‘ಪೆದ್ದಿ’ ಚಿತ್ರಕ್ಕೆ ಸರ್ಕಾರದಿಂದ ಬಂಪರ್ ಆಫರ್: ಟಿಕೆಟ್ ದರ ಹೆಚ್ಚಳ, ಪ್ರೀಮಿಯರ್ ಶೋಗಳಿಗೆ ಗ್ರೀನ್ ಸಿಗ್ನಲ್

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತು ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಬುಚ್ಚಿ ಬಾಬು ಸನಾ ಕಾಂಬಿನೇಷನ್‌ನ ಬಹುನಿರೀಕ್ಷಿತ ಚಿತ್ರ ‘ಪೆದ್ದಿ’ (Peddi Movie) ಈಗಾಗಲೇ ಚಿತ್ರರಂಗದಲ್ಲಿ ಭಾರಿ ಸಂಚಲನ ಮೂಡಿಸಿದೆ. ಹಳ್ಳಿಯ ಯುವಕನ ಪಾತ್ರದಲ್ಲಿ ರಾಮ್ ಚರಣ್ ಕಣ್ಮನ ಸೆಳೆಯುತ್ತಿದ್ದರೆ, ಅವರಿಗೆ ಜೋಡಿಯಾಗಿ ಬಾಲಿವುಡ್ ಸುಂದರಿ ಜಾನ್ವಿ ಕಪೂರ್ ನಟಿಸುತ್ತಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಸಿನಿಮಾದ ಟ್ರೈಲರ್‌ನಲ್ಲಿ ಚರಣ್ ಅವರ ಖಡಕ್ ನಟನೆ ಮತ್ತು ಆಕ್ಷನ್ ದೃಶ್ಯಗಳು ಅಭಿಮಾನಿಗಳನ್ನು ಹುಚ್ಚೆಬ್ಬಿಸಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಆಕಾಶಕ್ಕೆ ಮುಟ್ಟಿಸಿವೆ. ಈಗ ಸಿನಿಮಾಗೆ ಒಂದು ಗುಡ್ ನ್ಯೂಸ್ ಕೂಡ ಸಿಕ್ಕಿದೆ.

ಬುಚ್ಚಿ ಬಾಬು ಸನಾ ಅವರು ಹಲವು ವರ್ಷಗಳ ಸುದೀರ್ಘ ಗ್ಯಾಪ್ ನಂತರ ನಿರ್ದೇಶಿಸುತ್ತಿರುವ ಚಿತ್ರ ಇದಾಗಿರುವುದರಿಂದ ಹಾಗೂ ಚರಣ್ ಅವರ ಮಾಸ್ ಲುಕ್ ಸಖತ್ ಹೈಪ್ ಕ್ರಿಯೇಟ್ ಮಾಡಿರುವುದರಿಂದ ಸಿನಿಪ್ರೇಕ್ಷಕರು ಜೂನ್ 4 ರ ಬಿಡುಗಡೆಗೆ ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಸೆನ್ಸಾರ್ ಪ್ರಕ್ರಿಯೆ ಮುಗಿಸಿಕೊಂಡಿರುವ ‘ಪೆದ್ದಿ’ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುವುದು ಗ್ಯಾರಂಟಿ ಎನ್ನಲಾಗುತ್ತಿದೆ.

ಮೆಗಾ ಅಭಿಮಾನಿಗಳಿಗೆ ಆಂಧ್ರ ಪ್ರದೇಶ ಸರ್ಕಾರದ ಬಂಪರ್ ಸುದ್ದಿ!

ಚಿತ್ರದ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ಆಂಧ್ರ ಪ್ರದೇಶ (AP) ಸರ್ಕಾರ ಮೆಗಾ ಅಭಿಮಾನಿಗಳಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ‘ಪೆದ್ದಿ’ ಚಿತ್ರದ ವಿಶೇಷ ಪ್ರದರ್ಶನ ಹಾಗೂ ಟಿಕೆಟ್ ದರ ಹೆಚ್ಚಳಕ್ಕೆ ಸರ್ಕಾರ ಅಧಿಕೃತವಾಗಿ ಹಸಿರು ನಿಶಾನೆ ತೋರಿಸಿದೆ.

ವಿಶೇಷ ಪ್ರೀಮಿಯರ್ ಶೋಗಳು: ಚಿತ್ರ ಬಿಡುಗಡೆಯಾಗುವ ಮುನ್ನಾ ದಿನವೇ, ಅಂದರೆ ಜೂನ್ 3 ರಂದು ರಾತ್ರಿ 8 ಗಂಟೆಯಿಂದಲೇ ವಿಶೇಷ ಪ್ರೀಮಿಯರ್ ಶೋಗಳನ್ನು ಪ್ರದರ್ಶಿಸಲು ಸರ್ಕಾರ ಅನುಮತಿ ನೀಡಿದೆ.

ದಿನಕ್ಕೆ 5 ಪ್ರದರ್ಶನ: ಸಿನಿಮಾ ಬಿಡುಗಡೆಯಾದ ಮೊದಲ ವಾರದವರೆಗೆ ಪ್ರತಿದಿನ 5 ಶೋಗಳನ್ನು ಪ್ರದರ್ಶಿಸಲು ಥಿಯೇಟರ್‌ಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಟಿಕೆಟ್ ದರ ಹೆಚ್ಚಳ: ಸರ್ಕಾರದ ಆದೇಶದಂತೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ 100 ರೂ. ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ 125 ರೂ. ವರೆಗೆ ಟಿಕೆಟ್ ದರವನ್ನು ಹೆಚ್ಚಿಸಿಕೊಳ್ಳಬಹುದು.

ಪ್ರೀಮಿಯರ್ ಶೋ ದರ: ಜೂನ್ 3 ರಂದು ನಡೆಯಲಿರುವ ವಿಶೇಷ ಪ್ರೀಮಿಯರ್ ಶೋಗಳ ಟಿಕೆಟ್ ದರವನ್ನು ಗರಿಷ್ಠ 600 ರೂ. ಎಂದು ನಿಗದಿಪಡಿಸಲಾಗಿದೆ.

