ಟಾಕ್ಸಿಕ್ ರಿಲೇಶನ್​ಶಿಪ್​ನಿಂದ ನೊಂದ ಅನುಪಮಾ ಪರಮೇಶ್ವರನ್ ಬೆಂಬಲಕ್ಕೆ ನಿಂತ ಸ್ಟಾರ್ ನಟರಿವರು – Kannada News | Actress Anupama Parameswaran Opens Up About Toxic Relationship, Depression And Support From Dulquer Salmaan

ನಾಯಕಿ ಅನುಪಮಾ ಪರಮೇಶ್ವರನ್ (Anupama) ಸದ್ಯ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ವೈಯಕ್ತಿಕ ಜೀವನದ ಕಾರಣದಿಂದ ಚರ್ಚೆಯಲ್ಲಿದ್ದಾರೆ. ವಿಷಕಾರಿ ಸಂಬಂಧ ಹಾಗೂ ಬ್ರೇಕಪ್ ಬಗ್ಗೆ ಮಾತನಾಡುವಾಗ ಅವರು ಕಣ್ಣೀರು ಹಾಕಿದ್ದಾರೆ. ಖಿನ್ನತೆಯ ಸಮಯದಲ್ಲಿ ತಮಗೆ ಬೆಂಬಲವಾಗಿ ನಿಂತ ನಟರ ಬಗ್ಗೆಯೂ ಅವರು ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಖಿನ್ನತೆಯ ಕರಾಳ ದಿನಗಳಲ್ಲಿ ನಟ ದುಲ್ಕರ್ ಸಲ್ಮಾನ್ ತಮ್ಮ ಬೆಂಬಲಕ್ಕೆ ನಿಂತರು ಎಂದು ಅನುಪಮಾ ತಿಳಿಸಿದ್ದಾರೆ. ತಾನು ನೋವಿನಲ್ಲಿದ್ದಾಗ ದುಲ್ಕರ್ ಅವರಿಂದ ತಪ್ಪದೇ ಸಂದೇಶ ಬರುತ್ತದೆ ಎಂದು ಅವರು ಸ್ಮರಿಸಿಕೊಂಡಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಟ ರಾಮ್ ಪೋಥಿನೇನಿ ಕೂಡ ತಮಗೆ ಕಷ್ಟದ ಸಮಯದಲ್ಲಿ ನೆರವಾದರು ಎಂದು ಹೇಳಿದ್ದಾರೆ. ಈ ಇಬ್ಬರು ನಟರ ಜೊತೆ ಉತ್ತಮ ಬಾಂಧವ್ಯ ಹೊಂದಿರುವುದಾಗಿ ನಟಿ ಸ್ಪಷ್ಟಪಡಿಸಿದ್ದಾರೆ.

ಮಾಜಿ ಗೆಳೆಯನಿಂದ ತಾನು ನಾರ್ಸಿಸಿಸ್ಟಿಕ್ ನಿಂದನೆ ಅಂದರೆ ಮಾನಸಿಕ ಕಿರುಕುಳ ಅನುಭವಿಸಿದ್ದೆ ಎಂದು ಅನುಪಮಾ ಬಿಚ್ಚಿಟ್ಟಿದ್ದಾರೆ. ಅಂತಹ ಜನರು ಸದಾ ಇತರರನ್ನು ತಮ್ಮ ನಿಯಂತ್ರಣದಲ್ಲಿಡಲು ಪ್ರಯತ್ನಿಸುತ್ತಾರೆ ಎಂದು ನೋವು ತೋಡಿಕೊಂಡಿದ್ದಾರೆ. ಈ ಕಹಿ ಅನುಭವದಿಂದ ಹೊರಬರಲು ತಮಗೆ ಸಾಕಷ್ಟು ಸಮಯ ಹಿಡಿದಿದೆ ಎಂದು ಅವರು ತಿಳಿಸಿದ್ದಾರೆ.

ಸಿನಿಮಾ ವೃತ್ತಿಜೀವನದ ವಿಚಾರಕ್ಕೆ ಬಂದರೆ, ಅನುಪಮಾ ಈ ವರ್ಷ ಈಗಾಗಲೇ ‘ಲಾಕ್‌ಡೌನ್’ ಹಾಗೂ ‘ಮರಿಚಿಕಾ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ಅವರು ಶರ್ವಾನಂದ್ ಜೋಡಿಯಾಗಿ ‘ಭೋಗಿ’ ಚಿತ್ರದಲ್ಲಿ ನಾಯಕಿಯಾಗಿ ಬ್ಯುಸಿಯಾಗಿದ್ದಾರೆ. ವೃತ್ತಿಪರ ಜೀವನದಲ್ಲಿ ಯಶಸ್ಸು ಕಾಣುತ್ತಿದ್ದರೂ ವೈಯಕ್ತಿಕ ಬದುಕಿನ ಕಹಿ ಘಟನೆಗಳು ಅವರ ಅಭಿಮಾನಿಗಳಿಗೆ ಆಘಾತ ತಂದಿವೆ. ನಟಿಯ ಈ ಧೈರ್ಯದ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿವೆ.

ಇದನ್ನೂ ಓದಿ: ‘ನನ್ನ ಸೋಶಿಯಲ್ ಮೀಡಿಯಾ, ನಾನು ಏನು ಬೇಕಾದ್ರೂ ಪೋಸ್ಟ್ ಮಾಡ್ತೀನಿ’; ಅನುಪಮಾ ಪರಮೇಶ್ವರನ್

ಅನುಪಮಾ ಪರಮೇಶ್ವರನ್ ಅವರು ತಮ್ಮ ಬಾಯ್​ಫ್ರೆಂಡ್ ಯಾರು ಎಂದು ಹೇಳಿಲ್ಲ. ಚಿಯಾನ್ ವಿಕ್ರಮ್ ಮಗ ಧ್ರುವ್ ಅವರ ಬಾಯ್​ಫ್ರೆಂಡ್ ಇರಬಹುದು ಎಂದು ಅನೇಕರು ಊಹಿಸಿದ್ದಾರೆ. ಇಬ್ಬರೂ ಮೊದಲು ಒಟ್ಟಿಗೆ ನಟಿಸಿದ್ದರು. ಹೀಗಾಗಿ, ಇಬ್ಬರ ಹೆಸರು ಚರ್ಚೆಯಲ್ಲಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹೋಟೆಲ್‌, ಮೆಡಿಕಲ್‌ ಸ್ಟೋರ್‌ಗಳಲ್ಲಿ ಇನ್ಮುಂದೆ QR ಕೋಡ್, ಸ್ಕ್ಯಾನ್ ಮಾಡಿ ದೂರು ನೀಡಬಹುದು: ಖಾದರ್ ಘೋಷಣೆ – Kannada News | Karnataka to Introduce QR Code Complaint System in Hotels and Medical Stores: UT Khader Announced

ಬೆಂಗಳೂರು, ಆಗಸ್ಟ್ 17: ಹೋಟೆಲ್‌, ಮೆಡಿಕಲ್‌ ಸ್ಟೋರ್‌ ಸೇರಿದಂತೆ ಸಾರ್ವಜನಿಕರು ಭೇಟಿ ನೀಡುವ ಸ್ಥಳಗಳಲ್ಲಿ ಇನ್ಮುಂದೆ QR ಕೋಡ್ ಅಳವಡಿಸಲಾಗುವುದು ಎಂದು ಆರೋಗ್ಯ ಸಚಿವ ಯುಟಿ ಖಾದರ್ (UT Khader) ಮಹತ್ವದ ಘೋಷಣೆ ಮಾಡಿದ್ದಾರೆ. QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ಆಹಾರ ಗುಣಮಟ್ಟ, ಸೇವೆ ಅಥವಾ ಇತರ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ದೂರು ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ. ಆಹಾರ ಇಲಾಖೆ ನಡೆಸಿದ ಕಾರ್ಯಾಚರಣೆಗಳ ಕುರಿತು ಬೆಂಗಳೂರಿನಲ್ಲಿ (Bengaluru) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಸಾರ್ವಜನಿಕರ ದೂರುಗಳನ್ನು ತ್ವರಿತವಾಗಿ ಅಧಿಕಾರಿಗಳ ಗಮನಕ್ಕೆ ತರುವ ಉದ್ದೇಶದಿಂದ ಈ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದರು. ಕರ್ನಾಟಕದಲ್ಲಿ ಮೊದಲ ಬಾರಿಗೆ ಈ ರೀತಿಯ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಮುಂದಾಗಿದೆ ಎಂದು ಹೇಳಿದರು.

