ಸಲ್ಮಾನ್ ಖಾನ್‌ ‘ಮಾತೃಭೂಮಿ’ ಚಿತ್ರಕ್ಕೆ ಸೆನ್ಸಾರ್ ಸಮಸ್ಯೆ? ಬಿಡುಗಡೆ ಬಗ್ಗೆ ಹೆಚ್ಚಿದ ಆತಂಕ – Kannada News | Salman Khan Matrubhoomi Censor Issue Galwan Valley Theme Halts Release

ಇತ್ತೀಚಿನ ದಿನಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ಸಿನಿಮಾಗಳನ್ನು ಸೆನ್ಸಾರ್ ಮಂಡಳಿಯಿಂದ ಪಾಸ್ ಮಾಡಿಸುವುದು ಚಿತ್ರತಂಡಗಳಿಗೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಚಿತ್ರದಲ್ಲಿನ ಸಣ್ಣಪುಟ್ಟ ವಿಷಯಗಳಿಗೂ ಸೆನ್ಸಾರ್ ಮಂಡಳಿ ತೀವ್ರ ನಿಗಾ ವಹಿಸುತ್ತಿರುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದೀಗ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ನಟನೆಯ ಮುಂಬರುವ ಬಹುನಿರೀಕ್ಷಿತ ಚಿತ್ರ ‘ಮಾತೃಭೂಮಿ’ ಕೂಡ ಇದೇ ರೀತಿಯ ದೊಡ್ಡ ಸೆನ್ಸಾರ್ ಸಮಸ್ಯೆಯನ್ನು ಎದುರಿಸುತ್ತಿದ್ದು, ಚಿತ್ರದ ಭವಿಷ್ಯ ಅನಿಶ್ಚಿತತೆಯಲ್ಲಿದೆ. ಸೆನ್ಸಾರ್ ಮಂಡಳಿ ಸೂಚಿಸಿದ ಹಲವಾರು ಪ್ರಮುಖ ಬದಲಾವಣೆಗಳನ್ನು ಚಿತ್ರತಂಡ ಈಗಾಗಲೇ ಅಳವಡಿಸಿಕೊಂಡಿದ್ದರೂ ಸಹ, ಚಿತ್ರಕ್ಕೆ ಇನ್ನೂ ಸೆನ್ಸಾರ್ ಮಂಡಳಿಯಿಂದ ಹಸಿರು ನಿಶಾನೆ ಸಿಕ್ಕಿಲ್ಲ.

ಬದಲಾವಣೆಗಳ ನಂತರವೂ ಸಿಗದ ಸೆನ್ಸಾರ್ ಸರ್ಟಿಫಿಕೇಟ್

ವರದಿಗಳ ಪ್ರಕಾರ, ಚಿತ್ರತಂಡದೊಂದಿಗೆ ಹಲವು ಸುತ್ತಿನ ಸುದೀರ್ಘ ಚರ್ಚೆಗಳು ನಡೆದಿದ್ದರೂ ಸೆನ್ಸಾರ್ ಮಂಡಳಿ ಇನ್ನೂ ಚಿತ್ರಕ್ಕೆ ಪ್ರಮಾಣಪತ್ರವನ್ನು ನೀಡಲು ಒಪ್ಪುತ್ತಿಲ್ಲ. ಮಂಡಳಿ ಎತ್ತಿದ್ದ ಪ್ರಮುಖ ಆಕ್ಷೇಪಣೆಗಳನ್ನು ಮತ್ತು ವಿವಾದಾತ್ಮಕ ಅಂಶಗಳನ್ನು ಸಲ್ಮಾನ್ ಖಾನ್ ತಂಡ ಈಗಾಗಲೇ ಸರಿಪಡಿಸಿರುವುದರಿಂದ, ಚಿತ್ರಕ್ಕೆ ಸುಲಭವಾಗಿ ಕ್ಲಿಯರೆನ್ಸ್ ಸಿಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಎಲ್ಲ ಬದಲಾವಣೆಗಳ ನಂತರವೂ ಪ್ರಮಾಣೀಕರಣ ಪ್ರಕ್ರಿಯೆಯು ನಿರೀಕ್ಷೆಗಿಂತ ಹೆಚ್ಚು ವಿಳಂಬವಾಗುತ್ತಿರುವುದು ಚಿತ್ರರಂಗದಲ್ಲಿ ಆಶ್ಚರ್ಯ ಮೂಡಿಸಿದೆ.

ಗಾಲ್ವಾನ್ ಕಣಿವೆಯ ಸೂಕ್ಷ್ಮ ಕಥಾಹಂದರ

ಅಪೂರ್ವ ಲಖಿಯಾ ನಿರ್ದೇಶನದ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆಗೆ ಚಿತ್ರಾಂಗದಾ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಐತಿಹಾಸಿಕ ‘ಗಾಲ್ವಾನ್ ಕಣಿವೆಯ ಸಂಘರ್ಷ’ದ ಹಿನ್ನೆಲೆಯನ್ನು ಒಳಗೊಂಡಿದೆ. ದೇಶಭಕ್ತಿ ಮತ್ತು ಗಡಿ ವಿವಾದದಂತಹ ಅತ್ಯಂತ ಸೂಕ್ಷ್ಮ ವಿಷಯವನ್ನು ಕಥಾಹಂದರ ಹೊಂದಿರುವ ಕಾರಣದಿಂದಲೇ ಸೆನ್ಸಾರ್ ಮಂಡಳಿ ಈ ಚಿತ್ರವನ್ನು ಅತ್ಯಂತ ಕಟ್ಟುನಿಟ್ಟಾಗಿ ಮರುಪರಿಶೀಲನೆ ನಡೆಸುತ್ತಿದೆ ಎನ್ನಲಾಗಿದೆ. ಚಿತ್ರದ ಬಿಡುಗಡೆಯ ದಿನಾಂಕ ಹತ್ತಿರ ಬರುತ್ತಿದ್ದರೂ ಸೆನ್ಸಾರ್ ಗೊಂದಲ ಮುಗಿಯದ ಕಾರಣ, ಚಿತ್ರದ ಪ್ರಚಾರ ಮತ್ತು ವಿತರಣೆಯ ಯೋಜನೆಗಳ ಮೇಲೆ ಇದು ಭಾರಿ ಹೊಡೆತ ನೀಡುವ ಆತಂಕ ನಿರ್ಮಾಪಕರಲ್ಲಿ ಎದುರಾಗಿದೆ.

ಇದನ್ನೂ ಓದಿ: ನಿರ್ಮಾಪಕ ಕೆ. ವೆಂಕಟ್ ನಾರಾಯಣ್​ಗೆ ಸಂಪುಟ ದರ್ಜೆಯ ಸ್ಥಾನಮಾನ ಕೊಟ್ಟ ದಳಪತಿ ವಿಜಯ್

ದಳಪತಿ ವಿಜಯ್ ಚಿತ್ರಕ್ಕೂ ಎದುರಾಗಿತ್ತು ಇದೇ ಕಂಟಕ

ಕೇವಲ ಸಲ್ಮಾನ್ ಖಾನ್ ಅವರ ‘ಮಾತೃಭೂಮಿ’ ಮಾತ್ರವಲ್ಲ, ಇತ್ತೀಚೆಗೆ ಕಾಲಿವುಡ್‌ನ ಸ್ಟಾರ್ ನಟ ದಳಪತಿ ವಿಜಯ್ ಅವರ ‘ಜನ ನಾಯಗನ್’ ಚಿತ್ರಕ್ಕೂ ತೊಂದರೆ ಆಗಿದೆ. ಆರು ತಿಂಗಳಿಂದ ಈ ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ಸಿಕ್ಕಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕರ್ನಾಟಕ ಬರ: ವಿದ್ಯುತ್ ಕೊರತೆ ತಪ್ಪಿಸಲು ಸಿಎಂ ಡಿಕೆ ಶಿವಕುಮಾರ್ ತುರ್ತು ಸಭೆ, ಅಧಿಕಾರಿಗಳಿಗೆ ಸೂಚನೆ – Kannada News | Karnataka Power Crisis: CM DK Shivakumar Holds Emergency Meeting Over El Nino and Rain Deficit

