ಪ್ರೀತಿಯನ್ನು ಹೆಚ್ಚಿಸುವ, ಸಂಬಂಧವನ್ನು ಬಲಪಡಿಸುವ ಮಧುರ ಸುಳ್ಳುಗಳಿವು – Kannada News | These sweet lies will further strengthen the relationship

ನಾವು ಯಾರಿಗೂ ಸುಳ್ಳು (lies) ಹೇಳಬಾರದು, ಸುಳ್ಳು ಹೇಳುವುದು ತಪ್ಪಿನ ಕೆಲಸ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಅದರಲ್ಲೂ ವಿಶೇಷವಾಗಿ ಜೀವನ ಸಂಗಾತಿಯ ಬಳಿ ಯಾವುದೇ ರೀತಿಯ ಸುಳ್ಳುಗಳನ್ನು ಹೇಳಬಾರದು, ಅವರೊಂದಿಗೆ ಅತ್ಯಂತ ಪ್ರಾಮಾಣಿಕವಾಗಿರಬೇಕು. ಹೀಗಿದ್ದರೆ ಮಾತ್ರ ಸಂಬಂಧ ಶಾಶ್ವತವಾಗಿರಲು ಸಾಧ್ಯ, ಅದೇ ಒಂದು ಸುಳ್ಳು ಸುಂದರ ಸಂಬಂಧವನ್ನೇ ಸಂಪೂರ್ಣವಾಗಿ ಹಾಳು ಮಾಡುತ್ತದೆ ಎಂದು ಹೇಳಲಾಗುತ್ತದೆ. ಆದರೆ ಏನು ಗೊತ್ತಾ ಈ ಕೆಲವೊಂದು ಸಿಹಿ ಸುಳ್ಳುಗಳು ಸಂಗಾತಿಗಳಿಬ್ಬರ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದಂತೆ. ಹೌದು ನೀವು ನಿಮ್ಮ ಸಂಗಾತಿಗೆ ಈ ಕೆಲವೊಂದು ಮಧುರ ಸುಳ್ಳುಗಳನ್ನು ಹೇಳುವ ಮೂಲಕ ನಿಮ್ಮ ಪ್ರೀತಿ, ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಬಹುದು. ಅಷ್ಟಕ್ಕೂ ಸಂಬಂಧವನ್ನು ಬಲಪಡಿಸುವ ಆ ಸುಳ್ಳುಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಸಂಬಂಧವನ್ನು ಬಲಪಡಿಸುವ ಸುಳ್ಳುಗಳಿವು:

ಉಡುಗೊರೆಗಳನ್ನು ಶ್ಲಾಘಿಸಿ: ನಿಮ್ಮ ಸಂಗಾತಿ ನಿಮಗಾಗಿ ಒಂದು ಉಡುಗೊರೆಯನ್ನು ತಂದಿದ್ದರೆ, ಅದಕ್ಕೆ ಪ್ರಶಂಸೆ ನೀಡಿ, ಅದು ನಿಮಗೆ ಇಷ್ಟವಾಗದಿದ್ದರೂ ಸಹ ಗಿಫ್ಟ್‌ ತುಂಬಾನೇ ಚೆನ್ನಾಗಿದೆ ಎಂದು ಹೊಗಳಿಕೆ ಮಾತುಗಳನ್ನಾಡಿ. ಈ ಸಣ್ಣ ಸುಳ್ಳು ನಿಮ್ಮ ಸಂಗಾತಿಯನ್ನು ಖುಷಿ ಪಡಿಸುತ್ತದೆ. ಹೀಗೆ ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳಿ, ಇದು ಸಂಬಂಧವನ್ನು ಸಹ ಬಲಪಡಿಸುತ್ತದೆ.

ಪ್ರೋತ್ಸಾಹದಾಯಕ ಮಾತುಗಳನ್ನಾಡಿ: ದೈನಂದಿನ ಜವಾಬ್ದಾರಿಗಳು ಮತ್ತು ಕೆಲಸದ ಒತ್ತಡಗಳ ನಡುವೆ,  ಕೆಲವೊಮ್ಮೆ ನಿಮ್ಮ ಸಂಗಾತಿಗೆ ನಿಮಗೆ ಸರಿಯಾಗಿ ಸಮಯವನ್ನು ನೀಡಲು ಸಾಧ್ಯವಾಗುವುದಿಲ್ಲ, ನಿಮಗಾಗಿ ಅತ್ಯುತ್ತಮವಾದುದನ್ನು ನೀಡಲು ಸಾಧ್ಯವಾಗುವುದಿಲ್ಲ, ಇಂತಹ ಸಂದರ್ಭದಲ್ಲಿ ಚುಚ್ಚು ಮಾತುಗಳನ್ನಾಡುವ ಬದಲು ನೀನು ನನ್ನಷ್ಟು ಎಷ್ಟು ಪ್ರೀತಿಸುತ್ತೀಯಾ ನೋಡು, ನನಗಾಗಿ ತುಂಬಾ ಸಮಯ ಕೊಡುತ್ತೀಯಾ ಎಂಬ ಪ್ರೋತ್ಸಾಹದಾಯಕ ಮಾತುಗಳನ್ನಾಡಿ. ಇದು ಮನಸ್ತಾಮಗಳನ್ನು ತಪ್ಪಿಸುತ್ತದೆ, ಪ್ರೀತಿಯನ್ನು ಹೆಚ್ಚಿಸುತ್ತದೆ.

ಅಡುಗೆಯನ್ನು ಹೊಗಳಲು ಮರೆಯಬೇಡಿ: ನಿಮ್ಮ ಸಂಗಾತಿ ನಿಮಗಾಗಿ ಪ್ರೀತಿಯಿಂದ ಅಡುಗೆ ಮಾಡಿದ್ದರೆ, ಕೇವಲ ರುಚಿಯ ಮೇಲೆ ಮಾತ್ರ ಗಮನಹರಿಸಬೇಡಿ, ಅವರ ಪ್ರಯತ್ನ ಮತ್ತು ಭಾವನೆಗಳನ್ನು ಪ್ರಶಂಸಿಸಿ. ರುಚಿ ಚೆನ್ನಾಗಿಲ್ಲದಿದ್ದರೂ ಅಡುಗೆ ತುಂಬಾನೇ ಚೆನ್ನಾಗಿ ಮಾಡಿದ್ದೀರಿ ಎಂದು ಪ್ರಶಂಸೆಯ ಮಾತುಗಳನ್ನಾಡಿ. ನಿಮ್ಮಿಂದ ಬರುವ ಈ ಸಕಾರಾತ್ಮಕ ಪ್ರತಿಕ್ರಿಯೆ ಅವರನ್ನು ಇನ್ನಷ್ಟು ಸಂತೋಷಪಡಿಸುತ್ತದೆ.

ಇದನ್ನೂ ಓದಿ: ಉಡುಗೊರೆಗಳನ್ನು ನೀಡಿದ್ರೆ ಸಂಬಂಧದಲ್ಲಿ ಬಿರುಕು ಮೂಡೋದು ಗ್ಯಾರಂಟಿ

ಹೊಸ ಲುಕ್‌ಗಳನ್ನು ಬೆಂಬಲಿಸಿ: ನಿಮ್ಮ ಸಂಗಾತಿ ಹೊಸ ಕೇಶವಿನ್ಯಾಸ, ಉಡುಗೆ ಅಥವಾ ಹೊಸ ಲುಕ್ ಪ್ರಯತ್ನಿಸಿದಾಗ, ಅದನ್ನು ಅಪಹಾಸ್ಯ ಮಾಡುವ ಬದಲು ಪ್ರೋತ್ಸಾಹಿಸಿ. ಇದು ಅವರಿಗೆ ಒಳ್ಳೆಯ ಭಾವನೆ ಮೂಡಿಸುತ್ತದೆ ಮತ್ತು ಸಂಬಂಧದಲ್ಲಿ ಸಕಾರಾತ್ಮಕತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ನಿನ್ನನ್ನು ಮಿಸ್ ಮಾಡಿಕೊಳ್ಳುತ್ತೇನೆ’ ಎಂದು ಹೇಳಿ: ಪ್ರತಿ ಕ್ಷಣವೂ ಯಾರನ್ನಾದರೂ ಮಿಸ್‌ ಮಾಡಿಕೊಳ್ಳುವುದು ಅಸಾಧ್ಯವಾದ ಮಾತು. ಆದರೂ ನಿಮ್ಮ ಸಂಗಾತಿಗೆ ಅವರ ಉಪಸ್ಥಿತಿಯು ನಿಮಗೆ ಮುಖ್ಯ ಎಂಬುದನ್ನು ತಿಳಿಸಲು ನಿಮ್ಮನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿ ಸಣ್ಣ ದಯೆಯ, ಪ್ರೀತಿಯ ಮಾತುಗಳು ಸಂಬಂಧವನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಇದು ಮಾತ್ರವಲ್ಲದೆ ಪ್ರೀತಿ, ಗೌರವ, ತಿಳುವಳಿಕೆ ಮತ್ತು ಭಾವನೆಗಳಿಗೆ ಬೆಲೆ ಕೊಡುವುದು ಕೂಡ ಸಂಬಂಧವನ್ನು ಬಲಪಡಿಸುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಫೋನ್‌ ವ್ಯಸನದಿಂದ ಮುಕ್ತರಾಗಲು ಈ ಸರಳ ಡಿಜಿಟಲ್‌ ಡಿಟಾಕ್ಸ್‌ ತಂತ್ರಗಳನ್ನು ಪಾಲಿಸಿ – Kannada News | Try these digital detox tips to live a stress free life

