ಬೆಂಗಳೂರಿಗೆ ಹೊಸ ಪಾರ್ಕಿಂಗ್ ನೀತಿ: ಖಾಲಿ ನಿವೇಶನದಲ್ಲಿ ಪಾರ್ಕಿಂಗ್ ಕೊಟ್ಟರೆ 35 ವರ್ಷ ಟ್ಯಾಕ್ಸ್ ಫ್ರೀ – Kannada News | Bengaluru New Parking Policy: Vacant Landowners May Get Tax Relief for Creating Public Parking Spaces, Here is How

ಬೆಂಗಳೂರು, ಜುಲೈ 03): ಖಾಲಿ ನಿವೇಶನದಲ್ಲಿ ಪಾರ್ಕಿಂಗ್  (Parking ) ಕೊಟ್ಟರೆ 35 ವರ್ಷ ಟ್ಯಾಕ್ಸ್ ಫ್ರೀ ಎಂದು ರಾಜ್ಯ ಸರ್ಕಾರವೇನೋ ಬಂಪರ್ ಆಫರ್ ಘೋಷಿಸಿದೆ. ಆದರೆ ಬೆಂಗಳೂರಿನ ಆಸ್ತಿ ಮಾಲೀಕರು ಮಾತ್ರ ಸರ್ಕಾರದ ಈ ಪ್ಲಾನ್‌ಗೆ ಕೆಂಡಾಮಂಡಲವಾಗಿದ್ದಾರೆ. ‘ನಮ್ಮ ಸೈಟು ನಮಗೆ ಮುಖ್ಯವೇ ಹೊರತು, ನಿಮ್ಮ ಟ್ಯಾಕ್ಸ್ ಫ್ರೀ ಆಫರ್ ಅಲ್ಲ ಅಂತ ಜಿಬಿಎ ಮತ್ತು ಸಂಚಾರ ಪೊಲೀಸರ ಹೊಸ ಪಾರ್ಕಿಂಗ್ ನೀತಿಯ ವಿರುದ್ಧ ತಿರುಗಿಬಿದ್ದಿದ್ದಾರೆ. ಇದರೊಂದಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ಸಂಚಾರ ಪೊಲೀಸರು ಜಂಟಿಯಾಗಿ ರೂಪಿಸುತ್ತಿರುವ ಪಾರ್ಕಿಂಗ್ ನೀತಿ-2026 ಕರಡು (Bengaluru’s New Parking Policy) ಪ್ರಕಟವಾಗುವ ಮುನ್ನವೇ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಖಾಲಿ ನಿವೇಶನಗಳಲ್ಲಿ ಮಲ್ಟಿ-ಸ್ಟೋರಿ ಅಥವಾ ಆಟೋಮೇಟೆಡ್ ಪಾರ್ಕಿಂಗ್ ನಿರ್ಮಿಸಿದರೆ 15 ರಿಂದ 35 ವರ್ಷಗಳವರೆಗೆ ಆಸ್ತಿ ತೆರಿಗೆ ವಿನಾಯಿತಿ ನೀಡುವುದಾಗಿ ಸರ್ಕಾರ ಹೇಳಿದೆ. ಆದರೆ ಈ ಆಫರ್ ಹಿಂದೆ ದೊಡ್ಡ ಜಾಲ ಅಡಗಿದೆ ಎಂಬುದು ಆಸ್ತಿ ಮಾಲೀಕರ ಗಂಭೀರ ಆರೋಪ ಮಾಡಿದ್ದಾರೆ.

ಪಾರ್ಕಿಂಗ್‌ಗೆ ಜಾಗ ಕೊಟ್ಟರೆ ನಿವೇಶನದ ಕಥೆ ಏನು?

ದಶಕಗಳ ಕಾಲ ಸಾರ್ವಜನಿಕರು ಬಂದು ಪಾರ್ಕಿಂಗ್ ಮಾಡಿದರೆ, ಆ ಜಾಗದ ಮೇಲಿನ ಹಕ್ಕು ಮಾಲೀಕರಿಗೆ ತಪ್ಪಿಹೋಗುವ ಆತಂಕ ಎದುರಾಗಿದೆ.35 ವರ್ಷಗಳ ಕಾಲ ಸಾರ್ವಜನಿಕ ಪಾರ್ಕಿಂಗ್‌ಗೆ ಜಾಗ ಕೊಟ್ಟರೆ ಮುಂದೆ ನಮ್ಮ ನಿವೇಶನದ ಕಥೆ ಏನು? ಇದು ಜಾಗ ಕಬಳಿಸುವ ತಂತ್ರನಾ? ಆಸ್ತಿ ಮಾಲೀಕರು GBA ವಿರುದ್ಧ ಅಕ್ರೊಶವನ್ನು ವ್ಯಕ್ತ ಪಡಿಸಿದ್ದಾರೆ.ಸರ್ಕಾರಕ್ಕೆ ಬೆಂಗಳೂರಿನಲ್ಲಿ ಪಾರ್ಕಿಂಗ್ ಸಮಸ್ಯೆ ಬಗೆಹರಿಸಲು ಯೋಗ್ಯತೆ ಇಲ್ಲದೆ, ಈಗ ನಮ್ಮ ಖಾಲಿ ಸೈಟುಗಳ ಮೇಲೆ ಕಣ್ಣು ಹಾಕಿದೆ. 35 ವರ್ಷ ಟ್ಯಾಕ್ಸ್ ಫ್ರೀ ಕೊಡ್ತೀವಿ ಅಂತಾರೆ. 35 ವರ್ಷ ಅಂದರೆ ಒಂದು ತಲೆಮಾರೇ ಕಳೆದುಹೋಗುತ್ತದೆ. ಅಲ್ಲಿಯವರೆಗೆ ನಮ್ಮ ಸ್ವಂತ ಜಾಗವನ್ನು ನಾವು ಬಳಸುವಂತಿಲ್ಲ. ಇದು ಪಾರ್ಕಿಂಗ್ ನೀತಿಯಲ್ಲ, ಖಾಸಗಿ ಜಾಗಗಳನ್ನು ಪರೋಕ್ಷವಾಗಿ ವಶಪಡಿಸಿಕೊಳ್ಳುವ ತಂತ್ರ. ನಾವು ಇದಕ್ಕೆ ಯಾವುದೇ ಕಾರಣಕ್ಕೂ ಒಪ್ಪಲ್ಲ ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ದಿನದಿಂದ ದಿನಕ್ಕೆ ಕಾರು, ಬೈಕ್​​ಗಳ ಸಂಖ್ಯೆ ಹೆಚ್ಚಳ: ಟ್ರಾಫಿಕ್ ತಜ್ಞರು ಹೇಳುವುದೇನು?

ಟ್ಯಾಕ್ಸ್ ಫ್ರೀ ಮಾಡ್ತೀವಿ ಅಂದರೆ ನಮಗೇ ಲಾಭ

ಇನ್ನು ಕೆಲವು ಜನರು ವರ್ಷ ದೊಡ್ಡ ಮೊತ್ತದ ಟ್ಯಾಕ್ಸ್ ಕಟ್ಟುತ್ತಿದ್ದೆ. ಅಲ್ಲಿ ಯಾರು ಬೇಕಾದರೂ ಬಂದು ಗಾಡಿ ನಿಲ್ಲಿಸಿ ಹೋಗ್ತಿದ್ದರು, ನಮಗೆ ನಯಾಪೈಸೆ ಸಿಗುತ್ತಿರಲಿಲ್ಲ. ಈಗ ಸರ್ಕಾರವೇ ಅಧಿಕೃತವಾಗಿ ಪಾರ್ಕಿಂಗ್ ಮಾಡಲು ಅವಕಾಶ ಕೊಟ್ಟು, 25-35 ವರ್ಷ ಟ್ಯಾಕ್ಸ್ ಫ್ರೀ ಮಾಡ್ತೀವಿ ಅಂದರೆ ನಮಗೇ ಲಾಭ. ನಾವೇ ಸ್ವತಃ ಹೂಡಿಕೆ ಮಾಡಿ ಅಥವಾ ಪಿಪಿಪಿ ಮಾಡೆಲ್‌ನಲ್ಲಿ ಪಾರ್ಕಿಂಗ್ ಬಿಲ್ಡಿಂಗ್ ಕಟ್ಟಿದರೆ, ಮುಂದಿನ ತಲೆಮಾರಿಗೆ ಒಂದು ಕಾಯಂ ಆದಾಯದ ಮೂಲ ಸಿಕ್ಕಂತಾಗುತ್ತದೆ ಎಂದು ಹೇಳುತ್ತಿದ್ದಾರೆ.

ಇಷ್ಟು ದಿನ ಖಾಲಿ ಬಿದ್ದಿದ್ದ ಸೈಟ್‌ಗಳಿಂದ ಮಾಲೀಕರಿಗೆ ಯಾವುದೇ ಆದಾಯವಿರಲಿಲ್ಲ, ಮೇಲಾಗಿ ಟ್ಯಾಕ್ಸ್ ಕಟ್ಟಬೇಕಿತ್ತು. ಆದರೆ ಈ ಯೋಜನೆ ಜಾರಿಗೆ ಬಂದರೆ, ಸೈಟ್ ಮಾಲೀಕರಿಗೆ ದಶಕಗಳ ಕಾಲ ತೆರಿಗೆ ವಿನಾಯಿತಿ ಸಿಗುವುದಲ್ಲದೆ, ಪಾರ್ಕಿಂಗ್ ಶುಲ್ಕದ ಮೂಲಕವೂ ಆದಾಯ ಗಳಿಸುವ ಅವಕಾಶ ನೀಡಿದೆ.