ಇದನ್ನೂ ಓದಿ: ‘ಪೆದ್ದಿ’ ಸಿನಿಮಾದಲ್ಲಿ ನೆಗೆಟಿವ್ ಶೇಡ್ ಪಾತ್ರ? ಶಿವಣ್ಣ ಹೇಳಿದ್ದಿಷ್ಟು

ಸರ್ಕಾರದ ಈ ನಿರ್ಧಾರದಿಂದ ಮೆಗಾ ಅಭಿಮಾನಿಗಳು ಸಖತ್ ಖುಷಿಯಾಗಿದ್ದು, ಜೂನ್ 4 ರಂದು ‘ಪೆದ್ದಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಯಾವ ರೀತಿಯ ಹೊಸ ದಾಖಲೆಗಳನ್ನು ಬರೆಯಲಿದೆ ಎಂಬುದನ್ನು ನೋಡಲು ಚಿತ್ರರಂಗ ಕಾಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Job Opportunity: ಮಂಗಳೂರಿನಲ್ಲಿ ಪದವೀಧರರಿಗೆ ಉತ್ತಮ ಉದ್ಯೋಗಾವಕಾಶ; ನಾಳೆ ನೇರ ಸಂದರ್ಶನ!

ಮಂಗಳೂರಿನಲ್ಲಿ ಉದ್ಯೋಗಾವಕಾಶImage Credit source: Pinterest

ಮಂಗಳೂರಿನಲ್ಲಿ ಉದ್ಯೋಗ ಹುಡುಕುತ್ತಿರುವ ಪದವೀಧರರಿಗೆ ಕರ್ನಾಟಕ ಸರ್ಕಾರವು ಒಂದು ಉತ್ತಮ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಕರ್ನಾಟಕ ಸರ್ಕಾರದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ (ದಕ್ಷಿಣ ಕನ್ನಡ ಜಿಲ್ಲೆ) ಜಂಟಿಯಾಗಿ “ನೇರ ಸಂದರ್ಶನ” (Walk-in Interview) ಕಾರ್ಯಕ್ರಮವನ್ನು ಆಯೋಜಿಸಿದೆ. ಪ್ರತಿಷ್ಠಿತ ‘ವಿ.ಆರ್.ಎನ್ ಇನ್ನೋಟೆಕ್’ (VRN Innotech) ಕಂಪನಿಯ ವತಿಯಿಂದ ಮಂಗಳೂರಿನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಈ ಸಂದರ್ಶನ ನಡೆಯುತ್ತಿದ್ದು, ಆಸಕ್ತ ನಿರುದ್ಯೋಗಿ ಯುವಕ-ಯುವತಿಯರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಖಾಲಿ ಇರುವ ಹುದ್ದೆಗಳು ಮತ್ತು ಅಗತ್ಯವಿರುವ ಶೈಕ್ಷಣಿಕ ಅರ್ಹತೆ:

ಈ ಉದ್ಯೋಗ ಮೇಳದಲ್ಲಿ ಪ್ರಮುಖವಾಗಿ ಕಸ್ಟಮರ್ ಸಪೋರ್ಟ್ ಎಕ್ಸಿಕ್ಯೂಟಿವ್ (Customer Support Executive) ಮತ್ತು ಟೆಲಿಕಾಲರ್ (Telicaller) ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ (Any Degree) ಪಡೆದ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ. ಭಾಷಾ ಪ್ರಾವೀಣ್ಯತೆಗೆ ಸಂಬಂಧಿಸಿದಂತೆ, ಅಭ್ಯರ್ಥಿಗಳಿಗೆ ಮಲಯಾಳಂ, ಹಿಂದಿ, ಇಂಗ್ಲಿಷ್ ಅಥವಾ ತಮಿಳು ಭಾಷೆಗಳಲ್ಲಿ ಯಾವುದಾದರೂ ಒಂದು ಅಥವಾ ಹೆಚ್ಚಿನ ಭಾಷೆಗಳ ಜ್ಞಾನವಿರುವುದು ಕಡ್ಡಾಯವಾಗಿದೆ.

ಇದನ್ನೂ ಓದಿ: 16 ಸರ್ಕಾರಿ ಉದ್ಯೋಗ ತಿರಸ್ಕರಿಸಿ IPS ಆದ ಯುವತಿ; ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ತೃಪ್ತಿ ಭಟ್ ಯಶೋಗಾಥೆ

ಸಂದರ್ಶನ ನಡೆಯುವ ದಿನಾಂಕ, ಸಮಯ ಮತ್ತು ಸ್ಥಳದ ವಿವರಗಳು:

ಈ ನೇರ ಸಂದರ್ಶನವನ್ನು ಮೇ 30 ರಂದು (ಶನಿವಾರ) ಆಯೋಜಿಸಲಾಗಿದೆ. ಸಂದರ್ಶನವು ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 01:00 ಗಂಟೆಯವರೆಗೆ ಮಾತ್ರ ನಡೆಯಲಿದ್ದು, ಅಭ್ಯರ್ಥಿಗಳು ನಿಗದಿತ ಸಮಯದೊಳಗೆ ಹಾಜರಾಗಬೇಕಿರುತ್ತದೆ.

ಸಂದರ್ಶನ ನಡೆಯುವ ನಿಖರ ಸ್ಥಳ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಕೊಠಡಿ ಸಂಖ್ಯೆ: 04, ನೆಲಮಹಡಿ, ಪ್ರಜಾ ಸೌಧ, ಜಿಲ್ಲಾಡಳಿತ ಭವನ ಕಟ್ಟಡ, ಪಡೀಲ್, ಮಂಗಳೂರು – 575 007.

ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆಗಳು ಮತ್ತು ಸಂಪರ್ಕ ಮಾಹಿತಿ:

ಈ ಸಂದರ್ಶನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಇಚ್ಛಿಸುವ ಅಭ್ಯರ್ಥಿಗಳು ತಮ್ಮ ಸಂಪೂರ್ಣ ವಿವರಗಳನ್ನು ಒಳಗೊಂಡ ಅಪ್ಡೇಟೆಡ್ ಬಯೋಡೇಟಾ (Resume/CV) ದೊಂದಿಗೆ ನೇರವಾಗಿ ಸಂದರ್ಶನ ಸ್ಥಳಕ್ಕೆ ಬರಬೇಕಾಗಿ ವಿನಂತಿಸಲಾಗಿದೆ. ಅತ್ಯಂತ ಪ್ರಮುಖ ವಿಷಯವೆಂದರೆ, ಈ ಉದ್ಯೋಗ ಸಂದರ್ಶನ ಕಾರ್ಯಕ್ರಮವು ಸಂಪೂರ್ಣವಾಗಿ ಉಚಿತವಾಗಿದ್ದು, ಅಭ್ಯರ್ಥಿಗಳು ಯಾವುದೇ ರೀತಿಯ ಶುಲ್ಕವನ್ನು ಪಾವತಿಸುವ ಅಗತ್ಯವಿರುವುದಿಲ್ಲ. ಈ ನೇಮಕಾತಿಗೆ ಸಂಬಂಧಿಸಿದಂತೆ ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಂದೇಹಗಳಿದ್ದಲ್ಲಿ ಅಭ್ಯರ್ಥಿಗಳು ಅಧಿಕೃತ ದೂರವಾಣಿ ಸಂಖ್ಯೆ 0824 2457139 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: 30 ಸೆಕೆಂಡುಗಳಲ್ಲಿ ಹಲವರಿಗೆ ಕಚ್ಚಿದ ಬೀದಿ ನಾಯಿ

