಳುವಾಗ ಭೀಕರ ಅಪಘಾತ: ಚಿಕಿತ್ಸೆ ಫಲಿಸದೆ ಭುವನಾ ಸಾವು; ಸಿಬ್ಬಂದಿಯಿಂದ ಪ್ರತಿಭಟನೆ – Kannada News | Accident While Heading to SIR Duty: Bhuvana Dies Despite Treatment; Staff Stage Protest

ತುಮಕೂರು, ಜುಲೈ 04: ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ​ ಪ್ರಕ್ರಿಯೆ (SIR) ಕರ್ತವ್ಯಕ್ಕೆ ತೆರಳುವಾಗ ದ್ವಿಚಕ್ರ ವಾಹನ​ ಅಪಘಾತದಲ್ಲಿ ಗಾಯಗೊಂಡಿದ್ದ ವಿಎಒ ಭುವನಾ ಚಿಕಿತ್ಸೆ ಫಲಿಸದೇ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಶನಿವಾರ ಸಂಜೆ ಕೊನೆಯುಸಿರೆಳೆದಿದ್ದಾರೆ (death). ಇಂದು ಬೆಳಗ್ಗೆ ತುಮಕೂರು ತಾಲೂಕಿನ ಗೂಳೂರು ಬಳಿ ಬೈಕ್​​ನಲ್ಲಿ ಎಸ್‌ಐಆರ್ ಪ್ರಕ್ರಿಯೆಯ ವಿಎಒ ಸೂಪರ್‌ವೈಸರ್ ಆಗಿ ಕರ್ತವ್ಯಕ್ಕೆ ತೆರಳುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದು ದುರಂತ ಸಂಭವಿಸಿತ್ತು.

ನಡೆದಿದ್ದೇನು?

ತುಮಕೂರಿನ ಹುಲ್ಲೇನಹಳ್ಳಿಯ ಗ್ರಾಮಲೆಕ್ಕಾಧಿಕಾರಿ ಟಿ. ಬೇಗೂರು ನಿವಾಸಿ ಭುವನಾ, ಇಂದು ಬೆಳಿಗ್ಗೆ ಎಸ್ಐಆರ್ ಕರ್ತವ್ಯಕ್ಕೆ ಸೂಚನೆ ಹಿನ್ನಲೆ ನಿಯುಕ್ತಿಗೊಂಡ ಸ್ಥಳಕ್ಕೆ ತೆರಳುತ್ತಿದ್ದರು. ಹೀಗಾಗಿ ತುಮಕೂರು ಬಸ್ ನಿಲ್ದಾಣದ ಬಳಿ ನಿಲ್ಲಿಸಿದ ತಮ್ಮ ಬೈಕ್​​ನಲ್ಲಿ ಗೂಳೂರಿನ ನಾಡಕಚೇರಿಗೆ ತೆರಳಿದ್ದಾರೆ. ಕುಣಿಗಲ್ ರಸ್ತೆಯ ಗೂಳೂರು ಬಳಿ ಲಾರಿಗೆ ಮುಖಾಮುಖಿ ಡಿಕ್ಕಿ ಹೊಡೆದಿದ್ದಾರೆ.

ಇದನ್ನೂ ಓದಿ: ತುಮಕೂರು: SIR ಕರ್ತವ್ಯಕ್ಕೆ ತೆರಳುತ್ತಿದ್ದಾಗ ಅಪಘಾತ; ಇಬ್ಬರು ಮಹಿಳಾ ಸಿಬ್ಬಂದಿ ಪೈಕಿ ಓರ್ವರ ಸ್ಥಿತಿ ಗಂಭೀರ

ಹೆಲ್ಮಟ್ ಧರಿಸಿದ್ದರೂ ತಲೆಗೆ ಗಂಭೀರ ಗಾಯವಾಗಿದೆ. ಕೂಡಲೇ ಅವರನ್ನ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಭುವನಾ ಕೊನೆಯುಸಿರೆಳೆದಿದ್ದಾರೆ. ತುಮಕೂರು ಜಿಲ್ಲಾಸ್ಪತ್ರೆಗೆ ಮೃತದೇಹ ರವಾನಿಸಲಾಗಿದ್ದು, ಮರಣೋತ್ತರ ಪರಿಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುವುದು.

