ಎಸ್​ಐಆರ್​ ಪ್ರಕ್ರಿಯೆಯಲ್ಲಿ ಅಕ್ರಮ ಆರೋಪ: ಮತ್ತೊಂದು ವಿಡಿಯೋ ರಿಲೀಸ್​​ ಮಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ – Kannada News | HD Kumaraswamy Releases Another Video Alleges Voter List ‘SIR’ Irregularities in Yashwantpur Constituency

ಮತ್ತೊಂದು ವಿಡಿಯೋ ರಿಲೀಸ್​​ ಮಾಡಿದ ಕೇಂದ್ರ ಸಚಿವ ಕುಮಾರಸ್ವಾಮಿImage Credit source: Tv9 Kannada

ಬೆಂಗಳೂರು, ಜುಲೈ 03: ಎಸ್​ಐಆರ್​ ಪ್ರಕ್ರಿಯೆಯಲ್ಲಿ ಅಕ್ರಮ ಆರೋಪ ಸಂಬಂಧ ನಿನ್ನೆಯಷ್ಟೇ (ಜುಲೈ 02) ವಿಡಿಯೋ ಸಾಕ್ಷಿ ಸಮೇತ ಗಂಭೀರ ಆರೋಪ ಮಾಡಿದ್ದ ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ ಇಂದು ಮತ್ತೊಂದು ವಿಡಿಯೋ ರಿಲೀಸ್​ ಮಾಡಿದ್ದಾರೆ. ಜೆಡಿಎಸ್​ ಕಚೇರಿ ಜೆ.ಪಿ.ಭವನದಲ್ಲಿ ಯಶವಂತಪುರ ಕ್ಷೇತ್ರಕ್ಕೆ ಸಂಬಂಧಿಸಿದ ಎಸ್​ಐಆರ್​​ ಪ್ರಕ್ರಿಯೆಯ ಅಕ್ರಮಗಳ ಕುರಿತು ವಿಡಿಯೋ ರಿಲೀಸ್​​ ಮಾಡಿದ್ದು, ಶಾಸಕ ಎಸ್​.ಟಿ.ಸೋಮಶೇಖರ್​​ ಫೋಟೋ ಇರುವ ಪುಸ್ತಕಗಳನ್ನು ಬಿಎಲ್​​ಒಗಳು ಹಿಡಿದಿರೋದು ಇದರಲ್ಲಿ ಕಂಡುಬಂದಿದೆ.

‘ಮತದಾರರ ಹುಂಡಿಯೇ ಲೂಟಿ’

ಸರ್ಕಾರದ ಗುಲಾಮರಾಗಿ ಕೆಲಸ ಮಾಡಲು‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕೆಪಿಸಿಸಿ ಹೊಸ ಅಧ್ಯಕ್ಷರು ರಾಮಮಂದಿರ ಬಗ್ಗೆ ಮಾತನಾಡುತ್ತಾರೆ. ಆದರೆ ಮತದಾರರ ಹುಂಡಿಯನ್ನೇ ಲೂಟಿ ಮಾಡಲು ಸರ್ಕಾರ ಹೊರಟಿದೆ. ಆ ಮೂಲಕ ಸಂವಿಧಾನವನ್ನ ಬುಡಮೇಲು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ನನಗೆ ರಾಜ್ಯದ ಹಲವು ಭಾಗಗಳಿಂದ ಕರೆ ಬರುತ್ತಿದ್ದು, ಕೇಂದ್ರದ ಚುನಾವಣಾ ಆಯುಕ್ತರ ಭೇಟಿಗೆ ಸಮಯ ಕೇಳುತ್ತೇನೆ. ರಾಜ್ಯ ಚುನಾವಣಾ ಆಯುಕ್ತರನ್ನ ಇಂದು ಭೇಟಿ ಮಾಡುತ್ತೇವೆ. ರಾಜ್ಯ ಸರ್ಕಾರ ಯಾವ ಸಾಧನೆ ಮಾಡಲು ಹೊರಟಿದೆ ಎಂದವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ನಡೆಯುತ್ತಿರುವ ಎಸ್​ಐಆರ್​​ ತನಿಖೆಗೆ ಆಗ್ರಹ; ಕೇಂದ್ರ ಚುನಾವಣಾ ಆಯೋಗಕ್ಕೆ ಎರಡು ಬಾರಿ ಶೋಭಾ ಕರಂದ್ಲಾಜೆ ಪತ್ರ

‘ಕಚೇರಿಯಲ್ಲಿ ಕುಳಿತು ಹೇಳಿದ್ರೆ ಆಗುತ್ತಾ?’

ಇನ್ನು ಭಾರತೀಯ ಚುನಾವಣಾ ಆಯೋಗದ (ECI) ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಖಡಕ್​​ ಆದೇಶದ ಬಗ್ಗೆಯೂ ಪ್ರತಕ್ರಿಯಿಸಿರುವ ಹೆಚ್​​ಡಿಕೆ, ಅನ್ಬುಕುಮಾರ್ ಕಚೇರಿಯಲ್ಲಿ ಕುಳಿತು ಹೇಳಿದ್ರೆ ಆಗುತ್ತಾ? ಎಂದು ಪ್ರಶ್ನಿಸಿದ್ದಾರೆ. ಈ ಸಂಬಂಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ನಾವು ನೀಡಿರುವ ದೂರಿನ ಬಗ್ಗೆ ಏನು ಕ್ರಮ ಆಗಿದೆ? ಬೆಳಿಗ್ಗೆಯಿಂದ ಆಯುಕ್ತರು ಕಚೇರಿಗೇ ಬಂದಿಲ್ಲ ಎಂದವರು ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:43 pm, Fri, 3 July 26

Source link

ಅರ್ಜಿ ವಜಾ ಮಾಡಿದ ಕೋರ್ಟ್: ಕೆಎಸ್ ಈಶ್ವರಪ್ಪಗೆ ಸಂಕಷ್ಟ ತಂದಿಟ್ಟ ಆದಾಯ ಮೀರಿ ಆಸ್ತಿ ಗಳಿಕೆ ಕೇಸ್ – Kannada News | Assets case: Karnataka high court rejects KS Eshwarappa plea

ಬೆಂಗಳೂರು, (ಜುಲೈ 03): ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪಗೆ (KS Eshwarappa) ಸಂಕಷ್ಟ ಎದುರಾಗಿದೆ. ತಮ್ಮ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ರದ್ದು ಕೋರಿ ಕೆ.ಎಸ್.ಈಶ್ವರಪ್ಪ‌ ಸಲ್ಲಿಸಿದ್ದ ಅರ್ಜಿಯನ್ನು ಇಂದು (ಜುಲೈ 03) ಕರ್ನಾಟಕ ಹೈಕೋರ್ಟ್ (Karnataka High Court) ವಜಾ ಮಾಡಿದೆ.

ಕೆ.ಎಸ್.ಈಶ್ವರಪ್ಪ ಪರ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ಅವರು ಅರ್ಜಿ ಸಲ್ಲಿಸಿದ್ದು, ಲೋಕಾಯುಕ್ತ ಪ್ರಕರಣದಲ್ಲಿ ಬಂಧನದಿಂದ ರಕ್ಷಣೆಗೆ ಮನವಿ ಮಾಡಿದರು. ಬಳಿಕ ಲೋಕಾಯುಕ್ತ ಎಸ್​ಪಿಪಿ ವೆಂಕಟೇಶ್ ಅರಬಟ್ಟಿ ಪ್ರತಿವಾದ ಮಂಡಿಸಿದ್ದು, ತನಿಖೆಗೆ ಸಹಕರಿಸಿದರೆ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಎಂದು ಕೋರ್ಟ್​​ ಮುಂದೆ ಸ್ಪಷ್ಟಪಡಿಸಿದರು. ಈ ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ಕೇಸ್ ರದ್ದು ಕೋರಿದ್ದ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.