ಹೋಟೆಲ್‌ ಮಾತ್ರವಲ್ಲ, ಪಿಜಿ-ಬಸ್‌ ನಿಲ್ದಾಣದಲ್ಲೂ ತಪಾಸಣೆ

ಬೆಂಗಳೂರಿನ ಹೋಟೆಲ್‌ಗಳ ಮೇಲಿನ ದಾಳಿ ಮುಂದುವರಿಯಲಿದೆ. ಇದರ ಜೊತೆಗೆ ಖಾಸಗಿ ಹಾಸ್ಟೆಲ್‌, ಪಿಜಿ, ಬಸ್‌ ನಿಲ್ದಾಣ, ಮದುವೆ ಮನೆ, ರೈಲ್ವೆ ಕ್ಯಾಂಟೀನ್‌ ಹಾಗೂ ವಿಮಾನಗಳಲ್ಲಿ ನೀಡುವ ಆಹಾರವನ್ನೂ ಪರಿಶೀಲಿಸಲಾಗುವುದು ಎಂದು ಖಾದರ್ ಹೇಳಿದ್ದಾರೆ. ಪಿಜಿಗಳಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡುತ್ತಿರುವುದು ಪತ್ತೆಯಾದರೆ ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.

60ಕ್ಕೂ ಹೆಚ್ಚು ಸ್ಟಾರ್ ಹೋಟೆಲ್‌ಗಳ ಪರಿಶೀಲನೆ

ಬೆಂಗಳೂರು ನಗರ ವ್ಯಾಪ್ತಿಯಲ್ಲಿ 60ಕ್ಕೂ ಹೆಚ್ಚು 3-ಸ್ಟಾರ್ ಮತ್ತು 5-ಸ್ಟಾರ್ ಹೋಟೆಲ್‌ಗಳು, 8 ಗೋಡೌನ್‌ಗಳು ಹಾಗೂ 4 ಎಂಟರ್‌ಪ್ರೈಸ್‌ ರೆಸ್ಟೋರೆಂಟ್‌ಗಳ ಮೇಲೆ ಪರಿಶೀಲನೆ ನಡೆಸಲಾಗಿದೆ. ಆಹಾರ ಸುರಕ್ಷತಾ ಮತ್ತು ಆರೋಗ್ಯ ಸುರಕ್ಷತಾ ಅಧಿಕಾರಿಗಳ ನೇತೃತ್ವದಲ್ಲಿ 30 ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತಾ ನಿಯಮ ಪಾಲನೆ, ಆಹಾರ ಸಂಗ್ರಹಣೆ ಹಾಗೂ ಗುಣಮಟ್ಟವನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ.

ನೂರಾರು ಕೆಜಿ ಆಹಾರ ಪದಾರ್ಥ ವಶ

ತಪಾಸಣೆ ವೇಳೆ ಅವಧಿ ಮೀರಿದ, ತಪ್ಪು ಲೇಬಲ್ ಹೊಂದಿರುವ ಹಾಗೂ ಅಸಮರ್ಪಕವಾಗಿ ಸಂಗ್ರಹಿಸಿದ್ದ ಹಲವು ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ಬಗ್ಗೆಯೂ ಸಚಿವರು ಮಾಹಿತಿ ನೀಡಿದರು.

ದಾಳಿ ವೇಳೆ ಏನೇನು ವಶ? ಖಾದರ್ ಕೊಟ್ಟ ಮಾಹಿತಿ ಇಲ್ಲಿದೆ

  • ಮಟನ್/ಚಿಕನ್: 378 ಕೆಜಿ – ತಪ್ಪು ಲೇಬಲ್, ಎಕ್ಸ್‌ಪೈರಿ ದಿನಾಂಕ ಇಲ್ಲ
  • ಮಟನ್/ಚಿಕನ್: 51 ಕೆಜಿ – ಅವಧಿ ಮೀರಿದ
  • ಮೀನು: 203 ಕೆಜಿ – ಅತಿಯಾದ ಅವಧಿ ಮೀರಿದ
  • ಸಸ್ಯಾಹಾರಿ ಆಹಾರ: 200 ಕೆಜಿ – ಮಾಂಸಾಹಾರದೊಂದಿಗೆ ಸಂಗ್ರಹಣೆ
  • ತರಕಾರಿ: 76 ಕೆಜಿ – ಕೊಳೆತ/ಫಂಗಸ್
  • ಹಾಲು/ಮೊಸರು: 45 ಲೀಟರ್ – ಅವಧಿ ಮೀರಿದ
  • ಬೇಕರಿ ಉತ್ಪನ್ನ: 12 ಕೆಜಿ – ಅವಧಿ ಮೀರಿದ
  • ಧಾನ್ಯಗಳು ಮತ್ತು ಇತರೆ: 67 ಕೆಜಿ – ತಪ್ಪು ಲೇಬಲ್/ಅವಧಿ ಮೀರಿದ
  • ಬಳಸಿದ ಅಡುಗೆ ಎಣ್ಣೆ: 49 ಲೀಟರ್ – ನಿಯಮಬಾಹಿರ ಬಳಕೆ
  • ಹಾಲು, ಮೊಟ್ಟೆ ಮೇಯೊನೇಸ್‌ ಮಾದರಿ ಸಂಗ್ರಹ

ಹಾಲು ಕೂಡ ಕಳಪೆ!

ರಾಜ್ಯದಲ್ಲಿ 25 ಹಾಲು ಹಾಗೂ ಹಾಲಿನ ಉತ್ಪನ್ನಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಈ ಪೈಕಿ ಒಂದು ಮಾದರಿ Substandard ಎಂದು ವರದಿಯಾಗಿದೆ.

ಇದನ್ನೂ ಓದಿ: ಮಸಾಲೆ ಪದಾರ್ಥಗಳಲ್ಲೂ ಕಲಬೆರಕೆ: ಕರ್ನಾಟಕದ ಮನವಿ ಮೇರೆಗೆ EtO ಬಳಕೆಗೆ ಬ್ರೇಕ್ ಹಾಕಲು ಸಮಿತಿ ರಚಿಸಿದ ಕೇಂದ್ರ

ರಾಜ್ಯಾದ್ಯಂತ 124 ಶಾಲೆ ಮತ್ತು ಕಾಲೇಜುಗಳ ಆವರಣದಲ್ಲಿರುವ ಆಹಾರ ಘಟಕಗಳನ್ನೂ ಪರಿಶೀಲಿಸಲಾಗಿದ್ದು, 53 ಆಹಾರ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಇದರ ಜೊತೆಗೆ Egg Mayonnaiseನ 36 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜಿಯೋ ಹಾಟ್‌ಸ್ಟಾರ್‌ನಿಂದ ‘ಪ್ರೇಮಲು’ ಹಿಂದಿ ವರ್ಷನ್ ಡಿಲೀಟ್: ಕಾರಣ ಹೀಗಿದೆ – Kannada News | Premalu Hindi Version Removed From JioHotstar Ahead Of Hindi Remake Release

