Astrological Impact: ಮಕ್ಕಳಲ್ಲಿ ಏಕಾಗ್ರತೆ ಕೊರತೆಯೇ? ಜಾತಕದಲ್ಲಿ ‘ಬುಧ’ ದುರ್ಬಲನಾಗಿದ್ದರೆ ಹೀಗಾಗುತ್ತೆ! – Kannada News | Boost Kids’ Intellect: Astrological Impact of Mercury and Remedies for Learning Issues

ಮಕ್ಕಳಲ್ಲಿ ಏಕಾಗ್ರತೆ ಕೊರತೆImage Credit source: vecteezy.com

ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಅವರ ಬುದ್ಧಿಶಕ್ತಿ, ಏಕಾಗ್ರತೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ, ಕೆಲವು ಮಕ್ಕಳಲ್ಲಿ ಓದಿದ್ದನ್ನು ನೆನಪಿಟ್ಟುಕೊಳ್ಳಲು ಕಷ್ಟವಾಗುವುದು, ಕೇಳಿದ ಪ್ರಶ್ನೆಗೆ ತಕ್ಷಣ ಉತ್ತರಿಸಲು ತಿಳಿಯದೆ ಗೊಂದಲಕ್ಕೀಡಾಗುವುದು ಅಥವಾ ತೀವ್ರ ಏಕಾಗ್ರತೆಯ ಕೊರತೆ ಕಾಣಿಸಿಕೊಳ್ಳುವುದು ಸಾಮಾನ್ಯ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಕ್ಕಳಲ್ಲಿ ಇಂತಹ ವರ್ತನೆಗಳು ಕಂಡುಬಂದರೆ ಅವರ ಜನ್ಮ ಕುಂಡಲಿಯಲ್ಲಿ ‘ಬುಧ’ ಗ್ರಹವು ದುರ್ಬಲವಾಗಿದೆ ಎಂದರ್ಥ.

ಜ್ಯೋತಿಷ್ಯದ ಆಳವಾದ ಹಿನ್ನೆಲೆಯಲ್ಲಿ ಬುಧ ಗ್ರಹದ ಪ್ರಾಮುಖ್ಯತೆ, ಜಾತಕದಲ್ಲಿ ಅದರ ಬಲ ಹಾಗೂ ದೌರ್ಬಲ್ಯಗಳ ಪ್ರಭಾವ ಮತ್ತು ಅದಕ್ಕೆ ಮಾಡಬಹುದಾದ ಸರಳ ಪರಿಹಾರಗಳ ವಿವರವಾದ ಮಾಹಿತಿ ಇಲ್ಲಿದೆ.

ಬುಧ ಗ್ರಹದ ಪ್ರಾಮುಖ್ಯತೆ:

ಸೌರಮಂಡಲದ ಎಲ್ಲಾ ಗ್ರಹಗಳಲ್ಲಿ ಬುಧನನ್ನು ಅತ್ಯಂತ ಸೌಮ್ಯ ಮತ್ತು ಯುವ ಗ್ರಹವೆಂದು ಪರಿಗಣಿಸಲಾಗುತ್ತದೆ. ಗ್ರಹಗಳ ಮಂಡಳಿಯಲ್ಲಿ ಬುಧನಿಗೆ ‘ರಾಜಕುಮಾರ’ನ ಸ್ಥಾನ ನೀಡಲಾಗಿದೆ. ಮಿಥುನ ಮತ್ತು ಕನ್ಯಾ ರಾಶಿಗಳ ಅಧಿಪತಿಯಾದ ಈತ ಭೂಮಿ ತತ್ವವನ್ನು ಪ್ರತಿನಿಧಿಸುತ್ತಾನೆ. ಬುಧನು ಪ್ರಮುಖವಾಗಿ ಮಾನವನ ಬುದ್ಧಿಶಕ್ತಿ, ವಿವೇಚನೆ, ಶಿಕ್ಷಣ, ವಾಕ್ಚಾತುರ್ಯ, ಸ್ಮರಣಶಕ್ತಿ, ಬರವಣಿಗೆ, ಗಣಿತ, ವಾಣಿಜ್ಯ ಮತ್ತು ನರಮಂಡಲದ ಮೇಲೆ ನೇರ ನಿಯಂತ್ರಣವನ್ನು ಹೊಂದಿರುತ್ತಾನೆ. ಹೀಗಾಗಿಯೇ ಬುಧನನ್ನು ‘ಬುದ್ಧಿಕಾರಕ’ ಗ್ರಹ ಎಂದು ಕರೆಯಲಾಗುತ್ತದೆ.

ಜಾತಕದಲ್ಲಿ ಬುಧ ಬಲವಾಗಿದ್ದರೆ ಕಂಡುಬರುವ ಸಕಾರಾತ್ಮಕ ಲಕ್ಷಣಗಳು:

ಯಾವ ಮಕ್ಕಳ ಜನ್ಮ ಕುಂಡಲಿಯಲ್ಲಿ ಬುಧ ಗ್ರಹವು ಬಲವಾದ ಸ್ಥಾನದಲ್ಲಿರುತ್ತದೆಯೋ, ಅವರು ಜನ್ಮಜಾತ ಬುದ್ಧಿವಂತರಾಗಿರುತ್ತಾರೆ. ಅಂತಹ ಮಕ್ಕಳು ಶಿಕ್ಷಣದಲ್ಲಿ ಸದಾ ಮುಂಚೂಣಿಯಲ್ಲಿದ್ದು ಗಣಿತ, ವಿಜ್ಞಾನ ಹಾಗೂ ಕಂಪ್ಯೂಟರ್‌ನಂತಹ ಕಠಿಣ ವಿಷಯಗಳನ್ನು ಬಹಳ ಸುಲಭವಾಗಿ ಕರಗತ ಮಾಡಿಕೊಳ್ಳುತ್ತಾರೆ. ಅಷ್ಟೇ ಅಲ್ಲದೆ, ಚರ್ಚಾಸ್ಪರ್ಧೆ, ಸಾರ್ವಜನಿಕ ಭಾಷಣ, ಬರವಣಿಗೆ ಮತ್ತು ನಟನೆಯಂತಹ ಸೃಜನಶೀಲ ಕ್ಷೇತ್ರಗಳಲ್ಲಿ ಶ್ರೇಷ್ಠ ಸಾಧನೆ ಮಾಡುತ್ತಾರೆ. ಹೊಸ ವಿಷಯಗಳನ್ನು ತ್ವರಿತವಾಗಿ ಕಲಿಯುವ ಇವರು, ಚಿಕ್ಕ ವಯಸ್ಸಿನಲ್ಲೇ ಅತ್ಯಂತ ಪ್ರಬುದ್ಧ ಹಾಗೂ ಬುದ್ಧಿವಂತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಜಾತಕದಲ್ಲಿ ಬುಧನು ತನ್ನ ಮಿತ್ರ ಗ್ರಹಗಳಾದ ಸೂರ್ಯ, ಶುಕ್ರ ಮತ್ತು ಶನಿ ಗ್ರಹಗಳ ಜೊತೆಗೂಡಿದರೆ, ಮಗುವಿನ ಬುದ್ಧಿಶಕ್ತಿ ಇಮ್ಮಡಿಯಾಗುತ್ತದೆ.

ಇದನ್ನೂ ಓದಿ: ಜುಲೈನಲ್ಲಿ ‘ತ್ರಿಗ್ರಹ ಯೋಗ’; ಈ 5 ರಾಶಿಯವರಿಗೆ ಒಲಿಯಲಿದೆ ಅಪಾರ ಧನಸಂಪತ್ತು ಮತ್ತು ಕೀರ್ತಿ!

ಬುಧ ದುರ್ಬಲನಾಗಿದ್ದರೆ ಎದುರಾಗುವ ಸವಾಲುಗಳು:

ಒಂದು ವೇಳೆ ಜಾತಕದಲ್ಲಿ ಬುಧನು 4, 8 ಅಥವಾ 12 ನೇ ಮನೆಯಲ್ಲಿದ್ದು ದುರ್ಬಲನಾಗಿದ್ದರೆ, ಅಥವಾ ಶನಿ, ರಾಹು-ಕೇತುಗಳ ದೃಷ್ಟಿಗೆ ಒಳಗಾಗಿದ್ದರೆ ಮಗು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಬುಧಾದಿತ್ಯ ಯೋಗದ ಕೊರತೆಯಿಂದಾಗಿ (ಸೂರ್ಯನ ಸಾಮೀಪ್ಯವಿಲ್ಲದಿರುವುದು) ಮಗು ತನ್ನ ಸ್ವಂತ ಬುದ್ಧಿಮತ್ತೆಯನ್ನು ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಎಷ್ಟು ಓದಿದರೂ ನೆನಪಿನಲ್ಲಿ ಉಳಿಯದಿರುವುದು, ವಿಷಯಗಳನ್ನು ತಡವಾಗಿ ಅರ್ಥೈಸಿಕೊಳ್ಳುವುದು ಮತ್ತು ಸದಾ ಗೊಂದಲದ ಮನಸ್ಥಿತಿಯಲ್ಲಿರುವುದು ಇದರ ಮುಖ್ಯ ಲಕ್ಷಣಗಳು. ಕೆಲವೊಮ್ಮೆ ಸ್ಪಷ್ಟವಾಗಿ ಮಾತನಾಡಲು ಕಷ್ಟವಾಗುವುದು ಅಥವಾ ತೊದಲುವಿಕೆ ಕಾಣಿಸಿಕೊಳ್ಳಬಹುದು. ಮಾನಸಿಕವಾಗಿ ಆತಂಕ, ಉದ್ವೇಗ, ಹೈಪರ್ಆಕ್ಟಿವಿಟಿ (ಅತಿಯಾದ ಚಂಚಲತೆ) ಹಾಗೂ ನಿದ್ರೆಯ ಸಮಸ್ಯೆಗಳು ಕಾಡಬಹುದು. ದೈಹಿಕವಾಗಿ ತಲೆನೋವು, ನರ ದೌರ್ಬಲ್ಯ, ಆಗಾಗ್ಗೆ ಶೀತ ಮತ್ತು ಗಂಟಲಿನ ಸೋಂಕುಗಳು ಇವರನ್ನು ಬಾಧಿಸುತ್ತವೆ.