ತಪ್ಪಿತಸ್ಥ ಅಧಿಕಾರಿಯ ಅಮಾನತ್ತಿಗೆ ಒತ್ತಾಯ

ಇನ್ನು ಅಪಘಾತದ ವಿಚಾರ ತಿಳಿದ ತುಮಕೂರಿನ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಕ್ರೋಶಗೊಂಡಿದ್ದಾರೆ. ಈ ಘಟನೆಗೆ ಒತ್ತಡದ ಕೆಲಸವೇ ಹಾಗೂ ಆ ಪರಿಸ್ಥಿತಿಗೆ ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್ ಕಾರಣ ಎಂದು ಆರೋಪಿಸಿದ್ದಾರೆ. ಡಿಸಿ ಕಚೇರಿ ಮುಂದೆ ಮಧ್ಯಾಹ್ನದಿಂದ ಕಂದಾಯ ಇಲಾಖೆಯ ಸಿಬ್ಬಂದಿ ಪ್ರತಿಭಟನೆಗೆ ಕುಳಿತಿದ್ದು, ತಪ್ಪಿತಸ್ಥ ಅಧಿಕಾರಿಯ ಅಮಾನತ್ತಿಗೆ ಒತ್ತಾಯಿಸಿದ್ದಾರೆ.

ನ್ಯಾಯ ಬೇಕೇಬೇಕು: ಶಿವಾನಂದ ಕೆ.ಎಸ್​​

ಕರ್ನಾಟಕ ರಾಜ್ಯ ಗ್ರಾಮ ಆಡಳಿತಾಧಿಕಾರಿಗಳ ಸಂಘದ ರಾಜ್ಯ ಪ್ರದಾನ ಕಾರ್ಯದರ್ಶಿ ಶಿವಾನಂದ ಕೆ.ಎಸ್​​ ಮಾತನಾಡಿದ್ದು, ಬೆಳಗ್ಗೆನೇ ಆಕೆಯ ಜೀವ ಹೋಗಿದೆ ಅಂತ ನಮಗೆ ಮಾಹಿತಿ ಇತ್ತು. ಇದುವರೆಗೆ ವೆಂಟಿಲೇಟರ್ ಏಕೆ ಇಟ್ಟಿದ್ದರು ಗೊತ್ತಿಲ್ಲ. ಆದರೆ ಬೆಳಿಗ್ಗೆ 6 ಗಂಟೆಗೆ ಕೆಲಸ ಶುರು ಮಾಡಿ ಎಂದು ಯಾರು ಹೇಳಿದರು. ಬೆಳಿಗ್ಗೆ 6:30ಕ್ಕೆ ಹೋಗಬೇಕು ಇಲ್ಲವಾದರೇ ಹಾಗೆ ಮಾಡುತ್ತೇವೆ, ಹೀಗೆ ಮಾಡುತ್ತೇವೆ ಅಂತ ಯಾರೋ ಹೇಳಿದ್ದಾರೆ. ಹೀಗೆ ಹೇಳಿ ಗ್ರೂಪ್​ಗಳಿಗೆ ಕಳುಹಿಸಿದ ಆಡಿಯೋ ರೆಕಾರ್ಡ್​ ನಮ್ಮ ಬಳಿ ಇದೆ. ಆ ರೀತಿ ಹೇಳಿದವರು ಯಾರು, ಅವರಿಗೆ ಶಿಕ್ಷೆ ಆಗಬೇಕು. ತಹಶೀಲ್ದಾರ್​​​ ಅಥವಾ ಎಸಿ ಯಾರು ಹೇಳಿದ್ದಾರೋ ಅವರು ಅಮಾನತು ಆಗಬೇಕು. ಕ್ರಮ ಆಗುವವರೆಗೂ ನಾವು ಪ್ರತಿಭಟನೆ ಬಿಡುವುದಿಲ್ಲ. ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ನಾವು ಮಾಡುವ ಎಸ್​ಐಆರ್​​​ ಪ್ರಕ್ರಿಯೆ ನಿಲ್ಲಿಸುತ್ತೇವೆ. ನ್ಯಾಯ ಬೇಕೇಬೇಕು ಎಂದು ಹೇಳಿದ್ದಾರೆ.

ಲಾರಿ ಚಾಲಕನ ಬಂಧನ

ಇನ್ನು ಅಪಘಾತಕ್ಕೆ ಕಾರಣವಾದ ತಮಿಳುನಾಡು ಮೂಲದ ಲಾರಿ ಚಾಲಕ ಮುರುಗನ್​​ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇಂದು ಬೆಳಿಗ್ಗೆ ತುಮಕೂರಿನಿಂದ ಕುಣಿಗಲ್​ನತ್ತ ತೆರಳುತಿದ್ದ ಲಾರಿ, ಈ ವೇಳೆ ಗೂಳೂರು ಬಳಿ ಭುವನಾ ತೆರಳುತಿದ್ದ ಬೈಕ್​​ ಮುಖಾಮುಖಿ ಡಿಕ್ಕಿ ಹೊಡೆದಿದೆ. ಭುವನಾ ಸಂಬಂಧಿಕರು ತುಮಕೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಲಾರಿ ಚಾಲಕನನ್ನು ಬಂಧಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On – 7:27 pm, Sat, 4 July 26