ಬೀದಿ ನಾಯಿಯೊಂದು ಕೇವಲ 30 ಸೆಕೆಂಡುಗಳ ಅವಧಿಯಲ್ಲಿ ರಸ್ತೆಯಲ್ಲಿದ್ದ ಹಲವು ಯುವಕರ ಮೇಲೆ ದಾಳಿ ನಡೆಸಿ, ಕಚ್ಚಿ ಗಾಯಗೊಳಿಸಿರುವ ಭೀಕರ ಘಟನೆ ನಡೆದಿದೆ. ನಾಯಿಯ ಆಕ್ರಮಣಕಾರಿ ದಾಳಿಯಿಂದ ದಿಕ್ಕೆಟ್ಟ ಯುವಕರು ಪ್ರಾಣಭಯದಿಂದ ಓಡಿದ್ದಾರೆ. ಈ ಆಘಾತಕಾರಿ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ಎಷ್ಟೇ ಓಡಿದರೂ, ಕುರ್ಚಿಯಲ್ಲಿ ಹೊಡೆದರೂ ಕೂಡ ನಾಯಿ ಬಿಡದೆ ಒಬ್ಬರಾದ ಮೇಲೆ ಒಬ್ಬರಿಗೆ ಕಚ್ಚಿದೆ. ಘಟನೆ ಎಲ್ಲಿ ನಡೆದಿದೆ ಎನ್ನುವ ಮಾಹಿತಿ ಲಭ್ಯವಿಲ್ಲ. ಯುವಕರು ಮಾತನಾಡುತ್ತಾ ಕುಳಿತಿರುವಾಗ ಹಿಂದಿನಿಂದ ನಾಯಿ ದಾಳಿ ಮಾಡಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಅಮೆರಿಕನಲ್ಲಿ ‘ಪೆದ್ದಿ’ ಟಿಕೆಟ್ ದರ ಹಾಲಿವುಡ್ ಸಿನಿಮಾಗಳಿಗೂ ಹೆಚ್ಚು: ಅಭಿಮಾನಿಗಳ ಬೇಸರ

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಜೂನ್ 4 ರಂದು ವಿಶ್ವದಾದ್ಯಂತ ಏಕಕಾಲಕ್ಕೆ ಬಿಡುಗಡೆ ಆಗುತ್ತಿದೆ. ಭಾರತದ ಸಿನಿಮಾಗಳಿಗೆ ವಿಶೇಷವಾಗಿ ತೆಲುಗು ಸಿನಿಮಾಗಳಿಗೆ ಭಾರತದಲ್ಲಿ ಇರುವಷ್ಟೆ ಬೇಡಿಕೆ ಅಮೆರಿಕದಲ್ಲೂ ಇದೆ. ಅದರಲ್ಲೂ ಉತ್ತರ ಅಮೆರಿಕನಲ್ಲಿ ತೆಲುಗು ಸಿನಿಮಾಗಳು ಭರ್ಜರಿ ಗಳಿಕೆ ಮಾಡುತ್ತವೆ. ಇದೇ ಕಾರಣಕ್ಕೆ ‘ಪೆದ್ದಿ’ ಸಿನಿಮಾವನ್ನು ಅಮೆರಿಕದಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗುತ್ತಿದೆ. ಆದರೆ ‘ಪೆದ್ದಿ’ ಸಿನಿಮಾಕ್ಕೆ ನಿಗದಿಪಡಿಸಿರುವ ಟಿಕೆಟ್ ದರಗಳು ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಸಿನಿಮಾ ಪ್ರೇಮಿಗಳ ಬೇಸರಕ್ಕೆ ಕಾರಣವಾಗಿದೆ.

‘ಪೆದ್ದಿ’ ಸಿನಿಮಾದ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಈಗಾಗಲೇ ಅಮೆರಿಕದಲ್ಲಿ ಆರಂಭವಾಗಿದೆ. ಆದರೆ ಸಿನಿಮಾದ ಟಿಕೆಟ್ ದರಗಳು ಸಿನಿಮಾ ಪ್ರೇಮಿಗಳ ಬೇಸರಕ್ಕೆ ಕಾರಣವಾಗಿದೆ. ಬಹು ನಿರೀಕ್ಷಿತ ಹಾಲಿವುಡ್ ಸಿನಿಮಾದ ಟಿಕೆಟ್ ದರಕ್ಕಿಂತಲೂ ಹೆಚ್ಚಿನ ದರವನ್ನು ‘ಪೆದ್ದಿ’ ಸಿನಿಮಾಕ್ಕೆ ಅಮೆರಿಕದಲ್ಲಿ ನಿಗದಿ ಪಡಿಸಲಾಗಿದೆ. ‘ಪೆದ್ದಿ’ ಸಿನಿಮಾದ ಪ್ರೀಮಿಯರ್ ಶೋಗೆ 20 ರಿಂದ 25 ಡಾಲರ್ ನಿಗದಿ ಪಡಿಸಲಾಗಿದೆ. (ರೂಪಾಯಿ ಲೆಕ್ಕದಲ್ಲಿ 2000 ಇಂದ 2350ರವರೆಗೆ). ‘ಪೆದ್ದಿ’ ಸಿನಿಮಾದ ಮೊದಲ ವಾರದ ಟಿಕೆಟ್ ದರ 18 ರಿಂದ 20 ಡಾಲರ್ ಇದೆ. ಇದು ಬಲು ದುಬಾರಿ ಮೊತ್ತ.

