ಮಳೆಗಾಗಿ 50 ಕಿ.ಮೀ ಪಾದಯಾತ್ರೆ: ಕೃಷ್ಣ-ತುಂಗಭದ್ರಾ ನೀರಲ್ಲಿ ಜಲಾಭಿಷೇಕ, ಸಪ್ತ ಭಜನೆ

Source link

ಮಗಳ ಜೊತೆಗೆ ಸಖತ್ ಆಗಿ ಸ್ಟೆಪ್ ಹಾಕಿದ ನಟ ಗಣೇಶ್: ವಿಡಿಯೋ – Kannada News | Ganesh’s daughter Charithriya Ganesh shared a video with her dad

ಗಣೇಶ್ (Ganesh), ಕನ್ನಡ ಚಿತ್ರರಂಗದ ಸ್ಟಾರ್ ನಟರಲ್ಲಿ ಒಬ್ಬರು. ಇತ್ತೀಚೆಗಷ್ಟೆ ನಟ ಗಣೇಶ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಹಲವಾರು ಅಭಿಮಾನಿಗಳು ಗಣೇಶ್ ಅವರ ಹುಟ್ಟುಹಬ್ಬಕ್ಕೆ ಅವರಿಗೆ ಶುಭಾಶಯಗಳನ್ನು ಕೋರಿದ್ದಾರೆ. ಆದರೆ ವಿಶೇಷವಾಗಿ ಶುಭಾಶಯ ಕೋರಿರುವುದು ಗಣೇಶ್ ಅವರ ಪುತ್ರಿ ಚಾರಿತ್ರ್ಯ. ಗಣೇಶ್ ಪುತ್ರಿ ಚಾರಿತ್ರ್ಯ, ತಾವು ತಂದೆ ಗಣೇಶ್ ಜೊತೆಗೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಎಲ್ಲ ವಿಷಯಗಳಲ್ಲೂ ತಮಗೆ ಬೆಂಬಲವಾಗಿ ಇದ್ದಿದ್ದಕ್ಕೆ ಮತ್ತು ಎಲ್ಲವನ್ನೂ ತಮಗೆ ಕಲಿಸಿಕೊಟ್ಟಿದ್ದಕ್ಕೆ ಗಣೇಶ್​​ಗೆ ಧನ್ಯವಾದಗಳನ್ನು ಪುತ್ರಿ ಹೇಳಿದ್ದಾರೆ. ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ: ಜುಲೈನಲ್ಲಿ 80ನೇ ಸ್ಥಾನಕ್ಕೆ ಕುಸಿದ ಭಾರತ; 56 ದೇಶಗಳಿಗೆ ವೀಸಾ ರಹಿತ ಪ್ರವೇಶ – Kannada News | Henley Passport Index July 2026, India at 80th place, with visa free entry to 56 countries

ನವದೆಹಲಿ, ಜುಲೈ 3: ಜಾಗತಿಕವಾಗಿ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡುವ ‘ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ’ದ (Henley Passport Index) ಜುಲೈ ತಿಂಗಳ ಹೊಸ ವರದಿಯಲ್ಲಿ ಭಾರತದ ಪಾಸ್‌ಪೋರ್ಟ್ ಶ್ರೇಯಾಂಕವು ಸ್ವಲ್ಪ ಕುಸಿತ ಕಂಡಿದೆ. ಕಳೆದ ಮೇ ತಿಂಗಳಲ್ಲಿ 78ನೇ ಸ್ಥಾನದಲ್ಲಿದ್ದ ಭಾರತ, ಪ್ರಸ್ತುತ 80ನೇ ಸ್ಥಾನಕ್ಕೆ ತಲುಪಿದೆ.

56 ದೇಶಗಳಿಗೆ ಮುಕ್ತ ಪ್ರವೇಶ: ಸ್ಥಾನ ಕುಸಿದಿದ್ದರೂ, ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ನಾಗರಿಕರು ಪ್ರಪಂಚದ 56 ದೇಶಗಳಿಗೆ ಮುಂಚಿತವಾಗಿ ವೀಸಾ ಪಡೆಯದೆಯೇ (Visa-Free) ಅಥವಾ ‘ವೀಸಾ ಆನ್ ಅರೈವಲ್’ (Visa on Arrival) ಸೌಲಭ್ಯದ ಮೂಲಕ ಪ್ರಯಾಣಿಸಬಹುದು. ಇವುಗಳಲ್ಲಿ ಥೈಲ್ಯಾಂಡ್, ಮಾಲ್ಡೀವ್ಸ್, ಶ್ರೀಲಂಕಾ, ಮಾರಿಷಸ್ ಮತ್ತು ಕೀನ್ಯಾದಂತಹ ಪ್ರಮುಖ ಪ್ರವಾಸಿ ತಾಣಗಳು ಸೇರಿವೆ.

ಭಾರತದ ಪಾಸ್​ಪೋರ್ಟ್ ಹೊಂದಿದವರಿಗೆ ವೀಸಾ ರಹಿತ ಪ್ರವೇಶ (Visa-free access):

  1. ಅಂಗೋಲಾ (Angola)
  2. ಬಾರ್ಬಡೋಸ್ (Barbados)
  3. ಭೂತಾನ್ (Bhutan)
  4. ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್ (British Virgin Islands)
  5. ಕುಕ್ ಐಲ್ಯಾಂಡ್ಸ್ (Cook Islands)
  6. ಡೊಮಿನಿಕಾ (Dominica)
  7. ಫಿಜಿ (Fiji)
  8. ಗ್ರೆನಾಡಾ (Grenada)
  9. ಹೈಟಿ (Haiti)
  10. ಜಮೈಕಾ (Jamaica)
  11. ಕಜಕಸ್ತಾನ್ (Kazakhstan)
  12. ಕಿರಿಬಾಟಿ (Kiribati)
  13. ಮಕಾವೊ (Macao)
  14. ಮಲೇಷ್ಯಾ (Malaysia)
  15. ಮಾರಿಷಸ್ (Mauritius)
  16. ಮೈಕ್ರೋನೇಶಿಯಾ (Micronesia)
  17. ಮಾಂಟ್‌ಸೆರಾಟ್ (Montserrat)
  18. ನೇಪಾಳ (Nepal)
  19. ನಿಯು (Niue)
  20. ಫಿಲಿಪೈನ್ಸ್ (The Philippines)
  21. ಕತಾರ್ (Qatar)
  22. ರುವಾಂಡಾ (Rwanda)
  23. ಸೆನೆಗಲ್ (Senegal)
  24. ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್ (St. Vincent and the Grenadines)
  25. ದಿ ಗ್ಯಾಂಬಿಯಾ (The Gambia)
  26. ಟ್ರಿನಿಡಾಡ್ ಮತ್ತು ಟೊಬಾಗೊ (Trinidad and Tobago)
  27. ವನುವಾಟು (Vanuatu)

ಇದನ್ನೂ ಓದಿ: ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಗ್ಗೆ ತಪ್ಪು ಕಲ್ಪನೆಗಳು; ಸರ್ಕಾರ ಒಂದೊಂದಕ್ಕೂ ನೀಡಿದ ಉತ್ತರ ಇಲ್ಲಿದೆ

ವೀಸಾ ಆನ್ ಅರೈವಲ್ (Visa on arrival):

  1. ಬುರುಂಡಿ (Burundi)
  2. ಕಾಂಬೋಡಿಯಾ (Cambodia)
  3. ಕೇಪ್ ವರ್ಡೆ ಐಲ್ಯಾಂಡ್ಸ್ (Cape Verde Islands)
  4. ಕೊಮೊರೊಸ್ (Comoros)
  5. ಜಿಬೂಟಿ (Djibouti)
  6. ಇಥಿಯೋಪಿಯಾ (Ethiopia)
  7. ಗಿನಿ-ಬಿಸೌ (Guinea-Bissau)
  8. ಇಂಡೋನೇಷ್ಯಾ (Indonesia)
  9. ಜೋರ್ಡಾನ್ (Jordan)
  10. ಲಾವೋಸ್ (Laos)
  11. ಮಡಗಾಸ್ಕರ್ (Madagascar)
  12. ಮಾಲ್ಡೀವ್ಸ್ (Maldives)
  13. ಮಾರ್ಷಲ್ ಐಲ್ಯಾಂಡ್ಸ್ (Marshall Islands)
  14. ಮಂಗೋಲಿಯಾ (Mongolia)
  15. ಮೊಜಾಂಬಿಕ್ (Mozambique)
  16. ಮ್ಯಾನ್ಮಾರ್ (Myanmar)
  17. ಪಲಾವ್ (Palau)
  18. ಸಿಯೆರಾ ಲಿಯೋನ್ (Sierra Leone)
  19. ಶ್ರೀಲಂಕಾ (Sri Lanka)
  20. ಸೇಂಟ್ ಲೂಸಿಯಾ (St. Lucia)
  21. ತಾಂಜಾನಿಯಾ (Tanzania)
  22. ತೀಮೋರ್-ಲೆಸ್ತೆ (Timor-Leste)
  23. ತುವಾಲು (Tuvalu)
  24. ಜಿಂಬಾಬ್ವೆ (Zimbabwe)
  25. ಥೈಲ್ಯಾಂಡ್ (Thailand)

ಎಲೆಕ್ಟ್ರಾನಿಕ್ ಟ್ರಾವೆಲ್ ಆಥರೈಸೇಶನ್ ಅಗತ್ಯವಿರುವ ದೇಶಗಳು

  • ಕೀನ್ಯಾ (Kenya)
  • ಸೀಶೆಲ್ಸ್ (Seychelles)
  • ಸೇಂಟ್ ಕಿಟ್ಸ್ ಮತ್ತು ನೆವಿಸ್ (St. Kitts and Nevis)

ಹೆನ್ಲಿ ಸೂಚ್ಯಂಕ ಹೇಗೆ ಕೆಲಸ ಮಾಡುತ್ತದೆ?

ಇಂಟರ್ನ್ಯಾಷನಲ್ ಏರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್ (IATA) ಒದಗಿಸುವ ವಿಶೇಷ ದತ್ತಾಂಶದ ಆಧಾರದ ಮೇಲೆ ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕವನ್ನು ಸಿದ್ಧಪಡಿಸಲಾಗುತ್ತದೆ.