ಬೆಂಗಳೂರು, ಜುಲೈ 4: ಮಳೆ ಕೊರತೆ ಹಾಗೂ ಎಲ್ ನಿನೋ ಪರಿಣಾಮವಾಗಿ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಗಳ ಬಗ್ಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಇಂಧನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಮುಖ್ಯಮಂತ್ರಿಗಳು, ಮುಂಬರುವ ದಿನಗಳಲ್ಲಿ ಎದುರಾಗಬಹುದಾದ ವಿದ್ಯುತ್ ಕೊರತೆ ಪರಿಸ್ಥಿತಿಯನ್ನು ಎದುರಿಸಲು ಈಗಿನಿಂದಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸಭೆಯಲ್ಲಿ, ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತುರ್ತು ಕಾರ್ಯಯೋಜನೆಯನ್ನು ರೂಪಿಸಲು ಮತ್ತು ಅಗತ್ಯ ವಿದ್ಯುತ್ ಸಂಗ್ರಹಣೆಗೆ ಮುಂದಾಗಲು ಮುಖ್ಯಮಂತ್ರಿಗಳು ನಿರ್ದೇಶಿಸಿದರು. ಇದರ ಜೊತೆಗೆ, ಇತರೆ ಮೂಲಗಳಿಂದ ವಿದ್ಯುತ್ ಉತ್ಪಾದನೆಗೆ ತುರ್ತು ಗಮನ ಹರಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಮುಖ್ಯಮಂತ್ರಿಗಳು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಸಾರ್ವಜನಿಕರ ಬಳಕೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಡಿ.ಕೆ. ಶಿವಕುಮಾರ್ ಅವರು ಒತ್ತಿ ಹೇಳಿದರು. ಮಳೆ ಕೊರತೆಯಿಂದ ವಿದ್ಯುತ್ ಉತ್ಪಾದನೆ ಹಾಗೂ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಗಳಿರುವುದರಿಂದ, ಸಾರ್ವಜನಿಕರ ಮೇಲೆ ಇದರ ಪ್ರಭಾವ ಬೀರದಂತೆ ನೋಡಿಕೊಳ್ಳಲು ತುರ್ತು ಯೋಜನೆಗಳನ್ನು ರೂಪಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸ್ಪಷ್ಟ ನಿರ್ದೇಶನ ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನನ್ನ ದೇಹದಲ್ಲಿ ಸ್ಟೀಲ್ ರಾಡ್, ಹಲವು ಸ್ಕ್ರೂಗಳಿವೆ; ನಭಾ ನಟೇಶ್ ಬೇಸರ – Kannada News | Nabha Natesh Emotional Revelation: Accident and 2 Year Career Break Story

ಕನ್ನಡದ ‘ವಜ್ರಕಾಯ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, ನಂತರ ತೆಲುಗಿನ ‘ಇಸ್ಮಾರ್ಟ್ ಶಂಕರ್’ ಚಿತ್ರದ ಬ್ಲಾಕ್‌ಬಸ್ಟರ್ ಯಶಸ್ಸಿನೊಂದಿಗೆ ಸೌತ್ ಚಿತ್ರರಂಗದಲ್ಲಿ ಸ್ಟಾರ್ ನಾಯಕಿಯಾಗಿ ಮಿಂಚಿದವರು ನಟಿ ನಭಾ ನಟೇಶ್. ಸಿನಿಮಾ ವೃತ್ತಿಜೀವನ ಉತ್ತುಂಗದಲ್ಲಿದ್ದಾಗಲೇ ಈ ಸುಂದರಿ ಇದ್ದಕ್ಕಿದ್ದಂತೆ ಬೆಳ್ಳಿತೆರೆಯಿಂದ ಕಾಣೆಯಾಗಿದ್ದರು. ಅವರು ಚಿತ್ರರಂಗದಿಂದ ಎರಡು ವರ್ಷಗಳ ಕಾಲ ಸುದೀರ್ಘ ವಿರಾಮ ತೆಗೆದುಕೊಳ್ಳಲು ಕಾರಣವೇನು ಎಂಬುದನ್ನು ನಭಾ ಇತ್ತೀಚಿನ ಸಂದರ್ಶನವೊಂದರಲ್ಲಿ ಅತ್ಯಂತ ಭಾವುಕರಾಗಿ ಹಂಚಿಕೊಂಡಿದ್ದಾರೆ.

ಬದುಕನ್ನೇ ಬದಲಿಸಿತು ಆ ಭೀಕರ ಅಪಘಾತ!

ತಮ್ಮ ವೃತ್ತಿಜೀವನದ ದೀರ್ಘ ವಿರಾಮದ ಬಗ್ಗೆ ಮಾತನಾಡಿದ ನಭಾ ನಟೇಶ್, ‘ನಾನು ಮೆಟ್ಟಿಲುಗಳಿಂದ ಜಾರಿಬಿದ್ದೆ. ಆ ಸಮಯದಲ್ಲಿ ತಲೆಗೆ ಪೆಟ್ಟಾಗಬಾರದು ಎಂದು ತಪ್ಪಿಸಿಕೊಳ್ಳಲು ಹೋದಾಗ, ನನ್ನ ಇಡೀ ದೇಹದ ತೂಕ ಎಡ ಭುಜದ ಮೇಲೆ ಬಿದ್ದಿತು. ಪರಿಣಾಮ ಭುಜದ ಒಳಗಿನ ಮೂಳೆಗಳು ಸಣ್ಣ ಸಣ್ಣ ತುಂಡುಗಳಾಗಿ ಒಡೆದು ಹೋಗಿದ್ದವು. ಕೇವಲ ಮುರಿತ (Fracture) ಅಂದುಕೊಂಡಿದ್ದ ನನಗೆ ದೊಡ್ಡ ಶಸ್ತ್ರಚಿಕಿತ್ಸೆಯನ್ನೇ ಮಾಡಬೇಕಾಯಿತು. ಭುಜದ ಮೂಳೆಯನ್ನು ಜೋಡಿಸಲು ಸ್ಟೀಲ್ ರಾಡ್ ಮತ್ತು ಹಲವು ಸ್ಕ್ರೂಗಳನ್ನು ಅಳವಡಿಸಲಾಯಿತು’ ಎಂದು ಆ ಕಹಿ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ದೈಹಿಕ ನರಕಯಾತನೆ, ಮಾನಸಿಕ ಒತ್ತಡ

ಈ ಘಟನೆ ಸಂಭವಿಸಿದಾಗ ನಭಾ ಅವರು ಕೈಯಲ್ಲಿ ಸರಣಿ ಚಿತ್ರಗಳನ್ನು ಹೊಂದಿದ್ದರು. ಒಮ್ಮೆಗೆ ಎದುರಾದ ಈ ಅಪಘಾತ ಅವರ ಮೇಲೆ ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಭಾರಿ ಪರಿಣಾಮ ಬೀರಿತು. ಸದಾ ಶೂಟಿಂಗ್, ಲೈಟ್ಸ್, ಕ್ಯಾಮೆರಾ ಅಂತ ಬ್ಯುಸಿಯಾಗಿದ್ದ ನಟಿ, ಗಾಯದ ಕಾರಣದಿಂದಾಗಿ ಸಂಪೂರ್ಣ ಬೆಡ್ ರೆಸ್ಟ್ ಮತ್ತು ಫಿಸಿಯೋಥೆರಪಿಗೆ ಸೀಮಿತವಾಗಬೇಕಾಯಿತು. ಈ ಹಠಾತ್ ಬದಲಾವಣೆ ಮತ್ತು ನಿರ್ಬಂಧಗಳು ಅವರಲ್ಲಿ ತೀವ್ರ ಮಾನಸಿಕ ಒತ್ತಡವನ್ನು ಉಂಟುಮಾಡಿದ್ದವು.