ವರದಿ: ಅರುಣ್ ಕುಮಾರ್ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಟ್ರಾಫಿಕ್ ಫೈನ್ ಕಟ್ತೀವಿ ಅಂದ್ರೂ ಕಟ್ಟಿಸಿಕೊಳ್ಳದ ಮಷಿನ್: ಶೇ 50 ರಿಯಾಯಿತಿ ಎಡವಟ್ಟಿಗೆ ವಾಹನ ಮಾಲೀಕರು ಕಂಗಾಲ್ – Kannada News | Traffic Fine 50 perscent Discount: Technical Glitches Frustrate Drivers, Police Face Complaints

ಧಾರವಾಡ, ಜುಲೈ 03: ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಶೇ. 50 ರಷ್ಟು ರಿಯಾಯಿತಿ ನೀಡಿ (Traffic Fine Discount), ದಂಡವನ್ನು ತುಂಬಿಸಿಕೊಳ್ಳಲಾಗುತ್ತಿದೆ. ವಾಹನ ಸವಾರರು ಕೂಡ ತಮ್ಮ ಹಿಂದಿನ ಎಲ್ಲಾ ದಂಡವನ್ನು ಪಾವತಿಸುತ್ತಿದ್ದಾರೆ. ಆದರೆ ಕೆಲವು ತಾಂತ್ರಿಕ ಅಡಚಣೆಗಳು ಉಂಟಾಗಿದೆ. ಇದರಿಂದಾಗಿ ವಾಹನ ಚಾಲಕರು ಹಾಗೂ ಸಂಚಾರ ಪೊಲೀಸರಿಗೆ ತಲೆ ನೋವಾಗಿದೆ.

ಜುಲೈ 10 ರವರೆಗೆ ಶೇ. 50 ರಷ್ಟು ರಿಯಾಯಿತಿಗೆ ಅವಕಾಶ

ಕಳೆದ ತಿಂಗಳು ಜೂನ್ 21 ರಿಂದ ಜುಲೈ 10 ರವರೆಗೆ ರಾಜ್ಯದಲ್ಲಿ ಸಂಚಾರ ಉಲ್ಲಂಘನೆಗಳ ಪ್ರಕರಣಕ್ಕೆ ಸಂಬಂಧಿಸಿದ ದಂಡವನ್ನು ಶೇ. 50 ರಷ್ಟು ಕಡಿತಗೊಳಿಸಿ ತುಂಬಲು ಅವಕಾಶ ಕಲ್ಪಿಸಲಾಗಿದೆ. ಈ ಮುಂಚೆ ಕೂಡ ಹಲವಾರು ಬಾರಿ ಈ ರೀತಿ ಅವಕಾಶವನ್ನು ನೀಡಲಾಗಿತ್ತು. ಇದರಿಂದಾಗಿ ಶೇ. 50 ರಷ್ಟು ದಂಡದ ಉಳಿತಾಯ ಸಾರ್ವಜನಿಕರಿಗೆ ಆಗಿತ್ತು. ಬಹುತೇಕರು ತಮ್ಮ ಹಿಂದಿನ ಎಲ್ಲಾ ದಂಡವನ್ನು ತುಂಬಿದ್ದರು. ಈ ಬಾರಿಯೂ ವಾಹನ ಮಾಲಿಕರು ದಂಡ ತುಂಬಲು ಮುಂದೆ ಬರುತ್ತಿದ್ದಾರೆ.

ಇದನ್ನೂ ಓದಿ: ಟ್ರಾಫಿಕ್ ಫೈನ್ ಶೇ 50 ರಿಯಾಯಿತಿ: ಕೇವಲ 4 ದಿನದಲ್ಲಿ 6 ಕೋಟಿ ರೂ. ಸಂಗ್ರಹ!

ಇನ್ನು ಒಂದು ಬಾರಿ ಟ್ರಾಫಿಕ್ ಪೊಲೀಸರ ದಾಖಲೆಗಳಲ್ಲಿ ದಂಡ ನಮೂದಾದರೆ ಮತ್ತೆ ಅದನ್ನು ತೆಗೆಯಲು ಸಾಧ್ಯವೇ ಇಲ್ಲ. ಇಂದಲ್ಲ, ನಾಳೆ ಪಾವತಿಸಲೇಬೇಕು. ಇದೇ ಕಾರಣಕ್ಕೆ ಸರಕಾರ ನೀಡಿದ ಈ ಅವಕಾಶವನ್ನು ಬಹುತೇಕ ವಾಹನ ಸವಾರರು ಬಳಸಿಕೊಳ್ಳುತ್ತಿದ್ದಾರೆ. ಆದರೆ ಇದೀಗ ತಾಂತ್ರಿಕ ಕಾರಣದಿಂದಾಗಿ ವಾಹನ ಮಾಲಿಕರು ಹಾಗೂ ಪೊಲೀಸರು ತೊಂದರೆಗೆ ಸಿಲುಕಿದ್ದಾರೆ. ಈ ಮುಂಚೆ ದಾಖಲಾಗಿರುವ ಪ್ರಕರಣದ ಪೈಕಿ ಕೆಲವು ಪ್ರಕರಣಗಳಿಗೆ ಶೇ. 50 ರಿಯಾಯತಿ ಅಂತಾ ತೋರಿಸುತ್ತಿದ್ದರೆ, ಅದೇ ವಾಹನದ ಮತ್ತೆ ಕೆಲವು ಪ್ರಕರಣಗಳಿಗೆ ಯಾವುದೇ ರಿಯಾಯಿತಿ ತೋರಿಸುತ್ತಿಲ್ಲ. ಇದರಿಂದಾಗಿ ಏನು ಮಾಡಬೇಕೆನ್ನೋದು ತಿಳಿಯದೇ ವಾಹನ ಮಾಲಿಕರು ಕಂಗಾಲಾಗಿದ್ದಾರೆ.

ಸಂಕಷ್ಟಕ್ಕೆ ಸಿಲುಕಿದ ಪೊಲೀಸರು 

ಉದಾಹರಣೆಗೆ ಹೇಳೋದಾದರೂ ಒಂದು ವಾಹನದ ಮೇಲೆ ಒಟ್ಟು ಎಂಟು ಪ್ರಕರಣಗಳಿವೆ. ಅವುಗಳ ಪೈಕಿ ನಾಲ್ಕು ಟ್ರಾಫಿಕ್ ಸಿಗ್ನಲ್ ಜಂಪ್ ಆಗಿರೋದಾಗಿದ್ದರೆ, ಇನ್ನುಳಿದ ನಾಲ್ಕು ಪ್ರಕರಣಗಳು ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿದ್ದು. ವಾಹನದ ನಂಬರ್ ಎಂಟ್ರಿ ಮಾಡಿದರೆ ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿರುವ ನಾಲ್ಕು ಪ್ರಕರಣಕ್ಕೆ ಸಂಬಂಧಿಸಿದಂತೆ ಶೇ. 50 ರಷ್ಟು ರಿಯಾಯಿತಿ ತೋರಿಸುತ್ತಿದೆ. ಆದರೆ ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿದ ನಾಲ್ಕು ಪ್ರಕರಣಗಳಿಗೆ ಶೇ. 50 ರ ರಿಯಾಯಿತಿಯನ್ನು ತೋರಿಸುತ್ತಿಲ್ಲ. ಇದರಿಂದಾಗಿ ವಾಹನ ಮಾಲಿಕ ಹಾಗೂ ಪೊಲೀಸರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇದನ್ನೂ ಓದಿ: ಟ್ರಾಫಿಕ್ ಫೈನ್ ರಿಯಾಯಿತಿ: ಬೆಂಗಳೂರಿನಲ್ಲಿ 12 ವಿಶೇಷ ಕೌಂಟರ್ ತೆರೆಯಲಿದೆ ಆರ್​ಟಿಒ! ಎಲ್ಲೆಲ್ಲಿ ಎಂಬ ಮಾಹಿತಿ ಇಲ್ಲಿದೆ

ವಾಹನ ಮಾಲಿಕರಿಂದ ಎಷ್ಟು ದಂಡವನ್ನು ತುಂಬಿಸಿಕೊಳ್ಳಬೇಕು ಅನ್ನೋ ಗೊಂದಲದಲ್ಲಿ ಪೊಲೀಸರಿದ್ದರೆ, ಸರಕಾರ ಘೋಷಿಸಿದ ಶೇ. 50 ರಷ್ಟು ರಿಯಾಯಿತಿ ಇಲ್ಲದೇ ನಾವೇಕೆ ದಂಡವನ್ನು ಕಟ್ಟಬೇಕು ಅಂತಾ ಜನರು ಪ್ರಶ್ನಿಸುತ್ತಿದ್ದಾರೆ. ಇದರೊಂದಿಗೆ ಮತ್ತೊಂದು ಸಮಸ್ಯೆ ಎಂದರೆ, ಮೇ ತಿಂಗಳಲ್ಲೇ ಶೇ. 50 ರಷ್ಟು ರಿಯಾಯಿತಿ ನೀಡುವ ಬಗ್ಗೆ ಸರಕಾರ ನಿರ್ಧಾರ ಮಾಡಿತ್ತು. ಹೀಗಾಗಿ ಮೇ ತಿಂಗಳ ಬಳಿಕ ದಾಖಲಾದ ಕೇಸ್​ಗಳಿಗೆ ಸಂಬಂಧಿಸಿದಂತೆ ಶೇ. 50 ರಿಯಾಯಿತಿ ತೋರಿಸುತ್ತಿಲ್ಲ. ಇದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ಮತ್ತಷ್ಟು ದಿನಗಳ ಕಾಲ ಗಡುವು ವಿಸ್ತರಣೆಗೆ ಆಗ್ರಹ