‘ಪೆದ್ದಿ’ ಸಿನಿಮಾದ ಸ್ಪೆಷಲ್ ಥಿಯೇಟರ್ (ಡಿ-ಬಾಕ್ಸ್) ಬೆಲೆ 42 ಡಾಲರ್ ಇವೆ. ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ ಸುಮಾರು 5000 ರೂಪಾಯಿಗಳು. ಹಾಲಿವುಡ್​​ನ ಈ ವರ್ಷದ ಬಲು ನಿರೀಕ್ಷಿತ ಸಿನಿಮಾ, ಕ್ರಿಸ್ಟೊಫರ್ ನೋಲನ್ ನಿರ್ದೇಶನದ ‘ಒಡೆಸ್ಸಿ’ ಸಿನಿಮಾದ ಟಿಕೆಟ್ ದರವೇ 30 ಡಾಲರ್ ಇದೆ. ಅದೂ ಐಮ್ಯಾಕ್ಸ್​​ನಲ್ಲಿ. ಬಲು ನಿರೀಕ್ಷಿತ ಹಾಲಿವುಡ್ ಸಿನಿಮಾವನ್ನೂ ಸಹ ಮೀರಿಸಿದೆ ‘ಪೆದ್ದಿ’ ಟಿಕೆಟ್ ದರದಲ್ಲಿ.

ಇದನ್ನೂ ಓದಿ:ರಾಮ್ ಚರಣ್ ಹೊಸ ಬಾಡಿಗಾರ್ಡ್ ಯಾರು ಗೊತ್ತಾ? ದಿನದ ಸಂಬಳ ಎಷ್ಟು?

‘ಪೆದ್ದಿ’ ಸಿನಿಮಾದ ಟಿಕೆಟ್ ದರಗಳ ಬಗ್ಗೆ ಅಮೆರಿಕದ ಭಾರತೀಯ ಸಿನಿಮಾ ಪ್ರೇಮಿಗಳು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹಂಚಿಕೊಳ್ಳುತ್ತಿದ್ದಾರೆ. ‘ಧುರಂಧರ್ 1’ ಮತ್ತು ‘ಧುರಂಧರ್ 2’ ಎರಡೂ ಸಿನಿಮಾಗಳ ಒಟ್ಟು ಟಿಕೆಟ್ ದರಕ್ಕಿಂತಲೂ ‘ಪೆದ್ದಿ’ ಸಿನಿಮಾದ ಟಿಕೆಟ್ ದರ ಹೆಚ್ಚಿದೆ ಎಂದು ಕೆಲವರು ಪೋಸ್ಟ್ ಹಂಚಿಕೊಂಡಿದ್ದಾರೆ. ಭಾರತದಲ್ಲಿ ‘ಪೆದ್ದಿ’ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಇನ್ನೂ ಪ್ರಾರಂಭ ಆಗಿಲ್ಲ. ಆದರೆ ಇಲ್ಲಿಯೂ ಸಹ ಟಿಕೆಟ್​​ಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುವುದು ಖಾತ್ರಿ ಎಂಬಂತಾಗಿದೆ.

ಬೆಂಗಳೂರು, ಮುಂಬೈ ಸೇರಿದಂತೆ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಸಿನಿಮಾದ ಪ್ರೀಮಿಯರ್ ಶೋಗಳನ್ನು ಚಿತ್ರತಂಡ ಆಯೋಜಿಸುತ್ತಿದ್ದು, ಈ ಪ್ರೀಮಿಯರ್ ಶೋಗಳಿಗೆ ಸಾಮಾನ್ಯ ಶೋನ ಎರಡು ಪಟ್ಟು ಹೆಚ್ಚು ಟಿಕೆಟ್ ಬೆಲೆ ನಿಗದಿ ಪಡಿಸಲಿದೆಯಂತೆ ಚಿತ್ರತಂಡ. ಬೆಂಗಳೂರಿನಲ್ಲಿ ಸಹಜವಾಗಿಯೇ ಪರಭಾಷೆ ಸಿನಿಮಾಗಳ ಟಿಕೆಟ್ ದರಗಳು ಬಲು ದುಬಾರಿ ಆಗಿರುತ್ತವೆ. ‘ಪೆದ್ದಿ’ ಸಿನಿಮಾಕ್ಕೆ ಟಿಕೆಟ್ ದರ ಎಷ್ಟಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 1:33 pm, Fri, 29 May 26

Source link

BSNL Recruitment 2026: ಬಿಎಸ್‌ಎನ್‌ಎಲ್‌ನಲ್ಲಿ ಜೂನಿಯರ್ ಟೆಲಿಕಾಂ ಆಫೀಸರ್ ಹುದ್ದೆಗಳ ಭರ್ಜರಿ ನೇಮಕಾತಿ

ಬಿಎಸ್‌ಎನ್‌ಎಲ್‌ ಉದ್ಯೋಗ
Image Credit source: Pinterest

ಕೇಂದ್ರ ಸರ್ಕಾರಿ ಸ್ವಾಮ್ಯದ ಪ್ರಮುಖ ದೂರಸಂಪರ್ಕ ಸಂಸ್ಥೆಯಾದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ನೇರ ನೇಮಕಾತಿ (Direct Recruitment) ಯೋಜನೆಯಡಿ ಖಾಲಿ ಇರುವ ಜೂನಿಯರ್ ಟೆಲಿಕಾಂ ಅಧಿಕಾರಿ (JTO – Telecom) ಕೇಡರ್ ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ತಾಂತ್ರಿಕ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಮತ್ತು ಕೇಂದ್ರ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಖಾಲಿ ಇರುವ ಹುದ್ದೆಗಳ ಸಂಖ್ಯೆ ಮತ್ತು ವೃತ್ತವಾರು ಹಂಚಿಕೆ:

ಈ ನೂತನ ಅಧಿಸೂಚನೆಯ ಅಡಿಯಲ್ಲಿ ದೇಶಾದ್ಯಂತ ಒಟ್ಟು 100 ಜೂನಿಯರ್ ಟೆಲಿಕಾಂ ಅಧಿಕಾರಿ (JTO) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ವಿವಿಧ ವಲಯಗಳ ಆಧಾರದ ಮೇಲೆ ಈ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ. ಭಾರತದಾದ್ಯಂತ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ವಿಸ್ತರಣೆಯ ಭಾಗವಾಗಿ ಈ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತಿದ್ದು, ಆಯ್ಕೆಯಾಗುವ ವೃತ್ತಿಪರರಿಗೆ ಸಂಸ್ಥೆಯ ತಾಂತ್ರಿಕ ವಿಭಾಗಗಳನ್ನು ಮುನ್ನಡೆಸುವ ಜವಾಬ್ದಾರಿ ಸಿಗಲಿದೆ.