ಶಿವಮೊಗ್ಗ ಮೂಲದ ವಕೀಲ ಬಿ.ವಿನೋದ್‌, ಈಶ್ವರಪ್ಪ, ಅವರ ಪತ್ರ ಕೆ.ಇ.ಕಾಂತೇಶ್‌ ಹಾಗೂ ಕಾಂತೇಶ್‌ ಪತ್ನಿ ಶಾಲಿನಿ ವಿರುದ್ಧ ಆದಾಯಕ್ಕೂ ಮೀರಿದ ಅಕ್ರಮ ಆಸ್ತಿ ಗಳಿಕೆ ಆರೋಪ ಮಾಡಿ ಲೋಕಾಯುಕ್ತ ಪೊಲೀಸರ ಮುಂದೆ ಪ್ರಕರಣ ದಾಖಲಿಸಿದ್ದರು. ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ‘ಬಿ’ ರಿಪೋರ್ಟ್‌ ಸಲ್ಲಿಸಿದ್ದರು. ಆನಂತರ ವಿನೋದ್‌ ಆದನ್ನು ಪ್ರಶ್ನಿಸಿ ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದರು.

ತದನಂತರ ನ್ಯಾಯಾಲಯವು ಮರು ತನಿಖೆ ಮಾಡಿ ವರದಿ ಸಲ್ಲಿಸುವಂತೆ ಸೂಚನೆ ನೀಡಿತ್ತು. ಆ ಆದೇಶ ಆಧರಿಸಿ ಶಿವಮೊಗ್ಗ ಲೋಕಾಯುಕ್ತ ಪೊಲೀಸರು ಹೊಸದಾಗಿ ಎಫ್‌ಐಆರ್‌ ದಾಖಲಿಸಿದ್ದರು. ತದನಂತರ ಈಶ್ವರಪ್ಪನವರು ತಮ್ಮ ವಿರುದ್ಧದ ಪ್ರಕರಣ ರದ್ದುಗೊಳಿಸುವಂತೆ ಹೈಕೋರ್ಟ್‌ ಮೆಟ್ಟಿಲೇರಿದ್ದು, ಇದೀಗ ಹೈಕೋರ್ಟ್ ಅರ್ಜಿಯನ್ನು ವಜಾ ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಆಫ್ರಿಕಾ ತಂಡಕ್ಕೆ ಮತ್ತೆ ನಿರಾಸೆ; ಟಿ20 ವಿಶ್ವಕಪ್ ಫೈನಲ್​ಗೇರಿದ ಇಂಗ್ಲೆಂಡ್ – Kannada News | England Enters 2026 T20 World Cup Final, Beats South Africa by 40 Runs in Semi final

ಜುಲೈ 2 ರಂದು ನಡೆದ 2026 ರ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನ (Women’s T20 World Cup 2026) ಎರಡನೇ ಸೆಮಿಫೈನಲ್‌ನಲ್ಲಿ, ಆತಿಥೇಯ ಇಂಗ್ಲೆಂಡ್, ದಕ್ಷಿಣ ಆಫ್ರಿಕಾವನ್ನು (England vs South Africa ) 40 ರನ್‌ಗಳಿಂದ ಸೋಲಿಸುವ ಮೂಲಕ ಫೈನಲ್​ಗೆ ಟಿಕೆಟ್ ಪಡೆದುಕೊಂಡಿದೆ. ಲಂಡನ್‌ನ ದಿ ಓವಲ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 20 ಓವರ್​ಗಳಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು 169 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 129 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಹೀಗಾಗಿ ಆಫ್ರಿಕಾ ತಂಡಕ್ಕೆ ಮತ್ತೊಂದು ಫೈನಲ್ ಆಡುವ ಅವಕಾಶವೂ ಕೈತಪ್ಪಿತು. ಇತ್ತ ಅಫ್ರಿಕಾ ತಂಡವನ್ನು ಏಕಪಕ್ಷಿಯವಾಗಿ ಮಣಿಸಿ ಫೈನಲ್​ಗೇರಿರುವ ಇಂಗ್ಲೆಂಡ್‌ ತಂಡ ಭಾನುವಾರ ಲಾರ್ಡ್ಸ್‌ನಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ಆರು ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.

ಇಂಗ್ಲೆಂಡ್​ಗೆ ಕಳಪೆ ಆರಂಭ

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡಕ್ಕೆ ಕಳಪೆ ಆರಂಭ ಸಿಕ್ಕಿತು. ದಕ್ಷಿಣ ಆಫ್ರಿಕಾದ ವೇಗಿಗಳಾದ ಶಬ್ನಿಮ್ ಇಸ್ಮಾಯಿಲ್ ಮತ್ತು ಮರಿಜಾನ್ನೆ ಕಪ್ಪ್ ತಮ್ಮ ಮಾರಕ ಬೌಲಿಂಗ್ ಮೂಲಕ ಇಂಗ್ಲೆಂಡ್ ತಂಡದ ಅಗ್ರ ಕ್ರಮಾಂಕವನ್ನು ಧ್ವಂಸಗೊಳಿಸಿದರು. ಆರಂಭಿಕ ಆಟಗಾರ್ತಿ ಆಮಿ ಜೋನ್ಸ್ 2 ರನ್‌ಗಳಿಗೆ ಔಟಾದರೆ, ಅದ್ಭುತ ಫಾರ್ಮ್‌ನಲ್ಲಿದ್ದ ಬ್ಯಾಟ್ಸ್‌ಮನ್ ಡ್ಯಾನಿ ವ್ಯಾಟ್-ಹಾಡ್ಜ್ ಕೂಡ ಕೇವಲ 12 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ಇದರಿಂದಾಗಿ ಇಂಗ್ಲೆಂಡ್ 3.2 ಓವರ್‌ಗಳಲ್ಲಿ 23 ರನ್​ಗಳನ್ನು ಕಲೆಹಾಕಿ 3 ವಿಕೆಟ್‌ಗಳನ್ನು ಕಳೆದುಕೊಂಡಿತು.

133 ರನ್‌ಗಳ ಪಾಲುದಾರಿಕೆ

ಆದರೆ ಈ ಆರಂಭಿಕ ಆಘಾತದಿಂದ ತಂಡವನ್ನು ಹೊರತಂದ ನಾಯಕಿ ನ್ಯಾಟ್ ಸಿವರ್ ಬ್ರಂಟ್ ಮತ್ತು ಅನುಭವಿ ಹೀದರ್ ನೈಟ್ ನಿರ್ಣಾಯಕ ಸಮಯದಲ್ಲಿ ಉತ್ತಮ ಜೊತೆಯಾಟ ಕಟ್ಟಿದರು. ಇವರಿಬ್ಬರು ನಾಲ್ಕನೇ ವಿಕೆಟ್‌ಗೆ 133 ರನ್‌ಗಳ ಪಾಲುದಾರಿಕೆಯನ್ನು ನಿರ್ಮಿಸಿದರು, ಇದು ಪಂದ್ಯಾವಳಿಯ ನಾಕೌಟ್ ಇತಿಹಾಸದಲ್ಲಿ ಅತ್ಯಧಿಕ ಜೊತೆಯಾಟವೆಂಬ ದಾಖಲೆಯನ್ನೂ ಬರೆಯಿತು. ನ್ಯಾಟ್ ಸಿವರ್ ಬ್ರಂಟ್ ಕೇವಲ 47 ಎಸೆತಗಳಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್ ಸೇರಿದಂತೆ 75 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರೆ, ಹೀದರ್ ನೈಟ್ 47 ಎಸೆತಗಳಲ್ಲಿ 6 ಬೌಂಡರಿಗಳು ಮತ್ತು 1 ಸಿಕ್ಸರ್ ಸೇರಿದಂತೆ 58 ರನ್ ಬಾರಿಸಿದರು. ಇವರಿಬ್ಬರ ಇನ್ನಿಂಗ್ಸ್‌ನಿಂದಾಗಿ ಇಂಗ್ಲೆಂಡ್ 20 ಓವರ್‌ಗಳಲ್ಲಿ ಒಟ್ಟು 169 ರನ್‌ ಕಲೆಹಾಕಿತು.

