Headlines

ಹೈದರಾಬಾದ್​ನಲ್ಲಿ ಜುಲೈ 14ರಿಂದ ಮೂರು ದಿನಗಳ ಕಾಲ ‘ಬ್ರಿಕ್ಸ್ ಟ್ರೇಡ್ ಯೂನಿಯನ್ ಶೃಂಗಸಭೆ 2026’ – Kannada News | Brics Trade Union Forum Summit 2026 from July 14 16 begins at Hyderabad

ಬ್ರಿಕ್ಸ್ ಟ್ರೇಡ್ ಯೂನಿಯನ್ ಫೋರಂ ಶೃಂಗಸಭೆImage Credit source: Youtube ಹೈದರಾಬಾದ್, ಜುಲೈ 14: ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಬ್ರಿಕ್ಸ್ (BRICS) ಶೃಂಗಸಭೆಯ ಭಾಗವಾಗಿ ಅತ್ಯಂತ ಪ್ರತಿಷ್ಠಿತ ‘ಬ್ರಿಕ್ಸ್ ಟ್ರೇಡ್ ಯೂನಿಯನ್ ಫೋರಮ್ (BTUF) ಶೃಂಗಸಭೆ 2026’ ಇವತ್ತು (ಜುಲೈ 14) ಆರಂಭಗೊಂಡಿದೆ. ಹೈದರಾಬಾದ್​ನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ಜುಲೈ 16ರವರೆಗೆ ಮೂರು ದಿನಗಳವರೆಗೆ ಇದೆ. ಭಾರತೀಯ ಮಜ್ದೂರ್ ಸಂಘ (BMS) ಈ ಮೂರು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸುತ್ತಿದ್ದು, ಭವಿಷ್ಯದ ಉದ್ಯೋಗಗಳು, ಕಾರ್ಮಿಕರ ಹಕ್ಕುಗಳು ಮತ್ತು…

Read More

ಅಪಾರ್ಟ್​ಮೆಂಟ್ ನಿರ್ವಹಣೆಗೆ ಬರಲಿದೆ ಹೊಸ ಕಾನೂನು: ನಿವಾಸಿಗಳ ಜತೆ ಸಮಾಲೋಚನೆ ನಡೆಸಲಿರುವ ಸಿಎಂ ಡಿಕೆ ಶಿವಕುಮಾರ್ – Kannada News | Karnataka New Apartment Law: CM DK Shivakumar to Hold Consultation with Apartment Owners and Residents on July 17

ಬೆಂಗಳೂರು, ಜುಲೈ 14: ಅಪಾರ್ಟ್​ಮೆಂಟ್ ನಿರ್ವಹಣೆ ಮತ್ತು ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಹೊಸ, ಸುಧಾರಿತ ಕಾನೂನನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಬೆಂಗಳೂರಿನ ಅಪಾರ್ಟ್​ಮೆಂಟ್ ಮಾಲೀಕರು ಹಲವು ವರ್ಷಗಳಿಂದ ಈ ಕುರಿತು ಒತ್ತಾಯಿಸುತ್ತಿದ್ದರು. ಅವರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಕರ್ನಾಟಕ ಸರ್ಕಾರವು ಹೊಸ ಕಾನೂನನ್ನು ರೂಪಿಸುತ್ತಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ. ಈ ಹೊಸ ಕಾನೂನನ್ನು ವಿಧಾನ ಮಂಡಲದಲ್ಲಿ ಮಂಡಿಸುವ ಮೊದಲು, ಎಲ್ಲಾ ಪಾಲುದಾರರ ಅಭಿಪ್ರಾಯಗಳನ್ನು ಸಂಗ್ರಹಿಸಲು ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿದೆ. ಮುಖ್ಯಮಂತ್ರಿ ಡಿ.ಕೆ….

Read More

ಹಿರಿಯ ಬಿಜೆಪಿ ನಾಯಕ, ಮಾಜಿ ಸಚಿವ ರಾಮಚಂದ್ರ ಗೌಡ ನಿಧನ: ಬಿ.ಎಸ್. ಯಡಿಯೂರಪ್ಪ ಸಂತಾಪ – Kannada News | Senior BJP Leader and Former Karnataka Minister Ramachandra Gowda Passes Away at 88

ಬೆಂಗಳೂರು, ಜುಲೈ 14: ಬಿಜೆಪಿಯ ಹಿರಿಯ ನಾಯಕ ಹಾಗೂ ಕರ್ನಾಟಕದ ಮಾಜಿ ಸಚಿವ ರಾಮಚಂದ್ರ ಗೌಡ (88) ಅವರು ಮಂಗಳವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ದಶಕಗಳ ಕಾಲ ಸಕ್ರಿಯ ರಾಜಕಾರಣದಲ್ಲಿದ್ದ ರಾಮಚಂದ್ರ ಗೌಡ ಅವರು ಜನಸಂಘದ ಕಾಲದಿಂದಲೂ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಕಟ್ಟುವಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು. ಬಿ.ಎಸ್. ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿಯೂ ಅವರು ಜವಾಬ್ದಾರಿ ನಿರ್ವಹಿಸಿದ್ದರು….