ದುರ್ಬಲ ಬುಧನ ದೋಷ ನಿವಾರಣೆಗೆ ಸರಳ ಪರಿಹಾರಗಳು:

ಮಕ್ಕಳ ಜನ್ಮ ಕುಂಡಲಿಯನ್ನು ತಜ್ಞ ಜ್ಯೋತಿಷಿಗಳಿಂದ ಸರಿಯಾಗಿ ವಿಶ್ಲೇಷಿಸಿದ ನಂತರ, ಬುಧನ ಬಲವನ್ನು ಹೆಚ್ಚಿಸಲು ಕೆಲವು ನಿಯಮಿತ ಪರಿಹಾರಗಳನ್ನು ಮಾಡಬಹುದು:

  • ಮಂತ್ರ ಜಪ: ಪ್ರತಿದಿನ ಬೆಳಿಗ್ಗೆ ಮಗುವಿನಿಂದ ಅಥವಾ ಮಗುವಿನ ಹೆಸರಿನಲ್ಲಿ “ಓಂ ಬಂ ಬುಧಾಯ ನಮಃ” ಎಂಬ ಮಂತ್ರವನ್ನು 108 ಬಾರಿ ಜಪಿಸಬೇಕು. ಇದು ಬುದ್ಧಿಶಕ್ತಿಯನ್ನು ತೀಕ್ಷ್ಣಗೊಳಿಸುತ್ತದೆ.
  • ದಾನ ಧರ್ಮ: ಬುಧವಾರದ ದಿನದಂದು ಬಡ ಮಕ್ಕಳಿಗೆ ಪುಸ್ತಕಗಳು, ಲೇಖನ ಸಾಮಗ್ರಿಗಳು ಹಾಗೂ ಹಸಿರು ಬಟಾಣಿ ಅಥವಾ ಹೆಸರು ಬೇಳೆಯನ್ನು ದಾನ ಮಾಡುವುದು ಅತ್ಯಂತ ಶ್ರೇಯಸ್ಕರ.
  • ದೇವತಾ ಆರಾಧನೆ: ಪ್ರತಿ ಬುಧವಾರ ಶ್ರೀಮನ್ನಾರಾಯಣನಿಗೆ ಹಸಿರು ಬಣ್ಣದ ಹೂವುಗಳನ್ನು ಅರ್ಪಿಸಬೇಕು. ಹಾಗೆಯೇ, ಬುದ್ಧಿಯ ಅಧಿದೇವತೆಯಾದ ವಿಘ್ನನಿವಾರಕ ಗಣೇಶನಿಗೆ ಗರಿಕೆಯನ್ನು (ದೂರ್ವಾ) ಅರ್ಪಿಸಿ ಪೂಜಿಸುವುದರಿಂದ ಬುಧ ದೋಷ ನಿವಾರಣೆಯಾಗುತ್ತದೆ.
  • ಜೀವನಶೈಲಿ ಬದಲಾವಣೆ: ಗ್ರಹಗಳ ಪರಿಹಾರದ ಜೊತೆಗೆ, ಮಕ್ಕಳಿಗೆ ಪ್ರತಿದಿನ ನಿಯಮಿತವಾಗಿ ಧ್ಯಾನ (Meditation) ಮತ್ತು ಪ್ರಾಣಾಯಾಮ ಮಾಡಲು ಪ್ರೋತ್ಸಾಹಿಸಬೇಕು. ಇದು ಅವರ ಏಕಾಗ್ರತೆ ಮತ್ತು ನರಮಂಡಲದ ಆರೋಗ್ಯವನ್ನು ನೈಸರ್ಗಿಕವಾಗಿ ಸುಧಾರಿಸುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಂದೆ ವಿಜಯ್ ಬಗ್ಗೆ ಹೆಮ್ಮೆಯಿಂದ ಮಾತನಾಡಿದ ಜೇಸನ್; ಎಲ್ಲವೂ ಸರಿ ಆಯ್ತು? – Kannada News | Thalapathy Vijay’s Son Jason Sanjay Dispels Divorce Rumors, Praises CM Father

ತಮಿಳುನಾಡಿನ ಮುಖ್ಯಮಂತ್ರಿಯಾಗಿ ದಳಪತಿ ವಿಜಯ್ (Vijay) ರಾಜಕೀಯದಲ್ಲಿ ದೊಡ್ಡ ಯಶಸ್ಸು ಕಂಡಿದ್ದಾರೆ. ಮೊದಲ ಪ್ರಯತ್ನದಲ್ಲೇ ಅವರು ಸಿಎಂ ಆಗಿ ಆಯ್ಕೆಯಾಗಿದ್ದಾರೆ. ಆದರೆ ಅವರ ವೈಯಕ್ತಿಕ ಜೀವನದಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಚುನಾವಣೆಗೆ ಮುನ್ನವೇ ಅವರ ಪತ್ನಿ ಸಂಗೀತ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇದು ವಿಜಯ್ ಅವರಿಗೆ ವೈಯಕ್ತಿಕವಾಗಿ ದೊಡ್ಡ ಮುಜುಗರ ತಂದಿತ್ತು. ತ್ರಿಷಾ ಜೊತೆಗಿನ ಸಂಬಂಧದ ಕಾರಣಕ್ಕೆ ಸಂಗೀತಾ ಈ ರೀತಿ ಮಾಡಿದ್ದರು ಎಂದು ಹೇಳಲಾಗುತ್ತಾ ಇದೆ. ಈಗ ಒಂದು ಮುಖ್ಯ ಬೆಳವಣಿಗೆ ನಡೆದಿದೆ.

ವಿಜಯ್ ಹಾಗೂ ಸಂಗೀತಾ ಮಧ್ಯೆ ಯಾವುದೂ ಸರಿ ಇಲ್ಲ ಎಂಬ ಕಾರಣದಿಂದ ವಿಜಯ್ ಮತ್ತು ಅವರ ಮಗ ಜೇಸನ್ ಸಂಜಯ್ ಸಂಬಂಧ ಹಾಳಾಗಿದೆ ಎನ್ನಲಾಗಿತ್ತು. ಹೆತ್ತವರ ವಿಚ್ಛೇದನದ ವಿಷಯದಲ್ಲಿ ಸಂಜಯ್ ತಂದೆಯ ಮೇಲೆ ತೀವ್ರ ಕೋಪಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಅಷ್ಟೇ ಅಲ್ಲದೆ ಸಂಜಯ್ ತಮ್ಮ ತಂದೆಯ ಮನೆಯಲ್ಲಿ ಇರದೆ ಬೇರೆ ಕಡೆ ವಾಸಿಸುತ್ತಿದ್ದಾರೆ ಎನ್ನಲಾಗಿತ್ತು.

ಆದರೆ ಈ ಎಲ್ಲ ವದಂತಿಗಳಿಗೆ ಈಗ ತೆರೆ ಬಿದ್ದಿದೆ. ಜೇಸನ್ ಸಂಜಯ್ ಅವರ ಹೊಸ ವಿಡಿಯೋ ಒಂದು ವೈರಲ್ ಆಗಿದೆ. ನಟ ಜೆಮಿನಿ ಮಣಿ ಅವರ ಮಗನ ಜೊತೆ ಸಂಜಯ್ ಮಾತನಾಡಿದ್ದಾರೆ. ಈ ವಿಡಿಯೋದಲ್ಲಿ ಅವರು ತಮ್ಮ ತಂದೆಯ ಬಗ್ಗೆ ತುಂಬಾ ಹೆಮ್ಮೆಯಿಂದ ಮಾತನಾಡಿದ್ದಾರೆ. ತಂದೆ ವಿಜಯ್ ತಮ್ಮನ್ನು ಶಾಲೆಗೆ ಪಿಕ್ ಮಾಡಲು ಬರುತ್ತಿದ್ದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ತಾವು ಜೊತೆಯಾಗಿ ಕಳೆದ ಒಳ್ಳೆಯ ಸಮಯವನ್ನು ಸಂಜಯ್ ಹಂಚಿಕೊಂಡಿದ್ದಾರೆ.

ವಿಜಯ್ ಮಗನ ವಿಡಿಯೋ

ತಂದೆಯ ಬಗ್ಗೆ ಮಾತನಾಡುವಾಗ ಸಂಜಯ್ ಮುಖದಲ್ಲಿ ಸಕಾರಾತ್ಮಕ ಭಾವನೆ ಇತ್ತು. ಇದು ಅವರಿಬ್ಬರ ನಡುವೆ ಎಲ್ಲವೂ ಸರಿಯಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ತಂದೆ-ಮಗನ ಮಧ್ಯೆ ಭಿನ್ನಾಭಿಪ್ರಾಯ ಇದ್ದಿದ್ದರೆ ಅದು ಸಂಜಯ್ ಮುಖದಲ್ಲಿ ತಿಳಿಯುತ್ತಿತ್ತು ಅಥವಾ ಸಂಜಯ್ ತಂದೆಯ ಬಗ್ಗೆ ಹೇಳುತ್ತಲೇ ಇರಲಿಲ್ಲ. ಆದರೆ ಸಂಜಯ್ ತಮ್ಮ ತಂದೆಯ ಬಗ್ಗೆ ತುಂಬಾ ಪ್ರೀತಿ ಮತ್ತು ಗೌರವದಿಂದ ಮಾತನಾಡಿದ್ದಾರೆ.

ಇದನ್ನೂ ಓದಿ: ವಿಜಯ್ ಹೆಸರು ಕೈ ಬಿಡಲು ಮುಂದಾದ ಮಗ ಜೇಸನ್; ದೊಡ್ಡ ನಿರ್ಧಾರ

ವಿಜಯ್ ಅವರು ಸಾರ್ವಜನಿಕವಾಗಿ ದೊಡ್ಡ ಸೂಪರ್ ಸ್ಟಾರ್ ಆಗಿರಬಹುದು. ಆದರೆ ಅವರು ಯಾವಾಗಲೂ ತಮ್ಮ ಕುಟುಂಬಕ್ಕೆ ಮೊದಲ ಆದ್ಯತೆ ನೀಡುತ್ತಾರೆ. ಮಗ ಸಂಜಯ್ ಆಡಿರುವ ಮಾತುಗಳೇ ಇದಕ್ಕೆ ಸಾಕ್ಷಿ. ಈ ಮೂಲಕ ಇಬ್ಬರ ನಡುವಿನ ಸಂಬಂಧದ ಬಗ್ಗೆ ಬರುತ್ತಿದ್ದ ಗಾಳಿಸುದ್ದಿಗಳಿಗೆ ಪೂರ್ಣವಿರಾಮ ಬಿದ್ದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಿನಲ್ಲಿ ಸಚಿವ ಕೃಷ್ಣಭೈರೇಗೌಡ ನೈಟ್ ರೌಂಡ್ಸ್: ಇಂಜಿನಿಯರ್‌ಗಳಿಗೆ ಕ್ಲಾಸ್ – Kannada News | Bengaluru Night Rounds: Minister Krishna Byregowda Slams Engineers; Says 300 Die Annually Due to Footpath Issues

ಕೃಷ್ಣಭೈರೇಗೌಡರಿಂದ ತಡರಾತ್ರಿ ದಿಢೀರ್ ಸಿಟಿ ರೌಂಡ್ಸ್Image Credit source: tv9

ಬೆಂಗಳೂರು, ಜುಲೈ 3: ಬೆಂಗಳೂರಿನ (Bengaluru) ಔಟರ್ ರಿಂಗ್ ರೋಡ್ (ORR) ಭಾಗದಲ್ಲಿ ರಸ್ತೆ ಗುಂಡಿ, ಧೂಳು ಮತ್ತು ಚರಂಡಿಗಳ ಅವ್ಯವಸ್ಥೆಗೆ ಬ್ರೇಕ್ ಹಾಕಲು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಭೈರೇಗೌಡ (Krishna Byregowda) ಖುದ್ದು ಕಣಕ್ಕಿಳಿದಿದ್ದಾರೆ. ಗುರುವಾರ ತಡರಾತ್ರಿ ಅಧಿಕಾರಿಗಳೊಂದಿಗೆ ನಗರ ಪ್ರದಕ್ಷಿಣೆ ಕೈಗೊಂಡ ಸಚಿವರು, ಸಿಲ್ಕ್ ಬೋರ್ಡ್‌ನಿಂದ ಬೈಯ್ಯಪ್ಪನಹಳ್ಳಿ ಮೆಟ್ರೋ ಸ್ಟೇಷನ್‌ವರೆಗಿನ ರಸ್ತೆ ವ್ಯವಸ್ಥೆಯನ್ನು ಪರಿಶೀಲಿಸಿದರು. ಇದೇ ವೇಳೆ ಇತ್ತೀಚೆಗೆ ತೀವ್ರ ಚರ್ಚೆಗೆ ಗ್ರಾಸವಾಗಿರುವ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಕಟ್ಟುನಿಟ್ಟಾಗಿ ಸಮರ್ಥಿಸಿಕೊಂಡ ಅವರು, ಫುಟ್‌ಪಾತ್‌ಗಳ ಅವ್ಯವಸ್ಥೆಯಿಂದಾಗಿ ನಗರದಲ್ಲಿ ಪ್ರತಿವರ್ಷ 300 ಅಮಾಯಕರು ರಸ್ತೆ ಅಪಘಾತಗಳಲ್ಲಿ ಮೃತಪಡುತ್ತಿದ್ದಾರೆ ಎಂದು ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.