ವಿಶ್ವಕಪ್​ನಿಂದ ಹೊರಬಿದ್ದ ನ್ಯೂಜಿಲೆಂಡ್; ನಿವೃತ್ತಿ ಘೋಷಿಸಿದ ಮೂವರು ಲೆಜೆಂಡರಿ ಪ್ಲೇಯರ್ಸ್​

ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ವೈಫಲ್ಯ

170 ರನ್‌ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಉತ್ತಮ ಆರಂಭ ಪಡೆಯಿತು. ನಾಯಕಿ ಲಾರಾ ವೋಲ್ವಾರ್ಡ್ ಮತ್ತು ಟಾಜ್ಮಿನ್ ಬ್ರಿಟ್ಸ್ ಮೊದಲ ವಿಕೆಟ್‌ಗೆ 43 ರನ್‌ಗಳನ್ನು ಸೇರಿಸಿದರು. ಆದಾಗ್ಯೂ, ಸೋಫಿ ಎಕ್ಲೆಸ್ಟೋನ್, ವೋಲ್ವಾರ್ಡ್ ನೀಡಿದ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಈ ಪಾಲುದಾರಿಕೆಯನ್ನು ಮುರಿದರು. ಇದರ ನಂತರ, ಇಂಗ್ಲೆಂಡ್‌ನ ಬೌಲರ್‌ಗಳು ಪಂದ್ಯವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಂಡರು. ಆದಾಗ್ಯೂ ಆರಂಭಿಕ ಬ್ಯಾಟರ್ ಟಾಜ್ಮಿನ್ ಬ್ರಿಟ್ಸ್ 45 ಎಸೆತಗಳಲ್ಲಿ 51 ರನ್‌ಗಳ ಹೋರಾಟದ ಇನ್ನಿಂಗ್ಸ್ ಆಡಿದರು, ಆದರೆ ಇನ್ನೊಂದು ತುದಿಯಿಂದ ಅವರಿಗೆ ಬೆಂಬಲ ಸಿಗಲಿಲ್ಲ. ಪರಿಣಾಮವಾಗಿ, ಆಫ್ರಿಕಾ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 129 ರನ್‌ಗಳನ್ನು ಮಾತ್ರ ಗಳಿಸಲಷ್ಟೇ ಶಕ್ತವಾಗಿ ಪಂದ್ಯವನ್ನು 40 ರನ್‌ಗಳಿಂದ ಸೋತಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:10 pm, Fri, 3 July 26

Source link

ಬೆಳಗಾವಿಯಲ್ಲಿ ಭೀಕರ ಬರದ ಛಾಯೆ: ಬರಿದಾದ ಹಿಡಕಲ್ ಡ್ಯಾಂ, ಹಿನ್ನೀರಿನಲ್ಲಿ ಮುಳುಗಿದ್ದ ವಿಠ್ಠಲ ದೇಗುಲ ಸಂಪೂರ್ಣ ಗೋಚರ! – Kannada News | Belagavi Drought: Submerged Ancient Vithala Temple Reappears as Hidkal Dam Dries Up

ಬೆಳಗಾವಿ, ಜುಲೈ 3: ಕರ್ನಾಟಕ ರಾಜ್ಯವು ಗಂಭೀರ ಮಳೆ ಕೊರತೆಯನ್ನು ಎದುರಿಸುತ್ತಿದ್ದು, ಅದರ ಪರಿಣಾಮವಾಗಿ ರಾಜ್ಯದ ಹಲವು ಜಲಾಶಯಗಳಲ್ಲಿ ನೀರಿನ ಮಟ್ಟ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನಲ್ಲಿರುವ ಹಿಡಕಲ್ ಜಲಾಶಯವು ಬಹುತೇಕ ಖಾಲಿಯಾಗಿದ್ದು, ಅದರ ಹಿನ್ನೀರಿನಲ್ಲಿ 1978ರಿಂದ ಮುಳುಗಿದ್ದ ಹುಣ್ಣೂರ ಗ್ರಾಮದ ಪ್ರಾಚೀನ ವಿಠಲ ದೇವಸ್ಥಾನ ಈಗ ಸ್ಪಷ್ಟವಾಗಿ ಗೋಚರಿಸುತ್ತಿದೆ. 51 ಟಿಎಂಸಿ ಸಾಮರ್ಥ್ಯದ ಹಿಡಕಲ್ ಜಲಾಶಯದಲ್ಲಿ ಕೇವಲ ಐದು ಟಿಎಂಸಿ ನೀರು ಮಾತ್ರ ಉಳಿದಿರುವುದುಜಲಕ್ಷಾಮದ ತೀವ್ರತೆಯನ್ನು ಎತ್ತಿ ತೋರಿಸುತ್ತದೆ. 2022ರಲ್ಲೂ ಅಲ್ಪಾವಧಿಗೆ ಕಾಣಿಸಿಕೊಂಡಿದ್ದ ಈ ದೇಗುಲವು, ಈಗ ಮುಂಗಾರು ಮಳೆಯ ಅಭಾವದಿಂದಾಗಿ ಮತ್ತೆ ಅನಾವರಣಗೊಂಡಿದೆ. ಜಲಾಶಯದ ಹಿನ್ನೀರಿನಲ್ಲಿದ್ದರೂ, ಕಲ್ಲಿನಿಂದ ನಿರ್ಮಿತವಾದ ಈ ದೇವಸ್ಥಾನಕ್ಕೆ ಯಾವುದೇ ಹಾನಿಯಾಗಿಲ್ಲ.

ದೀರ್ಘಕಾಲದ ನಂತರ ದರ್ಶನಕ್ಕೆ ಲಭ್ಯವಾಗಿರುವ ವಿಠಲ ದೇವರನ್ನು ನೋಡಲು ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು, ಕುಟುಂಬ ಸಮೇತರಾಗಿ ಆಗಮಿಸುತ್ತಿದ್ದಾರೆ. ಮತ್ತೊಂದೆಡೆ, ರೈತರು ಮತ್ತು ಜನ ಸಾಮಾನ್ಯರು ಜಲಕ್ಷಾಮದ ಕುರಿತು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದೇಗುಲದ ಆವರಣದಲ್ಲಿ ಎಸ್​ಐಆರ್​​ ಪ್ರಕ್ರಿಯೆ: ಚರ್ಚೆಗೆ ಗ್ರಾಸವಾದ ಅಧಿಕಾರಿಗಳ ನಡೆ – Kannada News | Kolar SIR Process Under Scrutiny for Deviating from Door to Door Norms

ಕೋಲಾರ, ಜುಲೈ 03: ಜಿಲ್ಲೆಯ ಕುರುಬರಪೇಟೆ ಪ್ರದೇಶದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್​ಐಆರ್​) ಪ್ರಕ್ರಿಯೆಯು ಆಯೋಗದ ನಿರ್ದಿಷ್ಟ ಸೂಚನೆಗಳಿಗಿಂತ ಭಿನ್ನವಾಗಿ ನಡೆಯುತ್ತಿರುವ ಬಗ್ಗೆ ವರದಿಯಾಗಿದೆ. ಮತದಾರರ ಪಟ್ಟಿಯ ಪರಿಷ್ಕರಣೆಗಾಗಿ ಮತದಾರರ ಮನೆ ಮನೆಗೆ ಭೇಟಿ ನೀಡಿ ಎನ್ಯುಮರೇಷನ್ ಫಾರ್ಮ್‌ಗಳನ್ನು ಭರ್ತಿ ಮಾಡಬೇಕೆಂಬುದು ಆಯೋಗದ ನಿಯಮ. ಆದರೆ, ಕುರುಬರಪೇಟೆಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್​ಓಗಳು) ಮತದಾರರನ್ನು ದೇಗುಲದ ಆವರಣಕ್ಕೆ ಕರೆಸಿ, ಅಲ್ಲಿಯೇ ಅರ್ಜಿಗಳನ್ನು ಭರ್ತಿ ಮಾಡುವ ಕೆಲಸ ಮಾಡುತ್ತಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ರಾಜ್ಯದಲ್ಲಿ ನಡೆಯುತ್ತಿರುವ ಎಸ್​ಐಆರ್​​ ತನಿಖೆಗೆ ಆಗ್ರಹ: ಕೇಂದ್ರ ಚುನಾವಣಾ ಆಯೋಗಕ್ಕೆ ಎರಡು ಬಾರಿ ಶೋಭಾ ಕರಂದ್ಲಾಜೆ ಪತ್ರ – Kannada News | Shobha Karandlaje Writes to ECI Twice, Demands Intervention in Karnataka’s SIR Process

