ಪಾಕಿಸ್ತಾನದಲ್ಲಿ ಭೀಕರ ಆತ್ಮಾಹುತಿ ಬಾಂಬ್ ದಾಳಿ; 12 ಯೋಧರು ಸೇರಿ 15 ಜನ ಸಾವು – Kannada News | 15 people Including 12 Soldiers Killed In Suicide Bombing In Pakistan Khyber Pakhtunkhwa
ಇಸ್ಲಾಮಾಬಾದ್, ಜುಲೈ 24: ಪಾಕಿಸ್ತಾನದಲ್ಲಿ (Pakistan) ಸೇನಾ ಭದ್ರತಾ ಚೆಕ್ಪಾಯಿಂಟ್ ಅನ್ನು ಗುರಿಯಾಗಿಸಿಕೊಂಡು ಉಗ್ರನೊಬ್ಬ ನಡೆಸಿದ ಭೀಕರ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 15 ಜನರು ಮೃತಪಟ್ಟಿದ್ದಾರೆ, ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ. ಪಾಕಿಸ್ತಾನದ ವಾಯುವ್ಯ ಪ್ರಾಂತ್ಯದ ಪ್ರದೇಶದಲ್ಲಿ ಭದ್ರತಾ ಪಡೆಗಳ ಚೆಕ್‌ಪೋಸ್ಟ್ ಅನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ. ಸ್ಫೋಟಕಗಳನ್ನು ತುಂಬಿದ್ದ ವಾಹನದಲ್ಲಿ ದಾಳಿಕೋರನು ನೇರವಾಗಿ ಭದ್ರತಾ ತಪಾಸಣಾ ಕೇಂದ್ರದ ಸಮೀಪ ಬಂದು ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ. ಈ ಸ್ಫೋಟದ ತೀವ್ರತೆಗೆ ಸ್ಥಳದಲ್ಲೇ 15 ಜನರು ಮೃತಪಟ್ಟಿದ್ದು, ಮೃತರಲ್ಲಿ…