ಮಲಯಾಳಂ ಚಿತ್ರರಂಗದ ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ‘ಪ್ರೇಮಲು’ ಚಿತ್ರಕ್ಕೂ (Premalu Movie) ಜಾಗ ಇದೆ. ಹಾಸ್ಯ ಹಾಗೂ ಪ್ರೇಮಕಥೆ ಒಳಗೊಂಡಿದ್ದ ಈ ಸಿನಿಮಾ ಜಾಗತಿಕ ಮಟ್ಟದಲ್ಲಿ ಅಪಾರ ಜನಪ್ರಿಯತೆ ಗಳಿಸಿತ್ತು. ಈ ಚಿತ್ರವು ಪ್ರೇಕ್ಷಕರಿಂದ ಭಾರಿ ಮೆಚ್ಚುಗೆಯನ್ನು ಪಡೆದುಕೊಂಡಿತ್ತು. ಆದರೆ ಈಗ ಜಿಯೋಹಾಟ್‌ಸ್ಟಾರ್ ಒಟಿಟಿ ಪ್ಲಾಟ್‌ಫಾರ್ಮ್‌ನಿಂದ ‘ಪ್ರೇಮಲು’ ಚಿತ್ರದ ಹಿಂದಿ ಆವೃತ್ತಿಯನ್ನು ತೆಗೆದುಹಾಕಲಾಗಿದೆ. ಈ ಪ್ರಮುಖ ನಿರ್ಧಾರದ ಹಿಂದೆ ಒಂದು ಆಸಕ್ತಿಕರ ಹಾಗೂ ವಿಶೇಷವಾದ ಕಾರಣ ಅಡಗಿದೆ.

‘ಪ್ರೇಮಲು’ ಸಿನಿಮಾ ಹಿಂದಿಗೆ ರಿಮೇಕ್ ಆಗಿದೆ. ಈ ಚಿತ್ರ ರಿಲೀಸ್​ಗೆ ರೆಡಿ ಆಗುತ್ತಿದೆ. ಈ ಹೊಸ ಚಿತ್ರಕ್ಕೆ ‘ಪ್ರೇಮ್ ಕೀಟಾಣು’ ಎಂದು ಹೆಸರಿಡಲಾಗಿದೆ. ಈ ಸಿನಿಮಾದಲ್ಲಿ ವೀರ್ ಪಹಾರಿಯಾ ಹಾಗೂ ಆಫಿಯಾ ಸಯ್ಯದ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಅಪೂರ್ವ ಸಿಂಗ್ ಕರ್ಕಿ ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾ 2026 ರ ಅಕ್ಟೋಬರ್ 2 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಹಿಂದಿ ರಿಮೇಕ್ ಚಿತ್ರವು ಬಿಡುಗಡೆಗೆ ಸಜ್ಜಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಒರಿಜಿನಲ್ ‘ಪ್ರೇಮಲು’ ಚಿತ್ರದ ಹಿಂದಿ ಡಬ್ ಆವೃತ್ತಿಯು ಒಟಿಟಿಯಲ್ಲಿ ಲಭ್ಯವಿದ್ದರೆ ರಿಮೇಕ್ ಸಿನಿಮಾದ ಗಳಿಕೆಯ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ನಿರ್ಮಾಪಕರು ಮೂಲ ಚಿತ್ರದ ಹಿಂದಿ ಆವೃತ್ತಿಯನ್ನು ಜಿಯೋಹಾಟ್‌ಸ್ಟಾರ್‌ನಿಂದ ತೆಗೆದುಹಾಕಿದ್ದಾರೆ.

‘ಪ್ರೇಮ್ ಕೀಟಾಣು’ ಸಿನಿಮಾದ ಪ್ರಚಾರ ಕಾರ್ಯಗಳು ಇಂದು ಅಧಿಕೃತವಾಗಿ ಆರಂಭವಾಗಲಿವೆ. ಈ ಚಿತ್ರವನ್ನು ಆವನಿಕಾ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗೌರವ್ ವರ್ಮಾ ನಿರ್ಮಿಸುತ್ತಿದ್ದಾರೆ. ಫಾರ್ಸ್ ಫಿಲ್ಮ್ಸ್ ಹಾಗೂ ಭಾವನಾ ಸ್ಟುಡಿಯೋಸ್ ಸಂಸ್ಥೆಗಳು ಈ ಚಿತ್ರದ ನಿರ್ಮಾಣ ಮತ್ತು ಹಕ್ಕುಗಳ ಜವಾಬ್ದಾರಿಯನ್ನು ಹೊತ್ತುಕೊಂಡಿವೆ.

ಇದನ್ನೂ ಓದಿ: ‘ಪ್ರೇಮಲು’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಮಾಹಿತಿ ಕೊಟ್ಟ ನಿರ್ಮಾಪಕ ಫಹಾದ್ ಫಾಸಿಲ್

ದಕ್ಷಿಣ ಭಾರತದ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ಹಿಂದಿಗೆ ರಿಮೇಕ್ ಮಾಡಲಾಗುತ್ತಿದೆ. ಇದರ ಪೈಕಿ ಬಹುತೇಕವು ಹಿಟ್ ಆಗಿದೆ. ಈಗ ‘ಪ್ರೇಮಲು’ ಸಿನಿಮಾ ಗೆಲುವು ಕಾಣುತ್ತದೆಯೇ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ನಾನು ಸತ್ತಿಲ್ಲ ಬದುಕಿದ್ದೀನಿ!’: ಕೋಟಿ ಆಸ್ತಿಗಾಗಿ ಜೀವಂತ ವೃದ್ಧನ ಮರಣ ಪ್ರಮಾಣಪತ್ರ ಸೃಷ್ಟಿಸಿ ವಂಚನೆ! – Kannada News | Shocking Fraud in Raichur: Living Man Declared Dead with Fake Certificate, Crores worth Property Stolen in Manvi

ರಾಯಚೂರು, ಆಗಸ್ಟ್ 17: ಬದುಕಿರುವ ವ್ಯಕ್ತಿಯನ್ನೇ ಮೃತಪಟ್ಟಿದ್ದಾರೆಂದು ನಕಲಿ ಡೆತ್ ಸರ್ಟಿಫಿಕೇಟ್ ಸೃಷ್ಟಿಸಿ, ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ಕಬಳಿಸಿರುವ ಘಟನೆ ಮಾನ್ವಿಯಲ್ಲಿ ಬೆಳಕಿಗೆ ಬಂದಿದೆ. ಬಹ್ರೇನ್‌ನಲ್ಲಿ ಪೊಲೀಸ್ ಅಧಿಕಾರಿಯಾಗಿದ್ದ ಮೊಹಮದ್ ಶರ್ಫುದ್ದಿನ್ ಕಷ್ಟಪಟ್ಟು 6 ಮನೆ ಹಾಗೂ 2 ಅಂಗಡಿಗಳನ್ನು ಖರೀದಿಸಿದ್ದರು. ಹೆಂಡತಿ ರಸೂಲ್ ಬೀ ನಿಧನದ ಬಳಿಕ, ಕರೀಷ್ಮಾ ಎಂಬುವವರು ಶರ್ಫುದ್ದಿನ್ ಅವರ ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿಸಿ ಆಸ್ತಿ ಕಬಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

“ಸ್ವಾಮಿ ನಾನು ಸತ್ತಿಲ್ಲ, ಬದುಕಿದ್ದೇನೆ. ನನ್ನ ಆಸ್ತಿ ಮರಳಿಸಿಕೊಡಿ” ಎಂದು ವೃದ್ಧ ಶರ್ಫುದ್ದಿನ್ ಜಿಲ್ಲಾಧಿಕಾರಿ ಕಚೇರಿ ಹಾಗೂ ಪುರಸಭೆಗೆ ಅಲೆದಾಡುತ್ತಿದ್ದು, ಹೆಂಡತಿಯೂ ಇಲ್ಲದೆ, ಆಸ್ತಿಯೂ ಸಿಗದೆ ಭಿಕ್ಷುಕನಂತಾಗಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs SL: ಬೃಹತ್ ಮೊತ್ತ ಪೇರಿಸಿ ಟೀಮ್ ಇಂಡಿಯಾ ಆಲೌಟ್! – Kannada News | Sri Lanka vs India, 1st Test: Team India Allout For 462 Runs

ಗಾಲೆ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ತನ್ನ ಮೊದಲ ಇನಿಂಗ್ಸ್‌ನಲ್ಲಿ 462 ರನ್‌ಗಳಿಸಿ ಆಲೌಟ್ ಆಗಿದೆ. ಮಳೆಯ ಅಡ್ಡಿಯ ನಡುವೆಯೂ ಕನ್ನಡಿಗ ದೇವದತ್ ಪಡಿಕ್ಕಲ್ ಅವರ ಆಕರ್ಷಕ ಶತಕ ಹಾಗೂ ಕೆ.ಎಲ್. ರಾಹುಲ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ಪ್ರಥಮ ಇನಿಂಗ್ಸ್​ನಲ್ಲಿ ಬೃಹತ್ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಗಿದೆ.