Source link

Chanakya Niti: ಕೋಪವನ್ನು ನಿಯಂತ್ರಿಸುವುದು ಹೇಗೆ? ಇಲ್ಲಿದೆ ಚಾಣಕ್ಯರ ಸಲಹೆ – Kannada News | Chanakya Niti: How to control anger? Here is Acharya Chanakya’s advice

ಕೋಪವು (anger) ಮನುಷ್ಯನ ದೊಡ್ಡ ಶತ್ರು ಅಂತಾನೇ ಹೇಳಬಹುದು. ಇದು ಸಂಬಂಧವನ್ನು ಹಾಳು ಮಾಡುವುದು ಮಾತ್ರವಲ್ಲ ನಾವು ಜೀವನಪರ್ಯಂತ ವಿಷಾದಿಸುವಂತೆ ಮಾಡುತ್ತವೆ. ಚಾಣಕ್ಯರ ಪ್ರಕಾರ ಕೋಪವು ಬೆಂಕಿಯಾಗಿದ್ದು, ಆ ಕೋಪ ಮೊದಲು ನಮ್ಮನ್ನೇ ಸುಟ್ಟು ಹಾಕುತ್ತದೆ. ಹಾಗಾಗಿ ಕೋಪವನ್ನು ನಿಯಂತ್ರಿಸುವುದು ತುಂಬಾನೇ ಮುಖ್ಯ. ಒಬ್ಬ ವ್ಯಕ್ತಿಯು ತನ್ನ ಕೋಪವನ್ನು ಸಮಯಕ್ಕೆ ಸರಿಯಾಗಿ ಗುರುತಿಸಲು ಮತ್ತು ನಿಯಂತ್ರಿಸಲು ಕಲಿತರೆ, ಅವನು ಜೀವನದಲ್ಲಿ ಅನೇಕ ತೊಂದರೆಗಳನ್ನು ತಪ್ಪಿಸಬಹುದು ಎಂದು ಚಾಣಕ್ಯರು ಹೇಳಿದ್ದಾರೆ. ಜೊತೆಗೆ ಅವರು ಕೋಪವನ್ನು ನಿಯಂತ್ರಿಸಲು ಒಂದಷ್ಟು ಸಲಹೆಗಳನ್ನು ಕೂಡ ನೀಡಿದ್ದಾರೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.

ಕೋಪ ಬಂದಾಗ ಏನು ಮಾಡಬೇಕು? ಕೋಪವನ್ನು ನಿಯಂತ್ರಿಸುವುದು ಹೇಗೆ?

ಆಚಾರ್ಯ ಚಾಣಕ್ಯರ ಪ್ರಕಾರ, ತನ್ನ ಕೋಪವನ್ನು ಜಯಿಸಬಲ್ಲ ವ್ಯಕ್ತಿಯು ಜೀವನದ ಅನೇಕ ಸವಾಲುಗಳನ್ನು ಹೆಚ್ಚಿನ ಬುದ್ಧಿವಂತಿಕೆಯಿಂದ ಜಯಿಸಬಹುದು. ಸ್ವಯಂ ನಿಯಂತ್ರಣ, ತಾಳ್ಮೆ ಮತ್ತು ವಿವೇಕವು ವ್ಯಕ್ತಿಯನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ. ಕೋಪವು ಪ್ರಾಬಲ್ಯ ಸಾಧಿಸಲು ಬಿಡುವ ಬದಲು ಅದನ್ನು ನಿಯಂತ್ರಿಸುವ ಕಲೆಯನ್ನು ಕಲಿಯುವುದು ನಿಜವಾದ ಬುದ್ಧಿವಂತಿಕೆ ಮತ್ತು ಬಲವಾದ ವ್ಯಕ್ತಿತ್ವದ ಸಂಕೇತವೆಂದು ಅವರು ಹೇಳಿದ್ದಾರೆ.

ನಿಮ್ಮನ್ನು ನೀವು ಶಾಂತಗೊಳಿಸಿ: ಕೋಪ ಬಂದಾಗ ತಕ್ಷಣ ಪ್ರತಿಕ್ರಿಯಿಸುವ ಬದಲು, ಸ್ವಲ್ಪ ಸಮಯ ಶಾಂತವಾಗಿರಿ. ಆಳವಾದ ಉಸಿರನ್ನು ತೆಗೆದುಕೊಳ್ಳಿ, ಸ್ವಲ್ಪ ನೀರು ಕುಡಿಯಿರಿ ಅಥವಾ ಸ್ವಲ್ಪ ಸಮಯದವರೆಗೆ ಪರಿಸ್ಥಿತಿಯಿಂದ ದೂರವಿರಿ. ಈ ಸಣ್ಣ ವಿರಾಮವು ದೊಡ್ಡ ವಾದವನ್ನು ತಪ್ಪಿಸಬಹುದು.