ಬೆಂಗಳೂರು, ಜುಲೈ 03: ಜಿಬಿಎ ವ್ಯಾಪ್ತಿಯಲ್ಲಿ 27 ವಾರ್ಡ್ ಗಳಲ್ಲಿ ರಾಜ್ಯ ಚುನಾವಣಾ ಆಯೋಗದಿಂದ ಪ್ರತ್ಯೇಕ ಎಸ್ಐಆರ್ ಮತ್ತು ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್​​ನಲ್ಲಿತುರ್ತು ಮಧ್ಯ ಪ್ರವೇಶ ಮಾಡಬೇಕು ಎಂದು ಆಗ್ರಹಿಸಿ ಕೇಂದ್ರ ಚುನಾವಣಾ ಆಯೋಗಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಎರಡು ಬಾರಿ ಪತ್ರ ಬರೆದು ಆಗ್ರಹಿಸಿದ್ದಾರೆ. ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತ್ಯೇಕ ವೇಳಾಪಟ್ಟಿ ಹಾಗೂ ವಿಭಿನ್ನ ಕಟ್-ಆಫ್ ದಿನಾಂಕಗಳನ್ನು ನಿಗದಿಪಡಿಸಿ ಮತ್ತೊಂದು ಸಮಾನಾಂತರ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ಆರಂಭಿಸಿರುವುದು ಗಮನಕ್ಕೆ ಬಂದಿದೆ. ಇಂತಹ ಸಮಾನಾಂತರ ಪ್ರಕ್ರಿಯೆಯು ಮತದಾರರು, ರಾಜಕೀಯ ಪಕ್ಷಗಳು ಹಾಗೂ ಚುನಾವಣಾ ಅಧಿಕಾರಿಗಳಲ್ಲಿ ಗೊಂದಲವನ್ನು ಉಂಟುಮಾಡುವುದಲ್ಲದೆ, ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಗೆ ಧಕ್ಕೆಯನ್ನುಂಟುಮಾಡಬಹುದು ಎಂದವರು ಎಚ್ಚರಿಸಿದ್ದಾರೆ.

‘EROಗಳು ಮಾತ್ರ ನಿರ್ವಹಿಸಬೇಕು’

ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯ ತಯಾರಿ, ಪರಿಷ್ಕರಣೆ, ಹೆಸರು ಸೇರ್ಪಡೆ ಹಾಗೂ ಹೆಸರು ತೆಗೆದುಹಾಕುವ ಪ್ರಕ್ರಿಯೆಗಳು ಜನಪ್ರತಿನಿಧಿತ್ವ ಕಾಯ್ದೆ, 1950 ಹಾಗೂ ಮತದಾರರ ನೋಂದಣಿ ನಿಯಮಗಳು, 1960ರ ಪ್ರಕಾರ ನಿಯಂತ್ರಿಸಲ್ಪಡುತ್ತವೆ. ಈ ಕಾನೂನುಬದ್ಧ ಕರ್ತವ್ಯಗಳನ್ನು ಭಾರತ ಚುನಾವಣಾ ಆಯೋಗ ನೇಮಕ ಮಾಡುವ Electoral Registration Officers (ERO) ಮಾತ್ರ ನಿರ್ವಹಿಸಬೇಕು. ಭಾರತ ಚುನಾವಣಾ ಆಯೋಗ ಸಿದ್ಧಪಡಿಸುವ ಮತದಾರರ ಪಟ್ಟಿಯೇ ವಿಧಾನಸಭಾ ಕ್ಷೇತ್ರಗಳ ಅಧಿಕೃತ ಕಾನೂನುಬದ್ಧ ಮತದಾರರ ಪಟ್ಟಿಯಾಗಿದ್ದು, ನಂತರ ಸ್ಥಳೀಯ ಸಂಸ್ಥೆಗಳ ಚುನಾವಣೆಗಾಗಿ ರಾಜ್ಯ ಚುನಾವಣಾ ಆಯೋಗ ಅದನ್ನೇ ಅಳವಡಿಸಿಕೊಳ್ಳುತ್ತದೆ.

ಇದನ್ನೂ ಓದಿ: ರಾಮನಗರ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ; ನಿಷ್ಪಕ್ಷಪಾತ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ

‘ಗೊಂದಲ ಸೃಷ್ಟಿ ಸಾಧ್ಯತೆ’

ಭಾರತ ಸಂವಿಧಾನದ ಅನುಚ್ಛೇದ 243K ಮತ್ತು 243ZA ಅಡಿಯಲ್ಲಿ ರಚನೆಯಾದ ಕರ್ನಾಟಕ ರಾಜ್ಯ ಚುನಾವಣಾ ಆಯೋಗಕ್ಕೆ ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಜವಾಬ್ದಾರಿ ನೀಡಲಾಗಿದೆ. ಆದರೆ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು ಅಥವಾ ವಿಶೇಷ ತೀವ್ರ ಪರಿಷ್ಕರಣೆ ನಡೆಸುವ ಸ್ವತಂತ್ರ ಅಧಿಕಾರ ರಾಜ್ಯ ಚುನಾವಣಾ ಆಯೋಗಕ್ಕೆ ಇಲ್ಲ. ಈ ಅಧಿಕಾರ ಸಂಪೂರ್ಣವಾಗಿ ಭಾರತ ಚುನಾವಣಾ ಆಯೋಗದ ವ್ಯಾಪ್ತಿಗೆ ಸೇರಿದೆ. ಆದ್ದರಿಂದ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಪ್ರಾರಂಭಿಸಿರುವ ಸಮಾನಾಂತರ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯು ಸಂವಿಧಾನಾತ್ಮಕ ಹಾಗೂ ಕಾನೂನುಬದ್ಧ ವ್ಯವಸ್ಥೆಗೆ ವಿರುದ್ಧವಾಗಿರುವಂತೆ ಕಂಡುಬರುತ್ತದೆ. ಇದು ಅನಗತ್ಯ ಕೆಲಸದ ಪುನರಾವರ್ತನೆ, ಸಾರ್ವಜನಿಕ ಹಣದ ವ್ಯರ್ಥ ವೆಚ್ಚ, ಆಡಳಿತಾತ್ಮಕ ಗೊಂದಲ ಹಾಗೂ ಮತದಾರರ ಪಟ್ಟಿಯ ವಿಶ್ವಾಸಾರ್ಹತೆಯ ಬಗ್ಗೆ ಅನುಮಾನಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ ಎಂದವರು ತಿಳಿಸಿದ್ದಾರೆ.

‘ಸಾರ್ವಜನಿಕ ಸ್ಥಳಗಳಲ್ಲಿ SIR ನಡೆಯುತ್ತಿದೆ’

ಭಾರತ ಚುನಾವಣಾ ಆಯೋಗದ ನಿರ್ದೇಶನಗಳ ಪ್ರಕಾರ ಕಡ್ಡಾಯವಾಗಿ ಮನೆ-ಮನೆಗೆ ತೆರಳಿ ಪರಿಶೀಲನೆ ನಡೆಸಬೇಕಾದರೂ, ರಾಜ್ಯದ ಅನೇಕ ಕಡೆಗಳಲ್ಲಿ ಈ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ಸಮುದಾಯ ಭವನಗಳು ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಶಿಬಿರಗಳನ್ನು ಆಯೋಜಿಸುವ ಮೂಲಕ ನಡೆಸಲಾಗುತ್ತಿದೆ. ಇಂತಹ ವಿಧಾನವು ವಿಶೇಷ ತೀವ್ರ ಪರಿಷ್ಕರಣೆಯ ಮೂಲ ಉದ್ದೇಶವನ್ನೇ ಹಾಳುಮಾಡುತ್ತದೆ. ಏಕೆಂದರೆ, ಈ ಪ್ರಕ್ರಿಯೆಯ ಮುಖ್ಯ ಉದ್ದೇಶ ಪ್ರತಿಯೊಬ್ಬ ಮತದಾರನನ್ನು ಅವರ ಸಾಮಾನ್ಯ ವಾಸಸ್ಥಳದಲ್ಲಿಯೇ ಭೌತಿಕವಾಗಿ ಪರಿಶೀಲಿಸುವುದಾಗಿದೆ. ಈ ನಿಗದಿತ ವಿಧಾನದಿಂದ ಮತದಾರರ ಪಟ್ಟಿಯ ಸಿದ್ಧತೆಯಲ್ಲಿ ಅಕ್ರಮಗಳು ನಡೆಯುವ ಸಾಧ್ಯತೆ ಹೆಚ್ಚಾಗುತ್ತದೆ.