ಪಡಿಕ್ಕಲ್ ಭರ್ಜರಿ ಸೆಂಚುರಿ:

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡದ ಪರ ಇನಿಂಗ್ಸ್​ ಆರಂಭಿಸಿದ ಯಶಸ್ವಿ ಜೈಸ್ವಾಲ್ (32) ಆರಂಭದಲ್ಲೇ ರನ್ ಔಟ್ ಆಗಿದ್ದರು. ಈ ವೇಳೆ ಕ್ರೀಸ್‌ಗಿಳಿದ ದೇವದತ್ ಪಡಿಕ್ಕಲ್ ಲಂಕಾ ಬೌಲರ್‌ಗಳನ್ನು ಧೈರ್ಯವಾಗಿ ಎದುರಿಸಿದರು. ಈ ಮೂಲಕ ಕೇವಲ 134 ಎಸೆತಗಳಲ್ಲಿ ಶತಕ ಪೂರೈಸಿದರು.

ಶತಕದ ಬಳಿಕ ಕೂಡ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ ದೇವದತ್ ಪಡಿಕ್ಕಲ್ 167 ರನ್ (230 ಎಸೆತಗಳು, 15 ಬೌಂಡರಿ, 1 ಸಿಕ್ಸರ್) ಬಾರಿಸಿ ವಿಕೆಟ್ ಒಪ್ಪಿಸಿದರು. ಅಷ್ಟರಲ್ಲಾಗಲೇ ಟೀಮ್ ಇಂಡಿಯಾ ಸ್ಕೋರ್ 350ರ ಗಡಿದಾಟಿತ್ತು.

ರಾಹುಲ್-ಜುರೆಲ್ ಸಾಥ್:

ಮತ್ತೊಂದೆಡೆ ಹಿರಿಯ ಬ್ಯಾಟರ್ ಕೆ.ಎಲ್. ರಾಹುಲ್ 82 ರನ್ ಗಳಿಸಿ ಪಡಿಕ್ಕಲ್ ಅವರಿಗೆ ಅದ್ಭುತ ಸಾಥ್ ನೀಡಿದರು. ಇನ್ನು ಕೆಳ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೆಲ್  51 ರನ್‌ಗಳ ಅರ್ಧಶತಕ ಬಾರಿಸಿದರು. ಮಾನವ್ ಸುತಾರ್ (24) ಅವರೊಂದಿಗೆ 55 ರನ್‌ಗಳ ಮಹತ್ವದ ಜೊತೆಯಾಟವಾಡಿದ ಜುರೆಲ್, ಭಾರತ 400ರ ಗಡಿ ದಾಟುವಂತೆ ನೋಡಿಕೊಂಡರು.

ಇನ್ನು ಮೂರನೇ ದಿನದ ಆರಂಭದಲ್ಲೇ ಅಸಿತಾ ಫೆರ್ನಾಂಡೋ ಎಸೆತದಲ್ಲಿ ಪ್ರಸಿದ್ಧ್ ಕೃಷ್ಣ ವಿಕೆಟ್ ಒಪ್ಪಿಸುವುದರೊಂದಿಗೆ ಭಾರತದ ಮೊದಲ ಇನಿಂಗ್ಸ್ 462 ರನ್‌ಗಳಿಗೆ ಕೊನೆಗೊಂಡಿತು. ಶ್ರೀಲಂಕಾ ಪರ ಎಡಗೈ ಸ್ಪಿನ್ನರ್ ಪ್ರಭಾತ್ ಜಯಸೂರ್ಯ 109 ರನ್ ನೀಡಿ 4 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು.

ಭಾರತ ಪ್ಲೇಯಿಂಗ್ XI: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ಶುಭ್​ಮನ್ ಗಿಲ್ (ನಾಯಕ), ರಿಷಭ್ ಪಂತ್, ಧ್ರುವ ಜುರೆಲ್, ರವೀಂದ್ರ ಜಡೇಜಾ, ಮಾನವ್ ಸುತಾರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.

ಇದನ್ನೂ ಓದಿ: 23 ಸೆಕೆಂಡ್ಸ್​​ನಲ್ಲಿ ಗೋಲು… ಹೊಸ ಇತಿಹಾಸ ಬರೆದ ರಿಕಾರ್ಡೊ!

ಶ್ರೀಲಂಕಾ ಪ್ಲೇಯಿಂಗ್ XI: ಲಹಿರು ಉದಾರ, ನಿಶಾನ್ ಮಧುಶಂಕ, ದಿನೇಶ್ ಚಂಡಿಮಲ್, ಕಮಿಂದು ಮೆಂಡಿಸ್, ಧನಂಜಯ ಡಿ ಸಿಲ್ವಾ (ನಾಯಕ), ಸೋನಾಲ್ ದಿನುಶಾ, ನಿರೋಶಾ ಡಿಕ್ವೆಲ್ಲಾ, ಕೇಶರ ನುವಂತ, ಪ್ರಭಾತ್ ಜಯಸೂರ್ಯ, ಲಹಿರು ಕುಮಾರ, ಅಸಿತ ಫೆರ್ನಾಂಡೊ.

Source link

TV9 Kannada News Live: ಇಂದು ಮೂರನೇ ದಿನದ ಮಳೆಗಾಲದ ಅಧಿವೇಶನ; ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ – Kannada News | TV9 Kannada Live Breaking News 17 August 2026 Karnataka Assembly Session Politics Cinema Hyperlocal Latest Updates Online

Breaking News Today Live Updates in Kannada: ರಾಜ್ಯ ವಿಧಾನಸಭೆ ಮತ್ತು ವಿಧಾನ ಪರಿಷತ್ ಮುಂಗಾರು ಅಧಿವೇಶನದ 3ನೇ ದಿನದ ಕಲಾಪ ಇಂದು ಬೆಳಗ್ಗೆ 11 ಗಂಟೆಗೆ ಆರಂಭಗೊಳ್ಳಲಿದೆ. ವಾಲ್ಮೀಕಿ ನಿಗಮದ ಹಗರಣದ ಹಿನ್ನೆಲೆಯಲ್ಲಿ ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಪಟ್ಟು ಹಿಡಿದಿರುವ ಬಿಜೆಪಿ-ಜೆಡಿಎಸ್ ವಿಪಕ್ಷಗಳು, ಸದನದ ಒಳಗೆ ಹಾಗೂ ಹೊರಗೆ ತೀವ್ರ ಪ್ರತಿಭಟನೆ ನಡೆಸಲು ಸಜ್ಜಾಗಿವೆ. ಇದರೊಂದಿಗೆ ಪಿಂಚಣಿ ಸ್ಥಗಿತ, ಬಿಡದಿ ಟೌನ್‌ಶಿಪ್ ಹಾಗೂ ಆರ್‌ಎಸ್‌ಎಸ್ ಕುರಿತ ಮಸೂದೆಗಳ ವಿರುದ್ಧವೂ ಕಲಾಪದಲ್ಲಿ ಭಾರಿ ಸಂಘರ್ಷ ಏರ್ಪಡುವ ಸಾಧ್ಯತೆಯಿದೆ. ಮತ್ತೊಂದೆಡೆ, ಪಶ್ಚಿಮ ಬಂಗಾಳದ ಬೀರ್‌ಭೂಮ್ ಜಿಲ್ಲೆಯ ತಾರಾಪೀಠದ ನಾಲ್ಕು ಅಂತಸ್ತಿನ ಖಾಸಗಿ ಹೋಟೆಲ್‌ನಲ್ಲಿ ಇಂದು ಮುಂಜಾನೆ 5 ಗಂಟೆಗೆ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ನಿದ್ರೆಯಲ್ಲಿದ್ದ ಕನಿಷ್ಠ ಏಳು ಮಂದಿ ಸಜೀವ ದಹನಗೊಂಡಿದ್ದಾರೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Tv9 Kannada Live TV ಇಲ್ಲಿ ವೀಕ್ಷಿಸಿ