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳು ನಮ್ಮ ಜೀವನದ ನಿರ್ಣಾಯಕ ಭಾಗವಾಗಿಬಿಟ್ಟಿದೆ. ಅನೇಕ ಜನ ಬೆಳಗ್ಗೆ ಎದ್ದ ತಕ್ಷಣವೇ ಮೊಬೈಲ್‌ ನೋಡಲು ಆರಂಭಿಸುತ್ತಾರೆ. ಸೋಷಿಯಲ್‌ ಮೀಡಿಯಾದಲ್ಲಿ ರೀಲ್ಸ್‌, ವಿಡಿಯೋಗಳನ್ನು ಸ್ಕ್ರೋಲ್‌ ಮಾಡುತ್ತಾ ಕುಳಿತುಬಿಡುತ್ತಾರೆ. ಹೀಗೆ ಹೆಚ್ಚು ಹೊತ್ತು ಆನ್‌ಲೈನ್‌ನಲ್ಲಿರುವುದು ನಮ್ಮ ಮಾನಸಿಕ ಒತ್ತಡವನ್ನು ತ್ವರಿತವಾಗಿ ಹೆಚ್ಚಿಸುತ್ತದೆ. ಇದು ಕಿರಿಕಿರಿ ಉಂಟಾಗಲು, ಅನಗತ್ಯ ಕೋಪ ಬರಲು ಕಾರಣವಾಗುತ್ತದೆ. ನಿಮಗೂ ಕೂಡ ಇದೇ ರೀತಿಯ ಅನುಭವ ಆಗ್ತಿದ್ರೆ, ಡಿಜಿಟಲ್‌ ಡಿಟಾಕ್ಸ್‌ (digital detox) ಅಥವಾ ಸ್ವಲ್ಪ ಸಮಯದವರೆಗೆ ಸ್ಮಾರ್ಟ್‌ ಫೋನ್‌ನಿಂದ ವಿರಾಮ ತೆಗೆದುಕೊಳ್ಳುವುದು ಅತ್ಯಗತ್ಯ. ಪ್ರತಿದಿನ ಸ್ವಲ್ಪ ಸಮಯದವರೆಗೆ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ವಿರಾಮ ತೆಗೆದುಕೊಳ್ಳುವುದು ಮಾನಸಿಕ ಆರೋಗ್ಯದ ಮೇಲೆ ಗಮನಾರ್ಹ ಧನಾತ್ಮಕ ಪರಿಣಾಮ ಬೀರುತ್ತದೆ.

ಡಿಜಿಟಲ್ ಡಿಟಾಕ್ಸ್ ನಿಜವಾಗಿಯೂ ಒತ್ತಡವನ್ನು ಕಡಿಮೆ ಮಾಡಬಹುದೇ?

ನಾವು ನಿರಂತರವಾಗಿ ಫೋನ್‌ ನೋಡುತ್ತಾ ಕುಳಿತರೆ ಮನಸ್ಸಿಗೆ ವಿಶ್ರಾಂತಿ ಪಡೆಯಲು ಸಮಯ ಸಿಗುವುದಿಲ್ಲ. ರೀಲ್ಸ್‌, ವಿಡಿಯೋಗಳು, ಮೆಸೇಜ್‌ಗಳ ನಿರಂತರ ಹರಿವು ಮನಸ್ಸನ್ನು ಕಾರ್ಯನಿರತವಾಗಿರಿಸುತ್ತದೆ. ಇದು ಕ್ರಮೇಣ ಒತ್ತಡವನ್ನು ಹೆಚ್ಚಿಸುತ್ತದೆ. ಹೀಗಿರುವಾಗ ಸ್ವಲ್ಪ ಹೊತ್ತು ಫೋನ್‌ನಿಂದ ಬ್ರೇಕ್‌ ತೆಗೆದುಕೊಂಡಾಗ ಒತ್ತಡ ಕಡಿಮೆಯಾಗುತ್ತದೆ, ಮನಸ್ಥಿತಿಯೂ ಸುಧಾರಿಸುತ್ತದೆ.  ‌

ಫೋನ್‌ ಬಳಕೆ, ಒತ್ತಡವನ್ನು ಕಡಿಮೆ ಮಾಡುವ ಡಿಜಿಟಲ್‌ ಡಿಟಾಕ್ಸ್‌ ತಂತ್ರಗಳಿವು:

ಎದ್ದ ತಕ್ಷಣ ಫೋನ್ ನೋಡುವ ಅಭ್ಯಾಸ ಬಿಡಿ:  ಬಹುತೇಕ ಹೆಚ್ಚಿನವರು ಬೆಳಗ್ಗೆ ಎದ್ದ ತಕ್ಷಣವೇ ಮೊಬೈಲ್‌ ನೋಡುತ್ತಾ ಕುಳಿತು ಬಿಡುತ್ತಾರೆ. ಹೌದು ಮೆಸೇಜ್‌, ವಿಡಿಯೋಗಳನ್ನು ನೋಡುತ್ತಾರೆ. ಈ ಸರಳ ಅಭ್ಯಾಸವು  ದಿನದ ಆರಂಭವನ್ನು ಒತ್ತಡ ಮುಕ್ತಗೊಳಿಸುತ್ತದೆ. ಹಾಗಾಗಿ ಬೆಳಬೆಳಗ್ಗೆ ಫೋನ್‌ ನೋಡುವ ಬದಲು, ವ್ಯಾಯಾಮ, ಧ್ಯಾನ ಮಾಡಿ. ಕುಟುಂಬದೊಂದಿಗೆ ಒಂದೊಳ್ಳೆ ಸಮಯವನ್ನು ಕಳೆಯಿರಿ. ಈ ಸಣ್ಣ ಅಭ್ಯಾಸ ಆರೋಗ್ಯವನ್ನು ಸುಧಾರಿಸುತ್ತದೆ ಜೊತೆಗೆ ಇದು ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ನಿಮ್ಮ ದಿನಕ್ಕೆ ಉತ್ತಮ ಆರಂಭವನ್ನು ನೀಡುತ್ತದೆ. 

ನೋಟಿಫಿಕೇಶನ್‌ಗಳನ್ನು ನಿಯಂತ್ರಿಸಿ: ನೋಟಿಫಿಕೇಶನ್‌ ಆನ್‌ನಲ್ಲಿದ್ದರೆ ಪದೇ ಪದೇ ಮೊಬೈಲ್‌ ನೋಡುತ್ತೇವೆ. ಹಾಗಾಗಿ ನೋಟಿಫಿಕೇಶನ್‌ ಆಫ್‌ ಮಾಡಿ ಮೊಬೈಲ್‌ ಅನ್ನು ಸ್ವಲ್ಪ ಅತ್ತ ಕಡೆ ಇಟ್ಟು ಬಿಡಿ. ಇದು ನೀವು ಕೆಲಸದ ಮೇಲೆ ಗಮನಹರಿಸಲು ಸಹಾಯ ಮಾಡುತ್ತದೆ, ಮಾನಸಿಕ ಒತ್ತಡವನ್ನೂ ನಿವಾರಿಸುತ್ತದೆ.

ಇದನ್ನೂ ಓದಿ: ಮೊಬೈಲ್‌ ನೋಡುತ್ತಾ ಆಹಾರ ಸೇವನೆ ಮಾಡುವ ಅಭ್ಯಾಸದಿಂದ ಉಂಟಾಗುವ ತೊಂದರೆಗಳೇನು?

ಮಲಗುವ ಮುನ್ನ ಫೋನ್‌ನಿಂದ ದೂರವಿರಿ: ತಡರಾತ್ರಿಯವರೆಗೆ ಫೋನ್‌ ನೋಡುತ್ತಾ ಕುಳಿತರೆ ನಿದ್ರೆಯ ಗುಣಮಟ್ಟ ಕಡಿಮೆಯಾಗುತ್ತದೆ. ಹೌದು ಮೊಬೈಲ್‌ ಪರದೆಯಿಂದ ಹೊರಸೂಸುವ ನೀಲಿ ಬೆಳಕು ರಾತ್ರಿಯಿಡೀ ನಿಮ್ಮ ಮೆದುಳನ್ನು ಸಕ್ರಿಯವಾಗಿರಿಸುತ್ತದೆ, ಇದರಿಂದಾಗಿ ನಿದ್ರಿಸುವುದು ಕಷ್ಟವಾಗುತ್ತದೆ. ಹಾಗಾಗಿ ಮಲಗುವ  ಕನಿಷ್ಠ ಒಂದು ಗಂಟೆ ಮೊದಲು  ಸ್ಮಾರ್ಟ್‌ಫೋನ್ ಬಳಸುವುದನ್ನು ನಿಲ್ಲಿಸಿ. ಬದಲಾಗಿ ಪುಸ್ತಕ ಓದುವುದು ಅಥವಾ ಲಘು ಸಂಗೀತವನ್ನು ಕೇಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ, ನಿದ್ರೆಯ ಗುಣಮಟ್ಟವನ್ನೂ ಸುಧಾರಿಸುತ್ತದೆ.

ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯಿರಿ: ಡಿಜಿಟಲ್ ಡಿಟಾಕ್ಸ್‌ಗೆ ಉತ್ತಮ ಮತ್ತು ಸುಲಭವಾದ ಮಾರ್ಗವೆಂದರೆ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಮಯ ಕಳೆಯುವುದು. ಕುಟುಂಬದೊಂದಿಗೆ ಕುಳಿತು ಮನಬಿಚ್ಚಿ ಮಾತನಾಡಿ, ಸ್ನೇಹಿತರನ್ನು ಭೇಟಿ ಮಾಡಿ ಅಥವಾ ಮೊಬೈಲ್‌ ಮನೆಯಲ್ಲೇ ಇಟ್ಟು ವಾಕಿಂಗ್‌ ಹೋಗಿ. ಇದು ನಿಮ್ಮನ್ನು ಫೋನ್‌ನಿಂದ ದೂರವಿರುವಂತೆ ಮಾಡುತ್ತದೆ, ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಂಜು ಸ್ಯಾಮ್ಸನ್ ಸೇರಿದಂತೆ ಟೀಂ ಇಂಡಿಯಾದ ಈ ಮೂವರಿಗೆ ಶೀಘ್ರದಲ್ಲೇ ಗೇಟ್​ಪಾಸ್

Source link

ಮಾಗಡಿ ಬಳಿಯ ಕಲ್ಲು ಕ್ವಾರಿ ದುರಂತದಲ್ಲಿ 7 ಜನ ಸಾವು: ಪ್ರಧಾನಿ ಮೋದಿ ಸಂತಾಪ – Kannada News | Bengaluru quarry tragedy: At least 7 labourers killed; PM Modi condoles loss of lives

ಬೆಂಗಳೂರು, (ಜುಲೈ 02): ಬೆಂಗಳೂರು ದಕ್ಷಿಣ ತಾಲೂಕಿನ ಮಾದಾಪಟ್ಟಣ ಬಳಿ ಕಲ್ಲು ಗಣಿಗಾರಿಕೆಯಲ್ಲಿ ಸಂಭವಿಸಿದ ಅಪಘಡದಲ್ಲಿ (Bengaluru quarry tragedy) ಉಂಟಾದ ಜೀವಹಾನಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಸಂತಾಪ ಸೂಚಿಸಿದ್ದಾರೆ. ಟ್ವೀಟ್ ಮಾಡಿರುವ ಮೋದಿ, “ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನನ್ನ ತೀವ್ರ ಸಂತಾಪಗಳು. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.

ಕರ್ನಾಟಕದ ಬೆಂಗಳೂರು ನಗರ ಜಿಲ್ಲೆಯ ಕಲ್ಲು ಗಣಿಯಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಪ್ರಾಣಹಾನಿ ಸಂಭವಿಸಿರುವುದು ನೋವು ತಂದಿದೆ. ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು ದುರಂತ: 7 ಮಂದಿ ಬಲಿ, ಐವರು ಕೂಲಿ ಕಾರ್ಮಿಕರಿಗೆ ಗಾಯ

ಕಾವೇರಿ ಕಂಪನಿಗೆ ಸೇರಿದ ಕ್ರಷರ್​

ಕಾವೇರಿ ಕಂಪನಿಗೆ ಸೇರಿದ ಕ್ರಷರ್​ನಲ್ಲಿ ದುರಂತ ಸಂಭವಿಸಿದ್ದು, ಇಂದು ಬೆಳಗ್ಗೆ 7.30ರ ಸುಮಾರಿಗೆ ಈ ಘಟನೆ ನಡೆದಿದೆ. ಎಂದಿನಂತೆ ಕೆಲಸ ಮಾಡ್ತಿದ್ದ ಕಾರ್ಮಿಕರ ಪಾಲಿಗೆ ಬಂಡೆ ಯಮನಾಗಿ ಬಂದಿದೆ. ಇಟಾಚಿಯಲ್ಲಿ ಕೆಲಸ ಮಾಡುವಾಗ ಬಂಡೆ ಕೆಳಗೆ ಬಿದ್ದಿದ್ದು, ಕಾರ್ಮಿಕರ ಮೇಲೆಯೇ ಬಿದ್ದು ಭಾರೀ ದುರಂತ ಸಂಭವಿಸಿದೆ. ಸ್ಥಳಕ್ಕೆ ತಾವರೆಕೆರೆ ಪೊಲೀಸ್ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಮುಂಜಾನೆ ಜಿಲೆಟಿನ್ ಸ್ಫೋಟ!

ಸ್ಥಳೀಯ ಮೂಲಗಳ ಪ್ರಕಾರ, ಹುಲವೇನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ಕದ್ದುಮುಚ್ಚಿ ಅಕ್ರಮ ಗಣಿಗಾರಿಕೆ ನಡೆಸಲಾಗುತ್ತಿತ್ತು. ಇಂದು ಬೆಳಗಿನ ಜಾವ ಕಾರ್ಮಿಕರು ಎಂದಿನಂತೆ ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದಾಗ, ದೊಡ್ಡ ಬಂಡೆಗಳನ್ನು ಪುಡಿ ಮಾಡಲು ಅತಿಯಾದ ತೀವ್ರತೆಯ ಸ್ಫೋಟಕಗಳನ್ನು ಬಳಸಲಾಗಿದೆ. ಈ ವೇಳೆ ಸುರಕ್ಷತಾ ಕ್ರಮಗಳನ್ನು ಗಾಳಿಗೆ ತೂರಿ ಬಂಡೆ ಸ್ಫೋಟಿಸುವಾಗ ಇಡೀ ಪ್ರದೇಶವೇ ಬಹುದೊಡ್ಡ ಸೌಂಡ್‌ ಜೊತೆಗೆ ಸಿಡಿದಿದೆ. ಸ್ಫೋಟದ ತೀವ್ರತೆಗೆ ಬಂಡೆ ಕುಸಿದು ಸಿಲುಕಿ ಏಳು ಜನ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ಕರ್ನಾಟಕ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮುಂಬೈನಲ್ಲಿ ತೆರೆದ ಮ್ಯಾನ್‌ಹೋಲ್‌ಗೆ ಬಿದ್ದು ವ್ಯಕ್ತಿ ಸಾವು; ನಗರದಲ್ಲಿ ಮಳೆಗೆ 3ನೇ ಬಲಿ – Kannada News | 60 year old Man dies after falling into manhole amid heavy rains in Mumbai

ಮುಂಬೈ: ಮುಂಬೈನ ಸಾಕಿನಾಕಾ ಪ್ರದೇಶದಲ್ಲಿ ಇಂದು ತೆರೆದ ಮ್ಯಾನ್‌ಹೋಲ್‌ಗೆ ಬಿದ್ದು 60 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಮುಂಗಾರು ಅವಧಿಯಲ್ಲಿ ಮುಂಬೈ ಮಹಾನಗರ ಪಾಲಿಕೆಯ ನಾಗರಿಕ ಸುರಕ್ಷತಾ ಕ್ರಮಗಳ ಲೋಪವನ್ನು ಈ ಘಟನೆ ಮತ್ತೊಮ್ಮೆ ಬಹಿರಂಗಪಡಿಸಿದೆ. ಈ ಮಳೆಗಾಲದಲ್ಲಿ ಮುಂಬೈನಲ್ಲಿ (Mumbai Rains) ಸಂಭವಿಸಿದ 3ನೇ ಮಳೆ ಸಂಬಂಧಿತ ಸಾವು ಇದಾಗಿದೆ.

ಮೃತರನ್ನು ಅಸ್ಲಾಂ ಶೇಖ್ ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಸುಮಾರು 10.45ರ ಸುಮಾರಿಗೆ ಖೈರಾನಿ ರಸ್ತೆಯಲ್ಲಿ ನಡೆದುಕೊಂಡು ಮನೆಗೆ ಹೋಗುತ್ತಿದ್ದಾಗ ಅವರು ಆಕಸ್ಮಿಕವಾಗಿ ಮ್ಯಾನ್‌ಹೋಲ್‌ಗೆ ಬಿದ್ದಿದ್ದಾರೆ. ಸುಮಾರು 25ರಿಂದ 30 ಅಡಿ ಆಳವಿದ್ದ ಈ ಮ್ಯಾನ್‌ಹೋಲ್ ಅನ್ನು ಪಾಲಿಕೆಯ ನಿರ್ವಹಣಾ ಕೆಲಸಗಳಿಗಾಗಿ ತೆರೆದಿಡಲಾಗಿತ್ತು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಭಾರೀ ಮಳೆ ಮುನ್ಸೂಚನೆ: ಜು.2ರಂದು ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ!