ಅವಳಿ ನಗರದಲ್ಲಿ ಈ ಬಾರಿ ಜನರು ಆದಷ್ಟು ಬೇಗನೇ ತಮ್ಮ ವಾಹನದ ದಂಡವನ್ನು ಕಟ್ಟಿ, ದಂಡ ಮುಕ್ತರಾಗಲು ಬಯಸುತ್ತಿದ್ದಾರೆ. ಆದರೆ ಕಳೆದ ವಾರದವರೆಗೆ ಇಂಟರ್ ನೆಟ್ ಸಮಸ್ಯೆಯಿಂದಾಗಿ ದಂಡ ತುಂಬಿಸಿಕೊಳ್ಳಲು ಕಷ್ಟಪಡುತ್ತಿದ್ದ ಪೊಲೀಸರು ಇದೀಗ ಮತ್ತೊಂದು ತಾಂತ್ರಿಕ ಸಮಸ್ಯೆಯಿಂದ ಪರದಾಡುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟವರು ಈ ತಾಂತ್ರಿಕ ತೊಂದರೆಯನ್ನು ನಿವಾರಿಸುವುದರ ಜೊತೆಗೆ ಸರಕಾರ ಜುಲೈ 10ರ ಗಡುವು ಮತ್ತಷ್ಟು ದಿನಗಳ ಕಾಲ ವಿಸ್ತರಿಸಲಿ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಜುಲೈ 6ರಿಂದ 3 ದೇಶಗಳಿಗೆ ಮೋದಿ ಪ್ರವಾಸ; 4 ದಶಕದ ಬಳಿಕ ನ್ಯೂಜಿಲೆಂಡ್​ಗೆ ಭಾರತದ ಪ್ರಧಾನಿ ಭೇಟಿ – Kannada News | PM Narendra Modi on 6 day tour to Indonesia, Australia, New Zealand from July 6

ನವದೆಹಲಿ, ಜುಲೈ 3: ಏಷ್ಯಾ-ಪೆಸಿಫಿಕ್ ವಲಯದಲ್ಲಿ ರಾಜತಾಂತ್ರಿಕ ಬಾಂಧವ್ಯವನ್ನು ಬಲಪಡಿಸಲು ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಜುಲೈ 6ರಿಂದ ಜುಲೈ 11ರವರೆಗೆ ಇಂಡೋನೇಷ್ಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ದೇಶಗಳ 6 ದಿನಗಳ ಅಧಿಕೃತ ಪ್ರವಾಸ ಕೈಗೊಳ್ಳಲಿದ್ದಾರೆ. ಕಳೆದ 40 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ನ್ಯೂಜಿಲೆಂಡ್‌ಗೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಈ ಪ್ರವಾಸವು ಉಭಯ ದೇಶಗಳ ಮುಕ್ತ ವ್ಯಾಪಾರ ಒಪ್ಪಂದದ (FTA) ನಂತರ ನಡೆಯುತ್ತಿದೆ.

ರಕ್ಷಣೆ, ಮುಕ್ತ ವ್ಯಾಪಾರ, ಜಾಗತಿಕ ಭದ್ರತೆ, ತಂತ್ರಜ್ಞಾನ ಮತ್ತು ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡುವುದು ಈ ಪ್ರವಾಸದ ಪ್ರಮುಖ ಉದ್ದೇಶಗಳಾಗಿವೆ.

ಇಂಡೋನೇಷ್ಯಾ ಭೇಟಿ:

ಪ್ರಧಾನಿ ಮೋದಿ ಅವರ ಪ್ರವಾಸವು ಜುಲೈ 6 ರಂದು ಇಂಡೋನೇಷ್ಯಾದಿಂದ ಆರಂಭವಾಗಲಿದೆ. ಜಕಾರ್ತದಲ್ಲಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರೊಂದಿಗೆ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಇಂಡೋನೇಷ್ಯಾದ ಅಧ್ಯಕ್ಷ ಪ್ರಬೋವೊ ಅವರು 2025ರ ಭಾರತದ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಪ್ರಧಾನಿ ಮೋದಿ ಯೋಗ್ಯಕರ್ತಾ ನಗರದಲ್ಲಿರುವ ಯುನೆಸ್ಕೋ ಪಾರಂಪರಿಕ ತಾಣವಾದ ಪ್ರಸಿದ್ಧ ‘ಪರಂಬನನ್ ಶಿವ ದೇವಾಲಯ’ ಸಂಕೀರ್ಣಕ್ಕೆ ಭೇಟಿ ನೀಡಲಿದ್ದಾರೆ. ಈ ಐತಿಹಾಸಿಕ ದೇವಾಲಯದ ಸಂರಕ್ಷಣೆಯಲ್ಲಿ ಭಾರತ ಮತ್ತು ಇಂಡೋನೇಷ್ಯಾ ಜಂಟಿಯಾಗಿ ಕಾರ್ಯನಿರ್ವಹಿಸಲಿವೆ.

ಇದನ್ನೂ ಓದಿ: ಭಾರತಕ್ಕೆ ಜಪಾನ್ ಪ್ರಧಾನಿ ಭೇಟಿ: ರಾಷ್ಟ್ರಪತಿ ಭವನದಲ್ಲಿ ಮೋದಿ-ತಕೈಚಿ ಅವರಿಂದ ಸಚಿವರು, ಗಣ್ಯರ ಪರಸ್ಪರ ಪರಿಚಯ

ಆಸ್ಟ್ರೇಲಿಯಾ ಭೇಟಿ:

ಜುಲೈ 8ರಂದು ಮೆಲ್ಬೋರ್ನ್‌ಗೆ ತಲುಪಲಿರುವ ಮೋದಿ, ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗೆ 3ನೇ ಭಾರತ-ಆಸ್ಟ್ರೇಲಿಯಾ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಕ್ವಾಡ್ ಒಕ್ಕೂಟದ ಸದಸ್ಯ ರಾಷ್ಟ್ರಗಳಾಗಿರುವ ಭಾರತ ಮತ್ತು ಆಸ್ಟ್ರೇಲಿಯಾಗಳು ಸೈಬರ್ ಭದ್ರತೆ, ನಿರ್ಣಾಯಕ ಖನಿಜಗಳು ಮತ್ತು ಹಿಂದೂ ಮಹಾಸಾಗರ ವಲಯದ ರಕ್ಷಣಾ ಸಹಕಾರದ ಕುರಿತು ಚರ್ಚಿಸಲಿವೆ. ಮೆಲ್ಬೋರ್ನ್ ಕ್ರಿಕೆಟ್ ಮೈದಾನಕ್ಕೆ (MCG) ಭೇಟಿ ನೀಡಲಿರುವ ಪ್ರಧಾನಿ, ಅಲ್ಲಿನ ಪ್ರಮುಖ ಉದ್ಯಮಿಗಳನ್ನು ಭೇಟಿ ಮಾಡಲಿದ್ದಾರೆ.

ನ್ಯೂಜಿಲೆಂಡ್ ಭೇಟಿ:

ಪ್ರವಾಸದ ಕೊನೆಯ ಹಂತವಾಗಿ ಪ್ರಧಾನಿ ಮೋದಿ ನ್ಯೂಜಿಲೆಂಡ್‌ಗೆ ತೆರಳಲಿದ್ದಾರೆ. ಪ್ರಧಾನಿ ಮೋದಿ ಅವರು ಜುಲೈ 10-11ರಂದು ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಅವರ ಆಹ್ವಾನದ ಮೇರೆಗೆ ಆಕ್ಲೆಂಡ್‌ಗೆ ಭೇಟಿ ನೀಡಲಿದ್ದಾರೆ. 4 ದಶಕಗಳಲ್ಲಿ ಭಾರತೀಯ ಪ್ರಧಾನಿಯೊಬ್ಬರು ನ್ಯೂಜಿಲೆಂಡ್‌ಗೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ಕಳೆದ ಏಪ್ರಿಲ್‌ನಲ್ಲಿ ಉಭಯ ದೇಶಗಳ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಈ ಭೇಟಿಯು ವ್ಯಾಪಾರ, ಪ್ರವಾಸೋದ್ಯಮ, ಶಿಕ್ಷಣ ಮತ್ತು ಕ್ರೀಡಾ ವಲಯದಲ್ಲಿ ಹೊಸ ಮೈಲಿಗಲ್ಲಾಗಲಿದೆ.