Source link

23 ಸೆಕೆಂಡ್ಸ್​​ನಲ್ಲಿ ಗೋಲು… ಹೊಸ ಇತಿಹಾಸ ಬರೆದ ರಿಕಾರ್ಡೊ! – Kannada News | Calafiori’s Record Goal Fires Arsenal to 3 0 Shield Triumph

ಕೇವಲ 23 ಸೆಕೆಂಡುಗಳಲ್ಲಿ ದಾಖಲಾದ ಮಿಂಚಿನ ಗೋಲು ಮತ್ತು 3-0 ಅಂತರದ ಭರ್ಜರಿ ಜಯ! ಕಾರ್ಡಿಫ್‌ನ ಪ್ರಿನ್ಸಿಪಾಲಿಟಿ ಸ್ಟೇಡಿಯಂನಲ್ಲಿ ನಡೆದ ಹೈ-ವೋಲ್ಟೇಜ್ ಪಂದ್ಯದಲ್ಲಿ ಬಲಿಷ್ಠ ಮ್ಯಾಂಚೆಸ್ಟರ್ ಸಿಟಿ ತಂಡವನ್ನು ಧೂಳೀಪಟ ಮಾಡಿದ ಅರ್ಸೆನಲ್ ಪಡೆ, ಐತಿಹಾಸಿಕ ಜಯದೊಂದಿಗೆ ಕಮ್ಯುನಿಟಿ ಶೀಲ್ಡ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಈ ಪಂದ್ಯವು ಕೇವಲ ಅರ್ಸೆನಲ್‌ನ ಗೆಲುವಿಗೆ ಮಾತ್ರವಲ್ಲದೆ, ಇಂಗ್ಲೆಂಡ್ ಫುಟ್​ಬಾಲ್ ಇತಿಹಾಸದ ಸಾರ್ವಕಾಲಿಕ ದಾಖಲೆಯೊಂದಕ್ಕೆ ಸಾಕ್ಷಿಯಾಯಿತು.

23 ಸೆಕೆಂಡುಗಳ ಹೊಸ ಇತಿಹಾಸ!

ಪಂದ್ಯದ ಆರಂಭದ ವಿಸಿಲ್ ಮೊಳಗಿದ ಕೆಲವೇ ಕ್ಷಣಗಳಲ್ಲಿ, ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳು ಇನ್ನೂ ತಮ್ಮ ಆಸನಗಳಲ್ಲಿ ಸರಿಯಾಗಿ ಕುಳಿತುಕೊಳ್ಳುವ ಮುನ್ನವೇ ಅರ್ಸೆನಲ್ ಇತಿಹಾಸ ಬರೆಯಿತು. ತಂಡದ ಯುವ ಆಟಗಾರ ಮೈಲ್ಸ್ ಲೂಯಿಸ್-ಸ್ಕೆಲ್ಲಿ ನೀಡಿದ ಅತ್ಯದ್ಭುತ ರಿವರ್ಸ್ ಪಾಸ್ ಅನ್ನು ಬಳಸಿಕೊಂಡ ಇಟಲಿಯ ಸ್ಟಾರ್ ಡಿಫೆಂಡರ್ ರಿಕಾರ್ಡೊ ಕಲಾಫಿಯೋರಿ, ಮ್ಯಾಂಚೆಸ್ಟರ್ ಸಿಟಿಯ ರಕ್ಷಣಾ ಕೋಟೆಯನ್ನು ಭೇದಿಸಿ ಕೇವಲ 23 ಸೆಕೆಂಡುಗಳಲ್ಲಿ ಚೆಂಡನ್ನು ನೆಟ್‌ಗೆ ತಳ್ಳಿದರು.

ಈ ಮಿಂಚಿನ ಗೋಲಿನೊಂದಿಗೆ ಕಲಾಫಿಯೋರಿ, ಕಮ್ಯುನಿಟಿ ಶೀಲ್ಡ್ ಟೂರ್ನಮೆಂಟ್‌ನ 118 ವರ್ಷಗಳ ಇತಿಹಾಸದಲ್ಲೇ ‘ಅತ್ಯಂತ ವೇಗದ ಗೋಲು’ ಬಾರಿಸಿದ ಅಪರೂಪದ ಸಾರ್ವಕಾಲಿಕ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು. ಇದಕ್ಕೂ ಮುನ್ನ 1968 ರಲ್ಲಿ ಬಾಬಿ ಓವನ್ ಬಾರಿಸಿದ್ದ 35 ಸೆಕೆಂಡುಗಳ ಗೋಲಿನ ದಾಖಲೆ ಈಗ ಇತಿಹಾಸ ಪುಟ ಸೇರಿದೆ.

ಸಿಟಿಯನ್ನು ಕಟ್ಟಿಹಾಕಿದ ಗನ್ನರ್ಸ್!

ಮೊದಲ ಗೋಲಿನ ಆಘಾತದಿಂದ ಮ್ಯಾಂಚೆಸ್ಟರ್ ಸಿಟಿ ಚೇತರಿಸಿಕೊಳ್ಳುವ ಮುನ್ನವೇ ಅರ್ಸೆನಲ್ ತನ್ನ ಆಕ್ರಮಣವನ್ನು ತೀವ್ರಗೊಳಿಸಿತು. ಪಂದ್ಯದ 28ನೇ ನಿಮಿಷದಲ್ಲಿ ಅರ್ಸೆನಲ್ ಪರ ಪದಾರ್ಪಣೆ ಮಾಡಿದ ಕ್ರಿಸ್ಟೋಸ್ ಟ್ಜೋಲಿಸ್ ನೀಡಿದ ಆಕರ್ಷಕ ಕ್ರಾಸ್ ಅನ್ನು ಕೈ ಹ್ಯಾವರ್ಟ್ಜ್ ಹೆಡರ್ ಮೂಲಕ ಗೋಲಾಗಿ ಪರಿವರ್ತಿಸಿ ಮುನ್ನಡೆಯನ್ನು 2-0ಗೆ ಹೆಚ್ಚಿಸಿದರು.

ದ್ವಿತೀಯಾರ್ಧದ ಆರಂಭದಲ್ಲೂ ಅರ್ಸೆನಲ್ ಜಾದೂ ಮುಂದುವರಿಯಿತು. 48ನೇ ನಿಮಿಷದಲ್ಲಿ ಮತ್ತೊಮ್ಮೆ ಕ್ರಿಸ್ಟೋಸ್ ಟ್ಜೋಲಿಸ್ ನೀಡಿದ ಅಸಿಸ್ಟ್ ನೆರವಿನಿಂದ ನಾಯಕ ಮಾರ್ಟಿನ್ ಒಡೆಗಾರ್ಡ್ ಅದ್ಭುತ ಗೋಲು ಬಾರಿಸಿ ಅರ್ಸೆನಲ್‌ನ 3-0 ಭರ್ಜರಿ ಜಯವನ್ನು ಅಧಿಕೃತಗೊಳಿಸಿದರು.