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ ಸಡಿಲಿಕೆ ವಿವರ:

ಬಿಎಸ್‌ಎನ್‌ಎಲ್‌ನಲ್ಲಿ ಜೂನಿಯರ್ ಟೆಲಿಕಾಂ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಬಂಧಿತ ಇಂಜಿನಿಯರಿಂಗ್ ವಿಭಾಗದಲ್ಲಿ ಬಿಇ (B.E) / ಬಿ.ಟೆಕ್ (B.Tech) ಪದವಿ ಮುಗಿಸಿರಬೇಕು ಅಥವಾ ಎಂಎಸ್‌ಸಿ (M.Sc), ಎಂಟೆಕ್ (M.Tech) ಉತ್ತೀರ್ಣರಾಗಿರಬೇಕು. ಇನ್ನು ಅಭ್ಯರ್ಥಿಗಳ ವಯಸ್ಸು ಜುಲೈ 3, 2026 ರ ಅನ್ವಯ ಕನಿಷ್ಠ 20 ವರ್ಷ ಹಾಗೂ ಗರಿಷ್ಠ 30 ವರ್ಷಗಳ ನಡುವೆ ಇರಬೇಕು. ಸರ್ಕಾರದ ನಿಯಮಗಳ ಪ್ರಕಾರ, ಒಬಿಸಿ (OBC) ಅಭ್ಯರ್ಥಿಗಳಿಗೆ 3 ವರ್ಷಗಳು, ಎಸ್‌ಸಿ/ಎಸ್‌ಟಿ (SC/ST) ಅಭ್ಯರ್ಥಿಗಳಿಗೆ 5 ವರ್ಷಗಳು ಮತ್ತು ವಿಕಲಚೇತನ (PwBD) ಅಭ್ಯರ್ಥಿಗಳಿಗೆ ಗರಿಷ್ಠ 10 ವರ್ಷಗಳವರೆಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.

ಇದನ್ನೂ ಓದಿ: 16 ಸರ್ಕಾರಿ ಉದ್ಯೋಗ ತಿರಸ್ಕರಿಸಿ IPS ಆದ ಯುವತಿ; ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ತೃಪ್ತಿ ಭಟ್ ಯಶೋಗಾಥೆ

ಅರ್ಜಿ ಶುಲ್ಕ ಮತ್ತು ಆಯ್ಕೆ ಪ್ರಕ್ರಿಯೆಯ ವಿಧಾನ:

ಈ ಹುದ್ದೆಗಳಿಗೆ ಅರ್ಹತೆ ಹೊಂದಿರುವ ಆಸಕ್ತ ಅಭ್ಯರ್ಥಿಗಳು ಜುಲೈ 3, 2026 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಶುಲ್ಕದ ಭಾಗವಾಗಿ ಸಾಮಾನ್ಯ (General), ಒಬಿಸಿ ಮತ್ತು ಇಡಬ್ಲ್ಯೂಎಸ್ (EWS) ವರ್ಗದ ಅಭ್ಯರ್ಥಿಗಳು 2,000ರೂ. ಪಾವತಿಸಬೇಕಾಗುತ್ತದೆ. ಅದೇ ರೀತಿ ಎಸ್‌ಸಿ, ಎಸ್‌ಟಿ ಮತ್ತು ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ ರಿಯಾಯಿತಿ ಇದ್ದು, ತಲಾ 1,000ರೂ. ಶುಲ್ಕ ನಿಗದಿಪಡಿಸಲಾಗಿದೆ. ಇನ್ನು ಅಭ್ಯರ್ಥಿಗಳ ಅಂತಿಮ ಆಯ್ಕೆಯನ್ನು ಕಂಪ್ಯೂಟರ್ ಆಧಾರಿತ ಆನ್‌ಲೈನ್ ಲಿಖಿತ ಪರೀಕ್ಷೆ, ಮೂಲ ದಾಖಲೆಗಳ ಪರಿಶೀಲನೆ (Document Verification) ಮತ್ತು ವೈದ್ಯಕೀಯ ಪರೀಕ್ಷೆಯ (Medical Exam) ಆಧಾರದ ಮೇಲೆ ಮಾಡಲಾಗುತ್ತದೆ. ಪ್ರಮುಖವಾಗಿ, ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 16,400 ರಿಂದ 40,500 ರೂ. ರ ಶ್ರೇಣಿಯಲ್ಲಿ ಆಕರ್ಷಕ ವೇತನವನ್ನು ನೀಡಲಾಗುತ್ತದೆ.

ಪ್ರಮುಖ ದಿನಾಂಕಗಳು:

ಬಿಎಸ್‌ಎನ್‌ಎಲ್ ಜೆಟಿಒ ನೇಮಕಾತಿಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳ ವಿವರ ಈ ಕೆಳಗಿನಂತಿದೆ:

  • ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಆರಂಭಿಕ ದಿನಾಂಕ: ಜೂನ್ 4, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 3, 2026
  • ಅರ್ಜಿ ಪರಿಷ್ಕರಣೆ (Correction Window) ದಿನಾಂಕ: ಜುಲೈ 4 ರಿಂದ ಜುಲೈ 11, 2026
  • ಲಿಖಿತ ಪರೀಕ್ಷೆ ನಡೆಯುವ ಅಂದಾಜು ಸಮಯ: ಆಗಸ್ಟ್ 2026

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 1:40 pm, Fri, 29 May 26

Source link

ಸಿದ್ದರಾಮಯ್ಯ ಟೀಮ್​​​ಗೆ ಢವಢವ: ಈ 13 ಜನರಿಗೆ ಸಚಿವ ಸ್ಥಾನ ಫಿಕ್ಸ್​​?