ಇದನ್ನೂ ಓದಿ: ‘ನಾಗಬಂಧಂ’ ಚಿತ್ರಕ್ಕಾಗಿ ಸಸ್ಯಹಾರಿಗಳಾದ ಚಿತ್ರತಂಡ: ರಹಸ್ಯ ಬಿಚ್ಚಿಟ್ಟ ನಟಿ ನಭಾ ನಟೇಶ್

ಕಷ್ಟದ ಕಾಲದಲ್ಲೂ ಕಲೆ ಸಾಕಿ ಬೆಳೆದ ನಟಿ

ಆದರೆ, ನಭಾ ಈ ಕಷ್ಟದ ಸಮಯವನ್ನು ಧನಾತ್ಮಕವಾಗಿ ಬಳಸಿಕೊಂಡರು. ಹಾಸಿಗೆ ಹಿಡಿದಿದ್ದ ಆ ದಿನಗಳಲ್ಲಿ ಅವರು ತಮ್ಮನ್ನು ತಾವು ಮಾನಸಿಕವಾಗಿ ಪುನರ್ನಿರ್ಮಿಸಿಕೊಳ್ಳಲು ನಿರ್ಧರಿಸಿದರು. ಆ ವಿರಾಮದ ಸಮಯದಲ್ಲಿ ಚಿತ್ರಕಲೆ, ನೃತ್ಯ, ಸಂಗೀತ, ಶಿಲ್ಪಕಲೆ, ಪುಸ್ತಕ ಓದುವುದು ಮತ್ತು ಪ್ರವಾಸ ಮಾಡುವ ಮೂಲಕ ಹೊಸ ಉತ್ಸಾಹ ಕಂಡುಕೊಂಡರು. ಕುಟುಂಬ ಹಾಗೂ ಸ್ನೇಹಿತರ ಜೊತೆ ಕಾಲ ಕಳೆದು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಿಕೊಂಡರು. ಈ ಕಠಿಣ ಅನುಭವ ತಮಗೆ ಸಿನಿಮಾ ಕೇವಲ ಓಟದ ರೇಸ್ ಅಲ್ಲ, ಅದೊಂದು ಸೃಜನಶೀಲ ಮತ್ತು ಆಧ್ಯಾತ್ಮಿಕ ಅನುಭವ ಎಂಬುದನ್ನು ಕಲಿಸಿಕೊಟ್ಟಿತು ಎಂದು ಅವರು ಹೇಳಿದ್ದಾರೆ.

ಭರ್ಜರಿ ಕಂಬ್ಯಾಕ್‌ಗೆ ‘ಪಟಾಕ ಪೋರಿ’ ಸಿದ್ಧ

ಪ್ರಸ್ತುತ ನಭಾ ನಟೇಶ್ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಮೊದಲಿಗಿಂತಲೂ ಹೆಚ್ಚು ಬಲಶಾಲಿಯಾಗಿ ಚಿತ್ರರಂಗಕ್ಕೆ ಮರಳಲು ಸಿದ್ಧರಾಗಿದ್ದಾರೆ. ಸದ್ಯ ಅವರು ‘ನಾಗಬಂಧಂ’ ಮತ್ತು ‘ಸ್ವಯಂಭು’ ನಂತಹ ವಿಭಿನ್ನ ಹಾಗೂ ದೊಡ್ಡ ಬಜೆಟ್‌ನ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಕಷ್ಟಗಳನ್ನು ಮೆಟ್ಟಿ ನಿಂತು, ವೈಯಕ್ತಿಕವಾಗಿ ಬೆಳೆದು, ಪ್ರಬಲವಾಗಿ ಪುನರಾಗಮನ ಮಾಡುತ್ತಿರುವ ನಭಾ ನಟೇಶ್ ಅವರ ಇಚ್ಛಾಶಕ್ತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ನೆಟಿಜನ್‌ಗಳು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Tulsi Vastu Tips: ಮನೆಯಲ್ಲಿ ತುಳಸಿ ಗಿಡ ನೆಡುವ ಮುನ್ನ ತಿಳಿಯಲೇಬೇಕಾದ ವಾಸ್ತು ನಿಯಮಗಳಿವು! – Kannada News | Tulsi Vastu and Puja: Boost Prosperity at Home, Auspicious Days, Rituals and Rules

ಹಿಂದೂ ಧರ್ಮ ಮತ್ತು ವಾಸ್ತು ಶಾಸ್ತ್ರದಲ್ಲಿ ತುಳಸಿ ಗಿಡಕ್ಕೆ ಅತ್ಯಂತ ಪವಿತ್ರವಾದ ಸ್ಥಾನವಿದೆ. ತುಳಸಿ ಗಿಡವಿರುವ ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸಿರುತ್ತದೆ ಮತ್ತು ಆರ್ಥಿಕ ಸಮಸ್ಯೆಗಳು ಎಂದಿಗೂ ಸುಳಿಯುವುದಿಲ್ಲ ಎಂಬ ನಂಬಿಕೆಯಿದೆ. ತುಳಸಿಯು ಶ್ರೀಹರಿ ವಿಷ್ಣು ಮತ್ತು ಲಕ್ಷ್ಮಿ ದೇವಿಗೆ ಅತ್ಯಂತ ಪ್ರಿಯವಾದುದಾಗಿದೆ. ಹೀಗಾಗಿ, ತುಳಸಿಯನ್ನು ಪೂಜಿಸುವ ಮನೆಯಲ್ಲಿ ಲಕ್ಷ್ಮಿ-ನಾರಾಯಣರ ಆಶೀರ್ವಾದ ಸದಾ ಇರುತ್ತದೆ. ನಿಮ್ಮ ಮನೆಯಲ್ಲಿ ಹೊಸದಾಗಿ ತುಳಸಿ ಗಿಡವನ್ನು ನೆಡಲು ನೀವು ಬಯಸಿದರೆ, ವಾಸ್ತು ಶಾಸ್ತ್ರದ ಪ್ರಕಾರ ಕೆಲವು ಮುಖ್ಯ ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ. ಆ ನಿಯಮಗಳು ಇಲ್ಲಿವೆ:

ತುಳಸಿ ಗಿಡ ನೆಡಲು ಶುಭ ದಿನಗಳು ಯಾವುವು?

ವಾಸ್ತು ಶಾಸ್ತ್ರದ ಪ್ರಕಾರ, ವಾರದ ಎಲ್ಲಾ ದಿನಗಳಲ್ಲೂ ತುಳಸಿ ಗಿಡವನ್ನು ನೆಡಬಾರದು. ಅದಕ್ಕಾಗಿಯೇ ಕೆಲವು ವಿಶೇಷ ದಿನಗಳನ್ನು ಉಲ್ಲೇಖಿಸಲಾಗಿದೆ. ಗುರುವಾರ, ಶುಕ್ರವಾರ ಮತ್ತು ಶನಿವಾರಗಳು ಮನೆಯಲ್ಲಿ ಹೊಸ ತುಳಸಿ ಗಿಡವನ್ನು ನೆಡಲು ಅತ್ಯಂತ ಸೂಕ್ತವಾದ ದಿನಗಳಾಗಿವೆ. ವರ್ಷದ ಕಾರ್ತಿಕ ಮಾಸ ಮತ್ತು ಏಕಾದಶಿಯ ದಿನದಂದು ತುಳಸಿ ಗಿಡವನ್ನು ನೆಡುವುದು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗಿದೆ. ಈ ದಿನಗಳಲ್ಲಿ ಗಿಡ ನೆಡುವುದರಿಂದ ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ವೃದ್ಧಿಯಾಗುತ್ತದೆ. ನೆನಪಿರಲಿ, ಸೋಮವಾರದಂದು ಎಂದಿಗೂ ಮನೆಯಲ್ಲಿ ಹೊಸ ತುಳಸಿ ಗಿಡವನ್ನು ನೆಡಬಾರದು.