ಇದನ್ನೂ ಓದಿ: ಭಾರತದ ಬಗ್ಗೆ ನೆಗಟಿವ್ ಆಗಿ ಹೇಳಿದರಾ ಇಂದ್ರಾ ನೂಯಿ; ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿರುವ ಪೆಪ್ಸಿಕೋ ಮಾಜಿ ಸಿಇಒ

ಒಂದು ದೇಶದ ಪಾಸ್‌ಪೋರ್ಟ್ ಹೊಂದಿರುವವರು ಮುಂಚಿತವಾಗಿ ವೀಸಾ ಇಲ್ಲದೆ ಎಷ್ಟು ದೇಶಗಳಿಗೆ ಪ್ರವೇಶಿಸಬಹುದು ಎಂಬುದರ ಆಧಾರದ ಮೇಲೆ ಈ ಜಾಗತಿಕ ಶ್ರೇಯಾಂಕವನ್ನು ನಿರ್ಧರಿಸಲಾಗುತ್ತದೆ.

ಶಕ್ತಿಶಾಲಿ ಪಾಸ್​ಪೋರ್ಟ್: ಜಾಗತಿಕವಾಗಿ ಅಗ್ರಸ್ಥಾನದಲ್ಲಿರುವ ದೇಶಗಳು

ಪ್ರತಿ ವರ್ಷದಂತೆ ಸಿಂಗಾಪುರ, ಜಪಾನ್, ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಸ್ಪೇನ್ ನಂತಹ ದೇಶಗಳು ಜಾಗತಿಕವಾಗಿ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್ ಹೊಂದಿರುವ ದೇಶಗಳಾಗಿ ಮುಂಚೂಣಿಯಲ್ಲಿವೆ. ಇವುಗಳ ಪಾಸ್‌ಪೋರ್ಟ್ ಹೊಂದಿರುವವರು ವಿಶ್ವದ 190ಕ್ಕೂ ಹೆಚ್ಚು ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣಿಸಬಹುದಾಗಿದೆ.

ಮತ್ತೊಂದೆಡೆ, ಅಫ್ಘಾನಿಸ್ತಾನ, ಸಿರಿಯಾ ಮತ್ತು ಇರಾಕ್‌ನಂತಹ ದೇಶಗಳು ಈ ಪಟ್ಟಿಯಲ್ಲಿ ಅತ್ಯಂತ ಕೊನೆಯ ಸ್ಥಾನಗಳಲ್ಲಿ ಮುಂದುವರಿದಿವೆ.

ಭಾರತದ ಶ್ರೇಯಾಂಕದಲ್ಲಿನ ಈ ಸಣ್ಣ ಬದಲಾವಣೆಯು ಇತರ ದೇಶಗಳು ತಮ್ಮ ವೀಸಾ ನೀತಿಗಳನ್ನು ನವೀಕರಿಸಿರುವ ಕಾರಣದಿಂದ ಉಂಟಾಗಿದೆಯೇ ಹೊರತು, ಭಾರತೀಯರಿಗೆ ಸಿಗುವ ವೀಸಾ ಮುಕ್ತ ದೇಶಗಳ ಸಂಖ್ಯೆಯಲ್ಲಿ ದೊಡ್ಡ ಮಟ್ಟದ ಕಡಿತವಾಗಿಲ್ಲ ಎಂದು ವರದಿಗಳು ತಿಳಿಸಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

E20 ಎಥೆನಾಲ್ ಮಿಶ್ರಣದ ಕುರಿತ ಸತ್ಯ ಸಂಗತಿ ಮತ್ತು ತಪ್ಪು ಕಲ್ಪನೆಗಳು – Kannada News | E20 Ethanol Blending Real Facts vs Misinformation details here

ನವದೆಹಲಿ, ಜುಲೈ 3: ಸಾಮಾಜಿಕ ಮಾಧ್ಯಮಗಳಲ್ಲಿ E20 ಎಥೆನಾಲ್ (Ethanol) ಇಂಧನದ ಕುರಿತು ಹರಡುತ್ತಿರುವ ಸುಳ್ಳು ಸುದ್ದಿಗಳು ಮತ್ತು ತಪ್ಪು ಕಲ್ಪನೆಗಳಿಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಜುಲೈ 2026ರಲ್ಲಿ ಬಿಡುಗಡೆ ಮಾಡಿದ ಅಧಿಕೃತ ವರದಿಯ ಆಧಾರದ ಮೇಲೆ ಸತ್ಯಾಸತ್ಯತೆಗಳ ವಿವರ ಇಲ್ಲಿದೆ. E20 ಎಥೆನಾಲ್ ಬಳಕೆಯಿಂದ ವಾಹನ ಹಾಳಾಗುತ್ತದೆ, ಮೈಲೇಜ್ ಗಣನೀಯವಾಗಿ ಕುಸಿಯುತ್ತದೆ ಎಂಬುದೆಲ್ಲಾ ಆಧಾರರಹಿತ ವದಂತಿಗಳು. ಎಥೆನಾಲ್ ಬಳಕೆಯಿಂದ ವಾಹನದ ವಾರಂಟಿ ಅಥವಾ ಇನ್ಶೂರೆನ್ಸ್ (ವಿಮೆ) ರದ್ದಾಗುವುದಿಲ್ಲ ಎಂದು ಸರ್ಕಾರ ಮತ್ತು ವಾಹನ ತಯಾರಕರು (SIAM) ಸ್ಪಷ್ಟಪಡಿಸಿದ್ದಾರೆ. ಭಾರತದ E20 ಯೋಜನೆ ಜಾಗತಿಕ ಗುಣಮಟ್ಟಕ್ಕೆ ಅನುಗುಣವಾಗಿದ್ದು, ARAI ಸಂಸ್ಥೆಯಿಂದ ಕಠಿಣ ತಪಾಸಣೆಗೆ ಒಳಪಟ್ಟ ನಂತರವೇ ಜಾರಿಗೆ ತರಲಾಗಿದೆ.

ಸಾಮಾಜಿಕ ಜಾಲತಾಣದ 10 ತಪ್ಪು ಕಲ್ಪನೆಗಳು ಮತ್ತು ಸತ್ಯ ಸಂಗತಿಗಳು:

1. “1 ಲೀಟರ್ ಎಥೆನಾಲ್ ತಯಾರಿಸಲು 10,000 ಲೀಟರ್ ನೀರು ಬೇಕು” ಎಂಬ ವದಂತಿ.

ನಿಜಾಂಶ: ಎಥೆನಾಲ್ ಕಾರ್ಖಾನೆಯಲ್ಲಿ 1 ಲೀಟರ್ ಎಥೆನಾಲ್ ಉತ್ಪಾದಿಸಲು ಕೇವಲ 3 ರಿಂದ 5 ಲೀಟರ್ ಸಂಸ್ಕರಿಸಿದ ನೀರು ಮಾತ್ರ ಬಳಕೆಯಾಗುತ್ತದೆ. ಅಲ್ಲದೆ, ಈ ಕಾರ್ಖಾನೆಗಳು ಶೂನ್ಯ ದ್ರವ ವಿಸರ್ಜನೆ (Zero Liquid Discharge) ತಂತ್ರಜ್ಞಾನದ ಮೂಲಕ ನೀರನ್ನು ಮರುಬಳಕೆ ಮಾಡುತ್ತವೆ. ಆಹಾರ ಭದ್ರತೆಯ ನಂತರ ಉಳಿಯುವ ಹೆಚ್ಚುವರಿ ಅಕ್ಕಿ ಮತ್ತು ಕಡಿಮೆ ನೀರು ಬೇಡುವ ಮೆಕ್ಕೆಜೋಳದಿಂದ 40%ಕ್ಕಿಂತ ಹೆಚ್ಚು ಎಥೆನಾಲ್ ತಯಾರಿಸಲಾಗುತ್ತಿದೆ.

ಇದನ್ನೂ ಓದಿ: ನನ್ನ ವಿರುದ್ಧ ಪೇಯ್ಡ್ ಅಭಿಯಾನ; ಆನ್‌ಲೈನ್‌ನಲ್ಲಿ ಎಥೆನಾಲ್ ಮಿಶ್ರಿತ ಇಂಧನ ಬಿಡುಗಡೆ ಕುರಿತ ಟೀಕೆಗೆ ನಿತಿನ್ ಗಡ್ಕರಿ ಬೇಸರ

2. “E20 ಭಾರತೀಯರ ಮೇಲಿನ ಅಪಾಯಕಾರಿ ಪ್ರಯೋಗ” ಎಂಬ ಆರೋಪ.

ನಿಜಾಂಶ: ಎಥೆನಾಲ್ ಮಿಶ್ರಿತ ಇಂಧನ ಬಳಕೆಗೆ ನೂರಾರು ವರ್ಷಗಳ ಇತಿಹಾಸವಿದೆ. ಅಮೆರಿಕಾದಲ್ಲಿ E10 ಸಾಮಾನ್ಯ ಇಂಧನವಾಗಿದ್ದು, E15ಗೆ ವಿಸ್ತರಿಸಲಾಗುತ್ತಿದೆ. ಬ್ರೆಜಿಲ್ ದೇಶದಲ್ಲಿ ಈಗಾಗಲೇ 27% ಎಥೆನಾಲ್ ಮಿಶ್ರಣ ಕಡ್ಡಾಯವಾಗಿದ್ದು, ಅದನ್ನು 35% ಗೆ ಏರಿಸಲು ನಿರ್ಧರಿಸಲಾಗಿದೆ. ಕೆನಡಾ, ಥೈಲ್ಯಾಂಡ್ ಮತ್ತು ಜಪಾನ್ ಕೂಡ ಇದನ್ನು ಬಳಸುತ್ತಿವೆ. ಇದು ಜಾಗತಿಕವಾಗಿ ಯಶಸ್ವಿಯಾದ ಮಾದರಿಯಾಗಿದೆ.

3. “ವಾಹನದ ಮೈಲೇಜ್ ಭೀಕರವಾಗಿ ಕುಸಿಯುತ್ತದೆ” ಎಂಬ ಆತಂಕ.