ರಾಜ್ಯ ಸರ್ಕಾರವು ರಾಜಕೀಯ ಲಾಭಕ್ಕಾಗಿ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು, ವಿಶೇಷ ತೀವ್ರ ಪರಿಷ್ಕರಣೆಗೆ ನಿಗದಿಪಡಿಸಿರುವ ವಿಧಾನವನ್ನು ಉದ್ದೇಶಪೂರ್ವಕವಾಗಿ ದುರ್ಬಲಗೊಳಿಸುತ್ತಿದೆ ಎಂಬ ಆತಂಕವೂ ವ್ಯಾಪಕವಾಗಿ ವ್ಯಕ್ತವಾಗುತ್ತಿದೆ. ಮನೆ-ಮನೆಗೆ ತೆರಳಿ ಪರಿಣಾಮಕಾರಿ ಪರಿಶೀಲನೆ ನಡೆಸುವ ಕ್ರಮವನ್ನು ಕೈಬಿಟ್ಟಿರುವುದರಿಂದ, ಜನಪ್ರತಿನಿಧಿತ್ವ ಕಾಯ್ದೆ, 1950ರ ಪ್ರಕಾರ ಮತದಾರರಾಗಿ ನೋಂದಣಿಗೆ ಅರ್ಹರಲ್ಲದ ವ್ಯಕ್ತಿಗಳು, ಅಕ್ರಮ ವಲಸಿಗರು ಹಾಗೂ ಇತರ ಅನರ್ಹ ವ್ಯಕ್ತಿಗಳ ಹೆಸರುಗಳು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವ ಗಂಭೀರ ಅಪಾಯವಿದೆ ಎಂದು ಶೋಭಾ ಕಳವಳ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಅನಾರೋಗ್ಯ ರಜೆ ಕೇಳಿದ್ದಕ್ಕೆ ಯುವತಿಗೆ ಡಾಕ್ಟರ್ ಪ್ರಿಸ್ಕ್ರಿಪ್ಷನ್ ಕೇಳಿದ ಮ್ಯಾನೇಜರ್ – Kannada News | Manager asked a young woman for a doctor’s prescription when she requested sick leave.

ಖಾಸಗಿ ಹಾಗೂ ಕಾರ್ಪೊರೇಟ್ ಕಂಪನಿಗಳಲ್ಲಿ (corporate company) ಕೆಲಸ ಮಾಡುವವರಿಗೆ ರಜೆ ಸಿಗೋದೇ ಇಲ್ಲ. ರಜೆ ಕೇಳಿದ್ರೆ ಸಾಕು ಆಕಾಶ ಭೂಮಿ ಒಂದು ಮಾಡ್ತಾರೆ. ಹುಷಾರಿಲ್ಲ ಅಂದ್ರೂ ರಜೆ ಕೊಡಲ್ಲ. ಅನೇಕ ಉದ್ಯೋಗಿಗಳು ಈ ರೀತಿ ಹೇಳೋದನ್ನು ನೀವು ನೋಡಿರುತ್ತೀರಿ. ಆದರೆ ಇಲ್ಲೊಬ್ಬಳು ಉದ್ಯೋಗಿಗೆ ಜ್ವರ ಬಂದ ಕಾರಣ ಮ್ಯಾನೇಜರ್ ಬಳಿ ರಜೆ ಕೇಳಿದ್ದಾಳೆ. ಆದರೆ ಮ್ಯಾನೇಜರ್ ಈ ಯುವತಿ ಬಳಿ ಡಾಕ್ಟರ್ ಪ್ರಿಸ್ಕ್ರಿಪ್ಷನ್ ಕೇಳಿದ್ದಾರೆ. ಮ್ಯಾನೇಜರ್ ಹೀಗೆನ್ನುತ್ತಿದ್ದಂತೆ ಉದ್ಯೋಗಿ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾಳೆ. ಈ ಸಂಭಾಷಣೆಯ ಸ್ಕ್ರೀನ್ ಶಾಟ್ ವೈರಲ್ ಆಗಿದ್ದು, ನೆಟ್ಟಿಗರು ಈ ಯುವತಿಯ ಧೈರ್ಯಕ್ಕೆ ಮೆಚ್ಚಿಕೊಂಡಿದ್ದಾರೆ.

ವಾಟ್‌ ಎವರ್‌ ವಿಶಾಲ್‌ (@Whatevervishal) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ಪೋಸ್ಟ್ ನಲ್ಲಿ ಜೆನ್‌ ಝೀ ಉದ್ಯೋಗಿ ಹಾಗೂ ಮ್ಯಾನೇಜರ್ ನಡುವಿನ ವಾಟ್ಸ್ಪ್‌ ಸಂಭಾಷಣೆಯ ಸ್ಕ್ರೀನ್‌ಶಾಟ್ ನೋಡಬಹುದು. ಇದರಲ್ಲಿ ಯುವತಿ ತನಗೆ ಜ್ವರ ಬಂದಿದ್ದು ಕೆಲಸಕ್ಕೆ ಬರಲು ಆಗುವುದಿಲ್ಲ ಎಂದು ಸಂದೇಶ ಕಳುಹಿಸಿದ್ದಾಳೆ. ಇದಕ್ಕೆ ಪ್ರತಿಕ್ರಿಯಿಸಿದ ಮ್ಯಾನೇಜರ್ ಆಫೀಸಿಗೆ ಬಾ, ಇಬ್ಬರೂ ಸೇರಿ ಡಾಕ್ಟರ್ ಹತ್ರ ಹೋಗಿ ಮೆಡಿಸಿನ್‌ ತಕೊಂಡು ಬರೋಣ ಎಂದು ಹೇಳಿದ್ದಾನೆ.

ವೈರಲ್‌ ಪೋಸ್ಟ್‌ ಇಲ್ಲಿದೆ

ಮ್ಯಾನೇಜರ್ ಪ್ರತಿಕ್ರಿಯೆಗೆ ರಿಪ್ಲೈ ಮಾಡಿದ ಯುವತಿ, ಜ್ವರ ಅಷ್ಟೊಂದಿಲ್ಲ , ಪ್ಯಾರಸಿಟಮಾಲ್ ತಗೊಂಡಿದ್ದೀನಿ, ರೆಸ್ಟ್ ಮಾಡಿದರೆ ಕಡಿಮೆಯಾಗುತ್ತದೆ ಎಂದಿದ್ದಾಳೆ. ಯಾರೇ ಆದ್ರೂ ಈ ಅನಾರೋಗ್ಯ ರಜೆ ತೆಗೆದುಕೊಂಡರೆ ವೈದ್ಯರ ಪ್ರಿಸ್ಕ್ರಿಪ್ಷನ್ ಕೇಳಲು ಡೈರೆಕ್ಟರ್ ಹೇಳಿದ್ದಾರೆ ಎಂದ ಮ್ಯಾನೇಜರ್‌ಗೆ ಖಡಕ್ ಉತ್ತರ ನೀಡಿದ್ದಾಳೆ. ನಾನೇನು ಸ್ಕೂಲ್ ಸ್ಟೂಡೆಂಟ್‌ ಅಲ್ಲ. ಈಗಾಗಲೇ ನನ್ನ ರಜೆ ಬಾಕಿ ಇದೆ. ಅದನ್ನೇ ನಾನು ತೆಗೆದುಕೊಳ್ಳುತ್ತೇನೆ. ಡೈರೆಕ್ಟರ್ ದೊಡ್ಡ ಡಾಕ್ಟರ್ ಆಗಿದ್ದರೆ, ನನ್ನ ಹೆಸರಿಗೆ ಅವರೇ ಒಂದು ಪ್ರಿಸ್ಕ್ರಿಪ್ಷನ್ ಬರೆದುಕೊಡಲಿ. ನನ್ನತ್ರ ಡಾಕ್ಟರ್ ಚೀಟಿ ಇಲ್ಲ, ಪೋಷಕರ ಸಹಿ ಇರುವ ರಜಾ ಅರ್ಜಿ ಕೂಡ ಇಲ್ಲ. ನಾನೀಗ ರೆಸ್ಟ್ ಮಾಡುತ್ತೇನೆ ಎಂದು ಹೇಳಿರುವುದನ್ನು ಕಾಣಬಹುದು.