ಮಾತನಾಡುವ ಮೊದಲು ಯೋಚಿಸಿ: ಕೋಪದಲ್ಲಿ ಮಾತನಾಡುವ ಕಠಿಣ ಮಾತುಗಳು ಸಂಬಂಧಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಒಮ್ಮೆ ಮಾತನಾಡಿದ ಮಾತುಗಳನ್ನು ಹಿಂದಕ್ಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ, ಏನನ್ನಾದರೂ ಹೇಳುವ ಮೊದಲು, ಅದು ನಿಜವಾಗಿಯೂ ಅಗತ್ಯವಿದೆಯೇ ಅಥವಾ ಇಲ್ಲವೇ ಎಂದು ಯೋಚಿಸುವುದು ಮುಖ್ಯ.

ಸಮಸ್ಯೆಯ ಮೇಲೆ ಗಮನಹರಿಸಿ, ವ್ಯಕ್ತಿಯಲ್ಲ: ಪ್ರತಿಯೊಬ್ಬರ ನಡವಳಿಕೆಯ ಹಿಂದೆಯೂ ಒಂದು ಕಾರಣವಿರಬಹುದು. ಒಬ್ಬ ವ್ಯಕ್ತಿಯ ನಡವಳಿಕೆ ನಿಮಗೆ ಕೋಪ ತರಿಸುತ್ತಿದೆ ಎಂದಾದ್ರೆ ಆ ವ್ಯಕ್ತಿಯ ಮೇಲೆ ಕೋಪಗೊಳ್ಳುವ ಬದಲು, ಸಮಸ್ಯೆಯ ಮೂಲವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಇದರಿಂದ ಸಂಬಂಧ ಹಾಳಾಗುವುದಿಲ್ಲ.

ಇದನ್ನೂ ಓದಿ: ಯೌವನಲ್ಲಿ ಕಲಿಯುವ ವಿಷಯಗಳು ನಿಮ್ಮ ಭವಿಷ್ಯದ ದಿಕ್ಕನ್ನು ನಿರ್ಧರಿಸುತ್ತದೆ

ಕೋಪವನ್ನು ಸಕಾರಾತ್ಮಕ ಶಕ್ತಿಯನ್ನಾಗಿ ಪರಿವರ್ತಿಸಿ: ಚಾಣಕ್ಯರ ಸಿದ್ಧಾಂತದ ಪ್ರಕಾರ, ನಕಾರಾತ್ಮಕ ಭಾವನೆಗಳನ್ನು ಸ್ಫೂರ್ತಿಯಾಗಿ ಪರಿವರ್ತಿಸಬೇಕು. ಕಠಿಣ ಪರಿಶ್ರಮ, ಸ್ವ-ಅಭಿವೃದ್ಧಿ ಮತ್ತು ಗುರಿಗಳತ್ತ ಸಾಗಲು ಕೋಪವನ್ನು ಶಕ್ತಿಯಾಗಿ ಬಳಸುವುದು ಹೆಚ್ಚು ಪ್ರಯೋಜನಕಾರಿ ಎಂದು ಅವರು ಹೇಳಿದ್ದಾರೆ.

ಸಮಾಧಾನದಿಂದ ನಿರ್ಧಾರ ತೆಗೆದುಕೊಳ್ಳಿ: ಕೋಪದ ಸ್ಥಿತಿಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಹೆಚ್ಚಾಗಿ ತಪ್ಪಾಗಿರುತ್ತವೆ. ಆದ್ದರಿಂದ, ಮನಸ್ಸು ಶಾಂತವಾದ ನಂತರವೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.

ಕೋಪದಿಂದ ಉಂಟಾಗುವ ಹಾನಿಗಳೇನು?

ಅತಿಯಾದ ಕೋಪವು ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಇದು ಒತ್ತಡವನ್ನು ಹೆಚ್ಚಿಸುತ್ತದೆ, ಸಂಬಂಧಗಳಲ್ಲಿ ಬಿರುಕುಗಳನ್ನು ಮೂಡಿಸುತ್ತದೆ. ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಲು ಕಾರಣವಾಗಬಹುದು. ಮತ್ತು ಕೋಪ  ವ್ಯಕ್ತಿಯ ಖ್ಯಾತಿಯ ಮೇಲೂ ಪರಿಣಾಮ ಬೀರಬಹುದು. ಕೆಲವೊಮ್ಮೆ, ಒಂದು ಕ್ಷಣದ ಕೋಪವು ಸುಂದರ ಸಂಬಂಧಗಳನ್ನು ನಾಶಪಡಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version