Read More

POCSO ಪ್ರಕರಣಗಳಿಗೆ ಬ್ರೇಕ್: ದೇಶದ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಲೈಂಗಿಕ ಶಿಕ್ಷಣ’ ಕಡ್ಡಾಯ, ಕೇಂದ್ರದ ಪ್ಲ್ಯಾನ್ – Kannada News | Centre Tells Supreme Court Age Appropriate Health Education Will Be Integrated Into Curriculum

ನವದೆಹಲಿ, ಜುಲೈ 14: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟಲು ಹಾಗೂ ಹದಿಹರೆಯದವರಲ್ಲಿ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ ಒಂದು ಐತಿಹಾಸಿಕ ಹೆಜ್ಜೆಯನ್ನಿಟ್ಟಿದೆ. ದೇಶಾದ್ಯಂತ ಇರುವ ಎಲ್ಲಾ ಶಾಲೆ ಮತ್ತು ಕಾಲೇಜುಗಳ ಪಠ್ಯಕ್ರಮದಲ್ಲಿ ‘ಸಮಗ್ರ ದೈಹಿಕ ಹಾಗೂ ಲೈಂಗಿಕ ಶಿಕ್ಷಣ’ವನ್ನು ಅಧಿಕೃತ ವಿಷಯವಾಗಿ ಪರಿಚಯಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ಅಧಿಕೃತವಾಗಿ ತಿಳಿಸಿದೆ. ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಆರ್. ಮಹಾದೇವನ್ ಅವರಿದ್ದ ಸುಪ್ರೀಂ ಕೋರ್ಟ್ ಪೀಠದ ಮುಂದೆ ಹಾಜರಾದ ಹೆಚ್ಚುವರಿ ಸಾಲಿಸಿಟರ್…

Read More

Video: ತಂದೆಯ ಅಗಲುವಿಕೆಯ ನೋವಿನಲ್ಲಿದ್ದ ಯುವಕನಿಗೆ ಸಾಂತ್ವನ ನೀಡಿದ ಶ್ವಾನ – Kannada News | A dog showed affection to a young man grieving the loss of his father

ಸ್ವಾಮಿ ನಿಷ್ಠೆಗೆ ಮತ್ತೊಂದು ಹೆಸರೇ ಈ ಶ್ವಾನ (Dog). ಈ ಶ್ವಾನಗಳ ನಿಷ್ಕಲ್ಮಶ ಪ್ರೀತಿ, ನಿಷ್ಠೆಗೆ ಸರಿಸಾಟಿ ಯಾವುದು ಇಲ್ಲ. ಈ ಮೂಕಪ್ರಾಣಿಗಳು ಮನುಷ್ಯನ ಆಪ್ತ ಸ್ನೇಹಿತ ಅಂತಾನೇ ಹೇಳಬಹುದು. ಮನೆ ಮಾಲೀಕ ದುಃಖದಲ್ಲಿದ್ದರೆ ತನ್ನದೇ ರೀತಿ ಕಾಳಜಿ ವಹಿಸುತ್ತದೆ, ಸಮಾಧಾನ ಮಾಡುತ್ತದೆ. ಇದೀಗ ಇಂತಹದ್ದೇ ಕ್ಷಣದ ವಿಡಿಯೋ ವೈರಲ್ ಆಗಿದೆ. ಶ್ವಾನವೊಂದು ಯುವಕನಿಗೆ ಸಮಾಧಾನ ಮಾಡಿದೆ. ತಂದೆಯನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದ ಯುವಕನಿಗೆ ಧೈರ್ಯ ತುಂಬಿದೆ. ಈ ವಿಡಿಯೋ ಸದ್ಯ ನೆಟ್ಟಿಗರ ಗಮನ ಸೆಳೆದಿದೆ. ಲಕ್ಕಿ…

Read More

‘ಜೋಡಿ ನಂ 1’ ವಿನ್ನರ್ ಆದ ಕೋಟೆ ಪ್ರಭಾಕರ್​-ಮಾಲತಿ ಜೋಡಿ; ಸಿಕ್ಕ ಹಣ ಎಷ್ಟು? – Kannada News | Jodi No 1 Season 3: Kote Prabhakar and Malathi Crowned as Winners