ಪ್ರತಿದಿನ ಪಾಲಿಸಬೇಕಾದ ಪೂಜಾ ವಿಧಿಗಳು:

ಪ್ರತಿದಿನ ಬೆಳಿಗ್ಗೆ ಸ್ನಾನ ಮಾಡಿದ ನಂತರ, ಮೊದಲು ತುಳಸಿ ಗಿಡಕ್ಕೆ ನೀರನ್ನು (ಅರ್ಘ್ಯ) ಅರ್ಪಿಸಬೇಕು. ತುಳಸಿ ಕಟ್ಟೆಯ ಬಳಿ ಪ್ರತಿದಿನ ಸಂಜೆ ತಪ್ಪದೇ ದೀಪವನ್ನು ಹಚ್ಚಿ ಪ್ರಾರ್ಥಿಸಬೇಕು.

ಇದನ್ನೂ ಓದಿ: ಗರುಡ ಪುರಾಣದ ಪ್ರಕಾರ ಈ 4 ಕೆಟ್ಟ ಅಭ್ಯಾಸಗಳಿದ್ದರೆ ಕೋಟ್ಯಧಿಪತಿಯೂ ಭಿಕ್ಷುಕನಾಗುತ್ತಾನೆ!

ತುಳಸಿ ಗಿಡದ ಬಳಿ ಇವುಗಳನ್ನು ಎಂದಿಗೂ ಮಾಡಬೇಡಿ:

ತುಳಸಿ ದೇವಿಯ ಅನುಗ್ರಹ ಸದಾ ಇರಬೇಕಾದರೆ, ಕೆಲವು ತಪ್ಪುಗಳನ್ನು ಮಾಡದಂತೆ ಎಚ್ಚರ ವಹಿಸಬೇಕು. ತುಳಸಿ ಗಿಡದ ಸುತ್ತಮುತ್ತಲಿನ ಜಾಗವನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ತುಳಸಿ ಕಟ್ಟೆಯ ಬಳಿ ಎಂದಿಗೂ ಪೊರಕೆ (ಕಸಬರಗಿ), ಚಪ್ಪಲಿ ಅಥವಾ ಬೂಟುಗಳನ್ನು ಇಡಬಾರದು. ಇದು ನಕಾರಾತ್ಮಕತೆಯನ್ನು ತರುತ್ತದೆ. ಏಕಾದಶಿಯ ದಿನದಂದು ತುಳಸಿ ಎಲೆಗಳನ್ನು ಎಂದಿಗೂ ಕೀಳಬಾರದು. ಇದು ಧಾರ್ಮಿಕವಾಗಿ ನಿಷೇಧಿಸಲ್ಪಟ್ಟಿದೆ. ಶಿವಲಿಂಗಕ್ಕೆ ಅಥವಾ ಮಹಾದೇವನಿಗೆ (ಶಿವ) ಎಂದಿಗೂ ತುಳಸಿ ಎಲೆಗಳನ್ನು ಅರ್ಪಿಸಬಾರದು. ಆದರೆ, ವಿಷ್ಣು, ಲಕ್ಷ್ಮಿ ದೇವಿ ಮತ್ತು ರಂಗನಾಥ ಸ್ವಾಮಿಗೆ ತುಳಸಿ ಎಲೆಗಳನ್ನು ಅರ್ಪಿಸುವುದು ಅತ್ಯಂತ ಶ್ರೇಷ್ಠ ಹಾಗೂ ಶುಭ ತರಬಲ್ಲದ್ದಾಗಿದೆ. ವಾಸ್ತು ನಿಯಮಗಳ ಪ್ರಕಾರ ತುಳಸಿ ಗಿಡವನ್ನು ನೆಟ್ಟು, ಪೂಜಿಸುವುದರಿಂದ ಮನೆಯಲ್ಲಿ ಧನ-ಧಾನ್ಯಗಳ ಕೊರತೆ ಎದುರಾಗುವುದಿಲ್ಲ ಮತ್ತು ಸದಾ ಸಕಾರಾತ್ಮಕ ವಾತಾವರಣ ಇರುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಮೃತಧಾರೆ: ಕೊನೆಗೂ ಬಯಲಾಯ್ತು ಶಾಕುಂತಲಾ ಅಸಲಿ ಮುಖ; ವೀಕ್ಷಕರಿಗೆ ನಿರಾಸೆ – Kannada News | Amruthadhare Shocking Twist: Shakuntala’s True Face Revealed, Revenge Plot Against Gautam Bhumika

ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ಅಮೃತಧಾರೆ’ (Amruthadhaare) ಸದ್ಯ ಅತ್ಯಂತ ರೋಚಕ ತಿರುವುಗಳೊಂದಿಗೆ ಪ್ರಸಾರವಾಗುತ್ತಿದೆ. ಸದಾ ಕೆಟ್ಟ ಕೆಲಸಗಳನ್ನು ಮಾಡುತ್ತಾ, ಎಲ್ಲರ ದ್ವೇಷ ಕಟ್ಟಿಕೊಂಡಿದ್ದ ಶಾಕುಂತಲಾ ಒಮ್ಮೆಲೆ ಸಂಪೂರ್ಣವಾಗಿ ಬದಲಾದಂತೆ ನಾಟಕವಾಡಿದ್ದರು. ತನ್ನ ಸ್ವಂತ ಮಗ ಜಯದೇವ್ ಮಾಡಿದ ತಪ್ಪುಗಳ ವಿರುದ್ಧವೇ ತಿರುಗಿಬಿದ್ದು, ತಾನೊಬ್ಬ ಆದರ್ಶ ತಾಯಿ ಎಂಬಂತೆ ಬಿಂಬಿಸಿಕೊಂಡಿದ್ದರು. ಆದರೆ ಈಗ ಬಿಡುಗಡೆಯಾಗಿರುವ ಹೊಸ ಪ್ರೋಮೋದಲ್ಲಿ ಶಾಕುಂತಲಾ ತನ್ನ ಅಸಲಿ ಮುಖವನ್ನು ತೋರಿಸುವ ಮೂಲಕ ವೀಕ್ಷಕರಿಗೆ ದೊಡ್ಡ ಶಾಕ್ ನೀಡಿದ್ದಾಳೆ.

ಧಾರಾವಾಹಿಯ ಹೊಸ ಪ್ರೋಮೋದಲ್ಲಿ ಜೈಲಿನಲ್ಲಿದ್ದ ಜಯದೇವ್‌ಗೆ ಯಾರೋ ಬೇಲ್ ಕೊಡಿಸಿ ಬಿಡುಗಡೆ ಮಾಡಿಸುತ್ತಾರೆ. ಆಚೆ ಬಂದು ನೋಡಿದಾಗ ಅಲ್ಲಿ ಶಾಕುಂತಲಾ ನಿಂತಿರುತ್ತಾಳೆ. ‘ಅಮ್ಮಾ ನೀನೇ ನನಗೆ ಬೇಲ್ ಕೊಡಿಸಿದ್ದಾ?’ ಎಂದು ಜಯದೇವ್ ಆಶ್ಚರ್ಯದಿಂದ ಕೇಳಿದಾಗ, ಶಾಕುಂತಲಾ ತನ್ನ ಕ್ರೂರ ನಗುವಿನೊಂದಿಗೆ ಅಸಲಿ ಸತ್ಯವನ್ನು ಬಿಚ್ಚಿಡುತ್ತಾಳೆ. ‘ಇಷ್ಟು ದಿನ ನೀನು ನೋಡಿದ್ದಾವುದೂ ನಿಜವಲ್ಲ ಜಯದೇವ್, ಅದೆಲ್ಲಾ ನಾನು ಆಡಿದ ನಾಟಕ! ಇನ್ಮೇಲೆ ಶಾಕುಂತಲಾಳ ನಿಜವಾದ ಮುಖ ಏನೆಂದು ತೋರಿಸ್ತೀನಿ’ ಎನ್ನುತ್ತಾ ತನ್ನ ಕಪಟ ಬುದ್ಧಿಯನ್ನು ಮತ್ತೆ ಜಾಗೃತಗೊಳಿಸುತ್ತಾಳೆ.