ಇದನ್ನೂ ಓದಿ: ನಾಳೆ ಭಾರತಕ್ಕೆ ಜಪಾನ್ ಪ್ರಧಾನಿ ಟಕೈಚಿ ಭೇಟಿ; ಮೋದಿ ಜೊತೆ ಮಹತ್ವದ ಮಾತುಕತೆ

ಭಾರತೀಯರೊಂದಿಗೆ ಸಂವಾದ:

ಮೂರೂ ದೇಶಗಳಲ್ಲಿ ಬೃಹತ್ ಸಂಖ್ಯೆಯಲ್ಲಿರುವ ಭಾರತೀಯ ಸಮುದಾಯದವರನ್ನು ಪ್ರಧಾನಿ ಮೋದಿ ಭೇಟಿಯಾಗಲಿದ್ದಾರೆ. ಇಂಡೋನೇಷ್ಯಾದಲ್ಲಿ ಸುಮಾರು 1.4 ಲಕ್ಷ ಭಾರತೀಯರಿದ್ದಾರೆ. ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ಅಂದರೆ ಸರಿಸುಮಾರು 9.7 ಲಕ್ಷ ಭಾರತೀಯರಿದ್ದಾರೆ. ನ್ಯೂಜಿಲೆಂಡ್‌ನಲ್ಲಿ ಸುಮಾರು 3 ಲಕ್ಷ ಭಾರತೀಯ ಮೂಲದ ಜನರಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಆಪರೇಷನ್ ರಾಮ ಮಂದಿರ್’; ಬಿಜೆಪಿ ವಿರುದ್ಧ ಉದ್ಧವ್ ಠಾಕ್ರೆ ಗಂಭೀರ ಆರೋಪ – Kannada News | Operation Ram Mandir Uddhav Thackeray alleges Ram Temple donations used to buy Opposition MLAs and MPs

ಮುಂಬೈ, ಜುಲೈ 3: ಅಯೋಧ್ಯೆಯ ರಾಮ ಮಂದಿರಕ್ಕೆ ಬಂದ ದೇಣಿಗೆಯನ್ನು ಆರ್‌ಎಸ್‌ಎಸ್ (RSS) ಮತ್ತು ಬಿಜೆಪಿ ಲೂಟಿ ಮಾಡಿವೆ ಎಂದು ಉದ್ಧವ್ ಠಾಕ್ರೆ (Uddhav Thackeray) ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ಈ ಹಣವನ್ನು ವಿರೋಧ ಪಕ್ಷದ ಸಂಸದರು ಮತ್ತು ಶಾಸಕರನ್ನು ಖರೀದಿಸಿ, ಪಕ್ಷಾಂತರ ಮಾಡಿಸಲು ಬಳಸಲಾಗಿದೆ ಎಂದು ಅವರು ದೂರಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕಾಗಿ ಸಾವಿರಾರು ಭಕ್ತರು ಹಣ, ಚಿನ್ನ ಮತ್ತು ಬೆಳ್ಳಿಯ ಇಟ್ಟಿಗೆಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಆದರೆ ಮಂದಿರದ ಉಸ್ತುವಾರಿಗಾಗಿ ರಚಿಸಲಾದ ಟ್ರಸ್ಟ್‌ನವರು ಕೋಟ್ಯಂತರ ರೂಪಾಯಿಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

“ಶಾಸಕರು ಮತ್ತು ಸಂಸದರನ್ನು ಮಾರುಕಟ್ಟೆಯಲ್ಲಿ ಪ್ರಾಣಿಗಳಂತೆ ಮಾರಾಟ ಮಾಡಲಾಗುತ್ತಿದೆ ಮತ್ತು ಖರೀದಿಸಲಾಗುತ್ತಿದೆ. ರಾಮ ಮಂದಿರದಲ್ಲಿ ಸಂಗ್ರಹವಾದ ದೇಣಿಗೆಯನ್ನು ರಾಮ ಮಂದಿರ ಟ್ರಸ್ಟ್‌ನ ಜನರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ನಡೆಸಲು ಬಳಸಲಾಗುತ್ತಿದೆ. ಮಂದಿರದ ದೇಣಿಗೆ ಹಣವನ್ನು ಲೂಟಿ ಮಾಡುವ ಮೂಲಕ ಬಿಜೆಪಿ ರಾಮ ಮಂದಿರದಲ್ಲೇ ಒಂದು ಕಾರ್ಯಾಚರಣೆ ನಡೆಸಿದೆ” ಎಂದು ಉದ್ಧವ್ ಠಾಕ್ರೆ ಆರೋಪಿಸಿದ್ದಾರೆ.

ಇದನ್ನೂ ಓದಿ: ಶೀಘ್ರದಲ್ಲೇ ಮತ್ತೊಮ್ಮೆ ಆಪರೇಷನ್ ಟೈಗರ್?; ಠಾಕ್ರೆ ಬಣದ 14 ಶಾಸಕರು ಬಂಡಾಯಕ್ಕೆ ಸಿದ್ಧವೆಂದ ಏಕನಾಥ್ ಶಿಂಧೆ

ಉದ್ಧವ್ ಠಾಕ್ರೆ ಅವರ ಶಿವಸೇನಾ (UBT) ಪಕ್ಷದ 9 ಲೋಕಸಭಾ ಸಂಸದರ ಪೈಕಿ 6 ಮಂದಿ ಇತ್ತೀಚೆಗಷ್ಟೇ ಏಕನಾಥ್ ಶಿಂಧೆ ಬಣಕ್ಕೆ ಜಿಗಿದ ಬೆನ್ನಲ್ಲೇ ಈ ರಾಜಕೀಯ ಆರೋಪ ಹೊರಬಿದ್ದಿದೆ. ರಾಮ ಮಂದಿರದ ದೇಣಿಗೆ ಲೂಟಿ ಖಂಡಿಸಿ ಜುಲೈ 5ರ ಭಾನುವಾರದಿಂದ ಮುಂಬೈನ ದಾದರ್‌ನಲ್ಲಿ ರಾಜ್ಯವ್ಯಾಪಿ ‘ರಾಮರಕ್ಷಾ ಆಂದೋಲನ’ ಹಮ್ಮಿಕೊಳ್ಳುವುದಾಗಿ ಉದ್ಧವ್ ಠಾಕ್ರೆ ಘೋಷಿಸಿದ್ದಾರೆ. ಪಕ್ಷಗಳನ್ನು ಒಡೆಯಲು ರಾಮ ಮಂದಿರದ ಹಣ ಬಳಕೆ ಮಾಡಲಾಗುತ್ತಿದೆಯೇ? ಎಂಬ ಪ್ರಶ್ನೆಯನ್ನು ಅವರು ಎತ್ತಿದ್ದಾರೆ.

ಮುಂಬೈನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಉದ್ಧವ್ ಠಾಕ್ರೆ, ಬಿಜೆಪಿಯ “ಆಪರೇಷನ್ ಕಮಲ” ರಣತಂತ್ರವನ್ನು ಲೇವಡಿ ಮಾಡಿದರು. “ವಿರೋಧ ಪಕ್ಷಗಳ ಶಾಸಕರು ಮತ್ತು ಸಂಸದರನ್ನು ಒಡೆದು ತಮ್ಮತ್ತ ಸೆಳೆಯಲು ಬಿಜೆಪಿ ಈಗ ‘ಆಪರೇಷನ್ ರಾಮ ಮಂದಿರ್’ ನಡೆಸುತ್ತಿದೆಯೇ? ರಾಮ ಮಂದಿರದ ದೇಣಿಗೆಯಿಂದ ಕದ್ದ ಹಣವನ್ನು ರಾಜಕೀಯ ಪಕ್ಷಗಳನ್ನು ಒಡೆಯಲು ಬಳಸಲಾಗುತ್ತಿದೆ ಎಂದು ಕೆಲವು ಜನರು ಹೇಳುತ್ತಿದ್ದಾರೆ. ಇದಕ್ಕೆ ಸಾಕಷ್ಟು ಪುರಾವೆಗಳೂ ಇವೆ” ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ; ಒಂದೇ ವಿಮಾನದಲ್ಲಿ ಪ್ರಯಾಣಿಸಿದ ಫಡ್ನವಿಸ್ – ಉದ್ಧವ್ ಠಾಕ್ರೆ

ಹಿಂದೂಗಳು ಯಾರನ್ನೂ ಕ್ಷಮಿಸುವುದಿಲ್ಲ:

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹಳೆಯ ಹೇಳಿಕೆಯಾದ “ಇನ್ನು ಮುಂದೆ ಹಿಂದೂಗಳು ಯಾವುದೇ ದೌರ್ಜನ್ಯಕ್ಕೆ ಬಲಿಯಾಗುವುದಿಲ್ಲ” ಎಂದು ಉಲ್ಲೇಖಿಸಿದ ಉದ್ಧವ್ ಠಾಕ್ರೆ, “ಇಂದು ನಾನು ಹೇಳುತ್ತಿದ್ದೇನೆ— ಹಿಂದೂಗಳು ಇನ್ನು ಮುಂದೆ ಮಂದಿರಗಳನ್ನು ಲೂಟಿ ಮಾಡುವವರನ್ನು ಕ್ಷಮಿಸುವುದಿಲ್ಲ” ಎಂದು ಆಕ್ರೋಶ ಹೊರಹಾಕಿದ್ದಾರೆ. ರಾಮ ಮಂದಿರ ಚಳವಳಿಯಲ್ಲಿ ಶಿವಸೈನಿಕರು ರಕ್ತ ಹರಿಸಿದ್ದಾರೆ, ಆದರೆ ಬಿಜೆಪಿ ಮಾತ್ರ ಇದನ್ನು ಕೇವಲ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದಿದ್ದಾರೆ.