ಕೆಲವೇ ದಿನಗಳ ಹಿಂದೆಯಷ್ಟೇ ಮುಂಬೈ ಮೇಯರ್ ರಿತು ತಾವ್ಡೆ ಅವರ ಸಮ್ಮುಖದಲ್ಲೇ ಪಾಲಿಕೆಯ ಪೌರಕಾರ್ಮಿಕರೊಬ್ಬರು ಮ್ಯಾನ್‌ಹೋಲ್‌ಗೆ ಬಿದ್ದ ಘಟನೆ ನಡೆದಿತ್ತು. ಅದರ ಬೆನ್ನಲ್ಲೇ ಈ ದುರಂತ ಸಂಭವಿಸಿರುವುದು ನಗರದ ಮುಂಗಾರು ಸಿದ್ಧತೆಗಳ ಕುರಿತು ಸಾರ್ವಜನಿಕರಲ್ಲಿ ತೀವ್ರ ಕಳವಳ ಮೂಡಿಸಿದೆ.

ಮೊಬೈಲಲ್ಲಿ ಮಾತನಾಡುತ್ತಾ ಬಿದ್ದ ವ್ಯಕ್ತಿ:

ಖಾಸಗಿ ಗುತ್ತಿಗೆಯ ಮೂವರು ಕಾರ್ಮಿಕರು ಅಲ್ಲಿನ ಒಳಚರಂಡಿ ನಿರ್ವಹಣಾ ಕೆಲಸ ಮಾಡುತ್ತಿದ್ದು, ಮ್ಯಾನ್‌ಹೋಲ್ ಮುಚ್ಚಳವನ್ನು ತೆಗೆದಿದ್ದರು. ಇದೇ ಸಮಯದಲ್ಲಿ ಅಸ್ಲಾಂ ಶೇಖ್ ಅವರು ತಮ್ಮ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಾ ರಸ್ತೆಯಲ್ಲಿ ಹೋಗುತ್ತಿದ್ದರು. ಆಗ ಮುನ್ನೆಚ್ಚರಿಕೆ ವಹಿಸದ ಅವರು ಆಕಸ್ಮಿಕವಾಗಿ ತೆರೆದ ಮ್ಯಾನ್‌ಹೋಲ್‌ಗೆ ಬಿದ್ದಿದ್ದಾರೆ. ತಕ್ಷಣ ಗುತ್ತಿಗೆ ಕಾರ್ಮಿಕರು ಅವರನ್ನು ರಕ್ಷಿಸಲು ಮ್ಯಾನ್‌ಹೋಲ್ ಒಳಗಡೆ ಏಣಿಯನ್ನು ಇಳಿಸಿದ್ದರು. ಆದರೆ, ಅಷ್ಟರಲ್ಲೇ ಅವರು ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದು, ಅವರ ಛತ್ರಿ ಮತ್ತು ಚಪ್ಪಲಿಗಳು ಮಾತ್ರ ಸಿಕ್ಕಿವೆ. ಒಳಚರಂಡಿಯಲ್ಲಿ ಮಳೆನೀರಿನ ಹರಿವು ತೀವ್ರವಾಗಿದ್ದರಿಂದ ಅವರು ಯಾವ ದಿಕ್ಕಿನಲ್ಲಿ ಕೊಚ್ಚಿ ಹೋಗಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಆರಂಭದಲ್ಲಿ ಸಾಧ್ಯವಾಗಲಿಲ್ಲ.

ಇದನ್ನೂ ಓದಿ: ಮುಂಬೈ ಮೇಯರ್ ಕಣ್ಣೆದುರೇ ತೆರೆದ ಮ್ಯಾನ್‌ಹೋಲ್‌ಗೆ ಬಿದ್ದ ಪೌರಕಾರ್ಮಿಕ; ವಿಡಿಯೋ ವೈರಲ್

ಹಲವು ಗಂಟೆಗಳ ಕಾಲ ನಡೆದ ರಕ್ಷಣಾ ಕಾರ್ಯಾಚರಣೆ:

ಈ ಘಟನೆಯ ಮಾಹಿತಿ ತಿಳಿದ ತಕ್ಷಣ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಮತ್ತು ಇತರ ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೃಹತ್ ಶೋಧ ಕಾರ್ಯಾಚರಣೆ ಆರಂಭಿಸಿದರು. ಭಾರಿ ಮಳೆಯಿಂದಾಗಿ ಒಳಚರಂಡಿ ಜಾಲದಲ್ಲಿ ನೀರಿನ ರಭಸ ಹೆಚ್ಚಾಗಿದ್ದರಿಂದ ಶೇಖ್ ಅವರು ಪೈಪ್‌ಲೈನ್‌ನಲ್ಲಿ ಕೊಚ್ಚಿಹೋಗಿರಬಹುದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದರು. ಇಂದು ಮಧ್ಯಾಹ್ನ 2.15ರ ಸುಮಾರಿಗೆ ಅಗ್ನಿಶಾಮಕ ಸಿಬ್ಬಂದಿ ಒಳಚರಂಡಿ ನೆಟ್‌ವರ್ಕ್ ಒಳಗಡೆ ಅವರ ಶವವನ್ನು ಪತ್ತೆಹಚ್ಚಿದ್ದು, ಅದನ್ನು ಹೊರತೆಗೆದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಖಾಸಗಿ ಲೇಔಟ್ ರಸ್ತೆಗಳು ಇನ್ನು ಸರ್ಕಾರಿ ಸ್ವತ್ತು: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಘೋಷಣೆ – Kannada News | CM DK Shivakumar Announces Major Policy: Private Roads in layouts to Become Government Property

ಬೆಂಗಳೂರು, ಜುಲೈ 2: ಇನ್ನು ಮುಂದೆ ಖಾಸಗಿ ಲೇಔಟ್​​ಗಳಲ್ಲಿರುವ ರಸ್ತೆಗಳನ್ನೂ ಸರ್ಕಾರಿ ರಸ್ತೆಗಳೆಂದು ಪರಿವರ್ತಿಸಲಾಗುವುದು ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಹತ್ವದ ಘೋಷಣೆ ಮಾಡಿದರು. ಸಚಿವ ಸಂಪುಟ ಸಭೆಯ ಬಳಿಕ ಮಾಹಿತಿ ನೀಡಿದ ಅವರು, ಬೆಂಗಳೂರು ನಗರದಲ್ಲಿ ಈ ಹಿಂದೆ ಜಾರಿಯಲ್ಲಿದ್ದಂತೆ, ಸೈಟ್ ಹಂಚಿದ ನಂತರ ರಸ್ತೆಗಳು ಖಾಸಗಿ ಆಸ್ತಿಯಾಗಿ ಉಳಿಯುವುದಿಲ್ಲ, ಬದಲಿಗೆ ಸರ್ಕಾರದ ಸ್ವತ್ತಾಗುತ್ತವೆ. ಇದಕ್ಕೆ ಅಗತ್ಯ ಕಾನೂನು ತರಲಾಗುವುದು ಎಂದರು. ರಾಜ್ಯದ ರಸ್ತೆಗಳು, ಭೂ ದಾಖಲೆಗಳು ಮತ್ತು ಸಾರ್ವಜನಿಕ ಸೇವೆಗೆ ಸಂಬಂಧಿಸಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದರು.

ಅಂಗವಿಕಲರಿಗೆ ಕೆಡಿಬಿ ಭೂಮಿ ಹಂಚಿಕೆಯಲ್ಲಿ ಶೇ 5 ರಿಸರ್ವೇಶನ್ ಮುಂದುವರಿಸಿ, ಅದರ ಮೌಲ್ಯದ ಶೇ 10 ರಿಯಾಯಿತಿ ಅಥವಾ ಗರಿಷ್ಠ 20 ಲಕ್ಷ ರೂಪಾಯಿ ಸೀಲಿಂಗ್ ಅಡಿಯಲ್ಲಿ ಪ್ರಯೋಜನಗಳನ್ನು ನೀಡಲಾಗುವುದು. ಪಂಚಾಯಿತಿ ಮಟ್ಟದಲ್ಲಿ ಭೂ ದಾಖಲೆಗಳನ್ನು ಶುದ್ಧೀಕರಿಸುವ ಭೂ ಗ್ಯಾರಂಟಿ ಕಾರ್ಯಕ್ರಮಕ್ಕೂ ಒತ್ತು ನೀಡಲಾಗುವುದು ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕ್ಯಾಲ್ಸಿಯಂ ಕೊರತೆ ಮಾತ್ರವಲ್ಲ, ಈ ಅಭ್ಯಾಸಗಳೂ ಕೂಡ ಮೂಳೆಗಳನ್ನು ದುರ್ಬಲಗೊಳಿಸಬಹುದು! – Kannada News | Bone Health Tips: Habits That May Increase the Risk of Weak Bones