ನಿಜಾಂಶ: ARAI ನೇತೃತ್ವದಲ್ಲಿ ಕಾರುಗಳ ಮೇಲೆ 40,000 ಕಿ.ಮೀ ಮತ್ತು ದ್ವಿಚಕ್ರ ವಾಹನಗಳ ಮೇಲೆ 20,000 ಕಿ.ಮೀ ನಡೆಸಿರುವ ಸುದೀರ್ಘ ರಸ್ತೆ ಪ್ರಯೋಗಗಳಲ್ಲಿ ಮೈಲೇಜ್ ಮೇಲೆ ಯಾವುದೇ ಗಣನೀಯ ನಕಾರಾತ್ಮಕ ಪರಿಣಾಮ ಬೀರದಿರುವುದು ಸಾಬೀತಾಗಿದೆ. ಬದಲಿಗೆ ಎಥೆನಾಲ್‌ನ ಹೆಚ್ಚಿನ ಆಕ್ಟೇನ್ (108.5 RON) ಸಾಮರ್ಥ್ಯದಿಂದಾಗಿ ವಾಹನದ ಪಿಕ್-ಅಪ್ ಮತ್ತು ರೈಡಿಂಗ್ ಗುಣಮಟ್ಟ ಉತ್ತಮಗೊಳ್ಳುತ್ತದೆ.

4. “ಎಂಜಿನ್ ಭಾಗಗಳು ತುಕ್ಕು ಹಿಡಿಯುತ್ತವೆ ಮತ್ತು ಹಾಳಾಗುತ್ತವೆ” ಎಂಬ ಭಯ.

ನಿಜಾಂಶ: ತಜ್ಞರ ಸಮಿತಿಯ ಸಂಶೋಧನೆಯ ಪ್ರಕಾರ E20 ಇಂಧನದಿಂದ ಯಾವುದೇ ಮೆಟಲ್ ಅಥವಾ ಪ್ಲಾಸ್ಟಿಕ್ ಭಾಗಗಳಿಗೆ ಹಾನಿಯಾಗುವುದಿಲ್ಲ. ಕೇವಲ ಅತ್ಯಂತ ಹಳೆಯ ವಾಹನಗಳಲ್ಲಿ ಕೆಲವು ರಬ್ಬರ್ ಗ್ಯಾಸ್ಕೆಟ್‌ಗಳನ್ನು ಸ್ವಲ್ಪ ಮುಂಚಿತವಾಗಿ ಬದಲಾಯಿಸಬೇಕಾಗಬಹುದು, ಅಷ್ಟೆ. ಜೊತೆಗೆ, ಇದು ವಾಯುಮಾಲಿನ್ಯವನ್ನು (ಕಾರ್ಬನ್ ಮೊನಾಕ್ಸೈಡ್) 30% ರಿಂದ 50% ರಷ್ಟು ಕಡಿಮೆ ಮಾಡುತ್ತದೆ.

5. “ಕಾರ್ ಕಂಪನಿಗಳು ವಾರಂಟಿ ಮತ್ತು ಇನ್ಶೂರೆನ್ಸ್ ನಿರಾಕರಿಸುತ್ತವೆ” ಎಂಬ ಸುಳ್ಳು ಸುದ್ದಿ.

ನಿಜಾಂಶ: ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಜೂನ್ 2026 ರಲ್ಲಿ ಈ ಸುದ್ದಿಯನ್ನು ಸಂಪೂರ್ಣವಾಗಿ ನಿರಾಕರಿಸಿದೆ. ಭಾರತೀಯ ಆಟೋಮೊಬೈಲ್ ಉದ್ಯಮದ ಒಕ್ಕೂಟ (SIAM) ಮತ್ತು ವಿಮಾ ಕಂಪನಿಗಳು E20 ಇಂಧನ ಬಳಸುವುದರಿಂದ ಯಾವುದೇ ವಾರಂಟಿ ಅಥವಾ ವಿಮೆ ಕ್ಲೈಮ್‌ಗೆ ಧಕ್ಕೆಯಾಗುವುದಿಲ್ಲ ಎಂದು ಅಧಿಕೃತವಾಗಿ ಸ್ಪಷ್ಟಪಡಿಸಿವೆ.

6. “ಪೆಟ್ರೋಲ್ ಟ್ಯಾಂಕ್‌ಗೆ ಇರುವೆ ಮತ್ತು ಜೇನುನೊಣಗಳು ಮುತ್ತಿಕೊಳ್ಳುತ್ತವೆ” ಎಂಬ ವೈರಲ್ ವಿಡಿಯೋ.

ನಿಜಾಂಶ: ಬಿಪಿಸಿಎಲ್ (BPCL) ಈ ಕುರಿತು ವೈಜ್ಞಾನಿಕ ಸ್ಪಷ್ಟನೆ ನೀಡಿದೆ. ಎಥೆನಾಲ್ ತಯಾರಿಕೆಯಲ್ಲಿ ಸಕ್ಕರೆಯ ಅಂಶ ಸಂಪೂರ್ಣವಾಗಿ ನಾಶವಾಗಿರುತ್ತದೆ. ಅಲ್ಲದೆ ಇದಕ್ಕೆ ಕೀಟಗಳನ್ನು ವಿಕರ್ಷಿಸುವ ಕೆಮಿಕಲ್‌ಗಳನ್ನು ಬೆರೆಸಲಾಗಿರುತ್ತದೆ. ಪೆಟ್ರೋಲ್ ವಾಸನೆಯ ಮುಂದೆ ಎಥೆನಾಲ್ ವಾಸನೆ ಇರುವುದೇ ಇಲ್ಲ. ಆದ್ದರಿಂದ ಕೀಟಗಳು ಆಕರ್ಷಿತವಾಗುತ್ತವೆ ಎಂಬುದು ಕೇವಲ ಕಲ್ಪನೆ.

ಇದನ್ನೂ ಓದಿ: ಇಂಧನ ಕ್ರಾಂತಿ: ಹೆಚ್ಚಿನ ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಸಂಪೂರ್ಣ ಮನ್ನಾ

7. “ಸರ್ಕಾರವೇ ಕೋರ್ಟ್‌ನಲ್ಲಿ ಇದೊಂದು ಪ್ರಯೋಗ ಎಂದಿದೆ” ಎಂಬ ತಪ್ಪು ವರದಿ.

ನಿಜಾಂಶ: ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಪ್ರಕರಣವು ತೈಲ ಕಂಪನಿಗಳ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದ್ದೇ ವಿನಃ ಇಂಧನದ ಗುಣಮಟ್ಟದ ಮೇಲಲ್ಲ. ಭಾರತದ ಅಟಾರ್ನಿ ಜನರಲ್ (AGI) ಜೂನ್ 30, 2026 ರಂದು ಅಧಿಕೃತ ನೋಟಿಸ್ ಬಿಡುಗಡೆ ಮಾಡಿ, ಸರ್ಕಾರ ಎಲ್ಲೂ ಇಂತಹ ಹೇಳಿಕೆ ನೀಡಿಲ್ಲ ಎಂದು ಮಾಧ್ಯಮಗಳ ವರದಿಯನ್ನು ತಿದ್ದಿದ್ದಾರೆ.

8. “E20 ಪೆಟ್ರೋಲ್ ಟ್ಯಾಂಕ್ ಒಳಗೆ ನೀರು ಸೇರಿಕೊಳ್ಳುವಂತೆ ಮಾಡುತ್ತದೆ” ಎಂಬ ವದಂತಿ.

ನಿಜಾಂಶ: ಪೆಟ್ರೋಲ್ ಬಂಕ್‌ಗಳ ಭೂಗತ ಟ್ಯಾಂಕ್‌ಗಳಲ್ಲಿ ಮತ್ತು ಇಂದಿನ ಆಧುನಿಕ ವಾಹನಗಳಲ್ಲಿ ನೀರು ಒಳಹೋಗದಂತೆ ತಡೆಯಲು ಸಿಲಿಕಾ ಜೆಲ್ ಟ್ರ್ಯಾಪ್ಸ್, ವಿಶೇಷ ಗ್ಯಾಸ್ಕೆಟ್ ಮತ್ತು ಸೀಲೆಂಟ್‌ಗಳಂತಹ ಅತ್ಯಾಧುನಿಕ ಸುರಕ್ಷತಾ ವ್ಯವಸ್ಥೆ ಇರುತ್ತದೆ. ನೀರು ಇಂಧನ ಟ್ಯಾಂಕ್ ಸೇರಲು ತಪ್ಪು ನಿರ್ವಹಣೆ ಕಾರಣವೇ ಹೊರತು ಎಥೆನಾಲ್ ಅಲ್ಲ.

9. “ಪೆಟ್ರೋಲ್‌ಗೆ ನೇರವಾಗಿ ಕಬ್ಬಿನ ಹಾಲು ಮಿಕ್ಸ್ ಮಾಡಲಾಗುತ್ತಿದೆ” ಎಂಬ ನಕಲಿ ವಿಡಿಯೋಗಳು.

ನಿಜಾಂಶ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಇಂತಹ ವಿಡಿಯೋಗಳು ಸಂಪೂರ್ಣ ನಕಲಿ. ಕಬ್ಬಿನ ಹಾಲನ್ನು ನೇರವಾಗಿ ಪೆಟ್ರೋಲ್‌ಗೆ ಬೆರೆಸಲಾಗುವುದಿಲ್ಲ. ಅದನ್ನು ಅತ್ಯಂತ ಕಠಿಣ ಕೈಗಾರಿಕಾ ಸಂಸ್ಕರಣೆ ಮತ್ತು ಶುದ್ಧೀಕರಣ ಪ್ರಕ್ರಿಯೆಗೆ ಒಳಪಡಿಸಿ, ಇಂಧನದ ದರ್ಜೆಗೆ ತಂದ ನಂತರವೇ ತೈಲ ಕಂಪನಿಗಳು ವೈಜ್ಞಾನಿಕವಾಗಿ ಮಿಶ್ರಣ ಮಾಡುತ್ತವೆ.