ಉದ್ಧವ್ ಬಣಕ್ಕೆ ಭಾರಿ ಆಘಾತ ನೀಡಿದ ಸಂಸದರ ವಲಸೆ:

ಉದ್ಧವ್ ಠಾಕ್ರೆ ಅವರ ಈ ತೀಕ್ಷ್ಣ ಪ್ರತಿಕ್ರಿಯೆಗೆ ಮುಖ್ಯ ಕಾರಣ ಮಹಾರಾಷ್ಟ್ರ ರಾಜಕೀಯದಲ್ಲಿ ಇತ್ತೀಚೆಗೆ ನಡೆದ ಹಠಾತ್ ಬೆಳವಣಿಗೆಗಳು. ಶಿವಸೇನಾ (UBT) ಪಕ್ಷದ ಒಟ್ಟು 9 ಲೋಕಸಭಾ ಸಂಸದರಲ್ಲಿ 6 ಮಂದಿ ಒಟ್ಟಾಗಿ ಬಂಡಾಯವೆದ್ದು, ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಬಣ ಸೇರಿಕೊಂಡಿದ್ದಾರೆ. 3ನೇ 2ರಷ್ಟು ಸಂಸದರು ಒಟ್ಟಿಗೆ ವಲಸೆ ಹೋಗಿರುವುದರಿಂದ ಅವರು ಪಕ್ಷಾಂತರ ನಿಷೇಧ ಕಾಯ್ದೆಯಿಂದ ಪಾರಾಗಿದ್ದಾರೆ. ಇದರ ಬೆನ್ನಲ್ಲೇ ಆದಿತ್ಯ ಠಾಕ್ರೆ ಅವರ ಆಪ್ತ ಸಚಿನ್ ಅಹೀರ್ ಕೂಡ ಶಿಂಧೆ ಬಣ ಸೇರಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಮಿರ್ ಖಾನ್ ಮದುವೆಗೂ ಮುನ್ನ ಕ್ಷಮೆಯಾಚಿಸಿದ ಸಹೋದರ ಫೈಸಲ್ ಖಾನ್: ಹಳೆಯ ವಿವಾದಕ್ಕೆ ತೆರೆ – Kannada News | Aamir Khan Brother Faissal Khan Apologizes to Family before Gauri Spratt wedding

ಬಾಲಿವುಡ್ ಸ್ಟಾರ್ ನಟ ಆಮಿರ್ ಖಾನ್ (Aamir Khan) ಮತ್ತು ಅವರ ಕುಟುಂಬದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ಈ ಹಿಂದೆ ಸುದ್ದಿಯಾಗಿದ್ದ ಅವರ ಸಹೋದರ, ಮಾಜಿ ನಟ ಫೈಸಲ್ ಖಾನ್ ಈಗ ಮತ್ತೆ ತಮ್ಮ ಕುಟುಂಬದ ಬಗ್ಗೆ ಮಾತನಾಡಿದ್ದಾರೆ. ಗೌರಿ ಸ್ಪ್ರ್ಯಾಟ್ (Gauri Spratt) ಜೊತೆ ಆಮಿರ್ ಖಾನ್ ಅವರ ವಿವಾಹ ನಿಶ್ಚಯವಾಗಿರುವ ಬೆನ್ನಲ್ಲೇ, ಫೈಸಲ್ ಖಾನ್ (Faissal Khan) ಅವರು ತಮ್ಮ ಇಡೀ ಕುಟುಂಬದ ಬಳಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ಅಲ್ಲದೆ, ತಮ್ಮ ಮಾನಸಿಕ ಆರೋಗ್ಯದ ಕುರಿತು ಆಸ್ಪತ್ರೆಯಿಂದ ತಮಗೆ ಕ್ಲೀನ್ ಚಿಟ್ ಸಿಕ್ಕಿದೆ ಎಂದೂ ಅವರು ಬಹಿರಂಗಪಡಿಸಿದ್ದಾರೆ.

ಕುಟುಂಬದ ಬಳಿ ಬಹಿರಂಗ ಕ್ಷಮೆಯಾಚನೆ:

‘ನಾನು ಮೊದಲನೆಯದಾಗಿ ನನ್ನ ತಾಯಿಯ ಬಳಿ ಕ್ಷಮೆ ಕೇಳಲು ಬಯಸುತ್ತೇನೆ. ಕುಟುಂಬದ ವೈಯಕ್ತಿಕ ವಿಷಯಗಳನ್ನು ಸಾರ್ವಜನಿಕವಾಗಿ ಚರ್ಚಿಸಿ ನಾನು ದೊಡ್ಡ ತಪ್ಪು ಮಾಡಿದೆ. ನನ್ನ ತಾಯಿ ಮತ್ತು ಅಕ್ಕ ನಿಖತ್ ಬಳಿ ನಾನು ಕ್ಷಮೆ ಯಾಚಿಸುತ್ತೇನೆ. ಒಬ್ಬ ಮನುಷ್ಯ ದೀರ್ಘಕಾಲದವರೆಗೆ ತನ್ನ ಮನಸ್ಸಿನಲ್ಲೇ ಎಲ್ಲವನ್ನೂ ಹತ್ತಿಕ್ಕಿಕೊಂಡಾಗ, ಒಂದು ದಿನ ಅದು ಮಿತಿಮೀರಿ ಹೊರಬರುತ್ತದೆ. ನಾನು ನಿಖತ್ ಮತ್ತು ಅವರ ಪತಿ ಸಂತೋಷ್ ಹೆಗ್ಡೆ ಅವರ ಬಗ್ಗೆಯೂ ಅತಿಯಾಗಿ ಮಾತನಾಡಬಾರದಿತ್ತು. ನಾನು ಮಾಡಿದ್ದು ತಪ್ಪು’ ಎಂದು ಫೈಸಲ್ ಹೇಳಿದ್ದಾರೆ.

‘ನನಗೆ ಈಗ ನನ್ನ ತಪ್ಪಿನ ಅರಿವಾಗಿದೆ’:

ಮುಂದುವರಿದು ಮಾತನಾಡಿದ ಫೈಸಲ್ ಖಾನ್ ಅವರು, ‘ನನಗೆ ಈಗ ನನ್ನ ತಪ್ಪಿನ ಅರಿವಾಗಿದೆ, ಹಾಗಾಗಿ ಕ್ಷಮೆ ಕೇಳುತ್ತಿದ್ದೇನೆ. ನಾನು ಆಮಿರ್ ಖಾನ್ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದೆ. ಆದರೆ ಇನ್ನು ಮುಂದೆ ನಾವೆಲ್ಲರೂ ಒಟ್ಟಾಗಿ, ಒಳ್ಳೆಯ ಬಾಂಧವ್ಯದೊಂದಿಗೆ ಮುನ್ನಡೆಯಬೇಕು ಎನ್ನುವುದು ನನ್ನ ಆಶಯ. ನಮ್ಮ ಸಂಬಂಧ ಇನ್ನಷ್ಟು ಗಟ್ಟಿಯಾಗಲಿ ಎಂದು ನಾನು ಹಾರೈಸುತ್ತೇನೆ’ ಎಂದಿದ್ದಾರೆ.

ಮಾನಸಿಕ ಆರೋಗ್ಯದ ವಿವಾದಕ್ಕೆ ಸಿಕ್ಕಿತು ಕ್ಲೀನ್ ಚಿಟ್:

ತಮ್ಮ ಮಾನಸಿಕ ಸ್ಥಿತಿಯ ಕುರಿತು ಮಾತನಾಡಿದ ಫೈಸಲ್, ‘ಅದು ನನ್ನ ಜೀವನದ ಒಂದು ಭಿನ್ನವಾದ ಹಂತವಾಗಿತ್ತು. ಅಂದು ನನ್ನ ಕುಟುಂಬದವರು ನನ್ನನ್ನು ವೈದ್ಯರ ಬಳಿ ಕರೆದೊಯ್ದಾಗ, ಆ ವೈದ್ಯರು ನೀಡಿದ ವರದಿ ತಪ್ಪಾಗಿರಬಹುದು. ಆದರೆ ನಂತರ ನ್ಯಾಯಾಲಯವು ನನ್ನನ್ನು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದಾಗ, ಅಲ್ಲಿನ ವೈದ್ಯರು ನನ್ನ ಮಾನಸಿಕ ಆರೋಗ್ಯ ಸ್ಥಿತಿಗತಿ ಉತ್ತಮವಾಗಿದೆ ಎಂದು ಕ್ಲೀನ್ ಚಿಟ್ ನೀಡಿದ್ದರು’ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ನೆಪೋಟಿಸಂ ಇರೋದು ನಿಜ, ಅದರಿಂದಲೇ ನನಗೆ ಕೆಲಸ ಸಿಗುತ್ತಿದೆ: ಆಮಿರ್ ಖಾನ್ ಮಗನ ನೇರ ಮಾತು

ಕೆಲವು ವೈದ್ಯರು ತಮ್ಮ ಕುಟುಂಬ ಹಾದಿ ತಪ್ಪಿಸಿರುವ ಸಾಧ್ಯತೆಯಿದೆ ಎಂದಿರುವ ಫೈಸಲ್, ‘ಕಹಿ ಘಟನೆಗಳನ್ನು ಮರೆತು, ನನ್ನ ಕುಟುಂಬದವರು ನನ್ನನ್ನು ನಂಬುತ್ತಾರೆ ಮತ್ತು ಅರ್ಥಮಾಡಿಕೊಳ್ಳುತ್ತಾರೆ ಎಂಬ ಭರವಸೆ ನನಗಿದೆ’ ಎಂದಿದ್ದಾರೆ. ತಮ್ಮ ಮಾನಸಿಕ ಸ್ಥಿತಿಯ ಬಗ್ಗೆ ಕುಟುಂಬದಲ್ಲೇ ಭಿನ್ನಾಭಿಪ್ರಾಯಗಳಿದ್ದವು ಎಂದು ತಿಳಿಸಿದ ಅವರು, ‘ಕೆಲವರು ವೈದ್ಯರ ಮಾತನ್ನು ನಂಬಿದ್ದರೆ, ಇನ್ನು ಕೆಲವರು ನನ್ನನ್ನು ನಂಬಿದ್ದರು. ನನಗೆ ಯಾವುದೇ ರೀತಿಯ ಸ್ಕಿಜೋಫ್ರೇನಿಯಾ ಕಾಯಿಲೆ ಇಲ್ಲ ಎಂದು ನನ್ನ ಅಕ್ಕ ನಿಖತ್, ತಾಯಿ ಮತ್ತು ಸಂತೋಷ್ ಹಲವು ಬಾರಿ ಹೇಳಿದ್ದರು’ ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