ರಸ್ತೆ ಅಗೆದಿದ್ದಕ್ಕೆ ಕೆಂಡಾಮಂಡಲ: ಅಧಿಕಾರಿಗಳಿಗೆ ಕ್ಲಾಸ್

ಬಿ-ಸ್ಮೈಲ್ ವತಿಯಿಂದ ಸಿಲ್ಕ್ ಬೋರ್ಡ್‌ನಿಂದ ಬೈಯ್ಯಪ್ಪನಹಳ್ಳಿವರೆಗಿನ 17.1 ಕಿ.ಮೀ ಉದ್ದದ ರಸ್ತೆಯನ್ನು ಜಾಗತಿಕ ಮಟ್ಟದ ವಿನ್ಯಾಸಕ್ಕೆ ಅಭಿವೃದ್ಧಿಪಡಿಸಲು 400 ಕೋಟಿ ರೂ. ಅನುದಾನವನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಇದರ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಲೌರಿ ಜಂಕ್ಷನ್‌ನಿಂದ ಸಿಲ್ಕ್ ಬೋರ್ಡ್‌ವರೆಗೆ ಖುದ್ದು ಪರಿಸ್ಥಿತಿ ಅವಲೋಕಿಸಿದ ಸಚಿವರು, ನೇತಾಡುತ್ತಿದ್ದ ಬೆಸ್ಕಾಂ ತಂತಿಗಳು ಹಾಗೂ ಹಾಳಾದ ಸರ್ವೀಸ್ ರಸ್ತೆಗಳನ್ನು ಕಂಡು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ಯಾವುದೇ ರಾಜಿ ಇಲ್ಲದೆ ಒಂದೇ ಮಾದರಿಯ ವಿನ್ಯಾಸ ರೂಪಿಸಲು ಆದೇಶಿಸಿದರು.

ಹೊಸದಾಗಿ ಡಾಂಬರ್ ಹಾಕಿದ್ದ ರಸ್ತೆ ಅಗೆದಿದ್ದಕ್ಕೆ ಸಚಿವರಿಂದ ಕ್ಲಾಸ್

ಇದೇ ವೇಳೆ ದೊಡ್ಡಾನೆಕ್ಕುಂದಿ ಜಂಕ್ಷನ್‌ನಲ್ಲಿ ಹೊಸದಾಗಿ ಡಾಂಬರು ಹಾಕಿದ್ದ ರಸ್ತೆಯನ್ನೇ ಮತ್ತೆ ಅಗೆದಿರುವುದನ್ನು ಕಂಡು ತೀವ್ರ ಆಕ್ರೋಶ ಹೊರಹಾಕಿದ ಸಚಿವರು, ‘ರಾತ್ರೋರಾತ್ರಿ ರಸ್ತೆ ಅಗೆದವರು ಯಾರು?’ ಎಂದು ಸ್ಥಳದಲ್ಲಿದ್ದ ಇಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡರು.

ಫುಟ್​ಪಾತ್​ನಲ್ಲಿ ವ್ಯಾಪಾರ ಮಾಡಬೇಡಿ ಎಂದಿಲ್ಲ: ಕೃಷ್ಣಭೈರೇಗೌಡ

ಫುಟ್‌ಪಾತ್ ತೆರವು ಕಾರ್ಯಾಚರಣೆಯ ಬಗ್ಗೆ ಮಾತನಾಡಿದ ಸಚಿವರು, ‘ನಾವು ವ್ಯಾಪಾರಸ್ಥರಿಗೆ ವ್ಯಾಪಾರ ಮಾಡಬೇಡಿ ಎಂದು ಹೇಳುತ್ತಿಲ್ಲ. ಆದರೆ ಮುಖ್ಯ ರಸ್ತೆಗಳ ಫುಟ್‌ಪಾತ್‌ಗಳನ್ನು ಒತ್ತುವರಿ ಮಾಡಿ ಸಾರ್ವಜನಿಕರ ಓಡಾಟಕ್ಕೆ ತೊಂದರೆ ನೀಡಬೇಡಿ ಎಂದು ಹೇಳುತ್ತಿದ್ದೇವೆ. ಫುಟ್‌ಪಾತ್ ಇಲ್ಲದೆ ಜನರು ರಸ್ತೆಗೆ ಇಳಿದು ನಡೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದ್ದು, ಇದರಿಂದ ಪ್ರತಿ ವರ್ಷ 300 ಜನ ಮೃತಪಡುತ್ತಿದ್ದಾರೆ. ಇದಕ್ಕೆ ಯಾರು ಉತ್ತರ ಕೊಡುತ್ತಾರೆ? ನಿಮ್ಮ ಮನೆಯವರು ಯಾರಾದರೂ ಹೀಗೆ ಮೃತಪಟ್ಟರೆ ಏನು ಮಾಡುತ್ತೀರಿ? ಅದಕ್ಕಾಗಿಯೇ ಮುಖ್ಯ ರಸ್ತೆಗಳ ಫುಟ್‌ಪಾತ್ ಬಿಟ್ಟು, ಪಕ್ಕದ ರಸ್ತೆಗಳಲ್ಲಿ ವ್ಯಾಪಾರ ಮಾಡಿದರೆ ನಮ್ಮದೇನು ಅಡ್ಡಿಯಿಲ್ಲ’ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಖಾಸಗಿ ಲೇಔಟ್ ರಸ್ತೆಗಳು ಇನ್ನು ಸರ್ಕಾರಿ ಸ್ವತ್ತು: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಘೋಷಣೆ

ಮಳೆಗಾಲ ಆದ್ದರಿಂದ ರಾಜಕಾಲುವೆಗಳ ಅಭಿವೃದ್ಧಿ ಮತ್ತು ನೀರು ನಿಲ್ಲದಂತೆ ತಡೆಯುವ ವ್ಯವಸ್ಥೆಗೂ ಆದ್ಯತೆ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ವರದಿ: ಅರುಣ್ ಕುಮಾರ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Horoscope Today: ಇಂದು ಈ ರಾಶಿಯವರು ಕೋಪ, ಆವೇಶಗಳನ್ನು ಬದಿಗಿಟ್ಟರೆ ಕೆಲಸ ಕಾರ್ಯಗಳಲ್ಲಿ ಶುಭ – Kannada News | Horoscope Today 3rd July​ 2026: Dr. Basavaraj Gurujis Predictions for Zodiac Signs

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜುಲೈ 03, ಶುಕ್ರವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಪರಾಭವನಾಮ ಸಂವತ್ಸರ, ಜೇಷ್ಠ ಮಾಸ, ಕೃಷ್ಣಪಕ್ಷ ತದಿಗೆ, ಶ್ರವಣ ನಕ್ಷತ್ರದಲ್ಲಿ ಚಂದ್ರನ ಸಂಚಾರ ಹಾಗೂ ಶುಕ್ರವಾರದ ಮಹಾಲಕ್ಷ್ಮಿ ಕೃಪೆಗೆ ಪಾತ್ರರಾಗುವ ಮಹತ್ವವನ್ನು ಅವರು ತಿಳಿಸಿದರು. ಇಂದು ಸಂಕಷ್ಟ ಚತುರ್ಥಿ, ಕೊಳ್ಳೇಗಾಲ ಸುಬ್ರಮಣ್ಯ ಸ್ವಾಮಿ ವರ್ಧಂತೋತ್ಸವ ಮತ್ತು ಮೈಸೂರಿನ ತಿಲಕ್ ನಗರ ಶ್ರೀನಿವಾಸ ಉತ್ಸವದಂತಹ ವಿಶೇಷ ದಿನಗಳು ಇವೆ ಎಂದು ಗುರುತಿಸಲಾಗಿದೆ.

ಮೇಷ ರಾಶಿಯವರಿಗೆ ನಾಲ್ಕು ಗ್ರಹಗಳ ಶುಭ ಫಲವಿದ್ದು, ಆರ್ಥಿಕವಾಗಿ ಉತ್ತಮ ದಿನವಾಗಿದೆ. ವೃಷಭ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿದ್ದು, ಹಳೆ ಬಾಕಿ ವಸೂಲಿಯಾಗಿ, ಅರ್ಧಂಬರ್ಧ ಕೆಲಸಗಳು ಪೂರ್ಣಗೊಳ್ಳುತ್ತವೆ. ಮಿಥುನ ರಾಶಿಯವರಿಗೆ ನಾಲ್ಕು ಗ್ರಹಗಳ ಶುಭಫಲವಿರುವ ಈ ದಿನ ಆರ್ಥಿಕವಾಗಿ ಉತ್ತಮವಾಗಿದ್ದು, ಋಣಮುಕ್ತರಾಗುವ ಸಾಧ್ಯತೆ ಇದೆ. ಕರ್ಕಾಟಕ ರಾಶಿಯವರು ಮಾತಿನಲ್ಲಿ ಜಾಗ್ರತೆ ವಹಿಸಬೇಕಾಗಿದ್ದು, ಹೊಸ ವ್ಯಾಪಾರ ಮತ್ತು ಉದ್ದಿಮೆಗಳಿಗೆ ಶುಭದಿನವಾಗಿದೆ.

Source link

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಕಾರ್ಯವೈಫಲ್ಯಸ ಹಣೆ ಪಟ್ಟಿ ಬೀಳುವುದು… – Kannada News | Daily Horoscope for July 03, 2026: Uttarayan Greeshma season, Jyeshtha Masa Krishna Paksha Friday astrology prediction

ಮೇಷ ರಾಶಿ:

ವೈದ್ಯಕೀಯ ಕ್ಷೇತ್ರದ ವಿದ್ಯಾರ್ಥಿಗಳಿಗೆ ಹೆಚ್ಚು ತೊಂದರೆಯಾದೀತು‌. ಕಾರ್ಯಕ್ರಮಗಳನ್ನು ನಿರ್ವಹಣೆ ಮಾಡುವವರಿಗೆ ಬರಬೇಕಾದ ಹಣ ಬಾರದೇ ಕಷ್ಟವಾಗುವುದು. ಭೂಮಿಗೆ ಸಂಬಂಧಿಸಿದ ವಿಚಾರವು‌ ನ್ಯಾಯಾಲಯದ ಮೆಟ್ಟಿಲೇರಿ ಬಗೆಹರಿಯದು. ನಿಮ್ಮ ಅತಿಯಾದ ಕಲ್ಪನೆ ಭಗ್ನವಾದೀತು. ಇದರಿಂದ ದುಃಖಿಸುವಿರಿ. ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಮುಂದಡಿ ಇಡುವಿರಿ. ಕಳೆದುಕೊಂಡ ವಸ್ತುವನ್ನು ಮರಳಿ ಪಡೆಯಬೇಕಾದ ಸ್ಥಿತಿ ಬರಬಹುದು.