10. “ಎಥೆನಾಲ್ ಮಿಶ್ರಣದಿಂದ ವಾಹನ ಸವಾರರಿಗೆ ಯಾವುದೇ ಲಾಭವಿಲ್ಲ” ಎಂಬ ವಾದ.

ನಿಜಾಂಶ: ಎಥೆನಾಲ್ ಸ್ಥಳೀಯವಾಗಿ ಉತ್ಪಾದನೆಯಾಗುವುದರಿಂದ ದೇಶದ ಆಮದು ವೆಚ್ಚ ಇಳಿಕೆಯಾಗಿ ಆರ್ಥಿಕತೆಗೆ ಬಲ ಸಿಗುತ್ತದೆ. ಮಾಲಿನ್ಯ ಮುಕ್ತ ಪರಿಸರ ನಿರ್ಮಾಣವಾಗುತ್ತದೆ ಮತ್ತು ಈ ಹಣ ವಿದೇಶಿ ತೈಲ ಕಂಪನಿಗಳಿಗೆ ಹೋಗುವ ಬದಲು ನೇರವಾಗಿ ನಮ್ಮ ದೇಶದ ರೈತರಿಗೆ ಮತ್ತು ಸಕ್ಕರೆ ಕಾರ್ಖಾನೆಗಳಿಗೆ ತಲುಪುತ್ತದೆ.

E20 ಎಂದರೇನು?:

E20 ಎಂದರೆ 80% ಪೆಟ್ರೋಲ್ ಮತ್ತು 20% ಎಥೆನಾಲ್ ಮಿಶ್ರಣವಿರುವ ಇಂಧನವಾಗಿದೆ. ಎಥೆನಾಲ್ ಒಂದು ಜೈವಿಕ ಇಂಧನವಾಗಿದ್ದು, ಇದನ್ನು ಕಬ್ಬು, ಜೋಳ, ಹಾಳಾದ ಅಕ್ಕಿ ಮತ್ತು ಧಾನ್ಯಗಳ ಹುದುಗುವಿಕೆ ಪ್ರಕ್ರಿಯೆಯಿಂದ ತಯಾರಿಸಲಾಗುತ್ತದೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ, ಏಪ್ರಿಲ್ 1ರಿಂದ ಭಾರತದಾದ್ಯಂತ ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ E20 ಮಿಶ್ರಿತ ಪೆಟ್ರೋಲ್ ಮಾರಾಟವನ್ನು ಕಡ್ಡಾಯಗೊಳಿಸಲಾಗಿದೆ. ಸಾಮಾನ್ಯ ಶುದ್ಧ ಪೆಟ್ರೋಲ್ ಮಾರುಕಟ್ಟೆಯಲ್ಲಿ ಬಹುತೇಕ ಲಭ್ಯವಿಲ್ಲ.

ಭಾರತ ಸರ್ಕಾರವು ನಿಗದಿಪಡಿಸಿಕೊಂಡಿದ್ದ ಕಾಲಮಿತಿಗಿಂತ ಮುಂಚಿತವಾಗಿಯೇ (ನವೆಂಬರ್ 2025 ರಲ್ಲೇ) ದೇಶಾದ್ಯಂತ 20% ಎಥೆನಾಲ್ ಮಿಶ್ರಣ ಮಾಡುವ ಮೈಲಿಗಲ್ಲನ್ನು ಯಶಸ್ವಿಯಾಗಿ ತಲುಪಿದೆ. ಸರ್ಕಾರವು ಮುಂಬರುವ ವರ್ಷಗಳಲ್ಲಿ ಎಥೆನಾಲ್ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಿ E22 ಮತ್ತು E30 ಇಂಧನಗಳನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ಏಪ್ರಿಲ್ 2023ರ ನಂತರ ಬಿಡುಗಡೆಯಾದ ಬಹುತೇಕ ಎಲ್ಲಾ ಕಾರು ಮತ್ತು ಬೈಕ್‌ಗಳು E20 ಇಂಧನಕ್ಕೆ ಹೊಂದಿಕೊಳ್ಳುವಂತೆ ಸಿದ್ಧಪಡಿಸಲಾಗಿರುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಳಿಗೆ ಉದ್ಘಾಟಿಸಿದ ರಚಿತಾ ರಾಮ್, ನಟಿಯ ನೋಡಲು ಜನಸಂದಣಿ – Kannada News | Rachita Ram inaugurated a saree shop watch video

ನಟಿ ರಚಿತಾ ರಾಮ್ (Rachita Ram), ಕನ್ನಡದ ಖ್ಯಾತ ನಟಿ, ರಚಿತಾ ರಾಮ್ ಸಾಮಾನ್ಯವಾಗಿ ಸೀರೆಯಲ್ಲಿಯೇ ಕಾಣಿಸಿಕೊಳ್ಳುವುದು ಹೆಚ್ಚು. ‘ಸೀರೆಲಿ ಹುಡುಗೀರ ನೋಡಲೆ ಬಾರದು’ ಹಾಡು ರಚಿತಾ ರಾಮ್ ಅವರದ್ದೇ. ರಚಿತಾ ರಾಮ್ ಇತ್ತೀಚೆಗೆ ಬೆಂಗಳೂರಿನಲ್ಲಿ ಸೀರೆಗಳ ಖಾಸಗಿ ಮಳಿಗೆಯೊಂದನ್ನು ಉದ್ಘಾಟನೆ ಮಾಡಿದರು. ಈ ವೇಳೆ ಸೀರೆಗಳ ಬಗ್ಗೆ ತಮಗಿರುವ ಪ್ರೀತಿಯ ಬಗ್ಗೆಯೂ ಮಾತನಾಡಿದರು. ಆರ್​​ಆರ್​​ ನಗರದಲ್ಲಿ ಮಳಿಗೆ ಉದ್ಘಾಟನೆಯನ್ನು ರಚಿತಾ ರಾಮ್ ಮಾಡಿದರು. ಈ ವೇಳೆ ನಟಿಯನ್ನು ನೋಡಲು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ವಿಡಿಯೋ ಇಲ್ಲಿದೆ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಗ್ಗೆ ತಪ್ಪು ಕಲ್ಪನೆಗಳು; ಸರ್ಕಾರ ಒಂದೊಂದಕ್ಕೂ ನೀಡಿದ ಉತ್ತರ ಇಲ್ಲಿದೆ – Kannada News | India’s Ethanol blended fuel program, govt firefights misconceptions

ಎಥನಾಲ್ ಮಿಶ್ರಿತ ಇಂಧನImage Credit source: Getty Images

ನವದೆಹಲಿ, ಜುಲೈ 3: ಭಾರತ ಸರ್ಕಾರವು ಪರಿಸರ ಸಂರಕ್ಷಣೆ ಮತ್ತು ಇಂಧನ ಸ್ವಾವಲಂಬನೆಗೆ ಮುನ್ನಡಿ ಬರೆಯುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ‘ಎಥೆನಾಲ್ ಮಿಶ್ರಿತ ಪೆಟ್ರೋಲ್’ (EBP) ಕಾರ್ಯಕ್ರಮವು ಮೈಲಿಗಲ್ಲನ್ನು ಸಾಧಿಸಿದೆ. ನಿಗದಿಪಡಿಸಿದ್ದ ಗಡುವುಗಿಂತ ಮುಂಚಿತವಾಗಿಯೇ, ಅಂದರೆ ಡಿಸೆಂಬರ್ 2025 ರಲ್ಲೇ ದೇಶದಾದ್ಯಂತ ಶೇಕಡಾ 20 ರಷ್ಟು (E20) ಎಥೆನಾಲ್ ಮಿಶ್ರಣದ ಗುರಿಯನ್ನು ಯಶಸ್ವಿಯಾಗಿ ತಲುಪಲಾಗಿದೆ. 2013-14ರಲ್ಲಿ ಕೇವಲ ಶೇ. 1.5 ರಷ್ಟಿದ್ದ ಈ ಪ್ರಮಾಣವು ಪ್ರಸ್ತುತ ಶೇ. 20 ಕ್ಕೆ ಏರಿಕೆಯಾಗಿದ್ದು, ಭಾರತದ ಇಂಧನ ವಲಯದಲ್ಲಿ ಇದೊಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ.

ರೈತರಿಗೆ ಮತ್ತು ದೇಶಕ್ಕೆ ಸಿಕ್ಕ ಅಭೂತಪೂರ್ವ ಲಾಭಗಳು

2014-15 ರಿಂದ ಮೇ 2026 ರವರೆಗಿನ ಅವಧಿಯಲ್ಲಿ ಈ ಯೋಜನೆಯು ದೇಶದ ಆರ್ಥಿಕತೆ ಮತ್ತು ಕೃಷಿ ವಲಯಕ್ಕೆ ಭಾರಿ ಕೊಡುಗೆ ನೀಡಿದೆ:

  • ದೇಶಕ್ಕೆ ಬರೋಬ್ಬರಿ ₹1.90 ಲಕ್ಷ ಕೋಟಿಗೂ ಅಧಿಕ ವಿದೇಶಿ ವಿನಿಮಯ (Foreign Exchange) ಉಳಿತಾಯವಾಗಿದೆ.
  • ಕೃಷಿಕರಿಗೆ ₹1.60 lakh ಕೋಟಿಗೂ ಹೆಚ್ಚಿನ ಮೊತ್ತವನ್ನು ನೇರವಾಗಿ ಪಾವತಿಸಲಾಗಿದೆ.
  • ಸುಮಾರು 930 ಲಕ್ಷ ಮೆಟ್ರಿಕ್ ಟನ್ ಇಂಗಾಲದ ಡೈಆಕ್ಸೈಡ್ ($CO_2$) ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಮೂಲಕ ಪರಿಸರ ಮಾಲಿನ್ಯಕ್ಕೆ ಬ್ರೇಕ್ ಹಾಕಲಾಗಿದೆ.
  • 310 ಲಕ್ಷ ಮೆಟ್ರಿಕ್ ಟನ್‌ಗೂ ಹೆಚ್ಚು ಕಚ್ಚಾ ತೈಲದ ಆಮದನ್ನು ಮೌಲ್ಯೀಕರಿಸಲಾಗಿದೆ.