CM ಆರ್ಥಿಕ ಸಲಹೆಗಾರ ಹುದ್ದೆಯಿಂದ ನನ್ನ ತಗೆದು ಹಾಕಿಲ್ಲ: ಡಿಕೆಶಿ ಬಗ್ಗೆ ರಾಯರೆಡ್ಡಿ ಸ್ಪೋಟಕ ಹೇಳಿಕೆ – Kannada News | Congress MLA Basavaraj Rayareddy Talks about DK Shivakumar about financial advisor Change

ಕೊಪ್ಪಳ, (ಜುಲೈ 03): ಶಾಸಕ ಬಸವರಾಜ ರಾಯರೆಡ್ಡಿಯವರು (Basavaraj Rayareddy) ಸಿದ್ದರಾಮಯ್ಯನವರ (Siddaramaiah) ಆಪ್ತರಾಗಿದ್ದರೂ ಸಹ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿರಲಿಲ್ಲ. ಇದರಿಂದ ಅವರನ್ನು ಸಿಎಂ ಆರ್ಥಿಕ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿತ್ತು. ಆದ್ರೆ, ಇದೀಗ ಡಿಕೆ ಶಿವಕುಮಾರ್ (DK Shivakumar), ಎಲ್.ಕೆ.ಅತೀಕ್ ಅವರನ್ನು ಆರ್ಥಿಕ ಸಲಹೆಗಾರರನ್ನಾಗಿ ನೇಮಿಸಿದ್ದಾರೆ. ಇನ್ನು ಈ ಬಗ್ಗೆ ಕೊಪ್ಪಳದಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರಾಯರೆಡ್ಡಿ, ಸಿಎಂ ಆರ್ಥಿಕ ಸಲಹೆಗಾರ ಹುದ್ದೆಯಿಂದ ನನ್ನನ್ನು ತೆಗೆದು ಹಾಕಿಲ್ಲ. ಸಿಎಂ ಬದಲಾವಣೆ ನಂತರ ಡಿಕೆಶಿ ಮತ್ತೊಬ್ಬರನ್ನು ನೇಮಿಸಿದ್ದಾರೆ. ಅದರಲ್ಲಿ ತಪ್ಪೇನಿದೆ? ಆರ್ಡರ್ ಮಾಡಲೇಬೇಕು, ಹಾಗಾಗಿ ಆರ್ಡರ್ ಮಾಡಿದ್ದಾರೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನನ್ನ ವಿರುದ್ಧವಾಗಿ ಇಲ್ಲ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs ENG: ಭಾರತ- ಇಂಗ್ಲೆಂಡ್‌ 2ನೇ ಟಿ20 ಪಂದ್ಯಕ್ಕೂ ಇದೆಯಾ ಮಳೆಯಾತಂಕ? – Kannada News | India vs England 2nd T20 Manchester: Weather Forecast, Match Preview and H2H Record

ಭಾರತ ಮತ್ತು ಇಂಗ್ಲೆಂಡ್ (India vs England) ನಡುವೆ ಪ್ರಸ್ತುತ ಐದು ಪಂದ್ಯಗಳ ಟಿ20 ಸರಣಿ ನಡೆಯುತ್ತಿದೆ. ಉಭಯ ತಂಡಗಳ ನಡುವಿನ ಮೊದಲ ಟಿ20 ಪಂದ್ಯ ಚೆಸ್ಟರ್-ಲೆ-ಸ್ಟ್ರೀಟ್‌ನಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ 189 ರನ್ ಕಲೆಹಾಕಿತ್ತು. ಆದರೆ ಈ ಗುರಿ ಬೆನ್ನಟ್ಟಲು ಇಂಗ್ಲೆಂಡ್‌ ತಂಡಕ್ಕೆ ಮಳೆರಾಯ ಅವಕಾಶ ಮಾಡಿಕೊಡಲಿಲ್ಲ. ಹೀಗಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು. ಈಗ, ಎರಡೂ ತಂಡಗಳು ಮ್ಯಾಂಚೆಸ್ಟರ್‌ನಲ್ಲಿ ಎರಡನೇ ಟಿ20 ಪಂದ್ಯವನ್ನಾಡಲು ಸಜ್ಜಾಗಿವೆ. ಆದರೆ ಮೊದಲ ಪಂದ್ಯದಂತೆ ಎರಡನೇ ಪಂದ್ಯಕ್ಕೂ ಮಳೆ ಅಡ್ಡಿಪಡಿಸುತ್ತಾ ಎಂಬ ಆತಂಕ ಅಭಿಮಾನಿಗಳಲ್ಲಿ ಮೂಡಿದೆ. ಈ ಆತಂಕಕ್ಕೆ ಪೂರಕವಾದ ವರದಿಯನ್ನು ಹವಾಮಾನ ಇಲಾಖೆ ನೀಡಿದೆ.

ಮ್ಯಾಂಚೆಸ್ಟರ್‌ನಲ್ಲಿ ಹವಾಮಾನ ಹೇಗಿರಲಿದೆ?

ಪಂದ್ಯದ ದಿನದಂದು ಮ್ಯಾಂಚೆಸ್ಟರ್‌ನಲ್ಲಿ ಮೋಡ ಕವಿದ ವಾತಾವರಣವಿರಲಿದೆ. ಗರಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ಇರಲಿದೆ. ಆದರೆ ಟಾಸ್‌ಗೂ ಮೊದಲು ಲಘು ಮಳೆ ಬೀಳುವ ಮುನ್ಸೂಚನೆ ನೀಡಲಾಗಿದ್ದರೂ, ಪಂದ್ಯದ ಸಮಯದಲ್ಲಿ ಮಳೆಯಾಗುವ ಸಾಧ್ಯತೆಗಳು ತುಂಬಾ ಕಡಿಮೆ. ಸ್ಥಳೀಯ ಸಮಯ ಮಧ್ಯಾಹ್ನ 1 ಗಂಟೆಯಿಂದ ಸಂಜೆ 6 ಗಂಟೆಯ ನಡುವೆ ಮಳೆಯಾಗುವ ಸಾಧ್ಯತೆ ಶೇ. 24 ರಿಂದ ಶೇ. 13 ಕ್ಕೆ ಇಳಿಯುವ ನಿರೀಕ್ಷೆಯಿದೆ.

ಆದಾಗ್ಯೂ, ಪಂದ್ಯದ ಅಂತ್ಯದ ವೇಳೆಗೆ ಅಂದರೆ ಸ್ಥಳೀಯ ಸಮಯ ಸಂಜೆ 7 ಗಂಟೆಯ ಸುಮಾರಿಗೆ ಮಳೆಯಾಗುವ ಸಾಧ್ಯತೆ ಇದೆ. ದಿನವಿಡೀ ಮೋಡ ಕವಿದ ವಾತಾವರಣದಿಂದ ಕೂಡಿರುವುದರಿಂದ ಆಟಗಾರರು ಬಿಸಿಲಿನ ತಾಪಮಾನದಿಂದ ಹೈರಾಣಾಗುವುದಿಲ್ಲ.

IND vs ENG: 2ನೇ ಟಿ20 ಪಂದ್ಯಕ್ಕೆ ಪ್ಲೇಯಿಂಗ್ 11 ಪ್ರಕಟಿಸಿದ ಇಂಗ್ಲೆಂಡ್‌; ತಂಡದಲ್ಲಿ 2 ಬದಲಾವಣೆ

ಮ್ಯಾಂಚೆಸ್ಟರ್​ನಲ್ಲಿ ಯಾರದ್ದು ಮೇಲುಗೈ?

ಈ ಮೈದಾನದಲ್ಲಿ ಇಲ್ಲಿಯವರೆಗೆ ಎರಡೂ ತಂಡಗಳ ನಡುವೆ ಒಟ್ಟು ಎರಡು ಟಿ20 ಪಂದ್ಯಗಳನ್ನು ಆಡಲಾಗಿದೆ. ಎರಡೂ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ಭಾರತವನ್ನು ಆರು ವಿಕೆಟ್‌ಗಳಿಂದ ಸೋಲಿಸಿದರೆ, ಎರಡನೇ ಪಂದ್ಯದಲ್ಲಿ ಭಾರತ 8 ವಿಕೆಟ್​ಗಳ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್ 159 ರನ್ ಕಲೆಹಾಕಿತ್ತು. ಇದಕ್ಕೆ ಉತ್ತರವಾಗಿ ಗುರಿ ಬೆನ್ನಟ್ಟಿದ ಭಾರತದ ಪರ ಕನ್ನಡಿಗ ಕೆಎಲ್ ರಾಹುಲ್ 54 ಎಸೆತಗಳಲ್ಲಿ 101 ರನ್‌ಗಳ ಅಜೇಯ ಶತಕದ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೈಗ್ರೇನ್ ಮತ್ತು ರಕ್ತಹೀನತೆಗೆ ಸಂಬಂಧವಿದೆಯೇ? ಅಧ್ಯಯನದ ತಿಳಿದುಬಂದ ಅಚ್ಚರಿ ಮಾಹಿತಿ ಇಲ್ಲಿದೆ – Kannada News | Study Finds Possible Link Between Iron Deficiency Anemia and Migraines