ವೃಷಭ ರಾಶಿ:

ಹಣವನ್ನು ಉಳಿಸಿಕೊಳ್ಳಬೇಕು ಎಂದು ಪ್ರಯತ್ನಿಸಿದರೂ ನಿಮ್ಮ ಕೈ ಮೀರಿ ಹೋಗುವ ಸಂದರ್ಭವೇ ಇರುವುದು. ಪ್ರಯಾಣವನ್ನು ಅತಿಯಾಗಿ ಮಾಡಬೇಡಿ.‌ ಹಣದ ವಿಚಾರವಾಗಿ ಮನೆಯಲ್ಲಿ ಜಗಳವಾಹಬಹುದು. ನಿಮ್ಮ ವಾಹನಕ್ಕೆ ಅನ್ಯರಿಂದ ಅಪಾಯ. ಸೋಲಿಸುವ ಮನೋಭಾವದಿಂದ ಆಟವಾಡುವುದು ಬೇಡ. ಸಂಗಾತಿಯನ್ನು ತಮಾಷೆ ಮಾಡಲು ಹೋಗಿ ವೈಮನಸ್ಸು ಉಂಟಾಗಬಹದು. ನಿದ್ರೆಯಲ್ಲಿ ಆಗಾಗ ಎಚ್ಚರಿಕೆ ಆಗಬಹುದು. ವಾತಶಮನಕ್ಕೆ ವೈದ್ಯರನ್ನು ಭೇಟಿಯಾಗಿ.

ಮಿಥುನ ರಾಶಿ:

ಚಿಂತನೆಯಿಂದ ಮಾತ್ರ ಬಂದಿರುವ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವ ಬಗೆ ಅರಿಯದಾದೀತು. ಸಂಪತ್ತಿನ ಜೊತೆಗೆ ಶತ್ರುಗಳೂ ಬರುವರು. ದಾನವಾಗಿ ಕೊಟ್ಟಿದ್ದನ್ನು ಮತ್ತೆ ಕೇಳಿ ಪಡೆಯುವಿರಿ. ನಿಮ್ಮವರ ಮೇಲೆ ಕಾಳಜಿ ಹೆಚ್ಚಿರುವುದು. ಕುಟುಂಬವನ್ನು ನಡೆಸುವ ಜವಾಬ್ದಾರಿ ಸಿಗಬಹುದು. ಇಂದು ನೀವು ಅನವಶ್ಯಕ ವಸ್ತುಗಳನ್ನು ಇಷ್ಟಪಡುವಿರಿ. ಸದಾಕಾಲ ಸಂತೋಷದಿಂದ ಇರಲು ನೀವೇ ಏನಾದರೂ ಕ್ರಮವನ್ನು ಅನುಸರಿಸುವಿರಿ.

ಕರ್ಕಾಟಕ ರಾಶಿ:

ವಾಹನದಿಂದ‌ ಬಿದ್ದು ಪೆಟ್ಟು ಮಾಡಿಕೊಳ್ಳಬೇಡಿ, ಜಾಗರೂಕತೆಯಲ್ಲಿ ಇರಿ. ನಿಮ್ಮ ನಡೆಯನ್ನು ತಿಳಿಯಲು ಜನರು ಕಷ್ಟಪಡುವರು. ನಿಮ್ಮ ಮಾತಿನಲ್ಲಿ ಸ್ಪಷ್ಟತೆ ಇರಲಿ. ಯೋಜನೆಗಳನ್ನು ಸರಿಯಾಗಿ ಬಿತ್ತರಿಸಿ. ಕೆಲಸವನ್ನು ಒಂಟಿಯಾಗಿ ಮಾಡಲು ಹಿಂಜರಿಯುವಿರಿ. ನಿಮಗೆ ಎಲ್ಲವೂ ಬಂಧನದಂತೆ ಅನ್ನಿಸುವುದು. ಪ್ರೀತಿಸುವ ವಸ್ತುವೊಂದು ಇಂದು ಹಾಳಾಗಿ ಹೋಗಲಿದೆ. ಕೈಗೆ ಸಿಗದ ಹಣ್ಣು ಹುಳಿ ಎನ್ನುವುದು ಸಹಜವೇ. ಮನಸ್ಸಿನ ದುಗುಡವನ್ನು ಶಾಂತಮಾಡಿಕೊಳ್ಳುವಿರಿ.

ಸಿಂಹ ರಾಶಿ:

ಏಕಮುಖವಾದ ನಿರ್ಧಾರವನ್ನು ತೆಗದುಕೊಂಡು ನೀವು ಒಬ್ಬೊಟಿಯಾಗಬೇಕಾದೀತು. ನಿಮ್ಮ ಮಾತು ಪ್ರೇರಣೆಯಾಗಬಹುದು. ಎಲ್ಲರ ಜೊತೆ ಚರ್ಚಿಸಿ ಅವರನ್ನು ತೆಗೆದುಕೊಂಡು ಹೋಗಿ. ಸಿಟ್ಟಿನಿಂದ ಏನನ್ನೂ ಸಾಧಿಸಲಾಗದು ಎಂಬ ಸತ್ಯವು ತಿಳಿಯಬಹುದು. ಪ್ರಯಾಣದಿಂದ ಆಯಾಸವಾಗಲಿದೆ. ಮಕ್ಕಳಿಲ್ಲದೇ ಬೇಸರ ಕಾಡಬಹುದು. ಏಕಾಂಗಿಯಾಗಿ ಎದುರಿಸುವುದು ಕಷ್ಟವಾಗುವುದು.

ಕನ್ಯಾ ರಾಶಿ:

ನಿಮ್ಮ ಜೀವನದಲ್ಲಿ ಪ್ರಮುಖರು ಯಾರೆಂಬ ಸರಿಯಾದ ಚಿತ್ರಣವು ನಿಮಗೆ ಸಿಗಲಿದೆ. ಇಂದು ನಿಮ್ಮ ಲೆಕ್ಕಾಚಾರಗಳು ಬುಡಮೇಲಾದೀತು. ಪ್ರಯಾಣ ಮಾಡುವ ಸಂದರ್ಭ ಬರಬಹುದು. ದೂರದ ಯಾತ್ರೆಯು ಕಾರಣಾಂತರಗಳಿಂದ ಮುಂದೆಹೋಗುವುದು. ಹಣಕಾಸಿನ ವಿಚಾರಕ್ಕೆ ಅಪವಾದ ಬರಬಹುದು. ನಿಮ್ಮನ್ನು ಪರೋಕ್ಷವಾಗಿ ಯಾರದರೂ ನಿಂದಿಸಬಹುದು. ಮನಸ್ಸಿನಲ್ಲಿ ಸಾವಧಾನತೆ ಇರದು.

ತುಲಾ ರಾಶಿ:

ನಿಮ್ಮಿಂದ ನಿಮ್ಮ ತಂದೆ, ತಾಯಿಯರು ಬೇಸರಪಟ್ಟುಕೊಳ್ಳುವರು. ವಿವಾಹ ಯೋಗವನ್ನು ನಿರ್ಲಕ್ಷಿಸುವುದು ಬೇಡ. ಮಕ್ಕಳು ನಿಮಗೆ ಖುಷಿಯನ್ನು ತಂದುಕೊಟ್ಟಾರು. ಯಾವುದಾದರೊಂದು ಕೌಶಲದ ಕಡೆ ನಿಮ್ಮ ಗಮನ ಹೆಚ್ಚಾಗುವುದು. ಬಂಧುಗಳ ವಿಯೋಗದಿಂದ ಮನಸ್ಸಿಗೆ ಭಾರ. ವಿದ್ಯಾರ್ಥಿಗಳು ಬಹಳ ಸೋಮಸರಿಗಳಾಗುವರು. ಸಂಗಾತಿಯ ಜೊತೆ ನಿಮಗಾದ ಸುಖ ಹಾಗೂ ದುಃಖವನ್ನು ಹಂಚಿಕೊಳ್ಳುವಿರಿ. ಅಮೂಲ್ಯವಾದ ವಸ್ತುಗಳು ಪಡೆದುಕೊಳ್ಳುವಿರಿ.

ವೃಶ್ಚಿಕ ರಾಶಿ:

ನಿಮ್ಮ ಪ್ರಮಾಣಿಕ ಪ್ರಯತ್ನವನ್ನು ವಂಚನೆ ಇಲ್ಲದೇ ಮಾಡಿ. ಆರ್ಥಿಕವಾಗಿ ಇಂದು ಸಬಲರಾಗುವಿರಿ.‌ ಕೆಲಸದಲ್ಲಿ ವಿಘ್ನವು ಬರುವ ಸಾಧ್ಯತೆ ಇದೆ. ವಿದೇಶಕ್ಕೆ ಹೋಗುವ ನಿಮ್ಮ‌ಕನಸು ನನಸಾಗಬಹುದು. ವಿದ್ಯಾಭ್ಯಾಸದ ವಿಚಾರದಲ್ಲಿ ಮಕ್ಕಳ ಮಾತನ್ನೂ ಕೇಳಿ, ತೀರ್ಮಾನಕ್ಕೆ ಬನ್ನಿ. ಹಿತಶತ್ರುಗಳು ನಿಮಗೆ ಯಶಸ್ಸು ಬಾರದಂತೆ ನೋಡಿಕೊಳ್ಳುವರು. ಮೋಸ ಹೋಗುವಿರಿ. ಸ್ವಲ್ಪ ವಿಳಂಬ ಮಾಡಿ. ನೀವು ಹೇಳಿದ ಕೆಲಸವೂ ವೇಗವಾಗಿ ಮುಗಿಯದು. ಸ್ನೇಹಿತರಿಗೆ ಬೇಸರವಾಗಬಾರದೆಂದು ಅವರ ಜೊತೆ ಸಮಸ್ಯೆ ಕಳೆಯುವಿರಿ.

ಧನು ರಾಶಿ:

ಬೇಡದ್ದನ್ನು ನೀವು ನಿಮ್ಮ ಬಳಿ ಇಟ್ಟುಕೊಳ್ಳುವಿರಿ. ನಿಮ್ಮನ್ನು ಕಂಡು ಹೊಟ್ಟಕಿಚ್ಚು ಪಡುವ ಜನರಿರುತ್ತಾರೆ ನಿಮ್ಮ ಸುತ್ತ. ಅವರನ್ನು ನಗಣ್ಯ ಮಾಡಬೇಡಿ. ಅವರನ್ನೇ ದೂರವಿಡಿ ಅಥವಾ ಅವರಿಂದ ನೀವೇ ದೂರವಾಗಿ. ಚರಾಸ್ತಿಯ ವಿಚಾರವಾಗಿ ಮಾತುಗಳು ಮನೆಯಲ್ಲಿ ಬರಬಹುದು. ಆಲಸ್ಯದಿಂದ ವಿಶ್ರಾಂತಿ ಪಡೆಯುವಿರಿ. ಸಂಗಾತಿಯ ಜೊತೆ ಮುನಿಸು ಕಡಿಮೆ ಮಾಡಿಕೊಳ್ಳಿ. ಪ್ರೇಮಕ್ಕಾಗಿ ಹೆಚ್ಚು ಖರ್ಚನ್ನು ಮಾಡಬೇಕಾದೀತು. ಹಿತಶತ್ರುಗಳ ಬಗ್ಗೆ ನಿಮ್ಮ ಊಹೆಯು ಸುಳ್ಳಾಗಬಹುದು.