ಇದನ್ನೂ ಓದಿ: ವಿಕಸಿತ ಭಾರತ ಉದ್ಯೋಗ ಖಾತ್ರಿ ಯೋಜನೆ ವಿಬಿ-ಜಿ-ರಾಮ್-ಜಿಗೆ ನೊಂದಣಿ ಹೇಗೆ? ಕೆಲಸ ಸಿಗದಿದ್ದರೆ ಎಷ್ಟು ಭತ್ಯೆ?

ಸಾಮಾಜಿಕ ಜಾಲತಾಣಗಳ ವದಂತಿಗಳಿಗೆ ಸರ್ಕಾರದ ಸ್ಪಷ್ಟನೆ

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ E20 ಇಂಧನ ಬಳಕೆಯಿಂದ ವಾಹನಗಳ ಮೈಲೇಜ್ ಕಡಿಮೆಯಾಗುತ್ತದೆ, ಎಂಜಿನ್ ತುಕ್ಕು ಹಿಡಿಯುತ್ತದೆ ಮತ್ತು ಇಂಧನ ಟ್ಯಾಂಕ್‌ಗೆ ಇರುವೆಗಳು ಆಕರ್ಷಿತವಾಗುತ್ತವೆ ಎಂಬ ತಪ್ಪು ಮಾಹಿತಿ ಹರಡುತ್ತಿರುವುದಕ್ಕೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ವೈಜ್ಞಾನಿಕ ಪುರಾವೆಗಳೊಂದಿಗೆ ಸ್ಪಷ್ಟನೆ ನೀಡಿದೆ.

ಇರುವೆಗಳ ಹಾವಳಿ ಎನ್ನುವುದು ಬರೀ ವದಂತಿ

ಎಥೆನಾಲ್ ಉತ್ಪಾದನಾ ಪ್ರಕ್ರಿಯೆಯಲ್ಲಿ ಸಕ್ಕರೆಯಂಶವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುತ್ತದೆ. ಇದರಲ್ಲಿ ಕೀಟ ನಿವಾರಕ ಗುಣಗಳಿರುವುದರಿಂದ ಇರುವೆಗಳು ಆಕರ್ಷಿತವಾಗಲು ಯಾವುದೇ ವೈಜ್ಞಾನಿಕ ಆಧಾರವಿಲ್ಲ.

ಮೈಲೇಜ್ ಮತ್ತು ಎಂಜಿನ್ ಸಾಮರ್ಥ್ಯ ಕುಂದುವುದಿಲ್ಲ

ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ನಡೆಸಿರುವ ತೀವ್ರತರದ ಪರೀಕ್ಷೆಗಳ ಪ್ರಕಾರ, E20 ಇಂಧನವು ವಾಹನಗಳಿಗೆ ಉತ್ತಮ ವೇಗವರ್ಧನೆ (Acceleration) ನೀಡುವುದಲ್ಲದೆ ಶೇ. 30 ರಿಂದ 50 ರಷ್ಟು ಮಾಲಿನ್ಯವನ್ನು ಕಡಿಮೆ ಮಾಡುತ್ತದೆ. ವಾಹನಗಳ ಮೈಲೇಜ್ ಕೇವಲ ಇಂಧನದ ಮೇಲಷ್ಟೇ ಅಲ್ಲದೆ, ಚಾಲನಾ ಶೈಲಿ ಮತ್ತು ವಾಹನದ ನಿರ್ವಹಣೆಯ ಮೇಲೆ ನಿರ್ಧಾರವಾಗುತ್ತದೆ. ಜೊತೆಗೆ, E20 ಬಳಕೆಯಿಂದ ವಾಹನಗಳ ವಾರಂಟಿ ಅಥವಾ ಇನ್ಶೂರೆನ್ಸ್ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು SIAM ಮತ್ತು ವಿಮಾ ಕಂಪನಿಗಳು ಸ್ಪಷ್ಟಪಡಿಸಿವೆ.

ಇದನ್ನೂ ಓದಿ: ಮೆಷೀನ್​ಗಿಂತ ಮನುಷ್ಯರೇ ವಾಸಿ; ಎಐ ಕಾರಣ ನೀಡಿ ಮನೆಗೆ ಕಳುಹಿಸಿದ್ದ ಉದ್ಯೋಗಿಗಳನ್ನು ವಾಪಸ್ ಕರೆಸಿಕೊಂಡ ದೊಡ್ಡ ಕಂಪನಿಗಳು

ನೀರಿನ ಅತಿಯಾದ ಬಳಕೆ ಇಲ್ಲ

ಎಥೆನಾಲ್ ತಯಾರಿಕೆಗೆ ಕೇವಲ ಹೆಚ್ಚುವರಿ (Surplus) ಆಹಾರ ಧಾನ್ಯ ಹಾಗೂ ಕಬ್ಬನ್ನು ಮಾತ್ರ ಬಳಸಲಾಗುತ್ತಿದ್ದು, ಇದಕ್ಕಾಗಿ ಪ್ರತ್ಯೇಕವಾಗಿ ಕೃಷಿ ಮಾಡದ ಕಾರಣ ಭೂಗರ್ಭದ ನೀರಿನ ಸವಕಳಿ ವದಂತಿಯೂ ಸುಳ್ಳಾಗಿದೆ. ಪ್ರಸ್ತುತ ಕಡಿಮೆ ನೀರು ಬೇಡುವ ಮುಸುಕಿನ ಜೋಳದಿಂದಲೂ (Maize) ಶೇ. 40 ಕ್ಕೂ ಹೆಚ್ಚು ಎಥೆನಾಲ್ ತಯಾರಿಸಲಾಗುತ್ತಿದೆ.

ವಿಶ್ವದ ಪ್ರಮುಖ ಆರ್ಥಿಕತೆಗಳಾದ ಅಮೆರಿಕ (E10/E15) ಮತ್ತು ಬ್ರೇಜಿಲ್ (E27) ದೇಶಗಳ ಮಾದರಿಯಲ್ಲೇ ಭಾರತವೂ ಈ ಪರಿಸರಸ್ನೇಹಿ ಇಂಧನ ನೀತಿಯನ್ನು ಅಳವಡಿಸಿಕೊಂಡಿದ್ದು, ಸಾರ್ವಜನಿಕರು ಯಾವುದೇ ಸುಳ್ಳು ಸುದ್ದಿಗೆ ಕಿವಿಗೊಡಬಾರದು ಎಂದು ಸರ್ಕಾರ ಮನವಿ ಮಾಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮತ್ತೆ ಮತ್ತೆ ಮುಗ್ಗರಿಸಿದರೂ ಬುದ್ಧಿ ಕಲಿಯದ ಆಲಿಯಾ ಭಟ್ – Kannada News | Alia Bhatt not learning from her past mistakes

ಆಲಿಯಾ ಭಟ್ (Alia Bhatt), ಬಾಲಿವುಡ್​​ನ ಟಾಪ್ ನಟಿ. ಅದ್ಭುತ ನಟಿ ಆಗಿರುವ ಜೊತೆಗೆ ಬಳುಕುವ ಸುಂದರಿ ಸಹ. ಆಲಿಯಾ ಭಟ್, ಬಾಲಿವುಡ್​​ನ ಕೆಲವೇ ಕೆಲವು ಪ್ರತಿಭಾವಂತ ನಟಿಯರಲ್ಲಿ ಒಬ್ಬರು. ನಟನೆಗೆ ರಾಷ್ಟ್ರಪ್ರಶಸ್ತಿ ಸಹ ಪಡೆದುಕೊಂಡಿದ್ದಾರೆ. ಮೊದಲೆಲ್ಲ ಪಾತ್ರಗಳ ಆಯ್ಕೆ ಬಗ್ಗೆ ಹೆಚ್ಚೇನೂ ತಲೆ ಕೆಡಿಸಿಕೊಳ್ಳದಿದ್ದ ಆಲಿಯಾ ಭಟ್ ಮದುವೆಯಾದ ಬಳಿಕ ಕೆಲವು ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಆದರೆ ಪದೇ ಪದೇ ಮುಗ್ಗರಿಸಿ ಬೀಳುತ್ತಿದ್ದಾರೆ. ಹಾಗಿದ್ದರೂ ಸಹ ಬುದ್ಧಿ ಕಲಿಯುತ್ತಿಲ್ಲ. ಇದೇ ಅವರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ಸಪೂರ ಸುಂದರಿ, ಒಳ್ಳೆಯ ನಟಿ ಆಗಿರುವ ಆಲಿಯಾ ಭಟ್, ‘ಪಕ್ಕದ ಮನೆ ಹುಡುಗಿ’ ಪಾತ್ರಕ್ಕೆ ಬಲು ಒಪ್ಪವಾಗಿ ಒಪ್ಪುವ ದೇಹಭಾಷೆ, ಮುಖಚಹರೆ ಇರುವ ನಟಿ ಆದರೆ ಆಲಿಯಾ ತಮ್ಮನ್ನು ತಾವು ಆಕ್ಷನ್ ಕ್ವೀನ್ ಎಂದು ಬಾಲಿವುಡ್​​ನಲ್ಲಿ ತಮ್ಮನ್ನು ತಾವು ಸ್ಥಾಪಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ಅವರ ಈ ಪ್ರಯೋಗ ಪದೇ ಪದೇ ಫೇಲ್ ಆಗುತ್ತಿದೆ. ಆದರೂ ಸಹ ಹಿಂದಿನ ಸೋಲುಗಳಿಂದ ಬುದ್ಧಿ ಕಲಿಯದೆ ಮತ್ತೆ ಮತ್ತೆ ಅದೇ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಮತ್ತೆ ಮತ್ತೆ ಸೋಲುತ್ತಲೇ ಇದ್ದಾರೆ.