ಇತ್ತೀಚಿನ ದಿನಗಳಲ್ಲಿ ಮೈಗ್ರೇನ್ (Migraine) ಮತ್ತು ರಕ್ತಹೀನತೆ (ಅನೀಮಿಯಾ) ಎರಡೂ ಸಾಮಾನ್ಯ ಆರೋಗ್ಯ ಸಮಸ್ಯೆಗಳಾಗಿವೆ.ನೀವು ಕೂಡ ಈ ರೀತಿಯ ಸಮಸ್ಯೆಗಳನ್ನು ಅನುಭವಿಸಿರಬಹುದು. ಆದರೆ ನಿಮಗೆ ಗೊತ್ತಾ…! ಹೊಸ ಅಧ್ಯಯನವೊಂದು ಕಬ್ಬಿಣ ಅಂಶದ ಕೊರತೆಯಿಂದ ಉಂಟಾಗುವ ರಕ್ತಹೀನತೆ (Anemia) ಮತ್ತು ಮೈಗ್ರೇನ್ ನಡುವೆ ಸಂಬಂಧ ಇರಬಹುದೆಂದು ಸೂಚಿಸಿದೆ. ಆದರೆ ರಕ್ತಹೀನತೆಯೇ ಮೈಗ್ರೇನ್‌ಗೆ ನೇರ ಕಾರಣ ಎಂಬುದು ಈ ಅಧ್ಯಯನದಿಂದ ಸಾಬೀತಾಗಿಲ್ಲ. ಆದರೆ ಇವೆರಡಕ್ಕೂ ಸಂಬಂಧವಿರುವುದು ಸತ್ಯ. ಹಾಗಾದರೆ ಈ ಅಧ್ಯಯನ ಹೇಳುವುದೇನು, ಲಕ್ಷಣಗಳು ಹೇಗಿರುತ್ತವೆ ಮತ್ತು ಇಂತಹ ಸಮಸ್ಯೆಗಳನ್ನು ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಅಧ್ಯಯನ ಏನು ಹೇಳುತ್ತದೆ?

ಪಬ್‌ಮೆಡ್ (PubMed) ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ತೀವ್ರ ಕಬ್ಬಿಣ ಅಂಶದ ಕೊರತೆಯಿರುವವರಲ್ಲಿ ಮೈಗ್ರೇನ್ ಸಮಸ್ಯೆ ಹೆಚ್ಚಾಗಿ ಕಂಡುಬಂದಿದೆ. ಕಬ್ಬಿಣ ಅಂಶದ ಕೊರತೆಯಿಂದ ಹಿಮೋಗ್ಲೋಬಿನ್ ಮಟ್ಟ ಕಡಿಮೆಯಾಗಿ, ಮೆದುಳಿಗೆ ಸಾಕಷ್ಟು ಆಮ್ಲಜನಕ ತಲುಪದಿರುವುದು ಮೈಗ್ರೇನ್‌ಗೆ ಕಾರಣವಾಗಬಹುದೆಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಈ ಸಂಬಂಧವನ್ನು ದೃಢಪಡಿಸಲು ಇನ್ನಷ್ಟು ಸಂಶೋಧನೆ ಅಗತ್ಯವಿದೆ.

ಇದನ್ನೂ ಓದಿ: ಗಟ್ ಹೆಲ್ತ್ ಸುಧಾರಿಸಲು ಆಹಾರದಲ್ಲಿ ಮಾಡಬೇಕಾದ ಬದಲಾವಣೆಗಳು!

ರಕ್ತಹೀನತೆ ಮತ್ತು ಮೈಗ್ರೇನ್‌ನ ಲಕ್ಷಣಗಳು:

ರಕ್ತಹೀನತೆಯಲ್ಲಿ ದಣಿವು, ದೌರ್ಬಲ್ಯ, ತಲೆಸುತ್ತು, ಉಸಿರಾಟದ ತೊಂದರೆ, ಚರ್ಮ ಬಿಳಿಯಾಗುವುದು ಹಾಗೂ ಏಕಾಗ್ರತೆ ಕಡಿಮೆಯಾಗುವಂತಹ ಲಕ್ಷಣಗಳು ಕಾಣಿಸಬಹುದು. ಮೈಗ್ರೇನ್‌ನಲ್ಲಿ ತಲೆಯ ಒಂದು ಭಾಗದಲ್ಲಿ ತೀವ್ರ ನೋವು, ವಾಂತಿ, ವಾಕರಿಕೆ, ಬೆಳಕು ಅಥವಾ ಶಬ್ದಕ್ಕೆ ಅಸಹನೆ ಕಾಣಿಸಬಹುದು.

ತಡೆಗಟ್ಟಲು ಏನು ಮಾಡಬೇಕು?

ಕಬ್ಬಿಣದ ಅಂಶ ಸಮೃದ್ಧ ಆಹಾರಗಳಾದ ಹಸಿರು ಸೊಪ್ಪು, ಬೇಳೆ, ಬೀನ್ಸ್, ಬೆಲ್ಲ ಹಾಗೂ ಒಣಹಣ್ಣುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಿ. ಸಾಕಷ್ಟು ನೀರು ಕುಡಿಯಿರಿ, ಸರಿಯಾಗಿ ನಿದ್ರೆ ಮಾಡಿ ಹಾಗೂ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಪದೇಪದೇ ತಲೆನೋವು ಅಥವಾ ರಕ್ತಹೀನತೆಯ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ. ವೈದ್ಯರ ಸಲಹೆಯಿಲ್ಲದೆ ಯಾವುದೇ ರೀತಿಯ ಮಾತ್ರೆ ಅಥವಾ ಔಷಧಿಗಳನ್ನು ಸೇವಿಸಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

SSLC ತೃತೀಯ ಭಾಷೆಗೆ ಅಂಕದ ಬದಲು ಗ್ರೇಡ್: ಶೈಕ್ಷಣಿಕ ವರ್ಷದ ಆರಂಭದಲ್ಲೇ ಗೊಂದಲ ತಪ್ಪಿಸಲು ಸಿದ್ಧತೆ – Kannada News | Grade for sslc third language karnataka education plan order academic year starting

ಬೆಂಗಳೂರು, (ಜುಲೈ 03):  ಎಸ್​​ಎಸ್​​ಎಲ್​​ಸಿ ಪರೀಕ್ಷೆಯಲ್ಲಿ ( SSLC Exams) ತೃತೀಯ ಭಾಷೆಯ ಮೌಲ್ಯಮಾಪನಕ್ಕೆ ಮತ್ತೆ ಹೊಸ ರೂಪ ನೀಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಹಿಂದಿ, ಸಂಸ್ಕೃತ, ಉರ್ದು ಸೇರಿದಂತೆ ತೃತೀಯ ಭಾಷೆಗಳಿಗೆ ಅಂಕದ ಬದಲು ಗ್ರೇಡ್ ನೀಡುವ ಪ್ರಸ್ತಾವನೆ ಅಂತಿಮ ಹಂತದಲ್ಲಿದ್ದು, ನೂತನ ಶಿಕ್ಷಣ ಸಚಿವರು ಅಧಿಕಾರ ವಹಿಸಿಕೊಂಡ ಬಳಿಕ ಮತ್ತೊಮ್ಮೆ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ. ಆದರೆ ಇಲಾಖೆಯ ಈ ನಿರ್ಧಾರಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ತೀವ್ರ ವಿರೋಧ ವ್ಯಕ್ತಪಡಿಸಿದೆ. ತೃತೀಯ ಭಾಷೆಗೆ ಅಂಕ ನೀಡದಿದ್ದರೆ ವಿದ್ಯಾರ್ಥಿಗಳ ಸಾಧನೆ ಅಳೆಯಲು ಸಾಧ್ಯವಾಗುವುದಿಲ್ಲ. ಉನ್ನತ ಶಿಕ್ಷಣ ಪ್ರವೇಶ ಮತ್ತು ಶೈಕ್ಷಣಿಕ ಸ್ಪರ್ಧೆಯ ಮೇಲೂ ಪರಿಣಾಮ ಬೀಳಲಿದೆ ಎಂದು ಒಕ್ಕೂಟ ಅಭಿಪ್ರಾಯಪಟ್ಟಿದೆ.

ಕಳೆದ ವರ್ಷವೇ ಆದೇಶಿಸಲಾಗಿತ್ತು

ಕಳೆದ ಶೈಕ್ಷಣಿಕ ವರ್ಷದಲ್ಲಿ SSLC ಪರೀಕ್ಷೆ ನಡೆಯುತ್ತಿದ್ದ ವೇಳೆಯಲ್ಲೇ ಇಲಾಖೆ ತೃತೀಯ ಭಾಷೆಗೆ ಗ್ರೇಡ್ ವ್ಯವಸ್ಥೆ ಘೋಷಿಸಿತ್ತು. ನಿಯಮ ಮಧ್ಯದಲ್ಲೇ ಬದಲಾವಣೆ ಮಾಡಿದ ಕಾರಣ ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅನೇಕ ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಬಳಿಕ ಹೈಕೋರ್ಟ್ ಹಿಂದಿ ವಿಷಯಕ್ಕೆ ಗ್ರೇಡ್ ಅಲ್ಲ, ಅಂಕವೇ ನೀಡಬೇಕು ಎಂದು ಸರ್ಕಾರಕ್ಕೆ ಸೂಚನೆ ನೀಡಿತ್ತು.