ಇದನ್ನೂ ಓದಿ: ಜುಲೈ 2026 ಮಾಸ ಭವಿಷ್ಯ: ಈ ರಾಶಿಯ ಜನರಿಗೆ ಪರಿವರ್ತನಾ ಯೋಗ; ಜುಲೈ ತಿಂಗಳಲ್ಲಿ ಶುಭವೋ ಶುಭ

ಮಕರ ರಾಶಿ:

ಸರ್ಕಾರಿ ಕೆಲಸಗಳು ನಿಧಾನವಾಗಿ ಮುಂದುವರಿಯುವುದು. ಮಾತಿನಿಂದ ಮಾತ್ರ ಎಲ್ಲವೂ ಸರಿಯಾಗುವುದು ಎನ್ನುವ ಭ್ರಮೆಯಿಂದ ಹೊರಬನ್ನಿ. ಗೃಹನಿರ್ಮಾಣದ ಕಾರ್ಯವು ಹಣಕಾಸಿನ ಅಭಾವದಿಂದ ಸ್ಥಗಿತಗೊಳ್ಳಬಹುದು. ನಿಮ್ಮ ನಿರುದ್ಯೋಗವನ್ನು ಕಂಡು ಯಾರಾದರೂ ತಾತ್ಕಾಲಿಕ ಕೆಲಸವನ್ನು ಕೊಡುವರು. ಮಾತಿನ ಮೇಲೆ ಹಿಡಿತವನ್ನು ಇಟ್ಟು, ಆಲೋಚಿಸಿ ಮಾತನಾಡಿ. ಯಾವುದೇ ನಿರ್ಧಾರಗಳನ್ನು ಆ ಕ್ಷಣದಲ್ಲಿಯೇ ತೆಗೆದುಕೊಂಡು ಆಮೇಲೆ ಚಿಂತೆಗೆ ಒಳಗಾಗುವಂತೆ ಮಾಡಿಕೊಳ್ಳಬೇಡಿ.

ಕುಂಭ ರಾಶಿ:

ಯಾರೊಂದಿಗೂ ಸಂಪೂರ್ಣ ನಿಜವನ್ನು ಹೇಳಿಬಿಡಬೇಡಿ. ಪ್ರಮುಖ ಕಾರ್ಯಗಳಿಗೆ ಮನೆಯವರ ಸಹಾಯ ಕೇಳುವಿರಿ. ನಿಮ್ಮ‌ ಶಿಸ್ತಿನ ಕೆಲಸದಿಂದ ಕೆಲವರಿಗೆ ಬೇಸರವಾಗಬಹುದು.‌ ದೂರ ಬಂಧುಗಳ ಪರಿಚಯವಾಗಲಿದೆ. ಒತ್ತಡಗಳಿದ್ದರೂ ನೀವು ನಿಮ್ಮ ಕೆಲಸ ಮಾಡಿ ಮುಗಿಸುವಿರಿ. ದಾಂಪತ್ಯದಲ್ಲಿ ಕಲಹವಿದ್ದರೂ ನೆಮ್ಮದಿ ಇರಲಿದೆ. ಕಳೆದುಕೊಂಡ ವಸ್ತುವನ್ನು ಪಡೆಯಲಿದ್ದೀರಿ. ಆಪ್ತರೆಂದು ಮಾತಿನಲ್ಲಿ ಹಿಡಿತವಿಲ್ಲದೇ ಏನನ್ನಾದರೂ ಹೇಳುವಿರಿ.

ಮೀನ ರಾಶಿ:

ಇಂದು ಲೋಚಿಸದೇ ಯಾವುದೇ ಸಾಹಸ ಕಾರ್ಯದ ಕಡೆ ಮುನ್ನುಗ್ಗಬೇಡಿ. ಯಾರನ್ನೂ ನಿರೀಕ್ಷಿಸುತ್ತ ನಿಮ್ಮನ್ನು ಖಾಲಿ ಬಿಡಲಾರಿರಿ. ಉದ್ಯೋಗದ ನಿಮಿತ್ತ ದೂರ ಪ್ರಯಾಣವು ಅನಿವಾರ್ಯವಾಗುವುದು. ಸಂತಾನದ ಶುಭ ವಾರ್ತೆಯಿಂದ ಇಂದು ಸಂತಸ. ಯೋಜಿತ ಕಾರ್ಯಗಳನ್ನು ಒಂದೊಂದಾಗಿಯೇ ಮಾಡಲು ತೊಡಗಬಹುದು. ಅವಶ್ಯಕತೆ ಇದ್ದರೆ‌ ಮಾತ್ರ ಮುಂದುವರಿಯುವುದು ಉತ್ತಮ. ಭವಿಷ್ಯದ ನಾಳೆಯ ಕುರಿತು ಅತಿಯಾದ ಯೋಚನೆ ಬೇಕಾಗಿಲ್ಲ.‌ ಖುಷಿಯಿಂದ ಸ್ವೀಕರಿಸಿ ಎಲ್ಲವನ್ನೂ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಜ್ಯೇಷ್ಠ, ಸೌರ ಮಾಸ : ಮಿಥುನ, ಮಹಾನಕ್ಷತ್ರ : ಆರ್ದ್ರಾ, ವಾರ : ಶುಕ್ರ ಪಕ್ಷ : ಕೃಷ್ಣ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಧನಿಷ್ಠಾ, ಯೋಗ : ವಿಷ್ಕಂಭ, ಕರಣ : ಭದ್ರ, ಸೂರ್ಯೋದಯ – 05 – 58 am, ಸೂರ್ಯಾಸ್ತ – 06 – 48 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:48 – 12:24, ಯಮಗಂಡ ಕಾಲ 15:36 – 17:13, ಗುಳಿಕ ಕಾಲ 07:34 – 09:11

-ಲೋಹಿತ್ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುಂಬೈ ಮ್ಯಾನ್​ಹೋಲ್ ದುರಂತ; ಬಿಎಂಸಿ ಅಸಿಸ್ಟೆಂಟ್ ಕಮಿಷನರ್ ಸೇರಿ ನಾಲ್ವರು ಅಧಿಕಾರಿಗಳು ಅಮಾನತು – Kannada News | 4 BMC officials suspended after man dies after falling into manhole in Mumbai

ಮುಂಬೈ, ಜುಲೈ 2: ಮುಂಬೈನಲ್ಲಿ ಇಂದು ತೆರೆದ ಮ್ಯಾನ್​ಹೋಲ್ ಒಳಗೆ ಬಿದ್ದು 60 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಮುಂಬೈನ (Mumbai Rains) ಅಂಧೇರಿ ಈಸ್ಟ್‌ನ ಸಾಕಿನಾಕಾ ಪ್ರದೇಶದಲ್ಲಿ ತೆರೆದ ಮ್ಯಾನ್‌ಹೋಲ್‌ಗೆ ಬಿದ್ದು ಅಸ್ಲಾಂ ಇಸಾಕ್ ಶೇಖ್ ಎಂಬುವವರು ಮೃತಪಟ್ಟ ಬೆನ್ನಲ್ಲೇ ಬಿಎಂಸಿ ಕಮಿಷನರ್ ಅಶ್ವಿನಿ ಭಿಡೆ ಕಠಿಣ ಕ್ರಮ ಕೈಗೊಂಡಿದ್ದಾರೆ. ಕರ್ತವ್ಯ ಲೋಪ ಹಾಗೂ ನಿರ್ಲಕ್ಷ್ಯದ ಆರೋಪದ ಮೇಲೆ ‘ಎಲ್’ ವಾರ್ಡ್‌ನ ಸಹಾಯಕ ಕಮಿಷನರ್ ಧನಾಜಿ ಹೇರ್ಲೇಕರ್ ಸೇರಿದಂತೆ 4 ಹಿರಿಯ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.

ನಿರ್ವಹಣಾ ಕಾಮಗಾರಿಗಳ ವೇಳೆ ಕನಿಷ್ಠ ಸುರಕ್ಷತಾ ನಿಯಮಗಳನ್ನು ಪಾಲಿಸದ ಕಾರಣಕ್ಕಾಗಿ ಈ ಕೆಳಗಿನ ಅಧಿಕಾರಿಗಳನ್ನು ಅಮಾನತು ಮಾಡಿ ತನಿಖೆಗೆ ಆದೇಶಿಸಲಾಗಿದೆ. ಅವರೆಂದರೆ,

ಧನಾಜಿ ಹೇರ್ಲೇಕರ್ – ಸಹಾಯಕ ಕಮಿಷನರ್ (L ವಾರ್ಡ್)

ದೀಪಕ್ ಚೌಗುಲೆ – ಸಹಾಯಕ/ಉಪ ಎಂಜಿನಿಯರ್ (ನಿರ್ವಹಣೆ)

ಅಭಿಜಿತ್ ಚೌಗುಲೆ – ಜೂನಿಯರ್ ಎಂಜಿನಿಯರ್ (ನಿರ್ವಹಣೆ)

ಉತ್ತಮ ಪಾಟೀಲ್ – ಸಹಾಯಕ ಎಂಜಿನಿಯರ್ (ಒಳಚರಂಡಿ ಕಾರ್ಯಾಚರಣೆ ವಿಭಾಗ)

ಇದನ್ನೂ ಓದಿ: ಮುಂಬೈನಲ್ಲಿ ತೆರೆದ ಮ್ಯಾನ್‌ಹೋಲ್‌ಗೆ ಬಿದ್ದು ವ್ಯಕ್ತಿ ಸಾವು; ನಗರದಲ್ಲಿ ಮಳೆಗೆ 3ನೇ ಬಲಿ

ಈ ಅಧಿಕಾರಿಗಳನ್ನು ಅಮಾನತುಗೊಳಿಸುವುದರ ಜೊತೆಗೆ, ಘಟನೆಗೆ ಕಾರಣವಾದ ಖಾಸಗಿ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಲು ಬಿಎಂಸಿ ಆದೇಶಿಸಿದೆ. ಅಲ್ಲದೆ, ಗುತ್ತಿಗೆದಾರನ ವಿರುದ್ಧ ‘ನರಹತ್ಯೆ’ ಪ್ರಕರಣ ದಾಖಲಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ದುರಂತ ಸಂಭವಿಸಿದ್ದು ಹೇಗೆ?:

ಖೈರಾನಿ ರಸ್ತೆಯಲ್ಲಿ ಒಳಚರಂಡಿಗೆ ಸುರಕ್ಷತಾ ಗ್ರಿಲ್ ಅಳವಡಿಸುವ ಕೆಲಸ ನಡೆಯುತ್ತಿತ್ತು. ಇದಕ್ಕಾಗಿ ಮೂವರು ಖಾಸಗಿ ಗುತ್ತಿಗೆ ಕಾರ್ಮಿಕರು ಮ್ಯಾನ್‌ಹೋಲ್ ಮುಚ್ಚಳವನ್ನು ತೆಗೆದಿದ್ದರು. ಆದರೆ, ಸುತ್ತಲೂ ಯಾವುದೇ ಬ್ಯಾರಿಕೇಡ್ ಅಥವಾ ಮುನ್ನೆಚ್ಚರಿಕೆ ಫಲಕಗಳನ್ನು ಹಾಕಿರಲಿಲ್ಲ. ಇದೇ ವೇಳೆ ರಸ್ತೆಯಲ್ಲಿ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಾ ನಡೆದುಕೊಂಡು ಹೋಗುತ್ತಿದ್ದ ಅಸ್ಲಾಂ ಶೇಖ್ ಅವರು ತೆರೆದಿದ್ದ ಮ್ಯಾನ್‌ಹೋಲ್ ಗಮನಿಸದೇ ಆಕಸ್ಮಿಕವಾಗಿ ಒಳಗೆ ಬಿದ್ದಿದ್ದಾರೆ. ಮಳೆಯ ನೀರು ತೀವ್ರ ರಭಸದಿಂದ ಹರಿಯುತ್ತಿದ್ದರಿಂದ ಅವರು ಭೂಗತ ಒಳಚರಂಡಿ ಪೈಪ್‌ಲೈನ್‌ನಲ್ಲಿ ಕೊಚ್ಚಿಹೋಗಿದ್ದರು. ಅಗ್ನಿಶಾಮಕ ದಳದವರು 4 ಗಂಟೆಗಳ ಸುದೀರ್ಘ ಕಾರ್ಯಾಚರಣೆಯ ಬಳಿಕ ಅವರ ಶವವನ್ನು ಹೊರತೆಗೆದಿದ್ದಾರೆ.