ಇತ್ತೀಚಿನ ದಿನಗಳಲ್ಲಿ ವಯಸ್ಸಾದವರಲ್ಲಿ ಮಾತ್ರವಲ್ಲ, ಯುವಕರಲ್ಲಿಯೂ ಮೂಳೆಗಳ ದುರ್ಬಲತೆ, ಮೂಳೆ ನೋವು ಮತ್ತು ಸುಲಭವಾಗಿ ದಣಿವು ಅಥವಾ ಸುಸ್ತಾಗುವಂತಹ ಸಮಸ್ಯೆಗಳು ಹೆಚ್ಚುತ್ತಿವೆ. ಹಲವರು ಇದಕ್ಕೆ ಕ್ಯಾಲ್ಸಿಯಂ ಕೊರತೆಯೇ (Calcium Deficiency) ಕಾರಣ ಎಂದು ಭಾವಿಸುತ್ತಾರೆ. ಆದರೆ ಮೂಳೆಗಳ ಆರೋಗ್ಯವು ಕೇವಲ ಕ್ಯಾಲ್ಸಿಯಂ ಮೇಲಷ್ಟೇ ಅವಲಂಬಿತವಾಗಿಲ್ಲ. ಜೀವನಶೈಲಿ, ಆಹಾರ ಪದ್ಧತಿ ಮತ್ತು ಇತರ ಅಂಶಗಳೂ ಮೂಳೆಗಳ ಬಲದ ಮೇಲೆ ಪರಿಣಾಮ ಬೀರುತ್ತವೆ. ಹೌದು, ಈ ರೀತಿ ಆಗುವುದನ್ನು ಬಹಳ ಸಾಮಾನ್ಯ ಅಥವಾ ಕ್ಯಾಲ್ಸಿಯಂ ಕೊರತೆ ಎಂದು ನಿರ್ಲಕ್ಷ್ಯ ಮಾಡುವ ಬದಲು ಈ ರೀತಿ ಆಗುವುದಕ್ಕೆ ಕಾರಣಗಳೇನು, ಮೂಳೆಗಳು ಗಟ್ಟಿಯಾಗಿ ಆರೋಗ್ಯವಾಗಿರಲು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮೂಳೆಗಳನ್ನು ದುರ್ಬಲಗೊಳಿಸುವ ಅಭ್ಯಾಸಗಳು

ತಜ್ಞರ ಪ್ರಕಾರ, ನಿಯಮಿತ ವ್ಯಾಯಾಮದ ಕೊರತೆ ಮೂಳೆಗಳ ಸಾಂದ್ರತೆಯನ್ನು ಕಡಿಮೆ ಮಾಡಬಹುದು. ಧೂಮಪಾನ, ಅತಿಯಾದ ಮದ್ಯಪಾನ, ವಿಟಮಿನ್ ಡಿ ಕೊರತೆ ಮತ್ತು ದೀರ್ಘಕಾಲ ಅನಾರೋಗ್ಯಕರ ಆಹಾರ ಸೇವನೆಯೂ ಮೂಳೆಗಳನ್ನು ದುರ್ಬಲಗೊಳಿಸುತ್ತದೆ. ಕೆಲವು ಔಷಧಿಗಳ ದೀರ್ಘಕಾಲದ ಬಳಕೆ ಹಾಗೂ ಹೆಚ್ಚುತ್ತಿರುವ ವಯಸ್ಸು ಕೂಡ ಮೂಳೆಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.

ಮೂಳೆಗಳನ್ನು ಗಟ್ಟಿಯಾಗಿ, ಆರೋಗ್ಯವಾಗಿರಲು ಏನು ಮಾಡಬೇಕು?

ಪ್ರತಿದಿನ ನಿಯಮಿತವಾಗಿ ವಾಕ್ ಮಾಡುವುದು, ಮೆಟ್ಟಿಲು ಹತ್ತುವುದು, ಲಘು ಓಟ ಅಥವಾ ತೂಕ ಎತ್ತುವಂತಹ ವ್ಯಾಯಾಮಗಳನ್ನು ಮಾಡುವುದು ಮೂಳೆಗಳನ್ನು ಬಲಪಡಿಸಲು ಸಹಕಾರಿ. ಆರೋಗ್ಯಕರ ದೇಹದ ತೂಕವನ್ನು ಕಾಪಾಡಿಕೊಳ್ಳುವುದು, ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರುವುದು ಕೂಡ ಮುಖ್ಯ. ಜೊತೆಗೆ ಪ್ರತಿದಿನ ಸ್ವಲ್ಪ ಸಮಯ ಸೂರ್ಯನ ಬೆಳಕಿನಲ್ಲಿ ಇರುವುದರಿಂದ ದೇಹಕ್ಕೆ ಅಗತ್ಯವಾದ ವಿಟಮಿನ್ ಡಿ ಲಭ್ಯವಾಗುತ್ತದೆ.

ಇದನ್ನೂ ಓದಿ: ಮೆದುಳಿನ ಆರೋಗ್ಯ ಕಾಪಾಡಲು ಡಬ್ಲ್ಯೂಎಚ್ಓ ಶಿಫಾರಸು ಮಾಡಿರುವ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ

ಮೂಳೆಗಳ ಆರೋಗ್ಯಕ್ಕೆ ಯಾವ ಆಹಾರ ಉತ್ತಮ?

ಹಾಲು, ಮೊಸರು, ಪನ್ನೀರ್, ಹಸಿರು ಎಲೆಗಳ ತರಕಾರಿಗಳು, ಬಾದಾಮಿ ಹಾಗೂ ಕ್ಯಾಲ್ಸಿಯಂ ಸಮೃದ್ಧ ಆಹಾರಗಳನ್ನು ನಿಯಮಿತವಾಗಿ ಸೇವಿಸಿ. ಸಮತೋಲಿತ ಆಹಾರ, ಸಾಕಷ್ಟು ನೀರು ಕುಡಿಯುವುದು ಮತ್ತು ಹೆಚ್ಚು ಸಮಯ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದನ್ನು ತಪ್ಪಿಸುವುದು ಸಹ ಅಗತ್ಯ. ವೈದ್ಯರ ಸಲಹೆಯಿದ್ದರೆ ಮಾತ್ರ ಕ್ಯಾಲ್ಸಿಯಂ ಅಥವಾ ವಿಟಮಿನ್ ಡಿ ಪೂರಕಗಳನ್ನು ಬಳಸಬೇಕು. ಆರೋಗ್ಯಕರ ಜೀವನಶೈಲಿಯೇ ದೀರ್ಘಕಾಲ ಮೂಳೆಗಳನ್ನು ಗಟ್ಟಿಯಾಗಿಡುವ ಅತ್ಯುತ್ತಮ ಮಾರ್ಗವಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತೈಲ ಬೆಲೆ ಇಳಿದರೂ ಭಾರತದಲ್ಲಿ ಪೆಟ್ರೋಲ್ ಬೆಲೆ ಕಡಿಮೆ ಮಾಡಿಲ್ಲ ಯಾಕೆ? ಕಾರಣ ಬಿಚ್ಚಿಟ್ಟ ಸಚಿವ ಹರ್ದೀಪ್ – Kannada News | Why petrol price not reduced despite crude oil rates coming down, Minister Hardeep clarifies

ನವದೆಹಲಿ, ಜುಲೈ 2: ಜಾಗತಿಕವಾಗಿ ತೈಲ ಬೆಲೆಗಳು ಗಣನೀಯವಾಗಿ ಇಳಿಕೆಯಾಗಿವೆ. ಅದರ ಬೆನ್ನಲ್ಲೇ ಮೊನ್ನೆ ನಯಾರ ಎನರ್ಜಿ ತನ್ನ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳನ್ನು ಕಡಿಮೆ ಮಾಡಿತ್ತು. ಆದರೆ, ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು (Oil Marketing Companies) ಹಾಗೂ ಇತರ ಪೆಟ್ರೋಲ್ ಬಂಕ್​ಗಳಲ್ಲಿ ಬೆಲೆ ತಗ್ಗಿಸಿಲ್ಲ. ಕಚ್ಚಾ ತೈಲ ಬೆಲೆ ತಗ್ಗಿರುವ ಹಿನ್ನೆಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಯಾವಾಗ ಇಳಿಕೆಯಾಗಲಿವೆ ಎಂಬ ಸಾರ್ವಜನಿಕರ ಬಹುದಿನಗಳ ಪ್ರಶ್ನೆಗೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri) ಅವರು ಮಹತ್ವದ ಸುಳಿವು ನೀಡಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ (Crude Oil) ಬೆಲೆಗಳು ಹೀಗೆಯೇ ಸ್ಥಿರವಾಗಿ ಮುಂದುವರಿದರೆ, ಮುಂದಿನ ಕೆಲವು ವಾರಗಳಲ್ಲಿ ಇಂಧನ ದರ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ.

“ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಪ್ರಸ್ತುತ ಇಳಿಮುಖವಾಗಿವೆ. ಆದರೆ, ಈ ಕಡಿಮೆ ದರದ ಸ್ಥಿತಿಯು ಮುಂದಿನ ಕೆಲವು ವಾರಗಳ ಕಾಲ ಹೀಗೆಯೇ ಸ್ಥಿರವಾಗಿ ಮುಂದುವರಿದರೆ, ನಾವು ದೇಶೀಯ ಮಾರುಕಟ್ಟೆಯಲ್ಲಿ ತೈಲ ದರ ಪರಿಷ್ಕರಣೆ (ಇಳಿಕೆ) ಕುರಿತು ಖಂಡಿತವಾಗಿಯೂ ಮರುಚಿಂತನೆ ನಡೆಸಲಿದ್ದೇವೆ,” ಎಂದು ಹರ್ದೀಪ್ ಸಿಂಗ್ ಪುರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ತತ್​ಕ್ಷಣಕ್ಕೆ ಪೆಟ್ರೋಲ್ ಬೆಲೆ ಇಳಿಸದೇ ಇರಲು ಏನು ಕಾರಣ?

ತೈಲ ಕಂಪನಿಗಳು ಸಾಮಾನ್ಯವಾಗಿ ಕಚ್ಚಾ ತೈಲವನ್ನು 2 ತಿಂಗಳ ಮುಂಚಿತವಾಗಿಯೇ ಬುಕ್ ಮಾಡುತ್ತವೆ. ಪ್ರಸ್ತುತ ಕಂಪನಿಗಳು ಸಂಸ್ಕರಿಸುತ್ತಿರುವ (Processing) ಕಚ್ಚಾ ತೈಲವು ಏಪ್ರಿಲ್ ಅಥವಾ ಮೇ ತಿಂಗಳ ಆರಂಭದಲ್ಲಿ ಪಶ್ಚಿಮ ಏಷ್ಯಾ ಬಿಕ್ಕಟ್ಟಿನ (West Asia Conflict) ಸಂದರ್ಭದಲ್ಲಿ ಗರಿಷ್ಠ ಬೆಲೆಗೆ ಖರೀದಿಸಿದ್ದಾಗಿದೆ. ಹಾಗಾಗಿಯೇ ಜಾಗತಿಕವಾಗಿ ಬೆಲೆ ಇಳಿದಿದ್ದರೂ ತಕ್ಷಣವೇ ಭಾರತದಲ್ಲಿ ದರ ಇಳಿಸಲು ಸಾಧ್ಯವಾಗಿಲ್ಲ ಎಂದು ಸಚಿವರು ವಿವರಣೆ ನೀಡಿದ್ದಾರೆ.

ಇದನ್ನೂ ಓದಿ: ಮೋದಿ ಉದ್ಘಾಟನೆಗೂ ಮುನ್ನವೇ ಸೆಮಿಕಂಡಕ್ಟರ್ ಚಿಪ್​ಗಳ ರಫ್ತು ಆರಂಭಿಸಿದ ಮುರುಗಪ್ಪ ಗ್ರೂಪ್ ಕಂಪನಿ

ತೈಲ ಕಂಪನಿಗಳ ನಷ್ಟ ಮತ್ತು ಪ್ರಸ್ತುತ ಸ್ಥಿತಿ

ಪಶ್ಚಿಮ ಏಷ್ಯಾ ಯುದ್ಧದ ಸಮಯದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ ಸುಮಾರು $120 ಡಾಲರ್‌ಗೆ ಏರಿಕೆಯಾಗಿತ್ತು. ಆದರೆ, ಭಾರತ ಸರ್ಕಾರವು ಗ್ರಾಹಕರಿಗೆ ಹೊರೆಯಾಗದಂತೆ ತಡೆಯಲು ಬೆಲೆಗಳನ್ನು ಗಗನಕ್ಕೇರಲು ಬಿಡಲಿಲ್ಲ. ಇದರಿಂದಾಗಿ ತೈಲ ಮಾರುಕಟ್ಟೆ ಕಂಪನಿಗಳು (OMCs) ಜೂನ್ 30ರ ವರೆಗಿನ ಅವಧಿಯಲ್ಲಿ ಒಟ್ಟು 74,781 ಕೋಟಿ ರೂ ಭಾರಿ ನಷ್ಟವನ್ನು ಭರಿಸಿವೆ.

ಜೂನ್ ದ್ವಿತೀಯಾರ್ಧದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಸಂಘರ್ಷ ತಿಳಿಗೊಳಿಸಲು ಒಪ್ಪಂದ ಏರ್ಪಟ್ಟ ನಂತರ ಜಾಗತಿಕ ತೈಲ ಬೆಲೆಗಳು ಹಳೆಯ ಸ್ಥಿತಿಗೆ ಅಂದರೆ ಪ್ರತಿ ಬ್ಯಾರೆಲ್‌ಗೆ ಸುಮಾರು $70 ಡಾಲರ್‌ಗೆ ಇಳಿದಿವೆ.

ಇತ್ತೀಚೆಗಷ್ಟೇ ಪ್ರಮುಖ ಖಾಸಗಿ ಇಂಧನ ವಿತರಕ ಸಂಸ್ಥೆಯಾದ ‘ನಯಾರಾ ಎನರ್ಜಿ’ (Nayara Energy) ತನ್ನ 7,000ಕ್ಕೂ ಹೆಚ್ಚು ಬಂಕ್‌ಗಳಲ್ಲಿ ಪೆಟ್ರೋಲ್ ದರವನ್ನು ಪ್ರತಿ ಲೀಟರ್‌ಗೆ ರೂ. 5 ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ ರೂ. 3 ಇಳಿಕೆ ಮಾಡಿದೆ. ಇದು ಸರ್ಕಾರಿ ತೈಲ ಕಂಪನಿಗಳ ಮೇಲೂ ದರ ಇಳಿಸಲು ಒತ್ತಡ ತಂದಿದೆ.

ಇದನ್ನೂ ಓದಿ: ಹೊಸ ಇನ್ಕಮ್ ಟ್ಯಾಕ್ಸ್ ಕಾಯ್ದೆ; 2 ಐಟಿಆರ್​ಗಳನ್ನು ಸಲ್ಲಿಸಬೇಕಾ ಎನ್ನುವ ಗೊಂದಲ ಕೆಲವರಲ್ಲಿ; ಇಲಾಖೆ ಸ್ಪಷ್ಟನೆ ಇದು

ವಿಮಾನ ಇಂಧನ, ಎಲ್​ಪಿಜಿ ದರ ಇಳಿಕೆ

ದೇಶೀಯ ಏರ್‌ಲೈನ್ಸ್‌ಗಳಿಗೆ ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಜುಲೈ 1 ರಿಂದ ಜಾರಿಗೆ ಬರುವಂತೆ ವಿಮಾನ ಇಂಧನ (ATF – Aviation Turbine Fuel) ದರವನ್ನು ಪ್ರತಿ ಲೀಟರ್‌ಗೆ 5 ರೂಪಾಯಿಗಳಷ್ಟು ಕಡಿತಗೊಳಿಸಿದೆ. ಇದರಿಂದಾಗಿ ಎಟಿಎಫ್ ದರ ಲೀಟರ್‌ಗೆ 115 ರೂಪಾಯಿಗಳಿಂದ 110 ರೂಗೆ ಇಳಿಕೆಯಾಗಿದೆ.

ಕಮರ್ಷಿಯಲ್ ಎಲ್​ಪಿಜಿ ದರಗಳನ್ನೂ ಸರ್ಕಾರ ಕಡಿಮೆ ಮಾಡಿದೆ. ಈ ವಾಣಿಜ್ಯ ಗ್ಯಾಸ್ ಬೆಲೆ ಕಳೆದ ಒಂದು ವರ್ಷದಲ್ಲಿ ನಾಲ್ಕು ಬಾರಿ ಹೆಚ್ಚಳಗೊಂಡಿತ್ತು. ಈಗ ಬೆಲೆ ಸ್ವಲ್ಪ ಕಡಿಮೆ ಆಗಿರುವುದು ಹೊಟೆಲ್ ಉದ್ಯಮಗಳು ಹಾಗೂ ಗ್ರಾಹಕರಿಗೆ ಹೊರೆ ಕಡಿಮೆಗೊಂಡಂತಾಗಿದೆ.

ಒಟ್ಟಾರೆಯಾಗಿ, ಜಾಗತಿಕ ತೈಲ ಮಾರುಕಟ್ಟೆಯಲ್ಲಿನ ಸಕಾರಾತ್ಮಕ ಬದಲಾವಣೆಗಳು ಹೀಗೆಯೇ ಮುಂದುವರಿದರೆ, ಮುಂಬರುವ ದಿನಗಳಲ್ಲಿ ದೇಶದ ಸಾಮಾನ್ಯ ವಾಹನ ಸವಾರರಿಗೂ ಪೆಟ್ರೋಲ್-ಡೀಸೆಲ್ ದರ ಇಳಿಕೆಯ ರೂಪದಲ್ಲಿ ದೊಡ್ಡ ರಿಲೀಫ್ ಸಿಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಸಮವಸ್ತ್ರ, ಶೂ ನೀಡಲು ಕ್ಯಾಬಿನೆಟ್​ ಅಸ್ತು – Kannada News | Good News for Minority Students: Cabinet Approves Free Uniforms and Shoes

ಬೆಂಗಳೂರು, ಜುಲೈ 02: ಸಿಎಂ ಡಿಕೆ ಶಿವಕುಮಾರ್ (DK Shivakumar) ನೇತೃತ್ವದಲ್ಲಿ ಇಂದು ನಡೆದ ಮಹತ್ವದ ಸಚಿವ ಸಂಪುಟ (Cabinet) ಸಭೆಯಲ್ಲಿ ಪ್ರಮುಖ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಪ್ರಮುಖವಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಕ್ರೀಡಾ ಉಡುಪು ಹಾಗೂ ಶೂ ನೀಡಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ 33.06 ಕೋಟಿ ರೂ ಅಂದಾಜು ಮೊತ್ತದಲ್ಲಿ ಖರೀದಿಸಲು ಅನುಮೋದನೆ ನೀಡಲಾಗಿದೆ.