ಇದನ್ನೂ ಓದಿ: ಸ್ಯಾಲರಿ ಹೈಕ್ ಕಡಿಮೆಯಾದದ್ದಕ್ಕೆ ಜಾಬ್ ರಿಸೈನ್ ಮಾಡಿದ ಬೆಂಗಳೂರಿನ ಯುವಕ

ಈ ಪೋಸ್ಟ್ ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ರಜೆ ಎಂದಾಗ ಮ್ಯಾನೇಜರ್ ಗಳ ವರ್ತನೆ ಅತಿರೇಕಕ್ಕೆ ತಲುಪಿ ಬಿಡುತ್ತದೆ ಎಂದಿದ್ದಾರೆ. ಮತ್ತೊಬ್ಬರು, ಅನಾರೋಗ್ಯ ಎಂದಾಗ ರಜೆ ಕೊಡಲ್ಲ ಹೇಳೋದು ಸರಿಯಲ್ಲ. ಈ ರೀತಿಯ ಅವಮಾನೀಯ ವರ್ತನೆ ಬದಲಾಗಬೇಕು ಎಂದು ಹೇಳಿದ್ದಾರೆ. ಇನ್ನೊಬ್ಬರು, ಈ ಯುವತಿ ಸರಿಯಾಗಿ ಹೇಳಿದ್ದಾಳೆ. ಈ ರೀತಿ ಮಾಡಿದ್ರೆ ಮಾತ್ರ ನಾವು ಬದುಕೋಕೆ ಆಗೋದು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗರ್ಭಿಣಿ ಆಗಿದ್ದರೂ ವರ್ಕೌಟ್ ನಿಲ್ಲಿಸದ ಸಮಂತಾ: ವಿಡಿಯೋ ನೋಡಿ – Kannada News | Samantha Ruth Prabhu doing work out while having baby bump

ನಟಿ ಸಮಂತಾ ಋತ್ ಪ್ರಭು (Samantha Ruth Prabhu) ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ ಸೂಪರ್ ಹಿಟ್ ಆಗಿದೆ. ಅದರ ಜೊತೆಗೆ ಸಮಂತಾ ಮೊದಲ ಬಾರಿಗೆ ತಾಯಿ ಆಗುತ್ತಿದ್ದು, ಆ ಖುಷಿಯನ್ನು ಸಹ ನಟಿ ಇತ್ತೀಚೆಗಷ್ಟೆ ಹಂಚಿಕೊಂಡಿದ್ದಾರೆ. ಗರ್ಭಿಣಿ ಆಗುತ್ತಿರುವ ಸಮಂತಾ ಋತ್ ಪ್ರಭು, ತಾಯ್ತನಕ್ಕೆ ತಯಾರಾಗುತ್ತಿದ್ದಾರೆ. ವಿಶೇಷ ಡಯಟ್, ದಿನ ನಿತ್ಯದ ಕೆಲಸ ಕಾರ್ಯಗಳಲ್ಲಿ ಬದಲಾವಣೆಗಳನ್ನು ಸಹ ನಟಿ ಮಾಡಿಕೊಂಡಿದ್ದಾರೆ. ತಾಯ್ತನಕ್ಕಾಗಿ ದೊಡ್ಡ ಬದಲಾವಣೆ ಮಾಡಿಕೊಂಡಿದ್ದಾರಾದರೂ ಸಹ ಒಂದು ವಿಷಯದಲ್ಲಿ ಮಾತ್ರ ಬದಲಾವಣೆ ಮಾಡಿಕೊಂಡಿಲ್ಲ, ಅದುವೇ ವರ್ಕೌಟ್.

ಸಮಂತಾ ಋತ್ ಪ್ರಭು, ಕಳೆದ ಕೆಲ ವರ್ಷಗಳಿಂದ ಸಾಕಷ್ಟು ಆರೋಗ್ಯ ಸಮಸ್ಯೆ, ಮಾನಸಿಕ ಸಮಸ್ಯೆಗಳನ್ನು ಎದುರಿಸಿದರು. ಅವರಿಗೆ ಆ ಸಂಕಷ್ಟದ ಸಮಯಗಳಲ್ಲಿ ಶಕ್ತಿ ತುಂಬಿದ್ದು, ಆರೋಗ್ಯ ನೀಡಿದ್ದು ವ್ಯಾಯಾಮ. ಹಾಗಾಗಿ ಈಗ ತಾಯಿ ಆಗುವ ಹೊಸ್ತಿನಲ್ಲಿಯೂ ವರ್ಕೌಟ್ ಅನ್ನು ಮಾತ್ರ ನಟಿ ಸಮಂತಾ ಬಿಟ್ಟಿಲ್ಲ. ಬೇಬಿ ಬಂಪ್ ಇದ್ದರೂ ಸಹ ಅದರ ನಡುವೆಯೇ ವರ್ಕೌಟ್ ಮಾಡುತ್ತಿದ್ದಾರೆ ನಟಿ ಸಮಂತಾ. ತಾವು ವರ್ಕೌಟ್ ಮಾಡುತ್ತಿರುವ ವಿಡಿಯೋ ಅನ್ನು ಸಹ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ನಟಿ.

ಸಮಂತಾ ಅವರು ಕೆಲ ದಿನಗಳ ಹಿಂದಷ್ಟೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ತಾವು ತಾಯಿ ಆಗುತ್ತಿರುವ ಕಾರಣ, ತಮ್ಮ ಸಿಕ್ಸ್ ಪ್ಯಾಕ್ ಫಿಸಿಕ್​​ಗೆ ಕೆಲ ಸಮಯ ವಿರಾಮ ನೀಡಬೇಕಿದೆ ಎಂದಿದ್ದರು. ಅದನ್ನು ನೋಡಿದ ಅಭಿಮಾನಿಗಳು, ತಾಯಿ ಆಗುತ್ತಿರುವ ಕಾರಣಕ್ಕೆ ಸಮಂತಾ ಋತ್ ಪ್ರಭು ವರ್ಕೌಟ್​​ನಿಂದ ಬಿಡುವು ಪಡೆಯಲಿದ್ದಾರೆ ಎಂದುಕೊಂಡಿದ್ದರು. ಆದರೆ ಸಮಂತಾ ವರ್ಕೌಟ್​​ಗೆ ವಿದಾಯ ಹೇಳಿಲ್ಲ, ಆದರೆ ಇಂಟೆನ್ಸ್ ವರ್ಕೌಟ್ ಬದಲಿಗೆ ಕೆಲವು ದೇಹಕ್ಕೆ ಅವಶ್ಯವಾದ ವರ್ಕೌಟ್​​ಗಳನ್ನು ಮಾತ್ರವೇ ಮಾಡುತ್ತಿದ್ದಾರೆ. ಅದೂ ಟ್ರೈನರ್​​ನ ಮಾರ್ಗದರ್ಶನದಲ್ಲಿ.

ಸಮಂತಾ ಮತ್ತು ರಾಜ್ ನಿಧಿಮೋರು ಅವರುಗಳು ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಸರಳವಾಗಿ ಇಶಾ ಸೆಂಟರ್​​ನಲ್ಲಿ ಮದುವೆ ಆದರು. ಮದುವೆಯಾಗಿ ಕೆಲವೇ ತಿಂಗಳಲ್ಲಿ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಸಮಂತಾ ಹಾಗೂ ರಾಜ್ ಇಬ್ಬರಿಗೂ ಸಹ ಇದು ಎರಡನೇ ಮದುವೆ ಆಗಿದೆ. ಸಮಂತಾ ಋತ್ ಪ್ರಭು, ಹಲವು ವರ್ಷಗಳ ಕಾಲ ನಟ ನಾಗ ಚೈತನ್ಯ ಜೊತೆಗೆ ಪ್ರೀತಿಯಲ್ಲಿದ್ದರು. 2017 ರಲ್ಲಿ ಈ ಇಬ್ಬರು ಬಲು ಅದ್ಧೂರಿಯಾಗಿ ವಿವಾಹವಾದರು. ಬಳಿಕ 2017 ರಲ್ಲಿ ವಿಚ್ಛೇದನ ಘೋಷಿಸಿದರು. ಅಂತೆಯೇ ರಾಜ್ ಸಹ ಈ ಹಿಂದೆ ಮದುವೆ ಆಗಿದ್ದರು. ವಿಚ್ಛೇದನ ಪಡೆದು ಸಮಂತಾರನ್ನು ವಿವಾಹವಾಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Sanatana Dharma: ಶಾಸ್ತ್ರಗಳ ಪ್ರಕಾರ ಈ ವಸ್ತುಗಳನ್ನು ಎಂದಿಗೂ ಬರೀ ನೆಲದ ಮೇಲೆ ಇಡಲೇಬಾರದು! – Kannada News | Sanatana Dharma Vastu: Don’t Place These Sacred Items on Floor for Lakshmi’s Grace