ಬೆಂಗಳೂರು, ಮೇ.29: ನೂತನ ಸಚಿವ ಸಂಪುಟ ರಚನೆಗೆ ಕಾಂಗ್ರೆಸ್ ವಲಯದಲ್ಲಿ ಭಾರೀ ಕಸರತ್ತು ನಡೆಯುತ್ತಿದೆ. ಸಿದ್ದರಾಮಯ್ಯ ಸಂಪುಟದಲ್ಲಿದ್ದ ಮಾಜಿ ಸಚಿವರ ಪೈಕಿ 16 ಮಂದಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಕಡಿಮೆ ಇದ್ದು, 13 ಮಂದಿ ಮತ್ತೆ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದಾರೆ. ಕೃಷ್ಣ ಬೈರೇಗೌಡ, ಪ್ರಿಯಾಂಕ ಖರ್ಗೆ, ಸತೀಶ್ ಜಾರಕಿಹೊಳಿ, ಕೆ.ಜೆ. ಜಾರ್ಜ್, ಈಶ್ವರ್ ಖಂಡ್ರೆ, ಎಂ.ಬಿ. ಪಾಟೀಲ್, ಡಾ. ಜಿ. ಪರಮೇಶ್ವರ್, ಹೆಚ್.ಕೆ. ಪಾಟೀಲ್, ಶಿವರಾಜ್ ತಂಗಡಗಿ, ಕೆ.ಹೆಚ್. ಮುನಿಯಪ್ಪ, ಮಂಕಾಳ್ ವೈದ್ಯ, ಸಂತೋಷ್ ಲಾಲ್ ಮತ್ತು ದಿನೇಶ್ ಗುಂಡುರಾವ್ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಇದೇ ವೇಳೆ, ನಾಲ್ಕು ಉಪಮುಖ್ಯಮಂತ್ರಿ (ಡಿಸಿಎಂ) ಸ್ಥಾನಗಳ ಸೃಷ್ಟಿಯ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ತೀವ್ರಗೊಂಡಿದೆ. ಡಿಸಿಎಂ ಸ್ಥಾನ ಪಡೆಯಲು ಕಾಂಗ್ರೆಸ್ ನಾಯಕರಲ್ಲಿ ಪೈಪೋಟಿ ಶುರುವಾಗಿದೆ. ಸಮುದಾಯದ ಶಾಸಕರ ಬೆಂಬಲ ಪಡೆಯಲು ನಾಯಕರು ಯೋಜನೆ ರೂಪಿಸುತ್ತಿದ್ದಾರೆ. ಲಿಂಗಾಯತ ಶಾಸಕರ ಜೊತೆಗೆ ಈಶ್ವರ್ ಖಂಡ್ರೆ ಅವರು ಭೋಜನಕೂಟ ಆಯೋಜಿಸಿ ಡಿಸಿಎಂ ಸ್ಥಾನಕ್ಕೆ ಬೆಂಬಲ ಕೋರಿದ್ದಾರೆ. ಎಂ.ಬಿ. ಪಾಟೀಲ್ ಸಹ ಇದೇ ರೀತಿ ಲಿಂಗಾಯತ ಶಾಸಕರನ್ನು ಸಂಪರ್ಕಿಸಿ ತಮ್ಮ ಪರ ಲಾಬಿ ನಡೆಸುತ್ತಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕನ್ನಡ ಚಿತ್ರರಂಗಕ್ಕೆ ಗಟ್ಟಿ ನಾಯಕತ್ವದ ಅವಶ್ಯಕತೆ ಇದೆ: ಸುಮಲತಾ

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More

Source link

ರಾಯಚೂರಿನಲ್ಲಿ ಡೀಸೆಲ್ ಕೊರತೆ: ಟಿವಿ9 ವರದಿ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತ, ಡಿಸಿ ಪೂವಿತಾ ಖಡಕ್ ಸೂಚನೆ

ರಾಯಚೂರು, ಮೇ 29: ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಕೃಷಿ ಚಟುವಟಿಕೆಗಳಿಗೆ ಡೀಸೆಲ್ ಸಿಗದೆ ರೈತರು ಕ್ಯಾನ್ ಹಿಡಿದು ಕ್ಯೂ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಕುರಿತು ಟಿವಿ9 ನಿರಂತರವಾಗಿ ಬಿತ್ತರಿಸಿದ ವರದಿಗೆ ಬಿಗ್ ಇಂಪ್ಯಾಕ್ಟ್ ಆಗಿದ್ದು, ಜಿಲ್ಲಾಡಳಿತ ತಕ್ಷಣವೇ ಅಲರ್ಟ್ ಆಗಿದೆ.

ಜಿಲ್ಲಾಧಿಕಾರಿ ಪೂವಿತಾ.ಎಸ್ ಅವರು ಪೆಟ್ರೋಲ್ ಬಂಕ್ ಮಾಲೀಕರು ಮತ್ತು ಅಧಿಕಾರಿಗಳ ತುರ್ತು ಸಭೆ ನಡೆಸಿ, ರೈತರಿಗೆ ಸಮರ್ಪಕವಾಗಿ ಡೀಸೆಲ್ ಪೂರೈಸುವಂತೆ ಖಡಕ್ ಸೂಚನೆ ನೀಡಿದ್ದಾರೆ. ನಿಯಮ ಉಲ್ಲಂಘಿಸಿದ ಒಂದು ಬಂಕ್ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಡಿಸಿ ಪೂವಿತಾ, “ಜಿಲ್ಲೆಯಲ್ಲಿ ಇಂಧನ ಕೊರತೆಯಿಲ್ಲ, ಸಾರ್ವಜನಿಕರು ಆತಂಕ ಪಡಬೇಕಾಗಿಲ್ಲ. ಬಂಕ್ ಮಾಲೀಕರು ನಿಯಮ ಪಾಲಿಸದಿದ್ದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ನಿನ್ನಂಥ ಅಪ್ಪ ಇಲ್ಲ; ತನ್ನ ಕೈಯಾರೆ ಸ್ಪೆಷಲ್ ಅಡುಗೆ ಮಾಡಿ ಮಗನ ಮುಂದೆ ತಂದಿಟ್ಟ ತಂದೆ

ತಂದೆ ತಾಯಿಯ ನಿಷ್ಕಲ್ಮಶ ಪ್ರೀತಿಗೆ ಸರಿಸಾಟಿ ಯಾವುದಿಲ್ಲ. ತಾನು ಎಷ್ಟೇ ಕಷ್ಟ ಎದುರಿಸಿದರೂ ಪರವಾಗಿಲ್ಲ ಮಕ್ಕಳು ಸುಖವಾಗಿರಬೇಕೆಂದು ಬಯಸುವ ನಿಸ್ವಾರ್ಥ ಜೀವ ಎಂದರೆ ಅದು ತಂದೆ (father). ಮಕ್ಕಳಿಗಾಗಿ ಏನನ್ನೂ ಬೇಕಾದರೂ ಮಾಡಲು ಸಿದ್ಧವಿರುವ ಅಪ್ಪನ ಪ್ರೀತಿ ಮುಂದೆ ಯಾವುದು ಇಲ್ಲ. ಇದೀಗ ತಂದೆಯೊಬ್ಬ ತನ್ನ ಮುದ್ದಿನ ಮಗನಿಗಾಗಿ ತನ್ನ ಕೈಯಾರೆ ಸ್ಪೆಷಲ್ ಖಾದ್ಯ ಮಾಡಿ ಅಚ್ಚರಿ ಮೂಡಿಸಿರುವ ವೈರಲ್ ಆಗಿದೆ. ಈ ತಂದೆ ಮಗನ ಬಾಂಧವ್ಯ ಸಾರುವ ಈ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