ಮಾರೆಸ್ಕಾಗೆ ಆರಂಭಿಕ ಹಿನ್ನಡೆ!

ಮ್ಯಾಂಚೆಸ್ಟರ್ ಸಿಟಿ ತಂಡದ ನೂತನ ಮ್ಯಾನೇಜರ್ ಆಗಿ ಅಧಿಕಾರ ವಹಿಸಿಕೊಂಡ ಎಂಜೊ ಮಾರೆಸ್ಕಾ ಅವರಿಗೆ ಇದು ಮೊದಲ ಅಧಿಕೃತ ಪಂದ್ಯವಾಗಿದ್ದು, ಅರ್ಸೆನಲ್ ನೀಡಿದ ಈ ಆಘಾತಕಾರಿ ಸೋಲು ಅವರ ಮುಂದಿನ ಹಾದಿಗೆ ದೊಡ್ಡ ಎಚ್ಚರಿಕೆಯ ಗಂಟೆಯಾಗಿದೆ. ಇತ್ತ ಪ್ರೀಮಿಯರ್ ಲೀಗ್ ಚಾಂಪಿಯನ್ಸ್ ಆದ ಅರ್ಸೆನಲ್, ಈ ಭರ್ಜರಿ ಜಯದೊಂದಿಗೆ ಮತ್ತೊಮ್ಮೆ ಲೀಗ್ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡ ತಾನೇ ಎಂಬುದನ್ನು ಜಗತ್ತಿಗೆ ಸಾರಿದೆ.

ಏನಿದು ಕಮ್ಯುನಿಟಿ ಶೀಲ್ಡ್ ಪಂದ್ಯ?

ಕಮ್ಯುನಿಟಿ ಶೀಲ್ಡ್ ಎಂಬುದು ಇಂಗ್ಲೆಂಡ್‌ನಲ್ಲಿ ಪ್ರತಿ ವರ್ಷ ಇಂಗ್ಲಿಷ್ ಪ್ರೀಮಿಯರ್ ಲೀಗ್ (EPL) ಸೀಸನ್ ಆರಂಭವಾಗುವ ಮುಂಚಿತವಾಗಿ ನಡೆಯುವ ಅಧಿಕೃತ ಮತ್ತು ಅತ್ಯಂತ ಸಾಂಪ್ರದಾಯಿಕ ಸೂಪರ್ ಕಪ್ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಹಿಂದಿನ ಸೀಸನ್‌ನ ಇಂಗ್ಲಿಷ್ ಪ್ರೀಮಿಯರ್ ಲೀಗ್ ಚಾಂಪಿಯನ್ಸ್ ಮತ್ತು ಇಂಗ್ಲೆಂಡ್‌ನ ಪ್ರಮುಖ ನಾಕೌಟ್ ಟೂರ್ನಿ ಆದ FA ಕಪ್ ವಿಜೇತರು ಮುಖಾಮುಖಿಯಾಗುತ್ತಾರೆ. ಒಂದು ವೇಳೆ ಒಂದೇ ಕ್ಲಬ್ ಪ್ರೀಮಿಯರ್ ಲೀಗ್ ಮತ್ತು FA ಕಪ್ ಎರಡನ್ನೂ ಗೆದ್ದರೆ, ಆಗ ಆ ತಂಡವು ಪ್ರೀಮಿಯರ್ ಲೀಗ್‌ನಲ್ಲಿ ರನ್ನರ್ಸ್-ಅಪ್ (2ನೇ ಸ್ಥಾನ) ಪಡೆದ ತಂಡದ ವಿರುದ್ಧ ಈ ಪಂದ್ಯವನ್ನು ಆಡುತ್ತದೆ.

ಇದನ್ನೂ ಓದಿ: ಸಾಮಾನ್ಯ ಬುದ್ಧಿ ಇಲ್ವಾ? ಪಂತ್ ವಿರುದ್ಧ ಮಾಜಿ ಕ್ರಿಕೆಟಿಗನ ಆಕ್ರೋಶ

ಈ ಟೂರ್ನಮೆಂಟ್‌ನಲ್ಲಿ ವಿಜೇತರಾದ ತಂಡಕ್ಕೆ ಸಾಂಪ್ರದಾಯಿಕ ಕಪ್ ಅಥವಾ ಟ್ರೋಫಿ ನೀಡುವ ಬದಲಾಗಿ, ಅತ್ಯಂತ ಆಕರ್ಷಕವಾದ ದೊಡ್ಡ ಬೆಳ್ಳಿಯ ಶೀಲ್ಡ್​ ಅನ್ನು ಪ್ರಶಸ್ತಿಯಾಗಿ ಹಸ್ತಾಂತರಿಸಲಾಗುತ್ತದೆ. ಇದೇ ಕಾರಣಕ್ಕಾಗಿ ಈ ಪ್ರತಿಷ್ಠಿತ ಪಂದ್ಯಾವಳಿಯನ್ನು ‘ಕಮ್ಯುನಿಟಿ ಶೀಲ್ಡ್ ಪ್ರಶಸ್ತಿ’ ಎಂದು ಕರೆಯಲಾಗುತ್ತದೆ.

Published On – 9:52 am, Mon, 17 August 26

Source link

ಬಿಹಾರದ ಅಶೋಕ ಧಾಮ ದೇಗುಲದಲ್ಲಿ ಭೀಕರ ಕಾಲ್ತುಳಿತ: 7 ಭಕ್ತರು ಸಾವು, 12ಕ್ಕೂ ಹೆಚ್ಚು ಮಂದಿಗೆ ಗಾಯ – Kannada News | Lakhisarai Ashok Dham Temple Stampede: 7 Devotees Killed, Over a Dozen Injured

ಬಿಹಾರದ ಅಶೋಕ ಧಾಮ ದೇಗುಲದಲ್ಲಿ ಭೀಕರ ಕಾಲ್ತುಳಿತImage Credit source: TV9 Network

ಪಾಟ್ನಾ, ಆಗಸ್ಟ್ 7: ಬಿಹಾರದ (Bihar) ಲಖಿಸರಾಯ್ ಜಿಲ್ಲೆಯ ಅಶೋಕ ಧಾಮ ದೇವಾಲಯದಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ (Ashok Dham Temple Stampede) ಕನಿಷ್ಠ 7 ಭಕ್ತರು ಮೃತಪಟ್ಟಿದ್ದು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಶ್ರಾವಣ ಮಾಸದ ಮೂರನೇ ಸೋಮವಾರದ ಹಿನ್ನೆಲೆ ಶಿವನಿಗೆ ಜಲಾಭಿಷೇಕ ನೆರವೇರಿಸಲು ಸುಮಾರು 50 ಸಾವಿರಕ್ಕೂ ಅಧಿಕ ಭಕ್ತರು ದೇವಾಲಯಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಘಟನೆ ಸಂಭವಿಸಿದೆ. ಬೆಳಗ್ಗೆ 6.30ರಿಂದ 6.45ರ ಸುಮಾರಿಗೆ ಸಮೀಪದ ರೈಲು ನಿಲ್ದಾಣಕ್ಕೆ ಎರಡು ರೈಲುಗಳು ಬಂದ ಬಳಿಕ ಭಕ್ತರ ಸಂಖ್ಯೆ ಏಕಾಏಕಿ ಹೆಚ್ಚಾಯಿತು. ಜನದಟ್ಟಣೆ ಹೆಚ್ಚಾದ ಪರಿಣಾಮ ಬ್ಯಾರಿಕೇಡ್‌ನ ಒಂದು ಭಾಗ ಮುರಿದು, ಭಕ್ತರು ಪರಸ್ಪರರ ಮೇಲೆ ಬಿದ್ದಿದ್ದರಿಂದ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಲಖಿಸರಾಯ್ ಜಿಲ್ಲಾಧಿಕಾರಿ ಶೈಲೇಂದ್ರ ಕುಮಾರ್ ತಿಳಿಸಿದ್ದಾರೆ.