ಇದನ್ನೂ ಓದಿ: ‘ಅಮೃತಧಾರೆ’ ಮಹಾ ತಿರುವು; ಗೌತಮ್ ಹಾಗೂ ಭೂಮಿಕಾ ದಂಪತಿಗೆ ತಿಳಿಯಿತು ಮಿಂಚು ಸತ್ಯ

ಶಾಕುಂತಲಾ ತಾನು ಯಾವುದೇ ಕಾರಣಕ್ಕೂ ಬದಲಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾಳೆ. ತನ್ನ ಮಲಮಗ ಗೌತಮ್ ಹಾಗೂ ಆತನ ಪತ್ನಿ ಭೂಮಿಕಾ ವಿರುದ್ಧ ಸೇಡು ತೀರಿಸಿಕೊಳ್ಳಲು ಆಕೆ ಭೀಕರ ಶಪಥ ತೊಟ್ಟಿದ್ದಾಳೆ. ಗೌತಮ್ ಮತ್ತು ಭೂಮಿಕಾ ಜೋಡಿಯನ್ನು ಸರ್ವನಾಶ ಮಾಡಲು ತಾನು ಮತ್ತೆ ಹಳೆ ರೂಪಕ್ಕೆ ಮರಳಿರುವುದಾಗಿ ಜಯದೇವ್ ಮುಂದೆ ವಿವರಿಸಿದ್ದಾಳೆ. ಅಲ್ಲಿಗೆ ಗೌತಮ್ ಸಂಸಾರಕ್ಕೆ ಮತ್ತೆ ಕಂಟಕ ಎದುರಾಗುವುದು ಗ್ಯಾರಂಟಿ ಎಂಬುದು ಪ್ರೋಮೋದಿಂದ ಸಾಬೀತಾಗಿದೆ.

ವಿಶೇಷವೆಂದರೆ, ‘ಅಮೃತಧಾರೆ’ ಧಾರಾವಾಹಿಯು ಯಶಸ್ವಿಯಾಗಿ 1000 ಸಂಚಿಕೆಗಳನ್ನು ಪೂರೈಸುವ ಸಂಭ್ರಮದಲ್ಲಿದೆ. ಇಂತಹ ಮಹತ್ವದ ಮೈಲಿಗಲ್ಲು ತಲುಪುವ ಸಂದರ್ಭದಲ್ಲೇ ಶಾಕುಂತಲಾಳ ನೆಗೆಟಿವ್ ಪಾತ್ರ ಮತ್ತೆ ಮುನ್ನೆಲೆಗೆ ಬಂದಿರುವುದು ಮತ್ತು ಆಕೆ ಸದಾ ಒಳ್ಳೆಯವಳಾಗಿ ಇರುತ್ತಾಳೆ ಎಂದು ನಂಬಿದ್ದ ಅಭಿಮಾನಿಗಳಿಗೆ ತೀವ್ರ ಬೇಸರ ಮೂಡಿಸಿದೆ. ಸದಾ ಸಕಾರಾತ್ಮಕವಾಗಿ ಸಾಗುತ್ತಿದ್ದ ಕಥೆಯಲ್ಲಿ ಮತ್ತೆ ಹಳೆಯ ಸೇಡಿನ ಕಥೆ ಶುರುವಾಗಿರುವುದು ವೀಕ್ಷಕರಲ್ಲಿ ನಿರಾಸೆ ಮೂಡಿಸಿದ್ದು, ಮುಂದೆ ಕಥೆ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಪಘಾತದಿಂದ ತೊಂದರೆಗೆ ಒಳಗಾದರೆ ರಂಭಾ? ನಡೆದಾಡಲು ಪರದಾಟ – Kannada News | Rambha Health Sparks Fan Worry: 90s Glamour Star struggle to walk

ಒಂಬತ್ತರ ದಶಕದಲ್ಲಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ತಮ್ಮ ಅದ್ಭುತ ಸೌಂದರ್ಯ ಮತ್ತು ಗ್ಲಾಮರ್ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದ ನಟಿ ರಂಭಾ (Ramba) ಇಂದಿನ ಪರಿಸ್ಥಿತಿ ಅವರ ಅಭಿಮಾನಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ಒಂದು ಕಾಲದಲ್ಲಿ ಬೆಳ್ಳಿತೆರೆಯ ಮೇಲೆ ಸ್ಟಾರ್ ನಟರ ಜೊತೆ ಹೆಜ್ಜೆ ಹಾಕುತ್ತಾ, ಗ್ಲಾಮರ್ ಗೊಂಬೆಯಾಗಿ ಮಿಂಚಿದ್ದ ಈ ನಟಿ ಈಗ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ರೀತಿ ಎಲ್ಲರನ್ನೂ ಚಕಿತಗೊಳಿಸಿದೆ. ಅವರು ನಡೆದಾಡಲು ಕಷ್ಟಪಟ್ಟಿದ್ದಾರೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನಟಿ ರಂಭಾ ಅವರ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದ್ದು, ಅದನ್ನು ನೋಡಿದ ಪ್ರೇಕ್ಷಕರು ಮರುಗುತ್ತಿದ್ದಾರೆ. ಆ ವಿಡಿಯೋದಲ್ಲಿ ರಂಭಾ ಅವರಿಗೆ ಕನಿಷ್ಠ ಪಕ್ಷ ಸರಿಯಾಗಿ ನಿಲ್ಲಲು ಮತ್ತು ನಡೆದಾಡಲು ಆಗುತ್ತಿಲ್ಲ. ಅತ್ಯಂತ ಕಷ್ಟಪಟ್ಟು ಒಂದೊಂದೇ ಹೆಜ್ಜೆ ಇಡುತ್ತಾ ಸಾಗುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಈ ಹಿಂದೆ ಸಂಭವಿಸಿದ ಭೀಕರ ಕಾರು ಅಪಘಾತದ ಗಾಯಗಳು ಅಥವಾ ತೀವ್ರವಾದ ಮಂಡಿ ನೋವಿನ ಸಮಸ್ಯೆಯಿಂದಾಗಿ ಅವರು ಈ ರೀತಿ ನಡೆದಾಡಲು ಪರದಾಡುತ್ತಿದ್ದಾರೆ ಎನ್ನಲಾಗುತ್ತಿದ್ದು, ಅವರ ಈ ಸ್ಥಿತಿ ಅಭಿಮಾನಿಗಳಿಗೆ ತೀವ್ರ ಬೇಸರ ತರಿಸಿದೆ.

ನಟಿ ರಂಭಾ ಅವರ ಕಾರು ಅಪಘಾತವು 2022ರ ನವೆಂಬರ್‌ನಲ್ಲಿ ಕೆನಡಾದ ಟೊರೊಂಟೊದಲ್ಲಿ ಸಂಭವಿಸಿತ್ತು. ಶಾಲೆಯಿಂದ ಮಕ್ಕಳನ್ನು ಕರೆದುಕೊಂಡು ಮನೆಗೆ ಮರಳುತ್ತಿದ್ದಾಗ ಅವರ ಕಾರಿಗೆ ಮತ್ತೊಂದು ವಾಹನ ಡಿಕ್ಕಿಯಾಗಿತ್ತು. ಆಗ ಅವರಿಗೆ ತೊಂದರೆ ಆಗಿತ್ತೇ ಎನ್ನುವ ಪ್ರಶ್ನೆ ಮೂಡಿದೆ.