ಆಲಿಯಾ ಭಟ್​​ಗೆ ಆಕ್ಷನ್ ನಾಯಕಿ ಆಗುವ ಹುಚ್ಚು ಹತ್ತಿದ್ದು ಹಾಲಿವುಡ್ ಸಿನಿಮಾದಿಂದ. ಅವರು 2023 ರಲಗಲಿ ‘ಹಾರ್ಟ್ ಆಫ್ ಸ್ಟೋನ್’ ಹೆಸರಿನ ಹಾಲಿವುಡ್ ಸಿನಿಮಾನಲ್ಲಿ ಗಲ್ ಗಡೋಟ್ ಜೊತೆಗೆ ನಟಿಸಿದ್ದರು. ಆ ಸಿನಿಮಾನಲ್ಲಿ ಆಲಿಯಾ ಆಕ್ಷನ್ ದೃಶ್ಯಗಳಲ್ಲಿ ನಟಿಸಿದ್ದರು. ಆದರೆ ಆ ಸಿನಿಮಾ ಫ್ಲಾಪ್ ಆಯ್ತು. ಅಲ್ಲಿಗೆ ಸುಮ್ಮನಾಗದ ಆಲಿಯಾ ಭಟ್, 2024 ರಲ್ಲಿ ‘ಜಿಗ್ರಾ’ ಹೆಸರಿನ ಸಿನಿಮಾಣಲ್ಲಿ ನಟಿಸಿದರು. ಆ ಸಿನಿಮಾ ಸಹ ಆಕ್ಷನ್ ಸಿನಿಮಾ. ಆದರೆ ಪುಟ್ಟ ಗುಬ್ಬಿಯಂಥಹಾ ಆಲಿಯಾ ಭಟ್, ಆಕ್ಷನ್ ಮಾಡುವುದನ್ನು ಜನ ಒಪ್ಪಿಕೊಳ್ಳಲಿಲ್ಲ. ‘ಜಿಗ್ರಾ’ ಬಾಕ್ಸ್ ಆಫೀಸ್​​ನಲ್ಲಿ ಹೀನಾಯವಾಗಿ ಸೋತಿತು.

ಇದನ್ನೂ ಓದಿ:‘ಇಷ್ಟು ಕೆಟ್ಟ ಸಿನಿಮಾ ನೋಡಿಲ್ಲ’; ‘ಆಲ್ಫಾ’ ನೋಡಿ ನೇರ ವಿಮರ್ಶೆ ತಿಳಿಸಿದ ಫ್ಯಾನ್ಸ್

ಆದರೆ ಆ ಸೋಲಿನಿಂದಲೂ ಬುದ್ಧಿ ಕಲಿಯದ ಆಲಿಯಾ ಭಟ್ ಮತ್ತೊಂದು ಆಕ್ಷನ್ ಸಿನಿಮಾ ‘ಆಲ್ಫಾ’ನಲ್ಲಿ ನಟಿಸಿದ್ದಾರೆ. ಯಶ್ ರಾಜ್ ಫಿಲಮ್ಸ್ ನಿರ್ಮಿಸಿರುವ ಈ ಸ್ಪೈ ಆಕ್ಷನ್ ಸಿನಿಮಾನಲ್ಲಿ ಆಲಿಯಾ ಭಟ್ ನಾಯಕಿ. ಈ ಸಿನಿಮಾ ಮೊದಲ ದಿನವೇ ನಕಾರಾತ್ಮಕ ವಿಮರ್ಶೆಗಳನ್ನು ಪಡೆದುಕೊಂಡಿದೆ. ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಸೋಲುವುದು ಪಕ್ಕಾ ಎನ್ನಲಾಗುತ್ತಿದೆ. ಏನೇ ಆಗಲಿ, ಆಲಿಯಾ ತಮ್ಮ ಸೋಲಿನಿಂದ ಬುದ್ಧಿಕಲಿಯುತ್ತಿಲ್ಲ ಎಂಬುದೇ ಅವರ ಅಭಿಮಾನಿಗಳ ಬೇಸರ. ಅಂದಹಾಗೆ ‘ಆಲ್ಫಾ’ ಬಳಿಕ ಅವರು ತಮ್ಮ ಪತಿ ರಣ್​​ಬೀರ್ ಕಪೂರ್ ಅವರೊಟ್ಟಿಗೆ ‘ಲವ್ ಆಂಡ್ ವಾರ್’ ಸಿನಿಮಾನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾದ ಎರಡನೇ ಭಾಗದಲ್ಲೂ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 7:14 pm, Fri, 3 July 26

Source link

ಮತ್ತೆ ಮತ್ತೆ ಮುಗ್ಗರಿಸಿದರೂ ಬುದ್ಧಿಕಲಿಯದ ಆಲಿಯಾ ಭಟ್ – Kannada News | Alia Bhatt not learning from her past mistakes

ಆಲಿಯಾ ಭಟ್ (Alia Bhatt), ಬಾಲಿವುಡ್​​ನ ಟಾಪ್ ನಟಿ. ಅದ್ಭುತ ನಟಿ ಆಗಿರುವ ಜೊತೆಗೆ ಬಳುಕುವ ಸುಂದರಿ ಸಹ. ಆಲಿಯಾ ಭಟ್, ಬಾಲಿವುಡ್​​ನ ಕೆಲವೇ ಕೆಲವು ಪ್ರತಿಭಾವಂತ ನಟಿಯರಲ್ಲಿ ಒಬ್ಬರು. ನಟನೆಗೆ ರಾಷ್ಟ್ರಪ್ರಶಸ್ತಿ ಸಹ ಪಡೆದುಕೊಂಡಿದ್ದಾರೆ. ಮೊದಲೆಲ್ಲ ಪಾತ್ರಗಳ ಆಯ್ಕೆ ಬಗ್ಗೆ ಹೆಚ್ಚೇನೂ ತಲೆ ಕೆಡಿಸಿಕೊಳ್ಳದಿದ್ದ ಆಲಿಯಾ ಭಟ್ ಮದುವೆಯಾದ ಬಳಿಕ ಕೆಲವು ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಆದರೆ ಪದೇ ಪದೇ ಮುಗ್ಗರಿಸಿ ಬೀಳುತ್ತಿದ್ದಾರೆ. ಹಾಗಿದ್ದರೂ ಸಹ ಬುದ್ಧಿ ಕಲಿಯುತ್ತಿಲ್ಲ. ಇದೇ ಅವರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ಸಪೂರ ಸುಂದರಿ, ಒಳ್ಳೆಯ ನಟಿ ಆಗಿರುವ ಆಲಿಯಾ ಭಟ್, ‘ಪಕ್ಕದ ಮನೆ ಹುಡುಗಿ’ ಪಾತ್ರಕ್ಕೆ ಬಲು ಒಪ್ಪವಾಗಿ ಒಪ್ಪುವ ದೇಹಭಾಷೆ, ಮುಖಚಹರೆ ಇರುವ ನಟಿ ಆದರೆ ಆಲಿಯಾ ತಮ್ಮನ್ನು ತಾವು ಆಕ್ಷನ್ ಕ್ವೀನ್ ಎಂದು ಬಾಲಿವುಡ್​​ನಲ್ಲಿ ತಮ್ಮನ್ನು ತಾವು ಸ್ಥಾಪಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ಅವರ ಈ ಪ್ರಯೋಗ ಪದೇ ಪದೇ ಫೇಲ್ ಆಗುತ್ತಿದೆ. ಆದರೂ ಸಹ ಹಿಂದಿನ ಸೋಲುಗಳಿಂದ ಬುದ್ಧಿ ಕಲಿಯದೆ ಮತ್ತೆ ಮತ್ತೆ ಅದೇ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಮತ್ತೆ ಮತ್ತೆ ಸೋಲುತ್ತಲೇ ಇದ್ದಾರೆ.

ಆಲಿಯಾ ಭಟ್​​ಗೆ ಆಕ್ಷನ್ ನಾಯಕಿ ಆಗುವ ಹುಚ್ಚು ಹತ್ತಿದ್ದು ಹಾಲಿವುಡ್ ಸಿನಿಮಾದಿಂದ. ಅವರು 2023 ರಲಗಲಿ ‘ಹಾರ್ಟ್ ಆಫ್ ಸ್ಟೋನ್’ ಹೆಸರಿನ ಹಾಲಿವುಡ್ ಸಿನಿಮಾನಲ್ಲಿ ಗಲ್ ಗಡೋಟ್ ಜೊತೆಗೆ ನಟಿಸಿದ್ದರು. ಆ ಸಿನಿಮಾನಲ್ಲಿ ಆಲಿಯಾ ಆಕ್ಷನ್ ದೃಶ್ಯಗಳಲ್ಲಿ ನಟಿಸಿದ್ದರು. ಆದರೆ ಆ ಸಿನಿಮಾ ಫ್ಲಾಪ್ ಆಯ್ತು. ಅಲ್ಲಿಗೆ ಸುಮ್ಮನಾಗದ ಆಲಿಯಾ ಭಟ್, 2024 ರಲ್ಲಿ ‘ಜಿಗ್ರಾ’ ಹೆಸರಿನ ಸಿನಿಮಾಣಲ್ಲಿ ನಟಿಸಿದರು. ಆ ಸಿನಿಮಾ ಸಹ ಆಕ್ಷನ್ ಸಿನಿಮಾ. ಆದರೆ ಪುಟ್ಟ ಗುಬ್ಬಿಯಂಥಹಾ ಆಲಿಯಾ ಭಟ್, ಆಕ್ಷನ್ ಮಾಡುವುದನ್ನು ಜನ ಒಪ್ಪಿಕೊಳ್ಳಲಿಲ್ಲ. ‘ಜಿಗ್ರಾ’ ಬಾಕ್ಸ್ ಆಫೀಸ್​​ನಲ್ಲಿ ಹೀನಾಯವಾಗಿ ಸೋತಿತು.