ಜೀ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಜೋಡಿ ನಂ 1 ಸೀಸನ್ 3’ ರ ರೋಮಾಂಚಕ ಗ್ರ್ಯಾಂಡ್ ಫಿನಾಲೆ ಮುಕ್ತಾಯಗೊಂಡಿದ್ದು, ಕೋಟೆ ಪ್ರಭಾಕರ್ ಮತ್ತು ಮಾಲತಿ ದಂಪತಿ ವಿನ್ನರ್ಸ್ ಆಗಿ ಹೊರಹೊಮ್ಮಿದ್ದಾರೆ. ವೇದಿಕೆಯ ಮೇಲಿದ್ದ ಪ್ರಬಲ ಎಂಟು ಜೋಡಿಗಳ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಅಂತಿಮವಾಗಿ ಲವ್ಲಿ ಸ್ಟಾರ್ ಪ್ರೇಮ್ ಮತ್ತು ಮಾಳವಿಕಾ ಅವರು ವಿಜೇತರ ಹೆಸರನ್ನು ಘೋಷಿಸುತ್ತಿದ್ದಂತೆ ಇಡೀ ವೇದಿಕೆಯಲ್ಲಿ ಸಂಭ್ರಮ ಮನೆಮಾಡಿತು. ವಿಜೇತ ಜೋಡಿಗೆ ಜೀ ಕನ್ನಡ ವಾಹಿನಿಯ ವತಿಯಿಂದ ಆಕರ್ಷಕ…

Read More

ಗೃಹ ಸಚಿವರ ತವರಲ್ಲೇ ಮತ್ತೆ ಮತ್ತೆ ಪರಾರಿಯಾಗ್ತಿದ್ದಾರೆ ಕೈದಿಗಳು! ಕಲಬುರಗಿ ಜೈಲಿನಿಂದ ಮೂವರು ಸಜಾ ಕೈದಿಗಳು ಎಸ್ಕೇಪ್ – Kannada News | Kalaburagi Jail Escape: Three Convicted Prisoners Flee Central Prison by Scaling Compound Wall

ಕಲಬುರಗಿ ಜೈಲಿನಿಂದ ಪರಾರಿಯಾಗಿರುವ ಸಜಾ ಕೈದಿಗಳುImage Credit source: tv9 ಕಲಬುರಗಿ, ಜುಲೈ 14: ಕಲಬುರಗಿ (Kalaburagi) ಕೇಂದ್ರ ಕಾರಾಗೃಹದಿಂದ ಮೂವರು ಸಜಾ ಕೈದಿಗಳು ಪರಾರಿಯಾಗಿದ್ದು, ಈ ಘಟನೆ ಭಾರಿ ಸಂಚಲನಕ್ಕೆ ಕಾರಣವಾಗಿದೆ. ಮಂಗಳವಾರ ಮುಂಜಾನೆ ಸುಮಾರು 3 ಗಂಟೆ ವೇಳೆಗೆ ಜೈಲಿನ ಸುಮಾರು 15 ರಿಂದ 20 ಅಡಿ ಎತ್ತರದ ಕಾಂಪೌಂಡ್ ಗೋಡೆ ಹಾರಿ ಕೈದಿಗಳು ತಪ್ಪಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಪರಾರಿಯಾದ ಕೈದಿಗಳನ್ನು ಮಸ್ತಾನ್, ಸಂತೋಷ್ ಹಾಗೂ ಸಾಗರ್ ಎಂದು ಗುರುತಿಸಲಾಗಿದೆ. ಇವರು ಬೀದರ್ ಜಿಲ್ಲೆಯ…

Read More

ವಿಜಯಕ್ ತ್ರಿಷಾ ಹೆಸರಲ್ಲಿ ಇದೆ ಹಳ್ಳಿ; ಫೋಟೋ ವೈರಲ್ – Kannada News | Trisha Krishnan: Ladakh Village Named Trisha Fans Thrilled

ನಟಿ ತ್ರಿಶಾ ಕೃಷ್ಣನ್ ಹೆಸರನ್ನು ಹಳ್ಳಿಗೆ ಇಡಲಾಗಿದೆ ಎಂದರೆ ನೀವು ನಂಬಲೇಬೇಕು. ಹೌದು, ನಟಿ ತ್ರಿಶಾ ಕಳೆದ ಎರಡು ದಶಕಗಳಿಂದ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ಹಿರೋಯಿನ್ ಆಗಿ ಮಿಂಚುತ್ತಿದ್ದಾರೆ. ಪ್ರಸ್ತುತ 40 ವರ್ಷ ವಯಸ್ಸು ದಾಟಿದ್ದರೂ ಸಹ, ಅವರು ಇಂದಿನ ಯುವ ನಾಯಕಿಯರಿಗೆ ಕಠಿಣ ಪೈಪೋಟಿ ನೀಡುತ್ತಾ ಸಖತ್ ಬ್ಯುಸಿಯಾಗಿದ್ದಾರೆ. ಅವರು ಈಗ ಪ್ರತಿ ಸಿನಿಮಾಗೆ ಬರೋಬ್ಬರಿ 12 ಕೋಟಿ ರೂಪಾಯಿವರೆಗೆ ಸಂಭಾವನೆ ಪಡೆಯುವ ಮೂಲಕ ದಕ್ಷಿಣ ಭಾರತದ ಅತಿ ಹೆಚ್ಚು ಬೇಡಿಕೆಯ ನಟಿಯರಲ್ಲಿ…