@jaideep_kochhar ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಮಗನಿಗಾಗಿ ತಂದೆ ವಿಶೇಷ ಅಡುಗೆ ಮಾಡಿರುವ ದೃಶ್ಯವನ್ನು ಕಾಣಬಹುದು. ಈ ವಿಡಿಯೋದಲ್ಲಿ ನಾನು ನನ್ನ ಅಪ್ಪನಿಗೆ ಹೇಗೆ ಹೇಳಲಿ? ನಾನು ಕ್ಯಾಲೊರಿಗಳನ್ನು ಲೆಕ್ಕ ಹಾಕಿ ತಿನ್ನುತ್ತೇನೆ ಎಂದು ಬರೆಯಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ

ಈ ಕ್ಲಿಪ್‌ನಲ್ಲಿ ತಂದೆ ತನ್ನ ಮಗನಿರುವ ರೂಮ್ ಗೆ ಕೈಯಲ್ಲಿ ಟ್ರೇ ಹಿಡಿದುಕೊಂಡು ಖುಷಿಯಿಂದ ಬರುತ್ತಿರುವುದನ್ನು ಕಾಣಬಹುದು. ಆ ಬಳಿಕ ಅಪ್ಪನಿಂದ ನನ್ನ ಮಗನಿಗೆ ವಿಶೇಷ ಉಪಚಾರ ಎಂದಿದ್ದಾನೆ. ಈ ಟ್ರೇಯಲ್ಲಿ ಗ್ರೀನ್ ಚಟ್ನಿ, ಕೆಚಪ್, ರಿಫ್ರೆಶ್ ಪಾನೀಯ ಹಾಗೂ ಹಸಿ ತರಕಾರಿಯಿಂದ ಅಲಂಕರಿಸಲ್ಪಟ್ಟ ನೂಡಲ್ಸ್‌ ನ್ನು ನೀವು ನೋಡಬಹುದು.

ಇದನ್ನೂ ಓದಿ: ಅಪ್ಪ ನೀನು ಸುಮ್ನೆ ಇರ್ತಿಯಾ; ತನ್ನದೇ ಭಾಷೆಯಲ್ಲಿ ತಂದೆಗೆ ಬೈಯುತ್ತಿರುವ ಪುಟಾಣಿ

ಈ ವಿಡಿಯೋ ಒಂದು ಲಕ್ಷ ತೊಂಭತ್ತೈದು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನೀವು ಕ್ಯಾಲೋರಿ ಬಗ್ಗೆ ಚಿಂತಿಸಬೇಡಿ. ಇದು ಅಪ್ಪನ ಪರಿಶುದ್ಧ ಪ್ರೀತಿ, ಎಲ್ಲರಿಗೂ ಈ ರೀತಿಯ ಪ್ರೀತಿ ಸಿಗಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು, ನೀವು ಅಪ್ಪ ಕೈಯಾರೆ ಮಾಡಿ ತಂದ ಖಾದ್ಯ ತಿಂತೀರಿ. ಬೇಡ ಎಂದು ಮನಸ್ಸು ನೋಯಿಸಬೇಡಿ ಎಂದಿದ್ದಾರೆ. ಇನ್ನೊಬ್ಬರು, ಇಂತಹ ಅಪ್ಪನನ್ನು ಪಡೆದ ನೀವೇ ಅದೃಷ್ಟವಂತರು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:15 pm, Fri, 29 May 26

Source link

ಭಾರತಕ್ಕೆ ಬರಲಿದೆ ಅತ್ಯಾಧುನಿಕ ಸಬ್‌ಸ್ಟ್ರೇಟ್ ತಂತ್ರಜ್ಞಾನ: ಒಡಿಶಾ ಸರ್ಕಾರ, ಇಂಟೆಲ್ ಮತ್ತು 3DGS ಒಪ್ಪಂದಕ್ಕೆ ಅಶ್ವಿನಿ ವೈಷ್ಣವ್ ಶ್ಲಾಘನೆ

ನವದೆಹಲಿ, ಮೇ 29: ಭಾರತವನ್ನು ಜಾಗತಿಕ ಸೆಮಿಕಂಡಕ್ಟರ್ ತಯಾರಿಕೆಯ ಪ್ರಮುಖ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ದೇಶದ ತಂತ್ರಜ್ಞಾನ ವಲಯದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಒಡಿಶಾ ಸರ್ಕಾರ, ಜಾಗತಿಕ ತಂತ್ರಜ್ಞಾನ ದೈತ್ಯ ಇಂಟೆಲ್ (Intel) ಮತ್ತು ಯುಎಸ್ ಮೂಲದ 3D ಗ್ಲಾಸ್ ಸಲ್ಯೂಷನ್ಸ್ (3DGS) ಸಂಸ್ಥೆಗಳು ಅತ್ಯಾಧುನಿಕ ‘ಸಬ್‌ಸ್ಟ್ರೇಟ್ ತಂತ್ರಜ್ಞಾನ’ವನ್ನು (Substrate Manufacturing Technology) ಭಾರತಕ್ಕೆ ತರುವ ನಿಟ್ಟಿನಲ್ಲಿ ಐತಿಹಾಸಿಕ ತಿಳುವಳಿಕಾ ಒಪ್ಪಂದಕ್ಕೆ (MoU) ಸಹಿ ಹಾಕಿವೆ. ಈ ಐತಿಹಾಸಿಕ ಸಾಧನೆಗಾಗಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರು ಒಡಿಶಾ ಸರ್ಕಾರ ಮತ್ತು ಭಾಗಿಯಾಗಿರುವ ಜಾಗತಿಕ ಸಂಸ್ಥೆಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಈ ಮಹತ್ವದ ಬೆಳವಣಿಗೆಯನ್ನು ತಮ್ಮ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿರುವ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು, “ಭಾರತಕ್ಕೆ ಸಬ್‌ಸ್ಟ್ರೇಟ್ ಉತ್ಪಾದನಾ ತಂತ್ರಜ್ಞಾನವನ್ನು ತರುವ ನಿಟ್ಟಿನಲ್ಲಿ ಒಪ್ಪಂದಕ್ಕೆ ಸಹಿ ಹಾಕಿರುವ ಒಡಿಶಾ ಸರ್ಕಾರ, ಇಂಟೆಲ್ ಮತ್ತು 3DGS ಸಂಸ್ಥೆಗಳಿಗೆ ಹಾರ್ದಿಕ ಅಭಿನಂದನೆಗಳು. ಈ ಮಹತ್ವದ ಹೆಜ್ಜೆಯು ಭಾರತದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು (Semiconductor Ecosystem) ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿದೆ” ಎಂದಿದ್ದಾರೆ.