ಇದನ್ನೂ ಓದಿ: ಮುಂಬೈನಲ್ಲಿ ಭೀಕರ ದುರಂತ; ಶಾಲಾ ಬಸ್ ಮೇಲೆ ದೊಡ್ಡ ಮರ ಬಿದ್ದು 11 ವರ್ಷದ ವಿದ್ಯಾರ್ಥಿ ಸಾವು

10 ಲಕ್ಷ ರೂ. ಪರಿಹಾರ:

ಮುಂಬೈ ಮೇಯರ್ ರಿತು ತಾವ್ಡೆ ಅವರು ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಅಡಿಷನಲ್ ಮುನ್ಸಿಪಲ್ ಕಮಿಷನರ್ ನೇತೃತ್ವದಲ್ಲಿ ಹೈ-ಲೆವೆಲ್ ಕಮಿಟಿ ರಚಿಸಲಾಗಿದ್ದು, 7 ದಿನಗಳಲ್ಲಿ ಸಮಗ್ರ ವರದಿ ನೀಡಲು ಸೂಚಿಸಲಾಗಿದೆ. ಮುಂಬೈ ನಗರದಾದ್ಯಂತ ಇರುವ ಎಲ್ಲಾ ಮ್ಯಾನ್‌ಹೋಲ್‌ಗಳನ್ನು ಮುಂದಿನ 8 ದಿನಗಳ ಒಳಗೆ 100% ಪರಿಶೀಲಿಸಿ, ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳುವಂತೆ ಬಿಎಂಸಿ ತನ್ನ ಎಲ್ಲಾ 26 ವಾರ್ಡ್‌ಗಳ ಅಧಿಕಾರಿಗಳಿಗೆ ಕಡ್ಡಾಯ ಆದೇಶ ನೀಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:48 pm, Thu, 2 July 26

Source link

IND vs ENG: ವೈಭವ್​ಗೆ 2ನೇ ಪಂದ್ಯದಲ್ಲೂ ಅವಕಾಶ ಸಿಗಲ್ಲ ಎಂದ ದಿನೇಶ್ ಕಾರ್ತಿಕ್ – Kannada News | IND vs ENG 2nd T20: Dinesh Karthik Predicts Playing XI, Sanju Samson Favored Over Vaibhav

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಮೊದಲ ಟಿ20 ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಚೆಸ್ಟರ್-ಲೆ-ಸ್ಟ್ರೀಟ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತದ ಇನ್ನಿಂಗ್ಸ್ ಮುಗಿಯುವವರೆಗೂ ಸಾವಧಾನದಿಂದ ಕಾದಿದ್ದ ಮಳೆರಾಯ ಅದಾದ ಬಳಿಕ ಇಂಗ್ಲೆಂಡ್‌ ಆಟಗಾರರು ಅಂಗಳಕ್ಕಿಳಿಯುವುದಕ್ಕೂ ಬಿಡಲಿಲ್ಲ. ಹೀಗಾಗಿ ಪಂದ್ಯವನ್ನು ರದ್ದುಗೊಳಿಸಬೇಕಾಯಿತು. ಇದೀಗ ಉಭಯ ದೇಶಗಳ ನಡುವಿನ ಎರಡನೇ ಪಂದ್ಯ ಜುಲೈ 4 ರಂದು ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದ್ದು, ಈ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಳ್ಳಲು ಎರಡೂ ತಂಡಗಳು ಹೋರಾಡಲಿವೆ. ಆದಾಗ್ಯೂ ಎರಡನೇ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಯಾವೆಲ್ಲ ಬದಲಾವಣೆಗಳಾಗಲಿವೆ. ವೈಭವ್ ಸೂರ್ಯವಂಶಿಗೆ (Vaibhav Sooryavanshi) ಆಡುವ ಅವಕಾಶ ಸಿಗುತ್ತಾ ಎಂಬುದು ಕುತೂಹಲ ಮೂಡಿಸಿದೆ. ಆದರೆ ಟೀಂ ಇಂಡಿಯಾದ ಮಾಜಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಹೇಳುವ ಪ್ರಕಾರ, ಎರಡನೇ ಪಂದ್ಯದಲ್ಲೂ ವೈಭವ್​ಗೆ ಆಡುವ ಅವಕಾಶ ಸಿಗುವುದಿಲ್ಲವಂತೆ.

ವೈಭವ್ ಇನ್ನು ಕಾಯಬೇಕಾಗುತ್ತದೆ

ಎರಡನೇ ಟಿ20 ಪಂದ್ಯಕ್ಕೆ ಟೀಂ ಇಂಡಿಯಾದ ಪ್ಲೇಯಿಂಗ್ 11 ಹೇಗಿರಲಿದೆ ಎಂಬುದನ್ನು ಕ್ರಿಕ್‌ಬಜ್‌ನಲ್ಲಿ ವಿವರಿಸಿದ ದಿನೇಶ್ ಕಾರ್ತಿಕ್, ‘ವೈಭವ್ ಸೂರ್ಯವಂಶಿ ಚೊಚ್ಚಲ ಪ್ರವೇಶಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ. ಆದರೆ ಎರಡನೇ ಪಂದ್ಯದಲ್ಲೂ ವೈಭವ್​ಗೆ ಆಡುವ ಅವಕಾಶ ಸಿಗುವುದು ಕಷ್ಟಕರ. ಏಕೆಂದರೆ 2026 ರ ಟಿ20 ವಿಶ್ವಕಪ್‌ನಲ್ಲಿ ಅಪಾರ ಒತ್ತಡದ ಸಮಯದಲ್ಲೂ ಸಂಜು ಸ್ಯಾಮ್ಸನ್ ತಂಡಕ್ಕಾಗಿ ಅವರು ಏನು ಮಾಡಿದರು ಎಂದು ಎಲ್ಲರಿಗೂ ತಿಳಿದಿದೆ. ಹೀಗಾಗಿ ಆಯ್ಕೆ ಮಂಡಳಿ ಸಂಜು ಸ್ಯಾಮ್ಸನ್‌ಗೆ ಮತ್ತೊಂದು ಅವಕಾಶ ನೀಡುತ್ತದೆ ಎಂದು ಭಾವಿಸುತ್ತೇನೆ. ಅಲ್ಲದೆ ಇಂತಹ ಸಂದರ್ಭದಲ್ಲಿ ನಾವು ಸಂಜು ಅವರನ್ನು ಬೆಂಬಲಿಸಬೇಕು. ಇದರಿಂದಾಗಿ ವೈಭವ್ ಚೊಚ್ಚಲ ಪಂದ್ಯವನ್ನಾಡಲು ಇನ್ನು ಕಾಯಬೇಕಾಗುತ್ತದೆ. ಅವಕಾಶ ಸಿಕ್ಕಾಗ ವೈಭವ್ ಕಂಡಿತವಾಗಿ ಅದ್ಭುತ ಪ್ರದರ್ಶನ ನೀಡುತ್ತಾರೆ ಏಕೆಂದರೆ ಅವರಲ್ಲಿ ಅಪಾರ ಪ್ರತಿಭೆ ಇದೆ ಎಂದು ಡಿಕೆ ಅಭಿಪ್ರಾಯಪಟ್ಟಿದ್ದಾರೆ.

ತಂಡದಲ್ಲಿ ಯಾವುದೇ ಬದಲಾವಣೆಗಳಿಲ್ಲ

ದಿನೇಶ್ ಕಾರ್ತಿಕ್ ಪ್ರಕಾರ, ಎರಡನೇ ಟಿ20ಪಂದ್ಯಕ್ಕೆ ಭಾರತ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಹೆಚ್ಚಿನ ಬದಲಾವಣೆ ಇರುವುದಿಲ್ಲ. ಆದಾಗ್ಯೂ, ತಿಲಕ್ ವರ್ಮಾ ಅವರ ಪ್ರದರ್ಶನವನ್ನು ಸೂಕ್ಷ್ಮವಾಗಿ ಗಮನಿಸಲಾಗುವುದು. ಚೆಸ್ಟರ್-ಲೆ-ಸ್ಟ್ರೀಟ್ ಮೈದಾನದ ಬೌಂಡರಿಗಳು ದೊಡ್ಡದಾಗಿದ್ದವು. ಆದರೆ ಮ್ಯಾಂಚೆಸ್ಟರ್ ಮೈದಾನದ ಬೌಂಡರಿಗಳು ಚಿಕ್ಕದಾಗಿವೆ ಮತ್ತು ಚಪ್ಪಟೆಯಾಗಿವೆ. ಹೀಗಾಗಿ ಇಲ್ಲಿ ರನ್ ಗಳಿಸುವುದು ಸುಲಭ. ಆದ್ದರಿಂದ ಭಾರತದ ಬ್ಯಾಟಿಂಗ್ ಕ್ರಮಾಂಕದಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ ಎಂದು ನಾನು ನಂಬುತ್ತೇನೆ, ಆದರೆ ಬೌಲಿಂಗ್‌ನಲ್ಲಿ ಬದಲಾವಣೆಯ ಸಾಧ್ಯತೆಯಿದೆ. ಮೊದಲ ಪಂದ್ಯದಲ್ಲಿ ಭಾರತವು ಮೂವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಿತ್ತು. ಆದರೆ ಈ ಪಂದ್ಯಕ್ಕೆ ಇಬ್ಬರು ಸ್ಪಿನ್ನರ್‌ಗಳನ್ನು ಆಡಿಸುವ ಸಾಧ್ಯತೆಗಳಿವೆ ಎಂದಿದ್ದಾರೆ.