ಬೀಳಗಿ ಏತ ನೀರಾವರಿ ಯೋಜನೆಗೆ ಅನುಮೋದನೆ

ಬಾಗಲಕೋಟೆ ಜಿಲ್ಲೆಯ ರೈತರಿಗೆ ಸಂಪುಟ ಸಭೆಯು ಸಿಹಿ ಸುದ್ದಿ ನೀಡಿದ್ದು, ಬೀಳಗಿ ಏತ ನೀರಾವರಿ ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ ಸೂಚಿಸಿದೆ. ಬೀಳಗಿ ತಾಲೂಕಿನ ಸೊನ್ನ ಗ್ರಾಮದ ಬಳಿ ಕೃಷ್ಣಾ ನದಿಯಿಂದ ನೀರೆತ್ತಿ, ಘಟಪ್ರಭಾ ಎಡದಂಡೆ ಕಾಲುವೆಯಡಿ ಬರುವ ಬೀಳಗಿ ಶಾಖಾ ಕಾಲುವೆಯ 38 ಕಿ.ಮೀ. ನಿಂದ 44 ಕಿ.ಮೀ. ವರೆಗಿನ ಬಾಧಿತ ಹಾಗೂ ಹೊಸ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆ ಇದಾಗಿದೆ. ಒಟ್ಟು 98.50 ಕೋಟಿ ರೂ ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ.

ನೇತ್ರ ಉಪಕರಣಗಳನ್ನು ಖರೀದಿಸಲು ಕ್ಯಾಬಿನೆಟ್​ನಲ್ಲಿ ಅನುಮೋದನೆ

ರಾಷ್ಟ್ರೀಯ ಅಂಧತ್ವ ನಿಯಂತ್ರಣ ಮತ್ತು ದೃಷ್ಟಿಮಾಂದ್ಯತೆ ನಿಯಂತ್ರಣ ಕಾರ್ಯಕ್ರಮದಡಿ ರಾಜ್ಯದಲ್ಲಿ ಕಣ್ಣಿನ ಆರೈಕೆ ಸೇವೆಗಳನ್ನು ಮತ್ತಷ್ಟು ಬಲಪಡಿಸಲು ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ರಾಜ್ಯದ ಆರೋಗ್ಯ ಕೇಂದ್ರಗಳಿಗೆ ಅಗತ್ಯವಿರುವ ಅತ್ಯಾಧುನಿಕ ನೇತ್ರ ಉಪಕರಣಗಳನ್ನು ಖರೀದಿಸಲು ಕ್ಯಾಬಿನೆಟ್‌ ಅಸ್ತು ಎಂದಿದೆ. ಇದಕ್ಕಾಗಿ 25.95 ಕೋಟಿ ರೂ ಅಂದಾಜು ಮೊತ್ತವನ್ನು ಕಾಯ್ದಿರಿಸಲಾಗಿದೆ.

ಇದನ್ನೂ ಓದಿ: ಹಿರಿಯ IAS ಅಧಿಕಾರಿಗಳ ವರ್ಗಾವಣೆ: ಹೊಸ ಪ್ರಜಾಸೇವೆ ಇಲಾಖೆಗೆ ಪ್ರಧಾನ ಕಾರ್ಯದರ್ಶಿ ನೇಮಕ

ಇನ್ನು ಕಲಬುರಗಿಯ ಜವಳಿ ಪಾರ್ಕ್ ಅಭಿವೃದ್ಧಿಗೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಪಿಎಂ-ಮಿತ್ರ’ ಯೋಜನೆಯಡಿ ಜವಳಿ ಪಾರ್ಕ್ ಅನ್ನು ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. 26.23 ಕೋಟಿ ವೆಚ್ಚದಲ್ಲಿ ಎನ್‌ಜಿಇಎಫ್‌ ಸಂಸ್ಥೆ ‘ಟ್ರೀ ಪಾರ್ಕ್-ಫೇಸ್-1ಬಿ’ ಯೋಜನೆ ಅನುಷ್ಠಾನಕ್ಕೆ ಒಪ್ಪಿಗೆ ನೀಡಲಾಗಿದೆ.

ಸರ್ಕಾರವೇ ಜನರ ಬಳಿ ಹೋಗಲಿದೆ ಎಂದ ಡಿಕೆ ಶಿವಕುಮಾರ್​

ಸಚಿವ ಸಂಪುಟ ಸಭೆ ಬಳಿಕ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್, ರಾಜ್ಯದ ಜನರ ಸಮಸ್ಯೆ ಆಲಿಸಲು ಹೊಸ ಇಲಾಖೆ ಆರಂಭಿಸಿದ್ದು, ಪ್ರಜಾಸೇವೆ ಇಲಾಖೆ ಎಂದು ನಾಮಕರಣ ಮಾಡಿದ್ದೇವೆ. ಯಾವುದೇ ಸಮಸ್ಯೆಗಳನ್ನು ಈ ಇಲಾಖೆಯಲ್ಲಿ ಹೇಳಿಕೊಳ್ಳಬಹುದು. ಪ್ರಜಾಸೇವೆ ಇಲಾಖೆಗೆ ಐಎಎಸ್ ಅಧಿಕಾರಿ ನೇಮಕ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.

ಪ್ರಜಾಸೇವೆ ಇಲಾಖೆಯಲ್ಲಿ ಎಲ್ಲಾ ಇಲಾಖೆಗಳ ಕೌಂಟರ್ ಇರಲಿದೆ. ಬೇಡಿಕೆ, ಸಮಸ್ಯೆಗಳಿದ್ದವರೂ ಕೌಂಟರ್​ನಲ್ಲಿ ಸಲ್ಲಿಕೆ ಮಾಡಬಹುದು. ಜನರು ಬೆಂಗಳೂರಿಗೆ ಬಂದು ಸಮಸ್ಯೆ ಹೇಳಿಕೊಳ್ಳುವ ಬದಲು, ಸರ್ಕಾರವೇ ಜನರ ಬಳಿ ಹೋಗಲಿದೆ. ನಾನು ಕೂಡ ಕೆಲವು ತಾಲೂಕುಗಳಿಗೆ ಪ್ರವಾಸ ಮಾಡುತ್ತೇನೆ ಎಂದರು.

ಇದನ್ನೂ ಓದಿ: ರಾಜ್ಯ ಸಾರಿಗೆ ನೌಕರರ ವೇತನ ಹೆಚ್ಚಿಸಿ ಸರ್ಕಾರ ಆದೇಶ, ಎಷ್ಟು ಹೆಚ್ಚಳ? ಯಾವಾಗಿನಿಂದ ಜಾರಿಗೆ?

ವಿದ್ಯುತ್ ಖಾಸಗೀಕರಣಕ್ಕೆ ಸರ್ಕಾರ ಸಿದ್ಧವಿಲ್ಲ. ವಿದ್ಯುತ್ ಸರಬರಾಜು ಸಂಸ್ಥೆಗಳು ಆಕ್ಷೇಪಣೆ ಸಲ್ಲಿಸಲು ಹೇಳಿದ್ದೇನೆ. ಖಾಸಗೀಕರಣಕ್ಕೆ ಸರ್ಕಾರದ ಸಹಮತ ಇಲ್ಲ ಎಂದು ಹೇಳಿದ್ದೇವೆ. ಸರ್ಕಾರದ ಅಭಿಪ್ರಾಯವನ್ನು ನಿಗಮಗಳಿಗೆ ತಿಳಿಸಿದ್ದೇವೆ ಎಂದಿದ್ದಾರೆ.