ಇದೇ ವೇಳೆ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವಿದ್ಯುತ್ ಕಂಬವೊಂದು ಬಿದ್ದಿದ್ದು, ಅದರಲ್ಲಿ ವಿದ್ಯುತ್ ಹರಿಯುತ್ತಿದೆ ಎಂಬ ವದಂತಿಯೂ ಹರಡಿದೆ. ಇದು ಆತಂಕ ಸೃಷ್ಟಿಯಾಗಿ ಭಕ್ತರು ದಿಕ್ಕಾಪಾಲಾಗಿ ಓಡಲು ಆರಂಭಿಸಿದ್ದು, ಹಲವರು ಕೆಳಗೆ ಬಿದ್ದು ಕಾಲ್ತುಳಿತ ಸಂಭವಿಸಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಆದರೆ ಘಟನೆಗೆ ನಿಖರ ಕಾರಣ ಇನ್ನಷ್ಟೇ ದೃಢಪಡಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.

ಗಾಯಾಳುಗಳ ಪೈಕಿ ಕೆಲವರ ಸ್ಥಿತಿ ಗಂಭೀರ

ಘಟನೆಯಲ್ಲಿ ಗಾಯಗೊಂಡವರನ್ನು ಲಖಿಸರಾಯ್ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡವರಲ್ಲಿ ಬಹುತೇಕರು ಮಹಿಳೆಯರು ಎಂದು ವರದಿಯಾಗಿದೆ. ಘಟನೆ ಬಳಿಕ ಪೊಲೀಸರು, ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳ: ತಾರಾಪೀಠದ ಖಾಸಗಿ ಹೋಟೆಲ್‌ನಲ್ಲಿ ಭೀಕರ ಅಗ್ನಿ ಅವಘಡ, 7 ಮಂದಿ ಸಾವು, ಹಲವರಿಗೆ ಗಂಭೀರ ಗಾಯ

2019ರಲ್ಲೂ ಸಂಭವಿಸಿತ್ತು ಕಾಲ್ತುಳಿತ

ಅಶೋಕ ಧಾಮ ದೇವಾಲಯವನ್ನು ಶ್ರೀ ಇಂದ್ರದಮ್ನೇಶ್ವರ ಮಹಾದೇವ ದೇವಾಲಯ ಎಂದೂ ಕರೆಯಲಾಗುತ್ತದೆ. ಶ್ರಾವಣ ಮಾಸದಲ್ಲಿ, ಅದರಲ್ಲೂ ಸೋಮವಾರದಂದು ಇಲ್ಲಿ ಭಕ್ತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತದೆ. ಇದೇ ದೇವಾಲಯದಲ್ಲಿ 2019ರಲ್ಲೂ ಅತಿಯಾದ ಜನದಟ್ಟಣೆಯಿಂದ ಕಾಲ್ತುಳಿತ ಸಂಭವಿಸಿ ಓರ್ವ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

200 ಕೋಟಿ ರೂ. ಕಡಿಮೆಯಾದ್ರೇ ಏನೂ ಫರಕ್ ಆಗಲ್ಲ; ‘ಧುರಂಧರ್ 2’ ಕ್ಲ್ಯಾಶ್ ಬಗ್ಗೆ ಯಶ್ ಮಾತು – Kannada News | Yash Speaks On Toxic vs Dhurandhar 2 Box Office Clash And Postponement

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ವಿಚಾರವಾಗಿ ಚಿತ್ರರಂಗದಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ. ‘ಧುರಂಧರ್ 2’ ಸಿನಿಮಾ ಜೊತೆಗಿನ ಬಾಕ್ಸ್ ಆಫೀಸ್ ಮುಖಾಮುಖಿ ತಪ್ಪಿಸಿದ ಬಗ್ಗೆ ಯಶ್ ಮಾತನಾಡಿದ್ದಾರೆ. ತಮಗೆ 200 ಕೋಟಿ ರೂಪಾಯಿ ಕಳೆದುಕೊಳ್ಳುವ ಭಯವಿಲ್ಲ ಎಂದು ಹೇಳಿದ್ದಾರೆ. ‘ಆಪ್ ಕಿ ಅದಾಲತ್’ ಶೋನಲ್ಲಿ ತಮ್ಮ ಆತ್ಮಗೌರವ ಹಾಗೂ ನಿರ್ಧಾರಗಳ ಬಗ್ಗೆ ಯಶ್ ಮನಬಿಚ್ಚಿ ಮಾತನಾಡಿದ್ದಾರೆ.

‘ಟಾಕ್ಸಿಕ್’ ಸಿನಿಮಾ ಮೊದಲು ಮಾರ್ಚ್ 19 ರಂದು ಬಿಡುಗಡೆಯಾಗಬೇಕಿತ್ತು. ಆದರೆ ಅದೇ ದಿನ ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಬಿಡುಗಡೆಯಾಗುವ ಸನ್ನಿವೇಶವಿತ್ತು. ನಂತರ ಟಾಕ್ಸಿಕ್ ಸಿನಿಮಾವನ್ನು ಜೂನ್ 4 ಕ್ಕೆ ಮುಂದೂಡಲಾಯಿತು. ಮಧ್ಯಪ್ರಾಚ್ಯದಲ್ಲಿ ಉಂಟಾಗಿದ್ದ ಅನಿಶ್ಚಿತತೆಯೇ ಇದಕ್ಕೆ ಕಾರಣ ಎಂದು ನಿರ್ಮಾಪಕರು ತಿಳಿಸಿದ್ದರು.

ಯಶ್ ಅವರು ಬಾಕ್ಸ್ ಆಫೀಸ್ ಮುಖಾಮುಖಿ ಬಗ್ಗೆ ಮಾತನಾಡಿದ್ದಾರೆ. ತಾವು ಎಂದಿಗೂ ಬೇಕೆಂದೇ ಬೇರೆ ಸಿನಿಮಾಗಳ ಜೊತೆ ಸ್ಪರ್ಧೆಗೆ ಇಳಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ಸಿನಿಮಾ ಬಿಡುಗಡೆ ದಿನಾಂಕ ಮೊದಲು ಘೋಷಣೆಯಾಗಿರುತ್ತದೆ. ಆ ನಂತರ ಬೇರೆಯವರು ಅದೇ ದಿನಾಂಕಕ್ಕೆ ಬಂದರೆ ಅದು ಕ್ಲ್ಯಾಶ್ ಆಗುತ್ತದೆ ಎಂದು ಹೇಳಿದ್ದಾರೆ.

ಮಾರ್ಚ್ 19ರ ಬಿಡುಗಡೆ ದಿನಾಂಕದ ಬಗ್ಗೆ ತಮಗೆ ಗೊಂದಲವಿತ್ತು ಎಂದು ಯಶ್ ಒಪ್ಪಿಕೊಂಡಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ಹಣ ಕಳೆದುಕೊಳ್ಳುವ ಭಯ ತಮಗೆ ಖಂಡಿತ ಇಲ್ಲ ಎಂದು ಹೇಳಿದ್ದಾರೆ. ಜೀವನದಲ್ಲಿ ಕಳೆದುಕೊಳ್ಳಲು ತಮ್ಮ ಬಳಿ ಏನೂ ಇಲ್ಲ. ಹಾಗಾಗಿ ತಮಗೆ ಯಾವುದೇ ರೀತಿಯ ಭಯವಿಲ್ಲ ಎಂದು ಖಡಕ್ಕಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಕನ್ನಡ್ ಅಲ್ಲ ಕನ್ನಡ ರಜತ್ ಶರ್ಮಾಗೆ ವೇದಿಕೆಯಲ್ಲೇ ಪ್ರೀತಿಯಿಂದ ತಿದ್ದಿ ಹೇಳಿದ ನಟ ಯಶ್