ರಂಭಾ ಅವರು ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. ‘ಸರ್ವರ್ ಸೋಮಣ್ಣ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ‘ಓ ಪ್ರೇಮವೇ’ ಸಿನಿಮಾ ಮಾಡಿದರು. ಶಿವಣ್ಣ ಜೊತೆ ‘ಗಂಡುಗಲಿ ಕುಮಾರರಾಮ’ ಮತ್ತು ‘ಭಾವ ಬಾಮೈದ’ ಅಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಕನ್ನಡ ಪ್ರೇಕ್ಷಕರ ಮನ ಗೆದ್ದಿದ್ದರು. ಕನ್ನಡದಲ್ಲಿ ಅವರು ನಟಿಸಿದ ಗ್ಲಾಮರಸ್ ಪಾತ್ರಗಳು ಹಾಗೂ ಸಾಂಗ್ಸ್‌ ಇಂದಿಗೂ ಕನ್ನಡಿಗರ ಮನಸಿನಲ್ಲಿ ಹಚ್ಚಹಸಿರಾಗಿವೆ.

ಇದನ್ನೂ ಓದಿ: ವಿಜಯಲಕ್ಷ್ಮೀ ರಂಭಾ ಆಗಿದ್ದು ಹೇಗೆ? ಕಂಬ್ಯಾಕ್​​​ಗೆ ನಡೆದಿದೆ ಪ್ಲ್ಯಾನ್

ಮದುವೆಯಾಗಿ ಸಂಸಾರ, ಮಕ್ಕಳ ಜವಾಬ್ದಾರಿಯಲ್ಲಿ ಬ್ಯುಸಿಯಾಗಿದ್ದ ರಂಭಾ ಸದ್ಯ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಪ್ರಸ್ತುತ ಪ್ರಮುಖ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕೆಲಸ ಮಾಡುತ್ತಾ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಬೆಳ್ಳಿತೆರೆಗೆ ಭರ್ಜರಿಯಾಗಿ ಕಂಬ್ಯಾಕ್ ಮಾಡಬೇಕೆಂಬ ದೊಡ್ಡ ಆಸೆ ಇದೆ. ಇತ್ತೀಚಿನ ಸಂದರ್ಶನಗಳಲ್ಲಿಯೂ ಅವರು ತಮಗೆ ಸೂಕ್ತವಾದ ಮತ್ತು ತೂಕವಿರುವ ಪಾತ್ರಗಳು ಸಿಕ್ಕರೆ ಖಂಡಿತವಾಗಿಯೂ ಚಿತ್ರರಂಗಕ್ಕೆ ಮರುಪ್ರವೇಶ ಮಾಡುವುದಾಗಿ ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೇಂದ್ರ ಜಲಶಕ್ತಿ ಸಚಿವಾಲಯದಿಂದ 7ನೇ ರಾಷ್ಟ್ರೀಯ ಜಲ ಪ್ರಶಸ್ತಿ ಘೋಷಣೆ: ಆಗಸ್ಟ್ 28ರೊಳಗೆ ಅರ್ಜಿ ಸಲ್ಲಿಸಲು ಅವಕಾಶ – Kannada News | 7th National Water Awards Announced: Apply Online Before August 28

ಬೆಂಗಳೂರು, ಜುಲೈ 04: ದೇಶದಲ್ಲಿ ಜಲ ಸಂರಕ್ಷಣೆ ಮತ್ತು ನೀರಿನ ಸಮರ್ಪಕ ನಿರ್ವಹಣೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಜಲಶಕ್ತಿ ಸಚಿವಾಲಯವು ‘7ನೇ ರಾಷ್ಟ್ರೀಯ ಜಲ ಪ್ರಶಸ್ತಿಗಳನ್ನು’ (7th National Water Awards) ಘೋಷಿಸಿದೆ. ‘ಜಲ ಸಮೃದ್ಧ ಭಾರತ’ದ ಗುರಿ ಸಾಧನೆಗಾಗಿ ಶ್ರಮಿಸುತ್ತಿರುವ ಸಂಸ್ಥೆಗಳು ಹಾಗೂ ಘಟಕಗಳನ್ನು ಗುರುತಿಸಿ ಗೌರವಿಸುವುದು ಈ ಪ್ರಶಸ್ತಿಯ ಮುಖ್ಯ ಉದ್ದೇಶವಾಗಿದೆ.

ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಕೆ

ಅರ್ಹ ಆಸಕ್ತರು ಗೃಹ ವ್ಯವಹಾರಗಳ ಸಚಿವಾಲಯದ ಅಧಿಕೃತ ರಾಷ್ಟ್ರೀಯ ಪುರಸ್ಕಾರ ಪೋರ್ಟಲ್ (www.awards.gov.in) ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು 2026ರ ಆಗಸ್ಟ್ 28 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ವಿವರಗಳಿಗಾಗಿ ಇಲಾಖೆಯ ಜಾಲತಾಣ www.jalshakti-dowr.gov.in ಗೆ ಭೇಟಿ ನೀಡಬಹುದು.

ಪ್ರಶಸ್ತಿಯ ವಿಭಾಗಗಳು ಮತ್ತು ಅರ್ಹತೆ

ಜಲ ಸಂರಕ್ಷಣೆಯಲ್ಲಿ ಗಮನಾರ್ಹ ಸಾಧನೆ ಮಾಡಿರುವ ರಾಜ್ಯಗಳು, ಜಿಲ್ಲೆಗಳು, ನಗರ ಸ್ಥಳೀಯ ಸಂಸ್ಥೆಗಳು, ಅಣೆಕಟ್ಟು ಮಾಲೀಕತ್ವದ ಏಜೆನ್ಸಿಗಳು ಹಾಗೂ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಅಡಿ ಕೆಲಸ ಮಾಡಿರುವ ಕೈಗಾರಿಕೆಗಳು ಈ ಪ್ರಶಸ್ತಿಗೆ ಅರ್ಹವಾಗಿವೆ.

ಜಲಸಂಪನ್ಮೂಲ ನಿರ್ವಹಣೆ, ‘ಜಲ ಸಂಚಯ್ ಜಲ ಭಾಗಿದಾರಿ’ (JSJB) ಮತ್ತು ‘ಜಲ ಜೀವನ ಮಿಷನ್’ (JJM) ಉಪ-ವರ್ಗಗಳ ಅಡಿಯಲ್ಲಿ ತಲಾ 3 ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ 5 ವಲಯಗಳಿಂದ ತಲಾ 3 ರಂತೆ ಒಟ್ಟು 15 ಪ್ರಶಸ್ತಿಗಳನ್ನು ವಿತರಿಸಲಾಗುತ್ತದೆ. 5 ವಲಯಗಳಿಂದ ತಲಾ ಒಂದರಂತೆ 5 ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಅತ್ಯುತ್ತಮ ಯೋಜನೆ ಅನುಷ್ಠಾನ ಹಾಗೂ ಜಲ ಕ್ಷೇತ್ರದಲ್ಲಿ CSR ಉಪಕ್ರಮ ಕೈಗೊಂಡ ಕೈಗಾರಿಕೆಗಳಿಗೆ ತಲಾ 3 ಪ್ರಶಸ್ತಿಗಳನ್ನು ಮೀಸಲಿಡಲಾಗಿದೆ.

ಆಯ್ಕೆ ಪ್ರಕ್ರಿಯೆ ಹೇಗೆ?