ಸನಾತನ ಧರ್ಮದಲ್ಲಿ ಪ್ರತೀ ನಿಯಮದ ಹಿಂದೆಯೂ ಒಂದು ಆಳವಾದ ಆಧ್ಯಾತ್ಮಿಕ ಕಾರಣವಿರುತ್ತದೆ. ನಮ್ಮ ಹಿರಿಯರು ಮತ್ತು ಶಾಸ್ತ್ರಗಳ ಪ್ರಕಾರ, ಕೆಲವು ಪವಿತ್ರ ಹಾಗೂ ಶುಭ ವಸ್ತುಗಳನ್ನು ಎಂದಿಗೂ ನೇರವಾಗಿ ಬರಿ ನೆಲದ ಮೇಲೆ ಇಡಬಾರದು. ಹೀಗೆ ಮಾಡುವುದು ಆ ವಸ್ತುಗಳಿಗೆ ನಾವು ಮಾಡುವ ಅಪಚಾರ ಅಥವಾ ಅಪಮಾನ ಎಂದು ಪರಿಗಣಿಸಲಾಗುತ್ತದೆ. ಪವಿತ್ರ ವಸ್ತುಗಳನ್ನು ಗೌರವದಿಂದ ಕಾಣುವುದು ಎಂದರೆ ಸಾಕ್ಷಾತ್ ದೇವರನ್ನು ಗೌರವಿಸಿದಂತೆ. ಎಲ್ಲಿ ಗೌರವ ಮತ್ತು ಶುಚಿತ್ವ ಇರುತ್ತದೆಯೋ, ಅಲ್ಲಿ ಲಕ್ಷ್ಮಿ ದೇವಿ ನೆಲೆಸುತ್ತಾಳೆ ಎಂಬುದು ನಂಬಿಕೆ.

ಹಾಗಾದರೆ, ವಾಸ್ತು ಮತ್ತು ಸನಾತನ ಧರ್ಮದ ಪ್ರಕಾರ ಮನೆಯಲ್ಲಿರುವ ಯಾವೆಲ್ಲಾ ವಸ್ತುಗಳನ್ನು ನೇರವಾಗಿ ನೆಲದ ಮೇಲೆ ಇಡಬಾರದು? ಅವುಗಳನ್ನು ಹೇಗೆ ಜೋಡಿಸಬೇಕು ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

ಪೂಜಾ ಸಾಮಗ್ರಿಗಳು ಮತ್ತು ದೇವರ ವಿಗ್ರಹಗಳು:

ಮನೆಯ ದೇವರ ಕೋಣೆಯಲ್ಲಿರುವ ದೇವರ ವಿಗ್ರಹಗಳು, ಫೋಟೋ, ಪೂಜೆಗಾಗಿ ಬೆಳಗಿದ ದೀಪಗಳು, ಶಂಖ, ಕಳಸ ಮತ್ತು ಪೂಜಾ ಗಂಟೆಗಳನ್ನು ಯಾವುದೇ ಕಾರಣಕ್ಕೂ ನೇರವಾಗಿ ನೆಲದ ಮೇಲೆ ಇರಿಸಬಾರದು. ಪೂಜೆ ಮಾಡುವಾಗ ಅಥವಾ ದೇವರ ಕೋಣೆ ಸ್ವಚ್ಛಗೊಳಿಸುವಾಗಲೂ ಇವುಗಳನ್ನು ನೆಲದ ಮೇಲೆ ಇಡುವ ತಪ್ಪು ಮಾಡಬೇಡಿ. ಇದು ಮನೆಯಲ್ಲಿನ ಧನಾತ್ಮಕ ಶಕ್ತಿಯನ್ನು ಕಡಿಮೆ ಮಾಡುತ್ತದೆ.

ಚಿನ್ನ, ಬೆಳ್ಳಿ ಮತ್ತು ನಗದು ಹಣ:

ಹಣ ಹಾಗೂ ಆಭರಣಗಳನ್ನು ಸಾಕ್ಷಾತ್ ಮಹಾಲಕ್ಷ್ಮಿಯ ಸ್ವರೂಪ ಎಂದು ಪೂಜಿಸಲಾಗುತ್ತದೆ. ಆದ್ದರಿಂದ ಚಿನ್ನ, ಬೆಳ್ಳಿ ಮತ್ತು ನಗದನ್ನು ನೇರವಾಗಿ ನೆಲದ ಮೇಲೆ ಇಡಬಾರದು. ಹಣ ಅಥವಾ ಒಡವೆಗಳನ್ನು ಇಡುವಾಗ ಅವುಗಳನ್ನು ಒಂದು ಸಣ್ಣ ತಟ್ಟೆ, ಪಾತ್ರೆ ಅಥವಾ ಕೆಂಪು ಬಟ್ಟೆಯ ಮೇಲಿಡಬೇಕು.

ಮಾಂಗಲ್ಯ, ರುದ್ರಾಕ್ಷಿ ಮತ್ತು ಪವಿತ್ರ ವಸ್ತುಗಳು:

ಮುತ್ತೈದೆಯರ ಸೌಭಾಗ್ಯದ ಸಂಕೇತವಾದ ಮಂಗಳಸೂತ್ರ, ಶಿವನ ಸ್ವರೂಪವಾದ ರುದ್ರಾಕ್ಷಿ ಮಾಲೆ, ವಿಷ್ಣು ರೂಪದ ಸಾಲಿಗ್ರಾಮಗಳು, ನವಧಾನ್ಯಗಳು ಮತ್ತು ಪೂಜೆಗೆ ಬಳಸುವ ಅಕ್ಷತೆಯನ್ನು ಎಂದಿಗೂ ನೆಲದ ಮೇಲೆ ಇಡಬಾರದು. ಇವು ಅತ್ಯಂತ ಉನ್ನತವಾದ ದೈವಿಕ ಕಂಪನಗಳನ್ನು ಹೊಂದಿರುವುದರಿಂದ, ಇವುಗಳನ್ನು ನೆಲದ ಮೇಲಿಟ್ಟರೆ ಇವುಗಳ ಪವಿತ್ರತೆ ನಾಶವಾಗುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ.

ಇದನ್ನೂ ಓದಿ: ಗರುಡ ಪುರಾಣದ ಪ್ರಕಾರ ಈ 4 ಕೆಟ್ಟ ಅಭ್ಯಾಸಗಳಿದ್ದರೆ ಕೋಟ್ಯಧಿಪತಿಯೂ ಭಿಕ್ಷುಕನಾಗುತ್ತಾನೆ!

ಪವಿತ್ರ ಗ್ರಂಥಗಳು ಮತ್ತು ಶೈಕ್ಷಣಿಕ ಪುಸ್ತಕಗಳು:

ಭಗವದ್ಗೀತೆ, ರಾಮಾಯಣ, ಮಹಾಭಾರತದಂತಹ ಪವಿತ್ರ ಧರ್ಮಗ್ರಂಥಗಳನ್ನು ಹಾಗೂ ಮಕ್ಕಳು ಓದುವ ಶೈಕ್ಷಣಿಕ ಪುಸ್ತಕಗಳು ಮತ್ತು ನೋಟ್‌ಬುಕ್‌ಗಳನ್ನು ಬರಿ ನೆಲದ ಮೇಲೆ ಇಡಬಾರದು. ಪುಸ್ತಕಗಳನ್ನು ಸಾಕ್ಷಾತ್ ಜ್ಞಾನದೇವತೆಯಾದ ಸರಸ್ವತಿಯ ರೂಪ ಎಂದು ಕಾಣಲಾಗುತ್ತದೆ. ಪುಸ್ತಕಗಳನ್ನು ನೆಲದ ಮೇಲಿಡುವುದು ಜ್ಞಾನಕ್ಕೆ ಮಾಡುವ ಅಪಚಾರವಾಗಿದ್ದು, ಇದು ಮಕ್ಕಳ ವಿದ್ಯಾಭ್ಯಾಸದ ಮೇಲೂ ಕೆಟ್ಟ ಪರಿಣಾಮ ಬೀರಬಹುದು.