100 ಕೋಟಿ ಅಥವಾ 200 ಕೋಟಿ ರೂಪಾಯಿ ಕಡಿಮೆಯಾದರೆ ತಮಗೆ ತೊಂದರೆಯಾಗುತ್ತದೆ ಎಂದು ಜನರು ಭಾವಿಸುತ್ತಾರೆ. ಆದರೆ ತಾವು ಆರಂಭದಲ್ಲಿ ಏನನ್ನೂ ಹೊಂದಿರಲಿಲ್ಲ. ಈಗ ಸಿಕ್ಕಿರುವುದೆಲ್ಲವೂ ತಮಗೆ ಪ್ಲಸ್ ಎಂದು ಯಶ್ ಹೇಳಿದ್ದಾರೆ. ಇದು ಕೇವಲ ಹಣದ ವಿಚಾರವಲ್ಲ. ಇದು ತಮ್ಮ ಆತ್ಮಗೌರವದ ವಿಚಾರ ಎಂದು ರಾಕಿಂಗ್ ಸ್ಟಾರ್ ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪಶ್ಚಿಮ ಬಂಗಾಳ: ತಾರಾಪೀಠದ ಖಾಸಗಿ ಹೋಟೆಲ್‌ನಲ್ಲಿ ಭೀಕರ ಅಗ್ನಿ ಅವಘಡ, 7 ಮಂದಿ ಸಾವು, ಹಲವರಿಗೆ ಗಂಭೀರ ಗಾಯ – Kannada News | Tarapith Hotel Fire: 7 Killed, Several Critically Injured in West Bengal Blaze

ಪಶ್ಚಿಮ ಬಂಗಾಳದ ತಾರಾಪೀಠ ಹೋಟೆಲ್‌ನಲ್ಲಿ ಭೀಕರ ಅವಘಡImage Credit source: Tv9 Bangla

ಕೋಲ್ಕತ್ತ, ಆಗಸ್ಟ್ 17: ಪಶ್ಚಿಮ ಬಂಗಾಳದ (West Bengal) ಬೀರ್​ಭೂಮ್ ಜಿಲ್ಲೆಯ ತಾರಾಪೀಠದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಸೋಮವಾರ ಮುಂಜಾನೆ ಖಾಸಗಿ ಹೋಟೆಲ್‌ನಲ್ಲಿ ಹೊತ್ತಿಕೊಂಡ ಬೆಂಕಿಗೆ ಕನಿಷ್ಠ ಏಳು ಮಂದಿ ಬಲಿಯಾಗಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಾರಾಪೀಠ ಪೊಲೀಸ್ ಠಾಣೆಯಿಂದ ಕೆಲವೇ ದೂರದಲ್ಲಿರುವ ನಾಲ್ಕು ಅಂತಸ್ತಿನ ಹೋಟೆಲ್ ಬಿದೇಶಿನಿಯ ನೆಲಮಹಡಿಯಲ್ಲಿ ಬೆಳಗ್ಗೆ ಸುಮಾರು 5 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹೊತ್ತಿಕೊಂಡ ವೇಳೆ ಬಹುತೇಕ ಅತಿಥಿಗಳು ಗಾಢ ನಿದ್ದೆಯಲ್ಲಿದ್ದರು.

ಕೆಲವೇ ಕ್ಷಣಗಳಲ್ಲಿ ಬೆಂಕಿ ಹೋಟೆಲ್‌ನ ಇತರ ಭಾಗಗಳಿಗೂ ವ್ಯಾಪಿಸಿದ್ದು, ದಟ್ಟ ಹೊಗೆ ಆವರಿಸಿಕೊಂಡಿದೆ. ಇದರಿಂದ ಒಳಗಿದ್ದ ಅತಿಥಿಗಳು ಹೊರಬರಲು ಪರದಾಡುವಂತಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ದಟ್ಟ ಹೊಗೆಯಿಂದ ಅತಿಥಿಗಳು ಪರದಾಟ

ಬೆಂಕಿ ಕಾಣಿಸಿಕೊಂಡ ಬಳಿಕ ಹೋಟೆಲ್‌ನೊಳಗೆ ದಟ್ಟ ಹೊಗೆ ತುಂಬಿಕೊಂಡಿದ್ದರಿಂದ ಉಸಿರಾಟಕ್ಕೂ ತೊಂದರೆ ಉಂಟಾಗಿದೆ. ರಕ್ಷಣಾ ಸಿಬ್ಬಂದಿ ಗಾಯಾಳುಗಳನ್ನು ಹೊರತೆಗೆದು ರಾಂಪುರಹಾಟ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಹೋಟೆಲ್ ಆಡಳಿತದ ಪ್ರಾಥಮಿಕ ಮಾಹಿತಿಯಂತೆ, ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ. ಆದರೆ ಬೆಂಕಿಗೆ ನಿಖರ ಕಾರಣವನ್ನು ಅಧಿಕಾರಿಗಳು ಇನ್ನಷ್ಟೇ ಪತ್ತೆಹಚ್ಚಬೇಕಿದೆ.

ಹೋಟೆಲ್​ನಲ್ಲಿದ್ದವರು ಹೇಳಿದ್ದೇನು?

ಅಗ್ನಿ ಅವಘಡದಿಂದ ಪಾರಾದ ಅತಿಥಿಯೊಬ್ಬರು, ಹಠಾತ್ತನೆ ಇಡೀ ಹೋಟೆಲ್ ಹೊಗೆಯಿಂದ ತುಂಬಿಕೊಂಡಿತ್ತು. ಉಸಿರಾಡಲು ಸಾಧ್ಯವಾಗದೆ, ತಕ್ಷಣ ಹೊರಹೋಗುವ ದಾರಿ ಸಿಗದೆ ಪರದಾಡಬೇಕಾಯಿತು ಎಂದು ತಿಳಿಸಿದ್ದಾರೆ.

ಭಕ್ತರಿಂದ ತುಂಬಿದ್ದ ತಾರಾಪೀಠ

ಅಗ್ನಿ ಅವಘಡ ಸಂಭವಿಸಿದ ದಿನ ಶ್ರಾವಣ ಮಾಸದ ಸೋಮವಾರವಾಗಿದ್ದರಿಂದ ತಾರಾಪೀಠದಲ್ಲಿ ಭಕ್ತರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿತ್ತು. ದೇವಾಲಯ ಪಟ್ಟಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದ ಹಿನ್ನೆಲೆಯಲ್ಲಿ ಹೋಟೆಲ್‌ಗಳಲ್ಲೂ ಹೆಚ್ಚಿನ ಜನಸಂದಣಿ ಇತ್ತು.

ಇದನ್ನೂ ಓದಿ: ವಾರಣಾಸಿ ಏರ್​ಪೋರ್ಟ್​ನಲ್ಲಿ ಭದ್ರತಾ ತಪಾಸಣೆ ವೇಳೆ ಆಕಸ್ಮಿಕವಾಗಿ ಫೈರ್ ಆದ ಬಂದೂಕು; ಇಬ್ಬರು ಸಿಬ್ಬಂದಿಗೆ ಗಾಯ

ಸ್ಥಳಕ್ಕೆ ಸ್ಥಳೀಯರು ಹಾಗೂ ಸ್ವಯಂಸೇವಕರು ಕೂಡ ಧಾವಿಸಿ ರಕ್ಷಣಾ ಕಾರ್ಯಕ್ಕೆ ನೆರವಾಗಿದ್ದಾರೆ. ಮಳೆಯ ಕಾರಣ ಮುಂಜಾನೆ ಬಹುತೇಕ ಹೋಟೆಲ್ ಅತಿಥಿಗಳು ನಿದ್ದೆಯಲ್ಲಿದ್ದರಿಂದ ಆರಂಭದಲ್ಲಿ ಒಳಗೆ ಏನಾಗುತ್ತಿದೆ ಎಂಬುದು ತಿಳಿಯಲಿಲ್ಲ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version