ಸ್ಪ್ರಿಂಗ್ ಇದೆಯಾ? ಅಭಿಷೇಕ್ ಶರ್ಮಾ ಬ್ಯಾಟ್ ಚೆಕ್ ಮಾಡಿದ ನ್ಯೂಝಿಲೆಂಡ್ ಆಟಗಾರರು – Kannada News | New Zealand players checks Abhishek Sharma’s bat
ನ್ಯೂಝಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅಕ್ಷರಶಃ ಅಬ್ಬರಿಸಿದ್ದರು. ಈ ಅಬ್ಬರದೊಂದಿಗೆ ಅಭಿಷೇಕ್ ಶರ್ಮಾ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ಅರ್ಧಶತಕದ ಬಳಿಕ ಕೂಡ ಕಿವೀಸ್ ಬೌಲರ್ಗಳ ಬೆಂಡೆತ್ತಿದ ಯುವ ದಾಂಡಿಗ 20 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ ಅಜೇಯ 68 ರನ್ ಬಾರಿಸಿದ್ದರು. ಈ ಮೂಲಕ ಟೀಮ್ ಇಂಡಿಯಾ ಕೇವಲ 10 ಓವರ್ಗಳಲ್ಲಿ 155 ರನ್ ಸಿಡಿಸಿ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತ್ತು. ಈ ಗೆಲುವಿನ…