ಸ್ವೀಕರಿಸಲಾದ ಅರ್ಜಿಗಳನ್ನು ಮೊದಲು ಸ್ಕ್ರೀನಿಂಗ್ ಕಮಿಟಿ ಪರಿಶೀಲಿಸಿ ಶಾರ್ಟ್‌ಲಿಸ್ಟ್ ಮಾಡುತ್ತದೆ. ನಂತರ ತೀರ್ಪುಗಾರರ ಸಮಿತಿಯ ಶಿಫಾರಸಿನ ಮೇರೆಗೆ ಜಲಶಕ್ತಿ ಸಚಿವರ ಅನುಮೋದನೆಯೊಂದಿಗೆ ವಿಜೇತರನ್ನು ಪ್ರಕಟಿಸಲಾಗುತ್ತದೆ. ನವದೆಹಲಿಯಲ್ಲಿ ನಡೆಯಲಿರುವ ಭವ್ಯ ಸಮಾರಂಭದಲ್ಲಿ ಭಾರತದ ಗೌರವಾನ್ವಿತ ರಾಷ್ಟ್ರಪತಿಗಳು ಅಥವಾ ಉಪರಾಷ್ಟ್ರಪತಿಗಳು ವಿಜೇತರಿಗೆ ಟ್ರೋಫಿ ಮತ್ತು ಪ್ರಶಂಸಾಪತ್ರವನ್ನು ಪ್ರದಾನ ಮಾಡಲಿದ್ದಾರೆ. 2018 ರಲ್ಲಿ ಆರಂಭವಾದ ಈ ಜಲ ಪ್ರಶಸ್ತಿ ಆವೃತ್ತಿಯು ಇದೀಗ ಯಶಸ್ವಿಯಾಗಿ 7ನೇ ವರ್ಷಕ್ಕೆ ಕಾಲಿಟ್ಟಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಲಗಿದ್ದ ಮಕ್ಕಳ ನಡುವೆಯೇ ಚಾಪೆಯಲ್ಲಿತ್ತು 5 ಅಡಿಯ ಬೃಹತ್ ನಾಗರಹಾವು! ಪ್ರಾಣಾಪಾಯದಿಂದ ಪುಟ್ಟ ಮಕ್ಕಳು ಜಸ್ಟ್ ಮಿಸ್ – Kannada News | Bengaluru Video: 5 Foot Cobra Found Inside Toddlers Bedding in Hesaraghatta; Narrow Escape for Kids

ನೆಲಮಂಗಲ, ಜುಲೈ 4: ಮನೆಯೊಳಗೆ ಪುಟ್ಟ ಮಕ್ಕಳು ಮಲಗಿದ್ದ ಚಾಪೆಯಲ್ಲೇ ಬೃಹತ್ ನಾಗರಹಾವೊಂದು ಅಡಗಿದ್ದ ಅತ್ಯಂತ ಆಘಾತಕಾರಿ ಮತ್ತು ಮೈ ಜುಂ ಎನ್ನಿಸುವ ಘಟನೆಯೊಂದು ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟದ ಬಳಿಯ ಗುಡ್ಡದಹಳ್ಳಿಯಲ್ಲಿ ನಡೆದಿದೆ. ಮಕ್ಕಳು ನಿರಾಳವಾಗಿ ಮಲಗಿದ್ದ ಚಾಪೆಯ ಕೆಳಗೆ ಬರೋಬ್ಬರಿ 5 ಅಡಿ ಉದ್ದದ ನಾಗರಹಾವು ಸೇರಿಕೊಂಡಿತ್ತು. ಇದನ್ನು ತಡವಾಗಿ ಗಮನಿಸಿದ ಪೋಷಕರು ಒಂದು ಕ್ಷಣ ತೀವ್ರ ಕಂಗಾಲಾಗಿದ್ದಾರೆ. ತಕ್ಷಣವೇ ವನ್ಯಜೀವಿ ಸಂರಕ್ಷಣಾ ಪ್ರತಿಷ್ಠಾನದ ಉರಗ ರಕ್ಷಕರಾದ ಪ್ರಶಾಂತ್ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಉರಗ ರಕ್ಷಕ ಪ್ರಶಾಂತ್, ಅತ್ಯಂತ ಚಾಣಾಕ್ಷತನದಿಂದ ಕಾರ್ಯಾಚರಣೆ ನಡೆಸಿ ನಾಗರಹಾವನ್ನು ಸುರಕ್ಷಿತವಾಗಿ ಸೆರೆಹಿಡಿದಿದ್ದಾರೆ. ಉರಗ ರಕ್ಷಕರ ಸಕಾಲಿಕ ಸ್ಪಂದನೆಯಿಂದಾಗಿ ಪುಟ್ಟ ಮಕ್ಕಳು ಜೀವಾಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಹಾವನ್ನು ಹಿಡಿಯುವ ರೋಮಾಂಚನಕಾರಿ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ.

ವಿಡಿಯೋ, ವರದಿ: ಮಂಜುನಾಥ್, ಟಿವಿ9, ನೆಲಮಂಗಲ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: ಕರಾವಳಿ, ಮಲೆನಾಡಿನಲ್ಲಿ ವರುಣನ ಅಬ್ಬರ ಜೋರು! ಆರೆಂಜ್ ಅಲರ್ಟ್​ ಘೋಷಣೆ – Kannada News | Karnataka Weather Forecast: Heavy Rainfall Alert Issued for Coastal and Interior Districts

ಕರಾವಳಿ, ಮಲೆನಾಡಿನಲ್ಲಿ ವರುಣನ ಅಬ್ಬರ ಜೋರು! ಆರೆಂಜ್ ಅಲರ್ಟ್​ ಘೋಷಣೆ

ಬೆಂಗಳೂರು, ಜುಲೈ 04: ಕರಾವಳಿ, ಮಲೆನಾಡು ಸೇರಿದಂತೆ ಕರ್ನಾಟಕದ ಹಲವೆಡೆ ಮುಂಗಾರು ಮಳೆಯ ಆರ್ಭಟ ಜೋರಾಗಿದ್ದು, ಮುಂದಿನ ಕೆಲವು ದಿನಗಳ ಕಾಲ ರಾಜ್ಯದ ವಿವಿಧ ಭಾಗಗಳಲ್ಲಿ ಭಾರಿ ಮಳೆಯಾಗುವ (Weather) ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಪ್ರಮುಖವಾಗಿ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಜೋರಾಗಿರಲಿದೆ.

ಎಲ್ಲೆಲ್ಲಿ ಆರೆಂಜ್ ಅಲರ್ಟ್?

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಮಳೆಯೊಂದಿಗೆ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಈ ಭಾಗಕ್ಕೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕಡಲ ತೀರದ ನಿವಾಸಿಗಳು ಹಾಗೂ ಮೀನುಗಾರರು ಜಾಗರೂಕರಾಗಿರಲು ಸೂಚಿಸಲಾಗಿದೆ.

ಎಲ್ಲೆಲ್ಲಿ ಯೆಲ್ಲೋ ಅಲರ್ಟ್​?

ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ. ಉಳಿದಂತೆ ಬಾಗಲಕೋಟೆ, ಬೀದರ್, ಗದಗ, ಹಾವೇರಿ, ಕಲ್ಬುರ್ಗಿ, ಕೊಪ್ಪಳ, ರಾಯಚೂರು, ವಿಜಯಾಪುರ ಮತ್ತು ಯಾದಗಿರಿ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ನಿರಂತರ ಗಾಳಿಯೊಂದಿಗೆ (30-40 ಕಿಮೀ/ಗಂಟೆ) ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.