ಜಲಾಶಯ ತುಂಬುವವರೆಗೆ ಬೆಳೆ ಬೆಳೆಯ ಬೇಡಿ ಎಂದ ಸಿಎಂ 

ಇನ್ನು ರಾಜ್ಯದಲ್ಲಿ ತೀವ್ರ ಬರ ಇದೆ. ನೀರು ಮತ್ತು ವಿದ್ಯುತ್​ಗೆ ಅಭಾವ ಇದೆ. ವಿದ್ಯುತ್ ಅಭಾವ ತಪ್ಪಿಸಲು ಪರ್ಯಾಯದತ್ತ ಗಮನಹರಿಸಬೇಕಿದೆ. ಬರಪೀಡಿತ ಪ್ರದೇಶಗಳಿಗೆ ನಾನು ಭೇಟಿ ನೀಡುತ್ತೇನೆ. ರಾಜ್ಯದ ಜಲಾಶಯಗಳಿಗೆ ಒಳಹರಿವು ಪ್ರಮಾಣ ಕಡಿಮೆ ಇದೆ. ನೀರಿಲ್ಲ ಹೀಗಾಗಿ ರೈತರು ಜಲಾಶಯ ತುಂಬುವವರೆಗೆ ಬೆಳೆ ಬೆಳೆಯಲು ಹೋಗಬೇಡಿ. ಈ ಬಾರಿ ಇಡೀ ದೇಶದಲ್ಲಿಯೇ ಭೀಕರ ಬರಗಾಲ ಇದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ಸೂಚನೆ ಕೊಟ್ಟಿದ್ದಾರೆ ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ವಾಷಿಂಗ್ ಮಷಿನ್​​ಗೆ ಹಾಕಿ ಮಕ್ಕಳಿಗೆ ಹಿಂಸೆ: ಕ್ರೌರ್ಯದ ಬಗ್ಗೆ ಮಾಹಿತಿ ನೀಡಿದ್ದ ಸಿಬ್ಬಂದಿಯ ವಜಾಗೊಳಿಸಿದ್ದ ಡೇ ಕೇರ್ ಸೆಂಟರ್ – Kannada News | Bengaluru Daycare Child Abuse, Fired Whistleblower: KSCPCR Chief Writes to CM Demanding Strict Guidelines

ಡೇ ಕೇರ್ ಸೆಂಟರ್​​ನಲ್ಲಿ ಕ್ರೌರ್ಯImage Credit source: tv9

ಬೆಂಗಳೂರು, ಜುಲೈ 2: ಬೆಂಗಳೂರಿನ (Bengaluru) ಪ್ರತಿಷ್ಠಿತ ಸಂಸ್ಥೆಯೊಂದರ ಆವರಣದಲ್ಲಿರುವ ಬೇಬಿ ಡೇ ಕೇರ್ ಸೆಂಟರ್ ಒಂದರಲ್ಲಿ ಎರಡು ವರ್ಷದ ಪುಟ್ಟ ಮಕ್ಕಳ ಮೇಲೆ ನಡೆದಿರುವ ಅಮಾನವೀಯ ದೌರ್ಜನ್ಯ ಇಡೀ ಬೆಂಗಳೂರನ್ನು ಬೆಚ್ಚಿಬೀಳಿಸಿದೆ. ಅಳುವ ಮಕ್ಕಳ ಬಾಯಿ ಮುಚ್ಚಿಸಲು ಅವರನ್ನು ವಾಷಿಂಗ್ ಮಷಿನ್ ಒಳಗೆ ಕೂರಿಸಿ ವಾಟರ್ ಜೆಟ್ ಸ್ಪ್ರೇ ಮಾಡುವುದು, ಬಾತ್‌ರೂಮ್‌ನಲ್ಲಿ ಕೂಡಿಹಾಕಿ ವಿಕೃತ ಆನಂದ ಪಡುತ್ತಿದ್ದ ಕೇರ್‌ಟೇಕರ್‌ಗಳ ಕ್ರೌರ್ಯದ ವಿಡಿಯೋಗಳು ವೈರಲ್ ಆಗಿದ್ದವು. ಈ ಆಘಾತಕಾರಿ ಘಟನೆಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ರಾಜ್ಯದಲ್ಲಿ ಮಕ್ಕಳ ಸುರಕ್ಷತೆಗೆ ತುರ್ತು ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ದೂರು ನೀಡಿದ್ದ ಸಿಬ್ಬಂದಿ ಕೆಲಸದಿಂದಲೇ ವಜಾ!

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ತನಿಖೆಯ ಪ್ರಕಾರ, ಈ ಡೇ ಕೇರ್ ಸೆಂಟರ್‌ನಲ್ಲಿ 50 ರಿಂದ 60 ಮಕ್ಕಳು ದಾಖಲಾಗಿದ್ದರು. ನಿತ್ಯ 15 ರಿಂದ 20 ಮಕ್ಕಳು ಬರುತ್ತಿದ್ದರು. ಇಲ್ಲಿ ದೀರ್ಘಕಾಲದಿಂದಲೂ ಇಂತಹ ದೌರ್ಜನ್ಯ ನಡೆಯುತ್ತಿತ್ತು. ಈ ಹಿಂದೆ ಇಲ್ಲಿನ ಉಸ್ತುವಾರಿಗೆ ಈ ಬಗ್ಗೆ ಮಾಹಿತಿ ನೀಡಿದ್ದ ಸಿಬ್ಬಂದಿಯೊಬ್ಬರನ್ನು (ವಿಷಲ್​ಬ್ಲೋವರ್) ಸಂಸ್ಥೆಯು ಕೆಲಸದಿಂದಲೇ ವಜಾಗೊಳಿಸಿ ಸತ್ಯವನ್ನು ಮುಚ್ಚಿಹಾಕಲು ಯತ್ನಿಸಿತ್ತು ಎಂಬ ಆಘಾತಕಾರಿ ಮಾಹಿತಿ ಈಗ ಹೊರಬಂದಿದೆ. ಸದ್ಯ ದೂರಿನ ಆಧಾರದ ಮೇಲೆ ಐದು ಮಂದಿ ಕೇರ್‌ಟೇಕರ್‌ಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಅಧಿಕೃತ ಕೇಸ್ ದಾಖಲಾಗಿದ್ದು, ಡೇ ಕೇರ್ ಸೆಂಟರ್ ಅನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ಸಿಎಂಗೆ ಪತ್ರ ಬರೆದ ಆಯೋಗದ ಅಧ್ಯಕ್ಷರು: ಕಠಿಣ ಮಾರ್ಗಸೂಚಿಗೆ ಆಗ್ರಹ

ಈ ಘಟನೆಯಿಂದ ಪೋಷಕರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಅವರು ಸಿಎಂಗೆ ಬರೆದಿರುವ ಪತ್ರದಲ್ಲಿ ಹಲವು ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ. ‘ಬೆಂಗಳೂರಿನಲ್ಲಿ ಉದ್ಯೋಗಸ್ಥ ಪೋಷಕರು ಹೆಚ್ಚಾಗುತ್ತಿರುವುದರಿಂದ ಡೇ ಕೇರ್ ಸೆಂಟರ್‌ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಸುರಕ್ಷತೆ ಅತ್ಯಂತ ಪ್ರಮುಖವಾಗಿದೆ. ಸರ್ಕಾರ ಈಗಾಗಲೇ ಮಾರ್ಗಸೂಚಿ ಹೊರಡಿಸಿದ್ದರೂ ಅವು ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ. ಹೀಗಾಗಿ ಮಕ್ಕಳ ಮೇಲಿನ ಮಾನಸಿಕ ಹಿಂಸೆ ಮತ್ತು ನಿರ್ಲಕ್ಷ್ಯವನ್ನು ತಡೆಯಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು’ ಎಂದು ಕೋರಿದ್ದಾರೆ.

ಮೇಲ್ವಿಚಾರಣೆಗೆ ವಿಶೇಷ ತಂಡದ ರಚನೆಗೆ ಆಗ್ರಹ

ಡೇ ಕೇರ್ ಸೆಂಟರ್‌ಗಳ ಕಾರ್ಯಾಚರಣೆಗೆ ಕಡ್ಡಾಯ ನೋಂದಣಿ, ಪರವಾನಗಿ, ಸಿಬ್ಬಂದಿಗೆ ಮಕ್ಕಳ ಹಕ್ಕುಗಳ ತರಬೇತಿ ಮತ್ತು ಕಡ್ಡಾಯ ದೂರು ನಿವಾರಣಾ ವ್ಯವಸ್ಥೆ ಇರಬೇಕು. ಮಕ್ಕಳನ್ನು ನೋಡಿಕೊಳ್ಳುವ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಮುನ್ನ ಅವರ ಪೊಲೀಸ್ ಪರಿಶೀಲನೆ (Police Verification) ಮಾಡುವುದನ್ನು ಕಡ್ಡಾಯಗೊಳಿಸಬೇಕು. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಸಿಬ್ಬಂದಿ ನೇಮಕವಾಗಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

ಇದನ್ನೂ ಓದಿ: ವಾಷಿಂಗ್ ಮಷಿನ್​​ಗೆ ಹಾಕಿ ಮಕ್ಕಳಿಗೆ ಹಿಂಸೆ: ಬೇಬಿ ಕೇರ್ ಸೆಂಟರ್ ಕ್ರೂರತನ ಬಯಲಿಗೆ

ಇದರೊಂದಿಗೆ ಬೆಂಗಳೂರಿನಾದ್ಯಂತ ಇರುವ ಡೇ ಕೇರ್ ಸೆಂಟರ್‌ಗಳ ನಿಯಮಿತ ಉಸ್ತುವಾರಿ ಮತ್ತು ಸಮಗ್ರ ಮೇಲ್ವಿಚಾರಣೆಗಾಗಿ ತಕ್ಷಣವೇ ಒಂದು ವಿಶೇಷ ತಂಡವನ್ನು ರಚಿಸಬೇಕು ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version