‘ಅವರೆಲ್ಲರ ಪ್ಯಾಂಟ್ ಬಿಚ್ಚಿಸುತ್ತಿದ್ದ’; ವೈಭವ್​ಗೆ ಅವಕಾಶ ನೀಡದ್ದಕ್ಕೆ ರವಿಶಾಸ್ತ್ರಿ ಗರಂ

ಡಿಕೆ ಪ್ರಕಾರ 2ನೇ ಪಂದ್ಯಕ್ಕೆ ಭಾರತ ತಂಡ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ರವಿ ಬಿಷ್ಣೋಯ್/ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ಅರ್ಷದೀಪ್ ಸಿಂಗ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಬಿಟ್ಟಿ ಪ್ರಚಾರಕ್ಕಾಗಿ ರಾಮಾಯಣ ಚಿತ್ರದಲ್ಲಿ ಕಳಪೆ ವಿಎಫ್‌ಎಕ್ಸ್’: ಸೆಟ್‌ಗೆ ಭೇಟಿ ನೀಡಿದ ಕ್ರಿಯೇಟರ್ ಆರೋಪ – Kannada News | Ranbir Kapoor Ramayana Movie Bad VFX free marketing claim creator Dhruv Parikshit

ಬಾಲಿವುಡ್‌ನ ಬಹುನಿರೀಕ್ಷಿತ ಪೌರಾಣಿಕ ಚಿತ್ರ ‘ರಾಮಾಯಣ’ (Ramayana) ಸದ್ಯ ದೇಶಾದ್ಯಂತ ಭಾರಿ ಹೈಪ್ ಸೃಷ್ಟಿಸಿದೆ. ನಿತೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದ ಸೆಟ್‌ಗೆ ಇತ್ತೀಚೆಗೆ ಭೇಟಿ ನೀಡಿದ್ದ ಕಂಟೆಂಟ್ ಕ್ರಿಯೇಟರ್ ಧ್ರುವ್ ಪರೀಕ್ಷಿತ್ ಅವರು ಚಿತ್ರತಂಡದ ವಿರುದ್ಧ ಅತ್ಯಂತ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಚಿತ್ರದ ಮೇಲಿನ ಚರ್ಚೆ ಹಾಗೂ ‘ಬಿಟ್ಟಿ ಪ್ರಚಾರ’ಕ್ಕಾಗಿ ಚಿತ್ರತಂಡ ಉದ್ದೇಶಪೂರ್ವಕವಾಗಿಯೇ ರಣಬೀರ್ ಕಪೂರ್ ಅವರ ‘ರಾಮ ಗ್ಲಿಂಪ್ಸ್’ ವಿಡಿಯೋದಲ್ಲಿ ಕಳಪೆ ವಿಎಫ್‌ಎಕ್ಸ್ (VFX) ಬಳಸಲಾಗಿತ್ತು ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಈ ವರ್ಷದ ಆರಂಭದಲ್ಲಿ ಬಿಡುಗಡೆಯಾಗಿದ್ದ ರಾಮಾಯಣ ಚಿತ್ರದ ‘ರಾಮ ಗ್ಲಿಂಪ್ಸ್’ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಚಿತ್ರದ ಭವ್ಯತೆ ಮೆಚ್ಚುಗೆ ಗಳಿಸಿದರೂ, ಅದರಲ್ಲಿನ ವಿಎಫ್‌ಎಕ್ಸ್, ಸಿಜಿಐ ಮತ್ತು ರಾಕ್ಷಸರ ಕ್ಯಾರೆಕ್ಟರ್ ಡಿಸೈನ್‌ಗಳು ವಿಡಿಯೋ ಗೇಮ್‌ನಂತೆ ಕಳಪೆಯಾಗಿವೆ ಎಂದು ಭಾರಿ ಟೀಕೆ ವ್ಯಕ್ತವಾಗಿತ್ತು. ಆಗ ಚಿತ್ರತಂಡವು ಸಿನಿಮಾ ಬಿಡುಗಡೆಯ ವೇಳೆಗೆ ಎಲ್ಲವನ್ನೂ ಸರಿಪಡಿಸುವುದಾಗಿ ಭರವಸೆ ನೀಡಿತ್ತು.

‘ಕ್ರಿಯೇಟರ್ಸ್ ಡೇ’ ವೇಳೆ ಬಹಿರಂಗವಾದ ಸತ್ಯ?

ಇತ್ತೀಚೆಗೆ ‘ರಾಮಾಯಣ’ ಚಿತ್ರತಂಡವು ಸಿನಿಮಾದ ಸೆಟ್‌ನಲ್ಲಿ ‘ಕ್ರಿಯೇಟರ್ಸ್ ಡೇ’ ಆಯೋಜಿಸಿತ್ತು. ದೇಶದ ಪ್ರಮುಖ ಕಂಟೆಂಟ್ ಕ್ರಿಯೇಟರ್‌ಗಳು ಸೆಟ್‌ಗೆ ಭೇಟಿ ನೀಡಿ ನಿರ್ದೇಶಕ ನಿತೇಶ್ ತಿವಾರಿ, ನಿರ್ಮಾಪಕ ನಮಿತ್ ಮಲ್ಹೋತ್ರಾ ಮತ್ತು ನಟರಾದ ರಣಬೀರ್ ಕಪೂರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರನ್ನು ಭೇಟಿ ಮಾಡಿದ್ದರು. ಇದರಲ್ಲಿ ಭಾಗಿಯಾಗಿದ್ದ ಧ್ರುವ್ ಪರೀಕ್ಷಿತ್, ತಮ್ಮ ಇನ್‌ಸ್ಟಾಗ್ರಾಮ್ ವಿಡಿಯೋದ ಕಾಮೆಂಟ್ ಸೆಕ್ಷನ್‌ನಲ್ಲಿ ನೆಟ್ಟಿಗರೊಬ್ಬರು ವಿಎಫ್‌ಎಕ್ಸ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಈ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

‘ಹೌದು, ಆ ಗ್ಲಿಂಪ್ಸ್ ವಿಡಿಯೋದಲ್ಲಿ ವಿಎಫ್‌ಎಕ್ಸ್ ಅಪೂರ್ಣವಾಗಿತ್ತು. ಆದರೆ ಚಿತ್ರತಂಡ ಹೊಂದಿರುವ ವಿಷನ್ ಏನೆಂಬುದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ನಾನು ಸೆಟ್‌ನಲ್ಲಿ ನೋಡಿದ ಕೆಲವು ದೃಶ್ಯಗಳು ಹಾಲಿವುಡ್‌ನ ‘ಅವತಾರ್’ ಸಿನಿಮಾದ ರೇಂಜ್‌ನಲ್ಲಿದ್ದವು. ಕ್ಯಾರೆಕ್ಟರ್ ಡಿಸೈನ್ ಮತ್ತು ರಾಮಾಯಣದ ಜಗತ್ತು ಅದ್ಭುತವಾಗಿ ಮೂಡಿಬಂದಿದೆ’ ಎಂದು ಧ್ರುವ್ ಹೇಳಿದ್ದಾರೆ.

ಉಚಿತ ಪ್ರಚಾರಕ್ಕಾಗಿ ಕಳಪೆ ವರ್ಷನ್ ಬಿಡುಗಡೆ?

‘ನನಗೆ ಅಲ್ಲಿನ ವಿಎಫ್‌ಎಕ್ಸ್ ಆರ್ಟಿಸ್ಟ್ ಒಬ್ಬರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ಅವರು ಹೇಳಿದ ಪ್ರಕಾರ, ಚಿತ್ರತಂಡದ ಬಳಿ ಅದಕ್ಕಿಂತಲೂ ಅತ್ಯುತ್ತಮ ಕ್ವಾಲಿಟಿಯ ದೃಶ್ಯಗಳು ಸಿದ್ಧವಿದ್ದವು. ಆದರೂ ಉದ್ದೇಶಪೂರ್ವಕವಾಗಿಯೇ ಕಳಪೆ ವರ್ಷನ್ ಬಿಡುಗಡೆ ಮಾಡಲಾಯಿತು. ಏಕೆಂದರೆ, ಇಂಟರ್ನೆಟ್‌ನಲ್ಲಿ ಈ ಬಗ್ಗೆ ನೆಗೆಟಿವ್ ಚರ್ಚೆಗಳು ಮತ್ತು ಟೀಕೆಗಳು ಆರಂಭವಾದರೆ, ಅದು ಚಿತ್ರಕ್ಕೆ ಉಚಿತವಾಗಿ ದೊಡ್ಡ ಮಟ್ಟದ ಪ್ರಚಾರ ನೀಡುತ್ತದೆ ಎಂಬುದು ಚಿತ್ರತಂಡದ ಪ್ಲಾನ್ ಆಗಿತ್ತು’ ಎಂದು ಧ್ರುವ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ‘ರಾಮಾಯಣ’ ಚಿತ್ರಕ್ಕೆ ನಂ.1 ಸ್ಥಾನ; 2026ರ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಯಶ್ ಅಬ್ಬರ

ವಿವಾದದ ಬೆನ್ನಲ್ಲೇ ಕಾಮೆಂಟ್ ಡಿಲೀಟ್!

ಧ್ರುವ್ ಪರೀಕ್ಷಿತ್ ಅವರ ಈ ಕಾಮೆಂಟ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಅವರು, ತಕ್ಷಣವೇ ಆ ಕಾಮೆಂಟ್ ಡಿಲೀಟ್ ಮಾಡಿದ್ದಾರೆ. ಅದರ ಬದಲಿಗೆ ಹೊಸದಾಗಿ ಬರೆದುಕೊಂಡಿರುವ ಅವರು, ‘ವಿಎಫ್‌ಎಕ್ಸ್ ಕೆಲಸಗಳು ಸದ್ಯ ಪ್ರಗತಿಯಲ್ಲಿದ್ದು, ಅದ್ಭುತವಾಗಿ ಮೂಡಿಬರುತ್ತಿದೆ. ನಮಗೆ ಕೆಲವು ಅಪೂರ್ಣ ತುಣುಕುಗಳನ್ನು ತೋರಿಸಲಾಗಿತ್ತು. ಕ್ಯಾರೆಕ್ಟರ್ ಡಿಸೈನ್‌ಗಳು ಅದ್ಭುತವಾಗಿವೆ. ಇದೊಂದು ಸುಂದರ ಫ್ಯಾಂಟಸಿ ಪ್ರಪಂಚದಂತೆ ಕಾಣಿಸಲಿದ್ದು, ಥಿಯೇಟರ್‌ನಲ್ಲಿ ದೊಡ್ಡ ಅನುಭವ ನೀಡಲಿದೆ’ ಎಂದು ಬದಲಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಅವರ ಮೊದಲ ಕಾಮೆಂಟ್‌ನ ಸ್ಕ್ರೀನ್‌ಶಾಟ್‌ಗಳು ಇಡೀ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನೈಸ್ ರೋಡ್ ಟೋಲ್ ದರ ಹೆಚ್ಚಳ ಬೆನ್ನಲ್ಲೇ ಬಿಎಂಟಿಸಿ ಬಸ್ ಟಿಕೆಟ್ ದರವೂ ಏರಿಕೆ ಸಾಧ್ಯತೆ – Kannada News | BMTC Bus Fares Likely to Increase After NICE Road Toll Hike