ಮಲೆನಾಡಿನ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಈ ನಾಲ್ಕು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಬೆಂಗಳೂರಿನಲ್ಲೂ ಸಾಧಾರಣ ಮಳೆ

ಮತ್ತೊಂದೆಡೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ತೇವಾಂಶಭರಿತ ಬಲವಾದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಭಾರಿ ಮಳೆ ಮತ್ತು ಗಾಳಿ ಇರುವ ಕಾರಣ ಸಾರ್ವಜನಿಕರು ದುರ್ಬಲ ಕಟ್ಟಡಗಳು ಹಾಗೂ ವಿದ್ಯುತ್ ಕಂಬಗಳಿಂದ ದೂರವಿರಲು ಮತ್ತು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಲು ಕೋರಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೆಗೆಟಿವ್ ವಿಮರ್ಶೆಗೆ ತತ್ತರಿಸಿ ಹೋದ ‘ಆಲ್ಫಾ’; ಮೊದಲ ದಿನ ಹೀನಾಯ ಕಲೆಕ್ಷನ್ – Kannada News | Alpha Movie Box Office Collection: Alia Bhatt Film Tanks on Day 1 with 9 Cr

ಬಾಲಿವುಡ್‌ನ ಬಹುನಿರೀಕ್ಷಿತ, ಸ್ಟಾರ್ ನಟಿಯರಾದ ಆಲಿಯಾ ಭಟ್ ಮತ್ತು ಶಾರ್ವರಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಆಲ್ಫಾ’ ಸಿನಿಮಾ (Alpha Movie) ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ತೀವ್ರ ಹಿನ್ನಡೆ ಅನುಭವಿಸಿದೆ. ಚಿತ್ರ ಬಿಡುಗಡೆಯಾದ ಮೊದಲ ದಿನವೇ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಅತ್ಯಂತ ಕೆಟ್ಟ ವಿಮರ್ಶೆಗಳು ಮತ್ತು ನೆಗೆಟಿವ್ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಈ ತೀವ್ರ ನೆಗೆಟಿವ್ ವಿಮರ್ಶೆಗಳ ನೇರ ಪರಿಣಾಮ ಚಿತ್ರದ ಗಳಿಕೆಯ ಮೇಲೆ ಬೀರಿದ್ದು, ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗುವ ಸ್ಪಷ್ಟ ಸೂಚನೆಗಳು ಕಾಣಿಸುತ್ತಿವೆ.

ಮೊದಲ ದಿನದ ಕಲೆಕ್ಷನ್

ದೇಶಾದ್ಯಂತ ಒಟ್ಟು 7,534 ಶೋಗಳಲ್ಲಿ ಪ್ರದರ್ಶನಗೊಂಡರೂ ಸಹ ಸಿನಿಮಾ ನಿರೀಕ್ಷಿತ ಮಟ್ಟದ ಕಲೆಕ್ಷನ್ ಮಾಡಲು ಸಂಪೂರ್ಣವಾಗಿ ವಿಫಲವಾಗಿದೆ. ಈ ಚಿತ್ರವು ಮೊದಲ ದಿನ ಭಾರತದಲ್ಲಿ 9.00 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಒಟ್ಟು ಭಾರತದ ಗ್ರಾಸ್ ಕಲೆಕ್ಷನ್ 10.80 ಕೋಟಿ ರೂಪಾಯಿಗಳನ್ನು ತಲುಪಿದೆ. ಇನ್ನು ವಿದೇಶಿ ಮಾರುಕಟ್ಟೆಯಲ್ಲಿ ಸಿನಿಮಾ ಕೇವಲ 5.00 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದ್ದು, ಇದರೊಂದಿಗೆ ಚಿತ್ರದ ಮೊದಲ ದಿನದ ಒಟ್ಟು ಜಾಗತಿಕ ಗ್ರಾಸ್ ಗಳಿಕೆ ಕೇವಲ 15.80 ಕೋಟಿ ರೂಪಾಯಿಗಳಿಗೆ ಬಂದು ನಿಂತಿದೆ.

ಆಲಿಯಾಗೆ ಹಿನ್ನಡೆ

ಯಶ್ ರಾಜ್ ಫಿಲ್ಮ್ಸ್ ಪ್ರೊಡಕ್ಷನ್‌ನ ಸ್ಪೈ ಯೂನಿವರ್ಸ್ ಸರಣಿಯ ಮೊದಲ ಮಹಿಳಾ ಪ್ರಧಾನ ಆ್ಯಕ್ಷನ್ ಸಿನಿಮಾ ಇದಾಗಿತ್ತು. ಹೀಗಾಗಿ ಬಾಲಿವುಡ್‌ನ ಟಾಪ್ ನಟಿ ಆಲಿಯಾ ಭಟ್ ಅವರ ವೃತ್ತಿಜೀವನಕ್ಕೆ ಇದು ಅತ್ಯಂತ ನಿರ್ಣಾಯಕವಾಗಿತ್ತು. ಆದರೆ ಮೊದಲ ದಿನವೇ ಚಿತ್ರಕ್ಕೆ ಸಿಕ್ಕ ನೀರಸ ಪ್ರತಿಕ್ರಿಯೆ ಮತ್ತು ಕಳಪೆ ಕಲೆಕ್ಷನ್ ಆಲಿಯಾ ಭಟ್‌ಗೆ ದೊಡ್ಡ ಹಿನ್ನಡೆಯನ್ನು ತಂದಿಟ್ಟಿದೆ. ಅವರ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಹಾಗೂ ಈ ಚಿತ್ರದ ಮೇಲಿದ್ದ ಭಾರಿ ಹೈಪ್‌ಗೆ ಹೋಲಿಸಿದರೆ, 9 ಕೋಟಿಯ ಆರಂಭಿಕ ಕಲೆಕ್ಷನ್ ಅವರ ಸ್ಟಾರ್ ಇಮೇಜ್‌ಗೆ ಭಾರಿ ಧಕ್ಕೆ ತಂದಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: ‘ಇಷ್ಟು ಕೆಟ್ಟ ಸಿನಿಮಾ ನೋಡಿಲ್ಲ’; ‘ಆಲ್ಫಾ’ ನೋಡಿ ನೇರ ವಿಮರ್ಶೆ ತಿಳಿಸಿದ ಫ್ಯಾನ್ಸ್

ನಿರ್ಮಾಪಕರಿಗೆ ನಷ್ಟ

‘ಆಲ್ಫಾ’ ಸಿನಿಮಾ ಸುಮಾರು 150 ಕೋಟಿ ರೂಪಾಯಿಗಳ ಭಾರಿ ಬಜೆಟ್‌ನಲ್ಲಿ ನಿರ್ಮಾಣಗೊಂಡಿರುವುದರಿಂದ ನಿರ್ಮಾಪಕರಲ್ಲಿ ಈಗ ಆತಂಕ ಶುರುವಾಗಿದೆ. ಸಿನಿಮಾ ಇಷ್ಟು ದೊಡ್ಡ ಮೊತ್ತದ ಹೂಡಿಕೆಯನ್ನು ಮರಳಿ ಪಡೆಯಬೇಕಾದರೆ ಮುಂದಿನ ದಿನಗಳಲ್ಲಿ, ವಿಶೇಷವಾಗಿ ವಾರದ ದಿನಗಳಲ್ಲಿ ಕಲೆಕ್ಷನ್ ಅತ್ಯದ್ಭುತವಾಗಿ ಚೇತರಿಸಿಕೊಳ್ಳುವುದು ಅನಿವಾರ್ಯವಾಗಿದೆ. ಒಂದು ವೇಳೆ ಚಿತ್ರದ ಗಳಿಕೆ ಹೀಗೆಯೇ ಮುಂದುವರಿದರೆ ಅಥವಾ ಮತ್ತಷ್ಟು ಕುಸಿತ ಕಂಡರೆ, ಯಶ್ ರಾಜ್ ಫಿಲ್ಮ್ಸ್ ಸಂಸ್ಥೆಗೆ ಕೋಟ್ಯಂತರ ರೂಪಾಯಿಗಳ ಭಾರಿ ನಷ್ಟವಾಗುವುದು ಖಂಡಿತ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version