ಅಶ್ವಿನಿ ವೈಷ್ಣವ್ ಅವರ ಟ್ವೀಟ್

ಇದನ್ನೂ ಓದಿ: ಶೇರುಗಳಂತೆ ರಿಯಲ್ ಎಸ್ಟೇಟ್ ಆಸ್ತಿಯಲ್ಲಿ ಪಾಲು ಖರೀದಿಸಿ… ಇದು REITs ಮತ್ತು InvITs ಕೊಡುವ ಅವಕಾಶ

ಏನಿದು ‘ಸಬ್‌ಸ್ಟ್ರೇಟ್’ ತಂತ್ರಜ್ಞಾನ? ಇದರ ಪ್ರಾಮುಖ್ಯತೆ ಏನು?

ಸೆಮಿಕಂಡಕ್ಟರ್ ಅಥವಾ ಚಿಪ್ ಉತ್ಪಾದನೆಯಲ್ಲಿ ‘ಸಬ್‌ಸ್ಟ್ರೇಟ್’ (Substrate) ಅತ್ಯಂತ ಪ್ರಮುಖವಾದ ತಳಹದಿಯಾಗಿದೆ. ಇದು ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಬಳಸಲಾಗುವ ಸೆಮಿಕಂಡಕ್ಟರ್ ಚಿಪ್‌ಗಳನ್ನು ಒಂದಕ್ಕೊಂದು ಜೋಡಿಸಲು ಮತ್ತು ಅವುಗಳಿಗೆ ಅಗತ್ಯ ಬೆಂಬಲ ನೀಡಲು ಸಹಾಯ ಮಾಡುತ್ತದೆ.

ಭಾರತವು ದೇಶೀಯವಾಗಿ ಚಿಪ್ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸಲು ಮತ್ತು ಸಂಪೂರ್ಣ ಎಲೆಕ್ಟ್ರಾನಿಕ್ಸ್ ಪೂರೈಕೆ ಸರಪಳಿಯನ್ನು (Supply Chain) ದೇಶದ ಒಳಗೇ ನಿರ್ಮಿಸಲು ಈ ತಂತ್ರಜ್ಞಾನದ ಅಗತ್ಯವಿತ್ತು. ಈ ಒಪ್ಪಂದದ ಮೂಲಕ ಭಾರತವು ಚಿಪ್ ಪ್ಯಾಕೇಜಿಂಗ್ ಮತ್ತು ಸಬ್‌ಸ್ಟ್ರೇಟ್ ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಸಾಧಿಸಲಿದೆ.

ಒಡಿಶಾದಲ್ಲಿ ಸುಧಾರಿತ 3D ಚಿಪ್ ಪ್ಯಾಕೇಜಿಂಗ್ ಘಟಕ

ಈ ಒಪ್ಪಂದದ ಭಾಗವಾಗಿ ಒಡಿಶಾದ ಭುವನೇಶ್ವರದಲ್ಲಿರುವ ಇನ್ಫೋ ವ್ಯಾಲಿಯಲ್ಲಿ ದೇಶದ ಮೊದಲ ಅಡ್ವಾನ್ಸ್ಡ್ 3D ಗ್ಲಾಸ್ ಸೆಮಿಕಂಡಕ್ಟರ್ ಪ್ಯಾಕೇಜಿಂಗ್ ಘಟಕ ತಲೆಎತ್ತುತ್ತಿದೆ. ಕಳೆದ ತಿಂಗಳು (ಏಪ್ರಿಲ್) ಈ ಘಟಕಕ್ಕೆ ಶಂಕುಸ್ಥಾಪನೆ ಮಾಡಲಾಗಿತ್ತು.

ಈ ಯೋಜನೆಗಾಗಿ ಸುಮಾರು 1,943 ಕೋಟಿ ರೂ ಹೂಡಿಕೆ ಮಾಡಲಾಗುತ್ತಿದ್ದು, ಇದು ಸುಮಾರು 2,500 ಅತ್ಯಾಧುನಿಕ ತಾಂತ್ರಿಕ ಉದ್ಯೋಗಗಳನ್ನು ಸೃಷ್ಟಿಸಲಿದೆ.

ಇದನ್ನೂ ಓದಿ: ಭಾರತದ ನೇತ್ರಸೆಮಿಯಿಂದ ದೇಶೀಯ ವಿನ್ಯಾಸದ ಎಐ ಪ್ರೋಸಸರ್ A2000 ಅನಾವರಣ

ಇಲ್ಲಿ ಉತ್ಪಾದನೆಯಾಗುವ ಸುಧಾರಿತ ಚಿಪ್‌ಗಳನ್ನು ಕೃತಕ ಬುದ್ಧಿಮತ್ತೆ (AI), 5G/6G ಸಂಪರ್ಕ ಜಾಲಗಳು, ಡೇಟಾ ಸೆಂಟರ್‌ಗಳು ಮತ್ತು ರಕ್ಷಣಾ ತಂತ್ರಜ್ಞಾನಗಳಲ್ಲಿ (Defence Tech) ಬಳಸಲಾಗುತ್ತದೆ.

ಭಾರತದ ಸೆಮಿಕಂಡಕ್ಟರ್ ಚಿತ್ರಣ

ಕೇಂದ್ರ ಸರ್ಕಾರದ ಇಂಡಿಯಾ ಸೆಮಿಕಂಡಕ್ಟರ್ ಮಿಷನ್ (ISM) ಅಡಿಯಲ್ಲಿ ಈಗಾಗಲೇ ದೇಶಾದ್ಯಂತ ಹಲವು ಬೃಹತ್ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಭಾರತವು 2032 ರ ವೇಳೆಗೆ ವಿಶ್ವದ ಅಗ್ರ ಆರು ಸೆಮಿಕಂಡಕ್ಟರ್ ರಾಷ್ಟ್ರಗಳಲ್ಲಿ ಒಂದಾಗುವ ಮತ್ತು 2047 ರ ವೇಳೆಗೆ ಅಗ್ರ ಮೂರರಲ್ಲಿ ಸ್ಥಾನ ಪಡೆಯುವ ಬೃಹತ್ ಗುರಿಯನ್ನು ಹೊಂದಿದೆ. ಒಡಿಶಾದಲ್ಲಿ ಇಂಟೆಲ್ ಮತ್ತು 3DGS ಸಹಯೋಗದೊಂದಿಗೆ ಆರಂಭವಾಗುತ್ತಿರುವ ಈ ಯೋಜನೆ ದೇಶದ ತಂತ್ರಜ್ಞಾನ ಇತಿಹಾಸದಲ್ಲೇ ಮೈಲಿಗಲ್ಲಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version