ಬೆಂಗಳೂರು, ಜುಲೈ 02: ಡೀಸೆಲ್ ದರ ಏರಿಕೆ ಹಾಗೂ ತೀವ್ರ ಆರ್ಥಿಕ ಸಂಕಷ್ಟ ಹಿನ್ನೆಲೆ ಈಗಾಗಲೇ ಬಿಎಂಟಿಸಿ ಶೇ44% ರಷ್ಟು ಟಿಕೆಟ್ ದರ ಏರಿಕೆಗೆ ಸರ್ಕಾರಕ್ಕೆ ಮನವಿ ಮಾಡಿದೆ. ಈ ಬೆನ್ನಲ್ಲೇ ಇದೀಗ ನೈಸ್ ರೋಡ್ ಮತ್ತು ನವಯುಗ ಟೋಲ್ ದರ ಏರಿಕೆ ಹಿನ್ನೆಲೆ ಈ ಟೋಲ್​ಗಳ ಮೂಲಕ ಸಂಚರಿಸುವ ಬಿಎಂಟಿಸಿ ಬಸ್​​​​ಗಳ ಟಿಕೆಟ್ ದರ ಏರಿಕೆ (BMTC Fare Hike) ಆಗುವ ಸಾಧ್ಯತೆಯಿದೆ. 20 ರಿಂದ 25 ರೂ ಹೆಚ್ಚಳವಾಗಲಿದೆ ಎನ್ನಲಾಗುತ್ತಿದ್ದು, ಇದಕ್ಕೆ ಪ್ರಯಾಣಿಕರು ಮತ್ತು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದಿನಿಂದ ನೈಸ್ ರೋಡ್ ಟೋಲ್ ದರ ಹೆಚ್ಚಳ

ಈಗಾಗಲೇ ಡೀಸೆಲ್ ದರ ಏರಿಕೆ ಮತ್ತು ಆರ್ಥಿಕ ಸಂಕಷ್ಟ ಹಿನ್ನೆಲೆ ಬಿಎಂಟಿಸಿ ಶೇ44% ರಷ್ಟು ಟಿಕೆಟ್ ದರ ಏರಿಕೆಗೆ ಗ್ರೀನ್ ಸಿಗ್ನಲ್ ನೀಡುವಂತೆ ಕಳೆದ ಬಾರಿಯ ಸಿಎಂ ಸಭೆಯಲ್ಲಿ ಮನವಿ ಮಾಡಿತ್ತು. ಈ ಬಗ್ಗೆ ಇಂದಿನ ಕ್ಯಾಬಿನೆಟ್​ನಲ್ಲೂ ಸಾರಿಗೆ ಸಚಿವರು ಟಿಕೆಟ್ ದರ ಏರಿಕೆಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲೇ ಇಂದಿನಿಂದ ನೈಸ್ ರೋಡ್ ಟೋಲ್ ದರ ಏರಿಕೆ ಆಗಿದೆ.

ಇದನ್ನೂ ಓದಿ: ರಾಜ್ಯ ಸಾರಿಗೆ ನೌಕರರ ವೇತನ ಹೆಚ್ಚಿಸಿ ಸರ್ಕಾರ ಆದೇಶ, ಎಷ್ಟು ಹೆಚ್ಚಳ? ಯಾವಾಗಿನಿಂದ ಜಾರಿಗೆ?

ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಸಂಸ್ಥೆ ಶೇ10% ರಷ್ಟು ಟೋಲ್ ದರ ಏರಿಕೆ ಮಾಡಿದೆ. ನೈಸ್ ಸಂಸ್ಥೆ ಕಳೆದ ವರ್ಷ ಜುಲೈನಲ್ಲಿ ಟೋಲ್ ದರ ಹೆಚ್ಚಳ ಮಾಡಿತ್ತು. ನೈಸ್ ರೋಡ್​ನ ಏಳು ಕಾರಿಡಾರ್ ಟೋಲ್ ದರವನ್ನು ಏರಿಕೆ ಮಾಡಲಾಗಿದೆ. ಮೈಸೂರು ಟು ಮಾಗಡಿ, ಮಾಗಡಿ ರೋಡ್ ಟು ತುಮಕೂರು ರೋಡ್, ಹೊಸೂರು ರೋಡ್ ಟು ಬನ್ನೇರುಘಟ್ಟ ರೋಡ್ ಸೇರಿದಂತೆ ಎಲ್ಲಾ ಟೋಲ್​ಗಳಲ್ಲೂ ದರ ಏರಿಕೆ ಮಾಡಲಾಗಿದೆ.

ವಾಹನ ಸವಾರರು ಆಕ್ರೋಶ

ಈ ಹಿಂದೆ ಮೈಸೂರು ರೋಡ್ ಟು ಮಾಗಡಿ ರೋಡ್ ರೋಡ್​ ಸಂಚಾರ ಮಾಡಲು ಬಸ್​ಗೆ 205 ರೂ ಇತ್ತು. ಇದೀಗ 226 ರೂ ಆಗಲಿದೆ, ಕಾರಿಗೆ 70 ರೂ, ಇದೀಗ 77 ರೂ ಮಾಡಲಾಗಿದೆ. ಈ ಹಿಂದೆ ಟ್ರಕ್ಕಿಗೆ 140 ರೂ ಇತ್ತು, ಇದೀಗ 154 ರೂ ಏರಿಕೆ ಮಾಡಲಾಗಿದೆ. ಇನ್ನು ಈ ಬಗ್ಗೆ ಮಾತನಾಡಿರುವ ವಾಹನ ಸವಾರರು, ಯಾವಾಗಲೂ ಟೋಲ್ ದರ ಏರಿಕೆ ಮಾಡುತ್ತಿರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

20 ರಿಂದ 25 ರೂ ಬಿಎಂಟಿಸಿ ಬಸ್ ಹೆಚ್ಚಳ?

ಇನ್ನು ನೈಸ್​ ರೋಡ್ ಟೋಲ್ ದರ ಏರಿಕೆ ಬೆನ್ನಲ್ಲೇ ಮಾದಾವರ ಮಾರ್ಗದಲ್ಲಿ ಸಂಚರಿಸುವ ಬಿಎಂಟಿಸಿ ಬಸ್ ದರ ಹೆಚ್ಚಳ ಮಾಡುವ ಸಾಧ್ಯತೆಯಿದೆ. 20 ರಿಂದ 25 ರೂ ಹೆಚ್ಚಳವಾಗಲಿದೆ. ಈಗಾಗಲೇ ನೆಲಮಂಗಲ ಟೋಲ್ ದರವು ಹೆಚ್ಚಳ ಮಾಡಲಾಗಿದೆ ಎನ್ನಲಾಗುತ್ತಿದೆ. ಇದೀಗ ನೈಸ್ ರೋಡ್ ಟೋಲ್ ದರವು ಏರಿಕೆ ಆಗಿದೆ. ಎರಡು ಟೋಲ್ ದರ ಏರಿಕೆ ಹಿನ್ನೆಲೆ, ನೆಲಮಂಗಲ ಮತ್ತು ಮಾದಾವರದಿಂದ ಎಲೆಕ್ಟ್ರಾನಿಕ್ಸ್ ಸಿಟಿಗೆ ಹೋಗುವ ಬಿಎಂಟಿಸಿ ಬಸ್​ ಟಿಕೆಟ್ ದರ ಏರಿಕೆ ಮಾಡಲು ಮುಂದಾಗಿದೆ. ಇದಕ್ಕೂ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ‌.

ಇದನ್ನೂ ಓದಿ: ಬೆಂಗಳೂರು ಸವಾರರಿಗೆ ಮತ್ತೊಂದು ಬಿಗ್ ಶಾಕ್: ಇಂದಿನಿಂದ ನೈಸ್ ರಸ್ತೆ, ಇ-ಸಿಟಿ ಫ್ಲೈಓವರ್ ಟೋಲ್ ದರ ಭಾರಿ ಏರಿಕೆ

ಒಂದೆಡೆ ಡೀಸೆಲ್ ದರ ಏರಿಕೆಯ ನೆಪವೊಡ್ಡಿ ಇಡೀ ಬೆಂಗಳೂರಿನಾದ್ಯಂತ ಬಿಎಂಟಿಸಿ ಟಿಕೆಟ್ ದರ ಏರಿಕೆಗೆ ಸಾರಿಗೆ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ, ಇತ್ತ ಪ್ರಮುಖ ಹೆದ್ದಾರಿಗಳ ಟೋಲ್ ದರಗಳೂ ದುಬಾರಿಯಾಗಿವೆ. ಇದು ಮುಂದಿನ ದಿನಗಳಲ್ಲಿ ವಾಹನ ಸವಾರರಿಗೆ ಹಾಗೂ ಬಸ್ ಪ್ರಯಾಣಿಕರಿಗೆ ‘ಡಬಲ್ ಶಾಕ್’ ಉಂಟಾಗುವ ಸಾಧ್ಯತೆಯಿದೆ.

ಕರ್ನಾಟಕದ ಮತ್ತಷ್ಟ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

1800 ಕಿ.ಮೀ ಸೈಕಲ್ ಜರ್ನಿ; ಅಭಿಮಾನಿಯ ಅಭಿಮಾನಕ್ಕೆ ಹಾರ್ದಿಕ್ ಫಿದಾ – Kannada News | Hardik Pandya’s Generous Gifts to 1800km Cycle Fan Deepak from Odisha

ಒಡಿಶಾದ 18 ವರ್ಷದ ದೀಪಕ್ ಎಂಬ ಯುವಕನೊಬ್ಬ ಭಾರತದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ನೋಡುವ ಸಲುವಾಗಿ 1,800 ಕಿ.ಮೀ ಸೈಕಲ್ ಸವಾರಿ ಮಾಡಿ ಬೆಂಗಳೂರಿಗೆ ಬಂದಿದ್ದಾನೆ. ಈ ಅಭಿಮಾನಿಯ ಅಭಿಮಾನಕ್ಕೆ ಮನಸೋತ ಹಾರ್ದಿಕ್ ಯಾರೂ ನಿರೀಕ್ಷಿಸದ ಕೆಲವು ಅದ್ಭುತ ಉಡುಗೊರೆಗಳನ್ನು ನೀಡಿ ಆ ಯುವಕನ ಸಂತಸವನ್ನು ಇಮ್ಮಡಿಗೊಳಿಸಿದ್ದಾರೆ. ಹಾರ್ದಿಕ್ ಆ ಯುವಕನ ಪ್ರಯಾಣ ವೆಚ್ಚ ಮತ್ತು ಭವಿಷ್ಯದ ಅಗತ್ಯಗಳಿಗಾಗಿ ಸುಮಾರು 1.5 ಲಕ್ಷ ರೂಪಾಯಿಗಳ ಆರ್ಥಿಕ ಸಹಾಯವನ್ನು ನೀಡಿದ್ದಾರೆ. ಇದಲ್ಲದೆ, ಅವರು ಸಹಿ ಮಾಡಿದ ಟೀಂ ಇಂಡಿಯಾ ಜೆರ್ಸಿ ಮತ್ತು ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರ ಒಂದು ಜೋಡಿ ಶೂಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಷ್ಟೇ ಅಲ್ಲ, ದೀಪಕ್ ತನ್ನ ಹಿಂದಿರುಗುವ ಪ್ರಯಾಣದಲ್ಲಿ ಯಾವುದೇ ತೊಂದರೆ ಎದುರಿಸದಂತೆ ಒಡಿಶಾಗೆ ಸುರಕ್ಷಿತವಾಗಿ ಮರಳಲು ಹಾರ್ದಿಕ್ ರೈಲು ಟಿಕೆಟ್ ಅನ್ನು ಸಹ ಬುಕ್ ಮಾಡಿಸಿ ಕೊಟ್ಟಿದ್ದಾರೆ.

Source link

Exit mobile version