ಆಹಾರ ಮತ್ತು ಕುಡಿಯುವ ನೀರಿನ ಪಾತ್ರೆಗಳು:

ಅನ್ನವು ಸಾಕ್ಷಾತ್ ಅನ್ನಪೂರ್ಣೇಶ್ವರಿಯ ಸ್ವರೂಪ ಮತ್ತು ನೀರು ಗಂಗೆಯ ಸ್ವರೂಪ. ಹೀಗಾಗಿ, ನಾವು ಸೇವಿಸುವ ಆಹಾರದ ತಟ್ಟೆಗಳು ಮತ್ತು ಕುಡಿಯುವ ನೀರಿನ ಪಾತ್ರೆಗಳನ್ನು ನೇರವಾಗಿ ನೆಲದ ಮೇಲೆ ಇಡದೆ, ಸ್ವಲ್ಪ ಎತ್ತರವಿರುವ ಮಣೆ, ಟೇಬಲ್ ಅಥವಾ ಪೀಠದ ಮೇಲೆ ಇರಿಸುವುದು ಸೂಕ್ತ.

ಈ ವಸ್ತುಗಳನ್ನು ಇಡಲು ಸರಿಯಾದ ವಿಧಾನ ಯಾವುದು?

ಒಂದು ವೇಳೆ ಪೂಜೆಯ ಸಮಯದಲ್ಲಿ ಅಥವಾ ದಿನನಿತ್ಯದ ಬಳಕೆಯ ಸಂದರ್ಭದಲ್ಲಿ ಈ ವಸ್ತುಗಳನ್ನು ಕೆಳಗಿಡಬೇಕಾಗಿ ಬಂದರೆ, ಇವುಗಳನ್ನು ಇಡಲು ಮರದ ಪೀಠ (ಮಣೆ), ತಾಮ್ರ ಅಥವಾ ಹಿತ್ತಾಳೆಯ ತಟ್ಟೆಗಳನ್ನು ಬಳಸಿ. ಪೀಠವಿಲ್ಲದಿದ್ದರೆ ಒಂದು ಶುದ್ಧವಾದ ರೇಷ್ಮೆ ಅಥವಾ ಹತ್ತಿ ಬಟ್ಟೆಯನ್ನು ಹಾಸಿ, ಅದರ ಮೇಲೆ ಈ ವಸ್ತುಗಳನ್ನು ಇರಿಸಿ.

ಮನೆಯಲ್ಲಿ ಸುಖ, ಶಾಂತಿ ಮತ್ತು ಆರ್ಥಿಕ ಸಮೃದ್ಧಿ ನೆಲೆಸಬೇಕಾದರೆ ಕೇವಲ ಕಠಿಣ ಪೂಜೆ-ಪುನಸ್ಕಾರಗಳಷ್ಟೇ ಸಾಲದು; ಇಂತಹ ಸಣ್ಣಪುಟ್ಟ ಆಚಾರ-ವಿಚಾರಗಳನ್ನು ಪಾಲಿಸುವುದು ಅಷ್ಟೇ ಮುಖ್ಯ. ಇಂದಿನಿಂದಲೇ ನಿಮ್ಮ ಮನೆಯಲ್ಲಿ ಈ ನಿಯಮಗಳನ್ನು ರೂಢಿಸಿಕೊಳ್ಳಿ, ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Pakistan Accident: ಪಾಕಿಸ್ತಾನದಲ್ಲಿ ಕಂದಕಕ್ಕೆ ಉರುಳಿದ ಬಸ್, 40 ಪ್ರಯಾಣಿಕರು ಸಾವು – Kannada News | Pakistan Bus Crash: 40 Dead as Overcrowded Bus Plunges into Ravine in Balochistan

ಕ್ವೆಟ್ಟಾ, ಜುಲೈ 03: ಪಾಕಿಸ್ತಾನ(Pakistan)ದಲ್ಲಿ ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಭೀಕರ ಎನ್ನಬಹುದಾದ ರಸ್ತೆ ಅಪಘಾತ ಸಂಭವಿಸಿದೆ. ಶುಕ್ರವಾರ ಮುಂಜಾನೆ ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿದ್ದ ಬಸ್ಸೊಂದು ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಕನಿಷ್ಠ 40 ಜನರು ಸಾವನ್ನಪ್ಪಿದ್ದಾರೆ ಮತ್ತು ಎಂಟು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.

ಅಪಘಾತ ನಡೆದಿದ್ದು ಎಲ್ಲಿ?
ಬಲೂಚಿಸ್ತಾನ್ ಮತ್ತು ಖೈಬರ್ ಪಖ್ತುಂಖ್ವಾ ಪ್ರಾಂತ್ಯಗಳ ಗಡಿ ಭಾಗದ ದೂರದ ಪ್ರದೇಶವಾದ ಡಾನಾ ಸಾರ್ ಎಂಬಲ್ಲಿ ಈ ದುರ್ಘಟನೆ ನಡೆದಿದೆ ಎಂದು ಬಲೂಚಿಸ್ತಾನ್ ಸರ್ಕಾರದ ವಕ್ತಾರ ಶಾಹಿದ್ ರಿಂಡ್ ತಿಳಿಸಿದ್ದಾರೆ. ಅಪಘಾತಕ್ಕೀಡಾದ ಬಸ್ ತನ್ನಲ್ಲಿದ್ದ ಪ್ರಯಾಣಿಕರಷ್ಟೇ ಅಲ್ಲದೆ, ಮಾರ್ಗಮಧ್ಯೆ ಕೆಟ್ಟು ನಿಂತಿದ್ದ ಮತ್ತೊಂದು ಬಸ್ಸಿನ ಪ್ರಯಾಣಿಕರನ್ನೂ ಹತ್ತಿಸಿಕೊಂಡಿತ್ತು. ಹೀಗಾಗಿ ವಾಹನದಲ್ಲಿ ಮಿತಿಗಿಂತ ಹೆಚ್ಚು ಜನ ತುಂಬಿದ್ದರು.

ಅತಿ ವೇಗವಾಗಿ ಚಲಿಸುತ್ತಿದ್ದ ಬಸ್, ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡು ಕಂದಕಕ್ಕೆ ಬಿದ್ದಿದೆ. ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತು ಬಲೂಚಿಸ್ತಾನದ ಮುಖ್ಯಮಂತ್ರಿ ಸರ್ಫ್ರಾಜ್ ಬುಗ್ತಿ ಅವರು ಈ ದುರಂತಕ್ಕೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳಿಗೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮತ್ತಷ್ಟು ಓದಿ: ಭಾರತ-ಪಾಕ್ ಕೈದಿಗಳ ಪಟ್ಟಿ ವಿನಿಮಯ: 188 ಭಾರತೀಯರ ತಕ್ಷಣದ ಬಿಡುಗಡೆಗೆ ಪಾಕಿಸ್ತಾನಕ್ಕೆ ಭಾರತ ಒತ್ತಾಯ

ಮೃತಪಟ್ಟವರ ದೇಹಗಳು ತೀವ್ರವಾಗಿ ಜಜ್ಜಲ್ಪಟ್ಟಿದ್ದು, ರಕ್ಷಣಾ ಸಿಬ್ಬಂದಿ ಸದ್ಯ ಶವಗಳ ಗುರುತು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ. ಪಾಕಿಸ್ತಾನದ ಪರ್ವತ ಪ್ರದೇಶಗಳಲ್ಲಿ ಕಳಪೆ ರಸ್ತೆಗಳು, ಸಂಚಾರ ನಿಯಮಗಳ ಉಲ್ಲಂಘನೆ ಮತ್ತು ನಿರ್ಲಕ್ಷ್ಯದ ಚಾಲನೆಯಿಂದಾಗಿ ಇಂತಹ ಭೀಕರ ಅಪಘಾತಗಳು ನಿರಂತರವಾಗಿ ಸಂಭವಿಸುತ್ತಿರುತ್ತವೆ. ಕಳೆದ ಮೇ ತಿಂಗಳಿನಲ್ಲೂ ನಡೆದ ಇಂತಹುದೇ ಅಪಘಾತದಲ್ಲಿ 17 ಜನರು ಜೀವ ಕಳೆದುಕೊಂಡಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version