ಇದನ್ನೂ ಓದಿ: ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಸಮವಸ್ತ್ರ, ಶೂ ನೀಡಲು ಕ್ಯಾಬಿನೆಟ್​ ಅಸ್ತು

ಗೊಂದಲ ಮರುಕಳಿಸದಂತೆ ಪ್ಲ್ಯಾನ್

ಆದ್ರೆ, ಈ ಬಾರಿ ಕಳೆದ ವರ್ಷದಂತಹ ಗೊಂದಲ ಮರುಕಳಿಸದಂತೆ ಶೈಕ್ಷಣಿಕ ವರ್ಷದ ಆರಂಭದಲ್ಲೇ ನಿಯಮ ಜಾರಿಗೊಳಿಸಲು ಇಲಾಖೆ ಸಿದ್ಧತೆ ನಡೆಸಿದೆ. ಇನ್ನು ಈ ಬಗ್ಗೆ ಶಿಕ್ಷಣ ಇಲಾಖೆ ಆಯುಕ್ತರು ಕಳೆದ ವರ್ಷಕ್ಕೆ ಮಾತ್ರ ಕೋರ್ಟ್ ಆದೇಶ ನೀಡಿತ್ತು ಈ ವರ್ಷಕ್ಕೆ ಯಾವುದೆ ಸಮಸ್ಯೆ ಇಲ್ಲ ನಾವು ಈ ಬಗ್ಗೆ ಜಾರಿಗೆ ಈಗಾಗಲೇ ಆದೇಶವೇ ಇದೆ ಅಂತಿದ್ದಾರೆ.

ಒಟ್ಟಿನಲ್ಲಿ ಎಸ್​​ಎಸ್​​ಎಲ್​​ಸಿಯಲ್ಲಿ ತೃತೀಯ ಭಾಷೆಗೆ ಅಂಕದ ಬದಲು ಗ್ರೇಡ್ ನೀಡಲು ಇಲಾಖೆ ಮುಂದಾಗಿದ್ದು, ಕಳೆದ ವರ್ಷದ ವಿವಾದದ ನಂತರ ಈ ಬಾರಿ ಮೊದಲೇ ನಿಯಮ ಪ್ರಕಟಿಸಲು ಇಲಾಖೆ ಮುಂದಾಗಿರುವುದು ಕುತೂಹಲ ಮೂಡಿಸಿದೆ. ಆದರೆ ಗ್ರೇಡ್ ಪದ್ಧತಿ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆಯೋ ಅಥವಾ ಹೊಸ ವಿವಾದಕ್ಕೆ ಕಾರಣವಾಗುತ್ತೋ ಅಂತ ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND A vs SL A: ಶತಕ ಬಾರಿಸಿದ ಸುದರ್ಶನ್, ಶತಕದಂಚಿನಲ್ಲಿ ಪಡಿಕ್ಕಲ್ – Kannada News | India A Dominates SL A Day 2: Sudharsan Century, Padikkal Nears 100 in 2nd Unofficial Test

ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಎ ಮತ್ತು ಶ್ರೀಲಂಕಾ ಎ (India A vs Sri Lanka A ) ನಡುವಿನ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದ ಎರಡನೇ ದಿನದಾಟ ಮುಕ್ತಾಯಗೊಂಡಿದೆ. ಎರಡನೇ ದಿನದಂದು ಶ್ರೀಲಂಕಾ ಎ ತಂಡವನ್ನು ಮೊದಲ ಇನ್ನಿಂಗ್ಸ್​ನಲ್ಲಿ 366 ರನ್​ಗಳಿಗೆ ಆಲೌಟ್ ಮಾಡಿದ ಟೀಂ ಇಂಡಿಯಾ, ಬ್ಯಾಟಿಂಗ್​ನಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದೆ. ಭಾರತದ ಪರ ಆರಂಭಿಕ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್ (Sai Sudharsan) ಸತತ ಎರಡನೇ ಪಂದ್ಯದಲ್ಲಿ ಅಜೇಯ ಶತಕ ಬಾರಿಸಿದರೆ, ದೇವದತ್ ಪಡಿಕ್ಕಲ್ (Devdutt Padikkal) ಕೂಡ 94 ರನ್ ಗಳಿಸಿ ಶತಕದ ಸಮೀಪದಲ್ಲಿದ್ದಾರೆ. ಇಬ್ಬರೂ ಆಟಗಾರರು ಈಗಾಗಲೇ ಎರಡನೇ ವಿಕೆಟ್‌ಗೆ 181 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡಿದ್ದಾರೆ. ಹೀಗಾಗಿ ಎರಡನೇ ದಿನದ ಅಂತ್ಯದ ವೇಳೆಗೆ ಭಾರತ 1 ವಿಕೆಟ್‌ ಕಳೆದುಕೊಂಡು 247 ರನ್ ಕಲೆಹಾಕಿದೆ.

ಮೊದಲ ದಿನದಾಟದಂತ್ಯಕ್ಕೆ 5 ವಿಕೆಟ್‌ಗಳನ್ನು ಕಳೆದುಕೊಂಡು 288 ರನ್ ಕಲೆಹಾಕಿದ್ದ ಶ್ರೀಲಂಕಾ ಎ ತಂಡ ಎರಡನೇ ದಿನ 76 ರನ್ ಕಲೆಹಾಕುವುದರೊಳಗೆ ಉಳಿದ 5 ವಿಕೆಟ್‌ಗಳನ್ನು ಕಳೆದಕೊಂಡಿತು. ಹೀಗಾಗಿ ಲಂಕಾ ಪಡೆ 366 ರನ್‌ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿತು. ಭಾರತ ತಂಡದ ಪರ ಸರಾಂಶ್ ಜೈನ್ ಮತ್ತು ಗುರ್ನೂರ್ ಬ್ರಾರ್ ತಲಾ ನಾಲ್ಕು ವಿಕೆಟ್ ಪಡೆದರೆ, ಯಶ್ ಠಾಕೂರ್ ಕೂಡ ಎರಡು ವಿಕೆಟ್ ಪಡೆದರು. ಈ ಇನ್ನಿಂಗ್ಸ್‌ನಲ್ಲಿ ಆಕಿಬ್ ನಬಿ ದಾರ್ ವಿಕೆಟ್ ಪಡೆಯಲಿಲ್ಲ. ಇತ್ತ ಶ್ರೀಲಂಕಾ ಎ ತಂಡದ ಪರ ನಾಯಕ ಸಹನ್ ಅರಚ್ಚಿಗೆ 127 ರನ್‌ಗಳ ಅದ್ಭುತ ಶತಕ ಗಳಿಸಿದರು.

ಸುದರ್ಶನ್ ಸತತ ಎರಡನೇ ಶತಕ

ಲಂಕಾ ತಂಡವನ್ನು ಆಲೌಟ್ ಮಾಡಿ ಬ್ಯಾಟಿಂಗ್‌ ಆರಂಭಿಸಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಮೊದಲ ವಿಕೆಟ್​ಗೆ ಸುದರ್ಶನ್ ಹಾಗೂ ಅಮನ್ ಮೊಖಡೆ 66 ರನ್​ಗಳ ಜೊತೆಯಾಟ ನಡೆಸಿದರು. ಆದಾಗ್ಯೂ ಅಮನ್ ವಿಕೆಟ್ ಪತನದೊಂದಿಗೆ ಈ ಜೊತೆಯಾಟ ಮುರಿದುಬಿತ್ತು. ಆ ಬಳಿಕ ಜೊತೆಯಾದ ಸುದರ್ಶನ್ ಹಾಗೂ ಪಡಿಕ್ಕಲ್ ದಿನವಿಡೀ ಲಂಕಾ ಬೌಲರ್​ಗಳನ್ನು ಕಾಡಿದರು. ಇದೇ ವೇಳೆ ಸುದರ್ಶನ್ ತಮ್ಮ ಸತತ ಎರಡನೇ ಶತಕವನ್ನು ಕಲೆಹಾಕಿದರು. ಮೊದಲ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಶತಕದ ಇನ್ನಿಂಗ್ಸ್ ಆಡಿದ್ದ ಸಾಯಿ, ಎರಡನೇ ಪಂದ್ಯದಲ್ಲೂ ಅದ್ಭುತ ಶತಕ ಸಿಡಿಸಿದರು.

IND vs SL: ಟಿ20 ಸರಣಿ ರದ್ದು; ಭಾರತ- ಲಂಕಾ ನಡುವಿನ ಟೆಸ್ಟ್ ಸರಣಿ ವೇಳಾಪಟ್ಟಿ ಪ್ರಕಟ

ಶತಕದಂಚಿನಲ್ಲಿ ಪಡಿಕ್ಕಲ್

ಸುದರ್ಶನ್ ಜೊತೆಗೆ ದಾಖಲೆಯ ಜೊತೆಯಾಟ ಕಟ್ಟಿದ ದೇವದತ್ ಪಡಿಕ್ಕಲ್ ಕೂಡ ಶತಕದಂಚಿನಲ್ಲಿದ್ದಾರೆ. ಮೊದಲ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ 67 ರನ್ ಗಳಿಸಿದ್ದ ಪಡಿಕ್ಕಲ್ ಈಗ ಎರಡನೇ ಟೆಸ್ಟ್‌ನಲ್ಲಿ ಶತಕದ ಸಮೀಪದಲ್ಲಿದ್ದಾರೆ. ಇಬ್ಬರೂ 301 ಎಸೆತಗಳಲ್ಲಿ 181 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡಿದ್ದಾರೆ. ಭಾರತ ಎ ತಂಡವು ಪ್ರಸ್ತುತ ಶ್ರೀಲಂಕಾ ಎ ತಂಡದ ಸ್ಕೋರ್‌ಗಿಂತ 119 ರನ್‌ಗಳ ಹಿಂದಿದ್ದು, ಒಂಬತ್ತು ವಿಕೆಟ್‌ಗಳು ಬಾಕಿ ಉಳಿದಿವೆ. ಇದರರ್ಥ ಎರಡನೇ ದಿನದಾಟದಲ್ಲಿ ಭಾರತ ತಂಡ ಸಂಪೂರ್ಣ ಮೇಲುಗೈ ಸಾಧಿಸಿದೆ ಎನ್ನಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version