ಸಮಾಜ ನಿರ್ಮಾಣದ ಅಡಿಪಾಯವೇ ತಾಯ್ತನ; ಮಾತೃತ್ವದ ಕುರಿತು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ – Kannada News | Motherhood is a eternal truth RSS Sarsanghchalak Mohan Bhagwat says in Vishwamanglya Sabha Program
ನವದೆಹಲಿ, ಜುಲೈ 24: ಮಾತೃತ್ವವಿಲ್ಲದೆ ಜೀವರಾಶಿಯ ಸೃಷ್ಟಿ, ಪೋಷಣೆ ಅಸಾಧ್ಯವಾಗಿದ್ದು, ಮಾತೃತ್ವವೇ ಮಾನವ ಸಮಾಜದ ನಿಜವಾದ ಅಡಿಪಾಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸರಸಂಘಚಾಲಕ ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ. ನವದೆಹಲಿಯ ಅಂಬೇಡ್ಕರ್ ಇಂಟರ್ನ್ಯಾಷನಲ್ ಸೆಂಟರ್ನಲ್ಲಿ ‘ವಿಶ್ವ ಮಾಂಗಲ್ಯ ಸಭಾ’ ಆಯೋಜಿಸಿದ್ದ “ಸಮಕಾಲೀನ ಮಾತೃತ್ವ” ವಿಷಯದ ಕುರಿತ ರಾಷ್ಟ್ರೀಯ ಜಾಗೃತಿ ಸಭೆಯ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು. ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ ಮತ್ತು ರವೀಂದ್ರನಾಥ ಟ್ಯಾಗೋರ್ ಅವರಂತಹ ಮಹಾನ್ ವ್ಯಕ್ತಿಗಳು ಸಹ…