ಇದನ್ನೂ ಓದಿ:‘ಇಷ್ಟು ಕೆಟ್ಟ ಸಿನಿಮಾ ನೋಡಿಲ್ಲ’; ‘ಆಲ್ಫಾ’ ನೋಡಿ ನೇರ ವಿಮರ್ಶೆ ತಿಳಿಸಿದ ಫ್ಯಾನ್ಸ್

ಆದರೆ ಆ ಸೋಲಿನಿಂದಲೂ ಬುದ್ಧಿ ಕಲಿಯದ ಆಲಿಯಾ ಭಟ್ ಮತ್ತೊಂದು ಆಕ್ಷನ್ ಸಿನಿಮಾ ‘ಆಲ್ಫಾ’ನಲ್ಲಿ ನಟಿಸಿದ್ದಾರೆ. ಯಶ್ ರಾಜ್ ಫಿಲಮ್ಸ್ ನಿರ್ಮಿಸಿರುವ ಈ ಸ್ಪೈ ಆಕ್ಷನ್ ಸಿನಿಮಾನಲ್ಲಿ ಆಲಿಯಾ ಭಟ್ ನಾಯಕಿ. ಈ ಸಿನಿಮಾ ಮೊದಲ ದಿನವೇ ನಕಾರಾತ್ಮಕ ವಿಮರ್ಶೆಗಳನ್ನು ಪಡೆದುಕೊಂಡಿದೆ. ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಸೋಲುವುದು ಪಕ್ಕಾ ಎನ್ನಲಾಗುತ್ತಿದೆ. ಏನೇ ಆಗಲಿ, ಆಲಿಯಾ ತಮ್ಮ ಸೋಲಿನಿಂದ ಬುದ್ಧಿಕಲಿಯುತ್ತಿಲ್ಲ ಎಂಬುದೇ ಅವರ ಅಭಿಮಾನಿಗಳ ಬೇಸರ. ಅಂದಹಾಗೆ ‘ಆಲ್ಫಾ’ ಬಳಿಕ ಅವರು ತಮ್ಮ ಪತಿ ರಣ್​​ಬೀರ್ ಕಪೂರ್ ಅವರೊಟ್ಟಿಗೆ ‘ಲವ್ ಆಂಡ್ ವಾರ್’ ಸಿನಿಮಾನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾದ ಎರಡನೇ ಭಾಗದಲ್ಲೂ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸರ್ಕಾರದ ಕ್ರಮಕ್ಕೆ ಕಂಗಾಲಾದ ವಯೋವೃದ್ಧ ಪಿಂಚಣಿದಾರರು: ಕಚೇರಿಗೆ ಅಲೆದಾಟ

ಹುಬ್ಬಳ್ಳಿ, ಜುಲೈ 03: ರಾಜ್ಯ ಸರ್ಕಾರ ಕೇಂದ್ರದ ಸಹಕಾರದೊಂದಿಗೆ ಸಾಮಾಜಿಕ ಭದ್ರತೆಯಡಿ ಪಿಂಚಣಿಗಳನ್ನು ನೀಡುತ್ತದೆ. 60 ವರ್ಷ ವಯಸ್ಸಾದವರು, ವಿಧವೆಯರು ಸೇರಿದಂತೆ ಅನೇಕರಿಗೆ ಮಾಸಿಕ ಪಿಂಚಣಿ ನೀಡುತ್ತದೆ. ಆದರೆ ಗ್ಯಾರಂಟಿ ಯೋಜನೆಗಳ ಅನರ್ಹ ಫಲಾನುಭವಿಗಳನ್ನು ತೆಗೆದುಹಾಕಲು ಪರಿಷ್ಕರಣೆ ಜೊತೆಗೆ ಇದೀಗ ಪಿಂಚಣಿ ಫಲಾನುಭವಿಗಳ ಪರಿಷ್ಕರಣೆ (Pension Revision) ಕೂಡ ಮಾಡಲಾಗುತ್ತಿದೆ. ಪಿಂಚಣಿ ಪಡೆಯುತ್ತಿರುವರಲ್ಲಿ ಶಂಕಾಸ್ಪದ ಪಿಂಚಣಿ ಫಲಾನುಭವಿಗಳಿಗೆ ಕಳೆದ ಕೆಲ ತಿಂಗಳಿಂದ ಪಿಂಚಣಿ ಹಾಕಿಲ್ಲ. ಇದೀಗ ಅವರು ಹೊಸದಾಗಿ ದಾಖಲಾತಿಗಳನ್ನು ನೀಡಬೇಕು. ಇದಕ್ಕಾಗಿ ವೃದ್ದರು ತಹಶೀಲ್ದಾರ್ ಕಚೇರಿಯಲ್ಲಿ ಗಂಟೆಗಟ್ಟಲೇ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.

23 ಲಕ್ಷ ಶಂಕಾಸ್ಪದ ಪಿಂಚಣಿದಾರರು ಪತ್ತೆ

ಪಿಂಚಣಿ ಫಲಾನುಭವಿಗಳು ಹುಬ್ಬಳ್ಳಿ ನಗರದ ತಹಶೀಲ್ದಾರ್ ಕಚೇರಿಗೆ ಬೆಳಿಗ್ಗೆ ಬಂದು ಸರದಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ಕೇಳುತ್ತಿರುವ ದಾಖಲಾತಿಗಳನ್ನು ನೀಡಲು ಪರದಾಡುತ್ತಿದ್ದಾರೆ. ರಾಜ್ಯದಲ್ಲಿ ಸರಿಸುಮಾರು 83 ಲಕ್ಷ ಪಿಂಚಣಿದಾರರು ಪಿಂಚಣಿ ಫಲಾನುಭವಿಗಳಿದ್ದಾರೆ. ಆದರೆ ಅದರಲ್ಲಿ ಸರಿಸುಮಾರು 23 ಲಕ್ಷ ಶಂಕಾಸ್ಪದ ಪಿಂಚಣಿದಾರರಿರುವುದು ಗೊತ್ತಾಗಿದೆ. ಶಂಕಾಸ್ಪದ ಪಿಂಚಣಿದಾರರ ಖಾತೆಗೆ ಕಳೆದ ಕೆಲ ತಿಂಗಳಿಂದ ಪಿಂಚಣಿ ಹಣ ಜಮೆಯಾಗಿಲ್ಲ.

ಈ ತಿಂಗಳು ಬರುತ್ತೆ, ಮುಂದಿನ ತಿಂಗಳು ಬರುತ್ತೆ ಅಂತ ಕಾದಿದ್ದ ಫಲಾನುಭವಿಗಳಿಗೆ ಹಣ ಬಾರದಿದ್ದಾಗ ವಿಚಾರಿಸಿದಾಗ ಹೊಸದಾಗಿ ದಾಖಲಾತಿಗಳನ್ನು ನೀಡಬೇಕು ಎಂಬುವುದು ಗೊತ್ತಾಗಿದೆ. ಹೀಗಾಗಿ ಅನೇಕ ವೃದ್ದರು, ಹೊಸದಾಗಿ ದಾಖಲಾತಿಗಳನ್ನು ಹೊಂದಿಸಿ ನೀಡಲು ಪರದಾಡುತ್ತಿದ್ದಾರೆ. ಇದೀಗ ಹೊಸದಾಗಿ ಇವರೆಲ್ಲ, ತಮ್ಮ ಆದಾಯ ಪ್ರಮಾಣ ಪತ್ರ, ಬಿಪಿಎಲ್ ಕಾರ್ಡ್ ಸೇರಿದಂತೆ ಅನೇಕ ದಾಖಲಾತಿಗಳನ್ನು ನೀಡಬೇಕಾಗಿದೆ. ಅವರ ದಾಖಲಾತಿಗಳನ್ನು ಪರಿಶೀಲನೆ ನಡೆಸಲಿರುವ ಅಧಿಕಾರಿಗಳು ಅವರು ಅರ್ಹರಿದ್ದರೆ ಅವರಿಗೆ ಪಿಂಚಣಿ ನೀಡಲು ಶಿಪಾರಸ್ಸು ಮಾಡಲಿದ್ದಾರೆ.

ಇದನ್ನೂ ಓದಿ: ಗೃಹಜ್ಯೋತಿ ಮರು ಪರಿಶೀಲನೆ: ಜಾತಿ ಪ್ರಮಾಣಪತ್ರ ಗೊಂದಲದ ಬಗ್ಗೆ ಸ್ಪಷ್ಟನೆ ನಿಡಿದ ಬೆಸ್ಕಾಂ

ಇನ್ನು ಈ ಮೊದಲು ಪ್ರತಿ ಫಲಾನುಭವಿಗೂ ಪಿಂಚಣಿ ಬರುತಿತ್ತು. ಆದರೆ ಅನೇಕರು ಅನರ್ಹ ಫಲಾನುಭವಿಗಳಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಸರ್ಕಾರ, ಸರಿಸುಮಾರು 23 ಲಕ್ಷದಷ್ಟು ಶಂಕಾಸ್ಪದ ಪಿಂಚಣಿದಾರರು ಇರುವುದನ್ನು ಪತ್ತೆ ಮಾಡಿದೆ. ಅನೇಕ ಪಿಂಚಣಿದಾರರು, ಪ್ರತಿವರ್ಷ ತಾವು ಜೀವಂತ ಇರುವ ಪ್ರಮಾಣಪತ್ರವನ್ನು ನೀಡಬೇಕು, ಆದರೆ ಬಹುತೇಕರು ನೀಡಿಲ್ಲ. ಇನ್ನು ಅನೇಕರು ಅನೇಕ ತಿಂಗಳ ಪಿಂಚಣಿಯನ್ನು ಡ್ರಾ ಮಾಡಿಲ್ಲ. ಅಂತವರ ಖಾತೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.