Read More

ಸಮಂತಾರನ್ನು ಹಿಂದಿಕ್ಕಿ ‘ತುಂಬಾಡ್’ ಪ್ರಪಂಚ ಪ್ರವೇಶಿಸಿದ ಆಲಿಯಾ ಭಟ್ – Kannada News | Alia Bhatt officially joined Tumbbad 2 movie

‘ತುಂಬಾಡ್’ (Tumbbad) ಭಾರತೀಯ ಚಿತ್ರರಂಗದ ಕಲ್ಟ್ ಕ್ಲಾಸಿಕ್ ಸಿನಿಮಾ. ನಾನಾ ಅಡೆತಡೆಗಳು, ಸಮಸ್ಯೆಗಳ ಬಳಿಕ 2018 ರಲ್ಲಿ ಬಿಡುಗಡೆ ಆದ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಒಳ್ಳೆಯ ಪ್ರದರ್ಶನ ಕಾಣಲಿಲ್ಲ, ಆದರೆ ಕಾಲ ಸರಿದಂತೆ ಸಿನಿಮಾ ತಮ್ಮ ನಿಜವಾದ ಪ್ರೇಕ್ಷಕರನ್ನು ಹುಡುಕಿಕೊಂಡಿತು. ಒಟಿಟಿಗಳಲ್ಲಿ, ಪೈರಸಿ ಸೈಟ್​​ಗಳ ಮೂಲಕ ಹೆಚ್ಚು-ಹೆಚ್ಚು ಜನರಿಗೆ ತಲುಪಿ ಕಲ್ಟ್ ಕ್ಲಾಸಿಕ್ ಎನಿಸಿಕೊಂಡಿತು. ಇತ್ತೀಚೆಗಷ್ಟೆ ಸಿನಿಮಾ ಮರು ಬಿಡುಗಡೆ ಆಗಿ, ದಾಖಲೆ ಮೊತ್ತದ ಗಳಿಕೆ ಮಾಡಿತು. ಇದೀಗ ಸಿನಿಮಾದ ಸೀಕ್ವೆಲ್ ನಿರ್ಮಾಣ ಆಗುತ್ತಿದ್ದು, ನಟಿ ಆಲಿಯಾ…

Read More

Shani Retrograde 2026: ಶನಿ ವಕ್ರ ಚಲನೆ ಆರಂಭ; ಜುಲೈ 27 ರಿಂದ ಈ 2 ರಾಶಿಗೆ ಶುರುವಾಗಲಿದೆ ಕಷ್ಟದ ಕಾಲ! – Kannada News | Shani Retrograde 2026: Major Impact on Zodiac Signs for 138 Days

ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ದೇವನಿಗೆ ವಿಶೇಷ ಸ್ಥಾನವಿದೆ. ಶನಿಯನ್ನು ‘ಕರ್ಮಫಲ ದಾತ’ ಮತ್ತು ‘ನ್ಯಾಯಾಧೀಶ’ ಎಂದು ಕರೆಯಲಾಗುತ್ತದೆ. ಅಂದರೆ, ವ್ಯಕ್ತಿಯು ಮಾಡುವ ಒಳ್ಳೆಯ ಮತ್ತು ಕೆಟ್ಟ ಕರ್ಮಗಳಿಗೆ ಅನುಗುಣವಾಗಿ ಶನಿಯು ಫಲವನ್ನು ನೀಡುತ್ತಾನೆ. ಇದೀಗ 2026 ರ ಜುಲೈ ತಿಂಗಳಿನಲ್ಲಿ ಶನಿ ಗ್ರಹದ ಚಲನೆಯಲ್ಲಿ ದೊಡ್ಡ ಬದಲಾವಣೆಯಾಗುತ್ತಿದ್ದು, ಇದು ಕೆಲವು ರಾಶಿಗಳ ಮೇಲೆ ತೀವ್ರ ಪ್ರಭಾವ ಬೀರಲಿದೆ. 138 ದಿನಗಳ ಕಾಲ ಶನಿಯ ವಕ್ರ ನಡೆ: ವಿದ್ವಾಂಸರ ಪ್ರಕಾರ, ಜುಲೈ 27 ರಿಂದ ಡಿಸೆಂಬರ್ ರವರೆಗೆ ಶನಿಯು…

Read More