ಅರ್ಹರಿದ್ದರು ನಮ್ಮನ್ನ ಕೈಬಿಡಲಾಗಿದೆ ಎಂದ ಪಿಂಚಣಿದಾರರು 

ಇನ್ನು ಕೆಲವರು ಬಿಪಿಎಲ್ ಕಾರ್ಡ್​ನಿಂದ ಎಪಿಎಲ್ ಕಾರ್ಡ್​ಗೆ ಮೇಲ್ದರ್ಜೆಗೆ ಏರಿದ್ದಾರೆ. ಅಂತವರಿಗೆ ಪಿಂಚಣಿ ಹಣ ಜಮೆಯಾಗಿಲ್ಲ. ಕೆಲವರ ವರಮಾನ ಹೆಚ್ಚಾಗಿದ್ದು, ಅವರ ಮಕ್ಕಳು, ಮೊಮ್ಮಕ್ಕಳು ದ್ವಿಚಕ್ರ ವಾಹನ, ನಾಲ್ಕು ಚಕ್ರದ ವಾಹನ ಖರೀದಿ ಮಾಡಿರುವುದು ಪರಿಶೀಲನೆ ವೇಳೆ ಗೊತ್ತಾಗಿದೆ. ಅಂತವರ ಪಿಂಚಣಿಯನ್ನು ಕೂಡ ಶಂಕಾಸ್ಪದ ಪಿಂಚಣಿದಾರರ ಗುಂಪಿಗೆ ಸೇರಿಸಲಾಗಿದೆ. ಇನ್ನು ಕೆಲವರು ಐಟಿ ಫೈಲ್ ಮಾಡಿದ್ದಾರೆ. ಕುಂಟುಂಬ ತಂತ್ರಾಶದಲ್ಲಿ ಅನೇಕ ಪಿಂಚಣಿದಾರರು ವರಮಾನ ಸೇರಿದಂತೆ ವಾಹನಗಳ ಖರೀದಿ ಮಾಡಿದ್ದು ಗೊತ್ತಾಗಿದ್ದು, ಅವರ ಖಾತೆಗಳನ್ನು ಶಂಕಾಸ್ಪದ ಖಾತೆಗಳು ಅಂತ ಪರಿಗಣಿಸಿ ಅವರ ಖಾತೆಗೆ ಹಣ ಹಾಕೋದನ್ನು ನಿಲ್ಲಿಸಿದೆ. ಇದೀಗ ಇವರು ಹೊಸದಾಗಿ ದಾಖಲಾತಿಗಳನ್ನು ನೀಡಿ, ತಾವು ಪಿಂಚಣಿ ಪಡೆಯಲು ಅರ್ಹರು ಅನ್ನೋದನ್ನು ಸಾಬೀತು ಮಾಡಬೇಕಿದೆ. ಅಂದಾಗ ಮಾತ್ರ ಪಿಂಚಣಿ ಮರು ಜಾರಿಯಾಗುತ್ತದೆ. ಇನ್ನು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳ ಅನ್ವಯ ಹೊಸದಾಗಿ ದಾಖಲಾತಿಗಳನ್ನು ನೀಡಲು ವಯೋವೃದ್ದರು ಪರದಾಡುತ್ತಿದ್ದಾರೆ. ತಾವು ಯೋಜನೆಗೆ ಅರ್ಹರಿದ್ದೇವೆ. ಆದರೂ ನಮ್ಮನ್ನು ಕೈಬಿಡಲಾಗಿದೆ ಅಂತ ಅನೇಕರು ಆಕ್ರೋಶ ಹೊರಹಾಕುತ್ತಿದ್ದಾರೆ.

ಇದನ್ನೂ ಓದಿ: ಶ್ರೀರಂಗಪಟ್ಟಣ ADLR ಭೂ ಹಗರಣ: 200 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿ, 9 ಜನರ ಬಂಧನ

ಅರ್ಹ ಪಿಂಚಣಿದಾರರಿಗೆ ಪಿಂಚಣಿ ಹಣ ಜಮೆಯಾಗುತ್ತಿದೆ. ಆದರೆ ಶಂಕಾಸ್ಪದ ಅಂತ ಗುರುತಿಸಿರುವವರಿಗೆ ಕಳೆದ ಕೆಲ ತಿಂಗಳಿಂದ ಪಿಂಚಣಿ ಹಣ ಬಂದಿಲ್ಲ. ಹೀಗಾಗಿ ಹೊಸದಾಗಿ ದಾಖಲಾತಿಗಳನ್ನು ನೀಡುವುದು ಅನಿವಾರ್ಯವಾಗಿದೆ. ಅನರ್ಹ ಫಲಾನುಭವಿಗಳನ್ನು ತೆಗೆಯುವುದು ಸ್ವಾಗತಾರ್ಹವೇ. ಆದರೆ ವೃದ್ದರು ಗಂಟೆಗಟ್ಟಲೇ ಕಚೇರಿಗಳಲ್ಲಿ ಕ್ಯೂ ನಿಲ್ಲುವುದು ತೊಂದರೆಯಾಗುತ್ತಿದ್ದು, ಇದಕ್ಕೆ ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಕೈಗೊಳ್ಳಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IND vs ENG: 2ನೇ ಟಿ20 ಪಂದ್ಯಕ್ಕೆ ಪ್ಲೇಯಿಂಗ್ 11 ಪ್ರಕಟಿಸಿದ ಇಂಗ್ಲೆಂಡ್‌; ತಂಡದಲ್ಲಿ 2 ಬದಲಾವಣೆ – Kannada News | IND vs ENG 2nd T20: Jofra Archer and Josh Tongue Named in England’s Playing XI

ಭಾರತ ಹಾಗೂ ಇಂಗ್ಲೆಂಡ್‌ (India vs England) ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯ ನಾಳೆ ಅಂದರೆ, ಜುಲೈ 4 ರಂದು ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಎರಡೂ ತಂಡಗಳು ಸರ್ವ ತಯಾರಿ ಮಾಡಿಕೊಂಡಿವೆ. ಏಕೆಂದರೆ ಮೊದಲ ಪಂದ್ಯ ಮಳೆಯಿಂದ ರದ್ದಾದ ಕಾರಣದಿಂದಾಗಿ ಎರಡೂ ತಂಡಗಳಿಗೆ ಗೆಲವಿನ ಖಾತೆ ತೆರೆಯಲು ಈ ಪಂದ್ಯ ಬಹಳ ಮುಖ್ಯವಾಗಿದೆ. ಇನ್ನು ಎಂದಿನಂತೆ ಪಂದ್ಯಕ್ಕೆ ಒಂದು ದಿನ ಮುಂಚಿತವಾಗಿಯೇ ಇಂಗ್ಲೆಂಡ್‌ ತಂಡ ತನ್ನ ಆಡುವ ಹನ್ನೊಂದರ ಬಳಗವನ್ನು ಘೋಷಿಸಿದೆ. ಅಂದರೆ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿರುವ ಎರಡನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್‌ ಪರ ಯಾವೆಲ್ಲ 11 ಆಟಗಾರರು ಕಣಕ್ಕಿಳಿಯಲಿದ್ದಾರೆ ಎಂಬುದು ಖಚಿತವಾಗಿದೆ.

ತಂಡದಲ್ಲಿ 2 ಬದಲಾವಣೆ

ಈ ಮೊದಲೇ ನಿರೀಕ್ಷಿಸಿದಂತೆ ಎರಡನೇ ಟಿ20 ಪಂದ್ಯಕ್ಕೆ ಆತಿಥೇಯ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಎರಡು ಬದಲಾವಣೆಗಳಾಗಿವೆ. ಅದರಂತೆ ಅನುಭವಿ ವೇಗದ ಬೌಲರ್ ಜೋಫ್ರಾ ಆರ್ಚರ್ ತಂಡಕ್ಕೆ ಮರಳಿದ್ದು, ಇವರ ಜೊತೆಗೆ ಜೋಶ್ ಟಂಗ್ ಅವರಿಗೂ ಪ್ಲೇಯಿಂಗ್ 11ನಲ್ಲಿ ಅವಕಾಶ ನೀಡಲಾಗಿದೆ. ಆದರೆ ಮೊದಲ ಟಿ20 ಪಂದ್ಯದಲ್ಲಿ 33 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದಿದ್ದ ಸಾಕಿಬ್ ಮಹಮೂದ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಇನ್ನು ಈ ಪಂದ್ಯಕ್ಕೆ ಆಯ್ಕೆಯಾಗಿರುವ ಜೋಶ್ ಟಂಗ್ ಅವರಿಗೆ ಇದು ಮೊದಲ ಟಿ20 ಅಂತರರಾಷ್ಟ್ರೀಯ ಪಂದ್ಯವಾಗಿರಲಿದೆ.

ವಾಸ್ತವವಾಗಿ ಜೋಫ್ರಾ ಆರ್ಚರ್ ಮತ್ತು ಜೋಶ್ ಟಂಗ್ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಂಡದ ಭಾಗವಾಗಿದ್ದರು. ಆದ್ದರಿಂದ ಇವರಿಬ್ಬರಿಗೆ ಮೊದಲ ಟಿ20 ಪಂದ್ಯದಿಂದ ವಿಶ್ರಾಂತಿ ನೀಡಲಾಗಿತ್ತು. ಇದೀಗ ಇಬ್ಬರೂ ಆಡುವ XI ನಲ್ಲಿ ಸ್ಥಾನ ಪಡೆದಿದ್ದಾರೆ. ಇದನ್ನು ಹೊರತುಪಡಿಸಿ, ಇಂಗ್ಲೆಂಡ್ ತಂಡದಲ್ಲಿ ಬೇರೆ ಯಾವುದೇ ಬದಲಾವಣೆಗಳಿಲ್ಲ. ವಿಲ್ ಜ್ಯಾಕ್ಸ್ ಸೇರಿದಂತೆ ಮೂವರು ಸ್ಪಿನ್ನರ್‌ಗಳು ಈ ಪಂದ್ಯದಲ್ಲಿ ಆಡಲಿದ್ದಾರೆ.

IND vs ENG: ರಾತ್ರಿ 10 ಗಂಟೆಗೆ ಅಲ್ಲ; ಇನ್ನೂ ಬೇಗನೇ ಆರಂಭವಾಗಲಿದೆ 2ನೇ ಟಿ20 ಪಂದ್ಯ

ಎರಡನೇ ಟಿ20 ಪಂದ್ಯಕ್ಕೆ ಇಂಗ್ಲೆಂಡ್ ಪ್ಲೇಯಿಂಗ್ 11: ಫಿಲ್ ಸಾಲ್ಟ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಹ್ಯಾರಿ ಬ್ರೂಕ್ (ನಾಯಕ), ವಿಲ್ ಜ್ಯಾಕ್ಸ್, ಜಾಕೋಬ್ ಬೆಥೆಲ್, ಟಾಮ್ ಬ್ಯಾಂಟನ್, ಸ್ಯಾಮ್ ಕರನ್, ಆದಿಲ್ ರಶೀದ್, ಜೋಫ್ರಾ ಆರ್ಚರ್, ಲಿಯಾಮ್ ಡಾಸನ್, ಜೋಶ್ ಟಂಗ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:55 pm, Fri, 3 July 26

Source link

Exit mobile version